Kannada Meal — Şeyh Beşîr Misûrî — Abese 80:1 – Nas 114:6
Contents
- Abese 80:1
- Abese 80:2
- Abese 80:3
- Abese 80:4
- Abese 80:5
- Abese 80:6
- Abese 80:7
- Abese 80:8
- Abese 80:9
- Abese 80:10
- Abese 80:11
- Abese 80:12
- Abese 80:13
- Abese 80:14
- Abese 80:15
- Abese 80:16
- Abese 80:17
- Abese 80:18
- Abese 80:19
- Abese 80:20
- Abese 80:21
- Abese 80:22
- Abese 80:23
- Abese 80:24
- Abese 80:25
- Abese 80:26
- Abese 80:27
- Abese 80:28
- Abese 80:29
- Abese 80:30
- Abese 80:31
- Abese 80:32
- Abese 80:33
- Abese 80:34
- Abese 80:35
- Abese 80:36
- Abese 80:37
- Abese 80:38
- Abese 80:39
- Abese 80:40
- Abese 80:41
- Abese 80:42
- Tekvir 81:1
- Tekvir 81:2
- Tekvir 81:3
- Tekvir 81:4
- Tekvir 81:5
- Tekvir 81:6
- Tekvir 81:7
- Tekvir 81:8
- Tekvir 81:9
- Tekvir 81:10
- Tekvir 81:11
- Tekvir 81:12
- Tekvir 81:13
- Tekvir 81:14
- Tekvir 81:15
- Tekvir 81:16
- Tekvir 81:17
- Tekvir 81:18
- Tekvir 81:19
- Tekvir 81:20
- Tekvir 81:21
- Tekvir 81:22
- Tekvir 81:23
- Tekvir 81:24
- Tekvir 81:25
- Tekvir 81:26
- Tekvir 81:27
- Tekvir 81:28
- Tekvir 81:29
- İnfitar 82:1
- İnfitar 82:2
- İnfitar 82:3
- İnfitar 82:4
- İnfitar 82:5
- İnfitar 82:6
- İnfitar 82:7
- İnfitar 82:8
- İnfitar 82:9
- İnfitar 82:10
- İnfitar 82:11
- İnfitar 82:12
- İnfitar 82:13
- İnfitar 82:14
- İnfitar 82:15
- İnfitar 82:16
- İnfitar 82:17
- İnfitar 82:18
- İnfitar 82:19
- Mütaffifin 83:1
- Mütaffifin 83:2
- Mütaffifin 83:3
- Mütaffifin 83:4
- Mütaffifin 83:5
- Mütaffifin 83:6
- Mütaffifin 83:7
- Mütaffifin 83:8
- Mütaffifin 83:9
- Mütaffifin 83:10
- Mütaffifin 83:11
- Mütaffifin 83:12
- Mütaffifin 83:13
- Mütaffifin 83:14
- Mütaffifin 83:15
- Mütaffifin 83:16
- Mütaffifin 83:17
- Mütaffifin 83:18
- Mütaffifin 83:19
- Mütaffifin 83:20
- Mütaffifin 83:21
- Mütaffifin 83:22
- Mütaffifin 83:23
- Mütaffifin 83:24
- Mütaffifin 83:25
- Mütaffifin 83:26
- Mütaffifin 83:27
- Mütaffifin 83:28
- Mütaffifin 83:29
- Mütaffifin 83:30
- Mütaffifin 83:31
- Mütaffifin 83:32
- Mütaffifin 83:33
- Mütaffifin 83:34
- Mütaffifin 83:35
- Mütaffifin 83:36
- İnşikak 84:1
- İnşikak 84:2
- İnşikak 84:3
- İnşikak 84:4
- İnşikak 84:5
- İnşikak 84:6
- İnşikak 84:7
- İnşikak 84:8
- İnşikak 84:9
- İnşikak 84:10
- İnşikak 84:11
- İnşikak 84:12
- İnşikak 84:13
- İnşikak 84:14
- İnşikak 84:15
- İnşikak 84:16
- İnşikak 84:17
- İnşikak 84:18
- İnşikak 84:19
- İnşikak 84:20
- İnşikak 84:21
- İnşikak 84:22
- İnşikak 84:23
- İnşikak 84:24
- İnşikak 84:25
- Büruc 85:1
- Büruc 85:2
- Büruc 85:3
- Büruc 85:4
- Büruc 85:5
- Büruc 85:6
- Büruc 85:7
- Büruc 85:8
- Büruc 85:9
- Büruc 85:10
- Büruc 85:11
- Büruc 85:12
- Büruc 85:13
- Büruc 85:14
- Büruc 85:15
- Büruc 85:16
- Büruc 85:17
- Büruc 85:18
- Büruc 85:19
- Büruc 85:20
- Büruc 85:21
- Büruc 85:22
- Târık 86:1
- Târık 86:2
- Târık 86:3
- Târık 86:4
- Târık 86:5
- Târık 86:6
- Târık 86:7
- Târık 86:8
- Târık 86:9
- Târık 86:10
- Târık 86:11
- Târık 86:12
- Târık 86:13
- Târık 86:14
- Târık 86:15
- Târık 86:16
- Târık 86:17
- A'lâ 87:1
- A'lâ 87:2
- A'lâ 87:3
- A'lâ 87:4
- A'lâ 87:5
- A'lâ 87:6
- A'lâ 87:7
- A'lâ 87:8
- A'lâ 87:9
- A'lâ 87:10
- A'lâ 87:11
- A'lâ 87:12
- A'lâ 87:13
- A'lâ 87:14
- A'lâ 87:15
- A'lâ 87:16
- A'lâ 87:17
- A'lâ 87:18
- A'lâ 87:19
- Gâşiye 88:1
- Gâşiye 88:2
- Gâşiye 88:3
- Gâşiye 88:4
- Gâşiye 88:5
- Gâşiye 88:6
- Gâşiye 88:7
- Gâşiye 88:8
- Gâşiye 88:9
- Gâşiye 88:10
- Gâşiye 88:11
- Gâşiye 88:12
- Gâşiye 88:13
- Gâşiye 88:14
- Gâşiye 88:15
- Gâşiye 88:16
- Gâşiye 88:17
- Gâşiye 88:18
- Gâşiye 88:19
- Gâşiye 88:20
- Gâşiye 88:21
- Gâşiye 88:22
- Gâşiye 88:23
- Gâşiye 88:24
- Gâşiye 88:25
- Gâşiye 88:26
- Fecr 89:1
- Fecr 89:2
- Fecr 89:3
- Fecr 89:4
- Fecr 89:5
- Fecr 89:6
- Fecr 89:7
- Fecr 89:8
- Fecr 89:9
- Fecr 89:10
- Fecr 89:11
- Fecr 89:12
- Fecr 89:13
- Fecr 89:14
- Fecr 89:15
- Fecr 89:16
- Fecr 89:17
- Fecr 89:18
- Fecr 89:19
- Fecr 89:20
- Fecr 89:21
- Fecr 89:22
- Fecr 89:23
- Fecr 89:24
- Fecr 89:25
- Fecr 89:26
- Fecr 89:27
- Fecr 89:28
- Fecr 89:29
- Fecr 89:30
- Beled 90:1
- Beled 90:2
- Beled 90:3
- Beled 90:4
- Beled 90:5
- Beled 90:6
- Beled 90:7
- Beled 90:8
- Beled 90:9
- Beled 90:10
- Beled 90:11
- Beled 90:12
- Beled 90:13
- Beled 90:14
- Beled 90:15
- Beled 90:16
- Beled 90:17
- Beled 90:18
- Beled 90:19
- Beled 90:20
- Şems 91:1
- Şems 91:2
- Şems 91:3
- Şems 91:4
- Şems 91:5
- Şems 91:6
- Şems 91:7
- Şems 91:8
- Şems 91:9
- Şems 91:10
- Şems 91:11
- Şems 91:12
- Şems 91:13
- Şems 91:14
- Şems 91:15
- Leyl 92:1
- Leyl 92:2
- Leyl 92:3
- Leyl 92:4
- Leyl 92:5
- Leyl 92:6
- Leyl 92:7
- Leyl 92:8
- Leyl 92:9
- Leyl 92:10
- Leyl 92:11
- Leyl 92:12
- Leyl 92:13
- Leyl 92:14
- Leyl 92:15
- Leyl 92:16
- Leyl 92:17
- Leyl 92:18
- Leyl 92:19
- Leyl 92:20
- Leyl 92:21
- Duhâ 93:1
- Duhâ 93:2
- Duhâ 93:3
- Duhâ 93:4
- Duhâ 93:5
- Duhâ 93:6
- Duhâ 93:7
- Duhâ 93:8
- Duhâ 93:9
- Duhâ 93:10
- Duhâ 93:11
- İnşirah 94:1
- İnşirah 94:2
- İnşirah 94:3
- İnşirah 94:4
- İnşirah 94:5
- İnşirah 94:6
- İnşirah 94:7
- İnşirah 94:8
- Tin 95:1
- Tin 95:2
- Tin 95:3
- Tin 95:4
- Tin 95:5
- Tin 95:6
- Tin 95:7
- Tin 95:8
- Alak 96:1
- Alak 96:2
- Alak 96:3
- Alak 96:4
- Alak 96:5
- Alak 96:6
- Alak 96:7
- Alak 96:8
- Alak 96:9
- Alak 96:10
- Alak 96:11
- Alak 96:12
- Alak 96:13
- Alak 96:14
- Alak 96:15
- Alak 96:16
- Alak 96:17
- Alak 96:18
- Alak 96:19
- Kadr 97:1
- Kadr 97:2
- Kadr 97:3
- Kadr 97:4
- Kadr 97:5
- Beyyine 98:1
- Beyyine 98:2
- Beyyine 98:3
- Beyyine 98:4
- Beyyine 98:5
- Beyyine 98:6
- Beyyine 98:7
- Beyyine 98:8
- Zilzal 99:1
- Zilzal 99:2
- Zilzal 99:3
- Zilzal 99:4
- Zilzal 99:5
- Zilzal 99:6
- Zilzal 99:7
- Zilzal 99:8
- Adiyat 100:1
- Adiyat 100:2
- Adiyat 100:3
- Adiyat 100:4
- Adiyat 100:5
- Adiyat 100:6
- Adiyat 100:7
- Adiyat 100:8
- Adiyat 100:9
- Adiyat 100:10
- Adiyat 100:11
- Karia 101:1
- Karia 101:2
- Karia 101:3
- Karia 101:4
- Karia 101:5
- Karia 101:6
- Karia 101:7
- Karia 101:8
- Karia 101:9
- Karia 101:10
- Karia 101:11
- Tekâsür 102:1
- Tekâsür 102:2
- Tekâsür 102:3
- Tekâsür 102:4
- Tekâsür 102:5
- Tekâsür 102:6
- Tekâsür 102:7
- Tekâsür 102:8
- Asr 103:1
- Asr 103:2
- Asr 103:3
- Hümezeh 104:1
- Hümezeh 104:2
- Hümezeh 104:3
- Hümezeh 104:4
- Hümezeh 104:5
- Hümezeh 104:6
- Hümezeh 104:7
- Hümezeh 104:8
- Hümezeh 104:9
- Fil 105:1
- Fil 105:2
- Fil 105:3
- Fil 105:4
- Fil 105:5
- Kureyş 106:1
- Kureyş 106:2
- Kureyş 106:3
- Kureyş 106:4
- Mâûn 107:1
- Mâûn 107:2
- Mâûn 107:3
- Mâûn 107:4
- Mâûn 107:5
- Mâûn 107:6
- Mâûn 107:7
- Kevser 108:1
- Kevser 108:2
- Kevser 108:3
- Kâfirun 109:1
- Kâfirun 109:2
- Kâfirun 109:3
- Kâfirun 109:4
- Kâfirun 109:5
- Kâfirun 109:6
- Nasr 110:1
- Nasr 110:2
- Nasr 110:3
- Tebbet 111:1
- Tebbet 111:2
- Tebbet 111:3
- Tebbet 111:4
- Tebbet 111:5
- İhlas 112:1
- İhlas 112:2
- İhlas 112:3
- İhlas 112:4
- Felak 113:1
- Felak 113:2
- Felak 113:3
- Felak 113:4
- Felak 113:5
- Nas 114:1
- Nas 114:2
- Nas 114:3
- Nas 114:4
- Nas 114:5
- Nas 114:6
Abese 80:1
ಪೈಗಂಬರರು ಮುಖ ಸಿಂಡರಿಸಿಕೊಂಡರು ಮತ್ತು ವಿಮುಖರಾದರು.
Abese 80:2
ಅಂಧನೊಬ್ಬನು ಅವರ ಬಳಿ ಬಂದಾಗ.
Abese 80:3
ನಿಮಗೇನು ಗೊತ್ತು? ಬಹುಶಃ ಅವನು ತನ್ನನ್ನು ಸಂಸ್ಕರಿಸಿಕೊಳ್ಳಬಹುದು.
Abese 80:4
ಅಥವಾ ಉಪದೇಶವನ್ನು ಕೇಳಿ ಆ ಉಪದೇಶವು ಅವನಿಗೆ ಪ್ರಯೋಜನಕಾರಿಯಾಗಬಹುದು.
Abese 80:5
ಯಾರು ನಿರಪೇಕ್ಷತೆಯನ್ನು ತೋರುತ್ತಾನೋ.
Abese 80:6
ಅವನ ಕಡೆಗೆ ನೀವು ಗಮನ ಹರಿಸುತ್ತೀರಿ!
Abese 80:7
ವಸ್ತುತಃ ಅವನು ಪರಿಶುದ್ಧತೆಯನ್ನು ಪಡೆಯದೇ ಹೋದರೆ ನಿಮ್ಮ ಮೇಲೆ ಯಾವುದೇ ಆಕ್ಷೇಪವಿಲ್ಲ.
Abese 80:8
ಮತ್ತು ಯಾರು ನಿಮ್ಮ ಬಳಿಗೆ ಓಡುತ್ತಾ ಬಂದಿರುವನೋ
Abese 80:9
ಅವನು ಭಯಭಕ್ತಿ ಹೊಂದಿದವನಾಗಿದ್ದಾನೆ.
Abese 80:10
ಅವನನ್ನು ನೀವು ಕಡೆಗಣಿಸುತ್ತೀರಿ.
Abese 80:11
ಇದು ಸರಿಯಲ್ಲ. ಕುರ್ಆನ್ ಒಂದು ಉದ್ಭೋಧೆ ಯಾಗಿದೆ.
Abese 80:12
ಇಚ್ಚಿಸುವವನು ಇದರಿಂದ ಉದ್ಭೋಧೆಯನ್ನು ಪಡೆದುಕೊಳ್ಳಲಿ.
Abese 80:13
ಇದು ಆದರ ಪರ‍್ಣ ಹೊತ್ತಿಗೆಗಳಲ್ಲಿದೆ.
Abese 80:14
ಅದು ಉನ್ನತವೂ ಪರಿಶುದ್ಧವೂ ಆಗಿದೆ.
Abese 80:15
ಮಾನ್ಯ ಲಿಪಿಕಾರರಾದವರ ಕೈಯಲ್ಲಿದೆ.
Abese 80:16
ಅವರು ಪುಣ್ಯಶೀಲ ಗೌರವಾನ್ವಿತ ಮಲಕ್ಗಳಾಗಿರುವರು.
Abese 80:17
ದರ‍್ದೈವಿ ಮನುಷ್ಯನಿಗೆ ನಾಶವಿರಲಿ ಅವನೆಂತಹ ಕೃತಘ್ನನು!
Abese 80:18
ಅಲ್ಲಾಹನು ಅವನನ್ನು ಯಾವ ವಸ್ತುವಿನಿಂದ ಸೃಷ್ಟಿಸಿದ್ದಾನೆ ?
