Kannada Meal — Şeyh Beşîr Misûrî — Tevbe 9:1 – İbrahim 14:52
Contents
- Tevbe 9:1
- Tevbe 9:2
- Tevbe 9:3
- Tevbe 9:4
- Tevbe 9:5
- Tevbe 9:6
- Tevbe 9:7
- Tevbe 9:8
- Tevbe 9:9
- Tevbe 9:10
- Tevbe 9:11
- Tevbe 9:12
- Tevbe 9:13
- Tevbe 9:14
- Tevbe 9:15
- Tevbe 9:16
- Tevbe 9:17
- Tevbe 9:18
- Tevbe 9:19
- Tevbe 9:20
- Tevbe 9:21
- Tevbe 9:22
- Tevbe 9:23
- Tevbe 9:24
- Tevbe 9:25
- Tevbe 9:26
- Tevbe 9:27
- Tevbe 9:28
- Tevbe 9:29
- Tevbe 9:30
- Tevbe 9:31
- Tevbe 9:32
- Tevbe 9:33
- Tevbe 9:34
- Tevbe 9:35
- Tevbe 9:36
- Tevbe 9:37
- Tevbe 9:38
- Tevbe 9:39
- Tevbe 9:40
- Tevbe 9:41
- Tevbe 9:42
- Tevbe 9:43
- Tevbe 9:44
- Tevbe 9:45
- Tevbe 9:46
- Tevbe 9:47
- Tevbe 9:48
- Tevbe 9:49
- Tevbe 9:50
- Tevbe 9:51
- Tevbe 9:52
- Tevbe 9:53
- Tevbe 9:54
- Tevbe 9:55
- Tevbe 9:56
- Tevbe 9:57
- Tevbe 9:58
- Tevbe 9:59
- Tevbe 9:60
- Tevbe 9:61
- Tevbe 9:62
- Tevbe 9:63
- Tevbe 9:64
- Tevbe 9:65
- Tevbe 9:66
- Tevbe 9:67
- Tevbe 9:68
- Tevbe 9:69
- Tevbe 9:70
- Tevbe 9:71
- Tevbe 9:72
- Tevbe 9:73
- Tevbe 9:74
- Tevbe 9:75
- Tevbe 9:76
- Tevbe 9:77
- Tevbe 9:78
- Tevbe 9:79
- Tevbe 9:80
- Tevbe 9:81
- Tevbe 9:82
- Tevbe 9:83
- Tevbe 9:84
- Tevbe 9:85
- Tevbe 9:86
- Tevbe 9:87
- Tevbe 9:88
- Tevbe 9:89
- Tevbe 9:90
- Tevbe 9:91
- Tevbe 9:92
- Tevbe 9:93
- Tevbe 9:94
- Tevbe 9:95
- Tevbe 9:96
- Tevbe 9:97
- Tevbe 9:98
- Tevbe 9:99
- Tevbe 9:100
- Tevbe 9:101
- Tevbe 9:102
- Tevbe 9:103
- Tevbe 9:104
- Tevbe 9:105
- Tevbe 9:106
- Tevbe 9:107
- Tevbe 9:108
- Tevbe 9:109
- Tevbe 9:110
- Tevbe 9:111
- Tevbe 9:112
- Tevbe 9:113
- Tevbe 9:114
- Tevbe 9:115
- Tevbe 9:116
- Tevbe 9:117
- Tevbe 9:118
- Tevbe 9:119
- Tevbe 9:120
- Tevbe 9:121
- Tevbe 9:122
- Tevbe 9:123
- Tevbe 9:124
- Tevbe 9:125
- Tevbe 9:126
- Tevbe 9:127
- Tevbe 9:128
- Tevbe 9:129
- Yunus 10:1
- Yunus 10:2
- Yunus 10:3
- Yunus 10:4
- Yunus 10:5
- Yunus 10:6
- Yunus 10:7
- Yunus 10:8
- Yunus 10:9
- Yunus 10:10
- Yunus 10:11
- Yunus 10:12
- Yunus 10:13
- Yunus 10:14
- Yunus 10:15
- Yunus 10:16
- Yunus 10:17
- Yunus 10:18
- Yunus 10:19
- Yunus 10:20
- Yunus 10:21
- Yunus 10:22
- Yunus 10:23
- Yunus 10:24
- Yunus 10:25
- Yunus 10:26
- Yunus 10:27
- Yunus 10:28
- Yunus 10:29
- Yunus 10:30
- Yunus 10:31
- Yunus 10:32
- Yunus 10:33
- Yunus 10:34
- Yunus 10:35
- Yunus 10:36
- Yunus 10:37
- Yunus 10:38
- Yunus 10:39
- Yunus 10:40
- Yunus 10:41
- Yunus 10:42
- Yunus 10:43
- Yunus 10:44
- Yunus 10:45
- Yunus 10:46
- Yunus 10:47
- Yunus 10:48
- Yunus 10:49
- Yunus 10:50
- Yunus 10:51
- Yunus 10:52
- Yunus 10:53
- Yunus 10:54
- Yunus 10:55
- Yunus 10:56
- Yunus 10:57
- Yunus 10:58
- Yunus 10:59
- Yunus 10:60
- Yunus 10:61
- Yunus 10:62
- Yunus 10:63
- Yunus 10:64
- Yunus 10:65
- Yunus 10:66
- Yunus 10:67
- Yunus 10:68
- Yunus 10:69
- Yunus 10:70
- Yunus 10:71
- Yunus 10:72
- Yunus 10:73
- Yunus 10:74
- Yunus 10:75
- Yunus 10:76
- Yunus 10:77
- Yunus 10:78
- Yunus 10:79
- Yunus 10:80
- Yunus 10:81
- Yunus 10:82
- Yunus 10:83
- Yunus 10:84
- Yunus 10:85
- Yunus 10:86
- Yunus 10:87
- Yunus 10:88
- Yunus 10:89
- Yunus 10:90
- Yunus 10:91
- Yunus 10:92
- Yunus 10:93
- Yunus 10:94
- Yunus 10:95
- Yunus 10:96
- Yunus 10:97
- Yunus 10:98
- Yunus 10:99
- Yunus 10:100
- Yunus 10:101
- Yunus 10:102
- Yunus 10:103
- Yunus 10:104
- Yunus 10:105
- Yunus 10:106
- Yunus 10:107
- Yunus 10:108
- Yunus 10:109
- Hud 11:1
- Hud 11:2
- Hud 11:3
- Hud 11:4
- Hud 11:5
- Hud 11:6
- Hud 11:7
- Hud 11:8
- Hud 11:9
- Hud 11:10
- Hud 11:11
- Hud 11:12
- Hud 11:13
- Hud 11:14
- Hud 11:15
- Hud 11:16
- Hud 11:17
- Hud 11:18
- Hud 11:19
- Hud 11:20
- Hud 11:21
- Hud 11:22
- Hud 11:23
- Hud 11:24
- Hud 11:25
- Hud 11:26
- Hud 11:27
- Hud 11:28
- Hud 11:29
- Hud 11:30
- Hud 11:31
- Hud 11:32
- Hud 11:33
- Hud 11:34
- Hud 11:35
- Hud 11:36
- Hud 11:37
- Hud 11:38
- Hud 11:39
- Hud 11:40
- Hud 11:41
- Hud 11:42
- Hud 11:43
- Hud 11:44
- Hud 11:45
- Hud 11:46
- Hud 11:47
- Hud 11:48
- Hud 11:49
- Hud 11:50
- Hud 11:51
- Hud 11:52
- Hud 11:53
- Hud 11:54
- Hud 11:55
- Hud 11:56
- Hud 11:57
- Hud 11:58
- Hud 11:59
- Hud 11:60
- Hud 11:61
- Hud 11:62
- Hud 11:63
- Hud 11:64
- Hud 11:65
- Hud 11:66
- Hud 11:67
- Hud 11:68
- Hud 11:69
- Hud 11:70
- Hud 11:71
- Hud 11:72
- Hud 11:73
- Hud 11:74
- Hud 11:75
- Hud 11:76
- Hud 11:77
- Hud 11:78
- Hud 11:79
- Hud 11:80
- Hud 11:81
- Hud 11:82
- Hud 11:83
- Hud 11:84
- Hud 11:85
- Hud 11:86
- Hud 11:87
- Hud 11:88
- Hud 11:89
- Hud 11:90
- Hud 11:91
- Hud 11:92
- Hud 11:93
- Hud 11:94
- Hud 11:95
- Hud 11:96
- Hud 11:97
- Hud 11:98
- Hud 11:99
- Hud 11:100
- Hud 11:101
- Hud 11:102
- Hud 11:103
- Hud 11:104
- Hud 11:105
- Hud 11:106
- Hud 11:107
- Hud 11:108
- Hud 11:109
- Hud 11:110
- Hud 11:111
- Hud 11:112
- Hud 11:113
- Hud 11:114
- Hud 11:115
- Hud 11:116
- Hud 11:117
- Hud 11:118
- Hud 11:119
- Hud 11:120
- Hud 11:121
- Hud 11:122
- Hud 11:123
- Yusuf 12:1
- Yusuf 12:2
- Yusuf 12:3
- Yusuf 12:4
- Yusuf 12:5
- Yusuf 12:6
- Yusuf 12:7
- Yusuf 12:8
- Yusuf 12:9
- Yusuf 12:10
- Yusuf 12:11
- Yusuf 12:12
- Yusuf 12:13
- Yusuf 12:14
- Yusuf 12:15
- Yusuf 12:16
- Yusuf 12:17
- Yusuf 12:18
- Yusuf 12:19
- Yusuf 12:20
- Yusuf 12:21
- Yusuf 12:22
- Yusuf 12:23
- Yusuf 12:24
- Yusuf 12:25
- Yusuf 12:26
- Yusuf 12:27
- Yusuf 12:28
- Yusuf 12:29
- Yusuf 12:30
- Yusuf 12:31
- Yusuf 12:32
- Yusuf 12:33
- Yusuf 12:34
- Yusuf 12:35
- Yusuf 12:36
- Yusuf 12:37
- Yusuf 12:38
- Yusuf 12:39
- Yusuf 12:40
- Yusuf 12:41
- Yusuf 12:42
- Yusuf 12:43
- Yusuf 12:44
- Yusuf 12:45
- Yusuf 12:46
- Yusuf 12:47
- Yusuf 12:48
- Yusuf 12:49
- Yusuf 12:50
- Yusuf 12:51
- Yusuf 12:52
- Yusuf 12:53
- Yusuf 12:54
- Yusuf 12:55
- Yusuf 12:56
- Yusuf 12:57
- Yusuf 12:58
- Yusuf 12:59
- Yusuf 12:60
- Yusuf 12:61
- Yusuf 12:62
- Yusuf 12:63
- Yusuf 12:64
- Yusuf 12:65
- Yusuf 12:66
- Yusuf 12:67
- Yusuf 12:68
- Yusuf 12:69
- Yusuf 12:70
- Yusuf 12:71
- Yusuf 12:72
- Yusuf 12:73
- Yusuf 12:74
- Yusuf 12:75
- Yusuf 12:76
- Yusuf 12:77
- Yusuf 12:78
- Yusuf 12:79
- Yusuf 12:80
- Yusuf 12:81
- Yusuf 12:82
- Yusuf 12:83
- Yusuf 12:84
- Yusuf 12:85
- Yusuf 12:86
- Yusuf 12:87
- Yusuf 12:88
- Yusuf 12:89
- Yusuf 12:90
- Yusuf 12:91
- Yusuf 12:92
- Yusuf 12:93
- Yusuf 12:94
- Yusuf 12:95
- Yusuf 12:96
- Yusuf 12:97
- Yusuf 12:98
- Yusuf 12:99
- Yusuf 12:100
- Yusuf 12:101
- Yusuf 12:102
- Yusuf 12:103
- Yusuf 12:104
- Yusuf 12:105
- Yusuf 12:106
- Yusuf 12:107
- Yusuf 12:108
- Yusuf 12:109
- Yusuf 12:110
- Yusuf 12:111
- Ra'd 13:1
- Ra'd 13:2
- Ra'd 13:3
- Ra'd 13:4
- Ra'd 13:5
- Ra'd 13:6
- Ra'd 13:7
- Ra'd 13:8
- Ra'd 13:9
- Ra'd 13:10
- Ra'd 13:11
- Ra'd 13:12
- Ra'd 13:13
- Ra'd 13:14
- Ra'd 13:15
- Ra'd 13:16
- Ra'd 13:17
- Ra'd 13:18
- Ra'd 13:19
- Ra'd 13:20
- Ra'd 13:21
- Ra'd 13:22
- Ra'd 13:23
- Ra'd 13:24
- Ra'd 13:25
- Ra'd 13:26
- Ra'd 13:27
- Ra'd 13:28
- Ra'd 13:29
- Ra'd 13:30
- Ra'd 13:31
- Ra'd 13:32
- Ra'd 13:33
- Ra'd 13:34
- Ra'd 13:35
- Ra'd 13:36
- Ra'd 13:37
- Ra'd 13:38
- Ra'd 13:39
- Ra'd 13:40
- Ra'd 13:41
- Ra'd 13:42
- Ra'd 13:43
- İbrahim 14:1
- İbrahim 14:2
- İbrahim 14:3
- İbrahim 14:4
- İbrahim 14:5
- İbrahim 14:6
- İbrahim 14:7
- İbrahim 14:8
- İbrahim 14:9
- İbrahim 14:10
- İbrahim 14:11
- İbrahim 14:12
- İbrahim 14:13
- İbrahim 14:14
- İbrahim 14:15
- İbrahim 14:16
- İbrahim 14:17
- İbrahim 14:18
- İbrahim 14:19
- İbrahim 14:20
- İbrahim 14:21
- İbrahim 14:22
- İbrahim 14:23
- İbrahim 14:24
- İbrahim 14:25
- İbrahim 14:26
- İbrahim 14:27
- İbrahim 14:28
- İbrahim 14:29
- İbrahim 14:30
- İbrahim 14:31
- İbrahim 14:32
- İbrahim 14:33
- İbrahim 14:34
- İbrahim 14:35
- İbrahim 14:36
- İbrahim 14:37
- İbrahim 14:38
- İbrahim 14:39
- İbrahim 14:40
- İbrahim 14:41
- İbrahim 14:42
- İbrahim 14:43
- İbrahim 14:44
- İbrahim 14:45
- İbrahim 14:46
- İbrahim 14:47
- İbrahim 14:48
- İbrahim 14:49
- İbrahim 14:50
- İbrahim 14:51
- İbrahim 14:52
Tevbe 9:1
(ಓ ಸತ್ಯವಿಶ್ವಾಸಿಗಳೇ) ನೀವು ಒಪ್ಪಂದ ಮಾಡಿಕೊಂಡಿರುವ ಬಹುದೇವ ವಿಶ್ವಾಸಿಗಳಿಗೆ (ಅವರ ಒಪ್ಪಂದ ಉಲ್ಲಂಘನೆಯ ಕಾರಣ) ಅಲ್ಲಾಹ್ ಮತ್ತು ಅವನ ಸಂದೇಶವಾಹಕರ ಕಡೆಯಿಂದ ಒಪ್ಪಂದ ರದ್ದತಿಯ ಘೋಷಣೆಯಾಗಿದೆ.
Tevbe 9:2
ಆದ್ದರಿಂದ (ಓ ಬಹುದೇವ ಆರಾಧಕರೇ) ನೀವು ಭೂಮಿಯಲ್ಲಿ ನಾಲ್ಕು ತಿಂಗಳ ಕಾಲ ಸಂಚರಿಸಿರಿ. ನೀವು ಅಲ್ಲಾಹನನ್ನು ಸೋಲಿಸುವವರಲ್ಲವೆಂದು ಮತ್ತು ಅಲ್ಲಾಹನು ಸತ್ಯನಿಷೇಧಿಗಳಿಗೆ ಅಪಮಾನಿಸಲಿರುವನೆಂದು ತಿಳಿದುಕೊಳ್ಳಿರಿ.
Tevbe 9:3
ಅಲ್ಲಾಹ್ ಮತ್ತು ಅವನ ಸಂದೇಶವಾಹಕರು (ಒಪ್ಪಂದ ಉಲ್ಲಂಘನೆ ಮಾಡಿರುವ) ಬಹುದೇವರಾಧಕರಿಂದ ಹೊಣೆ ಮುಕ್ತರಾಗಿದ್ದಾರೆ ಎಂದು ಅಲ್ಲಾಹ್ ಮತ್ತು ಅವನ ಸಂದೇಶವಾಹಕರ ಕಡೆಯಿಂದ ಜನರಿಗೆ ಮಹಾಹಜ್ಜ್ನ ದಿನ ಸ್ಪಷ್ಟವಾಗಿ ಸಾರಲಾಗುತ್ತಿರುವ ಘೋಷಣೆಯಿದು. ಇನ್ನು ನೀವು ಪಶ್ಚಾತ್ತಾಪ ಪಟ್ಟರೆ ಅದು ನಿಮ್ಮ ಪಾಲಿಗೆ ಅತ್ಯತ್ತಮವಾಗಿದೆ. ಮತ್ತು ನೀವು ವಿಮುಖರಾಗುವುದಾದರೆ ಅಲ್ಲಾಹನನ್ನು ಪರಾಭವ ಗೊಳಿಸಲು ನಿಮಗೆ ಸಾಧ್ಯವಿಲ್ಲವೆಂಬುದನ್ನು ಅರಿತುಕೊಳ್ಳಿರಿ ಮತ್ತು ಓ ಪೈಗಂಬರರೇ ಸತ್ಯನಿಷೇಧಿಗಳಿಗೆ ವೇದನಾಜನಕವಾದ ಶಿಕ್ಷೆಯ ಶುಭವಾರ್ತೆಯನ್ನು ತಿಳಿಸಿರಿ.
Tevbe 9:4
ಆದರೆ ಬಹುದೇವರಾಧಕರ ಪೈಕಿ ಯಾರೊಂದಿಗೆ ನಿಮ್ಮ ಒಪ್ಪಂದವಾಗಿರುವವರ ಹೊರತು ಮತ್ತು ಅವರು ನಿಮ್ಮೊಂದಿಗೆ ತಮ್ಮ ಒಪ್ಪಂದದಲ್ಲಿ ಯಾವುದೇ ಲೋಪವನ್ನಾಗಲೀ, ನಿಮ್ಮ ವಿರುದ್ಧ ಯಾರಿಗೂ ಸಹಾಯವನ್ನಾಗಲೀ ಮಾಡುವುದಿಲ್ಲವಾದರೆ ನೀವು ಅವರ ಒಪ್ಪಂದದ ಅವಧಿಯನ್ನು ಪೂರ್ಣಗೊಳಿಸಿರಿ. ಅಲ್ಲಾಹನು ಭಯಭಕ್ತಿ ಪಾಲಿಸುವವರನ್ನು ಮೆಚ್ಚುತ್ತಾನೆ.
Tevbe 9:5
ಅನಂತರ ನಿಷಿದ್ಧ ತಿಂಗಳುಗಳು ಮುಗಿದ ಕೂಡಲೇ (ಒಪ್ಪಂದ ಉಲ್ಲಂಘಿಸಿದ ಖುರೈಶ್) ಬಹುದೇವಾರಾದಕರನ್ನು ಕಂಡಲ್ಲಿ ವಧಿಸಿರಿ. ಅವರನ್ನು ಸೆರೆಹಿಡಿಯಿರಿ, ಅವರಿಗೆ ಮುತ್ತಿಗೆ ಹಾಕಿರಿ ಮತ್ತು ಅವರನ್ನು ಹಿಡಿಯಲ್ಲಿಕ್ಕಾಗಿ ಪ್ರತಿಯೊಂದು ಹೊಂಚಿನ ಸ್ಥಳದಲ್ಲಿ ಹೊಂಚುಹಾಕಿರಿ. ಇನ್ನು ಅವರು ಪಶ್ಚಾತ್ತಾಪ ಪಟ್ಟರೆ ಮತ್ತು ನಮಾಝ್ ಸಂಸ್ಥಾಪಿಸಿದರೆ ಮತ್ತು ಝಕಾತ್ ಪಾವತಿಸಿದರೆ ನೀವವರ ದಾರಿಯನ್ನು ಬಿಟ್ಟುಬಿಡಿರಿ. ಖಂಡಿತವಾಗಿಯು ಅಲ್ಲಾಹನು ಕ್ಷಮಿಸುವವನೂ, ಕರುಣಾನಿಧಿಯೂ ಆಗಿದ್ದಾನೆ.
Tevbe 9:6
ಇನ್ನು ಬಹುದೇವಾರಾಧಕರ ಪೈಕಿ ಯಾರಾದರೂ ನಿಮ್ಮಲ್ಲಿ ಅಭಯ ಕೇಳಿದರೆ ಅವನಿಗೆ ಅಭಯ ಕೊಡಿರಿ. ಅವನು ಅಲ್ಲಾಹನ ವಚನಗಳನ್ನು ಕೇಳಿಕೊಳ್ಳಲಿ ನಂತರ ಅವನನ್ನು ಅವನ ಸುರಕ್ಷಿತ ಸ್ಥಳಕ್ಕೆ ತಲುಪಿಸಿಬಿಡಿರಿ. ಇದೇಕೆಂದರೆ ಅವರು ತಿಳುವಳಿಕೆಯಿಲ್ಲದ ಜನರಾಗಿದ್ದಾರೆ.
Tevbe 9:7
ಮಸ್ಜಿದುಲ್ ಹರಾಮ್‌ನ ಬಳಿ ನಿಮ್ಮೊಂದಿಗೆ ಒಪ್ಪಂದ ಮಾಡಿಕೊಂಡವರ ಹೊರತು ಅಲ್ಲಾಹ್ ಮತ್ತು ಅವನ ಸಂದೇಶವಾಹಕರ ಬಳಿ (ಕರಾರು ಉಲ್ಲಂಘನೆ ಮಾಡಿದ) ಬಹುದೇವಾರಾಧಕರಿಗೆ ಕರಾರು ನೆಲೆನಿಲ್ಲುವುದಾದರೂ ಹೇಗೆ? ಅವರು ನಿಮ್ಮೊಂದಿಗೆ ಕರಾರನ್ನು ಪಾಲಿಸುವ ತನಕ ನೀವು ಅವರೊಂದಿಗೆ ಕರಾರನ್ನು ಪಾಲಿಸಿರಿ. ಖಂಡಿತವಾಗಿಯು ಅಲ್ಲಾಹನು ಭಯಭಕ್ತಿ ಪಾಲಿಸುವವರನ್ನು ಪ್ರೀತಿಸುತ್ತಾನೆ.
Tevbe 9:8
ಅವರೊಂದಿಗೆ (ಯಹೂದರೊಂದಿಗೆ) ಕರಾರು ಮಾಡುವುದಾದರು ಹೇಗೆ? ಅವರು ನಿಮ್ಮ ಮೇಲೆ ಜಯಸಾಧಿಸುವುದಾದರೆ ಕುಟುಂಬ ಸಂಬAಧವನ್ನಾಗಲಿ ಕರಾರು ಒಪ್ಪಂದಗಳನ್ನಾಗಲಿ ಅವರು ಲೆಕ್ಕಿಸಲಾರರು. ಅವರು ಬಾಯಿ ಮಾತಿನಿಂದಲೇ ನಿಮ್ಮನ್ನು ಒಲಿಸಲು ಯತ್ನಿಸುತ್ತಾರೆ. ಆದರೆ ಅವರ ಮನಸ್ಸುಗಳು ಒಪ್ಪುವುದಿಲ್ಲ. ಅವರ ಪೈಕಿ ಹೆಚ್ಚಿನವರು ಧಿಕ್ಕಾರಿಗಳಾಗಿದ್ದಾರೆ.
Tevbe 9:9
ಅವರು ಅಲ್ಲಾಹನ ಸೂಕ್ತಿಗಳನ್ನು ತುಚ್ಛ ಬೆಲೆಗೆ ಮಾರಿದರು, ಹಾಗೂ ಅವನ ಮಾರ್ಗದಿಂದ ಜನರನ್ನು ತಡೆದರು. ಅವರು ಮಾಡುತ್ತಿರುವುದು ಅತ್ಯಂತ ನಿಕೃಷ್ಟವಾಗಿದೆ.
Tevbe 9:10
ಯಾವೊಬ್ಬ ವಿಶ್ವಾಸಿಯ ವಿಚಾರದಲ್ಲಿ ಅವರು ಕುಟುಂಬ ಸಂಬAಧವನ್ನಾಗಲಿ, ಕರಾರನ್ನಾಗಲಿ ಪರಿಗಣಿಸಲಾರರು ಅವರೇ ಅಕ್ರಮಿಗಳಾಗಿರುವರು.
Tevbe 9:11
ಅವರೇನಾದರೂ ಪಶ್ಚಾತ್ತಾಪ ಪಟ್ಟು, ನಮಾಝನ್ನು ಸಂಸ್ಥಾಪಿಸಿದರೆ ಮತ್ತು ಝಕಾತ್ ನೀಡಿದರೆ ಅವರು ನಿಮ್ಮ ಧಾರ್ಮಿಕ ಸಹೋದರರಾಗಿದ್ದಾರೆ. ನಾವು ಅರಿತುಕೊಳ್ಳುವ ಜನರಿಗೆ ನಮ್ಮ ದೃಷ್ಟಾಂತಗಳನ್ನು ಸ್ಪಷ್ಟವಾಗಿ ವಿವರಿಸಿಕೊಡುತ್ತೇವೆ.
Tevbe 9:12
ಇನ್ನು ಅವರು ಒಪ್ಪಂದದ ನಂತರವೂ ತಮ್ಮ ಶಪಥಗಳನ್ನು ಉಲ್ಲಂಘಿಸಿದರೆ ಮತ್ತು ನಿಮ್ಮ ಧರ್ಮವನ್ನು ಅವಹೇಳನ ಮಾಡಿದರೆ ನೀವು ಸತ್ಯನಿಷೇಧಿ ಮುಖಂಡರೊAದಿಗೆ ಯುದ್ಧ ಹೂಡಿರಿ. ಅವರ ಶಪಥಗಳಿಗೆ ಯಾವ ಬೆಲೆಯಿಲ್ಲ. ಅವರು ತಮ್ಮ ಕುತಂತ್ರಗಳಿAದ ಹಿಂದೆ ಸರಿಯಬಹುದು.
Tevbe 9:13
ಓ ಸತ್ಯನಿಷೇಧಿಗಳೇ ತಮ್ಮ ಶಪಥಗಳನ್ನು ಉಲ್ಲಂಘಿಸಿದ ಮತ್ತು ಸಂದೇಶವಾಹಕರನ್ನು ಗಡಿಪಾರು ಮಾಡಲುದ್ದೇಶಿಸಿದ ಒಂದು ಜನತೆಯೊಂದಿಗೆ ನೀವು ಯುದ್ಧ ಮಾಡಲಾರಿರೇ? ಅವರೇ ಮೊತ್ತಮೊದಲಿಗೆ ನಿಮ್ಮೊಂದಿಗೆ ಯುದ್ಧವನ್ನು ಆರಂಭಿಸಿದವರು. ನೀವು ಅವರನ್ನು ಭಯಪಡುತ್ತಿದ್ದೀರಾ? ನೀವು ಭಯವನ್ನಿರಿಸಿಕೊಳ್ಳಲು ಅಲ್ಲಾಹನೇ ಹೆಚ್ಚು ಅರ್ಹನಾಗಿದ್ದಾನೆ. ನೀವು ಸತ್ಯವಿಶ್ವಾಸಿಗಳಾಗಿದ್ದರೆ.
Tevbe 9:14
ನೀವು ಅವರೊಂದಿಗೆ ಯುದ್ಧ ಮಾಡಿರಿ. ಅಲ್ಲಾಹನು ನಿಮ್ಮ ಕೈಯಿಂದ ಅವರನ್ನು ಶಿಕ್ಷಿಸುವನು, ಅವರನ್ನು ನಿಂದ್ಯರನ್ನಾಗಿಸುವನು, ಅವರ ವಿರುದ್ಧ ನಿಮಗೆ ಸಹಾಯ ಮಾಡುವನು ಮತ್ತು ಅವನು ವಿಶ್ವಾಸಿಗಳ ಹೃದಯಗಳನ್ನು ತಣಿಸಿಬಿಡುವನು.
Tevbe 9:15
ಅವನು ಅವರ ಹೃದಯಗಳಲ್ಲಿರುವ ಕ್ರೋಧವನ್ನು ನಿವಾರಿಸುವನು. ಮತ್ತು ಅವನು ತಾನಿಚ್ಛಿಸುವವರ ಪಶ್ಚಾತ್ತಾಪವನ್ನು ಸ್ವೀಕರಿಸುವನು. ಅಲ್ಲಾಹನು ಸರ್ವಜ್ಞಾನಿಯು, ಯುಕ್ತಿವಂತನು ಆಗಿದ್ದಾನೆ.
Tevbe 9:16
ನಿಮ್ಮ ಪೈಕಿ ಯುದ್ಧ ಮಾಡಿದವರನ್ನೂ, ಅಲ್ಲಾಹ್ ಮತ್ತು ಅವನ ಸಂದೇಶವಾಹಕರು ಹಾಗೂ ಸತ್ಯವಿಶ್ವಾಸಿಗಳ ಹೊರತು ಇನ್ನಾರನ್ನೂ ಆಪ್ತಮಿತ್ರರನ್ನಾಗಿ ಮಾಡದವರನ್ನೂ ಅಲ್ಲಾಹನು ಅರಿಯದೆ ನಿಮ್ಮನ್ನು ಬಿಟ್ಟು ಬಿಡಲಾಗುವುದೆಂದು ನೀವು ತಿಳಿದುಕೊಂಡಿರುವಿರಾ? ನೀವು ಮಾಡುತ್ತಿರುವುದರ ಬಗ್ಗೆ ಅಲ್ಲಾಹನು ಸೂಕ್ಷö್ಮವಾಗಿ ಅರಿಯುವವನಾಗಿದ್ದಾನೆ.
Tevbe 9:17
ಸತ್ಯನಿಷೇಧಕ್ಕೆ ಸ್ವಯಂ ತಾವೇ ಸಾಕ್ಷಿಗಳಾಗಿರುವ ಬಹುದೇವಾರಾಧಕರಿಗೆ ಅಲ್ಲಾಹನ ಮಸೀದಿಗಳ ಪರಿಪಾಲನೆಯು ಭೂಷಣವಲ್ಲ. ಅವರ ಕರ್ಮಗಳು ನಿಷ್ಫಲವಾಗಿವೆ. ಅವರು ನರಕದಲ್ಲಿ ಶಾಶ್ವತವಾಗಿರುವರು.
Tevbe 9:18
ಯಾರು ಅಲ್ಲಾಹನಲ್ಲೂ ಅಂತ್ಯದಿನದಲ್ಲೂ ವಿಶ್ವಾಸವಿಡುತ್ತಾರೋ, ನಮಾಝನ್ನು ಸಂಸ್ಥಾಪಿಸುತ್ತಾರೋ, ಝಕಾತ್ ನೀಡುತ್ತಾರೋ ಮತ್ತು ಅಲ್ಲಾಹನ ಹೊರತು ಇನ್ನಾರನ್ನೂ ಭಯಪಡುವುದಿಲ್ಲವೋ ಅಂತಹವರೇ ಅಲ್ಲಾಹನ ಮಸೀದಿಗಳ ಪರಿಪಾಲನೆಯ ಹಕ್ಕುದಾರರಾಗಿರುವರು. ಖಂಡಿತವಾಗಿಯೂ ಅವರೇ ಸನ್ಮಾರ್ಗ ಪ್ರಾಪ್ತರು.
Tevbe 9:19
ಹಜ್ಜ್ ಯಾತ್ರಿಕರಿಗೆ ನೀರು ಕುಡಿಸುವುದನ್ನೂ, ಮಸ್ಜಿದುಲ್ ಹರಾಮ್‌ನ ಸೇವೆ ಮಾಡುವುದನ್ನು ಅಲ್ಲಾಹನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿಟ್ಟ ಹಾಗೂ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರುವ ಒಬ್ಬನಿಗೆ ನೀವು ಸಮಾನಗೊಳಿಸುವಿರಾ? ಅವರು ಅಲ್ಲಾಹನ ಬಳಿ ಸಮಾನರಾಗುವುದಿಲ್ಲ. ಮತ್ತು ಅಲ್ಲಾಹನು ಅಕ್ರಮಿಗಳಿಗೆ ಸನ್ಮಾರ್ಗ ಕರುಣಿಸುವುದಿಲ್ಲ.
Tevbe 9:20
ಸತ್ಯವಿಶ್ವಾಸವಿಟ್ಟು ವಲಸೆ ಹೋದವರು ಮತ್ತು ಅಲ್ಲ್ಲಾಹನ ಮಾರ್ಗದಲ್ಲಿ ತಮ್ಮ ಸಂಪತ್ತಿನಿAದಲೂ ಶರೀರಗಳಿಂದಲೂ ಯುದ್ಧ ಮಾಡಿರುವವರು ಅಲ್ಲಾಹನ ಬಳಿ ಅತ್ಯುನ್ನತ ಪದವಿಯುಳ್ಳವರಾಗಿದ್ದಾರೆ. ಮತ್ತು ಅವರೇ ಯಶಸ್ಸು ಪಡೆಯುವವರಾಗಿದ್ದಾರೆ.
Tevbe 9:21
ಅವರಿಗೆ ಅವರ ಪ್ರಭೂ ತನ್ನ ಕಾರುಣ್ಯ, ಸಂತೃಪ್ತಿ ಮತ್ತು ಸ್ವರ್ಗೋದ್ಯಾನಗಳ ಶುಭವಾರ್ತೆಯನ್ನು ತಿಳಿಸುವನು. ಅವರಿಗೆ ಅಲ್ಲಿ ಶಾಶ್ವತ ಅನುಗ್ರಹವಿದೆ.
Tevbe 9:22
ಅವರದರಲ್ಲಿ ಶಾಶ್ವತವಾಗಿ ವಾಸಿಸುವರು. ಖಂಡಿತವಾಗಿಯು ಅಲ್ಲಾಹನ ಬಳಿ ಮಹಾಪ್ರತಿಫಲವಿದೆ.
Tevbe 9:23
ಓ ಸತ್ಯವಿಶ್ವಾಸಿಗಳೇ, ನಿಮ್ಮ ತಂದೆ ತಾತಂದಿರನ್ನೂ, ನಿಮ್ಮ ಸಹೋದರರನ್ನೂ ಸತ್ಯವಿಶ್ವಾಸದ ಬದಲಿಗೆ ಸತ್ಯನಿಷೇಧವನ್ನು ಇಷ್ಟಪಟ್ಟರೆ ಅವರನ್ನು ಮಿತ್ರರನ್ನಾಗಿ ಮಾಡಿಕೊಳ್ಳಬೇಡಿರಿ. ನಿಮ್ಮಲ್ಲಿ ಯಾರಾದರು ಅವರನ್ನು ಮಿತ್ರರನ್ನಾಗಿ ಮಾಡಿಕೊಂಡರೆ ಅವರೇ ಅಕ್ರಮಿಗಳಾಗಿದ್ದಾರೆ.
Tevbe 9:24
ಹೇಳಿರಿ: ನಿಮ್ಮ ತಂದೆ ತಾತಂದಿರು, ನಿಮ್ಮ ಪುತ್ರರು, ನಿಮ್ಮ ಸಹೋದರರು, ನಿಮ್ಮ ಪತ್ನಿಯರು, ನಿಮ್ಮ ಕುಟುಂಬದವರು, ನೀವು ಸಂಪಾದಿಸಿರುವ ಸಂಪತ್ತುಗಳು, ನಷ್ಟವುಂಟಾಗಬಹುದೆAದು ಭಯಪಡುವ ವ್ಯಾಪಾರ ಮತ್ತು ನೀವು ತೃಪ್ತಿ ಪಡುವ ವಸತಿಗಳು; ನಿಮಗೆ ಅಲ್ಲಾಹನಿಗಿಂತಲೂ, ಅವನ ಸಂದೇಶವಾಹಕರಿಗಿAತಲೂ, ಅವನ ಮಾರ್ಗದಲ್ಲಿ ಹೋರಾಡುವುದಕ್ಕಿಂತಲೂ ಹೆಚ್ಚು ಪ್ರಿಯವಾಗಿದ್ದರೆ ಅಲ್ಲಾಹನು ತನ್ನ ಶಿಕ್ಷೆಯನ್ನು ಜಾರಿಗೆ ತರುವವರೆಗೆ ನೀವು ಕಾಯುತ್ತಿರಿ. ಧಿಕ್ಕಾರಿಗಳಾದ ಜನರಿಗೆ ಅಲ್ಲಾಹನು ಸನ್ಮಾರ್ಗವನ್ನು ಕರುಣಿಸುವುದಿಲ್ಲ.
Tevbe 9:25
ಖಂಡಿತವಾಗಿಯು ಅಲ್ಲಾಹನು ಅನೇಕ ರಣರಂಗಗಳಲ್ಲಿ ನಿಮಗೆ ಸಹಾಯವನ್ನು ಮಾಡಿದ್ದಾನೆ. ಮತ್ತು ಹುನೈನ್ ಕಾಳಗದ ದಿನ ನಿಮಗೆ ನಿಮ್ಮ ಅಧಿಕ ಸಂಖ್ಯೆಯು ಅಭಿಮಾನ ಪಡುವಂತೆ ಮಾಡಿತು. ಆದರೆ ಅದು ನಿಮಗೆ ಯಾವುದೇ ಪ್ರಯೋಜನವನ್ನೂ ನೀಡಲಿಲ್ಲ. ಮಾತ್ರವಲ್ಲ ಭೂಮಿಯು ವಿಶಾಲವಾಗಿದ್ದರೂ ನಿಮ್ಮ ಪಾಲಿಗೆ ಇಕ್ಕಟ್ಟಾಗಿ ಪರಿಣಮಿಸಿತು. ನಂತರ ನೀವು ಬೆನ್ನು ತಿರುಗಿಸಿ ಓಡಿದಿರಿ.
Tevbe 9:26
ನಂತರ ಅಲ್ಲಾಹನು ತನ್ನ ಕಡೆಯಿಂದ ತನ್ನ ಸಂದೇಶವಾಹಕರ ಮತ್ತು ಸತ್ಯವಿಶ್ವಾಸಿಗಳ ಮೇಲೆ ಮನಃಶಾಂತಿಯನ್ನು ಇಳಿಸಿದನು ಮತ್ತು ನೀವು ನೋಡಲು ಸಾಧ್ಯವಿಲ್ಲದಂತಹ ಕೆಲವು ಸೈನ್ಯಗಳನ್ನೂ ಇಳಿಸಿದನು ಮತ್ತು ಅವನು ಸತ್ಯನಿಷೇಧಿಗಳನ್ನು ಪರಿಪೂರ್ಣವಾಗಿ ಶಿಕ್ಷಿಸಿದನು. ಆ ಸತ್ಯನಿಷೇಧಿಗಳಿಗಿರುವ ಪ್ರತಿಕಾರವು ಇದೇ ಆಗಿದೆ.
Tevbe 9:27
ತರುವಾಯ ಅದರ ಬಳಿಕ ಅಲ್ಲಾಹನು ತಾನಿಚ್ಛಿಸುವವರ ಪಶ್ಚಾತ್ತಾಪವನ್ನು ಸ್ವೀಕರಿಸುವನು. ಅಲ್ಲಾಹನು ಅತ್ಯಧಿಕ ಕ್ಷಮಿಸುವವನು ಕರುಣಾನಿಧಿಯು ಆಗಿದ್ದಾನೆ.
Tevbe 9:28
ಓ ಸತ್ಯವಿಶ್ವಾಸಿಗಳೇ, ನಿಸ್ಸಂಶಯವಾಗಿಯು ಬಹುದೇವವಿಶ್ವಾಸಿಗಳು ಮಲಿನರಾಗಿದ್ದಾರೆ. ಆದ್ದರಿಂದ ಅವರು ಈ ವರ್ಷದ ಬಳಿಕ ಮಸ್ಜಿದುಲ್ ಹರಾಮ್‌ನ ಸಮೀಪಕ್ಕು ಬರದಿರಲಿ. ನಿಮಗೆ ದಾರಿದ್ರö್ಯದ ಭಯವಿದ್ದರೆ ಅಲ್ಲಾಹನು ಇಚ್ಛಿಸಿದರೆ ತನ್ನ ಅನುಗ್ರಹದಿಂದ ನಿಮ್ಮನ್ನು ಸಂಪನ್ನಗೊಳಿಸುವನು. ಖಂಡಿತವಾಗಿಯು ಅಲ್ಲಾಹನು ಸರ್ವಜ್ಞಾನಿಯೂ, ಯುಕ್ತಿವಂತನೂ ಆಗಿದ್ದಾನೆ.
Tevbe 9:29
ಗ್ರಂಥ ನೀಡಲಾದವರ ಪೈಕಿ ಅಲ್ಲಾಹನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿಡದವರು ಮತ್ತು ಅಲ್ಲಾಹನು, ಅವನ ಸಂದೇಶವಾಹಕರು ನಿಷಿದ್ಧಗೊಳಿಸಿದ್ದನ್ನು ನಿಷಿದ್ಧವೆಂದು ಪರಿಗಣಿಸಿದವರೊಡನೆ ಯುದ್ಧ ಮಾಡಿರಿ. ಹಾಗೂ ಸತ್ಯ ಧರ್ಮವನ್ನು ಸ್ವೀಕರಿಸದವರು ಯಾರೋ ಅವರು ಅಪಮಾನಿತರೂ, ನಿಂದ್ಯರೂ ಆಗಿ ತಮ್ಮ ಕೈಯಿಂದ ಜಿಜಿಯಾ (ತೆರಿಗೆ) ಪಾವತಿಸುವವರೆಗೆ ನೀವು ಅವರೊಂದಿಗೆ ಯುದ್ಧ ಮಾಡಿರಿ.
Tevbe 9:30
ಉಝೈರ್ ಅಲ್ಲಾಹನ ಪುತ್ರನೆಂದು ಯಹೂದರು ಹೇಳುತ್ತಾರೆ. ಮತ್ತು ಕ್ರೆöÊಸ್ತರು: ಮಸೀಹ ಅಲ್ಲಾಹನ ಪುತ್ರನೆಂದು ಹೇಳುತ್ತಾರೆ. ಇದು ಕೇವಲ ಅವರ ಬಾಯಿ ಮಾತು ಮಾತ್ರ. ಹಿಂದಿನ ಸತ್ಯನಿಷೇಧಿಗಳ ಮಾತುಗಳನ್ನು ಅವರು ಅನುಕರಿಸುತ್ತಿದ್ದಾರೆ. ಅಲ್ಲಾಹನು ಅವರನ್ನು ನಾಶಗೊಳಿಸಲಿ. ಅವರು ದಾರಿಗೆಟ್ಟು ಅದೆಲ್ಲಿ ಅಲೆಯುತ್ತಿದ್ದಾರೆ.
Tevbe 9:31
ಅವರು (ಕ್ರೆöÊಸ್ತರು) ಅಲ್ಲಾಹನ ಹೊರತು ತಮ್ಮ ವಿದ್ವಾಂಸರನ್ನೂ, ಸನ್ಯಾಸಿಗಳನ್ನೂ ಆರಾಧ್ಯನನ್ನಾಗಿ ಮಾಡಿಕೊಂಡರು ಮತ್ತು ಮರ್ಯಮರ ಪುತ್ರನಾದ ಮಸೀಹರನ್ನು ಸಹ, ವಸ್ತುತಃ ಅವರಿಗೆ ಕೇವಲ ಏಕೈಕ ಆರಾಧ್ಯನ ಆರಾಧನೆಯ ಆದೇಶ ನೀಡಲಾಗಿತ್ತು. ಅವನ ಹೊರತು ಅನ್ಯ ಆರಾಧ್ಯನಿಲ್ಲ. ಅವರು ನಿಶ್ಚಯಿಸುತ್ತಿರುವ ಸಹಭಾಗಿತ್ವದಿಂದ ಅವನು ಪರಿಶುದ್ಧನಾಗಿದ್ದಾನೆ.
Tevbe 9:32
ಅವರು ಅಲ್ಲಾಹನ ಪ್ರಕಾಶವನ್ನು ತಮ್ಮ ಬಾಯಿಯಿಂದ ಊದಿ ನಂದಿಸಲು ಬಯಸುತ್ತಾರೆ ಮತ್ತು ಅಲ್ಲಾಹು ತನ್ನ ಪ್ರಕಾಶವನ್ನು ಪರಿಪೂರ್ಣಗೊಳಿಸಿಯೇ ಇರುವರು; ಸತ್ಯನಿಷೇಧಿಗಳು ಇಷ್ಟಪಡದಿದ್ದರೂ ಸರಿಯೇ.
Tevbe 9:33
ಅವನೇ ತನ್ನ ಸಂದೇಶವಾಹಕನನ್ನು ಸನ್ಮಾರ್ಗ ಮತ್ತು ಸತ್ಯಧರ್ಮದೊಂದಿಗೆ ಕಳುಹಿಸಿದ್ದಾನೆ, ಅದನ್ನು ಇತರೆಲ್ಲಾ ಧರ್ಮಗಳ ಮೇಲೆ ವಿಜಯಸಾಧಿಸಲೆಂದಾಗಿದೆ. ಬಹುದೇವವಿಶ್ವಾಸಿಗಳು ಇಷ್ಟಪಡದಿದ್ದರೂ ಸರಿಯೇ.
Tevbe 9:34
ಓ ಸತ್ಯವಿಶ್ವಾಸಿಗಳೇ, ಹೆಚ್ಚಿನ ವಿದ್ವಾಂಸರು, ಪುರೋಹಿತರು ಜನರ ಸಂಪತ್ತನ್ನು ಅನ್ಯಾಯವಾಗಿ ತಿನ್ನುವವರಾಗಿದ್ದಾರೆ. ಹಾಗೂ ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಯುತ್ತಾರೆ. ಯಾರು ಚಿನ್ನ ಬೆಳ್ಳಿಗಳ ಭಂಡಾರವನ್ನು ಸಂಗ್ರಹಿಸುತ್ತಾರೋ ಮತ್ತು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವುದಿಲ್ಲವೋ ಅವರಿಗೆ ವೇದನಾಜಕವಾದ ಶಿಕ್ಷೆಯ ಶುಭವಾರ್ತೆಯನ್ನು ತಿಳಿಸಿರಿ.
Tevbe 9:35
ಬೆಳ್ಳಿಬಂಗಾರವನ್ನು ನರಕಾಗ್ನಿಯಲ್ಲಿ ಕಾಯಿಸಲಾಗುವ ಮತ್ತು ಅದನ್ನು ಅವರ ಹಣೆಗಳ, ಪಾರ್ಶ್ವಗಳ ಮತ್ತು ಬೆನ್ನುಗಳ ಮೇಲೆ ಬರೆಯೆಳೆಯಲಾಗುವ ದಿನ (ಹೇಳಲಾಗುವುದು): ಇದು ನೀವು ತಮಗೋಸ್ಕರ ಸಂಗ್ರಹಿಸುತ್ತಿದ್ದ ಸಂಪತ್ತಾಗಿದೆ. ಇನ್ನು ನೀವು ಸಂಗ್ರಹಿಸುತ್ತಿದ್ದ ಸಂಪತ್ತಿನ ರುಚಿಯನ್ನು ಸವಿಯಿರಿ.
Tevbe 9:36
ಆಕಾಶಗಳನ್ನೂ, ಭೂಮಿಗಳನ್ನೂ ಸೃಷ್ಟಿಸಿದ ದಿನದಿಂದಲೇ ಅಲ್ಲಾಹನ ಬಳಿ ತಿಂಗಳುಗಳ ಸಂಖ್ಯೆಯು ಅವನ ದಾಖಲೆಯಲ್ಲಿ ಹನ್ನೆರಡಾಗಿವೆ; ಅವುಗಳ ಪೈಕಿ ನಾಲ್ಕು ಆದರಣೀಯವುಗಳು ಇದುವೇ ಸರಿಯಾದ ಧರ್ಮವಾಗಿದೆ. ನೀವು ಈ ತಿಂಗಳುಗಳಲ್ಲಿ ಸ್ವತಃ ನಿಮ್ಮ ಮೇಲೆಯೇ ಅಕ್ರಮವೆಸಗಬಾರದು ಮತ್ತು ಬಹುದೇವವಿಶ್ವಾಸಿಗಳು ಒಟ್ಟಾಗಿ ನಿಮ್ಮೊಂದಿಗೆ ಯುದ್ಧ ಮಾಡಿದಂತೆ ನೀವು ಒಟ್ಟಾಗಿ ಯುದ್ಧ ಮಾಡಿರಿ ಮತ್ತು ಅಲ್ಲಾಹನು ಭಯಭಕ್ತಿ ಪಾಲಿಸುವವರ ಜೊತೆಗಿದ್ದಾನೆಂಬುದನ್ನು ಅರಿತುಕೊಳ್ಳಿರಿ.
Tevbe 9:37
ಆದರಣೀಯ ತಿಂಗಳುಗಳನ್ನು ಹಿಂದೆ ಮುಂದೆ ಮಾಡುವುದು ಸತ್ಯನಿಷೇಧದಲ್ಲಿ ಹೆಚ್ಚಳವಾಗಿದೆ. ತನ್ಮೂಲಕ ಸತ್ಯನಿಷೇಧಿಗಳು ಪಥ ಭ್ರಷ್ಟತೆಗೊಳಿಸಲೆಂದಾಗಿದೆ. ಮತ್ತು ಒಂದು ವರ್ಷ ಒಂದು ಆದರಣಿಯ ತಿಂಗಳನ್ನು ಧರ್ಮಸಮ್ಮತಗೊಳಿಸುತ್ತಾರೆ. ಮತ್ತೊಂದು ವರ್ಷ ಅದನ್ನು ನಿಷಿದ್ಧಗೊಳಿಸುತ್ತಾರೆ. ಅಲ್ಲಾಹನು ಪವಿತ್ರಗೊಳಿಸಿದ ಮಾಸವನ್ನು ಗಣನೆಯಲ್ಲಿ ಸರಿಹೊಂದಿಸಿ ಅನಂತರ ಅವರು ಅಲ್ಲಾಹನು ನಿಷಿದ್ಧಗೊಳಿಸಿದುದನ್ನು ಧರ್ಮ ಸಮ್ಮತಗೊಳಿಸಲೆಂದಾಗಿದೆ. ಅವರ ದುಷ್ಕರ್ಮಗಳನ್ನು ಅವರಿಗೆ ಮನಮೋಹಕಗೊಳಿಸಲಾಗಿದೆ. ಮತ್ತು ಸತ್ಯನಿಷೇಧಿ ಜನತೆಯನ್ನು ಅಲ್ಲಾಹನು ಸನ್ಮಾರ್ಗದಲ್ಲಿ ಮುನ್ನಡೆಸುವುದಿಲ್ಲ.
Tevbe 9:38
ಓ ಸತ್ಯವಿಶ್ವಾಸಿಗಳೇ, ನಿಮಗೇನಾಗಿ ಬಿಟ್ಟಿದೆ? ‘ಅಲ್ಲಾಹನ ಮಾರ್ಗದಲ್ಲಿ (ಅನ್ಯಾಯ ವಿರುದ್ಧ) ಹೋರಡಿರಿ' ಎಂದು ನಿಮ್ಮೊಂದಿಗೆ ಹೇಳಲಾದರೆ ನೀವು ಭೂಮಿಗೆ ಅಂಟಿಕೊಳ್ಳುತ್ತೀರಿ! ಪರಲೋಕದ ಬದಲಿಗೆ ಐಹಿಕ ಜೀವನವನ್ನು ನೆಚ್ಚಿಕೊಂಡಿದ್ದೀರಾ? ತಿಳಿಯಿರಿ! ಐಹಿಕ ಜೀವನವು ಪರಲೋಕದ ಮುಂದೆ ಅತಿತುಚ್ಛವಾಗಿದೆ.
Tevbe 9:39
ನೀವು (ಅತ್ಯಾಚಾರದ ವಿರುದ್ಧ) ಹೋರಾಡದಿದ್ದರೆ ಅಲ್ಲಾಹನು ನಿಮಗೆ ವೇದನಾಜನಕ ಶಿಕ್ಷೆಯನ್ನು ನೀಡುವನು ಮತ್ತು ನಿಮ್ಮ ಹೊರತಾದ ಬೇರೆ ಜನಾಂಗವನ್ನು ನಿಮ್ಮ ಬದಲಿಗೆ ತರುವನು (ಅವರು ಆಜ್ಞಾನುಸರಣಿಗಳಾಗಿರುವರು). ನೀವು ಅಲ್ಲಾಹನಿಗೆ ಯಾವುದೇ ನಷ್ಟವನ್ನುಂಟು ಮಾಡಲಾರಿರಿ. ಅಲ್ಲಾಹನು ಸಕಲ ಸಂಗತಿಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
Tevbe 9:40
ನೀವು ಪೈಗಂಬರರಿಗೆ ಸಹಾಯ ಮಾಡದಿದ್ದರೆ ತಿಳಿದುಕೊಳ್ಳಿರಿ: ಅಲ್ಲಾಹನು ಅವರಿಗೆ ಸತ್ಯನಿಷೇಧಿಗಳು ಅವರನ್ನು (ಮಕ್ಕಾದಿಂದ) ಗಡಿಪಾರು ಮಾಡಿದ ಸಂದರ್ಭದಲ್ಲಿ ಸಹಾಯ ಮಾಡಿದ್ದನು, ಅವರು (ವಲಸೆ ಹೋಗುವ) ಆ ಇಬ್ಬರಲ್ಲಿ ಒಬ್ಬರಾಗಿದ್ದರು ಅವರಿಬ್ಬರೂ (ಮುಹಮ್ಮದ್ ಮತ್ತು ಅಬೂಬಕ್ಕರ್) ಗುಹೆಯಲ್ಲಿದ್ದ ಸಂದರ್ಭದಲ್ಲಿ ಅವರು ತನ್ನ ಸಂಗಡಿಗರೊAದಿಗೆ (ಅಬೂಬಕ್ಕರ್‌ರವರಿಗೆ) 'ವ್ಯಥೆಪಡಬೇಡ, ಖಂಡಿತ ಅಲ್ಲಾಹನು ನಮ್ಮ ಜೊತೆಗಿದ್ದಾನೆ' ಎಂದು ಹೇಳಿದರು. ಹೀಗೆ ಅಲ್ಲಾಹನು ಅವರ ಮೇಲೆ ತನ್ನ ಕಡೆಯಿಂದ ಶಾಂತಿಯನ್ನು ಇಳಿಸಿದನು. ನೀವು ಕಾಣದಂತಹ (ಮಲಕ್‌ಗಳ) ಸೈನ್ಯಗಳೊಂದಿಗೆ ಅವರ ಸಹಾಯ ಮಾಡಿದನು. ಸತ್ಯನಿಷೇಧಿಗಳ ಮಾತನ್ನು ನಿಂದ್ಯಗೊಳಿಸಿದನು ಮತ್ತು ಅಲ್ಲಾಹನ ವಚನವೇ ಅತ್ಯುನ್ನತವೂ, ಪ್ರಬಲವೂ ಅಗಿದೆ. ಅಲ್ಲಾಹನು ಪ್ರತಾಪಶಾಲಿಯೂ, ಯುಕ್ತಿವಂತನೂ ಆಗಿದ್ದಾನೆ.
Tevbe 9:41
ನೀವು (ಸತ್ಯವಿಶ್ವಾಸಿಗಳೇ) ಅನುಕೂಲ ಸ್ಥಿತಿಯಲ್ಲಿದ್ದರೂ, ಅನಾನುಕೂಲ ಸ್ಥಿತಿಯಲ್ಲಿದ್ದರೂ ಹೊರಡಿರಿ ಮತ್ತು ಅಲ್ಲಾಹನ ಮಾರ್ಗದಲ್ಲಿ ನಿಮ್ಮ ತನು ಮನ ಧನಗಳಿಂದ ಸತ್ಯಕ್ಕಾಗಿ ಹೋರಾಡಿರಿ. ಇದುವೇ ನಿಮಗೆ ಉತ್ತಮವಾಗಿರುತ್ತದೆ. ನೀವು ಅರಿಯುವವರಾಗಿದ್ದರೆ.
Tevbe 9:42
ಇನ್ನು ಶೀಘ್ರವೇ ಲಾಭ ಸಿಗುತ್ತಿದ್ದರೆ ಮತ್ತು ಪ್ರಯಾಣವು ಸುಗಮವಾಗಿರುತ್ತಿದ್ದರೆ. ಖಂಡಿತವಾಗಿಯೂ ಕಪಟಿಗಳು ನಿಮ್ಮನ್ನು ಅನುಸರಿಸುತ್ತಿದ್ದರು. ಆದರೆ ಅವರ ಮೇಲೆ ಸುದೀರ್ಘತೆಯು ಪ್ರಯಾಸಕರವಾಗಿ ಬಿಟ್ಟಿತು. ಅವರು 'ನಮ್ಮಲ್ಲಿ ಸಾಮರ್ಥ್ಯವಿರುತ್ತಿದ್ದರೆ ನಾವು ಖಂಡಿತವಾಗಿಯು ನಿಮ್ಮ ಜೊತೆ ಹೊರಟು ಬರುತ್ತಿದ್ದೆವು ಎಂದು ಅಲ್ಲಾಹನ ಮೇಲೆ ಆಣೆ ಹಾಕಿ ನೆಪ ಹೂಡುತ್ತಾ (ದುರ್ಬಲರೊಂದಿಗೆ)ಹೇಳುತ್ತಾರೆ. ಅವರು ಸ್ವತಃ ತಮ್ಮನ್ನು ನಾಶಕ್ಕೀಡು ಮಾಡುತ್ತಿದ್ದಾರೆ. ಖಂಡಿತವಾಗಿಯು ಅವರು ಸುಳ್ಳರೆಂದು ಅಲ್ಲಾಹನಿಗೆ ಚೆನ್ನಾಗಿ ತಿಳಿದಿದೆ.
Tevbe 9:43
ಓ ಪೈಗಂಬರರೇ ಅಲ್ಲಾಹನು ನಿಮ್ಮನ್ನು ಮನ್ನಿಸಲಿ. ನಿಮ್ಮ ಮುಂದೆ ಸತ್ಯಸಂಧರು ಯಾರೆಂದು ಪ್ರಕಟವಾಗುವುದಕ್ಕೆ ಮೊದಲೇ ಮತ್ತು ನೀವು ಸುಳ್ಳರನ್ನು ಗುರುತಿಸಿಕೊಳ್ಳುವ ಮೊದಲೇ ಅವರಿಗೇಕೆ (ಕಪಟಿಗಳಿಗೆ)ಅನುಮತಿ ನೀಡಿದಿರಿ?
Tevbe 9:44
ಅಲ್ಲಾಹನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿಡುವವರು ತಮ್ಮ ತನು, ಮನ, ಧನಗಳಿಂದ ಹೋರಾಟ ಮಾಡದಿರಲು ನಿಮ್ಮೊಂದಿಗೆ ಅನುಮತಿಯನ್ನು ಕೇಳಲಾರರು ಮತ್ತು ಅಲ್ಲಾಹನು ಭಯಭಕ್ತಿ ಪಾಲಿಸುವವರನ್ನು ಚೆನ್ನಾಗಿ ಅರಿತಿದ್ದಾನೆ.
Tevbe 9:45
ನಿಮ್ಮೊಂದಿಗೆ ಅನುಮತಿಯನ್ನು ಕೇಳುವವರು ಅಲ್ಲಾಹನಲ್ಲಾಗಲೀ, ಅಂತ್ಯದಿನದಲ್ಲಾಗಲೀ ವಿಶ್ವಾಸವಿಡದವರು ಮಾತ್ರರಾಗಿರುವರು. ಅವರ ಹೃದಯಗಳು ಸಂಶಯಗ್ರಸ್ತವಾಗಿವೆ ಮತ್ತು ಅವರು ತಮ್ಮ ಸಂದೇಹದಲ್ಲೇ ಅಲೆದಾಡುತ್ತಿದ್ದಾರೆ.
Tevbe 9:46
ಇನ್ನು ಅವರ ಉದ್ದೇಶವು ಸಮರಕ್ಕಾಗಿ ಹೊರಡುವುದಾಗಿದ್ದರೆ ಅವರು ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಆದರೆ ಅಲ್ಲಾಹನಿಗೆ ಅವರು ಹೊರಡುವುದು ಇಷ್ಟವಿರಲಿಲ್ಲ. ಆದ್ದರಿಂದ ಅವನು ಅವರನ್ನು (ಅವರ ಕಾಪಟ್ಯದ ನಿಮಿತ್ತ) ಸೋಮಾರಿಗಳನ್ನಾಗಿಸಿ ತಡೆದುಬಿಟ್ಟನು ಮತ್ತು ಹೇಳಲಾಯಿತು: ನೀವು ಕುಳಿತುಬಿಟ್ಟವರೊಂದಿಗೆ (ದುರ್ಬಲರೊಂದಿಗೆ) ಕುಳಿತು ಬಿಡಿರಿ.
Tevbe 9:47
ಇನ್ನು ಅವರು ನಿಮ್ಮೊಂದಿಗೆ ಹೊರಡುತ್ತಿದ್ದರೂ ನಿಮಗೆ ಕೇಡನ್ನಲ್ಲದೇ ಇನ್ನೇನನ್ನೂ ಹೆಚ್ಚಿಸುತ್ತಿರಲಿಲ್ಲ. ನಿಮ್ಮ ನಡುವೆ ಕ್ಷೆÆÃಭೆ ಹರಡಲು ಅವರು ಓಡಾಡುತ್ತಿರುತ್ತಾರೆ. ಅವರಿಗೆ ಕಿವಿಗೊಡುವವರು ನಿಮ್ಮಲ್ಲಿದ್ದಾರೆ. ಮತ್ತು ಅಲ್ಲಾಹನು ಅಕ್ರಮಿಗಳನ್ನು ಚೆನ್ನಾಗಿ ಬಲ್ಲನು.
