Kannada Meal — Hamza Butur — Fatiha 1:1 – Âl-i İmran 3:200
Contents
- Fatiha 1:1
- Fatiha 1:2
- Fatiha 1:3
- Fatiha 1:4
- Fatiha 1:5
- Fatiha 1:6
- Fatiha 1:7
- Bakara 2:1
- Bakara 2:2
- Bakara 2:3
- Bakara 2:4
- Bakara 2:5
- Bakara 2:6
- Bakara 2:7
- Bakara 2:8
- Bakara 2:9
- Bakara 2:10
- Bakara 2:11
- Bakara 2:12
- Bakara 2:13
- Bakara 2:14
- Bakara 2:15
- Bakara 2:16
- Bakara 2:17
- Bakara 2:18
- Bakara 2:19
- Bakara 2:20
- Bakara 2:21
- Bakara 2:22
- Bakara 2:23
- Bakara 2:24
- Bakara 2:25
- Bakara 2:26
- Bakara 2:27
- Bakara 2:28
- Bakara 2:29
- Bakara 2:30
- Bakara 2:31
- Bakara 2:32
- Bakara 2:33
- Bakara 2:34
- Bakara 2:35
- Bakara 2:36
- Bakara 2:37
- Bakara 2:38
- Bakara 2:39
- Bakara 2:40
- Bakara 2:41
- Bakara 2:42
- Bakara 2:43
- Bakara 2:44
- Bakara 2:45
- Bakara 2:46
- Bakara 2:47
- Bakara 2:48
- Bakara 2:49
- Bakara 2:50
- Bakara 2:51
- Bakara 2:52
- Bakara 2:53
- Bakara 2:54
- Bakara 2:55
- Bakara 2:56
- Bakara 2:57
- Bakara 2:58
- Bakara 2:59
- Bakara 2:60
- Bakara 2:61
- Bakara 2:62
- Bakara 2:63
- Bakara 2:64
- Bakara 2:65
- Bakara 2:66
- Bakara 2:67
- Bakara 2:68
- Bakara 2:69
- Bakara 2:70
- Bakara 2:71
- Bakara 2:72
- Bakara 2:73
- Bakara 2:74
- Bakara 2:75
- Bakara 2:76
- Bakara 2:77
- Bakara 2:78
- Bakara 2:79
- Bakara 2:80
- Bakara 2:81
- Bakara 2:82
- Bakara 2:83
- Bakara 2:84
- Bakara 2:85
- Bakara 2:86
- Bakara 2:87
- Bakara 2:88
- Bakara 2:89
- Bakara 2:90
- Bakara 2:91
- Bakara 2:92
- Bakara 2:93
- Bakara 2:94
- Bakara 2:95
- Bakara 2:96
- Bakara 2:97
- Bakara 2:98
- Bakara 2:99
- Bakara 2:100
- Bakara 2:101
- Bakara 2:102
- Bakara 2:103
- Bakara 2:104
- Bakara 2:105
- Bakara 2:106
- Bakara 2:107
- Bakara 2:108
- Bakara 2:109
- Bakara 2:110
- Bakara 2:111
- Bakara 2:112
- Bakara 2:113
- Bakara 2:114
- Bakara 2:115
- Bakara 2:116
- Bakara 2:117
- Bakara 2:118
- Bakara 2:119
- Bakara 2:120
- Bakara 2:121
- Bakara 2:122
- Bakara 2:123
- Bakara 2:124
- Bakara 2:125
- Bakara 2:126
- Bakara 2:127
- Bakara 2:128
- Bakara 2:129
- Bakara 2:130
- Bakara 2:131
- Bakara 2:132
- Bakara 2:133
- Bakara 2:134
- Bakara 2:135
- Bakara 2:136
- Bakara 2:137
- Bakara 2:138
- Bakara 2:139
- Bakara 2:140
- Bakara 2:141
- Bakara 2:142
- Bakara 2:143
- Bakara 2:144
- Bakara 2:145
- Bakara 2:146
- Bakara 2:147
- Bakara 2:148
- Bakara 2:149
- Bakara 2:150
- Bakara 2:151
- Bakara 2:152
- Bakara 2:153
- Bakara 2:154
- Bakara 2:155
- Bakara 2:156
- Bakara 2:157
- Bakara 2:158
- Bakara 2:159
- Bakara 2:160
- Bakara 2:161
- Bakara 2:162
- Bakara 2:163
- Bakara 2:164
- Bakara 2:165
- Bakara 2:166
- Bakara 2:167
- Bakara 2:168
- Bakara 2:169
- Bakara 2:170
- Bakara 2:171
- Bakara 2:172
- Bakara 2:173
- Bakara 2:174
- Bakara 2:175
- Bakara 2:176
- Bakara 2:177
- Bakara 2:178
- Bakara 2:179
- Bakara 2:180
- Bakara 2:181
- Bakara 2:182
- Bakara 2:183
- Bakara 2:184
- Bakara 2:185
- Bakara 2:186
- Bakara 2:187
- Bakara 2:188
- Bakara 2:189
- Bakara 2:190
- Bakara 2:191
- Bakara 2:192
- Bakara 2:193
- Bakara 2:194
- Bakara 2:195
- Bakara 2:196
- Bakara 2:197
- Bakara 2:198
- Bakara 2:199
- Bakara 2:200
- Bakara 2:201
- Bakara 2:202
- Bakara 2:203
- Bakara 2:204
- Bakara 2:205
- Bakara 2:206
- Bakara 2:207
- Bakara 2:208
- Bakara 2:209
- Bakara 2:210
- Bakara 2:211
- Bakara 2:212
- Bakara 2:213
- Bakara 2:214
- Bakara 2:215
- Bakara 2:216
- Bakara 2:217
- Bakara 2:218
- Bakara 2:219
- Bakara 2:220
- Bakara 2:221
- Bakara 2:222
- Bakara 2:223
- Bakara 2:224
- Bakara 2:225
- Bakara 2:226
- Bakara 2:227
- Bakara 2:228
- Bakara 2:229
- Bakara 2:230
- Bakara 2:231
- Bakara 2:232
- Bakara 2:233
- Bakara 2:234
- Bakara 2:235
- Bakara 2:236
- Bakara 2:237
- Bakara 2:238
- Bakara 2:239
- Bakara 2:240
- Bakara 2:241
- Bakara 2:242
- Bakara 2:243
- Bakara 2:244
- Bakara 2:245
- Bakara 2:246
- Bakara 2:247
- Bakara 2:248
- Bakara 2:249
- Bakara 2:250
- Bakara 2:251
- Bakara 2:252
- Bakara 2:253
- Bakara 2:254
- Bakara 2:255
- Bakara 2:256
- Bakara 2:257
- Bakara 2:258
- Bakara 2:259
- Bakara 2:260
- Bakara 2:261
- Bakara 2:262
- Bakara 2:263
- Bakara 2:264
- Bakara 2:265
- Bakara 2:266
- Bakara 2:267
- Bakara 2:268
- Bakara 2:269
- Bakara 2:270
- Bakara 2:271
- Bakara 2:272
- Bakara 2:273
- Bakara 2:274
- Bakara 2:275
- Bakara 2:276
- Bakara 2:277
- Bakara 2:278
- Bakara 2:279
- Bakara 2:280
- Bakara 2:281
- Bakara 2:282
- Bakara 2:283
- Bakara 2:284
- Bakara 2:285
- Bakara 2:286
- Âl-i İmran 3:1
- Âl-i İmran 3:2
- Âl-i İmran 3:3
- Âl-i İmran 3:4
- Âl-i İmran 3:5
- Âl-i İmran 3:6
- Âl-i İmran 3:7
- Âl-i İmran 3:8
- Âl-i İmran 3:9
- Âl-i İmran 3:10
- Âl-i İmran 3:11
- Âl-i İmran 3:12
- Âl-i İmran 3:13
- Âl-i İmran 3:14
- Âl-i İmran 3:15
- Âl-i İmran 3:16
- Âl-i İmran 3:17
- Âl-i İmran 3:18
- Âl-i İmran 3:19
- Âl-i İmran 3:20
- Âl-i İmran 3:21
- Âl-i İmran 3:22
- Âl-i İmran 3:23
- Âl-i İmran 3:24
- Âl-i İmran 3:25
- Âl-i İmran 3:26
- Âl-i İmran 3:27
- Âl-i İmran 3:28
- Âl-i İmran 3:29
- Âl-i İmran 3:30
- Âl-i İmran 3:31
- Âl-i İmran 3:32
- Âl-i İmran 3:33
- Âl-i İmran 3:34
- Âl-i İmran 3:35
- Âl-i İmran 3:36
- Âl-i İmran 3:37
- Âl-i İmran 3:38
- Âl-i İmran 3:39
- Âl-i İmran 3:40
- Âl-i İmran 3:41
- Âl-i İmran 3:42
- Âl-i İmran 3:43
- Âl-i İmran 3:44
- Âl-i İmran 3:45
- Âl-i İmran 3:46
- Âl-i İmran 3:47
- Âl-i İmran 3:48
- Âl-i İmran 3:49
- Âl-i İmran 3:50
- Âl-i İmran 3:51
- Âl-i İmran 3:52
- Âl-i İmran 3:53
- Âl-i İmran 3:54
- Âl-i İmran 3:55
- Âl-i İmran 3:56
- Âl-i İmran 3:57
- Âl-i İmran 3:58
- Âl-i İmran 3:59
- Âl-i İmran 3:60
- Âl-i İmran 3:61
- Âl-i İmran 3:62
- Âl-i İmran 3:63
- Âl-i İmran 3:64
- Âl-i İmran 3:65
- Âl-i İmran 3:66
- Âl-i İmran 3:67
- Âl-i İmran 3:68
- Âl-i İmran 3:69
- Âl-i İmran 3:70
- Âl-i İmran 3:71
- Âl-i İmran 3:72
- Âl-i İmran 3:73
- Âl-i İmran 3:74
- Âl-i İmran 3:75
- Âl-i İmran 3:76
- Âl-i İmran 3:77
- Âl-i İmran 3:78
- Âl-i İmran 3:79
- Âl-i İmran 3:80
- Âl-i İmran 3:81
- Âl-i İmran 3:82
- Âl-i İmran 3:83
- Âl-i İmran 3:84
- Âl-i İmran 3:85
- Âl-i İmran 3:86
- Âl-i İmran 3:87
- Âl-i İmran 3:88
- Âl-i İmran 3:89
- Âl-i İmran 3:90
- Âl-i İmran 3:91
- Âl-i İmran 3:92
- Âl-i İmran 3:93
- Âl-i İmran 3:94
- Âl-i İmran 3:95
- Âl-i İmran 3:96
- Âl-i İmran 3:97
- Âl-i İmran 3:98
- Âl-i İmran 3:99
- Âl-i İmran 3:100
- Âl-i İmran 3:101
- Âl-i İmran 3:102
- Âl-i İmran 3:103
- Âl-i İmran 3:104
- Âl-i İmran 3:105
- Âl-i İmran 3:106
- Âl-i İmran 3:107
- Âl-i İmran 3:108
- Âl-i İmran 3:109
- Âl-i İmran 3:110
- Âl-i İmran 3:111
- Âl-i İmran 3:112
- Âl-i İmran 3:113
- Âl-i İmran 3:114
- Âl-i İmran 3:115
- Âl-i İmran 3:116
- Âl-i İmran 3:117
- Âl-i İmran 3:118
- Âl-i İmran 3:119
- Âl-i İmran 3:120
- Âl-i İmran 3:121
- Âl-i İmran 3:122
- Âl-i İmran 3:123
- Âl-i İmran 3:124
- Âl-i İmran 3:125
- Âl-i İmran 3:126
- Âl-i İmran 3:127
- Âl-i İmran 3:128
- Âl-i İmran 3:129
- Âl-i İmran 3:130
- Âl-i İmran 3:131
- Âl-i İmran 3:132
- Âl-i İmran 3:133
- Âl-i İmran 3:134
- Âl-i İmran 3:135
- Âl-i İmran 3:136
- Âl-i İmran 3:137
- Âl-i İmran 3:138
- Âl-i İmran 3:139
- Âl-i İmran 3:140
- Âl-i İmran 3:141
- Âl-i İmran 3:142
- Âl-i İmran 3:143
- Âl-i İmran 3:144
- Âl-i İmran 3:145
- Âl-i İmran 3:146
- Âl-i İmran 3:147
- Âl-i İmran 3:148
- Âl-i İmran 3:149
- Âl-i İmran 3:150
- Âl-i İmran 3:151
- Âl-i İmran 3:152
- Âl-i İmran 3:153
- Âl-i İmran 3:154
- Âl-i İmran 3:155
- Âl-i İmran 3:156
- Âl-i İmran 3:157
- Âl-i İmran 3:158
- Âl-i İmran 3:159
- Âl-i İmran 3:160
- Âl-i İmran 3:161
- Âl-i İmran 3:162
- Âl-i İmran 3:163
- Âl-i İmran 3:164
- Âl-i İmran 3:165
- Âl-i İmran 3:166
- Âl-i İmran 3:167
- Âl-i İmran 3:168
- Âl-i İmran 3:169
- Âl-i İmran 3:170
- Âl-i İmran 3:171
- Âl-i İmran 3:172
- Âl-i İmran 3:173
- Âl-i İmran 3:174
- Âl-i İmran 3:175
- Âl-i İmran 3:176
- Âl-i İmran 3:177
- Âl-i İmran 3:178
- Âl-i İmran 3:179
- Âl-i İmran 3:180
- Âl-i İmran 3:181
- Âl-i İmran 3:182
- Âl-i İmran 3:183
- Âl-i İmran 3:184
- Âl-i İmran 3:185
- Âl-i İmran 3:186
- Âl-i İmran 3:187
- Âl-i İmran 3:188
- Âl-i İmran 3:189
- Âl-i İmran 3:190
- Âl-i İmran 3:191
- Âl-i İmran 3:192
- Âl-i İmran 3:193
- Âl-i İmran 3:194
- Âl-i İmran 3:195
- Âl-i İmran 3:196
- Âl-i İmran 3:197
- Âl-i İmran 3:198
- Âl-i İmran 3:199
- Âl-i İmran 3:200
Fatiha 1:1
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ.[1]
———
[1] ಅಲ್ಲಾಹನ ಹೆಸರಿನ ಮೂಲಕ ಸಹಾಯವನ್ನು ಬೇಡುತ್ತಾ ನಾನು ಪವಿತ್ರ ಕುರ್‌ಆನ್ ಪಠಣವನ್ನು ಆರಂಭಿಸುತ್ತೇನೆ. 'ಅಲ್ಲಾಹು' ಎಂಬುದು ಅಲ್ಲಾಹನ ವಿಶೇಷ ಹೆಸರು. ಈ ಹೆಸರು ಅಲ್ಲಾಹನಿಗೆ ಮಾತ್ರ ಸೀಮಿತವಾಗಿದ್ದು, ಇತರ ಯಾರನ್ನೂ ಈ ಹೆಸರಿನಿಂದ ಕರೆಯುವ ಹಾಗಿಲ್ಲ. ಅಲ್ಲಾಹು ಎಂದರೆ ಏಕೈಕ ಸತ್ಯದೇವ ಅಥವಾ ಏಕೈಕ ಪರಮೋಚ್ಛ ದೇವ.
Fatiha 1:2
ಸರ್ವಲೋಕಗಳ ಪರಿಪಾಲಕನಾದ[1] ಅಲ್ಲಾಹನಿಗೆ ಸರ್ವಸ್ತುತಿ.[2]
———
[1] ಇಲ್ಲಿ 'ರಬ್ಬ್' ಅನ್ನು ಪರಿಪಾಲಕ ಎಂದು ಅನುವಾದ ಮಾಡಲಾಗಿದೆ. ರಬ್ಬ್ ಎಂದರೆ ಎಲ್ಲಾ ಸೃಷ್ಟಿಗಳನ್ನು ಸೃಷ್ಟಿಸಿ, ಅವುಗಳ ಎಲ್ಲಾ ಅಗತ್ಯಗಳನ್ನು ಪೂರೈಸಿ, ಅವುಗಳನ್ನು ಹಂತ ಹಂತವಾಗಿ ಬೆಳೆಸುತ್ತಾ ನಿಯಂತ್ರಿಸುತ್ತಾ ಪರಿಪೂರ್ಣತೆಗೆ ತಲುಪಿಸುವವನು. 'ಆಲಮೀನ್' ಎಂದರೆ ಲೋಕಗಳು ಅಥವಾ ಪ್ರಪಂಚಗಳು. ಇಲ್ಲಿ ಲೋಕಗಳು ಎಂದರೆ, ಮನುಷ್ಯರ ಲೋಕ, ದೇವದೂತರ ಲೋಕ, ಯಕ್ಷಗಳ ಲೋಕ, ಪ್ರಾಣಿಗಳ ಲೋಕ, ಪಕ್ಷಿಗಳ ಲೋಕ ಇತ್ಯಾದಿ. ಅಲ್ಲಾಹನ ಹೊರತಾದುದೆಲ್ಲವೂ ಲೋಕಗಳಾಗಿದ್ದು ಅವನು ಈ ಎಲ್ಲಾ ಲೋಕಗಳ ಪಾಲನೆ-ಪೋಷಣೆ ಮಾಡುವವನಾಗಿದ್ದಾನೆ.
[2] 'ಅಲ್-ಹಮ್ದ್' (ಸರ್ವಸ್ತುತಿ) ಎಂಬ ಪದದಲ್ಲಿ ಸ್ತುತಿ, ಪ್ರಶಂಸೆ, ಹೊಗಳಿಕೆಗಳೆಲ್ಲವೂ ಒಳಗೊಳ್ಳುತ್ತದೆ. ಅವೆಲ್ಲಕ್ಕೂ ಅಲ್ಲಾಹನೇ ನೈಜ ಹಕ್ಕುದಾರ. ಅವನು ಎಲ್ಲಾ ವಸ್ತುಗಳ ಸೃಷ್ಟಿಕರ್ತ, ಪರಿಪಾಲಕ, ನಿಯಂತ್ರಕ ಮತ್ತು ಅನುಗ್ರಹದಾತ. ಆದ್ದರಿಂದ ಅವನು ಪ್ರಶಂಸೆಗೆ ಅರ್ಹನಾಗಿದ್ದಾನೆ. ಅವನು ತನ್ನ ಸಾರದಲ್ಲೂ, ತನ್ನ ಹೆಸರು ಮತ್ತು ಗುಣಲಕ್ಷಣಗಳಲ್ಲೂ ಮತ್ತು ತನ್ನ ಕೆಲಸ-ಕಾರ್ಯಗಳಲ್ಲೂ ಪರಿಪೂರ್ಣನಾಗಿರುವುದರಿಂದಲೂ ಅವನು ಪ್ರಶಂಸೆಗೆ ಅರ್ಹನಾಗಿದ್ದಾನೆ.
Fatiha 1:3
ಪರಮ ದಯಾಮಯ, ಕರುಣಾನಿಧಿ,[1]
———
[1] ರಹ್ಮಾನ್ (ಪರಮ ದಯಾಮಯ) ಎಂದರೆ ವಿಶಾಲವಾದ ಕರುಣೆಯನ್ನು ಹೊಂದಿರುವವನು. ಎಲ್ಲರಿಗೂ ಕರುಣೆ ತೋರುವವನು. ರಹೀಮ್ (ಕರುಣಾನಿಧಿ) ಎಂದರೆ ಸತ್ಯವಿಶ್ವಾಸಿಗಳಿಗೆ ಮಾತ್ರ ವಿಶೇಷವಾಗಿ ಕರುಣೆ ತೋರುವವನು.
Fatiha 1:4
ಪ್ರತಿಫಲದ ದಿನದ ಒಡೆಯ.[1]
———
[1] ಯೌಮುದ್ದೀನ್ (ಪ್ರತಿಫಲದ ದಿನ) ಎಂದರೆ ಪುನರುತ್ಥಾನ ದಿನ. ಕರ್ಮಗಳ ವಿಚಾರಣೆ ನಡೆಸಿ ಅವುಗಳಿಗೆ ಪ್ರತಿಫಲ ನೀಡುವ ದಿನ. ಅಂದು ಎಲ್ಲಾ ವಸ್ತುಗಳ ನಿರುಪಾಧಿಕ ಒಡೆತನವು ಅಲ್ಲಾಹನ ಕೈಯಲ್ಲಿರುತ್ತದೆ.
Fatiha 1:5
ನಾವು ನಿನ್ನನ್ನು ಮಾತ್ರ ಆರಾಧಿಸುತ್ತೇವೆ;[1] ಮತ್ತು ನಿನ್ನಿಂದ ಮಾತ್ರ ಸಹಾಯ ಬೇಡುತ್ತೇವೆ.[2]
———
[1] ಆರಾಧಿಸುವುದು ಎಂದರೆ ಒಬ್ಬರ ಸಂಪ್ರೀತಿಯನ್ನು ಪಡೆಯುವುದಕ್ಕಾಗಿ ಅವರ ಮುಂದೆ ಪರಮೋಚ್ಛ ವಿನಯವನ್ನು ಮತ್ತು ಸಂಪೂರ್ಣ ಶರಣಾಗತಿಯನ್ನು ವ್ಯಕ್ತಪಡಿಸುವುದು. ಅವರಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವುದು. ಇದು ಅಲ್ಲಾಹನಿಗೆ ಮಾತ್ರ ಅರ್ಹವಾಗಿದ್ದು ಅವನನ್ನು ಮಾತ್ರ ಆರಾಧಿಸಬೇಕಾಗಿದೆ. ಅಲ್ಲಾಹು ಪ್ರೀತಿಸುವ ಮತ್ತು ಅವನ ಸಂಪ್ರೀತಿಗೆ ಕಾರಣವಾಗುವ ಎಲ್ಲಾ ಮಾತುಗಳು ಮತ್ತು ಬಾಹ್ಯ ಹಾಗೂ ಆಂತರಿಕ ಕ್ರಿಯೆಗಳು ಆರಾಧನೆಗಳಾಗಿವೆ.
[2] ಅಲ್ಲಾಹು ಅಲ್ಲದವರಿಗೆ ಆರಾಧನೆ ಮಾಡುವುದನ್ನು ನಿಷೇಧಿಸಲಾಗಿರುವಂತೆ ಅಲ್ಲಾಹು ಅಲ್ಲದವರಲ್ಲಿ ಅಭೌತಿಕ ಸಹಾಯ ಬೇಡುವುದನ್ನು ಕೂಡ ನಿಷೇಧಿಸಲಾಗಿದೆ.
Fatiha 1:6
ನಮಗೆ ನೇರ ಮಾರ್ಗವನ್ನು ತೋರಿಸು.
Fatiha 1:7
ನೀನು ಅನುಗ್ರಹಿಸಿದವರ ಮಾರ್ಗವನ್ನು. (ನಿನ್ನ) ಕೋಪಕ್ಕೆ ಪಾತ್ರರಾದವರ ಮಾರ್ಗವನ್ನಲ್ಲ; ದಾರಿತಪ್ಪಿದವರ ಮಾರ್ಗವನ್ನೂ ಅಲ್ಲ.[1]
———
[1] ಪ್ರವಾದಿಗಳು, ಸತ್ಯವಂತರು, ಹುತಾತ್ಮರು, ಮಹಾಪುರುಷರು ಮುಂತಾದ ನೀನು ಅನುಗ್ರಹಿಸಿದವರ ಮಾರ್ಗವನ್ನು ತೋರಿಸು. ನಿನ್ನ ಕೋಪಕ್ಕೆ ಪಾತ್ರರಾದವರ ಮಾರ್ಗವನ್ನು ತೋರಿಸಬೇಡ. ಅಲ್ಲಾಹನ ಕೋಪಕ್ಕೆ ಪಾತ್ರರಾದವರು ಎಂದರೆ ಯಹೂದಿಗಳಂತೆ ಸತ್ಯವನ್ನು ತಿಳಿದೂ ಸಹ ಅದನ್ನು ಅಂಗೀಕರಿಸದವರು. ಅದೇ ರೀತಿ, ದಾರಿ ತಪ್ಪಿದವರ ಮಾರ್ಗವನ್ನು ಕೂಡ ತೋರಿಸಬೇಡ. ದಾರಿ ತಪ್ಪಿದವರು ಎಂದರೆ ಕ್ರೈಸ್ತರಂತೆ ಸತ್ಯವನ್ನು ತಿಳಿಯುವ ಗೋಜಿಗೆ ಹೋಗದೆ ದಾರಿ ತಪ್ಪಿ ನಡೆದವರು.
Bakara 2:1
ಅಲಿಫ್-ಲಾಮ್-ಮೀಮ್.[1]
———
[1] ಇವುಗಳನ್ನು ‘ಹುರೂಫ್ ಮುಕತ್ತಆತ್’ (ಬಿಡಿ ಅಕ್ಷರಗಳು) ಎಂದು ಕರೆಯಲಾಗುತ್ತದೆ. ಇವುಗಳಿಗೆ ವಿಶೇಷವಾದ ಅರ್ಥವಿದೆಯೆಂದು ಹೇಳುವ ಯಾವುದೇ ವರದಿಗಳಿಲ್ಲ. ಇವುಗಳ ಉದ್ದೇಶವೇನೆಂದು ಸರ್ವಶಕ್ತನಾದ ಅಲ್ಲಾಹು ಮಾತ್ರ ಬಲ್ಲ.
Bakara 2:2
ಈ ಗ್ರಂಥದಲ್ಲಿ ಯಾವುದೇ ಸಂದೇಹವಿಲ್ಲ; ಇದು ದೇವಭಯವುಳ್ಳವರಿಗೆ ಸನ್ಮಾರ್ಗವನ್ನು ತೋರಿಸುತ್ತದೆ.
Bakara 2:3
ಅವರು (ದೇವಭಯವುಳ್ಳವರು) ಯಾರೆಂದರೆ, ಅದೃಶ್ಯ ವಿಷಯಗಳಲ್ಲಿ[1] ವಿಶ್ವಾಸವಿಡುವವರು, ನಮಾಝ್ ಸಂಸ್ಥಾಪಿಸುವವರು ಮತ್ತು ನಾವು ಅವರಿಗೆ ಒದಗಿಸಿದ (ಧನದಿಂದ) ಖರ್ಚು ಮಾಡುವವರು.
———
[1] ಅದೃಶ್ಯ ವಿಷಯಗಳು ಎಂದರೆ ಇಂದ್ರಿಯಗಳಿಗೆ ಗ್ರಹಿಸಲಾಗದ, ನಮ್ಮಿಂದ ಸಂಪೂರ್ಣ ಮರೆಯಾಗಿರುವ ಸಂಗತಿಗಳು. ಉದಾಹರಣೆಗೆ, ಪರಲೋಕ, ಸಮಾಧಿಯ ಶಿಕ್ಷೆ, ಸ್ವರ್ಗ, ನರಕ ಇತ್ಯಾದಿ.
Bakara 2:4
ನಿಮಗೆ ಅವತೀರ್ಣವಾದ ಗ್ರಂಥದಲ್ಲಿ ಮತ್ತು ನಿಮಗಿಂತ ಮೊದಲು ಅವತೀರ್ಣವಾದ ಗ್ರಂಥಗಳಲ್ಲಿ ಅವರು ವಿಶ್ವಾಸವಿಡುತ್ತಾರೆ. ಪರಲೋಕದಲ್ಲಿ ಅವರು ದೃಢವಾಗಿ ವಿಶ್ವಾಸವಿಡುತ್ತಾರೆ.
Bakara 2:5
ಅವರು ಅವರ ಪರಿಪಾಲಕನ (ಅಲ್ಲಾಹನ) ಕಡೆಯ ಸನ್ಮಾರ್ಗದಲ್ಲಿದ್ದಾರೆ. ಅವರೇ ಯಶಸ್ವಿಯಾದವರು.
Bakara 2:6
ನಿಶ್ಚಯವಾಗಿಯೂ ಸತ್ಯನಿಷೇಧಿಗಳು ಯಾರೋ—ಅವರಿಗೆ ನೀವು ಎಚ್ಚರಿಕೆ ನೀಡಿದರೂ, ನೀಡದಿದ್ದರೂ ಅವರಿಗೆ ಅದು ಸಮಾನವಾಗಿದೆ; ಅವರು ವಿಶ್ವಾಸವಿಡುವುದಿಲ್ಲ.
Bakara 2:7
ಅಲ್ಲಾಹು ಅವರ ಹೃದಯಗಳಿಗೆ ಮತ್ತು ಅವರ ಶ್ರವಣಗಳಿಗೆ ಮೊಹರು ಹಾಕಿದ್ದಾನೆ. ಅವರ ದೃಷ್ಟಿಗಳ ಮೇಲೆ ಪರದೆಯಿದೆ.[1] ಅವರಿಗೆ ಘೋರ ಶಿಕ್ಷೆಯಿದೆ.
———
[1] ಅವರು ನಿರಂತರ ಸತ್ಯನಿಷೇಧ ಮತ್ತು ದುಷ್ಕರ್ಮಗಳಲ್ಲಿ ಮಗ್ನರಾಗುತ್ತಿದ್ದುದರಿಂದ ಅವರ ಹೃದಯಗಳು ಕಠೋರವಾದವು ಮತ್ತು ಸತ್ಯವನ್ನು ಸ್ವೀಕರಿಸುವ ಮನಸ್ಥಿತಿಯೇ ಅವರಿಗೆ ಇಲ್ಲವಾಯಿತು.
Bakara 2:8
“ನಾವು ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಟ್ಟಿದ್ದೇವೆ” ಎಂದು ಹೇಳುವ ಕೆಲವು ಜನರಿದ್ದಾರೆ. ಆದರೆ ವಾಸ್ತವವಾಗಿ ಅವರು ಸತ್ಯವಿಶ್ವಾಸಿಗಳಲ್ಲ.
Bakara 2:9
ಅವರು (ತಮ್ಮ ಡಾಂಭಿಕತೆಯ ಮೂಲಕ) ಅಲ್ಲಾಹನನ್ನು ಮತ್ತು ಸತ್ಯವಿಶ್ವಾಸಿಗಳನ್ನು ಮೋಸಗೊಳಿಸಬಹುದೆಂದು (ಭಾವಿಸುತ್ತಾರೆ). ಆದರೆ, ವಾಸ್ತವವಾಗಿ ಅವರು ಅವರನ್ನೇ ಮೋಸಗೊಳಿಸುತ್ತಿದ್ದಾರೆ. ಆದರೆ, ಅವರು ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ.
Bakara 2:10
ಅವರ ಹೃದಯಗಳಲ್ಲಿ ರೋಗವಿದೆ. ಅಲ್ಲಾಹು ಅವರಿಗೆ ಆ ರೋಗವನ್ನು ಇನ್ನಷ್ಟು ಉಲ್ಬಣಗೊಳಿಸಿದ್ದಾನೆ.[1] ಅವರು (ನಿರಂತರ) ಸುಳ್ಳು ಹೇಳುವ ಕಾರಣ ಅವರಿಗೆ ಯಾತನಾಮಯ ಶಿಕ್ಷೆಯೂ ಇದೆ.
———
[1] ಕಪಟವಿಶ್ವಾಸಿಗಳ ಹೃದಯಗಳಲ್ಲಿ ಕಪಟತನ ಮತ್ತು ಸತ್ಯನಿಷೇಧದ ರೋಗವಿದೆ. ಅವರು ಅದನ್ನು ಗುಣಪಡಿಸುವ ಗೋಜಿಗೆ ಹೋಗದಿದ್ದರೆ ಅದು ಇನ್ನಷ್ಟು ಉಲ್ಬಣವಾಗುತ್ತದೆ.
Bakara 2:11
ನೀವು ಭೂಮಿಯಲ್ಲಿ ಕಿಡಿಗೇಡಿತನ ಮಾಡಬೇಡಿ ಎಂದು ಅವರೊಡನೆ ಹೇಳಲಾದರೆ, ಅವರು ಹೇಳುತ್ತಾರೆ: “ನಾವು ಕೇವಲ ಸುಧಾರಣೆ ಮಾಡುವವರು.”
Bakara 2:12
ತಿಳಿಯಿರಿ! ಸತ್ಯವಾಗಿಯೂ ಅವರೇ ಕಿಡಿಗೇಡಿತನ ಮಾಡುವವರು. ಆದರೆ ಅವರು ಅರ್ಥಮಾಡಿಕೊಳ್ಳುವುದಿಲ್ಲ.
Bakara 2:13
“ಸಹಾಬಿಗಳು (ಪ್ರವಾದಿಯ ಸಂಗಡಿಗರು) ವಿಶ್ವಾಸವಿಟ್ಟಂತೆ ನೀವೂ ವಿಶ್ವಾಸವಿಡಿ” ಎಂದು ಅವರೊಡನೆ ಹೇಳಲಾದರೆ, ಅವರು ಕೇಳುತ್ತಾರೆ: “ಆ ಅವಿವೇಕಿಗಳು ವಿಶ್ವಾಸವಿಟ್ಟಂತೆ ನಾವು ವಿಶ್ವಾಸವಿಡಬೇಕೇ?” ತಿಳಿಯಿರಿ! ನಿಶ್ಚಯವಾಗಿಯೂ ಅವರೇ ಅವಿವೇಕಿಗಳು. ಆದರೆ ಅವರು ಅದನ್ನು ತಿಳಿಯುವುದಿಲ್ಲ.
Bakara 2:14
ಸತ್ಯವಿಶ್ವಾಸಿಗಳನ್ನು ಭೇಟಿಯಾದಾಗ ಅವರು ಹೇಳುತ್ತಾರೆ: “ನಾವು ವಿಶ್ವಾಸವಿಟ್ಟಿದ್ದೇವೆ.” ಆದರೆ, ಅವರು ತಮ್ಮ ಶೈತಾನರ (ಮುಖಂಡರ) ಬಳಿ ಒಂಟಿಯಾಗಿರುವಾಗ ಹೇಳುತ್ತಾರೆ: “ನಿಜವಾಗಿಯೂ ನಾವು ನಿಮ್ಮ ಜೊತೆಯಲ್ಲೇ ಇದ್ದೇವೆ. ನಾವು ಕೇವಲ ತಮಾಷೆ ಮಾಡುತ್ತಿದ್ದೆವು.”
Bakara 2:15
ಅಲ್ಲಾಹು ಕೂಡ ಅವರನ್ನು ತಮಾಷೆ ಮಾಡುತ್ತಾನೆ ಮತ್ತು ಅವರ ಅತಿರೇಕಗಳಲ್ಲಿ ಅಂಧವಾಗಿ ವಿಹರಿಸುವಂತೆ ಅವರನ್ನು ಬಿಟ್ಟುಬಿಡುತ್ತಾನೆ.[1]
———
[1] ಇದರ ಅರ್ಥವೇನೆಂದರೆ, ಅವರು ಸತ್ಯವಿಶ್ವಾಸಿಗಳನ್ನು ಯಾವ ರೀತಿಯಲ್ಲಿ ತಮಾಷೆ ಮಾಡುತ್ತಾ ಅವಹೇಳನ ಮಾಡುತ್ತಾರೋ ಅದೇ ರೀತಿ ಅಲ್ಲಾಹು ಕೂಡ ಅವರನ್ನು ಅವಹೇಳನ ಮಾಡುತ್ತಾನೆ. ಅಂದರೆ ಅವರು ತಿರಸ್ಕಾರ ಮತ್ತು ನಿಂದನೆಗೆ ಒಳಗಾಗುವಂತೆ ಮಾಡುತ್ತಾನೆ. ವಾಸ್ತವವಾಗಿ, ಇದು ಅಲ್ಲಾಹು ಅವರನ್ನು ಅವಹೇಳನ ಮಾಡುವುದಲ್ಲ; ಬದಲಿಗೆ ಅವರು ಮಾಡುವ ತಮಾಷೆ ಮತ್ತು ಅವಹೇಳನಕ್ಕೆ ಶಿಕ್ಷೆ ನೀಡುವುದಾಗಿದೆ.
Bakara 2:16
ಅವರೇ ಸನ್ಮಾರ್ಗದ ಬದಲಿಗೆ ದುರ್ಮಾರ್ಗವನ್ನು ಖರೀದಿಸಿದವರು. ಆದ್ದರಿಂದ, ಅವರ ವ್ಯಾಪಾರವು ಲಾಭಕರವಾಗಲಿಲ್ಲ; ಅವರು ಸನ್ಮಾರ್ಗಿಗಳಾಗಲೂ ಇಲ್ಲ.
Bakara 2:17
ಅವರ ಉದಾಹರಣೆಯು ಬೆಂಕಿಯುರಿಸಿದ ಒಬ್ಬ ವ್ಯಕ್ತಿಯಂತೆ. ಅದು ಅವನ ಪರಿಸರವನ್ನು ಬೆಳಗಿದಾಗ, ಅಲ್ಲಾಹು ಅವರ ಬೆಳಕನ್ನು ನಿವಾರಿಸಿ ಏನೂ ಕಾಣದಂತಹ ಅಂಧಕಾರದಲ್ಲಿ ಅವರನ್ನು ಬಿಟ್ಟುಬಿಟ್ಟನು.
Bakara 2:18
ಅವರು ಕಿವುಡರು, ಮೂಕರು ಮತ್ತು ಕುರುಡರು. ಆದ್ದರಿಂದ ಅವರು (ಸತ್ಯಮಾರ್ಗಕ್ಕೆ) ಮರಳಿ ಬರುವುದಿಲ್ಲ.
Bakara 2:19
ಅಥವಾ (ಅವರ ಉದಾಹರಣೆಯು) ಆಕಾಶದಿಂದ ಸುರಿಯುವ ಜಡಿಮಳೆಯಂತೆ; ಅದರಲ್ಲಿ ಅಂಧಕಾರಗಳು, ಸಿಡಿಲು ಮತ್ತು ಮಿಂಚುಗಳಿವೆ. ಸಿಡಿಲಿನ ಆರ್ಭಟದಿಂದ ಸಾವಿಗೆ ಹೆದರಿ ಅವರು ತಮ್ಮ ಬೆರಳುಗಳನ್ನು ಕಿವಿಗಳಲ್ಲಿಡುತ್ತಾರೆ. ಅಲ್ಲಾಹು ಸತ್ಯನಿಷೇಧಿಗಳನ್ನು ಸುತ್ತುವರಿದಿದ್ದಾನೆ.
Bakara 2:20
ಮಿಂಚು ಇನ್ನೇನು ಅವರ ದೃಷ್ಟಿಗಳನ್ನು ಕಸಿಯುವುದರಲ್ಲಿದೆ. ಅದು ಅವರಿಗೆ ಬೆಳಕು ನೀಡಿದಾಗಲೆಲ್ಲಾ ಅವರು ಅದರಲ್ಲಿ ನಡೆಯುತ್ತಾರೆ. ಕತ್ತಲೆ ಆವರಿಸಿದಾಗ ಅವರು ನಿಂತುಬಿಡುತ್ತಾರೆ. ಅಲ್ಲಾಹು ಇಚ್ಛಿಸಿದರೆ ಅವರ ಶ್ರವಣ ಮತ್ತು ದೃಷ್ಟಿಯನ್ನು ತೆಗೆದುಬಿಡುತ್ತಿದ್ದನು. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನು.
Bakara 2:21
ಓ ಮನುಷ್ಯರೇ! ನಿಮ್ಮನ್ನು ಮತ್ತು ನಿಮ್ಮ ಪೂರ್ವಜರನ್ನು ಸೃಷ್ಟಿಸಿದ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಆರಾಧಿಸಿರಿ. ನೀವು ದೇವಭಯವುಳ್ಳವರಾಗುವುದಕ್ಕಾಗಿ.
Bakara 2:22
(ಅವನು ಯಾರೆಂದರೆ) ನಿಮಗೋಸ್ಕರ ಭೂಮಿಯನ್ನು ಹಾಸನ್ನಾಗಿ ಮತ್ತು ಆಕಾಶವನ್ನು ಛಾವಣಿಯನ್ನಾಗಿ ಮಾಡಿಕೊಟ್ಟವನು. ಆಕಾಶದಿಂದ ಮಳೆಯನ್ನು ಸುರಿಸಿ ಅದರಿಂದ ನಿಮ್ಮ ಆಹಾರಕ್ಕಾಗಿ ಹಣ್ಣು-ಹಂಪಲುಗಳನ್ನು ಉತ್ಪಾದಿಸಿಕೊಟ್ಟವನು. ಆದ್ದರಿಂದ, ಇವೆಲ್ಲವನ್ನೂ ತಿಳಿದೂ ಸಹ ನೀವು ಅಲ್ಲಾಹನಿಗೆ ಸರಿಸಾಟಿಗಳನ್ನು ನಿಶ್ಚಯಿಸಬೇಡಿ.
Bakara 2:23
ನಾವು ನಮ್ಮ ದಾಸನಿಗೆ ಅವತೀರ್ಣಗೊಳಿಸಿದ (ಕುರ್‌ಆನ್) ಬಗ್ಗೆ ನಿಮಗೇನಾದರೂ ಸಂದೇಹವಿದ್ದರೆ, ಅದರಂತಿರುವ ಒಂದು ಸೂರವನ್ನು (ಅಧ್ಯಾಯವನ್ನು) ರಚಿಸಿ ತನ್ನಿರಿ; ಅಲ್ಲಾಹನ ಹೊರತು ನಿಮ್ಮ ಎಲ್ಲಾ ಸಹಾಯಕರನ್ನು ಕರೆಯಿರಿ; ನೀವು ಸತ್ಯವಂತರಾಗಿದ್ದರೆ.
Bakara 2:24
ನಿಮಗೆ ಅದನ್ನು ಮಾಡಲು ಸಾಧ್ಯವಾಗದಿದ್ದರೆ—ಅದನ್ನು ಮಾಡಲು ನಿಮಗೆ ಎಂದಿಗೂ ಸಾಧ್ಯವಾಗುವುದಿಲ್ಲ. ಆದ್ದರಿಂದ ನೀವು ಆ ನರಕವನ್ನು ಭಯಪಡಿರಿ; ಅದರ ಇಂಧನವು ಮನುಷ್ಯರು ಮತ್ತು ಕಲ್ಲುಗಳಾಗಿದ್ದಾರೆ. ಅದನ್ನು ಸತ್ಯನಿಷೇಧಿಗಳಿಗಾಗಿ ಸಿದ್ಧಗೊಳಿಸಲಾಗಿದೆ.
Bakara 2:25
ಸತ್ಯವಿಶ್ವಾಸಿಗಳು ಹಾಗೂ ಸತ್ಕರ್ಮವೆಸಗಿದವರಿಗೆ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿವೆಯೆಂಬ ಸುವಾರ್ತೆಯನ್ನು ತಿಳಿಸಿರಿ. ಅವರಿಗೆ ಅದರ ಒಂದೊಂದು ಹಣ್ಣನ್ನು ಆಹಾರವಾಗಿ ನೀಡಲಾಗುವಾಗಲೆಲ್ಲಾ ಅವರು ಹೇಳುವರು: “ಇದು ನಮಗೆ ಮುಂಚೆ ನೀಡಲಾದದ್ದೇ ಅಲ್ಲವೇ!” ವಾಸ್ತವವಾಗಿ, ಅವರಿಗೆ ಅದನ್ನು ಹೋಲಿಕೆಯಿರುವ ರೂಪದಲ್ಲಿ ನೀಡಲಾಗಿದೆ.[1] ಅವರಿಗೆ ಅಲ್ಲಿ ಪರಿಶುದ್ಧ ಸಂಗಾತಿಗಳಿದ್ದಾರೆ; ಅವರು ಅಲ್ಲಿ ಶಾಶ್ವತವಾಗಿ ವಾಸಿಸುವರು.
———
[1] ಹೋಲಿಕೆಯಿರುವ ರೂಪದಲ್ಲಿ ಎಂದರೆ ಒಂದೋ ಸ್ವರ್ಗದಲ್ಲಿರುವ ಹಣ್ಣುಗಳು ಪರಸ್ಪರ ಒಂದನ್ನೊಂದು ಹೋಲುತ್ತವೆ; ಅಥವಾ ಅವು ಇಹಲೋಕದ ಹಣ್ಣುಗಳ ಹೋಲಿಕೆಯನ್ನು ಹೊಂದಿರುತ್ತವೆ. ಹೋಲಿಕೆಯಿರುವುದು ರೂಪ, ಆಕಾರ, ಹೆಸರು ಅಥವಾ ಬಣ್ಣಗಳಲ್ಲಿ ಮಾತ್ರವೇ ಹೊರತು ಅವುಗಳ ರುಚಿ ಮತ್ತು ಗುಣಮಟ್ಟದಲ್ಲಲ್ಲ.
Bakara 2:26
ನಿಶ್ಚಯವಾಗಿಯೂ ಅಲ್ಲಾಹು ಒಂದು ಸೊಳ್ಳೆಯನ್ನು ಅಥವಾ ಅದಕ್ಕಿಂತ ಕೀಳಾದುದನ್ನು ಉದಾಹರಣೆಯಾಗಿ ತೋರಿಸಲು ಸಂಕೋಚಪಡುವುದಿಲ್ಲ. ಸತ್ಯವಿಶ್ವಾಸಿಗಳು ಅದು ತಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಸತ್ಯವೆಂದು ತಿಳಿಯುತ್ತಾರೆ. ಆದರೆ, ಸತ್ಯನಿಷೇಧಿಗಳು ಕೇಳುತ್ತಾರೆ: “ಈ ಹೋಲಿಕೆಯಿಂದ ಅಲ್ಲಾಹು ಉದ್ದೇಶಿಸುವುದೇನು?” ಇದರ ಮೂಲಕ ಅಲ್ಲಾಹು ಅನೇಕ ಜನರನ್ನು ದಾರಿತಪ್ಪಿಸುತ್ತಾನೆ ಮತ್ತು ಅನೇಕ ಜನರಿಗೆ ಸನ್ಮಾರ್ಗವನ್ನು ತೋರಿಸುತ್ತಾನೆ. ಅವನು ಇದರ ಮೂಲಕ ದುಷ್ಕರ್ಮಿಗಳನ್ನಲ್ಲದೆ ಇನ್ನಾರನ್ನೂ ದಾರಿತಪ್ಪಿಸುವುದಿಲ್ಲ.
Bakara 2:27
ಅವರು (ದುಷ್ಕರ್ಮಿಗಳು) ಯಾರೆಂದರೆ, ಅಲ್ಲಾಹನ ಕರಾರನ್ನು—ಅದು ಸದೃಢವಾದ ಬಳಿಕವೂ—ಮುರಿಯುವವರು, ಅಲ್ಲಾಹು ಜೋಡಿಸಲು ಆದೇಶಿಸಿದ್ದನ್ನು ಕಡಿಯುವವರು, ಮತ್ತು ಭೂಮಿಯಲ್ಲಿ ಕಿಡಿಗೇಡಿತನ ಮಾಡುವವರು. ಅವರೇ ನಷ್ಟ ಹೊಂದಿದವರು.
Bakara 2:28
ನೀವು ಅಲ್ಲಾಹನನ್ನು ಹೇಗೆ ನಿಷೇಧಿಸುತ್ತೀರಿ? ವಾಸ್ತವವಾಗಿ, ನೀವು ನಿರ್ಜೀವಿಗಳಾಗಿದ್ದಿರಿ ಮತ್ತು ಅವನು ನಿಮಗೆ ಜೀವವನ್ನು ನೀಡಿದನು; ನಂತರ ಅವನು ನಿಮಗೆ ಸಾವನ್ನು ನೀಡುತ್ತಾನೆ. ನಂತರ ಅವನು ನಿಮಗೆ (ಪುನಃ) ಜೀವವನ್ನು ನೀಡುತ್ತಾನೆ. ನಂತರ ನಿಮ್ಮನ್ನು ಅವನ ಬಳಿಗೇ ಮರಳಿಸಲಾಗುತ್ತದೆ.
Bakara 2:29
ಭೂಮಿಯಲ್ಲಿರುವ ಎಲ್ಲಾ ವಸ್ತುಗಳನ್ನೂ ನಿಮಗಾಗಿ ಸೃಷ್ಟಿಸಿದವನು ಅವನೇ. ನಂತರ ಅವನು ಆಕಾಶಕ್ಕೇರಿ, ಅದನ್ನು ಏಳಾಕಾಶಗಳಾಗಿ ಸರಿಪಡಿಸಿದನು. ಅವನು ಎಲ್ಲಾ ವಿಷಯಗಳನ್ನೂ ತಿಳಿದವನಾಗಿದ್ದಾನೆ.
Bakara 2:30
ನಿಮ್ಮ ಪರಿಪಾಲಕನು (ಅಲ್ಲಾಹು) ದೇವದೂತರೊಡನೆ, “ನಾನು ಭೂಮಿಯಲ್ಲಿ ಒಬ್ಬ ಉತ್ತರಾಧಿಕಾರಿಯನ್ನು[1] (ಮನುಷ್ಯನನ್ನು) ಮಾಡುತ್ತೇನೆ” ಎಂದು ಹೇಳಿದ ಸಂದರ್ಭ. ಅವರು ಕೇಳಿದರು: “ಅಲ್ಲಿ ಕಿಡಿಗೇಡಿತನ ಮಾಡುವವನನ್ನು ಮತ್ತು ರಕ್ತ ಹರಿಸುವವನನ್ನು ಮಾಡುವೆಯಾ? ನಾವಂತೂ ನಿನ್ನನ್ನು ಸ್ತುತಿಸುತ್ತಾ ನಿನ್ನ ಪರಿಶುದ್ಧಿಯನ್ನು ಕೊಂಡಾಡುತ್ತೇವೆ ಮತ್ತು ನಿನ್ನ ಪವಿತ್ರತೆಯನ್ನು ಹೊಗಳುತ್ತೇವೆ.” ಅಲ್ಲಾಹು ಹೇಳಿದನು: “ನಿಶ್ಚಯವಾಗಿಯೂ, ನಿಮಗೆ ತಿಳಿಯದೇ ಇರುವುದು ನನಗೆ ತಿಳಿದಿದೆ.”
———
[1] ಉತ್ತರಾಧಿಕಾರಿ ಎಂದರೆ ಅಲ್ಲಾಹನ ಉತ್ತರಾಧಿಕಾರಿಯಲ್ಲ. ಬದಲಿಗೆ, ಭೂಮಿಯಲ್ಲಿ ತಲೆಮಾರಿನ ನಂತರ ತಲೆಮಾರುಗಳಾಗಿ ಬರುವ ಮನುಷ್ಯರು.
Bakara 2:31
ಅಲ್ಲಾಹು ಆದಮರಿಗೆ ಎಲ್ಲಾ ಹೆಸರುಗಳನ್ನು ಕಲಿಸಿದನು. ನಂತರ ಅವುಗಳನ್ನು ದೇವದೂತರುಗಳಿಗೆ ತೋರಿಸಿ ಹೇಳಿದನು: “ನೀವು ಸತ್ಯವಂತರಾಗಿದ್ದರೆ ಇವುಗಳ ಹೆಸರುಗಳನ್ನು ಹೇಳಿರಿ.”
Bakara 2:32
ಅವರು ಹೇಳಿದರು: “ನಿನ್ನ ಪರಿಶುದ್ಧಿಯನ್ನು ನಾವು ಕೊಂಡಾಡುತ್ತೇವೆ. ನೀನು ನಮಗೆ ಕಲಿಸಿಕೊಟ್ಟದ್ದರ ಹೊರತು ಬೇರೇನೂ ನಮಗೆ ತಿಳಿದಿಲ್ಲ; ನಿಶ್ಚಯವಾಗಿಯೂ ನೀನು ಸರ್ವಜ್ಞನು ಮತ್ತು ವಿವೇಕವಂತನಾಗಿರುವೆ.”
Bakara 2:33
ಅಲ್ಲಾಹು ಹೇಳಿದನು: “ಓ ಆದಮರೇ! ಅವರಿಗೆ ಅವುಗಳ ಹೆಸರುಗಳನ್ನು ಹೇಳಿಕೊಡಿ.” ಆದಮ್ ಅವರಿಗೆ ಅವುಗಳ ಹೆಸರುಗಳನ್ನು ಹೇಳಿಕೊಟ್ಟಾಗ ಅಲ್ಲಾಹು ಹೇಳಿದನು: “ನಾನು ನಿಮಗೆ ಹೇಳಿರಲಿಲ್ಲವೇ? ನಿಶ್ಚಯವಾಗಿಯೂ, ಭೂಮ್ಯಾಕಾಶಗಳ ಅದೃಶ್ಯ ವಿಷಯಗಳನ್ನು ನಾನು ತಿಳಿದಿದ್ದೇನೆಂದು; ನೀವು ಬಹಿರಂಗಪಡಿಸುವುದನ್ನು ಹಾಗೂ ರಹಸ್ಯವಾಗಿಡುವುದನ್ನು ನಾನು ತಿಳಿದಿದ್ದೇನೆಂದು.”
Bakara 2:34
ನಾವು ದೇವದೂತರೊಡನೆ ಹೇಳಿದ ಸಂದರ್ಭ: “ನೀವೆಲ್ಲರೂ ಆದಮರಿಗೆ ಸಾಷ್ಟಾಂಗ ಮಾಡಿರಿ.”[1] ಅವರು ಸಾಷ್ಟಾಂಗ ಮಾಡಿದರು; ಇಬ್ಲೀಸನ ಹೊರತು.[2] ಅವನು (ಸಾಷ್ಟಾಂಗ ಮಾಡಲು) ನಿರಾಕರಿಸಿದನು ಮತ್ತು ಅಹಂಕಾರ ತೋರಿದನು. ಅವನು ಸತ್ಯನಿಷೇಧಿಗಳಲ್ಲಿ ಸೇರಿದವನಾದನು.
———
[1] ಸುಜೂದ್ ಎಂದರೆ ವಿನಯ ಮತ್ತು ವಿನಮ್ರತೆಯನ್ನು ವ್ಯಕ್ತಪಡಿಸುವುದು. ನೆಲದ ಮೇಲೆ ಹಣೆಯಿಟ್ಟು ಸಾಷ್ಟಾಂಗ ಮಾಡುವುದು ಇದರ ಪರಮೋಚ್ಛ ರೂಪವಾಗಿದೆ. ಪ್ರವಾದಿ ಮುಹಮ್ಮದ್ (ಅವರ ಮೇಲೆ ಶಾಂತಿಯಿರಲಿ) ರವರ ಶರಿಯತ್ (ಧರ್ಮಸಂಹಿತೆ) ನ ಪ್ರಕಾರ ಅಲ್ಲಾಹನಿಗೆ ಹೊರತು ಬೇರೆ ಯಾರಿಗೂ ಸಾಷ್ಟಾಂಗ ಮಾಡಬಾರದು. [2] ಇಬ್ಲೀಸ್ ಜಿನ್ನ್ (ಯಕ್ಷ) ಗಳಲ್ಲಿ ಸೇರಿದವನು. ಅಲ್ಲಾಹು ಅವನಿಗೆ ಶ್ರೇಷ್ಠತೆ ನೀಡಿ ದೇವದೂತರೊಡನೆ ಸೇರಿಸಿದ್ದನು. ಆದ್ದರಿಂದ ಅಲ್ಲಾಹನ ಆದೇಶ ಪ್ರಕಾರ ಸಾಷ್ಟಾಂಗ ಮಾಡುವುದು ಅವನಿಗೂ ಕಡ್ಡಾಯವಾಗಿತ್ತು. ಆದರೆ ಅವನು ಆದಮರ ಮೇಲಿದ್ದ ಅಸೂಯೆ ಮತ್ತು ಅಹಂಕಾರದಿಂದ ಸಾಷ್ಟಾಂಗ ಮಾಡಲು ನಿರಾಕರಿಸಿದನು.
Bakara 2:35
ನಾವು ಹೇಳಿದೆವು: “ಓ ಆದಮರೇ! ನೀವು ಮತ್ತು ನಿಮ್ಮ ಪತ್ನಿ ಸ್ವರ್ಗದಲ್ಲಿ ವಾಸಿಸಿರಿ; ಅಲ್ಲಿ ನೀವು ಇಚ್ಛಿಸುವ ಎಲ್ಲಾ ಕಡೆಗಳಿಂದ ಯಥೇಷ್ಟವಾಗಿ ತಿನ್ನಿರಿ. ಆದರೆ ಈ ಮರದ ಹತ್ತಿರ ಹೋಗಬೇಡಿ. ಹಾಗೇನಾದರೂ ಹೋದರೆ ನೀವು ಅಕ್ರಮಿಗಳಲ್ಲಿ ಸೇರಿದವರಾಗುವಿರಿ.”
Bakara 2:36
ಆದರೆ ಶೈತಾನನು ಅವರನ್ನು ತಪ್ಪುದಾರಿಗೆಳೆದು, ಅವರಿಬ್ಬರೂ ವಾಸವಾಗಿದ್ದಲ್ಲಿಂದ ಹೊರಹೋಗುವಂತೆ ಮಾಡಿದನು. ನಾವು ಹೇಳಿದೆವು: “ನೀವೆಲ್ಲರೂ ಇಳಿಯಿರಿ. ನೀವು ಪರಸ್ಪರ ವೈರಿಗಳಾಗಿದ್ದೀರಿ. ನಿಮಗೆ ಭೂಮಿಯಲ್ಲಿ ಒಂದು ಅವಧಿಯವರೆಗೆ ವಾಸಸ್ಥಳ ಹಾಗೂ ಜೀವನ ಸವಲತ್ತುಗಳಿವೆ.”