Abese 80:19
ಒಂದು ವರ‍್ಯದಿಂದ ಅವನನ್ನು ಸೃಷ್ಟಿಸಿದನು ತರುವಾಯ ವಿಧಿ ನಿಶ್ಚಯಿಸಿದನು.
Abese 80:20
ನಂತರ ಅವನಿಗೋಸ್ಕರ ಮರ‍್ಗವನ್ನು ಸುಗಮಗೊಳಿಸಿದನು.
Abese 80:21
ಅನಂತರ ಅವನಿಗೆ ಮರಣ ಕೊಟ್ಟನು ಮತ್ತು ಸಮಾಧಿಯೊಳಗೆ ತಲುಪಿಸಿದನು.
Abese 80:22
ಬಳಿಕ ಅವನು ತಾನಿಚ್ಚಿಸುವಾಗ ಪುನಃ ಜೀವಂತಗೊಳಿಸುವನು.
Abese 80:23
ಖಂಡಿತ ಇಲ್ಲ, ಇದುವರೆಗೂ ಅವನು ಅಲ್ಲಾಹನ ಆದೇಶವನ್ನು ಪಾಲಿಸಲಿಲ್ಲ.
Abese 80:24
ಮನುಷ್ಯನು ತನ್ನ ಆಹಾರದೆಡೆಗೆ ನೋಡಲಿ.
Abese 80:25
ನಾವು ಧಾರಾಕಾರವಾಗಿ ನೀರನ್ನು ಸುರಿಸಿದೆವು.
Abese 80:26
ತರುವಾಯ ನಾವು ಭೂಮಿಯನ್ನು ಉತ್ತಮ ವಿಧದಲ್ಲಿ ಸೀಳಿದೆವು.
Abese 80:27
ತರುವಾಯ ಅದರಿಂದ ಧಾನ್ಯವನ್ನು ಬೆಳೆಸಿದೆವು.
Abese 80:28
ದ್ರಾಕ್ಷಿ ಮತ್ತು ತರಕಾರಿಗಳನ್ನು.
Abese 80:29
ಆಲಿವ್ ಮತ್ತು ರ‍್ಜೂರವನ್ನು
Abese 80:30
ದಟ್ಟವಾದ ತೋಟಗಳನ್ನು
Abese 80:31
ಹಾಗೂ ಹಣ್ಣುಹಂಪಲು ಮತ್ತು ಹುಲ್ಲುಗಳನ್ನು (ಬೆಳೆಸಿದೆವು)
Abese 80:32
ನಿಮ್ಮ ಮತ್ತು ನಿಮ್ಮ ಜಾನುವಾರುಗಳ ಉಪಯೋಗಕ್ಕಾಗಿದೆ.
Abese 80:33
ಆದರೆ ಕಿವಿಯನ್ನು ಕಿವುಡಾಗಿಸುವ ಕಹಳೆಯು ಮೊಳಗಿದಾಗ
Abese 80:34
ಅಂದು ಮನುಷ್ಯನು ತನ್ನ ಸಹೋದರನಿಂದಲೂ
Abese 80:35
ತನ್ನ ತಾಯಿ ಮತ್ತು ತನ್ನ ತಂದೆಯಿಂದಲೂ
Abese 80:36
ತನ್ನ ಪತ್ನಿ ಮತ್ತು ತನ್ನ ಮಕ್ಕಳಿಂದಲೂ ಓಡಿಹೋಗುವನು.
Abese 80:37
ಅಂದು ಪ್ರತಿಯೊಬ್ಬನು ತನಗೊದಗಿರುವ ಚಿಂತೆಯಲ್ಲೇ ಮಗ್ನನಾಗಿರುವನು,
Abese 80:38
ಅಂದು ಕೆಲವು ಮುಖಗಳು ಪ್ರಕಾಶಮಯವಾಗಿರುವುವು,
Abese 80:39
(ಅವು) ಪ್ರಸನ್ನವೂ, ರ‍್ಷಪರ‍್ಣವೂ ಆಗಿರುವುವು.
Abese 80:40
ಮತ್ತು ಕೆಲವು ಮುಖಗಳ ಮೇಲೆ ಧೂಳು ಆವರಿಸಿರುವುದು.
Abese 80:41
ಅವುಗಳ ಮೇಲೆ ಕಪ್ಪುಛಾಯೆ ಕವಿದಿರುವುದು.
Abese 80:42
ಅವರೇ ದುರಾಚಾರಿಗಳಾದ ಸತ್ಯನಿಷೇಧಿಗಳು.
Tekvir 81:1
ಸರ‍್ಯನು ಸುತ್ತಲ್ಪಟ್ಟಾಗ.
Tekvir 81:2
ಮತ್ತು ನಕ್ಷತ್ರಗಳು ಪ್ರಕಾಶ ರಹಿತವಾದಾಗ.
Tekvir 81:3
ರ‍್ವತಗಳು ಚಲಿಸಲ್ಪಡುವಾಗ.
Tekvir 81:4
ಹತ್ತು ತಿಂಗಳ ರ‍್ಭಿಣಿ ಒಂಟೆಗಳನ್ನು ತೊರೆದು ಬಿಡಲಾಗುವಾಗ.
Tekvir 81:5
ವನ್ಯ ಮೃಗಗಳು ಒಟ್ಟುಗೂಡಿಸಲಾಗುವಾಗ.
Tekvir 81:6
ಸಮುದ್ರಗಳು ಹೊತ್ತಿ ಉರಿಯಲ್ಪಡುವಾಗ.
Tekvir 81:7
ಜೀವಗಳನ್ನು (ಶರೀರಗಳೊಂದಿಗೆ) ಸೇರಿಸಲಾಗುವಾಗ.
Tekvir 81:8
ಜೀವಂತ ಹೂಳಲಾದ ಹೆಣ್ಣು ಶಿಶುವಿನೊಂದಿಗೆ ವಿಚಾರಿಸಲಾಗುವಾಗ.
Tekvir 81:9
ಅವಳು ಯಾವ ತಪ್ಪಿಗಾಗಿ ವಧಿಸಲ್ಪಟ್ಟಳೆಂದು.
Tekvir 81:10
ರ‍್ಮ ಗ್ರಂಥಗಳನ್ನು ತೆರೆಯಲಾಗುವಾಗ.
Tekvir 81:11
ಆಕಾಶದ ತೆರೆಯನ್ನು ಸರಿಸಲಾಗುವಾಗ.
Tekvir 81:12
ನರಕಾಗ್ನಿಯನ್ನು ಧಗಧಗಿಸಿ ಉರಿಸಲಾಗುವಾಗ
Tekvir 81:13
ಸ್ರ‍್ಗವನ್ನು ಸಮೀಪಕ್ಕೆ ತರಲಾಗುವಾಗ.
Tekvir 81:14
ಪ್ರತಿಯೊಬ್ಬ ವ್ಯಕ್ತಿಯು ತಾನು ತಂದಿರುವುದನ್ನು ಅರಿತುಕೊಳ್ಳುವನು.
Tekvir 81:15
ನಾನು ಹಿಂದಕ್ಕೆ ಸರಿಯುವ ನಕ್ಷತ್ರಗಳ ಆಣೆ ಹಾಕುತ್ತೇನೆ.
Tekvir 81:16
ಚಲಿಸುವ ಮತ್ತು ಮರೆಯಾಗುವ ನಕ್ಷತ್ರಗಳ ಆಣೆ.
Tekvir 81:17
ರಾತ್ರಿಯ ಆಣೆ, ಅದು ಮರಳಿದಾಗ.
Tekvir 81:18
ಪ್ರಭಾತದ ಆಣೆ, ಅದು ಪ್ರಕಾಶ ಬೀರಿದಾಗ.
Tekvir 81:19
ಖಂಡಿತವಾಗಿಯೂ ಇದು (ಕುರ್ಆನ್) ಒಬ್ಬ ಆದರಣೀಯ ದೂತನ (ಜೀಬ್ರೀಲ್ನ) ಮಾತಾಗಿದೆ.
Tekvir 81:20
ಅವನು ಬಲಿಷ್ಠನು ಸಿಂಹಾಸನದ ಒಡೆಯನಾದ (ಅಲ್ಲಾಹನ) ಬಳಿ ಉನ್ನತ ಸ್ಥಾನ ಉಳ್ಳವನಾಗಿರುವನು.
Tekvir 81:21
ಅಲ್ಲಿ (ಆಕಾಶಗಳಲ್ಲಿ) ಅವನ ಆದೇಶಗಳನ್ನು ಪಾಲಿಸಲಾಗುತ್ತದೆ, ಅವನು ಪ್ರಾಮಾಣಿಕನೂ ಆಗಿದ್ದಾನೆ.
Tekvir 81:22
ನಿಮ್ಮ ಒಡ ನಾಡಿಯು(ಮುಹಮ್ಮದ್) ಹುಚ್ಚನಲ್ಲ.
Tekvir 81:23
ಖಂಡಿತವಾಗಿಯೂ ಅವರು ದೇವದೂತನನ್ನು (ಜಿಬ್ರೀಲರನ್ನು) ಆಕಾಶದ ಸ್ಪಷ್ಟ ಆಂತರಿಕ್ಷದಲ್ಲಿ ನೋಡಿದ್ದಾರೆ.
Tekvir 81:24
ಅವರು ಅಗೋಚರ ಸುದ್ದಿಗಳನ್ನು ತಿಳಿಸುವುದರಲ್ಲಿ ಜಿಪುಣತೆ ತೋರುವುದಿಲ್ಲ.
Tekvir 81:25
ಈ ಕುರ್ಆನ್ ಧಿಕ್ಕರಿಸಲ್ಪಟ್ಟ ಶೈತಾನನ ಮಾತಲ್ಲ.
Tekvir 81:26
ಹೀಗಿರುವಾಗ ನೀವು ಎತ್ತ ಹೋಗುತ್ತಿರುವಿರಿ ?
Tekvir 81:27
ಇದು ರ‍್ವಲೋಕದವರಿಗೆ ಉಪದೇಶವಾಗಿದೆ.
Tekvir 81:28
ನಿಮ್ಮ ಪೈಕಿ ಸನ್ಮರ‍್ಗದಲ್ಲಿ ನಡೆಯಲು ಇಚ್ಛಿಸುವ ಪ್ರತಿಯೊಬ್ಬನಿಗೆ.
Tekvir 81:29
ರ‍್ವಲೋಕಗಳ ಪ್ರಭುವಾದ ಅಲ್ಲಾಹನು ಇಚ್ಛಿಸದೆ ನೀವೇನನ್ನು ಇಚ್ಛಿಸಲಾರಿರಿ.
İnfitar 82:1
ಆಕಾಶವು ಬಿರಿದುಹೋಗುವಾಗ.
İnfitar 82:2
ನಕ್ಷತ್ರಗಳು ಚದುರಿ ಹೋಗುವಾಗ.
İnfitar 82:3
ಸಮುದ್ರಗಳು ಉಕ್ಕಿ ಹರಿಯುವಾಗ.
İnfitar 82:4
ಗೋರಿಗಳು ಬುಡಮೇಲಾಗುವಾಗ.
İnfitar 82:5
ಆಗ ಪ್ರತಿಯೊಬ್ಬ ವ್ಯಕ್ತಿಯು ತಾನು ಮುಂಚಿತವಾಗಿ ಕಳುಹಿಸಿರುವ ಮತ್ತು ಹಿಂದೆ ಬಿಟ್ಟು ಬಂದಿರುವ ರ‍್ಮಗಳನ್ನು ಅರಿತುಕೊಳ್ಳುವನು.
İnfitar 82:6
ಓ ಮನುಷ್ಯನೇ ! ನಿನ್ನನ್ನು ಮಹಾ ಉದಾರಿಯಾದ ನಿನ್ನ ಪ್ರಭುವಿನಿಂದ ವಂಚಿಸಿದ ವಸ್ತು ಯಾವುದು ?
İnfitar 82:7
ಅವನು ನಿನ್ನನ್ನು ಸೃಷ್ಟಿಸಿದನು, ಬಳಿಕ ನಿನ್ನನ್ನು ಸರಿಯಾದ ವಿಧದಲ್ಲಿರಿಸಿದನು, ಅನಂತರ ಸಂತುಲಿತ ಗೊಳಿಸಿದನು.
İnfitar 82:8
ಅವನು ತಾನಿಚ್ಛಿಸಿದ ರೂಪದಲ್ಲಿ ನಿನ್ನನ್ನು ಜೋಡಿಸಿದನು.
İnfitar 82:9
ಖಂಡಿತ ಇಲ್ಲ, ನೀವು ಪ್ರತಿಫಲದ ದಿನವನ್ನು ಸುಳ್ಳಾಗಿಸುತ್ತಿರುವಿರಿ.
İnfitar 82:10
ಖಂಡಿತವಾಗಿಯೂ ನಿಮ್ಮ ಮೇಲೆ ಮೇಲ್ನೋಟಗಾರರಾದ ಮಲಕ್ಗಳು ಇದ್ದಾರೆ.
İnfitar 82:11
ಅವರು ಆದರಣೀಯ ಬರಹಗಾರರಾಗಿದ್ದಾರೆ.
İnfitar 82:12
ನೀವು ಮಾಡುತ್ತಿರುವುದೆಲ್ಲವನ್ನು ಅವರು ಅರಿಯುತ್ತಾರೆ.
İnfitar 82:13
ಖಂಡಿತವಾಗಿಯೂ ಸತ್ರ‍್ಮಿಗಳು ಸುಖಾನುಗ್ರಹಗಳಲ್ಲಿರುವರು.
İnfitar 82:14
ನಿಶ್ಚಯವಾಗಿಯೂ ದುಷ್ರ‍್ಮಿಗಳು ನರಕಾಗ್ನಿಯಲ್ಲಿರುವರು.
İnfitar 82:15
ಪ್ರತಿಫಲ ದಿನದಂದು ಅವರು ಅದರಲ್ಲಿ ಪ್ರವೇಶಿಸುವರು.
İnfitar 82:16
ಅವರಿಗೆ ಅದರಿಂದ ಮರೆಯಾಗಿರಲು ಸಾಧ್ಯವಾಗಲಾರದು.
İnfitar 82:17
(ಓ ಪೈಗಂಬರರೇ) ಪ್ರತಿಫಲದ ದಿನವೆಂದರೆ ಏನೆಂದು ನಿಮಗೆ ತಿಳಿದಿದೆಯೇ ?
İnfitar 82:18
ನಾನು ಪುನಃ (ಕೇಳುತ್ತೇನೆ) ಪ್ರತಿಫಲ ಮತ್ತು ಶಿಕ್ಷೆಯ ದಿನ ಎಂದರೆ ಏನೆಂದು ನಿಮಗೇನು ಗೊತ್ತು ?
İnfitar 82:19
ಅದು ಯಾವೊಬ್ಬ ವ್ಯಕ್ತಿಯು ಇನ್ನೊಬ್ಬನಿಗಾಗಿ ಏನೂ ಮಾಡಲು ಸಾಧ್ಯವಾಗದ ದಿನ. ಮತ್ತು ಅಂದು ಆಜ್ಞಾಧಿಕಾರವೆಲ್ಲವೂ ಅಲ್ಲಾಹನದೇ ಆಗಿರುವುದು.
Mütaffifin 83:1
ಅಳತೆ ಮತ್ತುತೂಕದಲ್ಲಿ ಕಡಿತಗೊಳಿಸುವವರಿಗೆ ಮಹಾ ನಾಶವಿದೆ.
Mütaffifin 83:2
ಅವರು ಜನರಿಂದ ಅಳೆದು ಪಡೆಯುವಾಗ ಸಂಪರ‍್ಣವಾಗಿ ಪಡೆಯುವರು.