Tevbe 9:48
ಅವರು ಇದಕ್ಕೆ ಮೊದಲೂ ಕ್ಷೆÆÃಭೆ ಹರಡಲು ಬಯಸಿದ್ದರು ಮತ್ತು ನಿಮಗೋಸ್ಕರ ಸಂಗತಿಗಳನ್ನು ಬುಡಮೇಲುಗೊಳಿಸುತ್ತಲೂ ಇದ್ದರು ಕೊನೆಗೂ ಸತ್ಯವು ಬಂದುಬಿಟ್ಟಿತು; ಅವರು ಇಷ್ಟಪಡದಿದ್ದರೂ ಅಲ್ಲಾಹನ ತೀರ್ಮಾನ ಜಯಗಳಿಸಿತು.
Tevbe 9:49
'ನನಗೆ ಅನುಮತಿ ನೀಡಿರಿ ಮತ್ತು ನನ್ನನ್ನು ಆಪತ್ತಿಗೊಳಪಡಿಸದಿರಿ' ಎಂದು ಹೇಳುವವರು ಅವರ ಪೈಕಿ ಇದ್ದಾರೆ ತಿಳಿದುಕೊಳ್ಳಿರಿ. ಅವರು ಆಪತ್ತಿನಲ್ಲಿ ಬಿದ್ದುಬಿಟ್ಟಿದ್ದಾರೆ ಮತ್ತು ಖಂಡಿತವಾಗಿಯು ನರಕಾಗ್ನಿಯು ಸತ್ಯನಿಷೇಧಿಗಳನ್ನು ಮುತ್ತಿಕೊಂಡಿದೆ.
Tevbe 9:50
ತಮಗೇನಾದರೂ ಒಳಿತು ಲಭಿಸಿದರೆ ಅದವರಿಗೆ ದುಃಖವನ್ನುಂಟು ಮಾಡುತ್ತದೆ. ಮತ್ತು ನಿಮಗೇನಾದರೂ ವಿಪತ್ತು ಬಾಧಿಸಿದರೆ 'ನಾವು ನಮ್ಮ ವಿಚಾರದಲ್ಲಿ ಮೊದಲೇ ಜಾಗರೂಕತೆ ವಹಿಸಿದ್ದೆವು ಎಂದು ಅವರು ಹೇಳುತ್ತಾರೆ. ತರುವಾಯ ದುರಭಿಮಾನದೊಂದಿಗೆ ಮರಳುತ್ತಾರೆ.
Tevbe 9:51
ಹೇಳಿರಿ: ‘ಅಲ್ಲಾಹ ನಮಗೆ ವಿಧಿಸಿರುವುದಲ್ಲದೆ ಬೇರೇನೂ ನಮ್ಮನ್ನು ಬಾಧಿಸಲಾರದು. ಅವನು ನಮ್ಮ ಒಡೆಯನಾಗಿರುವನು. ಸತ್ಯವಿಶ್ವಾಸಿಗಳು ಅಲ್ಲಾಹುವಿನ ಮೇಲೆಯೇ ಭರವಸೆಯನ್ನಿಡಲಿ.
Tevbe 9:52
ಹೇಳಿರಿ: ಎರಡು ಒಳಿತು (ಹುತಾತ್ಮತೆ ಅಥವಾ ವಿಜಯ) ಗಳಲ್ಲಿ ನೀವು ನಮ್ಮ ಬಗ್ಗೆ ಯಾವುದಾದರೊಂದನ್ನು ನಿರೀಕ್ಷಿಸುತ್ತಿದ್ದೀರಿ. ಆದರೆ ನಿಮ್ಮ ಕುರಿತು ಅಲ್ಲಾಹನು ನಿಮಗೆ ತನ್ನ ಕಡೆಯಿಂದ ನೇರವಾಗಿ ಅಥವಾ ನಮ್ಮ ಕೈಯ್ಯಾರೆ ಶಿಕ್ಷೆಕೊಡಬೇಕೆಂದು ನಿರೀಕ್ಷಿಸುತ್ತಿದ್ದೇವೆ. ನೀವು ನಿರೀಕ್ಷಿಸುತ್ತಿರಿ ಮತ್ತು ನಾವೂ ನಿರೀಕ್ಷಿಸುವವರಾಗಿದ್ದೇವೆ.
Tevbe 9:53
ಹೇಳಿರಿ: ನೀವು ಸಂತೃಪ್ತಿಯಿAದ ವ್ಯಯಿಸಿರಿ ಅಥವಾ ಅತೃಪ್ತಿಯಿಂದ ವ್ಯಯಿಸಿರಿ. ನಿಮ್ಮಿಂದ ಖಂಡಿತ ಸ್ವೀಕರಿಸಲಾಗದು. ಖಂಡಿತವಾಗಿಯು ನೀವು ಧಿಕ್ಕಾರಿಗಳಾದ ಜನರಾಗಿದ್ದೀರಿ.
Tevbe 9:54
ಅವರು ಅಲ್ಲಾಹ್ ಮತ್ತು ಅವನ ಸಂದೇಶವಾಹಕರನ್ನು ನಿಷೇಧಿಸುತ್ತಾರೆ ಮತ್ತು ಆಲಸ್ಯದಿಂದಲೇ ನಮಾಝ್‌ಗೆ ಬರುತ್ತಾರೆ ಹಾಗೂ ಅತೃಪ್ತಿಯಿಂದ ಖರ್ಚು ಮಾಡುತ್ತಾರೆ ಎಂಬುದೇ ಅವರ ದಾನಗಳು ಸ್ವೀಕೃತವಾಗದಿರುವುದಕ್ಕೆ ಕಾರಣವಾಗಿದೆ.
Tevbe 9:55
ಅವರ ಸಂಪತ್ತುಗಳು ಮತ್ತು ಸಂತಾನಗಳು ನಿಮ್ಮನು ಚಕಿತಗೊಳಿಸದಿರಲಿ. ಅದರ ಮೂಲಕ ಅಲ್ಲಾಹನು ಇಹಲೋಕ ಜೀವನದಲ್ಲೇ ಅವರನ್ನು ಶಿಕ್ಷಿಸಲೆಂದು ಮತ್ತು ಅವರ ಸತ್ಯನಿಷೇಧದ ಸ್ಥಿತಿಯಲ್ಲಿ ಅವರು ಪ್ರಾಣ ಹರಣ ಮಾಡಬೇಕೆಂದು ಇಚ್ಛಿಸುತ್ತಾನೆ.
Tevbe 9:56
ನಾವು ನಿಮ್ಮವರೇ ಆಗಿದ್ದೇವೆಂದು ಅವರು ಅಲ್ಲಾಹನ ಮೇಲೆ ಆಣೆಯಿಟ್ಟು ಹೇಳುತ್ತಾರೆ. ವಸ್ತುತಃ ಅವರು ನಿಮ್ಮವರಲ್ಲ. ಆದರೆ ಅವರು ರಣಹೇಡಿ ಜನರಾಗಿದ್ದಾರೆ.
Tevbe 9:57
ಇನ್ನು ಅವರು ಯಾವುದಾದರೂ ಅಭಯಸ್ಥಾನವನ್ನು ಅಥವಾ ಗುಹೆಯನ್ನು ಅಥವಾ ದ್ವಾರವನ್ನು ಕಂಡರೆ ಅದರೆಡೆಗೆ ಧಾವಂತದಿAದ ಹಗ್ಗ ಕಳಚಿ ಓಡುತ್ತಾರೆ.
Tevbe 9:58
ಕಪಟಿಗಳಲ್ಲಿ ದಾನ ಧರ್ಮಗಳ ವಿತರಣೆಯ ವಿಷಯದಲ್ಲಿ ನಿಮ್ಮನ್ನು (ತಾರತಮ್ಯ ಮಾಡುತ್ತಾರೆಂದು) ದೋಷಿಸುವವರು ಕೆಲವರಿದ್ದಾರೆ. ಆದ್ದರಿಂದ ಅವರಿಷ್ಟದಂತೆ ಅವರಿಗೇನಾದರೂ ಲಭಿಸಿದರೆ ಅವರು ಸಂತೃಪ್ತರಾಗಿರುವರು ಮತ್ತು ಅದರಿಂದ ಅವರಿಗೆ ಸಿಗದಿದ್ದರೆ ಕೂಡಲೇ ಅವರು ಕುಪಿತರಾಗುತ್ತಾರೆ.
Tevbe 9:59
ಇನ್ನು ಅವರು ಅಲ್ಲಾಹನ ಮತ್ತು ಅವನ ಸಂದೇಶವಾಹಕರು ನೀಡಿರುವುದರಲ್ಲಿ ತೃಪ್ತಿಪಟ್ಟು ಮತ್ತು ನಮಗೆ ಅಲ್ಲಾಹನು ಸಾಕು, ಅಲ್ಲಾಹನು ತನ್ನ ಅನುಗ್ರಹದಿಂದ ನೀಡುವನು ಮತ್ತು ಅವನ ಸಂದೇಶವಾಹಕರು ಸಹ. ನಾವು ಅಲ್ಲಾಹನೆಡೆಗೆ ನಿರೀಕ್ಷೆಯನ್ನಿರಿಸಿಕೊಂಡಿದ್ದೇವೆAದು ಹೇಳಿರುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು.
Tevbe 9:60
ವಾಸ್ತವದಲ್ಲಿ ಕಡ್ಡಾಯ ದಾನಧರ್ಮಗಳು ಬಡವರಿಗೆ, ನಿರ್ಗತಿಕರಿಗೆ ಅದಕ್ಕಾಗಿ ಕಾರ್ಯನಿರ್ವಹಿಸುವವರಿಗೆ, ಮನವೊಲಿಸಲು ಬೇಕಾದವರಿಗೆ, ದಾಸ್ಯ ವಿಮೋಚನೆಗೆ, ಸಾಲದಲ್ಲಿ ಮುಳುಗಿರುವವರಿಗೆ, ಅಲ್ಲಾಹನ ಮಾರ್ಗದಲ್ಲಿ ಹೋರಾಡುವವರಿಗೆ ಮತ್ತು ಪ್ರಯಾಣಿರಿಗೆ ಮಾತ್ರವಾಗಿದೆ. ಇದು ಅಲ್ಲಾಹನ ವತಿಯಿಂದ ಕಡ್ಡಾಯಗೊಳಿಸಲಾದ ನಿರ್ಣಯವಾಗಿದೆ ಮತ್ತು ಅಲ್ಲಾಹನು ಸರ್ವಜ್ಞಾನಿಯು, ಯುಕ್ತಿವಂತನೂ ಆಗಿದ್ದಾನೆ.
Tevbe 9:61
ಕಪಟಿಗಳಲ್ಲಿ ಕೆಲವರು ಪೈಗಂಬರರಿಗೆ ಕಿರುಕುಳ ಕೊಡುವವರೂ ಇದ್ದಾರೆ. ಪೈಗಂಬರರು ಸತ್ಯವಿರಲಿ ಸುಳ್ಳಾಗಿರಲಿ ಎಲ್ಲವನ್ನು ಆಲಿಸುತ್ತಾರೆ ಎಂದು ಅವರು (ಕಪಟಿಗಳು) ಹೇಳುತ್ತಾರೆ. ಹೇಳಿರಿ: ಅವರು ನಿಮ್ಮ ಒಳಿತಿಗೋಸ್ಕರವೇ ಆಲಿಸುತ್ತಾರೆ. ಅವರು ಅಲ್ಲಾಹನಲ್ಲಿ ವಿಶ್ವಾಸವಿಡುತ್ತಾರೆ. ಮತ್ತು ವಿಶ್ವಾಸಿಗಳ ಮಾತನ್ನು ದೃಢವಾಗಿ ನಂಬುತ್ತಾರೆ. ನಿಮ್ಮ ಪೈಕಿ ಸತ್ಯವಿಶ್ವಾಸ ಹೊಂದಿದವರಿಗೆ ಅವರು ಕಾರುಣ್ಯವಾಗಿದ್ದಾರೆ. ಅಲ್ಲಾಹನ ಸಂದೇಶವಾಹಕರಿಗೆ ಯಾರು ಕಿರುಕುಳ ಕೊಡುತ್ತಾರೋ ಅವರಿಗೆ ವೇದನಾಜನಕ ಶಿಕ್ಷೆಯಿದೆ.
Tevbe 9:62
(ಈ ಕಪಟಿಗಳು) ನಿಮ್ಮನ್ನು ತೃಪ್ತಿಪಡಿಸುವುದಕ್ಕಾಗಿ ನಿಮ್ಮ ಮುಂದೆ ಅವರು ಅಲ್ಲಾಹನ ಆಣೆ ಹಾಕುತ್ತಾರೆ. ವಾಸ್ತವದಲ್ಲಿ ಅವರು ಸತ್ಯವಿಶ್ವಾಸಿಗಳಾಗಿದ್ದರೆ ತೃಪ್ತಿಪಡಿಸಲು ಹೆಚ್ಚು ಅರ್ಹನು ಅಲ್ಲಾಹ್ ಮತ್ತು ಅವನ ಸಂದೇಶವಾಹಕರಾಗಿದ್ದಾರೆ.
Tevbe 9:63
ಯಾರು ಅಲ್ಲಾಹನನ್ನು ಹಾಗೂ ಅವನ ಸಂದೇಶವಾಹಕರ ಎದುರು ಘರ್ಷಣೆಗೆ ಇಳಿಯುತ್ತಾರೋ ಖಂಡಿತವಾಗಿಯೂ ಅವರಿಗೆ ನರಕಾಗ್ನಿಯಿದೆ ಮತ್ತು ಅವರದರಲ್ಲಿ ಶಾಶ್ವತವಾಗಿ ವಾಸಿಸುವವರೆಂದು ಅವರು ಅರಿತಿಲ್ಲವೇ? ಅದು ಅತಿ ದೊಡ್ಡ ಅಪಮಾನವಾಗಿದೆ.
Tevbe 9:64
ತಮ್ಮ ಮನಸ್ಸಿನಲ್ಲಿರುವ ವಿಚಾರಗಳನ್ನು ತಿಳಿಸಿಕೊಡುವಂತಹ ಯಾವುದಾದರೂ ಅಧ್ಯಾಯ ಅವರ(ಪೈಗಂಬರರ) ಮೇಲೆ ಅವತೀರ್ಣಗೊಳ್ಳಬಹುದೆಂದು ಕಪಟವಿಶ್ವಾಸಿಗಳು ಭಯಪಡುತ್ತಿರುತ್ತಾರೆ. ಹೇಳಿರಿ: ‘ನೀವು ಅಪಹಾಸ್ಯ ಮಾಡುತ್ತಿರಿ. ನೀವು ಭಯಪಡುತ್ತಿರುವುದನ್ನು ಖಂಡಿತವಾಗಿಯು ಅಲ್ಲಾಹನು ಬಹಿರಂಗಗೊಳಿಸುವವನಿದ್ದಾನೆ'.
Tevbe 9:65
ನೀವು ಅವರೊಂದಿಗೆ ವಿಚಾರಿಸಿದರೆ ಅವರು: ‘ನಾವು ಹೀಗೆಯೇ ಪರಸ್ಪರ ವಿನೋದ ಮಾತುಗಳನ್ನು ಆಡುತ್ತಿದ್ದೆವು'. ಎಂದು ಹೇಳುತ್ತಾರೆ. ಹೇಳಿರಿ: ಅಲ್ಲಾಹನು ಅವನ ದೃಷ್ಟಾಂತಗಳು ಮತ್ತು ಅವನ ಸಂದೇಶವಾಹಕರು ನಿಮ್ಮ ವಿನೋದದ ವಸ್ತುಗಳಾಗಿಬಿಟ್ಟವೇ?
Tevbe 9:66
ನೀವು ನೆಪಗಳನ್ನೊಡ್ಡಬೇಡಿರಿ. ಖಂಡಿತವಾಗಿಯು ನೀವು ನಿಮ್ಮ ವಿಶ್ವಾಸದ ಬಳಿಕ ಅವಿಶ್ವಾಸಿಗಳಾಗಿಬಿಟ್ಟಿರುವಿರಿ. ನಾವು ನಿಮ್ಮಲ್ಲಿ ಒಂದು ಪಂಗಡಕ್ಕೆ ಕ್ಷಮೆ ನೀಡಿದರೂ ಇನ್ನೊಂದು ಪಂಗಡಕ್ಕೆ ಅವರ ಅಪರಾಧಗಳ ನಿಮಿತ್ತ ಶಿಕ್ಷಿಸುವೆವು.
Tevbe 9:67
ಕಪಟವಿಶ್ವಾಸಿಗಳು ಮತ್ತು ಕಪಟ ವಿಶ್ವಾಸಿನಿಯರು ಪರಸ್ಪರ ಒಂದೇ ಆಗಿದ್ದಾರೆ. ಅವರು ಕೆಡುಕುಗಳನ್ನು ಆದೇಶಿಸುತ್ತಾರೆ ಮತ್ತು ಒಳಿತಿನ ವಿಚಾರಗಳಿಂದ ತಡೆಯುತ್ತಾರೆ ಹಾಗೂ ತಮ್ಮ ಮುಷ್ಠಿಗಳನ್ನು ಬಿಗಿದಿಡುತ್ತಾರೆ. ಅವರು ಅಲ್ಲಾಹನನ್ನು ಮರೆತು ಬಿಟ್ಟರು. ಅಲ್ಲಾಹನು ಅವರನ್ನು ಮರೆತು ಬಿಟ್ಟನು. ನಿಸ್ಸಂಶಯವಾಗಿಯು ಕಪಟವಿಶ್ವಾಸಿಗಳೇ ಧಿಕ್ಕಾರಿಗಳಾಗಿದ್ದಾರೆ.
Tevbe 9:68
ಅಲ್ಲಾಹನು ಕಪಟವಿಶ್ವಾಸಿಗಳಿಗೂ, ಕಪಟ ವಿಶ್ವಾಸಿನಿಯರಿಗೂ ಹಾಗೂ ಸತ್ಯನಿಷೇಧಿಗಳಿಗೂ ನರಕಾಗ್ನಿಯ ವಾಗ್ದಾನವನ್ನು ಮಾಡಿರುವನು. ಅವರದರಲ್ಲಿ ಶಾಶ್ವತವಾಗಿ ವಾಸಿಸುವರು. ಅವರಿಗೆ ಅದುವೇ ಸಾಕು. ಅವರ ಮೇಲೆ ಅಲ್ಲಾಹನ ಶಾಪವಿದೆ ಮತ್ತು ಅವರಿಗೇ ಶಾಶ್ವತ ಶಿಕ್ಷೆಯಿರುವುದು.
Tevbe 9:69
ನಿಮಗಿಂತ ಮೊದಲು ಇದ್ದಂತಹ ಜನರ ಹಾಗೆ ನೀವೂ ಸಹ, ಅವರು ನಿಮಗಿಂತಲೂ ಹೆಚ್ಚು ಬಲಶಾಲಿಗಳಾಗಿದ್ದರು ಮತ್ತು ಹೆಚ್ಚು ಸಂಪತ್ತನ್ನೂ, ಸಂತಾನವನ್ನೂ ಹೊಂದಿದವರಾಗಿದ್ದರು. ನಂತರ ಅವರು ತಮ್ಮ ಪಾಲಿನ ಸುಖವನ್ನು ಅನುಭವಿಸಿದರು. ಬಳಿಕ ನೀವು ಸಹ ನಿಮ್ಮ ಪೂರ್ವಿಕರು ತಮ್ಮ ಪಾಲಿನ ಸುಖವನ್ನು ಅನುಭವಿಸಿದಂತೆಯೇ ಅನುಭವಿಸಿರಿ ಮತ್ತು ಅವರು ಪರಿಹಾಸ್ಯದಲ್ಲಿ ಮಗ್ನರಾಗಿರುವಂತೆ ನೀವು ಮಗ್ನರಾಗಿರಿ. ಅವರ ಕರ್ಮಗಳು ಇಹ ಪರಲೋಕದಲ್ಲಿ ನಿಷ್ಫಲವಾಗಿಬಿಟ್ಟವು. ಅವರೇ ನಷ್ಟಕ್ಕೀಡಾಗು ವವರಾಗಿದ್ದಾರೆ.
Tevbe 9:70
ತಮಗಿಂತ ಮೊದಲಿನ ಜನಾಂಗಗಳಾದ; ನೂಹರ ಜನಾಂಗ, ಆದ್, ಸಮೂದ್ ಜನಾಂಗಗಳ, ಇಬ್ರಾಹೀಮ್‌ರ ಜನಾಂಗ, ಮದ್‌ಯನ್ ವಾಸಿಗಳ ಮತ್ತು ಬುಡಮೇಲುಗೊಳಿಸಲಾದ ನಾಡಿನವರ ವೃತ್ತಾಂತವು ಅವರಿಗೆ ತಲುಪಿಲ್ಲವೇ? ಅವರ ಬಳಿಗೆ ಅವರ ಸಂದೇಶವಾಹಕರು ಸ್ಪಷ್ಟವಾದ ಪುರಾವೆಗಳೊಂದಿಗೆ ಬಂದಿದ್ದರು. ಅಲ್ಲಾಹನು ಅವರ ಮೇಲೆ ಅಕ್ರಮವೆಸುವವನಾಗಿರಲಿಲ್ಲ. ಆದರೆ ಅವರು ಸ್ವತಃ ತಮ್ಮ ಮೇಲೆಯೇ ಅಕ್ರಮವನ್ನೆಸಗಿದರು.
Tevbe 9:71
ಸತ್ಯವಿಶ್ವಾಸಿ ಪುರುಷರು ಮತ್ತು ಸ್ತಿçÃಯರು ಪರಸ್ಪರ ಮಿತ್ರರಾಗಿದ್ದಾರೆ. ಅವರು ಒಳಿತುಗಳ ಆದೇಶವನ್ನು ನೀಡುತ್ತಾರೆ ಮತ್ತು ಕೆಡುಕುಗಳಿಂದ ತಡೆಯುತ್ತಾರೆ. ನಮಾಝನ್ನು ಸಂಸ್ಥಾಪಿಸುತ್ತಾರೆ, ಝಕಾತನ್ನು ಪಾವತಿಸುತ್ತಾರೆ ಮತ್ತು ಅಲ್ಲಾಹನನ್ನು ಹಾಗೂ ಅವನ ಸಂದೇಶವಾಹಕರನ್ನು ಅನುಸರಿಸುತ್ತಾರೆ. ಅಲ್ಲಾಹನು ಶೀಘ್ರವೇ ಅವರ ಮೇಲೆ ಕರುಣೆ ತೋರುವನು. ನಿಸ್ಸಂದೇಹವಾಗಿಯು ಅಲ್ಲಾಹನು ಪ್ರತಾಪಶಾಲಿಯೂ, ಯುಕ್ತಿಪೂರ್ಣನೂ ಆಗಿದ್ದಾನೆ.
Tevbe 9:72
ಅಲ್ಲಾಹನು ಸತ್ಯವಿಶ್ವಾಸಿ ಹಾಗೂ ಸತ್ಯವಿಶ್ವಾಸಿನಿಯರಿಗಾಗಿ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳ ವಾಗ್ದಾನವನ್ನು ಮಾಡಿದ್ದಾನೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು ಮತ್ತು ಆ ಶಾಶ್ವತವಾಗಿರುವ ಸ್ವರ್ಗೋದ್ಯಾನಗಳಲ್ಲಿ ಪರಿಶುದ್ಧವಾದ ಭವನಗಳ ವಾಗ್ದಾನವನ್ನು ಮಾಡಲಾಗಿದೆ. ಇನ್ನು ಮಹತ್ತರವಾದ ಅಲ್ಲಾಹನ ಸಂಪ್ರೀತಿ ಪ್ರಾಪ್ತವಾಗುವುದು. ಅಲ್ಲಾಹನ ಸಂತೃಪ್ತಿಯೇ ಅತಿ ದೊಡ್ಡದಾಗಿದೆ. ಇದುವೇ ಮಹಾ ವಿಜಯವಾಗಿದೆ.
Tevbe 9:73
ಓ ಪೈಗಂಬರರೇ, ಸತ್ಯನಿಷೇಧಿ ಹಾಗೂ ಕಪಟವಿಶ್ವಾಸಿಗಳೊಂದಿಗೂ ಸತ್ಯಕ್ಕಾಗಿ ಯುದ್ಧ ಮಾಡಿರಿ ಮತ್ತು ಅವರೊಂದಿಗೆ ಕಟುವಾಗಿ ವರ್ತಿಸಿರಿ (ಮೃದುತ್ವ ತೋರದಿರಿ). ಅವರ ವಾಸಸ್ಥಳವು ನರಕವಾಗಿದೆ. ಅದು ಅತ್ಯಂತ ನಿಕೃಷ್ಟ ಸ್ಥಳವಾಗಿದೆ.
Tevbe 9:74
(ಕಪಟವಿಶ್ವಾಸಿಗಳು) ನಾವು ಏನು ಹೇಳಿಲ್ಲವೆಂದು ಅವರು ಅಲ್ಲಾಹನ ಆಣೆ ಹಾಕಿ ಹೇಳುತ್ತಾರೆ. ವಸ್ತುತಃ ಸತ್ಯನಿಷೇಧದ ಮಾತನ್ನು ಅವರು ಆಡಿದ್ದಾರೆ. ಮತ್ತು ತಮ್ಮ ಇಸ್ಲಾಮ್ ಸ್ವೀಕಾರದ ನಂತರ ಅವರು ಸತ್ಯನಿಷೇಧಿಗಳಾಗಿ ಬಿಟ್ಟರು. ಮತ್ತು ಅವರು ತಮಗೆ ಮಾಡಲು ಸಾಧ್ಯವಾಗದ ಸಂಗತಿಯನ್ನೂ (ಪೈಗಂಬರವರನ್ನು ವಧಿಸಲು) ನಿರ್ಧರಿಸಿದ್ದರು. ಅಲ್ಲಾಹನು ತನ್ನ ಅನುಗ್ರಹದಿಂದ ಮತ್ತು ಅವನ ಸಂದೇಶವಾಹಕರು ಅವರಿಗೆ (ಮದೀನಾ ವಾಸಿಗಳಿಗೆ) ಸಂಪತ್ತÀನ್ನು ನೀಡಿದರು ಎಂಬ ವಿಚಾರವೇ ಅವರ ಪ್ರತೀಕಾರಕ್ಕೆ ಕಾರಣವಾಗಿದೆ. ಇನ್ನು ಅವರು ಪಶ್ಚಾತ್ತಾಪ ಪಡುವುದಾದರೆ ಅದು ಅವರ ಪಾಲಿಗೆ ಅತ್ಯುತ್ತಮವಾಗಿದೆ. ಮತ್ತು ಅವರೇನಾದರೂ ವಿಮುಖರಾಗುವುದಾದರೆ ಅಲ್ಲಾಹನು ಅವರಿಗೆ ಇಹಲೋಕದಲ್ಲೂ, ಪರಲೋಕದಲ್ಲೂ ವೇದನಾಜನಕವಾದ ಶಿಕ್ಷೆಯನ್ನು ನೀಡುವನು ಮತ್ತು ಇಡೀ ಭೂಮಿಯಲ್ಲಿ ಅವರಿಗೆ ಯಾವೊಬ್ಬ ಬೆಂಬಲಿಗನಾಗಲೀ, ಸಹಾಯಕನಾಗಲೀ ಇರಲಾರನು.
Tevbe 9:75
ಅಲ್ಲಾಹನು ತನ್ನ ಅನುಗ್ರಹದಿಂದ ನಮಗೆ ಏನಾದರೂ ನೀಡುವುದಾದರೆ ಖಂಡಿತವಾಗಿಯು ನಾವು ದಾನ ಧರ್ಮ ಮಾಡುವೆವು ಮತ್ತು ಸಜ್ಜನರ ಪೈಕಿ ಸೇರುವೆವು ಎಂದು ಅಲ್ಲಾಹನೊಂದಿಗೆ ಕರಾರು ಮಾಡಿದವರು ಅವರ ಪೈಕಿ ಇದ್ದಾರೆ.
Tevbe 9:76
ಆದರೆ ಅಲ್ಲಾಹನು ತನ್ನ ಅನುಗ್ರಹವನ್ನು ಅವರಿಗೆ ನೀಡಿದಾಗ ಅವರದರಲ್ಲಿ ಜಿಪುಣತೆಯನ್ನು ತೋರಿದರು ಮತ್ತು ನೆಪಗಳನ್ನೊಡ್ಡುತ್ತಾ ವಿಮುಖರಾಗಿ ಬಿಟ್ಟರು.
Tevbe 9:77
ಅವರು ಅಲ್ಲಾಹನೊಂದಿಗೆ ಮಾಡಿದ ವಾಗ್ದಾನವನ್ನು ಉಲ್ಲಂಘಿಸಿದುದಕ್ಕಾಗಿ ಮತ್ತು ಸುಳ್ಳು ಹೇಳಿದುದಕ್ಕಾಗಿ ಅವರು ಅಲ್ಲಾಹನನ್ನು ಭೇಟಿಯಾಗುವ ದಿನದವರೆಗೆ ಶಿಕ್ಷಾರ್ಹವಾಗಿ ಅವರ ಹೃದಯಗಳಲ್ಲಿ ಕಾಪಟ್ಯವನ್ನು ಹಾಕಿಬಿಟ್ಟನು.
Tevbe 9:78
ನಿಶ್ಚಯವಾಗಿಯು ಅಲ್ಲಾಹನು ಅವರ ರಹಸ್ಯಗಳನ್ನು ಮತ್ತು ಗೂಢಾಲೋಚನೆಗಳನ್ನು ಅರಿಯುವವನೆಂದೂ ಮತ್ತು ಖಂಡಿತವಾಗಿ ಅಲ್ಲಾಹನು ಅಗೋಚರ ವಿಷಯಗಳನ್ನು ಅರಿಯುವವನೆಂದೂ ಅವರಿಗೆ ತಿಳಿದಿಲ್ಲವೇ?
Tevbe 9:79
ವಿಶ್ವಾಸಿಗಳ ಪೈಕಿ ಸ್ವ-ಇಚ್ಛೆಯಿಂದ ದಾನಧರ್ಮ ಮಾಡುವವರನ್ನು ಮತ್ತು ತಮ್ಮ ಪರಿಶ್ರಮ ಫಲದ ಹೊರತು ಬೇರೇನೂ ಪಡೆಯದಂತಹವರನ್ನು ಕಪಟಿಗಳು ದೋಷಿಸುತ್ತಾರೆ. ಇವರು ಅವರ ಅಪಹಾಸ್ಯ ಮಾಡುತ್ತಾರೆ. ಹಾಗೆಯೇ ಅಲ್ಲಾಹನು ಸಹ ಅವರನ್ನು ಅಪಹಾಸ್ಯ ಮಾಡುತ್ತಾನೆ. ಅವರಿಗೆ ವೇದನಾಜನಕವಾದ ಶಿಕ್ಷೆಯಿದೆ.
Tevbe 9:80
ಓ ಪೈಗಂಬರರೇ ನೀವು ಅವರಿಗೋಸ್ಕರ ಪಾಪವಿಮೋಚನೆಯನ್ನು ಬೇಡಿದರೂ ಅಥವಾ ಬೇಡದಿದ್ದರೂ, ಮತ್ತು ಅವರಿಗೋಸ್ಕರ ಎಪ್ಪತ್ತು ಬಾರಿ ಪಾಪವಿಮೋಚನೆಯನ್ನು ಬೇಡಿದರೂ ಖಂಡಿತ 'ಅಲ್ಲಾಹನು ಅವರನ್ನು ಕ್ಷಮಿಸುವುದಿಲ್ಲ. ಇದೇಕೆಂದರೆ ಅವರು ಅಲ್ಲಾಹನನ್ನು ಅವನ ಸಂದೇಶವಾಹಕರನ್ನು ನಿರಾಕರಿಸಿದ್ದಾರೆ. ಇಂತಹ ಧಿಕ್ಕಾರಿಗಳಾದ ಜನರಿಗೆ ಅಲ್ಲಾಹನು ಸನ್ಮಾರ್ಗನ್ನು ನೀಡುವುದಿಲ್ಲ.
Tevbe 9:81
ಯುದ್ದಕ್ಕೆ ಹೊರಡದೆ ಹಿಂದುಳಿದು ಬಿಟ್ಟವರು ಅಲ್ಲಾಹನ ಮತ್ತು ಸಂದೇಶವಾಹಕರ ಆದೇಶದ ವಿರುದ್ಧ ತಮ್ಮ ಮನೆಗಳಲ್ಲಿ ಕುಳಿತುಕೊಳ್ಳುವುದರಲ್ಲಿ ಸಂತೃಪ್ತರಾಗಿರುವರು. ಅವರು ಅಲ್ಲಾಹನ ಮಾರ್ಗದಲ್ಲಿ ತಮ್ಮ ತನು, ಮನ, ಧನಗಳಿಂದ ಯುದ್ಧ ಮಾಡುವುದನ್ನು ಅನಿಷ್ಟಪಟ್ಟರು ಮತ್ತು ಅವರು ಹೇಳಿದರು: 'ನೀವು ಈ ಉರಿಬಿಸಿಲಿನಲ್ಲಿ ಹೊರಡಬೇಡಿರಿ'. ಹೇಳಿರಿ: 'ನರಕಾಗ್ನಿಯು ಕಠಿಣ ಉರಿಯನ್ನು ಹೊಂದಿದೆ. ಅವರದನ್ನು ಗ್ರಹಿಸುವವರಾಗಿದ್ದರೆ!
Tevbe 9:82
ಆದ್ದರಿಂದ ಅವರು ಮಾಡುತ್ತಿದ್ದುದರ ಫಲವಾಗಿ ಅವರು ಸ್ವಲ್ಪವೇ ನಗಲಿ ಮತ್ತು ಹೆಚ್ಚು ಅಳಲಿ.
Tevbe 9:83
ಇನ್ನು ಅಲ್ಲಾಹು ನಿಮ್ಮನ್ನು ಅವರ ಪೈಕಿ ಒಂದು ಗುಂಪಿನೆಡೆಗೆ ಮರಳಿಸಿದರೆ ಬಳಿಕ ಅವರು ನಿಮ್ಮೊಂದಿಗೆ ಯುದ್ದರಂಗಕ್ಕೆ ಹೊರಡಲು ಅನುಮತಿ ಕೇಳಿದರೆ ನೀವು ಹೇಳಿ ಬಿಡಿರಿ: 'ನೀವು ನನ್ನೊಂದಿಗೆ ಎಂದಿಗೂ ಹೊರಡಲಾರಿರಿ ಮತ್ತು ನೀವು ನನ್ನ ಜೊತೆ ಒಬ್ಬ ಶತ್ರುವಿನೊಂದಿಗೂ ಯುದ್ಧ ಮಾಡಲಾರಿರಿ. ನೀವು ಮೊದಲ ಬಾರಿಯೇ ಹಿಂದುಳಿದು ಬಿಡುವುದನ್ನು ಇಷ್ಟಪಟ್ಟಿದ್ದಿರಿ. ಆದ್ದರಿಂದ ನೀವು ಹಿಂದುಳಿದು ಬಿಟ್ಟವರೊಂದಿಗೇ ಕುಳಿತುಕೊಂಡಿರಿ.
Tevbe 9:84
ಅವರ ಪೈಕಿ ಯಾರಾದರೂ ಮೃತಪಟ್ಟರೆ ನೀವು ಅವನ ಜನಾಝಾ ನಮಾಝ್ ಮಾಡಬೇಡಿರಿ. ಅವನ ಗೋರಿಯ ಬಳಿ ನಿಲ್ಲಲೂ ಬೇಡಿರಿ. ಅವರು ಅಲ್ಲಾಹ್ ಮತ್ತು ಸಂದೇಶವಾಹಕರನ್ನು ನಿಷೇಧಿಸಿದರು ಮತ್ತು ಧಿಕ್ಕಾರಿಗಳಾಗಿಯೇ ಮೃತಪಟ್ಟರು.
Tevbe 9:85
ನಿಮಗೆ ಅವರ ಸಂಪತ್ತುಗಳು ಮತ್ತು ಸಂತಾನಗಳು ಚಕಿತಗೊಳಿಸದಿರಲಿ. ನಿಶ್ಚಯವಾಗಿಯು ಅಲ್ಲಾಹನು ಅವರನ್ನು ಅವುಗಳ ಮೂಲಕ ಐಹಿಕ ಶಿಕ್ಷೆಯನ್ನು ನೀಡಲು ಮತ್ತು ಸತ್ಯನಿಷೇಧಿಗಳಿಗಿರುವಂತೆಯೇ ಅವರ ಪ್ರಾಣಹರಣ ಮಾಡಲು ಇಚ್ಛಿಸುತ್ತಾನೆ.
Tevbe 9:86
ಅಲ್ಲಾಹನಲ್ಲಿ ವಿಶ್ವಾಸವಿಡಿರಿ ಮತ್ತು ಅವನ ಸಂದೇಶವಾಹಕರೊAದಿಗೆ ಸೇರಿ ಯುದ್ಧ ಮಾಡಿರೆನ್ನುತ್ತಾ ಯಾವುದಾದರೂ ಅಧ್ಯಾಯವು ಅವತೀರ್ಣಗೊಳಿಸಲಾದರೆ ಅವರ ಪೈಕಿ ಐಶ್ವರ್ಯವಂತರ ವರ್ಗವು ನಿಮ್ಮ ಬಳಿಗೆ ಬಂದು ಹೀಗೆ ಅನುಮತಿಯನ್ನು ಕೇಳುತ್ತಾರೆ; ನಮ್ಮನ್ನು ಬಿಟ್ಟು ಬಿಡಿರಿ. ಯುದ್ಧಕ್ಕೆ ಹೊರಡದೆ ಕುಳಿತುಬಿಟ್ಟವರಲ್ಲೇ ನಾವು ಕುಳಿತುಬಿಡುವೆವು.
Tevbe 9:87
ಮನೆಯೊಳಗೆ ಕುಳಿತಿರುವ ಸ್ತಿçÃಯರ ಜೊತೆ ಕುಳಿತುಕೊಳ್ಳುವುದರಲ್ಲಿ ಅವರು ಸಂತೃಪ್ತರಾಗಿದ್ದಾರೆ ಮತ್ತು ಅವರ ಹೃದಯಗಳ ಮೇಲೆ ಮುದ್ರೆಯೊತ್ತಲಾಗಿದೆ. ಆದ್ದರಿಂದ ಅವರು ಗ್ರಹಿಸುವುದಿಲ್ಲ.
Tevbe 9:88
ಆದರೆ ಸಂದೇಶವಾಹಕರು ಮತ್ತು ಅವರ ಜೊತೆ ವಿಶ್ವಾಸವಿಟ್ಟವರು ತಮ್ಮ ತನು, ಮನ, ಧನಗಳಿಂದ ಯುದ್ಧ ಮಾಡುತ್ತಾರೆ. ಅವರಿಗೇ ಸರ್ವ ಒಳಿತುಗಳಿವೆ. ಅವರೇ ಯಶಸ್ಸು ಪಡೆಯುವವರಾಗಿದ್ದಾರೆ.
Tevbe 9:89
ಅಲ್ಲಾಹನು ಅವರಿಗೆ ಸ್ವರ್ಗೋದ್ಯಾನಗಳನ್ನು ಸಿದ್ಧಗೊಳಿಸಿದ್ದಾನೆ. ಅವುಗಳ ತಳಭಾಗದಿಂದ ಕಾಲುವೆಗಳು ಹರಿಯುತ್ತಿರುವುವು. ಅದರಲ್ಲವರು ಶಾಶ್ವತವಾಗಿ ವಾಸಿಸುವರು. ಇದುವೇ ಮಹಾವಿಜಯವಾಗಿದೆ.
Tevbe 9:90
ಗ್ರಾಮೀಣ ವಾಸಿಗಳ ಪೈಕಿ ನೆಪಗಳನ್ನೊಡ್ಡುವ ಜನರು ಅನುಮತಿ ಪಡೆಯಲಿಕ್ಕಾಗಿ ಹಾಜರಾದರು ಮತ್ತು ಅಲ್ಲಾಹನೊಂದಿಗೂ ಹಾಗೂ ಅವನ ಸಂದೇಶವಾಹಕನೊAದಿಗೂ ಸುಳ್ಳು ಹೇಳಿದವರು ಕುಳಿತು ಬಿಟ್ಟರು. ಇನ್ನು ಅವರ ಪೈಕಿ ಸತ್ಯವನ್ನು ನಿಷೇಧಿಸುವರಿಗೆ ವೇದನಾಜನಕವಾದ ಶಿಕ್ಷೆಯು ಬಾಧಿಸಲಿರುವುದು.
Tevbe 9:91
ದುರ್ಬಲರು, ರೋಗಿಗಳು, ಖರ್ಚು ಮಾಡುವುದಕ್ಕಾಗಿ ಏನೂ ಇಲ್ಲದವರು ಅಲ್ಲಾಹ್ ಮತ್ತು ಅವನ ಸಂದೇಶವಾಹಕರಿಗೆ ಪ್ರಾಮಾಣಿಕರಾಗಿದ್ದರೆ. ಅಂತಹ ಸಜ್ಜನರ ಮೇಲೆ ಆಕ್ಷೇಪಿಸಲು ಯಾವುದೇ ಮಾರ್ಗವಿಲ್ಲ. ಅಲ್ಲಾಹನು ಅತ್ಯಧಿಕ ಕ್ಷಮಿಸುವವನು, ಕರುಣಾನಿಧಿಯು ಆಗಿದ್ದಾನೆ.
Tevbe 9:92
ಯುದ್ಧಕ್ಕೆ ಹೊರಡಲು ತಮಗೆ ಸವಾರಿ ಒದಗಿಸಿಕೊಡಬೆಕೆಂದು ನಿಮ್ಮ ಬಳಿ ಬೇಡುತ್ತಾ ಬಂದವರೂ ಆಕ್ಷೇಪಾರ್ಹರಲ್ಲ. ಆಗ ನೀವು ಉತ್ತರಿಸಿದಿರಿ: ನಿಮಗೆ ಸವಾರು ಮಾಡಲು ನನ್ನ ಬಳಿ ಯಾವುದೇ ಸವಾರಿಯಿಲ್ಲ. ಆಗ ಅವರು ತಮಗೆ ಖರ್ಚು ಮಾಡಲು ಏನೂ ಇಲ್ಲವಲ್ಲ ಎಂದು ದುಃಖದಿಂದ ಕಣ್ಣೀರು ಸುರಿಸುತ್ತಾ ಮರಳಿದರು.
Tevbe 9:93
ನಿಸ್ಸಂದೇಹವಾಗಿಯೂ ಆಕ್ಷೇಪಾರ್ಹರು ಸ್ಥಿತಿವಂತರಾಗಿದ್ದೂ ಸಹ ಯುದ್ಧಕ್ಕೆ ಹೊರಡದಿರಲು ನಿಮ್ಮೊಂದಿಗೆ ಅನುಮತಿಯನ್ನು ಕೇಳುವವರಾಗಿದ್ದಾರೆ. ಅವರು ಮನೆಯೊಳಗೆ ಕುಳಿತಿರುವ ಸ್ತಿçÃಯರ ಜೊತೆ ಕುಳಿತುಕೊಳ್ಳುವುದರಲ್ಲಿ ಸಂತೃಪ್ತರಾಗಿದ್ದಾರೆ. ಮತ್ತು ಅವರ ಹೃದಯಗಳ ಮೇಲೆ ಮುದ್ರೆಯೊತ್ತಲಾಗಿದೆ. ಆದ್ದರಿಂದ ಅವರು ಅರಿತುಕೊಳ್ಳುವುದಿಲ್ಲ.
Tevbe 9:94
(ಓ ಪೈಗಂಬರರೇ) ನೀವು ಅವರ ಬಳಿಗೆ ಮರಳಿ ಹೋದಾಗ ಅವರು ನಿಮ್ಮ ಮುಂದೆ ನೆಪಗಳನ್ನೊಡ್ಡುತ್ತಾರೆ. ಹೇಳಿರಿ: ನೀವು ನೆಪವನ್ನು ಹೇಳಬೇಡಿರಿ. ನಾವು ನಿಮ್ಮನ್ನು ನಂಬುವುದಿಲ್ಲ ಏಕೆಂದರೆ ಅಲ್ಲಾಹನು ನಮಗೆ ನಿಮ್ಮ ವಿಷಯವನ್ನು ತಿಳಿಸಿದ್ದಾನೆ ಮತ್ತು ಮುಂದೆಯೂ ಅಲ್ಲಾಹನು ಹಾಗೂ ಅವನ ಸಂದೇಶವಾಹಕರು ನಿಮ್ಮ ಕರ್ಮಗಳನ್ನು ನೋಡಲಿರುವರು. ನಂತರ ನೀವು ರಹಸ್ಯ ಮತ್ತು ಬಹಿರಂಗವನ್ನು ಬಲ್ಲವನೆಡೆಗೆ (ಅಲ್ಲಾಹನೆಡೆಗೆ) ಮರಳಿಸಲಾಗುವಿರಿ. ಆಗ ಅವನು ನೀವೇನನ್ನು ಮಾಡುತ್ತಿದ್ದೀರೆಂದು ನಿಮಗೆ ತಿಳಿಸಿಕೊಡುವನು.
Tevbe 9:95
ನೀವು ಅವರ ಬಳಿಗೆ ಮರಳಿದಾಗ ಅವರನ್ನು ಅವರ ಪಾಡಿಗೆ ಬಿಟ್ಟುಬಿಡಲೆಂದು ಅವರು ಅಲ್ಲಾಹನ ಆಣೆ ಹಾಕುವರು ಆದುದರಿಂದ ನೀವು ಅವರನ್ನು ಅವರಪಾಡಿಗೆ ಬಿಟ್ಟು ಬಿಡಿರಿ ಅವರು ಖಂಡಿತವಾಗಿಯೂ ಅಶುದ್ಧರಾಗಿದ್ದಾರೆ ಮತ್ತು ಅವರ ವಾಸಸ್ಥಳವು ನರಕವಾಗಿದೆ. ಇದು ಅವರು ಸಂಪಾದಿಸುತ್ತಿದ್ದ ಕರ್ಮಗಳ ಪ್ರತಿಫಲವಾಗಿದೆ.
Tevbe 9:96
ನೀವು ಅವರ ಬಗ್ಗೆ ಸಂತೃಪ್ತರಾಗುವುದಕ್ಕಾಗಿ ಅವರು ನಿಮ್ಮ ಮುಂದೆ ಆಣೆ ಹಾಕುತ್ತಾರೆ. ನೀವು ಅವರ ಬಗ್ಗೆ ಸಂತೃಪ್ತರಾದರೂ ಅಲ್ಲಾಹನಂತು ಅಂತಹ ಧಿಕ್ಕಾರಿಗಳಾದ ಜನರ ಬಗ್ಗೆ ಸಂತೃಪ್ತನಾಗುವುದಿಲ್ಲ.
Tevbe 9:97
ಗ್ರಾಮೀಣ ನಿವಾಸಿಗಳು ಸತ್ಯನಿಷೇಧ ಮತ್ತು ಕಾಪಟ್ಯದಲ್ಲಿ ಅತ್ಯಂತ ಕಠಿಣರಾಗಿದ್ದಾರೆ. ಅಲ್ಲಾಹನು ತನ್ನ ಸಂದೇಶವಾಹಕರ ಮೇಲೆ ಅವತೀರ್ಣಗೊಳಿಸಿದ (ಮೇರೆ) ನಿಯಮಗಳನ್ನು ಅವರು ಅರಿಯದಿರುವುದಕ್ಕೆ ಹೆಚ್ಚು ಅರ್ಹರಾಗಿದ್ದಾರೆ. ಮತ್ತು ಅಲ್ಲಾಹನು ಮಹಾಜ್ಞಾನಿಯೂ, ಯುಕ್ತಿಪೂರ್ಣನೂ ಆಗಿದ್ದಾನೆ.
Tevbe 9:98
ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವುದನ್ನು ದಂಡವೆAದು ಭಾವಿಸುವ ಮತ್ತು ನಿಮ್ಮ ಮೇಲೆ ವಿಪತ್ತುಗಳು ಎರಗಲೆಂದು ನಿರೀಕ್ಷಿಸುವ ಕೂಟವೂ ಗ್ರಾಮೀಣವಾಸಿಗಳಲ್ಲಿದೆ. ವಿಪತ್ತುಗಳಂತೂ ಅವರ ಮೇಲೆಯೇ ಎರಗಲಿವೆ ಮತ್ತು ಅಲ್ಲಾಹನು ಸರ್ವವನ್ನು ಆಲಿಸುವವನು, ಅರಿಯುವವನೂ ಆಗಿದ್ದಾನೆ.
Tevbe 9:99
ಅಲ್ಲಾಹನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿಡುವ ಕೂಟವೊಂದು ಗ್ರಾಮೀಣವಾಸಿಗಳಲ್ಲಿದೆ. ಮತ್ತು ಅವÀರು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವುದನ್ನು ಅಲ್ಲಾಹನ ಸಾಮೀಪ್ಯ ಸಾಧನವನ್ನಾಗಿಯೂ, ಮತ್ತು ಸಂದೇಶವಾಹಕರ ಕಡೆಯಿಂದ ಕೃಪಾಶೀರ್ವಾದ ಪಡೆಯುವ ಸಾಧನ ವನ್ನಾಗಿಯೂ ಮಾಡಿಕೊಳ್ಳುತ್ತಾರೆ. ತಿಳಿದುಕೊಳ್ಳಿರಿ: ನಿಸ್ಸಂಶಯವಾಗಿಯೂ ಇದು ಅವರಿಗೆ ಸಾಮೀಪ್ಯಕ್ಕಿರುವ ಸಾಧನವಾಗಿದೆ. ಸಧ್ಯದಲ್ಲೇ ಅಲ್ಲಾಹನು ಅವರನ್ನು ತನ್ನ ಕಾರುಣ್ಯದಲ್ಲಿ ಪ್ರವೇಶಗೊಳಿಸುವನು. ನಿಸ್ಸಂಶಯವಾಗಿಯೂ ಅಲ್ಲಾಹನು ಮಹಾಕ್ಷಮಾಶೀಲನೂ, ಕರುಣಾನಿಧಿಯೂ ಆಗಿರುತ್ತಾನೆ.
Tevbe 9:100
ಮುಹಾಜಿರ್ ಮತ್ತು ಅನ್ಸಾರ್‌ಗಳ ಪೈಕಿ (ಸತ್ಯವಿಶ್ವಾಸದಲ್ಲಿ) ಮೂಂಚೂಣಿ ಯಲ್ಲಿರುವ ಮತ್ತು ಅವರನ್ನು ನಿಷ್ಕಳಂಕದೊAದಿಗೆ ಅನುಸರಿಸಿದವರ ಬಗ್ಗೆ ಅಲ್ಲಾಹನು ಸಂತುಷ್ಟನಾಗಿರುವನು ಮತ್ತು ಅವರೆಲ್ಲರೂ ಅವನ ಬಗ್ಗೆ ಸಂತೃಪ್ತರಾಗಿರುವರು ಮತ್ತು ಅಲ್ಲಾಹನು ಅವರಿಗೋಸ್ಕರ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ತೋಟಗಳನ್ನು ಸಿದ್ಧಗೊಳಿಸಿಟ್ಟಿರುವನು. ಅವರದರಲ್ಲಿ ಶಾಶ್ವತವಾಗಿ ವಾಸಿಸುವರು. ಇದು ಮಹಾ ಯಶಸ್ಸಾಗಿದೆ.
Tevbe 9:101
ಮತ್ತು ನಿಮ್ಮ ಸುತ್ತಮುತ್ತಲಲ್ಲಿರುವ ಗ್ರಾಮೀಣ ವಾಸಿಗಳಲ್ಲಿಯೂ ಮತ್ತು ಮದೀನಾದ ವಾಸಿಗಳಲ್ಲಿಯೂ ಕಪಟವಿಶ್ವಾಸಿಗಳಿದ್ದಾರೆ. ಅವರು ಕಾಪಟ್ಯದಲ್ಲಿ ಬೇರೂರಿಬಿಟ್ಟಿದ್ದಾರೆ. ತಾವು ಅವರನ್ನು ಅರಿತಿಲ್ಲ. ಅವರನ್ನು ನಾವು ಅರಿತಿದ್ದೇವೆ. ನಾವು ಅವರನ್ನು ಎರಡು ಬಾರಿ ಶಿಕ್ಷಿಸುವೆವು. ನಂತರ ಅವರು ಮಹಾ ಭೀಕರ ಶಿಕ್ಷೆಯೆಡೆಗೆ ಮರಳಿಸಲಾಗುವರು.
Tevbe 9:102
ಮತ್ತು ತಮ್ಮ ತಪ್ಪನ್ನು ಒಪ್ಪಿಕೊಂಡವರೂ ಕೆಲವರಿದ್ದಾರೆ. ಅವರು ಸತ್ಕರ್ಮವನ್ನು ದುಷ್ಕರ್ಮದೊಂದಿಗೆ ಬೆರೆಸಿದ್ದರು. ಅಲ್ಲಾಹನು ಅವರ ಪಶ್ಚಾತ್ತಾಪವನ್ನು ಸ್ವೀಕರಿಸಲೂಬಹುದು. ನಿಸ್ಸಂದೇಹವಾಗಿಯೂ ಅಲ್ಲಾಹನು ಅತ್ಯಂತ ಕ್ಷಮಿಸುವವನೂ ಕರುಣಾನಿಧಿಯೂ ಆಗಿದ್ದಾನೆ.
Tevbe 9:103
ತಾವು ಅವರ ಸೊತ್ತಿನಿಂದ ದಾನವನ್ನು ತೆಗೆÀದುಕೊಳ್ಳಿರಿ. ಅದರ ಮೂಲಕ ತಾವು ಅವರನ್ನು ಶುದ್ಧಿಕರಿಸಿರಿ ಹಾಗೂ ಸಂಸ್ಕರಿಸಿರಿ ಮತ್ತು ಅವರಿಗೋಸ್ಕರ ಪ್ರಾರ್ಥಿಸಿರಿ. ನಿಸ್ಸಂಶಯವಾಗಿಯೂ ತಮ್ಮ ಪ್ರಾರ್ಥನೆಯು ಅವರಿಗೆ ಶಾಂತಿದಾಯಕವಾಗಿದೆ ಮತ್ತು ಅಲ್ಲಾಹನು ಚೆನ್ನಾಗಿ ಆಲಿಸುವವನೂ ಮತ್ತು ಅರಿಯುವವನೂ ಆಗಿದ್ದಾನೆ.
Tevbe 9:104
ಅಲ್ಲಾಹನೇ ತನ್ನ ದಾಸರ ಪಶ್ಚಾತ್ತಾಪವನ್ನು ಸ್ವೀಕರಿಸುವವನೆಂದೂ, ಅವನೇ ದಾನಗಳನ್ನು ಸ್ವೀಕರಿಸುವವನೆಂದೂ ಅವರಿಗೆ ತಿಳಿದಿಲ್ಲವೇ ಮತ್ತು ನಿಸ್ಸಂಶಯವಾಗಿಯೂ ಅಲ್ಲಾಹನು ಪಶ್ಚಾತ್ತಾಪ ಸ್ವೀಕರಿಸುವವನೂ, ಕಾರುಣಾನಿಧಿಯೂ ಆಗಿದ್ದಾನೆ.
Tevbe 9:105
ತಾವು ಹೇಳಿರಿ: ನೀವು ಕಾರ್ಯವೆಸÀಗಿರಿ ನಿಮ್ಮ ಕರ್ಮಗಳನ್ನು ಸ್ವತಃ ಅಲ್ಲಾಹನು ಮತ್ತು ಅವನ ಸಂದೇಶವಾಹಕರು ಮತ್ತು ಸತ್ಯವಿಶ್ವಾಸಿಗಳು ನೋಡಲಿರುವರು ಮತ್ತು ಖಂಡಿತವಾಗಿಯೂ ನೀವು ಸಕಲ ರಹಸ್ಯ ಹಾಗೂ ಬಹಿರಂಗ ವಿಷಯಗಳನ್ನು ಬಲ್ಲವನೆಡೆಗೆ ಮರಳಿಸಲಾಗುವಿರಿ. ಹಾಗೆಯೇ ಅವನು ನಿಮ್ಮ ಸಕಲ ಕೃತ್ಯಗಳನ್ನು ತಿಳಿಸಲಿದ್ದಾನೆ.
Tevbe 9:106
ಮತ್ತು ಅಲ್ಲಾಹನ ಆಜ್ಞೆ ಬರುವವರೆಗೆ ಕಾದಿರಿಸಲಾದವರು ಕೆಲವರಿದ್ದಾರೆ. ಅವರನ್ನು ಶಿಕ್ಷಿಸಬಹುದು ಅಥವಾ ಅವರ ಪಶ್ಚಾತ್ತಾಪವನ್ನು ಸ್ವೀಕರಿಸಬಹುದು ಮತ್ತು ಅಲ್ಲಾಹನು ಚೆನ್ನಾಗಿ ಅರಿಯುವವನೂ, ಯುಕ್ತಿಪೂರ್ಣನೂ ಆಗಿದ್ದಾನೆ.
Tevbe 9:107
ಮತ್ತು (ಸತ್ಯವಿಶ್ವಾಸಿಗಳಿಗೆ) ಕೇಡು ಬಗೆಯುವ ಉದ್ದೇಶದಿಂದಲೂ, ಸತ್ಯನಿಷೇಧವನ್ನು ಬಲಪಡಿಸುವ ಉದ್ದೇಶದಿಂದಲೂ, ಸತ್ಯವಿಶ್ವಾಸಿಗಳ ನಡುವೆ ಭಿನ್ನತೆಯನ್ನುಂಟು ಮಾಡುವ ಉದ್ದೇಶದಿಂದಲೂ ಮತ್ತು ಅಲ್ಲಾಹನ ಹಾಗೂ ಅವನ ಸಂದೇಶವಾಹಕರಿಗೆ ವಿರೋಧಿಯಾಗಿ ಈ ಮೊದಲಿನಿಂದಲೇ ಹೋರಾಡುತ್ತಾ ಬಂದಿರುವ ವ್ಯಕ್ತಿಯೊಬ್ಬನಿಗೆ ಹೊಂಚು ತಾಣವನ್ನಾಗಿಡುವ ಉದ್ದೇಶದಿಂದಲೂ ಮಸೀದಿಯೊಂದನ್ನು ನಿರ್ಮಿಸಿದವರು ಸಹ ಆ ಕಪಟ ವಿಶ್ವಾಸಿಗಳ ಪೈಕಿಯಲ್ಲಿದ್ದಾರೆ. ಮತ್ತು ಅವರು ಒಳಿತಿನ ಹೊರತು ಇನ್ನಾವುದೇ ಉದ್ದೇಶ ನಮಗಿರಲಿಲ್ಲ ಎಂದು ಆಣೆಯಿಟ್ಟು ಹೇಳುವರು. ಅವರು ಸಂಪೂರ್ಣ ಸುಳ್ಳುಗಾರರಾಗಿದ್ದಾರೆಂಬುದಕ್ಕೆ ಅಲ್ಲಾಹನು ಸಾಕ್ಷಿಯಾಗಿದ್ದಾನೆ.
Tevbe 9:108
ತಾವು ಅದರಲ್ಲಿ (ನಮಾಜ್‌ಗಾಗಿ) ಎಂದಿಗೂ ನಿಲ್ಲಬೇಡಿರಿ. ಖಂಡಿತವಾಗಿಯೂ ಪ್ರಥಮ ದಿನದಿಂದಲೇ ಭಯಭಕ್ತಿಯ ಆಧಾರದ ಮೇಲೆ ಬುನಾದಿಯನ್ನು ಹಾಕಲಾದ ಮಸೀದಿಯೇ ನಿಮಗೆ (ನಮಾಜ್‌ಗಾಗಿ) ನಿಲ್ಲಲು ಅತ್ಯಂತ ಯೋಗ್ಯವಾಗಿದೆ. ಅದರಲ್ಲಿ ಪರಿಶುದ್ಧತೆಯನ್ನು ಬಯಸುವ ಜನರಿದ್ದಾರೆ. ಮತ್ತು ಅಲ್ಲಾಹನು ಪರಿಶುದ್ಧರನ್ನು ಪ್ರೀತಿಸುತ್ತಾನೆ.
Tevbe 9:109
ಅನಂತರ ತನ್ನ ಕಟ್ಟಡದ ಬುನಾದಿಯನ್ನು ಅಲ್ಲಾಹನ ಭಯಭಕ್ತಿ ಮತ್ತು ಅವನ ಸಂತೃಪ್ತಿಯ ಮೇಲೆ ನಿರ್ಮಿಸುವವನು ಉತ್ತಮನೋ ಅಥವಾ ಕಟ್ಟಡವನ್ನು ಯಾವುದಾದರೂ ಕುಸಿದುಬೀಳಲಿಕ್ಕಿರುವ ಅಸ್ಥಿರ ಅಂಚಿನಲ್ಲಿ ನಿರ್ಮಿಸಿ ಕೊನೆಗೆ ಅದರೊಂದಿಗೆ ನರಕಾಗ್ನಿಯಲ್ಲಿ ಬೀಳುವವನೋ? ಮತ್ತು ಅಲ್ಲಾಹನು ಅಕ್ರಮಿಗಳಿಗೆ ಸನ್ಮಾರ್ಗವನ್ನು ತೋರಲಾರನು.
Tevbe 9:110
ಅವರ ಹೃದಯಗಳು ನುಚ್ಚು ನೂರಾಗುವವರೆಗೂ ಅವರು ನಿರ್ಮಿಸಿದಂತಹ ಈ ಕಟ್ಟಡವು (ಮಸೀದಿ) ಅವರ ಹೃದಯಗಳಲ್ಲಿ ಸದಾ ಸಂಶಯ ಮೂಲವಾಗಿ ಉಳಿಯುವುದು. ಮತ್ತು ಅಲ್ಲಾಹನು ಮಹಾಜ್ಞಾನಿಯೂ, ಯುಕ್ತಿವಂತನೂ ಆಗಿದ್ದಾನೆ.