Bakara 2:37
ಆದಮ್ ತಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಕೆಲವು ವಚನಗಳನ್ನು ಕಲಿತುಕೊಂಡರು.[1] ಅಲ್ಲಾಹು ಅವರ ಪಶ್ಚಾತ್ತಾಪವನ್ನು ಸ್ವೀಕರಿಸಿದನು. ನಿಶ್ಚಯವಾಗಿಯೂ ಅವನು ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.
———
[1] ಈ ವಚನಗಳು ಏನೆಂದು ಸೂರ ಅಅ್‌ರಾಫ್ (7:23) ರಲ್ಲಿ ಉಲ್ಲೇಖಿಸಲಾಗಿದೆ.
Bakara 2:38
ನಾವು ಹೇಳಿದೆವು: “ನೀವೆಲ್ಲರೂ ಇಲ್ಲಿಂದ ಇಳಿಯಿರಿ. ನನ್ನಿಂದ ನಿಮಗೆ ಮಾರ್ಗದರ್ಶನವು ಬರುವಾಗ, ಆ ನನ್ನ ಮಾರ್ಗದರ್ಶನವನ್ನು ಯಾರು ಅನುಸರಿಸುತ್ತಾರೋ ಅವರಿಗೆ ಯಾವುದೇ ಭಯವಿಲ್ಲ; ಅವರು ದುಃಖಿಸುವುದೂ ಇಲ್ಲ.
Bakara 2:39
ಸತ್ಯನಿಷೇಧಿಗಳು ಹಾಗೂ ನಮ್ಮ ವಚನಗಳನ್ನು ತಿರಸ್ಕರಿಸಿದವರು ಯಾರೋ—ಅವರೇ ನರಕವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.”
Bakara 2:40
ಓ ಇಸ್ರಾಯೇಲ್ ಮಕ್ಕಳೇ![1] ನಾನು ನಿಮಗೆ ಅನುಗ್ರಹಿಸಿದ ನನ್ನ ಅನುಗ್ರಹಗಳನ್ನು ಸ್ಮರಿಸಿರಿ ಮತ್ತು ನನ್ನ ಕರಾರನ್ನು ನೆರವೇರಿಸಿರಿ. ನಿಮ್ಮ ಕರಾರನ್ನು ನಾನೂ ನೆರವೇರಿಸುವೆನು. ನೀವು ನನ್ನನ್ನು ಮಾತ್ರ ಭಯಪಡಿರಿ.
———
[1] ಇಸ್ರಾಯೇಲ್ ಪ್ರವಾದಿ ಯಾಕೂಬರ (ಅವರ ಮೇಲೆ ಶಾಂತಿಯಿರಲಿ) ಇನ್ನೊಂದು ಹೆಸರು. ಅವರಿಗೆ ಹನ್ನೆರಡು ಮಕ್ಕಳು. ಇವರ ಸಂತಾನ ಪರಂಪರೆಯು ಹನ್ನೆರಡು ಗೋತ್ರಗಳಾಗಿ ವಿಂಗಡನೆಯಾಗಿದ್ದವು. ಇವರನ್ನು ಇಸ್ರಾಯೇಲ್ ಮಕ್ಕಳು ಎಂದು ಕರೆಯಲಾಗುತ್ತದೆ. ಯಹೂದಿಗಳು ಮತ್ತು ಕ್ರೈಸ್ತರು ಈ ಪರಂಪರೆಯಲ್ಲಿ ಸೇರಿದವರು.
Bakara 2:41
ನಿಮ್ಮ ಬಳಿಯಿರುವ (ಗ್ರಂಥವನ್ನು) ದೃಢೀಕರಿಸುತ್ತಾ ನಾನು ಅವತೀರ್ಣಗೊಳಿಸಿದ (ಕುರ್‌ಆನ್‌ನಲ್ಲಿ) ವಿಶ್ವಾಸವಿಡಿ. ಅದನ್ನು ಮೊಟ್ಟಮೊದಲು ನಿಷೇಧಿಸುವವರು ನೀವಾಗಬೇಡಿ. ನನ್ನ ವಚನಗಳನ್ನು ಅಲ್ಪ ಬೆಲೆಗೆ ಮಾರಾಟ ಮಾಡಬೇಡಿ. ನನ್ನನ್ನು ಮಾತ್ರ ಭಯಪಡಿರಿ.
Bakara 2:42
ಸತ್ಯವನ್ನು ಮಿಥ್ಯದೊಂದಿಗೆ ಬೆರೆಸಬೇಡಿ. ತಿಳಿದವರಾಗಿದ್ದೂ ಸಹ ಸತ್ಯವನ್ನು ಮುಚ್ಚಿಡಬೇಡಿ.
Bakara 2:43
ನಮಾಝ್ ಸಂಸ್ಥಾಪಿಸಿರಿ ಮತ್ತು ಝಕಾತ್ ನೀಡಿರಿ; (ವಿಧೇಯತೆಯಿಂದ) ತಲೆಬಾಗುವವರೊಡನೆ ನೀವೂ ತಲೆಬಾಗಿರಿ.
Bakara 2:44
ನೀವು ಜನರಿಗೆ ಒಳಿತನ್ನು ಆದೇಶಿಸುತ್ತಾ ನಿಮ್ಮನ್ನು ನೀವೇ ಮರೆತು ಬಿಡುತ್ತೀರಾ? ನೀವಾದರೋ ಗ್ರಂಥವನ್ನು ಪಠಿಸುತ್ತಿದ್ದೀರಿ! ನೀವು ಆಲೋಚಿಸುವುದಿಲ್ಲವೇ?
Bakara 2:45
ತಾಳ್ಮೆ ಮತ್ತು ನಮಾಝಿನ ಮೂಲಕ ಸಹಾಯವನ್ನು ಬೇಡಿರಿ. ವಿನಮ್ರತೆಯಿಲ್ಲದವರಿಗೆ ಖಂಡಿತವಾಗಿಯೂ ಅದು ಬಹಳ ಕಷ್ಟವಾಗಿದೆ.
Bakara 2:46
ಅವರು (ವಿನಮ್ರತೆಯುಳ್ಳವರು) ಯಾರೆಂದರೆ, ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಖಂಡಿತವಾಗಿಯೂ ಭೇಟಿಯಾಗಲಿದ್ದೇವೆ ಮತ್ತು ಅವನ ಬಳಿಗೇ ಮರಳಲಿದ್ದೇವೆ ಎಂದು ದೃಢವಾಗಿ ನಂಬುವವರು.
Bakara 2:47
ಓ ಇಸ್ರಾಯೇಲ್ ಮಕ್ಕಳೇ! ನಾನು ನಿಮಗೆ ಅನುಗ್ರಹಿಸಿದ ನನ್ನ ಅನುಗ್ರಹವನ್ನು, ಮತ್ತು ನಾನು ನಿಮ್ಮನ್ನು ಸರ್ವಲೋಕದವರಿಗಿಂತ (ಎಲ್ಲಾ ಮನುಷ್ಯರಿಗಿಂತ) ಶ್ರೇಷ್ಠಗೊಳಿಸಿದ್ದನ್ನು ಸ್ಮರಿಸಿರಿ.
Bakara 2:48
ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ಯಾವುದೇ ಉಪಕಾರ ಮಾಡದ, ಅವನಿಂದ ಯಾವುದೇ ಶಿಫಾರಸು ಸ್ವೀಕರಿಸದ, ಅವನಿಂದ ಯಾವುದೇ ಪರಿಹಾರವನ್ನು ಪಡೆಯದ ಮತ್ತು ಅವರಿಗೆ ಯಾವುದೇ ಸಹಾಯವು ದೊರೆಯದ ಒಂದು ದಿನವನ್ನು (ಪುನರುತ್ಥಾನ ದಿನವನ್ನು) ಭಯಪಡಿರಿ.
Bakara 2:49
ನಾವು ನಿಮ್ಮನ್ನು ಫರೋಹನ ಜನರಿಂದ ರಕ್ಷಿಸಿದ ಸಂದರ್ಭ(ವನ್ನು ಸ್ಮರಿಸಿ). ಅವರು ನಿಮಗೆ ಕಠೋರ ಹಿಂಸೆ ನೀಡುತ್ತಿದ್ದರು; ನಿಮ್ಮ ಗಂಡು ಮಕ್ಕಳ ಕತ್ತು ಕೊಯ್ಯುತ್ತಿದ್ದರು ಮತ್ತು ನಿಮ್ಮ ಹೆಣ್ಣು ಮಕ್ಕಳನ್ನು ಜೀವಂತ ಉಳಿಸುತ್ತಿದ್ದರು. ಅದರಲ್ಲಿ (ನಿಮ್ಮನ್ನು ರಕ್ಷಿಸಿದ್ದರಲ್ಲಿ) ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಮಹಾ ಪರೀಕ್ಷೆಯಿತ್ತು.
Bakara 2:50
ನಾವು ಕಡಲನ್ನು ಸೀಳಿ ನಿಮ್ಮನ್ನು ರಕ್ಷಿಸಿದ, ಮತ್ತು ನೀವು ನೋಡುತ್ತಿದ್ದಂತೆಯೇ ಫರೋಹನ ಜನರನ್ನು ಮುಳುಗಿಸಿದ ಸಂದರ್ಭ(ವನ್ನು ಸ್ಮರಿಸಿ).
Bakara 2:51
ನಾವು ಮೂಸಾರಿಗೆ ನಲ್ವತ್ತು ರಾತ್ರಿಗಳನ್ನು ವಾಗ್ದಾನ ಮಾಡಿದ ಸಂದರ್ಭ. ನಂತರ, ಅವರ (ನಿರ್ಗಮನದ) ಬಳಿಕ ನೀವು ಕರುವನ್ನು ದೇವರಾಗಿ ಮಾಡಿಕೊಂಡಿರಿ ಮತ್ತು ಅಕ್ರಮಿಗಳಾಗಿ ಬಿಟ್ಟಿರಿ.[1]
———
[1] ಇಸ್ರಾಯೇಲ್ ಮಕ್ಕಳು ಫರೋಹನ ಸೈನ್ಯದಿಂದ ಪಾರಾಗಿ ಸೀನಾ ತಪ್ಪಲಿಗೆ ಬಂದು ನೆಲೆಸಿದರು. ಅಲ್ಲಿ ಅಲ್ಲಾಹನ ವಾಗ್ದಾನದಂತೆ ಮೂಸಾ (ಅವರ ಮೇಲೆ ಶಾಂತಿಯಿರಲಿ) ತೌರಾತ್ (ತೋರ) ಪಡೆಯಲು ನಲ್ವತ್ತು ದಿನ ತೂರ್ ಪರ್ವತಕ್ಕೆ ಹೋಗಿ ನೆಲೆಸಿದರು. ಮೂಸಾರ (ಅವರ ಮೇಲೆ ಶಾಂತಿಯಿರಲಿ) ನಿರ್ಗಮನದ ನಂತರ ಇಸ್ರಾಯೇಲ್ ಮಕ್ಕಳು ಸಾಮಿರಿ ಎಂಬಾತನ ಆದೇಶದಂತೆ ಕರುವಿನ ವಿಗ್ರಹವನ್ನು ಪೂಜಿಸತೊಡಗಿದರು.
Bakara 2:52
ನಂತರ ಅದರ ಬಳಿಕವೂ ನಾವು ನಿಮ್ಮನ್ನು ಕ್ಷಮಿಸಿದೆವು; ನೀವು ಕೃತಜ್ಞರಾಗುವಿರಿ ಎಂದು.
Bakara 2:53
ನಾವು ಮೂಸಾರಿಗೆ ಗ್ರಂಥವನ್ನು ಹಾಗೂ ಸತ್ಯಾಸತ್ಯ ವಿವೇಚಕವನ್ನು ನೀಡಿದ ಸಂದರ್ಭ. ನೀವು ಸನ್ಮಾರ್ಗ ಪಡೆಯುವುದಕ್ಕಾಗಿ.
Bakara 2:54
ಮೂಸಾ ತಮ್ಮ ಜನರೊಡನೆ ಹೇಳಿದ ಸಂದರ್ಭ: “ನನ್ನ ಜನರೇ! ಕರುವನ್ನು ದೇವರಾಗಿ ಮಾಡಿಕೊಳ್ಳುವ ಮೂಲಕ ನಿಶ್ಚಯವಾಗಿಯೂ ನೀವು ನಿಮ್ಮ ಮೇಲೆಯೇ ಅಕ್ರಮವೆಸಗಿದ್ದೀರಿ. ಆದ್ದರಿಂದ, ನೀವು ಪಶ್ಚಾತ್ತಾಪಪಟ್ಟು ನಿಮ್ಮ ಸೃಷ್ಟಿಕರ್ತನ ಕಡೆಗೆ ಮರಳಿರಿ; ನಿಮ್ಮನ್ನು ನೀವೇ ಕೊಲ್ಲಿರಿ.[1] ನಿಮ್ಮ ಸೃಷ್ಟಿಕರ್ತನ ದೃಷ್ಟಿಯಲ್ಲಿ ಅದೇ ನಿಮಗೆ ಶ್ರೇಷ್ಠವಾಗಿದೆ.” ಆಗ ಅಲ್ಲಾಹು ನಿಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸಿದನು. ನಿಶ್ಚಯವಾಗಿಯೂ ಅವನು ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.
———
[1] ಇಸ್ರಾಯೇಲ್ ಮಕ್ಕಳು ಮಾಡಿದ ಬಹುದೇವಾರಾಧನೆಗಾಗಿ ಮೂಸಾ (ಅವರ ಮೇಲೆ ಶಾಂತಿಯಿರಲಿ) ಅವರಿಗೆ ಛೀಮಾರಿ ಹಾಕಿದಾಗ ಅವರು ವಿಷಾದಿಸಿ ಪಶ್ಚಾತ್ತಾಪಪಡಲು ಮುಂದಾದರು. ಅವರು ಮಾಡಿದ ಪಾಪಕ್ಕೆ ಪರಿಹಾರವು ಅವರನ್ನೇ ಅವರು ಕೊಲ್ಲುವುದಾಗಿತ್ತು. ಇದನ್ನು ಎರಡು ರೀತಿಯಲ್ಲಿ ವಿವರಿಸಲಾಗಿದೆ: ಒಂದು, ಅವರನ್ನು ಎರಡು ಸಾಲುಗಳಾಗಿ ನಿಲ್ಲಿಸಿ ಒಬ್ಬರು ಇನ್ನೊಬ್ಬರನ್ನು ಕೊಲ್ಲಬೇಕೆಂದು ಆದೇಶಿಸಲಾಯಿತು. ಎರಡು, ಅವರಲ್ಲಿ ಈ ಪಾಪ ಮಾಡಿದವರನ್ನು ಪಾಪ ಮಾಡದವರು ಕೊಲ್ಲಬೇಕೆಂದು ಆದೇಶಿಸಲಾಯಿತು.
Bakara 2:55
“ಓ ಮೂಸಾ! ಅಲ್ಲಾಹನನ್ನು ನೇರವಾಗಿ ನೋಡುವ ತನಕ ನಾವು ನಿಮ್ಮಲ್ಲಿ ವಿಶ್ವಾಸವಿಡುವುದೇ ಇಲ್ಲ” ಎಂದು ನೀವು ಹೇಳಿದ ಸಂದರ್ಭ(ವನ್ನು ಸ್ಮರಿಸಿ). ಆಗ ನೀವು ನೋಡುತ್ತಿದ್ದಂತೆಯೇ ಮಿಂಚು ನಿಮ್ಮ ಮೇಲೆರಗಿ ಬಿಟ್ಟಿತು.
Bakara 2:56
ನಂತರ, ನಿಮ್ಮ ಸಾವಿನ ಬಳಿಕ ನಾವು ನಿಮಗೆ ಜೀವ ನೀಡಿದೆವು. ನೀವು ಕೃತಜ್ಞರಾಗುವುದಕ್ಕಾಗಿ.[1]
———
[1] ಮೂಸಾ (ಅವರ ಮೇಲೆ ಶಾಂತಿಯಿರಲಿ) ತೂರ್ ಪರ್ವತಕ್ಕೆ ಹೋಗುವಾಗ 70 ಮಂದಿಯನ್ನು ಕರೆದೊಯ್ದಿದ್ದರು. ಹಿಂದಿರುಗಿ ಬರುವಾಗ ಅವರು ಹೇಳಿದರು: "ಓ ಮೂಸಾ! ಅಲ್ಲಾಹನನ್ನು ನಮ್ಮ ಕಣ್ಣ ಮುಂದೆ ನೇರವಾಗಿ ನೋಡುವ ತನಕ ನಿಮ್ಮ ಮಾತಿನಲ್ಲಿ ನಾವು ನಂಬಿಕೆಯಿಡುವುದಿಲ್ಲ." ಆಗ ಇದ್ದಕ್ಕಿದ್ದಂತೆ ಆಕಾಶದಲ್ಲಿ ಮಿಂಚು ಗೋಚರವಾಗಿ ಅದು ಅವರ ಮೇಲೆ ಬಿದ್ದು ಅವರೆಲ್ಲರೂ ಸತ್ತರು. ಇದರಿಂದ ಮೂಸಾ (ಅವರ ಮೇಲೆ ಶಾಂತಿಯಿರಲಿ) ತುಂಬಾ ದುಃಖಿತರಾದರು. ನಂತರ ಅವರ ಪ್ರಾರ್ಥನೆಗೆ ಉತ್ತರವಾಗಿ ಅಲ್ಲಾಹು ಅವರನ್ನು ಜೀವಂತಗೊಳಿಸಿದನು.
Bakara 2:57
ನಾವು ನಿಮಗೆ ಮೋಡದ ನೆರಳನ್ನು ನೀಡಿದೆವು ಮತ್ತು ಮನ್ನ ಹಾಗೂ ಸಲ್ವಾವನ್ನು ಇಳಿಸಿಕೊಟ್ಟೆವು.[1] (ನಾವು ಹೇಳಿದೆವು): “ನಾವು ನಿಮಗೆ ಒದಗಿಸಿದ ಶುದ್ಧ ವಸ್ತುಗಳಿಂದ ತಿನ್ನಿರಿ.” ಅವರು ನಮಗೆ ಅನ್ಯಾಯ ಮಾಡಲಿಲ್ಲ; ಬದಲಿಗೆ, ಅವರು ಅವರಿಗೇ ಅನ್ಯಾಯ ಮಾಡುತ್ತಿದ್ದರು.
———
[1] ಮನ್ನ ಎಂದರೆ ಕೆಲವರ ಅಭಿಪ್ರಾಯ ಪ್ರಕಾರ ತರಂಜಬೀನ್ ಎಂಬ ಹೆಸರಿನ ಅಂಟು ತಿನಿಸು. ಇದು ಒಂಟೆಮುಳ್ಳು ಎಂಬ ಸಸ್ಯದ ಎಲೆ ಮತ್ತು ಕಾಂಡಗಳಲ್ಲಿ ಉತ್ಪಾದನೆಯಾಗುವ ರಾಳದಂತಹ ಸಿಹಿವಸ್ತುವಾಗಿದೆ. ಮನ್ನ ಎಂದರೆ ಮರ ಹಾಗೂ ಬಂಡೆಗಳ ಮೇಲೆ ಬೀಳುವ ಇಬ್ಬನಿಯೆಂದು ಕೆಲವರು ಹೇಳಿದ್ದಾರೆ. ಇದು ಜೇನಿನಂತೆ ಸಿಹಿಯಾಗಿರುತ್ತದೆ ಮತ್ತು ಒಣಗಿದಾಗ ಮೇಣದಂತಾಗುತ್ತದೆ. ಕೆಲವರು ಮನ್ನ ಎಂದರೆ ಜೇನು ಅಥವಾ ಸಿಹಿನೀರು ಎಂದಿದ್ದಾರೆ. ಸಲ್ವಾ ಎಂದರೆ ಲಾವಕ್ಕಿ ಅಥವಾ ಗುಬ್ಬಚ್ಚಿಯಂತಹ ಸಣ್ಣ ಹಕ್ಕಿಯಾಗಿದ್ದು ಇದನ್ನು ಕೊಯ್ದು ತಿನ್ನುತ್ತಾರೆ.
Bakara 2:58
ನಾವು ಹೇಳಿದ ಸಂದರ್ಭ(ವನ್ನು ಸ್ಮರಿಸಿ): “ಈ ಊರನ್ನು ಪ್ರವೇಶಿಸಿರಿ.[1] ಇಲ್ಲಿ ನೀವು ಇಚ್ಛಿಸುವ ಎಲ್ಲಾ ಕಡೆಗಳಿಂದ ಯಥೇಷ್ಟವಾಗಿ ತಿನ್ನಿರಿ. ಸಾಷ್ಟಾಂಗ ಮಾಡುತ್ತಾ[2] ದ್ವಾರವನ್ನು ಪ್ರವೇಶಿಸಿರಿ ಮತ್ತು ‘ಹಿತ್ತ’[3] ಎಂದು ಹೇಳಿರಿ. ನಾವು ನಿಮ್ಮ ಪಾಪಗಳನ್ನು ಕ್ಷಮಿಸುವೆವು ಮತ್ತು ಸತ್ಕರ್ಮವೆಸಗುವವರಿಗೆ ಪ್ರತಿಫಲವನ್ನು ಹೆಚ್ಚಿಸುವೆವು.”
———
[1] ಹೆಚ್ಚಿನ ವ್ಯಾಖ್ಯಾನಕಾರರ ಅಭಿಪ್ರಾಯ ಪ್ರಕಾರ ಆ ಊರು ಬೈತುಲ್ ಮುಕದ್ದಸ್. [2] ಸಾಷ್ಟಾಂಗ ಮಾಡುತ್ತಾ ಪ್ರವೇಶಿಸಿರಿ ಎಂದರೆ ತಲೆಬಾಗುತ್ತಾ ಪ್ರವೇಶಿಸಿರಿ ಎಂದು ಕೆಲವರು ಅರ್ಥ ನೀಡಿದ್ದಾರೆ. ಕೆಲವರು ಇದನ್ನು ಅಕ್ಷರಾರ್ಥದಲ್ಲಿ ಗೌರವದ ರೂಪದಲ್ಲಿ ಸಾಷ್ಟಾಂಗ ಮಾಡುತ್ತಾ ಪ್ರವೇಶಿಸಿರಿ ಎಂದು ಅರ್ಥ ನೀಡಿದ್ದಾರೆ. [3] ಹಿತ್ತ ಎಂದರೆ ನಮ್ಮ ಪಾಪಗಳನ್ನು ಮನ್ನಿಸು ಎಂದರ್ಥ.
Bakara 2:59
ಆದರೆ ಆ ಅಕ್ರಮಿಗಳು ಅವರಿಗೆ ಹೇಳಲಾದ ಮಾತನ್ನು ಬದಲಾಯಿಸಿದರು.[1] ಆದ್ದರಿಂದ, ನಾವು ಆ ಅಕ್ರಮಿಗಳ ಮೇಲೆ—ಅವರು ಮಾಡುತ್ತಿದ್ದ ದುಷ್ಕರ್ಮಗಳ ನಿಮಿತ್ತ—ಆಕಾಶದಿಂದ ಶಿಕ್ಷೆಯನ್ನು ಇಳಿಸಿದೆವು.
———
[1] ಅವರು ಸಾಷ್ಟಾಂಗ ಮಾಡುತ್ತಾ ಪ್ರವೇಶಿಸುವುದಕ್ಕೆ ಬದಲು, ಬಟ್ಟೆಯನ್ನು ನೆಲದಲ್ಲಿ ಎಳೆಯುತ್ತಾ ಎದೆಯುಬ್ಬಿಸಿ ಅಹಂಕಾರದಿಂದ ಪ್ರವೇಶಿಸಿದರು. ಹಿತ್ತ ಎಂದು ಹೇಳುವುದರ ಬದಲಿಗೆ ಬೇರೊಂದು ಮಾತನ್ನು ಹೇಳಿದರು. ಇದರಿಂದ ಅವರ ಅಹಂಕಾರ ಮತ್ತು ದೈವಿಕ ಆಜ್ಞೆಗೆ ಅವರು ತೋರುತ್ತಿದ್ದ ತಿರಸ್ಕಾರವನ್ನು ಅರ್ಥೈಸಬಹುದು.
Bakara 2:60
ಮೂಸಾ ತಮ್ಮ ಜನರಿಗಾಗಿ ನೀರನ್ನು ಬೇಡಿದ ಸಂದರ್ಭ. ನಾವು ಹೇಳಿದೆವು: “ನಿಮ್ಮ ಕೈಯಲ್ಲಿರುವ ಕೋಲಿನಿಂದ ಆ ಬಂಡೆಯ ಮೇಲೆ ಹೊಡೆಯಿರಿ.” ಆಗ ಅದರಿಂದ ಹನ್ನೆರಡು ಚಿಲುಮೆಗಳು ಚಿಮ್ಮಿ ಹರಿದವು.[1] ಎಲ್ಲಾ ಜನರೂ (ಗೋತ್ರಗಳೂ) ತಮ್ಮ ನೀರಿನ ಸ್ಥಳವನ್ನು ತಿಳಿದುಕೊಂಡರು. (ನಾವು ಹೇಳಿದೆವು): “ಅಲ್ಲಾಹು ಒದಗಿಸಿದ ಆಹಾರದಿಂದ ತಿನ್ನಿರಿ ಮತ್ತು ಕುಡಿಯಿರಿ; ಭೂಮಿಯಲ್ಲಿ ಕಿಡಿಗೇಡಿತನ ಮಾಡುತ್ತಾ ಅಲೆಯಬೇಡಿ."
———
[1] ಇಸ್ರಾಯೇಲ್ ಮಕ್ಕಳ ಹನ್ನೆರಡು ಗೋತ್ರಗಳಿಗೆ ಹನ್ನೆರಡು ಚಿಲುಮೆಗಳು.
Bakara 2:61
ನೀವು ಹೇಳಿದ ಸಂದರ್ಭ(ವನ್ನು ಸ್ಮರಿಸಿ): “ಓ ಮೂಸಾ! ಒಂದೇ ರೀತಿಯ ಆಹಾರವನ್ನು ಸಹಿಸಿಕೊಂಡಿರಲು ನಮಗೆ ಸಾಧ್ಯವೇ ಇಲ್ಲ. ಆದ್ದರಿಂದ ನೀವು ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿರಿ. ಅವನು ನಮಗೆ ಭೂಮಿಯಲ್ಲಿ ಬೆಳೆಯುವ ಸೊಪ್ಪು, ಸೌತೆ, ಗೋಧಿ, ಮಸೂರ ಮತ್ತು ಈರುಳ್ಳಿಯನ್ನು ಉತ್ಪಾದಿಸಿಕೊಡಲಿ.” ಮೂಸಾ ಹೇಳಿದರು: “ಅತ್ಯುತ್ತಮ ವಸ್ತುವನ್ನು ಬಿಟ್ಟು ಕಳಪೆ ವಸ್ತುವನ್ನು ಏಕೆ ಕೇಳುತ್ತೀರಿ? ನೀವು ಯಾವುದಾದರೂ ನಗರಕ್ಕೆ ಹೋಗಿರಿ. ಅಲ್ಲಿ ನೀವು ಕೇಳಿದ್ದೆಲ್ಲವೂ ನಿಮಗೆ ಸಿಗುವುದು.” (ಅವರ ದರ್ಪದಿಂದಾಗಿ) ಅವರ ಮೇಲೆ ಅಪಮಾನ ಹಾಗೂ ಬಡತನವನ್ನು ಹೊದಿಸಲಾಯಿತು; ಅವರು ಅಲ್ಲಾಹನ ಕೋಪದೊಂದಿಗೆ ಮರಳಿದರು. ಅದೇಕೆಂದರೆ, ಅವರು ಅಲ್ಲಾಹನ ವಚನಗಳನ್ನು ನಿಷೇಧಿಸುತ್ತಿದ್ದರು ಮತ್ತು ಪ್ರವಾದಿಗಳನ್ನು ಅನ್ಯಾಯವಾಗಿ ಕೊಲ್ಲುತ್ತಿದ್ದರು. ಅದು ಅವರ ಅವಿಧೇಯತೆ ಮತ್ತು ಅತಿರೇಕದ ಫಲಿತಾಂಶವಾಗಿತ್ತು.
Bakara 2:62
ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು, ಯಹೂದಿಗಳು, ಕ್ರೈಸ್ತರು ಅಥವಾ ಸಾಬಿಗಳು—ಇವರ ಪೈಕಿ ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಟ್ಟವರು ಹಾಗೂ ಸತ್ಕರ್ಮವೆಸಗಿದವರು ಯಾರೋ, ಅವರಿಗೆ ಅವರ ಪ್ರತಿಫಲವು ಅವರ ಪರಿಪಾಲಕನ (ಅಲ್ಲಾಹನ) ಬಳಿಯಿದೆ. ಅವರಿಗೆ ಯಾವುದೇ ಭಯವಿಲ್ಲ; ಅವರು ದುಃಖಿಸುವುದೂ ಇಲ್ಲ.[1]
———
[1] ಕೆಲವರು ಈ ವಚನವನ್ನು ತಪ್ಪಾಗಿ ಅರ್ಥಮಾಡಿಕೊಂಡು 'ಧರ್ಮಗಳ ಏಕತೆ' ಎಂಬ ಹೊಸ ಸಿದ್ಧಾಂತವನ್ನು ಸ್ಥಾಪಿಸಿದ್ದಾರೆ. ಅವರ ಪ್ರಕಾರ ಇಸ್ಲಾಂ ಧರ್ಮದಲ್ಲಿ ವಿಶ್ವಾಸವಿಡುವುದು ಕಡ್ಡಾಯವಲ್ಲ. ಯಾವುದೇ ಧರ್ಮದಲ್ಲಿದ್ದು ಏಕದೇವನನ್ನು ಆರಾಧಿಸಿ ಒಳಿತು ಮಾಡಿದರೆ ಅವರಿಗೆ ಮೋಕ್ಷ ಸಿಗುತ್ತದೆ. ಇದು ಅತ್ಯಂತ ಹೊಲಸು ಸಿದ್ಧಾಂತವಾಗಿದ್ದು ಕುರ್‌ಆನಿನ ಬೋಧನೆಗಳಿಗೆ ವಿರುದ್ಧವಾಗಿದೆ. ಈ ವಚನದ ನಿಜವಾದ ಅರ್ಥವೇನೆಂದರೆ, ಮೇಲಿನ ವಚನಗಳಲ್ಲಿ ಯಹೂದಿಗಳ ಅವಿಧೇಯತೆ, ಅಹಂಕಾರ ಮತ್ತು ಅತಿರೇಕಗಳ ಬಗ್ಗೆ ಪ್ರಸ್ತಾಪಿಸಿ, ಅವರಿಗೆ ನೀಡಲಾದ ಶಿಕ್ಷೆಯ ಬಗ್ಗೆಯೂ ಪ್ರಸ್ತಾಪಿಸಲಾದಾಗ, ಸ್ವಾಭಾವಿಕವಾಗಿ ಒಂದು ಪ್ರಶ್ನೆ ಉದ್ಭವವಾಗುತ್ತದೆ. ಹಾಗಾದರೆ, ಯಹೂದಿಗಳಲ್ಲಿ ಒಳ್ಳೆಯವರು ಯಾರೂ ಇರಲಿಲ್ಲವೇ? ಇದ್ದರೆ ಅವರಿಗೆ ಅಲ್ಲಾಹು ಏನು ಪ್ರತಿಫಲ ನೀಡಿದ್ದಾನೆ? ಇದಕ್ಕೆ ಉತ್ತರವಾಗಿ, ಈ ವಚನ ಅವತೀರ್ಣವಾಗಿದೆ. ಅಂದರೆ, ಯಹೂದಿಗಳಲ್ಲಿ ಮಾತ್ರವಲ್ಲ, ಕ್ರೈಸ್ತರು, ಸಾಬಿಗಳು ಮುಂತಾದವರಲ್ಲಿಯೂ ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ಆಗಮನಕ್ಕೆ ಮುಂಚೆ ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ವಿಶ್ವಾಸವಿಟ್ಟು, ಸತ್ಕಾರ್ಯಗಳನ್ನು ಮಾಡಿದ್ದರೆ ಅವರೆಲ್ಲರೂ ಮೋಕ್ಷ ಪಡೆಯುತ್ತಾರೆ. ಅದೇ ರೀತಿ, ಈಗ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ಸಂದೇಶದಲ್ಲಿ ವಿಶ್ವಾಸವಿಡುವವರು ಕೂಡ ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ಸರಿಯಾಗಿ ವಿಶ್ವಾಸವಿಟ್ಟು ಸತ್ಕಾರ್ಯಗಳನ್ನು ಮಾಡಿದರೆ ಅವರು ಕೂಡ ಮೋಕ್ಷ ಪಡೆಯುತ್ತಾರೆ. [ನೋಡಿ: 3:19, 3:85]
Bakara 2:63
ನಾವು ನಿಮ್ಮಿಂದ ಕರಾರನ್ನು ಪಡೆದುಕೊಂಡ ಮತ್ತು ನಿಮ್ಮ ಮೇಲೆ ತೂರ್ ಪರ್ವತವನ್ನು ಎತ್ತಿಹಿಡಿದ ಸಂದರ್ಭ. (ನಾವು ಹೇಳಿದೆವು): “ನಾವು ನಿಮಗೆ ನೀಡಿದ್ದನ್ನು ಬಿಗಿಯಾಗಿ ಹಿಡಿಯಿರಿ ಮತ್ತು ಅದರಲ್ಲಿರುವುದನ್ನು ನೆನಪಿಟ್ಟುಕೊಳ್ಳಿರಿ; ನೀವು ದೇವಭಯವುಳ್ಳವರಾಗುವುದಕ್ಕಾಗಿ.”
Bakara 2:64
ನಂತರ, ಅದರ ಬಳಿಕವೂ ನೀವು ವಿಮುಖರಾದಿರಿ. ನಿಮ್ಮ ಮೇಲೆ ಅಲ್ಲಾಹನ ಔದಾರ್ಯ ಮತ್ತು ದಯೆಯಿಲ್ಲದಿರುತ್ತಿದ್ದರೆ, ನೀವು ನಷ್ಟ ಹೊಂದಿದವರಲ್ಲಿ ಸೇರುತ್ತಿದ್ದಿರಿ.
Bakara 2:65
ನಿಮ್ಮ ಪೈಕಿ ಸಬ್ಬತ್‌ನ[1] ವಿಷಯದಲ್ಲಿ ಅತಿರೇಕವೆಸಗಿದವರ ಬಗ್ಗೆ ನಿಮಗೆ ಈಗಾಗಲೇ ತಿಳಿದಿದೆ. ನಾವು ಅವರೊಡನೆ ಹೇಳಿದೆವು: “ನೀವು ಹೊಲಸು ಕಪಿಗಳಾಗಿ ಬಿಡಿ.”
———
[1] ಸಬ್ಬತ್ ಎಂದರೆ ಶನಿವಾರ. ಅಂದು ಯಹೂದಿಗಳಿಗೆ ಮೀನು ಹಿಡಿಯುವುದು ಹಾಗೂ ಇತರ ಎಲ್ಲಾ ಲೌಕಿಕ ಕೆಲಸ ಮಾಡುವುದನ್ನು ನಿಷೇಧಿಸಲಾಗಿತ್ತು. ಅವರಿಗೆ ಒಂದು ಪರೀಕ್ಷೆಯೋ ಎಂಬಂತೆ ಶನಿವಾರ ಮೀನುಗಳು ಹೆಚ್ಚು ಹೆಚ್ಚಾಗಿ ಕಾಣುತ್ತಿದ್ದವು. ಆದ್ದರಿಂದ, ಅವರು ಶನಿವಾರ ಬಲೆ ಹಾಕಿ ಭಾನುವಾರ ಮೀನು ಹಿಡಿಯುವ ಉಪಾಯ ಮಾಡಿದರು. ಇದು ದೈವಿಕ ಆಜ್ಞೆಯ ಸ್ಪಷ್ಟ ಉಲ್ಲಂಘನೆಯಾಗಿತ್ತು.
Bakara 2:66
ನಾವು ಅದನ್ನು ಆ ಕಾಲದವರಿಗೂ, ಅದರ ನಂತರದವರಿಗೂ ಒಂದು ನೀತಿಪಾಠ ಮತ್ತು ದೇವಭಯವುಳ್ಳವರಿಗೆ ಉಪದೇಶವೆಂಬಂತೆ ಮಾಡಿದೆವು.
Bakara 2:67
ಮೂಸಾ ತಮ್ಮ ಜನರೊಡನೆ ಹೇಳಿದ ಸಂದರ್ಭ: “ಅಲ್ಲಾಹು ನಿಮ್ಮೊಡನೆ ಒಂದು ಹಸುವನ್ನು ಕೊಯ್ಯಲು ಆದೇಶಿಸುತ್ತಿದ್ದಾನೆ.”[1] ಅವರು ಕೇಳಿದರು: “ಏನು ನೀವು ನಮ್ಮನ್ನು ಅಣಕಿಸುತ್ತಿದ್ದೀರಾ?” ಮೂಸಾ ಹೇಳಿದರು: “ಅವಿವೇಕಿಗಳಲ್ಲಿ ಸೇರದಂತೆ ನಾನು ಅಲ್ಲಾಹನಲ್ಲಿ ಅಭಯ ಕೋರುತ್ತೇನೆ.”
———
[1] ಇಸ್ರಾಯೇಲರಲ್ಲಿ ಒಬ್ಬ ಮಕ್ಕಳಿಲ್ಲದ ಶ್ರೀಮಂತ ವ್ಯಕ್ತಿಯಿದ್ದ. ಅವನ ಸೋದರಳಿಯ ಮಾತ್ರ ಅವನ ವಾರೀಸುದಾರನಾಗಿದ್ದ. ಒಂದು ರಾತ್ರಿ ಸೋದರಳಿಯ ಚಿಕ್ಕಪ್ಪನನ್ನು ಕೊಂದು ಶವವನ್ನು ಬೇರೊಬ್ಬ ವ್ಯಕ್ತಿಯ ಮನೆಯ ಬಾಗಿಲ ಬಳಿ ಹಾಕಿದ. ಬೆಳಗಾದಾಗ, ಕೊಲೆಗಾರನ ಹುಡುಕಾಟದಲ್ಲಿ ಇಸ್ರಾಯೇಲರು ಪರಸ್ಪರ ಜಗಳ ಮಾಡತೊಡಗಿದರು. ಅಂತಿಮವಾಗಿ, ವಿಷಯವು ಮೂಸಾರ (ಅವರ ಮೇಲೆ ಶಾಂತಿಯಿರಲಿ) ಬಳಿ ತಲುಪಿತು. ಆಗ ಅವರು, "ಒಂದು ಹಸುವನ್ನು ಕೊಯ್ದು ಅದರ ಒಂದು ಅಂಗದಿಂದ ಸತ್ತ ವ್ಯಕ್ತಿಗೆ ಬಡಿಯಿರಿ; ಆಗ ಆತ ಜೀವಂತ ಎದ್ದು ಕೊಲೆಗಾರ ಯಾರೆಂದು ಹೇಳುತ್ತಾನೆ" ಎಂದರು. ಮೂಸಾರ ಮಾತು ಕೇಳಿದಾಗ ಅವರೆಲ್ಲರೂ ಗೊಳ್ಳೆಂದು ನಕ್ಕರು.
Bakara 2:68
ಅವರು ಹೇಳಿದರು:”ನೀವು ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿರಿ; ಅದು (ಹಸು) ಯಾವುದೆಂದು ಅವನು ನಮಗೆ ವಿವರಿಸಿಕೊಡಲಿ.” ಮೂಸಾ ಹೇಳಿದರು: “ಅದು ಮುದಿ ಪ್ರಾಯದ್ದೋ ಅಥವಾ ಎಳೆಯ ಪ್ರಾಯದ್ದೋ ಅಲ್ಲದ ಅದರ ನಡುವಿನ ಪ್ರಾಯದ ಹಸುವಾಗಿದೆಯೆಂದು ಅವನು ಹೇಳುತ್ತಿದ್ದಾನೆ. ಆದ್ದರಿಂದ ನಿಮಗೆ ಆದೇಶಿಸಲಾಗುವಂತೆ ಕಾರ್ಯೋನ್ಮುಖರಾಗಿರಿ.”
Bakara 2:69
ಅವರು ಹೇಳಿದರು: “ನೀವು ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿರಿ; ಅದರ ಬಣ್ಣ ಯಾವುದೆಂದು ಅವನು ನಮಗೆ ವಿವರಿಸಿಕೊಡಲಿ.” ಮೂಸಾ ಹೇಳಿದರು: “ಅದು ಶುಭ್ರ ಹಳದಿ ಬಣ್ಣದ ಹಸುವಾಗಿದ್ದು ನೋಡುಗರನ್ನು ಮುದಗೊಳಿಸುತ್ತದೆ ಎಂದು ಅವನು (ಅಲ್ಲಾಹು) ಹೇಳುತ್ತಿದ್ದಾನೆ.”
Bakara 2:70
ಅವರು ಹೇಳಿದರು: “ನೀವು ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿರಿ; ಅದು (ಹಸು) ಯಾವುದೆಂದು ಅವನು ನಮಗೆ ವಿವರಿಸಿಕೊಡಲಿ. ನಿಶ್ಚಯವಾಗಿಯೂ ಹಸುಗಳು ನಮಗೆ ಒಂದೇ ರೀತಿಯಾಗಿ ಕಾಣುತ್ತಿವೆ.[1] ಅಲ್ಲಾಹು ಇಚ್ಛಿಸಿದರೆ ಖಂಡಿವಾಗಿಯೂ ನಾವು ಸನ್ಮಾರ್ಗವನ್ನು ಪಡೆಯುವೆವು.”
———
[1] ನೀವು ವಿವರಿಸಿದ ಗುಣಗಳಿರುವ ಹಲವಾರು ಹಸುಗಳಿವೆ. ನಾವು ಯಾವುದನ್ನು ಕೊಯ್ಯಬೇಕು? ಒಂದು ನಿರ್ದಿಷ್ಟ ಹಸುವಿನ ಬಗ್ಗೆ ನಮಗೆ ವಿವರಿಸಿಕೊಡಿ.
Bakara 2:71
ಮೂಸಾ ಹೇಳಿದರು: “ಅದು ಎಂತಹ ಹಸುವೆಂದರೆ, ಭೂಮಿಯನ್ನು ಉಳಲು ಅಥವಾ ನೀರನ್ನು ಹಾಯಿಸಲು ಅದನ್ನು ಪಳಗಿಸಲಾಗಿಲ್ಲ; ಅದಕ್ಕೆ ಯಾವುದೇ ನ್ಯೂನತೆಗಳಿಲ್ಲ; ಅದರಲ್ಲಿ ಯಾವುದೇ ಕಲೆಗಳೂ ಇಲ್ಲ ಎಂದು ಅಲ್ಲಾಹು ಹೇಳುತ್ತಿದ್ದಾನೆ.” ಅವರು ಹೇಳಿದರು: “ಈಗ ನೀವು ಸತ್ಯವನ್ನು ತಂದಿದ್ದೀರಿ.” ಹೀಗೆ ಅವರು ಅದನ್ನು ಕೊಯ್ದರು. ಆದರೆ ಅದನ್ನು ಮಾಡುವುದು ಅವರಿಗೆ ಅಷ್ಟು ಸುಲಭವಾಗಿರಲಿಲ್ಲ.[1]
———
[1] ಮೂಸಾ (ಅವರ ಮೇಲೆ ಶಾಂತಿಯಿರಲಿ) ಒಂದು ಹಸುವನ್ನು ಕೊಯ್ಯಲು ಹೇಳಿದ್ದರು. ನಿರ್ದಿಷ್ಟವಾಗಿ ಯಾವುದು ಎಂದು ಹೇಳಿರಲಿಲ್ಲ. ಆದ್ದರಿಂದ ಯಾವುದೇ ಒಂದು ಹಸುವನ್ನು ಕೊಯ್ದರೆ ಸಾಕಾಗುತ್ತಿತ್ತು. ಆದರೆ ಅವರು ವಿನಾಕಾರಣ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿ ವಿಷಯವನ್ನು ಜಟಿಲಗೊಳಿಸಿದರು. ಕೊನೆಗೆ ಮೂಸಾ (ಅವರ ಮೇಲೆ ಶಾಂತಿಯಿರಲಿ) ಹೇಳಿದಂತಹ ಒಂದು ಹಸುವನ್ನು ಹುಡುಕಿ ತರುವುದು ಅವರಿಗೆ ಬಹಳ ಕಷ್ಟವಾಯಿತು.
Bakara 2:72
ನೀವು ಒಬ್ಬ ವ್ಯಕ್ತಿಯನ್ನು ಕೊಂದು, ನಂತರ ಪರಸ್ಪರ ದೋಷಾರೋಪ ಹೊರಿಸಿದ ಸಂದರ್ಭ. ನೀವು ಬಚ್ಚಿಡುವುದನ್ನು ಅಲ್ಲಾಹು ಹೊರಗೆ ತರುತ್ತಾನೆ.
Bakara 2:73
ನಾವು ಹೇಳಿದೆವು: “ಅದರ (ಹಸುವಿನ) ಒಂದು ಭಾಗದಿಂದ ಅವನಿಗೆ (ಅವನ ಕಳೇಬರಕ್ಕೆ) ಹೊಡೆಯಿರಿ. (ಆಗ ಅವನು ಜೀವಂತ ಎದ್ದು ನಿಲ್ಲುವನು).” ಈ ರೀತಿ ಅಲ್ಲಾಹು ಸತ್ತವರಿಗೆ ಜೀವ ನೀಡುತ್ತಾನೆ. ನೀವು ಆಲೋಚಿಸುವುದಕ್ಕಾಗಿ ಅವನು ಅವನ ದೃಷ್ಟಾಂತಗಳನ್ನು ನಿಮಗೆ ತೋರಿಸುತ್ತಾನೆ.
Bakara 2:74
ನಂತರ, ಅದರ ಬಳಿಕವೂ ನಿಮ್ಮ ಹೃದಯಗಳು ಕಠೋರವಾದವು. ಅವು ಬಂಡೆಯಂತೆ ಅಥವಾ ಅದಕ್ಕಿಂತಲೂ ಹೆಚ್ಚು ಕಠೋರವಾದವು. ನಿಶ್ಚಯವಾಗಿಯೂ, ಕೆಲವು ಬಂಡೆಗಳಿಂದ ನದಿಗಳು ಚಿಮ್ಮಿ ಹರಿಯುತ್ತವೆ; ಕೆಲವು ಬಂಡೆಗಳು ಒಡೆದು ನೀರು ಹೊರಬರುತ್ತದೆ; ಕೆಲವು ಬಂಡೆಗಳು ಅಲ್ಲಾಹನ ಭಯದಿಂದ ಉರುಳಿ ಬೀಳುತ್ತವೆ. ನೀವು ಮಾಡುತ್ತಿರುವ ಕರ್ಮಗಳ ಕುರಿತು ಅಲ್ಲಾಹು ತಿಳಿಯದವನಲ್ಲ.
Bakara 2:75
(ಸತ್ಯವಿಶ್ವಾಸಿಗಳೇ!), ಅವರು ವಿಶ್ವಾಸವಿಡುವರೆಂದು ನೀವು ಹಾರೈಸುತ್ತೀರಾ? ವಾಸ್ತವದಲ್ಲಿ, ಅವರಲ್ಲೊಂದು ಗುಂಪು ಅಲ್ಲಾಹನ ವಚನಗಳಿಗೆ ಕಿವಿಗೊಡುತ್ತಾರೆ; ನಂತರ, ಅದನ್ನು ಸರಿಯಾಗಿ ಅರ್ಥಮಾಡಿಕೊಂಡ ಬಳಿಕ, ತಿಳುವಳಿಕೆಯುಳ್ಳವರಾಗಿದ್ದೂ ಸಹ ಅವರು ಅದನ್ನು ವಿರೂಪಗೊಳಿಸುತ್ತಾರೆ.
Bakara 2:76
ಸತ್ಯವಿಶ್ವಾಸಿಗಳನ್ನು ಭೇಟಿ ಮಾಡಿದರೆ ಅವರು ಹೇಳುತ್ತಾರೆ: “ನಾವು ವಿಶ್ವಾಸವಿಟ್ಟಿದ್ದೇವೆ.” ಆದರೆ ಅವರು ಪರಸ್ಪರ ಏಕಾಂತದಲ್ಲಿರುವಾಗ ಹೇಳುತ್ತಾರೆ: “ಅಲ್ಲಾಹು ನಿಮಗೆ ತಿಳಿಸಿಕೊಟ್ಟ ವಿಷಯಗಳನ್ನು ನೀವೇಕೆ ಅವರಿಗೆ ತಿಳಿಸುತ್ತೀರಿ? ಅವರು ಅದನ್ನು ಹಿಡಿದು ನಿಮ್ಮ ಪರಿಪಾಲಕನ (ಅಲ್ಲಾಹನ) ಮುಂದೆ ನಿಮ್ಮೊಡನೆ ತರ್ಕಿಸುವುದಕ್ಕೋ? ನೀವು ಆಲೋಚಿಸುವುದಿಲ್ಲವೇ?”
Bakara 2:77
ಆದರೆ ಅವರು ಮುಚ್ಚಿಡುವುದನ್ನು ಮತ್ತು ಬಹಿರಂಗಪಡಿಸುವುದನ್ನು ಅಲ್ಲಾಹು ತಿಳಿಯುತ್ತಾನೆಂದು ಅವರಿಗೆ ತಿಳಿದಿಲ್ಲವೇ?
Bakara 2:78
ಅವರಲ್ಲಿ ಕೆಲವು ಅನಕ್ಷರಸ್ಥರಿದ್ದಾರೆ; ಅವರಿಗೆ ಗ್ರಂಥದಲ್ಲಿ ಏನಿದೆಯೆಂದೇ ತಿಳಿದಿಲ್ಲ. ಅವರು ಕೆಲವು ಗುಮಾನಿಗಳನ್ನಷ್ಟೇ ಹೊಂದಿದ್ದಾರೆ. ಅವರು ಕೇವಲ ಊಹಿಸುವುದನ್ನಷ್ಟೇ ಮಾಡುತ್ತಾರೆ.
Bakara 2:79
ಆದ್ದರಿಂದ, ತಮ್ಮ ಕೈಗಳಿಂದ ಗ್ರಂಥವನ್ನು ಬರೆದು, ನಂತರ ಅದರ ಮೂಲಕ ತುಚ್ಛ ಬೆಲೆಯನ್ನು ಪಡೆಯಲು “ಇದು ಅಲ್ಲಾಹನಿಂದ ಬಂದಿದೆ” ಎಂದು ಹೇಳುವವರಿಗೆ ವಿನಾಶ ಕಾದಿದೆ. ಅವರ ಕೈಗಳು ಬರೆದಿರುವುದಕ್ಕೆ ಅವರಿಗೆ ವಿನಾಶವಿದೆ; ಅವರು ಸಂಪಾದಿಸಿರುವುದಕ್ಕೂ ಅವರಿಗೆ ವಿನಾಶವಿದೆ.
Bakara 2:80
ಅವರು ಹೇಳಿದರು: “ಬೆರಳೆಣಿಕೆಯ ಕೆಲವು ದಿನಗಳು ಮಾತ್ರ ನರಕಾಗ್ನಿಯು ನಮ್ಮನ್ನು ಸ್ಪರ್ಶಿಸುತ್ತದೆ.”[1] ಹೇಳಿರಿ: “ನೀವೇನಾದರೂ ಅಲ್ಲಾಹನಿಂದ ಕರಾರು ಪಡೆದಿದ್ದೀರಾ? ಹಾಗಿದ್ದರೆ ಅಲ್ಲಾಹು ಅವನ ಕರಾರನ್ನು ಎಂದಿಗೂ ಉಲ್ಲಂಘಿಸುವುದಿಲ್ಲ. ಅಥವಾ ನೀವು ಅಲ್ಲಾಹನ ಬಗ್ಗೆ ನಿಮಗೆ ಗೊತ್ತಿಲ್ಲದ್ದನ್ನು ಹೇಳುತ್ತಿದ್ದೀರಾ?”
———
[1] ಅಂದರೆ ನಮ್ಮ ಪಾಪಗಳ ಕಾರಣ ನಾವು ನರಕಕ್ಕೆ ಹೋಗಬೇಕಾಗಿ ಬಂದರೂ ಅದು ಬೆರಳೆಣಿಕೆಯ ಕೆಲವು ದಿನಗಳವರೆಗೆ ಮಾತ್ರ.
Bakara 2:81
ಹೌದು! ಯಾರು ಕೆಡುಕು ಮಾಡುತ್ತಾನೋ ಮತ್ತು ಯಾರನ್ನು ಅವನ ಪಾಪವು ಸುತ್ತುವರಿದಿದೆಯೋ—ಅವರೇ ನರಕವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
Bakara 2:82
ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ—ಅವರೇ ಸ್ವರ್ಗವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
Bakara 2:83
“ಅಲ್ಲಾಹನನ್ನು ಬಿಟ್ಟು ಬೇರೆ ಯಾರನ್ನೂ ಆರಾಧಿಸಬೇಡಿ, ಮಾತಾಪಿತರಿಗೆ, ಸಂಬಂಧಿಕರಿಗೆ, ಅನಾಥರಿಗೆ ಹಾಗೂ ಬಡವರಿಗೆ ಒಳಿತು ಮಾಡಿರಿ; ಜನರೊಡನೆ ಒಳ್ಳೆಯ ಮಾತನ್ನು ಆಡಿರಿ; ನಮಾಝ್ ಸಂಸ್ಥಾಪಿಸಿರಿ ಮತ್ತು ಝಕಾತ್ ನೀಡಿರಿ" ಎಂದು (ಆದೇಶಿಸುತ್ತಾ) ನಾವು ಇಸ್ರಾಯೇಲ್ ಮಕ್ಕಳಿಂದ ಕರಾರು ಪಡೆದ ಸಂದರ್ಭ. ನಂತರ, ನಿಮ್ಮಲ್ಲಿ ಕೆಲವರ ಹೊರತು ಉಳಿದವರೆಲ್ಲವರೂ ನಿರ್ಲಕ್ಷಿಸುತ್ತಾ ವಿಮುಖರಾದಿರಿ.
Bakara 2:84
“ನೀವು ನಿಮ್ಮವರ ರಕ್ತ ಹರಿಸಬೇಡಿ ಮತ್ತು ನಿಮ್ಮ ಮನೆಗಳಿಂದ ನಿಮ್ಮವರನ್ನು ಹೊರಹಾಕಬೇಡಿ" ಎಂದು (ಆದೇಶಿಸುತ್ತಾ) ನಾವು ನಿಮ್ಮಿಂದ ಕರಾರು ಪಡೆದ ಸಂದರ್ಭ. ನಂತರ ನೀವು ಸಾಕ್ಷಿ ವಹಿಸುತ್ತಾ ಅದನ್ನು ಒಪ್ಪಿಕೊಂಡಿರಿ.