Mütaffifin 83:3
ಮತ್ತು ಜನರಿಗೆ ಅಳೆದು ಅಥವಾ ತೂಕಮಾಡಿ ಕೊಡುವಾಗ ಕಡಿಮೆ ಕೊಡುವರು.
Mütaffifin 83:4
ಅವರು ಮರಣದ ಬಳಿಕ ಪುನಃ ಜೀವಂತಗೊಳಿಸಿ ಎಬ್ಬಿಸಲಾಗುವವರೆಂದು ಗ್ರಹಿಸಲಿಲ್ಲವೇ ?
Mütaffifin 83:5
ಆ ಮಹಾ ದಿನಕ್ಕಾಗಿ.
Mütaffifin 83:6
ಅಂದು ಸಕಲ ಜನರು ರ‍್ವಲೋಕಗಳ ಪ್ರಭುವಿನ ಮುಂದೆ ನಿಲ್ಲುವರು.
Mütaffifin 83:7
ಖಂಡಿತವಾಗಿಯೂ ದುಷ್ರ‍್ಮಿಗಳ ರ‍್ಮಪತ್ರವು ಸಿಜ್ಜೀನ್ನಲ್ಲಿದೆ.
Mütaffifin 83:8
ಸಿಜ್ಜೀನ್ ಏನೆಂದು ನಿಮಗೇನು ಗೊತ್ತು ?
Mütaffifin 83:9
ಅದು ಒಂದು ಲಿಖಿತ ಗ್ರಂಥವಾಗಿದೆ.
Mütaffifin 83:10
ಅಂದು ಸುಳ್ಳಾಗಿಸುವವರಿಗೆ ಮಹಾ ನಾಶವಿದೆ.
Mütaffifin 83:11
ಅವರು ಪ್ರತಿಫಲ ದಿನವನ್ನು ಸುಳ್ಳಾಗಿಸುತ್ತಾರೆ.
Mütaffifin 83:12
ಅದನ್ನು ಕೇವಲ ಹದ್ದುಮೀರುವ (ಮತ್ತು) ಪ್ರತಿಯೊಬ್ಬ ಮಹಾಪಾಪಿಯಾಗಿರುವವನು ಮಾತ್ರವೇ ಸುಳ್ಳಾಗಿಸುತ್ತಾನೆ.
Mütaffifin 83:13
ಅವನ ಮುಂದೆ ನಮ್ಮ ಸೂಕ್ತಿಗಳನ್ನು ಓದಿ ಕೊಡಲಾದರೆ ಇವು ಕೇವಲ ಪರ‍್ವಿಕರ ಕಟ್ಟುಕಥೆಗಳಾಗಿವೆ ಎನ್ನುತ್ತಾನೆ.
Mütaffifin 83:14
ಅಲ್ಲ, ಅವನ ಸಂಶಯ ಸರಿಯಿಲ್ಲ ಅವರ ರ‍್ಮಗಳ ನಿಮಿತ್ತ ಅವರ ಹೃದಯಗಳಿಗೆ ತುಕ್ಕು ಹಿಡಿದಿದೆ.
Mütaffifin 83:15
ಖಂಡಿತ ಇಲ್ಲ, ಅಂದು ಅವರು ತಮ್ಮ ಪ್ರಭುವಿನ ರ‍್ಶನದಿಂದ ವಂಚಿಸಲಾಗುವರು.
Mütaffifin 83:16
ತರುವಾಯ ಅವರು ಖಂಡಿತವಾಗಿಯೂ ನರಕಾಗ್ನಿಗೆ ನೂಕಲ್ಪಡುವರು.
Mütaffifin 83:17
ಅನಂತರ ನೀವು ಸುಳ್ಳಾಗಿಸುತ್ತಿದ್ದುದು ಇದುವೇ ಆಗಿದೆ ಎಂದು ಅವರೊಡನೆ ಹೇಳಲಾಗುವುದು.
Mütaffifin 83:18
ಅವರ ಸಂಶಯ ಸರಿಯಿಲ್ಲ, ಖಂಡಿತವಾಗಿಯೂ ಸಜ್ಜನರ ರ‍್ಮಪತ್ರವು ಇಲ್ಲಿಯ್ಯೀನ್ನಲ್ಲಿರುವುದು.
Mütaffifin 83:19
ಇಲ್ಲಿಯ್ಯೀನ್ ಏನೆಂದು ನಿಮಗೇನು ಗೊತ್ತು ?
Mütaffifin 83:20
(ಅದು) ಲಿಖಿತ ಗ್ರಂಥವಾಗಿದೆ.
Mütaffifin 83:21
ನಿಕಟ ಮಲಕ್ಗಳು ಅದನ್ನು ವೀಕ್ಷಿಸುತ್ತಿರುವರು.
Mütaffifin 83:22
ಖಂಡಿತವಾಗಿಯೂ ಸಜ್ಜನರು ಸುಖಾನುಗ್ರಹಗಳಲ್ಲಿರುವರು.
Mütaffifin 83:23
ಮಂಚಗಳಲ್ಲಿ ಕುಳಿತು ಅವರು ನೋಡುತ್ತಿರುವರು.
Mütaffifin 83:24
ಅವರ ಮುಖಗಳಲ್ಲೇ ಸುಸ್ಥಿತಿಯ ಕಾಂತಿಯನ್ನು ನೀವು ಕಾಣುತ್ತಿರುವಿರಿ.
Mütaffifin 83:25
ಮುದ್ರೆಯೊತ್ತಲಾದ ಶುದ್ಧ ಮದ್ಯವನ್ನು ಅವರಿಗೆ ಕುಡಿಸಲಾಗುವುದು.
Mütaffifin 83:26
ಅದರ ಮೇಲೆ ಕಸ್ತೂರಿಯ ಮುದ್ರೆಯಿರುವುದು. ಪೈಪೋಟಿ ನಡೆಸುವವರು ಇದಕ್ಕಾಗಿ ಪೈಪೋಟಿ ನಡೆಸಲಿ.
Mütaffifin 83:27
ಅದರ ಮಿಶ್ರಣವು 'ತಸ್ನೀಮ್'ನದ್ದಾಗಿರುವುದು.
Mütaffifin 83:28
. (ಅಂದರೆ) ಅದೊಂದು ಒರತೆ, ಅದರ ನೀರನ್ನು ಸಾಮಿಪ್ಯ ಪಡೆದವರು ಕುಡಿಯುವರು.
Mütaffifin 83:29
ಖಂಡಿತವಾಗಿಯೂ ಅಪರಾಧಿಗಳು ಸತ್ಯವಿಶ್ವಾಸಿಗಳನ್ನು ಗೇಲಿ ಮಾಡಿ ನಗುತ್ತಿದ್ದರು.
Mütaffifin 83:30
(ಸತ್ಯವಿಶ್ವಾಸಿಗಳು) ಅವರ ಮುಂದಿನಿಂದ ಹಾದು ಹೋಗುವಾಗ ಅವರು ಪರಸ್ಪರ ಕಣ್ಣುಸನ್ನೆ ಮಾಡುತ್ತಿದ್ದರು.
Mütaffifin 83:31
ಅವರು ತಮ್ಮ ಮನೆಯವರ ಕಡೆಗೆ ಮರಳುವಾಗ ಹಿಗ್ಗುತ್ತಾ ಮರಳುತ್ತಿದ್ದರು.
Mütaffifin 83:32
ವಿಶ್ವಾಸಿಗಳನ್ನು ಕಂಡಾಗ ಖಂಡಿತ ಇವರು ದಾರಿಗೆಟ್ಟವರು ಎನ್ನುತ್ತಿದ್ದರು.
Mütaffifin 83:33
ವಾಸ್ತವದಲ್ಲಿ ಅವರೇನೂ (ಮಕ್ಕಾದ ಸತ್ಯನಿಷೇಧಿಗಳು) ಅವರ ಮೇಲೆ ಮೇಲ್ವಿಚಾರಕರಾಗಿ ನಿಯೋಗಿಸಲ್ಪಟ್ಟಿರಲಿಲ್ಲ.
Mütaffifin 83:34
ಆದರೆ ಇಂದು ಸತ್ಯವಿಶ್ವಾಸಿಗಳು ಸತ್ಯನಿಷೇಧಿಗಳನ್ನು ಅಣಕಿಸಿ ನಗುವರು.
Mütaffifin 83:35
ಅವರು ಮಂಚಗಳಲ್ಲಿ ಕುಳಿತು ನೋಡುತ್ತಿರುವರು.
Mütaffifin 83:36
ಸತ್ಯನಿಷೇಧಿಗಳು ತಾವು ಮಾಡಿರುವುದಕ್ಕೆ ತಕ್ಕ ಪ್ರತಿಫಲ ಪಡೆದಿದ್ದಾರೆ ಎನ್ನುವರು ?
İnşikak 84:1
ಆಕಾಶವು ಒಡೆದು ಹೋಗುವಾಗ
İnşikak 84:2
ಮತ್ತು ಅದು ತನ್ನ ಪ್ರಭುವಿನ ಆಜ್ಞೆಗೆ ಶರಣಾಗುವುದು, ಅದು ಅದಕ್ಕಾಗಿಯೇ ರ‍್ಹವಾಗಿದೆ.
İnşikak 84:3
ಭೂಮಿಯು ವಿಸ್ತರಿಸಲಾಗುವಾಗ.
İnşikak 84:4
ಮತ್ತು ಅದು ತನ್ನೊಳಗಿರುವುದನ್ನು ಹೊರಗೆಸೆದು ಬರಿದಾಗುವಾಗ,
İnşikak 84:5
ಮತ್ತು ಅದು ತನ್ನ ಪ್ರಭುವಿನ ಆಜ್ಞೆಗೆ ಶರಣಾಗುವುದು, ಅದು ಅದಕ್ಕಾಗಿಯೇ ರ‍್ಹವಾಗಿದೆ.
İnşikak 84:6
ಓ ಮನುಷ್ಯನೇ, ನೀನು ನಿನ್ನ ಪ್ರಭುವಿನೆಡೆಗೆ ಸತತವಾಗಿ ಪ್ರಯತ್ನಿಸುತ್ತಾ ಸಾಗುತ್ತಿರುವೆ ಮತ್ತು ಅವನನ್ನು ಭೇಟಿಯಾಗಲಿರುವೆ.
İnşikak 84:7
ಆಗ (ಪರಲೋಕದಲ್ಲಿ) ಯಾವ ವ್ಯಕ್ತಿಯ ರ‍್ಮಪತ್ರವನ್ನು ಅವನ ಬಲಗೈಯಲ್ಲಿ ನೀಡಲಾಗುವುದೋ...
İnşikak 84:8
ಅವನ ವಿಚಾರಣೆ ಸುಲಭವಾಗಿ ಮಾಡಲಾಗುವುದು.
İnşikak 84:9
ಮತ್ತು ಅವನು ತನ್ನ ಕುಟುಂಬದವರ ಕಡೆಗೆ ಸಂತೋಷದಿಂದ ಮರಳುವನು.
İnşikak 84:10
ಆದರೆ ಯಾರ ರ‍್ಮಪತ್ರವನ್ನು ಅವನ ಬೆನ್ನ ಹಿಂದಿನಿಂದ ನೀಡಲಾಗುವುದೋ...
İnşikak 84:11
ಆಗ ಅವನು ಮರಣವನ್ನು ಕರೆಯತೊಡಗುವನು.
İnşikak 84:12
ಮತ್ತು ಧಗಧಗಿಸುವ ನರಕಾಗ್ನಿಯಲ್ಲಿ ಪ್ರವೇಶಿಸುವನು.
İnşikak 84:13
ಖಂಡಿತವಾಗಿಯೂ ಇವನು ತನ್ನ ಮನೆಯವರೊಡನೆ (ಇಹಲೋಕದಲ್ಲಿ) ಸಂತುಷ್ಟನಾಗಿದ್ದನು.
İnşikak 84:14
ತನಗೆ ಎಂದೂ (ಅಲ್ಲಾಹನೆಡೆಗೆ) ಮರಳಲಿಕ್ಕಿಲ್ಲವೆಂದು ಅವನು ಭಾವಿಸಿದ್ದನು.
İnşikak 84:15
ಏಕಿಲ್ಲ! ವಸ್ತುತಃ ಅವನ ಪ್ರಭು ಅವನನ್ನು ಚೆನ್ನಾಗಿ ವೀಕ್ಷಿಸುತ್ತಿದ್ದನು.
İnşikak 84:16
ನಾನು ಅಸ್ತಮಾನ ಶೋಭೆಯ ಆಣೆ ಹಾಕುತ್ತೇನೆ.
İnşikak 84:17
ಮತ್ತು ರಾತ್ರಿಯ (ಆಣೆ) ಮತ್ತು ಅದು ಒಟ್ಟುಗೂಡಿಸುವವುಗಳಾಣೆ.
İnşikak 84:18
ಚಂದ್ರನ ಮೇಲಾಣೆ, ಅದು ಪರ‍್ಣಗೊಂಡಾಗ.
İnşikak 84:19
ಖಂಡಿತವಾಗಿಯೂ ನೀವು ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ತಲುಪಲಿರುವಿರಿ.
İnşikak 84:20
ಅವರಿಗೇನಾಗಿಬಿಟ್ಟಿದೆ ? ಅವರು ವಿಶ್ವಾಸವಿಡಿವುದಿಲ್ಲವಲ್ಲ!
İnşikak 84:21
ಮತ್ತು ಅವರ ಮುಂದೆ ಕುರ್ಆನ್ ಪಠಿಸಲಾದರೆ ಅವರು ಸಾಷ್ಟಾಂಗವೆರಗುವುದಿಲ್ಲ.
İnşikak 84:22
ಅಲ್ಲ, ಸತ್ಯ ನಿಷೇಧಿಗಳು ಸುಳ್ಳಾಗಿಸುತ್ತಿದ್ದಾರೆ.
İnşikak 84:23
ಅವರು ಹೃದಯಗಳಲ್ಲಿ ಬಚ್ಚಿಟ್ಟು ಕೊಂಡಿರುವುದನ್ನು ಅವನು ಚೆನ್ನಾಗಿ ಬಲ್ಲನು.
İnşikak 84:24
ಅವರಿಗೆ ನೀವು ವೇದನಾಜನಕ ಶಿಕ್ಷೆಯ ಶುಭವರ‍್ತೆ ನೀಡಿರಿ.
İnşikak 84:25
ಆದರೆ ಸತ್ಯವಿಶ್ವಾಸಿಗಳಿಗೆ ಮತ್ತು ಸತ್ರ‍್ಮವೆಸಗುವವರಿಗೆ ಅನಂತ ಪ್ರತಿಫಲವಿದೆ.
Büruc 85:1
ನಕ್ಷತ್ರ ಮಂಡಲಗಳಿರುವ ಆಕಾಶದಾಣೆ
Büruc 85:2
ವಾಗ್ದಾನ ಮಾಡಲಾದ ದಿನದಾಣೆ.
Büruc 85:3
ಸಾಕ್ಷಿ ಮತ್ತು ಸಾಕ್ಷಿಗೊಳಿಸಲಾಗುವುದರ ಮೇಲಾಣೆ!
Büruc 85:4
ಹೊಂಡದವರು ನಾಶಗೊಳಿಸಲಾದರು.
Büruc 85:5
ಅದು ಇಂಧನ ತುಂಬಲಾದ ಒಂದು ಬೆಂಕಿಯಾಗಿತ್ತು.
Büruc 85:6
ಅವರು ಅದರ ಸುತ್ತಮುತ್ತ ಕುಳಿತಿದ್ದ ಸಂರ‍್ಭ.
Büruc 85:7
ಅವರು ಸತ್ಯವಿಶ್ವಾಸಿಗಳೊಡನೆ ಮಾಡುತ್ತಿದ್ದಂತಹ ಕೃತ್ಯಕ್ಕೆ ಸ್ವತಃ ಅವರೇ ಪ್ರತ್ಯಕ್ಷರ‍್ಶಿಗಳಾಗಿದ್ದರು.