Tevbe 9:111
ನಿಸ್ಸಂಶಯವಾಗಿಯೂ ಅಲ್ಲಾಹನು ಸತ್ಯವಿಶ್ವಾಸಿಗಳಿಂದ ಅವರ ಜೀವಗಳನ್ನೂ, ಅವರ ಸಂಪತ್ತುಗಳನ್ನೂ ಅವರಿಗೆ ಸ್ವರ್ಗದ ಬದಲಿಗೆ ಖರೀದಿಸಿದ್ದಾನೆ. ಅವರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುತ್ತಾರೆ. ಅದರಲ್ಲಿ ಅವರು ಕೊಲ್ಲುತ್ತಾರೆ ಮತ್ತು ಕೊಲ್ಲಲ್ಪಡುತ್ತಾರೆ. ಈ ಬಗ್ಗೆ ತೌರಾತ್‌ನಲ್ಲೂ, ಇಂಜೀಲ್‌ನಲ್ಲೂ ಮತ್ತು ಕುರ್‌ಆನ್‌ನಲ್ಲೂ ಸತ್ಯವಾದ ವಾಗ್ದಾನ ನೀಡಲಾಗಿದೆ ಮತ್ತು ಅಲ್ಲಾಹನಿಗಿಂತ ಹೆಚ್ಚು ತನ್ನ ವಾಗ್ದಾನವನ್ನು ಈಡೇರಿಸುವವನು ಇನ್ನಾರಿದ್ದಾನೆ? ಆದ್ದರಿಂದ ನೀವು ಆತನೊಂದಿಗೆ ಮಾಡಿದ ಈ ವ್ಯವಹಾರದ ವಿಚಾರವಾಗಿ ಸಂತೋಷಪಡಿರಿ ಮತ್ತು ಇದು ಮಹಾ ಯಶಸ್ಸಾಗಿದೆ.
Tevbe 9:112
ಅವರು ಅಲ್ಲಾಹನೆಡೆಗೆ ಪಶ್ಚಾತ್ತಾಪ ಪಟ್ಟು ಮರಳುವವರು, ಆರಾಧನೆ ಮಾಡುವವರು, ಸ್ತುತಿಸುವವರು, ಉಪವಾಸವನ್ನಾಚರಿಸುವವರು, ತಲೆಬಾಗಿಸುವವರು ಸಾಷ್ಟಾಂಗ ಮಾಡುವವರು, ಒಳಿತುಗಳ ಶಿಕ್ಷಣ ನೀಡುವವರು, ಕೆಡಕು ವಿಚಾರಗಳಿಂದ ತಡೆಯುವವರು ಮತ್ತು ಅಲ್ಲಾಹನ ಮೇರೆಗಳ ಎಚ್ಚರ ವಹಿಸುವವರಾಗಿದ್ದಾರೆ. ಮತ್ತು ಇಂತಹ ಸತ್ಯವಿಶ್ವಾಸಿಗಳಿಗೆ ತಾವು ಶುಭವಾರ್ತೆಯನ್ನು ನೀಡಿರಿ.
Tevbe 9:113
ಬಹುದೇವಾರಾಧಕರು ನರಕಕ್ಕೆ ಅರ್ಹರೆಂಬ ವಿಷಯ ಸ್ಪಷ್ಟವಾದ ಬಳಿಕ ಅವರು ಆಪ್ತಬಂಧುಗಳೇ ಆಗಿದ್ದರು. ಅವರ ಕ್ಷಮೆಗಾಗಿ ಪ್ರಾರ್ಥಿಸುವುದು ಪೈಗಂಬರರಿಗೂ, ಸತ್ಯವಿಶ್ವಾಸಿಗಳಿಗೂ ಯುಕ್ತವಲ್ಲ.
Tevbe 9:114
ಮತ್ತು ಇಬ್ರಾಹೀಮ್‌ರವರು ತನ್ನ ತಂದೆಗಾಗಿ ಕ್ಷಮೆ ಯಾಚಿಸಿದ್ದು ಕೇವಲ ಅವರು ಅವನೊಂದಿಗೆ ಮಾಡಿದ ವಾಗ್ದಾನದಿಂದಾಗಿತ್ತು. ಅನಂತರ ಅವರಿಗೆ ಅವರ ತಂದೆಯು ಅಲ್ಲಾಹನ ಶತ್ರುವೆಂದು ಸ್ಪಷ್ಟವಾದಾಗ ಅವರು ಆತನಿಂದ ಸಂಪೂರ್ಣವಾಗಿ ಬೇಸರದಿಂದ ಸರಿದುಬಿಟ್ಟರು. ಖಂಡಿತವಾಗಿಯೂ ಇಬ್ರಾಹೀಮರು ಅತ್ಯಂತ ಮೃದು ಹೃದಯಿಯೂ, ಸಹನಾಶೀಲರೂ ಆಗಿದ್ದರು.
Tevbe 9:115
ಮತ್ತು ಅಲ್ಲಾಹನು ಯಾವುದೇ ಜನತೆಗೆ ಮಾರ್ಗದರ್ಶನ ನೀಡಿದ ನಂತರ, ಅವರು ತಮ್ಮನ್ನು ಸಂರಕ್ಷಿಸಿಕೊಳ್ಳಲು ವಹಿಸಬೇಕಾದ ಜಾಗರೂಕತೆಗಳನ್ನು ಅವರಿಗೆ ಸ್ಪಷ್ಟಗೊಳಿಸುವ ತನಕ ಅವರನ್ನು ಪಥಭ್ರಷ್ಟಗೊಳಿಸುವುದಿಲ್ಲ. ನಿಸ್ಸಂಶಯವಾಗಿಯೂ ಅಲ್ಲಾಹನು ಸಕಲ ಸಂಗತಿಗಳನ್ನು ಚೆನ್ನಾಗಿ ಅರಿಯುತ್ತಾನೆ.
Tevbe 9:116
ನಿಸ್ಸಂಶಯವಾಗಿಯೂ ಆಕಾಶ ಮತ್ತು ಭೂಮಿಯ ಅಧಿಪತ್ಯವೂ ಅಲ್ಲಾಹನದೇ ಆಗಿದೆ. ಅವನೇ ಜೀವನೀಡುತ್ತಾನೆ ಮತ್ತು ಮರಣಗೊಳಿಸುತ್ತಾನೆ ಮತ್ತು ನಿಮಗೆ ಅಲ್ಲಾಹನ ಹೊರತು ಯಾವ ಮಿತ್ರನಾಗಲೀ, ಸಹಾಯಕನಾಗಲೀ ಇಲ್ಲ.
Tevbe 9:117
ಅಲ್ಲಾಹನು ಪೈಗಂಬರರನ್ನು ಮತ್ತು ಕಷ್ಟಕಾಲದಲ್ಲಿ ಪೈಗಂಬರರನ್ನು ಅನುಸರಿಸಿದ ಮುಹಾಜಿರ್ ಹಾಗೂ ಅನ್ಸಾರರನ್ನು ಕ್ಷಮಿಸಿಬಿಟ್ಟನು. (ಸಹಿಸಲು ಅಸಾಧ್ಯವಾದ ಶ್ರಮದ ನಿಮಿತ್ತ) ಅವರ ಪೈಕಿಯ ಒಂದು ಗುಂಪಿನವರ ಹೃದಯಗಳಲ್ಲಿ ಸ್ವಲ್ಪ ಮಟ್ಟಿಗೆ ವಿಚಲನೆ ಸಂಭವಿಸಿದ ಬಳಿಕ ಅಲ್ಲ್ಲಾಹನು ಅವರನ್ನು ಕ್ಷಮಿಸಿಬಿಟ್ಟನು. ನಿಸ್ಸಂದೇಹವಾಗಿಯೂ ಅಲ್ಲಾಹನು ಅವರೆಲ್ಲರ ಮೇಲೆ ಮಹಾ ಕೃಪೆಯುಳ್ಳವನೂ, ಕರುಣಾನಿಧಿಯೂ ಆಗಿದ್ದಾನೆ.
Tevbe 9:118
ಮತ್ತು ವಿಷಯವನ್ನು ಮುಂದೂಡಲಾಗಿದ್ದ ಆ ಮೂವರು ವ್ಯಕ್ತಿಗಳನ್ನು ಕ್ಷಮಿಸಿದನು. ಭೂಮಿಯು ವಿಶಾಲವಾಗಿದ್ದರು ಅವರ ಪಾಲಿಗೆ ಇಕ್ಕಟ್ಟಾಗಿ ಮಾರ್ಪಟ್ಟಿತು. ಅವರ ಜೀವಗಳೇ ಅವರ ಮೇಲೆ ಹೊರೆಯಾಗಿ ಸಂಕುಚಿತವಾಗಿ ಬಿಟ್ಟವು. ಮತ್ತು ಅವರು ಅಲ್ಲಾಹನ ಹೊರತು ಎಲ್ಲೂ ರಕ್ಷಣೆ ಸಿಗಲಾರದೆಂದು ತಿಳಿದುಕೊಂಡರು. ಅನಂತರ ಅವನು ಅವರ ಸ್ಥಿತಿಯೆಡೆಗೆ ಪಶ್ಚಾತ್ತಾಪ ಪಟ್ಟುಕೊಳ್ಳಲೆಂದು ಗಮನಹರಿಸಿದನು. ನಿಸ್ಸಂಶಯವಾಗಿಯೂ ಅಲ್ಲಾಹನು ಅತ್ಯಧಿಕ ಪಶ್ಚಾತ್ತಾಪ ಸ್ವೀಕರಿಸುವವನೂ, ಕರುಣಾನಿಧಿಯೂ ಆಗಿದ್ದಾನೆ.
Tevbe 9:119
ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ಸತ್ಯಸಂಧರ ಜೊತೆಗೆ ಸೇರಿಕೊಳ್ಳಿರಿ.
Tevbe 9:120
ಮದೀನ ನಿವಾಸಿಗಳಿಗಾಗಲೀ, ಅವರ ಸುತ್ತುಮುತ್ತಲಲ್ಲಿರುವ ಗ್ರಾಮೀಣವಾಸಿಗಳಾಗಲಿ ಅಲ್ಲಾಹನ ಸಂದೇಶವಾಕರನ್ನುಬಿಟ್ಟು ಹಿಂದುಳಿದು ಬಿಡುವುದು ಮತ್ತು ತಮ್ಮ ಪ್ರಾಣವನ್ನು ಅವರ ಪ್ರಾಣಕ್ಕಿಂತಲೂ ಹೆಚ್ಚು ಪ್ರಿಯವಾಗಿ ತಿಳಿದುಕೊಳ್ಳುವುದು ಶೋಭಿಸುವುದಿಲ್ಲ. ಏಕೆಂದರೆ ಅಲ್ಲಾಹನ ಮಾರ್ಗದಲ್ಲಿ ಅವರಿಗುಂಟಾಗುವ ದಾಹ, ದಣಿವು, ಹಸಿವು ಮತ್ತು ಸತ್ಯನಿಷೇಧಿಗಳನ್ನು ಕೆರಳಿಸುವಂತಹ ಯಾವುದೇ ಹೆಜ್ಜೆಯನ್ನು ಮುಂದಿಡುವುದು ಮತ್ತು ಶತ್ರುಗಳ ಯಾವುದೇ ಸುದ್ದಿಯನ್ನು ಪಡೆದುಕೊಳ್ಳುವುದು, ಇವುಗಳೆಲ್ಲದರ ಮೇಲೆ ಅವರ ಹೆಸರಲ್ಲಿ (ಒಂದೊAದು)ಪುಣ್ಯ ಕರ್ಮವನ್ನು ಬರೆದಿಡಲಾಗುವುದು. ಖಂಡಿತವಾಗಿಯೂ ಅಲ್ಲಾಹನು ಏಕನಿಷ್ಠರ ಪ್ರತಿಫಲವನ್ನು ವ್ಯರ್ಥ ಗೊಳಿಸುವುದಿಲ್ಲ.
Tevbe 9:121
ಮತ್ತು ಅವರು ಮಾಡಿದಂತಹ ಹೆಚ್ಚು ಕಡಿಮೆ ಅಥವಾ ಯಾವುದೇ ಖರ್ಚಾಗಲೀ ಮತ್ತು ಅವರು ಯಾವುದೇ ಕಣಿವೆಯನ್ನು ದಾಟಿ ಹೋಗಲಿ; ಅವೆಲ್ಲವೂ ಅವರ ಹೆಸರಲ್ಲಿ ಬರೆಯಲ್ಪಟ್ಟಿದೆ ಇದೇಕೆಂದರೆ ಅಲ್ಲಾಹನು ಅವರ ಕರ್ಮಗಳಿಗೆ ಅತ್ಯುತ್ತಮ ಪ್ರತಿಫಲವನ್ನು ನೀಡಲೆಂದಾಗಿದೆ.
Tevbe 9:122
ಮತ್ತು ಸತ್ಯವಿಶ್ವಾಸಿಗಳೆಲ್ಲರೂ ಒಟ್ಟಾಗಿ ಯುದ್ಧಕ್ಕೆ ಹೊರಡುವುದು ಯೋಗ್ಯವಲ್ಲ. ಆದರೆ ಪ್ರತಿಯೊಂದು ತಂಡದಿAದ ಒಂದು ಗುಂಪು ಧರ್ಮಜ್ಞಾನವನ್ನು ಪಡೆದು ತಮ್ಮ ಜನರೆಡೆಗೆ ಮರಳಿ ಅವರನ್ನು ಕೆಡುಕಿನಿಂದ ರಕ್ಷಿಸಿಕೊಳ್ಳಲು ಎಚ್ಚರಿಸಲಿಕ್ಕೆ ಹೊರಡುವುದಿಲ್ಲವೇಕೆ? ಹೀಗೆ ಅವರು ಭಯಪಟ್ಟುಕೊಳ್ಳಬಹುದೆಂಬುದಾಗಿದೆ.
Tevbe 9:123
ಓ ಸತ್ಯವಿಶ್ವಾಸಿಗಳೇ, ನಿಮ್ಮ ಸುತ್ತಮುತ್ತಲಲ್ಲಿರುವ ಸತ್ಯನಿಷೇಧಿಗಳೊಂದಿಗೆ ಯುದ್ಧ ಮಾಡಿರಿ. ಅವರು ನಿಮ್ಮಲ್ಲಿ ದಾರ್ಢ್ಯವನ್ನು ಕಾಣಬೇಕು ಮತ್ತು ಅಲ್ಲಾಹನು ಭಯಭಕ್ತಿ ಪಾಲಿಸುವವರೊಂದಿಗಿದ್ದಾನೆAಬ ವಿಶ್ವಾಸ ನಿಮಗಿರಲಿ.
Tevbe 9:124
ಮತ್ತು ಯಾವುದಾದರೂ ಅಧ್ಯಾಯವು ಅವತೀರ್ಣಗೊಳಿಸಲಾದಾಗ ಕೆಲವು ಕಪಟಿಗಳು ಹೇಳುವರು; ಈ ಅಧ್ಯಾಯವು ನಿಮ್ಮಲ್ಲಿನ ಯಾರ ವಿಶ್ವಾಸವನ್ನು ಅಧಿಕಗೊಳಿಸಿದೆ ? ಆದರೆ ಸತ್ಯವಿಶ್ವಾಸಿಗಳಿಗಂತು ಪ್ರಸ್ತುತ ಅಧ್ಯಾಯವು ಅವರ ವಿಶ್ವಾಸವನ್ನು ಅಧಿಕಗೊಳಿಸಿಬಿಟ್ಟಿದೆ ಮತ್ತು ಅವರು ಹರ್ಷಪಟ್ಟುಕೊಳ್ಳುತ್ತಾರೆ.
Tevbe 9:125
ಆದರೆ ಹೃದಯಗಳಲ್ಲಿ ರೋಗವಿರುವವರಿಗೆ ಈ ಅಧ್ಯಾಯವು ಅವರ ಮಾಲಿನ್ಯತೆಯ ಜೊತೆಗೆ ಇನ್ನಷ್ಟು ಮಾಲಿನ್ಯತೆಯನ್ನು ಹೆಚ್ಚಿಸಿಬಿಟ್ಟಿತು ಮತ್ತು ಅವರು ಸತ್ಯನಿಷೇಧದ ಸ್ಥಿತಿಯಲ್ಲೇ ಮರಣಹೊಂದಿದರು.
Tevbe 9:126
ಮತ್ತು ಅವರು ಪ್ರತಿಯೊಂದು ವರ್ಷವೂ ಒಂದೆರಡು ಬಾರಿ ಒಂದಲ್ಲ ಒಂದು ವಿಪತ್ತಿನಲ್ಲಿ ಸಿಲುಕಿಸಿಬಿಡುತ್ತಿದ್ದಾರೆಂಬುದು ಅವರಿಗೆ ಕಾಣುವುದಿಲ್ಲವೇ? ಹಾಗಿದ್ದೂ ಅವರು ಪಶ್ಚಾತ್ತಾಪಪಟ್ಟು ಮರಳುವುದಾಗಲಿ ಮತ್ತು ಉಪದೇಶವನ್ನು ಸ್ವೀಕರಿಸುದಾಗಲಿ ಮಾಡುವುದಿಲ್ಲ.
Tevbe 9:127
ಮತ್ತು ಯಾವುದಾದರೂ ಅಧ್ಯಾಯವು ಅವತೀರ್ಣಗೊಳಿಸಲಾದಾಗ ಅವರು (ಕಪಟಿಗಳು) ಪರಸ್ಪರರನ್ನು ನೋಡಿ (ಹೇಳುವರು) 'ನಿಮ್ಮನ್ನು ಯಾರೂ ನೋಡುತ್ತಿಲ್ಲವಲ್ಲ?' ಎಂದು. ಅನಂತರ ಅವರು ಹೊರಟು ಬಿಡುವರು. ಅಲ್ಲಾಹನು ಅವರ ಹೃದಯವನ್ನು ತಿರುಗಿಸಿಬಿಟ್ಟಿರುವನು, ಏಕೆಂದರೆ ಅವರು ತಿಳುವಳಿಕೆಯಿಲ್ಲದವರಾಗಿದ್ದಾರೆ.
Tevbe 9:128
ನಿಮ್ಮ ಬಳಿ ನಿಮ್ಮಿಂದಲೇ ಆದ ಓರ್ವ ಸಂದೇಶವಾಹಕರು ಆಗಮಿಸಿದ್ದಾರೆ. ನೀವು ಕಷ್ಟಪಡುವುದು ಅವರಿಂದ ಸಹಿಸಲಾಗುವುದಿಲ್ಲ. ಅವರು ನಿಮ್ಮ ಒಳಿತನ್ನು ಹಂಬಲಿಸುವವರು ಸತ್ಯವಿಶ್ವಾಸಿಗಳೊಂದಿಗೆ ಅತ್ಯಂತ ದಯೆಯುಳ್ಳವರು, ಕರುಣಾಮಯಿಯೂ ಆಗಿರುವರು.
Tevbe 9:129
ಅನಂತರ ಅವರು ವಿಮುಖರಾಗುವುದಾದರೆ ತಾವು ಹೇಳಿಬಿಡಿರಿ; ನನಗೆ ಅಲ್ಲಾಹನೇ ಸಾಕು, ಅವನ ಹೊರತು ಇನ್ನಾವ ನೈಜ ಆರಾಧ್ಯನಿಲ್ಲ, ನಾನು ಅವನ ಮೇಲೆಯೇ ಭರವಸೆಯಿಟ್ಟಿದ್ದೇನೆ. ಅವನು ಮಹಾ ಅರ್ಶ್ನ (ಸಿಂಹಾಸನದ) ಒಡೆಯನಾಗಿದ್ದಾನೆ.
Yunus 10:1
ಅಲಿಫ್ ಲಾಮ್ ರಾ ಇವು ಯುಕ್ತಿಪೂರ್ಣ ಗ್ರಂಥದ ಸೂಕ್ತಿಗಳಾಗಿವೆ.
Yunus 10:2
ಜನರಿಗೆ ಎಚ್ಚರಿಕೆ ನೀಡಲಿಕ್ಕೆ ಮತ್ತು ಸತ್ಯವಿಶ್ವಾಸವಿರಿಸಿದವರಿಗೆ ಅವರ ಪ್ರಭುವಿನ ಬಳಿ ಸತ್ಯದ ಉನ್ನತ ಸ್ಥಾನವಿದೆಯೆಂದು, ಸುವಾರ್ತೆ ನೀಡಲಿಕ್ಕೆ ಅವರ ಪೈಕಿ ಒಬ್ಬ ವ್ಯಕ್ತಿಯ ಕಡೆಗೆ ನಾವು ದಿವ್ಯಸಂದೇಶ ಕಳುಹಿಸಿರುವುದು ಜನರಿಗೆ ಆಶ್ಚರ್ಯವಾಯಿತೇ? ಸತ್ಯನಿಷೇಧಿಗಳು ಹೇಳಿದರು : ನಿಶ್ಚಯವಾಗಿಯೂ ಈ ವ್ಯಕ್ತಿ ಸ್ಪಷ್ಟ ಜಾದೂಗಾರನಾಗಿದ್ದಾನೆ.
Yunus 10:3
ನಿಸ್ಸಂದೇಹವಾಗಿಯೂ ಆಕಾಶಗಳನ್ನು ಮತ್ತು ಭೂಮಿಯನ್ನು ಆರು ದಿನಗಳಲ್ಲಿ ಸೃಷ್ಟಿಸಿ ತರುವಾಯ ಸಿಂಹಾಸನದ ಮೇಲೆ ಆರೂಢನಾಗಿ ಸಕಲ ಕಾರ್ಯಗಳನ್ನು ನಿಯಂತ್ರಿಸುವ ನಿಮ್ಮ ಪ್ರಭು ಅಲ್ಲಾಹನೇ ಆಗಿದ್ದಾನೆ. ಅವನ ಅನುಮತಿಯ ಹೊರತು ಯಾವೊಬ್ಬನೂ ಅವನ ಬಳಿ ಶಿಫಾರಸ್ಸು ಮಾಡುವವನಿಲ್ಲ. ಅವನೇ ನಿಮ್ಮ ಪ್ರಭುವಾದ ಅಲ್ಲಾಹನು, ಆದ್ದರಿಂದ ನೀವು ಅವನನ್ನೇ ಆರಾಧಿಸಿರಿ, ಹೀಗಿದ್ದೂ ನೀವು ಉಪದೇಶ ಸ್ವೀಕರಿಸುವುದಿಲ್ಲವೇ?
Yunus 10:4
ನಿಮಗೆಲ್ಲರಿಗೂ ಅವನೆಡೆಗೇ ಮರಳಬೇಕಾಗಿದೆ, ಇದು ಅಲ್ಲಾಹನ ಸತ್ಯವಾಗ್ದಾನವಾಗಿದೆ, ನಿಸ್ಸಂಶಯವಾಗಿಯು ಅವನೇ ಸೃಷ್ಟಿಯನ್ನು ಆರಂಭಿಸುತ್ತಾನೆ, ಅನಂತರ ಅವನೇ ಪುನರಾವರ್ತಿಸುವನು, ಇದು ಸತ್ಯವಿಶ್ವಾಸವಿರಿಸಿದವರಿಗೆ ಮತ್ತು ಸತ್ಕರ್ಮಗಳನ್ನೆಸಗಿದವರಿಗೆ ನ್ಯಾಯೋಚಿತ ಪ್ರತಿಫಲ ನೀಡಲೆಂದಾಗಿದೆ ಮತ್ತು ಸತ್ಯ ನಿಷೇಧಿಸಿದವರಿಗೆ ಅವರ ಸತ್ಯನಿಷೇಧದ ನಿಮಿತ್ತ ಅವರಿಗೆ ಕುಡಿಯಲು ಕುದಿಯುವ ನೀರು ಮತ್ತು ವೇದನಾಜನಕ ಯಾತನೆ ಇರುವುದು.
Yunus 10:5
ಅವನೇ ಸೂರ್ಯನನ್ನು ಪ್ರಜ್ವಲಿಸುವಂತೆಯೂ ಚಂದ್ರನನ್ನು ಪ್ರತಿಫಲಿಸುವಂತೆಯೂ ಮಾಡಿದನು ಮತ್ತು ಅದಕ್ಕೆ ಹಂತಗಳನ್ನು ನಿಶ್ಚಯಿಸಿದನು, ಇದು ನೀವು ವರ್ಷಗಳ ಗಣನೆ ಮತ್ತು ಲೆಕ್ಕವನ್ನು ಅರಿತುಕೊಳ್ಳಲೆಂದಾಗಿದೆ. ಅಲ್ಲಾಹನು ಇವುಗಳನ್ನು ಸತ್ಯದೊಂದಿಗೆ ಸೃಷ್ಟಿಸಿದ್ದಾನೆ. ಅವನು ಈ ಪುರಾವೆಗಳನ್ನೆಲ್ಲಾ ಬುದ್ಧಿಮತಿಯನ್ನು ಹೊಂದಿರುವವರಿಗೆ ಸ್ಪಷ್ಟವಾಗಿ ವಿವರಿಸಿ ಕೊಡುತ್ತಾನೆ.
Yunus 10:6
ನಿಸ್ಸಂದೇಹವಾಗಿಯೂ ರಾತ್ರಿ ಹಗಲುಗಳ ಒಂದರಹಿAದೆ ಇನ್ನೊಂದರ ಆಗಮನದಲ್ಲೂ, ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಅಲ್ಲಾಹನು ಸೃಷ್ಟಿಸಿರುವ ವಸ್ತುಗಳಲ್ಲೂ, ಭಯಭಕ್ತಿ ಹೊಂದಿದವರಿಗೆ ನಿದರ್ಶನಗಳಿವೆ.
Yunus 10:7
ನಿಶ್ಚಯವಾಗಿಯೂ ನಮ್ಮನ್ನು ಭೇಟಿಯಾಗುವ ನಿರೀಕ್ಷೆಯಿಲ್ಲದವರು, ಇಹಲೋಕದ ಜೀವನದಲ್ಲೇ ಸಂತುಷ್ಟರಾಗಿರುವÀರು ಮತ್ತು ಅದರಲ್ಲೇ ಸಮಾಧಾನ ಪಟ್ಟುಕೊಂಡಿರುವÀರು ಹಾಗು ನಮ್ಮ ದೃಷ್ಟಾಂತಗಳ ಬಗ್ಗೆ ಅಲಕ್ಷö್ಯರಾಗಿರುವರು
Yunus 10:8
ಇಂತಹವರ ನೆಲೆಯು ಅವರ ಕರ್ಮಗಳ ಕಾರಣದಿಂದ ನರಕಾಗ್ನಿಯಾಗಿರುತ್ತದೆ.
Yunus 10:9
ನಿಶ್ಚಯವಾಗಿಯೂ ಸತ್ಯವಿಶ್ವಾಸವನ್ನಿರಿಸಿ ಸತ್ಕರ್ಮಗಳನ್ನೆಸಗಿದವರಿಗೆ ಅವರ ಪ್ರಭುವು ಅವರ ಸತ್ಯವಿಶ್ವಾಸದ ನಿಮಿತ್ತ ಸನ್ಮಾರ್ಗದಲ್ಲಿ ನಡೆಸುವನು, ಅವರಿಗೆ ಅನುಗ್ರಹಪೂರ್ಣ ಸ್ವರ್ಗೋದ್ಯಾನಗಳಲ್ಲಿ ವಾಸಸ್ಥಾನವಿರುವುದು, ಅವುಗಳ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವವು.
Yunus 10:10
ಅಲ್ಲಿ ಅವರ ಪ್ರಾರ್ಥನೆಯು 'ಓ ಅಲ್ಲಾಹ್ ನೀನು ಪರಮ ಪಾವನನು' ಎಂಬುದಾಗಿರುವುದು, ಮತ್ತು ಅವರ ಪರಸ್ಪರರ ಅಭಿನಂದನೆಯು 'ಅಸ್ಸಲಾಮು ಅಲೈಕುಮ್' (ನಿಮ್ಮ ಮೇಲೆ ಶಾಂತಿ ವರ್ಷಿಸುತ್ತಿರಲಿ) ಎಂದಾಗಿರುವುದು, ಹಾಗು ಅವರ ಪ್ರಾರ್ಥನೆಯ ಕೊನೆಯ ನುಡಿ ಸರ್ವಸ್ತುತಿಯು ಸರ್ವ ಲೋಕಗಳ ಪ್ರಭುವಾದ ಅಲ್ಲಾಹನಿಗೇ ಎಂದಾಗಿರುವುದು.
Yunus 10:11
ಮತ್ತು ಜನರು ತಮ್ಮ ಹಿತಕ್ಕಾಗಿ ಆತುರಪಡುವ ಹಾಗೆಯೇ ಅವರಿಗೆ ಕೆಡುಕನ್ನುಂಟು ಮಾಡಲು ಅಲ್ಲಾಹನು ಆತುರ ಪಡುತ್ತಿದ್ದರೆ ಅವರ ಜೀವನಾವಧಿ ಎಂದೋ ಪೂರ್ಣಗೊಳಿಸಲಾಗುತ್ತಿತ್ತು. ಹಾಗೆಯೇ ನಾವು ನಮ್ಮನ್ನು ಭೇಟಿಯಾಗುವ ನಿರೀಕ್ಷೆಯಿಲ್ಲದವರನ್ನು, ಅವರ ಅತಿಕ್ರಮದಲ್ಲಿ ಅಲೆದಾಡುವಂತೆ ಅವರ ಪಾಡಿಗೆ ಬಿಟ್ಟುಬಿಡುವೆವು.
Yunus 10:12
ಮತ್ತು ಮನುಷ್ಯನಿಗೆ ಯಾವುದಾದರೂ ಸಂಕಷ್ಟ ಬಾಧಿಸಿದರೆ ಅವನು ತನ್ನ ಪಾರ್ಶ್ಚದಲ್ಲಿ ಮಲಗಿ ಅಥವ ಕುಳಿತೂ ಅಥವ ನಿಂತೂ ನಮ್ಮನ್ನು ಪ್ರಾರ್ಥಿಸುತ್ತಾನೆ, ಆಮೇಲೆ ನಾವು ಅವನ ಸಂಕಷ್ಟವನ್ನು ಅವನಿಂದ ದೂರ ಮಾಡಿದಾಗ ಅವನು ತನಗೆ ಬಾಧಿಸಿದ ಸಂಕಷ್ಟಕ್ಕೆ ನಮ್ಮಲ್ಲಿ ಬೇಡಿಯೇ ಇಲ್ಲವೆಂಬAತೆ ಆಗಿ ಬಿಡುತ್ತಾನೆ, ಇದೇ ಪ್ರಕಾರ ಮೇರೆ ಮೀರುವವರಿಗೆ ಅವರ ಕರ್ಮಗಳನ್ನು ಮನಮೋಹಕಗೊಳಿಸಲಾಗಿದೆ.
Yunus 10:13
ಮತ್ತು ನಾವು ನಿಮಗಿಂತ ಮುಂಚೆ ಅನೇಕ ಜನಾಂಗಗಳನ್ನು ಅವರು ಅಕ್ರಮವೆಸಗಿದಾಗ ನಾಶಗೊಳಿಸಿರುವೆವು. ವಸ್ತುತಃ ಅವರೆಡೆಗೆ ಪುರಾವೆಗಳೊಂದಿಗೆ ಅವರ ಸಂದೇಶವಾಹಕರು ಸಹ ಬಂದರು. ಆದರೆ ಅವರು ವಿಶ್ವಾಸವಿಡುವವರಾಗಿರಲಿಲ್ಲ, ಇದೇ ಪ್ರಕಾರ ನಾವು ಅಪರಾಧಿ ಜನಾಂಗಕ್ಕೆ ಶಿಕ್ಷೆಯನ್ನು ನೀಡುತ್ತೇವೆ.
Yunus 10:14
ಈಗ ನೀವು ಹೇಗೆ ವರ್ತಿಸುತ್ತೀರೆಂದು ನೋಡಲಿಕ್ಕಾಗಿ ನಾವು ನಿಮ್ಮನ್ನು ಅವರ ನಂತರ ಭೂಮಿಯಲ್ಲಿ ಉತ್ತರಾಧಿಕಾರಿಗಳನ್ನಾಗಿ ಮಾಡಿದೆವು.
Yunus 10:15
ಮತ್ತು ಅವರ ಮುಂದೆ ನಮ್ಮ ಸ್ಪಷ್ಟ ಸೂಕ್ತಿಗಳನ್ನು ಓದಿ ಹೇಳಲಾದಾಗ, ನಮ್ಮನ್ನು ಭೇಟಿಯಾಗುವ ನಿರೀಕ್ಷೆಯಿಲ್ಲದವರು ಇದರ ಹೊರತು ಬೇರಾವುದಾದರೂ ಖುರ್‌ಆನನ್ನು ತನ್ನಿರಿ ಇಲ್ಲವೇ ಇದರಲ್ಲಿ ಸ್ವಲ್ಪ ತಿದ್ದುಪಡಿಯನ್ನು ಮಾಡಿರೆಂದು ಹೇಳುತ್ತಾರೆ (ಓ ಪೈಗಂಬರರೇ) ನೀವು ಹೇಳಿರಿ : ನನ್ನ ಕಡೆಯಿಂದ ಇದರಲ್ಲಿ ತಿದ್ದುಪಡಿ ಮಾಡಲು ನನಗೆ ಯಾವುದೇ ಹಕ್ಕಿರುವುದಿಲ್ಲ, ನಾನಂತೂ ಕೇವಲ ನನ್ನೆಡೆಗೆ ದಿವ್ಯವಾಣಿಯ ಮೂಲಕ ಬರುವುದನ್ನೇ ಅನುಸರಿಸುತ್ತೇನೆ, ನಾನು ನನ್ನ ಪ್ರಭುವಿಗೆ ಧಿಕ್ಕಾರವೆಸಗುವುದಾದರೆ ಖಂಡಿತವಾಗಿಯೂ ನಾನು ಆ ಒಂದು ಮಹಾ ದಿನದ ಯಾತನೆಯಿಂದ ಭಯಪಡುತ್ತೇನೆ.
Yunus 10:16
ಹೇಳಿರಿ: ಅಲ್ಲಾಹನು ಇಚ್ಛಿಸಿರುತ್ತಿದ್ದರೆ ನಾನು ಇದನ್ನು ನಿಮ್ಮ ಮುಂದೆ ಓದಿ ಹೇಳುತ್ತಿರಲಿಲ್ಲ, ಮತ್ತು ಅವನು ನಿಮಗೆ ಇದರ ಅರಿವನ್ನು ನೀಡುತ್ತಿರಲಿಲ್ಲ, ಇದೇಕೆಂದರೆ ನಾನು ಇದಕ್ಕೆ ಮುಂಚೆ ಒಂದು ದೀರ್ಘ ಕಾಲವನ್ನು ನಿಮ್ಮ ನಡುವೆ ಕಳೆದಿರುವೆನು, ಹೀಗಿರುವಾಗ ನೀವು ಚಿಂತಿಸುವುದಿಲ್ಲವೇ ?
Yunus 10:17
ಅಲ್ಲಾಹನ ಮೇಲೆ ಸುಳ್ಳನ್ನು ಹೊರಿಸಿದವನಿಗಿಂತ ಅತಿದೊಡ್ಡ ಅಕ್ರಮಿಯು ಇನ್ನಾರಿದ್ದಾನೆ? ಖಂಡಿತವಾಗಿಯೂ ಅಪರಾಧಿಗಳು ಯಶಸ್ಸು ಹೊಂದಲಾರರು.
Yunus 10:18
ಅವರು ಅಲ್ಲಾಹನ ಹೊರತು ತಮಗೆ ಹಾನಿಯನ್ನಾಗಲಿ ಪ್ರಯೋಜನವನ್ನಾಗಲಿ ಉಂಟುಮಾಡಲಾಗದAತಹ ವಸ್ತುಗಳನ್ನು ಆರಾಧಿಸುತ್ತಾರೆ ಮತ್ತು ಹೇಳುತ್ತಾರೆ, ಇವರು ಅಲ್ಲಾಹನ ಬಳಿ ನಮ್ಮ ಶಿಫಾರಸ್ಸುಗಾರರಾಗಿದ್ದಾರೆ, ಹೇಳಿರಿ ಅಲ್ಲಾಹನಿಗೆ ಅವನು ಆಕಾಶಗಳಲ್ಲಾಗಲಿ ಭೂಮಿಯಲ್ಲಾಗಲಿ ತಿಳಿಯದಂಥ ಸುದ್ದಿಗಳನ್ನು ಹೇಳುತ್ತಿರುವಿರಾ ? ಅವರು ಎಸಗುತ್ತಿರುವ ಬಹುದೇವಾರಾಧನೆಯಿಂದ ಅವನು ಅದೆಷ್ಟೋ ಪವಿತ್ರನು, ಉನ್ನತನು ಆಗಿರುವನು.
Yunus 10:19
ಆರಂಭದಲ್ಲಿ ಸಕಲ ಜನರು ಒಂದೇ ಸಮುದಾಯದವರಾಗಿದ್ದರು, ಆನಂತರ ಅವರು ಭಿನ್ನತೆಯನ್ನು ತೋರಿದರು, ನಿಮ್ಮ ಪ್ರಭುವಿನಿಂದ ಇದಕ್ಕೆ ಮೊದಲೇ ನಿರ್ಣಯಿಸಲ್ಪಟ್ಟ ವಚನವು ಇಲ್ಲದಿರುತ್ತಿದ್ದರೆ ಅವರು ಭಿನ್ನತೆ ಹೊಂದಿದ್ದ ವಿಚಾರಗಳಲ್ಲಿ ತೀರ್ಮಾನ ಮಾಡಿಬಿಡಲಾಗುತ್ತಿತ್ತು.
Yunus 10:20
ಈ ಪೈಗಂಬರರ ಮೇಲೆ ಅವರ ಪ್ರಭುವಿನ ಕಡೆಯಿಂದ ಯಾವುದಾದರು ದೃಷ್ಟಾಂತವು ಏಕೆ ಅವತೀರ್ಣಗೊಳಿಸಲಾಗಿಲ್ಲ ? ಎಂದು ಅವರು ಹೇಳುತ್ತಾರೆ, ಉತ್ತರಿಸಿರಿ; ಅಗೋಚರ ಜ್ಞಾನವು ಕೇವಲ ಅಲ್ಲಾಹನಿಗೆ ಮಾತ್ರವಿದೆ, ಆದುದರಿಂದ ಇನ್ನು ನೀವು ಕಾಯುತ್ತಿರಿ. ಖಂಡಿತವಾಗಿಯೂ ನಾನು ಸಹ ನಿಮ್ಮ ಜೊತೆ ಕಾಯುತ್ತಿರುವೆನು.
Yunus 10:21
ಮತ್ತು ಜನರಿಗೆ ನಾವು ಅವರ ಮೇಲೆ ಎರಗಿದ ವಿಪತ್ತಿನ ತರುವಾಯ ಯಾವುದಾದರೂ ಕಾರುಣ್ಯದ ಸವಿಯನ್ನುಣಿಸಿದಾಗ ಅವರು ಕೂಡಲೇ ನಮ್ಮ ದೃಷ್ಟಾಂತಗಳ ಬಗ್ಗೆ ಕುತಂತ್ರಗಳನ್ನು ನಡೆಸತೊಡಗುತ್ತಾರೆ. ನೀವು ಹೇಳಿರಿ ಅಲ್ಲಾಹನು ತಂತ್ರದಲ್ಲಿ ಅತೀ ಶೀಘ್ರನಾಗಿರುತ್ತಾನೆ. ನಿಶ್ಚಯವಾಗಿಯೂ ನಮ್ಮ ದೇವಚರರು ನಿಮ್ಮ ಸಕಲ ಕುತಂತ್ರಗಳನ್ನು ದಾಖಲಿಸುತ್ತಿರುತ್ತಾರೆ.
Yunus 10:22
ನಿಮ್ಮನ್ನು ನೆಲ ಜಲಗಳಲ್ಲಿ ಸಾಗಿಸುವವನು ಅಲ್ಲಾಹನೇ ಆಗಿರುವನು. ನೀವು ಹಡಗಿನಲ್ಲಿ ಪ್ರಯಾಣಿಸುತ್ತಿರುವಾಗ ಮತ್ತು ಆ ಹಡಗು ಜನರನ್ನು ಹೊತ್ತುಕೊಂಡು ಅನುಕೂಲಕರ ಮಾರುತದ ಮೂಲಕ ಸಂಚರಿಸುತ್ತಿರುವಾಗ ಅವರು ಇದರಿಂದ ಸಂತಸದಿAದಿರುವಾಗ ಹಠಾತ್ತನೆ ಅವರ ಮೇಲೆ ಭಾರಿ ಬಿರುಗಾಳಿಯು ಬಂದು ಎಲ್ಲಾ ಕಡೆಯಿಂದಲೂ ಅಲೆಗಳು ಅಪ್ಪಳಿಸುತ್ತಿರುವಾಗ ಮತ್ತು ನಾವು ಆವರಿಸಲ್ಪಟ್ಟಿವೆಂದು ಅವರು ಮನಗಾಣುತ್ತಾರೆ. (ಆ ಸಂದರ್ಭದಲ್ಲಿ) ಎಲ್ಲರೂ ನಿಷ್ಕಳಂಕ ವಿಶ್ವಾಸದೊಂದಿಗೆ “ನೀನು ನಮ್ಮನ್ನು ಇದರಿಂದ ಪಾರು ಮಾಡಿದರೆ ಖಂಡಿತವಾಗಿಯು ನಾವು ಕೃತಜ್ಞರಲ್ಲಾಗಿಬಿಡುವೆವು ಎಂದು ಅಲ್ಲಾಹನನ್ನೇ ಪ್ರಾರ್ಥಿಸುತ್ತಾರೆ”
Yunus 10:23
ಅನಂತರ ಅಲ್ಲಾಹನು ಅವರನ್ನು ಪಾರುಮಾಡಿದಾಗ ಕೂಡಲೇ ಅವರು ಭೂಮಿಯಲ್ಲಿ ಅನ್ಯಾಯವಾಗಿ ಬಂಡಾಯ ವೆಸಗತೊಡಗುತ್ತಾರೆ. ಓ ಜನರೇ ! ನಿಮ್ಮ ಬಂಡಾಯವು ನಿಮಗೆ ಆಪತ್ತಾಗಿಬಿಡಲಿದೆ. ಇದು ಇಹಲೋಕ ಜೀವನದ ತಾತ್ಕಾಲಿಕ ಸುಖಸೌಕರ್ಯ ಮಾತ್ರ. ಅನಂತರ ನಿಮಗೆ ನಮ್ಮ ಬಳಿಗೆ ಮರಳಲಿಕ್ಕಿರುವುದು. ಆಮೇಲೆ ನಾವು ನಿಮಗೆ ನಿಮ್ಮ ಕೃತ್ಯಗಳನ್ನೆಲ್ಲಾ ತಿಳಿಸಿಕೊಡುವೆವು.
Yunus 10:24
ವಾಸ್ತವದಲ್ಲಿ ಐಹಿಕ ಜೀವನದ ಉದಾಹರಣೆಯು ಆಕಾಶದಿಂದ ನಾವು ಸುರಿಸಿರುವಂತಹಾ ಮಳೆಯಂತಿದೆ. ಬಳಿಕ ಅದರೊಂದಿಗೆ ಮನುಷ್ಯರು ಮತ್ತು ಪ್ರಾಣಿಗಳು ತಿನ್ನುವ ಭೂಮಿಯ ಬೆಳೆಗಳು ಮಿಶ್ರಿತಗೊಂಡು ಹುಲುಸಾಗಿ ಬೆಳೆದವು. ಕೊನೆಗೆ ಭೂಮಿಯು ತನ್ನ ಸಂಪೂರ್ಣ ಶೋಭಾಲಂಕಾರವನ್ನು ಪಡೆದಾಗ ಹಾಗು ಸುಂದರವಾಗಿ ಕಂಗೊಳಿಸಿದಾಗ ಮತ್ತು ಅದರ ಮೇಲೆ ನಾವು ಸಾಮರ್ಥ್ಯವುಳ್ಳವರೆಂದು ಅದರ ಮಾಲೀಕರು ಭಾವಿಸಿಕೊಂಡಾಗ ನಮ್ಮ ಕಡೆಯಿಂದ ಒಂದು ಆಜ್ಞೆಯು(ಶಿಕ್ಷೆಯು) ರಾತ್ರಿ ಅಥವ ಹಗಲಿನ ವೇಳೆಯಲ್ಲಿ ಬಂದುಬಿಟ್ಟಿತು. ಕೊನೆಗೆ ನಾವದನ್ನು ನಿನ್ನೆಯ ದಿನ ಇರಲೇ ಇಲ್ಲವೆಂಬAತೆ ಸಂಪೂರ್ಣವಾಗಿ ನಿರ್ನಾಮ ಮಾಡಿಬಿಟ್ಟೆವು, ಇದೇ ಪ್ರಕಾರ ನಾವು ಚಿಂತಿಸುವ ಜನರಿಗೆ ದೃಷ್ಟಾಂತಗಳನ್ನು ವಿವರಿಸಿಕೊಡುತ್ತೇವೆ.
Yunus 10:25
ಅಲ್ಲಾಹನು ಶಾಂತಿಧಾಮದೆಡೆಗೆ ಕರೆಯುತ್ತಾನೆ ಮತ್ತು ತಾನಿಚ್ಛಿಸಿದವರನ್ನು ಅವನು ಋಜುವಾದ ಮಾರ್ಗದೆಡೆಗೆ ಮುನ್ನಡೆಸುತ್ತಾನೆ.
Yunus 10:26
ಒಳಿತನ್ನು ಮಾಡಿದವರಿಗೆ ಅತ್ತುö್ಯತ್ತಮ ಪ್ರತಿಫಲವಿದೆ, ಇನ್ನೂ ಹೆಚ್ಚು ಅನುಗ್ರಹವೂ ಇದೆ ಮತ್ತು ಅವರ ಮುಖಗಳಿಗೆ ಕಪ್ಪು ಛಾಯೆಯಾಗಲಿ ನಿಂದ್ಯತೆಯಾಗಲಿ ಆವರಿಸದು. ಅವರು ಸ್ವರ್ಗವಾಸಿಗಳಾಗಿರುವರು, ಅದರಲ್ಲವರು ಶಾಶ್ವತರಾಗಿರುತ್ತಾರೆ.
Yunus 10:27
ಮತ್ತು ದುಷ್ಕೃತ್ಯಗಳನ್ನು ಮಾಡಿದವರಿಗೆ ದುಷ್ಕೃತ್ಯಗಳ ಪ್ರತಿಫಲವು ಅದಕ್ಕೆ ಸಮಾನವಾಗಿಯೇ ಇರುವುದು ಮತ್ತು ಅವರನ್ನು ನಿಂದ್ಯತೆಯು ಆವರಿಸುವುದು ಅವರನ್ನು ಅಲ್ಲಾಹನಿಂದ ಯಾವೊಬ್ಬನೂ ರಕ್ಷಿಸಲಾರನು. ಅವರ ಮುಖಗಳ ಮೇಲೆ ಅಂಧಕಾರದ ರಾತ್ರಿಯ ತುಣುಕುಗಳು ಆವರಿಸಿದಂತಿವೆ. ಅವರು ನರಕವಾಸಿಗಳಾಗಿರುವರು. ಅದರಲ್ಲವರು ಶಾಶ್ವತವಾಗಿರುವರು.
Yunus 10:28
ಅವರೆಲ್ಲರನ್ನು ಒಟ್ಟುಗೂಡಿಸುವ ದಿನದಂದು ನಾವು ನಮ್ಮ ಜೊತೆ ಸಹಭಾಗಿಗಳನ್ನು ನಿಶ್ಚಯಿಸಿದವರೊಂದಿಗೆ ಹೇಳುವೆವು; “ನೀವು ಮತ್ತು ನಿಮ್ಮ ಸಹಭಾಗಿ ದೇವರುಗಳು ನಿಂತಲ್ಲೇ ನಿಲ್ಲಿರಿ. ಅನಂತರ ನಾವು ಅವರನ್ನು ಪರಸ್ಪರ ಬೇರ್ಪಡಿಸಿಬಿಡುವೆವು ಮತ್ತು (ಅವರೊಂದಿಗೆ) ಅವರ ಸಹಭಾಗಿ ದೇವರುಗಳೆನ್ನುವರು; ನೀವು ನಮ್ಮನ್ನಂತು ಆರಾಧಿಸುತ್ತಿರಲಿಲ್ಲ”
Yunus 10:29
ನಮ್ಮ ಮತ್ತು ನಿಮ್ಮ ನಡುವೆ ಸಾಕ್ಷಿಯಾಗಿ ಅಲ್ಲಾಹನೇ ಸಾಕು. ನಾವು ನಿಮ್ಮ ಆರಾಧನೆಯ ಕುರಿತು ಸಂಪೂರ್ಣ ಅಲಕ್ಷö್ಯರಲ್ಲಾಗಿದ್ದೆವು.
Yunus 10:30
ಅಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತಾನು ಮೊದಲು ಮಾಡಿದ ಕರ್ಮಗಳನ್ನು ತಿಳಿದುಕೊಳ್ಳುವನು ಮತ್ತು ಅವರು ತಮ್ಮ ನೈಜ ಪ್ರಭುವಾದ ಅಲ್ಲಾಹನೆಡೆಗೆ ಮರಳಿಸಲಾಗುವರು. ಮತ್ತು ಅವರು ಸುಳ್ಳಾಗಿ ಸೃಷ್ಟಿಸಿದ್ದೆಲ್ಲವೂ ಅವರಿಂದ ಕಣ್ಮರೆಯಾಗಿ ಬಿಡುವುದು.
Yunus 10:31
ನಿಮಗೆ ಆಕಾಶ ಮತ್ತು ಭೂಮಿಯಿಂದ ಜೀವನಾಧಾರ ನೀಡುವವನು ಯಾರು? ಅಥವಾ ಕಿವಿಗಳ ಮತ್ತು ಕಣ್ಣುಗಳ ಒಡೆಯನಾರು ? ನಿರ್ಜೀವಿಯಿಂದ ಜೀವಿಯನ್ನು ಹೊರತೆಗೆಯುವವನಾರು? ಮತ್ತು ಸಕಲ ಕಾರ್ಯಗಳನ್ನು ನಿಯೋಜಿಸುವವನಾರು ? ಎಂದು ಅವರೊಡನೆ ಕೇಳಿರಿ. ಅವರು ಹೇಳುವರು; ಅಲ್ಲಾಹ್ ಆಗ ನೀವು ಅವರೊಂದಿಗೆ ಹೇಳಿರಿ. ಹಾಗಿದ್ದೂ ನೀವು ಭಯವಿರಿಸಿಕೊಳ್ಳುವುದಿಲ್ಲವೇ ?
Yunus 10:32
ಅವನೇ ನಿಮ್ಮ ನೈಜ ಪ್ರಭು ಅಲ್ಲಾಹನಾಗಿದ್ದಾನೆ. ಇನ್ನು ಸತ್ಯವನ್ನು ಬಿಟ್ಟರೆ ಪಥಭ್ರಷ್ಟತೆಯಲ್ಲದೆ ಇನ್ನೇನು ಉಳಿದಿದೆ? ಹೀಗಿರುವಾಗ ನೀವೆತ್ತ ಅಲೆದಾಡಿಸಲಾಗುತ್ತಿರುವಿರಿ ?
Yunus 10:33
ಇದೇ ಪ್ರಕಾರ ಕರ್ಮಭ್ರಷ್ಟರು ವಿಶ್ವಾಸವಿರಿಸಲಾರರು ಎಂಬ ನಿಮ್ಮ ಪ್ರಭುವಿನ ಮಾತು ಸತ್ಯವಾಗಿಬಿಟ್ಟಿದೆ.
Yunus 10:34
ಹೇಳಿರಿ; ಸೃಷ್ಟಿಯ ಆರಂಭ ಮಾಡಿ ಆನಂತರ ಪುನಾರಾವರ್ತಿಸುವವನು ಯಾರಾದರೂ ನಿಮ್ಮ ಸಹಭಾಗಿ ದೇವರುಗಳಲ್ಲಿದ್ದಾರೆಯೇ? ಹೇಳಿರಿ; ಅಲ್ಲಾಹನೇ ಸೃಷ್ಟಿಯನ್ನು ಆರಂಭಿಸುತ್ತಾನೆ ಆನಂತರ ಅವನೇ ಪುನರಾವರ್ತಿಸುತ್ತಾನೆ. ಹಾಗಿದ್ದೂ ನೀವೆತ್ತ ಅಲೆದಾಡಿಸಲಾಗುತ್ತಿರುವಿರಿ?
Yunus 10:35
ಹೇಳಿರಿ ನಿಮ್ಮ ಸಹಭಾಗಿ ದೇವರುಗಳಲ್ಲಿ ಸತ್ಯದೆಡೆಗೆ ಮಾರ್ಗದರ್ಶನ ಮಾಡುವವರು ಯಾರಾದರೂ ಇದ್ದಾರೆಯೇ? ಹೇಳಿರಿ: ಅಲ್ಲಾಹನೇ ಸತ್ಯದೆಡೆಗೆ ಮಾರ್ಗದರ್ಶನ ಮಾಡುತ್ತಾನೆ. ಇನ್ನು ಸತ್ಯದೆಡೆಗೆ ಮುನ್ನಡೆಸುವವನು ಅನುಸರಿಸ್ಪಡಲು ಯೋಗ್ಯನೇ ಅಥವಾ ಮಾರ್ಗದರ್ಶನ ಮಾಡದ ವಿನಃ ಮಾರ್ಗ ಪಡೆಯದವನೇ? ಹಾಗಿದ್ದೂ ನಿಮಗೇನಾಗಿಬಿಟ್ಟಿದೆ? ನೀವು ಎಂತಹ ತೀರ್ಮಾನ ಕೈಗೊಳ್ಳುತ್ತಿರುವಿರಿ?
Yunus 10:36
ಮತ್ತು ಬಹುದೇವಾರಾಧಕರ ಪೈಕಿ ಅಧಿಕ ಜನರು ಊಹೆಯನ್ನೇ ಅನುಸರಿಸುತ್ತಿದ್ದಾರೆ. ಖಂಡಿತವಾಗಿಯೂ ಸತ್ಯದ ಎದುರು ಊಹೆಯು ಒಂದಿಷ್ಟೂ ಪ್ರಯೋಜನಕ್ಕೆ ಬಾರದು. ನಿಶ್ಚಯವಾಗಿಯು ಅಲ್ಲಾಹನು ಅವರು ಮಾಡುತ್ತಿರುವುದೆಲ್ಲವನ್ನು ಚೆನ್ನಾಗಿ ಅರಿಯುತ್ತಾನೆ.
Yunus 10:37
ಮತ್ತು ಈ ಕುರ್‌ಆನ್ ಅಲ್ಲಾಹನ ಹೊರತು ಇತರರಿಂದ ರಚಿಸಿ ತಂದA- ತಹದ್ದಲ್ಲ. ಆದರೆ ಇದಂತು ತನಗಿಂತ ಮುಂಚೆ ಅವತೀರ್ಣಗೊಳಿಸಿರುವಂತಹ ಗ್ರಂಥಗಳನ್ನು ಸತ್ಯವೆಂದು ಪ್ರಾಮಾಣೀಕರಿಸುವ, ಮತ್ತು ದೈವಿಕ ನಿಯಮಗಳನ್ನು ವಿವರಿಸುವಂತಹ ಗ್ರಂಥವಾಗಿದೆ. ಇದು ಸರ್ವಲೋಕಗಳ ಪ್ರಭುವಿನವತಿಯಿಂದ ಅವತೀರ್ಣವಾಗಿದೆ ಎಂಬುದರಲ್ಲಿ ಸಂಶಯವಿಲ್ಲ.
Yunus 10:38
ಅವರು ಮುಹಮ್ಮದ್‌ರವರು ಸ್ವತಃ ಅದನ್ನು ರಚಿಸಿರುವರೆಂದು ಹೇಳುತ್ತಿದ್ದಾರೆಯೇ ? ಉತ್ತರಿಸಿರಿ ; ಹಾಗಿದ್ದರೆ ಅದರಂತಹಾ ಒಂದೇ ಒಂದು ಅಧ್ಯಾಯವನ್ನು ಪ್ರಸ್ತುತ ಪಡಿಸಿರಿ ಹಾಗು ನೀವು ಸತ್ಯವಾದಿಗಳಾಗಿದ್ದರೆ. ಅಲ್ಲಾಹನ ಹೊರತು ನಿಮ್ಮ (ಸಹಾಯಕ್ಕಾಗಿ) ಸಾಧ್ಯವಿದ್ದವರನ್ನೆಲ್ಲಾ ಕರೆದುಕೊಳ್ಳಿರಿ.
Yunus 10:39
ಅವರ ಜ್ಞಾನದ ಹಿಡಿತಕ್ಕೆ ಬಾರದ ಮತ್ತು ಅದರ ಪರಿಣಾಮವು ಅವರಿಗೆ ಸ್ಪಷ್ಟವಾಗದಂತಹದ್ದನ್ನು ಅವರು ಸುಳ್ಳಾಗಿಸುತ್ತಾರೆ. ಇದೇ ಪ್ರಕಾರ ಅವರ ಪೂರ್ವಿಕರೂ ಸಹ ಸುಳ್ಳಾಗಿಸಿದ್ದರು. ಕೊನೆಗೆ ಅಕ್ರಮಿಗಳ ಅಂತ್ಯ ಹೇಗಾಯಿತೆಂಬುದನ್ನು ನೋಡಿರಿ.
Yunus 10:40
ಮತ್ತು ಅವರ ಪೈಕಿ ಕೆಲವರು ಇದರಲ್ಲಿ ವಿಶ್ವಾಸವಿಡುತ್ತಾರೆ ಮತ್ತು ಕೆಲವರು ಇದರಲ್ಲಿ ವಿಶ್ವಾಸವಿಡುವುದಿಲ್ಲ ಮತ್ತು ನಿಮ್ಮ ಪ್ರಭುವು ಕ್ಷೆÆÃಭೆ ಹರಡುವವರನ್ನು ಚೆನ್ನಾಗಿ ಅರಿಯುತ್ತಾನೆ.
Yunus 10:41
ಮತ್ತು ಅವರು ನಿಮ್ಮನ್ನು ಸುಳ್ಳಾಗಿಸಿದರೆ, ಹೇಳಿರಿ; ನನಗೆ ನನ್ನ ಕರ್ಮ ನಿಮಗೆ ನಿಮ್ಮ ಕರ್ಮ, ನನ್ನ ಕರ್ಮಗಳಿಂದ ನೀವು ಹೊಣೆಮುಕ್ತರಾಗಿದ್ದೀರಿ, ಮತ್ತು ನಾನು ನಿಮ್ಮ ಕರ್ಮಗಳಿಂದ ಹೊಣೆ ಮುಕ್ತನಾಗಿದ್ದೇನೆ.
Yunus 10:42
ಮತ್ತು ಅವರ ಪೈಕಿ ಕೆಲವರು ನಿಮ್ಮೆಡೆಗೆ ಕಿವಿಗೊಡುವವರೂ ಇದ್ದಾರೆ. ಏನು ನೀವು ಕಿವುಡರಿಗೆ ತಿಳಿಯದಿದ್ದರೂ ಕೇಳಿಸುವಿರಾ ?
Yunus 10:43
ಮತ್ತು ಅವರ ಪೈಕಿ ನಿಮ್ಮನ್ನು ನೋಡುವ ಕೆಲವರಿದ್ದಾರೆ, ಏನು ನೀವು ಕುರುಡರಿಗೆ ಕಾಣದಿದ್ದರೂ ಮಾರ್ಗ ತೋರಿಸುವಿರಾ?
Yunus 10:44
ನಿಶ್ಚಯವಾಗಿಯೂ ಅಲ್ಲಾಹನು ಜನರಿಗೆ ಒಂದಿಷ್ಟೂ ಅನ್ಯಾಯ ಮಾಡುವುದಿಲ್ಲ. ಆದರೆ ಜನರು ಸ್ವತಃ ತಮ್ಮ ಮೇಲೆ ತಾವೇ ಅನ್ಯಾಯವೆಸಗುತ್ತಾರೆ.
Yunus 10:45
ಮತ್ತು ಅಲ್ಲಾಹನು ಒಟ್ಟುಗೂಡಿಸುವ ದಿನದಂದು ಅವರಿಗೆ ತಾವು (ಭೂಲೋಕದಲ್ಲಿ) ದಿನದ ಒಂದು ಗಳಿಗೆ ಮಾತ್ರ ವಾಸಿಸಿದ್ದೆವು ಎಂಬAತೆ ಭಾಸವಾಗುವುದು, ಅವರು ಪರಸ್ಪರ ಒಬ್ಬರನ್ನೊಬ್ಬರು ಪರಿಚಯಿಸಿ ಕೊಳ್ಳುತ್ತಿರುವರು. ನಿಜವಾಗಿಯೂ ಅಲ್ಲಾಹನ ಭೇಟಿಯನ್ನು ಸುಳ್ಳಾಗಿಸಿದವರು ನಷ್ಟ ಹೊಂದಿದರು ಮತ್ತು ಅವರು ಸನ್ಮಾರ್ಗ ಪಡೆಯುವವರಾಗಿರಲಿಲ್ಲ.
Yunus 10:46
ಮತ್ತು ಅವರಿಗೆ ನಾವು ವಾಗ್ದಾನ ಮಾಡಿರುವಂತಹ ಕೆಲವು ಶಿಕ್ಷೆಗಳನ್ನು ನಿಮಗೆ ತೋರಿಸಬಹುದು ಅಥವ (ಅದರ ಪ್ರಕಟಣೆಗೆ ಮುನ್ನ) ನಿಮಗೆ ಮರಣ ನೀಡಬಹುದು. ಹೇಗಿದ್ದರೂ ನಮ್ಮ ಬಳಿಗೆ ಅವರಿಗೆ ಮರಳಲಿಕ್ಕಿದೆ. ಅನಂತರ ಅಲ್ಲಾಹನು ಅವರ ಎಲ್ಲ ಕೃತ್ಯಗಳ ಮೇಲೆ ಸಾಕ್ಷಿಯಾಗಿರುವನು.
Yunus 10:47
ಪ್ರತಿಯೊಂದು ಸಮುದಾಯಕ್ಕೂ ಒಬ್ಬ ಸಂದೇಶವಾಹಕನಿದ್ದಾನೆ. ಅವರ ಬಳಿಗೆ ಸಂದೇಶವಾಹಕನು ಬಂದಾಗ ಅವರ ನಡುವೆ ನ್ಯಾಯೋಚಿತವಾಗಿ ತೀರ್ಮಾನ ಮಾಡಲಾಗುವುದು ಮತ್ತು ಅವರ ಮೇಲೆ ಅನ್ಯಾಯ ಮಾಡಲಾಗುವುದಿಲ್ಲ.