Bakara 2:85
ನಂತರ, ನೀವು ನಿಮ್ಮವರನ್ನೇ ಕೊಲ್ಲುತ್ತೀರಿ, ನಿಮ್ಮವರ ಒಂದು ಗುಂಪನ್ನು ಅವರ ಮನೆಗಳಿಂದ ಹೊರಹಾಕುತ್ತೀರಿ; ಪಾಪ ಮತ್ತು ಅತಿರೇಕದಲ್ಲಿ ಅವರ ವಿರುದ್ಧ ಪರಸ್ಪರ ಸಹಕರಿಸುತ್ತೀರಿ; ಅವರು ನಿಮ್ಮ ಬಳಿಗೆ ಸೆರೆಯಾಳುಗಳಾಗಿ ಬಂದರೆ ಅವರಿಗೆ ಪರಿಹಾರವನ್ನು ನೀಡುತ್ತೀರಿ. ವಾಸ್ತವದಲ್ಲಿ, ಅವರನ್ನು ಹೊರಹಾಕುವುದನ್ನು ನಿಮಗೆ ನಿಷೇಧಿಸಲಾಗಿದ್ದರೂ (ನೀವು ಅದರ ಬಗ್ಗೆ ಯೋಚಿಸುವುದೇ ಇಲ್ಲ). ಹಾಗಾದರೆ, ನೀವು ಗ್ರಂಥದ ಕೆಲವು ಭಾಗಗಳಲ್ಲಿ ನಂಬಿಕೆಯಿಟ್ಟು ಕೆಲವು ಭಾಗಗಳನ್ನು ನಿಷೇಧಿಸುತ್ತೀರಾ? ನಿಮ್ಮ ಪೈಕಿ ಹೀಗೆ ಮಾಡುವವರಿಗೆ ಇಹಲೋಕದಲ್ಲಿ ಅವಮಾನವಲ್ಲದೆ ಇನ್ನೇನು ಪ್ರತಿಫಲವಿರಲು ಸಾಧ್ಯ? ಪುನರುತ್ಥಾನ ದಿನ ಅವರನ್ನು ಅತಿಕಠೋರ ಶಿಕ್ಷೆಗೆ ಮರಳಿಸಲಾಗುವುದು. ನೀವು ಮಾಡುತ್ತಿರುವ ಕರ್ಮಗಳ ಕುರಿತು ಅಲ್ಲಾಹು ತಿಳಿಯದವನಲ್ಲ.[1]
———
[1] ಮದೀನದಲ್ಲಿ ಔಸ್ ಮತ್ತು ಖಝ್ರಜ್ ಎಂಬ ಎರಡು ಗೋತ್ರಗಳಿದ್ದವು. ಇವರು ಪರಸ್ಪರ ವೈರಿಗಳಾಗಿದ್ದು ನಿರಂತರ ಯುದ್ಧ ಮಾಡುತ್ತಿದ್ದರು. ಅದೇ ರೀತಿ, ಮದೀನದ ಯಹೂದಿಗಳಲ್ಲಿ ಮೂರು ಗೋತ್ರಗಳಿದ್ದವು. ಬನೂ ಕೈನುಕಾ, ಬನೂ ನದೀರ್ ಮತ್ತು ಬನೂ ಕುರೈಝ. ಬನೂ ಕುರೈಝ ಗೋತ್ರದವರು ಔಸ್ ಗೋತ್ರದವರೊಡನೆ ಮತ್ತು ಬನೂ ಕೈನುಕಾ ಹಾಗೂ ಬನೂ ನದೀರ್ ಗೋತ್ರಗಳು ಖಝ್ರಜ್ ಗೋತ್ರದವರೊಡನೆ ಮೈತ್ರಿ ಮಾಡಿಕೊಂಡಿದ್ದರು. ಯುದ್ಧದಲ್ಲಿ ಅವರು ತಮ್ಮ ತಮ್ಮ ಮಿತ್ರರಿಗೆ ಸಹಾಯ ಮಾಡುತ್ತಿದ್ದರು. ಇದರಿಂದ ಯಹೂದಿಗಳು ಯಹೂದಿಗಳನ್ನೇ ಕೊಲ್ಲುತ್ತಿದ್ದರು ಮತ್ತು ಅವರ ಮನೆಗಳನ್ನು ಲೂಟಿ ಮಾಡಿ ಅವರನ್ನು ಮನೆಗಳಿಂದ ಹೊರದಬ್ಬುತ್ತಿದ್ದರು. ತೌರಾತ್ (ತೋರಾ) ನಿಯಮದ ಪ್ರಕಾರ ಯಹೂದಿಗಳು ಪರಸ್ಪರ ಕೊಲ್ಲುವುದು, ಲೂಟಿ ಮಾಡುವುದು, ಮನೆಗಳಿಂದ ಬಲವಂತವಾಗಿ ಹೊರದಬ್ಬುವುದು, ತಮ್ಮವರಿಗೆ ವಿರುದ್ಧವಾಗಿ ಹೊರಗಿನವರಿಗೆ ಸಹಾಯ ಮಾಡುವುದು ನಿಷಿದ್ಧವಾಗಿತ್ತು. ಆದರೆ ಅವರು ಈ ನಿಯಮವನ್ನು ಪಾಲಿಸುತ್ತಿರಲಿಲ್ಲ. ಆದರೆ ಯುದ್ಧ ಖೈದಿಗಳಾದ ಯಹೂದಿಗಳನ್ನು ಅವರು ಪರಸ್ಪರ ಪರಿಹಾರ ನೀಡಿ ಸ್ವತಂತ್ರಗೊಳಿಸುತ್ತಿದ್ದರು. ಈ ನಿಯಮ ತೋರದಲ್ಲಿದೆ ಮತ್ತು ನಾವು ಅದನ್ನು ಪಾಲಿಸಬೇಕಾಗಿದೆ ಎಂದು ಅವರು ಹೇಳುತ್ತಿದ್ದರು. ಹೀಗೆ ಅವರು ತಮಗೆ ಬೇಕಾದ ನಿಯಮವನ್ನು ಸ್ವೀಕರಿಸಿ ತಮಗೆ ಬೇಡದ ನಿಯಮವನ್ನು ತಿರಸ್ಕರಿಸುತ್ತಿದ್ದರು.
Bakara 2:86
ಅವರೇ ಪರಲೋಕಕ್ಕೆ ಬದಲಿಯಾಗಿ ಇಹಲೋಕವನ್ನು ಖರೀದಿಸಿದವರು. ಆದ್ದರಿಂದ, ಅವರಿಗೆ ಶಿಕ್ಷೆಯಲ್ಲಿ ರಿಯಾಯಿತಿಯಿಲ್ಲ. ಅವರಿಗೆ ಯಾವುದೇ ಸಹಾಯವೂ ದೊರೆಯುವುದಿಲ್ಲ.
Bakara 2:87
ನಿಶ್ಚಯವಾಗಿಯೂ ನಾವು ಮೂಸಾರಿಗೆ ಗ್ರಂಥವನ್ನು ನೀಡಿದೆವು. ಅವರ ಹಿಂದೆಯೇ ಹಲವಾರು ಸಂದೇಶವಾಹಕರುಗಳನ್ನು ಕಳುಹಿಸಿದೆವು. ಮರ್ಯಮರ ಮಗ ಈಸಾರಿಗೆ ನಾವು ಸ್ಪಷ್ಟ ಸಾಕ್ಷ್ಯಾಧಾರಗಳನ್ನು ನೀಡಿದೆವು ಮತ್ತು ಪವಿತ್ರಾತ್ಮನ ಮೂಲಕ ಅವರನ್ನು ಬೆಂಬಲಿಸಿದೆವು. ಆದರೆ ನಿಮಗೆ ಇಷ್ಟವಿಲ್ಲದ ವಿಷಯಗಳೊಂದಿಗೆ ಸಂದೇಶವಾಹಕರುಗಳು ನಿಮ್ಮ ಬಳಿಗೆ ಬಂದಾಗಲೆಲ್ಲಾ, ನೀವು ಅಹಂಕಾರ ತೋರಿದಿರಿ. ಅವರಲ್ಲಿ ಕೆಲವರನ್ನು ನೀವು ನಿಷೇಧಿಸಿದಿರಿ ಮತ್ತು ಕೆಲವರನ್ನು ಹತ್ಯೆ ಮಾಡಿದಿರಿ.
Bakara 2:88
ಅವರು ಹೇಳಿದರು: “ನಮ್ಮ ಹೃದಯಗಳು ಮುಚ್ಚಿಕೊಂಡಿವೆ.” ಅಲ್ಲ; ವಾಸ್ತವವಾಗಿ ಅವರ ನಿಷೇಧದಿಂದಾಗಿ ಅಲ್ಲಾಹು ಅವರನ್ನು ಶಪಿಸಿದ್ದಾನೆ. ಆದ್ದರಿಂದ ಅವರು ಸ್ವಲ್ಪ ಮಾತ್ರ ವಿಶ್ವಾಸವಿಡುತ್ತಾರೆ.
Bakara 2:89
ಅವರಲ್ಲಿರುವ (ಗ್ರಂಥವನ್ನು) ದೃಢೀಕರಿಸುವ ಒಂದು ಗ್ರಂಥವು (ಕುರ್‌ಆನ್) ಅಲ್ಲಾಹನ ಬಳಿಯಿಂದ ಅವರಿಗೆ ಬಂದಾಗ—ವಾಸ್ತವವಾಗಿ, ಇದಕ್ಕೆ ಮೊದಲು ಅವರು (ಅಂತಹ ಒಂದು ಗ್ರಂಥದ ಮೂಲಕ) ಸತ್ಯನಿಷೇಧಿಗಳ ವಿರುದ್ಧ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದರೂ ಸಹ—ಅವರಿಗೆ ಪರಿಚಿತವಾದ ಆ ಸಂದೇಶವು ಅವರ ಬಳಿಗೆ ಬಂದಾಗ ಅವರು ಅದನ್ನು ನಿಷೇಧಿಸಿದರು.[1] ಆದ್ದರಿಂದ ಸತ್ಯನಿಷೇಧಿಗಳ ಮೇಲೆ ಅಲ್ಲಾಹನ ಶಾಪವಿರಲಿ.
———
[1] ಬಹುದೇವವಿಶ್ವಾಸಿಗಳೊಡನೆ ಯುದ್ಧ ನಡೆಯುವಾಗಲೆಲ್ಲಾ ಅವರು ಹೀಗೆ ಪ್ರಾರ್ಥಿಸುತ್ತಿದ್ದರು: "ಓ ಅಲ್ಲಾಹ್! ಅಂತಿಮ ಪ್ರವಾದಿಯನ್ನು ಬೇಗನೇ ಕಳುಹಿಸು. ನಾವು ಆ ಪ್ರವಾದಿಯೊಂದಿಗೆ ಸೇರಿ ಈ ಬಹುದೇವವಿಶ್ವಾಸಿಗಳ ವಿರುದ್ಧ ಗೆಲುವು ಪಡೆಯುತ್ತೇವೆ." ಆದರೆ ಅಂತಿಮ ಪ್ರವಾದಿ ಬಂದಾಗ ಅವರು ಆ ಪ್ರವಾದಿಯ ಸಂದೇಶವನ್ನು (ಕುರ್‌ಆನನ್ನು) ತಿರಸ್ಕರಿಸಿ ಅವರ ವಿರುದ್ಧವೇ ದ್ವೇಷ ಕಟ್ಟಿಕೊಂಡರು.
Bakara 2:90
ಅಲ್ಲಾಹು ಅವನ ದಾಸರಲ್ಲಿ ಅವನು ಇಚ್ಛಿಸುವವರಿಗೆ ಅವನ ಔದಾರ್ಯವನ್ನು ಇಳಿಸಿಕೊಡುತ್ತಾನೆ ಎಂಬ ಅಸೂಯೆಯಿಂದ, ಅಲ್ಲಾಹು ಅವತೀರ್ಣಗೊಳಿಸಿದ ಸಂದೇಶವನ್ನು ನಿಷೇಧಿಸುವ ರೀತಿಯಲ್ಲಿ ಅವರು ತಮ್ಮನ್ನು ತಾವೇ ಮಾರಿಕೊಂಡದ್ದು ಬಹಳ ನಿಕೃಷ್ಟವಾಗಿದೆ.[1] ಇದರಿಂದ ಅವರು ಕೋಪದ ಮೇಲೆ ಕೋಪಕ್ಕೆ ಪಾತ್ರರಾದರು. ಆ ಸತ್ಯನಿಷೇಧಿಗಳಿಗೆ ಅಪಮಾನಕರ ಶಿಕ್ಷೆಯಿದೆ.
———
[1] ಯಹೂದಿಗಳು ಅಂತಿಮ ಪ್ರವಾದಿಯ ಆಗಮನವನ್ನು ನಿರೀಕ್ಷಿಸುತ್ತಿದ್ದರು. ಅಂತಿಮ ಪ್ರವಾದಿಯ ಎಲ್ಲಾ ಗುಣಲಕ್ಷಣಗಳನ್ನು ಅವರ ಗ್ರಂಥಗಳಲ್ಲಿ ವಿವರಿಸಲಾಗಿತ್ತು. ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಲ್ಲಿ ಈ ಎಲ್ಲಾ ಗುಣಲಕ್ಷಣಗಳಿದ್ದವು ಮತ್ತು ಅವರು ಅಂತಿಮ ಪ್ರವಾದಿಯೆಂದು ಯಹೂದಿಗಳಿಗೆ ಸಂಪೂರ್ಣ ಖಾತ್ರಿಯಿತ್ತು. ಆದರೆ ಅವರ ನಿರೀಕ್ಷೆಯಂತೆ ಆ ಪ್ರವಾದಿ ಯಹೂದಿ ವಂಶದಲ್ಲಿ ಹುಟ್ಟಲಿಲ್ಲ ಎಂಬ ಒಂದೇ ಕಾರಣಕ್ಕಾಗಿ ಅವರು ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರನ್ನು ಮತ್ತು ಅವರು ತಂದ ಸಂದೇಶವನ್ನು ತಿರಸ್ಕರಿಸಿದರು.
Bakara 2:91
“ಅಲ್ಲಾಹು ಅವತೀರ್ಣಗೊಳಿಸಿದ ಗ್ರಂಥದಲ್ಲಿ (ಕುರ್‌ಆನ್‍ನಲ್ಲಿ) ವಿಶ್ವಾಸವಿಡಿ” ಎಂದು ಅವರೊಡನೆ ಹೇಳಲಾದರೆ, ಅವರು ಹೇಳುತ್ತಾರೆ: “ನಮಗೆ ಅವತೀರ್ಣವಾದ ಗ್ರಂಥದಲ್ಲಿ ನಾವು ವಿಶ್ವಾಸವಿಡುತ್ತೇವೆ.” ವಾಸ್ತವವಾಗಿ, ಅದರ ನಂತರದ ಗ್ರಂಥವು (ಕುರ್‌ಆನ್) ಅವರ ಬಳಿಯಿರುವ ಗ್ರಂಥವನ್ನು ದೃಡೀಕರಿಸುವ ಸತ್ಯವಾಗಿದ್ದೂ ಸಹ ಅವರು ಅದನ್ನು ನಿಷೇಧಿಸುತ್ತಾರೆ. ಹೇಳಿರಿ: “ನೀವು ಸತ್ಯವನ್ನೇ ಹೇಳುವವರಾಗಿದ್ದರೆ, ಮೊದಲು ಬಂದ ಅಲ್ಲಾಹನ ಪ್ರವಾದಿಗಳನ್ನು ನೀವೇಕೆ ಕೊಲೆ ಮಾಡಿದಿರಿ?”[1]
———
[1] ನಾವು ತೌರಾತ್ (ತೋರಾ) ನಲ್ಲಿ ವಿಶ್ವಾಸವಿಟ್ಟಿದ್ದೇವೆ, ಆದ್ದರಿಂದ ನಮಗೆ ಕುರ್‌ಆನ್‌ನಲ್ಲಿ ವಿಶ್ವಾಸವಿಡಬೇಕಾದ ಅಗತ್ಯವಿಲ್ಲ ಎಂದು ಅವರು ಹೇಳುತ್ತಿದ್ದರು. ಆದರೆ ವಾಸ್ತವವಾಗಿ ಅವರು ತೌರಾತ್‌ನಲ್ಲೂ ಸರಿಯಾಗಿ ವಿಶ್ವಾಸವಿಟ್ಟಿರಲಿಲ್ಲ. ತೌರಾತ್‌ನಲ್ಲಿ ವಿಶ್ವಾಸವಿಟ್ಟಿದ್ದೇವೆಂಬ ಅವರ ಮಾತು ಸತ್ಯವಾಗಿದ್ದರೆ ಅವರು ತೌರಾತನ್ನು ಬೋಧಿಸಲು ಬಂದ ಪ್ರವಾದಿಗಳನ್ನು ಕೊಲೆ ಮಾಡುತ್ತಿರಲಿಲ್ಲ.
Bakara 2:92
ನಿಶ್ಚಯವಾಗಿಯೂ, ಮೂಸಾ ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ನಿಮ್ಮ ಬಳಿಗೆ ಬಂದಿದ್ದರು. ನಂತರ, ಅವರ (ನಿರ್ಗಮನದ) ಬಳಿಕ ನೀವು ಕರುವನ್ನು (ದೇವರಾಗಿ) ಮಾಡಿಕೊಂಡು ಅಕ್ರಮಿಗಳಾಗಿ ಬಿಟ್ಟಿರಿ.
Bakara 2:93
ನಾವು ನಿಮ್ಮಿಂದ ಕರಾರನ್ನು ಪಡೆದ ಮತ್ತು ನಿಮ್ಮ ಮೇಲೆ ತೂರ್ ಪರ್ವತವನ್ನು ಎತ್ತಿಹಿಡಿದ ಸಂದರ್ಭ. (ನಾವು ಹೇಳಿದೆವು): “ನಾವು ನಿಮಗೆ ನೀಡಿದ್ದನ್ನು ಬಿಗಿಯಾಗಿ ಹಿಡಿಯಿರಿ ಮತ್ತು ಕಿವಿಗೊಟ್ಟು ಕೇಳಿರಿ.” ಅವರು ಹೇಳಿದರು: “ನಾವು ಕೇಳಿದ್ದೇವೆ ಮತ್ತು ಅವಿಧೇಯತೆ ತೋರಿದ್ದೇವೆ.” ಅವರ ಸತ್ಯನಿಷೇಧದಿಂದಾಗಿ ಅವರ ಹೃದಯಗಳಲ್ಲಿ ಕರುವಿನ ಪ್ರೀತಿಯು ಲೀನವಾಗಿಬಿಟ್ಟಿತ್ತು. ಹೇಳಿರಿ: “ನೀವು ಸತ್ಯವಿಶ್ವಾಸಿಗಳಾಗಿದ್ದರೆ ನಿಮ್ಮ ವಿಶ್ವಾಸವು ನಿಮಗೆ ಏನು ಆದೇಶಿಸುತ್ತಿದೆಯೋ ಅದು ಬಹಳ ನಿಕೃಷ್ಟವಾಗಿದೆ.”
Bakara 2:94
ಹೇಳಿರಿ: “ಅಲ್ಲಾಹನ ಬಳಿ ಪರಲೋಕ ಭವನವು ಇತರ ಜನರಿಗೆ ದೊರೆಯದೆ ಕೇವಲ ನಿಮಗೆ ಮಾತ್ರ ಇರುವುದಾದರೆ ನೀವು ಸಾವನ್ನು ಬಯಸಿರಿ. ನೀವು ಸತ್ಯವಂತರಾಗಿದ್ದರೆ!”
Bakara 2:95
ಆದರೆ ಅವರ ಕೈಗಳು ಮಾಡಿಟ್ಟಿರುವ (ದುಷ್ಕರ್ಮಗಳ) ನಿಮಿತ್ತ ಅವರೆಂದೂ ಸಾವನ್ನು ಬಯಸುವುದಿಲ್ಲ. ಅಲ್ಲಾಹು ಅಕ್ರಮಿಗಳ ಬಗ್ಗೆ ಬಹಳ ಚೆನ್ನಾಗಿ ತಿಳಿದಿದ್ದಾನೆ.
Bakara 2:96
ಅವರಿಗೆ ಬದುಕಲು ಆತ್ಯಧಿಕ ಆಸಕ್ತಿಯಿರುವುದನ್ನು—ಬಹುದೇವವಿಶ್ವಾಸಿಗಳಿಗಿಂತಲೂ ಹೆಚ್ಚು ಆಸಕ್ತಿಯಿರುವುದನ್ನು—ನೀವು ಕಾಣುವಿರಿ. ಅವರಲ್ಲಿ ಪ್ರತಿಯೊಬ್ಬನೂ ಸಾವಿರ ವರ್ಷ ಆಯುಷ್ಯ ದೊರೆಯಬೇಕೆಂದು ಬಯಸುತ್ತಾನೆ. ಆದರೆ ದೀರ್ಘಾಯುಷ್ಯ ಸಿಗುವುದರಿಂದ ಅವನಿಗೆ ಶಿಕ್ಷೆಯಿಂದ ಮುಕ್ತಿ ಸಿಗುವುದಿಲ್ಲ. ಅವರು ಮಾಡುತ್ತಿರುವ ಕರ್ಮಗಳನ್ನು ಅಲ್ಲಾಹು ನೋಡುತ್ತಿದ್ದಾನೆ.
Bakara 2:97
ಹೇಳಿರಿ: “ಯಾರು ಜಿಬ್ರೀಲರಿಗೆ ವೈರಿಯೋ (ಅವನು ಅಲ್ಲಾಹನಿಗೂ ವೈರಿಯಾಗಿದ್ದಾನೆ).”[1] (ಏಕೆಂದರೆ) ನಿಶ್ಚಯವಾಗಿಯೂ ಜಿಬ್ರೀಲ್ ಅದನ್ನು (ಕುರ್‌ಆನನ್ನು) ನಿಮ್ಮ ಹೃದಯದಲ್ಲಿ ಅವತೀರ್ಣಗೊಳಿಸಿದ್ದು ಅಲ್ಲಾಹನ ಆದೇಶದಂತೆ ಮಾತ್ರ. ಅದು ಪೂರ್ವಗ್ರಂಥಗಳನ್ನು ದೃಢೀಕರಿಸುತ್ತದೆ ಮತ್ತು ಸತ್ಯವಿಶ್ವಾಸಿಗಳಿಗೆ ಸನ್ಮಾರ್ಗ ಹಾಗೂ ಸುವಾರ್ತೆಯಾಗಿದೆ.
———
[1] ಒಮ್ಮೆ ಕೆಲವು ಯಹೂದಿಗಳು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದರು: “ನಾವು ನಿಮ್ಮಲ್ಲಿ ಕೆಲವು ಪ್ರಶ್ನೆಗಳನ್ನು ಕೇಳುತ್ತೇವೆ. ನೀವು ಸರಿಯಾಗಿ ಉತ್ತರ ಕೊಟ್ಟರೆ ನಾವು ನಿಮ್ಮಲ್ಲಿ ವಿಶ್ವಾಸವಿಡುತ್ತೇವೆ. ಏಕೆಂದರೆ ಒಬ್ಬ ಪ್ರವಾದಿಯ ಹೊರತು ಬೇರೆ ಯಾರಿಗೂ ಸರಿಯಾದ ಉತ್ತರ ಕೊಡಲು ಸಾಧ್ಯವಿಲ್ಲ.” ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಕೊಟ್ಟರು. ಆಗ ಯಹೂದಿಗಳು ಕೇಳಿದರು: “ನಿಮಗೆ ಇವುಗಳ ಉತ್ತರವನ್ನು ತಂದು ಕೊಡುವ ದೇವದೂತರು ಯಾರು?” ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜಿಬ್ರೀಲ್ ಎಂದು ಉತ್ತರಿಸಿದರು. ಆಗ ಅವರು ಹೇಳಿದರು: “ಜಿಬ್ರೀಲರು ನಮ್ಮ ವೈರಿ. ಅವರು ಹೇಳಿದ ಮಾತಿನಲ್ಲಿ ನಾವು ವಿಶ್ವಾಸವಿಡುವುದಿಲ್ಲ.” ಹೀಗೆ ಅವರು ಪ್ರವಾದಿಯವರಲ್ಲಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿಶ್ವಾಸವಿಡದೆ ನುಣುಚಿಕೊಂಡರು.
Bakara 2:98
ಯಾರು ಅಲ್ಲಾಹನಿಗೆ, ಅವನ ದೇವದೂತರುಗಳಿಗೆ, ಅವನ ಸಂದೇಶವಾಹಕರುಗಳಿಗೆ, ಜಿಬ್ರೀಲರಿಗೆ ಮತ್ತು ಮೀಕಾಯೀಲರಿಗೆ ವೈರಿಯೋ—ನಿಶ್ಚಯವಾಗಿಯೂ ಅಲ್ಲಾಹು ಆ ಸತ್ಯನಿಷೇಧಿಗಳಿಗೂ ವೈರಿಯಾಗಿದ್ದಾನೆ.
Bakara 2:99
ನಿಶ್ಚಯವಾಗಿಯೂ ನಾವು ನಿಮಗೆ ಸ್ಪಷ್ಟ ವಚನಗಳನ್ನು ಅವತೀರ್ಣಗೊಳಿಸಿದ್ದೇವೆ. ದುಷ್ಕರ್ಮಿಗಳ ಹೊರತು ಇನ್ನಾರೂ ಅದನ್ನು ನಿಷೇಧಿಸುವುದಿಲ್ಲ.
Bakara 2:100
ಅವರು ಯಾವುದೇ ಕರಾರು ಮಾಡಿದಾಗಲೂ ಅವರಲ್ಲೊಂದು ಗುಂಪು ಅದನ್ನು ಎಸೆದು ಬಿಡುತ್ತಿತ್ತು. ಅಷ್ಟೇ ಅಲ್ಲ, ಅವರಲ್ಲಿ ಹೆಚ್ಚಿನವರಿಗೆ ವಿಶ್ವಾಸವೇ ಇರಲಿಲ್ಲ.
Bakara 2:101
ಅವರಲ್ಲಿರುವ ಗ್ರಂಥವನ್ನು ದೃಢೀಕರಿಸುತ್ತಾ ಅಲ್ಲಾಹನ ಕಡೆಯಿಂದ ಒಬ್ಬ ಸಂದೇಶವಾಹಕರು ಅವರ ಬಳಿಗೆ ಬಂದಾಗ, ಗ್ರಂಥ ನೀಡಲಾದವರಲ್ಲಿ ಸೇರಿದ ಒಂದು ಗುಂಪು ಅಲ್ಲಾಹನ ಗ್ರಂಥವನ್ನು, ಅದರ ಬಗ್ಗೆ ಏನೂ ತಿಳಿಯದವರಂತೆ ತಮ್ಮ ಬೆನ್ನ ಹಿಂಭಾಗಕ್ಕೆ ಎಸೆದು ಬಿಟ್ಟರು.
Bakara 2:102
ಶೈತಾನರು ಸುಲೈಮಾನರ ಆಡಳಿತಕಾಲದಲ್ಲಿ ಪಠಿಸುತ್ತಿದ್ದ ವಿಷಯಗಳನ್ನು ಅವರು ಹಿಂಬಾಲಿಸಿದರು. ಸುಲೈಮಾನ್ ಸತ್ಯನಿಷೇಧಿಯಾಗಿರಲಿಲ್ಲ. ಆದರೆ ಶೈತಾನರು ಸತ್ಯನಿಷೇಧಿಗಳಾಗಿದ್ದರು.[1] ಅವರು ಜನರಿಗೆ ಮಾಟಗಾರಿಕೆಯನ್ನು ಮತ್ತು ಬ್ಯಾಬಿಲೋನಿಯಾದಲ್ಲಿ ಹಾರೂತ್ ಮತ್ತು ಮಾರೂತ್ ಎಂಬ ಎರಡು ದೇವದೂತರಿಗೆ ಅವತೀರ್ಣವಾಗುತ್ತಿದ್ದ ವಿಷಯಗಳನ್ನು ಕಲಿಸುತ್ತಿದ್ದರು. ಆದರೆ, “ನಾವೊಂದು ಪರೀಕ್ಷೆಯಾಗಿದ್ದೇವೆ; ಆದ್ದರಿಂದ ನೀವು ಸತ್ಯನಿಷೇಧಿಗಳಾಗಬೇಡಿ” ಎಂದು ಹೇಳದೆ ಅವರಿಬ್ಬರು (ಹಾರೂತ್ ಮತ್ತು ಮಾರೂತ್) ಯಾರಿಗೂ ಕಲಿಸಿಕೊಡುತ್ತಿರಲಿಲ್ಲ. ಹೀಗೆ ಜನರು ಅವರಿಬ್ಬರಿಂದ ಗಂಡ-ಹೆಂಡತಿಯ ನಡುವೆ ಒಡಕು ಮೂಡಿಸುವ ತಂತ್ರಗಳನ್ನು ಕಲಿಯುತ್ತಿದ್ದರು. ಆದರೆ ಅಲ್ಲಾಹನ ಅಪ್ಪಣೆಯಿಲ್ಲದೆ ಯಾರಿಗೂ ಯಾವುದೇ ತೊಂದರೆ ಮಾಡಲು ಅವರಿಗೆ ಸಾಧ್ಯವಿಲ್ಲ. ಸ್ವತಃ ಅವರಿಗೆ ತೊಂದರೆಯಾಗುವ ಮತ್ತು ಅವರಿಗೆ ಯಾವುದೇ ಪ್ರಯೋಜನ ನೀಡದ ವಿಷಯಗಳನ್ನು ಅವರು ಕಲಿಯುತ್ತಿದ್ದರು. ಅದನ್ನು ಪಡೆದವರಿಗೆ ಪರಲೋಕದಲ್ಲಿ ಯಾವುದೇ ಪಾಲಿಲ್ಲವೆಂದು ಅವರು ದೃಢವಾಗಿ ತಿಳಿದಿದ್ದರು. ಅವರು ಯಾವುದಕ್ಕೆ ತಮ್ಮ ಆತ್ಮಗಳನ್ನು ಮಾರಿಕೊಂಡರೋ ಅದು ಬಹಳ ನಿಕೃಷ್ಟವಾಗಿದೆ. ಅವರು ಅದನ್ನು ತಿಳಿದಿದ್ದರೆ (ಎಷ್ಟು ಚೆನ್ನಾಗಿತ್ತು)!
———
[1] ಯಹೂದಿಗಳು ಅಲ್ಲಾಹನ ಗ್ರಂಥವನ್ನು ಮತ್ತು ಕರಾರುಗಳನ್ನು ಲೆಕ್ಕಿಸದೆ ಶೈತಾನರ ಹಿಂದೆ ಬಿದ್ದರು. ಅವರು ಶೈತಾನರಿಂದ ಮಾಟಗಾರಿಕೆಯನ್ನು ಕಲಿತದ್ದು ಮಾತ್ರವಲ್ಲದೆ ಪ್ರವಾದಿ ಸುಲೈಮಾನ್ (ಅವರ ಮೇಲೆ ಶಾಂತಿಯಿರಲಿ) ಪ್ರವಾದಿಯಲ್ಲ, ಬದಲಿಗೆ ಅವರೊಬ್ಬ ಮಾಟಗಾರನೆಂದು ಪ್ರಚಾರ ಮಾಡತೊಡಗಿದರು. ಆದರೆ ಪ್ರವಾದಿ ಸುಲೈಮಾನ್ (ಅವರ ಮೇಲೆ ಶಾಂತಿಯಿರಲಿ) ಮಾಟಗಾರಿಕೆ ಮಾಡುತ್ತಿರಲಿಲ್ಲ. ಏಕೆಂದರೆ ಮಾಟಗಾರಿಕೆ ಮಾಡುವುದು ಸತ್ಯನಿಷೇಧವಾಗಿದೆ. ಒಬ್ಬ ಪ್ರವಾದಿ ಸತ್ಯನಿಷೇಧವನ್ನು ಹೇಗೆ ತಾನೇ ಮಾಡಲು ಸಾಧ್ಯ ಎಂದು ಅಲ್ಲಾಹು ಇಲ್ಲಿ ಸ್ಪಷ್ಟಪಡಿಸುತ್ತಾನೆ. ಇನ್ನೊಂದು ವರದಿಯ ಪ್ರಕಾರ ಸುಲೈಮಾನರ ಕಾಲದಲ್ಲಿ ಮಾಟಗಾರಿಕೆಯು ವ್ಯಾಪಕವಾಗಿ ಹರಡಿಕೊಂಡಿತ್ತು. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಸುಲೈಮಾನರು ಮಾಟಗಾರಿಕೆಯನ್ನು ಕಲಿಸುವ ಎಲ್ಲಾ ಪುಸ್ತಕಗಳನ್ನು ವಶಪಡಿಸಿಕೊಂಡು ತನ್ನ ಸಿಂಹಾಸನದ ಅಡಿಯಲ್ಲಿ ದಫನ ಮಾಡಿದರು. ಅವರ ಮರಣಾನಂತರ ಶೈತಾನರು ಮಾಟಗಾರರೊಂದಿಗೆ ಸೇರಿಕೊಂಡು ಆ ಪುಸ್ತಕಗಳನ್ನು ಹೊರತೆಗೆದರು. ಅವುಗಳನ್ನು ಜನರಿಗೆ ತೋರಿಸಿ ಸುಲೈಮಾನರು ಆಡಳಿತ ಮಾಡುತ್ತಿದ್ದದ್ದು ಈ ಮಾಟಗಾರಿಕೆಯ ಆಧಾರದಲ್ಲಾಗಿತ್ತು ಎಂದು ಹೇಳಿದರು. ಇದನ್ನು ಕಂಡು ಅತಿರೇಕಿಗಳಾದ ಕೆಲವರು ಸುಲೈಮಾನರನ್ನು (ಅವರ ಮೇಲೆ ಶಾಂತಿಯಿರಲಿ) ಸತ್ಯನಿಷೇಧಿ ಎಂದು ಜರೆದರು.
Bakara 2:103
ಅವರು ವಿಶ್ವಾಸವಿಟ್ಟವರು ಮತ್ತು ದೇವಭಯವುಳ್ಳವರಾಗಿದ್ದರೆ, ಅವರಿಗೆ ಅಲ್ಲಾಹನಿಂದ ಉತ್ತಮ ಪ್ರತಿಫಲವು ದೊರೆಯುತ್ತಿತ್ತು. ಅವರು ಅದನ್ನು ತಿಳಿದಿದ್ದರೆ (ಎಷ್ಟು ಚೆನ್ನಾಗಿತ್ತು)!
Bakara 2:104
ಓ ಸತ್ಯವಿಶ್ವಾಸಿಗಳೇ! ನೀವು (ಪ್ರವಾದಿಯೊಡನೆ) ‘ರಾಇನಾ’ ಎಂದು ಹೇಳಬೇಡಿ.[1] ಬದಲಿಗೆ, ‘ಉನ್‍ಝುರ್‌ನಾ’ ಎಂದು ಹೇಳಿರಿ ಮತ್ತು ಕಿವಿಗೊಟ್ಟು ಕೇಳಿರಿ. ಸತ್ಯನಿಷೇಧಿಗಳಿಗೆ ಯಾತನಾಮಯ ಶಿಕ್ಷೆಯಿದೆ.
———
[1] ರಾಇನಾ ಎಂದರೆ ನಮ್ಮ ಕಡೆಗೆ ಗಮನಹರಿಸಿ ಎಂದರ್ಥ. ಶಿಷ್ಯರಿಗೆ ಮಾತು ಅರ್ಥವಾಗದಿದ್ದರೆ ಈ ಪದವನ್ನು ಹೇಳಿ ಅವರು ಗುರುವಿನ ಗಮನ ಸೆಳೆಯುತ್ತಿದ್ದರು. ಆದರೆ ಯಹೂದಿಗಳು ಈ ಪದವನ್ನು ದ್ವಂದ್ವಾರ್ಥದಲ್ಲಿ ಬಳಸುತ್ತಿದ್ದರು. ಕೆಲವೊಮ್ಮೆ ಅವರು ನಮ್ಮ ಕುರಿಗಳನ್ನು ಕಾಯುವವನು ಎಂಬ ಅರ್ಥದಲ್ಲಿ "ರಾಈನಾ" ಎಂದು ಹೇಳುತ್ತಿದ್ದರು. ಕೆಲವೊಮ್ಮೆ ಅವಿವೇಕಿ ಎಂಬರ್ಥದಲ್ಲಿ "ರಾಇನಾ" ಎಂಬ ಪದವನ್ನು ಬಳಸುತ್ತಿದ್ದರು. ಆದ್ದರಿಂದ ಅಲ್ಲಾಹು ಅದರ ಬದಲಿಗೆ "ಉನ್‌ಝುರ್‌ನಾ" ಎಂಬ ಪದವನ್ನು ಬಳಸಲು ಆದೇಶಿಸಿದನು. ಉನ್‌ಝುರ್‌ನಾ ಎಂದರೆ ನಮ್ಮ ಕಡೆಗೆ ಗಮನ ನೀಡಿರಿ ಎಂದರ್ಥ.
Bakara 2:105
ನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಏನಾದರೂ ಒಳಿತು ಅವತೀರ್ಣವಾಗುವುದು ಗ್ರಂಥದವರಲ್ಲಿ ಮತ್ತು ಬಹುದೇವಾರಾಧಕರಲ್ಲಿ ಸೇರಿದ ಸತ್ಯನಿಷೇಧಿಗಳಿಗೆ ಸ್ವಲ್ಪವೂ ಇಷ್ಟವಿಲ್ಲ. ಅಲ್ಲಾಹು ಅವನು ಇಚ್ಛಿಸುವವರಿಗೆ ಅವನ ದಯೆಯಿಂದ ವಿಶೇಷವಾಗಿ ಕರುಣಿಸುತ್ತಾನೆ. ಅಲ್ಲಾಹು ಮಹಾ ಔದಾರ್ಯದ ಒಡೆಯನಾಗಿದ್ದಾನೆ.
Bakara 2:106
ನಾವು ಯಾವುದಾದರೂ ವಚನವನ್ನು ರದ್ದುಗೊಳಿಸಿದರೆ, ಅಥವಾ ಮರೆಯುವಂತೆ ಮಾಡಿದರೆ, ಅದಕ್ಕಿಂತಲೂ ಉತ್ತಮವಾದುದನ್ನು ಅಥವಾ ಅದಕ್ಕೆ ಸಮಾನವಾದುದನ್ನು ತರುವೆವು. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನೆಂದು ನಿಮಗೆ ತಿಳಿದಿಲ್ಲವೇ?
Bakara 2:107
ಭೂಮ್ಯಾಕಾಶಗಳ ಸಾರ್ವಭೌಮತ್ವವು ಅಲ್ಲಾಹನಿಗೆ ಮಾತ್ರ ಸೇರಿದ್ದೆಂದು ಮತ್ತು ಅಲ್ಲಾಹನ ಹೊರತು ನಿಮಗೆ ಯಾವುದೇ ರಕ್ಷಕನೋ, ಸಹಾಯಕನೋ ಇಲ್ಲವೆಂದು ನಿಮಗೆ ತಿಳಿದಿಲ್ಲವೇ?
Bakara 2:108
ಹಿಂದೆ ಮೂಸಾರೊಡನೆ ಅವರ ಅನುಯಾಯಿಗಳು ಕೇಳಿದಂತೆ ನಿಮ್ಮ ಸಂದೇಶವಾಹಕರೊಡನೆ ಕೇಳಲು ನೀವು ಬಯಸುತ್ತೀರಾ? ಯಾರು ಸತ್ಯವಿಶ್ವಾಸವನ್ನು ಸತ್ಯನಿಷೇಧಕ್ಕೆ ಬದಲಾಯಿಸುತ್ತಾನೋ ಅವನು ನೇರ ಮಾರ್ಗದಿಂದ ತಪ್ಪಿ ಹೋಗುತ್ತಾನೆ.
Bakara 2:109
ಗ್ರಂಥದವರಲ್ಲಿ ಹೆಚ್ಚಿನವರು ಅವರಿಗೆ ಸತ್ಯವೇನೆಂದು ಸ್ಪಷ್ಟವಾದ ಬಳಿಕವೂ ಕೇವಲ ಅಸೂಯೆ ಮತ್ತು ದ್ವೇಷದಿಂದ ನಿಮ್ಮನ್ನು ಸತ್ಯವಿಶ್ವಾಸದಿಂದ ತಪ್ಪಿಸಿ ಸತ್ಯನಿಷೇಧಿಗಳಾಗಿ ಮಾಡಲು ಬಯಸುತ್ತಾರೆ. ಅಲ್ಲಾಹು ತನ್ನ ಆಜ್ಞೆಯನ್ನು ತರುವವರೆಗೆ ನೀವು ಅವರನ್ನು ಕ್ಷಮಿಸಿರಿ ಮತ್ತು ನಿರ್ಲಕ್ಷಿಸಿರಿ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
Bakara 2:110
ನೀವು ನಮಾಝ್ ಸಂಸ್ಥಾಪಿಸಿರಿ ಮತ್ತು ಝಕಾತ್ ನೀಡಿರಿ. ನೀವು ನಿಮಗಾಗಿ ಯಾವೆಲ್ಲಾ ಸತ್ಕಾರ್ಯಗಳನ್ನು ಮುಂದಕ್ಕೆ ಕಳುಹಿಸುತ್ತೀರೋ ಅವೆಲ್ಲವನ್ನೂ ನೀವು ಅಲ್ಲಾಹನ ಬಳಿ ಕಾಣುವಿರಿ. ನಿಶ್ಚಯವಾಗಿಯೂ ಅಲ್ಲಾಹು ನೀವು ಮಾಡುವ ಕರ್ಮಗಳನ್ನು ನೋಡುತ್ತಿದ್ದಾನೆ.
Bakara 2:111
ಅವರು ಹೇಳುತ್ತಾರೆ: “ಯಹೂದಿ ಅಥವಾ ಕ್ರೈಸ್ತರ ಹೊರತು ಇನ್ನಾರೂ ಸ್ವರ್ಗಕ್ಕೆ ಹೋಗುವುದಿಲ್ಲ.” ಅವೆಲ್ಲವೂ ಅವರ ಗುಮಾನಿಗಳಾಗಿವೆ. ಹೇಳಿರಿ: “ನೀವು ಸತ್ಯವಂತರಾಗಿದ್ದರೆ ನಿಮ್ಮ ಪುರಾವೆಯನ್ನು ತನ್ನಿರಿ.”
Bakara 2:112
ಹೌದು! ಯಾರು ನಿಷ್ಕಳಂಕತೆಯಿಂದ ತನ್ನನ್ನು ತಾನೇ ಅಲ್ಲಾಹನಿಗೆ ಶರಣಾಗಿಸುತ್ತಾನೋ ಅವನಿಗೆ ಅವನ ಪ್ರತಿಫಲವು ಅವನ ಪರಿಪಾಲಕನ (ಅಲ್ಲಾಹನ) ಬಳಿಯಿದೆ. ಅವರಿಗೆ ಯಾವುದೇ ಭಯವಿಲ್ಲ; ಅವರು ದುಃಖಿಸುವುದೂ ಇಲ್ಲ.
Bakara 2:113
ಕ್ರೈಸ್ತರು ಸತ್ಯದಲ್ಲಿಲ್ಲ ಎಂದು ಯಹೂದಿಗಳು ಹೇಳುತ್ತಾರೆ. ಯಹೂದಿಗಳು ಸತ್ಯದಲ್ಲಿಲ್ಲ ಎಂದು ಕ್ರೈಸ್ತರು ಹೇಳುತ್ತಾರೆ. ವಾಸ್ತವವಾಗಿ, ಅವರೆಲ್ಲರೂ ಗ್ರಂಥವನ್ನು (ತೋರಾ) ಪಠಿಸುತ್ತಾರೆ. ತಿಳುವಳಿಕೆಯಿಲ್ಲದ ಜನರು ಕೂಡ ಅವರು ಹೇಳಿದಂತೆಯೇ ಹೇಳುತ್ತಾರೆ. ಅವರು ಯಾವ ವಿಷಯದಲ್ಲಿ ಭಿನ್ನಮತ ತಳೆದರೋ ಅದರ ಬಗ್ಗೆ ಪುನರುತ್ಥಾನ ದಿನದಂದು ಅಲ್ಲಾಹು ಅವರ ನಡುವೆ ತೀರ್ಪು ನೀಡುವನು.
Bakara 2:114
ಅಲ್ಲಾಹನ ಮಸೀದಿಗಳಲ್ಲಿ ಅವನ ಹೆಸರನ್ನು ಸ್ಮರಿಸುವುದನ್ನು ತಡೆಯುವವನಿಗಿಂತ ಮತ್ತು ಅವುಗಳ (ಮಸೀದಿಗಳ) ನಾಶಕ್ಕಾಗಿ ಪರಿಶ್ರಮಿಸುವವನಿಗಿಂತ ದೊಡ್ಡ ಅಕ್ರಮಿ ಯಾರು? ಅವರು ಭಯಪಡುವವರಾಗಿಯೇ ಹೊರತು ಅವುಗಳನ್ನು ಪ್ರವೇಶಿಸಬಾರದಿತ್ತು. ಅವರಿಗೆ ಇಹಲೋಕದಲ್ಲಿ ಅಪಮಾನವಿದೆ ಮತ್ತು ಪರಲೋಕದಲ್ಲಿ ಕಠೋರ ಶಿಕ್ಷೆಯಿದೆ.
Bakara 2:115
ಪೂರ್ವ ಮತ್ತು ಪಶ್ಚಿಮವು ಅಲ್ಲಾಹನಿಗೆ ಸೇರಿದ್ದು. ನೀವು ಯಾವ ದಿಕ್ಕಿಗೆ ತಿರುಗಿದರೂ ಅಲ್ಲಿ ಅಲ್ಲಾಹನ ಮುಖವಿದೆ. ನಿಶ್ಚಯವಾಗಿಯೂ ಅಲ್ಲಾಹು ಅತ್ಯಂತ ವಿಶಾಲನು ಮತ್ತು ಸರ್ವಜ್ಞನಾಗಿದ್ದಾನೆ.
Bakara 2:116
ಅಲ್ಲಾಹನಿಗೆ ಮಕ್ಕಳಿದ್ದಾರೆ ಎಂದು ಅವರು ಹೇಳುತ್ತಾರೆ. (ಇಲ್ಲ, ಬದಲಿಗೆ) ಅವನು ಪರಿಶುದ್ಧನು! ಭೂಮ್ಯಾಕಾಶಗಳಲ್ಲಿರುವ ಎಲ್ಲಾ ಸೃಷ್ಟಿಗಳೂ ಅವನಿಗೆ ಸೇರಿದ್ದು. ಎಲ್ಲವೂ ಅವನಿಗೆ ವಿಧೇಯವಾಗಿವೆ.
Bakara 2:117
ಅವನು ಯಾವುದೇ ಪೂರ್ವ ಮಾದರಿಯಿಲ್ಲದೆ ಭೂಮ್ಯಾಕಾಶಗಳನ್ನು ಸೃಷ್ಟಿಸಿದವನು. ಅವನು ಒಂದು ವಿಷಯವನ್ನು ತೀರ್ಮಾನಿಸಿದರೆ, ಅದಕ್ಕೆ ಉಂಟಾಗು ಎಂದು ಹೇಳುವನು; ಆಗ ಅದು ಉಂಟಾಗುವುದು.
Bakara 2:118
ಜ್ಞಾನವಿಲ್ಲದವರು ಹೇಳುತ್ತಾರೆ: “ಅಲ್ಲಾಹನೇಕೆ ನಮ್ಮೊಡನೆ ಮಾತನಾಡುವುದಿಲ್ಲ? ಅಥವಾ ನಮ್ಮ ಬಳಿಗೆ ಒಂದು ದೃಷ್ಟಾಂತವೇಕೆ ಬರುವುದಿಲ್ಲ?” ಇವರು ಹೇಳಿದಂತೆಯೇ ಇವರಿಗಿಂತ ಮೊದಲಿನವರೂ ಹೇಳಿದ್ದರು. ಇವರ ಮತ್ತು ಅವರ ಹೃದಯಗಳು ಸಮಾನವಾಗಿವೆ. ದೃಢವಿಶ್ವಾಸವಿಡುವ ಜನರಿಗೆ ನಾವು ದೃಷ್ಟಾಂತಗಳನ್ನು ವಿವರಿಸಿಕೊಟ್ಟಿದ್ದೇವೆ.
Bakara 2:119
ನಿಶ್ಚಯವಾಗಿಯೂ ನಾವು ನಿಮ್ಮನ್ನು ಸುವಾರ್ತೆ ನೀಡುವವರಾಗಿ ಮತ್ತು ಮುನ್ನೆಚ್ಚರಿಕೆ ನೀಡುವವರಾಗಿ ಸತ್ಯದೊಂದಿಗೆ ಕಳುಹಿಸಿದ್ದೇವೆ. ನರಕವಾಸಿಗಳ ಕುರಿತು ನಿಮ್ಮೊಂದಿಗೆ ಪ್ರಶ್ನಿಸಲಾಗುವುದಿಲ್ಲ.
Bakara 2:120
ನೀವು ಅವರ ಮಾರ್ಗವನ್ನು ಅನುಸರಿಸುವ ತನಕ ಯಹೂದಿಗಳು ಮತ್ತು ಕ್ರೈಸ್ತರು ನಿಮ್ಮ ಬಗ್ಗೆ ಸಂಪ್ರೀತರಾಗುವುದೇ ಇಲ್ಲ. ಹೇಳಿರಿ: “ಅಲ್ಲಾಹನ ಮಾರ್ಗದರ್ಶನವೇ ನಿಜವಾದ ಮಾರ್ಗದರ್ಶನ.” ನಿಮ್ಮ ಬಳಿಗೆ ಜ್ಞಾನವು ಬಂದ ಬಳಿಕವೂ ನೀವು ಅವರ ಸ್ವೇಚ್ಛೆಗಳನ್ನು ಹಿಂಬಾಲಿಸಿದರೆ, ಅಲ್ಲಾಹನಿಂದ ನಿಮ್ಮನ್ನು ರಕ್ಷಿಸುವ ಯಾವುದೇ ರಕ್ಷಕರು ಅಥವಾ ಸಹಾಯಕರು ಇರಲಾರರು.
Bakara 2:121
ನಾವು ಯಾರಿಗೆ ಗ್ರಂಥವನ್ನು ನೀಡಿದ್ದೇವೆಯೋ ಅವರು ಅದನ್ನು ಪಠಿಸಬೇಕಾದ ರೀತಿಯಲ್ಲೇ ಪಠಿಸುತ್ತಾರೆ. ಅವರು ಅದರಲ್ಲಿ ವಿಶ್ವಾಸವಿಡುತ್ತಾರೆ. ಯಾರು ಅದರಲ್ಲಿ ವಿಶ್ವಾಸವಿಡುವುದಿಲ್ಲವೋ ಅವರೇ ನಷ್ಟ ಹೊಂದಿದವರು.
Bakara 2:122
ಓ ಇಸ್ರಾಯೇಲ್ ಮಕ್ಕಳೇ! ನಾನು ನಿಮಗೆ ಅನುಗ್ರಹಿಸಿದ ನನ್ನ ಅನುಗ್ರಹವನ್ನು ಮತ್ತು ನಾನು ನಿಮ್ಮನ್ನು ಸರ್ವಲೋಕದವರಿಗಿಂತ (ಎಲ್ಲಾ ಮನುಷ್ಯರಿಗಿಂತ) ಶ್ರೇಷ್ಠಗೊಳಿಸಿರುವುದನ್ನು ಸ್ಮರಿಸಿರಿ.
Bakara 2:123
ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ಯಾವುದೇ ಉಪಕಾರ ಮಾಡದ, ಅವನಿಂದ ಯಾವುದೇ ದಂಡ ಸ್ವೀಕರಿಸದ, ಅವನಿಗೆ ಯಾವುದೇ ಶಿಫಾರಸು ಪ್ರಯೋಜನಪಡದ ಮತ್ತು ಅವರಿಗೆ ಯಾವುದೇ ಸಹಾಯವು ದೊರೆಯದ ಒಂದು ದಿನವನ್ನು ಭಯಪಡಿರಿ.
Bakara 2:124
ಇಬ್ರಾಹೀಮರನ್ನು ಅವರ ಪರಿಪಾಲಕನು (ಅಲ್ಲಾಹು) ಕೆಲವು ವಚನಗಳ ಮೂಲಕ ಪರೀಕ್ಷಿಸಿದ ಸಂದರ್ಭ(ವನ್ನು ಸ್ಮರಿಸಿ). ಅವರು ಅವೆಲ್ಲವನ್ನೂ ಪೂರ್ಣಗೊಳಿಸಿದರು. ಅಲ್ಲಾಹು ಹೇಳಿದನು: “ನಾನು ನಿಮ್ಮನ್ನು ಜನರಿಗೆ ಮುಖಂಡನನ್ನಾಗಿ ಮಾಡುತ್ತೇನೆ.” ಅವರು ಹೇಳಿದರು: “ನನ್ನ ಸಂತಾನದಲ್ಲಿಯೂ ಮಾಡು.” ಅಲ್ಲಾಹು ಹೇಳಿದನು: “ನನ್ನ ವಾಗ್ದಾನವು ಅಕ್ರಮಿಗಳಿಗೆ ಅನ್ವಯವಾಗುವುದಿಲ್ಲ.”
Bakara 2:125
ನಾವು ಆ ಭವನವನ್ನು (ಕಅಬಾಲಯವನ್ನು) ಜನರಿಗೆ ಪುಣ್ಯಸ್ಥಳವಾಗಿ ಮತ್ತು ನಿರ್ಭಯ ಸ್ಥಳವಾಗಿ ಮಾಡಿದ ಸಂದರ್ಭ. ಇಬ್ರಾಹೀಮರು ನಿಂತ ಸ್ಥಳವನ್ನು ನಮಾಝಿನ ಸ್ಥಳವಾಗಿ ಮಾಡಿಕೊಳ್ಳಿರಿ. “ಪ್ರದಕ್ಷಿಣೆ ಮಾಡುವವರಿಗೆ, ಧ್ಯಾನ ಮಗ್ನರಾಗಿ ಕೂರುವವರಿಗೆ, ತಲೆಬಾಗುವವರಿಗೆ ಮತ್ತು ಸಾಷ್ಟಾಂಗ ಮಾಡುವವರಿಗೆ ನನ್ನ ಭವನವನ್ನು ಶುದ್ಧೀಕರಿಸಿರಿ” ಎಂದು ನಾವು ಇಬ್ರಾಹೀಮ್ ಮತ್ತು ಇಸ್ಮಾಈಲರಿಗೆ ಆದೇಶಿಸಿದೆವು.
Bakara 2:126
ಇಬ್ರಾಹೀಮ್ ಹೇಳಿದ ಸಂದರ್ಭ(ವನ್ನು ಸ್ಮರಿಸಿ): “ಓ ನನ್ನ ಪರಿಪಾಲಕನೇ! ನೀನು ಇದನ್ನು ಸುರಕ್ಷಿತ ನಗರವನ್ನಾಗಿ ಮಾಡು ಮತ್ತು ಇದರ ನಿವಾಸಿಗಳಿಗೆ—ಅವರ ಪೈಕಿ ಅಲ್ಲಾಹನಲ್ಲಿ ಮತ್ತು ಅಂತ್ಯ ದಿನದಲ್ಲಿ ವಿಶ್ವಾಸವಿಡುವವರಿಗೆ—ಹಣ್ಣು-ಹಂಪಲುಗಳ ಆಹಾರವನ್ನು ನೀಡು.” ಅಲ್ಲಾಹು ಹೇಳಿದನು: “ನಾನು ಸತ್ಯನಿಷೇಧಿಗಳಿಗೂ ಅಲ್ಪಕಾಲದ ಸವಲತ್ತುಗಳನ್ನು ನೀಡುವೆನು. ನಂತರ ನರಕ ಶಿಕ್ಷೆಗೆ ಅವರನ್ನು ನಿರ್ಬಂಧಿಸುವೆನು.” ಆ ಗಮ್ಯಸ್ಥಾನವು ಬಹಳ ನಿಕೃಷ್ಟವಾಗಿದೆ.
Bakara 2:127
ಇಬ್ರಾಹೀಮ್ ಮತ್ತು ಇಸ್ಮಾಈಲರು ಕಅಬಾಲಯದ ಅಡಿಪಾಯ ಮತ್ತು ಗೋಡೆಗಳನ್ನು ಎತ್ತರಿಸುತ್ತಿದ್ದ ಸಂದರ್ಭ. (ಅವರು ಹೇಳಿದರು): “ಓ ನಮ್ಮ ಪರಿಪಾಲಕನೇ! ನಮ್ಮಿಂದ ಇದನ್ನು ಸ್ವೀಕರಿಸು. ನಿಶ್ಚಯವಾಗಿಯೂ ನೀನು ಎಲ್ಲವನ್ನೂ ಕೇಳುವವನು ಮತ್ತು ಎಲ್ಲವನ್ನೂ ತಿಳಿದವನಾಗಿರುವೆ.
Bakara 2:128
ಓ ನಮ್ಮ ಪರಿಪಾಲಕನೇ! ನಮ್ಮಿಬ್ಬರನ್ನೂ ನಿನ್ನ ಆಜ್ಞಾಪಾಲಕರನ್ನಾಗಿ ಮಾಡು ಮತ್ತು ನಮ್ಮ ಸಂತಾನದಿಂದಲೂ ನಿನಗೆ ಶರಣಾದ ಒಂದು ಸಮುದಾಯವನ್ನು ಉಂಟುಮಾಡು. ನಮಗೆ ನಮ್ಮ ಆರಾಧನಾ ಕ್ರಮಗಳನ್ನು ಕಲಿಸಿಕೊಡು ಮತ್ತು ನಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸು. ನಿಶ್ಚಯವಾಗಿಯೂ ನೀನು ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ಕರುಣೆ ತೋರುವವನಾಗಿರುವೆ.
Bakara 2:129
ಓ ನಮ್ಮ ಪರಿಪಾಲಕನೇ! ನಿನ್ನ ದೃಷ್ಟಾಂತಗಳನ್ನು ಪಠಿಸುವ, ಗ್ರಂಥವನ್ನು ಹಾಗೂ ವಿವೇಕವನ್ನು ಕಲಿಸಿಕೊಡುವ ಮತ್ತು ಅವರನ್ನು ಶುದ್ಧೀಕರಿಸುವ ಒಬ್ಬ ಸಂದೇಶವಾಹಕರನ್ನು ಅವರಿಂದಲೇ ಅವರಿಗೆ ಕಳುಹಿಸು.[1] ನಿಶ್ಚಯವಾಗಿಯೂ ನೀನು ಪ್ರಬಲನು ಮತ್ತು ವಿವೇಕಪೂರ್ಣನಾಗಿರುವೆ.”
———
[1] ಇಬ್ರಾಹೀಮ್ ಮತ್ತು ಇಸ್ಮಾಈಲ್ (ಅವರಿಬ್ಬರ ಮೇಲೆ ಶಾಂತಿಯಿರಲಿ) ಪ್ರಾರ್ಥಿಸಿದ ಈ ಪ್ರಾರ್ಥನೆಯನ್ನು ಸ್ವೀಕರಿಸಿ ಸರ್ವಶಕ್ತನಾದ ಅಲ್ಲಾಹು ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರನ್ನು ಪ್ರವಾದಿಯಾಗಿ ಕಳುಹಿಸಿದನು. "ನಾನು ನನ್ನ ತಂದೆ ಇಬ್ರಾಹೀಮರ ಪ್ರಾರ್ಥನೆಯ ಫಲವಾಗಿದ್ದೇನೆ" ಎಂದು ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುತ್ತಿದ್ದುದು ಈ ಕಾರಣದಿಂದಾಗಿದೆ.