Büruc 85:8
ಅವರು ಪ್ರತಾಪಶಾಲಿಯು ಸ್ತುತ್ರ‍್ಹನೂ ಆದ ಅಲ್ಲಾಹನ ಮೇಲೆ ವಿಶ್ವಾಸವಿರಿಸಿದರು ಎಂಬ ಕಾರಣದ ಹೊರತು ಇನ್ನಾವುದೇ ದೋಷಕ್ಕೆ ಅವರು ಸತ್ಯ ವಿಶ್ವಾಸಿಗಳೊಡನೆ ಪ್ರತಿಕಾರ ತೀರಿಸುತ್ತಿರಲಿಲ್ಲ.
Büruc 85:9
ಅವನಿಗೇ ಆಕಾಶಗಳ ಮತ್ತು ಭೂಮಿಯ ಅಧಿಪತ್ಯವಿದೆ ಮತ್ತು ಅಲ್ಲಾಹನು ಸಕಲ ಸಂಗತಿಗಳನ್ನು ವೀಕ್ಷಿಸುತ್ತಿರುವನು.
Büruc 85:10
ನಿಸ್ಸಂಶಯವಾಗಿಯೂ ಯಾರು ಸತ್ಯವಿಶ್ವಾಸಿ ಪುರಷರನ್ನು ಮತ್ತು ಸ್ತಿçÃಯರನ್ನು ಹಿಂಸಿಸಿದರೋ, ಅನಂತರ ಪಶ್ಚಾತ್ತಾಪ ಪಡಲಿಲ್ಲವೋ ಅವರಿಗೆ ನರಕದಶಿಕ್ಷೆಯಿದೆ ಮತ್ತು ಸುಡುವಯಾತನೆಯಿದೆ.
Büruc 85:11
ನಿಸ್ಸಂಶಯವಾಗಿಯೂ ಸತ್ಯವಿಶ್ವಾಸವಿರಿಸಿದವರಿಗೆ ಮತ್ತು ಸತ್ರ‍್ಮವೆಸಗಿದವರಿಗೆ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ರ‍್ಗೋದ್ಯಾನಗಳಿವೆ. ಇದುವೇ ಮಹಾ ವಿಜಯವಾಗಿದೆ.
Büruc 85:12
ಖಂಡಿತವಾಗಿಯೂ ನಿಮ್ಮ ಪ್ರಭುವಿನ ಹಿಡಿತವೂ ಅತ್ಯುಗ್ರವಾಗಿದೆ.
Büruc 85:13
ನಿಶ್ಚಯವಾಗಿಯೂ ಅವನು ಸೃಷ್ಟಿಯನ್ನು ಆರಂಭಿಸಿದವನು ಮತ್ತು ಪುನಃ ಸೃಷ್ಟಿಸುವವನು ಅವನಾಗಿದ್ದಾನೆ.
Büruc 85:14
ಅವನು ಕ್ಷಮಾಶೀಲನು ಅತ್ಯಂತ ಪ್ರೀತಿಸುವವನು ಆಗಿದ್ದಾನೆ.
Büruc 85:15
ಸಿಂಹಾಸನದ ಒಡೆಯನು, ಔನ್ನತ್ಯವುಳ್ಳವನು ಆಗಿದ್ದಾನೆ.
Büruc 85:16
ತಾನಿಚ್ಛಿಸುವುದನ್ನು ಮಾಡಿಯೇ ತೀರುವವನಾಗಿದ್ದಾನೆ.
Büruc 85:17
ಓ ಸಂದೇಶವಾಹಕರೇ ನಿಮಗೆ ಸೈನ್ಯಗಳ ವೃತ್ತಾಂತವು ತಲುಪಿದೆಯೇ ?
Büruc 85:18
(ಅಂದರೆ) ಫಿರ್ಔನ್ ಮತ್ತು ಸಮೂದ್ನ ವೃತ್ತಾಂತ ?
Büruc 85:19
ಆದರೆ ಸತ್ಯನಿಷೇಧಿಗಳು ಸುಳ್ಳಾಗಿಸುವುದರಲ್ಲಿ ತಲ್ಲೀನರಾಗಿದ್ದಾರೆ.
Büruc 85:20
ಮತ್ತು ಅಲ್ಲಾಹನು ಅವರನ್ನು ಎಲ್ಲಾ ಕಡೆಯಿಂದ ಆವರಿಸಿಕೊಂಡಿದ್ದಾನೆ.
Büruc 85:21
ಆದರೆ ಇದು ಗೌರವಾನ್ವಿತ ಕುರ್ಆನ್ ಆಗಿದೆ.
Büruc 85:22
ಸುರಕ್ಷಿತ ಫಲಕದಲ್ಲಿದೆ.
Târık 86:1
ಆಕಾಶದ ಮೇಲಾಣೆ ಮತ್ತು ರಾತ್ರಿಯಲ್ಲಿ ಪ್ರಕಟವಾಗುವುದರಾಣೆ.
Târık 86:2
ರಾತ್ರಿ ಪ್ರಕಟವಾಗುವಂತಹದು ಏನೆಂದು ನಿಮಗೇನು ಗೊತ್ತು.
Târık 86:3
ಅದು ಪ್ರಕಾಶಮಯ ನಕ್ಷತ್ರವಾಗಿದೆ.
Târık 86:4
ತನ್ನ ಮೇಲೆ ಮೇಲ್ವಿಚಾರಕ ದೂತನಿಲ್ಲದ ಯಾವೊಬ್ಬ ವ್ಯಕ್ತಿಯೂ ಇಲ್ಲ,
Târık 86:5
ಮನುಷ್ಯನು ತಾನು ಯಾವುದರಿಂದ ಸೃಷ್ಟಿಸಲಾಗಿರುವೆನೆಂಬುದನ್ನು ನೋಡಲಿ.
Târık 86:6
ಅವನು ಒಂದು ಚಿಮ್ಮುವ ದ್ರವದಿಂದ ಸೃಷ್ಟಿಸಲಾಗಿರುವನು.
Târık 86:7
ಅದು ಬೆನ್ನು ಮತ್ತು ಎದೆಯ ನಡುವಿನಿಂದ ಹೊರಬರುತ್ತದೆ
Târık 86:8
ನಿಸ್ಸಂದೇಹವಾಗಿಯೂ ಅವನು ಅದನ್ನು ಪುನಃ ಮರಳಿ ತರಲು ಸಾರ‍್ಥ್ಯವುಳ್ಳವನಾಗಿದ್ದಾನೆ.
Târık 86:9
ಅಂದು ರಹಸ್ಯ ಸಂಗತಿಗಳನ್ನು ಪರಿಶೋಧಿಸಲಾಗುವುದು.
Târık 86:10
ಆಗ ಮನುಷ್ಯನ ಬಳಿ ಯಾವ ಶಕ್ತಿಯಾಗಲಿ, ಅಥವಾ ಸಹಾಯಕನಾಗಲಿ ಇರಲಾರರು.
Târık 86:11
ಮಳೆ ಸುರಿಸುವ ಆಕಾಶದಾಣೆ.
Târık 86:12
ಬಿರಿಯುವ ಭೂಮಿಯಾಣೆ.
Târık 86:13
ನಿಸ್ಸಂಶಯವಾಗಿಯೂ ಇದು (ಕುರ್ಆನ್) ನರ‍್ಣಾಯಕ ಮಾತಾಗಿದೆ.
Târık 86:14
ಇದು ತಮಾಷೆಯ ಮಾತಲ್ಲ.
Târık 86:15
ಖಂಡಿತವಾಗಿಯೂ ಸತ್ಯನಿಷೇಧಿಗಳು ಕುತಂತ್ರ ಹೂಡುತ್ತಿದ್ದಾರೆ.
Târık 86:16
ನಾನೂ (ಅಲ್ಲಾಹನು) ಪ್ರತಿ ತಂತ್ರವನ್ನು ಹೂಡುತ್ತಿದ್ದೇನೆ.
Târık 86:17
ಆದ್ದರಿಂದ (ಓ ಸಂದೇಶವಾಹಕರೇ) ಸತ್ಯನಿಷೇಧಿಗಳನ್ನು ಅವರ ಪಾಡಿಗೆ ಸ್ವಲ್ಪದಿನ ಬಿಟ್ಟುಬಿಡಿರಿ ಮತ್ತು ನೀವು ಅವರಿಗೆ ಸ್ವಲ್ಪ ಕಾಲಾವಕಾಶ ನೀಡಿರಿ.
A'lâ 87:1
ನೀವು ತಮ್ಮ ಅತ್ತುö್ಯನ್ನತನಾದ ಪ್ರಭುವಿನ ನಾಮದ ಪಾವಿತ್ರö್ಯವನ್ನು ಸ್ತುತಿಸಿರಿ.
A'lâ 87:2
ಅವನು (ಸಕಲವನ್ನು) ಸೃಷ್ಟಿಸಿದನು ಮತ್ತು (ಸಂತುಲಿತಗೊಳಿಸಿದನು.
A'lâ 87:3
ಅವನು ವಿಧಿಯನ್ನು ನಿಶ್ಚಯಿಸಿದನು ಅನಂತರ (ಅವುಗಳಿಗೆ ತಕ್ಕ) ಮರ‍್ಗರ‍್ಶನ ಮಾಡಿದನು.
A'lâ 87:4
ಅವನೇ ಭೂಮಿಯಿಂದ ಮೇವನ್ನು ಹೊರತಂದನು.
A'lâ 87:5
ಬಳಿಕ ಅದನ್ನು ಕರಿಯ ಕಸಕಡ್ಡಿಯನ್ನಾಗಿ ಮಾಡಿದನು.
A'lâ 87:6
ಓ ಪೈಗಂಬರರೇ ನಾವು ನಿಮಗೆ (ಕುರ್ಆನನ್ನು) ಓದಿಕೊಡುವೆವು. ಬಳಿಕ ನೀವು ಮರೆಯಲಾರಿರಿ.
A'lâ 87:7
ಆದರೆ ಅಲ್ಲಾಹನು ಇಚ್ಛಿಸುವುದರ ಹೊರತು. ಅವನು ಗೋಚರ ಮತ್ತು ಅಗೋಚರವನ್ನು ಬಲ್ಲವನು.
A'lâ 87:8
ನಾವು ನಿಮಗೆ ಸುಲಭ ಮರ‍್ಗವನ್ನು ಸುಗಮಗೊಳಿಸುವೆವು.
A'lâ 87:9
ಆದ್ದರಿಂದ ಉಪದೇಶವು ಪ್ರಯೋಜನಕಾರಿ ಆಗುವುದಾದರೆ ನೀವು ಉಪದೇಶ ನೀಡಿರಿ.
A'lâ 87:10
ಭಯಭಕ್ತಿಯುಳ್ಳವನು ಉಪದೇಶವನ್ನು ಸ್ವೀಕರಿಸುವನು.
A'lâ 87:11
ಹತಭಾಗ್ಯನು ಅದರಿಂದ ದೂರ ಉಳಿಯುವನು.
A'lâ 87:12
ಅವನು ಮಹಾ ಅಗ್ನಿಯಲ್ಲಿ ಪ್ರವೇಶಿಸುವನು.
A'lâ 87:13
ಅನಂತರ ಅವನು ಅಲ್ಲಿ ಸಾಯುವುದೂ ಇಲ್ಲ, ಬದುಕುವುದೂ ಇಲ್ಲ,
A'lâ 87:14
ನಿಸ್ಸಂಶಯವಾಗಿಯೂ (ಸತ್ಯ ನಿಷೇಧದಿಂದ) ಪರಿಶುದ್ಧನಾದವನು ಯಶಸ್ಸುಗಳಿಸಿದನು.
A'lâ 87:15
ಅವನು ತನ್ನ ಪ್ರಭುವಿನ ನಾಮವನ್ನು ಸ್ಮರಿಸಿದನು ಮತ್ತು ನಮಾಜ್ ನರ‍್ವಹಿಸಿದನು.
A'lâ 87:16
ಆದರೆ ನೀವು ಐಹಿಕ ಜೀವನಕ್ಕೆಆದ್ಯತೆ ನೀಡುತ್ತೀರಿ.
A'lâ 87:17
ಆದರೆ ಪರಲೋಕವು ಅತ್ತುö್ಯತ್ತಮವೂ, ಶಾಶ್ವತವೂ ಆಗಿದೆ.
A'lâ 87:18
ವಾಸ್ತವದಲ್ಲಿ ಈ ವಿಚಾರಗಳು ಪರ‍್ವ ಗ್ರಂಥಗಳಲ್ಲೂ ಇದ್ದವು.
A'lâ 87:19
ಅಂದರೆ ಇಬ್ರಾಹೀಮ್ ಮತ್ತು ಮೂಸಾರ ಗ್ರಂಥಗಳಲ್ಲಿ.
Gâşiye 88:1
ಆವರಿಸಿಕೊಳ್ಳುವಂತಹ ಪ್ರಳಯ ದಿನದ ವೃತ್ತಾಂತವು ನಿಮಗೆ ತಲುಪಿದೆಯೇ?
Gâşiye 88:2
ಆ ದಿನ ಕೆಲವು ಮುಖಗಳು ಅಪಮಾನದ ನಿಮಿತ್ತ ಬಾಗಿರುವುವು.
Gâşiye 88:3
(ಮತ್ತು) ಪರಿಶ್ರಮ ಪಟ್ಟವು ಬಳಲಿರುವುವು.
Gâşiye 88:4
ಅವರು ಧಗಧಗಿಸುವ ಅಗ್ನಿಯನ್ನು ಪ್ರವೇಶಿಸುವರು.
Gâşiye 88:5
ಕುದಿಯುತ್ತಿರುವ ಚಿಲುಮೆಯ ನೀರನ್ನು ಅವರಿಗೆ ಕುಡಿಸಲಾಗುವುದು.
Gâşiye 88:6
ಅವರಿಗೆ ಮುಳ್ಳು ತುಂಬಿದ ಗಿಡಗಳ ಹೊರತು ಬೇರಾವ ಆಹಾರವಿರದು.
Gâşiye 88:7
ಅದು (ಶರೀರಕ್ಕೆ) ಪೋಷಣೆಯನ್ನು ನೀಡದು ಮತ್ತು ಹಸಿವನ್ನೂ ನೀಗಿಸದು.
Gâşiye 88:8
ಹಲವು ಮುಖಗಳು ಅಂದು ರ‍್ಷಭರಿತವಾಗಿರುವುದು.
Gâşiye 88:9
ಅವುಗಳು ತಮ್ಮ (ಭೂಲೋಕದ) ಪರಿಶ್ರಮದ ಕುರಿತು ಸಂತೃಪ್ತವಾಗಿರುವುವು.
Gâşiye 88:10
ಉನ್ನತವಾದ ಸ್ರ‍್ಗಗಳಲ್ಲಿರುವುವು.
Gâşiye 88:11
ಅದರಲ್ಲಿ ಯಾವ ವ್ರ‍್ಥ ಮಾತನ್ನು ಅವರು ಕೇಳಲಾರರು.
Gâşiye 88:12
ಹರಿಯುತ್ತಿರುವ ಚಿಲುಮೆಯಿರುವುದು.
Gâşiye 88:13
ಉನ್ನತವಾದ ಮಂಚಗಳಿರುವುವು.
Gâşiye 88:14
ಪಾನಪಾತ್ರೆಗಳನ್ನು ಸುಸಜ್ಜಿತ ಗೊಳಿಸಲಾಗಿರುವುದು.
Gâşiye 88:15
ಸಾಲಾಗಿಡಲಾದ ಒರಗು ದಿಂಬುಗಳಿರುವುವು.