Yunus 10:48
ಮತ್ತು ನೀವು ಸತ್ಯವಂತರಾಗಿದ್ದರೆ, ಈ ವಾಗ್ದಾನವು ಯಾವಾಗ ಪೂರ್ಣಗೊಳ್ಳುವುದು? ಎಂದು ಅವರು ಕೇಳುತ್ತಾರೆ
Yunus 10:49
ಉತ್ತರಿಸಿರಿ; ಸ್ವತಃ ನನ್ನ ಹಾನಿ ಮತ್ತು ಲಾಭದ ಅಧಿಕಾರವು ನನ್ನ ಕೈಯಲ್ಲಿಲ್ಲ. ಆದರೆ ಅಲ್ಲಾಹನು ಇಚ್ಛಿಸಿದಷ್ಟು ಮಾತ್ರ ಪ್ರತಿಯೊಂದು ಸಮುದಾಯಕ್ಕೂ ಒಂದು ನಿಶ್ಚಿತಾವಧಿಯಿದೆ. ಅವರ ಆ ನಿಶ್ಚಿತಾವಧಿಯು ಬಂದು ಬಿಟ್ಟರೆ ಅವರು ಒಂದು ಕ್ಷಣವೂ ಹಿಂದೆ ಮುಂದೆ ಆಗಲಾರರು.
Yunus 10:50
ಓ ಪೈಗಂಬರರೇ ಇವರೊಡನೆ ಹೇಳಿರಿ; ಅಲ್ಲಾಹನ ಶಿಕ್ಷೆಯು ರಾತ್ರಿಯ ವೇಳೆ ಅಥವಾ ಹಗಲಿನ ವೇಳೆ ನಿಮ್ಮ ಮೇಲೆ ಬಂದೆರಗಿದರೆ ಇದರಲ್ಲಿ ಯಾವ ಒಳಿತಿದೆಯೆಂದು ಅಪರಾಧಿಗಳು ಇದಕ್ಕಾಗಿ ಆತುರಪಟ್ಟುಕೊಳ್ಳುತ್ತಿದ್ದಾರೆ ?
Yunus 10:51
ಅದು (ಯಾತನೆ) ಸಂಭವಿಸಿದ ನಂತರವೇ ನೀವು ಅದರಲ್ಲಿ ವಿಶ್ವಾಸವಿಡುತ್ತೀರಾ, ವಸ್ತುತಃ ನೀವು ಅದರ ಬಗ್ಗೆ ಆತುರಪಟ್ಟುಕೊಳ್ಳುತ್ತಿದ್ದೀರಿ!
Yunus 10:52
ಅನಂತರ ಅಕ್ರಮಿಗಳೊಂದಿಗೆ ಹೇಳಲಾಗುವುದು ನೀವು ಚಿರಯಾತನೆಯ ಸವಿಯನ್ನುಣ್ಣಿರಿ. ನಿಮಗಂತು ನಿಮ್ಮ ಆ ಕೃತ್ಯಗಳ ಪ್ರತಿಫಲವೇ ನೀಡಲಾಗುತ್ತಿದೆ.
Yunus 10:53
ಮತ್ತು ಅವರು ನಿಮ್ಮೊಂದಿಗೆ ಅದು (ಯಾತನೆ) ನಿಜಕ್ಕೂ ಸತ್ಯವಾಗಿದೆಯೇ ಎಂದು ವಿಚಾರಿಸುತ್ತಾರೆ. ನೀವು ಅಲ್ಲಾಹನನ್ನು ಸೋಲಿಸಲಾರಿರಿ.
Yunus 10:54
ಅಕ್ರಮ (ಶಿರ್ಕ್)ವೆಸಗಿದ ಪ್ರತಿಯೊಬ್ಬ ವ್ಯಕ್ತಿಯ ಬಳಿ ಇಡೀ ಭೂಮಿಯ ಸಕಲ ಸಂಪತ್ತಿದ್ದರೂ (ಯಾತನೆಯಿಂದ ರಕ್ಷಣೆಗಾಗಿ) ಅವನು ಅದನ್ನೆಲ್ಲಾ ಪ್ರಾಯಶ್ಚಿತವಾಗಿ ಕೊಡುತ್ತಿದ್ದನು. ಅವರು ಯಾತನೆಯನ್ನು ಕಾಣುವಾಗ ಮನದೊಳಗೆ ಮರುಗುವರು ಆದರೆ ಅವರ ನಡುವೆ ತೀರ್ಪು ನ್ಯಾಯೋಚಿತವಾಗಿ ಮಾಡಲಾಗುವುದು ಮತ್ತು ಅವರ ಮೇಲೆ ಅನ್ಯಾಯವೆಸಗಲಾಗದು.
Yunus 10:55
ತಿಳಿದುಕೊಳ್ಳಿರಿ ! ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅಲ್ಲಾಹನದ್ದೇ ಆಗಿದೆ. ತಿಳಿದುಕೊಳ್ಳಿರಿ! ಅಲ್ಲಾಹನ ವಾಗ್ದಾನವು ಸತ್ಯವಾಗಿದೆ. ಆದರೆ ಬಹುದೇವಾರಾಧಕರಲ್ಲಿ ಹೆಚ್ಚಿನವರು ಅದನ್ನು ಅರಿಯುವುದಿಲ್ಲ.
Yunus 10:56
ಅವನೇ ಜೀವಂತಗೊಳಿಸುತ್ತಾನೆ ಹಾಗೂ ಮರಣ ಕೊಡುತ್ತಾನೆ ಮತ್ತು ನೀವೆಲ್ಲರು ಅವನೆಡೆಗೇ ಮರಳಿಸಲಾಗುವಿರಿ.
Yunus 10:57
ಓ ಜನರೇ, ನಿಸ್ಸಂದೇಹವಾಗಿಯೂ ನಿಮ್ಮೆಡೆಗೆ ನಿಮ್ಮ ಪ್ರಭುವಿನ ವತಿಯಿಂದ ಸದುಪದೇಶವೂ, ಹೃದಯಗಳಲ್ಲಿರುವ ರೋಗಗಳಿಗೆ ಉಪಶಮನವೂ ಬಂದಿದೆ ಮತ್ತು ಸತ್ಯವಿಶ್ವಾಸಿಗಳಿಗೆ ಸನ್ಮಾರ್ಗವೂ, ಕಾರುಣ್ಯವೂ ಆಗಿರುತ್ತದೆ.
Yunus 10:58
ನೀವು ಹೇಳಿರಿ; ಜನರು ಅಲ್ಲಾಹನ ಈ ಅನುಗ್ರಹ ಮತ್ತು ಕಾರುಣ್ಯದ ನಿಮಿತ್ತ ಸಂತಸಗೊಳ್ಳಲಿ. ಇದು ಅವರು ಶೇಖರಿಸುತ್ತಿರುವುದಕ್ಕಿಂತಲೂ ಅದೆಷ್ಟೋ ಉತ್ತಮವಾಗಿದೆ.
Yunus 10:59
ಹೇಳಿರಿ; ಅಲ್ಲಾಹನು ನಿಮಗಾಗಿ ದಯಪಾಲಿಸಿದ ಆಹಾರದ ಬಗ್ಗೆ ನೀವು ಯೋಚಿಸಿದ್ದೀರಾ ? ನೀವು ಅದರಲ್ಲಿ ಕೆಲವು ಅಂಶವನ್ನು ನಿಷಿದ್ಧವನ್ನಾಗಿಯೂ, ಇನ್ನು ಕೆಲವು ಅಂಶವನ್ನು ಧರ್ಮಬದ್ಧವನ್ನಾಗಿಯೂ ಮಾಡಿಕೊಂಡಿರುವಿರಿ. ಹೇಳಿರಿ; ನಿಮಗೆ ಅಲ್ಲಾಹನು ಅನುಮತಿಸಿರುವನೇ ಅಥವಾ ನೀವು ಅಲ್ಲಾಹನ ಮೇಲೆ ಸುಳ್ಳು ಸೃಷ್ಟಿಸುತ್ತಿರುವಿರಾ ?
Yunus 10:60
ಮತ್ತು ಅಲ್ಲಾಹನ ಮೇಲೆ ಸುಳ್ಳು ಸೃಷ್ಟಿಸುತ್ತಿರುವವರ ಭಾವನೆಯು ಪುನರುತ್ಥಾನ ದಿನದ ಕುರಿತು ಏನಾಗಿರಬಹುದು ? ನಿಜವಾಗಿಯೂ ಜನರ ಮೇಲೆ ಅಲ್ಲಾಹನ ಮಹಾ ಅನುಗ್ರವಿದೆ. ಆದರೆ ಅವರಲ್ಲಿ ಅಧಿಕಜನರು ಕೃತಜ್ಞತೆಯನ್ನು ಸಲ್ಲಿಸುವುದಿಲ್ಲ.
Yunus 10:61
ಓ ಪೈಗಂಬರರೇ ನೀವು ಯಾವ ಸ್ಥಿತಿಯಲ್ಲಿದ್ದರೂ, ಅಲ್ಲಾಹನು ಅವತೀರ್ಣಗೊಳಿಸಿರುವ ಕುರ್‌ಆನಿನಿಂದ ನೀವು ಓದಿ ಕೇಳಿಸುತ್ತಿದ್ದರೂ ಮತ್ತು ಓ ಜನರೇ ನೀವು ಯಾವುದೇ ಕೆಲಸ ಮಾಡುತ್ತಿದ್ದು ಅದರಲ್ಲಿ ಮಗ್ನರಾಗಿದ್ದರೂ ನಿಮ್ಮನ್ನು ನಾವು ನೋಡುತ್ತಿರುತ್ತೇವೆ, ಮತ್ತು ನಿಮ್ಮ ಪ್ರಭುವಿನಿಂದ ಭೂಮಿಯಲ್ಲಾಗಲಿ ಆಕಾಶದಲ್ಲಾಗಲಿ ಅಣು ತೂಕದಷ್ಟು ವಸ್ತುವೂ ಅಡಗಿರುವುದಿಲ್ಲ, ಅಥವಾ ಅದಕ್ಕಿಂತ ಚಿಕ್ಕದಿರಲಿ, ದೊಡ್ಡದಿರಲಿ ಎಲ್ಲವೂ ಒಂದು ಸುಸ್ಪಷ್ಟ ದಾಖಲೆಯಲ್ಲಿರುತ್ತದೆ.
Yunus 10:62
ಎಚ್ಚರಿಕೆ ಖಂಡಿತವಾಗಿಯೂ ಅಲ್ಲಾಹನ ಆಪ್ತಮಿತ್ರರಿಗೆ ಭಯವಾಗಲಿ, ದುಖಃವಾಗಲಿ ಸಂಭವಿಸುವುದಿಲ್ಲ.
Yunus 10:63
ಅವರು ಸತ್ಯ ವಿಶ್ವಾಸವನ್ನಿರಿಸಿ ಭಯವನ್ನಿರಿಸಿಕೊಂಡವರು ಆಗಿದ್ದಾರೆ.
Yunus 10:64
ಅವರಿಗೆ ಈ ಇಹಲೋಕ ಜೀವನದಲ್ಲೂ, ಪರಲೋಕದಲ್ಲೂ ಶುಭವಾರ್ತೆಯಿದೆ. ಅಲ್ಲಾಹನ ವಚನಗಳಿಗೆ ಬದಲಾವಣೆಯಿಲ್ಲ. ಇದು ಮಹಾ ಯಶಸ್ಸಾಗಿರುತ್ತದೆ.
Yunus 10:65
ಮತ್ತು (ಓ ಪೈಗಂಬರರೇ) ನಿಮಗೆ ಅವರ ಮಾತುಗಳು ದುಖಃಕ್ಕೀಡು ಮಾಡದಿರಲಿ. ನಿಶ್ಚಯವಾಗಿಯೂ ಸಕಲ ವಿಧದ ಪ್ರತಾಪವೂ, (ಗೌರವವೂ) ಅಲ್ಲಾಹನಿಗೆ ಇರುವುದು, ಅವನು ಚೆನ್ನಾಗಿ ಆಲಿಸುವವನು, ಸರ್ವವನ್ನು ಅರಿಯುವವನು ಆಗಿದ್ದಾನೆ.
Yunus 10:66
ತಿಳಿದುಕೊಳ್ಳಿರಿ. ನಿಸ್ಸಂಶಯವಾಗಿಯು ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅಲ್ಲಾಹನದ್ದೇ ಆಗಿದೆ, ಮತ್ತು ಅಲ್ಲಾಹನ ಹೊರತು ಇತರ ಸಹಭಾಗಿ ದೇವರುಗಳನ್ನು ಆರಾಧಿಸುತ್ತಿರುವವರು ಕೇವಲ ಊಹಾಪೋಹಗಳನ್ನು ಅನುಸರಿಸುತ್ತಿದ್ದಾರೆ.
Yunus 10:67
ಮತ್ತು ಅವನೇ ರಾತ್ರಿಯನ್ನು ನಿಮಗಾಗಿ ವಿಶ್ರಾಂತಿ ಪಡೆಯಲೆಂದು ಮತ್ತು ಹಗಲನ್ನು (ಕೆಲಸ ಕಾರ್ಯಗಳಿಗಾಗಿ) ಪ್ರಕಾಶಮಾನವಾಗಿಯು ಮಾಡಿರುವನು. ನಿಶ್ಚಯವಾಗಿಯು ಇದರಲ್ಲಿ ಆಲಿಸುವ ಜನರಿಗೆ ನಿದರ್ಶನಗಳಿವೆ.
Yunus 10:68
ಅಲ್ಲಾಹನು ಸಂತಾನವನ್ನು ಹೊಂದಿರುತ್ತಾನೆAದು ಅವರು ಆರೋಪಿಸುತ್ತಾರೆ. ಅವನಾದರೂ ಅದೆಷ್ಟೋ ಪರಮ ಪಾವನನು ನಿರಪೇಕ್ಷಕನು ಆಗಿರುವನು. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅವನ ಅಧಿಪತ್ಯದಲ್ಲಿದೆ. ಈ ವಿಚಾರದಲ್ಲಿ ನಿಮ್ಮ ಬಳಿ ಆಧಾರವೇನೂ ಇಲ್ಲ. ನೀವು ಅರಿಯದಿದ್ದನ್ನು ಅಲ್ಲಾಹನ ಮೇಲೆ ಹೇಳುತ್ತಿರುವಿರಾ ?
Yunus 10:69
ಅಲ್ಲಾಹನ ಮೇಲೆ ಸುಳ್ಳು ಸೃಷ್ಟಿಸಿ ಹೇಳುತ್ತಿರುವವರು ಯಶಸ್ವಿಯಾಗಲಾರರು.
Yunus 10:70
ಇಹಲೋಕದಲ್ಲಿ ಅತ್ಯಲ್ಪ ಸುಖ ಭೋಗವಿರುವುದು. ಅನಂತರ ಅವರಿಗೆ ನಮ್ಮೆಡೆಗೇ ಮರಳಬೇಕಾಗಿದೆ. ತರುವಾಯ ನಾವು ಅವರ ಸತ್ಯನಿಷೇಧದ ನಿಮಿತ್ತ ಕಠಿಣ ಯಾತನೆಯ ಸವಿಯನ್ನುಣಿಸುವೆವು.
Yunus 10:71
(ಓ ಪೈಗಂಬರರೇ) ತಾವು ಅವರಿಗೆ ನೂಹ್‌ರವರ ವೃತ್ತಾಂತವನ್ನು ಓದಿ ಹೇಳಿರಿ. ಅವರು ತಮ್ಮ ಜನಾಂಗಕ್ಕೆ ಹೇಳಿದ ಸಂದರ್ಭ; ಓ ನನ್ನ ಜನಾಂಗವೇ, ನಿಮ್ಮ ನಡುವೆ ನನ್ನ ಇರುವಿಕೆಯು ಮತ್ತು ಅಲ್ಲಾಹನ ಸೂಕ್ತಿಗಳ ಮೂಲಕ ನಿಮ್ಮನ್ನು ಎಚ್ಚರಗೊಳಿಸುವುದು ನಿಮಗೆ ಭಾರವೆನಿಸುವುದಾದರೆ ನಾನಂತು ಅಲ್ಲಾಹನ ಮೇಲೆ ಭರವಸೆಯಿಟ್ಟಿದ್ದೇನೆ. ನೀವು ನಿಮ್ಮ ಸಹಭಾಗಿ ದೇವರುಗಳೊಂದಿಗೆ ನಿಮ್ಮ ಯೋಜನೆಯನ್ನು ದೃಢಪಡಿಸಿರಿ. ಆಮೇಲೆ ನಿಮ್ಮ ಆ ಯೋಜನೆಯ ಯಾವ ಅಂಶವು ನಿಮ್ಮಿಂದ ಅಡಗಿರದಿರಲಿ. ಅನಂತರ ನನ್ನ ವಿರುದ್ಧ ಕಾರ್ಯಾಚರಣೆಗಿಳಿಯಿರಿ ಹಾಗು ನನಗೆ ಕಾಲಾವಕಾಶವನ್ನೂ ನೀಡಬೇಡಿರಿ.
Yunus 10:72
ಅನಂತರವೂ ನೀವು ವಿಮುಖರಾಗುವುದಾದರೆ ನಾನು ನಿಮ್ಮಲ್ಲಿ ಯಾವ ಪ್ರತಿಫಲವನ್ನಂತು ಬೇಡಿರುವುದಿಲ್ಲ. ನನ್ನ ಪ್ರತಿಫಲವಂತು ಅಲ್ಲಾಹನ ಹೊಣೆಯಲ್ಲಿದೆ ಮತ್ತು (ಅಲ್ಲಾಹನಿಗೆ) ವಿಧೇಯರಾದವರಲ್ಲಿ ಸೇರಲು ನನಗೆ ಆಜ್ಞಾಪಿಸಲಾಗಿದೆ.
Yunus 10:73
ಆದರೆ ಅವರು (ಅವರ ಜನಾಂಗ) ನೂಹ್‌ರವರನ್ನು ಸುಳ್ಳಾಗಿಸಿದರು. ಅನಂತರ ನಾವು ಅವರನ್ನು, ಅವರ ಜೊತೆ ಹಡಗಿನಲ್ಲಿದ್ದವರನ್ನೂ ರಕ್ಷಿಸಿದೆವು ಮತ್ತು ಅವರನ್ನು ಭೂಮಿಯಲ್ಲಿ ಉತ್ತರಾಧಿಕಾರಿಗಳನ್ನಾಗಿ ಮಾಡಿದೆವು ಮತ್ತು ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸುತ್ತಿದ್ದವರನ್ನು ಮುಳುಗಿಸಿಬಿಟ್ಟೆವು. ಆದ್ದರಿಂದ ನೀವು ಮುನ್ನೆಚ್ಚರಿಕೆ ನೀಡಲ್ಪಟ್ಟವರ ಗತಿ ಏನಾಯಿತೆಂಬುದನ್ನು ನೋಡಿರಿ.
Yunus 10:74
ತರುವಾಯ ನಾವು ನೂಹ್‌ರವರ ನಂತರ ಇತರ ಸಂದೇಶವಾಹಕರನ್ನು ತಮ್ಮತಮ್ಮ ಜನಾಂಗದೆಡೆಗೆ ನಿಯೋಗಿಸಿದೆವು. ಅವರೆಲ್ಲ ಸುಸ್ಪಷ್ಟ ಪುರಾವೆಗಳೊಂದಿಗೆ ಅವರೆಡೆಗೆ ಆಗಮಿಸಿದರು. ಆದರೆ ಅವರು ಈ ಮುಂಚೆ ಸುಳ್ಳಾಗಿಸಿದ್ದನ್ನು ವಿಶ್ವಾಸವಿಡುವವರಾಗಿರಲಿಲ್ಲ. ಇದೇ ಪ್ರಕಾರ ನಾವು ಮೇರೆ ಮೀರುವವರ ಹೃದಯಗಳ ಮೇಲೆ ಮುದ್ರೆಯೊತ್ತಿಬಿಡುವೆವು.
Yunus 10:75
. ತರುವಾಯ ನಾವು ಆ ಸಂದೇಶವಾಹಕರ ನಂತರ ಮೂಸಾ ಮತ್ತು ಹಾರೂನರವರನ್ನು ಫಿರ್‌ಔನ್ ಮತ್ತು ಅವನ ಮುಖಂಡರೆಡೆಗೆ ನಮ್ಮ ದೃಷ್ಟಾಂತಗಳೊAದಿಗೆ ನಿಯೋಗಿಸಿದೆವು. ಆದರೆ ಅವರು ಅಹಂಕಾರ ತೋರಿದರು ಮತ್ತು ಅವರು ಅಪರಾಧಿ ಜನಾಂಗವಾಗಿದ್ದರು.
Yunus 10:76
ಅನಂತರ ಅವರ ಬಳಿಗೆ ನಮ್ಮ ಕಡೆಯಿಂದ ಸತ್ಯವು ಬಂದಾಗ ಖಂಡಿತವಾಗಿಯೂ ಇದು ಸ್ಪಷ್ಟ ಜಾದೂವಾಗಿದೆ ಎಂದರು.
Yunus 10:77
ಮೂಸಾ ಉತ್ತರಿಸಿದರು. ಸತ್ಯವು ನಿಮ್ಮೆಡೆಗೆ ಬಂದಾಗ ನೀವು ಇಂತಹ ಮಾತನ್ನು ಹೇಳುತ್ತಿರುವಿರಾ ? ಇದು ಜಾದುವೇ ? ವಸ್ತುತಃ ಜಾದೂಗಾರರು ಯಶಸ್ಸು ಪಡೆಯಲಾರರು.
Yunus 10:78
ಅವರು ಹೇಳಿದರು; ನಾವು ನಮ್ಮ ಪೂರ್ವಿಕರನ್ನು ಯಾವ ಮಾರ್ಗದಲ್ಲಿ ಕಂಡಿದ್ದೇವೆಯೋ ಅದರಿಂದ ನೀವು ನಮ್ಮನ್ನು ಸರಿಸಿಬಿಡಲೆಂದೂ, ಭೂಮಿಯಲ್ಲಿ ನಿಮಗಿಬ್ಬರಿಗೂ ಹಿರಿಮೆ ಸಿಗಲೆಂದೂ ನೀವು ನಮ್ಮ ಬಳಿಗೆ ಬಂದಿರುವಿರಾ? ನಾವು ನಿಮ್ಮಿಬ್ಬರನ್ನು ಎಂದಿಗೂ ನಂಬುವವರಲ್ಲ.
Yunus 10:79
ಮತ್ತು ಫಿರ್‌ಔನನು ಆಜ್ಞಾಪಿಸಿದನು ನೀವು ನನ್ನ ಬಳಿಗೆ ಪ್ರತಿಯೊಬ್ಬ ನಿಪುಣ ಜಾದೂಗಾರನನ್ನು ಹಾಜರುಪಡಿಸಿರಿ.
Yunus 10:80
ಅನಂತರ ಜಾದೂಗಾರರು ಬಂದಾಗ ಮೂಸಾ ಅವರೊಡನೆ ಹೇಳಿದರು; ನಿಮಗೆ ಹಾಕಲಿರುವ ಮೊಡಿಯನ್ನು ಹಾಕಿಬಿಡಿರಿ.
Yunus 10:81
ಅವರು ಮೊಡಿ ಹಾಕಿದಾಗ ಮೂಸಾ ಹೇಳಿದರು; ನೀವು ತಂದಿರುವುದು ಜಾದೂವಾಗಿದೆ. ನಿಶ್ಚಯವಾಗಿಯೂ ಅಲ್ಲಾಹನು ಸಧ್ಯದಲ್ಲೇ ಅದನ್ನು ನಿಶ್ಫಲಗೊಳಿಸುವನು. ಅಲ್ಲಾಹನು ಕಿಡಿಗೇಡಿಗಳ ಕಾರ್ಯವನ್ನು ಕೈಗೂಡಿಸುವುದಿಲ್ಲ.
Yunus 10:82
ಮತ್ತು ಅಲ್ಲಾಹನು ತನ್ನ ವಚನಗಳ ಮೂಲಕ ಸತ್ಯವನ್ನು ಸಾಬೀತು ಮಾಡಿ ತೋರಿಸುವನು, ಅದು ಅಪರಾಧಿಗಳಿಗೆ ಇಷ್ಟವಿರದಿದ್ದರೂ ಸರಿಯೇ.
Yunus 10:83
ಫಿರ್‌ಔನ್ ಮತ್ತು ಅವನ ಮುಖಂಡರು ತಮ್ಮನ್ನು ಹಿಂಸೆಗೊಳಪಡಿಸಬಹುದೆAದು ಹೆದರಿ ಮೂಸಾರವರ ಮೇಲೆ ಅವರ ಜನಾಂಗದ ಅತ್ಯಲ್ಪ ಮಂದಿ ಯುವಕರ ಹೊರತು ಇನ್ನಾರು ವಿಶ್ವಾಸವಿರಿಸಲಿಲ್ಲ. ಮತ್ತು ನಿಜವಾಗಿಯೂ ಫಿರ್‌ಔನನು ಭೂಮಿಯಲ್ಲಿ ಪ್ರಾಬಲ್ಯ ಹೊಂದಿದ್ದನು. ಮಾತ್ರವಲ್ಲದೆ ಅವನು ಹದ್ದು ಮೀರಿದವರಲ್ಲಾಗಿದ್ದನು.
Yunus 10:84
ಮತ್ತು ಮೂಸಾ ಹೇಳಿದರು ಓ ನನ್ನ ಜನಾಂಗದವರೇ ನೀವು ಅಲ್ಲಾಹನಲ್ಲಿ ವಿಶ್ವಾಸವಿರಿಸಿದವರಾಗಿದ್ದರೆ ಅವನ ಮೇಲೆಯೇ ಭರವಸೆಯನ್ನಿರಿಸಿರಿ, ನೀವು ಶರಣಾದವರಾಗಿದ್ದರೆ.
Yunus 10:85
ಅವರೆಂದರು; ನಾವು ಅಲ್ಲಾಹನ ಮೇಲೆಯೇ ಭರವಸೆಯನ್ನಿರಿಸಿದೆವು. ಓ ನಮ್ಮ ಪ್ರಭುವೇ ! ನಮ್ಮನ್ನು ಅಕ್ರಮಿ ಜನಾಂಗಕ್ಕೆ ಪರೀಕ್ಷಾ ಸಾಧನವನ್ನಾಗಿ ಮಾಡದಿರು.
Yunus 10:86
ಮತ್ತು ನಮ್ಮನ್ನು ನಿನ್ನ ಕೃಪೆಯ ಮೂಲಕ ಸತ್ಯನಿಷೇಧಿ ಜನಾಂಗದಿAದ ರಕ್ಷಿಸು.
Yunus 10:87
ಮತ್ತು ನಾವು ಮೂಸಾ ಹಾಗೂ ಅವರ ಸಹೋದರನೆಡೆಗೆ ಸಂದೇಶ ಕಳುಹಿಸಿದೆವು; “ನೀವಿಬ್ಬರೂ ನಿಮ್ಮ ಜನಾಂಗದವರಿಗೆ ಈಜಿಪ್ಟಿನಲ್ಲಿ ವಸತಿಗಳ ವ್ಯವಸ್ಥೆ ಮಾಡಿರಿ ಮತ್ತು ನೀವೆಲ್ಲರೂ ನಿಮ್ಮ ಅದೇ ವಸತಿಗಳನ್ನು ನಮಾಜಿ಼ನ ಸ್ಥಳವನ್ನಾಗಿ ನಿಶ್ಚಯಿಸಿರಿ ಹಾಗು ನಮಾಜ಼್ ಸಂಸ್ಥಾಪಿಸಿರಿ ಮತ್ತು ನೀವು ಸತ್ಯವಿಶ್ವಾಸಿಗಳಿಗೆ ಶುಭವಾರ್ತೆಯನ್ನು ನೀಡಿರಿ.
Yunus 10:88
ಮತ್ತು ಮೂಸಾ ಪ್ರಾರ್ಥಿಸಿದರು, ನಮ್ಮ ಪ್ರಭುವೇ, ನೀನು ಫಿರ್‌ಔನನಿಗೂ, ಅವನ ಮುಖಂಡರಿಗೂ ಈ ಇಹಲೋಕ ಜೀವನದಲ್ಲಿ ವೈಭವ ಹಾಗೂ ವಿವಿಧ ಸಿರಿ ಸಂಪತ್ತನ್ನು ನೀಡಿರುವೆ. ಓ ನಮ್ಮ ಪ್ರಭುವೇ, ಇದು ಅವರು ನಿನ್ನ ಮಾರ್ಗದಿಂದ ಜನರನ್ನು ಭ್ರಷ್ಟಗೊಳಿಸಲಿಕ್ಕಾಗಿಯೇ ? ಓ ನಮ್ಮ ಪ್ರಭುವೇ, ಅವರ ಸಂಪತ್ತನ್ನು ನೀನು ನಾಶಗೊಳಿಸು ಮತ್ತು ಅವರ ಹೃದಯಗಳನ್ನು ಕಠೋರಗೊಳಿಸು. ಹಾಗೆಯೇ ಅವರು ವೇದನಾಜನಕ ಯಾತನೆಯನ್ನು ಕಣ್ಣಾರೆ ಕಾಣುವ ತನಕ ವಿಶ್ವಾಸವಿಡದಂತಾಗಲಿ.
Yunus 10:89
ಅಲ್ಲಾಹನು ಹೇಳಿದನು; ನಿಮ್ಮಿಬ್ಬರ ಪ್ರಾರ್ಥನೆಯನ್ನು ಸ್ವೀಕರಿಸಲಾಗಿದೆ. ಆದುದರಿಂದ ನೀವಿಬ್ಬರೂ ಸ್ಥಿರತೆಯಿಂದಿರಿ ಹಾಗೂ ಅಜ್ಞಾನಿಗಳ ಮಾರ್ಗವನ್ನು ಅನುಸರಿಸಬೇಡಿರಿ.
Yunus 10:90
ಮತ್ತು ನಾವು ಇಸ್ರಾಯೀಲ್ ಸಂತತಿಗಳನ್ನು ಸಮುದ್ರ ದಾಟಿಸಿದೆವು. ನಂತರ ಫಿರ್‌ಔನ್ ಮತ್ತು ಅವನ ಸೈನ್ಯವು ಧಿಕ್ಕಾರ ಹಾಗು ವಿದ್ವೇಷದಿಂದ ಅವರನ್ನು ಬೆನ್ನಟ್ಟಿದರು, ಕೊನೆಗೆ ಅವನು ಮುಳುಗತೊಡಗಿದಾಗ ಹೇಳಿದನು : ಇಸ್ರಾಯೀಲ್ ಸಂತತಿಗಳು ವಿಶ್ವಾಸವಿರಿಸಿದವನ ಮೇಲೆ ನಾನೂ ವಿಶ್ವಾಸವಿರಿಸಿದೆನು. ಅವನ ಹೊರತು ಅನ್ಯ ಆರಾಧ್ಯರಿಲ್ಲ ಮತ್ತು ನಾನು ಶರಣಾಗುವರಲ್ಲಾಗುವೆನು,
Yunus 10:91
(ಹೇಳಲಾಯಿತು) ಈಗ ನೀನು ವಿಶ್ವಾಸವಿಡುವೆಯಾ? ಇದಕ್ಕಿಂತ ಮೊದಲು ನೀನು ಧಿಕ್ಕಾರ ತೋರಿಸುತ್ತಿದ್ದೆ ಮತ್ತು ನೀನು ಕ್ಷೆÆÃಭೆ ಹರಡುವವರಲ್ಲಿ ಸೇರಿದ್ದೆ?
Yunus 10:92
ನಾವು ಇಂದು ನೀನು ನಿನ್ನ ನಂತರದವರಿಗೆ ಪಾಠವಾಗಲೆಂದು ನಿನ್ನ ಶವವನ್ನು (ಮಾತ್ರ) ರಕ್ಷಿಸುವೆವು, ವಾಸ್ತವವೇನೆಂದರೆ ಹೆಚ್ಚಿನ ಜನರು ನಮ್ಮ ದೃಷ್ಟಾಂತಗಳ ಬಗ್ಗೆ ಅಲಕ್ಷö್ಯರಾಗಿದ್ದಾರೆ.
Yunus 10:93
ಮತ್ತು ನಿಸ್ಸಂದೇಹವಾಗಿಯೂ ನಾವು ಇಸ್ರಾಯೀಲ್ ಸಂತತಿಗಳಿಗೆ ಯೋಗ್ಯವಾದ ನೆಲೆಯನ್ನು ವಾಸಿಸಲು ನೀಡಿದೆವು ಮತ್ತು ಪರಿಶುದ್ಧ ವಸ್ತುಗಳಿಂದ ಆಹಾರ ಕೊಟ್ಟೆವು. ಆದರೆ ಅವರು ತಮ್ಮ ಬಳಿಗೆ ಜ್ಞಾನ ಬಂದ ಬಳಿಕವೂ ಭಿನ್ನಾಭಿಪ್ರಾಯಕ್ಕೆ ತುತ್ತಾದರು. ಖಂಡಿತವಾಗಿಯೂ ನಿಮ್ಮ ಪ್ರಭುವು ಪುನರುತ್ಥಾನ ದಿನದಂದು ಅವರು ಭಿನ್ನತೆ ಹೊಂದಿರುವ ವಿಷಯಗಳಲ್ಲಿ ಅವರ ನಡುವೆ ತೀರ್ಪು ನೀಡಲಿರುವನು.
Yunus 10:94
ಆದ್ದರಿಂದ ನಾವು ನಿಮ್ಮೆಡೆಗೆ ಅವತೀರ್ಣಗೊಳಿಸಿದ ಗ್ರಂಥದಲ್ಲಿ ನಿಮಗೆ ಸಂದೇಹವಿದ್ದರೆ ನಿಮಗಿಂತ ಮುಂಚೆ ಗ್ರಂಥ ಓದುತ್ತಿದ್ದವರೊಡನೆ ವಿಚಾರಿಸಿನೋಡಿರಿ; ನಿಶ್ಚಯವಾಗಿಯು ನಿಮಗೆ ನಿಮ್ಮ ಪ್ರಭುವಿನ ಕಡೆಯಿಂದ ಸತ್ಯವು ಬಂದಿರುತ್ತದೆ. ಆದ್ದರಿಂದ ನೀವು ಎಂದಿಗೂ ಸಂಶಯಗ್ರಸ್ಥರಲ್ಲಾಗಬಾರದು.
Yunus 10:95
ಮತ್ತು ಅಲ್ಲಾಹನ ದೃಷ್ಟಾಂತಗಳನ್ನು ಸುಳ್ಳಾಗಿಸಿದವರೊಂದಿಗೆ ಸೇರಬೇಡಿರಿ. ಅನ್ಯಥಾ ನೀವು ನಷ್ಟಹೊಂದಿದವರಲ್ಲಾಗುವಿರಿ.
Yunus 10:96
ಖಂಡಿತವಾಗಿಯೂ ಯಾರ ಮೇಲೆ ನಿಮ್ಮ ಪ್ರಭುವಿನ ವಚನವೂ ನಿಜವಾಗಿಬಿಟ್ಟಿತೊ ಅವರು ವಿಶ್ವಾಸವಿರಿಸಲಾರರು,
Yunus 10:97
ಮತ್ತು ಅವರೆಡೆಗೆ ಸಕಲ ದೃಷ್ಟಾಂತವೂ ಬಂದುಬಿಟ್ಟರೂ ಅವರು ವೇದನಾಜನಕ ಯಾತನೆಯನ್ನು ಕಣ್ಣಾರೆ ಕಾಣುವವರೆಗೂ (ವಿಶ್ವಾಸವಿಡಲಾರರು).
Yunus 10:98
ಯೂನುಸ್‌ರವರ ಜನಾಂಗದ ಹೊರತು ಯಾವುದೇ ನಾಡು ಯಾತನೆಯನ್ನು ಕಣ್ಣಾರೆ ಕಂಡ ಬಳಿಕ ವಿಶ್ವಾಸವಿರಿಸಿ ಅವರ ಆ ವಿಶ್ವಾಸವು ಅವರಿಗೆ ಪ್ರಯೋಜನಕಾರಿಯಾಗಿಲ್ಲ. ಆದರೆ ಯೂನುಸ್‌ರವರ ಜನಾಂಗದವರು ವಿಶ್ವಾಸವಿರಿಸಿದಾಗ ನಾವು ಅವರಿಂದ ನಿಂದ್ಯತೆಯ ಯಾತನೆಯನ್ನು ಇಹಲೋಕ ಜೀವನದಲ್ಲಿ ಸರಿಸಿಬಿಟ್ಟೆವು ಮತ್ತು ಅವರನ್ನು ಒಂದು ನಿರ್ದಿಷ್ಟ ಅವಧಿಯ ತನಕ ಜೀವನಾನುಕೂಲತೆಯನ್ನು ಅನುಭವಿಸಲು ಅವಕಾಶಕೊಟ್ಟೆವು.
Yunus 10:99
ನಿಮ್ಮ ಪ್ರಭುವು ಇಚ್ಛಿಸುತ್ತಿದ್ದರೆ ಭೂಮಿಯಲ್ಲಿರುವವರೆಲ್ಲರೂ ವಿಶ್ವಾಸವಿಡುತ್ತಿದ್ದರು. (ಅವನು ಹೀಗೆ ಮಾಡಿಲ್ಲ) ಹೀಗಿರುವಾಗ ನೀವು ಜನರನ್ನು ಸತ್ಯವಿಶ್ವಾಸಿಗಳಾಗಬೇಕೆಂದು ಒತ್ತಾಯಪಡಿಸುತ್ತಿರುವಿರಾ?
Yunus 10:100
ಯಾವೊಬ್ಬ ವ್ಯಕ್ತಿಯು ಅಲ್ಲಾಹನ ಅನುಮತಿಯ ವಿನಃ ಸ್ವತಃ ವಿಶ್ವಾಸವಿರಿಸಲಾರನು, ಬುದ್ಧಿ ಪ್ರಯೋಗಿಸದೆ ಇರುವವರ ಮೇಲೆ ಅಲ್ಲಾಹನು ಸತ್ಯ ನಿಷೇಧದ ಮಾಲಿನ್ಯವನ್ನು ಹಾಕಿಬಿಡುತ್ತಾನೆ.
Yunus 10:101
ಹೇಳಿರಿ; ನೀವು ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದರ ಬಗ್ಗೆ ಚಿಂತಿಸಿ ನೋಡಿರಿ ; ವಿಶ್ವಾಸವಿಡದ ಜನಾಂಗಕ್ಕೆ ದೃಷ್ಟಾಂತಗಳಾಗಲಿ, ಮುನ್ನೆಚ್ಚರಿಕೆಗಳಾಗಲಿ ಯಾವುದೇ ಪ್ರಯೋಜನವನ್ನು ನೀಡಲಾರವು.
Yunus 10:102
ಈ ಜನರು ಅವರಿಗಿಂತ ಮುಂಚಿನವರು ಕಂಡಿದ್ದ ದುರ್ದಿನಗಳ ನಿರೀಕ್ಷೆಯಲ್ಲಿದ್ದಾರೆಯೇ? ಹೇಳಿರಿ ಹಾಗಿದ್ದರೆ ನೀವು ನಿರೀಕ್ಷಿಸುತ್ತಿರಿ, ನಾನೂ ನಿಮ್ಮ ಜೊತೆ ನಿರೀಕ್ಷಿಸುತ್ತೇನೆ.
Yunus 10:103
ಅನಂತರ ನಾವು ನಮ್ಮ ಸಂದೇಶವಾಹಕರನ್ನೂ ಸತ್ಯವಿಶ್ವಾಸವಿರಿಸಿದವರನ್ನೂ ರಕ್ಷಿಸುತ್ತೇವೆ. ಇದೇ ಪ್ರಕಾರ ಸತ್ಯವಿಶ್ವಾಸಿಗಳನ್ನು ರಕ್ಷಿಸುವುದು ನಮ್ಮ ಹೊಣೆಯಾಗಿರುತ್ತದೆ.
Yunus 10:104
ಹೇಳಿರಿ; ಓ ಜನರೇ ನೀವು ಇದುವರೆಗೆ ನನ್ನ ಧರ್ಮದ ಬಗ್ಗೆ ಸಂದೇಹಕ್ಕೊಳಗಾಗಿದ್ದರೆ ನೀವು ಅಲ್ಲಾಹನ ಹೊರತು ಆರಾಧಿಸುತ್ತಿರುವ ಆರಾಧ್ಯರನ್ನು ಖಂಡಿತವಾಗಿ ನಾನು ಅರಾಧಿಸುವುದಿಲ್ಲ, ಆದರೆ ನಿಮಗೆ ಮರಣ ಕೊಡುವ ಅಲ್ಲಾಹನನ್ನು ಮಾತ್ರ ಆರಾಧಿಸುತ್ತೇನೆ. ಮತ್ತು ನಾನು ಸತ್ಯವಿಶ್ವಾಸಿಗಳಲ್ಲಾಗಬೇಕೆಂದು ಆಜ್ಞಾಪಿಸಲ್ಪಟ್ಟಿದ್ದೇನೆ.
Yunus 10:105
ಮತ್ತು ಏಕಾಗ್ರಚಿತ್ತನಾಗಿ ನೀವು ನಿಮ್ಮ ಮುಖವನ್ನು ಧರ್ಮದೆಡೆಗೆ ಸ್ಥಿರವಾಗಿ ಕೇಂದ್ರೀಕರಿಸಬೇಕೆAದು ಹಾಗು ಬಹುದೇವಾರಾಧಕರಲ್ಲಿ ಸೇರಬೇಡಿರೆಂದು ನನಗೆ ಆಜ್ಞಾಪಿಸಲಾಗಿದೆ.
Yunus 10:106
ಅಲ್ಲಾಹನ ಹೊರತು ನಿಮಗೆ ಯಾವುದೇ ಪ್ರಯೋಜನವನ್ನಾಗಲಿ ಮತ್ತು ಹಾನಿಯನ್ನಾಗಲಿ ಉಂಟುಮಾಡದ ವಸ್ತುಗಳನ್ನು ನೀವು ಪ್ರಾರ್ಥಿಸಬೇಡಿರಿ. ಹಾಗೇನಾದರೂ ಮಾಡಿದರೆ ಖಂಡಿತವಾಗಿಯೂ ನೀವು ಅಕ್ರಮಿಗಳಲ್ಲಾಗುವಿರಿ.
Yunus 10:107
ಅಲ್ಲಾಹನು ನಿಮಗೇನಾದರೂ ಸಂಕಷ್ಟಕ್ಕೆ ಗುರಿಪಡಿಸಿದರೆ ಅವನ ಹೊರತು ಅದನ್ನು ನೀಗಿಸುವವನಾರಿಲ್ಲ ಮತ್ತು ಅವನು ನಿಮಗೇನಾದರೂ ಒಳಿತನ್ನು ನೀಡಿದರೆ ಅವನ ಅನುಗ್ರಹವನ್ನು ತಡೆಯುವವನಾರಿಲ್ಲ. ಅವನು ಅದನ್ನು ತನ್ನ ದಾಸರ ಪೈಕಿ ತಾನಿಚ್ಛಿಸಿದವರಿಗೆ ತಲುಪಿಸುತ್ತಾನೆ ಮತ್ತು ಅವನು ಮಹಾ ಕ್ಷಮಾಶೀಲನೂ ಕರುಣಾನಿಧಿಯೂ ಆಗಿದ್ದಾನೆ.
Yunus 10:108
ಹೇಳಿರಿ. ಓ ಜನರೇ ನಿಮಗೆ ನಿಮ್ಮ ಪ್ರಭುವಿನ ಕಡೆಯಿಂದ ಸತ್ಯವು ಬಂದಿರುತ್ತದೆ ಆದುದರಿಂದ ಯಾರು ಸನ್ಮಾರ್ಗ ಪಡೆಯುವನೋ ಅವನು ತನ್ನ ಹಿತಕ್ಕಾಗಿಯೇ ಸನ್ಮಾರ್ಗ ಪಡೆಯುವನು ಮತ್ತು ಯಾರು ಮಾರ್ಗಭ್ರಷ್ಟನಾಗುವನೋ ಅದು ಅವನಿಗೆ ಹಾನಿಕಾರಕವಾಗಿರುತ್ತದೆ ಮತ್ತು ನಾನು ನಿಮ್ಮ ಮೇಲ್ವಿಚಾರಕನಲ್ಲ.
Yunus 10:109
ನೀವು ನಿಮ್ಮೆಡೆಗೆ ಅವತೀರ್ಣಗೊಳಿಸಲಾದ ಅಲ್ಲಾಹನ ಮಾರ್ಗದರ್ಶನವನ್ನು ಅನುಸರಿಸುತ್ತಿರಿ ಹಾಗೂ ಅಲ್ಲಾಹನು ತೀರ್ಮಾನ ಮಾಡುವವರೆಗೆ (ದುಷ್ಟರ ಪೀಡನೆಗಳಿಂದ) ಸಹನೆವಹಿಸಿರಿ. ಅವನು ನ್ಯಾಯಾಧಿಪತಿಗಳಲ್ಲಿ ಅತ್ತುö್ಯತ್ತಮನಾಗಿರುವನು.
Hud 11:1
ಅಲಿಫ್ ಲಾಮ್ ರಾ, ಇದೊಂದು ಉನ್ನತವಾದಂತಹ ಗ್ರಂಥ, ಇದರ ಸೂಕ್ತಿಗಳಲ್ಲಿ ಯುಕ್ತಿಯನ್ನು ತುಂಬಲಾಗಿದೆ ಅನಂತರ ಇವು ಸುಜ್ಞಾನಿಯು ಯುಕ್ತಿ ಪೂರ್ಣನು ಆದ ಅಲ್ಲಾಹನ ಕಡೆಯಿಂದ ಸ್ಪಷ್ಟವಾಗಿ ವಿವರಿಸಲ್ಪಟ್ಟಿವೆ.
Hud 11:2
ನೀವು ಅಲ್ಲಾಹನ ಹೊರತು ಇನ್ನಾರನ್ನೂ ಆರಾಧಿಸಬೇಡಿರಿ. ನಿಶ್ಚಯವಾಗಿಯು ನಾನು ನಿಮಗೆ ಅವನ ಕಡೆಯಿಂದ ಮುನ್ನೆಚ್ಚರಿಕೆ ನೀಡುವವನೂ ಶುಭವಾರ್ತೆ ಕೊಡುವವನು ಆಗಿದ್ದೇನೆ.
Hud 11:3
ನೀವು ನಿಮ್ಮ ಪ್ರಭುವಿನಿಂದ ನಿಮ್ಮ ಪಾಪಗಳ ಕ್ಷಮೆಯಾಚಿಸಿರಿ ಅನಂತರ ಪಶ್ಚಾತ್ತಾಪ ಪಟ್ಟು ಅವನೆಡೆಗೆ ಮರಳಿರಿ. ಅವನು ನಿಮಗೆ ನಿರ್ದಿಷ್ಟ ಅವಧಿಯವರೆಗೆ ಉತ್ತಮ ಜೀವನ ಅನುಕೂಲತೆಯನ್ನು ದಯಪಾಲಿಸುವನು ಮತ್ತು ಪ್ರತಿಯೊಬ್ಬ ಅಧಿಕ ಕರ್ಮಗಳುಳ್ಳವನಿಗೆ ಅವನು ಪ್ರತಿಫಲವನ್ನು ನೀಡುವನು. ಇನ್ನು ನೀವು ವಿಮುಖರಾದರೆ ನನಗೆ ನಿಮ್ಮ ಮೇಲೆ ಒಂದು ಮಹಾ ದಿನದ ಯಾತನೆಯ ಭಯವಿದೆ.
Hud 11:4
ನಿಮಗೆ ಅಲ್ಲಾಹನೆಡೆಗೇ ಮರಳಬೇಕಾಗಿದೆ ಮತ್ತು ಅವನು ಸರ್ವ ವಸ್ತುಗಳ ಮೇಲೆ ಸಾಮರ್ಥ್ಯ ಉಳ್ಳವನಾಗಿದ್ದಾನೆ.
Hud 11:5
ಎಚ್ಚರಿಕೆ ನಿಜವಾಗಿಯೂ ಅವರು ತಮ್ಮ ವಿದ್ವೇಷ ಹಾಗೂ ಸತ್ಯ ನಿಷೇಧವನ್ನು(ಅಲ್ಲಾಹನಿಂದ) ಮುಚ್ಚಿಡಲೆಂದು ತಮ್ಮ ಎದೆಗಳನ್ನು ಮುದುಡಿಕೊಳ್ಳುತ್ತಾರೆ. ತಿಳಿದುಕೊಳ್ಳಿರಿ! ಅವರು ತಮ್ಮ ಉಡುಪುಗಳಿಂದ ತಮ್ಮನ್ನು ಮುಚ್ಚಿಕೊಳ್ಳುವಾಗಲೂ ಅಲ್ಲಾಹನು ಅವರು ರಹಸ್ಯವಾಗಿಡುವುದನ್ನು ಬಹಿರಂಗಗೊಳಿಸುವುದನ್ನೂ ಅರಿಯುತ್ತಾನೆ. ಖಂಡಿತವಾಗಿಯೂ ಅವನು ಹೃದಯಾಂತರಾಳದಲ್ಲಿರುವುದನ್ನು ಚೆನ್ನಾಗಿ ಅರಿಯುತ್ತಾನೆ.
Hud 11:6
ಭೂಮಿಯಲ್ಲಿ ಚಲಿಸುತ್ತಿರುವ ಪ್ರತಿಯೊಂದು ಜೀವಿಯ ಜೀವನಾಧಾರವು ಅಲ್ಲಾಹನ ಹೊಣೆಯಲ್ಲಿದೆ ಮತ್ತು ಅವನು ಅವುಗಳ ಇಹದ ತಾತ್ಕಾಲಿಕ ಮತ್ತು ಪರದ ತಂಗುದಾಣವನ್ನು ಅರಿಯುತ್ತಾನೆ. ಸಕಲವೂ ಒಂದು ಸ್ಪಷ್ಟ ಗ್ರಂಥದಲ್ಲಿ ದಾಖಲಿಸಲ್ಪಟ್ಟಿವೆ.
Hud 11:7
ಅವನೇ ಆಕಾಶಗಳನ್ನು ಭೂಮಿಯನ್ನು ಆರು ದಿನಗಳಲ್ಲಿ ಸೃಷ್ಟಿಸಿದನು. ಅವನ ಸಿಂಹಾಸನವು ಜಲದ ಮೇಲಿತ್ತು, ಇದು ನಿಮ್ಮ ಪೈಕಿ ಅತ್ಯುತ್ತಮ ಕರ್ಮಗಳನ್ನು ಎಸಗುವವರು ಯಾರೆಂದು ನಿಮ್ಮನ್ನು ಪರೀಕ್ಷಿಸಲಿಕ್ಕಾಗಿದೆ, ನೀವು ಮರಣಾನಂತರ ಎಬ್ಬಿಸಲ್ಪಡುವಿರೆಂದು ಅವರೊಡನೆ ಹೇಳಿದರೆ ಖಂಡಿತವಾಗಿಯೂ ಇದು ಸ್ಪಷ್ಟ ಜಾದುವೇ ಆಗಿದೆ ಎಂದು ಸತ್ಯನಿಷೇಧಿಗಳು ಹೇಳುತ್ತಾರೆ.
Hud 11:8
ಒಂದು ನಿಶ್ಚಿತ ಅವಧಿಯವರೆಗೆ ಅವರಿಂದ ಯಾತನೆಯನ್ನು ನಾವು ತಡೆದು ಇರಿಸಿದಾಗ ಪರಿಹಾಸ್ಯವಾಗಿ ಯಾವ ವಸ್ತುವೂ ಅದನ್ನು ತಡೆ ಹಿಡಿಯಿತು ? ಎಂದು ಸತ್ಯನಿಷೇಧಿಗಳು ಕೇಳುತ್ತಾರೆ. ಜಾಗ್ರತೆ! ಅದು ಬಂದೆರಗುವ ದಿನದಂದು, ಯಾರಿಂದಲೂ ಅದನ್ನು ಸರಿಸಲಾಗದು, ಮತ್ತು ಅವರು ಪರಿಹಾಸ್ಯ ಮಾಡುತ್ತಿದ್ದ ವಸ್ತುವೇ ಅವರನ್ನು ಆವರಿಸಿಕೊಳ್ಳುವುದು.
Hud 11:9
ನಾವು ಮನುಷ್ಯನಿಗೆ ನಮ್ಮಿಂದ ಯಾವುದಾದರೂ ಕೃಪೆಯ ಸವಿಯನ್ನುಣಿಸಿ ಅನಂತರ ಅದನ್ನು ಅವನಿಂದ ಕಸಿದುಕೊಂಡರೆ ಖಂಡಿತವಾಗಿಯೂ ಅವನು ನಿರಾಶನು ಕೃತಘ್ನನೂ ಆಗಿಬಿಡುತ್ತಾನೆ.
Hud 11:10
ಮತ್ತು ಅವನಿಗೆ ಬಾಧಿಸಿದ ಸಂಕಷ್ಟದ ನಂತರ ನಾವು ಅವನಿಗೆ ಯಾವುದಾದರೂ ಸುಖಾನುಗ್ರಹದ ಸವಿಯನ್ನುಣಿಸಿದರೆ ನನ್ನಿಂದ ಕೆಡುಕುಗಳು ತೊಲಗಿದವು ಎಂದು ಅವನು ಹೇಳತೊಡಗುತ್ತಾನೆ. ನಿಜವಾಗಿಯೂ ಅವನು ಹರ್ಷಿತನೂ, ಅಹಂಕಾರಿಯೂ ಆಗಿಬಿಡುತ್ತಾನೆ.
Hud 11:11
ಆದರೆ ಸಹನೆ ವಹಿಸಿ ಸತ್ಕರ್ಮಗಳನ್ನು ಕೈಗೊಂಡವರ ಹೊರತು. ಅವರಿಗೆ ಕ್ಷಮೆ ಮತ್ತು ಅತ್ಯುತ್ತಮ ಪ್ರತಿಫಲವಿದೆ.
Hud 11:12
ಈ ವ್ಯಕ್ತಿಯ (ಪೈಗಂಬರ್) ಮೇಲೆ ನಿಧಿಯೊಂದು ಏಕೆ ಇಳಿಸಲಾಗಿಲ್ಲ ? ಅಥವ ಅವನ ಜೊತೆ ದೇವಚರನೋರ್ವನು ಏಕೆ ಬರಲಿಲ್ಲ? ಎಂದು ನಿಮ್ಮ ಬಗ್ಗೆ ಅವರಾಡುವ ಮಾತುಗಳಿಂದಾಗಿ ನಿಮ್ಮೆಡೆಗೆ ಅವತೀರ್ಣವಾಗುತ್ತಿರುವುದರಲ್ಲಿ ಕೆಲವೊಂದು ಭಾಗವನ್ನು ನೀವು ತೊರೆದು ಬಿಡಬಹುದು. ಮತ್ತು ನಿಮ್ಮ ಮನಸ್ಸು ಸಂಕುಚಿತಗೊಳ್ಳಬಹುದು. ನೀವಂತೂ ಕೇವಲ ಒಬ್ಬ ಮುನ್ನೆಚ್ಚರಿಕೆ ನೀಡುವವರಾಗಿದ್ದೀರಿ ಮತ್ತು ಅಲ್ಲಾಹನು ಸಕಲ ವಸ್ತುಗಳ ಮೇಲ್ವಿಚಾರಕನಾಗಿರುವನು.
Hud 11:13
ಅಥವಾ ಈ ಸತ್ಯನಿಷೇಧಿಗಳು ಕುರ್‌ಆನನ್ನು ಸ್ವತಃ ಪೈಗಂಬರರು ರಚಿಸಿರುತ್ತಾರೆ ಎಂದು ಆರೋಪಿಸುವರೇ ? ನೀವು ಉತ್ತರಿಸಿರಿ : ಹಾಗಿದ್ದರೆ ನೀವು ಅದರಲ್ಲಿರುವಂತಹ ಹತ್ತು ಅಧ್ಯಾಯಗಳನ್ನು ರಚಿಸಿ ತನ್ನಿರಿ ಮತ್ತು ಅಲ್ಲಾಹನ ಹೊರತು ನಿಮಗೆ ಸಹಾಯಕ್ಕಾಗಿ ಕರೆಯಲು ಸಾಧ್ಯವಿದ್ದವರನೆಲ್ಲ ಕರೆದುಕೊಳ್ಳಿರಿ, ನೀವು ಸತ್ಯವಂತರಾಗಿದ್ದರೆ.
Hud 11:14
ಇನ್ನು ಅವರು ನಿಮಗೆ ಉತ್ತರ ನೀಡದಿದ್ದರೆ ಖಂಡಿತವಾಗಿಯೂ ಈ ಕುರ್‌ಆನ್ ಅಲ್ಲಾಹನ ಜ್ಞಾನದಿಂದಲೇ ಅವತೀರ್ಣವಾಗಿದೆಯೆಂದು ಮತ್ತು ಅಲ್ಲಾಹನ ಹೊರತು ಇನ್ಯಾರು ಆರಾಧ್ಯರಿಲ್ಲವೆಂದು ನೀವು ಅರಿತುಕೊಳ್ಳಿರಿ. ಇನ್ನಾದರೂ ನೀವು ಅಲ್ಲಾಹನಿಗೆ ಶರಣಾಗತರಾಗುವಿರಾ ?
Hud 11:15
ಯಾರು ಐಹಿಕ ಜೀವನ ಮತ್ತು ಅದರ ವೈಭವವನ್ನು ಬಯಸುತ್ತಾರೋ ನಾವು ಅವರ ಕರ್ಮಗಳ ಪ್ರತಿಫಲವನ್ನು ಇಲ್ಲೇ ಸಂಪೂರ್ಣವಾಗಿ ನೀಡುವೆವು ಮತ್ತು ಅವರಿಗೆ ಅದರಲ್ಲಿ ಸ್ವಲ್ಪವೂ ಕಡಿಮೆ ಮಾಡಲಾಗುವುದಿಲ್ಲ.
Hud 11:16
ಇಂಥವರಿಗೆ ಪರಲೋಕದಲ್ಲಿ ನರಕವಲ್ಲದೆ ಇನ್ನೇನೂ ಇಲ್ಲ . ಇವರು (ಸತ್ಯನಿಷೇಧಿಗಳು) ಇಲ್ಲಿ ಮಾಡಿದ್ದೆಲ್ಲವೂ ವ್ಯರ್ಥವಾಗಿಬಿಟ್ಟಿತ್ತು. ಮತ್ತು ಅವರ ಕರ್ಮಗಳೆಲ್ಲವೂ ನಿರರ್ಥಕವಾದವು.
Hud 11:17
ಒಬ್ಬ ವ್ಯಕ್ತಿಯು ತನ್ನ ಪ್ರಭುವಿನ ಕಡೆಯಿಂದ ಒಂದು ಸ್ಪಷ್ಟ ಆಧಾರದೊಂದಿಗೆ ಇದ್ದು ಅವನ ಜೊತೆಗೆ ಅಲ್ಲಾಹನ ಕಡೆಯ ಒಂದು ಸಾಕ್ಷಿಯೂ ಬಂದಿದ್ದು ಮತ್ತು ಇದಕ್ಕೆ ಮುಂಚೆ ಮೂಸಾರವರ ಗ್ರಂಥ ಮಾರ್ಗದರ್ಶಕವಾಗಿಯೂ, ಕೃಪೆಯಾಗಿಯೂ ಆಗಿರುವಾಗ (ಇಂತಹ ವ್ಯಕ್ತಿ ಮಿಥ್ಯವಾದಿಯಾಗಲು ಸಾಧ್ಯವೇ ?) ಇವರೇ ಇದರಲ್ಲಿ ವಿಶ್ವಾಸವಿಡುತ್ತಾರೆ ಮತ್ತು ಆ ಗುಂಪುಗಳ ಪೈಕಿ ಇದರಲ್ಲಿ ನಿಷೇಧ ತಾಳುವ ಯಾರೇ ಆಗಲಿ ಅವರ ಅಂತಿಮ ವಾಗ್ದತ್ತ ನೆಲೆಯು ನರಕವಾಗಿರುತ್ತದೆ. ಇನ್ನು ನೀವು ಇದರಲ್ಲಿ (ಕುರ್‌ಆನಿನಲ್ಲಿ) ಯಾವುದೇ ಸಂದೇಹಕ್ಕೆ ಒಳಗಾಗದಿರಿ. ನಿಶ್ಚಯವಾಗಿಯೂ ಇದು ನಿಮ್ಮ ಪ್ರಭುವಿನ ಕಡೆಯ ಸತ್ಯವಾಗಿದೆ. ಆದರೆ ಹೆಚ್ಚಿನ ಜನರು ವಿಶ್ವಾಸವಿರಿಸುವುದಿಲ್ಲ.
Hud 11:18
ಮತ್ತು ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸಿದವರಿಗಿಂತ ದೊಡ್ಡ ಅಕ್ರಮಿ ಇನ್ನಾರಿದ್ದಾನೆ? ಅವರು ತಮ್ಮ ಪ್ರಭುವಿನ ಮುಂದೆ ಹಾಜರುಪಡಿಸಲಾಗುವರು ಮತ್ತು ಸಾಕ್ಷಿಗಳು (ದೂತರು) ಹೇಳುವರು, ಇವರೇ ತಮ್ಮ ಪ್ರಭುವಿನ ಮೇಲೆ ಸುಳ್ಳು ಹೇಳಿದವರು. ಜಾಗ್ರತೆ! ಅಕ್ರಮಿಗಳ ಮೇಲೆ ಅಲ್ಲಾಹನ ಶಾಪವಿದೆ.
Hud 11:19
ಇಂತಹವರೇ ಅಲ್ಲಾಹನ ಮಾರ್ಗದಿಂದ ತಡೆಯುತ್ತಾರೆ ಮತ್ತು ಅದರಲ್ಲಿ ವಕ್ರತೆಯನ್ನು ಹುಡುಕುತ್ತಾರೆ. ಇವರೇ ಪರಲೋಕದ ನಿಷೇಧಿಗಳಾಗಿದ್ದಾರೆ.