Bakara 2:130
ಸ್ವಯಂ ಅವಿವೇಕಿಯಾಗಿರುವವನ ಹೊರತು ಇನ್ನಾರೂ ಇಬ್ರಾಹೀಮರ ಮಾರ್ಗದಿಂದ ವಿಮುಖರಾಗುವುದಿಲ್ಲ. ಇಹಲೋಕದಲ್ಲಿ ನಾವು ಅವರನ್ನು (ಇಬ್ರಾಹೀಮರನ್ನು) ವಿಶೇಷವಾಗಿ ಆರಿಸಿದ್ದೇವೆ. ಪರಲೋಕದಲ್ಲಿ ಅವರು ನೀತಿವಂತರಲ್ಲಿ ಸೇರಿರುತ್ತಾರೆ.
Bakara 2:131
ಅವರೊಡನೆ ಅವರ ಪರಿಪಾಲಕನು (ಅಲ್ಲಾಹು) “ಶರಣಾಗು” ಎಂದಾಗ, ಅವರು ಹೇಳಿದರು: “ಸರ್ವಲೋಕಗಳ ಪರಿಪಾಲಕನಿಗೆ (ಅಲ್ಲಾಹನಿಗೆ) ನಾನು ಸಂಪೂರ್ಣ ಶರಣಾಗಿದ್ದೇನೆ.”
Bakara 2:132
ಇಬ್ರಾಹೀಮ್ ಮತ್ತು ಯಾಕೂಬರು ತಮ್ಮ ಸಂತಾನಕ್ಕೆ ಅದನ್ನೇ ಉಪದೇಶಿಸುತ್ತಾ ಹೇಳಿದರು: “ಓ ನನ್ನ ಮಕ್ಕಳೇ! ನಿಶ್ಚಯವಾಗಿಯೂ ಅಲ್ಲಾಹು ಈ ಧರ್ಮವನ್ನು ನಿಮಗೆ ವಿಶೇಷವಾಗಿ ಆರಿಸಿದ್ದಾನೆ. ಆದ್ದರಿಂದ ನೀವು ಮುಸ್ಲಿಮರಾಗಿಯೇ ಹೊರತು ಇಹಲೋಕ ತ್ಯಜಿಸಬೇಡಿ.”
Bakara 2:133
ಯಾಕೂಬರ ಮರಣದ ಸಮಯದಲ್ಲಿ ನೀವು ಅಲ್ಲಿ ಉಪಸ್ಥಿತರಿದ್ದಿರಾ? ಅವರು ತಮ್ಮ ಮಕ್ಕಳೊಡನೆ, “ನನ್ನ ಬಳಿಕ ನೀವು ಯಾರನ್ನು ಆರಾಧಿಸುತ್ತೀರಿ?” ಎಂದು ಕೇಳಿದ ಸಂದರ್ಭ. ಮಕ್ಕಳು ಹೇಳಿದರು: “ನಾವು ನಿಮ್ಮ ದೇವನು ಮತ್ತು ನಿಮ್ಮ ಪೂರ್ವಜರಾದ ಇಬ್ರಾಹೀಮ್, ಇಸ್ಮಾಈಲ್ ಹಾಗೂ ಇಸ್‍ಹಾಕರ ದೇವನಾದ ಏಕೈಕ ದೇವನನ್ನು ಆರಾಧಿಸುತ್ತೇವೆ. ನಾವು ಅವನಿಗೆ ಶರಣಾಗಿ ಬದುಕುತ್ತೇವೆ.”
Bakara 2:134
ಆ ಸಮುದಾಯವು ಕಳೆದುಹೋಗಿದೆ. ಅವರು ಮಾಡಿದ್ದು ಅವರಿಗೆ ಮತ್ತು ನೀವು ಮಾಡಿದ್ದು ನಿಮಗೆ. ಅವರು ಮಾಡಿದ ಕರ್ಮಗಳ ಬಗ್ಗೆ ನಿಮ್ಮೊಂದಿಗೆ ಪ್ರಶ್ನಿಸಲಾಗುವುದಿಲ್ಲ.
Bakara 2:135
ಅವರು ಹೇಳಿದರು: “ನೀವು ಯಹೂದಿಗಳು ಅಥವಾ ಕ್ರೈಸ್ತರಾಗಿರಿ; ನೀವು ಸನ್ಮಾರ್ಗ ಪಡೆಯುವಿರಿ.” ಹೇಳಿರಿ: “ಅಲ್ಲ; (ವಾಸ್ತವವಾಗಿ ಸನ್ಮಾರ್ಗದಲ್ಲಿರುವವರು) ಇಬ್ರಾಹೀಮರ ಮಾರ್ಗವನ್ನು ಹಿಂಬಾಲಿಸುವವರು. ಅವರು (ಇಬ್ರಾಹೀಮ್) ಏಕನಿಷ್ಠರಾಗಿದ್ದರು.[1] ಅವರು ಬಹುದೇವಾರಾಧಕರಲ್ಲಿ ಸೇರಿದವರಾಗಿರಲಿಲ್ಲ.”
———
[1] ಏಕನಿಷ್ಠ ಎಂದರೆ ಒಬ್ಬನೇ ದೇವನ ಆರಾಧಕ ಮತ್ತು ಇತರೆಲ್ಲಾ ದೇವರುಗಳನ್ನು ಬಿಟ್ಟು ಏಕೈಕ ದೇವನನ್ನು ಮಾತ್ರ ಆರಾಧಿಸುವವನು.
Bakara 2:136
ಹೇಳಿರಿ: “ನಾವು ಅಲ್ಲಾಹನಲ್ಲಿ, ನಮಗೆ ಅವತೀರ್ಣವಾಗಿರುವುದರಲ್ಲಿ, ಇಬ್ರಾಹೀಮರಿಗೆ, ಇಸ್ಮಾಈಲರಿಗೆ, ಇಸ್‍ಹಾಕರಿಗೆ, ಯಾಕೂಬರಿಗೆ ಮತ್ತು ಯಾಕೂಬರ ಸಂತಾನಕ್ಕೆ ಅವತೀರ್ಣವಾಗಿರುವುದರಲ್ಲಿ, ಮೂಸಾ ಮತ್ತು ಈಸಾರಿಗೆ ನೀಡಲಾಗಿರುವುದರಲ್ಲಿ, ಎಲ್ಲಾ ಪ್ರವಾದಿಗಳಿಗೂ ಅವರ ಪರಿಪಾಲಕನ (ಅಲ್ಲಾಹನ) ಕಡೆಯಿಂದ ನೀಡಲಾಗಿರುವುದರಲ್ಲಿ ವಿಶ್ವಾಸವಿಟ್ಟಿದ್ದೇವೆ. ಅವರಲ್ಲಿ ಯಾರ ನಡುವೆಯೂ ನಾವು ಬೇಧ ಮಾಡುವುದಿಲ್ಲ. ನಾವು ಅವನಿಗೆ ಶರಣಾಗಿ ಬದುಕುತ್ತೇವೆ.”
Bakara 2:137
ನೀವು ವಿಶ್ವಾಸವಿಟ್ಟಂತೆಯೇ ಅವರೂ ವಿಶ್ವಾಸವಿಟ್ಟರೆ ಅವರು ಸನ್ಮಾರ್ಗ ಪಡೆಯುವರು. ಆದರೆ ಅವರು ವಿಮುಖರಾಗುವುದಾದರೆ ಅವರು ಸ್ಪಷ್ಟ ಭಿನ್ನಮತದಲ್ಲಿದ್ದಾರೆ. ಅವರ ವಿರುದ್ಧ ನಿಮಗೆ ಅಲ್ಲಾಹು ಸಾಕಾಗುವನು. ಅವನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.[1]
———
[1] ಅಂದರೆ ನೀವು ವಿಶ್ವಾಸವಿಟ್ಟಂತೆ ವಿಶ್ವಾಸವಿಡದೆ ಅವರು ನಿಮ್ಮ ವಿರುದ್ಧ ಕುತಂತ್ರಗಳನ್ನು ಮುಂದುವರಿಸಿದರೆ ನೀವೇನೂ ಹೆದರಬೇಕಾಗಿಲ್ಲ. ಏಕೆಂದರೆ, ಅಲ್ಲಾಹು ನಿಮ್ಮ ಜೊತೆಗಿದ್ದಾನೆ. ಅವನು ನಿಮ್ಮನ್ನು ಅವರ ಕುತಂತ್ರಗಳಿಂದ ರಕ್ಷಿಸುತ್ತಾನೆ. ಈ ಭವಿಷ್ಯವು ಕೆಲವೇ ವರ್ಷಗಳಲ್ಲಿ ನೆರವೇರಿತು. ಯಹೂದಿಗಳ ಬನೂ ಕೈನುಕಾ ಮತ್ತು ಬನೂ ನದೀರ್ ಗೋತ್ರಗಳನ್ನು ಗಡೀಪಾರು ಮಾಡಲಾಯಿತು ಮತ್ತು ಬನೂ ಕುರೈಝ ಗೋತ್ರವನ್ನು ಸಂಹಾರ ಮಾಡಲಾಯಿತು.
Bakara 2:138
ಅಲ್ಲಾಹನ ಬಣ್ಣವನ್ನು ಸ್ವೀಕರಿಸಿರಿ.[1] ಅಲ್ಲಾಹನಿಗಿಂತಲೂ ಉತ್ತಮ ಬಣ್ಣವನ್ನು ನೀಡುವವನು ಯಾರು? ನಾವಂತೂ ಅವನನ್ನು ಮಾತ್ರ ಆರಾಧಿಸುತ್ತೇವೆ.
———
[1] ಕ್ರೈಸ್ತರು ಹಳದಿ ಬಣ್ಣದ ನೀರನ್ನು ಮೀಸಲಿಟ್ಟಿದ್ದರು. ಅದನ್ನು ಎಲ್ಲಾ ಕ್ರೈಸ್ತ ಮಕ್ಕಳಿಗೆ ಮತ್ತು ಕ್ರೈಸ್ತ ಧರ್ಮ ಸ್ವೀಕರಿಸುವವರಿಗೆ ನೀಡುತ್ತಿದ್ದರು. ಬಾಪ್ಟಿಸಂ ಎಂದು ಕರೆಯುವ ಈ ಸಂಪ್ರದಾಯವು ಕ್ರಿಶ್ಚಿಯನ್ ಧರ್ಮದಲ್ಲಿ ಬಹಳ ಮುಖ್ಯವಾಗಿದೆ. ಇಲ್ಲಿ ಅಲ್ಲಾಹನ ಬಣ್ಣ ಎಂದರೆ ಮನುಷ್ಯನ ಸಹಜ ಮನೋಧರ್ಮವಾದ ಇಸ್ಲಾಂ ಧರ್ಮ. ಎಲ್ಲಾ ಪ್ರವಾದಿಗಳು ಈ ಧರ್ಮವನ್ನೇ ಬೋಧಿಸಿದ್ದರು.
Bakara 2:139
(ಓ ಪ್ರವಾದಿಯವರೇ!) ಹೇಳಿರಿ: “ನೀವು ನಮ್ಮ ಮತ್ತು ನಿಮ್ಮ ಪರಿಪಾಲಕನಾದ ಅಲ್ಲಾಹನ ವಿಷಯದಲ್ಲಿ ನಮ್ಮೊಡನೆ ತರ್ಕಿಸುತ್ತೀರಾ? ನಮ್ಮ ಕರ್ಮಗಳು ನಮಗೆ ಮತ್ತು ನಿಮ್ಮ ಕರ್ಮಗಳು ನಿಮಗೆ. ನಾವಂತೂ ಅವನಿಗೆ ಸಂಪೂರ್ಣ ನಿಷ್ಕಳಂಕರಾಗಿದ್ದೇವೆ.”
Bakara 2:140
ಇಬ್ರಾಹೀಮ್, ಇಸ್ಮಾಈಲ್, ಇಸ್‍ಹಾಕ್, ಯಾಕೂಬ್ ಮತ್ತು ಯಾಕೂಬರ ಸಂತಾನಗಳು ಯಹೂದಿಗಳು ಅಥವಾ ಕ್ರೈಸ್ತರಾಗಿದ್ದರೆಂದು ನೀವು ಹೇಳುತ್ತೀರಾ? ಹೇಳಿರಿ: “ಹೆಚ್ಚು ತಿಳಿದವರು ನೀವೋ ಅಥವಾ ಅಲ್ಲಾಹನೋ?” ಅಲ್ಲಾಹನ ಬಳಿ ಸಾಕ್ಷಿಯನ್ನು ಅಡಗಿಸುವವನಿಗಿಂತಲೂ ದೊಡ್ಡ ಅಕ್ರಮಿ ಯಾರು? ನೀವು ಮಾಡುತ್ತಿರುವ ಕರ್ಮಗಳ ಕುರಿತು ಅಲ್ಲಾಹು ತಿಳಿಯದವನಲ್ಲ.
Bakara 2:141
ಆ ಸಮುದಾಯವು ಕಳೆದುಹೋಗಿದೆ. ಅವರು ಮಾಡಿದ್ದು ಅವರಿಗೆ ಮತ್ತು ನೀವು ಮಾಡಿದ್ದು ನಿಮಗೆ. ಅವರು ಮಾಡಿದ ಕರ್ಮಗಳ ಬಗ್ಗೆ ನಿಮ್ಮೊಂದಿಗೆ ಪ್ರಶ್ನಿಸಲಾಗುವುದಿಲ್ಲ.
Bakara 2:142
“ಇವರು ಇದುವರೆಗೆ ಯಾವ ಕಿಬ್ಲದಲ್ಲಿದ್ದರೋ ಅದರಿಂದ ಇವರನ್ನು ತಿರುಗಿಸಿದ್ದೇನು?” ಎಂದು ಸದ್ಯವೇ ಜನರಲ್ಲಿರುವ ಕೆಲವು ತಿಳಿಗೇಡಿಗಳು ಕೇಳುವರು. ಹೇಳಿರಿ: “ಪೂರ್ವ ಮತ್ತು ಪಶ್ಚಿಮಗಳು ಅಲ್ಲಾಹನಿಗೆ ಸೇರಿದ್ದು. ಅವನು ಇಚ್ಛಿಸುವವರಿಗೆ ಅವನು ನೇರ ಮಾರ್ಗವನ್ನು ತೋರಿಸುತ್ತಾನೆ.”
Bakara 2:143
ಈ ರೀತಿ ನಾವು ನಿಮ್ಮನ್ನು ಒಂದು ಮಧ್ಯಮ ಸಮುದಾಯವನ್ನಾಗಿ ಮಾಡಿದೆವು; ನೀವು ಜನರಿಗೆ ಸಾಕ್ಷಿಗಳಾಗಲು ಮತ್ತು ಸಂದೇಶವಾಹಕರು ನಿಮಗೆ ಸಾಕ್ಷಿಯಾಗಲು. ನೀವು (ಮೊದಲು) ಯಾವ ಕಿಬ್ಲದಲ್ಲಿದ್ದಿರೋ ಅದನ್ನು ನಾವು ನಿಶ್ಚಯಿಸಿದ್ದು, ಸಂದೇಶವಾಹಕರನ್ನು ಹಿಂಬಾಲಿಸುವವರು ಯಾರು ಮತ್ತು ತಮ್ಮ ಹಿಮ್ಮಡಿಗಳಲ್ಲಿ ತಿರುಗಿ ನಡೆಯುವವರು ಯಾರು ಎಂದು ತಿಳಿಯುವುದಕ್ಕಾಗಿ ಮಾತ್ರ. ಅಲ್ಲಾಹು ಸನ್ಮಾರ್ಗದಲ್ಲಿ ಸೇರಿಸಿದವರ ಹೊರತು ಇತರೆಲ್ಲರಿಗೂ ಅದು ಬಹಳ ಕಷ್ಟದ ಕೆಲಸವಾಗಿದೆ. ಅಲ್ಲಾಹು ನಿಮ್ಮ ವಿಶ್ವಾಸವನ್ನು ವ್ಯರ್ಥಗೊಳಿಸುವುದಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಮನುಷ್ಯರೊಂದಿಗೆ ಅನುಕಂಪವುಳ್ಳವನು ಮತ್ತು ಕರುಣೆಯುಳ್ಳವನಾಗಿದ್ದಾನೆ.
Bakara 2:144
ನಿಮ್ಮ ಮುಖವು ಪದೇ ಪದೇ ಆಕಾಶದ ಕಡೆಗೆ ತಿರುಗುವುದನ್ನು ನಾವು ನೋಡುತ್ತಿದ್ದೇವೆ. ಆದ್ದರಿಂದ ಈಗ ನಾವು ನಿಮ್ಮನ್ನು ನೀವು ಇಷ್ಟಪಡುವ ಕಿಬ್ಲದ ಕಡೆಗೆ ತಿರುಗಿಸುತ್ತೇವೆ.[1] ನೀವು ನಿಮ್ಮ ಮುಖವನ್ನು ಮಸ್ಜಿದುಲ್ ಹರಾಮ್‍ನ ಕಡೆಗೆ ತಿರುಗಿಸಿರಿ; ಮತ್ತು ನೀವು (ಮುಸ್ಲಿಮರು) ಎಲ್ಲೇ ಇದ್ದರೂ ನಿಮ್ಮ ಮುಖಗಳನ್ನು ಕೂಡ ಅದರ ಕಡೆಗೆ ತಿರುಗಿಸಿರಿ. ನಿಶ್ಚಯವಾಗಿಯೂ, ಇದು ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಸತ್ಯವೆಂದು ಗ್ರಂಥ ನೀಡಲಾದವರಿಗೆ ಚೆನ್ನಾಗಿ ತಿಳಿದಿದೆ.[2] ಅವರು ಮಾಡುತ್ತಿರುವ ಕರ್ಮಗಳ ಕುರಿತು ಅಲ್ಲಾಹು ತಿಳಿಯದವನಲ್ಲ.
———
[1] ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಕ್ಕಾದಿಂದ ಮದೀನಕ್ಕೆ ವಲಸೆ ಬಂದಾಗ, ಸುಮಾರು ಒಂದು ತಿಂಗಳ ಕಾಲ ಬೈತುಲ್ ಮುಕದ್ದಿಸ್‌ಗೆ ಅಭಿಮುಖವಾಗಿ ನಿಂತು ನಮಾಝ್ ನಿರ್ವಹಿಸುವುದನ್ನು ಮುಂದುವರಿಸಿದರು. ಅವರು ಕಾಬಾಲಯಕ್ಕೆ ತಿರುಗಿ ನಿಂತು ನಮಾಝ್ ನಿರ್ವಹಿಸಲು ಬಯಸುತ್ತಿದ್ದರು. ಅದಕ್ಕಾಗಿ ಅವರು ಪ್ರಾರ್ಥಿಸುತ್ತಿದ್ದರು ಮತ್ತು ಯಾವುದಾದರೂ ಸಂದೇಶ ಬರಬಹುದೇ ಎಂದು ಪದೇ ಪದೇ ಆಕಾಶದ ಕಡೆಗೆ ನೋಡುತ್ತಿದ್ದರು. ಕೊನೆಗೆ ಅಲ್ಲಾಹು ಕಿಬ್ಲ ಬದಲಾವಣೆಯ ಬಗ್ಗೆ ವಚನವನ್ನು ಅವತೀರ್ಣಗೊಳಿಸಿದನು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಿಬ್ಲ ಬದಲಾವಣೆ ಮಾಡಿದಾಗ ಯಹೂದಿಗಳು ಮತ್ತು ಕಪಟ ವಿಶ್ವಾಸಿಗಳು ಗದ್ದಲವೆಬ್ಬಿಸಿದರು. ನಮಾಝ್ ಅಲ್ಲಾಹನ ಆರಾಧನೆಯಾಗಿದೆ ಮತ್ತು ಅಲ್ಲಾಹು ನಿಶ್ಚಯಿಸಿದ ದಿಕ್ಕಿಗೆ ತಿರುಗಿ ಅದನ್ನು ನಿರ್ವಹಿಸಬೇಕಾಗಿದೆ. ಪೂರ್ವ ಮತ್ತು ಪಶ್ಚಿಮ ದಿಕ್ಕುಗಳು ಅಲ್ಲಾಹನಿಗೆ ಸೇರಿದ್ದು. ಅವನು ಯಾವ ದಿಕ್ಕಿಗೆ ತಿರುಗಬೇಕೆಂದು ಆದೇಶಿಸಿದನೋ ಆ ದಿಕ್ಕಿಗೆ ತಿರುಗಿ ನಮಾಝ್ ನಿರ್ವಹಿಸುವುದು ದಾಸನ ಕರ್ತವ್ಯ. ಕಿಬ್ಲ ಬದಲಾವಣೆಯ ಆದೇಶ ಅಸರ್ ನಮಾಝ್‌ನ ಸಂದರ್ಭದಲ್ಲಿ ಬಂದಿತ್ತು ಮತ್ತು ಕಾಬಾಲಯಕ್ಕೆ ತಿರುಗಿ ಅಸರ್ ನಮಾಝ್ ನಿರ್ವಹಿಸಲಾಯಿತು. [2] ಅಂತಿಮ ಪ್ರವಾದಿಯ ಕಿಬ್ಲ ಕಾಬಾ ಆಗಿದೆ ಎಂದು ಯಹೂದಿಗಳ ಗ್ರಂಥದಲ್ಲಿ ಸ್ಪಷ್ಟ ಸೂಚನೆಗಳಿದ್ದವು. ಅವರಿಗೆ ಇದು ಸ್ಪಷ್ಟವಾಗಿ ತಿಳಿದಿತ್ತು. ಆದರೂ ತಮ್ಮ ಅಹಂಕಾರ ಮತ್ತು ಅಸೂಯೆಯ ನಿಮಿತ್ತ ಅದನ್ನು ಸ್ವೀಕರಿಸಲು ಅವರು ಹಿಂದೇಟು ಹಾಕಿದರು.
Bakara 2:145
ಗ್ರಂಥ ನೀಡಲಾದವರಿಗೆ ನೀವು ಎಲ್ಲಾ ರೀತಿಯ ಪುರಾವೆಗಳನ್ನು ತಂದು ತೋರಿಸಿದರೂ ಅವರು ನಿಮ್ಮ ಕಿಬ್ಲವನ್ನು ಹಿಂಬಾಲಿಸುವುದಿಲ್ಲ. ನೀವು ಕೂಡ ಅವರ ಕಿಬ್ಲವನ್ನು ಅಂಗೀಕರಿಸುವುದಿಲ್ಲ. ಅವರಲ್ಲಿ ಒಬ್ಬರು ಇನ್ನೊಬ್ಬರ ಕಿಬ್ಲವನ್ನು ಅಂಗೀಕರಿಸುವುದಿಲ್ಲ. ನಿಮಗೆ ಜ್ಞಾನವು ಬಂದ ಬಳಿಕ ನೀವೇನಾದರೂ ಅವರ ಸ್ವೇಚ್ಛೆಗಳನ್ನು ಹಿಂಬಾಲಿಸಿದರೆ, ನಿಶ್ಚಯವಾಗಿಯೂ ನೀವು ಅಕ್ರಮಿಗಳಲ್ಲಿ ಸೇರುವಿರಿ.
Bakara 2:146
ನಾವು ಯಾರಿಗೆ ಗ್ರಂಥವನ್ನು ನೀಡಿದ್ದೇವೆಯೋ ಅವರು ತಮ್ಮ ಮಕ್ಕಳನ್ನು ಗುರುತಿಸುವಂತೆಯೇ ಅವರನ್ನು (ಪ್ರವಾದಿಯನ್ನು) ಗುರುತಿಸುತ್ತಾರೆ. ನಿಶ್ಚಯವಾಗಿಯೂ ಅವರಲ್ಲೊಂದು ಗುಂಪು ಸತ್ಯವನ್ನು ತಿಳಿದೂ ಸಹ ಅದನ್ನು ಮುಚ್ಚಿಡುತ್ತಾರೆ.
Bakara 2:147
ಇದು ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಸತ್ಯವಾಗಿದೆ. ಆದ್ದರಿಂದ ನೀವು ಸಂಶಯಪಡುವವರಲ್ಲಿ ಸೇರಲೇಬೇಡಿ.
Bakara 2:148
ಪ್ರತಿಯೊಬ್ಬರೂ (ಪ್ರಾರ್ಥನೆಯ ವೇಳೆ) ಒಂದಲ್ಲ ಒಂದು ಕಡೆಗೆ ತಿರುಗುತ್ತಾರೆ. ನೀವು ಸತ್ಕರ್ಮಗಳನ್ನು ಮಾಡಲು ಧಾವಿಸಿರಿ. ನೀವೆಲ್ಲೇ ಇದ್ದರೂ ಅಲ್ಲಾಹು ನಿಮ್ಮೆಲ್ಲರನ್ನೂ ತರುವನು. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
Bakara 2:149
ನೀವು ಎಲ್ಲಿಂದ ಹೊರಟರೂ ನಿಮ್ಮ ಮುಖವನ್ನು ಮಸ್ಜಿದುಲ್ ಹರಾಮ್‍ನ ಕಡೆಗೆ ತಿರುಗಿಸಿರಿ. ನಿಶ್ಚಯವಾಗಿಯೂ ಇದು ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಸತ್ಯವಾಗಿದೆ. ನೀವು ಮಾಡುತ್ತಿರುವ ಕರ್ಮಗಳ ಕುರಿತು ಅಲ್ಲಾಹು ತಿಳಿಯದವನಲ್ಲ.
Bakara 2:150
ನೀವು ಎಲ್ಲಿಂದ ಹೊರಟರೂ ನಿಮ್ಮ ಮುಖವನ್ನು ಮಸ್ಜಿದುಲ್ ಹರಾಮ್‍ನ ಕಡೆಗೆ ತಿರುಗಿಸಿರಿ. ನೀವು (ಮುಸ್ಲಿಮರು) ಎಲ್ಲೇ ಇದ್ದರೂ ನಿಮ್ಮ ಮುಖಗಳನ್ನು ಅದರ ಕಡೆಗೆ ತಿರುಗಿಸಿರಿ. ನಿಮ್ಮ ವಿರುದ್ಧ ಜನರಿಗೆ ಯಾವುದೇ ಸಾಕ್ಷ್ಯಾಧಾರ ಇಲ್ಲದಿರುವುದಕ್ಕಾಗಿ; ಆದರೆ ಅವರ ಪೈಕಿ ಅಕ್ರಮವೆಸಗಿದವರ ಹೊರತು. ನೀವು ಅವರನ್ನು ಭಯಪಡಬೇಡಿ; ನನ್ನನ್ನು ಭಯಪಡಿರಿ. ನಾನು ನನ್ನ ಅನುಗ್ರಹವನ್ನು ನಿಮಗೆ ಪೂರ್ಣಗೊಳಿಸುವುದಕ್ಕಾಗಿ ಮತ್ತು ನೀವು ಸನ್ಮಾರ್ಗ ಪಡೆಯುವುದಕ್ಕಾಗಿ.
Bakara 2:151
ನಾವು ನಿಮ್ಮಿಂದಲೇ ನಿಮಗೆ ಒಬ್ಬ ಸಂದೇಶವಾಹಕರನ್ನು ಕಳುಹಿಸಿದಂತೆ. ಅವರು ನಮ್ಮ ವಚನಗಳನ್ನು ನಿಮಗೆ ಓದಿಕೊಡುತ್ತಾರೆ, ನಿಮ್ಮನ್ನು ಶುದ್ಧೀಕರಿಸುತ್ತಾರೆ, ನಿಮಗೆ ಗ್ರಂಥವನ್ನು ಮತ್ತು ವಿವೇಕವನ್ನು ಕಲಿಸಿಕೊಡುತ್ತಾರೆ ಮತ್ತು ನಿಮಗೆ ತಿಳಿದಿರದ ವಿಷಯಗಳನ್ನು ಕಲಿಸಿಕೊಡುತ್ತಾರೆ.
Bakara 2:152
ಆದ್ದರಿಂದ ನೀವು ನನ್ನನ್ನು ಸ್ಮರಿಸಿರಿ; ನಾನು ನಿಮ್ಮನ್ನು ಸ್ಮರಿಸುತ್ತೇನೆ. ನನಗೆ ಕೃತಜ್ಞರಾಗಿರಿ; ನನಗೆ ಕೃತಘ್ನರಾಗಬೇಡಿ.
Bakara 2:153
ಓ ಸತ್ಯವಿಶ್ವಾಸಿಗಳೇ! ತಾಳ್ಮೆ ಮತ್ತು ನಮಾಝಿನ ಮೂಲಕ (ಅಲ್ಲಾಹನಲ್ಲಿ) ಸಹಾಯ ಬೇಡಿರಿ. ನಿಶ್ಚಯವಾಗಿಯೂ ಅಲ್ಲಾಹು ತಾಳ್ಮೆಯುಳ್ಳವರ ಜೊತೆಗಿದ್ದಾನೆ.
Bakara 2:154
ಅಲ್ಲಾಹನ ಮಾರ್ಗದಲ್ಲಿ ಹುತಾತ್ಮರಾದವರನ್ನು ‘ಸತ್ತವರು’ ಎಂದು ಹೇಳಬೇಡಿ. ಅವರು ಜೀವಂತವಾಗಿದ್ದಾರೆ; ಆದರೆ ನಿಮಗೆ ಅದರ ಜ್ಞಾನವಿಲ್ಲ.
Bakara 2:155
ನಿಶ್ಚಯವಾಗಿಯೂ ನಾವು ನಿಮ್ಮನ್ನು ಶತ್ರುಗಳ ಭಯದಿಂದ, ಹಸಿವಿನಿಂದ, ಆಸ್ತಿ, ಜೀವ ಅಥವಾ ಹಣ್ಣುಗಳ ನಷ್ಟದಿಂದ, ಹೀಗೆ ಒಂದಲ್ಲ ಒಂದು ವಿಧದಲ್ಲಿ ಪರೀಕ್ಷಿಸುತ್ತೇವೆ; ತಾಳ್ಮೆ ವಹಿಸುವವರಿಗೆ ಸುವಾರ್ತೆ ನೀಡಿರಿ.
Bakara 2:156
ಅವರು ಯಾರೆಂದರೆ, ಅವರಿಗೆ ಏನಾದರೂ ಅನಾಹುತ ಸಂಭವಿಸುವಾಗ ಅವರು ಹೇಳುತ್ತಾರೆ: “ನಿಶ್ಚಯವಾಗಿಯೂ ನಾವು ಅಲ್ಲಾಹನಿಗೆ ಸೇರಿದವರು; ಮತ್ತು ನಾವು ಅವನ ಕಡೆಗೇ ಮರಳುವವರು.”
Bakara 2:157
ಅವರ ಮೇಲೆ ಅವರ ಪರಿಪಾಲಕನ (ಅಲ್ಲಾಹನ) ಕಡೆಯ ಅನುಗ್ರಹಗಳು ಮತ್ತು ದಯೆಯಿದೆ. ಅವರೇ ಸನ್ಮಾರ್ಗದಲ್ಲಿರುವವರು.
Bakara 2:158
ನಿಶ್ಚಯವಾಗಿಯೂ ಸಫಾ ಮತ್ತು ಮರ್ವಾ ಅಲ್ಲಾಹನ ಚಿಹ್ನೆಗಳಲ್ಲಿ ಒಳಪಟ್ಟದ್ದಾಗಿವೆ. ಆದ್ದರಿಂದ ಅಲ್ಲಾಹನ ಭವನಕ್ಕೆ ಹಜ್ ಅಥವಾ ಉಮ್ರಾ ಮಾಡುವವರು ಇವುಗಳಿಗೆ ಪ್ರದಕ್ಷಿಣೆ ಮಾಡುವುದರಲ್ಲಿ ಯಾವುದೇ ದೋಷವಿಲ್ಲ.[1] ಸ್ವಯಂಪ್ರೇರಿತವಾಗಿ ಒಳಿತು ಮಾಡುವವರನ್ನು ಅಲ್ಲಾಹು ಮೆಚ್ಚುತ್ತಾನೆ ಮತ್ತು ಅವರ ಬಗ್ಗೆ ಅವನು ಚೆನ್ನಾಗಿ ತಿಳಿದಿದ್ದಾನೆ.
———
[1] ಇಸ್ಲಾಂ ಸ್ವೀಕರಿಸುವ ಮೊದಲು ಮದೀನದ ಅನ್ಸಾರಿಗಳು ಮನಾತ್ ಎಂಬ ವಿಗ್ರಹದ ಹೆಸರಲ್ಲಿ ತಲ್ಬಿಯತ್ ಹೇಳುತ್ತಿದ್ದರು. ಅವರು ಪರ್ವತಗಳ ಮೇಲೆ ಅದನ್ನು ಪೂಜಿಸುತ್ತಿದ್ದರು. ಅವರು ಹಜ್ ನಿರ್ವಹಿಸಲು ಮಕ್ಕಾಗೆ ಬಂದರೆ ಸಫಾ ಮತ್ತು ಮರ್ವಾದ ನಡುವೆ ಸಈ ಮಾಡುವುದನ್ನು ಪಾಪವೆಂದು ಪರಿಗಣಿಸುತ್ತಿದ್ದರು. ಮುಸ್ಲಿಮರಾದ ಬಳಿಕ ಅವರು ಇದರ ಬಗ್ಗೆ ಪ್ರವಾದಿಯವರಲ್ಲಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿಚಾರಿಸಿದಾಗ ಈ ವಚನವು ಅವತೀರ್ಣವಾಯಿತು.
Bakara 2:159
ನಾವು ಅವತೀರ್ಣಗೊಳಿಸಿದ ಸಾಕ್ಷ್ಯಾಧಾರಗಳನ್ನು ಮತ್ತು ಸನ್ಮಾರ್ಗವನ್ನು—ಅದನ್ನು ನಾವು ಗ್ರಂಥದಲ್ಲಿ ಜನರಿಗೆ ವಿವರಿಸಿಕೊಟ್ಟ ಬಳಿಕವೂ—ಬಚ್ಚಿಡುವವರು ಯಾರೋ ಅವರ ಮೇಲೆ ಅಲ್ಲಾಹನ ಶಾಪವಿದೆ; ಶಪಿಸುವವರೆಲ್ಲರ ಶಾಪವೂ ಇದೆ.
Bakara 2:160
ಆದರೆ ಪಶ್ಚಾತ್ತಾಪಪಡುವವರು, ಸರಿಪಡಿಸುವವರು ಮತ್ತು ವಿವರಿಸಿಕೊಡುವವರು ಯಾರೋ (ಅವರು ಇದಕ್ಕೆ ಹೊರತಾಗಿದ್ದಾರೆ). ಅವರ ಪಶ್ಚಾತ್ತಾಪವನ್ನು ನಾನು ಸ್ವೀಕರಿಸುತ್ತೇನೆ. ನಾನು ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ಕರುಣೆ ತೋರುವವನಾಗಿದ್ದೇನೆ.
Bakara 2:161
ನಿಶ್ಚಯವಾಗಿಯೂ ಸತ್ಯನಿಷೇಧಿಗಳು ಮತ್ತು ಸತ್ಯನಿಷೇಧಿಗಳಾಗಿಯೇ ಸಾಯುವವರು ಯಾರೋ ಅವರ ಮೇಲೆ ಅಲ್ಲಾಹನ, ದೇವದೂತರುಗಳ ಮತ್ತು ಮನುಷ್ಯರೆಲ್ಲರ ಶಾಪವಿದೆ.
Bakara 2:162
ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅವರಿಗೆ ಶಿಕ್ಷೆಯಲ್ಲಿ ರಿಯಾಯಿತಿಯಿಲ್ಲ ಮತ್ತು ಅವರಿಗೆ ವಿರಾಮವನ್ನೂ ನೀಡಲಾಗುವುದಿಲ್ಲ.
Bakara 2:163
ನಿಮ್ಮ ದೇವನು ಏಕೈಕ ದೇವನು. ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಅವನು ಪರಮ ದಯಾಳು ಮತ್ತು ಕರುಣಾನಿಧಿಯಾಗಿದ್ದಾನೆ.
Bakara 2:164
ನಿಶ್ಚಯವಾಗಿಯೂ ಭೂಮ್ಯಾಕಾಶಗಳ ಸೃಷ್ಟಿಯಲ್ಲಿ, ರಾತ್ರಿ-ಹಗಲುಗಳ ಬದಲಾವಣೆಯಲ್ಲಿ, ಜನರಿಗೆ ಉಪಕರಿಸುವ ವಸ್ತುಗಳೊಂದಿಗೆ ಸಮುದ್ರದಲ್ಲಿ ಚಲಿಸುವ ನಾವೆಗಳಲ್ಲಿ, ಅಲ್ಲಾಹು ಆಕಾಶದಿಂದ ಮಳೆಯನ್ನು ಸುರಿಸಿ ಅದರ ಮೂಲಕ ನಿರ್ಜೀವ ಭೂಮಿಗೆ ಜೀವ ನೀಡುವುದರಲ್ಲಿ, ಭೂಮಿಯಲ್ಲಿ ಎಲ್ಲಾ ರೀತಿಯ ಜೀವಿಗಳನ್ನು ಹಬ್ಬಿಸಿರುವುದರಲ್ಲಿ, ಗಾಳಿಯು ದಿಕ್ಕನ್ನು ಬದಲಿಸುವುದರಲ್ಲಿ ಮತ್ತು ಭೂಮ್ಯಾಕಾಶಗಳ ನಡುವೆ ನಿಯಂತ್ರಿಸಲಾಗುವ ಮೋಡಗಳಲ್ಲಿ ಆಲೋಚಿಸುವ ಜನರಿಗೆ ಹಲವಾರು ದೃಷ್ಟಾಂತಗಳಿವೆ.
Bakara 2:165
ಅಲ್ಲಾಹನಿಗೆ ಇತರರನ್ನು ಸರಿಸಾಟಿಯಾಗಿ ಮಾಡುವ ಕೆಲವರಿದ್ದಾರೆ. ಅಲ್ಲಾಹನನ್ನು ಪ್ರೀತಿಸುವಂತೆಯೇ ಅವರು ಅವರನ್ನೂ ಪ್ರೀತಿಸುತ್ತಾರೆ. ಆದರೆ ಸತ್ಯವಿಶ್ವಾಸಿಗಳು ಅಲ್ಲಾಹನನ್ನು (ಎಲ್ಲಕ್ಕಿಂತಲೂ) ಗಾಢವಾಗಿ ಪ್ರೀತಿಸುತ್ತಾರೆ.[1] ಅಕ್ರಮಿಗಳು (ಅಲ್ಲಾಹನ) ಶಿಕ್ಷೆಯನ್ನು ನೇರವಾಗಿ ನೋಡುವಾಗ, ಶಕ್ತಿ-ಸಾಮರ್ಥ್ಯವಿರುವುದು ಸಂಪೂರ್ಣವಾಗಿ ಅಲ್ಲಾಹನಿಗೆ ಮಾತ್ರ; ಮತ್ತು ಅಲ್ಲಾಹು ಅತಿಕಠೋರವಾಗಿ ಶಿಕ್ಷಿಸುತ್ತಾನೆಂದು ತಿಳಿಯುತ್ತಿದ್ದರೆ (ಎಷ್ಟು ಚೆನ್ನಾಗಿತ್ತು)!
———
[1] ಮಕ್ಕಾದ ಬಹುದೇವ ವಿಶ್ವಾಸಿಗಳು ಅಲ್ಲಾಹನಿಗೆ ಸಹಭಾಗಿಗಳನ್ನು ಕಲ್ಪಿಸಿಕೊಂಡು ಅವರನ್ನು ಆರಾಧಿಸುತ್ತಿದ್ದರು. ಅಲ್ಲಾಹನನ್ನು ಪ್ರೀತಿಸುವಂತೆಯೇ ಅವರು ಆ ದೇವರುಗಳನ್ನು ಕೂಡ ಪ್ರೀತಿಸುತ್ತಿದ್ದರು. ಈ ಸನ್ನಿವೇಶವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಾಲಕ್ಕೆ ಮಾತ್ರ ಸೀಮಿತವಲ್ಲ. ಆಧುನಿಕ ಕಾಲದಲ್ಲೂ ಇದನ್ನು ಕಾಣಬಹುದಾಗಿದೆ. ತಮ್ಮನ್ನು ಮುಸ್ಲಿಮರೆಂದು ಕರೆಯುವವರಲ್ಲೂ ಈ ರೋಗವು ಕಾಣಿಸಿಕೊಂಡಿದೆ. ಅವರು ಅಲ್ಲಾಹನನ್ನು ಬಿಟ್ಟು ಮಹಾಪುರುಷರು ಮತ್ತು ಅವರ ಸಮಾಧಿಗಳನ್ನು ಆರಾಧಿಸುತ್ತಾರೆ. ಅಲ್ಲಾಹನನ್ನು ಮಾತ್ರ ಆರಾಧಿಸಿರಿ ಎಂದು ಹೇಳಿದರೆ ಮಕ್ಕಾದ ಬಹುದೇವ ವಿಶ್ವಾಸಿಗಳಂತೆ ಇವರಿಗೂ ಕೂಡ ಕೋಪ ಬರುತ್ತದೆ.
Bakara 2:166
ಮುಖಂಡರು ತಮ್ಮ ಹಿಂಬಾಲಕರಿಂದ ದೂರ ಸರಿಯುವಾಗ, ಅವರೆಲ್ಲರೂ ಶಿಕ್ಷೆಯನ್ನು ನೇರವಾಗಿ ನೋಡುವಾಗ ಮತ್ತು ಅವರ ನಡುವಿನ ಸಂಬಂಧಗಳು ಕಳಚಿ ಬೀಳುವಾಗ!
Bakara 2:167
ಹಿಂಬಾಲಕರು ಹೇಳುವರು: “ನಮಗೆ (ಇಹಲೋಕಕ್ಕೆ) ಮರಳುವ ಇನ್ನೊಂದು ಅವಕಾಶವು ಸಿಗುತ್ತಿದ್ದರೆ, ಅವರು ನಮ್ಮಿಂದ ದೂರವಾದಂತೆ ನಾವೂ ಅವರಿಂದ ದೂರವಾಗುವೆವು.” ಈ ರೀತಿ ಅಲ್ಲಾಹು ಅವರ ಕರ್ಮಗಳನ್ನು ಅವರಿಗೆ ವಿಷಾದವಾಗುವ ರೀತಿಯಲ್ಲಿ ತೋರಿಸುವನು. ಅವರು ನರಕಾಗ್ನಿಯಿಂದ ಹೊರಹೋಗುವುದೇ ಇಲ್ಲ.
Bakara 2:168
ಓ ಜನರೇ! ಭೂಮಿಯಲ್ಲಿರುವ ಧರ್ಮಸಮ್ಮತವಾದ ಮತ್ತು ಶುದ್ಧವಾದ ಆಹಾರವನ್ನು ತಿನ್ನಿರಿ. ಶೈತಾನನ ಹೆಜ್ಜೆಗಳನ್ನು ಹಿಂಬಾಲಿಸಬೇಡಿ. ನಿಶ್ಚಯವಾಗಿಯೂ ಅವನು ನಿಮ್ಮ ಪ್ರತ್ಯಕ್ಷ ವೈರಿಯಾಗಿದ್ದಾನೆ.
Bakara 2:169
ಅವನು ನಿಮಗೆ ಕೆಡುಕು ಮತ್ತು ಅಶ್ಲೀಲತೆಗಳನ್ನು ಮಾಡಲು ಹಾಗೂ ಅಲ್ಲಾಹನ ವಿಷಯದಲ್ಲಿ ನಿಮಗೆ ಗೊತ್ತಿಲ್ಲದ್ದನ್ನು ಹೇಳಲು ಆದೇಶಿಸುತ್ತಾನೆ.
Bakara 2:170
“ಅಲ್ಲಾಹು ಅವತೀರ್ಣಗೊಳಿಸಿದ್ದನ್ನು ಅನುಸರಿಸಿರಿ” ಎಂದು ಅವರೊಡನೆ ಹೇಳಲಾದರೆ, ಅವರು ಹೇಳುತ್ತಾರೆ: “ಇಲ್ಲ, ನಮ್ಮ ಪೂರ್ವಜರು ಯಾವ ಮಾರ್ಗದಲ್ಲಿರುವುದನ್ನು ನಾವು ಕಂಡೆವೋ ಅದನ್ನೇ ನಾವು ಅನುಸರಿಸುತ್ತೇವೆ.”[1] ಅವರ ಪೂರ್ವಜರು ಏನೂ ತಿಳಿಯದವರು ಮತ್ತು ಸನ್ಮಾರ್ಗ ಪಡೆಯದವರಾಗಿದ್ದರೂ ಸಹ.
———
[1] ಇಂತಹ ಜನರು ಇಂದು ಕೂಡ ಇದ್ದಾರೆ. ಧರ್ಮದಲ್ಲಿ ಯಾವುದೇ ಪುರಾವೆಯಿಲ್ಲದ ನವೀನಾಚಾರಗಳನ್ನು ತೊರೆಯಿರಿ ಎಂದು ಅವರೊಡನೆ ಹೇಳಿದರೆ, ಇವೆಲ್ಲವನ್ನೂ ನಮ್ಮ ಪೂರ್ವಜರು ಆಚರಿಸುತ್ತಿದ್ದರು; ನಾವು ಅವರನ್ನು ಹಿಂಬಾಲಿಸಿ ಅವರ ಮಾರ್ಗದಲ್ಲಿ ಚಲಿಸುತ್ತೇವೆ ಎಂದು ಅವರು ಹೇಳುತ್ತಾರೆ.
Bakara 2:171
ಸತ್ಯನಿಷೇಧಿಗಳ ಉದಾಹರಣೆಯು ಕರೆ ಮತ್ತು ಕೂಗನ್ನು ಮಾತ್ರ ಕೇಳುವ ಜಾನುವಾರುಗಳ ಮುಂದೆ ಕಿರಿಚುವ ವ್ಯಕ್ತಿಯಂತೆ. ಅವರು ಕಿವುಡರು, ಮೂಕರು ಮತ್ತು ಕುರುಡರು. ಆದ್ದರಿಂದ ಅವರು ಅರ್ಥಮಾಡಿಕೊಳ್ಳುವುದಿಲ್ಲ.
Bakara 2:172
ಓ ಸತ್ಯವಿಶ್ವಾಸಿಗಳೇ! ನಾವು ನಿಮಗೆ ನೀಡಿದ ಶುದ್ಧ ವಸ್ತುಗಳಿಂದ ತಿನ್ನಿರಿ ಮತ್ತು ಅಲ್ಲಾಹನಿಗೆ ಕೃತಜ್ಞರಾಗಿರಿ; ನೀವು ಅವನನ್ನು ಮಾತ್ರ ಆರಾಧಿಸುವವರಾಗಿದ್ದರೆ.
Bakara 2:173
ಅವನು ನಿಮಗೆ ಶವ, ರಕ್ತ, ಹಂದಿ ಮಾಂಸ ಮತ್ತು ಅಲ್ಲಾಹೇತರರ ಹೆಸರನ್ನು ಘೋಷಿಸಲಾದ ವಸ್ತುಗಳನ್ನು ಮಾತ್ರ ನಿಷೇಧಿಸಿದ್ದಾನೆ.[1] ಆದರೆ ಯಾರಾದರೂ (ಇವುಗಳನ್ನು ಸೇವಿಸಲು) ನಿರ್ಬಂಧಿತನಾದರೆ ಅವನ ಮೇಲೆ ದೋಷವಿಲ್ಲ. ಆದರೆ ಅವನು ಅಗತ್ಯಕ್ಕಿಂತ ಹೆಚ್ಚು ಸೇವಿಸಬಾರದು ಮತ್ತು (ಅಲ್ಲಾಹು ಅನುಮತಿಸಿದ) ಎಲ್ಲೆಯನ್ನು ಮೀರಬಾರದು. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.
———
[1] ಇಲ್ಲಿ ನಾಲ್ಕು ನಿಷೇಧಿತ ವಸ್ತುಗಳ ಬಗ್ಗೆ ಉಲ್ಲೇಖಿಸಲಾಗಿದೆ. ವಚನದಲ್ಲಿ "ಇನ್ನಮಾ" (ಮಾತ್ರ) ಎಂಬ ಪದ ಬಳಸಿರುವುದರಿಂದ ನಿಷೇಧಿತ ವಸ್ತುಗಳು ನಾಲ್ಕಕ್ಕೆ ಮಾತ್ರ ಸೀಮಿತ ಎಂದು ಅರ್ಥ ಮಾಡಿಕೊಳ್ಳಬಾರದು. ನಿಷೇಧಿತ ವಸ್ತುಗಳು ಈ ನಾಲ್ಕಕ್ಕೆ ಸೀಮಿತವಲ್ಲ. ಇದು ಸಂದರ್ಭಕ್ಕೆ ಅನುಗುಣವಾಗಿ ಅವತೀರ್ಣವಾದ ವಚನವಾಗಿರುವುದರಿಂದ ಇದರಲ್ಲಿ ನಾಲ್ಕು ವಸ್ತುಗಳನ್ನು ಮಾತ್ರ ನಿಷಿದ್ಧವೆಂದು ಹೇಳಲಾಗಿದೆ.
Bakara 2:174
ನಿಶ್ಚಯವಾಗಿಯೂ ಅಲ್ಲಾಹು ಅವತೀರ್ಣಗೊಳಿಸಿದ ಗ್ರಂಥವನ್ನು ಬಚ್ಚಿಡುವವರು ಮತ್ತು ಅದನ್ನು ಅಲ್ಪ ಬೆಲೆಗೆ ಮಾರುವವರು ಯಾರೋ—ಅವರು ತಮ್ಮ ಉದರಗಳಲ್ಲಿ ಅಗ್ನಿಯನ್ನಲ್ಲದೆ ಬೇರೇನನ್ನೂ ತುಂಬಿಸುವುದಿಲ್ಲ. ಪುನರುತ್ಥಾನ ದಿನದಂದು ಅಲ್ಲಾಹು ಅವರೊಡನೆ ಮಾತನಾಡುವುದಿಲ್ಲ ಮತ್ತು ಅವರನ್ನು ಶುದ್ಧೀಕರಿಸುವುದಿಲ್ಲ. ಅವರಿಗೆ ಯಾತನಾಮಯ ಶಿಕ್ಷೆಯಿದೆ.
Bakara 2:175
ಅವರೇ ಸನ್ಮಾರ್ಗದ ಬದಲಿಗೆ ದುರ್ಮಾರ್ಗವನ್ನು ಮತ್ತು ಕ್ಷಮೆಯ ಬದಲಿಗೆ ಶಿಕ್ಷೆಯನ್ನು ಖರೀದಿಸಿದವರು. ಅವರು ನರಕ ಶಿಕ್ಷೆಯನ್ನು ಎಷ್ಟರಮಟ್ಟಿಗೆ ಸಹಿಸಿಕೊಳ್ಳುವರು!
Bakara 2:176
ಅದೇಕೆಂದರೆ, ಅಲ್ಲಾಹು ಗ್ರಂಥವನ್ನು ಸತ್ಯ ಸಮೇತ ಅವತೀರ್ಣಗೊಳಿಸಿದ್ದನು. ಗ್ರಂಥದ ವಿಷಯದಲ್ಲಿ ಭಿನ್ನಮತದಲ್ಲಿರುವವರು ವಿದೂರ ಮನಸ್ತಾಪದಲ್ಲಿದ್ದಾರೆ.
Bakara 2:177
ಒಳಿತು ಎಂದರೆ ನೀವು ನಿಮ್ಮ ಮುಖಗಳನ್ನು ಪೂರ್ವಕ್ಕೆ ಅಥವಾ ಪಶ್ಚಿಮಕ್ಕೆ ತಿರುಗಿಸುವುದಲ್ಲ. ಬದಲಿಗೆ, ಒಳಿತಿನಲ್ಲಿರುವವನು ಯಾರೆಂದರೆ ಅಲ್ಲಾಹನಲ್ಲಿ, ಅಂತ್ಯದಿನದಲ್ಲಿ, ದೇವದೂತರುಗಳಲ್ಲಿ, ಗ್ರಂಥದಲ್ಲಿ ಮತ್ತು ಪ್ರವಾದಿಗಳಲ್ಲಿ ವಿಶ್ವಾಸವಿಡುವವನು, ಧನದ ಮೇಲೆ ಪ್ರೀತಿಯಿದ್ದೂ ಸಹ ಅದನ್ನು ಸಂಬಂಧಿಕರಿಗೆ, ಅನಾಥರಿಗೆ, ನಿರ್ಗತಿಕರಿಗೆ, ದಾರಿಹೋಕನಿಗೆ, ಬೇಡುವವರಿಗೆ ಮತ್ತು ಗುಲಾಮ ವಿಮೋಚನೆಗೆ ಖರ್ಚು ಮಾಡುವವನು, ನಮಾಝನ್ನು ಸಂಸ್ಥಾಪಿಸುವವನು, ಝಕಾತ್ ನೀಡುವವನು, ಕರಾರು ಮಾಡಿದರೆ ಅದನ್ನು ನೆರವೇರಿಸುವವನು ಮತ್ತು ಬಡತನ, ಸಂಕಷ್ಟ ಹಾಗೂ ಯುದ್ಧಗಳ ಸಂದರ್ಭಗಳಲ್ಲಿ ತಾಳ್ಮೆಯಿಂದಿರುವವರು. ಅವರೇ (ನಿಜವಾದ) ಸತ್ಯವಂತರು ಮತ್ತು ಅವರೇ ದೇವಭಯವುಳ್ಳವರು.
Bakara 2:178
ಓ ಸತ್ಯವಿಶ್ವಾಸಿಗಳೇ! ಕೊಲೆಯಾದವರ ವಿಷಯದಲ್ಲಿ ಪ್ರತೀಕಾರ ಪಡೆಯುವುದನ್ನು ನಿಮಗೆ ಕಡ್ಡಾಯಗೊಳಿಸಲಾಗಿದೆ. ಸ್ವತಂತ್ರನ ಬದಲಿಗೆ ಸ್ವತಂತ್ರ, ಗುಲಾಮನ ಬದಲಿಗೆ ಗುಲಾಮ ಮತ್ತು ಹೆಣ್ಣಿನ ಬದಲಿಗೆ ಹೆಣ್ಣು. ಯಾರಿಗಾದರೂ ಅವನ ಸಹೋದರನ (ಕೊಲೆಯಾದವನ) ಕಡೆಯಿಂದ ಮಾಫಿ ನೀಡಲಾದರೆ, ಅವನು ಸ್ವೀಕಾರಾರ್ಹ ರೀತಿಯನ್ನು ಅನುಸರಿಸಲಿ ಮತ್ತು ಒಳ್ಳೆಯ ರೀತಿಯಲ್ಲಿ ಪರಿಹಾರವನ್ನು ನೀಡಲಿ. ಅದು ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ರಿಯಾಯಿತಿ ಮತ್ತು ದಯೆಯಾಗಿದೆ. ಅದರ ನಂತರವೂ ಯಾರಾದರೂ ಅತಿರೇಕವೆಸಗಿದರೆ ಅವನಿಗೆ ವೇದನಾಭರಿತ ಶಿಕ್ಷೆಯಿದೆ.
Bakara 2:179
ಓ ಬುದ್ಧಿವಂತರೇ! ಪ್ರತೀಕಾರ ಪಡೆಯುವುದರಲ್ಲಿ ನಿಮಗೆ ಜೀವನವಿದೆ. ನೀವು ದೇವಭಯವುಳ್ಳವರಾಗುವುದಕ್ಕಾಗಿ.[1]
———
[1] ಕೊಲೆ ಮಾಡುವವನಿಗೆ ಪ್ರತೀಕಾರ ನಿಯಮದ ಮೂಲಕ ತಾನೂ ಕೊಲೆಯಾಗುವೆನು ಎಂಬ ಭಯ ಮೂಡಿದರೆ ಅವನು ಕೊಲೆ ಮಾಡುವ ಮೊದಲು ಸಾವಿರ ಬಾರಿ ಯೋಚಿಸುತ್ತಾನೆ. ಕೊಲೆಗೆ ಕೊಲೆಯೆಂಬ ಪ್ರತೀಕಾರ ನಿಯಮವನ್ನು ಜಾರಿಗೊಳಿಸಿದರೆ ಆ ಸಮಾಜವು ಕೊಲೆಗಳಿಂದ ಸಂಪೂರ್ಣ ಮುಕ್ತವಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಇಂದು ಜನರು ಹೆಚ್ಚಾಗಿ ಕೊಲೆ ಮಾಡುವುದು ಕಾನೂನಿನಿಂದ ಸುಲಭವಾಗಿ ಪಾರಾಗಲು ಸಾಧ್ಯವಿದೆ ಎಂಬ ಭರವಸೆಯಿಂದಲೇ ಆಗಿದೆ.
Bakara 2:180
ನಿಮ್ಮಲ್ಲೊಬ್ಬರಿಗೆ ಮರಣವು ಆಸನ್ನವಾಗಿ ಅವನು ಆಸ್ತಿಯನ್ನು ಬಿಟ್ಟು ಹೋಗುವುದಾದರೆ, ತಂದೆ-ತಾಯಿಗೆ ಮತ್ತು ನಿಕಟ ಸಂಬಂಧಿಕರಿಗೆ ಸ್ವೀಕಾರಾರ್ಹ ರೀತಿಯಲ್ಲಿ ಉಯಿಲು ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.[1] ಇದು ದೇವಭಯವುಳ್ಳವರ ಕರ್ತವ್ಯವಾಗಿದೆ.