Gâşiye 88:16
ಮತ್ತು ಹಾಸಲಾದ ರತ್ನಗಂಬಳಿಗಳಿರುವುವು.
Gâşiye 88:17
ಏನು ಅವರು ಒಂಟೆಯೆಡೆಗೆ ನೋಡುವುದಿಲ್ಲವೇ, ಅದು ಹೇಗೆ ವಿಚಿತ್ರವಾಗಿ ಸೃಷ್ಟಿಸಲಾಗಿದೆಯೆಂದು ?
Gâşiye 88:18
ಮತ್ತು ಆಕಾಶದೆಡೆಗೆ, ಅದು ಹೇಗೆ ಎತ್ತರಿಸಲಾಗಿದೆಯೆಂದು ?
Gâşiye 88:19
ಮತ್ತು ರ‍್ವತಗಳೆಡೆಗೆ ಅವುಗಳನ್ನು ಹೇಗೆ ನಾಟಲಾಗಿದೆಯೆಂದು ?
Gâşiye 88:20
ಭೂಮಿಯೆಡೆಗೆ ಅದು ಹೇಗೆ ಹಾಸಲಾಗಿದೆಯೆಂದು ?
Gâşiye 88:21
ಆದ್ದರಿಂದ ನೀವು ಉಪದೇಶ ನೀಡಿರಿ. ನೀವು ಉಪದೇಶ ನೀಡುವವರು ಮಾತ್ರವಾಗಿರುವಿರಿ
Gâşiye 88:22
ನೀವು ಅವರ ಮೇಲೆ ಬಲ ಪ್ರಯೋಗಿಸುವವರಲ್ಲ.
Gâşiye 88:23
ಆದರೆ ಯಾರು ವಿಮುಖನಾಗುತ್ತಾನೋ ಮತ್ತು ಸತ್ಯನಿಷೇಧ ಕೈಗೊಳ್ಳುತ್ತಾನೋ.
Gâşiye 88:24
ಅವನಿಗೆ ಅಲ್ಲಾಹನು ಅತಿದೊಡ್ಡ ಶಿಕ್ಷೆಯನ್ನು ನೀಡುವನು.
Gâşiye 88:25
ನಿಸ್ಸಂಶಯವಾಗಿಯೂ ನಮ್ಮೆಡೆಗೇ ಅವರ ಮರಳುವಿಕೆಯಿರುವುದು.
Gâşiye 88:26
ಬಳಿಕ ನಿಸ್ಸಂಶಯವಾಗಿಯೂ ಅವರ ವಿಚಾರಣೆಯ ಹೊಣೆ ನಮ್ಮ ಮೇಲೆ ಇದೆ.
Fecr 89:1
ಪ್ರಭಾತದಾಣೆ
Fecr 89:2
ಮತ್ತು ಹತ್ತು ರಾತ್ರಿಗಳಾಣೆ
Fecr 89:3
ಸಮ ಮತ್ತು ವಿಷಮಗಳಾಣೆ.
Fecr 89:4
ಸಂಚಲಿತ ರಾತ್ರಿಯಾಣೆ
Fecr 89:5
ಬುದ್ಧಿವಂತರಿಗೆ ಇವುಗಳಲ್ಲಿ ಸಾಕಷ್ಟು ಆಣೆಯಿಲ್ಲವೇ?
Fecr 89:6
ಆದ್ ಸಮುದಾಯದವರೊಂದಿಗೆ ನಿಮ್ಮ ಪ್ರಭು ಹೇಗೆ ರ‍್ತಿಸಿದನೆಂದು ನೀವು ನೋಡಲಿಲ್ಲವೇ?
Fecr 89:7
ಅಂದರೆ ಎತ್ತರ ಸ್ಥಂಭಗಳ ಇರಮ್ ಜನಾಂಗದೊಂದಿಗೆ.
Fecr 89:8
ಅಂತಹ ಜನಾಂಗವನ್ನು ಯಾವ ನಾಡುಗಳಲ್ಲಿಯು ಸೃಷ್ಟಿಸಲಾಗಿಲ್ಲ.
Fecr 89:9
ಮತ್ತು ಕಣಿವೆಯಲ್ಲಿ ದೊಡ್ಡದೊಡ್ಡ ಬಂಡೆಗಳನ್ನು ಕೊರೆಯುತ್ತಿದ್ದ ಸಮೂದ್ ಜನಾಂಗದವರೊಂದಿಗೆ.
Fecr 89:10
ಮತ್ತು ಮೊಳೆಗಳವನಾಗಿದ್ದ ಫಿರ್ಔನ್ನೊಂದಿಗೆ.
Fecr 89:11
ಅವರೆಲ್ಲರೂ ನಾಡುಗಳಲ್ಲಿ ಅತಿರೇಕವೆಸಗುತ್ತಿದ್ದರು.
Fecr 89:12
ಮತ್ತು ಅವರು ಆ ನಾಡುಗಳಲ್ಲಿ ತುಂಬಾಕ್ಷೆÆÃಭೆ ಹರಡಿದ್ದರು.
Fecr 89:13
ಆಗ ನಿಮ್ಮ ಪ್ರಭು ಅವರ ಮೇಲೆ ಶಿಕ್ಷೆಯ ಚಾಟಿಯನ್ನು ಬಾರಿಸಿದನು.
Fecr 89:14
ಖಂಡಿತವಾಗಿಯೂ ನಿಮ್ಮ ಪ್ರಭು ಹೊಂಚಿನಲ್ಲಿದ್ದಾನೆ.
Fecr 89:15
ಆದರೆ ಮನುಷ್ಯನನ್ನು ಅವನ ಪ್ರಭು ಅವನನ್ನು ಪರೀಕ್ಷಿಸಲು ಗೌರವ ಹಾಗು ಅನುಗ್ರಹವನ್ನು ನೀಡಿದರೆ ಅವನು ನನ್ನ ಪ್ರಭುವು ನನ್ನನ್ನು ಗೌರವಿಸಿದನು ಎಂದು ಹೇಳತೊಡಗುತ್ತಾನೆ.
Fecr 89:16
ಮತ್ತು ಅವನನ್ನು ಪರೀಕ್ಷಿಸಲು, ಅವನ ಜೀವನಾಧಾರವನ್ನು ಸಂಕುಚಿತಗೊಳಿಸಿದರೆ ಅವನು ನನ್ನ ಪ್ರಭು ನನ್ನನ್ನು ಅಪಮಾನಿಸಿ ಬಿಟ್ಟನು ಎಂದು ಹೇಳುತ್ತಾನೆ.
Fecr 89:17
ಖಂಡಿತವಾಗಿಯೂ ನಿಮ್ಮ ನಿಲುವು ಸರಿಯಿಲ್ಲ ನೀವು ಅನಾಥರನ್ನು ಗೌರವಿಸುವುದಿಲ್ಲ.
Fecr 89:18
ಬಡವರಿಗೆ ಉಣಬಡಿಸಲು ನೀವು ಪರಸ್ಪರರನ್ನು ಪ್ರೇರೇಪಿಸುವುದಿಲ್ಲ.
Fecr 89:19
ಮತ್ತು ನೀವು ವಾರೀಸು ಸೊತ್ತನ್ನು ಕಬಳಿಸಿ ಬಿಡುತ್ತೀರಿ.
Fecr 89:20
ಮತ್ತು ನೀವು ಸಂಪತ್ತನ್ನು ಮಿತಿಮೀರಿ ಪ್ರೀತಿಸುತ್ತೀರಿ.
Fecr 89:21
ಖಂಡಿತವಾಗಿಯೂ ಭೂಮಿಯನ್ನು ನಿರಂತರವಾಗಿ ಗುದ್ದಿ ಪುಡಿಗಟ್ಟಿಸಲಾದಾಗ.
Fecr 89:22
ಮಲಕ್ಗಳು ಸಾಲುಸಾಲಾಗಿ ನಿಂತಿರುವ ಸ್ಥಿತಿಯಲ್ಲಿ ನಿಮ್ಮ ಪ್ರಭು ಬರುವನು.
Fecr 89:23
ನರಕವನ್ನು ಮುಂದೆತರಲಾಗುವ ದಿನ ಮನುಷ್ಯನು ಮನವರಿಕೆ ಮಾಡಿಕೊಳ್ಳುವನು. ಆದರೆ ಅವನು ಅಂದು ಮನವರಿಕೆ ಮಾಡಿಕೊಳ್ಳುವುದರಿಂದ ಆಗುವ ಪ್ರಯೋಜನವಾದರೂ ಏನು ?
Fecr 89:24
ಅವನು ಹೇಳುವನು, ಅಯ್ಯೋ ನಾನು ನನ್ನ ಈ ಜೀವನಕ್ಕಾಗಿ ಏನಾದರೂ ಮುಂಚೆಯೇ ಮಾಡಿರುತ್ತಿದ್ದರೆ !
Fecr 89:25
ಆದರೆ ಅಂದು ಅಲ್ಲಾಹನು ಶಿಕ್ಷಿಸಿದಂತೆ ಬೇರಾರೂ ಶಿಕ್ಷಿಸಲಾರರು.
Fecr 89:26
ಅವನು ಕಟ್ಟುವ ರೀತಿಯಲ್ಲಿ ಬೇರಾರೂ ಕಟ್ಟಲಾರರು.
Fecr 89:27
ಓ ಶಾಂತಿಪಡೆದ ಆತ್ಮವೇ,
Fecr 89:28
ನೀನು ಅವನಿಂದ ಸಂತೃಪ್ತನಾಗಿ ಮತ್ತು ಅವನು ನಿನ್ನಿಂದ ಸಂತುಷ್ಟನಾಗಿರುವ ಸ್ಥಿತಿಯಲ್ಲಿ ನಿನ್ನ ಪ್ರಭುವಿನೆಡೆಗೆ ಮರಳು.
Fecr 89:29
ತರುವಾಯ ನನ್ನ ಸಜ್ಜನದಾಸರೊಂದಿಗೆ ಸೇರಿಕೋ.
Fecr 89:30
ಮತ್ತು ನನ್ನ ಸ್ರ‍್ಗವನ್ನು ಪ್ರವೇಶಿಸು.
Beled 90:1
ನಾನು ಈ ಮಕ್ಕಾ ನಗರದ ಮೇಲೆ ಆಣೆ ಹಾಕುತ್ತೇನೆ.
Beled 90:2
ನೀವು ಈ ನಗರದ ನಿವಾಸಿಯಾಗಿರುವಿರಿ.
Beled 90:3
ತಂದೆ ಹಾಗು ಮಕ್ಕಳಾಣೆ.
Beled 90:4
ಖಂಡಿತವಾಗಿಯೂ ನಾವು ಮನುಷ್ಯನನ್ನು ಸಂಕಷ್ಟದೊಂದಿಗೆ ಸೃಷ್ಟಿಸಿರುತ್ತೇವೆ.
Beled 90:5
ಅವನನ್ನು ನಿಯಂತ್ರಿಸಲು ಯಾರಿಗೂ ಸಾಧ್ಯವೇ ಇಲ್ಲವೆಂದು ಅವನು ಭಾವಿಸುತ್ತಿರುವನೇ ?
Beled 90:6
ನಾನು ಅಪಾರ ಸಂಪತ್ತನ್ನು ರ‍್ಚು ಮಾಡಿದ್ದೇನೆ ಎಂದು ಅವನು ಹೇಳುತ್ತಾನೆ.
Beled 90:7
ತನ್ನನ್ನು ಯಾರೂ ನೋಡಲಿಲ್ಲವೆಂದು ಅವನು ಭಾವಿಸಿಕೊಂಡಿರುವನೇ ?
Beled 90:8
ಏನು ನಾವು ಅವನಿಗೆ ಎರಡು ಕಣ್ಣುಗಳನ್ನು ಮಾಡಿಕೊಡಲಿಲ್ಲವೇ ?
Beled 90:9
ಒಂದು ನಾಲಗೆ ಮತ್ತು ಎರಡು ತುಟಿಗಳನ್ನು ಮಾಡಿಕೊಡಲಿಲ್ಲವೇ?
Beled 90:10
ನಾವು ಅವನಿಗೆ (ಒಳಿತು ಮತ್ತು ಕೆಡುಕಿನ) ಎರಡೂ ಮರ‍್ಗಗಳನ್ನು ತೋರಿಸಿಕೊಟ್ಟಿದ್ದೇವೆ.
Beled 90:11
ಅವನು ದರ‍್ಗಮ ಮರ‍್ಗವನ್ನು ಏರುವ ಸಾಹಸಮಾಡಲಿಲ್ಲ.
Beled 90:12
ಆ ದರ‍್ಗಮ ಮರ‍್ಗ ಏನೆಂದು ನಿಮಗೇನುಗೊತ್ತು ?
Beled 90:13
ಯಾವುದಾದರೂ ಕೊರಳು (ಗುಲಾಮ,) ಸ್ವತಂತ್ರಗೊಳಿಸುವುದಾಗಿದೆ.
Beled 90:14
ಅಥವಾ ಹಸಿವಿನ ದಿನದಲ್ಲಿ
Beled 90:15
ಸಂಬಂಧಿಕ ಅನಾಥನಿಗೆ.
Beled 90:16
ಅಥವಾ ದಿಕ್ಕೆಟ್ಟ ಬಡವನಿಗೆ ಉಣಬಡಿಸುವುದಾಗಿದೆ.
Beled 90:17
ಬಳಿಕ ಅವನು ವಿಶ್ವಾಸವಿಟ್ಟವರ ಪರಸ್ಪರ ಸಹನೆ ಮತ್ತು ಕರುಣೆ ತೋರುವ ಉಪದೇಶ ನೀಡುವವರ ಪೈಕಿ ಸೇರಿದವನಾಗುವುದಾಗಿದೆ.
Beled 90:18
ಅವರೇ ಬಲಗಡೆಯವರು
Beled 90:19
ಮತ್ತು ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವರೇ ಎಡಗಡೆಯವರಾಗಿದ್ದಾರೆ.
Beled 90:20
ಅವರ ಮೇಲೆ ಎಲ್ಲಾ ಕಡೆಯಿಂದಲೂ ನರಕಾಗ್ನಿಯು ಆವರಿಸಿ ಮುಚ್ಚಿ ಕೊಂಡಿರುವುದು.
Şems 91:1
ಸರ‍್ಯ ಮತ್ತು ಅದರ ಪ್ರಭೆಯಾಣೆ.
Şems 91:2
ಚಂದ್ರನಾಣೆ, ಅದು ಸರ‍್ಯನನ್ನು ಹಿಂಬಾಲಿಸಿದಾಗ.
Şems 91:3
ಹಗಲಿನಾಣೆ, ಅದು ಸರ‍್ಯನನ್ನು ಪ್ರತ್ಯಕ್ಷಗೊಳಿಸುವಾಗ.
Şems 91:4
ರಾತ್ರಿಯಾಣೆ, ಅದು ಸರ‍್ಯನನ್ನು ಮುಚ್ಚುವಾಗ.
Şems 91:5
ಆಕಾಶ ಮತ್ತು ಅದನ್ನು ನರ‍್ಮಿಸಿದವನಾಣೆ.
Şems 91:6
ಭೂಮಿ ಮತ್ತು ಅದನ್ನು ವಿಸ್ತಾರಗೊಳಿಸಿದವನಾಣೆ.
Şems 91:7
ಆತ್ಮ ಮತ್ತು ಅದನ್ನು ಸಂತುಲಿತಗೊಳಿಸಿದವನಾಣೆ.
Şems 91:8
ತರುವಾಯ ಅವನು ಅದಕ್ಕೆ ದುಷ್ಟತೆಯ ಮತ್ತು ಶಿಷ್ಟತೆಯ ಅರಿವನ್ನು ನೀಡಿದನು.