Hud 11:20
ಅವರು ಭೂಮಿಯಲ್ಲಿ ಅಲ್ಲಾಹನನ್ನು ಸೋಲಿಸಲಾರರು ಮತ್ತು ಅಲ್ಲಾಹನ ಹೊರತು ಅವರಿಗೆ ರಕ್ಷಕ ಮಿತ್ರರೂ ಇರಲಾರರು. ಅವರಿಗೆ ಶಿಕ್ಷೆಯು ಇಮ್ಮಡಿಗೊಳಿಸಲಾಗುವುದು ಅವರು ಸತ್ಯವನ್ನು ಕೇಳುವ ಮತ್ತು ನೋಡುವ ಸಾಮರ್ಥ್ಯವನ್ನು ಹೊಂದಿರಲಿಲ್ಲ.
Hud 11:21
ತಮ್ಮನ್ನು ತಾವೇ ನಷ್ಟಕ್ಕೆ ಗುರಿಪಡಿಸಿಕೊಂಡವರು ಅವರೇ ಆಗಿದ್ದಾರೆ, ಮತ್ತು ಅವರು ಸುಳ್ಳು ಸೃಷ್ಟಿಸಿದ್ದ (ಆರಾಧ್ಯರೂ) ಎಲ್ಲವೂ ಅವರಿಂದ ಕಣ್ಮರೆಯಾಗಿ ಬಿಟ್ಟಿತ್ತು.
Hud 11:22
ನಿಸ್ಸಂಶಯವಾಗಿಯೂ ಅವರೇ ಪರಲೋಕದಲ್ಲಿ ಅತ್ಯಂತ ನಷ್ಟ ಹೊಂದಿದವರಾಗಿರುತ್ತಾರೆ.
Hud 11:23
ನಿಶ್ಚಯವಾಗಿಯೂ ಯಾರು ಸತ್ಯ ವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕೈಗೊಂಡು ತಮ್ಮ ಪ್ರಭುವಿನೆಡೆಗೆ ಧೈನ್ಯರಾಗುತ್ತಾರೆ ಅವರೇ ಸ್ವರ್ಗವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿರುವರು.
Hud 11:24
ಸತ್ಯವಿಶ್ವಾಸಿ ಹಾಗೂ ಸತ್ಯನಿಷೇಧಿ ಎರಡು ಬಣಗಳ ಉಪಮೆಯು ಅಂಧನೂ, ಕಿವುಡನೂ ಆದ ಒಬ್ಬನಂತಿದೆ ಮತ್ತು ನೋಡುವವನೂ ಕೇಳುವವನೂ ಆದ ಇನ್ನೊಬ್ಬನಂತಿದೆ. ಈ ಉಪಮೆಯಲ್ಲಿ ಇಬ್ಬರೂ ಸರಿಸಮಾನರೇ? ಹಾಗಿದ್ದೂ ನೀವು ಉಪದೇಶ ಸ್ವೀಕರಿಸುವುದಿಲ್ಲವೇ ?
Hud 11:25
ನಿಶ್ಚಯವಾಗಿಯೂ ನಾವು ನೂಹ್‌ರವರನ್ನು ಅವರ ಜನಾಂಗದೆಡೆಗೆ ಸಂದೇಶವಾಹಕರಾಗಿ ಕಳುಹಿಸಿದೆವು. ನೂಹ್‌ರವರು ಹೇಳಿದರು: ನಿಶ್ಚಯವಾಗಿಯೂ ನಾನು ನಿಮಗೆ ಸ್ಪಷ್ಟ ಮುನ್ನೆಚ್ಚರಿಕೆ ನೀಡುವವನಾಗಿದ್ದೇನೆ.
Hud 11:26
ನೀವು ಅಲ್ಲಾಹನ ಹೊರತು ಇನ್ನಾರ ಆರಾಧನೆ ಮಾಡಬೇಡಿರಿ. ನಾನಂತೂ ನಿಮ್ಮ ಮೇಲೆ ಒಂದು ವೇದನಾಜನಕ ದಿನದ ಶಿಕ್ಷೆಯ ಬಗ್ಗೆ ಭಯಪಡುತ್ತೇನೆ.
Hud 11:27
ಆಗ ಅವರ ಜನಾಂಗದ ಸತ್ಯನಿಷೇಧಿಗಳಾದ ಮುಖಂಡರು ಉತ್ತರಿಸಿದರು : ನಾವಂತೂ ನಿಮ್ಮನ್ನು ನಮ್ಮಂತಿರುವ ಒಬ್ಬ ಮನುಷ್ಯನಾಗಿಯೇ ಕಾಣುತ್ತೇವೆ ಮತ್ತು ನಮ್ಮ ಜನಾಂಗದ ಕೀಳು ವರ್ಗದವರು ಮುಂದಾಲೋಚನೆಯಿಲ್ಲದೆ ನಿಮ್ಮನ್ನು ಅನುಸರಿಸುತ್ತಿರುವುದಾಗಿ ನಾವು ಕಾಣುತ್ತೇವೆ. ನಾವು ನಿಮ್ಮಲ್ಲಿ ನಮಗಿಂತ ಮಿಗಿಲಾದ ಯಾವ ಶ್ರೇಷ್ಟತೆಯನ್ನು ಕಾಣುತ್ತಿಲ್ಲ. ಮಾತ್ರವಲ್ಲ ನಾವು ನಿಮ್ಮನ್ನು ಸುಳ್ಳುಗಾರರೆಂದು ಭಾವಿಸುತ್ತೇವೆ.
Hud 11:28
ನೂಹ್‌ರವರು ಹೇಳಿದರು : ಓ ನನ್ನ ಜನಾಂಗದವರೇ ಸ್ವಲ್ಪ ಯೋಚಿಸಿರಿ ನಾನು ನನ್ನ ಪ್ರಭುವಿನ ಕಡೆಯಿಂದ ಒಂದು ಸ್ಪಷ್ಟ ಆಧಾರ ಪ್ರಮಾಣವನ್ನು ಹೊಂದಿದ್ದು ಮತ್ತು ಅವನು ತನ್ನ ಬಳಿಯ ಕೃಪೆಯನ್ನು(ಪ್ರವಾದಿತ್ವ) ನೀಡಿರುವನು. ಅದು ನಿಮಗೆ ಪರೋಕ್ಷವಾಗಿದೆ. ನೀವು ಅದನ್ನು ಇಷ್ಟಪಡದಿದ್ದರೂ ನಾನದನ್ನು ನಿಮ್ಮ ಮೇಲೆ ಬಲವಂತವಾಗಿ ಹೇರಿಬಿಡುತ್ತೇನೆಯೇ ?
Hud 11:29
ಓ ನನ್ನ ಜನಾಂಗದವರೇ ನಾನು ಇದಕ್ಕಾಗಿ ನಿಮ್ಮಿಂದ ಧನವನ್ನೇನೂ ಬೇಡುತ್ತಿಲ್ಲ, ನನ್ನ ಪ್ರತಿಫಲವಂತೂ ಕೇವಲ ಅಲ್ಲಾಹನ ಬಳಿಯಲ್ಲಿದೆ ಮತ್ತು ನಾನು ಸತ್ಯ ವಿಶ್ವಾಸಿಗಳನ್ನು ನನ್ನ ಬಳಿಯಿಂದ ದೂರಕ್ಕಟ್ಟುವುದೂ ಇಲ್ಲ. ಅವರಿಗೆ ತಮ್ಮ ಪ್ರಭುವನ್ನು ಭೇಟಿಯಾಗಲಿಕ್ಕಿದೆ, ಆದರೆ ನಾನು ನಿಮ್ಮನ್ನು ಅವಿವೇಕ ತೋರುತ್ತಿರುವುದಾಗಿ ಕಾಣುತ್ತಿದ್ದೇನೆ.
Hud 11:30
ಓ ನನ್ನ ಜನಾಂಗದವರೇ ನಾನವರನ್ನು (ಸತ್ಯವಿಶ್ವಾಸಿಗಳನ್ನು) ನನ್ನ ಬಳಿಯಿಂದ ದೂರಕ್ಕಟ್ಟಿದರೆ ಅಲ್ಲಾಹನ ಎದುರು ನನಗೆ ಸಹಾಯ ಮಾಡುವವರಾರು ? ಹಾಗಿದ್ದೂ ನೀವು ಯೋಚಿಸುವುದಿಲ್ಲವೇ?
Hud 11:31
ನಾನು ನನ್ನ ಬಳಿ ಅಲ್ಲಾಹನ ಭಂಡಾರಗಳಿವೆಯೆAದು, ನಾನು ಅಗೋಚರ ಜ್ಞಾನವನ್ನು ಹೊಂದಿದ್ದೇನೆAದು ಹೇಳುತ್ತಿಲ್ಲ. ನಾನೊಬ್ಬ ದೇವಚರನೆಂದೂ ಹೇಳುತ್ತಿಲ್ಲ, ಮತ್ತು ನಿಮ್ಮ ದೃಷ್ಟಿಗೆ ಕೀಳಾಗಿ ಕಾಣುತ್ತಿರುವವರಿಗೆ ಅಲ್ಲಾಹನು ಯಾವುದೇ ಒಳಿತನ್ನು ನೀಡಲಾರೆನೆಂದೂ ನಾನು ಹೇಳುತ್ತಿಲ್ಲ. ಅವರ ಮನಸ್ಸಿನಲ್ಲಿರುವುದನ್ನು ಅಲ್ಲಾಹನೇ ಚೆನ್ನಾಗಿ ಬಲ್ಲನು ನಾನೇನಾದರೂ ಅಂತಹ ಮಾತನ್ನು ಹೇಳಿದರೆ ಖಂಡಿತವಾಗಿಯೂ ನಾನು ಅಕ್ರಮಿಗಳಲ್ಲಾಗುವೆನು.
Hud 11:32
ಅವರ ಜನಾಂಗದವರು ಹೇಳಿದರು : " ಓ ನೂಹ್ ನೀನು ನಮ್ಮೊಂದಿಗೆ ವಾಗ್ವಾದವನ್ನು ಮಾಡಿರುವೆ ಮತ್ತು ತುಂಬಾ ವಾಗ್ವಾದ ಮಾಡಿರುವೆ. ಇನ್ನು ನಮಗೆ ಹೆದರಿಸುತ್ತಿರುವ ಯಾತನೆಯನ್ನು ನಮ್ಮಲ್ಲಿಗೆ ತಾ, ನೀನು ಸತ್ಯವಂತರಲ್ಲಾಗಿದ್ದರೆ,
Hud 11:33
ನೂಹ್‌ರವರು ಉತ್ತರಿಸಿದರು : ಅಲ್ಲಾಹನಿಚ್ಛಿಸಿದರೆ ಅದನ್ನು ನಿಮ್ಮ ಮೇಲೆ ಎರಗಿಸುವನು. ಮತ್ತು ನೀವು ಅವನನ್ನು ಸೋಲಿಸಲಾರಿರಿ.
Hud 11:34
ಅಲ್ಲಾಹನು ನಿಮ್ಮ ಸತ್ಯ ನಿಷೇಧದಿಂದಾಗಿ ದಾರಿ ತಪ್ಪಿಸಲಿಚ್ಛಿಸಿರುವಾಗ ನಾನು ನಿಮ್ಮ ಹಿತಚಿಂತನೆ ಮಾಡಿದರು ನಿಮಗೆ ನನ್ನ ಹಿತೋಪದೇಶವು ಒಂದಿಷ್ಟೂ ಫಲ ನೀಡದು, ಅವನೇ ನಿಮ್ಮ ಪ್ರಭು ಆಗಿದ್ದಾನೆ ಮತ್ತು ಅವನೆಡೆಗೆ ಮರಳಿಸಲಾಗುವಿರಿ.
Hud 11:35
ಇದನ್ನು ಸ್ವಯಂ ಮುಹಮ್ಮದ್‌ರವರೇ ರಚಿಸಿದ್ದಾರೆಂದು ಅವರು ಆರೋಪಿಸುತ್ತಿದ್ದಾರೆಯೇ ? ಹೇಳಿರಿ ನಾನದನ್ನು ರಚಿಸಿದ್ದಾದರೆ ನನ್ನ ಅಪರಾಧವು ನನ್ನ ಮೇಲಿರುತ್ತದೆ, ಮತ್ತು ನೀವು ಎಸಗುತ್ತಿರುವ ಅಪರಾಧಗಳ ವಿಚಾರದಲ್ಲಿ ನಾನು ಹೊಣೆ ಮುಕ್ತನಾಗಿದ್ದೇನೆ.
Hud 11:36
ಮತ್ತು ನೂಹ್‌ರೆಡೆಗೆ ದಿವ್ಯವಾಣಿ ಮಾಡಲಾಯಿತು; ನಿಮ್ಮ ಜನಾಂಗದಿAದ ಈಗಾಗಲೇ ವಿಶ್ವಾಸ ಸ್ವೀಕರಿಸಿದವರ ಹೊರತು ಇನ್ನಾರೂ ಎಂದಿಗೂ ವಿಶ್ವಾಸವಿರಿಸುವುದಿಲ್ಲ. ಆದ್ದರಿಂದ ನೀವು ಅವರ ಕರ್ಮಗಳ ಕುರಿತು ದುಃಖಿಸಬೇಡಿ.
Hud 11:37
ಮತ್ತು ನಮ್ಮ ಕಣ್ಣೆದುರು ನಮ್ಮ ಮಾರ್ಗದರ್ಶನದ ಪ್ರಕಾರ ನೀವು ಹಡಗೊಂದನ್ನು ನಿರ್ಮಿಸಿರಿ. ಅಕ್ರಮವೆಸಗಿದವರ ಪರವಾಗಿ ನನ್ನೊಂದಿಗೆ ಮಾತನಾಡಬೇಡಿರಿ ಖಂಡಿತವಾಗಿಯೂ ಅವರು ಮುಳುಗಿಸಲ್ಪಡುವರು.
Hud 11:38
ಮತ್ತು ನೂಹ್‌ರವರು ಹಡಗನ್ನು ನಿರ್ಮಿಸತೊಡಗಿದರು. ಅವರ ಮುಂದಿನಿAದ ಅವರ ಜನಾಂಗದ ಪ್ರಮುಖರು ಹಾದು ಹೋಗುವಾಗಲೆಲ್ಲ ಅವರನ್ನು ಅಪಹಾಸ್ಯ ಮಾಡುತ್ತಿದ್ದರು. ನೂಹ್‌ರವರು ಹೇಳುತ್ತಿದ್ದರು: ನೀವು ನಮ್ಮ ಅಪಹಾಸ್ಯ ಮಾಡುತ್ತಿದ್ದರೆ ನಾವು ಸಹ, ನೀವು ಅಪಹಾಸ್ಯ ಮಾಡುತ್ತಿದ್ದಂತೆ ನಿಮ್ಮ ಅಪಹಾಸ್ಯ ಮಾಡಲಿದ್ದೇವೆ.
Hud 11:39
ಅಪಮಾನಕರ ಶಿಕ್ಷೆ ಯಾರಿಗಿದೆ ಎಂದು ಮತ್ತು ಯಾರ ಮೇಲೆ ಶಾಶ್ವತವಾದ ಯಾತನೆಯು ಎರಗಲಿದೆ ಎಂದೂ ಸಧ್ಯವೇ ನಿಮಗೆ ತಿಳಿದುಬರಲಿದೆ.
Hud 11:40
ಕೊನೆಗೆ ನಮ್ಮ ಆಜ್ಞೆಯು ಬಂದಿತು ತಂದೂರಿ ಒಲೆಯಿಂದ ನೀರು ಉಕ್ಕಿದಾಗ ನಾವೆಂದೆವು ಹಡಗಿನಲ್ಲಿ ನೀವು ಪ್ರತಿಯೊಂದು ಜೀವಿಗಳಿಂದ ಎರಡು ವರ್ಗಗಳನ್ನು ಹತ್ತಿಸಿಕೊಳ್ಳಿ. ಆದರೆ ಯಾರ ವಿರುದ್ಧ ಮೊದಲೇ ತೀರ್ಮಾನವಾಗಿದೆಯೋ ಅವರ ಹೊರತು, ನಿಮ್ಮ ಕುಟುಂಬದವರನ್ನೂ ಮತ್ತು ಸರ್ವ ವಿಶ್ವಾಸಿಗಳನ್ನೂ ಹತ್ತಿಸಿಕೊಳ್ಳಿ ಅವರ ಜೊತೆ ವಿಶ್ವಾಸವಿರಿಸಿದವರು ಅತ್ಯಲ್ಪ ಮಂದಿಯೇ ಇದ್ದರು.
Hud 11:41
ನೂಹ್‌ರವರು ಹೇಳಿದರು : ನೀವೆಲ್ಲರೂ ಆ ಹಡಗಿನಲ್ಲಿ ಕುಳಿತುಕೊಳ್ಳಿರಿ. ಅದರ ಚಲನೆ ಮತ್ತು ನಿಲುಗಡೆ ಅಲ್ಲಾಹನ ನಾಮದಿಂದಲೇ ಆಗಿದೆ. ವಾಸ್ತವದಲ್ಲಿ ನನ್ನ ಪ್ರಭು ಮಹಾ ಕ್ಷಮಾಶೀಲನೂ ಕರುಣಾನಿಧಿಯೂ ಆಗಿದ್ದಾನೆ.
Hud 11:42
ಆ ಹಡಗು ಅವರನ್ನು ಹೊತ್ತುಕೊಂಡು ಬೆಟ್ಟಗಳಂತಿರುವ ಅಲೆಗಳಲ್ಲಿ ಸಂಚರಿಸತೊಡಗಿತು. ನೂಹ್‌ರವರು ಒಂದು ತೀರದಲ್ಲಿದ್ದ ತನ್ನ ಮಗನನ್ನು ಕೂಗಿ ಕರೆದರು. ಓ ನನ್ನ ಪ್ರಿಯ ಮಗನೇ, ನೀನು ನಮ್ಮೊಂದಿಗೆ ಹತ್ತಿಬಿಡು ಹಾಗೂ ಸತ್ಯನಿಷೇಧಿಗಳೊಂದಿಗೆ ಸೇರದಿರು.
Hud 11:43
ಅವನು ಉತ್ತರಿಸಿದನು ನಾನು ಸದ್ಯದಲ್ಲೆ ಒಂದು ಪರ್ವತದ ಮೇಲೆ ಆಶ್ರಯ ಪಡೆಯುವೆನು. ಅದು ನನ್ನನ್ನು ನೀರಿನಿಂದ ರಕ್ಷಿಸುವುದು. ನೂಹ್‌ರವರು ಹೇಳಿದರು: ಇಂದು ಅಲ್ಲಾಹನ ಶಿಕ್ಷೆಯಿಂದ ರಕ್ಷಿಸುವವನಾರೂ ಇಲ್ಲ. ಅವನು ದಯೆ ತೋರಿದವರ ಹೊರತು. ಅಷ್ಟರಲ್ಲೇ ಅವರಿಬ್ಬರ ನಡುವೆ ಅಲೆಯೊಂದು ಅಡ್ಡವಾಯಿತು. ಅವನು ಮುಳುಗುವವರಲ್ಲಾದನು.
Hud 11:44
ಹೇಳಲಾಯಿತು : ಓ ಭೂಮಿಯೇ ನೀನು ನೀರನ್ನು ಹೀರಿಕೊ, ಓ ಆಕಾಶವೇ ನೀನು ಮಳೆಯನ್ನು ನಿಲ್ಲಿಸು. ನೀರು ಬತ್ತಿತು ಹಾಗೂ ಕಾರ್ಯವನ್ನು ಪೂರ್ಣ ಮಾಡಲಾಯಿತು. ಮತ್ತು ಹಡಗು 'ಜೂದಿ' ಬೆಟ್ಟದ ಮೇಲೆ ತಂಗಿತು. ನಂತರ ಅಕ್ರಮಿಗಳಾದ ಜನರಿಗೆ(ಅಲ್ಲಾಹನ ಕಾರುಣ್ಯದಿಂದ) ವಿದೂರತೆಯಿರಲಿ ಎಂದು ಹೇಳಲಾಯಿತು.
Hud 11:45
ಮತ್ತು ನೂಹ್‌ರವರು ತನ್ನ ಪ್ರಭುವನ್ನು ಕರೆದು ಪ್ರಾರ್ಥಿಸಿದರು ನನ್ನ ಪ್ರಭುವೇ ನನ್ನ ಮಗನು ನನ್ನ ಕುಟುಂಬದವರಲ್ಲಾಗಿರುವನು ಮತ್ತು ನಿಶ್ಚಯವಾಗಿಯೂ ನಿನ್ನ ವಾಗ್ದಾನವು ಸತ್ಯವಾಗಿದೆ. ನೀನಂತೂ ಸರ್ವ ನ್ಯಾಯಾಧಿಪತಿಗಳಿಗಿಂತ ಉತ್ತಮ ನ್ಯಾಯಾಧಿಪತಿ ಆಗಿರುವೆ.
Hud 11:46
ಅಲ್ಲಾಹನು ಉತ್ತರಿಸಿದನು : ಓ ನೂಹ್ ನಿಶ್ಚಯವಾಗಿಯೂ ಅವನು ನಿಮ್ಮ ಕುಟುಂಬದವನಲ್ಲ. ಏಕೆಂದರೆ ಅವನ ಕೃತ್ಯವು ಅತ್ಯಂತ ಅಯೋಗ್ಯವಾಗಿದೆ. ಆದ್ದರಿಂದ ನಿಮಗೆ ಅರಿವಿಲ್ಲದಂತಹ ವಿಷಯದಲ್ಲಿ ನೀವು ನನ್ನಲ್ಲಿ ಬೇಡಬಾರದು. ನೀವು ಅವಿವೇಕಿಗಳಾಗಬಾರದು ಎಂದು ನಾನು ನಿಮಗೆ ಉಪದೇಶ ಮಾಡುತ್ತಿದ್ದೇನೆ.
Hud 11:47
ನೂಹ್‌ರವರು ಹೇಳಿದರು ನನ್ನ ಪ್ರಭುವೇ ನನಗೆ ಅರಿವಿಲ್ಲದಂತಹ ವಿಷಯದಲ್ಲಿ ನಿನ್ನಲ್ಲಿ ಬೇಡುವುದರಿಂದ ನಾನು ನಿನ್ನ ಅಭಯ ಯಾಚಿಸುತ್ತೇನೆ ಮತ್ತು ನೀನು ನನಗೆ ಕ್ಷಮಿಸದಿದ್ದರೆ ಹಾಗೂ ನನ್ನ ಮೇಲೆ ಕರುಣೆ ತೋರದಿದ್ದರೆ ನಾನು ನಷ್ಟ ಹೊಂದಿದವರಲ್ಲಾಗುವೆನು.
Hud 11:48
ಹೇಳಲಾಯಿತು ಓ ನೂಹ್ ನಿಮ್ಮ ಮೇಲೆ ಮತ್ತು ನಿಮ್ಮೊಂದಿಗೆ ಇರುವ ಸಮುದಾಯಗಳ ಮೇಲೆ ನನ್ನ ಶಾಂತಿ ಮತ್ತು ಸಮೃದ್ಧಿಯೊಂದಿಗೆ ಇಳಿದು ಬಿಡಿ. ಮತ್ತು ಕೆಲವು ಸಮುದಾಯಗಳಿಗೆ ನಾವು ಸುಖಭೋಗಗಳನ್ನು ನೀಡುವೆವು. ಅನಂತರ(ಅವರ ಸತ್ಯ ನಿಷೇಧದ ಹಾಗೂ ಪಾಪಗಳ ನಿಮಿತ್ತ) ನಮ್ಮ ಕಡೆಯಿಂದ ಅವರಿಗೆ ವೇದನಾಜನಕ ಯಾತನೆಯು ತಟ್ಟುವುದು.
Hud 11:49
ಓ ಮುಹಮ್ಮದರೇ ಇವು ನಿಮಗೆ ದಿವ್ಯ ವಾಣಿಯ ಮೂಲಕ ತಿಳಿಸಿಕೊಡುತ್ತಿರುವ ಅಗೋಚರ ಸುದ್ದಿಗಳಾಗಿವೆ ಇದಕ್ಕೆ ಮುಂಚೆ ಇವುಗಳನ್ನು ನೀವಾಗಲಿ ನಿಮ್ಮ ಜನಾಂಗವಾಗಲಿ ತಿಳಿದಿರಲಿಲ್ಲ. ಆದ್ದರಿಂದ ನೀವು ಸಹನೆ ವಹಿಸಿರಿ. ಏಕೆಂದರೆ ಉತ್ತಮ ಪರಿಣಾಮವು ಭಯ-ಭಕ್ತಿ ಉಳ್ಳವರಿಗಾಗಿದೆ.
Hud 11:50
ಆದ್ ಜನಾಂಗದವರೆಡೆಗೆ ನಾವು ಅವರ ಸಹೋದರ ಹೂದ್‌ರವರನ್ನು ಕಳುಹಿಸಿದೆವು ಅವರು ಹೇಳಿದರು: ಓ ನನ್ನ ಜನಾಂಗದವರೇ ನೀವು ಅಲ್ಲಾಹನನ್ನು ಆರಾಧಿಸಿರಿ ಅವನ ಹೊರತು ಇನ್ಯಾವ ಆರಾಧ್ಯನೂ ನಿಮಗಿಲ್ಲ. ನೀವು (ಉಪದೇವರುಗಳನ್ನು ಸೇರಿಸಿ) ಕೇವಲ ಸುಳ್ಳು ಸೃಷ್ಟಿಸುತ್ತಿರುವಿರಿ.
Hud 11:51
ಓ ನನ್ನ ಜನಾಂಗದವರೇ ನಾನು ನಿಮ್ಮಲ್ಲಿ ಇದಕ್ಕಾಗಿ ಯಾವುದೇ ಪ್ರತಿಫಲವನ್ನು ಕೇಳುತ್ತಿಲ್ಲ. ನನ್ನ ಪ್ರತಿಫಲವಂತೂ ನನ್ನನ್ನು ಸೃಷ್ಟಿಸಿದವನ ಹೊಣೆಯಲ್ಲಿದೆ. ಹಾಗಿದ್ದು ನೀವು ಬುದ್ಧಿ ಪ್ರಯೋಗಿಸುವುದಿಲ್ಲವೇ ?.
Hud 11:52
ಓ ನನ್ನ ಜನಾಂಗದವರೇ ನೀವು ನಿಮ್ಮ ಪ್ರಭುವಿನೊಡನೆ ಕ್ಷಮೆಯಾಚಿಸಿರಿ ಮತ್ತು ಅವನೆಡೆಗೆ ಪಶ್ಚಾತ್ತಾಪ ಪಟ್ಟು ಮರಳಿರಿ. ಅವನು ನಿಮ್ಮ ಮೇಲೆ ಆಕಾಶದಿಂದ ಧಾರಾಕಾರವಾಗಿ ಮಳೆ ಸುರಿಸುವನು ಮತ್ತು ನಿಮ್ಮ ಶಕ್ತಿಯೊಂದಿಗೆ ಇನ್ನಷ್ಟು ಶಕ್ತಿಯನ್ನು ಹೆಚ್ಚಿಸುವನು ಮತ್ತು ನೀವು ಅಪರಾಧವೆಸಗುತ್ತಾ ವಿಮುಖರಾಗಬೇಡಿರಿ.
Hud 11:53
ಅವರು ಹೇಳಿದರು ಓ ಹೂದ್! ನೀವು ನಮ್ಮ ಬಳಿಗೆ ಯಾವುದೇ ಸುಸ್ಪಷ್ಟ ದೃಷ್ಟಾಂತವನ್ನು ತಂದಿರುವುದಿಲ್ಲ, ಮತ್ತು ಕೇವಲ ನಿಮ್ಮ ಮಾತಿಗೆ ನಾವು ನಮ್ಮ ಆರಾಧ್ಯ ದೇವರುಗಳನ್ನು ಬಿಡುವವರಲ್ಲ, ಹಾಗೂ ನಾವು ನಿಮ್ಮ ಮೇಲೆ ವಿಶ್ವಾಸವಿರಿಸುವವರೂ ಅಲ್ಲ.
Hud 11:54
ಆದರೆ ನಾವಂತೂ ಹೇಳುವುದಿಷ್ಟೇ; ನಮ್ಮ ದೇವರುಗಳ ಪೈಕಿ ಯಾರದೋ ಶಾಪ ನಿಮ್ಮ ಮೇಲೆ ಬಿದ್ದಿದೆ, ಹೂದ್‌ರವರು ಉತ್ತರಿಸಿದರು ನಾನು ಅಲ್ಲಾಹನನ್ನು ಸಾಕ್ಷಿಯಾಗಿಸುತ್ತೇನೆ ಮತ್ತು ನೀವೂ ಸಹ ಸಾಕ್ಷಿಗಳಾಗಿರಿ; ಅಲ್ಲಾಹನ ಹೊರತು ನೀವು ನಿಶ್ಚಯಿಸುತ್ತಿರುವ ಎಲ್ಲಾ ಸಹಭಾಗಿ ದೇವರುಗಳಿಂದ ನಾನು ಸಂಬAಧ ಮುಕ್ತನಾಗಿದ್ದೇನೆ.
Hud 11:55
ಸರಿ ನೀವೆಲ್ಲರೂ ಸೇರಿ ನನ್ನ ವಿರುದ್ಧ ತಂತ್ರಗಳನ್ನು ಹೂಡಿರಿ ಮತ್ತು ನನಗೆ ಒಂದಿಷ್ಟು ಕಾಲಾವಕಾಶವನ್ನೂ ನೀಡಬೇಡಿರಿ.
Hud 11:56
ನಾನು ನನ್ನ ಪ್ರಭುವೂ ನಿಮ್ಮ ಪ್ರಭುವೂ ಆದ ಅಲ್ಲಾಹನ ಮೇಲೆ ಭರವಸೆ ಇಟ್ಟಿದ್ದೇನೆ. ಪ್ರತಿಯೊಂದು ಜೀವಿಯ ಮುಂದಲೆ ಅವನ ಕೈಯಲ್ಲಿದೆ. ನಿಶ್ಚಯವಾಗಿಯೂ ನನ್ನ ಪ್ರಭು ಋಜುವಾದ ಮಾರ್ಗದಲ್ಲಿದ್ದಾನೆ.
Hud 11:57
ಇನ್ನು ನೀವು ವಿಮುಖರಾಗುವುದಾದರೆ ನಾನು ಯಾವ ಸಂದೇಶವನ್ನು ಕೊಟ್ಟು ನಿಮ್ಮ ಬಳಿಗೆ ಕಳುಹಿಸಲ್ಪಟ್ಟಿರುವೆನೋ ಅದನ್ನು ನಿಮಗೆ ತಲುಪಿಸಿಕೊಟ್ಟಿರುವೆನು ಮತ್ತು ನನ್ನ ಪ್ರಭು ಇನ್ನೊಂದು ಜನಾಂಗವನ್ನು ನಿಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡುವನು. ಮತ್ತು ನೀವು ಅವನಿಗೆ ಯಾವ ಹಾನಿಯನ್ನೂ ಉಂಟು ಮಾಡಲಾರಿರಿ. ಖಂಡಿತವಾಗಿಯೂ ನನ್ನ ಪ್ರಭುವು ಎಲ್ಲಾ ವಸ್ತುಗಳ ಮೇಲೆ ಸಂರಕ್ಷಕನಾಗಿರುತ್ತಾನೆ.
Hud 11:58
ಮತ್ತು ನಮ್ಮ ಆಜ್ಞೆಯು (ಯಾತನೆ) ಬಂದಾಗ ನಾವು ಹೂದ್‌ರನ್ನೂ ಅವರ ವಿಶ್ವಾಸಿ ಸಂಗಡಿಗರನ್ನೂ ನಮ್ಮ ಕೃಪೆಯಿಂದ ರಕ್ಷಿಸಿದೆವು ಮತ್ತು ನಾವು ಅವರೆಲ್ಲರನ್ನು ಅತ್ತುö್ಯಗ್ರ ಯಾತನೆಯಿಂದ ಪಾರು ಗೊಳಿಸಿದೆವು.
Hud 11:59
ಇದುವೇ ಆದ್ ಜನಾಂಗ. ಇವರು ತಮ್ಮ ಪ್ರಭುವಿನ ದೃಷ್ಟಾಂತಗಳನ್ನು ನಿರಾಕರಿಸಿದರು ಮತ್ತು ಅವನ ಸಂದೇಶವಾಹಕರನ್ನು ಧಿಕ್ಕರಿಸಿದರು ಹಾಗೂ ಹಠಮಾರಿಯಾದ ಪ್ರತಿಯೊಬ್ಬ ವಿರೋಧಿಯ ಆಜ್ಞೆಗಳನ್ನು ಅನುಸರಿಸಿದರು.
Hud 11:60
ಕೊನೆಗೆ ಅವರನ್ನು ಇಹಲೋಕದಲ್ಲೂ ಪುನರುತ್ಥಾನದ ದಿನದಂದೂ ಶಾಪವು ಬೆನ್ನಟ್ಟುವಂತಾಯಿತು. ನೋಡಿರಿ ಆದ್ ಜನಾಂಗದವರು ತಮ್ಮ ಪ್ರಭುವನ್ನು ನಿರಾಕರಿಸಿದರು. ಎಚ್ಚರ! ಹೂದ್‌ರ ಜನಾಂಗವಾದ ಆದ್‌ಗೆ (ಕಾರುಣ್ಯದಿಂದ) ವಿದೂರತೆ ಇರಲಿ.
Hud 11:61
ಸಮೂದ್ ಜನಾಂಗದೆಡೆಗೆ ನಾವು ಅವರ ಸಹೋದರ ಸ್ವಾಲಿಹ್‌ರವರನ್ನು ಕಳುಹಿಸಿದೆವು. ಅವರು ಹೇಳಿದರು. ಓ ನನ್ನ ಜನಾಂಗದವರೇ, ನೀವು ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಬೇರಾವ ಆರಾಧ್ಯ ದೇವನಿಲ್ಲ. ಅವನೇ ನಿಮ್ಮನ್ನು ಭೂಮಿಯಿಂದ ಸೃಷ್ಟಿಸಿದನು ಮತ್ತು ಅವನೇ ಅದರಲ್ಲಿ ನಿಮ್ಮನ್ನು ನೆಲಗೊಳಿಸಿದನು ಆದ್ದರಿಂದ ನೀವು ಅವನಲ್ಲಿ ಕ್ಷಮೆಯಾಚಿಸಿರಿ. ಮತ್ತು ಅವನೆಡೆಗೆ ಪಶ್ಚಾತ್ತಾಪ ಪಟ್ಟು ಮರಳಿರಿ. ನಿಸ್ಸಂಶಯವಾಗಿಯೂ ನನ್ನ ಪ್ರಭುವು ಸಾಮಿಪ್ಯಸ್ಥನೂ ಕರೆಗೆ ಓಗೊಡುವವನೂ ಆಗಿದ್ದಾನೆ.
Hud 11:62
ಅವರು ಹೇಳಿದರು: ಓ ಸ್ವಾಲಿಹ್ ನಾವು ಇದಕ್ಕೆ ಮೊದಲು ನಮ್ಮಲ್ಲಿ ನೀನು ಒಬ್ಬ ಆಶಾಪೂರ್ಣ ವ್ಯಕ್ತಿಯಾಗಿದ್ದೀರಿ. ನೀವೀಗ ನಮ್ಮನ್ನು ನಮ್ಮ ಪೂರ್ವಿಕರು ಆರಾಧಿಸುತ್ತಿದ್ದ ಆರಾಧ್ಯರನ್ನು ಆರಾಧಿಸುವುದರಿಂದ ತಡೆಯುತ್ತಿರುವಿರಾ ? ಯಾವುದರ ಕಡೆಗೆ (ಏಕದೇವೋಪಾಸನೆ) ನೀವು ನಮ್ಮನ್ನು ಕರೆಯುತ್ತಿರುವಿರೋ ನಾವು ಅದರ ಕುರಿತು ಗಂಭೀರ ಸಂದೇಹದಲ್ಲಿದ್ದೇವೆ.
Hud 11:63
ಸ್ವಾಲಿಹ್ ಉತ್ತರಿಸಿದರು; ಓ ನನ್ನ ಜನಾಂಗದವರೇ, ನೀವು ಯೋಚಿಸಿದ್ದೀರಾ ನಾನು ನನ್ನ ಪ್ರಭುವಿನ ಕಡೆಯಿಂದ ಒಂದು ಸದೃಢ ಪ್ರಮಾಣದಲ್ಲಿದ್ದು ಹಾಗೂ ಅವನು ನನಗೆ ತನ್ನ ಕಡೆಯ ಕಾರುಣ್ಯವನ್ನು ನೀಡಿದ್ದಾನೆ, ಆ ಬಳಿಕ ನಾನು ಅಲ್ಲಾಹನನ್ನು ಧಿಕ್ಕರಿಸಿದರೆ ನನಗೆ ಅವನ ಹೊರತು ಸಹಾಯ ಮಾಡುವವನಾರಿದ್ದಾನೆ ? ನೀವು ನನ್ನ £ಷ್ಟ್ಟವಲ್ಲದೆ ಇನ್ನೇನನ್ನು ಹೆಚ್ಚಿಸುತ್ತಿಲ್ಲ.
Hud 11:64
ಓ ನನ್ನ ಜನಾಂಗದವರೇ ಇದೋ ಅಲ್ಲಾಹನ ಈ ಒಂಟೆಯು ನಿಮಗೊಂದು ದೃಷ್ಟಾಂತವಾಗಿದೆ. ಇನ್ನು ನೀವು ಅದನ್ನು ಅಲ್ಲಾಹನ ಭೂಮಿಯಲ್ಲಿ ಸ್ವತಂತ್ರವಾಗಿ ಮೇಯಲು ಬಿಡಿರಿ, ಮತ್ತು ಅದಕ್ಕೆ ಯಾವುದೇ ರೀತಿಯ ಹಾನಿಯನ್ನುಂಟು ಮಾಡಬೇಡಿರಿ. ಹಾಗೇನಾದರೂ ಆದರೆ ಅತಿ ಶೀಘ್ರ ಯಾತನೆಯು ನಿಮ್ಮನ್ನು ಹಿಡಿದುಕೊಳ್ಳುವುದು.
Hud 11:65
ಹಾಗಿದ್ದೂ ಅವರು ಆ ಒಂಟೆಯ ಕಾಲಿನ ಸ್ನಾಯುಗಳನ್ನು ಕತ್ತರಿಸಿಬಿಟ್ಟರು ಆಗ ಸ್ವಾಲಿಹ್ ಹೇಳಿದರು; ಇನ್ನು ನೀವು ನಿಮ್ಮ ಮನೆಗಳಲ್ಲಿ ಕೇವಲ ಮೂರು ದಿನಗಳವರೆಗೆ ಸುಖಭೋಗಗಳನ್ನು ಸವಿಯಿರಿ. ಇದು ಸುಳ್ಳಾಗದಂತಹ ವಾಗ್ದಾನವಾಗಿದೆ.
Hud 11:66
ಕೊನೆಗೆ ನಮ್ಮ ಯಾತನೆಯು ಬಂದಾಗ ನಾವು ಸ್ವಾಲಿಹ್‌ರವರನ್ನೂ ಅವರ ಮೇಲೆ ವಿಶ್ವಾಸವಿರಿಸಿದವರನ್ನೂ ನಮ್ಮ ಕೃಪೆಯಿಂದ ರಕ್ಷಿಸಿದೆವು ಮತ್ತು ಆ ದಿನದ ಅಪಮಾನದಿಂದ ಅವರನ್ನು ಕಾಪಾಡಿದೆವು. ನಿಜವಾಗಿಯೂ ನಿಮ್ಮ ಪ್ರಭು ಅತ್ಯಂತ ಬಲಿಷ್ಠನೂ, ಪ್ರಚಂಡನೂ ಆಗಿದ್ದಾನೆ,
Hud 11:67
ಮತ್ತು ಅಕ್ರಮಿಗಳನ್ನು ಘೋರ ಆರ್ಭಟವೊಂದು ಹಿಡಿದು ಬಿಟ್ಟಿತ್ತು. ಅನಂತರ ಅವರು ತಮ್ಮ ಮನೆಗಳಲ್ಲಿ ಆಧೋಮುಖಿಗಳಾಗಿ ಬಿದ್ದಿದ್ದರು.
Hud 11:68
ಅವರು ಅಲ್ಲಿ ಎಂದೂ ವಾಸಿಸಿಯೇ ಇಲ್ಲವೆಂಬAತೆ( ಅಳಿದು ಹೋದರು) ಜಾಗ್ರತೆ! ಸಮೂದ್ ಜನಾಂಗದವರು ತಮ್ಮ ಪ್ರಭುವನ್ನು ನಿಷೇಧಿಸಿದ್ದರು. ಅರಿತುಕೊಳ್ಳಿರಿ! ಸಮೂದ್‌ರÀವರ ಮೇಲೆ ಶಾಪವಿರಲಿ.
Hud 11:69
ನಮ್ಮ ಮಲಕಗಳು ಇಬ್ರಾಹೀಮ್‌ರವರ ಬಳಿಗೆ ಒಬ್ಬ ಪುತ್ರನ ಶುಭವಾರ್ತೆಯೊಂದಿಗೆ ಬಂದರು ಮತ್ತು 'ಸಲಾಂ' ಹೇಳಿದರು. ಅವರು ಸಹ 'ಸಲಾಂ' ಎಂದು ಉತ್ತರಿಸಿದರು. ಮತ್ತು ತಡಮಾಡದೆ ಹುರಿದ ಕರುವೊಂದನ್ನು ತಂದರು.
Hud 11:70
ಆದರೆ ಅವರ ಕೈಗಳು ಆಹಾರವನ್ನು ಮುಟ್ಟದಿರುವುದನ್ನು ಕಂಡಾಗ ಅವರ ಬಗ್ಗೆ ಅಪರಿಚಿತತೆಯು ಭಾಸವಾಗಿ ಒಳಗೊಳಗೆ ಅವರ ಕುರಿತು ಭಯಪಡಲಾರಂಭಿಸಿದರು. ಅವರೆಂದರು; ಭಯಪಡಬೇಡಿರಿ ನಾವು ಲೂತರ ಜನಾಂಗದೆಡೆಗೆ ಕಳುಹಿಸಲ್ಪಟ್ಟಿದ್ದೇವೆ.
Hud 11:71
ಸಮೀಪದಲ್ಲೇ ನಿಂತಿದ್ದ ಅವರ ಪತ್ನಿಯು ಇದನ್ನು ಕೇಳಿ ನಕ್ಕುಬಿಟ್ಟರು. ಆಗ ನಾವು ಅವರಿಗೆ ಇಸ್‌ಹಾಕರ(ಪುತ್ರನ) ಹಾಗೂ ಇಸ್‌ಹಾಕರ ನಂತರ ಯಾಕೂಬರ ಮೊಮ್ಮಗನ ಶುಭವಾರ್ತೆಯನ್ನು ನೀಡಿದೆವು.
Hud 11:72
ಅವರು ಹೇಳಿದರು ಅಯ್ಯೋ ನನ್ನ ಪಾಡೇ ನನಗೆ ಮಗು ಹುಟ್ಟುವುದಾದರೂ ಹೇಗೆ? ನಾನಂತೂ ಹಣ್ಣು ಮುದುಕಿ ಮತ್ತು ಈ ನನ್ನ ಪತಿಯೂ ಸಹ ವಯೋವೃದ್ಧರಾಗಿದ್ದಾರೆ! ನಿಜವಾಗಿಯೂ ಇದೊಂದು ಅದ್ಭುತ ಸಂಗತಿಯಾಗಿದೆ.
Hud 11:73
ಮಲಕ್‌ಗಳು ಹೇಳಿದರು; ಅಲ್ಲಾಹನ ವಿಧಿಯ ಬಗ್ಗೆ ನೀವು ಆಶ್ಚರ್ಯ ಪಡುತ್ತಿರುವಿರಾ ? ಮನೆಯವರೇ ನಿಮ್ಮ ಮೇಲೆ ಅಲ್ಲಾಹನ ಕೃಪೆಯು ಅವನ ಸಮೃದ್ಧಿಯೂ ಉಂಟಾಗಲಿ. ನಿಸ್ಸಂಶಯವಾಗಿಯೂ ಅಲ್ಲಾಹನು ಸ್ತುತ್ಯಾರ್ಹನು ಮಹಿಮಾವಂತನೂ ಆಗಿರುವನು.
Hud 11:74
ಇಬ್ರಾಹೀಮರಿಂದ ಭಯವು ದೂರವಾದಾಗ ಮತ್ತು ಅವರಿಗೆ ಶುಭವಾರ್ತೆಯು ಸಹ ತಲುಪಿದಾಗ ಅವರು ನಮ್ಮೊಂದಿಗೆ ಲೂತರÀ ಜನಾಂಗದ ಬಗ್ಗೆ ವಾಗ್ವಾದ ಮಾಡತೊಡಗಿದರು.
Hud 11:75
ನಿಜವಾಗಿಯೂ ಇಬ್ರಾಹೀಮ್ ಅತ್ಯಂತ ಸಹನಶೀಲರೂ ಸಹಾನುಭೂತಿಯುಳ್ಳವರು ಮತ್ತು ಅಲ್ಲಾಹನೆಡೆಗೆ ದೈನ್ಯರಾಗುವವರು ಆಗಿದ್ದರು.
Hud 11:76
ಓ ಇಬ್ರಾಹೀಮ್ ನೀವು ನಿಮ್ಮ ಈ ವಾಗ್ವಾದ ನಿಲ್ಲಿಸಿರಿ. ತಮ್ಮ ಪ್ರಭುವಿನ ಆದೇಶವು ಬಂದಾಯಿತು. ನಿಶ್ಚಯವಾಗಿಯೂ ಅವರ ಮೇಲೆ ತಡೆಯಲಾಗದಂತಹ ಯಾತನೆಯೊಂದು ಬರಲಿದೆ.
Hud 11:77
ನಮ್ಮ ದೂತರು ಲೂತ್‌ರವರ ಬಳಿಗೆ ಬಂದಾಗ ಅವರು ಅವರ ನಿಮಿತ್ತ ಮಹಾ ಸಂಕಟಕ್ಕೊಳಗಾದರು ಮತ್ತು ಅವರ ಮನಸ್ಸು ಸಂಕುಚಿತಗೊAಡಿತು ಮತ್ತು ಇಂದಿನ ದಿನ ಮಹಾ ಕಠಿಣ ದಿನವಾಗಿದೆ ಎಂದರು.
Hud 11:78
ಲೂತರ ಬಳಿ ಅವರ ಜನಾಂಗದವರು ಧಾವಿಸುತ್ತಾ ಬಂದರು ಅವರು ಮೊದಲೇ ನೀಚ ಕೃತ್ಯದಲ್ಲಿ ಮುಳುಗಿದವರಾಗಿದ್ದರು. ಲೂತ್‌ರು ಹೇಳಿದರು, ಓ ನನ್ನ ಜನಾಂಗದವರೇ ಇವರು ನನ್ನ ಹೆಣ್ಣುಮಕ್ಕಳು, ಇವರು ನಿಮಗೆ ಅತಿ ಪರಿಶುದ್ಧರಾಗಿದ್ದಾರೆ, ನೀವು ಅಲ್ಲಾಹನನ್ನು ಭಯಪಡಿರಿ, ಮತ್ತು ನನ್ನ ಅತಿಥಿಗಳ ವಿಷಯದಲ್ಲಿ ನನ್ನನ್ನು ಅವಮಾನಿಸಬೇಡಿರಿ. ನಿಮ್ಮಲ್ಲಿ ಸಜ್ಜನ ವ್ಯಕ್ತಿ ಯಾರೂ ಇಲ್ಲವೇ ?
Hud 11:79
ಅವರು ಉತ್ತರಿಸಿದರು; ನಿಮ್ಮ ಹೆಣ್ಣು ಮಕ್ಕಳಲ್ಲಿ ನಮಗೆ ಯಾವ ಆಸಕ್ತಿ ಇಲ್ಲವೆಂಬುದನ್ನು ನೀವು ಚೆನ್ನಾಗಿ ಅರಿತಿರುವಿರಿ ಮತ್ತು ನಾವು ಬಯಸುವುದೇನೆಂಬುವುದನ್ನೂ ನಿಮಗೆ ಚೆನ್ನಾಗಿ ತಿಳಿದಿದೆ.
Hud 11:80
ಲೂತ್‌ರು ಹೇಳಿದರು ನಿಮ್ಮ ವಿರುದ್ಧ ನನಗೆ ಶಕ್ತಿ ಇರುತ್ತಿದ್ದರೆ ಅಥವ ನಾನು ಯಾವುದಾದರೊಂದು ಬಲಿಷ್ಠ ಆಸರೆಯನ್ನು ಹೊಂದಿರುತ್ತಿದ್ದರೆ! (ಬಡಿದು ಓಡಿಸುತ್ತಿದ್ದೆ)
Hud 11:81
ಆಗ ದೇವಚರರು ಹೇಳಿದರು ಓ ಲೂತ್ ನಾವು ನಿಮ್ಮ ಪ್ರಭುವಿನ ದೂತರು. ಅವರು ನಿಮ್ಮಲ್ಲಿಗೆ ಎಂದು ತಲುಪಲಾರರು ಇನ್ನು ನೀವು ರಾತ್ರಿಯು ಒಂದಿಷ್ಟು ಉಳಿದಿರುವಾಗ ನಿಮ್ಮ ಕುಟುಂಬದವರನ್ನು ಕರೆದುಕೊಂಡು ಹೊರಟುಬಿಡಿ. ಆದರೆ ನಿಮ್ಮ ಪತ್ನಿಯ ಹೊರತು ನಿಮ್ಮಲ್ಲಿ ಯಾರು ತಿರುಗಿಯೂ ನೋಡದಿರಲಿ. ಏಕೆಂದರೆ ಅವರೆಲ್ಲರಿಗೂ ಬಾಧಿಸಲಿರುವಂತಹದ್ದು ಅವಳಿಗೂ ಬಾಧಿಸುವುದು, ನಿಶ್ಚಯವಾಗಿಯೂ ಅವರ ವಿನಾಶಕ್ಕಾಗಿ ನಿಶ್ಚಿತ ಸಮಯವು ಪ್ರಭಾತವಾಗಿದೆ. ಪ್ರಭಾತವು ಸಮೀಪವಿಲ್ಲವೇ ?
Hud 11:82
ನಂತರ ನಮ್ಮ ಆಜ್ಞೆಯು ಬಂದಾಗ ನಾವು ಈ ನಾಡನ್ನು ಬುಡಮೇಲು ಮಾಡಿಬಿಟ್ಟೆವು. ಮತ್ತು ಅವರ ಮೇಲೆ ಸುಡುಗಲ್ಲುಗಳನ್ನು ಎಡೆಬಿಡದೆ ಮಳೆಗರೆದವು.
Hud 11:83
ಅವು ನಿಮ್ಮ ಪ್ರಭುವಿನ ಕಡೆಯಿಂದ ಗುರುತು ಹಾಕಲಾಗದ ಕಲ್ಲುಗಳಾಗಿದ್ದವು ಮತ್ತು ಆ ನಾಡು ಈ ಅಕ್ರಮಿಗಳಿಂದ ದೂರವೇನೂ ಇಲ್ಲ.
Hud 11:84
ನಾವು ಮದ್‌ಯನ್‌ರವರ ಕಡೆಗೆ ಅವರ ಸಹೋದರ ಶುಐಬ್‌ರನ್ನು ಕಳುಹಿಸಿದೆವು. ಅವರು ಹೇಳಿದರು ಓ ನನ್ನ ಜನಾಂಗದವರೇ ನೀವು ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಬೇರೆ ಆರಾಧ್ಯನಿಲ್ಲ. ನೀವು ಅಳತೆ ಮತ್ತು ತೂಕದಲ್ಲಿ ಕಡಿಮೆ ಮಾಡದಿರಿ. ನಾನು ನಿಮ್ಮನ್ನು ಉತ್ತಮ ಸ್ಥಿತಿಯಲ್ಲಿರುವವರಾಗಿ ಕಾಣುತ್ತಿದ್ದೇನೆ, ಹಾಗೂ ನಾನು ನಿಮ್ಮ ಮೇಲೆ ಆವರಿಸುವಂತಹ ಒಂದು ಯಾತನೆಯ ದಿನದ ಬಗ್ಗೆ ಭಯಪಡುತ್ತೇನೆ.
Hud 11:85
ಮತ್ತು ಓ ನನ್ನ ಜನಾಂಗದವರೇ ನೀವು ನ್ಯಾಯೋಚಿತವಾಗಿ ಅಳತೆ ಮತ್ತು ತೂಕವನ್ನು ಪೂರ್ತಿ ಮಾಡಿರಿ. ಜನರಿಗೆ ಅವರ ವಸ್ತುಗಳನ್ನು ಕಡಿತಗೊಳಿಸದಿರಿ ಮತ್ತು ಭೂಮಿಯಲ್ಲಿ ಕ್ಷೆÆÃಭೆಯನ್ನು ಹರಡದಿರಿ.
Hud 11:86
ನೀವು ಸತ್ಯವಿಶ್ವಾಸಿಗಳಾಗಿದ್ದರೆ ಅಲ್ಲಾಹನು ನಿಮಗೆ ನೀಡಿದ ಉಳಿತಾಯವೇ ನಿಮ್ಮ ಪಾಲಿಗೆ ಅತ್ಯುತ್ತಮವಾಗಿರುತ್ತದೆ, ಮತ್ತು ನಾನು ನಿಮ್ಮ ಮೇಲೆ ಸಂರಕ್ಷಕನಲ್ಲ. (ಕಾವಲುಗಾರನಲ್ಲ)
Hud 11:87
ಅವರು ಉತ್ತರಿಸಿದರು; ಓ ಶುಐಬ್ ನಾವು ನಮ್ಮ ಪೂರ್ವಿಕರು ಆರಾಧಿಸುತ್ತಿದ್ದುದನ್ನು ಬಿಟ್ಟುಬಿಡಬೇಕೆಂದು ನಮ್ಮ ಸಂಪತ್ತುಗಳಲ್ಲಿ ನಮ್ಮ ಇಷ್ಟದ ಪ್ರಕಾರ ಬಳಸಬಾರದೆಂದು ನಿನ್ನ ನಮಾಜ್ ನಿನಗೆ ಆದೇಶಿಸುತ್ತದೆಯೇ ? ನೀನಂತೂ ಸಹನಶೀಲನೂ ಸನ್ಮಾರ್ಗಿಯೂ ಆಗಿಬಿಟ್ಟಿರುವೆ!
Hud 11:88
ಅವರಿಗೆ ಹೇಳಿದರು; ಓ ನನ್ನ ಜನಾಂಗದವರೇ ಯೋಚಿಸಿ ನೋಡಿರಿ ! ನಾನು ನನ್ನ ಪ್ರಭುವಿನ ಕಡೆಯ ಸುಸ್ಪಷ್ಟ ಪ್ರಮಾಣವನ್ನು ಹೊಂದಿದ್ದು ಹಾಗೂ ಅವನು ತನ್ನ ವತಿಯಿಂದ ನನಗೆ ಉತ್ತಮವಾದ ಜೀವನಾಧಾರವನ್ನು ಕರುಣಿಸಿರುತ್ತಾನೆ ಎಂದಾದರೆ, ನಿಮ್ಮನ್ನು ಒಂದು ಸಂಗತಿಯಿAದ ತಡೆದು ಸ್ವತಃ ನಾನೇ ಅದರಡೆಗೆ ವಾಲಿಬಿಡುವುದನ್ನು ನಾನು ಇಚ್ಚಿಸುವುದಿಲ್ಲ. ನನಗೆ ಸಾಧ್ಯವಾದಷ್ಟು ಸುಧಾರಣೆ ಮಾಡುವುದು ನನ್ನ ಉದ್ದೇಶವಾಗಿದೆ. ಮತ್ತು ಅಲ್ಲಾಹನ ಸಹಾಯದ ಹೊರತು ನನಗೆ ಯಾವ ಕಾರ್ಯದ ಸಾಮರ್ಥ್ಯವು ಇಲ್ಲ. ಅವನ ಮೇಲೆಯೇ ನನ್ನ ಭರವಸೆ ಇರುವುದು ಮತ್ತು ಅವನೆಡೆಗೇ ಪಶ್ಚಾತ್ತಾಪದಿಂದ ಮರಳುವೆನು.
Hud 11:89
ಮತ್ತು ಓ ನನ್ನ ಜನಾಂಗದವರೇ ನನ್ನೊಂದಿಗೆ ಇರುವ ನಿಮ್ಮ ವಿರೋಧವೂ ನೂಹ್‌ರ ಜನಾಂಗ, ಹೂದರ ಜನಾಂಗ, ಮತ್ತು ಸ್ವಾಲಿಹರ ಜನಾಂಗಕ್ಕೆ ಎರಗಿದಂತಹ ಶಿಕ್ಷೆಗಳು ನಿಮ್ಮ ಮೇಲೂ ಎರಗುವಂತಾಗಲು ಕಾರಣವಾಗದಿರಲಿ. ಹಾಗು ಲೂತರ ಜನಾಂಗವು ನಿಮ್ಮಿಂದ ಬಹಳ ದೂರವಿಲ್ಲ.
Hud 11:90
ನೀವು ನಿಮ್ಮ ಪ್ರಭುವಿನಲ್ಲಿ ಕ್ಷಮೆಯಾಚಿಸಿರಿ ಮತ್ತು ಅವನೆಡೆಗೆ ಪಶ್ಚಾತ್ತಾಪ ಪಟ್ಟು ಮರಳಿರಿ, ನಿಶ್ಚಯವಾಗಿಯೂ ನನ್ನ ಪ್ರಭುವು ಕರುಣಾನಿಧಿಯೂ, ಅತ್ಯಂತ ಒಲುಮೆಯವನೂ ಆಗಿದ್ದಾನೆ.
Hud 11:91
ಅವರು ಹೇಳಿದರು; ಶುಐಬ್ ನಿನ್ನ ಹೆಚ್ಚಿನ ಮಾತುಗಳು ನಮಗೆ ಅರ್ಥವೇ ಆಗುವುದಿಲ್ಲ. ಮತ್ತು ನಾವು ನಿಮ್ಮನ್ನು ನಮ್ಮ ಪೈಕಿ ದುರ್ಬಲನಾಗಿ ಕಾಣುತ್ತಿದ್ದೇವೆ, ನಿನ್ನ ವಂಶದವರ ಕಾಳಜಿ ಇಲ್ಲದಿರುತ್ತಿದ್ದರೆ ನಾವು ನಿನ್ನನ್ನು ಕಲ್ಲೆಸೆದು ಕೊಲ್ಲುತ್ತಿದ್ದೆವು ಮತ್ತು ನೀನು ನಮಗಿಂತ ಮಾನ್ಯನೇನೂ ಅಲ್ಲ.
Hud 11:92
ಶುಐಬರು ಉತ್ತರಿಸಿದರು ಓ ನನ್ನ ಜನಾಂಗದವರೇ ನನ್ನ ವಂಶದವರು ನಿಮಗೆ ಅಲ್ಲಾಹನಿಗಿಂತಲೂ ಹೆಚ್ಚು ಗೌರವಾರ್ಹರಾಗಿದ್ದಾರೆಯೇ? ನೀವು ಅಲ್ಲಾಹನನ್ನು ಹಿಂದೆ ತಳ್ಳಿಬಿಟ್ಟಿರಿ, ನಿಜವಾಗಿಯೂ ನನ್ನ ಪ್ರಭು ನೀವು ಮಾಡುತ್ತಿರುವುದನ್ನು ಆವರಿಸಿದ್ದಾನೆ.
Hud 11:93
ಮತ್ತು ನನ್ನ ಜನಾಂಗದವರೇ, ನಿಮ್ಮ ಕ್ರಮದಂತೆ ಕಾರ್ಯವೆಸಗಿರಿ, ನಾನು ಸಹ ಕಾರ್ಯವೆಸಗುತ್ತಿದೇನೆ, ಯಾರಿಗೆ ಅಪಮಾನಕರ ಯಾತನೆಯು ಬರಲಿದೆಯೆಂದು ಮತ್ತು ಸುಳ್ಳನಾರೆಂದು ಶೀಘ್ರವೇ ನಿಮಗೆ ಗೊತ್ತಾಗಲಿದೆ. ನೀವು ನಿರೀಕ್ಷಿಸಿರಿ. ನಾನು ಸಹ ನಿಮ್ಮ ಜೊತೆ ನಿರೀಕ್ಷಿಸುವವನಾಗಿದ್ದೇನೆ.
Hud 11:94
ಕೊನೆಗೆ ನಮ್ಮ ಆಜ್ಞೆಯು ಬಂದಾಗ ನಾವು ಶುಐಬರನ್ನೂ ಅವರೊಂದಿಗೆ ಸತ್ಯ ವಿಶ್ವಾಸವಿರಿಸಿದವರನ್ನೂ ನಮ್ಮ ಕೃಪೆಯಿಂದ ರಕ್ಷಿಸಿದೆವು ಮತ್ತು ಅಕ್ರಮವೆಸಗಿದವರಿಗೆ ಘೋರ ಆರ್ಭಟವೊಂದು ಹಿಡಿದುಬಿಟ್ಟಿತು ಮತ್ತು ಬೆಳಗಾದಾಗ ಅವರು ತಮ್ಮ ಮನೆಗಳಲ್ಲಿ ಅಧೋಮುಖಿಗಳಾಗಿ ಬಿದ್ದಿದ್ದರು.
Hud 11:95
ಅವರು ಆ ಮನೆಗಳಲ್ಲಿ ವಾಸಿಸಿಯೇ ಇಲ್ಲವೆಂಬAತೆ(ಅಳಿದು ಹೋದರು) ತಿಳಿದುಕೊಳ್ಳಿರಿ! ಸಮೂದ್ ಶಪಿಸಲ್ಪಪಟ್ಟಂತೆ ಮದ್‌ಯನ್ನರೂ ಶಪಿಸಲ್ಪಟ್ಟರು.
Hud 11:96
ನಿಶ್ಚಯವಾಗಿಯೂ ನಾವು ಮೂಸಾರನ್ನು ನಮ್ಮ ದೃಷ್ಟಾಂತಗಳೊAದಿಗೆ ಮತ್ತು ಸುವ್ಯಕ್ತ ಪುರಾವೆಯೊಂದಿಗೆ ಫಿರ್‌ಔನ್ ಮತ್ತು ಅವರ ಮುಖಂಡರೆಡೆಗೆ ಕಳುಹಿಸಿದ್ದೆವು,
Hud 11:97
ಆದರೆ ಅವರು ಫಿರ್‌ಔನನ ಆದೇಶವನ್ನು ಅನುಸರಿಸಿದರು ಮತ್ತು ಫಿರ್‌ಔನನ ಆದೇಶವು ಋಜುವಾಗಿರಲಿಲ್ಲ.