———
[1] ಈ ವಚನವು ಪ್ರತಿಯೊಬ್ಬ ವಾರಿಸುದಾರನಿಗೂ ಅವನ ಹಕ್ಕನ್ನು ನಿಖರವಾಗಿ ನಿಗದಿಪಡಿಸಲಾದ ವಾರಿಸು ಹಕ್ಕಿನ ವಚನವು ಅವತೀರ್ಣವಾಗುವ ಮೊದಲು ಅವತೀರ್ಣವಾಗಿದೆ. ವಾರಿಸು ಹಕ್ಕಿನ ವಚನವು ಅವತೀರ್ಣವಾದ ಬಳಿಕ ಈ ವಚನದಲ್ಲಿರುವ ನಿಯಮವನ್ನು ರದ್ದುಗೊಳಿಸಲಾಗಿದೆ.
Bakara 2:181
ಆದರೆ, ಅದನ್ನು (ಉಯಿಲನ್ನು) ಕೇಳಿದ ಬಳಿಕವೂ ಯಾರಾದರೂ ಅದನ್ನು ಬದಲಾಯಿಸಿದರೆ, ಆ ಪಾಪವು ಬದಲಾಯಿಸುವವರಿಗೆ ಮಾತ್ರವಾಗಿದೆ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನೂ ಕೇಳುವವನು ಮತ್ತು ತಿಳಿದವನಾಗಿದ್ದಾನೆ.
Bakara 2:182
ಆದರೆ, ಉಯಿಲು ಮಾಡಿದವನಿಂದ ಏನಾದರೂ ತಪ್ಪು ಅಥವಾ ಪಾಪವು ಸಂಭವಿಸಿದೆಯೆಂದು ಹೆದರಿ, ಯಾರಾದರೂ ಸಂಬಂಧಿತ ಕಕ್ಷಿಗಳ ಮಧ್ಯೆ ಸಂಧಾನ ಮಾಡಿದರೆ ಅದರಲ್ಲಿ ಅವರಿಗೆ ದೋಷವಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.
Bakara 2:183
ಓ ಸತ್ಯವಿಶ್ವಾಸಿಗಳೇ! ನಿಮಗಿಂತ ಮುಂಚಿನವರಿಗೆ ಕಡ್ಡಾಯಗೊಳಿಸಲಾದಂತೆ ನಿಮಗೂ ಉಪವಾಸವನ್ನು ಕಡ್ಡಾಯಗೊಳಿಸಲಾಗಿದೆ. ನೀವು ದೇವಭಯವುಳ್ಳವರಾಗುವುದಕ್ಕಾಗಿ.
Bakara 2:184
ಬೆರಳೆಣಿಕೆಯ ಕೆಲವು ದಿನಗಳು ಮಾತ್ರ. ನಿಮ್ಮಲ್ಲಿ ಯಾರಾದರೂ ಅನಾರೋಗ್ಯದಲ್ಲಿದ್ದರೆ ಅಥವಾ ಪ್ರಯಾಣದಲ್ಲಿದ್ದರೆ ಅವನು ಇತರ ದಿನಗಳಲ್ಲಿ ಆ ಎಣಿಕೆಯನ್ನು ಪೂರ್ತಿ ಮಾಡಲಿ.[1] (ಉಪವಾಸ ಆಚರಿಸಲು) ಸಾಧ್ಯವಾಗುವವರು[2] (ಅದರ ಬದಲಿಗೆ) ಪ್ರಾಯಶ್ಚಿತ್ತವಾಗಿ ಒಬ್ಬ ಬಡವನಿಗೆ ಆಹಾರವನ್ನು ನೀಡಲಿ. ಯಾರಾದರೂ ಸ್ವಯಂ ಪ್ರೇರಣೆಯಿಂದ ಒಳಿತು ಮಾಡಿದರೆ ಅದು ಅವನಿಗೆ ಒಳಿತಾಗಿದೆ. ಆದರೆ ಉಪವಾಸ ಆಚರಿಸುವುದೇ ನಿಮಗೆ ಒಳ್ಳೆಯದು.[3] ನೀವು ತಿಳಿದವರಾಗಿದ್ದರೆ.
———
[1] ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸಲು ಸಾಧ್ಯವಾಗದ ರೋಗಿಗಳಿಗೆ ಮತ್ತು ಪ್ರಯಾಣಿಕರಿಗೆ ಉಪವಾಸ ತೊರೆಯಲು ಅನುಮತಿಯಿದೆ. ಅವರು ಆ ಉಪವಾಸಗಳನ್ನು ನಂತರ ನಿರ್ವಹಿಸಿದರೆ ಸಾಕು. [2] ಅಂದರೆ ಬಹಳ ಕಷ್ಟದಿಂದ ಉಪವಾಸ ಆಚರಿಸಲು ಸಾಧ್ಯವಾಗುವವರು. ಉದಾಹರಣೆಗೆ, ವಯೋವೃದ್ಧರು ಮತ್ತು ಗುಣವಾಗುವ ನಿರೀಕ್ಷೆಯಿಲ್ಲದ ಕಾಯಿಲೆಯಿಂದ ಬಳಲುವವರಿಗೆ ಉಪವಾಸ ಆಚರಿಸಲು ಕಷ್ಟವಾಗುವುದಾದರೆ ಅವರು ಉಪವಾಸ ತೊರೆದು ಪರಿಹಾರದ ರೂಪದಲ್ಲಿ ಒಬ್ಬ ಬಡವನಿಗೆ ಅನ್ನದಾನ ಮಾಡಿದರೆ ಸಾಕು. ಆದರೆ ಹೆಚ್ಚಿನ ವ್ಯಾಖ್ಯಾನಕಾರರ ಅಭಿಪ್ರಾಯ ಪ್ರಕಾರ ಉಪವಾಸ ಆಚರಿಸಲು ಸಾಧ್ಯವಾಗುವ ಎಲ್ಲರೂ ಇದರಲ್ಲಿ ಒಳಪಡುತ್ತಾರೆ. ಇಸ್ಲಾಮಿನ ಆರಂಭಕಾಲದಲ್ಲಿ ಜನರಿಗೆ ಉಪವಾಸ ಆಚರಿಸುವ ಅಭ್ಯಾಸವಿಲ್ಲದ್ದರಿಂದ ಉಪವಾಸ ಆಚರಿಸುವುದನ್ನು ತೊರೆದು ಅದರ ಬದಲಿಗೆ ಒಬ್ಬ ಬಡವನಿಗೆ ಅನ್ನದಾನ ಮಾಡುವ ರಿಯಾಯಿತಿ ನೀಡಲಾಗಿತ್ತು. ನಂತರ ಈ ರಿಯಾಯಿತಿಯನ್ನು ರದ್ದುಗೊಳಿಸಿ ಉಪವಾಸ ಆಚರಿಸಲು ಸಾಧ್ಯವಾಗುವ ಎಲ್ಲರಿಗೂ ಉಪವಾಸ ಆಚರಿಸುವುದನ್ನು ಕಡ್ಡಾಯಗೊಳಿಸಲಾಯಿತು. ಆದರೆ ವಯೋವೃದ್ದರಿಗೆ ಮತ್ತು ನಿತ್ಯ ರೋಗಿಗಳಿಗೆ ಉಪವಾಸ ಆಚರಿಸಲು ಕಷ್ಟವಾಗುವುದಾದರೆ ಅದರ ಬದಲಿಗೆ ಪರಿಹಾರ ನೀಡಬಹುದೆಂಬ ನಿಯಮವನ್ನು ಊರ್ಜಿತದಲ್ಲಿರಿಸಲಾಯಿತು. [3] ಒಂದು ಉಪವಾಸಕ್ಕೆ ಪರಿಹಾರವಾಗಿ ಒಬ್ಬ ಬಡವನಿಗೆ ಅನ್ನದಾನ ಮಾಡಬೇಕು. ಆದರೆ ಯಾರಾದರೂ ಒಬ್ಬನಿಗಿಂತ ಹೆಚ್ಚು ಬಡವರಿಗೆ ಅನ್ನದಾನ ಮಾಡುವುದಾದರೆ ಅದು ಅವರಿಗೆ ಒಳಿತಾಗಿದೆ.
Bakara 2:185
ರಮದಾನ್ ಎಂದರೆ ಜನರಿಗೆ ಸನ್ಮಾರ್ಗವನ್ನು ತೋರಿಸಿಕೊಡುವ ಮತ್ತು ಸನ್ಮಾರ್ಗ ಹಾಗೂ ಸತ್ಯಾಸತ್ಯತೆಗಳನ್ನು ಬೇರ್ಪಡಿಸುವ ಪುರಾವೆಗಳನ್ನು ಹೊಂದಿರುವ ಪವಿತ್ರ ಕುರ್‌ಆನ್ ಅವತೀರ್ಣವಾದ ತಿಂಗಳು. ಆದ್ದರಿಂದ ನಿಮ್ಮಲ್ಲಿ ಯಾರಾದರೂ ಆ ತಿಂಗಳಿಗೆ ಸಾಕ್ಷಿಯಾದರೆ ಅವನು ಉಪವಾಸವನ್ನು ಆಚರಿಸಲಿ. ಯಾರಾದರೂ ಅನಾರೋಗ್ಯದಲ್ಲಿದ್ದರೆ ಅಥವಾ ಪ್ರಯಾಣದಲ್ಲಿದ್ದರೆ ಅವನು ಇತರ ದಿನಗಳಲ್ಲಿ ಆ ಎಣಿಕೆಯನ್ನು ಪೂರ್ತಿ ಮಾಡಲಿ. ಅಲ್ಲಾಹು ನಿಮಗೆ ಸುಲಭ ಮಾಡಲು ಬಯಸುತ್ತಾನೆ; ಅವನು ನಿಮಗೆ ಕಷ್ಟ ಕೊಡಲು ಬಯಸುವುದಿಲ್ಲ. ನೀವು ಆ ಎಣಿಕೆಯನ್ನು ಪೂರ್ತಿ ಮಾಡಲು, ಅಲ್ಲಾಹು ನಿಮಗೆ ಸನ್ಮಾರ್ಗವನ್ನು ತೋರಿಸಿದ್ದಕ್ಕಾಗಿ ಅವನ ಮಹಾತ್ಮೆಯನ್ನು ಕೊಂಡಾಡಲು ಮತ್ತು ಅವನಿಗೆ ಕೃತಜ್ಞರಾಗಿ ಬದುಕಲು (ಅವನು ಬಯಸುತ್ತಾನೆ).
Bakara 2:186
ನನ್ನ ದಾಸರು ನಿಮ್ಮೊಂದಿಗೆ ನನ್ನ ಬಗ್ಗೆ ಕೇಳಿದರೆ ನಾನು ಬಹಳ ಹತ್ತಿರದಲ್ಲಿದ್ದೇನೆ (ಎಂದು ಹೇಳಿರಿ). ಪ್ರಾರ್ಥಿಸುವವನು ನನ್ನನ್ನು ಕರೆದು ಪ್ರಾರ್ಥಿಸಿದರೆ ನಾನು ಅವನ ಪ್ರಾರ್ಥನೆಗೆ ಉತ್ತರ ನೀಡುತ್ತೇನೆ. ಆದ್ದರಿಂದ ಅವರು ನನಗೆ ವಿಧೇಯರಾಗಲಿ ಮತ್ತು ನನ್ನಲ್ಲಿ ವಿಶ್ವಾಸವಿಡಲಿ. ಅವರು ಸನ್ಮಾರ್ಗ ಪಡೆಯುವುದಕ್ಕಾಗಿ.
Bakara 2:187
ಉಪವಾಸದ ರಾತ್ರಿಯಲ್ಲಿ ನಿಮ್ಮ ಪತ್ನಿಯರೊಂದಿಗೆ ಲೈಂಗಿಕ ಸಂಪರ್ಕ ಮಾಡುವುದನ್ನು ನಿಮಗೆ ಅನುಮತಿಸಲಾಗಿದೆ. ಅವರು ನಿಮ್ಮ ಉಡುಪಾಗಿದ್ದಾರೆ ಮತ್ತು ನೀವು ಅವರ ಉಡುಪಾಗಿದ್ದೀರಿ. ನೀವು ನಿಮ್ಮ ಆತ್ಮಗಳನ್ನು ವಂಚಿಸುತ್ತಿದ್ದೀರಿ ಎಂದು ಅಲ್ಲಾಹನಿಗೆ ತಿಳಿದಿದೆ. ಆದ್ದರಿಂದ, ಅವನು ನಿಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸಿದ್ದಾನೆ ಮತ್ತು ನಿಮ್ಮನ್ನು ಕ್ಷಮಿಸಿದ್ದಾನೆ. ಈಗ ನೀವು ಅವರೊಂದಿಗೆ ಲೈಂಗಿಕ ಸಂಪರ್ಕವನ್ನು ಮಾಡಬಹುದು ಮತ್ತು ಅಲ್ಲಾಹು ನಿಮಗೆ ವಿಧಿಸಿದ್ದನ್ನು (ಮಕ್ಕಳನ್ನು) ಅರಸಬಹುದು. ಪ್ರಭಾತದ ಬಿಳಿಯ ನೂಲು ಕಪ್ಪು ನೂಲಿನಿಂದ ಸ್ಪಷ್ಟವಾಗಿ ಗೋಚರಿಸುವವರೆಗೆ ತಿನ್ನಿರಿ ಮತ್ತು ಕುಡಿಯಿರಿ. ನಂತರ ರಾತ್ರಿಯ ತನಕ ಉಪವಾಸವನ್ನು ಪೂರ್ತಿಗೊಳಿಸಿರಿ. ಆದರೆ ನೀವು ಮಸೀದಿಗಳಲ್ಲಿ ಧ್ಯಾನ (ಈತಿಕಾಫ್) ನಿರತರಾಗಿರುವಾಗ ಅವರೊಂದಿಗೆ ಲೈಂಗಿಕ ಸಂಪರ್ಕ ಮಾಡಬೇಡಿ. ಇವು ಅಲ್ಲಾಹನ ಎಲ್ಲೆಗಳಾಗಿವೆ. ನೀವು ಅವುಗಳ ಸಮೀಪಕ್ಕೂ ಹೋಗಬೇಡಿ. ಹೀಗೆ ಅಲ್ಲಾಹು ಜನರಿಗೆ ತನ್ನ ನಿಯಮಗಳನ್ನು ವಿವರಿಸಿಕೊಡುತ್ತಿದ್ದಾನೆ. ಅವರು ದೇವಭಯವುಳ್ಳವರಾಗುವುದಕ್ಕಾಗಿ.[1]
———
[1] ಇಸ್ಲಾಮಿನ ಆರಂಭ ಕಾಲದಲ್ಲಿ ಸೂರ್ಯಾಸ್ತದ ವೇಳೆ ಉಪವಾಸ ತೊರೆದರೆ ನಂತರ ಇಶಾ ನಮಾಝಿನ ತನಕ ಅಥವಾ ಮಲಗುವ ತನಕ ಮಾತ್ರ ತಿನ್ನುವುದು, ಕುಡಿಯುವುದು ಮತ್ತು ಲೈಂಗಿಕ ಸಂಪರ್ಕ ಮಾಡುವುದನ್ನು ಅನುಮತಿಸಲಾಗಿತ್ತು. ಮಲಗಿದ ನಂತರ ಇವೆಲ್ಲವೂ ನಿಷಿದ್ಧವಾಗಿದ್ದವು. ಈ ನಿರ್ಬಂಧವು ಕಠಿಣವಾಗಿತ್ತು ಮತ್ತು ಅದನ್ನು ಪಾಲಿಸಲು ಕಷ್ಟವಾಗುತ್ತಿತ್ತು. ಆದ್ದರಿಂದ ಅಲ್ಲಾಹು ಈ ನಿರ್ಬಂಧಗಳನ್ನು ತೆಗೆದುಹಾಕಿ ಪ್ರಭಾತೋದಯದ ತನಕ ತಿನ್ನುವ, ಕುಡಿಯುವ ಮತ್ತು ಲೈಂಗಿಕ ಸಂಪರ್ಕ ಮಾಡುವ ರಿಯಾಯಿತಿಯನ್ನು ನೀಡಿದನು.
Bakara 2:188
ನೀವು ಒಬ್ಬರು ಇನ್ನೊಬ್ಬರ ಆಸ್ತಿಯನ್ನು ಅನ್ಯಾಯವಾಗಿ ತಿನ್ನಬೇಡಿ. ಜನರ ಆಸ್ತಿಯಿಂದ ಏನನ್ನಾದರೂ ಅನ್ಯಾಯವಾಗಿ ಕಬಳಿಸಲು ಆಡಳಿತಗಾರರಿಗೆ ಲಂಚ ತಲುಪಿಸುವುದನ್ನೂ ಮಾಡಬೇಡಿ. (ಅದು ಸರಿಯಲ್ಲವೆಂದು) ನೀವು ತಿಳಿದವರಾಗಿದ್ದೂ ಸಹ.[1]
———
[1] ಒಬ್ಬ ವ್ಯಕ್ತಿ ಇನ್ನೊಬ್ಬನಿಗೆ ಮೋಸ ಮಾಡಿ ಅವನ ಆಸ್ತಿಯನ್ನು ಕಬಳಿಸುತ್ತಾನೆ. ಆದರೆ ಆಸ್ತಿ ಕಳಕೊಂಡವನಿಗೆ ಅವನ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿರುವುದಿಲ್ಲ. ಆ ಮೋಸಗಾರ ಈ ದೌರ್ಬಲ್ಯವನ್ನು ಸದುಪಯೋಗಪಡಿಸಿ ನ್ಯಾಯಾಲಯದಲ್ಲಿ ತೀರ್ಪು ತನ್ನ ಪರ ಬರುವಂತೆ ನೋಡಿಕೊಳ್ಳುತ್ತಾನೆ. ಹೀಗೆ ಇನ್ನೊಬ್ಬರಿಂದ ಆಸ್ತಿಯನ್ನು ಕಸಿದುಕೊಳ್ಳುವುದು ಪಾಪ ಮತ್ತು ಅನ್ಯಾಯವಾಗಿದೆ. ನ್ಯಾಯಾಲಯದ ತೀರ್ಪು ನಿಷಿದ್ಧವಾದುದನ್ನು ಧರ್ಮಸಮ್ಮತಗೊಳಿಸುವುದಿಲ್ಲ.
Bakara 2:189
ಅವರು ತಮ್ಮೊಂದಿಗೆ ಚಂದ್ರನ ಬಗ್ಗೆ ಕೇಳುತ್ತಾರೆ. ಹೇಳಿರಿ: “ಅದು ಜನರಿಗೆ (ಅವರ ಆರಾಧನಾ ಸಮಯಗಳನ್ನು ತಿಳಿಯುವ) ಮತ್ತು ಹಜ್ಜ್‌ನ ಸಮಯವನ್ನು ತಿಳಿಯುವ ಸಾಧನವಾಗಿದೆ.” ನೀವು ಮನೆಗಳನ್ನು ಹಿಂಭಾಗದಿಂದ ಪ್ರವೇಶಿಸುವುದರಲ್ಲಿ ಒಳಿತಿಲ್ಲ.[1] ಬದಲಿಗೆ, ದೇವಭಯವುಳ್ಳವನೇ ಒಳಿತಿನಲ್ಲಿರುವವನು. ನೀವು ಮನೆಗಳನ್ನು ಅವುಗಳ ಬಾಗಿಲುಗಳಿಂದ ಪ್ರವೇಶಿಸಿ. ಅಲ್ಲಾಹನನ್ನು ಭಯಪಡಿರಿ. ನೀವು ಯಶಸ್ವಿಯಾಗುವುದಕ್ಕಾಗಿ.
———
[1] ಅಜ್ಞಾನಕಾಲದಲ್ಲಿ ಜನರು ಹಜ್ ಅಥವಾ ಉಮ್ರಕ್ಕೆ ಇಹ್ರಾಂ ಧರಿಸಿದ ನಂತರ ಯಾವುದಾದರೂ ಅಗತ್ಯಕ್ಕಾಗಿ ಮನೆಗೆ ಬರಬೇಕಾಗಿ ಬಂದರೆ ಬಾಗಿಲಿನ ಮೂಲಕ ಒಳ ಬರುತ್ತಿರಲಿಲ್ಲ; ಬದಲಿಗೆ ಗೋಡೆಯಲ್ಲಿ ಕನ್ನ ಕೊರೆದು ಅದರ ಮೂಲಕ ಒಳ ಬರುತ್ತಿದ್ದರು. ಅವರು ಇದನ್ನು ಪುಣ್ಯ ಕಾರ್ಯವೆಂದು ತಿಳಿದಿದ್ದರು.
Bakara 2:190
ನಿಮ್ಮ ವಿರುದ್ಧ ಯುದ್ಧ ಮಾಡುವವರೊಡನೆ ಅಲ್ಲಾಹನ ಮಾರ್ಗದಲ್ಲಿ ನೀವು ಕೂಡ ಯುದ್ಧ ಮಾಡಿರಿ. ಆದರೆ ಎಲ್ಲೆ ಮೀರಬೇಡಿ. ನಿಶ್ಚಯವಾಗಿಯೂ ಎಲ್ಲೆ ಮೀರುವವರನ್ನು ಅಲ್ಲಾಹು ಇಷ್ಟಪಡುವುದಿಲ್ಲ.[1]
———
[1] ಇದು ಮುಸಲ್ಮಾನರಿಗೆ ಯುದ್ಧ ಮಾಡಲು ಅನುಮತಿ ನೀಡುತ್ತಾ ಅವತೀರ್ಣವಾದ ಮೊದಲ ವಚನವಾಗಿದೆ. ಮುಸಲ್ಮಾನರ ವಿರುದ್ಧ ಯುದ್ಧಕ್ಕೆ ಮುಂದಾಗುವವರೊಡನೆ ಯುದ್ಧ ಮಾಡಲು ಈ ವಚನದಲ್ಲಿ ಅನುಮತಿ ನೀಡಲಾಗಿದೆ. ಆದರೆ ಮುಸಲ್ಮಾನರು ಯಾವುದೇ ಕಾರಣಕ್ಕೂ ಎಲ್ಲೆ ಮೀರಬಾರದು. ಎಲ್ಲೆ ಮೀರುವುದೆಂದರೆ ಸತ್ತ ಯೋಧರ ಅಂಗಾಂಗಗಳನ್ನು ವಿರೂಪಗೊಳಿಸುವುದು, ಯುದ್ಧದಲ್ಲಿ ಭಾಗವಹಿಸದ ಮಹಿಳೆಯರು, ಮಕ್ಕಳು ಮತ್ತು ವೃದ್ಧರನ್ನು ಹತ್ಯೆ ಮಾಡುವುದು, ಮರಗಳನ್ನು ಕಡಿಯುವುದು ಅಥವಾ ಸುಡುವುದು, ಪ್ರಾಣಿಗಳನ್ನು ಕೊಲ್ಲುವುದು ಇತ್ಯಾದಿ.
Bakara 2:191
ನೀವು ಅವರನ್ನು ಕಂಡಲ್ಲಿ ಕೊಲ್ಲಿರಿ ಮತ್ತು ಅವರು ನಿಮ್ಮನ್ನು ಹೊರಹಾಕಿದ ಸ್ಥಳದಿಂದ ಅವರನ್ನೂ ಹೊರಹಾಕಿರಿ. ಕ್ಷೋಭೆಯು ಕೊಲೆಗಿಂತಲೂ ಘೋರವಾಗಿದೆ. ಮಸ್ಜಿದುಲ್ ಹರಾಮ್‍ನ ಬಳಿ ಅವರು ನಿಮ್ಮೊಂದಿಗೆ ಯುದ್ಧ ಮಾಡುವ ತನಕ ನೀವು ಅವರೊಂದಿಗೆ ಅಲ್ಲಿ ಯುದ್ಧ ಮಾಡಬೇಡಿ. ಅವರು ನಿಮ್ಮೊಂದಿಗೆ ಯುದ್ಧ ಮಾಡಿದರೆ ಅವರನ್ನು ಕೊಲ್ಲಿರಿ. ಈ ರೀತಿ ಸತ್ಯನಿಷೇಧಿಗಳಿಗೆ ಪ್ರತಿಫಲ ನೀಡಲಾಗುತ್ತದೆ.
Bakara 2:192
ಆದರೆ ಅವರೇನಾದರೂ ನಿಲ್ಲಿಸಿದರೆ ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.
Bakara 2:193
ಕ್ಷೋಭೆ ನಿವಾರಣೆಯಾಗುವ ತನಕ ಮತ್ತು ಧರ್ಮವು ಅಲ್ಲಾಹನಿಗಾಗುವ ತನಕ ಅವರೊಂದಿಗೆ ಯುದ್ಧ ಮಾಡಿರಿ. ಆದರೆ ಅವರೇನಾದರೂ ನಿಲ್ಲಿಸಿದರೆ, ಮತ್ತೆ ಅಕ್ರಮವೆಸಗಿದವರ ಮೇಲೆಯೇ ಹೊರತು ಇನ್ನಾರ ಮೇಲೂ ಅತಿರೇಕವೆಸಗಬೇಡಿ.
Bakara 2:194
ಪವಿತ್ರ ತಿಂಗಳ ಬದಲಿಗೆ ಪವಿತ್ರ ತಿಂಗಳು. ಪವಿತ್ರವಾದ ಎಲ್ಲವೂ ಅದಲಿ ಬದಲಿಯಾಗಿ ಇರುವುದಾಗಿವೆ. ನಿಮ್ಮ ಮೇಲೆ ಯಾರಾದರೂ ಅತಿರೇಕವೆಸಗಿದರೆ, ಅವನು ನಿಮ್ಮ ಮೇಲೆ ಅತಿರೇಕವೆಸಗಿದಂತೆಯೇ ನೀವು ಅವನ ಮೇಲೆ ಅತಿರೇಕವೆಸಗಿರಿ. ಅಲ್ಲಾಹನನ್ನು ಭಯಪಡಿರಿ. ತಿಳಿಯಿರಿ! ಅಲ್ಲಾಹು ಅವನನ್ನು ಭಯಪಡುವವರ ಜೊತೆಗಿದ್ದಾನೆ.
Bakara 2:195
ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಿರಿ. ನಿಮ್ಮ ಕೈಗಳನ್ನು ನೀವೇ ವಿನಾಶಕ್ಕೆ ತಳ್ಳಬೇಡಿ. ಒಳಿತು ಮಾಡಿರಿ. ನಿಶ್ಚಯವಾಗಿಯೂ ಒಳಿತು ಮಾಡುವವರನ್ನು ಅಲ್ಲಾಹು ಪ್ರೀತಿಸುತ್ತಾನೆ.
Bakara 2:196
ಅಲ್ಲಾಹನಿಗಾಗಿ ಹಜ್ಜ್ ಮತ್ತು ಉಮ್ರಗಳನ್ನು ಪೂರ್ತಿಗೊಳಿಸಿರಿ. ನಿಮ್ಮನ್ನು (ದಾರಿ ಮಧ್ಯೆ) ತಡೆಯಲಾದರೆ ನಿಮಗೆ ಸುಲಭವಾಗಿರುವ ಒಂದು ಪ್ರಾಣಿಯನ್ನು ಬಲಿ ನೀಡಿರಿ.[1] ಬಲಿಮೃಗವು ಅದರ ಸ್ಥಳವನ್ನು ತಲುಪುವ ತನಕ ಕೇಶಮುಂಡನ ಮಾಡಬೇಡಿ. ನಿಮ್ಮಲ್ಲಿ ಯಾರಾದರೂ ಅನಾರೋಗ್ಯದಲ್ಲಿದ್ದು ಅಥವಾ ತಲೆಯಲ್ಲಿ ಏನಾದರೂ ತೊಂದರೆಯಿದ್ದು, (ಕೇಶ ಮುಂಡನ ಮಾಡಿದ್ದರೆ) ಅದಕ್ಕೆ ಪರಿಹಾರವಾಗಿ ಉಪವಾಸ ಅಥವಾ ದಾನಧರ್ಮ ಅಥವಾ ಬಲಿಕರ್ಮ ನಿರ್ವಹಿಸಲಿ. ಆದರೆ ನೀವು ನಿರ್ಭಯ ಸ್ಥಿತಿಯಲ್ಲಿದ್ದು, ನಿಮ್ಮಲ್ಲಿ ಯಾರಾದರೂ ಉಮ್ರಾ ನಿರ್ವಹಿಸಿ ಹಜ್ಜ್ ತನಕ ವಿಶ್ರಾಂತಿ ಪಡೆದರೆ, ಅವನು ಸುಲಭವಾಗಿರುವ ಒಂದು ಪ್ರಾಣಿಯನ್ನು ಬಲಿ ನೀಡಲಿ. ಯಾರಿಗೆ ಬಲಿಮೃಗ ಸಿಗುವುದಿಲ್ಲವೋ ಅವನು ಹಜ್ಜ್‌ನ ಸಮಯದಲ್ಲಿ ಮೂರು ದಿನ ಮತ್ತು (ಊರಿಗೆ) ಮರಳಿದ ಬಳಿಕ ಏಳು ದಿನ; ಒಟ್ಟು ಹತ್ತು ದಿನ ಉಪವಾಸ ಆಚರಿಸಲಿ. ಈ ನಿಯಮವಿರುವುದು ಮಸ್ಜಿದುಲ್ ಹರಾಮ್‍ನ ನಿವಾಸಿಗಳಲ್ಲದವರಿಗೆ ಮಾತ್ರ. ಅಲ್ಲಾಹನನ್ನು ಭಯಪಡಿರಿ. ತಿಳಿಯಿರಿ! ಅಲ್ಲಾಹು ಅತಿ ಕಠೋರವಾಗಿ ಶಿಕ್ಷಿಸುವವನಾಗಿದ್ದಾನೆ.
———
[1] ದಾರಿ ಮಧ್ಯೆ ಶತ್ರುಗಳು ನಿಮ್ಮನ್ನು ತಡೆದರೆ, ಅಥವಾ ತೀವ್ರ ಅನಾರೋಗ್ಯದಿಂದಾಗಿ ಪ್ರಯಾಣ ಮುಂದುವರಿಸಲು ನಿಮಗೆ ಸಾಧ್ಯವಾಗದೆ ಹೋದರೆ, ಬಲಿಮೃಗವನ್ನು ಬಲಿ ನೀಡಿ, ಕೇಶ ಮುಂಡನ ಮಾಡಿ ಇಹ್ರಾಮ್‌ನಿಂದ ಮುಕ್ತರಾಗಬಹುದು.
Bakara 2:197
ಹಜ್ಜ್ ಪರಿಚಿತ ತಿಂಗಳುಗಳಲ್ಲಾಗಿದೆ.[1] ಆದ್ದರಿಂದ ಯಾರಾದರೂ ಆ ತಿಂಗಳುಗಳಲ್ಲಿ (ಇಹ್ರಾಮ್ ಧರಿಸಿ) ಹಜ್ಜ್ ನಿರ್ವಹಿಸುವುದನ್ನು ಕಡ್ಡಾಯಗೊಳಿಸಿದರೆ, ಅವನು ಹಜ್ಜ್‌ನ ಸಮಯದಲ್ಲಿ ಲೈಂಗಿಕ ಸಂಪರ್ಕ, ದುಷ್ಕರ್ಮ ಮತ್ತು ತರ್ಕ ಮಾಡಬಾರದು. ನೀವು ಏನೇ ಸತ್ಕರ್ಮ ಮಾಡಿದರೂ ಅಲ್ಲಾಹು ಅದನ್ನು ತಿಳಿಯುತ್ತಾನೆ. ನೀವು (ಹಜ್ಜ್ ಯಾತ್ರೆಗಾಗಿ) ಸಿದ್ಧತೆ ಮಾಡಿಕೊಳ್ಳಿರಿ. ನಿಶ್ಚಯವಾಗಿಯೂ ನೀವು ಮಾಡಿಕೊಳ್ಳುವ ಸಿದ್ಧತೆಗಳಲ್ಲಿ ದೇವಭಯವು ಅತಿಶ್ರೇಷ್ಠವಾಗಿದೆ. ಓ ಬುದ್ಧಿವಂತರೇ! ನೀವು ನನ್ನನ್ನು ಭಯಪಡಿರಿ.
———
[1] ಪರಿಚಿತ ತಿಂಗಳುಗಳು ಎಂದರೆ ಶವ್ವಾಲ್ ಮತ್ತು ದುಲ್-ಕಅದ ತಿಂಗಳುಗಳು ಮತ್ತು ದುಲ್-ಹಿಜ್ಜ ತಿಂಗಳ ಮೊದಲ ಹತ್ತು ದಿನಗಳು.
Bakara 2:198
ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಯಾವುದೇ ಔದಾರ್ಯವನ್ನು ಅರಸುವುದರಲ್ಲಿ ನಿಮಗೆ ದೋಷವಿಲ್ಲ. ನೀವು ಅರಫಾತ್‍ನಿಂದ ತೆರಳಿದರೆ ಮಶ್‍ಅರುಲ್ ಹರಾಮ್‍ನ ಬಳಿ ಅಲ್ಲಾಹನನ್ನು ಸ್ಮರಿಸಿರಿ. ಅವನು ನಿಮಗೆ ಸನ್ಮಾರ್ಗ ತೋರಿಸಿದಂತೆಯೇ ನೀವು ಅವನನ್ನು ಸ್ಮರಿಸಿರಿ. ವಾಸ್ತವವಾಗಿ, ಇದಕ್ಕೆ ಮುಂಚೆ ನೀವು ದಾರಿ ತಪ್ಪಿದವರಾಗಿದ್ದಿರಿ.
Bakara 2:199
ನಂತರ ಜನರು ಎಲ್ಲಿಂದ ಹೊರಡುತ್ತಾರೋ ಅಲ್ಲಿಂದ ನೀವೂ ಹೊರಡಿರಿ. ಅಲ್ಲಾಹನಲ್ಲಿ ಕ್ಷಮೆಯಾಚಿಸಿರಿ. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.
Bakara 2:200
ನೀವು ಹಜ್ಜ್ ಕರ್ಮಗಳನ್ನು ಪೂರೈಸಿದರೆ, ನಿಮ್ಮ ಪೂರ್ವಜರನ್ನು ಸ್ಮರಿಸುವಂತೆಯೇ ಅಥವಾ ಅದಕ್ಕಿಂತಲೂ ತೀವ್ರವಾಗಿ ಅಲ್ಲಾಹನನ್ನು ಸ್ಮರಿಸಿರಿ. ಜನರಲ್ಲಿ ಕೆಲವರು ಹೇಳುತ್ತಾರೆ: “ಓ ನಮ್ಮ ಪರಿಪಾಲಕನೇ! ನಮಗೆ ಇಹಲೋಕದಲ್ಲಿ ದಯಪಾಲಿಸು.” ಅಂತಹವರಿಗೆ ಪರಲೋಕದಲ್ಲಿ ಯಾವುದೇ ಪಾಲಿಲ್ಲ.
Bakara 2:201
ಇತರ ಕೆಲವರು ಹೇಳುತ್ತಾರೆ: “ಓ ನಮ್ಮ ಪರಿಪಾಲಕನೇ! ನಮಗೆ ಇಹಲೋಕದಲ್ಲಿ ಒಳಿತನ್ನು ದಯಪಾಲಿಸು ಮತ್ತು ಪರಲೋಕದಲ್ಲೂ ಒಳಿತನ್ನು ದಯಪಾಲಿಸು ಮತ್ತು ನಮ್ಮನ್ನು ನರಕ ಶಿಕ್ಷೆಯಿಂದ ಪಾರು ಮಾಡು.”
Bakara 2:202
ಅವರಿಗೆ ಅವರು ಮಾಡಿದ ಕರ್ಮಗಳ ಪಾಲಿದೆ. ಅಲ್ಲಾಹು ಶೀಘ್ರವಾಗಿ ವಿಚಾರಣೆ ಮಾಡುವವನಾಗಿದ್ದಾನೆ.
Bakara 2:203
ಬೆರಳೆಣಿಕೆಯ ಕೆಲವು ದಿನಗಳಲ್ಲಿ[1] ಅಲ್ಲಾಹನನ್ನು ಸ್ಮರಿಸಿರಿ. ಯಾರಾದರೂ ಎರಡೇ ದಿನಗಳಲ್ಲಿ ತರಾತುರಿಯಿಂದ ಹೊರಟರೆ ಅವರಿಗೆ ದೋಷವಿಲ್ಲ.[2] ಯಾರಾದರೂ ವಿಳಂಬ ಮಾಡಿದರೆ ಅವರಿಗೂ ದೋಷವಿಲ್ಲ. ಇದು ದೇವಭಯವುಳ್ಳವರಿಗಾಗಿದೆ. ಅಲ್ಲಾಹನನ್ನು ಭಯಪಡಿರಿ. ತಿಳಿಯಿರಿ! ನಿಮ್ಮೆಲ್ಲರನ್ನೂ ಅವನ ಬಳಿಗೇ ಒಟ್ಟುಗೂಡಿಸಲಾಗುತ್ತದೆ.
———
[1] ಬೆರಳೆಣಿಕೆಯ ದಿನಗಳು ಎಂದರೆ ಅಯ್ಯಾಮು ತ್ತಶ್ರೀಕ್ (ದುಲ್-ಹಿಜ್ಜ ತಿಂಗಳ 11, 12 ಮತ್ತು 13ನೇ ದಿನಗಳು). [2] ಮಿನಾದಲ್ಲಿ ಮೂರು ದಿನ ತಂಗಿ ಜಮ್ರಗಳಿಗೆ ಕಲ್ಲೆಸೆಯುವುದು ಶ್ರೇಷ್ಠವಾಗಿದೆ. ಆದರೆ ಯಾರಾದರೂ ಎರಡೇ ದಿನಗಳಲ್ಲಿ ಮಿನಾದಿಂದ ಹೊರಟರೆ ಅದರಲ್ಲೇನೂ ತೊಂದರೆಯಿಲ್ಲ.
Bakara 2:204
ಜನರಲ್ಲಿ ಕೆಲವರಿದ್ದಾರೆ. ಅವರಲ್ಲೊಬ್ಬನು ಇಹಲೋಕದ ಕುರಿತು ಹೇಳುವ ಮಾತುಗಳು ನಿಮ್ಮನ್ನು ಆಶ್ಚರ್ಯಗೊಳಿಸಬಹುದು. ಅವನು ತನ್ನ ಹೃದಯದಲ್ಲಿರುವುದಕ್ಕೆ ಅಲ್ಲಾಹನನ್ನು ಸಾಕ್ಷಿಯಾಗಿ ಮಾಡುತ್ತಾನೆ. ವಾಸ್ತವವಾಗಿ, ಅವನ ಮಹಾ ಜಗಳಗಂಟಿಯಾಗಿದ್ದಾನೆ.
Bakara 2:205
ಅವನು ಮರಳಿ ಹೋಗುವಾಗ, ಭೂಮಿಯಲ್ಲಿ ಕಿಡಿಗೇಡಿತನ ಮಾಡಲು ಮತ್ತು ಹೊಲಗಳನ್ನು ಹಾಗೂ ವಂಶಗಳನ್ನು ನಾಶ ಮಾಡಲು ಶ್ರಮಿಸುತ್ತಾನೆ. ಅಲ್ಲಾಹು ಕಿಡಿಗೇಡಿತನವನ್ನು ಇಷ್ಟಪಡುವುದಿಲ್ಲ.
Bakara 2:206
“ಅಲ್ಲಾಹನನ್ನು ಭಯಪಡು” ಎಂದು ಅವನೊಡನೆ ಹೇಳಲಾದರೆ, ಪ್ರತಿಷ್ಠೆಯು ಅವನನ್ನು ಪಾಪಕ್ಕೆ ಎಳೆಯುತ್ತದೆ. ಅವನಿಗೆ ನರಕವೇ ಸಾಕು. ಆ ವಾಸಸ್ಥಳವು ಬಹಳ ನಿಕೃಷ್ಟವಾಗಿದೆ.
Bakara 2:207
ಅಲ್ಲಾಹನ ಸಂಪ್ರೀತಿಯನ್ನು ಅರಸುತ್ತಾ ತಮ್ಮ ದೇಹವನ್ನೇ ಮಾರುವ ಜನರೂ ಇದ್ದಾರೆ. ಅಲ್ಲಾಹು ತನ್ನ ದಾಸರೊಂದಿಗೆ ದಯೆಯುಳ್ಳವನಾಗಿದ್ದಾನೆ.
Bakara 2:208
ಓ ಸತ್ಯವಿಶ್ವಾಸಿಗಳೇ! ನೀವು ಇಸ್ಲಾಂ ಧರ್ಮದಲ್ಲಿ ಪೂರ್ಣವಾಗಿ ಪ್ರವೇಶಿಸಿರಿ. ಶೈತಾನನ ಹೆಜ್ಜೆಗಳನ್ನು ಹಿಂಬಾಲಿಸಬೇಡಿ. ನಿಶ್ಚಯವಾಗಿಯೂ ಅವನು ನಿಮ್ಮ ಪ್ರತ್ಯಕ್ಷ ವೈರಿಯಾಗಿದ್ದಾನೆ.
Bakara 2:209
ನಿಮಗೆ ಸ್ಪಷ್ಟ ಸಾಕ್ಷ್ಯಾಧಾರಗಳು ತಲುಪಿದ ಬಳಿಕವೂ ನೀವು ತಪ್ಪಿ ನಡೆದರೆ, ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
Bakara 2:210
ಅಲ್ಲಾಹು ಮತ್ತು ದೇವದೂತರು ಮೋಡಗಳ ನೆರಳುಗಳಲ್ಲಿ ಅವರ ಬಳಿಗೆ ಬರುವುದನ್ನು ಮತ್ತು ವಿಷಯವು ತೀರ್ಮಾನಿಸಿ ಬಿಡಲಾಗುವುದನ್ನು ಅವರು ಕಾಯುತ್ತಿದ್ದಾರೆಯೇ? ವಿಷಯಗಳೆಲ್ಲವೂ ಅಲ್ಲಾಹನ ಬಳಿಗೇ ಮರಳುತ್ತವೆ.
Bakara 2:211
ಇಸ್ರಾಯೇಲ್ ಮಕ್ಕಳೊಡನೆ ನಾವು ಅವರಿಗೆ ಎಷ್ಟೆಷ್ಟು ಸ್ಪಷ್ಟ ದೃಷ್ಟಾಂತಗಳನ್ನು ನೀಡಿದ್ದೇವೆಂದು ಕೇಳಿರಿ. ಅಲ್ಲಾಹನ ಅನುಗ್ರಹವು ತನ್ನ ಬಳಿಗೆ ಬಂದ ಬಳಿಕವೂ ಅದನ್ನು ಬದಲಾಯಿಸುವವನು ಯಾರೋ—ನಿಶ್ಚಯವಾಗಿಯೂ ಅಲ್ಲಾಹು ಅತಿಕಠೋರವಾಗಿ ಶಿಕ್ಷಿಸುವವನೆಂದು (ಅವನು ತಿಳಿದುಕೊಳ್ಳಲಿ).
Bakara 2:212
ಸತ್ಯನಿಷೇಧಿಗಳಿಗೆ ಇಹಲೋಕ ಜೀವನವನ್ನು ಅಲಂಕರಿಸಿಕೊಡಲಾಗಿದೆ. ಅವರು ಸತ್ಯವಿಶ್ವಾಸಿಗಳನ್ನು ತಮಾಷೆ ಮಾಡುತ್ತಾರೆ. ಆದರೆ, ಪುನರುತ್ಥಾನ ದಿನದಂದು ದೇವಭಯವುಳ್ಳವರು ಅವರಿಗಿಂತ ಮೇಲಿರುತ್ತಾರೆ. ಅಲ್ಲಾಹು ಅವನು ಇಚ್ಛಿಸಿದವರಿಗೆ ಲೆಕ್ಕವಿಲ್ಲದೆ ನೀಡುತ್ತಾನೆ.
Bakara 2:213
ಮಾನವರೆಲ್ಲರೂ ಒಂದೇ ಸಮುದಾಯವಾಗಿದ್ದರು. ನಂತರ ಅಲ್ಲಾಹು ಸುವಾರ್ತೆ ತಿಳಿಸಲು ಮತ್ತು ಎಚ್ಚರಿಕೆ ನೀಡಲು ಪ್ರವಾದಿಗಳನ್ನು ಕಳುಹಿಸಿದನು. ಜನರು ಭಿನ್ನಾಭಿಪ್ರಾಯ ತಳೆದ ವಿಷಯದಲ್ಲಿ ತೀರ್ಪು ನೀಡುವುದಕ್ಕಾಗಿ ಅವರ ಜೊತೆಗೆ ಗ್ರಂಥವನ್ನು ಸತ್ಯ ಸಮೇತ ಅವತೀರ್ಣಗೊಳಿಸಿದನು. ಆದರೆ ಗ್ರಂಥ ನೀಡಲಾದ ಅದೇ ಜನರು ಸ್ಪಷ್ಟ ಸಾಕ್ಷ್ಯಾಧಾರಗಳು ತಮಗೆ ತಲುಪಿದ ಬಳಿಕವೂ ತಮ್ಮೊಳಗಿನ ವಿದ್ವೇಷದ ನಿಮಿತ್ತ ಅದರ (ಗ್ರಂಥದ) ವಿಷಯದಲ್ಲಿ ಭಿನ್ನಮತ ತಳೆದರು. ಆದ್ದರಿಂದ ಅಲ್ಲಾಹು ತನ್ನ ಅಪ್ಪಣೆ ಪ್ರಕಾರ ಅವರು ಭಿನ್ನಮತೀಯರಾದ ಆ ಸತ್ಯಕ್ಕೆ ಸತ್ಯವಿಶ್ವಾಸಿಗಳನ್ನು ಮುನ್ನಡೆಸಿದನು. ಅಲ್ಲಾಹು ಅವನು ಇಚ್ಛಿಸಿದವರನ್ನು ನೇರಮಾರ್ಗಕ್ಕೆ ಮುನ್ನಡೆಸುತ್ತಾನೆ.
Bakara 2:214
ನಿಮಗಿಂತ ಮೊದಲಿನವರಿಗೆ ಬಂದಂತಹ ಪರೀಕ್ಷೆಗಳು ನಿಮಗೂ ಬಾರದೆ ನಿರಾಯಾಸವಾಗಿ ಸ್ವರ್ಗವನ್ನು ಪ್ರವೇಶಿಸಿ ಬಿಡಬಹುದೆಂದು ನೀವು ಭಾವಿಸಿದ್ದೀರಾ? ಅವರಿಗೆ ಬಡತನ ಮತ್ತು ಕಷ್ಟಗಳು ಎರಗಿದ್ದವು. ಅಲ್ಲಾಹನ ಸಹಾಯ ಬರುವುದು ಯಾವಾಗ ಎಂದು ಸಂದೇಶವಾಹಕರು ಮತ್ತು ಅವರ ಜೊತೆಯಲ್ಲಿದ್ದ ಸತ್ಯವಿಶ್ವಾಸಿಗಳು ಕೇಳುವವರೆಗೆ ಅವರನ್ನು ನಡುಗಿಸಲಾಯಿತು. ತಿಳಿಯಿರಿ! ಅಲ್ಲಾಹನ ಸಹಾಯವು ಹತ್ತಿರದಲ್ಲೇ ಇದೆ.
Bakara 2:215
ಅವರು ಏನು ಖರ್ಚು ಮಾಡಬೇಕೆಂದು ಅವರು ನಿಮ್ಮೊಡನೆ ಕೇಳುತ್ತಾರೆ. ಹೇಳಿರಿ: “ನೀವು ಒಳಿತಾಗಿರುವ ಏನು ಖರ್ಚು ಮಾಡುವುದಾದರೂ ಅದು ಮಾತಾಪಿತರಿಗೆ, ಹತ್ತಿರದ ಸಂಬಂಧಿಕರಿಗೆ, ಅನಾಥರಿಗೆ, ನಿರ್ಗತಿಕರಿಗೆ ಮತ್ತು ದಾರಿಹೋಕರಿಗೆ ಖರ್ಚು ಮಾಡಿರಿ. ನೀವು ಏನೇ ಒಳಿತು ಮಾಡಿದರೂ ನಿಶ್ಚಯವಾಗಿಯೂ ಅಲ್ಲಾಹು ಅದನ್ನು ತಿಳಿಯುತ್ತಾನೆ.”
Bakara 2:216
ನಿಮಗೆ ಅಸಹ್ಯವೆನಿಸಿದರೂ ಸಹ ನಿಮ್ಮ ಮೇಲೆ ಯುದ್ಧವನ್ನು ಕಡ್ಡಾಯಗೊಳಿಸಲಾಗಿದೆ. ಬಹುಶಃ ನಿಮಗೊಂದು ವಿಷಯವು ಅಸಹ್ಯವೆನಿಸಿದರೂ ಅದು ನಿಮಗೆ ಒಳಿತಾಗಿರಬಹುದು. ಹಾಗೆಯೇ, ನಿಮಗೊಂದು ವಿಷಯವು ಇಷ್ಟವಾಗಿದ್ದರೂ ಅದು ನಿಮಗೆ ಕೆಡುಕಾಗಿರಬಹುದು. ಅಲ್ಲಾಹು ತಿಳಿದಿದ್ದಾನೆ; ಆದರೆ ನೀವು ತಿಳಿದಿಲ್ಲ.
Bakara 2:217
ನಿಷೇಧಿತ ತಿಂಗಳಲ್ಲಿ ಯುದ್ಧ ಮಾಡುವುದರ ಕುರಿತು ಅವರು ನಿಮ್ಮಲ್ಲಿ ವಿಚಾರಿಸುತ್ತಾರೆ. ಹೇಳಿರಿ: “ಅದರಲ್ಲಿ ಯುದ್ಧ ಮಾಡುವುದು ಮಹಾ ಅಪರಾಧವಾಗಿದೆ.” ಆದರೆ ಅಲ್ಲಾಹನ ಮಾರ್ಗದಿಂದ (ಜನರನ್ನು) ತಡೆಯುವುದು, ಅವನನ್ನು ನಿಷೇಧಿಸುವುದು, ಮಸ್ಜಿದುಲ್ ಹರಾಮ್‍ನಿಂದ (ಜನರನ್ನು) ತಡೆಯುವುದು ಮತ್ತು ಅದರ ನಿವಾಸಿಗಳನ್ನು ಅಲ್ಲಿಂದ ಹೊರಹಾಕುವುದು ಅಲ್ಲಾಹನ ದೃಷ್ಟಿಯಲ್ಲಿ ಅದಕ್ಕಿಂತಲೂ ಗಂಭೀರ ಅಪರಾಧಗಳಾಗಿವೆ. ಕ್ಷೋಭೆಯು ಕೊಲೆಗಿಂತಲೂ ಘೋರವಾಗಿದೆ. ಅವರಿಗೆ ಸಾಧ್ಯವಾಗುವುದಾದರೆ ಅವರು ನಿಮ್ಮನ್ನು ನಿಮ್ಮ ಧರ್ಮದಿಂದ ಹಿಂದಿರುಗುವಂತೆ ಮಾಡುವವರೆಗೂ ನಿಮ್ಮೊಂದಿಗೆ ಯುದ್ಧ ಮಾಡುತ್ತಲೇ ಇರುವರು. ನಿಮ್ಮಲ್ಲಿ ಯಾರಾದರೂ ತನ್ನ ಧರ್ಮವನ್ನು ತ್ಯಜಿಸಿ, ನಂತರ ಸತ್ಯನಿಷೇಧಿಯಾಗಿ ಸಾಯುವುದಾದರೆ, ಅವರ ಕರ್ಮಗಳು ಇಹಲೋಕದಲ್ಲೂ ಪರಲೋಕದಲ್ಲೂ ನಿಷ್ಫಲವಾಗುತ್ತವೆ. ಅವರೇ ನರಕವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
Bakara 2:218
ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು, ಹಿಜ್ರ (ವಲಸೆ) ಹೋದವರು ಮತ್ತು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿದವರು ಯಾರೋ—ಅವರು ಅಲ್ಲಾಹನ ದಯೆಯನ್ನು ನಿರೀಕ್ಷಿಸುತ್ತಾರೆ. ಅಲ್ಲಾಹು ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.
Bakara 2:219
ಅವರು ನಿಮ್ಮೊಂದಿಗೆ ಮದ್ಯ ಮತ್ತು ಜೂಜಿನ ಬಗ್ಗೆ ವಿಚಾರಿಸುತ್ತಾರೆ. ಹೇಳಿರಿ: “ಅವೆರಡರಲ್ಲೂ ಬಹುದೊಡ್ಡ ಪಾಪವಿದೆ ಮತ್ತು ಜನರಿಗೆ ಕೆಲವು ಪ್ರಯೋಜನಗಳೂ ಇವೆ.[1] ಆದರೆ ಅವುಗಳ ಪಾಪವು ಪ್ರಯೋಜನಕ್ಕಿಂತಲೂ ದೊಡ್ಡದು.” ಅವರು ಏನು ಖರ್ಚು ಮಾಡಬೇಕೆಂದು ಅವರು ನಿಮ್ಮೊಡನೆ ಕೇಳುತ್ತಾರೆ. ಹೇಳಿರಿ: “ಅಗತ್ಯಕ್ಕಿಂತ ಮಿಕ್ಕಿದ್ದು.” ಈ ರೀತಿ ಅಲ್ಲಾಹು ತನ್ನ ನಿಯಮಗಳನ್ನು ನಿಮಗೆ ಸ್ಪಷ್ಟವಾಗಿ ವಿವರಿಸಿಕೊಡುತ್ತಾನೆ. ನೀವು ಆಲೋಚಿಸುವುದಕ್ಕಾಗಿ.
———
[1] ಮದ್ಯ ಮತ್ತು ಜೂಜಿನಲ್ಲಿ ಕೆಲವು ಲೌಕಿಕ ಪ್ರಯೋಜನಗಳಿವೆ. ಉದಾಹರಣೆಗೆ, ಮದ್ಯವು ತಾತ್ಕಾಲಿಕವಾಗಿ ದೇಹದಲ್ಲಿ ಉತ್ಸಾಹ ಮತ್ತು ಚುರುಕುತನವನ್ನು ಹೆಚ್ಚಿಸುತ್ತದೆ. ಕೆಲವೊಮ್ಮೆ ಮನಸ್ಸು ಮದ್ಯ ಸೇವನೆಯಿಂದ ಹರಿತವಾಗುತ್ತದೆ. ಇದರಿಂದ ಲೈಂಗಿಕ ಸಾಮರ್ಥ್ಯವು ಹೆಚ್ಚಾಗುತ್ತದೆ. ಅದೇ ರೀತಿ, ಮದ್ಯ ಮಾರಾಟವು ಲಾಭದಾಯಕ ಉದ್ಯಮವಾಗಿದೆ. ಜೂಜಿನಲ್ಲಿ ಕೆಲವೊಮ್ಮೆ ಅದೃಷ್ಟವಿರುವವನು ಕೋಟಿಗಳನ್ನು ಸಂಪಾದಿಸುತ್ತಾನೆ. ಆದರೆ ಈ ಪ್ರಯೋಜನಗಳು ವ್ಯಕ್ತಿಯ ಬುದ್ಧಿ ಮತ್ತು ಧರ್ಮಕ್ಕೆ ಉಂಟು ಮಾಡುವ ನಷ್ಟ ಮತ್ತು ಹಾನಿಗಳಿಗೆ ಹೋಲಿಸಿದರೆ ಅವುಗಳ ಪ್ರಯೋಜನವು ಉಲ್ಲೇಖಾರ್ಹವೇ ಅಲ್ಲ.
Bakara 2:220
ಇಹಲೋಕ ಮತ್ತು ಪರಲೋಕದ ಕುರಿತು. ಅವರು ನಿಮ್ಮೊಂದಿಗೆ ಅನಾಥರ ಕುರಿತು ವಿಚಾರಿಸುತ್ತಾರೆ. ಹೇಳಿರಿ: “ಅವರ ಯೋಗಕ್ಷೇಮ ನೋಡಿಕೊಳ್ಳುವುದು ಒಳ್ಳೆಯದೇ ಆಗಿದೆ. ನೀವು ಅವರ ಆಸ್ತಿಯನ್ನು ನಿಮ್ಮ ಆಸ್ತಿಯೊಂದಿಗೆ ಸೇರಿಸಿದರೂ (ತಪ್ಪಿಲ್ಲ); ಅವರು ನಿಮ್ಮ ಸಹೋದರರಾಗಿದ್ದಾರೆ. ಯಾರಿಗೆ ಕೆಟ್ಟ ಉದ್ದೇಶವಿದೆ ಮತ್ತು ಯಾರಿಗೆ ಒಳ್ಳೆಯ ಉದ್ದೇಶವಿದೆಯೆಂದು ಅಲ್ಲಾಹು ತಿಳಿದಿದ್ದಾನೆ. ಅಲ್ಲಾಹು ಇಚ್ಛಿಸಿದರೆ ನಿಮಗೆ ಕಷ್ಟ ಕೊಡುತ್ತಿದ್ದನು. ನಿಶ್ಚಯವಾಗಿಯೂ ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.”