Şems 91:9
ನಿಸ್ಸಂದೇಹವಾಗಿಯೂ ತನ್ನ ಆತ್ಮವನ್ನು ಪರಿಶುದ್ಧಗೊಳಿಸಿದವನು ಯಶಸ್ಸುಗಳಿಸಿದನು,
Şems 91:10
ಮತ್ತು ಖಂಡಿತವಾಗಿಯೂ ಅದನ್ನು ಮಲಿನಗೊಳಿಸಿದವನು ವಿಫಲನಾಗಿಬಿಟ್ಟನು.
Şems 91:11
ಸಮೂದ್ ಜನಾಂಗವು ತಮ್ಮ ಧಿಕ್ಕಾರದ ನಿಮಿತ್ತ ಸಂದೇಶವಾಹಕರನ್ನು ಸುಳ್ಳಾಗಿಸಿಬಿಟ್ಟಿತು.
Şems 91:12
ಅವರ ಪೈಕಿ ದೊಡ್ಡ ನತದೃಷ್ಟನೊಬ್ಬನು ಎದ್ದು ನಿಂತ ಸಂರ‍್ಭ.
Şems 91:13
ಅವರಿಗೆ ಅಲ್ಲಾಹನ ಸಂದೇಶವಾಹಕರು (ಸ್ವಾಲಿಹ್) ಹೇಳಿದರು, ಅಲ್ಲಾಹನ ಒಂಟೆಯನ್ನು ಮತ್ತು ಅದರ ನೀರು ಕುಡಿಯುವ ಸರದಿ(ಯನ್ನು ಕಾಪಾಡಿಕೊಳ್ಳಿ).
Şems 91:14
ಅವರು ತಮ್ಮ ಆ ಪೈಗಂಬರರನ್ನು ಸುಳ್ಳಾಗಿಸಿ ಆ ಒಂಟೆಯ ಸ್ನಾಯುಗಳನ್ನು ಕತ್ತರಿಸಿದರು, ಆಗ ಅವರ ಪ್ರಭು ಅವರ ಪಾಪಗಳ ನಿಮಿತ್ತ ಅವರನ್ನು ನಾಶ ಮಾಡಿದನು. ಬಳಿಕ ಅವನು ವಿನಾಶವನ್ನು ಸರ‍್ವತ್ರಿಕಗೊಳಿಸಿದನು.
Şems 91:15
ಮತ್ತು ಅವನು ಅದರ ಪರಿಣಾಮದ ಕುರಿತು ಭಯಪಡುವುದಿಲ್ಲ.
Leyl 92:1
ರಾತ್ರಿಯಾಣೆ, ಅದು ಕವಿಯುತ್ತಿರುವಾಗ.
Leyl 92:2
ಮತ್ತು ಹಗಲಿನಾಣೆ! ಅದು ಪ್ರಕಾಶಮಯವಾಗುವಾಗ.
Leyl 92:3
ಪ್ರತಿಯೊಂದರಲ್ಲೂ ಗಂಡು ಮತ್ತು ಹೆಣ್ಣನ್ನು ಸೃಷ್ಟಿಸಿದವನಾಣೆ.
Leyl 92:4
ಖಂಡಿತವಾಗಿಯೂ ನಿಮ್ಮ ಪರಿಶ್ರಮವು ವಿಭಿನ್ನವಾಗಿದೆ
Leyl 92:5
ಯಾರು (ಅಲ್ಲಾಹನ ಮರ‍್ಗದಲ್ಲಿ) ರ‍್ಚುಮಾಡುತ್ತಾನೋ ಮತ್ತು ಭಯಭಕ್ತಿ ಪಾಲಿಸುತ್ತಾನೋ.
Leyl 92:6
ಮತ್ತು ಅತ್ತುö್ಯತ್ತಮ ಮಾತನ್ನು ದೃಢೀಕರಿಸುತ್ತಾನೋ.
Leyl 92:7
ಸಧ್ಯವೇ ನಾವು ಅವನಿಗೆ (ಸತ್ಯದ) ಅನುಕೂಲಕರ ಮರ‍್ಗವನ್ನು ಸುಗಮಗೊಳಿಸುವೆವು.
Leyl 92:8
ಆದರೆ ಯಾರು ಜಿಪುಣತೆ ತೋರಿದನೋ ಸ್ವಯಂ ತನ್ನನ್ನು ನಿರಪೇಕ್ಷಕನೆಂದು ಭಾವಿಸಿದನೋ.
Leyl 92:9
ಮತ್ತು ಅತ್ಯುತ್ತಮ ಮಾತನ್ನು ಸುಳ್ಳಾಗಿಸಿದನೋ.
Leyl 92:10
ಆಗ ನಾವು ಅವನಿಗೆ ದರ‍್ಮಾರ‍್ಗವನ್ನು ಸುಗಮಗೊಳಿಸಿಕೊಡುವೆವು.
Leyl 92:11
ಅವನು (ನರಕದಲ್ಲಿ ಅಧೋಮುಖಿಯಾಗಿ) ಬೀಳುವ ಸಂರ‍್ಭದಲ್ಲಿ ಅವನ ಸಂಪತ್ತು ಅವನಿಗೆ ಸ್ವಲ್ಪವೂ ಪ್ರಯೋಜನ ನೀಡದು.
Leyl 92:12
ನಿಸ್ಸಂದೇಹವಾಗಿಯೂ ಮರ‍್ಗರ‍್ಶನ ಮಾಡುವುದು ನಮ್ಮ ಹೊಣೆಯಾಗಿದೆ.
Leyl 92:13
ವಾಸ್ತವದಲ್ಲಿ ಪರಲೋಕ ಮತ್ತು ಇಹಲೋಕದ ಒಡೆಯರು ನಾವೇ ಆಗಿದ್ದೇವೆ.
Leyl 92:14
ಆದ್ದರಿಂದ ನಾನು ನಿಮಗೆ ಧಗಧಗಿಸುತ್ತಿರುವ ಅಗ್ನಿಯಿಂದ ಎಚ್ಚರಿಸಿರುವೆನು.
Leyl 92:15
ದುರದೃಷ್ಟನಲ್ಲದೇ ಅದರಲ್ಲಿ ಯಾರು ಪ್ರವೇಶಿಸಲಾರನು.
Leyl 92:16
ಅವನು ಸುಳ್ಳಾಗಿಸಿದನು ಮತ್ತು ವಿಮುಖನಾದನು.
Leyl 92:17
ಮತ್ತು ಅದರಿಂದ (ನರಕದಿಂದ) ಅತ್ಯಧಿಕ ಭಯಭಕ್ತಿಯುಳ್ಳ ವ್ಯಕ್ತಿಯೇ ದೂರವಿಡಲಾಗುವನು.
Leyl 92:18
ಅವನು ಪರಿಶುದ್ಧನಾಗಲಿಕ್ಕಾಗಿ ತನ್ನ ಸಂಪತ್ತನ್ನು ರ‍್ಚು ಮಾಡುತ್ತಾನೆ.
Leyl 92:19
ವಾಸ್ತವದಲ್ಲಿ ಯಾರಿಗಾದರು ಪ್ರತ್ಯುಪಕಾರ ಮಾಡಬೇಕೆಂಬ ಯಾವ ಉಪಕಾರವೂ ಅವನ ಮೇಲಿಲ್ಲ.
Leyl 92:20
ಕೇವಲ ತನ್ನ ಅತ್ಯುನ್ನತನಾದ ಪ್ರಭುವಿನ ಸಂತೃಪ್ತಿಯನ್ನು ಬಯಸುವುದಕ್ಕಾಗಿಯೇ (ಮಾಡುತ್ತಾನೆ.)
Leyl 92:21
ಖಂಡಿತವಾಗಿಯೂ ಅವನು ಸದ್ಯವೇ ಸಂತೃಪ್ತಗೊಳ್ಳುವನು.
Duhâ 93:1
ಪರ‍್ವಾಹ್ನ ಪ್ರಕಾಶದಾಣೆ.
Duhâ 93:2
ರಾತ್ರಿಯಾಣೆ, ಅದು ಪ್ರಶಾಂತವಾಗಿ ಆವರಿಸುವಾಗ.
Duhâ 93:3
ಓ ಸಂದೇಶವಾಹಕರೇ ನಿಮ್ಮ ಪ್ರಭು ನಿಮ್ಮನ್ನು ಕೈಬಿಡಲೂ ಇಲ್ಲ, ಕೋಪಿಸಿಕೊಳ್ಳಲೂ ಇಲ್ಲ.
Duhâ 93:4
ಖಂಡಿತವಾಗಿಯೂ ನಿಮಗೆ ಪರಲೋಕವು ಇಹಲೋಕಕ್ಕಿಂತಲೂ ಉತ್ತಮವಾಗಿರುವುದು.
Duhâ 93:5
ಸದ್ಯವೇ ನಿಮಗೆ ನಿಮ್ಮ ಪ್ರಭು (ಅನುಗ್ರಹಗಳನ್ನು) ನೀಡುವನು. ಆಗ ನೀವು ಸಂತೃಪ್ತಿ ಪಡೆಯುವಿರಿ.
Duhâ 93:6
ಅವನು ನಿಮ್ಮನ್ನು ಅನಾಥನಾಗಿ ಕಂಡು ನಿಮಗೆ ಆಶ್ರಯವನ್ನು ನೀಡಲಿಲ್ಲವೇ ?
Duhâ 93:7
ನಿಮ್ಮನ್ನು ದಾರಿ ತಿಳಿಯದವನಾಗಿ ಕಂಡು ಅವನು ಮರ‍್ಗರ‍್ಶನ ಮಾಡಲಿಲ್ಲವೇ ?
Duhâ 93:8
ನಿಮ್ಮನ್ನು ನರ‍್ಗತಿಕನಾಗಿ ಕಂಡು ಅವನು ಸ್ಥಿತಿವಂತನಾಗಿ ಮಾಡಲಿಲ್ಲವೇ ?
Duhâ 93:9
ಆದ್ದರಿಂದ ನೀವು ಅನಾಥನನ್ನು ಧಮನಿಸದಿರಿ.
Duhâ 93:10
ಮತ್ತು ಬೇಡುತ್ತಾ ಬರುವವನಿಗೆ ಗದರಿಸದಿರಿ.
Duhâ 93:11
ಮತ್ತು ನಿಮ್ಮ ಪ್ರಭುವಿನ ಅನುಗ್ರಹಗಳನ್ನು ಸಾರುತ್ತಿರಿ.
İnşirah 94:1
ನಾವು ನಿಮಗಾಗಿ ನಿಮ್ಮ ಹೃದಯವನ್ನು ವಿಶಾಲಗೊಳಿಸಲಿಲ್ಲವೇ ?
İnşirah 94:2
ಮತ್ತು ನಿಮ್ಮಿಂದ ನಿಮ್ಮ ಭಾರವನ್ನು ಇಳಿಸಲಿಲ್ಲವೇ ?
İnşirah 94:3
ಅದು ನಿಮ್ಮ ಬೆನ್ನು ಮುರಿಯುತ್ತಿತ್ತು.
İnşirah 94:4
ನಾವು ನಿಮಗಾಗಿ ನಿಮ್ಮ ಕರ‍್ತಿಯನ್ನು ಉನ್ನತಗೊಳಿಸಿದೆವು.
İnşirah 94:5
ಆದ್ದರಿಂದ ಖಂಡಿತವಾಗಿಯೂ ಕಷ್ಟದ ಜೊತೆಗೆ ಅನುಕೂಲತೆಯಿದೆ.
İnşirah 94:6
ನಿಸ್ಸಂಶಯವಾಗಿಯೂ ಕಷ್ಟದ ಜೊತೆಗೆ ಅನುಕೂಲತೆಯಿದೆ.
İnşirah 94:7
ಆದ್ದರಿಂದ ನಿಮಗೆ ಬಿಡುವಾದಾಗಲೆಲ್ಲಾ ಆರಾಧನೆಯಲ್ಲಿ ಪರಿಶ್ರಮ ಪಡಿರಿ.
İnşirah 94:8
ಮತ್ತು ನಿಮ್ಮ ಪ್ರಭುವಿನೆಡೆಗೇ ಮನಸ್ಸನ್ನು ಕೇಂದ್ರೀಕರಿಸಿರಿ.
Tin 95:1
ಅಂಜೂರ ಮತ್ತು ಆಲಿವ್ನಆಣೆ.
Tin 95:2
ತೂರ್ ರ‍್ವತದಾಣೆ.
Tin 95:3
ಈ ನರ‍್ಭಯ (ಮಕ್ಕಾಃ) ಪಟ್ಟಣದಾಣೆ.
Tin 95:4
ಖಂಡಿತವಾಗಿಯೂ ನಾವು ಮನುಷ್ಯನನ್ನು (ಸಂತುಲಿತ) ಅತ್ತುö್ಯತ್ತಮ ಸ್ವರೂಪದಲ್ಲಿ ಸೃಷ್ಟಿಸಿದ್ದೇವೆ.
Tin 95:5
ತರುವಾಯ ಅವನನ್ನು ನಾವು ಅಧಮರಲ್ಲಿ ಅಧಮನನ್ನಾಗಿಸಿ ಮರಳಿಸಿದೆವು.
Tin 95:6
ಆದರೆ ಸತ್ಯವಿಶ್ವಾಸವಿಟ್ಟು , ಸತ್ರ‍್ಮವೆಸಗಿದವರಿಗೆ ಅನಂತ ಪ್ರತಿಫಲವಿದೆ.
Tin 95:7
ಹೀಗಿರುವಾಗ ನಿನಗೆ ಪ್ರತಿಫಲ ದಿನವನ್ನು ಸುಳ್ಳಾಗಿಸಲು ಯಾವ ವಸ್ತುವು ಪ್ರೇರೇಪಿಸುತ್ತಿದೆ?
Tin 95:8
ಏನು ಅಲ್ಲಾಹನು ಸಕಲ ನ್ಯಾಯಾಧಿಪತಿಗಳ ನ್ಯಾಯಾಧಿಪತಿ ಅಲ್ಲವೇ ?
Alak 96:1
ಸೃಷ್ಟಿಸಿದ ನಿಮ್ಮ ಪ್ರಭುವಿನ ನಾಮದಿಂದ ಓದಿರಿ.
Alak 96:2
ಅವನು ಮನುಷ್ಯನನ್ನು ರಕ್ತಪಿಂಡದಿಂದ ಸೃಷ್ಟಿಸಿದನು.
Alak 96:3
ಓದಿರಿ, ನಿಮ್ಮ ಪ್ರಭು ಔದರ‍್ಯ ಉಳ್ಳವನಾಗಿರುವನು.
Alak 96:4
ಅವನು (ಮನುಷ್ಯನಿಗೆ) ಲೇಖನಿಯ ಮೂಲಕ (ಜ್ಞಾನವನ್ನು) ಕಲಿಸಿದನು.
Alak 96:5
ಅವನು ಮನುಷ್ಯನಿಗೆ ಅರಿವಿಲ್ಲದಿರುವುದನ್ನು ಕಲಿಸಿಕೊಟ್ಟನು.
Alak 96:6
ವಾಸ್ತವದಲ್ಲಿ ಮನುಷ್ಯ ದ್ರೋಹವೆಸಗುತ್ತಾನೆ.
Alak 96:7
ಅವನು ತನ್ನನ್ನು ರ‍್ಥಿಕ ನಿರಾವಲಂಬಿ ಎಂದು ತಿಳಿದುಕೊಂಡಿರುವುದರಿಂದ.
Alak 96:8
ಖಂಡಿತವಾಗಿಯೂ (ಎಲ್ಲರ) ಮರಳುವಿಕೆಯು ನಿಮ್ಮ ಪ್ರಭುವಿನೆಡೆಗಾಗಿದೆ.
Alak 96:9
ನೀವು ತಡೆಯುವವನನ್ನು ನೋಡಿದಿರಾ ?