Hud 11:98
ಪುನರುತ್ಥಾನÀ ದಿನದಂದು ಅವನು ತನ್ನ ಜನಾಂಗದ ಮುಂದೆ ಮುಂದೆ ನಡೆದು ಅವರನ್ನು ನರಕದ ಕಡೆಗೆ ಕೊಂಡೊಯ್ಯುವನು. ಅವರನ್ನು ತಲುಪಿಸಲಾಗುವ ತಾಣವು ಅತಿ ನಿಕೃಷ್ಟವಾಗಿದೆ.
Hud 11:99
ಇಹಲೋಕದಲ್ಲಿ ಮತ್ತು ಪುನರುತ್ಥಾನÀ ದಿನದಂದು ಅವರನ್ನು ಶಾಪವು ಬೆನ್ನಟ್ಟುವಂತಾಯಿತು ಅವರಿಗೆ ನೀಡಲಾಗುವ ಪ್ರತಿಫಲವು ಅತ್ಯಂತ ಕೆಟ್ಟದ್ದಾಗಿದೆ.
Hud 11:100
ನಾವು ನಿಮಗೆ ವಿವರಿಸಿ ಕೊಡುತ್ತಿರುವ ಇವು ಕೆಲವು ನಾಡುಗಳ ಸುದ್ದಿಗಳಾಗಿವೆ ಇವುಗಳಲ್ಲಿ ಕೆಲವೊಂದು ನೆಲೆನಿಂತಿವೆ ಮತ್ತು ಕೆಲವು ನಾಶಗೊಂಡಿವೆ.
Hud 11:101
ನಾವು ಅವರ ಮೇಲೆ ಅಕ್ರಮವೆಸಗಲಿಲ್ಲ. ಆದರೆ ಸ್ವತಃ ಅವರು ತಾವೇ ತಮ್ಮ ಮೇಲೆ ಅಕ್ರಮವೆಸಗಿಕೊಂಡರು. ಮತ್ತು ನಿಮ್ಮ ಪ್ರಭುವಿನ ಆಜ್ಞೆಯು ಬಂದಾಗ ಅವರು ಅಲ್ಲಾಹನ ಹೊರತು ಕರೆದು ಬೇಡುತ್ತಿದ್ದಂತಹ ಅವರ ಆರಾಧ್ಯರು ಅವರಿಗೆ ಯಾವ ಪ್ರಯೋಜನವನ್ನು ನೀಡಲಿಲ್ಲ ಮತ್ತು ಅವರಿಗೆ ನಷ್ಟದ ಹೊರತು ಇನ್ನೇನನ್ನು ಹೆಚ್ಚಿಸಲಿಲ್ಲ.
Hud 11:102
ನಿಮ್ಮ ಪ್ರಭು ಅಕ್ರಮಿ ನಾಡುಗಳನ್ನು ಹಿಡಿದಾಗ ಅವನ ಹಿಡಿತವೂ ಹೀಗೆಯೇ ಇರುತ್ತದೆ ನಿಸ್ಸಂಶಯವಾಗಿಯೂ ಅವನ ಹಿಡಿತವೂ ವೇದನಾಜನಕವೂ ಅತ್ಯುಗ್ರವೂ ಆಗಿರುತ್ತದೆ.
Hud 11:103
ನಿಜವಾಗಿಯೂ ಪರಲೋಕದ ಶಿಕ್ಷೆಯ ಕುರಿತು ಭಯಪಡುವವರಿಗೆ ಇದರಲ್ಲಿ ದೃಷ್ಟಾಂತವಿದೆ. ಅದು ಸಕಲ ಜನರು ಒಟ್ಟುಗೂಡಿಸಲ್ಪಡುವ ಒಂದು ದಿನವಾಗಿದೆ. ಮತ್ತು ಅದು ಸರ್ವರು ಹಾಜರುಗೊಳಿಸಲ್ಪಡುವ ದಿನವಾಗಿದೆ.
Hud 11:104
ಒಂದು ನಿರ್ದಿಷ್ಟ ಕಾಲಾವಧಿಯ ಹೊರತು ನಾವದನ್ನು ಮುಂದೂಡುತ್ತಿಲ್ಲ.
Hud 11:105
ಅದು ಬರುವ ದಿನದಂದು ಯಾವ ವ್ಯಕ್ತಿಯು ಅಲ್ಲಾಹನ ಅನುಮತಿ ಇಲ್ಲದೆ ಮಾತನಾಡಲಾರ ಅಂದು ಅವರ ಪೈಕಿ ಕೆಲವರು ದುರ್ದೈವಿಗಳು ಮತ್ತು ಕೆಲವರು ಭಾಗ್ಯವಂತರು ಇರುವರು.
Hud 11:106
ದುರ್ದೈವಿಗಳು ನರಕಕ್ಕೆ ಹೋಗುವರು. ಅಲ್ಲವರು ಕಿರುಚುವರು ಮತ್ತು ಚೀರುವರು.
Hud 11:107
ಆಕಾಶಗಳು ಮತ್ತು ಭೂಮಿಯು ನೆಲೆನಿಂತಿರುವವರೆಗೂ ಅವರದರಲ್ಲಿ ಶಾಶ್ವತವಾಗಿರುವರು. ನಿಮ್ಮ ಪ್ರಭುವು ಇಚ್ಛಿಸುವುದರ ಹೊರತು. ನಿಶ್ಚಯವಾಗಿಯೂ ನಿಮ್ಮ ಪ್ರಭುವು ತಾನಿಚ್ಛಿಸಿದ್ದನ್ನು ಮಾಡುವವನಾಗಿರುತ್ತಾನೆ.
Hud 11:108
ಅದೃಷ್ಟವಂತರು ಸ್ವರ್ಗಕ್ಕೆ ಹೋಗುವರು. ಆಕಾಶಗಳು ಮತ್ತು ಭೂಮಿಯು ನೆಲೆನಿಂತಿರುವವರೆಗೂ ಅವರದರಲ್ಲಿ ಶಾಶ್ವತವಾಗಿರುವರು. ನಿಮ್ಮ ಪ್ರಭು ಇಚ್ಛಿರುವುದರ ಹೊರತು ಇದು ಕೊನೆಯಾಗದ ಅನಂತ ಪುರಸ್ಕಾರವಾಗಿದೆ.
Hud 11:109
ಆದ್ದರಿಂದ ನೀವು ಅವರು ಆರಾಧಿಸುತ್ತಿರುವವುಗಳ ಬಗ್ಗೆ ಸಂದೇಹಕ್ಕೆ ಒಳಗಾಗಬೇಡಿರಿ, ಮುಂಚೆ ಇವರ ಪೂರ್ವಿಕರು ಆರಾಧಿಸಿಕೊಂಡು ಬಂದAತೆ ಇವರು ಆರಾಧಿಸುತ್ತಿದ್ದಾರೆ. ಮತ್ತು ನಾವು ಅವರಿಗೆ ಅವರ ಪಾಲನ್ನು ಕಡಿತಗೊಳಿಸದೇ ಪರಿಪೂರ್ಣವಾಗಿ ನೀಡುವೆವು.
Hud 11:110
ನಿಶ್ಚಯವಾಗಿಯೂ ನಾವು ಮೂಸರವರಿಗೆ ಗ್ರಂಥವನ್ನು ನೀಡಿದೆವು. ಆನಂತರ ಅದರಲ್ಲಿ ಭಿನ್ನತೆಯನ್ನುಂಟು ಮಾಡಲಾಯಿತು ಮತ್ತು ನಿಮ್ಮ ಪ್ರಭುವಿನ ಕಡೆಯಿಂದ ವಚನವು ಮೊದಲೇ ನಿರ್ಧರಿಸಲಾಗದಿರುತ್ತಿದ್ದರೆ ಖಂಡಿತವಾಗಿಯೂ ಅವರ ನಡುವೆ ತೀರ್ಮಾನ ಮಾಡಿ ಬಿಡಲಾಗುತ್ತಿತ್ತು, ಅವರಿಗೆ ಇದರ ಕುರಿತು ಗಂಭೀರ ಸಂಶಯವಿದೆ.
Hud 11:111
ನಿಶ್ಚಯವಾಗಿಯೂ ಅವರ ಪೈಕಿ ಪ್ರತಿಯೊಬ್ಬರಿಗೂ ನಿಮ್ಮ ಪ್ರಭುವು ಅವರ ಕರ್ಮಗಳ ಪರಿಪೂರ್ಣ ಪ್ರತಿಫಲವನ್ನು ಕೊಟ್ಟೇತೀರುವನು ನಿಸ್ಸಂಶಯವಾಗಿಯೂ ಅವನು ಅವರು ಮಾಡುತ್ತಿರುವುದನ್ನೆಲ್ಲಾ ಸೂಕ್ಷ್ಮವಾಗಿ ಬಲ್ಲವನಾಗಿದ್ದಾನೆ.
Hud 11:112
ಆದ್ದರಿಂದ ನಿಮಗೆ ಆಜ್ಞಾಪಿಸಿದಂತೆಯೇ ನೀವು ಮತ್ತು ನಿಮ್ಮ ಜೊತೆ ಪಶ್ಚಾತ್ತಾಪ ಹೊಂದಿದವರು ಸನ್ಮಾರ್ಗದಲ್ಲಿ ಸ್ಥಿರವಾಗಿ ನಿಲ್ಲಿರಿ. ಮತ್ತು ಹದ್ದು ಮೀರದಿರಿ, ನಿಶ್ಚಯವಾಗಿ ಅಲ್ಲಾಹನು ನೀವು ಮಾಡುವುದನ್ನೆಲ್ಲಾ ನೋಡುವವನಾಗಿದ್ದಾನೆ.
Hud 11:113
ನೀವು ಅಕ್ರಮಿಗಳ ಕಡೆಗೆ ವಾಲಬೇಡಿರಿ, ಅನ್ಯಥಾ ನರಕಾಗ್ನಿಯು ನಿಮಗೂ ತಟ್ಟಿ ಬಿಡುವುದು ಮತ್ತು ಅಲ್ಲಾಹನ ಹೊರತು ನಿಮಗೆ ರಕ್ಷಕ ಮಿತ್ರರಾರು ಇರಲಾರರು. ಮತ್ತು ನಿಮಗೆ ಎಲ್ಲಿಂದಲೂ ಸಹಾಯ ದೊರಕದು.
Hud 11:114
ಹಗಲಿನ ಎರಡು ಕೊನೆಗÀಳಿಗೆ ಮತ್ತು ರಾತ್ರಿಯು ಸ್ವಲ್ಪ ಸಮಯ ಕಳೆದ ಬಳಿಕ ನಮಾಜ್ ಸಂಸ್ಥಾಪಿಸಿರಿ, ನಿಶ್ಚಯವಾಗಿಯೂ ಒಳಿತುಗಳು ಕೆಡುಕುಗಳನ್ನು ಹೋಗಲಾಡಿಸುತ್ತವೆ, ಸ್ಮರಿಸಿಕೊಳ್ಳುವವರಿಗೆ ಇದು ಉಪದೇಶವಾಗಿದೆ.
Hud 11:115
ನೀವು ಸಹನೆ ವಹಿಸುತ್ತಿರಿ. ನಿಶ್ಚಯವಾಗಿಯೂ ಅಲ್ಲಾಹನು ಸಜ್ಜನರ ಪ್ರತಿಫಲವನ್ನು ವ್ಯರ್ಥಗೊಳಿಸುವುದಿಲ್ಲ.
Hud 11:116
ಭೂಮಿಯಲ್ಲಿ ಕ್ಷೆÆÃಭೆಯಿಂದ ತಡೆಯುವ ಒಂದು ಜನ ವಿಭಾಗವು ನಿಮಗಿಂತ ಮುಂಚಿನ ತಲೆಮಾರುಗಳ ಪೈಕಿ ಏಕೆ ಉಂಟಾಗಲಿಲ್ಲ ? ಆದರೆ ಅವರ ಪೈಕಿ ನಾವು ರಕ್ಷಿಸಿದ ಅಲ್ಪ ಜನರ ಹೊರತು ಅಕ್ರಮಿಗಳಂತೂ ನಿಮಗೆ ನೀಡಲಾದ ಸುಖಾಡಂಬರುಗಳ ಹಿಂದೆಯೇ ಬಿದ್ದರು ಮತ್ತು ಅವರು ಅಪರಾಧಿಗಳಾಗಿದ್ದರು.
Hud 11:117
ನಾಡಿನ ನಿವಾಸಿಗಳು ಸುಧಾರಕರಾಗಿರುವಾಗ ನಿಮ್ಮ ಪ್ರಭು ಆ ನಾಡನ್ನು ಅನ್ಯಾಯವಾಗಿ ನಾಶಪಡಿಸುವವನಲ್ಲ.
Hud 11:118
ನಿಮ್ಮ ಪ್ರಭುವು ಇಚ್ಛಿಸಿರುತ್ತಿದ್ದರೆ ಜನರನ್ನು ಒಂದೇ ಸಮುದಾಯವನ್ನಾಗಿ ಮಾಡುತ್ತಿದ್ದನು ಆದರೆ ಅವರು ಭಿನ್ನತೆಯನ್ನುಂಟು ಮಾಡುವವರಾಗಿಯೇ ಮುಂದುವರಿಯುವರು.
Hud 11:119
ನಿಮ್ಮ ಪ್ರಭುವು ದಯೆ ತೋರಿದವರ ಹೊರತು, ಇದಕ್ಕೋಸ್ಕರವೇ ಅವನು ಅವರನ್ನು ಸೃಷ್ಟಿಸಿರುವನು ನಾನು ಯಕ್ಷ ಮತ್ತು ಮನುಷ್ಯರಿಂದ ನರಕವನ್ನು ತುಂಬಿಯೇ ತೀರುವೆನು ಎಂಬ ನಿಮ್ಮ ಪ್ರಭುವಿನ ಮಾತು ಪೂರ್ಣಗೊಂಡಿದೆ.
Hud 11:120
ಮತ್ತು ನಾವು ಸಂದೇಶವಾಹಕರ ಸುದ್ದಿಗಳಿಂದ ನಿಮ್ಮ ಹೃದಯಕ್ಕೆ ಬಲ ಪಡಿಸುವಂತಹ ಪ್ರತಿಯೊಂದು ಸುದ್ದಿಯನ್ನು ವಿವರಿಸಿಕೊಡುತ್ತಿದ್ದೇವೆ, ನಿಮ್ಮ ಬಳಿ ಈ ಅಧ್ಯಾಯದಲ್ಲಿ ಸತ್ಯವು ಬಂದಿರುತ್ತದೆ ಮತ್ತು ಇದು ಸತ್ಯ ವಿಶ್ವಾಸಿಗಳಿಗೆ ಸದುದ್ದೇಶವು ಮತ್ತು ಸ್ಮರಣೆಯು ಆಗಿರುತ್ತದೆ.
Hud 11:121
ಸತ್ಯ ವಿಶ್ವಾಸವನ್ನು ನಿರಾಕರಿಸಿದವರೊಡನೆ ಹೇಳಿರಿ : ನೀವು ನಿಮ್ಮ ಕ್ರಮದಂತೆ ಕಾರ್ಯವೆಸಗಿರಿ. ನಾವು ಸಹ ಕಾರ್ಯವೆಸಗುತ್ತಿದ್ದೇವೆ.
Hud 11:122
ಮತ್ತು ನೀವು (ಅಲ್ಲಾಹನ ಆದೇಶವನ್ನು) ನಿರೀಕ್ಷಿಸಿರಿ ಮತ್ತು ನಾವೂ ನಿರೀಕ್ಷಿಸುವೆವು.
Hud 11:123
ಆಕಾಶಗಳ ಹಾಗೂ ಭೂಮಿಯ ಅಗೋಚರ ಜ್ಞಾನವು ಅಲ್ಲಾಹನಿಗೆ ಮಾತ್ರವಿದೆ ಸಕಲ ಕಾರ್ಯಗಳು ಅವನೆಡೆಗೇ ಮರಳಿಸಲ್ಪಡುತ್ತವೆ, ಆದ್ದರಿಂದ ನೀವು ಅವನನ್ನೇ ಆರಾಧಿಸಿರಿ ಹಾಗೂ ಅವನ ಮೇಲೆಯೇ ಭರವಸೆಯನ್ನಿಡಿರಿ ಮತ್ತು ನೀವು ಮಾಡುತ್ತಿರುವುದರ ಕುರಿತು ನಿಮ್ಮ ಪ್ರಭು ಅಲಕ್ಷನಲ್ಲ.
Yusuf 12:1
ಅಲಿಫ್ ಲಾಮ್ ರಾ, ಇವು ಸುವ್ಯಕ್ತ ಗ್ರಂಥದ ಸೂಕ್ತಗಳಾಗಿವೆ.
Yusuf 12:2
ನೀವು ಅರಿತುಕೊಳ್ಳಲಿ ಎಂದು ನಾವಿದನ್ನು ಅರಬೀ ಭಾಷೆಯ ಪಾರಾಯಣ ಗ್ರಂಥವನ್ನಾಗಿ ಅವತೀರ್ಣಗೊಳಿಸಿರುತ್ತೇವೆ.
Yusuf 12:3
ನಾವು ಈ ಕು಼ರ್‌ಆನನ್ನು ನಿಮ್ಮೆಡೆಗೆ ಅವತೀರ್ಣಗೊಳಿಸುವ ಮೂಲಕ ನಿಮಗೆ ಅತ್ಯುತ್ತಮ ವೃತ್ತಾಂತಗಳನ್ನು ತಿಳಿಸುತ್ತಿದ್ದೇವೆ. ನಿಜವಾಗಿಯೂ ನೀವು ಇದಕ್ಕೆ ಮೊದಲು ಅಲಕ್ಷರಲ್ಲಾಗಿದ್ದೀರಿ.
Yusuf 12:4
ಯೂಸುಫ್ ತಮ್ಮ ತಂದೆಯೊಡನೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ, ನನ್ನ ಪ್ರಿಯ ತಂದೆ ನಾನು ಸ್ವಪ್ನದಲ್ಲಿ ಹನ್ನೊಂದು ನಕ್ಷತ್ರಗಳನ್ನು, ಸೂರ್ಯ ಮತ್ತು ಚಂದ್ರರನ್ನು ಅವು ನನಗೆ ಸಾಷ್ಟಾಂಗವೆರಗುತ್ತಿರುವುದಾಗಿ ಕಂಡಿರುವೆನು.
Yusuf 12:5
ಆಗ ಅವರ ತಂದೆ ಹೇಳಿದರು; ಪ್ರಿಯ ಪುತ್ರ ನಿನ್ನ ಈ ಕನಸಿನ ವಿಚಾರವನ್ನು ನಿನ್ನ ಸಹೋದರರ ಮುಂದೆ ಪ್ರಸ್ತಾಪಿಸಬೇಡ, ಅವರು ನಿನ್ನ ವಿರುದ್ಧ ಯಾವುದಾದರೂ ಕುತಂತ್ರವನ್ನು ಪ್ರಯೋಗಿಸಬಹುದು. ನಿಶ್ಚಯವಾಗಿಯೂ ಶೈತಾನನು ಮನುಷ್ಯನ ಪ್ರತ್ಯಕ್ಷ ಶತ್ರುವಾಗಿದ್ದಾನೆ.
Yusuf 12:6
ಇದೇ ಪ್ರಕಾರ (ಸ್ವಪ್ನದಲ್ಲಿ ಕಂಡAತೆ) ನಿನ್ನ ಪ್ರಭು ನಿನ್ನನ್ನು( ಪ್ರವಾದಿತ್ವಕ್ಕಾಗಿ) ಆಯ್ದುಕೊಳ್ಳುವನು ಮತ್ತು ಸ್ವಪ್ನವ್ಯಾಖ್ಯಾನಗಳ ಆಳಕ್ಕೆ ತಲುಪುವ ಜ್ಞಾನವನ್ನು ಸಹ ಕಲಿಸುವನು. ಮತ್ತು ಇದಕ್ಕೆ ಮೊದಲು ನಿನ್ನ ಪೂರ್ವಜರಾದ ಇಬ್ರಾಹೀಮ್ ಇಸ್‌ಹಾಕ್‌ರವರ ಮೇಲೆ ತನ್ನ ಅನುಗ್ರಹವನ್ನು ಪೂರ್ಣಗೊಳಿಸಿದಂತೆಯೇ ನಿನ್ನ ಮೇಲೂ ಮತ್ತು ಯಾಕೂಬರ ಕುಟುಂಬದ ಮೇಲೂ ಪೂರ್ಣಗೊಳಿಸುವನು. ನಿಶ್ಚಯವಾಗಿಯೂ ನಿನ್ನ ಪ್ರಭು ಸರ್ವಜ್ಞಾನಿಯು ಮಹಾ ಯುಕ್ತಿವಂತನೂ ಆಗಿದ್ದಾನೆ.
Yusuf 12:7
ನಿಶ್ಚಯವಾಗಿಯೂ ಯೂಸುಫ್ ಮತ್ತು ಅವರ ಸಹೋದರರ ಚರಿತ್ರೆಯಲ್ಲಿ ವಿಚಾರಿಸುವವರಿಗೆ ನಿದರ್ಶನಗಳಿವೆ.
Yusuf 12:8
ಅವರ ಸಹೋದರರು ಪರಸ್ಪರ ಹೇಳಿದ ಸಂದರ್ಭವನ್ನು ಸ್ಮರಿಸಿರಿ ನಾವು (ಬಲಿಷ್ಠ) ತಂಡವಾಗಿದ್ದರೂ ಯೂಸುಫ್ ಮತ್ತು ಅವರ ಸಹೋದರ ನಮ್ಮ ತಂದೆಗೆ ನಮಗಿಂತಲೂ ಹೆಚ್ಚು ಪ್ರಿಯರಾಗಿದ್ದಾರೆ, ನಿಸ್ಸಂಶಯವಾಗಿಯೂ ನಮ್ಮ ತಂದೆಯು ಸ್ಪಷ್ಟ ತಪ್ಪಿನಲ್ಲಿದ್ದಾರೆ.
Yusuf 12:9
(ಈಗ ನಿಮಗಿರುವ ದಾರಿ) ನೀವು ಯೂಸುಫ್ ರವರನ್ನು ಕೊಂದು ಹಾಕಿರಿ ಅಥವ ಅವನನ್ನು ಎಲ್ಲಾದರೂ ದೂರ ಪ್ರದೇಶದಲ್ಲಿ ಎಸೆದು ಬಿಡಿರಿ ಆಗ ನಿಮ್ಮ ತಂದೆಯ ಒಲವು ಕೇವಲ ನಿಮ್ಮೆಡೆಗೆ ಇರುವುದು ಮತ್ತು ಅದರ ನಂತರ ನೀವು(ಪಶ್ಚಾತಾಪ ಪಟ್ಟು) ಸಜ್ಜನರಾಗಿಬಿಡಿರಿ.
Yusuf 12:10
ಅವರ ಪೈಕಿ ಒಬ್ಬನು ಹೇಳಿದನು; ನೀವು ಯೂಸುಫ್‌ನನ್ನು ಕೊಲ್ಲಬೇಡಿರಿ. ನಿಮಗೇನಾದರೂ ಮಾಡುವುದೇ ಇದ್ದರೆ ಅವನನ್ನು ಯಾವುದಾದರೂ ಪಾಳು ಬಾವಿಯಲ್ಲಿ ಹಾಕಿಬಿಡಿರಿ. ಯಾವುದಾದರೂ ಯಾತ್ರಿಕ ತಂಡವು ಅವನನ್ನು ಎತ್ತಿ ಕೊಂಡೊಯ್ಯುವುದು.
Yusuf 12:11
ಅವರು ಹೇಳಿದರು; ನಮ್ಮ ತಂದೆಯೇ! ನೀವು ಯೂಸುಫ್‌ರವರ ವಿಚಾರದಲ್ಲಿ ನಮ್ಮನ್ನು ಏಕೆ ನಂಬುವುದಿಲ್ಲ ? ನಿಶ್ಚಯವಾಗಿಯೂ ನಾವು ಅವನ ಹಿತೈಷಿಗಳಾಗಿದ್ದೇವೆ.
Yusuf 12:12
ನಾಳೆ ಅವನನ್ನು ನಮ್ಮೊಂದಿಗೆ ಕಳುಹಿಸಿರಿ. ಅವನು ತಿನ್ನಲಿ ಕುಡಿಯಲಿ ಹಾಗೂ ಆಟವಾಡಲಿ ಅವನ ಸಂರಕ್ಷಣೆಯ ಹೊಣೆಗಾರರು ನಾವಾಗಿದ್ದೇವೆ.
Yusuf 12:13
ಅವರ ತಂದೆ ಹೇಳಿದರು ; ಅವನನ್ನು ನೀವು ಕರೆದುಕೊಂಡು ಹೋಗುವ ವಿಚಾರವು ನನಗೆ ತುಂಬಾ ವ್ಯಥೆಪಡಿಸುವಂತಹದ್ದಾಗಿದೆ, ಮತ್ತು ನೀವು ಅವನ ಬಗ್ಗೆ ನಿರ್ಲಕ್ಷö್ಯಕರಾಗಿರುವಾಗ ಅವನನ್ನು ತೋಳವು ತಿಂದು ಬಿಡಬಹುದೆಂದು ನಾನು ಭಯಪಡುತ್ತೇನೆ.
Yusuf 12:14
ಅವರು ಉತ್ತರಿಸಿದರು; ನಮ್ಮಂತಹ ಬಲಿಷ್ಠ ತಂಡದ ಉಪಸ್ಥಿತಿಯಲ್ಲಿ ಅವನÀನ್ನು ತೋಳವು ತಿಂದು ಬಿಡುವುದಾದರೆ ಖಂಡಿತ ನಾವು ಅಸಮರ್ಥರೇ ಆಗಿರುವೆವು.
Yusuf 12:15
ಅನಂತರ ಅವರು (ತಂದೆಗೆ ಒತ್ತಾಯಪಡಿಸಿ) ಅವನನ್ನು ಕರೆದುಕೊಂಡು ಹೋದರು ಮತ್ತು ಅವರೆಲ್ಲರೂ ಅವನನ್ನು ನಿರ್ಜನ ಪ್ರದೇಶದ ಪಾಳು ಬಾವಿಯಲ್ಲಿ ಹಾಕಲೆಂಬ ದೃಢ ನಿರ್ಧಾರಕ್ಕೆ ಬಂದಾಗ ನಾವು ಯೂಸುಫ್‌ರವರ ಕಡೆಗೆ ದಿವ್ಯವಾಣಿ ಮಾಡಿದೆವು. ಖಂಡಿತ ನೀನು ಅವರ ಈ ಕೃತ್ಯದ ಕುರಿತು ಅವರು ತಿಳಿದೇ ಇಲ್ಲದಂತಹ ಸ್ಥಿತಿಯಲ್ಲಿ ತಿಳಿಸಿಕೊಡಲಿರುವೆ
Yusuf 12:16
ರಾತ್ರಿಯ ವೇಳೆ ಅವರೆಲ್ಲರೂ ತಮ್ಮ ತಂದೆಯ ಬಳಿ ಅಳುತ್ತಾ ಬಂದರು.
Yusuf 12:17
ಮತ್ತೆ ಹೇಳತೊಡಗಿದರು ನಮ್ಮ ತಂದೆಯೇ ನಾವು ಪರಸ್ಪರ ಓಟದ ಸ್ಪರ್ಧೆಯಲ್ಲಿ ನಿರತರಾಗಿದ್ದೆವು. ಯೂಸುಫ್‌ರವರನ್ನು ನಮ್ಮ ಸಾಮಾನುಗಳ ಬಳಿ ಬಿಟ್ಟಿದ್ದೆವು, ಅಷ್ಟರಲ್ಲಿ ಅವನನ್ನು ತೋಳವು ತಿಂದುಬಿಟ್ಟಿತು. ನಾವು ಸತ್ಯವಂತರಾಗಿದ್ದರು ನೀವಂತೂ ನಮ್ಮ ಮಾತನ್ನು ನಂಬುವವರೇ ಅಲ್ಲ.
Yusuf 12:18
ಅವರು ಯೂಸುಫ್‌ರ ಅಂಗಿಗೆ ಹುಸಿ ರಕ್ತ ಹಚ್ಚಿ ತಂದಿದ್ದರು. ತಂದೆಯು ಹೇಳಿದರು; (ವಾಸ್ತವಿಕತೆ ಹೀಗಿಲ್ಲ) ಆದರೆ ನಿಮಗೆ ನಿಮ್ಮ ಮನಸ್ಸು ಈ ಸ್ವರಚಿತ ಕೃತ್ಯವನ್ನು ಸುಂದರವಾಗಿ ತೋರಿಸಿದೆ. ಇನ್ನು ನನಗೆ ಉತ್ತಮ ಸಹನÉಯೇ ಲೇಸು ಮತ್ತು ನಿಮ್ಮ ಕಲ್ಪಿತ ಕಥೆಗಳ ಮೇಲೆ ಅಲ್ಲಾಹನಿಂದಲೇ ಸಹಾಯ ಬೇಡಲಾಗುವುದು.
Yusuf 12:19
ಅಲ್ಲಿಗೆ ಯಾತ್ರಾ ತಂಡವೊAದು ಬಂತು ಮತ್ತು ಅವರು ತಮ್ಮ ನೀರು ಸೇದುವವನನ್ನು ಕಳುಹಿಸಿದರು, ಅವನು ತನ್ನ ತೊಟ್ಟಿಯನ್ನು ಇಳಿಸಿದಾಗ ಹೇಳತೊಡಗಿದನು, ಆಹಾ ಶುಭಸುದ್ದಿ ಇದೆ! ಇವನೊಬ್ಬ ಬಾಲಕನಾಗಿದ್ದಾನೆ. ಅವರು ಅವನನ್ನು ವ್ಯಾಪಾರ ಸರಕನ್ನಾಗಿಸಿ ಅಡಗಿಸಿಟ್ಟರು ಮತ್ತು ಅಲ್ಲಾಹನು ಅವರು ಮಾಡುತ್ತಿದ್ದ ಕೃತ್ಯಗಳ ಕುರಿತು ಅರಿವುಳ್ಳವನಾಗಿದ್ದನು
Yusuf 12:20
ಮತ್ತು ಅವರು ಅವನನ್ನು ಅತ್ಯಲ್ಪ ಬೆಲೆಗೆ ಕೆಲವು ಬೆಳ್ಳಿ ನಾಣ್ಯಗಳಿಗೆ ಮಾರಿಬಿಟ್ಟರು. ಅವರಂತೂ ಯೂಸುಫ್‌ರವರ ವಿಚಾರದಲ್ಲಿ ಅತ್ಯಂತ ನಿರಾಸಕ್ತರಾಗಿದ್ದರು.
Yusuf 12:21
ಈಜಿಪ್ಟಿನವರಲ್ಲಿ ಅವರನ್ನು ಖರೀಸಿದವನು ತನ್ನ ಪತ್ನಿಗೆ ಹೇಳಿದನು; ನೀನು ಅವನನ್ನು ಗೌರವದಿಂದ ಇರಿಸು ಪ್ರಾಯಶಃ ಅವನು ನಮಗೆ ಪ್ರಯೋಜನಕಾರಿಯಾಗಬಹುದು. ಅಥವಾ ನಾವು ಅವನನ್ನು ನಮ್ಮ ಪುತ್ರನನ್ನಾಗಿಯು ಮಾಡಿಕೊಳ್ಳಬಹುದು. ಹೀಗೆ ನಾವು ಈಜಿಪ್ಟ್ನ ಭೂಮಿಯಲ್ಲಿ ಯೂಸುಫ್‌ರವರಿಗೆ ನೆಲೆಯನ್ನು ಸುಭದ್ರವಾಗಿಸಿಕೊಟ್ಟೆವು ಮತ್ತು ನಾವು ಅವರಿಗೆ ವಿಷಯಗಳ ಆಳಕ್ಕೆ ತಲುಪುವ ಜ್ಞಾನವನ್ನು ಕಲಿಸಿಕೊಟ್ಟೆವು ಮತ್ತು ಅಲ್ಲಾಹನು ತನ್ನ ಕಾರ್ಯವನ್ನು ಪೂರ್ಣಗೊಳಿಸುವ ಸಾಮರ್ಥ್ಯವುಳ್ಳವನಾಗಿದ್ದಾನೆ. ಆದರೆ ಹೆಚ್ಚಿನ ಜನರು ಅಜ್ಞಾನಿಗಳಾಗಿರುತ್ತಾರೆ.
Yusuf 12:22
ಮತ್ತು ಯೂಸುಫ್ ಯೌವ್ವನಕ್ಕೆ ತಲುಪಿದಾಗ ನಾವು ಅವರಿಗೆ ಯುಕ್ತಿಯನ್ನು ಸುಜ್ಞಾನವನ್ನು ದಯಪಾಲಿಸಿದೆವು ಮತ್ತು ಸಜ್ಜನರಿಗೆ ನಾವು ಇದೇ ರೀತಿ ಪ್ರತಿಫಲ ನೀಡುತ್ತೇವೆ.
Yusuf 12:23
ಯೂಸುಫ್‌ರವರು ವಾಸಿಸುತ್ತಿದ್ದ ಮನೆಯೊಡತಿ ಅವರನ್ನು ಫುಸಲಾಯಿಸಿದಳು ಒಮ್ಮೆ ಬಾಗಿಲುಗಳನ್ನು ಮುಚ್ಚಿ "ಇತ್ತ ಬಾ" ಎಂದಳು. ಯೂಸುಫ್ ಹೇಳಿದರು "ಅಲ್ಲಾಹನ ಅಭಯ ನಿಶ್ಚಯವಾಗಿ ನನ್ನ ಒಡೆಯನು ನನ್ನನ್ನು ಅತ್ಯುತ್ತಮವಾಗಿ ಇಟ್ಟಿದ್ದಾನೆ, ಖಂಡಿತವಾಗಿಯೂ ಅನ್ಯಾಯ ಮಾಡುವವರು ಯಶಸ್ಸು ಪಡೆಯುವುದಿಲ್ಲ.
Yusuf 12:24
ಆಕೆ ಅವರನ್ನು(ನೀಚ ಕೃತ್ಯಕ್ಕೆ) ಬಯಸಿದಳು ಆದರೆ ತಮ್ಮ ಪ್ರಭುವಿನ ದೃಷ್ಟಾಂತವನ್ನು ಯೂಸುಫ್‌ರವರು ಕಾಣದಿರುತ್ತಿದ್ದರೆ ಅವರೂ ಸಹ ಅವಳನ್ನು ಬಯಸುತ್ತಿದ್ದರು. ನಾವು ಅವರಿಂದ ಕೆಡುಕನ್ನು ನೀಚ ಕೃತ್ಯವನ್ನು ದೂರ ಮಾಡಲೆಂದು ಹೀಗೆ ಮಾಡಿದೆವು ನಿಸ್ಸಂಶಯವಾಗಿಯೂ ಅವರು ನಮ್ಮ ಆಯ್ಕೆಯಾದ ದಾಸರಲ್ಲಾಗಿದ್ದರು.
Yusuf 12:25
ಅವರಿಬ್ಬರೂ ಬಾಗಿಲಿನತ್ತ ಓಡಿದರು. ಆಕೆ ಹಿಂದಿನಿAದ ಅವರ ಅಂಗಿಯನ್ನು ಹರಿದಳು. ಅವರಿಬ್ಬರೂ ಬಾಗಿಲ ಬಳಿಯೇ ಅವಳ ಪತಿಯನ್ನು ಉಪಸ್ಥಿತರಿರುವುದಾಗಿ ಕಂಡರು, ಆಗ ಅವಳು ಹೇಳಿದಳು ನಿಮ್ಮ ಮಡದಿಯೊಂದಿಗೆ ಕೆಡುಕನ್ನು ಬಯಸಿದವರಿಗೆ ಸೆರೆಗೆ ತಳ್ಳುವುದು ಅಥವಾ ವೇದನಾಯುಕ್ತ ಶಿಕ್ಷೆಯಲ್ಲದೆ ಬೇರೆ ಪ್ರತಿಫಲವೇನಿದೆ ?
Yusuf 12:26
ಯೂಸುಫ್ ಹೇಳಿದರು; ಇವಳೇ ನನ್ನನ್ನು ಫುಸಲಾಯಿಸಿದ್ದಳು ಆಗ ಆಕೆಯ ಕುಟುಂಬದಿAದಲೇ ಒಬ್ಬ ವ್ಯಕ್ತಿಯು ಸಾಕ್ಷಿ ವಹಿಸಿದನು. ಅವರ ಅಂಗಿಯೂ ಮುಂಭಾಗದಿAದ ಹರಿದು ಹೋಗಿದ್ದರೆ ಇವಳು ಸತ್ಯವಂತಳಾಗಿದ್ದಾಳೆ, ಮತ್ತು ಯೂಸುಫ್ ಸುಳ್ಳುಗಾರರಲ್ಲಾಗಿರುವರು.
Yusuf 12:27
ಇನ್ನು ಇವರ ಅಂಗಿಯೂ ಹಿಂಭಾಗದಿAದ ಹರಿದು ಹೋಗಿದ್ದರೆ ಇವಳು ಸುಳ್ಳುಗಾರ್ತಿಯಾಗಿದ್ದು ಮತ್ತು ಯೂಸುಫ್ ಸತ್ಯವಂತರಲ್ಲಾಗಿರುವರು.
Yusuf 12:28
ಅವರ ಅಂಗಿಯೂ ಹಿಂಭಾಗದಿAದ ಹರಿದು ಹೋಗಿರುವುದನ್ನು ಆಕೆಯ ಪತಿ ಕಂಡಾಗ ಸ್ಪಷ್ಟವಾಗಿ ಹೇಳಿಬಿಟ್ಟನು: ಇದಂತೂ ನಿಮ್ಮ ಹೆಂಗಸರ ಕುತಂತ್ರವಾಗಿದೆ. ನಿಸ್ಸಂದೇಹವಾಗಿಯೂ ನಿಮ್ಮ ಕುತಂತ್ರವೂ ಅತಿ ದೊಡ್ಡದಾಗಿರುತ್ತದೆ.
Yusuf 12:29
ಓ ಯೂಸುಫ್! ಈ ವಿಷಯವನ್ನು ಕಡೆಗಣಿಸಿರಿ ಮತ್ತು( ಓ ಸ್ತಿçÃಯೇ) ನೀನು ನಿನ್ನ ತಪ್ಪಿಗಾಗಿ ಕ್ಷಮೆಯಾಚಿಸು, ಖಂಡಿತವಾಗಿಯೂ ನೀನೇ ತಪ್ಪಿತಸ್ಥೆಯಾಗಿದ್ದೆ.
Yusuf 12:30
ಆ ಪಟ್ಟಣದ ಸ್ತಿçÃಯರು ಪರಸ್ಪರ ಚರ್ಚೆ ಮಾಡತೊಡಗಿದರು, ರಾಜನ ಪತ್ನಿ ತನ್ನ ತರುಣ ಸೇವಕನನ್ನು ಪುಸಲಾಯಿಸುವುದರಲ್ಲಿ ತಲ್ಲಿನಳಾಗಿದ್ದಾಳೆ. ಅವಳ ಹೃದಯದಲ್ಲಿ ಆ ತರುಣನ ಪ್ರೇಮವು ನೆಲೆಯೂರಿದೆ ನಮ್ಮ ಅಭಿಪ್ರಾಯದಲ್ಲಿ ಅವಳು ಸ್ಪಷ್ಟ ಮಾರ್ಗಚ್ಯುತಿಯಲ್ಲಿದ್ದಾಳೆ.
Yusuf 12:31
ಅವಳು ಅವರ ಈ ನಿಂದನೆಯ ಮಾತುಗಳನ್ನು ಕೇಳಿದಾಗ ಅವರನ್ನು ಆಹ್ವಾನಿಸಿದಳು. ಅವರಿಗಾಗಿ ಸಭೆಯೊಂದನ್ನು ಏರ್ಪಡಿಸಿದಳು. ಮತ್ತು ಅವರಲ್ಲಿ ಪ್ರತಿಯೊಬ್ಬರಿಗೂ ಚೂರಿಯನ್ನು ನೀಡಿದಳು. ಮತ್ತು ಯೂಸುಫ್‌ನೊಂದಿಗೆ ನೀನು ಅವರ ಮುಂದಿನಿAದ ಹೊರಟು ಬಾ! ಎಂದಳು ಆ ಸ್ತಿçÃಯರು ಅವನನ್ನು ಕಂಡಾಗ ಮಹೋನ್ನತನನ್ನಾಗಿ ಭಾವಿಸಿ ದಿಗ್ಬಾçಂತರಾದರು, ಮತ್ತು ಕೈಗಳನ್ನು ಕೊಯ್ದುಕೊಂಡರು ನಂತರ ಹೇಳಿದರು" “ಹಾಶಲಿಲ್ಲಾಹ್” ಇವನು ಮನುಷ್ಯನಂತೂ ಅಲ್ಲ ಇವನಂತೂ ಯಾವುದೇ ಒಬ್ಬ ಸನ್ಮಾನ್ಯ ದೇವಚರನಾಗಿದ್ದಾನೆ.
Yusuf 12:32
ಆಗ ಆಕೆ ಹೇಳಿದಳು; ಯಾರ ವಿಚಾರದಲ್ಲಿ ನೀವು ನನ್ನನ್ನು ಆಕ್ಷೇಪಿಸಿದ್ದೀರೋ ಆ ವ್ಯಕ್ತಿ ಇವನೇ. ಮತ್ತು ನಾನು ಇವನನ್ನು ಪುಸಲಾಯಿಸಲು ಪ್ರಯತ್ನಿಸಿದ್ದೆ. ಆದರೆ ಇವನು ತನ್ನನ್ನು ರಕ್ಷಿಸಿಕೊಂಡನು, ಮತ್ತು ನಾನು ಆಜ್ಞಾಪಿಸಿದ್ದನ್ನು ಇವನೇನಾದರೂ ಮಾಡದಿದ್ದರೆ ಖಂಡಿತ ಇವನು ಸೆರೆಗೆ ತಳ್ಳಲ್ಪಡುವನು, ಮತ್ತು ನಿಸ್ಸಂಶಯವಾಗಿಯೂ ಇವನು ನಿಂದ್ಯರಲ್ಲಾಗುವನು.
Yusuf 12:33
ಯೂಸುಫ್ ಪ್ರಾರ್ಥಿಸಿದರು ನನ್ನ ಪ್ರಭುವೇ ಇವರು ನನ್ನನ್ನು ಕರೆಯುತ್ತಿರುವ ಕಾರ್ಯಕ್ಕಿಂತ ನನಗೆ ಸೆರೆಮನೆಯೇ ಅತ್ಯಂತ ಪ್ರಿಯವಾಗಿದೆ ಮತ್ತು ನೀನು ಅವರ ಕುತಂತ್ರದಿAದ ನನ್ನನ್ನು ಪಾರುಗೊಳಿಸದಿದ್ದರೆ ನಾನು ಅವರೆಡೆಗೆ ವಾಲಿಬಿಡುವೆನು ಮತ್ತು ಅವಿವೇಕಿಗಳಲ್ಲಾಗುವೆನು.
Yusuf 12:34
ಆಗ ಅವರ ಪ್ರಭು ಅವರ ಕರೆಗೆ ಓಗೊಟ್ಟನು ಮತ್ತು ಅವರ ಕುತಂತ್ರಗಳಿAದ ಅವರನ್ನು ದೂರ ಸರಿಸಿದನು. ನಿಶ್ಚಯವಾಗಿಯೂ ಅವನು ಆಲಿಸುವವನು ಸರ್ವಜ್ಞಾನಿಯು ಆಗಿರುವನು.
Yusuf 12:35
ತರುವಾಯ ಅವರಿಗೆ ಆಧಾರ ಪ್ರಮಾಣವು ದೊರೆತ ಬಳಿಕವೂ ಅವರಿಗೆ ಅವರನ್ನು ಒಂದು ನಿರ್ದಿಷ್ಟ ಅವಧಿಯವರೆಗೆ ಸೆರೆಮನೆಯಲ್ಲಿ ಇಡುವುದೇ ಸರಿಯೆಂದು ತೋಚಿತು.
Yusuf 12:36
ಇಬ್ಬರು ಯುವಕರು ಸಹ ಅವರ ಜೊತೆ ಸೆರೆಮನೆಯೊಳಗೆ ಪ್ರವೇಶಿಸಿದರು. ಅವರಿಬ್ಬರಲ್ಲಿ ಒಬ್ಬನು ಹೇಳಿದನು ; ನಾನು ಕನಸಿನಲ್ಲಿ ಮದ್ಯ ಹಿಂಡುತ್ತಿರುವುದಾಗಿ ಕಂಡಿರುವೆನು, ಮತ್ತೊಬ್ಬನು ಹೇಳಿದನು, ನಾನು ನನ್ನನ್ನು ನನ್ನ ತಲೆಯ ಮೇಲೆ ರೊಟ್ಟಿಗಳನ್ನು ಹೊತ್ತುಕೊಂಡು ಪಕ್ಷಿಗಳು ಅವುಗಳನ್ನು ತಿನ್ನುತ್ತಿರುವುದಾಗಿ ಕಂಡಿರುವೆನು. ನೀವು ನಮಗೆ ಇದರ ವ್ಯಾಖ್ಯಾನವನ್ನು ತಿಳಿಸಿಕೊಡಿರಿ. ನಮಗಂತೂ ನೀವು ಸಜ್ಜನರಲ್ಲಿ ಕಾಣುತ್ತಿರುವಿರಿ.
Yusuf 12:37
ಯೂಸುಫ್; ಹೇಳಿದರು ನಿಮಗೆ ನೀಡಲಾಗುವ ಆಹಾರವು ನಿಮ್ಮ ಬಳಿ ಬರುವ ಮೊದಲೇ ನಾನು ನಿಮಗೆ ಅದರ ವ್ಯಾಖ್ಯಾನವನ್ನು ತಿಳಿಸಿಕೊಡುತ್ತೇನೆ. ಇದು ನನ್ನ ಪ್ರಭು ನನಗೆ ಕಲಿಸಿರುವ ಜ್ಞಾನದ ಫಲವಾಗಿದೆ. ನಾನು ಅಲ್ಲಾಹನ ಮೇಲೆ ವಿಶ್ವಾಸವಿಡದ ಮತ್ತು ಪರಲೋಕವನ್ನು ನಿರಾಕರಿಸುವ ಜನತೆಯ ಮಾರ್ಗವನ್ನು ಕೈಬಿಟ್ಟಿರುತ್ತೇನೆ.
Yusuf 12:38
ನನ್ನ ಪೂರ್ವಜರಾದ ಇಬ್ರಾಹೀಮ್, ಇಸ್‌ಹಾಕ್, ಯಾಕೂಬ್ ರವರ ಮಾರ್ಗವನ್ನು ನಾನು ಅವಲಂಬಿಸಿದ್ದೇನೆ. ಅಲ್ಲಾಹನೊಂದಿಗೆ ಇತರರಲ್ಲೂ ಸಹಭಾಗಿಯನ್ನಾಗಿ ನಿಶ್ಚಯಿಸುವುದು ನಮಗೆ ಭೂಷÀಣವಲ್ಲ. ಇದು (ಏಕದೇವ ವಿಶ್ವಾಸ) ನಮ್ಮ ಮೇಲೆ ಮತ್ತು ಸಕಲ ಜನರ ಮೇಲೆ ಅಲ್ಲಾಹನ ಅನುಗ್ರಹವಾಗಿದೆ. ಆದರೆ ಹೆಚ್ಚಿನ ಜನರು ಕೃತಜ್ಞತೆ ತೋರುವುದಿಲ್ಲ.
Yusuf 12:39
ಓ ನನ್ನ ಸೆರೆಮನೆಯ ಸಂಗಾತಿಗಳೇ ಅನೇಕ ವಿಭಿನ್ನ ದೇವರುಗಳು ಉತ್ತಮರೋ ಅಥವಾ ಸರ್ವ ಸಮರ್ಥನಾದ ಏಕೈಕ ಅಲ್ಲಾಹನೋ ?
Yusuf 12:40
ಅವನ ಹೊರತು ನೀವು ಆರಾಧಿಸುತ್ತಿರುವವುಗಳೆಲ್ಲವೂ ನೀವು ನಿಮ್ಮ ಪೂರ್ವಿಕರು ಸ್ವತಃ ಇರಿಸಿಕೊಂಡಿರುವAತಹಾ ಕೆಲವು ಹೆಸರುಗಳಾಗಿವೆ. ಅಲ್ಲಾಹನು ಅವುಗಳ ಬಗ್ಗೆ ಯಾವ ಆಧಾರವನ್ನು ಇಳಿಸಿಲ್ಲ, ಆಜ್ಞಾಧಿಕಾರವು ಕೇವಲ ಅಲ್ಲಾಹನದೇ ಆಗಿದೆ. ಅವನ ಹೊರತು ಇನ್ನಾರ ಆರಾಧನೆ ಮಾಡಬಾರದೆಂದು ಅವನು ಆಜ್ಞಾಪಿಸಿದ್ದಾನೆ ಇದುವೇ ನಿಜವಾದ ಧರ್ಮವಾಗಿದೆ, ಆದರೆ ಹೆಚ್ಚಿನ ಜನರು ತಿಳಿಯುವುದಿಲ್ಲ.
Yusuf 12:41
ಓ ಸೆರೆಮನೆಯ ನನ್ನ ಸಂಗಾತಿಗಳೇ ನಿಮ್ಮಿಬ್ಬರಲ್ಲಿ ಒಬ್ಬನಂತೂ ತನ್ನ ರಾಜನಿಗೆ ಮದ್ಯ ಕುಡಿಸಲು ನೇಮಕವಾಗಲಿದ್ದಾನೆ. ಆದರೆ ಇನ್ನೊಬ್ಬನು ಗಲ್ಲಿಗೇರಿಸಲ್ಪಡುವನು ಮತ್ತು ಪಕ್ಷಿಗಳು ಅವನ ತಲೆಯನ್ನು ಕುಕ್ಕಿಕುಕ್ಕಿ ತಿನ್ನಲಿವೆ, ನೀವಿಬ್ಬರೂ ವಿಚಾರಿಸಿದಂತಹಾ ಸಂಗತಿಯ ತೀರ್ಮಾನವು ಆಗಿಬಿಟ್ಟಿದೆ.
Yusuf 12:42
ಅವರಿಬ್ಬರಲ್ಲಿ ಬಿಡುಗಡೆಹೊಂದುವನೆAದು ತಾನು ಭಾವಿಸಿಕೊಂಡ ವ್ಯಕ್ತಿಯೊಡನೆ ಯೂಸುಫ್‌ರವರು ಹೇಳಿದರು, ನಿನ್ನ ರಾಜನ ಬಳಿ ನನ್ನ ಪ್ರಸ್ತಾಪವನ್ನು ಮಾಡು. ಆದರೆ ಶೈತಾನನೂ ಅವನಿಗೆ ತನ್ನ ರಾಜನ ಬಳಿ ಹೇಳುವುದನ್ನು ಮರೆಯುವಂತೆ ಮಾಡಿದನು ಮತ್ತು ಯೂಸುಫ್ ಹಲವು ವರ್ಷಗಳವರೆಗೆ ಸೆರೆಮನೆಯಲ್ಲೇ ಕಳೆದರು.
Yusuf 12:43
ರಾಜನು ಹೇಳಿದನು; ನಾನು ಕನಸಿನಲ್ಲಿ ಏಳು ಕೊಬ್ಬಿದ ಹಸುಗಳನ್ನು ಏಳು ಸಣಕಲು ಹಸುಗಳು ತಿನ್ನುತ್ತಿರುವುದಾಗಿ ಮತ್ತು ಧಾನ್ಯದ ಏಳು ತೆನೆಗಳು ಹಸಿರಾಗಿದ್ದು ಇತರ ಏಳು ಒಣಗಿದವುಗಳಾಗಿ ಕಂಡಿರುವೆನು. ಓ ಆಸ್ಥಾನದ ಪ್ರಮುಖರೇ, ನೀವು ಕನಸುಗಳ ವ್ಯಾಖ್ಯಾನ ಬಲ್ಲವರಾಗಿದ್ದರೆ ನನ್ನ ಈ ಕನಸಿನ ವ್ಯಾಖ್ಯಾನವನ್ನು ತಿಳಿಸಿರಿ.
Yusuf 12:44
ಅವರು ಉತ್ತರಿಸಿದರು ಇವು ಗೊಂದಲಮಯವಾದ ಕನಸುಗಳ ಫಲ ನಮಗೆ ತಿಳಿಯದು.
Yusuf 12:45
ಆ ಇಬ್ಬರು ಕೈದಿಗಳ ಪೈಕಿ ಬಿಡುಗಡೆ ಹೊಂದಿದವನಿಗೆ ಸುದೀರ್ಘ ಕಾಲದ ನಂತರ ಯೂಸುಫ್‌ರವರ ಮಾತು ನೆನಪಾಗಿ ಹೇಳಿದನು; ನಾನು ನಿಮಗೆ ಇದರ ವಿವರ ನೀಡುವೆನು ನನಗೆ ಯೂಸುಫ್‌ರವರ ಬಳಿ ಕಳುಹಿಸಿರಿ.
Yusuf 12:46
ಓ ಸತ್ಯಸಂಧ ಯೂಸುಫ್, ಏಳು ಕೊಬ್ಬಿದ ಹಸುಗಳನ್ನು ಏಳು ಸಣಕಲು ಹಸುಗಳು ತಿನ್ನುತ್ತಿವೆ ಮತ್ತು ಏಳು ತೆನೆಗಳು ಹಸಿರಾಗಿವೆ ಹಾಗೂ ಉಳಿದ ಏಳು ಒಣಗಿದವುಗಳಾಗಿವೆ.
Yusuf 12:47
ಯೂಸುಫ್ ಹೇಳಿದರು; ನೀವು ನಿರಂತರ ಏಳು ವರ್ಷಗಳ ಕಾಲ ಕೃಷಿ ಮಾಡಿರಿ ಆಮೇಲೆ ನೀವು ಕೊಯ್ಯುವ ಬೆಳೆಯಿಂದ ಆಹಾರಕ್ಕೆ ಬೇಕಾದಷ್ಟು ಅಂಶವನ್ನು ತೆಗೆದು ಉಳಿದುದನ್ನು ಅದರ ತೆನೆಗಳಲ್ಲಿ ಬಿಟ್ಟುಬಿಡಿರಿ.
Yusuf 12:48
ಅದರ ತರುವಾಯ ಏಳು ವಷÀðಗಳ ಕಾಲ ಬರಗಾಲ ಬರಲಿದೆ. ನೀವು ಸಂಗ್ರಹಿಸಿಟ್ಟಿದ್ದನ್ನು ಅದು ತಿಂದುಬಿಡುವುದು. ಆದರೆ ನೀವು ಜೋಪಾನವಾಗಿರಿಸಿದ್ದ ಅಲ್ಪವನ್ನು ಬಿಟ್ಟು.
Yusuf 12:49
ತರುವಾಯ ಬರುವ ಒಂದು ವರ್ಷದಲ್ಲಿ ಜನರಿಗೆ ಚೆನ್ನಾಗಿ ಮಳೆಯಾಗುವುದು ಮತ್ತು ಅದರಲ್ಲಿ ಅವರು ರಸ ಹಿಂಡುವರು.
Yusuf 12:50
ಮತ್ತು ರಾಜನು ಹೇಳಿದನು ಯೂಸುಫ್‌ರವರನ್ನು ನನ್ನ ಬಳಿಗೆ ಕರೆತನ್ನಿರಿ. ರಾಜದೂತ ಅವರ ಬಳಿಗೆ ಬಂದಾಗ ಅವರು ಹೇಳಿದರು ; ನೀನು ನಿನ್ನ ರಾಜನ ಬಳಿಗೆ ಮರಳಿ ಹೋಗು ಮತ್ತು ತಮ್ಮ ಕೈಗಳನ್ನು ಕೊಯ್ದುಕೊಂಡ ಆ ಸ್ತಿçÃಯರ ನಿಜಸ್ಥಿತಿ ಏನೆಂದು ಕೇಳು, ನಿಜವಾಗಿಯೂ ನನ್ನ ಪ್ರಭು ಅವರ ಕುತಂತ್ರಗಳನ್ನು ಚೆನ್ನಾಗಿ ಬಲ್ಲನು.
Yusuf 12:51
ರಾಜನು ಕೇಳಿದನು; ಸ್ತಿçÃಯರೇ ನೀವು ಯೂಸುಫ್‌ರವರನ್ನು ಪುಸಲಾಯಿಸಿದ ಸಂದರ್ಭದ ಸತ್ಯಸಂಗತಿ ಏನು? ಅವರು ಸ್ಪಷ್ಟವಾಗಿ ಉತ್ತರಿಸಿದರು; “ಹಾಶಲಿಲ್ಲಾಹ್!” ನಾವು ಯೂಸುಫ್‌ರವರಲ್ಲಿ ಯಾವ ಕೇಡನ್ನು ಕಂಡಿಲ್ಲ. ರಾಜನ ಪತ್ನಿಯೂ ಸಹ ಹೇಳಿದಳು; ಈಗಂತೂ ಸತ್ಯ ಸಂಗತಿಯು ಬಯಲಾಗಿದೆ. ನಾನೇ ಯೂಸುಫ್ ರವರನ್ನು ಪುಸಲಾಯಿಸಿ ಪಾಪಕ್ಕೆ ಪ್ರೇರೇಪಿಸಿದ್ದೆ ನಿಜವಾಗಿಯೂ ಅವರು ಸತ್ಯಸಂಧರಲ್ಲಾಗಿರುವರು.
Yusuf 12:52
(ಯೂಸುಫ್ ಹೇಳಿದರು) ಇದೇಕೆಂದರೆ ನಾನು ರಾಜನಿಗೆ ಅವನ ಅನುಪಸ್ಥಿತಿಯಲ್ಲಿ ದ್ರೋಹ ಮಾಡಿಲ್ಲವೆಂದು, ಅರಿತುಕೊಳ್ಳಲೆಂದಾಗಿದೆ ಮತ್ತು ಅಲ್ಲಾಹನು ದ್ರೋಹ ಬಗೆಯುವವರ ಕುತಂತ್ರವನ್ನು ನಡೆಯಲು ಬಿಡಲಾರನು
Yusuf 12:53
ನನ್ನ ಮನಸ್ಸು ನಿರ್ದೋಷಿಯೆಂದು ನಾನು ಹೇಳುವುದಿಲ್ಲ. ನಿಸ್ಸಂಶಯವಾಗಿಯೂ ನನ್ನ ಪ್ರಭು ದಯೆ ತೋರದಿದ್ದರೆ ಮನಸ್ಸು ಕೇಡಿನ ಕಡೆಗೆ ಪ್ರೇರೇಪಿಸುತ್ತದೆ. ನಿಶ್ಚಯವಾಗಿಯೂ ನನ್ನ ಪ್ರಭು ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ.
Yusuf 12:54
ರಾಜನು ಹೇಳಿದನು ; ನೀವು ಅವರನ್ನು ನನ್ನ ಬಳಿಗೆ ಕರೆತನ್ನಿರಿ. ನಾನು ಅವರನ್ನು ನನ್ನ ಆಪ್ತ ಕಾರ್ಯಗಳಿಗೆ ನಿಶ್ಚಯಿಸುತ್ತೇನೆ. ಅನಂತರ ಯೂಸುಫರು ಅವನೊಂದಿಗೆ ಮಾತುಕತೆ ನಡೆಸಿದಾಗ ರಾಜನು ಹೇಳಿದನು; ತಾವು ಇಂದಿನಿAದ ನಮ್ಮ ಬಳಿ ಆದರಣಿಯರು ನಂಬಿಗಸ್ಥರು ಆಗಿರುವಿರಿ.
Yusuf 12:55
ಯೂಸುಫ್ ಹೇಳಿದರು; ನನ್ನನ್ನು ದೇಶದ ಭಂಡಾರಗಳ ಮೇಲೆ ನಿಶ್ಚಯಿಸಿಬಿಡಿರಿ. ನಾನು ಸಂರಕ್ಷಕನೂ ಅರಿವುಳ್ಳವನೂ ಆಗಿರುವೆನು.
Yusuf 12:56
ಹೀಗೆ ನಾವು ಯೂಸುಫ್‌ರವರಿಗೆ ದೇಶದ ಅಧಿಕಾರವನ್ನು ಸ್ವಾಧೀನ ಗೊಳಿಸಿದೆವು. ನಾವು ಇಚ್ಛಿಸುವವರಿಗೆ ನಮ್ಮ ಕೃಪೆಯನ್ನು ದಯಪಾಲಿಸುತ್ತೇವೆ. ಮತ್ತು ನಾವು ಒಳಿತನ್ನು ಬಯಸುವವರ ಪ್ರತಿಫಲವನ್ನು ವ್ಯರ್ಥಗೊಳಿಸುವುದಿಲ್ಲ.
Yusuf 12:57
ಸತ್ಯ ವಿಶ್ವಾಸವನ್ನಿರಿಸಿ ಭಯ-ಭಕ್ತಿಯೊಂದಿಗೆ ಕಾರ್ಯವೆಸಗುವವರಿಗೆ ಪರಲೋಕದ ಪ್ರತಿಫಲವೂ ಅತ್ಯುತ್ತಮವಾಗಿರುತ್ತದೆ.
Yusuf 12:58
(ಬರಗಾಲ ಬಂದಾಗ) ಯೂಸುಫ್‌ರವರ ಸಹೋದರರು (ಈಜಿಪ್ಟಿಗೆ) ಬಂದರು ಮತ್ತು ಅವರ ಮುಂದೆ ಹಾಜರಾದರು. ಆಗ ಯೂಸುಫ್‌ರವರು ಅವರನ್ನು ಗುರುತಿಸಿಕೊಂಡರು ಆದರೆ ಅವರು ಅವರನ್ನು ಗುರುತಿಸಲಿಲ್ಲ.