Bakara 2:221
ಬಹುದೇವವಿಶ್ವಾಸಿ ಮಹಿಳೆಯರನ್ನು ಅವರು ಸತ್ಯವಿಶ್ವಾಸಿಗಳಾಗುವ ತನಕ ವಿವಾಹವಾಗಬೇಡಿ. ಸತ್ಯವಿಶ್ವಾಸಿಯಾದ ಗುಲಾಮಸ್ತ್ರೀ ಸ್ವತಂತ್ರಳಾದ ಬಹುದೇವವಿಶ್ವಾಸಿ ಮಹಿಳೆಗಿಂತ ಶ್ರೇಷ್ಠಳು. ಅವಳು (ಬಹುದೇವವಿಶ್ವಾಸಿ) ನಿಮಗೆ ಆಕರ್ಷಕವಾಗಿ ಕಂಡರೂ ಸಹ. ಬಹುದೇವವಿಶ್ವಾಸಿ ಪುರುಷರಿಗೆ ಅವರು ಸತ್ಯವಿಶ್ವಾಸಿಗಳಾಗುವ ತನಕ ನಿಮ್ಮ ಮಹಿಳೆಯರನ್ನು ವಿವಾಹ ಮಾಡಿಕೊಡಬೇಡಿ. ಸತ್ಯವಿಶ್ವಾಸಿಯಾದ ಗುಲಾಮ ಸ್ವತಂತ್ರನಾದ ಬಹುದೇವವಿಶ್ವಾಸಿಗಿಂತ ಶ್ರೇಷ್ಠನು. ಅವನು (ಬಹುದೇವವಿಶ್ವಾಸಿ) ನಿಮಗೆ ಆಕರ್ಷಕವಾಗಿ ಕಂಡರೂ ಸಹ. ಅವರು ನಿಮ್ಮನ್ನು ನರಕಕ್ಕೆ ಕರೆಯುತ್ತಿದ್ದಾರೆ. ಅಲ್ಲಾಹು ತನ್ನ ಅಪ್ಪಣೆಯಿಂದ ನಿಮ್ಮನ್ನು ಸ್ವರ್ಗಕ್ಕೆ ಮತ್ತು ಕ್ಷಮೆಗೆ ಕರೆಯುತ್ತಿದ್ದಾನೆ. ಅವನು ಜನರಿಗೆ ತನ್ನ ನಿಯಮಗಳನ್ನು ವಿವರಿಸಿಕೊಡುತ್ತಾನೆ. ಅವರು ಉಪದೇಶ ಪಡೆಯುವುದಕ್ಕಾಗಿ.
Bakara 2:222
ಅವರು ನಿಮ್ಮೊಂದಿಗೆ ಋತುಸ್ರಾವದ ಕುರಿತು ವಿಚಾರಿಸುತ್ತಾರೆ. ಹೇಳಿರಿ: “ಅದು ಹೊಲಸು. ಆದ್ದರಿಂದ ಋತುಸ್ರಾವದ ಅವಧಿಯಲ್ಲಿ ಮಹಿಳೆಯರಿಂದ ದೂರವಿರಿ. ಅವರು ಶುದ್ಧವಾಗುವ ತನಕ ಅವರ ಬಳಿಗೆ ಹೋಗಬೇಡಿ. ಅವರು ಶುದ್ಧವಾದರೆ ಅಲ್ಲಾಹು ನಿಮಗೆ ಆಜ್ಞಾಪಿಸಿದ ಕಡೆಯಿಂದ ಅವರ ಬಳಿಗೆ ಹೋಗಿರಿ. ನಿಶ್ಚಯವಾಗಿಯೂ ಅಲ್ಲಾಹು ಪಶ್ಚಾತ್ತಾಪಪಡುವವರನ್ನು ಪ್ರೀತಿಸುತ್ತಾನೆ ಮತ್ತು ಶುದ್ಧವಾಗಿರುವವರನ್ನು ಕೂಡ ಪ್ರೀತಿಸುತ್ತಾನೆ.”
Bakara 2:223
ನಿಮ್ಮ ಪತ್ನಿಯರು ನಿಮ್ಮ ಹೊಲದಂತೆ. ನೀವು ಇಚ್ಛಿಸುವಂತೆ ನಿಮ್ಮ ಹೊಲಕ್ಕೆ ಹೋಗಿರಿ ಮತ್ತು ನಿಮಗಾಗಿ (ಸತ್ಕರ್ಮಗಳನ್ನು) ಮುಂದಕ್ಕೆ ಕಳುಹಿಸಿರಿ. ಅಲ್ಲಾಹನನ್ನು ಭಯಪಡಿರಿ. ತಿಳಿಯಿರಿ! ನಿಶ್ಚಯವಾಗಿಯೂ ನೀವು ಅವನನ್ನು ಭೇಟಿಯಾಗಲಿರುವಿರಿ. ಸತ್ಯವಿಶ್ವಾಸಿಗಳಿಗೆ ಸುವಾರ್ತೆಯನ್ನು ತಿಳಿಸಿರಿ.
Bakara 2:224
ಒಳಿತು ಮಾಡುವುದನ್ನು, ದೇವಭಯದಿಂದ ಜೀವಿಸುವುದನ್ನು ಮತ್ತು ಜನರ ನಡುವೆ ಸುಧಾರಣೆ ಮಾಡುವುದನ್ನು ಬಿಟ್ಟುಬಿಡುವುದಕ್ಕಾಗಿ ನಿಮ್ಮ ಪ್ರತಿಜ್ಞೆಗಳಿಗೆ ಅಲ್ಲಾಹನನ್ನು ಗುರಿಯನ್ನಾಗಿ ಮಾಡಬೇಡಿ.[1] ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
———
[1] ಅಂದರೆ, ನಾನು ಇನ್ನು ಮುಂದೆ ಯಾವುದೇ ಒಳಿತು ಮಾಡುವುದಿಲ್ಲ, ನಾನು ಇನ್ನು ಮುಂದೆ ಇವನೊಡನೆ ಮಾತನಾಡುವುದೇ ಇಲ್ಲ, ನಾನು ಇನ್ನು ಮುಂದೆ ಇವರಿಬ್ಬರ ನಡುವೆ ರಾಜಿ ಮಾಡುವುದೇ ಇಲ್ಲ ಎಂಬಿತ್ಯಾದಿಯಾಗಿ ಕೋಪದಿಂದ ಪ್ರತಿಜ್ಞೆ ಮಾಡಬೇಡಿ. ಈ ರೀತಿ ಪ್ರತಿಜ್ಞೆ ಮಾಡಿದವರು ಪರಿಹಾರ ನೀಡಿ ಆ ಪ್ರತಿಜ್ಞೆಯನ್ನು ಹಿಂಪಡೆಯಬೇಕು.
Bakara 2:225
ನೀವು ದೃಢನಿರ್ಧಾರದಿಂದ ಮಾಡದ ಪ್ರತಿಜ್ಞೆಗಳಿಗಾಗಿ ಅಲ್ಲಾಹು ನಿಮ್ಮನ್ನು ಶಿಕ್ಷಿಸುವುದಿಲ್ಲ.[1] ಆದರೆ ನೀವು ನಿಮ್ಮ ಹೃದಯದಲ್ಲಿ ಮಾಡಿದ ಪ್ರತಿಜ್ಞೆಗಳಿಗೆ ಅವನು ನಿಮ್ಮನ್ನು ಶಿಕ್ಷಿಸುತ್ತಾನೆ. ಅಲ್ಲಾಹು ಕ್ಷಮಿಸುವವನು ಮತ್ತು ಸಹಿಷ್ಣುತೆಯುಳ್ಳನಾಗಿದ್ದಾನೆ.
———
[1] ಅಂದರೆ ನೀವು ಅಭ್ಯಾಸ ಬಲದಿಂದ ಅಥವಾ ಉದ್ದೇಶಪೂರ್ವಕವಲ್ಲದೆ ಮಾಡುವ ಪ್ರತಿಜ್ಞೆಗಳನ್ನು ಉಲ್ಲಂಘಿಸಿದರೆ ಅಲ್ಲಾಹು ನಿಮ್ಮನ್ನು ಶಿಕ್ಷಿಸುವುದಿಲ್ಲ.
Bakara 2:226
ತಮ್ಮ ಪತ್ನಿಯರೊಡನೆ (ಲೈಂಗಿಕ ಸಂಪರ್ಕ ಮಾಡುವುದಿಲ್ಲವೆಂದು) ಪ್ರತಿಜ್ಞೆ ಮಾಡುವವರಿಗೆ ನಾಲ್ಕು ತಿಂಗಳ ಕಾಲಾವಕಾಶವಿದೆ. ಅವರೇನಾದರೂ (ದಾಂಪತ್ಯಕ್ಕೆ) ಮರಳಿದರೆ, ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.[1]
———
[1] ನಾನು ಹೆಂಡತಿಯೊಂದಿಗೆ ಒಂದು ತಿಂಗಳ ಕಾಲ ಅಥವಾ ಎರಡು ತಿಂಗಳ ಕಾಲ ಸಂಬಂಧವಿಟ್ಟುಕೊಳ್ಳುವುದಿಲ್ಲವೆಂದು ಗಂಡ ಪ್ರತಿಜ್ಞೆ ಮಾಡಿ, ಆ ನಿಗದಿತ ಅವಧಿಯ ನಂತರ ಹೆಂಡತಿಯೊಂದಿಗೆ ಸಂಬಂಧ ಮುಂದುವರಿಸಿದರೆ ಆತ ಪರಿಹಾರ ನೀಡಬೇಕಾಗಿಲ್ಲ. ಆದರೆ ಆ ಅವಧಿ ಪೂರ್ಣಗೊಳ್ಳುವುದಕ್ಕೆ ಮುಂಚೆ ಅವನು ಹೆಂಡತಿಯೊಂದಿಗೆ ಸಂಬಂಧ ಸ್ಥಾಪಿಸಿದರೆ ಪರಿಹಾರ ನೀಡಬೇಕಾಗುತ್ತದೆ. ಇನ್ನು ಗಂಡ ಅವಧಿಯನ್ನು ನಿಶ್ಚಯಿಸದೆ ನಾನು ನನ್ನ ಹೆಂಡತಿಯೊಂದಿಗೆ ಸಂಬಂಧವಿಟ್ಟುಕೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರೆ, ಅವನಿಗೆ ನಾಲ್ಕು ತಿಂಗಳ ಕಾಲಾವಕಾಶವಿದೆ. ಅದರೊಳಗೆ ಒಂದೋ ಅವನು ಹೆಂಡತಿಯೊಂದಿಗೆ ಸಂಬಂಧವನ್ನು ಮುಂದುವರಿಸಬೇಕು ಅಥವಾ ಆಕೆಗೆ ವಿಚ್ಛೇದನೆ ನೀಡಬೇಕು. ನಾಲ್ಕು ತಿಂಗಳುಗಳಿಗಿಂತ ಹೆಚ್ಚು ಕಾಲ ಹೆಂಡತಿಯೊಂದಿಗೆ ಸಂಬಂಧ ಕಡಿಯುವುದಕ್ಕೆ ಅನುಮತಿಯಿಲ್ಲ. ಆತ ಸಂಬಂಧವನ್ನು ಮುಂದುವರಿಸುವುದಾದರೆ ಅದಕ್ಕೆ ಪರಿಹಾರ ನೀಡಬೇಕು. ಇನ್ನು ಅವನು ಸಂಬಂಧವನ್ನು ಮುಂದುವರಿಸದೆ ಮತ್ತು ವಿಚ್ಛೇದನೆಯನ್ನೂ ನೀಡದೆ, ಸಮಸ್ಯೆಯು ನ್ಯಾಯಾಲಯವನ್ನು ತಲುಪಿದರೆ, ಹೆಂಡತಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ಅವನಿಗೆ ಎರಡರಲ್ಲಿ ಒಂದನ್ನು ಆರಿಸುವಂತೆ ಒತ್ತಡ ಹೇರಲಾಗುತ್ತದೆ.
Bakara 2:227
ಆದರೆ, ಅವರು ವಿಚ್ಛೇದನ ಮಾಡಲು ನಿರ್ಧರಿಸಿದರೆ, ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
Bakara 2:228
ವಿಚ್ಛೇದಿತ ಮಹಿಳೆಯರು ಸ್ವಯಂ ಮೂರು ಋತುಸ್ರಾವಗಳ ತನಕ ಕಾಯಬೇಕು. ಅವರಿಗೆ ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿದ್ದರೆ ಅವರ ಗರ್ಭಗಳಲ್ಲಿ ಅಲ್ಲಾಹು ಸೃಷ್ಟಿಸಿರುವುದನ್ನು ಮುಚ್ಚಿಡುವುದು ಅವರಿಗೆ ಧರ್ಮಸಮ್ಮತವಲ್ಲ. ಅವರ ಗಂಡಂದಿರು ಅವರನ್ನು ಆ ಅವಧಿಯೊಳಗೆ ಮರಳಿ ಸ್ವೀಕರಿಸಲು ಪೂರ್ಣ ಹಕ್ಕುಳ್ಳವರಾಗಿದ್ದಾರೆ—ಅವರ (ಗಂಡಂದಿರ) ಉದ್ದೇಶವು ರಾಜಿ ಮಾಡುವುದಾಗಿದ್ದರೆ.[1] ಪುರುಷರಿಗೆ ಮಹಿಳೆಯರ ಮೇಲೆ ಹಕ್ಕುಗಳಿರುವಂತೆ ಮಹಿಳೆಯರಿಗೂ ಪುರುಷರ ಮೇಲೆ ಸ್ವೀಕಾರಾರ್ಹ ರೀತಿಯಲ್ಲಿರುವ ಹಕ್ಕುಗಳಿವೆ. ಆದರೆ ಪುರುಷರಿಗೆ ಮಹಿಳೆಯರಿಗಿಂತ ಹೆಚ್ಚಿನ ಒಂದು ಪದವಿಯಿದೆ. ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
———
[1] ಪತ್ನಿಯನ್ನು ಮರಳಿ ಸ್ವೀಕರಿಸುವುದು ಒಳಿತಿನ ಉದ್ದೇಶದಿಂದಾಗಿದ್ದರೆ, ದೀಕ್ಷಾಕಾಲ (ಇದ್ದ) ಮುಗಿಯುವುದಕ್ಕೆ ಮೊದಲು ಪತ್ನಿಯನ್ನು ಮರಳಿ ಸ್ವೀಕರಿಸುವ ಪೂರ್ಣ ಹಕ್ಕು ಗಂಡನಿಗಿದೆ. ಅದನ್ನು ತಡೆಯುವ ಹಕ್ಕು ಹೆಂಡತಿಯ ಕಡೆಯವರಿಗಿಲ್ಲ.
Bakara 2:229
ವಿಚ್ಛೇದನವು ಎರಡು ಬಾರಿ.[1] ನಂತರ ಒಂದೋ ಸ್ವೀಕಾರಾರ್ಹ ರೀತಿಯಲ್ಲಿ ಬಳಿಯಿರಿಸಿಕೊಳ್ಳಬೇಕು ಅಥವಾ ಉತ್ತಮ ರೀತಿಯಲ್ಲಿ ಬಿಟ್ಟು ಬಿಡಬೇಕು. ನೀವು ಅವರಿಗೆ ನೀಡಿದ ಯಾವುದೇ ವಸ್ತುವನ್ನು ಮರಳಿ ಪಡೆಯುವುದು ನಿಮಗೆ ಧರ್ಮಸಮ್ಮತವಲ್ಲ. ಅಲ್ಲಾಹನ ಎಲ್ಲೆಗಳೊಳಗೆ ನಿಲ್ಲಲು ಅವರಿಬ್ಬರಿಗೆ ಸಾಧ್ಯವಾಗಲಾರದು ಎಂದು ಅವರಿಬ್ಬರು ಭಯಪಡುವ ಹೊರತು. ಅಲ್ಲಾಹನ ಎಲ್ಲೆಗಳೊಳಗೆ ನಿಲ್ಲಲು ಅವರಿಬ್ಬರಿಗೆ ಸಾಧ್ಯವಾಗಲಾರದೆಂದು ನೀವು ಭಯಪಡುವುದಾದರೆ, ಪತ್ನಿ ಏನಾದರೂ ಕೊಟ್ಟು ವಿಚ್ಛೇದನ ಪಡೆಯುವುದರಲ್ಲಿ ಅವರಿಬ್ಬರಿಗೂ ದೋಷವಿಲ್ಲ.[2] ಇವು ಅಲ್ಲಾಹನ ಎಲ್ಲೆಗಳಾಗಿವೆ. ನೀವು ಅವುಗಳನ್ನು ಮೀರಿ ಹೋಗಬೇಡಿ. ಯಾರು ಅಲ್ಲಾಹನ ಎಲ್ಲೆಗಳನ್ನು ಮೀರಿ ಹೋಗುತ್ತಾರೋ ಅವರೇ ಅಕ್ರಮಿಗಳು.
———
[1] ಗಂಡನಿಗೆ ಹೆಂಡತಿಯನ್ನು ಮರಳಿ ಸ್ವೀಕರಿಸಬಹುದಾದ ವಿಚ್ಛೇದನೆಯು ಎರಡು ಬಾರಿ ಮಾತ್ರ. ಮೊದಲ ಬಾರಿ ವಿಚ್ಛೇದಿಸಿದರೆ ಮರಳಿ ಸ್ವೀಕರಿಸಬಹುದು ಮತ್ತು ಎರಡನೇ ಬಾರಿ ವಿಚ್ಛೇದಿಸಿದರೂ ಮರಳಿ ಸ್ವೀಕರಿಸಬಹುದು. ಆದರೆ ಮೂರನೇ ಬಾರಿ ವಿಚ್ಛೇದಿಸಿದರೆ (ಮೂರನೇ ತಲಾಕ್ ಹೇಳಿದರೆ) ನಂತರ ಹೆಂಡತಿಯನ್ನು ಮರಳಿ ಸ್ವೀಕರಿಸುವ ಅನುಮತಿಯಿಲ್ಲ. ಇಸ್ಲಾಮೀ ಪೂರ್ವ ಕಾಲದಲ್ಲಿ ವಿಚ್ಛೇದನೆಗೆ ಮತ್ತು ಮರಳಿ ಸ್ವೀಕರಿಸುವುದಕ್ಕೆ ಯಾವುದೇ ಮಿತಿಯಿರಲಿಲ್ಲ. ಎಷ್ಟು ಬಾರಿ ಬೇಕಾದರೂ ವಿಚ್ಛೇದನೆ ನೀಡಬಹುದಿತ್ತು ಮತ್ತು ಎಷ್ಟು ಬಾರಿ ಬೇಕಾದರೂ ಮರಳಿ ಪಡೆಯಬಹುದಿತ್ತು. ಇದರಿಂದ ಮಹಿಳೆಯರಿಗೆ ತುಂಬಾ ಅನ್ಯಾಯವಾಗುತ್ತಿತ್ತು. ಏಕೆಂದರೆ, ಅತ್ತ ಗಂಡ ಪೂರ್ಣವಾಗಿ ವಿಚ್ಛೇದಿಸುತ್ತಲೂ ಇರಲಿಲ್ಲ ಮತ್ತು ಪತ್ನಿಯಾಗಿಟ್ಟುಕೊಳ್ಳುತ್ತಲೂ ಇರಲಿಲ್ಲ. ಗಂಡನಿಂದ ವಿಚ್ಛೇದನೆ ಸಿಗದೆ ಅವಳಿಗೆ ಬೇರೆ ಮದುವೆಯಾಗಲು ಸಾಧ್ಯವಾಗುತ್ತಿರಲಿಲ್ಲ. ಆಕೆ ಗಂಡನೊಂದಿಗೆ ನರಕಸದ್ರಶ ಜೀವನವನ್ನು ಅನುಭವಿಸಬೇಕಾಗಿ ಬರುತ್ತಿತ್ತು. [2] ಪತ್ನಿ ವಿಚ್ಛೇದನ ಪಡೆಯುವುದನ್ನು ಖುಲಾ ಎಂದು ಕರೆಯಲಾಗುತ್ತದೆ. ಅಂದರೆ ಆಕೆ ಗಂಡನಿಂದ ಬೇರ್ಪಡಲು ಬಯಸಿದರೆ ಗಂಡ ಆಕೆಗೆ ನೀಡಿದ ವಧುದಕ್ಷಿಣೆ (ಮಹರ್)ಯನ್ನು ಹಿಂದಿರುಗಿಸಬೇಕು. ಗಂಡ ಬೇರ್ಪಡಲು ಒಪ್ಪದಿದ್ದರೆ, ನ್ಯಾಯಾಲಯವು ವಿಚ್ಛೇದನ ನೀಡಲು ಗಂಡನಿಗೆ ಆದೇಶಿಸುತ್ತದೆ. ಗಂಡ ವಿಚ್ಛೇದನ ನೀಡದಿದ್ದರೆ ನ್ಯಾಯಾಲಯವು ಮದುವೆಯನ್ನು ಫಸ್ಕ್ (ರದ್ದು) ಮಾಡುತ್ತದೆ.
Bakara 2:230
ಇನ್ನು (ಮೂರನೇ ಬಾರಿ) ಅವನು ಅವಳನ್ನು ವಿಚ್ಛೇದಿಸಿದರೆ, ನಂತರ ಅವಳು ಬೇರೊಬ್ಬನನ್ನು ವಿವಾಹವಾಗುವ ತನಕ ಇವನಿಗೆ ಧರ್ಮಸಮ್ಮತಳಾಗುವುದಿಲ್ಲ. ಆದರೆ ಅವನು ಕೂಡ ಅವಳಿಗೆ ವಿಚ್ಛೇದನ ನೀಡಿದರೆ, ಅಲ್ಲಾಹನ ಎಲ್ಲೆಗಳೊಳಗೆ ನಿಲ್ಲಲು ಸಾಧ್ಯವಾಗುವುದೆಂದು ಇವರಿಬ್ಬರು ಭಾವಿಸುವುದಾದರೆ (ಹಳೆಯ ದಾಂಪತ್ಯಕ್ಕೆ) ಮರಳುವುದರಲ್ಲಿ ಇವರಿಬ್ಬರಿಗೆ ದೋಷವಿಲ್ಲ. ಇವು ಅಲ್ಲಾಹನ ಎಲ್ಲೆಗಳಾಗಿವೆ. ತಿಳುವಳಿಕೆಯಿರುವ ಜನರಿಗಾಗಿ ಅವನು ಅವುಗಳನ್ನು ವಿವರಿಸಿಕೊಡುತ್ತಾನೆ.
Bakara 2:231
ನೀವು ನಿಮ್ಮ ಪತ್ನಿಯರಿಗೆ ವಿಚ್ಛೇದನ ನೀಡಿ, ನಂತರ ಅವರು ತಮ್ಮ ಅವಧಿಯನ್ನು ಪೂರ್ಣಗೊಳಿಸಿದರೆ, ಸ್ವೀಕಾರಾರ್ಹ ರೀತಿಯಲ್ಲಿ ಅವರನ್ನು ಬಳಿಯಿಟ್ಟುಕೊಳ್ಳಿ ಅಥವಾ ಸ್ವೀಕಾರಾರ್ಹ ರೀತಿಯಲ್ಲಿ ಅವರನ್ನು ಬಿಟ್ಟು ಬಿಡಿ. ಅವರಿಗೆ ತೊಂದರೆ ಕೊಡುವ ಉದ್ದೇಶದಿಂದ ಅತಿರೇಕವೆಸಗಲು ಅವರನ್ನು ಬಳಿಯಿಟ್ಟುಕೊಳ್ಳಬೇಡಿ. ಯಾರು ಹೀಗೆ ಮಾಡುತ್ತಾನೋ ಅವನು ಅವನ ಮೇಲೆಯೇ ಅಕ್ರಮವೆಸಗಿದ್ದಾನೆ. ಅಲ್ಲಾಹನ ನಿಯಮಗಳನ್ನು ತಮಾಷೆಯಾಗಿ ಸ್ವೀಕರಿಸಬೇಡಿ. ಅಲ್ಲಾಹು ನಿಮಗೆ ದಯಪಾಲಿಸಿದ ಅನುಗ್ರಹಗಳನ್ನು ಮತ್ತು ನಿಮಗೆ ಉಪದೇಶ ನೀಡುತ್ತಾ ಅವನು ಅವತೀರ್ಣಗೊಳಿಸಿದ ಗ್ರಂಥ ಮತ್ತು ವಿವೇಕವನ್ನು ಸ್ಮರಿಸಿರಿ. ಅಲ್ಲಾಹನನ್ನು ಭಯಪಡಿರಿ. ತಿಳಿಯಿರಿ! ಅಲ್ಲಾಹು ಎಲ್ಲಾ ವಿಷಯಗಳನ್ನೂ ತಿಳಿದವನಾಗಿದ್ದಾನೆ.
Bakara 2:232
ನೀವು ನಿಮ್ಮ ಪತ್ನಿಯರಿಗೆ ವಿಚ್ಛೇದನ ನೀಡಿ, ನಂತರ ಅವರು ತಮ್ಮ ಅವಧಿಯನ್ನು ಪೂರ್ಣಗೊಳಿಸಿದರೆ, ಅವರು ಅವರ ಗಂಡಂದಿರನ್ನು ವಿವಾಹವಾಗುವುದನ್ನು ತಡೆಯಬೇಡಿ—ಸ್ವೀಕಾರಾರ್ಹ ರೀತಿಯಲ್ಲಿ ಅವರು ಪರಸ್ಪರ ಸಂತೃಪ್ತರಾಗಿದ್ದರೆ. ಇದು ನಿಮ್ಮ ಪೈಕಿ ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವರಿಗೆ ನೀಡುವ ಉಪದೇಶವಾಗಿದೆ. ಅದು ನಿಮಗೆ ಅತಿಶ್ರೇಷ್ಠ ಮತ್ತು ಅತ್ಯಂತ ಪರಿಶುದ್ಧವಾಗಿದೆ. ಅಲ್ಲಾಹು ತಿಳಿದಿದ್ದಾನೆ; ಆದರೆ ನೀವು ತಿಳಿದಿಲ್ಲ.
Bakara 2:233
ತಾಯಂದಿರು ತಮ್ಮ ಮಕ್ಕಳಿಗೆ ಎರಡು ವರ್ಷ ಪೂರ್ಣವಾಗಿ ಸ್ತನಪಾನ ಮಾಡಬೇಕು—ಇದು ಸ್ತನಪಾನದ ಅವಧಿಯನ್ನು ಪೂರ್ಣಗೊಳಿಸಲು ಬಯಸುವವರಿಗೆ. ಸ್ವೀಕಾರಾರ್ಹ ರೀತಿಯಲ್ಲಿ ಅವರಿಗೆ ಆಹಾರ ಮತ್ತು ಬಟ್ಟೆಬರೆಗಳನ್ನು ಒದಗಿಸುವುದು ಮಗುವಿನ ತಂದೆಯ ಕರ್ತವ್ಯವಾಗಿದೆ. ಯಾರ ಮೇಲೂ ಅವನ ಸಾಮರ್ಥ್ಯಕ್ಕಿಂತ ಮಿಗಿಲಾದುದನ್ನು ಹೊರಿಸಲಾಗುವುದಿಲ್ಲ. ಮಗುವಿನ ಕಾರಣದಿಂದ ತಾಯಿಗೆ ತೊಂದರೆಯಾಗಬಾರದು ಮತ್ತು ಮಗುವಿನ ಕಾರಣದಿಂದ ತಂದೆಗೂ ತೊಂದರೆಯಾಗಬಾರದು. ವಾರಿಸುದಾರರಿಗೂ ಇದೇ ರೀತಿಯ ಕರ್ತವ್ಯಗಳಿವೆ. ಅವರಿಬ್ಬರು ಸಂತೃಪ್ತಿಯಿಂದ ಮತ್ತು ಸಮಾಲೋಚನೆಯಿಂದ ಮಗುವಿನ ಸ್ತನಪಾನವನ್ನು ನಿಲ್ಲಿಸಲು ಬಯಸಿದರೆ ಅವರಿಬ್ಬರ ಮೇಲೂ ದೋಷವಿಲ್ಲ. ನಿಮ್ಮ ಮಕ್ಕಳಿಗೆ ಬೇರೊಬ್ಬರಿಂದ ಸ್ತನಪಾನ ಮಾಡಿಸಲು ನೀವು ಬಯಸುವುದಾದರೆ, ಅದರಲ್ಲೂ ನಿಮಗೆ ದೋಷವಿಲ್ಲ—ಸ್ವೀಕಾರಾರ್ಹ ರೀತಿಯಲ್ಲಿ ಅವರಿಗೆ ಅವರ ವೇತನವನ್ನು ಕೊಡುವುದಾದರೆ. ಅಲ್ಲಾಹನನ್ನು ಭಯಪಡಿರಿ. ತಿಳಿಯಿರಿ! ನೀವು ಮಾಡುವ ಕರ್ಮಗಳನ್ನು ಅಲ್ಲಾಹು ನೋಡುತ್ತಿದ್ದಾನೆ.
Bakara 2:234
ನಿಮ್ಮಲ್ಲಿ ಯಾರಾದರೂ ತಮ್ಮ ಪತ್ನಿಯರನ್ನು ಬಿಟ್ಟು ನಿಧನರಾದರೆ, ಅವರು (ಪತ್ನಿಯರು) ಸ್ವಯಂ ನಾಲ್ಕು ತಿಂಗಳು ಮತ್ತು ಹತ್ತು ದಿನ ದೀಕ್ಷಾಕಾಲ (ಇದ್ದ) ಆಚರಿಸಬೇಕು. ನಂತರ ಅವರ (ದೀಕ್ಷಾಕಾಲದ) ಅವಧಿ ಪೂರ್ಣವಾದರೆ, ಸ್ವೀಕಾರಾರ್ಹ ರೀತಿಯಲ್ಲಿ ಅವರೇನು ಮಾಡುತ್ತಾರೋ ಅದರಲ್ಲಿ ನಿಮಗೆ ದೋಷವಿಲ್ಲ. ನೀವು ಮಾಡುವ ಕರ್ಮಗಳನ್ನು ಅಲ್ಲಾಹು ಸೂಕ್ಷ್ಮವಾಗಿ ತಿಳಿಯುತ್ತಿದ್ದಾನೆ.
Bakara 2:235
ನೀವು ಆ ಮಹಿಳೆಯರನ್ನು ವಿವಾಹವಾಗಲು ಬಯಸುತ್ತೀರೆಂದು ಸೂಚ್ಯವಾಗಿ ತಿಳಿಸಿದರೆ ಅಥವಾ ಅದನ್ನು ಮನಸ್ಸಿನೊಳಗೆ ಬಚ್ಚಿಟ್ಟರೆ ಅದರಲ್ಲಿ ನಿಮಗೇನೂ ದೋಷವಿಲ್ಲ.[1] ನೀವು ಅವರ ಬಗ್ಗೆ ಯೋಚಿಸುತ್ತೀರೆಂದು ಅಲ್ಲಾಹನಿಗೆ ತಿಳಿದಿದೆ. ಆದರೆ ರಹಸ್ಯವಾಗಿ ಅವರಿಗೆ ಯಾವುದೇ ಭರವಸೆ ನೀಡಬೇಡಿ. ನೀವು ಅವರೊಡನೆ ಉತ್ತಮ ಮಾತುಗಳನ್ನಾಡಬಹುದು. ಅವರ (ದೀಕ್ಷಾಕಾಲದ) ಅವಧಿ ಪೂರ್ಣವಾಗುವ ತನಕ ವಿವಾಹ ಕರಾರು ಮಾಡಿಕೊಳ್ಳಲು ದೃಢನಿರ್ಧಾರ ತೆಗೆದುಕೊಳ್ಳಬೇಡಿ. ತಿಳಿಯಿರಿ! ನಿಮ್ಮ ಮನಸ್ಸಿನಲ್ಲಿರುವುದನ್ನು ಅಲ್ಲಾಹು ತಿಳಿಯುತ್ತಾನೆ. ಆದ್ದರಿಂದ ಅವನನ್ನು ಭಯಪಡಿರಿ. ತಿಳಿಯಿರಿ! ಅಲ್ಲಾಹು ಕ್ಷಮಿಸುವವನು ಮತ್ತು ಸಹಿಷ್ಣುತೆಯುಳ್ಳವನಾಗಿದ್ದಾನೆ.
———
[1] ಇಲ್ಲಿ ಉದ್ದೇಶಿಸಿರುವುದು ಮೂರು ವಿಚ್ಛೇದನಗಳನ್ನು (ತಲಾಕ್) ಪಡೆದ ಮಹಿಳೆಯ ಬಗ್ಗೆ. ಅವರೊಡನೆ ಸೂಚ್ಯವಾಗಿ, ಅಂದರೆ ನನಗೆ ಒಬ್ಬ ಮಹಿಳೆಯನ್ನು ವಿವಾಹವಾಗುವ ಇರಾದೆಯಿದೆ, ಅಥವಾ ನಾನು ಒಬ್ಬ ಉತ್ತಮ ಮಹಿಳೆಯನ್ನು ಹುಡುಕುತ್ತಿದ್ದೇನೆ ಎಂದು ಹೇಳಬಹುದು. ಆದರೆ ಇದ್ದ (ದೀಕ್ಷಾಕಾಲ) ಮುಗಿಯುವ ತನಕ ರಹಸ್ಯ ಭರವಸೆಗಳನ್ನು ಅಥವಾ ವಿವಾಹ ಒಪ್ಪಂದವನ್ನು ಮಾಡಿಕೊಳ್ಳಬಾರದು. ಇನ್ನು ಒಂದು ಅಥವಾ ಎರಡು ವಿಚ್ಛೇದನ (ತಲಾಕ್) ಪಡೆದ ಮಹಿಳೆಯೊಡನೆ ಸೂಚ್ಯವಾಗಿಯೂ ವಿವಾಹದ ಬಗ್ಗೆ ಪ್ರಸ್ತಾಪವೆತ್ತಬಾರದು. ಏಕೆಂದರೆ ಆ ಅವಧಿಯಲ್ಲಿ ಆಕೆಯ ಗಂಡ ಆಕೆಯನ್ನು ಮರಳಿ ಸ್ವೀಕರಿಸುವ ಸಾಧ್ಯತೆಯಿದೆ.
Bakara 2:236
ನೀವು ನಿಮ್ಮ ಪತ್ನಿಯರನ್ನು ಸೇರುವುದಕ್ಕೆ ಮೊದಲು ಅಥವಾ ಅವರಿಗೆ ವಧುದಕ್ಷಿಣೆಯನ್ನು ನಿಶ್ಚಯಿಸುವುದಕ್ಕೆ ಮೊದಲು ವಿಚ್ಛೇದನ ನೀಡಿದರೆ, ಅದರಲ್ಲಿ ನಿಮಗೇನೂ ದೋಷವಿಲ್ಲ. ಆದರೆ ಅವರಿಗೆ ಏನಾದರೂ ಪರಿಹಾರವನ್ನು ನೀಡಿರಿ. ಶ್ರೀಮಂತನು ತನ್ನ ಶಕ್ತಿಗೆ ಅನುಗುಣವಾಗಿ ಮತ್ತು ಬಡವನು ತನ್ನ ಶಕ್ತಿಗೆ ಅನುಗುಣವಾಗಿ ಸ್ವೀಕಾರಾರ್ಹ ರೀತಿಯಲ್ಲಿ ಏನಾದರೂ ನೀಡಲಿ. ಇದು ಒಳಿತು ಮಾಡುವವರ ಕರ್ತವ್ಯವಾಗಿದೆ.
Bakara 2:237
ನೀವು ನಿಮ್ಮ ಪತ್ನಿಯರನ್ನು ಸೇರುವುದಕ್ಕೆ ಮೊದಲು ಅವರಿಗೆ ವಿಚ್ಛೇದನ ನೀಡಿದರೆ, ಮತ್ತು ಈಗಾಗಲೇ ನೀವು ಅವರಿಗೆ ವಧುದಕ್ಷಿಣೆಯನ್ನು ನಿಶ್ಚಯಿಸಿದ್ದರೆ, ನಿಶ್ಚಯಿಸಿದ ವಧುದಕ್ಷಿಣೆಯ ಅರ್ಧವನ್ನು ಅವರಿಗೆ ಕೊಟ್ಟುಬಿಡಿ. ಆದರೆ, ಅವರು ಮಾಫಿ ಮಾಡಿದರೆ ಹೊರತು.[1] ಅಥವಾ ವಿವಾಹ ಕರಾರು ಯಾರ ಕೈಯಲ್ಲಿದೆಯೋ ಅವನು ಮಾಫಿ ಮಾಡಿದರೆ ಹೊರತು.[2] ನೀವು ಮಾಫಿ ಮಾಡುವುದು ದೇವಭಯಕ್ಕೆ ಹೆಚ್ಚು ನಿಕಟವಾಗಿದೆ. ನೀವು ನಿಮ್ಮ ನಡುವಿನ ಸೌಜನ್ಯವನ್ನು ಮರೆಯಬೇಡಿ. ನಿಶ್ಚಯವಾಗಿಯೂ ಅಲ್ಲಾಹು ನೀವು ಮಾಡುತ್ತಿರುವ ಕರ್ಮಗಳನ್ನು ನೋಡುತ್ತಿದ್ದಾನೆ.
———
[1] ಅಂದರೆ ಪತ್ನಿ ವಧುದಕ್ಷಿಣೆಯ ಅರ್ಧ ಹಕ್ಕು ತನಗೆ ಬೇಡವೆಂದು ಹೇಳಿ ವಧುದಕ್ಷಿಣೆಯನ್ನು ಪೂರ್ಣವಾಗಿ ಹಿಂದಿರುಗಿಸುವುದು. [2] ವಿವಾಹ ಕರಾರು ಕೈಯಲ್ಲಿರುವವನು ಎಂದರೆ ಗಂಡ. ಅಂದರೆ, ಅವನು ವಧುದಕ್ಷಿಣೆಯ ಅರ್ಧ ಭಾಗವನ್ನು ಪಡೆಯುವ ತನ್ನ ಹಕ್ಕನ್ನು ಮಾಫಿ ಮಾಡಿ ವಧುದಕ್ಷಿಣೆಯನ್ನು ಸಂಪೂರ್ಣವಾಗಿ ಹೆಂಡತಿಗೆ ಬಿಟ್ಟುಕೊಡುವುದು.
Bakara 2:238
ನಮಾಝ್‌ಗಳನ್ನು ಸಂರಕ್ಷಣೆ ಮಾಡಿರಿ. ವಿಶೇಷವಾಗಿ ಮಧ್ಯಮ (ಅಸರ್) ನಮಾಝನ್ನು. ಅಲ್ಲಾಹನ ಮುಂದೆ ವಿಧೇಯತೆಯಿಂದ ನಿಲ್ಲಿರಿ.
Bakara 2:239
ನಿಮಗೆ ಭಯವಿದ್ದರೆ ನಡೆಯುತ್ತಾ ಅಥವಾ ಸವಾರಿ ಮಾಡುತ್ತಾ (ನಮಾಝ್ ನಿರ್ವಹಿಸಿರಿ). ನೀವು ಭಯಮುಕ್ತರಾದರೆ ನಿಮಗೆ ತಿಳಿಯದಿರುವುದನ್ನು ಅಲ್ಲಾಹು ನಿಮಗೆ ಕಲಿಸಿಕೊಟ್ಟಂತೆ ಅವನನ್ನು ಸ್ಮರಿಸಿರಿ.
Bakara 2:240
ನಿಮ್ಮಲ್ಲಿ ಯಾರಾದರೂ ತಮ್ಮ ಪತ್ನಿಯರನ್ನು ಬಿಟ್ಟು ನಿಧನರಾದರೆ, ಪತ್ನಿಯರನ್ನು ಒಂದು ವರ್ಷದ ತನಕ ಹೊರ ಕಳುಹಿಸದೆ ಅವರನ್ನು ನೋಡಿಕೊಳ್ಳಲು ಉಯಿಲು ಮಾಡಬೇಕು. ಅವರೇನಾದರೂ (ಸ್ವಯಂ) ಹೊರಟುಹೋದರೆ, ಸ್ವೀಕಾರಾರ್ಹ ರೀತಿಯಲ್ಲಿ ಅವರೇನು ಮಾಡುತ್ತಾರೋ ಅದರಲ್ಲಿ ನಿಮಗೆ ದೋಷವಿಲ್ಲ. ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
Bakara 2:241
ವಿಚ್ಛೇದಿತ ಮಹಿಳೆಯರಿಗೆ ಸ್ವೀಕಾರಾರ್ಹ ರೀತಿಯಲ್ಲಿ ಏನಾದರೂ ಪರಿಹಾರವನ್ನು ಕೊಡಬೇಕಾಗಿದೆ. ಇದು ದೇವಭಯವುಳ್ಳವರ ಕರ್ತವ್ಯವಾಗಿದೆ.
Bakara 2:242
ಈ ರೀತಿ ಅಲ್ಲಾಹು ತನ್ನ ನಿಯಮಗಳನ್ನು ನಿಮಗೆ ಸ್ಪಷ್ಟವಾಗಿ ವಿವರಿಸಿಕೊಡುತ್ತಾನೆ. ನೀವು ಅರ್ಥಮಾಡಿಕೊಳ್ಳುವುದಕ್ಕಾಗಿ.
Bakara 2:243
ಸಹಸ್ರಾರು ಸಂಖ್ಯೆಯ ಜನರು ಸಾವಿನ ಭಯದಿಂದ ತಮ್ಮ ಮನೆಗಳನ್ನು ಬಿಟ್ಟು ಓಡಿದ್ದನ್ನು ನೀವು ನೋಡಿಲ್ಲವೇ?[1] ಆಗ ಅಲ್ಲಾಹು ಅವರೊಡನೆ, "ಸಾಯಿರಿ" ಎಂದು ಹೇಳಿದನು. ನಂತರ ಅವನು ಅವರಿಗೆ ಜೀವ ನೀಡಿದನು. ನಿಶ್ಚಯವಾಗಿಯೂ ಅಲ್ಲಾಹನಿಗೆ ಜನರ ಮೇಲೆ ಬಹಳ ಔದಾರ್ಯವಿದೆ. ಆದರೆ ಜನರಲ್ಲಿ ಹೆಚ್ಚಿನವರು ಕೃತಜ್ಞರಾಗುವುದಿಲ್ಲ.
———
[1] ಇವರು ಯಾರು ಎಂಬುದರ ಬಗ್ಗೆ ಅಧಿಕೃತವಾದ ಯಾವುದೇ ಉಲ್ಲೇಖಗಳಿಲ್ಲ. ಕುರ್‌ಆನ್ ವ್ಯಾಖ್ಯಾನ ಗ್ರಂಥಗಳಲ್ಲಿ ಇವರನ್ನು ಇಸ್ರಾಯೇಲರಲ್ಲಿ ಸೇರಿದವರೆಂದು ಹೇಳಲಾಗಿದೆ. ಇವರಿಗೆ ಅಲ್ಲಾಹು ಪುನಃ ಜೀವ ನೀಡಲು ಪ್ರವಾದಿ ಯೆಹೆಜ್ಕೇಲರ ಪ್ರಾರ್ಥನೆಯೇ ಕಾರಣವೆಂದು ಹೇಳಲಾಗಿದೆ. ಇವರು ಧರ್ಮಯುದ್ಧದಲ್ಲಿ ಪಾಲ್ಗೊಳ್ಳಲು ಕರೆದಾಗ ಅಥವಾ ಊರಲ್ಲಿ ಪ್ಲೇಗ್ ರೋಗ ಹರಡಿದಾಗ ಸಾವಿನ ಭಯದಿಂದ ಊರು ಬಿಟ್ಟು ಓಡಿದ್ದರು.
Bakara 2:244
ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ. ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನೂ ಕೇಳುವವನು ಮತ್ತು ತಿಳಿದವನಾಗಿದ್ದಾನೆ.
Bakara 2:245
ಅಲ್ಲಾಹನಿಗೆ ಒಳ್ಳೆಯ ಸಾಲವನ್ನು ಕೊಡುವವರು ಯಾರು?[1] ಹಾಗಾದರೆ, ಅಲ್ಲಾಹು ಅವನಿಗೆ ಅದನ್ನು ಹಲವಾರು ಪಟ್ಟು ಹೆಚ್ಚಿಸಿಕೊಡುವನು. ಅಲ್ಲಾಹನೇ ಇಕ್ಕಟ್ಟು ಮತ್ತು ವಿಶಾಲತೆಯನ್ನು ನೀಡುವವನು. ನಿಮ್ಮನ್ನು ಅವನ ಬಳಿಗೇ ಮರಳಿಸಲಾಗುತ್ತದೆ.
———
[1] ಒಳ್ಳೆಯ ಸಾಲ ಎಂದರೆ ಅಲ್ಲಾಹನ ಮಾರ್ಗದಲ್ಲಿ ಮಾಡುವ ದಾನಧರ್ಮಗಳು.
Bakara 2:246
ಮೂಸಾರ ಕಾಲಾನಂತರ ಇಸ್ರಾಯೇಲ್ ಮಕ್ಕಳಲ್ಲಿ ಸೇರಿದ ಕೆಲವು ಮುಖಂಡರನ್ನು ನೀವು ನೋಡಿಲ್ಲವೇ? ಅವರು ತಮ್ಮ ಪ್ರವಾದಿಯೊಂದಿಗೆ, "ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಲು ನಮಗೆ ಒಬ್ಬ ರಾಜನನ್ನು ನೇಮಿಸಿಕೊಡಿ" ಎಂದು ಹೇಳಿದ ಸಂದರ್ಭ. ಅವರು (ಪ್ರವಾದಿ) ಹೇಳಿದರು: "ನಿಮ್ಮ ಮೇಲೆ ಯುದ್ಧವು ಕಡ್ಡಾಯವಾದ ನಂತರ ನೀವೇನಾದರೂ ಯುದ್ಧ ಮಾಡದವರಾಗಿ ಬಿಟ್ಟರೆ?" ಅವರು ಹೇಳಿದರು: "ನಮ್ಮನ್ನು ನಮ್ಮ ಮನೆಗಳಿಂದ ಓಡಿಸಲಾಗಿರುವ ಮತ್ತು ನಮ್ಮಿಂದ ನಮ್ಮ ಮಕ್ಕಳನ್ನು ಬೇರ್ಪಡಿಸಲಾಗಿರುವ ಈ ಸ್ಥಿತಿಯಲ್ಲಿ ನಾವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡದಿರಲು ಸಾಧ್ಯವೇ?" ಆದರೆ ಅವರ ಮೇಲೆ ಯುದ್ಧವು ಕಡ್ಡಾಯವಾದಾಗ ಅವರಲ್ಲಿ ಕೆಲವರ ಹೊರತು ಉಳಿದವರೆಲ್ಲರೂ ಮುಖ ತಿರುಗಿಸಿ ನಡೆದರು. ಅಲ್ಲಾಹನಿಗೆ ಅಕ್ರಮಿಗಳ ಬಗ್ಗೆ ಬಹಳ ಚೆನ್ನಾಗಿ ತಿಳಿದಿದೆ.
Bakara 2:247
ಅವರೊಡನೆ ಅವರ ಪ್ರವಾದಿ ಹೇಳಿದರು: "ಅಲ್ಲಾಹು ನಿಮಗೆ ತಾಲೂತರನ್ನು (ಸೌಲ್) ರಾಜನಾಗಿ ನೇಮಿಸಿದ್ದಾನೆ." ಅವರು ಹೇಳಿದರು: "ಅವರು ನಮಗೆ ರಾಜನಾಗಲು ಹೇಗೆ ಸಾಧ್ಯ? ರಾಜ ಪದವಿಗೆ ಅವರಿಗಿಂತಲೂ ಹೆಚ್ಚು ಅರ್ಹತೆ ನಮಗಿದೆ. ಅವರಿಗೆ ಹೇರಳ ಆಸ್ತಿಪಾಸ್ತಿಯನ್ನೂ ನೀಡಲಾಗಿಲ್ಲ." ಅವರು (ಪ್ರವಾದಿ) ಹೇಳಿದರು: "ಅಲ್ಲಾಹು ನಿಮಗಿಂತ ಅವರನ್ನೇ ಆಯ್ಕೆ ಮಾಡಿದ್ದಾನೆ ಮತ್ತು ಅವರಿಗೆ ಬೌದ್ಧಿಕ ಹಾಗೂ ದೈಹಿಕ ಶ್ರೇಷ್ಠತೆಯನ್ನು ನೀಡಿದ್ದಾನೆ. ಅಲ್ಲಾಹು ಅವನು ಇಚ್ಛಿಸುವವರಿಗೆ ಅವನ ರಾಜ ಪದವಿ ನೀಡುತ್ತಾನೆ. ಅಲ್ಲಾಹು ವಿಶಾಲನು ಮತ್ತು ಸರ್ವಜ್ಞನಾಗಿದ್ದಾನೆ.”
Bakara 2:248
ಅವರೊಡನೆ ಅವರ ಪ್ರವಾದಿ ಹೇಳಿದರು: "ಆ ಪೆಟ್ಟಿಗೆ ನಿಮ್ಮ ಬಳಿಗೆ ಬರುವುದು ಅವರ ರಾಜ ಪದವಿಯ ಸಂಕೇತವಾಗಿದೆ. ಅದರಲ್ಲಿ ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಮನಃಶಾಂತಿ ಮತ್ತು ಮೂಸಾ ಹಾಗೂ ಹಾರೂನರ ಕುಟುಂಬಗಳು ಬಿಟ್ಟು ಹೋದ ಅವಶೇಷಗಳಿವೆ. ಅದನ್ನು ದೇವದೂತರು ವಹಿಸಿಕೊಂಡು ಬರುತ್ತಾರೆ. ನೀವು ಸತ್ಯವಿಶ್ವಾಸಿಗಳಾಗಿದ್ದರೆ ನಿಶ್ಚಯವಾಗಿಯೂ ನಿಮಗೆ ಅದರಲ್ಲಿ ಸ್ಪಷ್ಟ ದೃಷ್ಟಾಂತವಿದೆ."
Bakara 2:249
ನಂತರ ತಾಲೂತ್ (ಸೌಲ್) ಸೈನ್ಯದೊಂದಿಗೆ ಹೊರಟಾಗ ಹೇಳಿದರು: "ನಿಶ್ಚಯವಾಗಿಯೂ ಅಲ್ಲಾಹು ಒಂದು ನದಿಯ ಮೂಲಕ ನಿಮ್ಮನ್ನು ಪರೀಕ್ಷಿಸುವನು. ಯಾರು ಅದರ ನೀರನ್ನು ಕುಡಿಯುತ್ತಾನೋ ಅವನು ನನ್ನವನಲ್ಲ. ಯಾರು ಅದರ ರುಚಿ ನೋಡುವುದಿಲ್ಲವೋ ಅವನು ನನ್ನವನು; ಆದರೆ ತನ್ನ ಕೈಯಿಂದ ಒಂದು ಬೊಗಸೆ ಮಾತ್ರ ತೆಗೆದುಕೊಂಡವನ ಹೊರತು." ಆದರೆ ಅವರಲ್ಲಿ ಕೆಲವರ ಹೊರತು ಉಳಿದವರೆಲ್ಲರೂ ಅದರ ನೀರನ್ನು ಕುಡಿದರು. ನಂತರ ತಾಲೂತ್ ಮತ್ತು ಅವರ ಜೊತೆಗಿರುವ ಸತ್ಯವಿಶ್ವಾಸಿಗಳು ಆ ನದಿಯನ್ನು ದಾಟಿದಾಗ ಅವರು ಹೇಳಿದರು: "ಇಂದು ನಮಗೆ ಜಾಲೂತ್ (ಗೋಲಿಯತ್) ಮತ್ತು ಅವನ ಸೈನ್ಯದೊಡನೆ ಹೋರಾಡುವ ಶಕ್ತಿಯಿಲ್ಲ." ಆದರೆ ನಾವು ಅಲ್ಲಾಹನನ್ನು ಭೇಟಿಯಾಗಲಿದ್ದೇವೆ ಎಂಬ ದೃಢವಿಶ್ವಾಸವಿದ್ದವರು ಹೇಳಿದರು: "ಎಷ್ಟೆಷ್ಟು ಚಿಕ್ಕ ಸೈನ್ಯಗಳು ಅಲ್ಲಾಹನ ಅಪ್ಪಣೆಯೊಂದಿಗೆ ಎಷ್ಟೆಷ್ಟು ದೊಡ್ಡ ಸೈನ್ಯಗಳನ್ನು ಸೋಲಿಸಿವೆ! ಅಲ್ಲಾಹು ತಾಳ್ಮೆಯುಳ್ಳವರ ಜೊತೆಗಿದ್ದಾನೆ."
Bakara 2:250
ನಂತರ ಜಾಲೂತ್ (ಗೋಲಿಯತ್) ಮತ್ತು ಅವನ ಸೈನ್ಯಕ್ಕೆ ಮುಖಾಮುಖಿಯಾಗಿ ನಿಂತಾಗ ಅವರು ಹೀಗೆ ಪ್ರಾರ್ಥಿಸಿದರು: "ಓ ನಮ್ಮ ಪರಿಪಾಲಕನೇ! ನಮಗೆ ಸ್ಥೈರ್ಯವನ್ನು ದಯಪಾಲಿಸು, ನಮ್ಮ ಪಾದಗಳನ್ನು ದೃಢವಾಗಿ ನಿಲ್ಲಿಸು ಮತ್ತು ಸತ್ಯನಿಷೇಧಿಗಳಾದ ಜನರ ವಿರುದ್ಧ ನಮಗೆ ಸಹಾಯ ಮಾಡು."
Bakara 2:251
ನಂತರ ಅಲ್ಲಾಹನ ಅಪ್ಪಣೆಯಿಂದ ಅವರು ಅವರನ್ನು (ವೈರಿಗಳನ್ನು) ಸೋಲಿಸಿದರು. ದಾವೂದ್ ಜಾಲೂತನನ್ನು ಕೊಂದರು. ಅಲ್ಲಾಹು ಅವರಿಗೆ (ದಾವೂದರಿಗೆ) ಸಾಮ್ರಾಜ್ಯವನ್ನು ಮತ್ತು ವಿವೇಕವನ್ನು ದಯಪಾಲಿಸಿದನು ಹಾಗೂ ಅವನು ಇಚ್ಛಿಸಿದಷ್ಟು ವಿಷಯಗಳನ್ನು ಅವರಿಗೆ ಕಲಿಸಿಕೊಟ್ಟನು. ಅಲ್ಲಾಹು ಕೆಲವು ಜನರಿಗೆ ಇತರ ಕೆಲವರ ಮೂಲಕ ತಡೆಯೊಡ್ಡದಿರುತ್ತಿದ್ದರೆ ಭೂಲೋಕದಲ್ಲಿ ಅರಾಜಕತೆ ತಾಂಡವವಾಡುತ್ತಿತ್ತು. ಅದರೆ ಅಲ್ಲಾಹು ಸರ್ವಲೋಕದವರ ಮೇಲೆ ಬಹಳ ಔದಾರ್ಯವುಳ್ಳವನಾಗಿದ್ದಾನೆ.
Bakara 2:252
ಇವೆಲ್ಲವೂ ಅಲ್ಲಾಹನ ವಚನಗಳಾಗಿವೆ. ನಾವು ಇವುಗಳನ್ನು ಸತ್ಯ ಸಮೇತ ನಿಮಗೆ ಓದಿಕೊಡುತ್ತಿದ್ದೇವೆ. ನಿಶ್ಚಯವಾಗಿಯೂ ನೀವು ಸಂದೇಶವಾಹಕರಲ್ಲಿ ಒಬ್ಬರಾಗಿದ್ದೀರಿ.
Bakara 2:253
ಆ ಸಂದೇಶವಾಹಕರಲ್ಲಿ ಕೆಲವರನ್ನು ನಾವು ಇತರ ಕೆಲವರಿಗಿಂತ ಶ್ರೇಷ್ಠಗೊಳಿಸಿದ್ದೇವೆ. ಅವರಲ್ಲಿ ಅಲ್ಲಾಹು (ನೇರವಾಗಿ) ಮಾತನಾಡಿದವರಿದ್ದಾರೆ. ಅವರಲ್ಲಿ ಕೆಲವರ ಪದವಿಗಳನ್ನು ಅವನು ಎತ್ತರಿಸಿದ್ದಾನೆ. ಮರ್ಯಮರ ಮಗ ಈಸಾರಿಗೆ ನಾವು ಪವಾಡಗಳನ್ನು ನೀಡಿದ್ದೇವೆ ಮತ್ತು ಪವಿತ್ರಾತ್ಮನ ಮೂಲಕ ಅವರನ್ನು ಬೆಂಬಲಿಸಿದ್ದೇವೆ. ಅಲ್ಲಾಹು ಇಚ್ಛಿಸುತ್ತಿದ್ದರೆ ಅವರ ನಂತರದವರು ಅವರಿಗೆ ಸ್ಪಷ್ಟ ಸಾಕ್ಷ್ಯಾಧಾರಗಳು ಬಂದ ಬಳಿಕವೂ ಪರಸ್ಪರ ಹೊಡೆದಾಡುತ್ತಿರಲಿಲ್ಲ. ಆದರೆ ಅವರು ಭಿನ್ನಮತ ತಳೆದರು. ಅವರಲ್ಲಿ ಕೆಲವರು ಸತ್ಯವಿಶ್ವಾಸಿಗಳಾದರು ಮತ್ತು ಕೆಲವರು ಸತ್ಯನಿಷೇಧಿಗಳಾದರು. ಅಲ್ಲಾಹು ಇಚ್ಛಿಸುತ್ತಿದ್ದರೆ ಅವರು ಪರಸ್ಪರ ಹೊಡೆದಾಡುತ್ತಿರಲಿಲ್ಲ. ಆದರೆ ಅಲ್ಲಾಹು ಅವನು ಬಯಸುವುದನ್ನು ಮಾಡುತ್ತಾನೆ.