Alak 96:10
ನಮ್ಮ ದಾಸನು ನಮಾಜ್ ನರ‍್ವಹಿಸುತ್ತಿರುವಾಗ (ತಡೆಯುವವನನ್ನು)
Alak 96:11
ಒಂದು ವೇಳೆ ಅವನು (ನಮಾಜ್ ನರ‍್ವಹಿಸುವವನು) ಸನ್ಮರ‍್ಗದಲ್ಲಿದ್ದರೆ.
Alak 96:12
ಅಥವಾ ಭಯಭಕ್ತಿಯ ಆದೇಶ ನೀಡುವವನಾಗಿದ್ದರೆ !
Alak 96:13
ನನಗೆ ತಿಳಿಸಿರಿ ಅವನು (ತಡೆಯುವವನು) ಸುಳ್ಳಾಗಿಸುತ್ತಿದ್ದರೆ ಅಥವಾ ವಿಮುಖನಾಗುತ್ತಿದ್ದರೆ! (ಅವನಗತಿ ಏನಾದೀತು)
Alak 96:14
ಅಲ್ಲಾಹನು ನೋಡುತ್ತಿದ್ದಾ ನೆಂದು ಅವನು ಅರಿತು ಕೊಂಡಿಲ್ಲವೇ ?
Alak 96:15
ಖಂಡಿತವಾಗಿಯೂ ಅವನು ನಿಲ್ಲದಿದ್ದರೆ ನಾವು ಅವನ ಮುಂದಲೆಯ ಜುಟ್ಟನ್ನು ಹಿಡಿದು ಎಳೆಯುವೆವು.
Alak 96:16
ಸುಳ್ಳು ನುಡಿಯುವ ಮತ್ತು ಪಾಪವೆಸಗುವ ಮುಂದಲೆಯನ್ನು.
Alak 96:17
ಅವನು ತನ್ನ ಸಭೆಯವರನ್ನು ಕರೆದುಕೊಳ್ಳಲಿ.
Alak 96:18
ಸದ್ಯದಲ್ಲೇ ನಾವು (ನರಕದ) ಕಾವಲುಗಾರರನ್ನು ಕರೆಯುವೆವು.
Alak 96:19
ಜಾಗ್ರತೆ! ನೀವು ಅವನನ್ನು ಅನುಸರಿಸಬೇಡಿರಿ. ನೀವು (ಅಲ್ಲಾಹನಿಗೆ) ಸಾಷ್ಟಾಂಗ ವೆÀರಗಿರಿ ಮತ್ತು ಸಾಮಿಪ್ಯವನ್ನು ಪಡೆಯಿರಿ.
Kadr 97:1
ಖಂಡಿತವಾಗಿಯೂ ನಾವು ಈ ಕುರ್ಆನ್ನನ್ನು ಮಹತ್ವಪರ‍್ಣ ರಾತ್ರಿಯಲ್ಲಿ ಅವತರ‍್ಣಗೊಳಿಸಿದ್ದೇವೆ
Kadr 97:2
ಮಹತ್ವಪರ‍್ಣ ರಾತ್ರಿ ಏನೆಂದು ನಿಮಗೇನು ಗೊತ್ತು ?
Kadr 97:3
ಮಹತ್ವಪರ‍್ಣ ರಾತ್ರಿ (ಮಹಿಮೆ, ಪುಣ್ಯ, ಪ್ರತಿಫಲಗಳಲ್ಲಿ) ಸಾವಿರ ತಿಂಗಳುಗಳಿಗಿಂತ ಉತ್ತಮವಾಗಿದೆ.
Kadr 97:4
ಈ ರಾತ್ರಿಯಲ್ಲಿ ಮಲಕ್ಗಳು ಮತ್ತು ಪವಿತ್ರಾತ್ಮ(ಜಿಬ್ರೀಲ್) ತಮ್ಮ ಪ್ರಭುವಿನ ಆಜ್ಞೆಯಿಂದ ಪ್ರತಿಯೊಂದು ಆದೇಶಗಳೊಂದಿಗೆ ಇಳಿದು ಬರುತ್ತಾರೆ.
Kadr 97:5
ಆ ರಾತ್ರಿಯು ಅರುಣೋದಯದವರೆಗೆ ಸಂಪರ‍್ಣ ಶಾಂತಿಮಯವಾಗಿರುವುದು.
Beyyine 98:1
ಗ್ರಂಥದವರಲ್ಲಿ ಸತ್ಯನಿಷÃಧಿಸಿದವರು ಮತ್ತು ಬಹುದೇವಾರಾಧಕರು ತಮ್ಮ ಬಳಿಗೆ ಸ್ಪಷ್ಟವಾದ ಪುರಾವೆಯು ಬರುವತನಕ (ತಮ್ಮ ನಿಷೇಧ ನೀತಿಯನ್ನು) ಕೈ ಬಿಡುವವರಾಗಿರಲಿಲ್ಲ.
Beyyine 98:2
(ಆ ಪುರಾವೆ) ಅಲ್ಲಾಹನ ಕಡೆಯಿಂದ ಒಬ್ಬ ಸಂದೇಶವಾಹಕನು ಪರಿಶುದ್ಧ ಹೊತ್ತಿಗೆಗಳನ್ನು ಓದಿಕೊಡುವ ತನಕ.
Beyyine 98:3
೩. ಅವುಗಳಲ್ಲಿ ನೇರ ಸರಳ ಲಿಖಿತ ನಿಯಮಗಳಿವೆ.
Beyyine 98:4
ಗ್ರಂಥ ನೀಡಲಾದವರು ತಮ್ಮ ಬಳಿಗೆ ಸ್ಪಷ್ಟವಾದ ಪುರಾವೆ ಬಂದ ನಂತರವೇ (ಹಟ ಮತ್ತು ಅಸೂಯೆಯಿಂದ) ಭಿನ್ನಾಭಿಪ್ರಾಯಕ್ಕೆ ಒಳಗಾದರು.
Beyyine 98:5
ವಾಸ್ತವದಲ್ಲಿ ಅವರಿಗೆ ನೀಡಲಾದ ಆದೇಶವು ಏಕನಿಷ್ಟರಾಗಿ ಅಲ್ಲಾಹನಿಗೆ ರ‍್ಮವನ್ನು ಮೀಸಲಿಟ್ಟು ಅವನನ್ನೇ ಆರಾಧಿಸಿರಿ ಮತ್ತು ನಮಾಜ್ ಸಂಸ್ಥಾಪಿಸಿರಿ, ಜಕಾತ್ ನೀಡಿರಿ, ಎಂಬುದರ ಹೊರತು ಬೇರೇನೂ ಆಗಿರಲಿಲ್ಲ ಇದುವೇ ಋಜುವಾದ ರ‍್ಮವಾಗಿದೆ.
Beyyine 98:6
ನಿಸ್ಸಂದೇಹವಾಗಿಯೂ ಗ್ರಂಥ ನೀಡಲಾದವರಲ್ಲಿ ಸತ್ಯವನ್ನು ನಿಷೇಧಿಸಿದವರು, ಬಹುದೇವರಾಧಕರು ನರಕಾಗ್ನಿಯಲ್ಲಿ ಶಾಶ್ವತವಾಗಿರುವರು. ಇವರೇ ಅತ್ಯಂತ ನಿಕೃಷ್ಟ ಸೃಷ್ಟಿಗಳು.
Beyyine 98:7
ನಿಸ್ಸಂಶಯವಾಗಿಯೂ ಸತ್ಯ ವಿಶ್ವಾಸವಿಟ್ಟವರು ಮತ್ತು ಸತ್ರ‍್ಮವೆಸಗಿದವರು, ಇವರೇ ಅತ್ಯುತ್ತಮ ಸೃಷ್ಟಿಗಳು.
Beyyine 98:8
ಅವರಿಗೆ ಅವರ ಪ್ರಭುವಿನ ಬಳಿ ಶಾಶ್ವತ ಸ್ರ‍್ಗೋದ್ಯಾನಗಳ ಪ್ರತಿಫಲವಿದೆ ಅವುಗಳ ತಳಭಾಗದಿಂದ ಕಾಲುವೆಗಳು ಹರಿಯುತ್ತಿರುವುವು. ಅವರು ಅವುಗಳಲ್ಲಿ ಶಾಶ್ವತವಾಗಿರುವರು, ಅಲ್ಲಾಹನು ಅವರಿಂದ ಸಂತುಷ್ಟನಾದನು ಮತ್ತು ಅವರು ಅವನಿಂದ ಸಂತುಷ್ಟರಾಗಿರುವರು. ಇದು ತನ್ನ ಪ್ರಭುವನ್ನು ಭಯಪಡುವವನಿಗೆ ಇರುವ ಪ್ರತಿಫಲವಾಗಿದೆ.
Zilzal 99:1
ಭೂಮಿಯು ಸಂಪರ‍್ಣವಾಗಿ ಉಗ್ರತೆಯೊಂದಿಗೆ ಕಂಪಿಸಲ್ಪಡುವಾಗ.
Zilzal 99:2
ಮತ್ತು ಭೂಮಿಯು ತನ್ನ ಎಲ್ಲಾ ಭಾರವನ್ನು (ಸತ್ತು ಮಣ್ಣು ಸೇರಿರುವ ಮನುಷ್ಯರು ಮತ್ತು ಖನಿಜಸಂಪತ್ತು) ಹೊರಗೆಸೆಯುವಾಗ.
Zilzal 99:3
ಮನುಷ್ಯನು ಬೆರಗಾಗಿ ಹೇಳುವನು, ಇದಕ್ಕೇನಾಗಿದೆ?
Zilzal 99:4
ಅಂದು ಭೂಮಿಯು ತನ್ನ ಸಕಲ ವೃತ್ತಾಂತಗಳನ್ನು ತಿಳಿಸಿಕೊಡುವುದು.
Zilzal 99:5
ಇದೇಕೆಂದರೆ ನಿಮ್ಮ ಪ್ರಭುವು ಅದಕ್ಕೆ ಆದೇಶ ನೀಡಿರುವನು
Zilzal 99:6
ಅಂದು ಜನರಿಗೆ ಅವರ ರ‍್ಮಗಳನ್ನು ತೋರಿಸಿಕೊಡಲಿಕ್ಕಾಗಿ ಅವರು ವಿವಿಧ ಗುಂಪುಗಳಾಗಿ (ಗೋರಿಗಳಿಂದ) ಹೊರಡುವರು.
Zilzal 99:7
ಆಗ ಯಾರು ಅಣುತೂಕದಷ್ಟು ಒಳಿತನ್ನು ಮಾಡಿರುವನೋ ಅವನು ಅದನ್ನು ಕಾಣುವನು.
Zilzal 99:8
ಮತ್ತು ಯಾರು ಅಣು ತೂಕದಷ್ಟು ಕೆಡುಕು ಮಾಡಿರುವನೋ ಅವನು ಅದನ್ನು ಕಾಣುವನು.
Adiyat 100:1
ಏದುಸಿರು ಬಿಡುತ್ತಾ ಓಡುವ ಕುದುರೆಗಳಾಣೆ.
Adiyat 100:2
ಬಳಿಕ ಗೊರಸು ಬಡಿದುಕಿಡಿ ಹಾರಿಸುವವುಗಳಾಣೆ.
Adiyat 100:3
ಪ್ರಭಾತದ ವೇಳೆ ಆಕ್ರಮಣ ಗೈಯ್ಯುವವುಗಳಾಣೆ.
Adiyat 100:4
ಆಗ ಅವು ಧೂಳು ಎಬ್ಬಿಸುವುವು.
Adiyat 100:5
ಬಳಿಕ ಶತ್ರು ಸೈನ್ಯಗಳ ನಡುವೆ ನುಗ್ಗಿಬಿಡುವುವು.
Adiyat 100:6
ಖಂಡಿತವಾಗಿಯೂ ಮನುಷ್ಯನು ತನ್ನ ಪ್ರಭುವಿಗೆ ಮಹಾ ಕೃತಘ್ನನಾಗಿದ್ದಾನೆ,
Adiyat 100:7
ಖಂಡಿತವಾಗಿಯೂ ಸ್ವತಃ ಅವನು ಇದಕ್ಕೆ ಸಾಕ್ಷಿಯಾಗಿದ್ದಾನೆ.
Adiyat 100:8
ಅವನು ಸಂಪತ್ತಿನ ಅತಿಯಾದ ಮೋಹದಲ್ಲಿ ಸಿಲುಕಿ ಕೊಂಡಿದ್ದಾನೆ.
Adiyat 100:9
ಗೋರಿಗಳಲ್ಲಿರುವುದೆಲ್ಲವನ್ನು ಹೊರತರಲಾಗುವ ಕುರಿತು ಅವನಿಗೆ ಅರಿವಿಲ್ಲವೇ?
Adiyat 100:10
ಹೃದಯಗಳಲ್ಲಿರುವ ರಹಸ್ಯ ಮಾತುಗಳನ್ನು ಬಹಿರಂಗ ಗೊಳಿಸಲಾಗುವುದು.
Adiyat 100:11
ನಿಸ್ಸಂದೇಹವಾಗಿಯೂ ಅಂದು ಅವರ ಪ್ರಭು ಅವರ ಸ್ಥಿತಿಯ ಕುರಿತು ಸಂಪರ‍್ಣ ಅರಿವು ಉಳ್ಳವನಾಗಿರುವನು.
Karia 101:1
ಸದ್ದೆಬ್ಬಿಸುವಂತಹದು.
Karia 101:2
ಏನದು ಸದ್ದೆಬ್ಬಿಸುವಂತಹದು.
Karia 101:3
ಆ ಸದ್ದೆಬ್ಬಿಸುವಂತಹದು ಏನೆಂದು ನಿಮಗೇನು ಗೊತ್ತು ?
Karia 101:4
ಅಂದು ಮನುಷ್ಯರು ಚದುರಿ ಚೆಲ್ಲಾಪಿಲ್ಲಿಯಾದ ಹಾತೆಗಳಂತಾಗುವರು.
Karia 101:5
ಮತ್ತು ರ‍್ವತಗಳು ಹಿಂಜಿದ ಬಣ್ಣಬಣ್ಣದ ಉಣ್ಣೆಗಳಂತಾಗುವುವು.
Karia 101:6
ಆಗ ಯಾರ (ಸತ್ರ‍್ಮಗಳ) ತುಲವು ಭಾರವಾಗಿರುವುದೋ.
Karia 101:7
ಅವನು ಸಂತೃಪ್ತಿಯ ಜೀವನದಲ್ಲಿರುವನು.
Karia 101:8
ಮತ್ತು ಯಾರ (ಸತ್ರ‍್ಮಗಳ) ತುಲವು ಹಗುರವಾಗಿರುವುದೋ.
Karia 101:9
ಅವನ ನೆಲೆಯು ಹಾವಿಯಃ ಆಗಿರುವುದು.
Karia 101:10
ಹಾವಿಯಃ ಏನೆಂದು ನಿಮಗೇನು ಗೊತ್ತು ?
Karia 101:11
ಅದು ತೀವ್ರಉಷ್ಣತೆಯ ನರಕಾಗ್ನಿ(ಯಾಗಿದೆ)
Tekâsür 102:1
ಹೆಚ್ಚು ಪಡೆಯಬೇಕೆಂಬ ಹಂಬಲವು ನಿಮ್ಮನ್ನು (ಪರಲೋಕದಿಂದ) ಅಲಕ್ಷö್ಯಗೊಳಿಸಿಬಿಟ್ಟಿದೆ.
Tekâsür 102:2
ನೀವು ಸಮಾಧಿಗಳನ್ನು ತಲುಪುವವರೆಗೆ.
Tekâsür 102:3
ಖಂಡಿತ ನೀವು (ತಿಳಿದಿರುವುದು ಸರಿಯಲ್ಲ) ಸದ್ಯವೇ ಅರಿತುಕೊಳ್ಳುವಿರಿ.