Yusuf 12:59
ಮತ್ತು ಯೂಸುಫ್‌ರವರು ಅವರ ಸಾಮಾನು ಸರಂಜಾಮುಗಳನ್ನು ಸಿದ್ಧಪಡಿಸಿ ಕೊಟ್ಟಾಗ ಹೇಳಿದರು: ನೀವು ನಿಮ್ಮ ತಂದೆಯ ಕಡೆಯ ನಿಮ್ಮ ಸಹೋದರನನ್ನು ನನ್ನ ಬಳಿಗೆ ಕರೆತನ್ನಿರಿ. ನಾನು ಅಳತೆಯನ್ನು ಪರಿಪೂರ್ಣವಾಗಿ ನೀಡುವವನೆಂದೂ ಅತ್ತುö್ಯತ್ತಮವಾಗಿ ಸತ್ಕರಿಸುವವನೆಂದೂ ನೀವು ಕಂಡಿಲ್ಲವೇ?
Yusuf 12:60
ನೀವೇನಾದರೂ ಅವನನ್ನು ನನ್ನ ಬಳಿಗೆ ಕರೆತರದಿದ್ದರೆ ನಿಮಗೆ ನನ್ನ ಬಳಿ ಧಾನ್ಯವಿಲ್ಲ. ಮಾತ್ರವಲ್ಲ ನೀವು ನನ್ನ ಹತ್ತಿರ ಸುಳಿಯುವುದೂ ಬೇಡ.
Yusuf 12:61
ಅವರು ಹೇಳಿದರು; ಶೀಘ್ರವೇ ಅವನನ್ನು ಕಳುಹಿಸಲಿಕ್ಕಾಗಿ ನಾವು ಅವನ ತಂದೆಯನ್ನು ಒಲಿಸುವೆವು ಮತ್ತು ನಾವು ಹೀಗೆ ಮಾಡಿಯೇ ತೀರುವೆವು.
Yusuf 12:62
ಯೂಸುಫ್‌ರವರು ತನ್ನ ಸೇವಕರಿಗೆ ಹೇಳಿದರು; ಅವರು ಕೊಟ್ಟ ಧನವನ್ನು ಅವರ ಚೀಲಗಳಲ್ಲೇ ಇರಿಸಿರಿ. ಅವರು ತಮ್ಮ ಪರಿವಾರದ ಬಳಿ ಮರಳಿ ಹೋದಾಗ ಅದನ್ನು ಗುರುತಿಸಿಕೊಂಡು(ಬಹುಶಃ ಇದರ ಕಾರಣ) ಮರಳಿ ಬರಬಹುದು.
Yusuf 12:63
ಅವರು ತಮ್ಮ ತಂದೆಯ ಬಳಿಗೆ ಮರಳಿದಾಗ ಹೇಳಿದರು; ಓ ನಮ್ಮ ತಂದೆಯೇ ನಮ್ಮಿಂದ ಧಾನ್ಯವನ್ನು ತಡೆಹಿಡಿಯಲಾಗಿದೆ. ನಾವು ಧಾನ್ಯವನ್ನು ತರಲು ತಾವು ನಮ್ಮೊಂದಿಗೆ ನಮ್ಮ ಸಹೋದರ (ಬಿನ್‌ಯಾಮಿನ್)ನನ್ನು ಕಳುಹಿಸಿರಿ. ನಾವು ಅವನ ಸಂರಕ್ಷಣೆಯ ಹೊಣೆಗಾರರಾಗಿರುತ್ತೇವೆ.
Yusuf 12:64
ಆಗ ಯಾಕೂಬ್‌ರವರು ಹೇಳಿದರು ಇದಕ್ಕೆ ಮೊದಲು ಅವನ ಸಹೋದರನ ವಿಚಾರದಲ್ಲಿ ನಿಮ್ಮನ್ನು ನಂಬಿದAತೆ ಇವನ ವಿಚಾರದಲ್ಲಿಯೂ ನಾನು ನಿಮ್ಮನ್ನು ನಂಬಬೇಕೆ? ಹಾಗೆಯೇ ಅಲ್ಲಾಹನೇ ಅತ್ಯುತ್ತಮ ಸಂರಕ್ಷಕನಾಗಿರುವನು, ಮತ್ತು ಅವನು ಕಾರುಣ್ಯವಂತರಲ್ಲಿ ಮಹಾ ಕಾರುಣ್ಯವಂತನಾಗಿದ್ದಾನೆ.
Yusuf 12:65
ಅವರು ತಮ್ಮ ಸರಕುಗಳನ್ನು ಬಿಚ್ಚಿದಾಗ ಅವರ ಬಂಡವಾಳವು ಅವರೆಡೆಗೆ ಹಿಂದಿರುಗಿಸಲಾಗಿರುವುದನ್ನು ಕಂಡು ಹೇಳಿದರು; ನಮ್ಮ ತಂದೆಯೇ ನಮಗೆ ಇನ್ನೇನು ಬೇಕು? ಇದೋ ನಮ್ಮ ಬಂಡವಾಳವನ್ನು ಸಹ ನಮಗೆ ಹಿಂದಿರುಗಿಸಲಾಗಿದೆ. ನಾವು ನಮ್ಮ ಕುಟುಂಬವನ್ನು ಪೋಷಿಸುವೆವು ಮತ್ತು ಸಹೋದರನನ್ನು ನೋಡಿಕೊಳ್ಳುವೆವು ಹಾಗೂ ಒಂದು ಒಂಟೆಯ ಹೊರೆಯಷÀÄ್ಟ ಧಾನ್ಯವನ್ನು ಹೆಚ್ಚಾಗಿ ತರುವೆವು, ಇದು ನಮಗೆ ಸುಲಭವಾಗಿ ದೊರಕುವ ಧಾನ್ಯವಾಗಿದೆ.
Yusuf 12:66
ಅವರ ತಂದೆಯೂ ಹೇಳಿದರು; ನಾನು ಖಂಡಿತವಾಗಿ ಅವನನ್ನು ನಿಮ್ಮೊಂದಿಗೆ ಕಳುಹಿಸಲಾರೆ. ಖಂಡಿತ ನೀವು ಅವನನ್ನು ನನ್ನಲ್ಲಿಗೆ ತಲುಪಿಸಿಕೊಡುವಿರಿ ಎಂದು ಅಲ್ಲಾಹನ ಮೇಲೆ ಆಣೆ ಹಾಕಿ ಮಾತು ಕೊಡಬೇಕು. ಆದರೆ ನೀವು ಯಾವುದಾದರೂ ವಿಪತ್ತಿನಲ್ಲಿ ಸಿಲುಕಿದರೆ ಬೇರೆ ಮಾತು. ಆಗವರು ದೃಢವಾದ ಭರವಸೆ ಕೊಟ್ಟಾಗ ಯಾಕೂಬರು ಹೇಳಿದರು; ನಾವು ಹೇಳುತ್ತಿರುವುದರ ಮೇಲೆ ಅಲ್ಲಾಹನು ಸಾಕ್ಷಿಯಾಗಿದ್ದಾನೆ.
Yusuf 12:67
ಅವರ ತಂದೆಯು ಹೇಳಿದರು ಓ ನನ್ನ ಮಕ್ಕಳೇ, ನೀವೆಲ್ಲರೂ ಒಂದೇ ದ್ವಾರದ ಮೂಲಕ ಪ್ರವೇಶಿಸದೆ ವಿವಿಧ ದ್ವಾರಗಳ ಮೂಲಕ ಪ್ರವೇಶಿಸಿರಿ. ನಾನು ಅಲ್ಲಾಹನಿಂದ ಇರುವ ಯಾವ ವಿಧಿಯನ್ನು ನಿಮ್ಮಿಂದ ಸರಿಸಲಾರೆ. ಆಜ್ಞಾಧಿಕಾರವು ಕೇವಲ ಅಲ್ಲಾಹನದೇ ಆಗಿದೆ. ನಾನು ಅವನ ಮೇಲೆಯೇ ಭರವಸೆಯನ್ನು ಇಟ್ಟಿದ್ದೇನೆ ಮತ್ತು ಭರವಸೆಯನ್ನಿರಿಸಿಕೊಳ್ಳುವ ಪ್ರತಿಯೊಬ್ಬನು ಅವನ ಮೇಲೆ ಭರವಸೆಯನ್ನಿಡಬೇಕು.
Yusuf 12:68
ಅವರು ತಮ್ಮ ತಂದೆಯು ಆದೇಶಿಸಿದಂತೆ ವಿವಿಧ ದ್ವಾರಗಳಿಂದ ಪ್ರವೇಶಿಸಿದಾಗ ಅಲ್ಲಾಹನು ನಿಶ್ಚಯಿಸಿದಂತಹ ಸಂಗತಿಯಿAದ ಅವನು ಅವರನ್ನು ರಕ್ಷಿಸಿಕೊಳ್ಳುವ ಸಂಭವವೇ ಇರಲಿಲ್ಲ. ಆದರೆ ಯಾಕೂಬರ ಮನಸ್ಸಿನಲ್ಲಿ ಯೋಚನೆಯೊಂದು (ಉಂಟಾಯಿತು) ಅದನ್ನು ಅವರು ಪೂರ್ತಿಕರಿಸಿದರು. ನಿಸ್ಸಂಶಯವಾಗಿಯೂ ಅವರು ನಾವು ಕಲಿಸಿದ ಜ್ಞಾನದ ಸುಶಿಕ್ಷಿತರಾಗಿದ್ದರು. ಆದರೆ ಅಧಿಕ ಜನರು ಆರಿಯುವುದಿಲ್ಲ.
Yusuf 12:69
ಅವರು ಯೂಸುಫ್‌ರವರ ಬಳಿಗೆ ತಲುಪಿದಾಗ ಅವರು ತನ್ನ ಸಹೋದರರನ್ನು (ಬಿನ್‌ಯಾಮಿನ್) ತನ್ನ ಬಳಿ ಇರಿಸಿದರು ಮತ್ತೆ ಹೇಳಿದರು ನಾನು ನಿನ್ನ ಸಹೋದರ (ಯೂಸುಫ್) ಆಗಿದ್ದೇನೆ. ಇನ್ನು ನೀನು ಅವರು ಮಾಡುತ್ತಿರುವ ಕೃತ್ಯಗಳ ಬಗ್ಗೆ ವ್ಯಥೆ ಪಡಬೇಡ.
Yusuf 12:70
ಯೂಸುಫ್‌ರವರು ಅವರ ಸಾಮಾನು ಸಿದ್ಧಪಡಿಸಿಕೊಟ್ಟಾಗ ತನ್ನ ಸಹೋದರನ ಸರಕಿನ ಚೀಲದಲ್ಲಿ ಪಾನ ಪಾತ್ರೆಯನ್ನು ಇಟ್ಟುಬಿಟ್ಟರು. ಅನಂತರ ಕರೆ ನೀಡುವವನೊಬ್ಬನು ಕೂಗಿ ಹೇಳಿದನು; ಓ ಯಾತ್ರಿಕ ತಂಡದವರೇ, ನಿಸ್ಸಂದೇಹವಾಗಿಯೂ ನೀವು ಕಳ್ಳರಾಗಿದ್ದೀರಿ.
Yusuf 12:71
ಆವರು ಅವರ ಕಡೆಗೆ ತಿರುಗಿ ಹೇಳಿದರು; ನಿಮ್ಮ ಯಾವ ವಸ್ತು ಕಳೆದು ಹೋಗಿದೆ?
Yusuf 12:72
ಅವರು ಉತ್ತರಿಸಿದರು; ರಾಜನ ಪಾನಪಾತ್ರೆ ಕಳೆದು ಹೋಗಿದೆ. ಅದನ್ನು ತಂದು ಕೊಟ್ಟವನಿಗೆ ಒಂದು ಒಂಟೆಯ ಹೊರÉಯಷÀÄ್ಟ ಧಾನ್ಯ ಸಿಗುವುದು ಮತ್ತು ಅದರ ಹೊಣೆಗಾರ ನಾನಾಗಿದ್ದೇನೆ.
Yusuf 12:73
ಅವರು ಹೇಳಿದರು; ಅಲ್ಲಾಹನ ಆಣೆ ನಾವು ಈ ದೇಶದಲ್ಲಿ ಕ್ಷೆÆÃಭೆ ಹರಡಲು ಬಂದಿಲ್ಲವೆAದು ಮತ್ತು ನಾವು ಕಳ್ಳರೂ ಅಲ್ಲವೆಂದು ನಿಮಗೆ ಚೆನ್ನಾಗಿ ತಿಳಿದಿದೆ.
Yusuf 12:74
ಅವರು; ಸರಿ, ನೀವು ಸುಳ್ಳುಗಾರರಾಗಿದ್ದರೆ ಕಳ್ಳನ ಶಿಕ್ಷೆಯೇನು ಎಂದು ಕೇಳಿದರು,
Yusuf 12:75
ಸಹೋದರರು ಉತ್ತರಿಸಿದರು ಯಾರ ಸರಕಿನಲ್ಲಿ ಅದು ಸಿಗುವುದು ಅವನನ್ನೇ ಅದರ ಬದಲಿಗೆ ವಶಪಡಿಸಿಕೊಳ್ಳಲಾಗುವುದು. ನಾವು ಇದೇ ಪ್ರಕಾರ ಅಕ್ರಮಿಗಳಿಗೆ ಶಿಕ್ಷೆ ನೀಡುತ್ತೇವೆ,
Yusuf 12:76
ಹಾಗೆಯೇ ಯೂಸುಫ್ ತನ್ನ ಸಹೋದರನ ಸರಕಿಗಿಂತ ಮೊದಲು ಅವರ ಸರಕುಗಳಿಂದಲೇ ತಪಾಸಣೆ ಆರಂಭಿಸಿದರು. ಅನಂತರ ತನ್ನ ಸಹೋದರನ ಸರಕಿನಿಂದ ಪಾನ ಪಾತ್ರೆಯನ್ನು ಹೊರತೆಗೆದರು. ಹೀಗೆ ನಾವು ಯೂಸುಫ್‌ರವರಿಗೆ ಉಪಾಯವನ್ನು ಕಲಿಸಿಕೊಟ್ಟೆವು. ಅಲ್ಲಾಹನು ಇಚ್ಛಿಸದಿರುತ್ತಿದ್ದರೆ ರಾಜನ ಕಾನೂನಿನ ಪ್ರಕಾರ ತನ್ನ ಸಹೋದರನನ್ನು ತಡೆದಿರಿಸಿಕೊಳ್ಳಲಾಗುತ್ತಿರಲಿಲ್ಲ. ನಾವು ಇಚ್ಛಿಸಿದವರಿಗೆ ಪದವಿಗಳನ್ನು ಉನ್ನತಗೊಳಿಸುತ್ತೇವೆ ಮತ್ತು ಪ್ರತಿಯೊಬ್ಬ ಜ್ಞಾನಿಗಿಂತ ಔನ್ನತ್ಯವನ್ನು ಹೊಂದಿರುವ ಇನ್ನೊಬ್ಬ ಸರ್ವಜ್ಞಾನಿಯಿದ್ದಾನೆ.
Yusuf 12:77
ಆಗ ಸಹೋದರರು ಹೇಳಿದರು; ಇವನು ಕದ್ದರೂ(ಆಶ್ಚರ್ಯವಿಲ್ಲ) ಇದಕ್ಕೆ ಮೊದಲು ಇವನ ಸಹೋದರ(ಯೂಸುಫ್)ನೂ ಸಹ ಕದ್ದಿದ್ದಾನೆ. ಆದರೆ ಯೂಸುಫ್ ಈ ವಿಚಾರವನ್ನು ತನ್ನ ಮನಸ್ಸಿನಲ್ಲಿ ಅಡಗಿಸಿಟ್ಟರು ಅವರ ಮುಂದೆ ಬಹಿರಂಗಗೊಳಿಸಲಿಲ್ಲ. ನೀವು ಅತ್ಯಂತ ನೀಚಮಟ್ಟದಲ್ಲಿ ಇದ್ದೀರಿ ಹಾಗೂ ನೀವು ಹೇಳುತ್ತಿರುವುದನ್ನು ಅಲ್ಲಾಹನು ಚೆನ್ನಾಗಿ ಅರಿಯುವವನಾಗಿದ್ದಾನೆ ಎಂದು ತಮ್ಮ ಮನಸ್ಸಿನಲ್ಲಿ ಹೇಳಿಕೊಂಡರು.
Yusuf 12:78
ಅವರು ಹೇಳಿದರು; ರಾಜರೇ ಇವನ ತಂದೆ ತುಂಬಾ ಪ್ರಾಯದ ವೃದ್ಧ ವ್ಯಕ್ತಿಯಾಗಿದ್ದಾರೆ. ತಾವು ಅವನ ಸ್ಥಾನದಲ್ಲಿ ನಮ್ಮಲ್ಲಿ ಯಾರನ್ನಾದರೂ ತಡೆದಿರಿಸಿಕೊಳ್ಳಿರಿ. ನಾವು ತಮ್ಮನ್ನು ಮಹಾ ಸಜ್ಜನರಲ್ಲಿ ಕಾಣುತ್ತಿದ್ದೇವೆ.
Yusuf 12:79
ಯೂಸುಫ್ ಹೇಳಿದರು; ಯಾರ ಬಳಿ ನಮಗೆ ನಮ್ಮ ವಸ್ತುಸಿಕ್ಕಿದೆಯೋ ಅವನ ಹೊರತು ಇತರರನ್ನು ಸೆರೆಹಿಡಿಯುವುದರಿಂದ ಅಲ್ಲಾಹನ ಅಭಯ ಯಾಚಿಸುತ್ತೇವೆ, ಹಾಗೇನಾದರೂ ಮಾಡಿದರೆ ಖಂಡಿತವಾಗಿಯೂ ನಾವು ಅಕ್ರಮಿಗಳಾಗಿಬಿಡುವೆವು.
Yusuf 12:80
ಅವರು ಅವನಿಂದ ನಿರಾಶರಾದಾಗ ಏಕಾಂತದಲ್ಲಿ ಕುಳಿತುಕೊಂಡು ಸಮಾಲೋಚನೆ ನಡೆಸಿದರು. ಅವರ ಪೈಕಿ ಹಿರಿಯನೆಂದನು ನಿಮ್ಮ ತಂದೆಯು ನಿಮ್ಮಿಂದ ಅಲ್ಲಾಹನ ಆಣೆ ಹಾಕಿ ಸದೃಢ ಕರಾರನ್ನು ಪಡೆದಿರುವರೆಂದು ನಿಮಗೆ ಗೊತ್ತಿಲ್ಲವೇ? ಮತ್ತು ಇದಕ್ಕೆ ಮೊದಲು ನೀವು ಯೂಸುಫ್‌ನ ವಿಚಾರದಲ್ಲಿ ನೀಚತನ ತೋರಿರುವಿರಿ. ಹಾಗಾಗಿ ಸ್ವತಃ ನನ್ನ ತಂದೆಯವರು ನನಗೆ ಅನುಮತಿ ನೀಡುವ ತನಕ ಅಥವಾ ಅಲ್ಲಾಹನು ನನ್ನ ವಿಚಾರದ ತೀರ್ಪನ್ನು ಮಾಡುವ ತನಕ ನಾನಂತೂ ಈ ಭೂಪ್ರದೇಶವನ್ನು ಬಿಟ್ಟು ಕದಲಲಾರೆ ಮತ್ತು ಅಲ್ಲಾಹನೇ ಅತ್ಯುತ್ತಮ ತೀರ್ಪು ನೀಡುವವನಾಗಿದ್ದಾನೆ.
Yusuf 12:81
ನೀವು ನಿಮ್ಮ ತಂದೆಯ ಬಳಿಗೆ ಮರಳಿ ಹೋಗಿ ಹೇಳಿರಿ; ಓ ನಮ್ಮ ತಂದೆಯೇ ತಮ್ಮ ಮಗನು ಕದ್ದಿದ್ದಾನೆ ಮತ್ತು ನಾವು ನಮಗೆ ಗೊತ್ತಿರುವುದನ್ನೇ ಸಾಕ್ಷಿ ವಹಿಸಿರುತ್ತೇವೆ ಮತ್ತು ಅಗೋಚರ ಸಂಗತಿಯ ಕುರಿತು ಎಚ್ಚರಿಕೆ ವಹಿಸುವರು ನಾವಲ್ಲ.
Yusuf 12:82
ನಾವು ಇದ್ದಂತಹ ಆ ನಾಡಿನವರಲ್ಲಿ, ಮತ್ತು ನಾವು ಬಂದ ಯಾತ್ರಾ ತಂಡದವರೊAದಿಗೆ ವಿಚಾರಿಸಿ ನೋಡಿರಿ ನಿಜವಾಗಿಯೂ ನಾವು ಸತ್ಯವಂತರಾಗಿದ್ದೇವೆ.
Yusuf 12:83
ಅವರ ತಂದೆಯೂ ಹೇಳಿದರು; ನೀವು ನಿಮ್ಮಿಂದಲೇ ಒಂದು ಸಂಗತಿಯನ್ನು ಉಂಟುಮಾಡಿರುವಿರಿ. ಇನ್ನು ಉತ್ತಮ ಸಹನÉಯೇ ಲೇಸು. ಅಲ್ಲಾಹನು ಅವರೆಲ್ಲರನ್ನೂ ನನ್ನ ಬಳಿಗೆ ತಲುಪಿಸಬಹುದು ಅವನೇ ಸರ್ವಜ್ಞಾನಿಯೂ ಯುಕ್ತಿಪೂರ್ಣನೂ ಆಗಿದ್ದಾನೆ.
Yusuf 12:84
ಅನಂತರ ಯಾಕೂಬರು ಅವರಿಂದ ಮುಖ ತಿರುಗಿಸಿಕೊಂಡರು ಮತ್ತು ಹೇಳಿದರು “ಅಯ್ಯೋ ಓ ನನ್ನ ಯೂಸುಫ್" ದುಃಖ ಸಂಕಟದಿAದ ಅವರ ಕಣ್ಣುಗಳೆರಡು ಬಿಳುಪಾಗಿ ಬಿಟ್ಟಿದ್ದವು, ಮತ್ತು ಅವರು ತೀವ್ರ ದುಃಖವನ್ನು ಅದುಮಿಟ್ಟುಕೊಂಡಿದ್ದರು.
Yusuf 12:85
ಅವರ ಮಕ್ಕಳು ಹೇಳಿದರು; ಅಲ್ಲಾಹನಾಣೆ ನೀವಂತು ಸದಾ ಯೂಸುಫ್‌ನನ್ನು ನೆನೆಸುತ್ತಲೇ ತಮ್ಮನ್ನು ಕರಗಿಸಿಬಿಡುವಿರಿ ಅಥವಾ ನಾಶಗೊಳಿಸಿಕೊಳ್ಳುವಿರಿ.
Yusuf 12:86
ಅವರು(ಯಾಕೂಬ್) ಹೇಳಿದರು ನಾನಂತೂ ನನ್ನ ತಳಮಳವನ್ನು ಮತ್ತು ಸಂಕಟವನ್ನು ಅಲ್ಲಾಹನಲ್ಲಿ ತೋಡಿಕೊಳ್ಳುತ್ತಿರುವೆನು ಮತ್ತು ನೀವು ತಿಳಿದಿಲ್ಲದ್ದನ್ನು ಅಲ್ಲಾಹನ ಕಡೆಯಿಂದ ನಾನು ತಿಳಿದಿದ್ದೇನೆ.
Yusuf 12:87
ಓ ನನ್ನ ಪುತ್ರರೇ ನೀವು ಹೋಗಿ ಯೂಸುಫ್ ಮತ್ತು ಅವನ ಸಹೋದರನನ್ನು ಹುಡುಕಿರಿ ಮತ್ತು ನೀವು ಅಲ್ಲಾಹನ ಕೃಪೆಯಿಂದ ನಿರಾಶರಾಗದಿರಿ. ನಿಸ್ಸಂಶಯವಾಗಿಯೂ ಸತ್ಯನಿಷÉÃಧಿಗಳ ಹೊರತು ಅಲ್ಲಾಹನ ಕೃಪೆಯಿಂದ ಬೇರಾರೂ ನಿರಾಶರಾಗಲಾರರು.
Yusuf 12:88
ಅನಂತರ ಅವರು ಯೂಸುಫ್‌ರವರ ಬಳಿಗೆ ತಲುಪಿದಾಗ ಹೇಳಿದರು; ಓ ರಾಜನೆ ನಮಗೂ ನಮ್ಮ ಕುಟುಂಬಕ್ಕೂ ಸಂಕಷ್ಟ ಭಾದಿಸಿದೆ, ಮತ್ತು ನಾವು ಅತ್ಯಲ್ಪ ಬಂಡವಾಳದೊAದಿಗೆ ಬಂದಿರುತ್ತೇವೆ. ಆದ್ದರಿಂದ ನೀವು ನಮಗೆ ಸಂಪೂರ್ಣ ಧಾನ್ಯವನ್ನು ನೀಡಿರಿ, ಮತ್ತು ನಮ್ಮ ಮೇಲೆ ದಾನ ಧರ್ಮವನ್ನು ಮಾಡಿರಿ. ಖಂಡಿತವಾಗಿಯೂ ಅಲ್ಲಾಹನು ದಾನ-ಧರ್ಮ ನೀಡುವವರಿಗೆ ಪ್ರತಿಫಲವನ್ನು ನೀಡುವನು.
Yusuf 12:89
ಯೂಸುಫ್ ಹೇಳಿದರು; ನೀವು ಅಜ್ಞಾನಿಗಳಾಗಿದ್ದಾಗ ಯೂಸುಫ್ ಮತ್ತು ಅವನ ಸಹೋದರನೊಂದಿಗೆ ಹೇಗೆ ವರ್ತಿಸಿದ್ದೀರೆಂದು ನಿಮಗೆ ತಿಳಿದಿದೆಯೇ ?
Yusuf 12:90
ಅವರು ಹೇಳಿದರು; ನಿಜವಾಗಿಯೂ ನೀವೇ ಯೂಸುಫ್‌ರವರೇ ? ಅವರು ಉತ್ತರಿಸಿದರು ಹೌದು ನಾನೇ ಯೂಸುಫ್, ಇವನು ನನ್ನ ಸಹೋದರನು ಅಲ್ಲಾಹನು ನಮ್ಮ ಮೇಲೆ ಅನುಗ್ರಹವನ್ನು ಮಾಡಿರುತ್ತಾನೆ. ವಾಸ್ತವದಲ್ಲಿ ಭಯ-ಭಕ್ತಿಯನ್ನಿರಿಸುವವರಿಗೆ ಮತ್ತು ಸಹನಶೀಲತೆ ತೋರಿಸುವ ಸಜ್ಜನರ ಪ್ರತಿಫಲವನ್ನು ಅಲ್ಲಾಹನು ವ್ಯರ್ಥಗೊಳಿಸುವುದಿಲ್ಲ.
Yusuf 12:91
ಅವರು ಹೇಳಿದರು ಅಲ್ಲಾಹನಾಣೆ ಅಲ್ಲಾಹನು ನಿಮಗೆ ನಮ್ಮ ಮೇಲೆ ಶ್ರೇಷÀ್ಠತೆಯನ್ನು ನೀಡಿರುವನು ಮತ್ತು ನಾವು ತಪ್ಪಿತಸ್ಥರೇ ಆಗಿದ್ದೆವು.
Yusuf 12:92
ಅವರು ಉತ್ತರಿಸಿದರು; ಇಂದು ನಿಮ್ಮ ಮೇಲೆ ಯಾವ ದೋಷಾರೋಪಣೆ ಇಲ್ಲ ಅಲ್ಲಾಹನು ನಿಮಗೆ ಕ್ಷಮಿಸಲಿ. ಅವನು ಸಕಲ ಕಾರುಣ್ಯವಂತರಲ್ಲಿ ಮಹಾ ಕಾರುಣ್ಯವಂತನಾಗಿದ್ದಾನೆ.
Yusuf 12:93
ನೀವು ನನ್ನ ಅಂಗಿಯನ್ನು ತೆಗೆದುಕೊಂಡು ಹೋಗಿರಿ, ಅದನ್ನು ನನ್ನ ತಂದೆಯವರ ಮುಖದ ಮೇಲೆ ಹಾಕಿ, ಅವರ ದೃಷ್ಟಿ ಮರಳಿ ಬರುವುದು ನಂತರ ನಿಮ್ಮ ಎಲ್ಲಾ ಕುಟುಂಬದವರನ್ನು ನನ್ನ ಬಳಿಗೆ ಕರೆತನ್ನಿರಿ.
Yusuf 12:94
ಆಗ ಈ ಯಾತ್ರಾ ತಂಡವು (ಈಜಿಪ್ಟಿನಿಂದ) ಹೊರಟಾಗ ಅವರ ತಂದೆಯೂ ಹೇಳಿದರು; ನಾನು ಯೂಸುಫ್‌ನ ಸುಗಂಧವನ್ನು ಪಡೆಯುತ್ತಿದ್ದೇನೆ, ನೀವು ನನ್ನನ್ನು ಅರಳು ಮರುಳಾದವನೆಂದು ತಿಳಿಯದಿದ್ದರೆ!
Yusuf 12:95
ಅವರು ಹೇಳಿದರು ಅಲ್ಲಾಹನಾಣೆ ತಮ್ಮ ಅದೇ ಹಳೆಯ ತಪ್ಪು ಗ್ರಹಿಕೆಯಲ್ಲಿದ್ದೀರಿ.
Yusuf 12:96
ಸುವಾರ್ತೆ ನೀಡುವವನು ಬಂದು ಆ ನಿಲುವಂಗಿಯನ್ನು ಅವರ ಮುಖದ ಮೇಲೆ ಹಾಕಿದನು. ಆಗಲೇ ಅವರ ದೃಷ್ಟಿ ಮರಳಿ ಬಂದಿತು. ಅವರು ಹೇಳಿದರು; ನೀವು ತಿಳಿದಿಲ್ಲದ್ದನ್ನು ನಾನು ಅಲ್ಲಾಹನಿಂದ ತಿಳಿದುಕೊಂಡಿರುತ್ತೇನೆ ಎಂದು ನಾನು ನಿಮಗೆ ಹೇಳಿರಲಿಲ್ಲವೆ ?
Yusuf 12:97
ಅವರು ಹೇಳಿದರು; ಓ ನಮ್ಮ ತಂದೆಯೇ ನಮ್ಮ ಪಾಪಗಳಿಗೆ ಕ್ಷಮೆಯನ್ನು ಬೇಡಿರಿ ನಿಸ್ಸಂಶಯವಾಗಿಯೂ ನಾವು ಪಾಪಿಗಳಾಗಿದ್ದೆವು.
Yusuf 12:98
ಅವರು ಹೇಳಿದರು; ಸರಿ ನಾನು ಶೀಘ್ರವೇ ನನ್ನ ಪ್ರಭುವಿನಿಂದ ನಿಮಗಾಗಿ ಕ್ಷಮೆ ಯಾಚಿಸುವೆನು, ನಿಶ್ಚಯಯವಾಗಿಯೂ ಅವನು ಮಹಾ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುವನು.
Yusuf 12:99
ಅವರು ಯೂಸುಫ್‌ರವರ ಬಳಿ ತಲುಪಿದಾಗ ತನ್ನ ತಂದೆ ತಾಯಿಯವರಿಗೆ ಆದರದಿಂದ ಬರಮಾಡಿಕೊಂಡರು ಮತ್ತು (ತಮ್ಮ ಎಲ್ಲಾ ಕುಟುಂಬದವರೊಡನೆ) ಹೇಳಿದರು ನೀವೆಲ್ಲರೂ ನಗರದೊಳಗೆ (ಈಜಿಪ್ಟ್) ಪ್ರವೇಶಿಸಿರಿ. ಹೇಳಿದರು ಅಲ್ಲಾಹನು ಇಚ್ಚಿಸಿದರೆ ನೀವು ಶಾಂತಿ ಸಮಾಧಾನಗಳೊಂದಿಗೆ ವಾಸಿಸುವಿರಿ.
Yusuf 12:100
ಅವರು ತನ್ನ ತಂದೆ-ತಾಯಿಯನ್ನು ತನ್ನ ಜೊತೆಗೆ ಸಿಂಹಾಸನದ ಮೇಲೆ ಕುಳ್ಳಿರಿಸಿದರು ಮತ್ತು ಅವರೆಲ್ಲರೂ ಯೂಸುಫ್ ರವರ ಮುಂದೆ ಸಾಷ್ಟಾಂಗವೆರಗಿದರು(ಆಗ) ಅವರೆಂದರು ಗೌರವಾನ್ವಿತ ತಂದೆಯವರೇ, ಇದು ನನ್ನ ಹಿಂದಿನ ಕನಸಿನ ಫಲವಾಗಿದೆ. ನನ್ನ ಪ್ರಭು ಅದನ್ನು ನಿಜ ಮಾಡಿ ತೋರಿಸಿದನು, ಮತ್ತು ನನ್ನನ್ನು ಸೆರೆಮನೆಯಿಂದ ಬಿಡಿಸಿದಾಗಲೂ ನನ್ನ ಮತ್ತು ನನ್ನ ಸಹೋದರರ ನಡುವೆ ಶೈತಾನನು ಭಿನ್ನತೆಯನ್ನು ಹಾಕಿದ ನಂತರ ಮರುಭೂಮಿಯಿಂದ ನಿಮ್ಮೆಲ್ಲರನ್ನು ಕರೆದುಕೊಂಡು ಬಂದಾಗಲೂ ಅವನು ನನಗೆ ಮಹಾ ಉಪಕಾರವನ್ನು ಮಾಡಿರುವನು. ವಾಸ್ತವದಲ್ಲಿ ನನ್ನ ಪ್ರಭು ತಾನು ಇಚ್ಛಿಸಿದವುಗಳಲ್ಲಿ ಸೂಕ್ಷ್ಮವಾಗಿ ನಿಯಂತ್ರಿಸುತ್ತಾನೆ ಮತ್ತು ನಿಶ್ಚಯವಾಗಿಯೂ ಅವನು ಸರ್ವಜ್ಞಾನಿಯು ಯುಕ್ತಿಪೂರ್ಣನೂ ಆಗಿದ್ದಾನೆ.
Yusuf 12:101
ನನ್ನ ಪ್ರಭುವೇ ನೀನು ನನಗೆ ರಾಜ್ಯಾಧಿಕಾರವನ್ನು ನೀಡಿರುವೆ ಮತ್ತು ನೀನು ನನಗೆ ಕನಸುಗಳ ಫಲವನ್ನು ಕಲಿಸಿಕೊಟ್ಟಿರುವೆ. ಓ ಆಕಾಶಗಳ ಮತ್ತು ಭೂಮಿಯ ಸೃಷ್ಟಿಕರ್ತನೇ ನೀನೆ ಇಹಲೋಕದಲ್ಲೂ ಪರಲೋಕದಲ್ಲೂ ನನ್ನ ಮಿತ್ರನಾಗಿರುವೆ. ನನಗೆ ನೀನು ವಿಧೇಯನಾಗಿರುವ ಸ್ಥಿತಿಯಲ್ಲಿ ಮರಣ ನೀಡು ಮತ್ತು ನನ್ನನ್ನು ಸಜ್ಜನರಲ್ಲಿ ಸೇರಿಸು.
Yusuf 12:102
ಓ ಪೈಗಂಬರರೇ ಇವು ನಿಮ್ಮೆಡೆಗೆ ಅವತೀರ್ಣಗೊಳಿಸಲಾಗುತ್ತಿರುವ ಅಗೋಚರ ವೃತ್ತಾಂತಗಳಾಗಿವೆ. ಅವರು ಪರಸ್ಪರ ತಮ್ಮ ಯೋಜನೆಯಲ್ಲಿ ಒಮ್ಮತದೊಂದಿಗೆ ಕುತಂತ್ರವೆಸಗುತ್ತಿದ್ದಾಗ ನೀವು ಅವರ ಬಳಿ ಇರಲಿಲ್ಲ.
Yusuf 12:103
ಆದರೆ ನೀವೆಷÉ್ಟÃ ಹಂಬಲಿಸಿದರು ಈ ಜನರಲ್ಲಿ ಹೆಚ್ಚಿನವರು ಸತ್ಯ ವಿಶ್ವಾಸಿಗಳಾಗುವವರಲ್ಲ.
Yusuf 12:104
ನೀವು ಇದಕ್ಕಾಗಿ ಅವರಿಂದ ಯಾವುದೇ ಪ್ರತಿಫಲವನ್ನು ಬೇಡುತ್ತಿಲ್ಲ. ಇದು ಸರ್ವಲೋಕದವರಿಗೆ ಒಂದು ಉಪದೇಶವಾಗಿದೆ.
Yusuf 12:105
ಆಕಾಶಗಳಲ್ಲೂ , ಭೂಮಿಯಲ್ಲೂ ಎಷÉÆ್ಟÃ ದೃಷ್ಟಾಂತಗಳಿವೆ. ಅವುಗಳನ್ನು ಕಡೆಗಣಿಸುತ್ತಾ ಅವರು ಅವುಗಳ ಮುಂದಿನಿAದಲೇ ಹಾದು ಹೋಗುತ್ತಿರುವರು.
Yusuf 12:106
ಅವರಲ್ಲಿ ಹೆಚ್ಚಿನವರು ಸಹಭಾಗಿಗಳನ್ನು ಕಲ್ಪಿಸದೆ ಅಲ್ಲಾಹನಲ್ಲಿ ನಂಬಿಕೆಯನ್ನಿಡುವುದಿಲ್ಲ.
Yusuf 12:107
ಅವರು ಅಲ್ಲಾಹನಿಂದ ಯಾತನೆಯೊಂದು ಅವರ ಮೇಲೆ ಬಂದೆರಗುವುದರಿAದಲೂ ನಿಶ್ಚಿಂತರಾಗಿರುವರೇ ?
Yusuf 12:108
ಹೇಳಿರಿ ಇದುವೇ ನನ್ನ ಮಾರ್ಗವಾಗಿದೆ. ನಾನು ಮತ್ತು ನನ್ನನ್ನು ಅನುಸರಿಸುವವರು ಅಲ್ಲಾಹನೆಡೆಗೆ ಸದೃಢ ಜ್ಞಾನ ಹಾಗೂ ನಂಬಿಕೆಯೊAದಿಗೆ ಕರೆಯುತ್ತಿದ್ದೇವೆ, ಅಲ್ಲಾಹನು ಪರಮಪಾವನನು ಮತ್ತು (ಓ ಪೈಗಂಬರರೇ) ನಾನು ಬಹುದೇವರಾಧಕರಲ್ಲಿ ಸೇರಿಲ್ಲ.
Yusuf 12:109
ನಿಮಗಿಂತ ಮುಂಚೆ ನಾವು ಕಳುಹಿಸಲಾದ ಸಂದೇಶವಾಹಕರೆಲ್ಲರೂ ಪುರುಷÀರೇ ಆಗಿದ್ದರು. ನಾವು ಅವರೆಡೆಗೆ ಸಂದೇಶವನ್ನು ನೀಡುತ್ತಿದ್ದೆವು, ಅವರು ಅದೇ ನಾಡಿನವರಾಗಿದ್ದರು, ಅವರು ಭೂಮಿಯಲ್ಲಿ ಸಂಚರಿಸಿ ಅವರಿಗೆ ಮುಂಚಿನವರ ಪರಿಣಾಮವು ಹೇಗಿತ್ತೆಂಬುದನ್ನು ನೋಡಲಿಲ್ಲವೇ? ನಿಶ್ಚಯವಾಗಿಯೂ ಪರಲೋಕದ ನೆಲೆಯು ಭಯವನ್ನು ಇರಿಸಿಕೊಂಡವರಿಗೆ ಅತ್ಯುತ್ತಮವಾಗಿದೆ. ಹಾಗಿದ್ದೂ ನೀವು ಯೋಚಿಸುವುದಿಲ್ಲವೇ.
Yusuf 12:110
ಕೊನೆಗೆ ಸಂದೇಶವಾಹಕರು ನಿರಾಶರಾದಾಗ ತಮ್ಮೊಂದಿಗೆ ಸುಳ್ಳು ಹೇಳಲಾಗಿದೆ ಎಂದು ಭಾವಿಸಿದಾಗ ನಮ್ಮ ಸಹಾಯವು ಪೈಗಂಬರರ ಕಡೆಗೆ ಬಂದುಬಿಟ್ಟಿತು. ನಾವು ಇಚ್ಚಿಸಿದವರನ್ನು ರಕ್ಷಿಸಲಾಯಿತು ಮತ್ತು ನಮ್ಮ ವಿಪತ್ತನ್ನು ಅಪರಾಧಿಗಳಾದ ಜನರಿಂದ ಸರಿಸಲಾಗದು.
Yusuf 12:111
ಅವರ ವೃತ್ತಾಂತಗಳಲ್ಲಿ ಬುದ್ಧಿವಂತರಿಗೆ ಪಾಠವಿದೆ. ಈ ಕುರ್‌ಆನ್ ಕಲ್ಪಿತ ಸುಳ್ಳು ಮಾತಲ್ಲ, ಆದರೆ ಇದು ಮೊದಲು ಬಂದ ಗ್ರಂಥಗಳನ್ನು ದೃಢೀಕರಿಸುವಂಥದ್ದೂ, ಪ್ರತಿಯೊಂದು ಸಂಗತಿಯನ್ನು ಸ್ಪಷÀ್ಟವಾಗಿ ವಿವರಿಸುವಂಥದ್ದೂ ಆಗಿದೆ, ಮತ್ತು ವಿಶ್ವಾಸವಿಡುವ ಜನರಿಗೆ ಸನ್ಮಾರ್ಗವೂ ಕಾರುಣ್ಯವೂ ಆಗಿದೆ.
Ra'd 13:1
ಅಲಿಫ್ ಲಾಮ್ ಮೀಮ್ ರಾ. ಇವು ದೈವಿಕಗ್ರಂಥದ ಸೂಕ್ತಿಗಳಾಗಿವೆ ಮತ್ತು ನಿಮ್ಮೆಡೆಗೆ ನಿಮ್ಮ ಪ್ರಭುವಿನ ಕಡೆಯಿಂದ ಅವತೀರ್ಣಗೊಳಿಸಿದ್ದೇಲ್ಲವೂ ಸತ್ಯವಾಗಿದೆ. ಆದರೆ ಅಧಿಕÀ ಜನರು ವಿಶ್ವಾಸವಿಡುವುದಿಲ್ಲ.
Ra'd 13:2
ಅಲ್ಲಾಹನೆಂದರೆ ನೀವು ನೋಡುವಂತಹ ಸ್ತಂಭಗಳಿಲ್ಲದ ಆಕಾಶಗಳನ್ನು ಮೇಲಕ್ಕೇರಿಸಿದವನು. ಅನಂತರ ಅವನು ವಿಶ್ವಸಿಂಹಾಸನದ ಮೇಲೆ ಆರೋಢನಾದನು. ಅವನೇ ಸೂರ್ಯ ಮತ್ತು ಚಂದ್ರನನ್ನು ಒಂದು ನಿಯಮಕ್ಕೆ ಅಧೀನಗೊಳಿಸಿದನು. ಪ್ರತಿಯೊಂದು ಸಹ ಒಂದು ನಿರ್ದಿಷÀ್ಟ ಅವಧಿಯ ತನಕ ಸಂಚರಿಸುತ್ತಿವೆ. ಅವನೇ ಪ್ರತಿಯೊಂದು ಕಾರ್ಯವನ್ನು ನಿಯಂತ್ರಿಸುತ್ತಾನೆ. ನೀವು ನಿಮ್ಮ ಪ್ರಭುವಿನ ಭೇಟಿಯನ್ನು ದೃಢವಾಗಿ ನಂಬಲೆAದು ತನ್ನ ದೃಷ್ಟಾಂತಗಳನ್ನು ಸ್ಪಷÀ್ಟವಾಗಿ ವಿವರಿಸುತ್ತಾನೆ.
Ra'd 13:3
ಅವನೇ ಭೂಮಿಯನ್ನು ವಿಸ್ತಾರಗೊಳಿಸಿದನು ಮತ್ತು ಅದರಲ್ಲಿ ಪರ್ವತಗಳನ್ನು ನದಿಗಳನ್ನು ಉಂಟುಮಾಡಿದನು ಮತ್ತು ಅವನೇ ಪ್ರತಿಯೊಂದು ಬಗೆಯ ಫಲಗಳಲ್ಲಿ ಎರಡು ಜೋಡಿಗಳನ್ನು ಉಂಟುಮಾಡಿದನು. ಅವನು ರಾತ್ರಿಯನ್ನು ಹಗಲಿನ ಮೇಲೆ ಆಚ್ಛಾದಿಸುತ್ತಾನೆ. ನಿಶ್ಚಯವಾಗಿಯೂ ಇದರಲ್ಲಿ ಯೋಚಿಸುವ ಜನರಿಗೆ ಅನೇಕ ದೃಷ್ಟಾಂತಗಳಿವೆ.
Ra'd 13:4
ಮತ್ತು ಭೂಮಿಯಲ್ಲಿ ಒಂದಕ್ಕೊAದು ಅಂಟಿಕೊAಡಿರುವ ವಿಭಿನ್ನ ಭೂ ಭಾಗಗಳಿವೆ, ದ್ರಾಕ್ಷಿ ತೋಟಗಳಿವೆ, ಮತ್ತು ಕೃಷಿ ಹೊಲಗಳಿವೆ, ಖರ್ಜೂರದ ಮರಗಳಿವೆ ಮತ್ತು ಅವುಗಳಲ್ಲಿ ಕೆಲವು ಕವಲೊಡೆದ ಮತ್ತು ಇನ್ನು ಕೆಲವು ಕವಲೊಡೆಯದ ಮರಗಳಿವೆ. ಎಲ್ಲವೂ ಒಂದೇ ನೀರಿನಿಂದ ಉಣಿಸಲಾಗುತ್ತವೆ. ಹಾಗು ನಾವು ಕೆಲವನ್ನು ಕೆಲವುಗಳ ಮೇಲೆ ರುಚಿಯಲ್ಲಿ ಶ್ರೇಷ್ಠಗೊಳಿಸುತ್ತೇವೆ. ಖಂಡಿತವಾಗಿಯೂ ಇದರಲ್ಲಿ ವಿವೇಚಿಸುವವರಿಗೆ ಹಲವಾರು ದೃಷ್ಟಾಂತಗಳಿವೆ.
Ra'd 13:5
ಇನ್ನು ನೀವು ಆಶ್ಚರ್ಯಪಡುವುದಾದರೆ ವಾಸ್ತವದಲ್ಲಿ ಅವರ ಈ ಮಾತು ಆಶ್ಚರ್ಯಕರವಾಗಿದೆ. "ನಾವು ಮಣ್ಣಾಗಿ ಬಿಟ್ಟ ಬಳಿಕವೂ ನಮ್ಮನ್ನು ಹೊಸದಾಗಿ ಸೃಷ್ಟಿಸಲಾಗುವುದೇ?" ಅವರೇ ತಮ್ಮ ಪ್ರಭುವಿನ ನಿಷÉÃಧ ಕೈಗೊಂಡವರು ಮತ್ತು ಅವರ ಕೊರಳಲ್ಲಿ ಕಡಗಗಳಿರುವವು ಅವರೇ ನರಕವಾಸಿಗಳು. ಅದರಲ್ಲಿ ಅವರು ಶಾಶ್ವತವಾಗಿರುವರು.
Ra'd 13:6
ಅವರು (ಸತ್ಯ ನಿಷÉÃಧಿಗಳು) ನಿಮ್ಮಲ್ಲಿ ಒಳಿತಿಗಿಂತ ಮೊದಲೇ ಕೇಡಿಗಾಗಿ ಆತುರಪಟ್ಟುಕೊಳ್ಳುತ್ತಿದ್ದಾರೆ. ನಿಜವಾಗಿಯೂ ಅವರಿಗಿಂತ ಮುಂಚೆ ಇಂತಹವರಿಗೆ ಪಾಠ ಕಲಿಸುವ ಶಿಕ್ಷೆಗಳು ಗತಿಸಿಹೋಗಿವೆ, ನಿಸ್ಸಂಶಯವಾಗಿಯೂ ನಿಮ್ಮ ಪ್ರಭು ಜನರು ಅತಿಕ್ರಮವೆಸಗಿದಾಗಲೂ ಕ್ಷಮೆಯನ್ನು ನೀಡುವವನಾಗಿದ್ದಾನೆ. ನಿಶ್ಚಯವಾಗಿಯೂ ನಿಮ್ಮ ಪ್ರಭು ಅತ್ಯುಗ್ರ ಯಾತನೆಯನ್ನು ಕೊಡುವವನಾಗಿದ್ದಾನೆ.
Ra'd 13:7
ಸತ್ಯನಿಷÉÃಧಿಗಳು ಹೇಳುತ್ತಾರೆ; ಅವನ ಮೇಲೆ ಅವನ ಪ್ರಭುವಿನ ಕಡೆಯಿಂದ ಯಾವುದೇ ದೃಷ್ಟಾಂತ ಏಕೆ ಇಳಿಸಲಾಗಿಲ್ಲ ? ವಾಸ್ತವದಲ್ಲಿ ನೀವು ಕೇವಲ ಮುನ್ನೆಚ್ಚರಿಕೆ ನೀಡುವವರಾಗಿರುವಿರಿ ಮತ್ತು ಪ್ರತಿಯೊಂದು ಜನಾಂಗಕ್ಕೂ ಒಬ್ಬ ಮಾರ್ಗದರ್ಶಕನಿದ್ದಾನೆ.
Ra'd 13:8
ಪ್ರತಿಯೊಬ್ಬ ಹೆಣ್ಣು ಧರಿಸುವ ಗರ್ಭವನ್ನು ಮತ್ತು ಗರ್ಭಾಶಯಗಳಲ್ಲಾಗುವ ವೃದ್ಧಿಕ್ಷಯಗಳನ್ನು ಅಲ್ಲಾಹನು ಅರಿಯುತ್ತಾನೆ. ಮತ್ತು ಪ್ರತಿಯೊಂದು ವಸ್ತುವು ಅವನ ಬಳಿ ಪ್ರಮಾಣಬದ್ಧವಾಗಿದೆ.
Ra'd 13:9
ಗೋಚರ ಮತ್ತು ಅಗೋಚರದ ಜ್ಞಾನಿಯವನು, ಅವನು ಮಹಾನನು, ಉನ್ನತನಾಗಿದ್ದಾನೆ,
Ra'd 13:10
ನಿಮ್ಮ ಪೈಕಿ ತನ್ನ ಮಾತನ್ನು ರಹಸ್ಯವಾಗಿಟ್ಟವನು, ಅದನ್ನು ಬಹಿರಂಗಗೊಳಿಸಿದವನು, ರಾತ್ರಿಯಲ್ಲಿ ಅಡಗಿ ಕೊಂಡವನು ಮತ್ತು ಹಗಲಿನಲ್ಲಿ ಸಂಚರಿಸುವವನು ಜ್ಞಾನದ ಮಟ್ಟಿಗೆ ಎಲ್ಲರೂ ಅಲ್ಲಾಹನಿಗೆ ಸಮಾನರಾಗಿದ್ದಾರೆ.
Ra'd 13:11
ಪ್ರತಿಯೊಬ್ಬ ಮನುಷÀ್ಯನ ಹಿಂದೆಯೂ ಮುಂದೆಯೂ ಅವನ ಕಾವಲುಗಾರರಾಗಿ ಮಲಕ್‌ಗಳಿದ್ದಾರೆ. ಅವರು ಅಲ್ಲಾಹನ ಆದೇಶದಂತೆ ಅವನ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ವಾಸ್ತವದಲ್ಲಿ ಯಾವುದೇ ಜನತೆಯು ಸ್ವತಃ ತಮ್ಮ ಸ್ಥಿತಿಯನ್ನು ಬದಲಾಯಿಸುವವರೆಗೆ ಅಲ್ಲಾಹನು ಅವರ ಸ್ಥಿತಿಯನ್ನು ಬದಲಾಯಿಸುವುದಿಲ್ಲ ಮತ್ತು ಅಲ್ಲಾಹನು ಯಾವುದೇ ಜನತೆಗೆ (ಅವರ ದುಷÀ್ಕರ್ಮಗಳ ನಿಮಿತ್ತ) ಶಿಕ್ಷೆ ನೀಡಲು ಇಚ್ಛಿಸಿದರೆ ಅದನ್ನು ಯಾರಿಂದಲೂ ತಡೆಯಲಾಗದು ಮತ್ತು ಅವನ ಹೊರತು ಅವರಿಗೆ ಯಾವೊಬ್ಬ ಕಾರ್ಯಸಾಧಕನೂ ಇಲ್ಲ.
Ra'd 13:12
ಅವನೇ ನಿಮಗೆ ಭಯ ಪಡಿಸಲು ಮತ್ತು ನಿರೀಕ್ಷೆ ಹೊಂದಲು ಮಿಂಚನ್ನು ತೋರಿಸುವವನು ಮತ್ತು ಅವನೇ ಘನೀಕೃತ ಮೇಘಗಳನ್ನು ನಿರ್ಮಿಸುವವನು.
Ra'd 13:13
ಮತ್ತು ಗುಡುಗು ಅವನನ್ನು ಸ್ತುತಿಸುವುದರೊಂದಿಗೆ ಅವರ ಕೀರ್ತನೆಯನ್ನು ಮಾಡುತ್ತದೆ ಮತ್ತು ಮಲಕ್‌ಗಳು ಸಹ ಅವನ ಭಯದ ನಿಮಿತ್ತ ಸ್ತುತಿಸುತ್ತಾರೆ ಅವನೇ ಸಿಡಿಲು ಮಿಂಚುಗಳನ್ನು ಕಳುಹಿಸಿ ತಾನಿಚ್ಛಿಸಿದವರವರಿಗೆ ಎರಗಿಸುತ್ತಾನೆ. ನಿಷÉÃಧಿಗಳು ಅಲ್ಲಾಹನ ವಿಷÀಯದಲ್ಲಿ ತರ್ಕಿಸುತ್ತಿದ್ದಾರೆ ಮತ್ತು ಅವನು ಕಠಿಣವಾಗಿ ದಂಡಿಸುವನಾಗಿರುವನು.
Ra'd 13:14
ಅವನನ್ನೇ ಪ್ರಾರ್ಥಿಸುವುದು ಸತ್ಯವಾಗಿದೆ ಅವರು ಅವನನ್ನು ಬಿಟ್ಟು ಕರೆದು ಪ್ರಾರ್ಥಿಸುತ್ತಿರುವರು ಯಾವುದಕ್ಕೂ ಉತ್ತರ ನೀಡಲಾರರು. ಅವರ ಸ್ಥಿತಿ ಒಬ್ಬ ವ್ಯಕ್ತಿ ಬಾಯಿಗೆ ನೀರು ತಲುಪಲೆಂದು ತನ್ನೆರಡು ಕೈಗಳನ್ನು ನೀರಿನ ಕಡೆಗೆ ಚಾಚಿಕೊಂಡವನAತೆ ವಸ್ತುತಃ ಆ ನೀರು ಅವನ ಬಾಯಿಗೆ (ತನ್ನಷÀ್ಟಕ್ಕೆ ತಾನೇ) ಎಂದೂ ತಲುಪಲಾರದು, ಮತ್ತು ಆ ಸತ್ಯ ನಿಷÉÃಧಿಗಳ ಪ್ರಾರ್ಥನೆಗಳೆಲ್ಲವೂ ವ್ಯರ್ಥವಲ್ಲದೆ ಇನ್ನೇನೂ ಅಲ್ಲ.
Ra'd 13:15
ಭೂಮಿ ಆಕಾಶಗಳಲ್ಲಿ ಇರುವ ಸಕಲ ಸೃಷ್ಟಿಗಳು ಇಚ್ಛಾಪೂರ್ವಕವಾಗಿಯೂ ಅನಿವಾರ್ಯವಾಗಿಯೂ ಅಲ್ಲಾಹನಿಗೆ ಸಾಷ್ಟಾಂಗವೆರಗುತ್ತಿವೆ ಮತ್ತು ಮುಂಜಾನೆಯಲ್ಲೂ, ಸಂಜೆಯಲ್ಲೂ ಅವರ ನೆರಳುಗಳು ಸಹ ಬಾಗುತ್ತಿವೆ
Ra'd 13:16
ಪ್ರಶ್ನಿಸಿರಿ; ಆಕಾಶಗಳ ಮತ್ತು ಭೂಮಿಯ ಪ್ರಭು ಯಾರು ? ಉತ್ತರಿಸಿರಿ; " ಅಲ್ಲಾಹನು" . ಹೇಳಿರಿ; ಹಾಗಿದ್ದು ನೀವು ಅವನ ಹೊರತು ಸ್ವತಃ ತಮ್ಮ ಲಾಭ ಮತ್ತು ಹಾನಿಯ ಅಧಿಕಾರ ಹೊಂದಿಲ್ಲದವರನ್ನು ರಕ್ಷಕ ಮಿತ್ರರನ್ನಾಗಿ ನಿಶ್ಚಯಿಸಿಕೊಂಡಿರುವಿರಾ ? ಹೇಳಿರಿ: ಕುರುಡನೂ ಮತ್ತು ದೃಷ್ಟಿಯುಳ್ಳವನೂ ಸಮಾನರೇ? ಅಥವಾ ಕತ್ತಲು ಮತ್ತು ಬೆಳಕು ಸಮಾನವೇ? ಅಥವಾ ಅವರು ಅಲ್ಲಾಹನಿಗೆ ಯಾರನ್ನು ಸಹಭಾಗಿಗಳನ್ನಾಗಿ ನಿಶ್ಚಯಿಸಿರುವರು ಅವರು ಅಲ್ಲಾಹನ ಹಾಗೆ ಸೃಷ್ಟಿಗಳನ್ನು ಉಂಟುಮಾಡಿದ್ದಾರೆಯೇ? ಹೀಗೆ ಆ ಸೃಷ್ಟಿಯು ಅವರ ದೃಷ್ಟಿಯಲ್ಲಿ (ಗುರುತಿಸಲು) ಸದೃಶ್ಯವಾಗಿ ಬಿಟ್ಟಿದೆಯೇ? ಹೇಳಿರಿ ಪ್ರತಿಯೊಂದರ ಸೃಷ್ಟಿಕರ್ತನು ಅಲ್ಲಾಹನೇ ಆಗಿದ್ದಾನೆ ಮತ್ತು ಅವನು ಏಕೈಕನೂ ಪ್ರಚಂಡನೂ ಆಗಿದ್ದಾನೆ.
Ra'd 13:17
ಅವನೇ ಆಕಾಶದಿಂದ ನೀರನ್ನು ಸುರಿಸಿದನು. ಅನಂತರ ಹಳ್ಳಕೊಳ್ಳಗಳು ತಮ್ಮ ತಮ್ಮ ಪ್ರಮಾಣದಲ್ಲಿ ತುಂಬಿ ಹರಿದವು, ಹಾಗೆಯೇ ಪ್ರವಾಹವು ತೇಲುತ್ತಿರುವ ನೊರೆಯನ್ನು ಹೊತ್ತೊಯ್ಯಿತು ಮತ್ತು ಇದೇ ತರಹದ ನೊರೆಯು ಆಭರಣ ಅಥವಾ ಉಪಕರಣವನ್ನು ಮಾಡಲಿಕ್ಕಾಗಿ ಬೆಂಕಿಯಲ್ಲಿ ಕರಗಿಸುವ ಲೋಹದಿಂದಲೂ ಏಳುತ್ತದೆ, ಇದೇ ಪ್ರಕಾರ ಅಲ್ಲಾಹನು ಸತ್ಯಾಸತ್ಯತೆಗಳ ಉಪಮೆಯನ್ನು ನೀಡುತ್ತಾನೆ. ಇನ್ನು ನೊರೆಯಾದರೂ ಆರಿಹೋಗುತ್ತದೆ. ಆದರೆ ಜನರಿಗೆ ಉಪಯುಕ್ತವಾದದ್ದು ಭೂಮಿಯಲ್ಲಿ ತಂಗಿ ಕೊಳ್ಳುತ್ತದೆ. ಹೀಗೆ ಅಲ್ಲಾಹನು ಉಪಮೆಗಳನ್ನು ವಿವರಿಸಿ ಹೇಳುತ್ತಾನೆ.
Ra'd 13:18
ತಮ್ಮ ಪ್ರಭುವಿನ ಕರೆಗೆ ಓಗೊಟ್ಟವರಿಗೆ ಸ್ವರ್ಗವಿದೆ ಮತ್ತು ಅವನ ಕರೆಗೆ ಓಗೊಡದವರ ಬಳಿ ಭೂಮಿಯಲ್ಲಿರುವುದೆಲ್ಲವೂ ಇದ್ದರೂ ಮತ್ತು ಅದರ ಜೊತೆಯಲ್ಲಿ ಅದರಷÉ್ಟÃ ಬೇರೆಯೂ ಇರುತ್ತಿದ್ದರು ಅವೆಲ್ಲವನ್ನು ಪ್ರಾಯಶ್ಚಿತವಾಗಿ ಕೊಟ್ಟುಬಿಡುತ್ತಿದ್ದರು. ಅವರಿಗೆ ಕೆಟ್ಟ ರೀತಿಯ ವಿಚಾರಣೆ ಇದೆ. ಅವರ ನೆಲೆಯೂ ನರಕವಾಗಿರುತ್ತದೆ ಮತ್ತು ಅದು ಅತ್ಯಂತ ನಿಕೃಷÀ್ಟ ತಾಣವಾಗಿದೆ.
Ra'd 13:19
ನಿಮ್ಮೆಡೆಗೆ ನಿಮ್ಮ ಪ್ರಭುವಿನ ಕಡೆಯಿಂದ ಅವತೀರ್ಣವಾಗಿರುವುದು ಸತ್ಯವೆಂದು ಅರಿಯುವವನು ಒಬ್ಬ ಅಂಧನAತೆ ಆಗುವನೇ ? ನಿಶ್ಚಯವಾಗಿಯೂ ಬುದ್ಧಿವಂತರೇ ಉಪದೇಶ ಸ್ವೀಕರಿಸುತ್ತಾರೆ.
Ra'd 13:20
ಅವರು ಅಲ್ಲಾಹನೊಂದಿಗೆ ಮಾಡಿದ ಕರಾರನ್ನು ಪೂರ್ಣಗೊಳಿಸುತ್ತಾರೆ ಮತ್ತು ಅವರು ಕರಾರನ್ನು ಮುರಿಯುವುದಿಲ್ಲ.