Bakara 2:254
ಓ ಸತ್ಯವಿಶ್ವಾಸಿಗಳೇ! ಯಾವುದೇ ವ್ಯವಹಾರ, ಗೆಳೆತನ ಅಥವಾ ಶಿಫಾರಸು ಇಲ್ಲದ ಒಂದು ದಿನ ಬರುವುದಕ್ಕೆ ಮೊದಲೇ ನಾವು ನಿಮಗೆ ಒದಗಿಸಿದ ಧನದಿಂದ ಖರ್ಚು ಮಾಡಿರಿ. ಸತ್ಯನಿಷೇಧಿಗಳೇ ಅಕ್ರಮಿಗಳು.
Bakara 2:255
ಅಲ್ಲಾಹು! ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಅವನು ನಿರಂತರ ಜೀವಿಸುವವನು ಮತ್ತು ಎಲ್ಲರನ್ನೂ ಸಂರಕ್ಷಿಸಿ ನಿಯಂತ್ರಿಸುವವನಾಗಿದ್ದಾನೆ. ತೂಕಡಿಕೆ ಅಥವಾ ನಿದ್ದೆ ಅವನನ್ನು ವಶಪಡಿಸುವುದಿಲ್ಲ. ಭೂಮ್ಯಾಕಾಶಗಳಲ್ಲಿರುವ ಎಲ್ಲವೂ ಅವನಿಗೆ ಸೇರಿದ್ದು. ಅವನ ಅಪ್ಪಣೆಯಿಲ್ಲದೆ ಅವನ ಬಳಿ ಶಿಫಾರಸು ಮಾಡುವವನು ಯಾರು? ಅವರ ಮುಂದಿರುವುದನ್ನು ಮತ್ತು ಅವರ ಹಿಂದಿರುವುದನ್ನು ಅವನು ತಿಳಿಯುತ್ತಾನೆ. ಅವನ ಜ್ಞಾನದಿಂದ ಅವನು ಇಚ್ಛಿಸುವಷ್ಟನ್ನಲ್ಲದೆ (ಬೇರೇನನ್ನೂ) ತಿಳಿದುಕೊಳ್ಳಲು ಅವರಿಗೆ ಸಾಧ್ಯವಿಲ್ಲ. ಅವನ ಕುರ್ಸೀ ಭೂಮ್ಯಾಕಾಶಗಳನ್ನು ವ್ಯಾಪಿಸಿಕೊಂಡಿದೆ. ಅವುಗಳ ಸಂರಕ್ಷಣೆಯು ಅವನನ್ನು ಆಯಾಸಗೊಳಿಸುವುದಿಲ್ಲ. ಅವನು ಅತ್ಯುನ್ನತನು ಮತ್ತು ಮಹಾನನಾಗಿದ್ದಾನೆ .[1]
———
[1] ಇದು ಆಯತುಲ್ ಕುರ್ಸಿ ಆಗಿದ್ದು ಹದೀಸ್ ಗಳಲ್ಲಿ ಇದರ ಅನೇಕ ಶ್ರೇಷ್ಠತೆಗಳ ಬಗ್ಗೆ ಉಲ್ಲೇಖಗಳಿವೆ.
Bakara 2:256
ಧರ್ಮದ ವಿಷಯದಲ್ಲಿ ಯಾವುದೇ ಬಲಾತ್ಕಾರವಿಲ್ಲ. ಸನ್ಮಾರ್ಗವು ದುರ್ಮಾರ್ಗದಿಂದ ಸ್ಪಷ್ಟವಾಗಿ ಬೇರ್ಪಟ್ಟಿದೆ. ಆದ್ದರಿಂದ ಯಾರು ಅಲ್ಲಾಹನ ಹೊರತಾದ ದೇವರುಗಳನ್ನು ನಿಷೇಧಿಸಿ ಅಲ್ಲಾಹನಲ್ಲಿ ಮಾತ್ರ ವಿಶ್ವಾಸವಿಡುತ್ತಾನೋ ಅವನು ಅತ್ಯಂತ ಬಲಿಷ್ಠ ಹಗ್ಗವನ್ನು ಹಿಡಿದುಕೊಂಡನು. ಅದು ಎಂದಿಗೂ ಕಡಿದು ಹೋಗುವುದಿಲ್ಲ. ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
Bakara 2:257
ಅಲ್ಲಾಹು ಸತ್ಯವಿಶ್ವಾಸಿಗಳ ರಕ್ಷಕನು. ಅವನು ಅವರನ್ನು ಅಂಧಕಾರಗಳಿಂದ ಬೆಳಕಿಗೆ ತರುತ್ತಾನೆ. ಅಲ್ಲಾಹನ ಹೊರತಾದ ದೇವರುಗಳು ಸತ್ಯನಿಷೇಧಿಗಳ ಸಂರಕ್ಷಕರಾಗಿದ್ದಾರೆ. ಅವರು ಅವರನ್ನು ಬೆಳಕಿನಿಂದ ಅಂಧಕಾರಗಳಿಗೆ ಸಾಗಿಸುತ್ತಾರೆ. ಅವರೇ ನರಕವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
Bakara 2:258
ಇಬ್ರಾಹೀಮರೊಡನೆ ಅವರ ಪರಿಪಾಲಕನ (ಅಲ್ಲಾಹನ) ವಿಷಯದಲ್ಲಿ ತರ್ಕಿಸಿದವನನ್ನು ನೀವು ನೋಡಿಲ್ಲವೇ? ಅಲ್ಲಾಹು ಅವನಿಗೆ ಸಾಮ್ರಾಜ್ಯವನ್ನು ದಯಪಾಲಿಸಿದ್ದನು. "ನನ್ನ ಪರಿಪಾಲಕನು (ಅಲ್ಲಾಹು) ಜೀವ ಮತ್ತು ಮರಣವನ್ನು ನೀಡುತ್ತಾನೆ" ಎಂದು ಇಬ್ರಾಹೀಂ ಹೇಳಿದಾಗ, "ನಾನು ಕೂಡ ಜೀವ ಮತ್ತು ಮರಣವನ್ನು ನೀಡುತ್ತೇನೆ" ಎಂದು ಅವನು ಹೇಳಿದನು. ಇಬ್ರಾಹೀಂ ಹೇಳಿದರು: "ಅಲ್ಲಾಹು ಸೂರ್ಯನನ್ನು ಪೂರ್ವದಿಂದ ತರುತ್ತಾನೆ; ನೀವು ಅದನ್ನು ಪಶ್ಚಿಮದಿಂದ ತನ್ನಿರಿ!" ಆಗ ಆ ಸತ್ಯನಿಷೇಧಿ ಮೂಕವಿಸ್ಮಿತನಾದನು. ಅಕ್ರಮವೆಸಗುವ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.
Bakara 2:259
ಅಥವಾ ಛಾವಣಿಗಳೊಂದಿಗೆ ಕುಸಿದುಬಿದ್ದ ಒಂದು ಊರಿನ ಬಳಿಯಿಂದ ಸಂಚರಿಸುತ್ತಿದ್ದ ಒಬ್ಬ ವ್ಯಕ್ತಿಯಂತೆ. ಅವರು ಕೇಳಿದರು: “ನಿರ್ಜೀವವಾದ ಬಳಿಕ ಅಲ್ಲಾಹು ಇದಕ್ಕೆ ಜೀವ ನೀಡುವುದು ಹೇಗೆ?” ಆಗ ಅಲ್ಲಾಹು ಅವರನ್ನು ನೂರು ವರ್ಷಗಳ ಕಾಲ ಮೃತ್ಯುವಶಗೊಳಿಸಿದನು. ನಂತರ ಅವರಿಗೆ ಜೀವ ನೀಡಿ ಎಬ್ಬಿಸಿ ಕೇಳಿದನು: “ನೀವು ಎಷ್ಟು ವರ್ಷ ಕಳೆದಿರಿ?” ಅವರು ಉತ್ತರಿಸಿದರು: “ಒಂದು ದಿನ ಅಥವಾ ದಿನದ ಕೆಲವು ತಾಸುಗಳು.” ಅಲ್ಲಾಹು ಹೇಳಿದನು: “ಅಲ್ಲ, ವಾಸ್ತವವಾಗಿ ನೀವು ನೂರು ವರ್ಷ ಕಳೆದಿದ್ದೀರಿ. ನೀವು ನಿಮ್ಮ ಆಹಾರ-ಪಾನೀಯಗಳನ್ನು ನೋಡಿರಿ. ಅವು ಹಾಳಾಗಿಲ್ಲ. ನಿಮ್ಮ ಕತ್ತೆಯನ್ನು ನೋಡಿರಿ. ನಾವು ನಿಮ್ಮನ್ನು ಜನರಿಗೊಂದು ದೃಷ್ಟಾಂತವಾಗಿ ಮಾಡುತ್ತೇವೆ. ನಾವು ಆ ಮೂಳೆಗಳನ್ನು ಹೇಗೆ ಜೋಡಿಸುತ್ತೇವೆ ಮತ್ತು ಅವುಗಳಿಗೆ ಹೇಗೆ ಮಾಂಸವನ್ನು ಹೊದಿಯುತ್ತೇವೆಂದು ನೋಡಿರಿ.” ಅವರಿಗೆ ವಿಷಯವು ಸ್ಪಷ್ಟವಾದಾಗ ಅವರು ಹೇಳಿದರು: “ನಿಶ್ಚಯವಾಗಿಯೂ ಅಲ್ಲಾಹನಿಗೆ ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವಿದೆಯೆಂದು ನನಗೆ ತಿಳಿದಿದೆ.”
Bakara 2:260
ಇಬ್ರಾಹೀಮ್ ಹೇಳಿದ ಸಂದರ್ಭ: "ಓ ನನ್ನ ಪರಿಪಾಲಕನೇ! ನೀನು ಸತ್ತವರಿಗೆ ಹೇಗೆ ಜೀವ ನೀಡುತ್ತೀ ಎಂದು ನನಗೆ ತೋರಿಸಿಕೊಡು." ಅಲ್ಲಾಹು ಕೇಳಿದನು: "ನಿಮಗೆ ನಂಬಿಕೆಯಿಲ್ಲವೇ?" ಅವರು ಹೇಳಿದರು: "ನಂಬಿಕೆಯಿದೆ. ಆದರೆ ನನ್ನ ಹೃದಯದ ಸಮಾಧಾನಕ್ಕಾಗಿ." ಅಲ್ಲಾಹು ಹೇಳಿದನು: "ನೀವು ನಾಲ್ಕು ಹಕ್ಕಿಗಳನ್ನು ಹಿಡಿದು ಅವುಗಳನ್ನು ನಿಮ್ಮ ಬಳಿಗೆ ಸೇರಿಸಿಕೊಳ್ಳಿ. ನಂತರ ಅವುಗಳನ್ನು (ತುಂಡುಗಳಾಗಿ ಕತ್ತರಿಸಿ) ಒಂದೊಂದು ಭಾಗವನ್ನು ಒಂದೊಂದು ಬೆಟ್ಟದ ಮೇಲಿಡಿ. ನಂತರ ಅವುಗಳನ್ನು ಕೂಗಿ ಕರೆಯಿರಿ. ಅವು ತಕ್ಷಣ ನಿಮ್ಮ ಬಳಿಗೆ ಓಡಿ ಬರುವುವು. ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
Bakara 2:261
ಅಲ್ಲಾಹನ ಮಾರ್ಗದಲ್ಲಿ ತಮ್ಮ ಧನವನ್ನು ಖರ್ಚು ಮಾಡುವವರ ಉದಾಹರಣೆಯು ಒಂದು ಧಾನ್ಯದಂತೆ. ಅದು ಏಳು ತೆನೆಗಳನ್ನು ಉತ್ಪಾದಿಸಿತು. ಪ್ರತಿಯೊಂದು ತೆನೆಯಲ್ಲೂ ನೂರು ಧಾನ್ಯಗಳಿವೆ. ಅಲ್ಲಾಹು ಅವನು ಇಚ್ಛಿಸುವವರಿಗೆ ಇಮ್ಮಡಿಗೊಳಿಸಿಕೊಡುತ್ತಾನೆ. ಅಲ್ಲಾಹು ವಿಶಾಲನು ಮತ್ತು ಸರ್ವಜ್ಞನಾಗಿದ್ದಾನೆ.
Bakara 2:262
ಅಲ್ಲಾಹನ ಮಾರ್ಗದಲ್ಲಿ ತಮ್ಮ ಧನವನ್ನು ಖರ್ಚು ಮಾಡುವವರು ಮತ್ತು ನಂತರ ತಾವು ಖರ್ಚು ಮಾಡಿದ್ದಕ್ಕಾಗಿ ಉಪಕಾರ ಸ್ಮರಣೆ ಬಯಸದವರು ಮತ್ತು ತೊಂದರೆ ಕೊಡದವರು ಯಾರೋ—ಅವರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ಅವರ ಪ್ರತಿಫಲವಿದೆ. ಅವರಿಗೆ ಯಾವುದೇ ಭಯವಿಲ್ಲ; ಅವರು ದುಃಖಿಸುವುದೂ ಇಲ್ಲ.
Bakara 2:263
ಕೊಟ್ಟ ನಂತರ ತೊಂದರೆ ನೀಡುವ ದಾನಕ್ಕಿಂತ ಉತ್ತಮವಾದ ಮಾತು ಮತ್ತು ಕ್ಷಮೆಯು ಶ್ರೇಷ್ಠವಾಗಿದೆ. ಅಲ್ಲಾಹು ನಿರಪೇಕ್ಷನು ಮತ್ತು ಸಹಿಷ್ಣುತೆಯುಳ್ಳವನಾಗಿದ್ದಾನೆ.
Bakara 2:264
ಓ ಸತ್ಯವಿಶ್ವಾಸಿಗಳೇ! ಉಪಕಾರ ಸ್ಮರಣೆ ಬಯಸುವ ಮೂಲಕ ಮತ್ತು ತೊಂದರೆ ಕೊಡುವ ಮೂಲಕ ನಿಮ್ಮ ದಾನಗಳನ್ನು ವ್ಯರ್ಥಗೊಳಿಸಬೇಡಿ. ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ವಿಶ್ವಾಸವಿಡದೆ ಕೇವಲ ಜನರು ನೋಡುವುದಕ್ಕಾಗಿ ಖರ್ಚು ಮಾಡುವ ವ್ಯಕ್ತಿಯಂತೆ ನೀವಾಗಬೇಡಿ. ಅವನ ಉದಾಹರಣೆಯು ನುಣುಪಾದ ಒಂದು ಬಂಡೆಯಂತೆ. ಅದರ ಮೇಲೆ ಸ್ವಲ್ಪ ಮಣ್ಣಿದೆ. ಅದಕ್ಕೆ ಜಡಿಮಳೆ ಸುರಿದು ಅದು ಅದನ್ನು ಬೋಳು ಮಾಡಿಬಿಟ್ಟಿತು. ಅವರಿಗೆ ಅವರು ಸಂಪಾದಿಸಿದ ಯಾವುದನ್ನೂ ವಶದಲ್ಲಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ಸತ್ಯನಿಷೇಧಿಗಳಾದ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.
Bakara 2:265
ಅಲ್ಲಾಹನ ಸಂಪ್ರೀತಿಯನ್ನು ಹುಡುಕುತ್ತಾ ದೃಢಮನಸ್ಸಿನಿಂದ ಮತ್ತು ಮನಸ್ಸಂತೃಪ್ತಿಯಿಂದ ತಮ್ಮ ಧನವನ್ನು ಖರ್ಚು ಮಾಡುವವರ ಉದಾಹರಣೆಯು ಎತ್ತರದ ಸ್ಥಳದಲ್ಲಿರುವ ಒಂದು ತೋಟದಂತೆ. ಅದಕ್ಕೆ ಜಡಿಮಳೆಯು ಸುರಿದಾಗ ಅದು ಇಮ್ಮಡಿ ಫಲವನ್ನು ನೀಡುತ್ತದೆ. ಅದಕ್ಕೆ ಜಡಿಮಳೆ ಸುರಿಯದಿದ್ದರೂ ತುಂತುರು ಮಳೆ ಸಾಕಾಗುತ್ತದೆ. ಅಲ್ಲಾಹು ನೀವು ಮಾಡುತ್ತಿರುವ ಕರ್ಮಗಳನ್ನು ನೋಡುತ್ತಿದ್ದಾನೆ.
Bakara 2:266
ನಿಮ್ಮಲ್ಲೊಬ್ಬನಿಗೆ ತಳಭಾಗದಿಂದ ನದಿಗಳು ಹರಿಯುವ, ಖರ್ಜೂರ ಮತ್ತು ದ್ರಾಕ್ಷಿಯ ಹಾಗೂ ಎಲ್ಲಾ ರೀತಿಯ ಹಣ್ಣು-ಹಂಪಲುಗಳಿರುವ ಒಂದು ತೋಟವಿದ್ದು, ಅವನು ವೃದ್ಧನಾಗಿದ್ದು ಬಲಹೀನರಾದ ಮಕ್ಕಳೂ ಇರುವ ಸ್ಥಿತಿಯಲ್ಲಿ ಆ ತೋಟಕ್ಕೆ ಬೆಂಕಿಯ ಬಿರುಗಾಳಿ ಬೀಸಿ ಅದರಿಂದ ಆ ತೋಟವು ಸುಟ್ಟು ಕರಕಲಾಗುವುದನ್ನು ನೀವು ಬಯಸುತ್ತೀರಾ? ಈ ರೀತಿ ಅಲ್ಲಾಹು ತನ್ನ ವಚನಗಳನ್ನು ನಿಮಗೆ ಸ್ಪಷ್ಟವಾಗಿ ವಿವರಿಸಿಕೊಡುತ್ತಾನೆ. ನೀವು ಆಲೋಚಿಸುವುದಕ್ಕಾಗಿ.
Bakara 2:267
ಓ ಸತ್ಯವಿಶ್ವಾಸಿಗಳೇ! ನೀವು ಸಂಪಾದಿಸಿದ ಉತ್ತಮ ವಸ್ತುಗಳಿಂದ ಮತ್ತು ನಾವು ನಿಮಗೆ ಭೂಮಿಯಿಂದ ಉತ್ಪಾದಿಸಿಕೊಟ್ಟ ವಸ್ತುಗಳಿಂದ ಖರ್ಚು (ದಾನ) ಮಾಡಿರಿ. ನೀವು ಕಣ್ಣು ಮುಚ್ಚಿಕೊಂಡಲ್ಲದೆ ಸ್ವೀಕರಿಸದ ಕೆಟ್ಟ ವಸ್ತುಗಳನ್ನು ಖರ್ಚು (ದಾನ) ಮಾಡಲು ಮುಂದಾಗಬೇಡಿ. ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹು ನಿರಪೇಕ್ಷನು ಮತ್ತು ಸ್ತುತ್ಯರ್ಹನಾಗಿದ್ದಾನೆ.
Bakara 2:268
ಶೈತಾನನು ನಿಮಗೆ ಬಡತನದ ಬಗ್ಗೆ ಬೆದರಿಸುತ್ತಾನೆ ಮತ್ತು ಅಶ್ಲೀಲತೆಯನ್ನು ಆದೇಶಿಸುತ್ತಾನೆ. ಅಲ್ಲಾಹು ನಿಮಗೆ ಅವನ ಕ್ಷಮೆ ಮತ್ತು ಔದಾರ್ಯದ ಬಗ್ಗೆ ವಾಗ್ದಾನ ಮಾಡುತ್ತಾನೆ. ಅಲ್ಲಾಹು ವಿಶಾಲನು ಮತ್ತು ಸರ್ವಜ್ಞನಾಗಿದ್ದಾನೆ.
Bakara 2:269
ಅವನು ಇಚ್ಛಿಸುವವರಿಗೆ ಅವನು ವಿವೇಕವನ್ನು ದಯಪಾಲಿಸುತ್ತಾನೆ. ಯಾರಿಗೆ ವಿವೇಕವನ್ನು ದಯಪಾಲಿಸಲಾಗಿದೆಯೋ ಅವನಿಗೆ ಅತ್ಯಧಿಕ ಒಳಿತುಗಳನ್ನು ದಯಪಾಲಿಸಲಾಗಿದೆ. ಬುದ್ಧಿವಂತರ ಹೊರತು ಇನ್ನಾರೂ ಉಪದೇಶವನ್ನು ಸ್ವೀಕರಿಸುವುದಿಲ್ಲ.
Bakara 2:270
ನೀವು ಯಾವುದೇ ವಸ್ತುವನ್ನು ಖರ್ಚು (ದಾನ) ಮಾಡಿದರೂ ಅಥವಾ ಹರಕೆ ಮಾಡಿದರೂ ನಿಶ್ಚಯವಾಗಿಯೂ ಅಲ್ಲಾಹು ಅದನ್ನು ತಿಳಿಯುತ್ತಾನೆ. ಅಕ್ರಮಿಗಳಿಗೆ ಸಹಾಯ ಮಾಡುವವರು ಯಾರೂ ಇಲ್ಲ.
Bakara 2:271
ನೀವು ದಾನ ಮಾಡಿದ್ದನ್ನು ಬಹಿರಂಗಪಡಿಸಿದರೆ ಅದು ಒಳ್ಳೆಯದೇ. ಆದರೆ ನೀವು ಅದನ್ನು ಗೋಪ್ಯವಾಗಿಟ್ಟು ಬಡವರಿಗೆ ನೀಡಿದರೆ ಅದು ನಿಮಗೆ ಶ್ರೇಷ್ಠವಾಗಿದೆ. ಅಲ್ಲಾಹು ನಿಮ್ಮ ಪಾಪಗಳನ್ನು ಅಳಿಸುವನು. ನೀವು ಮಾಡುವ ಕರ್ಮಗಳ ಬಗ್ಗೆ ಅಲ್ಲಾಹು ಸೂಕ್ಷ್ಮವಾಗಿ ತಿಳಿದಿದ್ದಾನೆ.
Bakara 2:272
ನಿಮಗೆ ಅವರನ್ನು ಸನ್ಮಾರ್ಗದಲ್ಲಿ ಸೇರಿಸುವ ಹೊಣೆಗಾರಿಕೆಯಿಲ್ಲ. ಬದಲಿಗೆ, ಅಲ್ಲಾಹು ಅವನು ಇಚ್ಛಿಸುವವರನ್ನು ಸನ್ಮಾರ್ಗದಲ್ಲಿ ಸೇರಿಸುತ್ತಾನೆ. ನೀವು ಏನು ಖರ್ಚು (ದಾನ) ಮಾಡಿದರೂ ಅದರ ಲಾಭವು ನಿಮಗೇ ಆಗಿದೆ. ಅಲ್ಲಾಹನ ಸಂಪ್ರೀತಿಯನ್ನು ಬಯಸಿಯೇ ವಿನಾ ನೀವು ಖರ್ಚು (ದಾನ) ಮಾಡಬಾರದು. ನೀವು ಏನು ಖರ್ಚು (ದಾನ) ಮಾಡಿದರೂ ಅದರ ಪೂರ್ಣ ಪ್ರತಿಫಲವನ್ನು ನಿಮಗೆ ನೀಡಲಾಗುವುದು. ನಿಮಗೆ ಸ್ವಲ್ಪವೂ ಅನ್ಯಾಯವಾಗುವುದಿಲ್ಲ.
Bakara 2:273
ಭೂಮಿಯಲ್ಲಿ ಓಡಾಡಲು ಸಾಧ್ಯವಾಗದಂತೆ ಅಲ್ಲಾಹನ ಮಾರ್ಗದಲ್ಲಿ ಬಂಧನದಲ್ಲಿರುವ ಬಡವರಿಗೆ (ಖರ್ಚು ಮಾಡಿರಿ).[1] ಅವರಿಗೆ ಆತ್ಮಸಂಯಮವಿರುವ ಕಾರಣ (ಇತರರ ಮುಂದೆ ಕೈ ಚಾಚಿ ಬೇಡದ ಕಾರಣ) ಅವಿವೇಕಿಗಳು ಅವರನ್ನು ಶ್ರೀಮಂತರೆಂದು ಭಾವಿಸುತ್ತಾರೆ. ನಿಮಗೆ ಅವರನ್ನು ಅವರ ಹಾವಭಾವಗಳಿಂದ ಗುರುತಿಸಬಹುದು. ಅವರು ಜನರೊಡನೆ ಕಾಡಿ ಬೇಡುವುದಿಲ್ಲ. ನೀವು (ಅಲ್ಲಾಹನ ಮಾರ್ಗದಲ್ಲಿ) ಯಾವುದೇ ಸಂಪತ್ತನ್ನು ಖರ್ಚು (ದಾನ) ಮಾಡಿದರೂ ನಿಶ್ಚಯವಾಗಿಯೂ ಅಲ್ಲಾಹು ಅದನ್ನು ತಿಳಿಯುತ್ತಾನೆ.
———
[1] ಇಲ್ಲಿ ಉದ್ದೇಶಿಸಿರುವುದು ಮಕ್ಕಾದಿಂದ ಮದೀನಕ್ಕೆ ವಲಸೆ ಬಂದ ಮುಹಾಜಿರ್‌ಗಳನ್ನಾಗಿದೆ. ಅವರು ಅಲ್ಲಾಹನ ಮಾರ್ಗದಲ್ಲಿ ಎಲ್ಲವನ್ನೂ ತ್ಯಜಿಸಿ ಬಂದಿದ್ದರು.
Bakara 2:274
ರಾತ್ರಿ ಮತ್ತು ಹಗಲು ರಹಸ್ಯವಾಗಿ ಮತ್ತು ಬಹಿರಂಗವಾಗಿ ತಮ್ಮ ಧನವನ್ನು ಖರ್ಚು ಮಾಡುವವರು ಯಾರೋ—ಅವರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ಅವರ ಪ್ರತಿಫಲವಿದೆ. ಅವರಿಗೆ ಯಾವುದೇ ಭಯವಿಲ್ಲ; ಅವರು ದುಃಖಿಸುವುದೂ ಇಲ್ಲ.
Bakara 2:275
ಬಡ್ಡಿ ತಿನ್ನುವವರು ಯಾರೋ ಅವರು ಶೈತಾನನ ಸ್ಪರ್ಶದಿಂದ ಹುಚ್ಚು ಹಿಡಿದವನು ಎದ್ದೇಳುವಂತೆಯೇ ವಿನಾ ಎದ್ದೇಳುವುದಿಲ್ಲ. ನಿಶ್ಚಯವಾಗಿಯೂ ವ್ಯಾಪಾರವು ಬಡ್ಡಿಯಂತೆ ಎಂದು ಅವರು ಹೇಳಿದ್ದೇ ಅದಕ್ಕೆ ಕಾರಣ. ಆದರೆ ಅಲ್ಲಾಹು ವ್ಯಾಪಾರವನ್ನು ಅನುಮತಿಸಿದ್ದಾನೆ ಮತ್ತು ಬಡ್ಡಿಯನ್ನು ನಿಷೇಧಿಸಿದ್ದಾನೆ. ಆದ್ದರಿಂದ, ಯಾರು ಅಲ್ಲಾಹನ ಕಡೆಯಿಂದ ಬಂದ ಉಪದೇಶವನ್ನು ಕೇಳಿದ ನಂತರ ಬಡ್ಡಿ ವ್ಯವಹಾರವನ್ನು ನಿಲ್ಲಿಸುತ್ತಾನೋ ಅವನಿಗೆ ಹಿಂದೆ ಪಡೆದುದರಲ್ಲಿ ದೋಷವಿಲ್ಲ; ಅವನ ವಿಚಾರಣೆಯು ಅಲ್ಲಾಹನಿಗೆ ಬಿಟ್ಟದ್ದು. ಆದರೆ ಯಾರು ಪುನಃ ಬಡ್ಡಿ ವ್ಯವಹಾರಕ್ಕೆ ಮರಳುತ್ತಾರೋ ಅವರೇ ನರಕವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
Bakara 2:276
ಅಲ್ಲಾಹು ಬಡ್ಡಿಯನ್ನು ಅಳಿಸುತ್ತಾನೆ ಮತ್ತು ದಾನ ಧರ್ಮಗಳನ್ನು ಪೋಷಿಸುತ್ತಾನೆ. ಕೃತಘ್ನ ಮತ್ತು ಪಾಪಿಯಾದ ಯಾರನ್ನೂ ಅಲ್ಲಾಹು ಇಷ್ಟಪಡುವುದಿಲ್ಲ.
Bakara 2:277
ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು, ಸತ್ಕರ್ಮವೆಸಗುವವರು, ನಮಾಝ್ ಸಂಸ್ಥಾಪಿಸುವವರು ಮತ್ತು ಝಕಾತ್ ನೀಡುವವರು ಯಾರೋ—ಅವರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ಅವರ ಪ್ರತಿಫಲವಿದೆ. ಅವರಿಗೆ ಯಾವುದೇ ಭಯವಿಲ್ಲ; ಅವರು ದುಃಖಿಸುವುದೂ ಇಲ್ಲ.
Bakara 2:278
ಓ ಸತ್ಯವಿಶ್ವಾಸಿಗಳೇ! ಅಲ್ಲಾಹನನ್ನು ಭಯಪಡಿರಿ ಮತ್ತು ಬಡ್ಡಿಯಲ್ಲಿ ಬರಲು ಬಾಕಿಯಿರುವುದನ್ನು ಬಿಟ್ಟುಬಿಡಿ. ನೀವು ಸತ್ಯವಿಶ್ವಾಸಿಗಳಾಗಿದ್ದರೆ.
Bakara 2:279
ನೀವು ಅದನ್ನು ಮಾಡದಿದ್ದರೆ, ಅಲ್ಲಾಹನೊಡನೆ ಮತ್ತು ಅವನ ಸಂದೇಶವಾಹಕರೊಡನೆ ಹೋರಾಡಲು ಸಿದ್ಧರಾಗಿರಿ. ನೀವು ಪಶ್ಚಾತ್ತಾಪಪಟ್ಟರೆ ನಿಮ್ಮ ಬಂಡವಾಳವನ್ನು ನೀವಿಟ್ಟುಕೊಳ್ಳಬಹುದು. ನೀವು ಅನ್ಯಾಯ ಮಾಡಬಾರದು ಮತ್ತು ನಿಮಗೂ ಅನ್ಯಾಯವಾಗಬಾರದು.
Bakara 2:280
(ಸಾಲ ಪಡೆದವನು) ಕಷ್ಟದಲ್ಲಿದ್ದರೆ (ಅವನಿಗೆ) ನಿರಾಳತೆ ದೊರಕುವ ತನಕ ಕಾಲಾವಕಾಶ ನೀಡಿ. ನೀವು ಅದನ್ನು ದಾನವಾಗಿ ಬಿಟ್ಟುಬಿಟ್ಟರೆ ಅದು ನಿಮಗೆ ಅತ್ಯುತ್ತಮವಾಗಿದೆ. ನೀವು ತಿಳಿದವರಾಗಿದ್ದರೆ.
Bakara 2:281
ನಿಮ್ಮನ್ನು ಅಲ್ಲಾಹನ ಬಳಿಗೆ ಮರಳಿಸಲಾಗುವ ಒಂದು ದಿನವನ್ನು ಭಯಪಡಿರಿ. ನಂತರ ಪ್ರತಿಯೊಬ್ಬರಿಗೂ ಅವರು ಮಾಡಿದ ಕರ್ಮಗಳ ಪ್ರತಿಫಲವನ್ನು ಪೂರ್ಣವಾಗಿ ನೀಡಲಾಗುವುದು. ಅವರಿಗೆ ಯಾವುದೇ ಅನ್ಯಾಯವಾಗುವುದಿಲ್ಲ.
Bakara 2:282
ಓ ಸತ್ಯವಿಶ್ವಾಸಿಗಳೇ! ನೀವು ಪರಸ್ಪರ ಅವಧಿಯನ್ನು ನಿಶ್ಚಯಿಸಿ ಸಾಲ ವ್ಯವಹಾರ ಮಾಡುವುದಾದರೆ ಅದನ್ನು ಬರೆದಿಟ್ಟುಕೊಳ್ಳಿ. ನಿಮ್ಮ ನಡುವೆ ಒಬ್ಬ ಬರಹಗಾರನು ನ್ಯಾಯಯುತವಾಗಿ ಬರೆಯಲಿ. ಅಲ್ಲಾಹು ಕಲಿಸಿಕೊಟ್ಟ ರೀತಿಯಲ್ಲಿ ಬರೆಯಲು ಬರಹಗಾರನು ನಿರಾಕರಿಸಬಾರದು. ಆದ್ದರಿಂದ ಅವನು ಬರೆಯಲಿ ಮತ್ತು ಸಾಲದ ಹೊಣೆ ಹೊತ್ತವನು ಏನು ಬರೆಯಬೇಕೆಂದು ಹೇಳಿಕೊಡಲಿ. ಅವನು ತನ್ನ ಪರಿಪಾಲಕನಾದ ಅಲ್ಲಾಹನನ್ನು ಭಯಪಡಲಿ ಮತ್ತು ಹೊಣೆಯಿಂದ ಏನೂ ಕಡಿಮೆಗೊಳಿಸದಿರಲಿ. ಸಾಲದ ಹೊಣೆ ಹೊತ್ತವನು ಅವಿವೇಕಿಯಾಗಿದ್ದರೆ, ಅಥವಾ ಬಲಹೀನನಾಗಿದ್ದರೆ, ಅಥವಾ ಹೇಳಿಕೊಡಲು ಅಸಮರ್ಥನಾಗಿದ್ದರೆ ಅವನ ಪೋಷಕರು ನ್ಯಾಯಯುತವಾಗಿ ಹೇಳಿಕೊಡಲಿ. ನಿಮ್ಮ ಪೈಕಿ ಇಬ್ಬರು ಪುರುಷರನ್ನು ಸಾಕ್ಷಿ ನಿಲ್ಲಿಸಿರಿ. ಇಬ್ಬರು ಪುರುಷರಿಲ್ಲದಿದ್ದರೆ ಸಾಕ್ಷಿ ನಿಲ್ಲುವವರ ಪೈಕಿ ನಿಮಗೆ ತೃಪ್ತಿಯಾಗುವ ಒಬ್ಬ ಪುರುಷ ಮತ್ತು ಇಬ್ಬರು ಮಹಿಳೆಯರು ಸಾಕ್ಷಿ ನಿಲ್ಲಲಿ. ಅವರಲ್ಲಿ ಒಬ್ಬಳು ಮರೆತುಬಿಟ್ಟರೆ ಇನ್ನೊಬ್ಬಳು ನೆನಪಿಸುವುದಕ್ಕಾಗಿ. ಸಾಕ್ಷಿಗಳನ್ನು ಕರೆದಾಗ ಅವರು ಬರಲು ಅಸಮ್ಮತಿ ಸೂಚಿಸಬಾರದು. ಸಾಲವನ್ನು ಅದು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ ಅದರ ನಿಶ್ಚಿತ ಅವಧಿಗೆ ಬರೆಯಲು ಆಲಸ್ಯ ಮಾಡಬೇಡಿ. ಇದು ಅಲ್ಲಾಹನ ಬಳಿ ಅತ್ಯಂತ ನ್ಯಾಯಸಮ್ಮತವಾಗಿದೆ, ಸಾಕ್ಷಿಯನ್ನು ಹೆಚ್ಚು ಸರಿಯಾಗಿಡುತ್ತದೆ ಮತ್ತು ನೀವು ಸಂಶಯಪಡದಂತೆ ಮಾಡುತ್ತದೆ. ಆದರೆ ಅದು ನೀವು ಪರಸ್ಪರ ನಡೆಸುವ ನಗದು ವ್ಯಾಪಾರದ ರೂಪದಲ್ಲಿದ್ದರೆ ಅದನ್ನು ಬರೆಯದಿದ್ದರೆ ನಿಮಗೆ ದೋಷವಿಲ್ಲ. ಆದರೆ ನೀವು ಕ್ರಯ-ವಿಕ್ರಯ ಮಾಡುವಾಗ ಸಾಕ್ಷಿಗಳನ್ನು ನಿಲ್ಲಿಸಿರಿ. ಬರಹಗಾರನಿಗೆ ಅಥವಾ ಸಾಕ್ಷಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ. ನೀವೇನಾದರೂ ತೊಂದರೆಯಾಗುವಂತೆ ಮಾಡಿದರೆ ಅದು ನಿಮ್ಮ ದುಷ್ಕರ್ಮವೆಂದು ಪರಿಗಣಿಸಲಾಗುವುದು. ಅಲ್ಲಾಹನನ್ನು ಭಯಪಡಿರಿ. ಅಲ್ಲಾಹು ನಿಮಗೆ ಕಲಿಸಿಕೊಡುತ್ತಿದ್ದಾನೆ. ಅಲ್ಲಾಹು ಎಲ್ಲಾ ವಿಷಯಗಳನ್ನೂ ತಿಳಿದವನಾಗಿದ್ದಾನೆ.
Bakara 2:283
ನೀವು ಪ್ರಯಾಣದಲ್ಲಿದ್ದು ನಿಮಗೆ ಬರಹಗಾರನು ಸಿಗದಿದ್ದರೆ, ಅಡಮಾನವನ್ನು ಸ್ವಾಧೀನದಲ್ಲಿರಿಸಿಕೊಳ್ಳಿರಿ. ನೀವು ಪರಸ್ಪರ ವಿಶ್ವಾಸವನ್ನು ಹೊಂದಿದ್ದರೆ ವಿಶ್ವಾಸವಿಡಲಾದವನು (ಸಾಲ ಪಡೆದವನು) ತನ್ನ ವಿಶ್ವಸ್ತತೆಯನ್ನು ನೆರವೇರಿಸಲಿ ಮತ್ತು ತನ್ನ ಪರಿಪಾಲಕನಾದ ಅಲ್ಲಾಹನನ್ನು ಭಯಪಡಲಿ.[1] ನೀವು ಸಾಕ್ಷ್ಯವನ್ನು ಬಚ್ಚಿಡಬೇಡಿ. ಯಾರು ಅದನ್ನು ಬಚ್ಚಿಡುತ್ತಾನೋ ಅವನು ಪಾಪಭರಿತ ಹೃದಯದವನಾಗಿದ್ದಾನೆ. ಅಲ್ಲಾಹು ನೀವು ಮಾಡುತ್ತಿರುವ ಕರ್ಮಗಳನ್ನು ನೋಡುತ್ತಿದ್ದಾನೆ.
———
[1] ಪ್ರಯಾಣದ ಸಮಯಲ್ಲಿ ಸಾಲ ವ್ಯವಹಾರ ಮಾಡಬೇಕಾಗಿ ಬಂದರೆ ಮತ್ತು ಅಲ್ಲಿ ಬರಹಗಾರನು ಅಥವಾ ಬರೆಯುವ ಸಾಧನಗಳು (ಕಾಗದ, ಲೇಖನಿ ಇತ್ಯಾದಿ) ಸಿಗದಿದ್ದರೆ ಸಾಲ ಪಡೆಯುವವನು ಏನಾದರೂ ವಸ್ತುವನ್ನು ಅಡವಿಟ್ಟು ಸಾಲ ಪಡೆಯಬೇಕು. ಆದರೆ ಸಾಲ ನೀಡುವವನು ಮತ್ತು ಪಡೆಯುವವನು ಪರಸ್ಪರ ವಿಶ್ವಾಸವನ್ನು ಹೊಂದಿದ್ದರೆ ಅಡಮಾನವಿಲ್ಲದೆಯೇ ಸಾಲ ನೀಡಬಹುದು. ಆದರೆ ಸಾಲ ಪಡೆದವನು ತನ್ನ ವಿಶ್ವಸ್ತತೆಯನ್ನು ಕಾಪಾಡಿಕೊಂಡು ಸಾಲವನ್ನು ಸೂಕ್ತ ಸಮಯದಲ್ಲಿ ಹಿಂದಿರುಗಿಸಬೇಕು.
Bakara 2:284
ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನಿಗೆ ಸೇರಿದ್ದು. ನೀವು ನಿಮ್ಮ ಮನಸ್ಸಿನಲ್ಲಿರುವುದನ್ನು ಬಹಿರಂಗಪಡಿಸಿದರೂ ಅಥವಾ ಮುಚ್ಚಿಟ್ಟರೂ ಅಲ್ಲಾಹು ಅದರ ಬಗ್ಗೆ ನಿಮ್ಮನ್ನು ವಿಚಾರಣೆ ಮಾಡುವನು. ನಂತರ ಅವನು ಇಚ್ಛಿಸಿದವರಿಗೆ ಅವನು ಕ್ಷಮಿಸುವನು ಮತ್ತು ಅವನು ಇಚ್ಛಿಸಿದವರನ್ನು ಶಿಕ್ಷಿಸುವನು. ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
Bakara 2:285
ತಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾದ ಸಂದೇಶದಲ್ಲಿ ಸಂದೇಶವಾಹಕರು ವಿಶ್ವಾಸವಿಟ್ಟಿದ್ದಾರೆ; ಸತ್ಯವಿಶ್ವಾಸಿಗಳು ಕೂಡ ವಿಶ್ವಾಸವಿಟ್ಟಿದ್ದಾರೆ. ಅವರೆಲ್ಲರೂ ಅಲ್ಲಾಹನಲ್ಲಿ, ಅವನ ದೇವದೂತರುಗಳಲ್ಲಿ, ಅವನ ಗ್ರಂಥಗಳಲ್ಲಿ ಮತ್ತು ಅವನ ಸಂದೇಶವಾಹಕರುಗಳಲ್ಲಿ ವಿಶ್ವಾಸವಿಟ್ಟಿದ್ದಾರೆ. ಅವನ ಸಂದೇಶವಾಹಕರುಗಳಲ್ಲಿ ಯಾರ ನಡುವೆಯೂ ನಾವು ಬೇಧ ಮಾಡುವುದಿಲ್ಲ. ಅವರು ಹೇಳುತ್ತಾರೆ: "ನಾವು ಕೇಳಿದ್ದೇವೆ ಮತ್ತು ವಿಧೇಯರಾಗಿದ್ದೇವೆ. ಓ ನಮ್ಮ ಪರಿಪಾಲಕನೇ! ನಮ್ಮನ್ನು ಕ್ಷಮಿಸು. ನಮಗೆ ನಿನ್ನ ಬಳಿಗೇ ಮರಳಬೇಕಾಗಿದೆ."
Bakara 2:286
ಅಲ್ಲಾಹು ಯಾವುದೇ ವ್ಯಕ್ತಿಯ ಮೇಲೂ ಅವನ ಸಾಮರ್ಥ್ಯಕ್ಕೆ ಮೀರಿದ್ದನ್ನು ಹೊರಿಸುವುದಿಲ್ಲ. ಅವನು ಮಾಡಿದ ಒಳಿತು ಅವನಿಗೆ ಮತ್ತು ಅವನು ಮಾಡಿದ ಕೆಡುಕು ಅವನಿಗೆ. “ಓ ನಮ್ಮ ಪರಿಪಾಲಕನೇ! ನಾವು ಮರೆತುಬಿಟ್ಟರೆ ಅಥವಾ ತಪ್ಪು ಮಾಡಿದರೆ ನಮ್ಮನ್ನು ಹಿಡಿದು ಶಿಕ್ಷಿಸಬೇಡ. ಓ ನಮ್ಮ ಪರಿಪಾಲಕನೇ! ನಮಗಿಂತ ಮೊದಲಿನವರ ಮೇಲೆ ನೀನು ಹೊರಿಸಿದಂತಹ ಹೊರೆಯನ್ನು ನಮ್ಮ ಮೇಲೆ ಹೊರಿಸಬೇಡ. ಓ ನಮ್ಮ ಪರಿಪಾಲಕನೇ! ನಮಗೆ ಹೊರಲು ಸಾಮರ್ಥ್ಯವಿಲ್ಲದ್ದನ್ನು ನಮ್ಮ ಮೇಲೆ ಹೊರಿಸಬೇಡ. ನಮ್ಮನ್ನು ಮನ್ನಿಸು, ನಮ್ಮನ್ನು ಕ್ಷಮಿಸು ಮತ್ತು ನಮಗೆ ದಯೆ ತೋರು. ನೀನೇ ನಮ್ಮ ಸಂರಕ್ಷಕ. ಸತ್ಯನಿಷೇಧಿಗಳಾದ ಜನರ ಮೇಲೆ ನಮಗೆ ಜಯವನ್ನು ದಯಪಾಲಿಸು.”
Âl-i İmran 3:1
ಅಲಿಫ್ ಲಾಮ್ ಮೀಮ್.
Âl-i İmran 3:2
ಅಲ್ಲಾಹು! ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಅವನು ನಿರಂತರ ಜೀವಿಸುವವನು ಮತ್ತು ಎಲ್ಲವನ್ನೂ ಸಂರಕ್ಷಿಸಿ ನಿಯಂತ್ರಿಸುವವನಾಗಿದ್ದಾನೆ.
Âl-i İmran 3:3
ಅವನು ನಿಮಗೆ ಈ ಗ್ರಂಥವನ್ನು ಸತ್ಯದೊಂದಿಗೆ ಅವತೀರ್ಣಗೊಳಿಸಿದ್ದಾನೆ. ಇದು ಹಿಂದಿನ ಗ್ರಂಥಗಳನ್ನು ದೃಢೀಕರಿಸುತ್ತದೆ. ಅವನು ತೌರಾತ್ ಮತ್ತು ಇಂಜೀಲನ್ನು ಕೂಡ ಅವತೀರ್ಣಗೊಳಿಸಿದ್ದನು.
Âl-i İmran 3:4
ಇದಕ್ಕಿಂತ ಮೊದಲು ಜನರಿಗೆ ಸನ್ಮಾರ್ಗದರ್ಶಿಯಾಗಿ. ಅವನು (ಸತ್ಯಾಸತ್ಯವನ್ನು ಬೇರ್ಪಡಿಸಿ ತೋರಿಸುವ) ಕುರ್‌ಆನನ್ನು ಕೂಡ ಅವತೀರ್ಣಗೊಳಿಸಿದ್ದಾನೆ. ನಿಶ್ಚಯವಾಗಿಯೂ ಅಲ್ಲಾಹನ ವಚನಗಳನ್ನು ನಿಷೇಧಿಸುವವರು ಯಾರೋ—ಅವರಿಗೆ ಕಠಿಣ ಶಿಕ್ಷೆಯಿದೆ. ಅಲ್ಲಾಹು ಪ್ರಬಲನು ಮತ್ತು ಪ್ರತೀಕಾರ ಪಡೆಯುವವನಾಗಿದ್ದಾನೆ.
Âl-i İmran 3:5
ನಿಶ್ಚಯವಾಗಿಯೂ ಭೂಮ್ಯಾಕಾಶಗಳಲ್ಲಿರುವ ಯಾವುದೇ ವಸ್ತು ಅಲ್ಲಾಹನಿಂದ ಮರೆಯಾಗಿಲ್ಲ.
Âl-i İmran 3:6
ತಾಯಿಯ ಗರ್ಭದಲ್ಲಿ ಅವನು ಇಚ್ಛಿಸುವ ರೀತಿಯಲ್ಲಿ ನಿಮಗೆ ರೂಪ ಕೊಡುವವನು ಅವನೇ. ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಅವನು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
Âl-i İmran 3:7
ನಿಮಗೆ ಗ್ರಂಥವನ್ನು ಅವತೀರ್ಣಗೊಳಿಸಿದ್ದು ಅವನೇ. ಅದರಲ್ಲಿ ಸ್ಪಷ್ಟ ವಚನಗಳಿವೆ.[1] ಅವು ಗ್ರಂಥದ ಮೂಲಗಳಾಗಿವೆ. (ಅದರಲ್ಲಿ) ಹೋಲಿಕೆಯಿರುವ ಕೆಲವು ವಚನಗಳೂ ಇವೆ. ಹೃದಯದಲ್ಲಿ ವಕ್ರತೆಯಿರುವವರು, ಗೊಂದಲವನ್ನು ಸೃಷ್ಟಿಸಲು ಮತ್ತು ತಪ್ಪಾಗಿ ವ್ಯಾಖ್ಯಾನಿಸಲು ಹೋಲಿಕೆಯಿರುವ ವಚನಗಳ ಹಿಂದೆ ಬೀಳುತ್ತಾರೆ. ಆದರೆ, ಅಲ್ಲಾಹನ ಹೊರತು ಯಾರೂ ಅದರ ವ್ಯಾಖ್ಯಾನವನ್ನು ತಿಳಿದಿಲ್ಲ. ಜ್ಞಾನದಲ್ಲಿ ಸದೃಢರಾಗಿರುವವರು ಹೇಳುತ್ತಾರೆ: “ನಾವು ಅದರಲ್ಲಿ ವಿಶ್ವಾಸವಿಟ್ಟಿದ್ದೇವೆ. ಎಲ್ಲವೂ ನಮ್ಮ ಪರಿಪಾಲಕನ (ಅಲ್ಲಾಹನ) ಕಡೆಯಿಂದಾಗಿದೆ.” ಬುದ್ಧಿವಂತರ ಹೊರತು ಇನ್ನಾರೂ ಉಪದೇಶವನ್ನು ಪಡೆಯುವುದಿಲ್ಲ.
———
[1] ಸ್ಪಷ್ಟವಚನಗಳು ಅಂದರೆ ಆದೇಶ-ವಿರೋಧಗಳು, ನಿಯಮಗಳು, ಸಮಸ್ಯೆಗಳಿಗೆ ಪರಿಹಾರಗಳು, ಸಮಾಚಾರಗಳು ಮತ್ತು ನಿರೂಪಣೆಗಳಿರುವ ವಚನಗಳು. ಇವುಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಿಲ್ಲ. ಹೋಲಿಕೆಯಿರುವ ವಚನಗಳು ಇವುಗಳಿಗೆ ತದ್ವಿರುದ್ಧವಾದದ್ದು. ಅವು ಅಲ್ಲಾಹನ ಅಸ್ತಿತ್ವ, ವಿಧಿ-ನಿರ್ಣಯ, ಸ್ವರ್ಗ-ನರಕ, ದೇವದೂತರು ಮುಂತಾದವುಗಳಿಗೆ ಸಂಬಂಧಿಸಿದ ವಿವರಣೆಗಳಿರುವ ವಚನಗಳು.
Âl-i İmran 3:8
“ಓ ನಮ್ಮ ಪರಿಪಾಲಕನೇ! ನಮ್ಮನ್ನು ಸನ್ಮಾರ್ಗಕ್ಕೆ ಸೇರಿಸಿದ ಬಳಿಕ ನಮ್ಮ ಹೃದಯಗಳನ್ನು ವಕ್ರಗೊಳಿಸಬೇಡ. ನಮಗೆ ನಿನ್ನ ಕಡೆಯಿಂದ ದಯೆಯನ್ನು ಸುರಿಸು. ನಿಶ್ಚಯವಾಗಿಯೂ ನೀನು ಅತಿದೊಡ್ಡ ಉದಾರಿಯಾಗಿರುವೆ.
Âl-i İmran 3:9
ಓ ನಮ್ಮ ಪರಿಪಾಲಕನೇ! ನಿಶ್ಚಯವಾಗಿಯೂ ಒಂದು ದಿನ ನೀನು ಎಲ್ಲಾ ಜನರನ್ನೂ ಒಟ್ಟುಗೂಡಿಸುವೆ. ಆ ದಿನ ಬರುವುದರಲ್ಲಿ ಸಂಶಯವೇ ಇಲ್ಲ. ನಿಶ್ಚಯವಾಗಿಯೂ ಅಲ್ಲಾಹು ವಾಗ್ದಾನವನ್ನು ಉಲ್ಲಂಘಿಸುವುದಿಲ್ಲ.”
Âl-i İmran 3:10
ಸತ್ಯನಿಷೇಧಿಗಳು ಯಾರೋ—ಅವರಿಗೆ ಅವರ ಆಸ್ತಿಗಳು ಅಥವಾ ಮಕ್ಕಳು ಅಲ್ಲಾಹನ ಬಳಿ ಯಾವುದೇ ಉಪಕಾರ ಮಾಡುವುದಿಲ್ಲ. ಅವರೇ ನರಕಾಗ್ನಿಯ ಇಂಧನವಾಗುವವರು.
Âl-i İmran 3:11
ಫರೋಹನ ಜನರ ಮತ್ತು ಅವರಿಗಿಂತ ಹಿಂದಿನವರ ಸ್ಥಿತಿಯಂತೆ. ಅವರು ನಮ್ಮ ವಚನಗಳನ್ನು ನಿಷೇಧಿಸಿದರು. ಆಗ ಅಲ್ಲಾಹು ಅವರ ಪಾಪಗಳ ನಿಮಿತ್ತ ಅವರನ್ನು ಶಿಕ್ಷಿಸಿದನು. ಅಲ್ಲಾಹು ಅತಿಕಠಿಣವಾಗಿ ಶಿಕ್ಷಿಸುವವನಾಗಿದ್ದಾನೆ.
Âl-i İmran 3:12
ಸತ್ಯನಿಷೇಧಿಗಳೊಡನೆ ಹೇಳಿರಿ: “ಸದ್ಯದಲ್ಲೇ ನಿಮ್ಮನ್ನು ಸೋಲಿಸಲಾಗುವುದು ಮತ್ತು ನರಕದ ಕಡೆಗೆ ಒಟ್ಟುಗೂಡಿಸಲಾಗುವುದು. ಆ ವಾಸಸ್ಥಳವು ಬಹಳ ನಿಕೃಷ್ಟವಾಗಿದೆ.”[1]
———
[1] ಇಲ್ಲಿ ಸತ್ಯನಿಷೇಧಿಗಳು ಎಂದರೆ ಯಹೂದಿಗಳು. ಈ ಭವಿಷ್ಯ ನುಡಿಯು ಸ್ವಲ್ಪ ಸಮಯದಲ್ಲೇ ಸತ್ಯವಾಗಿದೆ. ಯಹೂದಿಗಳ ಬನೂ ಕೈನುಕಾ ಮತ್ತು ಬನೂ ನದೀರ್ ಗೋತ್ರಗಳನ್ನು ಗಡೀಪಾರು ಮಾಡಲಾಯಿತು ಹಾಗೂ ಬನೂ ಕುರೈಝ ಗೋತ್ರವನ್ನು ಸಂಹಾರ ಮಾಡಲಾಯಿತು. ನಂತರ ಖೈಬರ್ ಕೋಟೆಯನ್ನು ವಶಪಡಿಸಲಾಯಿತು.
Âl-i İmran 3:13
(ಬದ್ರ್‌ನಲ್ಲಿ) ಮುಖಾಮುಖಿಯಾದ ಆ ಎರಡು ಬಣಗಳಲ್ಲಿ ನಿಶ್ಚಯವಾಗಿಯೂ ನಿಮಗೆ ದೃಷ್ಟಾಂತವಿದೆ. ಒಂದು ಬಣವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುತ್ತಿತ್ತು. ಇನ್ನೊಂದು ಬಣವು ಸತ್ಯನಿಷೇಧಿಗಳದ್ದಾಗಿತ್ತು. ಅವರು ತಮ್ಮ ದೃಷ್ಟಿಯಲ್ಲಿ ಸತ್ಯವಿಶ್ವಾಸಿಗಳನ್ನು ತಮಗಿಂತ ಇಮ್ಮಡಿ ಸಂಖ್ಯೆಯಲ್ಲಿ ಕಾಣುತ್ತಿದ್ದರು. ಅಲ್ಲಾಹು ತನ್ನ ಸಹಾಯದಿಂದ ತಾನು ಇಚ್ಛಿಸುವವರನ್ನು ಬೆಂಬಲಿಸುತ್ತಾನೆ. ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಿಯುಳ್ಳವರಿಗೆ ನೀತಿಪಾಠವಿದೆ.
Âl-i İmran 3:14
ಮಹಿಳೆಯರು, ಗಂಡುಮಕ್ಕಳು, ಬಂಗಾರ ಮತ್ತು ಬೆಳ್ಳಿಯನ್ನು ಸಂಗ್ರಹಿಸಿಡಲಾದ ಖಜಾನೆಗಳು, ಉತ್ಕೃಷ್ಟ ತಳಿಯ ಕುದುರೆಗಳು, ಜಾನುವಾರುಗಳು, ಕೃಷಿಗಳು ಮುಂತಾದ ಜನರು ಮೋಹಿಸುವ ವಸ್ತುಗಳಲ್ಲಿರುವ ಪ್ರೀತಿಯನ್ನು ಅವರಿಗೆ ಅಲಂಕರಿಸಿಕೊಡಲಾಗಿದೆ. ಅವು ಇಹಲೋಕ ಜೀವನದ ಆನಂದಗಳಾಗಿವೆ. ಮರಳಿ ತಲುಪಬೇಕಾದ ಅತ್ಯುತ್ತಮ ಸ್ಥಳವು ಅಲ್ಲಾಹನ ಬಳಿಯಿದೆ.
Âl-i İmran 3:15
ಹೇಳಿರಿ: “ಅದಕ್ಕಿಂತಲೂ ಉತ್ತಮವಾದ ವಸ್ತುವನ್ನು ನಾನು ನಿಮಗೆ ತಿಳಿಸಿಕೊಡಲೇ? ದೇವಭಯವುಳ್ಳವರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿವೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅವರಿಗೆ ಪರಿಶುದ್ಧ ಸಂಗಾತಿಗಳಿದ್ದಾರೆ ಮತ್ತು ಅಲ್ಲಾಹನ ಕಡೆಯ ಸಂಪ್ರೀತಿಯೂ ಇದೆ. ಅಲ್ಲಾಹು ತನ್ನ ದಾಸರನ್ನು ನೋಡುತ್ತಿದ್ದಾನೆ.”