Tekâsür 102:4
ಖಂಡಿತ ನೀವು (ತಿಳಿದಿರುವುದು ಸರಿಯಲ್ಲ) ಶೀಘ್ರವೇ ಅರಿತುಕೊಳ್ಳುವಿರಿ.
Tekâsür 102:5
ಖಂಡಿತ ನೀವು (ತಿಳಿದಿರುವುದು ಸರಿಯಲ್ಲ) ಖಚಿತ ಜ್ಞಾನದ ಆಧಾರದಲ್ಲಿ ತಿಳಿದುಕೊಂಡಿರುತ್ತಿದ್ದರೆ.
Tekâsür 102:6
ನಿಸ್ಸಂದೇಹವಾಗಿಯೂ ನೀವು ನರಕಾಗ್ನಿಯನ್ನು ಕಾಣುವಿರಿ.
Tekâsür 102:7
ಮತ್ತು ನೀವು ಅದನ್ನು ಖಚಿತ ದೃಷ್ಟಿಗಳಿಂದ ನೋಡುವಿರಿ.
Tekâsür 102:8
ಆ ದಿನ ಖಂಡಿತ ನಿಮ್ಮೊಡನೆ ಸುಖಾನುಗ್ರಹಗಳ ಕುರಿತು ಪ್ರಶ್ನಿಸಲಾಗುವುದು
Asr 103:1
ಕಾಲದಾಣೆ.
Asr 103:2
ಖಂಡಿತವಾಗಿಯೂ ಮನುಷ್ಯನು ನಷ್ಟದಲ್ಲಿದ್ದಾನೆ.
Asr 103:3
ಆದರೆ ಸತ್ಯವಿಶ್ವಾಸವಿಟ್ಟವರು ಸತ್ರ‍್ಮವೆಸಗಿದವರು ಮತ್ತು ಸತ್ಯವನ್ನು ಪಾಲಿಸಲು ಪರಸ್ಪರ ಉಪದೇಶ ಮಾಡಿದವರು ಹಾಗು ಪರಸ್ಪರ ಸಹನೆಯ ಉಪದೇಶ ಮಾಡುವವರ ಹೊರತು.
Hümezeh 104:1
(ಮುಂದೆ) ಮೂದಲಿಸುವ ಮತ್ತು (ಹಿಂದೆ) ದೋಷಹುಡುಕುವ ಪ್ರತಿ ಯೊಬ್ಬನಿಗೆ ವಿನಾಶ ಕಾದಿದೆ.
Hümezeh 104:2
ಅವನು ಸಂಪತ್ತು ಸಂಗ್ರಹಿಸುತ್ತಾ ಎಣಿಸಿ ಎಣಿಸಿ ಇಡುವನು
Hümezeh 104:3
ಅವನ ಸಂಪತ್ತು ಅವನ ಬಳಿ ಶಾಶ್ವತವಾಗಿರುವುದೆಂದು ಅವನು ಭಾವಿಸುತ್ತಾನೆ.
Hümezeh 104:4
ಖಂಡಿತ ಅವನ ಭಾವನೆಯಂತಿಲ್ಲ ನಿಜವಾಗಿ ಅವನು ಹುತಮಃದಲ್ಲಿ ಎಸೆಯಲ್ಪಡುವನು.
Hümezeh 104:5
ಹುತಮಃ (ಅಗ್ನಿಯು) ಏನೆಂದು ನಿಮಗೇನು ಗೊತ್ತು ?
Hümezeh 104:6
ಅದು ಅಲ್ಲಾಹನು ಉರಿಸಲಾದ ಅಗ್ನಿಯಾಗಿದೆ.
Hümezeh 104:7
ಅದು ಹೃದಯಗಳವರೆಗೆ ತಲುಪುವುದು.
Hümezeh 104:8
ಅದು ಅವರ ಮೇಲೆ ಆವರಿಸಿ ಮುಚ್ಚಿಬಿಡಲಾಗುವುದು.
Hümezeh 104:9
ಅವರು ಎತ್ತರವಾದ ಅಗ್ನಿಯ ಸ್ಥಂಭಗಳಿಂದ ಆವರಿಸಲ್ಪಟ್ಟಿರುವರು.
Fil 105:1
ನಿಮ್ಮ ಪ್ರಭು ಆನೆಯವರೊಡನೆ ಹೇಗೆ ರ‍್ತಿಸಿದನೆಂದು ನೀವು ನೋಡಲಿಲ್ಲವೇ ?
Fil 105:2
ಅವನು ಅವರ ಕುತಂತ್ರವನ್ನು ನಿಷ್ಫಲ ಮಾಡಲಿಲ್ಲವೇ ?
Fil 105:3
ಮತ್ತು ಅವರ ಮೇಲೆ ಹಕ್ಕಿಗಳ ಹಿಂಡು ಹಿಂಡನ್ನೇ ಕಳುಹಿಸಿದನು.
Fil 105:4
ಅವು ಅವರ ಮೇಲೆ ಸುಡುಗಲ್ಲಿನ ಹರಳುಗಳನ್ನು ಎಸೆಯುತ್ತಿದ್ದವು.
Fil 105:5
ಕೊನೆಗೆ ಅವನು ಅವರನ್ನು ತಿಂದು ಬಿಟ್ಟ ಹೊಟ್ಟಿನಂತೆ ಮಾಡಿಬಿಟ್ಟನು.
Kureyş 106:1
(ಅಲ್ಲಾಹನು) ಕುರೈಶರನ್ನು ಪರಿಚಿತಗೊಳಿಸಿದಕ್ಕಾಗಿ.
Kureyş 106:2
ಅವರ ಚಳಿಗಾಲ ಹಾಗು ಬೇಸಿಗೆ ಕಾಲದ (ವ್ಯಾಪಾರದ) ಯಾತ್ರೆಗಾಗಿ ಪರಿಚಿತಗೊಳಿಸಿದ್ದಕ್ಕಾಗಿ
Kureyş 106:3
ಅವರು ಈ (ಕಾಬಾ) ಭವನದ ಪ್ರಭುವಿನ ಆರಾಧನೆ ಮಾಡಲಿ.
Kureyş 106:4
ಅವನು ಅವರಿಗೆ ಹಸಿವಿನಲ್ಲಿ ಆಹಾರ ಒದಗಿಸಿದನು ಮತ್ತು ಭಯದಿಂದ ರಕ್ಷಿಸಿ ಶಾಂತಿಯನ್ನು ಕರುಣಿಸಿದನು.
Mâûn 107:1
ಪ್ರತಿಫಲ (ದಿನ)ವನ್ನು ಸುಳ್ಳಾಗಿಸುವವನನ್ನು ನೀವು ಕಂಡೀರಾ ?
Mâûn 107:2
ಅವನೇ ಅನಾಥನನ್ನು ಅಟ್ಟುವವನಾಗಿದ್ದಾನೆ.
Mâûn 107:3
ಮತ್ತು ಬಡವನಿಗೆ ಆಹಾರ ನೀಡುವುದಕ್ಕೆ ಪ್ರೋತ್ಸಾಹಿಸುವುದಿಲ್ಲ.
Mâûn 107:4
ಆ ನಮಾಜ್ ಮಾಡುವವರಿಗೆ ವಿನಾಶವಿದೆ.
Mâûn 107:5
ಯಾರು ತಮ್ಮ ನಮಾಝ್ಗಳ ಕುರಿತು ಅಲಕ್ಷö್ಯರಾಗಿದ್ದಾರೆ.
Mâûn 107:6
ಅವರು ತೋರಿಕೆಗಾಗಿ (ನಮಾಜ್) ಮಾಡುತ್ತಾರೆ.
Mâûn 107:7
ಮತ್ತು (ಜನರಿಗೆ) ಸಾಮಾನ್ಯ ಉಪಯೋಗದ ವಸ್ತುಗಳನ್ನು (ಕೊಡಲು) ತಡೆಯುತ್ತಾರೆ.
Kevser 108:1
ಖಂಡಿತವಾಗಿಯೂ ನಾವು ನಿಮಗೆ ಕೌಸರ್ (ರ‍್ವಸಮೃದ್ಧಿಯನ್ನು) ನೀಡಿದ್ದೇವೆ.
Kevser 108:2
ಆದ್ದರಿಂದ ನೀವು ನಿಮ್ಮ ಪ್ರಭುವಿಗಾಗಿ ನಮಾಜ್ ಮಾಡಿ ಮತ್ತು ಬಲಿರ‍್ಪಿಸಿರಿ.
Kevser 108:3
ಖಂಡಿತವಾಗಿಯೂ ನಿಮ್ಮ ಶತ್ರುವೇ ಸಂತಾನ ರಹಿತನಾಗಿರುವನು.
Kâfirun 109:1
ಪೈಗಂಬರರೇ ಹೇಳಿರಿ ಓ ಸತ್ಯನಿಷೇಧಿಗಳೇ.
Kâfirun 109:2
ನೀವು ಆರಾಧಿಸುತ್ತಿರುವ ವಿಗ್ರಹಗಳನ್ನು ನಾನು ಆರಾಧಿಸುವುದಿಲ್ಲ.
Kâfirun 109:3
ನಾನು ಆರಾಧಿಸುತ್ತಿರುವ ಅಲ್ಲಾಹನನ್ನು ನೀವು ಆರಾಧಿಸುವವರಲ್ಲ.
Kâfirun 109:4
ಮತ್ತು ನೀವು ಆರಾಧಿಸುತ್ತಿರುವುದನ್ನು ನಾನು ಆರಾಧಿಸುವವನಲ್ಲ.
Kâfirun 109:5
ಮತ್ತು ನಾನು ಆರಾಧಿಸುತ್ತಿರುವವನನ್ನು (ಅಲ್ಲಾಹನನ್ನು) ನೀವು ಆರಾಧಿಸುವವರಲ್ಲ.
Kâfirun 109:6
ನಿಮಗೆ ನಿಮ್ಮ ರ‍್ಮವಿದೆ ನನಗೆ ನನ್ನ ರ‍್ಮವಿದೆ.
Nasr 110:1
(ಓ ಪೈಗಂಬರರೇ) ಅಲ್ಲಾಹನ ಸಹಾಯ ಮತ್ತು ವಿಜಯವು ಬಂದಾಗ
Nasr 110:2
ಮತ್ತು ನೀವು ಜನರನ್ನು ಅಲ್ಲಾಹನ ರ‍್ಮದಲ್ಲಿ ಗುಂಪು ಗುಂಪುಗಳಾಗಿ ಪ್ರವೇಶಿಸುವುದನ್ನು ಕಂಡಾಗ.
Nasr 110:3
ನೀವು ತಮ್ಮ ಪ್ರಭುವಿನ ಸ್ತುತಿಯೊಂದಿಗೆ ಅವನ ಪಾವಿತ್ರö್ಯವನ್ನು ಕೊಂಡಾಡಿರಿ ಮತ್ತು ಅವನೊಡನೆ ಕ್ಷಮೆಯನ್ನು ಬೇಡಿರಿ. ನಿಸ್ಸಂದೇಹವಾಗಿಯೂ ಅವನು ತುಂಬಾ ಪಶ್ಚಾತ್ತಾಪ ಸ್ವೀಕರಿಸುವವನಾಗಿದ್ದಾನೆ.
Tebbet 111:1
ಅಬೂಲಹಬ್ನ ಎರಡು ಕೈಗಳು ಮುರಿದು ಹೋದುವು ಮತ್ತು ಅವನೂ ನಾಶವಾದÀನು.
Tebbet 111:2
ಅವನ ಸಂಪತ್ತಾಗಲಿ, ಅವನ ಸಂಪಾದನೆಯಾಗಲಿ ಅವನ ಪ್ರಯೋಜನಕ್ಕೆ ಬರಲಿಲ್ಲ.
Tebbet 111:3
ಅವನು ಸದ್ಯವೇ ಜ್ವಾಲೆಗಳುಳ್ಳ ನರಕಾಗ್ನಿಯನ್ನು ಪ್ರವೇಶಿಸುವನು.
Tebbet 111:4
ಮತ್ತು (ಅವನ ಜೊತೆ) ದ್ವೇಷದ ಕಿಚ್ಚು ಹಚ್ಚುವ ಅವನ ಪತ್ನಿಯೂ ಸಹ.
Tebbet 111:5
ಅವಳ ಕೊರಳಲ್ಲಿ ರ‍್ಜೂರ ಸೋಗೆ (ಗರಿ)ಯಿಂದ ಹೊಸೆದ ಹಗ್ಗವಿರುವುದು.
İhlas 112:1
ಹೇಳಿರಿ ಆ ಅಲ್ಲಾಹನು ಏಕೈಕನಾಗಿದ್ದಾನೆ.
İhlas 112:2
ಅಲ್ಲಾಹನು ನಿರಪೇಕ್ಷಕನು ಮತ್ತು ರ‍್ವರೂ ಅವನ ಅವಲಂಬಿತರು.
İhlas 112:3
ಅವನು ಯಾರಿಗೂ ಜನ್ಮ ನೀಡಿಲ್ಲ ಮತ್ತು ಅವನು ಯಾರಿಂದಲೂ ಜನ್ಮ ಪಡೆದಿಲ್ಲ.
İhlas 112:4
ಮತ್ತು ಅವನಿಗೆ ಸರಿಸಾಟಿ ಯಾರೂ ಇಲ್ಲ.
Felak 113:1
ಹೇಳಿರಿ, ನಾನು ಪ್ರಭಾತದ ಪ್ರಭುವಿನ ಅಭಯವನ್ನು ಯಾಚಿಸುತ್ತೇನೆ.
Felak 113:2
ಅವನು ಸೃಷ್ಟಿಸಿದ ಸಕಲ ವಸ್ತುಗಳ ಕೇಡಿನಿಂದ.
Felak 113:3
ಮತ್ತು ಕತ್ತಲೆ ರಾತ್ರಿಯ ಕೇಡಿನಿಂದ, ಅದು ಕವಿದಾಗ
Felak 113:4
ಮತ್ತು ಗಂಟುಗಳಲ್ಲಿ ಮಂತ್ರಿಸಿ ಊದುವ ಸ್ತಿçÃಯರ ಕೇಡಿನಿಂದ
Felak 113:5
ಮತ್ತು ಅಸೂಯೆಗಾರನ ಕೇಡಿನಿಂದ, ಅವನು ಅಸೂಯೆಪಡುವಾಗ.
Nas 114:1
ಹೇಳಿರಿ, ನಾನು ಮನುಷ್ಯರ ಪ್ರಭುವಿನ ಅಭಯವನ್ನು ಯಾಚಿಸುತ್ತೇನೆ.
Nas 114:2
ಮನುಷ್ಯರ ಅಧಿಪತಿಯ (ಅಭಯ ಯಾಚಿಸುತ್ತೇನೆ)
Nas 114:3
ಮನುಷ್ಯರ ಆರಾಧ್ಯನ (ಅಭಯ ಯಾಚಿಸುತ್ತೇನೆ)
Nas 114:4
ದುಷ್ಪೆçÃರಣೆ ಮಾಡುವ ಹಾಗೂ ಹಿಂದೆ ಸರಿದುಬಿಡುವ ಶೈತಾನನ ಕೇಡಿನಿಂದ.
Nas 114:5
ಅವನು ಮನುಷ್ಯರ ಹೃದಯಗಳಲ್ಲಿ ದುರಾಲೋಚನೆ ಯನ್ನು ಹಾಕುತ್ತಾನೆ.
Nas 114:6
ಅವನು ಯಕ್ಷಭೂತಗಳ ಪೈಕಿಯಾಗಿರಲಿ ಅಥವಾ ಮನುಷ್ಯರ ಪೈಕಿಯಾಗಿರಲಿ.