Ra'd 13:21
ಅಲ್ಲಾಹನು (ಯಾವ ಸಂಬAಧಗಳನ್ನು) ಕೂಡಿಸಲು ಆದೇಶಿರುವ ಆ ಸಂಬAಧವನ್ನು ಕೂಡಿಸುತ್ತಾರೆ ಮತ್ತು ತಮ್ಮ ಪ್ರಭುವನ್ನು ಭಯಪಡುತ್ತಾರೆ ಹಾಗೂ ಕೆಟ್ಟ ರೀತಿಯ ವಿಚಾರಣೆಯಿಂದ ಹೆದರುತ್ತಾರೆ.
Ra'd 13:22
ಮತ್ತು ಅವರು ತಮ್ಮ ಪ್ರಭುವಿನ ಸಂತೃಪ್ತಿಯನ್ನು ಬಯಸಿ ಸಹನೆ ವಹಿಸುತ್ತಾರೆ, ನಮಾಜನ್ನು ಸಂಸ್ಥಾಪಿಸುತ್ತಾರೆ, ನಾವು ಅವರಿಗೆ ದಯಪಾಲಿಸಿದವುಗಳಿಂದ ಖರ್ಚು ಮಾಡುತ್ತಾರೆ, ಮತ್ತು ಕೆಡುಕನ್ನು ಒಳಿತಿನಿಂದ ತಡೆಯುತ್ತಾರೆ. ಅಂತಹವರಿಗೆ ಪರಲೋಕದ ಅತ್ಯುತ್ತಮ ಭವನವಿದೆ,
Ra'd 13:23
ದರೆ ಶಾಶ್ವತ ವಾಸಕ್ಕಿರುವ ಸ್ವರ್ಗೋದ್ಯಾನಗಳಿವೆ, ಅವರು ಹಾಗೂ ಅವರ ಪೂರ್ವಜರು ಅವರ ಸಂಗಾತಿಗಳ ಮತ್ತು ಅವರ ಸಂತತಿಗಳ ಪೈಕಿ ಸಜ್ಜನರಾದವರು ಅವುಗಳಲ್ಲಿ ಪ್ರವೇಶಿಸುವರು, ಅವರ ಬಳಿಗೆ ಮಲಕ್‌ಗಳು ಎಲ್ಲಾ ದ್ವಾರಗಳಿಂದಲೂ ಬರುವರು,
Ra'd 13:24
ಹೇಳುವರು; ನೀವು ಸಹನೆವಹಿಸಿದುದರ ಫಲವಾಗಿ ನಿಮ್ಮ ಮೇಲೆ ಶಾಂತಿ ಇರಲಿ ಅಗೋ ಪರಲೋಕ ಭವನವು ಅದೆಷÀÄ್ಟ ಉತ್ತಮವಾಗಿದೆ.
Ra'd 13:25
ಇನ್ನು ಯಾರು ಅಲ್ಲಾಹನೊಂದಿಗೆ ಮಾಡಲಾದ ಕರಾರನ್ನು ಅದು ಸದೃಡವಾದ ಬಳಿಕ ಉಲ್ಲಂಘಿಸುತ್ತಾರೋ ಮತ್ತು ಅಲ್ಲಾಹನು (ಯಾವ ಸಂಬAಧಗಳನ್ನು) ಕೂಡಿಸಲು ಆದೇಶಿಸಿರುವನೋ ಅದನ್ನು ಮುರಿದು ಹಾಕುತ್ತಾರೋ ಮತ್ತು ಭೂಮಿಯಲ್ಲಿ ಕ್ಷೆÆÃಭೆ ಹರಡುತ್ತಾರೋ ಅವರಿಗೆ ಶಾಪವಿದೆ, ಹಾಗೂ ಅವರಿಗೆ ನಿಕೃಷÀ್ಟ ತಾಣವಿದೆ.
Ra'd 13:26
ಅಲ್ಲಾಹನು ತಾನಿಚ್ಛಿಸಿದವರಿಗೆ ಜೀವನಾಧಾರವನ್ನು ವಿಶಾಲಗೊಳಿಸುತ್ತಾನೆ ಮತ್ತು ಸಂಕುಚಿತಗೊಳಿಸುತ್ತಾನೆ. ಅವರು ಈ ಇಹಲೋಕದ ಜೀವನದಲ್ಲಿ ತಲ್ಲೀನರಾಗಿದ್ದಾರೆ. ವಸ್ತುತಃ ಇಹಲೋಕ ಜೀವನವು ಪರಲೋಕದ ಮುಂದೆ ತಾತ್ಕಾಲಿಕ ಸುಖಾನುಭವ ಮಾತ್ರವಾಗಿದೆ.
Ra'd 13:27
ಸತ್ಯ ನಿಷÉÃಧಿಗಳು ಹೇಳುತ್ತಾರೆ; ಮುಹಮ್ಮದ್‌ರವರ ಮೇಲೆ ಅವನ ಪ್ರಭುವಿನ ಕಡೆಯಿಂದ ಯಾವುದಾದರೂ ದೃಷ್ಟಾಂತ ಏಕೆ ಇಳಿಸಲಾಗಿಲ್ಲ ? ಉತ್ತರಿಸಿರಿ; ಖಂಡಿತವಾಗಿಯೂ ಅಲ್ಲಾಹನು ತಾನಿಚ್ಛಿಸಿದವರಿಗೆ ಮಾರ್ಗ ಭ್ರಷÀ್ಟಗೊಳಿಸುತ್ತಾನೆ ಮತ್ತು ಅವನೆಡೆಗೆ ಮರಳುವವರಿಗೆ ಮಾರ್ಗದರ್ಶನ ಮಾಡುತ್ತಾನೆ.
Ra'd 13:28
ಇಂತಹವರೇ ಸತ್ಯ ವಿಶ್ವಾಸವಿಟ್ಟವರು ಮತ್ತು ಅಲ್ಲಾಹನ ಸ್ಮರಣೆಯಿಂದ ಮನಶಾಂತಿ ಪಡೆಯುವವರಾಗಿದ್ದಾರೆ. ತಿಳಿದುಕೊಳ್ಳಿರಿ; ಅಲ್ಲಾಹನ ಸ್ಮರಣೆಯಿಂದಲೇ ಹೃದಯಗಳಿಗೆ ಶಾಂತಿ ದೊರಕುತ್ತದೆ.
Ra'd 13:29
ಸತ್ಯವಿಶ್ವಾಸವನ್ನಿರಿಸಿ ಸತ್ಕರ್ಮಗಳನ್ನು ಕೈಗೊಳ್ಳುವವರಿಗೆ ಶುಭವಾರ್ತೆ ಇದೆ ಮತ್ತು ಉತ್ತಮ ತಾಣವಿದೆ.
Ra'd 13:30
ಇದೇ ಪ್ರಕಾರ ನಾವು ನಿಮ್ಮನ್ನು ಒಂದು ಸಮುದಾಯಕ್ಕೆ ಸಂದೇಶವಾಹಕರನ್ನಾಗಿ ಕಳುಹಿಸಿರುತ್ತೇವೆ. ಇದಕ್ಕೆ ಮೊದಲು ಹಲವಾರು ಸಮುದಾಯಗಳು ಗತಿಸಿ ಹೋಗಿವೆ. ಇದು ನಾವು ನಿಮ್ಮೆಡೆಗೆ ಅವತೀರ್ಣಗೊಳಿಸಿದ ದಿವ್ಯ ಸಂದೇಶವನ್ನು ಅವರಿಗೆ ನೀವು ಓದಿ ಹೇಳಲೆಂದಾಗಿದೆ. ಅವರಾದರೂ ಪರಮ ದಯಾಮಯ ಅಲ್ಲಾಹನನ್ನು ನಿರಾಕರಿಸುವವರಾಗಿದ್ದಾರೆ. ಹೇಳಿರಿ; ಅವನೇ ನನ್ನ ಪ್ರಭು. ಅವನ ಹೊರತು ಬೇರೆ ಆರಾಧ್ಯನಿಲ್ಲ. ಅವನ ಮೇಲೆಯೇ ನಾನು ಭರವಸೆಯನ್ನಿಟ್ಟಿರುವೆನು ಮತ್ತು ಅವನೆಡೆಗೆ ಪಶ್ಚಾತ್ತಾಪದಿಂದ ಮರಳಲಿಕ್ಕಿದೆ.
Ra'd 13:31
ಕುರ್‌ಆನಿನ ಮೂಲಕ ಪರ್ವತಗಳನ್ನು ಚಲಿಸುವಂತೆಯು ಅಥವಾ ಭೂಮಿಯನ್ನು ಸೀಳಿಬಿಡುವಂತೆಯೂ ಅಥವಾ ಮೃತರೊಂದಿಗೆ ಮಾತನಾಡುವಂತೆ ಮಾಡಲಾಗುತ್ತಿದ್ದರೂ ಅವರು ಸತ್ಯ ವಿಶ್ವಾಸ ಸ್ವೀಕರಿಸುತ್ತಿರಲಿಲ್ಲ ವಾಸ್ತವವೇನೆಂದರೆ ಕಾರ್ಯವೆಲ್ಲವು ಅಲ್ಲಾಹನ ವಶದಲ್ಲಿರುವುದು. ಅಲ್ಲಾಹನು ಇಚ್ಛಿಸುವುದಾದರೆ ಸರ್ವರಿಗೂ ಸನ್ಮಾರ್ಗ ನೀಡುತ್ತಿದ್ದನೆಂದು ಸತ್ಯವಿಶ್ವಾಸಿಗಳು ತಿಳಿಯಲಿಲ್ಲವೆ ? ಸತ್ಯ ನಿಷÉÃಧಿಗಳಿಗೆ ತಮ್ಮ ನಿಷÉÃಧದ ಫಲವಾಗಿ ಯಾವುದಾದರೂ ವಿಪತ್ತು ಬಾಧಿಸುತ್ತಲೇ ಇರುವುದು ಅಥವಾ ಅದು ಅಲ್ಲಾಹನ ವಾಗ್ದಾನ ಬರುವತನಕ ಅವರ ಮನೆಗಳ ಸಮೀಪದಲ್ಲೇ ಎರಗುತ್ತಲೇ ಇರುವುದು ನಿಶ್ಚಯವಾಗಿಯೂ ಅಲ್ಲಾಹನು ವಾಗ್ದಾನವನ್ನು ಉಲ್ಲಂಘಿಸುವುದಿಲ್ಲ.
Ra'd 13:32
ನಿಜವಾಗಿಯೂ ನಿಮಗಿಂತ ಮುಂಚೆಯೂ ಸಂದೇಶವಾಹಕರು ಪರಿಹಾಸ್ಯಕ್ಕೊಳಗಾಗಿದ್ದಾರೆ ಆದರೆ ನಾನು ಸತ್ಯ ನಿಷÉÃಧಿಸಿದವರಿಗೆ ಕಾಲಾವಕಾಶ ಕೊಟ್ಟಿದ್ದೇನೆ. ಅನಂತರ ಅವರನ್ನು ಹಿಡಿದು ಬಿಟ್ಟೆನು ಆಗ ನನ್ನ ಶಿಕ್ಷೆ ಹೇಗಿತ್ತು ?
Ra'd 13:33
ಪ್ರತಿಯೊಬ್ಬ ವ್ಯಕ್ತಿಯ ಸಂಪಾದನೆಯ ಮೇಲೆ ಮೇಲ್ವಿಚಾರಣೆ ಮಾಡುವ ಅಲ್ಲಾಹನಿಗೆ ಅವರು ಸಹಭಾಗಿಗಳನ್ನು ನಿಶ್ಚಯಿಸಿಕೊಂಡಿದ್ದಾರೆಯೇ? ಹೇಳಿರಿ; ಒಮ್ಮೆ ಅವುಗಳ ಹೆಸರುಗಳನ್ನಾದರೂ ತಿಳಿಸಿರಿ. ಅಥವಾ ನೀವು ಅಲ್ಲಾಹನಿಗೆ ಅವನು ಭೂಮಿಯಲ್ಲಿ ಅರಿತೇ ಇಲ್ಲದುದನ್ನು ತಿಳಿಸಿಕೊಡುತ್ತಿರುವಿರಾ ? ಅಥವಾ ನೀವು ಬಾಹ್ಯಾ ಮಾತುಗಳನ್ನು ಹೇಳಿಬಿಡುತ್ತೀರಾ? ವಾಸ್ತವ ವಿಚಾರವೇನೆಂದರೆ ಸತ್ಯ ನಿಷÉÃಧಿಸುವವರಿಗೆ ಅವರ ಕುತಂತ್ರಗಳನ್ನು ಸುಂದರವಾಗಿಸಲಾಗಿದೆ. ಮತ್ತು ಅವರು ನೈಜ ಮಾರ್ಗದಿಂದ ತಡೆಯಲಾಗಿದ್ದಾರೆ ಮತ್ತು ಯಾರನ್ನು ಅಲ್ಲಾಹನು ದಾರಿತಪ್ಪಿಸುವನೋ ಅವನಿಗಾರು ಮಾರ್ಗದರ್ಶಕನಿಲ್ಲ.
Ra'd 13:34
ಅವರಿಗೆ ಇಹಲೋಕದ ಜೀವನದಲ್ಲಿ ಯಾತನೆ ಇದೆ ಮತ್ತು ಪರಲೋಕದ ಯಾತನೆಯು ಅತ್ಯಂತ ಕಠಿಣವಾಗಿರುತ್ತದೆ, ಮತ್ತು ಅಲ್ಲಾಹನಿಂದ ಅವರನ್ನು ರಕ್ಷಿಸುವವನು ಯಾರು ಇರಲಾರನು.
Ra'd 13:35
ಭಯಭಕ್ತಿಯುಳ್ಳವರಿಗೆ ವಾಗ್ದಾನ ಮಾಡಲಾಗಿರುವ ಸ್ವರ್ಗೋದ್ಯಾನದ ಸ್ವರೂಪ ಹೀಗಿದೆ; ಅದರ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವವು. ಅದರ ಫಲಗಳು ಶಾಶ್ವತವಾದುದು ಮತ್ತು ಅದರ ನೆರಳು ಕೂಡ, ಇದುವೇ ಭಯ-ಭಕ್ತಿಯುಳ್ಳವರ ಪರ್ಯಾವಸಾನವಾಗಿದೆ ಮತ್ತು ಸತ್ಯನಿಷÉÃಧಿಗಳ ಪರ್ಯಾವಸಾನವು ನರಕಾಗ್ನಿಯಾಗಿದೆ.
Ra'd 13:36
ಯಾರಿಗೆ ನಾವು ಮೊದಲು ಗ್ರಂಥವನ್ನು ನೀಡಿರುವೆವೋ ಅವರು ನಿಮಗೆ ನಾವು ಅವತೀರ್ಣ ಗೊಳಿಸಿರುವ ಗ್ರಂಥದಿAದ ಸಂತುಷ್ಟರಾಗಿದ್ದಾರೆ. ಮತ್ತು ಅವರ (ಯಹೂದರು ಮತ್ತು ಕ್ರೈಸ್ತರು) ಇತರ ಗುಂಪುಗಳು ಅದರಲ್ಲಿರುವ ಕೆಲವು ವಿಚಾರಗಳ ನಿಷÉÃಧಿಗಳಾಗಿದ್ದಾರೆ, ಹೇಳಿರಿ; ನನಗಂತೂ ಅಲ್ಲಾಹನನ್ನು ಆರಾಧಿಸಲು ಮತ್ತು ಅವನೊಂದಿಗೆ ಸಹಭಾಗಿಯನ್ನು ನಿಶ್ಚಯಿಸದಿರಲು ಆದೇಶ ನೀಡಲಾಗಿದೆ, ಅವನೆಡೆಗೇ ನಾನು ಕರೆಯುತ್ತಿದ್ದೇನೆ ಮತ್ತು ಅವನೆಡೆಗೇ ಮರಳಬೇಕಾಗಿದೆ,
Ra'd 13:37
ಇದೇ ಪ್ರಕಾರ ನಾವು ಈ ಕುರ್‌ಆನನ್ನು ಅರಬೀ ಭಾಷÉಯಲ್ಲಿರುವ ನಿಯಮ ಶಾಸನವನ್ನಾಗಿ ಅವತೀರ್ಣಗೊಳಿರುತ್ತೇವೆ, ಇನ್ನೇನಾದರೂ ನಿಮಗೆ ಜ್ಞಾನವು ಬಂದ ಬಳಿಕ ಅವರ ಇಚ್ಛೆಗಳನ್ನು ನೀವು ಅನುಸರಿಸಿದರೆ ಅಲ್ಲಾಹನ ಎದುರು ನಿಮಗೆ ರಕ್ಷಕಮಿತ್ರನಾಗಲಿ, ಕಾಪಾಡುವವನಾಗಲಿ ಯಾರೂ ಇರಲಾರರು.
Ra'd 13:38
ಓ ಮುಹಮ್ಮದರೇ ನಿಮಗಿಂತ ಮುಂಚೆಯೂ ನಾವು ಅನೇಕ ಸಂದೇಶವಾಹಕರನ್ನು ಕಳುಹಿಸಿರುತ್ತೇವೆ, ನಾವು ಅವರಿಗೆ ಪತ್ನಿಯರನ್ನು ಸಂತಾನವನ್ನು ನೀಡಿದ್ದೆವು ಮತ್ತು ಯಾವ ಸಂದೇಶವಾಹಕನು ಅಲ್ಲಾಹನ ಅಪ್ಪಣೆಯ ವಿನಃ ಯಾವೊಂದು ದೃಷ್ಟಾಂತವನ್ನು ತರಲಾರನು. ಪ್ರತಿಯೊಂದು ನಿರ್ದಿಷÀ್ಟ ಅವಧಿಗೂ ಒಂದು ದಾಖಲೆ ಇದೆ.
Ra'd 13:39
ಅಲ್ಲಾಹನು ತಾನಿಚ್ಛಿಸಿದ್ದನ್ನು ಅಳಿಸುವನು ತಾನಿಚ್ಛಿಸಿದ್ದನ್ನು ಸ್ಥಿರಗೊಳಿಸುವನು ಮತ್ತು ಅವನ ಬಳಿಯೇ ಮೂಲ ಗ್ರಂಥವಿದೆ.
Ra'd 13:40
ಮತ್ತು ನಾನು ಅವರಿಗೆ ಮುನ್ನೆಚ್ಚರಿಕೆ ನೀಡುತ್ತಿರುವವುಗಳಿಂದ ಕೆಲವು ಸಂಗತಿಗಳನ್ನು ನಿಮಗೆ ತೋರಿಸಬಹುದು ಅಥವಾ ಅದು ಪ್ರಕಟವಾಗುವುದಕ್ಕೆ ಮುಂಚೆ ನಿಮಗೆ ಮರಣ ಕೊಡಬಹುದು, ಮತ್ತು ಸಂದೇಶ ತಲುಪಿಸುವುದೇ ನಿಮ್ಮ ಮೇಲಿನ ಹೊಣೆಯಾಗಿದೆ ವಿಚಾರಣೆ ನಡೆಸುವುದು ನಮ್ಮ ಮೇಲಿನ ಹೊಣೆಯಾಗಿದೆ.
Ra'd 13:41
ನಾವು ಭೂಮಿಯನ್ನು ಅದರ ಅಂಚುಗಳಿAದ ಕಿರಿದಾಗಿಸುತ್ತಿರುವುದನ್ನು ಅವರು ನೋಡುವುದಿಲ್ಲವೇ? ಮತ್ತು ಅಲ್ಲಾಹನೇ ತೀರ್ಮಾನಿಸುತ್ತಾನೆ; ಅವನ ತೀರ್ಮಾನಗಳನ್ನು ಬದಲಾಯಿಸುವವನಾರಿಲ್ಲ ಅವನು ಅತಿ ಶೀಘ್ರವಾಗಿ ವಿಚಾರಣೆ ನಡೆಸುವವನಾಗಿದ್ದಾನೆ.
Ra'd 13:42
ಅವರ ಮುಂಚಿನವರು ಸಹ ಕುತಂತ್ರಗಳನ್ನು ಹೂಡಿದ್ದರು. ಆದರೆ ತಂತ್ರವೆಲ್ಲವೂ ಅಲ್ಲಾಹನಿಗೆ ಇರುವವು, ಪ್ರತಿಯೊಬ್ಬ ವ್ಯಕ್ತಿಯು ಸಂಪಾದಿಸಿದ್ದನ್ನು ಅಲ್ಲಾಹನು ಅರಿಯುತ್ತಾನೆ. ಸದ್ಯದಲ್ಲೇ ಸತ್ಯನಿಷÉÃಧಿಗಳು ಪರಲೋಕದ ಭವನ ಯಾರಿಗಿದೆಯೆಂದು ತಿಳಿಯುವರು.
Ra'd 13:43
ಓ ಮುಹಮ್ಮದರೇ ನೀವು ಅಲ್ಲಾಹನ ಸಂದೇಶವಾಹಕರಲ್ಲವೆAದು ಸತ್ಯನಿಷÉÃಧಿಗಳು ಹೇಳುತ್ತಾರೆ, ಹೇಳಿರಿ ನನ್ನ ಮತ್ತು ನಿಮ್ಮ ನಡುವೆ ಸಾಕ್ಷಿಯಾಗಿ ಅಲ್ಲಾಹನೇ ಸಾಕು, ಮತ್ತು ಯಾರ ಬಳಿ ಗ್ರಂಥದ ಜ್ಞಾನವಿದೆಯೋ ಅವರ ಸಾಕ್ಷ್ಯ ಸಾಕು.
İbrahim 14:1
ಅಲಿಫ್ ಲಾಮ್ ರಾ ಇದು ಒಂದು ಗ್ರಂಥ. ನೀವು ಜನರನ್ನು ಅವರ ಪ್ರಭುವಿನ ಆಜ್ಞೆಯಿಂದ ಅಂಧಕಾರಗಳಿAದ ಪ್ರಕಾಶದೆಡೆಗೆ ಹೊರತರಲಿಕ್ಕಾಗಿ ನಾವು ಇದನ್ನು ನಿಮ್ಮೆಡೆಗೆ ಅವತೀರ್ಣಗೊಳಿಸಿದ್ದೇವೆ, ಪ್ರಚಂಡನೂ, ಸ್ತುತ್ಯಾರ್ಹನೂ ಆದ ಅಲ್ಲಾಹನ ಮಾರ್ಗದೆಡೆಗೆ ನಡೆಸಬೇಕೆಂದು.
İbrahim 14:2
ಆಕಾಶಗಳ ಮತ್ತು ಭೂಮಿಯಲ್ಲಿರುವ ಸಕಲವೂ ಅಲ್ಲಾಹನದ್ದಾಗಿದೆ ಮತ್ತು ಸತ್ಯ ನಿಷÉÃಧಿಗಳಿಗೆ ಅತ್ಯಂತ ಕಠಿಣ ವಿನಾಶಕಾರಿ ಶಿಕ್ಷೆಯಿದೆ,
İbrahim 14:3
ಅವರು ಪರಲೋಕದ ಬದಲಿಗೆ ಐಹಿಕ ಜೀವನವನ್ನು ಇಷÀ್ಟಪಡುತ್ತಾರೆ ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಯುತ್ತಾರೆ ಮತ್ತು ಅದರಲ್ಲಿ ವಕ್ರತೆಯುಂಟಾಗಲು ಬಯಸುತ್ತಾರೆ. ಅವರು ಪಥಭ್ರಷÀ್ಟತೆಯಲ್ಲಿ ದೂರ ಸಾಗಿದ್ದಾರೆ.
İbrahim 14:4
ನಾವು ಪ್ರತಿಯೊಬ್ಬ ಪೈಗಂಬರರನ್ನು ಅವರ ಜನಾಂಗದ ಭಾಷÉಯಲ್ಲೇ ಕಳುಹಿಸಿರುತ್ತೇವೆ. ಅವರು (ಆ ಸಂದೇಶವನ್ನು) ಅವರ ಮುಂದೆ ಸ್ಪಷÀ್ಟವಾಗಿ ವಿವರಿಸಿಕೊಡಲೆಂದು. ಇನ್ನು ಅಲ್ಲಾಹನು ತಾನಿಚ್ಛಿಸಿದವರನ್ನು ಮಾರ್ಗ ಭ್ರಷÀ್ಟಗೊಳಿಸುತ್ತಾನೆ ಮತ್ತು ತಾನಿಚ್ಛಿಸಿದವರಿಗೆ ಸನ್ಮಾರ್ಗವನ್ನು ತೋರಿಸುತ್ತಾನೆ ಮತ್ತು ಅವನು ಪ್ರಚಂಡನೂ ಯುಕ್ತಿಪೂರ್ಣನೂ ಆಗಿರುವನು.
İbrahim 14:5
ನಾವು ಮೂಸರವರನ್ನು ನೀವು ನಿಮ್ಮ ಜನಾಂಗವನ್ನು ಅಂಧಕಾರಗಳಿAದ ಪ್ರಕಾಶದೆಡೆಗೆ ಹೊರತನ್ನಿರಿ ಮತ್ತು ಅವರಿಗೆ ಅಲ್ಲಾಹನ ದಿನಗಳನ್ನು (ಹಿಂದೆ ನಡೆದಿರುವ ಮಹಾ ಘಟನೆಗಳನ್ನು) ನೆನಪಿಸಿಕೊಡಿರಿ ಎಂದು ನಮ್ಮ ದೃಷ್ಟಾಂತಗಳೊAದಿಗೆ ಕಳುಹಿಸಿದೆವು. ಇದರಲ್ಲಿ ಸಹನಶೀಲ ಹಾಗೂ ಕೃತಜ್ಞರಾದ ಪ್ರತಿಯೊಬ್ಬರಿಗೆ ನಿದರ್ಶನಗಳಿವೆ.
İbrahim 14:6
ಮೂಸ ತಮ್ಮ ಜನಾಂಗದೊಡನೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ; ಅಲ್ಲಾಹನು ನಿಮ್ಮನ್ನು ಫಿರ್‌ಔನಿನ ಪರಿವಾರದಿಂದ ರಕ್ಷಿಸಿ ನಿಮ್ಮ ಮೇಲೆ ಮಾಡಿದ ಅನುಗ್ರಹಗಳನ್ನು ಸ್ಮರಿಸಿರಿ. ಅವರು ನಿಮಗೆ ಮಹಾ ಹಿಂಸೆ ಕೊಡುತ್ತಿದ್ದರು. ನಿಮ್ಮ ಗಂಡು ಸಂತತಿಗಳನ್ನು ಕೊಂದು ನಿಮ್ಮ ಹೆಣ್ಣು ಸಂತತಿಗಳನ್ನು ಜೀವಂತವಾಗಿ ಬಿಡುತ್ತಿದ್ದರು, ಮತ್ತು ನಿಮಗೆ ಅದರಲ್ಲಿ ನಿಮ್ಮ ಪ್ರಭುವಿನ ಕಡೆಯಿಂದ ಮಹಾ ಪರೀಕ್ಷೆಯಿತ್ತು.
İbrahim 14:7
ಇನ್ನು ನೀವು ಕೃತಜ್ಞತೆ ತೋರಿದರೆ ನಿಸ್ಸಂಶಯವಾಗಿಯೂ ನಾನು ನಿಮಗೆ ಅಧಿಕ ನೀಡುವೆನು ಮತ್ತು ನೀವು ಕೃತಘ್ನತೆ ತೋರಿದರೆ ಖಂಡಿತವಾಗಿ ನನ್ನ ಶಿಕ್ಷೆ ಕಠಿಣವಾಗಿದೆ ಎಂದು ನಿಮ್ಮ ಪ್ರಭು ಎಚ್ಚರಿಸಿದ ಸಂದರ್ಭವನ್ನು ಸ್ಮರಿಸಿರಿ.
İbrahim 14:8
ಮೂಸ ಹೇಳಿದರು; ನೀವು ಮತ್ತು ಭೂಮಿಯಲ್ಲಿರುವ ಸಕಲರೂ ಅಲ್ಲಾಹನಿಗೆ ಕೃತಘ್ನತೆ ತೋರಿದರೂ ಅಲ್ಲಾಹನು ನಿರಪೇಕ್ಷನೂ, ಸ್ತುತ್ಯಾರ್ಹನು ಆಗಿರುವನು.
İbrahim 14:9
ನಿಮಗಿಂತ ಮುಂಚೆ ಗತಿಸಿದಂತಹ ನೂಹರ ಜನಾಂಗ, ಆದ್ ಮತ್ತು ಸಮೂದರ ಮತ್ತು ಅಲ್ಲಾಹನ ಹೊರತು ಇನ್ಯಾರು ಅರಿಯದ ಅವರ ನಂತರದ ಹಲವಾರು ಜನಾಂಗಗಳ ಸುದ್ದಿಗಳು ನಿಮಗೆ ತಲುಪಲಿಲ್ಲವೇ? ಅವರೆಡೆಗೆ ಅವರ ಸಂದೇಶವಾಹಕರು ಸ್ಪಷÀ್ಟ ಪ್ರಮಾಣಗಳನ್ನು ತಂದರು. ಆದರೆ ಅವರು ತಮ್ಮ ಕೈಗಳನ್ನು ತಮ್ಮ ಬಾಯೊಳಗೆ ತೂರಿಸಿಕೊಂಡು ಸ್ಪಷÀ್ಟವಾಗಿ ಹೇಳಿಬಿಟ್ಟರು; ಯಾವ ಸಂದೇಶದೊAದಿಗೆ ನಿಮ್ಮನ್ನು ಕಳುಹಿಸಲಾಗಿದೆಯೋ ನಾವು ಅದನ್ನು ನಿರಾಕರಿಸುವವರಾಗಿದ್ದೇವೆ, ಹಾಗೂ ನೀವು ಯಾವುದರ ಕಡೆಗೆ ನಮ್ಮನ್ನು ಕರೆಯುತ್ತಿರುವಿರೋ ಅದರಲ್ಲಿ ನಾವು ಗಂಭೀರ ಸಂದೇಹವನ್ನು ಹೊಂದಿದ್ದೇವೆ.
İbrahim 14:10
ಅವರ ಸಂದೇಶವಾಹಕರು ಹೇಳಿದರು ಆಕಾಶಗಳ ಮತ್ತು ಭೂಮಿಯ ಸೃಷ್ಟಿಕರ್ತನಾದ ಅಲ್ಲಾಹನ ಕುರಿತು ನೀವು ಸಂದೇಹ ಪಡುತ್ತಿರುವಿರಾ? ಅವನು ನಿಮ್ಮ ಪಾಪಗಳನ್ನು ಕ್ಷಮಿಸಿಬಿಡಲೆಂದು ಹಾಗೂ ನಿಮಗೆ ಒಂದು ನಿರ್ದಿಷÀ್ಟ ಅವಧಿಯವರೆಗೆ ಕಾಲಾವಕಾಶ ಕೊಡಲೆಂದು ನಿಮ್ಮನ್ನು ಕರೆಯುತ್ತಿದ್ದಾನೆ. ಅವರು ಹೇಳಿದರು: ನೀವು ನಮ್ಮಂತಹ ಮನುಷÀ್ಯರೇ ಆಗಿರುವಿರಿ. ನಮ್ಮ ಪೂರ್ವಜರು ಆರಾಧಿಸುತ್ತಿದ್ದವುಗಳಿಂದ ನಮ್ಮನ್ನು ತಡೆಯಲು ನೀವು ಬಯಸುತ್ತಿರುವಿರಾ ? ಹಾಗಾದರೆ ನಮ್ಮ ಮುಂದೆ (ಸತ್ಯತೆಯ ಬಗ್ಗೆ) ಯಾವುದಾದರೂ ಸುಸ್ಪಷÀ್ಟ ಆಧಾರವನ್ನು (ಪವಾಡವನ್ನು) ತನ್ನಿರಿ.
İbrahim 14:11
ಅವರಿಗೆ ಅವರ ಸಂದೇಶವಾಹಕರು ಹೇಳಿದರು; ನಾವು ನಿಮ್ಮಂತಹ ಮನುಷÀ್ಯರೇ ಆಗಿದ್ದೇವೆ ಎಂಬುದು ನಿಜ. ಆದರೆ ಅಲ್ಲಾಹನು ತನ್ನ ದಾಸರ ಪೈಕಿ ತಾನಿಚ್ಛಿಸಿದವರನ್ನು (ದೌತ್ಯ ಕಾರ್ಯಕ್ಕೆ ಆಯ್ದುಕೊಂಡು) ಅನುಗ್ರಹಿಸುತ್ತಾನೆ, ಅಲ್ಲಾಹನ ಅಪ್ಪಣೆಯ ವಿನಃ ನಿಮ್ಮ ಬಳಿಗೆ ಯಾವ ಆಧಾರ ಪ್ರಮಾಣವನ್ನು ತಂದುಕೊಡುವುದು ನಮ್ಮ ಅಧಿಕಾರದಲ್ಲಿಲ,್ಲ ಮತ್ತು ಸತ್ಯ ವಿಶ್ವಾಸಿಗಳು ಅಲ್ಲಾಹನ ಮೇಲೆಯೇ ಭರವಸೆಯನ್ನಿರಿಸಲಿ.
İbrahim 14:12
ನಾವು ಅಲ್ಲಾಹನ ಮೇಲೆಯೇ ಭರವಸೆಯನ್ನೇಕೆ ಇಡಬಾರದು ? ವಸ್ತುತಃ ಅವನು ನಮಗೆ ನಮ್ಮ ಮಾರ್ಗಗಳನ್ನು ತೋರಿರುವನು ನೀವು ನಮಗೆ ಕೊಡುತ್ತಿರುವ ಹಿಂಸೆಗಳನ್ನು ಖಂಡಿತ ನಾವು ಸಹಿಸುವೆವು ಮತ್ತು ಭರವಸೆಯನ್ನಿರಿಸುವವರು ಅಲ್ಲಾಹನ ಮೇಲೆಯೇ ಭರವಸೆಯನ್ನಿರಿಸಲಿ.
İbrahim 14:13
ಸತ್ಯ ನಿಷÉÃಧಿಸಿದವರು ತಮ್ಮ ಸಂದೇಶವಾಹಕರಿಗೆ ಹೇಳಿದರು; ನೀವು ನಮ್ಮ ಧರ್ಮಕ್ಕೆ ಮರಳದಿದ್ದರೆ ನಾವು ನಿಮ್ಮನ್ನು ನಮ್ಮ ನಾಡಿನಿಂದ ಗಡಿಪಾರು ಮಾಡುವೆವು, ಆಗ ಅವರ ಪ್ರಭು ಅವರೆಡೆಗೆ ಸಂದೇಶ ನೀಡಿದನು. ಖಂಡಿತವಾಗಿಯೂ ನಾವು ಅಕ್ರಮಿಗಳನ್ನೇ ನಾಶಗೊಳಿಸುವೆವು
İbrahim 14:14
ಮತ್ತು ಅವರ ನಂತರ ನಾವು ನಿಮ್ಮನ್ನು ಭೂಮಿಯಲ್ಲಿ ನೆಲೆಗೊಳಿಸುವೆವು. ಇದು ನನ್ನ ಬಳಿ ನಡೆಯಲಿರುವ ವಿಚಾರಣೆ ಮತ್ತು ನನ್ನ ಎಚ್ಚರಿಕೆಯಿಂದ ಭಯಪಟ್ಟವನಿಗೆ ಇರುವ ಅನುಗ್ರಹವಾಗಿದೆ.
İbrahim 14:15
ಸತ್ಯನಿಷÉÃಧಿಗಳು ಸ್ವತಃ ತೀರ್ಪನ್ನು ಬೇಡಿದರು ಪರಿಣಾಮವಾಗಿ ಪ್ರತಿಯೊಬ್ಬ ಹಠಮಾರಿಯಾದ ದುರಹಂಕಾರಿ ಪರಾಜಿತನಾದನು.
İbrahim 14:16
ಅವನ ಮುಂದೆ ನರಕವು ಇದೆ ಅಲ್ಲಿ ಅವನಿಗೆ ರಕ್ತಮಿಶ್ರಿತ ಕೀವಿನ ನೀರನ್ನು ಕುಡಿಸಲಾಗುವುದು.
İbrahim 14:17
ಅವನು ಅದನ್ನು ಗುಟುಕು ಗುಟುಕಾಗಿ ಕುಡಿಯಲು ಯತ್ನಿಸುವನು. ಆದರೂ ಅದನ್ನು ಗಂಟಲಿನಿAದ ಇಳಿಸಲು ಸಾಧ್ಯವಾಗದು, ಮತ್ತು ಅವನಿಗೆ ಎಲ್ಲಾ ಕಡೆಯಿಂದಲೂ ಮರಣವು ಬಂದುಬಿಡುವುದು, ಆದರೆ ಅವನು ಸಾಯಲಾರ. ಅನಂತರ ಅದರ ಹಿಂದೆಯೇ ಕಠಿಣ ಯಾತನೆಯು ಸಹ ಇರುವುದು.
İbrahim 14:18
ತಮ್ಮ ಪ್ರಭುವನ್ನು ನಿಷÉÃಧಿಸಿದವರ ಕರ್ಮಗಳ ಉದಾಹರಣೆಯು ಬೂದಿಯಂತೆ. ಒಂದು ಬಿರುಗಾಳಿಯ ದಿನ ಚಂಡಮಾರುತವು ಅದನ್ನು ಹಾರಿಸಿತು. ಅವರು ತಮ್ಮ ಸಂಪಾದನೆಯ ಯಾವ ಪ್ರತಿಫಲವನ್ನು ಪಡೆಯಲು ಸಾಮರ್ಥ್ಯ ಹೊಂದಲಾರರು. ಇದುವೇ ಅತಿ ವಿದೂರ ಪಥಭ್ರಷÀ್ಟತೆಯಾಗಿದೆ.
İbrahim 14:19
ಅಲ್ಲಾಹನು ಆಕಾಶಗಳನ್ನು ಮತ್ತು ಭೂಮಿಯನ್ನು ಅತ್ಯುತ್ತಮ ಯೋಜನೆಯೊಂದಿಗೆ ಸೃಷ್ಟಿಸಿರುತ್ತಾನೆ ಎಂದು ನೀವು ನೋಡಿಲ್ಲವೇ? ಅವನಿಚ್ಛಿಸಿದರೆ ನಿಮ್ಮನ್ನು ಅಳಿಸಿ ಒಂದು ಹೊಸ ಸೃಷ್ಟಿಯನ್ನು ತರಬಲ್ಲನು.
İbrahim 14:20
ಇದು ಅಲ್ಲಾಹನ ಮೇಲೆ ಒಂದಿಷÀÄ್ಟ ಕಷÀ್ಟಕರ ಕಾರ್ಯವಲ್ಲ.
İbrahim 14:21
ಸಕಲರೂ ಅಲ್ಲಾಹನ ಮುಂದೆ ಹಾಜರಾಗುವರು. ಆಗ ದುರ್ಬಲರು ಅಹಂಕಾರಿಗಳಾಗಿದ್ದವರೊAದಿಗೆ ಹೇಳುವರು; ನಾವಂತೂ ನಿಮ್ಮ ಅನುಯಾಯಿಗಳಾಗಿದ್ದೆವು ಆದ್ದರಿಂದ ಅಲ್ಲಾಹನ ಯಾತನೆಯಿಂದ ರಕ್ಷಿಸಲಿಕ್ಕಾಗಿ ನೀವು ಏನಾದರೂ ಮಾಡಬಲ್ಲಿರಾ? ಅವರು ಉತ್ತರ ನೀಡುವವರು; ಅಲ್ಲಾಹನು ನಮ್ಮನ್ನು ಸನ್ಮಾರ್ಗಕ್ಕೆ ಮುನ್ನಡೆಸುತ್ತಿದ್ದರೆ ಖಂಡಿತ ನಾವು ನಿಮಗೆ ಮಾರ್ಗದರ್ಶನ ನೀಡುತ್ತಿದ್ದೆವು. ಇನ್ನು ನಾವು ಕೂಗಾಡಿದರು ಅಥವ ಸಹನೆ ವಹಿಸಿದರೂ ಸಮಾನವಾಗಿದೆ. ನಮಗೆ ಪಾರಾಗುವ ಯಾವುದೇ ಮಾರ್ಗವಿಲ್ಲ.
İbrahim 14:22
ಕಾರ್ಯವು ತೀರ್ಮಾನಿಸಲ್ಪಟ್ಟಾಗ ಶೈತಾನನು ಹೇಳುವನು; ಖಂಡಿತ ಅಲ್ಲಾಹನು ನಿಮಗೆ ಸತ್ಯವಾದ ವಾಗ್ದಾನವನ್ನು ಮಾಡಿದ್ದನು. ಮತ್ತು ನಾನು ನಿಮಗೆ ವಾಗ್ದಾನಗಳನ್ನು ಮಾಡಿದ್ದೆನು. ಆದರೆ ಅದನ್ನು ಉಲ್ಲಂಘಿಸಿಬಿಟ್ಟಿರುವೆನು. ನಿಮ್ಮ ಮೇಲೆ ನನ್ನ ಯಾವುದೇ ಒತ್ತಡ ಇರಲಿಲ.್ಲ ಹೌದು ನಾನು ನಿಮ್ಮನ್ನು ಕರೆದೆನು ಮತ್ತೆ ನೀವು ನನ್ನ ಕರೆಗೆ ಓಗೊಟ್ಟಿರಿ. ಆದ್ದರಿಂದ ನೀವು ನನ್ನನ್ನು ಆಕ್ಷೇಪಿಸಬೇಡಿರಿ. ಸ್ವತಃ ನಿಮ್ಮನ್ನೇ ಆಕ್ಷೇಪಿಸಿಕೊಳ್ಳಿರಿ ನಾನೂ ನಿಮಗೆ ನೆರವು ನೀಡಲಾರೆ. ಇದಕ್ಕೆ ಮೊದಲು ನೀವು ನನ್ನನ್ನು ಅಲ್ಲಾಹನ ಸಹಭಾಗಿಯನ್ನಾಗಿ ನಿಶ್ಚಯಿಸಿದ್ದನ್ನು ನಾನು ನಿರಾಕರಿಸುತ್ತೇನೆ. ಖಂಡಿತವಾಗಿಯೂ ಅಕ್ರಮಿಗಳಿಗೆ ವೇದನಾಜನಕ ಯಾತನೆ ಇರುವುದು.
İbrahim 14:23
ಸತ್ಯ ವಿಶ್ವಾಸವನ್ನಿರಿಸಿ ಸತ್ಕರ್ಮಗಳನ್ನು ಎಸಗುವವರು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳೊಳಗೆ ಪ್ರವೇಶಿಸಲಾಗುವರು. ಅಲ್ಲಿ ಅವರು ಅವರ ಪ್ರಭುವಿನ ಅಪ್ಪಣೆಯಿಂದ ಸದಾ ವಾಸಿಸುವರು. ಅಲ್ಲಿ ಅವರ ಸ್ವಾಗತ ಕೋರುವಿಕೆಯು ಸಲಾಮ್(ಶಾಂತಿ) ಎಂದಾಗಿರುವುದು.
İbrahim 14:24
ಅಲ್ಲಾಹನು ಪವಿತ್ರ ವಚನದ ಉಪಮೆಯನ್ನು ಹೇಗೆ ಕೊಟ್ಟಿರುವನೆಂದು ನೀವು ನೋಡಿಲ್ಲವೆ? ಒಂದು ಉತ್ತಮವಾದ ಮರದಂತೆ; ಅದರ ಬೇರುಗಳು ಬಲಿಷÀ್ಠವಾಗಿವೆ ಮತ್ತು ಅದರ ಕೊಂಬೆಗಳು ಆಕಾಶಕ್ಕೇರಿವೆ.
İbrahim 14:25
ಅದು ತನ್ನ ಪ್ರಭುವಿನ ಅಪ್ಪಣೆಯಿಂದ, ಸದಾಕಾಲ ತನ್ನ ಫಲವನ್ನು ನೀಡುತ್ತಿರುತ್ತದೆ. ಮತ್ತು ಜನರು ಉಪದೇಶ ಸ್ವೀಕರಿಸಲೆಂದು ಅಲ್ಲಾಹನು ಅವರಿಗಾಗಿ ಉಪಮೆಗಳನ್ನು ವಿವರಿಸುತ್ತಾನೆ.
İbrahim 14:26
ಅಶುದ್ಧ ವಚನದ ಉಪಮೆಯು ಒಂದು ಕೆಟ್ಟ ಮರದಂತಿದೆ. ಅದು ಭೂಮಿಯ ಮೇಲ್ಭಾಗದಿಂದಲೇ ಕಿತ್ತೆಸೆಯಲ್ಪಡುತ್ತದೆ. ಅದಕ್ಕೆ ಸ್ಥಿರತೆಯೆಂಬುದೇ ಇರುವುದಿಲ್ಲ.
İbrahim 14:27
ಅಲ್ಲಾಹನು ಸತ್ಯ ವಿಶ್ವಾಸವಿರಿಸಿದವರನ್ನು ಸ್ಥಿರವಾದ ವಚನದ ಮೂಲಕ ಈ ಇಹಲೋಕ ಜೀವನದಲ್ಲೂ ಮತ್ತು ಪರಲೋಕದಲ್ಲೂ ಸದೃಢಗೊಳಿಸುತ್ತಾನೆ ಮತ್ತು ಅಲ್ಲಾಹನು ಅಕ್ರಮಿಗಳನ್ನು ದಾರಿಗೆಡಿಸುತ್ತಾನೆ ಹಾಗೂ ಅಲ್ಲಾಹನು ತಾನಿಚ್ಛಿಸುವುದನ್ನು ಮಾಡುತ್ತಾನೆ..
İbrahim 14:28
ಅಲ್ಲಾಹನ ಅನುಗ್ರಹದ ಬದಲಿಗೆ ಕೃತಘ್ನತೆಯನ್ನು ತೋರಿದವರೂ ಮತ್ತು ತಮ್ಮ ಜನಾಂಗವನ್ನು ವಿನಾಶದ ಭವನಕ್ಕೆ ತಲುಪಿಸಿದವರನ್ನು ನೀವು ನೋಡಿಲ್ಲವೆ ?
İbrahim 14:29
ಅರ್ಥಾತ್ ನರಕಕ್ಕೆ ಅದರಲ್ಲಿ ಅವರು ಪ್ರವೇಶಿಸುವರು, ಅದು ಅತೀ ನಿಕೃಷÀ್ಟ ತಾಣ.
İbrahim 14:30
ಜನರನ್ನು ಅಲ್ಲಾಹನ ಮಾರ್ಗದಿಂದ ತಪ್ಪಿಸಲಿಕ್ಕಾಗಿ ಅವರು ಅಲ್ಲಾಹನಿಗೆ ಸಹಭಾಗಿಗಳನ್ನು ಮಾಡಿಕೊಂಡರು. ಹೇಳಿರಿ; ನೀವು ಸುಖಭೋಗಗಳನ್ನು ಸವಿಯಿರಿ ನಿಮ್ಮ ತಲುಪುದಾಣವಂತೂ ನರಕವೇ ಆಗಿದೆ.
İbrahim 14:31
ಓ ಪೈಗಂಬರರೇ ನನ್ನ ಸತ್ಯವಿಶ್ವಾಸಿ ದಾಸರಿಗೆ ಹೇಳಿರಿ; ಅವರು ನಮಾಜ್ ಸಂಸ್ಥಾಪಿಸಲಿ ಮತ್ತು ಯಾವುದೇ ವ್ಯವಹಾರವಾಗಲೀ ಮಿತ್ರತ್ವವಾಗಲಿ ಪ್ರಯೋಜನಕ್ಕೆ ಬಾರದ ದಿನವೂ ಬರುವುದಕ್ಕೆ ಮುಂಚೆಯೇ ನಾವು ಅವರಿಗೆ ದಯಪಾಲಿಸಿರುವವುಗಳಿಂದ ರಹಸ್ಯವಾಗಿಯೂ ಬಹಿರಂಗವಾಗಿಯೂ ಖರ್ಚು ಮಾಡಲಿ.
İbrahim 14:32
ಅಲ್ಲಾಹನೆಂದರೆ ಆಕಾಶ-ಭೂಮಿಗಳನ್ನು ಸೃಷ್ಟಿಸಿದವನು ಮತ್ತು ಆಕಾಶದಿಂದ ಮಳೆಯನ್ನು ಸುರಿಸಿ ಅದರ ಮೂಲಕ ನಿಮ್ಮ ಜೀವನಾಧಾರಕ್ಕಾಗಿ ಫಲ ಬೆಳೆಗಳನ್ನು ಹೊರತಂದವನು ಮತ್ತು ಅವನು ತನ್ನ ಆದೇಶದಿಂದ ನಿಮಗಾಗಿ ಹಡಗನ್ನು ಸಮುದ್ರದಲ್ಲಿ ಚಲಿಸುತ್ತಿರುವಂತೆ ಅಧೀನಗೊಳಿಸಿದನು ಮತ್ತು ಅವನೇ ನಿಮಗಾಗಿ ನದಿಗಳನ್ನು ಅಧೀನಗೊಳಿಸಿದನು
İbrahim 14:33
ಅವನೇ ನಿಮಗೆ ಸೂರ್ಯನನ್ನೂ, ಚಂದ್ರನನ್ನೂ ನಿರಂತರವಾಗಿ ಚಲಿಸುತ್ತಿರುವಂತೆ ಅಧೀನಗೊಳಿಸಿದನು ಹಾಗೂ ರಾತ್ರಿ ಹಗಲನ್ನೂ ನಿಮಗಾಗಿ ಅಧೀನಗೊಳಿಸಿದನು.
İbrahim 14:34
ನೀವು ಅವನಿಂದ ಬೇಡಿದ್ದನ್ನೆಲ್ಲಾ ಅವನು ನಿಮಗೆ ನೀಡಿರುವನು ಇನ್ನು ನೀವು ಅಲ್ಲಾಹನ ಅನುಗ್ರಹಗಳನ್ನು ಎಣಿಕೆ ಮಾಡಲು ಬಯಸಿದರೆ ಅವುಗಳನ್ನು ನೀವು ಎಣಿಸಲಾರಿರಿ. ನಿಜವಾಗಿಯೂ ಮನುಷÀ್ಯನು ಮಹಾ ಅಕ್ರಮಿಯೂ ಕೃತಘ್ನನೂ ಆಗಿದ್ದಾನೆ.
İbrahim 14:35
ಇಬ್ರಾಹೀಮರು ಪ್ರಾರ್ಥಿಸಿದ ಸಂದರ್ಭವನ್ನು ಸ್ಮರಿಸಿರಿ; ಓ ನನ್ನ ಪ್ರಭುವೇ ನೀನು ಈ ನಾಡನ್ನು (ಮಕ್ಕಾಃ) ಶಾಂತಿಯ ಬೀಡನ್ನಾಗಿ ಮಾಡು ಮತ್ತು ನನ್ನನ್ನು ನನ್ನ ಮಕ್ಕಳನ್ನು ವಿಗ್ರಹಾರಾಧನೆಯಿಂದ ರಕ್ಷಿಸು.
İbrahim 14:36
ಓ ನನ್ನ ಪ್ರಭುವೇ ಈ ವಿಗ್ರಹಗಳು ಅನೇಕ ಜನರನ್ನು ದಾರಿಗೆಡಿಸಿಬಿಟ್ಟಿವೆ ಆದ್ದರಿಂದ ಯಾರು ನನ್ನನ್ನು ಅನುಸರಿಸುವವರೋ ಅವರು ನನ್ನವರು ಮತ್ತು ಯಾರು ನನ್ನನ್ನು ಧಿಕ್ಕÀರಿಸುವರೋ ಅವರು, (ಅವರ ವಿಷಯ ನಿನ್ನ ಮೇಲಿದೆ) ನಿಶ್ಚಯವಾಗಿಯೂ ನೀನು ಮಹಾ ಕ್ಷಮಾಶೀಲನೂ, ಕರುಣಾನಿಧಿಯೂ ಆಗಿರುವೆ.
İbrahim 14:37
ನಮ್ಮ ಪ್ರಭುವೇ, ನಾನು ನನ್ನ ಸಂತತಿಗಳಲ್ಲಿ ಕೆಲವರನ್ನು ಒಂದು ನಿರ್ಜಲ ನಿಷ್ಫಲ ಬಂಜರು ಕಣಿವೆಯಲ್ಲಿ ನಿನ್ನ ಪವಿತ್ರ ಭವನದ ಸಮೀಪ ನೆಲೆಸಿರುವೆನು. ನಮ್ಮ ಪ್ರಭುವೇ ಇದು ಅವರು ನಮಾಜ್ ಸಂಸ್ಥಾಪಿಸಲೆAದಾಗಿದೆ. ಆದ್ದರಿಂದ ನೀನು ಕೆಲವು ಜನರ ಹೃದಯಗಳನ್ನು ಅವರೆಡೆಗೆ ಒಲಿಯುವಂತೆ ಮಾಡು, ಮತ್ತು ಅವರಿಗೆ ಫಲಗಳ ಅನ್ನಾಹಾರವನ್ನು ದಯಪಾಲಿಸು. ಅವರು ಕೃತಜ್ಞತೆ ತೋರಬಹುದು.
İbrahim 14:38
ನಮ್ಮ ಪ್ರಭುವೇ ನಾವು ರಹಸ್ಯವಾಗಿಡುವುದನ್ನು ಬಹಿರಂಗಗೊಳಿಸುವುದನ್ನು ನೀನು ಚೆನ್ನಾಗಿ ಬಲ್ಲೆ, ಮತ್ತು ಭೂಮಿ ಆಕಾಶದ ಯಾವೊಂದು ವಸ್ತುವೂ ಅಲ್ಲಾಹನಿಂದ ಅಡಗಿರುವುದಿಲ್ಲ.
İbrahim 14:39
ನನಗೆ ವೃದ್ಧಾಪ್ಯದಲ್ಲಿ ಇಸ್ಮಾಯೀಲ್ ಮತ್ತು ಇಸ್‌ಹಾಕರನ್ನು ದಯಪಾಲಿಸಿದ ಅಲ್ಲಾಹನಿಗೇ ಸರ್ವಸ್ತುತಿ. ನಿಶ್ಚಯವಾಗಿಯೂ ನನ್ನ ಪ್ರಭು ಪ್ರಾರ್ಥನೆಯನ್ನು ಚೆನ್ನಾಗಿ ಆಲಿಸುವನಾಗಿರುತ್ತಾನೆ.
İbrahim 14:40
ನನಗೆ ವೃದ್ಧಾಪ್ಯದಲ್ಲಿ ಇಸ್ಮಾಯೀಲ್ ಮತ್ತು ಇಸ್‌ಹಾಕರನ್ನು ದಯಪಾಲಿಸಿದ ಅಲ್ಲಾಹನಿಗೇ ಸರ್ವಸ್ತುತಿ. ನಿಶ್ಚಯವಾಗಿಯೂ ನನ್ನ ಪ್ರಭು ಪ್ರಾರ್ಥನೆಯನ್ನು ಚೆನ್ನಾಗಿ ಆಲಿಸುವನಾಗಿರುತ್ತಾನೆ.
İbrahim 14:41
ಓ ನಮ್ಮ ಪ್ರಭುವೇ ವಿಚಾರಣೆ ನಡೆಯುವ ದಿನ ನನ್ನನ್ನು ನನ್ನ ಮಾತಾ-ಪಿತರನ್ನು ಮತ್ತು ಸತ್ಯವಿಶ್ವಾಸಿಗಳನ್ನು ಕ್ಷಮಿಸಿಬಿಡು.
İbrahim 14:42
ಅಕ್ರಮಿಗಳು ಮಾಡುತ್ತಿರುವ ಕೃತ್ಯಗಳ ಕುರಿತು ಅಲ್ಲಾಹನು ಅಲಕ್ಷö್ಯನೆಂದು ತಿಳಿಯಬೇಡಿ ಅವನಂತೂ ಅವರಿಗೆ ಕಣ್ಣುಗಳನ್ನು ದಿಟ್ಟಿಸುತ್ತಲೇ ಇರುವ ದಿನದವರೆಗೆ ಕಾಲಾವಕಾಶ ನೀಡಿರುತ್ತಾನೆ.
İbrahim 14:43
ಅವರು ತಮ್ಮ ಭೀತಿಯಿಂದ ತಲೆಗಳನ್ನು ಎತ್ತಿ ಓಡುತ್ತಿರುವವರು. ಅವರ ದೃಷ್ಟಿಗಳು ಸ್ವತಃ ಅವರಿಗೂ ಮರಳಿ ಬರಲಾರವು ಮತ್ತು ಅವರ ಹೃದಯಗಳು ಬೋಧಶೂನ್ಯರಾಗಿ ಬಿಡುವವು.
İbrahim 14:44
ಶಿಕ್ಷೆಯು ಬರಲಿರುವ ಆ ದಿನದ ಬಗ್ಗೆ ನೀವು ಜನರಿಗೆ ಎಚ್ಚರಿಸಿರಿ ಮತ್ತು ಅಕ್ರಮಿಗಳು ಹೇಳುವರು; ನಮ್ಮ ಪ್ರಭುವೇ ನಮಗೆ ಸ್ವಲ್ಪ ಕಾಲಾವಕಾಶವನ್ನಾದರೂ ನೀಡು. ನಾವು ನಿನ್ನ ಕರೆಗೆ ಓಗೊಡುವೆವು, ಮತ್ತೆ ನಿನ್ನ ಸಂದೇಶವಾಹಕರನ್ನು ಅನುಸರಿಸುವೆವು. ಅಂದು ಅವರೊಂದಿಗೆ ಹೇಳಲಾಗುವುದು ಇದಕ್ಕಿಂತ ಮೊದಲು ನೀವು ನಮಗೆ ಅಳಿಗಾಲವೇ ಇಲ್ಲವೆಂದು ಶಪಥಗಳನ್ನು ಹಾಕುತ್ತಿರಲಿಲ್ಲವೇ?
İbrahim 14:45
ಮತ್ತು ನೀವು ತಮ್ಮ ಮೇಲೆ ತಾವೇ ಅಕ್ರಮವೆಸಗಿದವರ ವಸತಿಗಳಲ್ಲಿ ನೆಲೆಸಿರಲಿಲ್ಲವೇ, ಹಾಗೂ ನಾವು ಅವರೊಂದಿಗೆ ಯಾವ ರೀತಿ ವರ್ತಿಸಿದೆವು ಎಂದು ನಿಮಗೆ ಸ್ಪಷÀ್ಟವಾಗಿದೆ. ನಾವು ನಿಮಗಾಗಿ ಹಲವಾರು ಉಪಮೆಗಳನ್ನು ನೀಡಿದ್ದೆವು.
İbrahim 14:46
ಅವರು ತಮ್ಮ ಎಲ್ಲಾ ಕುತಂತ್ರಗಳನ್ನು ಪ್ರಯೋಗಿಸಿದರು ಅವರ ಕುತಂತ್ರಗಳ ಪ್ರತಿತಂತ್ರ ಅಲ್ಲಾಹನ ಬಳಿ ಇದೆ ಮತ್ತು ಅವರ ಕುತಂತ್ರಗಳು ಪರ್ವತಗಳನ್ನೇ ಸರಿಸಿಬಿಡುವಷÀÄ್ಟ ಘೋರವಾಗಿದ್ದರೂ ಸರಿಯೇ.
İbrahim 14:47
ನೀವು ಎಂದೂ ಅಲ್ಲಾಹನು ತನ್ನ ಸಂದೇಶವಾಹಕರೊAದಿಗೆ ಮಾಡಿದ ವಾಗ್ದಾನವನ್ನು ಉಲ್ಲಂಘಿಸುವವನೆAದು ಭಾವಿಸಬೇಡಿರಿ, ವಾಸ್ತವದಲ್ಲಿ ಅಲ್ಲಾಹನು ಮಹಾ ಪ್ರಚಂಡನು ಪ್ರತೀಕಾರ ಪಡೆಯುವವನು ಆಗಿರುವನು.
İbrahim 14:48
ಅಂದು ಭೂಮಿಯನ್ನು ಬೇರೊಂದು ಭೂಮಿಯಿಂದ ಬದಲಾಯಿಸಲಾಗುವುದು ಮತ್ತು ಆಕಾಶಗಳನ್ನು ಸಹ, ಮತ್ತು ಎಲ್ಲರೂ ಏಕೈಕ ಪ್ರಚಂಡನೂ ಆದ ಅಲ್ಲಾಹನ ಮುಂದೆ ಹಾಜರಾಗುವರು.
İbrahim 14:49
ಆ ದಿನ ಅಪರಾಧಿಗಳು ಸಂಕೋಲೆಗಳಲ್ಲಿ ಬಂಧಿತರಾಗಿರುವುದನ್ನು ನೀವು ಕಾಣುವಿರಿ.
İbrahim 14:50
ಅವರ ಉಡುಪುಗಳು ಗಂಧಕದ್ದಾಗಿರುವವು ಮತ್ತು ಅಗ್ನಿಯು ಅವರ ಮುಖಗಳ ಮೇಲೆ ಆವರಿಸಿಕೊಂಡಿರುವುದು.
İbrahim 14:51
ಇದು ಅಲ್ಲಾಹನು ಪ್ರತಿಯೊಬ್ಬ ವ್ಯಕ್ತಿಗೂ ಅವನು ಸಂಪಾದಿಸಿದ ಕರ್ಮಗಳ ಪ್ರತಿಫಲವನ್ನು ನೀಡಲೆಂದಾಗಿದೆ ನಿಸ್ಸಂಶಯವಾಗಿಯೂ ಅಲ್ಲಾಹನು ಅತಿಶೀಘ್ರವಾಗಿ ವಿಚಾರಣೆ ನಡೆಸುವನಾಗಿದ್ದಾನೆ,
İbrahim 14:52
ಈ ಕುರ್‌ಆನ್ ಸಕಲ ಜನರಿಗೆ ತಲುಪಿಸಬೇಕಾದ ಒಂದು ಸಂದೇಶವಾಗಿದೆ. ಇದರ ಮೂಲಕ ಅವರಿಗೆ ಎಚ್ಚರಿಕೆ ನೀಡಲಿಕ್ಕಾಗಿ ಮತ್ತು ಅವನು ಏಕೈಕ ಆರಾಧ್ಯನೆಂದು ಅವರು ತಿಳಿಯಲಿಕ್ಕಾಗಿ ಬುದ್ಧಿಜೀವಿಗಳು ಉಪದೇಶ ಪಡೆಯಲಿಕ್ಕಾಗಿ ಕಳಿಸಲ್ಪಟ್ಟಿರುತ್ತದೆ.