Âl-i İmran 3:16
ಅವರು (ದೇವಭಯವುಳ್ಳವರು) ಯಾರೆಂದರೆ: “ಓ ನಮ್ಮ ಪರಿಪಾಲಕನೇ! ನಾವು ವಿಶ್ವಾಸವಿಟ್ಟಿದ್ದೇವೆ. ಆದ್ದರಿಂದ ನಮ್ಮ ಪಾಪಗಳನ್ನು ಕ್ಷಮಿಸು ಮತ್ತು ನಮ್ಮನ್ನು ನರಕ ಶಿಕ್ಷೆಯಿಂದ ರಕ್ಷಿಸು” ಎಂದು ಹೇಳುವವರು.
Âl-i İmran 3:17
ಅವರು ತಾಳ್ಮೆಯುಳ್ಳವರು, ಸತ್ಯವಂತರು, ವಿಧೇಯರು, ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವವರು ಮತ್ತು ರಾತ್ರಿಯ ಅಂತ್ಯ ಯಾಮಗಳಲ್ಲಿ ಕ್ಷಮೆಯಾಚಿಸುವವರು.
Âl-i İmran 3:18
ತನ್ನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ ಎಂದು ಅಲ್ಲಾಹು ಸಾಕ್ಷಿವಹಿಸಿದ್ದಾನೆ, ಅವನ ದೇವದೂತರುಗಳು ಮತ್ತು ವಿದ್ವಾಂಸರು (ಕೂಡ ಸಾಕ್ಷಿವಹಿಸಿದ್ದಾರೆ). ಅವನು ಸ್ಥಿರವಾಗಿ ನ್ಯಾಯವನ್ನು ಪಾಲಿಸುವವನು. ಪ್ರಬಲನು ಮತ್ತು ವಿವೇಕಪೂರ್ಣನಾದ ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ.
Âl-i İmran 3:19
ನಿಶ್ಚಯವಾಗಿಯೂ ಅಲ್ಲಾಹನ ಬಳಿ (ಸ್ವೀಕಾರವಾಗುವ) ಧರ್ಮವು ಇಸ್ಲಾಮ್ ಮಾತ್ರ. ಗ್ರಂಥ ನೀಡಲಾದವರು ಅವರಿಗೆ ಜ್ಞಾನವು ಬಂದ ಬಳಿಕವೇ ಹೊರತು ಭಿನ್ನರಾಗಲಿಲ್ಲ. ಅದು ಅವರು ಪರಸ್ಪರ ಹೊಂದಿದ್ದ ವಿದ್ವೇಷ ಮತ್ತು ಅಸೂಯೆಯ ಕಾರಣದಿಂದಾಗಿತ್ತು. ಯಾರು ಅಲ್ಲಾಹನ ದೃಷ್ಟಾಂತಗಳನ್ನು ನಿಷೇಧಿಸುತ್ತಾರೋ—ನಿಶ್ಚಯವಾಗಿಯೂ ಅಲ್ಲಾಹು ಅವರನ್ನು ಅತಿ ಶೀಘ್ರವಾಗಿ ವಿಚಾರಣೆ ಮಾಡುವನು.
Âl-i İmran 3:20
ಅದರ ನಂತರವೂ ಅವರು ನಿಮ್ಮೊಡನೆ ತರ್ಕ ಮಾಡಿದರೆ ನೀವು ಹೇಳಿರಿ: “ನಾನು ಮತ್ತು ನನ್ನ ಅನುಯಾಯಿಗಳು ನಮ್ಮ ಮುಖಗಳನ್ನು ಸಂಪೂರ್ಣವಾಗಿ ಅಲ್ಲಾಹನಿಗೆ ಶರಣಾಗಿಸಿದ್ದೇವೆ.” ಗ್ರಂಥ ನೀಡಲಾದವರೊಂದಿಗೆ ಮತ್ತು ಅನಕ್ಷರಸ್ಥರೊಂದಿಗೆ (ಅರಬ್ ಬಹುದೇವಾರಾಧಕರೊಂದಿಗೆ) ಕೇಳಿರಿ: “ನೀವು ಶರಣಾಗಿದ್ದೀರಾ?” ಅವರು ಶರಣಾದರೆ ಅವರು ಸನ್ಮಾರ್ಗವನ್ನು ಪಡೆಯುತ್ತಾರೆ. ಆದರೆ ಅವರು ಮುಖ ತಿರುಗಿಸಿ ನಡೆದರೆ ನಿಮ್ಮ ಕರ್ತವ್ಯವು ಅವರಿಗೆ ಸಂದೇಶವನ್ನು ತಲುಪಿಸಿಕೊಡುವುದು ಮಾತ್ರ. ಅಲ್ಲಾಹು ತನ್ನ ದಾಸರನ್ನು ನೋಡುತ್ತಿದ್ದಾನೆ.
Âl-i İmran 3:21
ಅಲ್ಲಾಹನ ವಚನಗಳನ್ನು ನಿಷೇಧಿಸುವವರು, ಪ್ರವಾದಿಗಳನ್ನು ಅನ್ಯಾಯವಾಗಿ ಕೊಲ್ಲುವವರು ಮತ್ತು ನ್ಯಾಯ ಪಾಲಿಸಲು ಆದೇಶಿಸುವ ಜನರನ್ನು ಹತ್ಯೆ ಮಾಡುವವರು ಯಾರೋ—ಅವರಿಗೆ ಯಾತನಾಮಯ ಶಿಕ್ಷೆಯ ಬಗ್ಗೆ ಸುವಾರ್ತೆಯನ್ನು ತಿಳಿಸಿರಿ.
Âl-i İmran 3:22
ಇಹಲೋಕದಲ್ಲೂ, ಪರಲೋಕದಲ್ಲೂ ಅವರ ಕರ್ಮಗಳು ನಿಷ್ಫಲವಾಗಿವೆ. ಅವರಿಗೆ ಯಾವುದೇ ಸಹಾಯಕರಿಲ್ಲ.
Âl-i İmran 3:23
ಗ್ರಂಥದಿಂದ ಒಂದು ಪಾಲು ನೀಡಲಾದವರನ್ನು (ಯಹೂದಿಗಳನ್ನು) ನೀವು ನೋಡಿಲ್ಲವೇ? ಅವರ (ಯಹೂದಿಗಳ) ನಡುವೆ ತೀರ್ಪು ನೀಡಲು ಅವರನ್ನು ಅಲ್ಲಾಹನ ಗ್ರಂಥಕ್ಕೆ ಕರೆಯಲಾಗುತ್ತದೆ. ಅದರ ನಂತರವೂ ಅವರಲ್ಲೊಂದು ಗುಂಪು ಮುಖ ತಿರುಗಿಸಿ ವಿಮುಖರಾಗುತ್ತಾರೆ.
Âl-i İmran 3:24
ಅದೇಕೆಂದರೆ ಅವರು ಹೇಳುತ್ತಾರೆ: “ಬೆರಳೆಣಿಕೆಯ ಕೆಲವು ದಿನಗಳ ಹೊರತು ನರಕಾಗ್ನಿಯು ನಮ್ಮನ್ನು ಸುಡುವುದಿಲ್ಲ.” ಅವರು ಏನು ಕಲ್ಪಿಸಿ ಹೇಳುತ್ತಿದ್ದಾರೋ ಅದು ಅವರನ್ನು ಅವರ ಧರ್ಮದ ವಿಷಯದಲ್ಲಿ ಮರುಳುಗೊಳಿಸಿದೆ.
Âl-i İmran 3:25
ಯಾವುದೇ ಸಂಶಯವಿಲ್ಲದ ಒಂದು ದಿನ (ಪುನರುತ್ಥಾನ ದಿನ) ನಾವು ಅವರನ್ನು ಒಟ್ಟುಗೂಡಿಸಿದರೆ (ಅವರ ಸ್ಥಿತಿ) ಹೇಗಿರಬಹುದು? ಅಂದು ಪ್ರತಿಯೊಬ್ಬ ವ್ಯಕ್ತಿಗೂ ಅವನು ಮಾಡಿದ ಕರ್ಮಗಳ ಪ್ರತಿಫಲವನ್ನು ಪೂರ್ಣವಾಗಿ ನೀಡಲಾಗುವುದು. ಅವರಿಗೆ ಯಾವುದೇ ಅನ್ಯಾಯವಾಗುವುದಿಲ್ಲ.
Âl-i İmran 3:26
ಹೇಳಿರಿ: “ಓ ಸಾರ್ವಭೌಮತ್ವದ ಒಡೆಯನಾದ ಅಲ್ಲಾಹನೇ! ನೀನು ಇಚ್ಛಿಸುವವರಿಗೆ ನೀನು ಆಧಿಪತ್ಯವನ್ನು ನೀಡುವೆ ಮತ್ತು ನೀನು ಇಚ್ಛಿಸುವವರಿಂದ ಆಧಿಪತ್ಯವನ್ನು ಕಸಿಯುವೆ. ನೀನು ಇಚ್ಛಿಸುವವರಿಗೆ ಪ್ರತಿಷ್ಠೆಯನ್ನು ನೀಡುವೆ ಮತ್ತು ನೀನು ಇಚ್ಛಿಸುವವರನ್ನು ಅವಮಾನಕ್ಕೆ ಗುರಿಯಾಗಿಸುವೆ. ಒಳಿತುಗಳೆಲ್ಲವೂ ನಿನ್ನ ಕೈಯಲ್ಲಿದೆ. ನಿಶ್ಚಯವಾಗಿಯೂ ನೀನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವೆ.
Âl-i İmran 3:27
ನೀನು ರಾತ್ರಿಯನ್ನು ಹಗಲಿನಲ್ಲಿ ತೂರಿಸುವೆ ಮತ್ತು ಹಗಲನ್ನು ರಾತ್ರಿಯಲ್ಲಿ ತೂರಿಸುವೆ. ನಿರ್ಜೀವಿಯಿಂದ ಜೀವಿಯನ್ನು ಹೊರತರುವೆ ಮತ್ತು ಜೀವಿಯಿಂದ ನಿರ್ಜೀವಿಯನ್ನು ಹೊರತರುವೆ. ನೀನು ಇಚ್ಛಿಸುವವರಿಗೆ ನೀನು ಲೆಕ್ಕವಿಲ್ಲದೆ ನೀಡುವೆ.”
Âl-i İmran 3:28
ಸತ್ಯವಿಶ್ವಾಸಿಗಳು ಸತ್ಯವಿಶ್ವಾಸಿಗಳನ್ನು ಬಿಟ್ಟು ಸತ್ಯನಿಷೇಧಿಗಳನ್ನು ಆಪ್ತಮಿತ್ರರನ್ನಾಗಿ ಸ್ವೀಕರಿಸಬಾರದು.[1] ಯಾರು ಹಾಗೆ ಮಾಡುತ್ತಾನೋ ಅವನಿಗೆ ಅಲ್ಲಾಹನಿಂದ ಯಾವುದೇ ರಕ್ಷಣೆಯಿಲ್ಲ. ಆದರೆ ಅವರ ಕೆಡುಕಿನಿಂದ ಪಾರಾಗುವ ಉದ್ದೇಶವಿದ್ದರೆ ಹೊರತು.[2] ಅಲ್ಲಾಹು ತನ್ನ ಬಗ್ಗೆ ನಿಮ್ಮನ್ನು ಎಚ್ಚರಿಸುತ್ತಿದ್ದಾನೆ. (ಎಲ್ಲರೂ) ಅಲ್ಲಾಹನ ಬಳಿಗೇ ಮರಳಬೇಕಾಗಿದೆ.
———
[1] ಇಲ್ಲಿ ಸತ್ಯನಿಷೇಧಿಗಳು ಎಂದರೆ ಸತ್ಯವಿಶ್ವಾಸಿಗಳೊಂದಿಗೆ ವೈರ ಮತ್ತು ದ್ವೇಷ ಕಟ್ಟಿಕೊಂಡಿರುವ ಸತ್ಯನಿಷೇಧಿಗಳು. ಆದರೆ ಸತ್ಯವಿಶ್ವಾಸಿಗಳೊಂದಿಗೆ ವೈರತ್ವವಿಲ್ಲದ, ದ್ವೇಷವನ್ನು ಹೊಂದಿಲ್ಲದ ಸತ್ಯನಿಷೇಧಿಗಳೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸುವುದರಲ್ಲಿ ತೊಂದರೆಯಿಲ್ಲ. [2] ಅಂದರೆ ಸತ್ಯನಿಷೇಧಿಗಳೊಡನೆ ಸ್ನೇಹ ಮಾಡಿಕೊಳ್ಳದ ಹೊರತು ಅವರ ಹಿಂಸೆಯಿಂದ ಪಾರಾಗಲು ಸಾಧ್ಯವಿಲ್ಲದ ಸಂದರ್ಭಗಳಲ್ಲಿ ಬಾಹ್ಯವಾಗಿ ಅವರೊಡನೆ ಸ್ನೇಹ ಮಾಡಿಕೊಳ್ಳಬಹುದು. ಇದು ಸಾಮಾನ್ಯವಾಗಿ ಮುಸ್ಲಿಮೇತರ ದೇಶಗಳಲ್ಲಿ ವಾಸಿಸುವ ಮುಸಲ್ಮಾನರಿಗೆ ಸಂಬಂಧಿಸಿದ್ದಾಗಿದೆ.
Âl-i İmran 3:29
ಹೇಳಿರಿ: “ನೀವು ನಿಮ್ಮ ಎದೆಗಳಲ್ಲಿರುವುದನ್ನು ಮುಚ್ಚಿಟ್ಟರೂ ಅಥವಾ ಬಹಿರಂಗಪಡಿಸಿದರೂ ಅಲ್ಲಾಹು ಅದನ್ನು ತಿಳಿಯುತ್ತಾನೆ. ಅವನು ಭೂಮ್ಯಾಕಾಶಗಳಲ್ಲಿರುವ ಎಲ್ಲವನ್ನೂ ತಿಳಿಯುತ್ತಾನೆ. ಅಲ್ಲಾಹು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.”
Âl-i İmran 3:30
ಪ್ರತಿಯೊಬ್ಬನೂ ತಾನು ಮಾಡಿದ ಒಳಿತನ್ನು ಮತ್ತು ತಾನು ಮಾಡಿದ ಕೆಡುಕನ್ನು ತನ್ನ ಮುಂದೆ ಪ್ರದರ್ಶಿಸಿಟ್ಟಿರುವುದನ್ನು ನೋಡುವ ದಿನ. ತನ್ನ ಮತ್ತು ಅದರ (ಕೆಡುಕಿನ) ನಡುವೆ ವಿದೂರ ಅಂತರವಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಅವನು ಹಾರೈಸುವನು. ಅಲ್ಲಾಹು ತನ್ನ ಬಗ್ಗೆ ನಿಮ್ಮನ್ನು ಎಚ್ಚರಿಸುತ್ತಿದ್ದಾನೆ. ಅಲ್ಲಾಹನಿಗೆ ದಾಸರ ಮೇಲೆ ಅಪಾರ ಸಹಾನುಭೂತಿಯಿದೆ.
Âl-i İmran 3:31
ಹೇಳಿರಿ: “ನೀವು ಅಲ್ಲಾಹನನ್ನು ಪ್ರೀತಿಸುವುದಾದರೆ ನನ್ನನ್ನು ಅನುಸರಿಸಿರಿ. ಅಲ್ಲಾಹು ನಿಮ್ಮನ್ನು ಪ್ರೀತಿಸುತ್ತಾನೆ ಮತ್ತು ನಿಮ್ಮ ಪಾಪಗಳನ್ನು ಕ್ಷಮಿಸುತ್ತಾನೆ. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.”
Âl-i İmran 3:32
ಹೇಳಿರಿ: “ನೀವು ಅಲ್ಲಾಹನ ಮತ್ತು ಸಂದೇಶವಾಹಕರ ಆಜ್ಞಾಪಾಲನೆ ಮಾಡಿರಿ.” ಅವರೇನಾದರೂ ವಿಮುಖರಾದರೆ—ನಿಶ್ಚಯವಾಗಿಯೂ ಅಲ್ಲಾಹು ಸತ್ಯನಿಷೇಧಿಗಳನ್ನು ಇಷ್ಟಪಡುವುದಿಲ್ಲ.
Âl-i İmran 3:33
ನಿಶ್ಚಯವಾಗಿಯೂ ಅಲ್ಲಾಹು ಸರ್ವಲೋಕಗಳ ಜನರ ಪೈಕಿ ಆದಮ್, ನೂಹ್, ಇಬ್ರಾಹೀಮರ ಕುಟುಂಬ ಮತ್ತು ಇಮ್ರಾನರ[1] ಕುಟುಂಬವನ್ನು ಆರಿಸಿದ್ದಾನೆ.
———
[1] ಇಮ್ರಾನ್ ಮರ್ಯಮರ ತಂದೆ. ಪ್ರವಾದಿ ಈಸಾರ ಅಜ್ಜ. ಅವರ ಪತ್ನಿಯ ಹೆಸರು ಹನ್ನ.
Âl-i İmran 3:34
ಅವರು ಒಬ್ಬರು ಇನ್ನೊಬ್ಬರ ವಂಶದಿಂದ ಬಂದವರು. ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
Âl-i İmran 3:35
ಇಮ್ರಾನರ ಪತ್ನಿ ಹೇಳಿದ ಸಂದರ್ಭ: “ಓ ನನ್ನ ಪರಿಪಾಲಕನೇ! ನನ್ನ ಗರ್ಭದಲ್ಲಿರುವುದನ್ನು ನಾನು ನಿನ್ನ ಹೆಸರಲ್ಲಿ ಸ್ವತಂತ್ರಗೊಳಿಸುವೆನೆಂದು[1] ಹರಕೆ ಹೊತ್ತಿದ್ದೇನೆ. ನೀನು ಅದನ್ನು ನನ್ನಿಂದ ಸ್ವೀಕರಿಸು. ನಿಶ್ಚಯವಾಗಿಯೂ ನೀನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿರುವೆ.”
———
[1] ಸ್ವತಂತ್ರಗೊಳಿಸುವುದು ಎಂದರೆ ಬೈತುಲ್ ಮುಕದ್ದಿಸ್‌ನ ಸೇವೆ ಮಾಡಲು ಬಿಟ್ಟುಬಿಡುವುದು.
Âl-i İmran 3:36
ನಂತರ ಆಕೆ ಮಗುವಿಗೆ ಜನ್ಮ ನೀಡಿದಾಗ ಹೇಳಿದಳು: “ಓ ನನ್ನ ಪರಿಪಾಲಕನೇ! ನಾನು ಹೆಣ್ಣು ಮಗುವಿಗೆ ಜನ್ಮ ನೀಡಿದ್ದೇನೆ!” ಅವಳು ಯಾರಿಗೆ ಜನ್ಮ ನೀಡಿದ್ದಾಳೆಂದು ಅಲ್ಲಾಹನಿಗೆ ಚೆನ್ನಾಗಿ ತಿಳಿದಿದೆ. ಗಂಡು ಹೆಣ್ಣಿನಂತಲ್ಲ! “ನಾನು ಅವಳಿಗೆ ಮರ್ಯಮ್ ಎಂದು ಹೆಸರಿಟ್ಟಿದ್ದೇನೆ; ಅವಳನ್ನು ಮತ್ತು ಅವಳ ಸಂತಾನವನ್ನು ಬಹಿಷ್ಕೃತ ಶೈತಾನನಿಂದ ಕಾಪಾಡಲು ನಿನ್ನ ರಕ್ಷಣೆಗೆ ಒಪ್ಪಿಸುತ್ತೇನೆ.”
Âl-i İmran 3:37
ಅವಳ ಪರಿಪಾಲಕ (ಅಲ್ಲಾಹು) ಅವಳನ್ನು ಉತ್ತಮ ರೀತಿಯಲ್ಲಿ ಸ್ವೀಕರಿಸಿ ಉತ್ತಮ ರೀತಿಯಲ್ಲಿ ಬೆಳೆಸಿದನು. ಅವಳ ಪಾಲನೆ-ಪೋಷಣೆ ಮಾಡುವ ಹೊಣೆಯನ್ನು ಝಕರಿಯ್ಯಾರಿಗೆ ಒಪ್ಪಿಸಿದನು. ಝಕರಿಯ್ಯಾ ಅವಳ ಕೋಣೆಗೆ ತೆರಳಿದಾಗಲೆಲ್ಲ ಅವಳ ಬಳಿ ಏನಾದರೊಂದು ಆಹಾರವನ್ನು ಕಾಣುತ್ತಿದ್ದರು. ಅವರು ಕೇಳಿದರು: “ಓ ಮರ್ಯಮ್! ಇದು ನಿನಗೆಲ್ಲಿಂದ ದೊರೆಯುತ್ತದೆ?” ಅವಳು ಉತ್ತರಿಸಿದಳು: “ಅದು ಅಲ್ಲಾಹನ ಬಳಿಯಿಂದ. ನಿಶ್ಚಯವಾಗಿಯೂ ಅಲ್ಲಾಹು ಅವನು ಇಚ್ಛಿಸುವವರಿಗೆ ಲೆಕ್ಕವಿಲ್ಲದೆ ದಯಪಾಲಿಸುತ್ತಾನೆ.”
Âl-i İmran 3:38
ಅಲ್ಲಿ ಝಕರಿಯ್ಯಾ ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿದರು: “ಓ ನನ್ನ ಪರಿಪಾಲಕನೇ! ನಿನ್ನ ಕಡೆಯಿಂದ ನನಗೊಂದು ಪರಿಶುದ್ಧ ಸಂತಾನವನ್ನು ಕರುಣಿಸು. ನಿಶ್ಚಯವಾಗಿಯೂ ನೀನು ಪ್ರಾರ್ಥನೆಗೆ ಕಿವಿಗೊಡುವವನಾಗಿರುವೆ.”
Âl-i İmran 3:39
ಅವರು ಕೋಣೆಯಲ್ಲಿ ನಿಂತು ನಮಾಝ್ ಮಾಡುತ್ತಿದ್ದಾಗ, ದೇವದೂತರುಗಳು ಅವರನ್ನು ಕರೆದು ಹೇಳಿದರು: “ನಿಶ್ಚಯವಾಗಿಯೂ ಅಲ್ಲಾಹು ನಿಮಗೆ ಯಹ್ಯಾ (ಎಂಬ ಮಗುವಿ)ನ ಸುವಾರ್ತೆಯನ್ನು ತಿಳಿಸುತ್ತಿದ್ದಾನೆ. ಅವರು (ಯಹ್ಯಾ) ಅಲ್ಲಾಹನ ಕಡೆಯ ವಚನವನ್ನು ದೃಢೀಕರಿಸುವವರು, ಸರದಾರರು, ಆತ್ಮಸಂಯಮವುಳ್ಳವರು ಮತ್ತು ನೀತಿವಂತರಲ್ಲಿ ಸೇರಿದ ಪ್ರವಾದಿಯಾಗಿರುವರು.”
Âl-i İmran 3:40
ಝಕರಿಯ್ಯಾ ಕೇಳಿದರು: “ಓ ನನ್ನ ಪರಿಪಾಲಕನೇ! ನನಗೆ ಮಗು ಹುಟ್ಟುವುದು ಹೇಗೆ? ನಾನು ಮುದುಕನಾಗಿದ್ದೇನೆ ಮತ್ತು ನನ್ನ ಹೆಂಡತಿ ಬಂಜೆಯಾಗಿದ್ದಾಳೆ.” ಅಲ್ಲಾಹು ಹೇಳಿದನು: “ಹಾಗೆಯೇ ಆಗಿದೆ. ಅಲ್ಲಾಹು ಅವನು ಇಚ್ಛಿಸುವುದನ್ನು ಮಾಡುತ್ತಾನೆ.”
Âl-i İmran 3:41
ಝಕರಿಯ್ಯಾ ಹೇಳಿದರು: “ಓ ನನ್ನ ಪರಿಪಾಲಕನೇ! ನನಗೊಂದು ದೃಷ್ಟಾಂತವನ್ನು ಮಾಡಿ ತೋರಿಸು.” ಅಲ್ಲಾಹು ಹೇಳಿದನು: “ನಿಮಗಿರುವ ದೃಷ್ಟಾಂತವೇನೆಂದರೆ, ನೀವು ಮೂರು ದಿನಗಳ ಕಾಲ ಜನರೊಡನೆ ಸನ್ನೆಯ ಮೂಲಕವಲ್ಲದೆ ಮಾತನಾಡುವುದಿಲ್ಲ. ನೀವು ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಅತ್ಯಧಿಕವಾಗಿ ಸ್ಮರಿಸಿರಿ ಮತ್ತು ಸಂಜೆ ಹಾಗೂ ಮುಂಜಾನೆಗಳಲ್ಲಿ ಅವನ ಪರಿಶುದ್ಧಿಯನ್ನು ಕೊಂಡಾಡಿರಿ.”
Âl-i İmran 3:42
ದೇವದೂತರುಗಳು ಹೇಳಿದ ಸಂದರ್ಭ: “ಓ ಮರ್ಯಮ್! ನಿಶ್ಚಯವಾಗಿಯೂ ಅಲ್ಲಾಹು ನಿಮ್ಮನ್ನು ವಿಶೇಷವಾಗಿ ಆರಿಸಿದ್ದಾನೆ. ನಿಮಗೆ ಪರಿಶುದ್ಧಿಯನ್ನು ದಯಪಾಲಿಸಿದ್ದಾನೆ ಮತ್ತು ಸರ್ವಲೋಕಗಳ ಮಹಿಳೆಯರಲ್ಲಿ ನಿಮ್ಮನ್ನು ವಿಶೇಷವಾಗಿ ಆರಿಸಿದ್ದಾನೆ.
Âl-i İmran 3:43
ಓ ಮರ್ಯಮ್! ನೀವು ನಿಮ್ಮ ಪರಿಪಾಲಕನಿಗೆ ವಿಧೇಯರಾಗಿರಿ; ಸಾಷ್ಟಾಂಗ ಮಾಡಿರಿ ಮತ್ತು ತಲೆಬಾಗುವವರೊಂದಿಗೆ ತಲೆಬಾಗಿರಿ.”
Âl-i İmran 3:44
ಇವೆಲ್ಲವೂ ಅದೃಶ್ಯ ಸಮಾಚಾರಗಳಾಗಿದ್ದು ನಾವು ನಿಮಗೆ ಇದನ್ನು ದೇವವಾಣಿಯ ಮೂಲಕ ತಿಳಿಸುತ್ತಿದ್ದೇವೆ. ಮರ್ಯಮರ ಪಾಲನೆ-ಪೋಷಣೆಯನ್ನು ಯಾರು ವಹಿಸಿಕೊಳ್ಳಬೇಕೆಂದು ನಿರ್ಧರಿಸಲು ಅವರು ತಮ್ಮ ಲೇಖನಿಗಳನ್ನು ಎಸೆದ ಸಂದರ್ಭದಲ್ಲಿ ನೀವು ಅವರ ಬಳಿಯಿರಲಿಲ್ಲ. ಅವರು ತರ್ಕಿಸುತ್ತಿರುವಾಗಲೂ ನೀವು ಅವರ ಬಳಿಯಿರಲಿಲ್ಲ.
Âl-i İmran 3:45
ದೇವದೂತರುಗಳು ಹೇಳಿದ ಸಂದರ್ಭ: “ಓ ಮರ್ಯಮ್! ನಿಶ್ಚಯವಾಗಿಯೂ ಅಲ್ಲಾಹು ತನ್ನ ಒಂದು ವಚನದ ಬಗ್ಗೆ ನಿಮಗೆ ಸುವಾರ್ತೆಯನ್ನು ತಿಳಿಸುತ್ತಿದ್ದಾನೆ. ಅವರ ಹೆಸರು ಮರ್ಯಮರ ಮಗ ಮಸೀಹ್ ಈಸಾ. ಅವರು ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಪ್ರತಿಷ್ಠಿತರಾಗಿರುವರು ಮತ್ತು ಅಲ್ಲಾಹನ ಸಾಮೀಪ್ಯ ಗಳಿಸಿದವರಲ್ಲಿ ಸೇರಿದವರಾಗಿರುವರು.
Âl-i İmran 3:46
ಅವರು ತೊಟ್ಟಿಲಲ್ಲಿರುವಾಗ ಮತ್ತು ಮಧ್ಯವಯಸ್ಕನಾಗಿರುವಾಗ[1] ಜನರೊಡನೆ ಮಾತನಾಡುವರು. ಅವರು ನೀತಿವಂತರಲ್ಲಿ ಸೇರಿದವರಾಗಿರುವರು.”
———
[1] ಅಂದರೆ ಮಧ್ಯವಯಸ್ಕನಾಗಿರುವಾಗ ಅವರು ಪ್ರವಾದಿಯಾಗಿ ನೇಮಕಗೊಂಡು ದೇವವಾಣಿಯ ಆಧಾರದಲ್ಲಿ ಮಾತನಾಡುತ್ತಾರೆ.
Âl-i İmran 3:47
ಮರ್ಯಮ್ ಕೇಳಿದರು: “ಓ ನನ್ನ ಪರಿಪಾಲಕನೇ! ನನಗೆ ಮಗುವಾಗುವುದು ಹೇಗೆ? ಯಾವುದೇ ಪುರುಷನು ನನ್ನನ್ನು ಸ್ಪರ್ಶಿಸಿಲ್ಲವಲ್ಲ.” ಅಲ್ಲಾಹು ಹೇಳಿದನು: “ಹಾಗೆಯೇ ಆಗಿದೆ. ಅಲ್ಲಾಹು ಅವನು ಇಚ್ಛಿಸುವುದನ್ನು ಸೃಷ್ಟಿಸುತ್ತಾನೆ. ಅವನು ಒಂದು ವಿಷಯವನ್ನು ತೀರ್ಮಾನಿಸಿದರೆ ಅದರೊಡನೆ ಉಂಟಾಗು ಎನ್ನುತ್ತಾನೆ. ಆಗ ಅದು ಉಂಟಾಗುತ್ತದೆ!
Âl-i İmran 3:48
ಅವನು ಅವರಿಗೆ ಗ್ರಂಥವನ್ನು, ವಿವೇಕವನ್ನು, ತೌರಾತನ್ನು ಮತ್ತು ಇಂಜೀಲನ್ನು ಕಲಿಸಿಕೊಡುವನು.
Âl-i İmran 3:49
ಅವರನ್ನು ಇಸ್ರಾಯೇಲ್ ಮಕ್ಕಳ ಬಳಿಗೆ ಸಂದೇಶವಾಹಕರಾಗಿ ಕಳುಹಿಸುವನು. (ಅವರು ಹೇಳುವರು:) “ನಾನು ನಿಮ್ಮ ಪರಿಪಾಲಕನ (ಅಲ್ಲಾಹನ) ವಚನದೊಂದಿಗೆ ನಿಮ್ಮ ಬಳಿಗೆ ಬಂದಿದ್ದೇನೆ. ನಾನು ನಿಮಗೆ ಜೇಡಿಮಣ್ಣಿನಿಂದ ಹಕ್ಕಿಯ ಆಕೃತಿಯನ್ನು ರಚಿಸುತ್ತೇನೆ. ನಂತರ ನಾನು ಅದರಲ್ಲಿ ಊದುತ್ತೇನೆ. ಆಗ ಅದು ಅಲ್ಲಾಹನ ಅಪ್ಪಣೆಯಿಂದ ಹಕ್ಕಿಯಾಗಿ ಮಾರ್ಪಡುತ್ತದೆ. ನಾನು ಅಲ್ಲಾಹನ ಅಪ್ಪಣೆಯಿಂದ ಹುಟ್ಟು ಕುರುಡನನ್ನು ಮತ್ತು ಕುಷ್ಠರೋಗಿಯನ್ನು ಗುಣಪಡಿಸುತ್ತೇನೆ ಹಾಗೂ ಸತ್ತವರಿಗೆ ಜೀವ ನೀಡುತ್ತೇನೆ. ನೀವು ತಿನ್ನುವುದನ್ನು ಮತ್ತು ನೀವು ನಿಮ್ಮ ಮನೆಗಳಲ್ಲಿ ಸಂಗ್ರಹಿಸಿಡುವುದನ್ನು ನಾನು ನಿಮಗೆ ತಿಳಿಸುತ್ತೇನೆ. ನೀವು ಸತ್ಯವಿಶ್ವಾಸಿಗಳಾಗಿದ್ದರೆ ನಿಶ್ಚಯವಾಗಿಯೂ ಇದರಲ್ಲಿ ನಿಮಗೆ ದೃಷ್ಟಾಂತವಿದೆ.
Âl-i İmran 3:50
ನಾನು ನನ್ನ ಮುಂದಿರುವ ತೌರಾತನ್ನು ದೃಢೀಕರಿಸುತ್ತೇನೆ. ನಿಮಗೆ ನಿಷೇಧಿಸಲಾಗಿರುವ ಕೆಲವು ವಸ್ತುಗಳನ್ನು ನಾನು ನಿಮಗೆ ಧರ್ಮಸಮ್ಮತಗೊಳಿಸುತ್ತೇನೆ. ನಾನು ನಿಮಗೆ ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ದೃಷ್ಟಾಂತವನ್ನು ತಂದಿರುದ್ದೇನೆ. ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
Âl-i İmran 3:51
ನಿಶ್ಚಯವಾಗಿಯೂ ಅಲ್ಲಾಹು ನನ್ನ ಮತ್ತು ನಿಮ್ಮ ಪರಿಪಾಲಕನಾಗಿದ್ದಾನೆ. ಆದ್ದರಿಂದ ಅವನನ್ನು ಮಾತ್ರ ಆರಾಧಿಸಿರಿ. ಇದೇ ನೇರವಾದ ಮಾರ್ಗ.
Âl-i İmran 3:52
ನಂತರ ಈಸಾರಿಗೆ ಅವರ ಸತ್ಯನಿಷೇಧದ ಅರಿವಾದಾಗ ಅವರು ಹೇಳಿದರು: “ಅಲ್ಲಾಹನ ಮಾರ್ಗದಲ್ಲಿ ನನಗೆ ಯಾರು ಸಹಾಯ ಮಾಡುತ್ತೀರಿ?” ಹವಾರಿಗಳು[1] ಹೇಳಿದರು: “ನಾವು ಅಲ್ಲಾಹನ ಮಾರ್ಗದಲ್ಲಿ ಸಹಾಯ ಮಾಡುತ್ತೇವೆ. ನಾವು ಅಲ್ಲಾಹನಲ್ಲಿ ವಿಶ್ವಾಸವಿಟ್ಟಿದ್ದೇವೆ. ನಾವು (ಅಲ್ಲಾಹನಿಗೆ) ಶರಣಾಗಿದ್ದೇವೆ ಎಂಬುದಕ್ಕೆ ನೀವು ಸಾಕ್ಷಿಯಾಗಿರಿ.”
———
[1] ಹವಾರಿಗಳು ಎಂದರೆ ಸಹಾಯಕರು.
Âl-i İmran 3:53
“ಓ ನಮ್ಮ ಪರಿಪಾಲಕನೇ! ನೀನು ಅವತೀರ್ಣಗೊಳಿಸಿದ ಸಂದೇಶದಲ್ಲಿ ನಾವು ವಿಶ್ವಾಸವಿಟ್ಟಿದ್ದೇವೆ. ನಾವು ನಿನ್ನ ಸಂದೇಶವಾಹಕರನ್ನು ಅನುಸರಿಸಿದ್ದೇವೆ. ಆದ್ದರಿಂದ ನಮ್ಮನ್ನು ಸಾಕ್ಷಿಗಳಲ್ಲಿ ದಾಖಲಿಸು.”
Âl-i İmran 3:54
ಅವರು (ಸತ್ಯನಿಷೇಧಿಗಳು) ತಂತ್ರಗಾರಿಕೆ ಮಾಡಿದರು. ಅಲ್ಲಾಹು ಕೂಡ ತಂತ್ರಗಾರಿಕೆ ಮಾಡಿದನು. ಅಲ್ಲಾಹು ತಂತ್ರಗಾರಿಕೆ ಮಾಡುವುದರಲ್ಲಿ ಅತ್ಯುತ್ತಮನಾಗಿದ್ದಾನೆ.
Âl-i İmran 3:55
ಅಲ್ಲಾಹು ಹೇಳಿದ ಸಂದರ್ಭ: “ಓ ಈಸಾ! ನಿಶ್ಚಯವಾಗಿಯೂ ನಾನು ನಿಮ್ಮನ್ನು ಪೂರ್ಣವಾಗಿ ವಹಿಸಿಕೊಳ್ಳುವೆನು, ನಿಮ್ಮನ್ನು ನನ್ನ ಬಳಿಗೆ ಎತ್ತಿಕೊಳ್ಳುವೆನು ಮತ್ತು ಸತ್ಯನಿಷೇಧಿಗಳಿಂದ ನಿಮ್ಮನ್ನು ಪರಿಶುದ್ಧಗೊಳಿಸುವೆನು. ನಿಮ್ಮ ಅನುಯಾಯಿಗಳನ್ನು ಪುನರುತ್ಥಾನ ದಿನದವರೆಗೂ ಸತ್ಯನಿಷೇಧಿಗಳ ಮೇಲೆ ಪ್ರಬಲರನ್ನಾಗಿ ಮಾಡುವೆನು. ನಂತರ ನೀವು ನನ್ನ ಬಳಿಗೆ ಮರಳುವಿರಿ. ಆಗ ನೀವು ಭಿನ್ನಾಭಿಪ್ರಾಯ ತಳೆದ ವಿಷಯಗಳಲ್ಲಿ ನಾನು ನಿಮ್ಮ ನಡುವೆ ತೀರ್ಪು ನೀಡುವೆನು.
Âl-i İmran 3:56
ಸತ್ಯನಿಷೇಧಿಗಳು ಯಾರೋ—ಅವರಿಗೆ ನಾನು ಇಹಲೋಕದಲ್ಲೂ, ಪರಲೋಕದಲ್ಲೂ ಕಠೋರ ಶಿಕ್ಷೆಯನ್ನು ನೀಡುವೆನು. ಅವರಿಗೆ ಯಾವುದೇ ಸಹಾಯಕರಿಲ್ಲ.”
Âl-i İmran 3:57
ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ—ಅವರಿಗೆ ಅಲ್ಲಾಹು ಅವರ ಪ್ರತಿಫಲವನ್ನು ಪೂರ್ಣವಾಗಿ ನೀಡುವನು. ಅಲ್ಲಾಹು ಅಕ್ರಮವೆಸಗುವವರನ್ನು ಇಷ್ಟಪಡುವುದಿಲ್ಲ.
Âl-i İmran 3:58
ನಾವು ನಿಮಗೆ ಓದಿಕೊಡುತ್ತಿರುವ ಈ ವಿಷಯಗಳು ಅಲ್ಲಾಹನ ವಚನಗಳಲ್ಲಿ ಮತ್ತು ವಿವೇಕಪೂರ್ಣ ಉಪದೇಶಗಳಲ್ಲಿ ಸೇರಿದ್ದಾಗಿವೆ.
Âl-i İmran 3:59
ಅಲ್ಲಾಹನ ದೃಷ್ಟಿಯಲ್ಲಿ ಈಸಾರ ಉದಾಹರಣೆಯು ಆದಮರಂತೆ. ಅವನು ಆದಮರನ್ನು ಮಣ್ಣಿನಿಂದ ಸೃಷ್ಟಿಸಿದನು. ನಂತರ ಅವರೊಡನೆ ಉಂಟಾಗು ಎಂದನು. ಆಗ ಅವರು ಉಂಟಾದರು.
Âl-i İmran 3:60
ಇದು ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಸತ್ಯವಾಗಿದೆ. ಆದ್ದರಿಂದ ನೀವು ಸಂಶಯಪಡುವವರಲ್ಲಿ ಸೇರಲೇಬೇಡಿ.
Âl-i İmran 3:61
ನಿಮ್ಮ ಬಳಿಗೆ ಜ್ಞಾನವು ಬಂದ ಬಳಿಕವೂ ಅವರ (ಈಸಾರ) ವಿಷಯದಲ್ಲಿ ಯಾರಾದರೂ ನಿಮ್ಮೊಂದಿಗೆ ತರ್ಕಿಸಿದರೆ ನೀವು ಹೇಳಿರಿ: “ಬನ್ನಿ! ನಾವು ನಮ್ಮ ಮಕ್ಕಳನ್ನು ಮತ್ತು ನಿಮ್ಮ ಮಕ್ಕಳನ್ನು, ನಮ್ಮ ಮಹಿಳೆಯರನ್ನು ಮತ್ತು ನಿಮ್ಮ ಮಹಿಳೆಯರನ್ನು, ನಮ್ಮನ್ನು ಮತ್ತು ನಿಮ್ಮನ್ನು (ಎಲ್ಲರನ್ನೂ) ಕರೆದು ಒಟ್ಟುಗೂಡೋಣ. ನಂತರ ಮನಸಾರೆ ಪ್ರಾರ್ಥಿಸಿ ಸುಳ್ಳು ಹೇಳುವವರ ಮೇಲೆ ಅಲ್ಲಾಹನ ಶಾಪವವಿರಲೆಂದು ಬೇಡಿಕೊಳ್ಳೋಣ.”[1]
———
[1] ಈ ವಚನವನ್ನು ಆಯತುಲ್ ಮುಬಾಹಲ (ಶಾಪಪ್ರಾರ್ಥನೆಯ ವಚನ) ಎಂದು ಕರೆಯಲಾಗುತ್ತದೆ. ಎರಡು ಗುಂಪುಗಳ ನಡುವೆ ಭಿನ್ನಮತವಿರುವ ಒಂದು ವಿಷಯವು ಮಾತುಕತೆಯಿಂದ ಅಥವಾ ಇತರ ವಿಧಾನಗಳಿಂದ ಪರಿಹಾರವಾಗದೆ, ಎರಡು ಗುಂಪುಗಳೂ ನಾವೇ ಸತ್ಯದಲ್ಲಿರುವವರು ಎಂದು ಹಟ ಹಿಡಿದರೆ, ಆ ಎರಡು ಗುಂಪುಗಳು ಸೇರಿ ಅಸತ್ಯದಲ್ಲಿರುವ ಗುಂಪಿನ ಮೇಲೆ ಅಲ್ಲಾಹನ ಶಾಪವಿರಲಿ ಎಂದು ಅಲ್ಲಾಹನಲ್ಲಿ ಮನಸಾರೆ ಪ್ರಾರ್ಥಿಸುವುದನ್ನು ಶಾಪ ಪ್ರಾರ್ಥನೆ ಎನ್ನಲಾಗುತ್ತದೆ.
Âl-i İmran 3:62
ನಿಶ್ಚಯವಾಗಿಯೂ ಇದು ಸತ್ಯ ನಿರೂಪಣೆಯಾಗಿದೆ. ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
Âl-i İmran 3:63
ಅದರ ಬಳಿಕವೂ ಅವರು ವಿಮುಖರಾದರೆ—ನಿಶ್ಚಯವಾಗಿಯೂ ಅಲ್ಲಾಹು ಕಿಡಿಗೇಡಿಗಳ ಬಗ್ಗೆ ತಿಳಿದವನಾಗಿದ್ದಾನೆ.
Âl-i İmran 3:64
ಹೇಳಿರಿ: “ಓ ಗ್ರಂಥದವರೇ! ನಮ್ಮ ಮತ್ತು ನಿಮ್ಮ ನಡುವೆ ಸಮಾನವಾಗಿರುವ ವಚನದ ಕಡೆಗೆ ಬನ್ನಿರಿ. ಅಂದರೆ ನಾವು ಅಲ್ಲಾಹನ ಹೊರತು (ಇನ್ನಾರನ್ನೂ) ಆರಾಧಿಸದಿರೋಣ, ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡದಿರೋಣ ಮತ್ತು ನಮ್ಮಲ್ಲಿ ಒಬ್ಬರು ಇನ್ನೊಬ್ಬರನ್ನು ಅಲ್ಲಾಹನ ಹೊರತಾಗಿರುವ ಪರಿಪಾಲಕರನ್ನಾಗಿ ಮಾಡದಿರೋಣ.” ಅದರ ಬಳಿಕವೂ ಅವರು ವಿಮುಖರಾದರೆ (ಅವರೊಡನೆ) ಹೇಳಿರಿ: “ನಾವು ಮುಸ್ಲಿಮರಾಗಿದ್ದೇವೆ ಎಂಬುದಕ್ಕೆ ನೀವು ಸಾಕ್ಷಿಗಳಾಗಿರಿ.”
Âl-i İmran 3:65
ಓ ಗ್ರಂಥದವರೇ! ನೀವು ಇಬ್ರಾಹೀಮರ ವಿಷಯದಲ್ಲಿ ಏಕೆ ತರ್ಕಿಸುತ್ತೀರಿ?[1] ತೌರಾತ್ ಮತ್ತು ಇಂಜೀಲ್ ಅವತೀರ್ಣವಾದದ್ದು ಅವರ ನಂತರವಲ್ಲವೇ! ನೀವು ಆಲೋಚಿಸುವುದಿಲ್ಲವೇ?
———
[1] ಇಬ್ರಾಹೀಮ್ (ಅವರ ಮೇಲೆ ಶಾಂತಿಯಿರಲಿ) ಯಹೂದಿಯಾಗಿದ್ದರು ಎಂದು ಯಹೂದಿಗಳು ಹೇಳುತ್ತಿದ್ದರು ಮತ್ತು ಅವರು ಕ್ರೈಸ್ತರಾಗಿದ್ದರು ಎಂದು ಕ್ರೈಸ್ತರು ಹೇಳುತ್ತಿದ್ದರು. ವಾಸ್ತವವಾಗಿ ಯಹೂದಿಗಳು ನಂಬುವ ತೌರಾತ್ (ತೋರಾ) ಮತ್ತು ಕ್ರೈಸ್ತರು ನಂಬುವ ಇಂಜೀಲ್ (ಸುವಾರ್ತೆ) ಅವತೀರ್ಣವಾಗುವುದಕ್ಕೆ ಎಷ್ಟೋ ವರ್ಷಗಳ ಮೊದಲು ಇಬ್ರಾಹೀಮ್ (ಅವರ ಮೇಲೆ ಶಾಂತಿಯಿರಲಿ) ಜೀವಿಸಿದ್ದರು. ಹಾಗಿರುವಾಗ ಅವರು ಯಹೂದಿ ಅಥವಾ ಕ್ರೈಸ್ತರಾಗಲು ಹೇಗೆ ಸಾಧ್ಯ?
Âl-i İmran 3:66
ನಿಮಗೆ ಜ್ಞಾನವಿರುವ ವಿಷಯದಲ್ಲಿ ನೀವು ತರ್ಕಿಸಿದ್ದೀರಿ. ಆದರೆ ಈಗ ನಿಮಗೆ ಜ್ಞಾನವಿಲ್ಲದ ವಿಷಯದಲ್ಲಿ ನೀವೇಕೆ ತರ್ಕಿಸುತ್ತೀರಿ? ಅಲ್ಲಾಹು ತಿಳಿದಿದ್ದಾನೆ. ಆದರೆ ನೀವು ತಿಳಿದಿಲ್ಲ.
Âl-i İmran 3:67
ಇಬ್ರಾಹೀಮರು ಯಹೂದಿ ಅಥವಾ ಕ್ರಿಶ್ಚಿಯನ್ ಆಗಿರಲಿಲ್ಲ; ಆದರೆ ಅವರು ಏಕನಿಷ್ಠರು ಮತ್ತು ಮುಸ್ಲಿಮರಾಗಿದ್ದರು.[1] ಅವರು ಬಹುದೇವಾರಾಧಕರಲ್ಲಿ ಸೇರಿದವರಾಗಿರಲಿಲ್ಲ.
———
[1] ಮುಸ್ಲಿಮ್ ಎಂದರೆ ಅಲ್ಲಾಹನಿಗೆ ಸಂಪೂರ್ಣ ಶರಣಾದವನು. ಎಲ್ಲಾ ಪ್ರವಾದಿಗಳು ಮುಸ್ಲಿಮರಾಗಿದ್ದರು ಮತ್ತು ಅವರ ಧರ್ಮ ಇಸ್ಲಾಂ ಆಗಿತ್ತು.
Âl-i İmran 3:68
ನಿಶ್ಚಯವಾಗಿಯೂ ಜನರಲ್ಲಿ ಇಬ್ರಾಹೀಮರಿಗೆ ಹೆಚ್ಚು ಆಪ್ತರು ಯಾರೆಂದರೆ ಅವರನ್ನು ಅನುಸರಿಸಿದವರು; ಮತ್ತು ಈ ಪ್ರವಾದಿ ಹಾಗೂ (ಈ ಪ್ರವಾದಿಯಲ್ಲಿ) ವಿಶ್ವಾಸವಿಟ್ಟವರು. ಅಲ್ಲಾಹು ಸತ್ಯವಿಶ್ವಾಸಿಗಳ ರಕ್ಷಕನಾಗಿದ್ದಾನೆ.
Âl-i İmran 3:69
ಗ್ರಂಥದವರ ಒಂದು ಪಂಗಡವು ನಿಮ್ಮನ್ನು ದಾರಿತಪ್ಪಿಸಲು ಬಯಸುತ್ತಿದೆ. ಆದರೆ (ವಾಸ್ತವವಾಗಿ) ಅವರು ಅವರನ್ನೇ ದಾರಿತಪ್ಪಿಸುತ್ತಿದ್ದಾರೆ. ಅವರು ಅದನ್ನು ತಿಳಿಯುವುದಿಲ್ಲ.
Âl-i İmran 3:70
ಓ ಗ್ರಂಥದವರೇ! ನೀವು ಸಾಕ್ಷಿಗಳಾಗಿದ್ದೂ ಕೂಡ ನೀವೇಕೆ ಅಲ್ಲಾಹನ ವಚನಗಳನ್ನು ನಿಷೇಧಿಸುತ್ತೀರಿ?
Âl-i İmran 3:71
ಓ ಗ್ರಂಥದವರೇ! ನೀವು ಸತ್ಯವನ್ನು ಅಸತ್ಯದೊಂದಿಗೆ ಏಕೆ ಬೆರೆಸುತ್ತೀರಿ ಮತ್ತು ತಿಳಿದೂ ಕೂಡ ಸತ್ಯವನ್ನೇಕೆ ಮುಚ್ಚಿಡುತ್ತೀರಿ?
Âl-i İmran 3:72
ಗ್ರಂಥದವರ ಒಂದು ಪಂಗಡವು (ಪರಸ್ಪರ) ಹೇಳುತ್ತಾರೆ: “ಹಗಲಿನ ಆರಂಭದಲ್ಲಿ (ಬೆಳಗ್ಗೆ) ಸತ್ಯವಿಶ್ವಾಸಿಗಳಿಗೆ ಅವತೀರ್ಣವಾದ ಸಂದೇಶದಲ್ಲಿ ವಿಶ್ವಾಸವಿಡಿ ಮತ್ತು ಹಗಲಿನ ಕೊನೆಯಲ್ಲಿ (ಸಂಜೆಯಾಗುವಾಗ) ನಿಷೇಧಿಸಿ ಬಿಡಿ. ಆಗ ಅವರು ಮರಳಿಬರಲೂಬಹುದು.”[1]
———
[1] ಇದು ಯಹೂದಿಗಳ ಒಂದು ಕುತಂತ್ರ. ಇದರಿಂದ ಅವರು ಮುಸಲ್ಮಾನರನ್ನು ದಾರಿತಪ್ಪಿಸಲು ಬಯಸುತ್ತಿದ್ದರು. ಅವರಲ್ಲೊಬ್ಬರು ಬೆಳಗ್ಗೆ ಇಸ್ಲಾಂ ಸ್ವೀಕರಿಸಿ ಮುಸಲ್ಮಾನರಾಗುತ್ತಿದ್ದರು. ಆದರೆ ಸಂಜೆಯಾಗುತ್ತಿದ್ದಂತೆ ಪುನಃ ಯಹೂದಿ ಧರ್ಮಕ್ಕೆ ಮರಳುತ್ತಿದ್ದರು. ಬೆಳಗ್ಗೆ ಮುಸಲ್ಮಾನರಾದವರು ಸಂಜೆ ಇಸ್ಲಾಂನಿಂದ ಹೊರಹೋಗಬೇಕಾದರೆ ಇಸ್ಲಾಂ ಧರ್ಮದಲ್ಲಿ ನಾವು ತಿಳಿಯದ ಏನೋ ಕೊರತೆಯಿದೆ ಎಂದು ಮುಸಲ್ಮಾನರು ಭಾವಿಸುವಂತಾಗಲು ಅವರು ಹೀಗೆ ಮಾಡುತ್ತಿದ್ದರು.
Âl-i İmran 3:73
(ಅವರು ಪರಸ್ಪರ ಹೇಳುತ್ತಾರೆ:) “ನಿಮ್ಮ ಧರ್ಮದ ಅನುಯಾಯಿಗಳನ್ನು ಬಿಟ್ಟು ಬೇರೆ ಯಾರನ್ನೂ ನೀವು ನಂಬಬೇಡಿ.” ಹೇಳಿರಿ: “ನಿಶ್ಚಯವಾಗಿಯೂ ಅಲ್ಲಾಹನ ಮಾರ್ಗದರ್ಶನವೇ ನಿಜವಾದ ಮಾರ್ಗದರ್ಶನ.” (ಅವರು ಪರಸ್ಪರ ಹೇಳುತ್ತಾರೆ): “ನಿಮಗೆ ನೀಡಲಾದಂತಹ (ಗ್ರಂಥವನ್ನು) ಬೇರೆ ಯಾರಿಗಾದರೂ ನೀಡಲಾಗಬಹುದು; ಅಥವಾ ಅವರು ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ನಿಮ್ಮೊಡನೆ ತರ್ಕಿಸುವರು ಎಂದು (ನೀವು ನಂಬಲೇಬೇಡಿ).” ಹೇಳಿರಿ: “ನಿಶ್ಚಯವಾಗಿಯೂ ಔದಾರ್ಯವಿರುವುದು ಅಲ್ಲಾಹನ ಕೈಯಲ್ಲಿ. ಅವನು ಇಚ್ಛಿಸುವವರಿಗೆ ಅವನು ಅದನ್ನು ದಯಪಾಲಿಸುತ್ತಾನೆ. ಅಲ್ಲಾಹು ವಿಶಾಲನು ಮತ್ತು ಸರ್ವಜ್ಞನಾಗಿದ್ದಾನೆ.”
Âl-i İmran 3:74
ಅವನು ತನ್ನ ದಯೆಯಿಂದ ಅವನು ಇಚ್ಛಿಸುವವರನ್ನು ವಿಶೇಷವಾಗಿ ಅನುಗ್ರಹಿಸುತ್ತಾನೆ. ಅಲ್ಲಾಹು ಮಹಾ ಔದಾರ್ಯದ ಒಡೆಯನಾಗಿದ್ದಾನೆ.
Âl-i İmran 3:75
ಗ್ರಂಥದವರಲ್ಲಿ ಕೆಲವರಿದ್ದಾರೆ. ನೀವು ಅವರ ಮೇಲೆ ನಂಬಿಕೆಯಿಟ್ಟು ಬಂಗಾರದ ರಾಶಿಯನ್ನು ತೆಗೆದಿಡಲು ಕೊಟ್ಟರೂ (ನೀವು ಕೇಳುವಾಗ) ಅವರು ಅದನ್ನು ನಿಮಗೆ ಹಿಂದಿರುಗಿಸುತ್ತಾರೆ. ಆದರೆ ಅವರಲ್ಲಿ ಬೇರೆ ಕೆಲವರಿದ್ದಾರೆ. ನೀವು ಅವರ ಮೇಲೆ ನಂಬಿಕೆಯಿಟ್ಟು ಒಂದು ಬಂಗಾರದ ನಾಣ್ಯವನ್ನು ತೆಗೆದಿಡಲು ಕೊಟ್ಟರೆ, ಪದೇ ಪದೇ ಕೇಳದೆ ಅವರು ಅದನ್ನು ನಿಮಗೆ ಹಿಂದಿರುಗಿಸುವುದಿಲ್ಲ. ಅದೇಕೆಂದರೆ ಅವರು ಹೇಳುತ್ತಾರೆ: “ಆ ಅನಕ್ಷರಸ್ಥರಿಗೆ (ಯಹೂದಿಗಳಲ್ಲದವರಿಗೆ) ಸಂಬಂಧಿಸಿದ ಯಾವುದೇ ವಿಷಯದಲ್ಲೂ ನಮಗೆ ಶಿಕ್ಷೆಯಿಲ್ಲ.” ಅವರು ತಿಳಿದೂ ಸಹ ಅಲ್ಲಾಹನ ಹೆಸರಲ್ಲಿ ಸುಳ್ಳು ಹೇಳುತ್ತಾರೆ.
Âl-i İmran 3:76
ಹೌದು (ಅವರಿಗೆ ಶಿಕ್ಷೆಯಿದೆ). ಯಾರು ತನ್ನ ಕರಾರನ್ನು ನೆರವೇರಿಸುತ್ತಾರೋ ಮತ್ತು ಅಲ್ಲಾಹನನ್ನು ಭಯಪಡುತ್ತಾರೋ—ನಿಶ್ಚಯವಾಗಿಯೂ ಅಲ್ಲಾಹು ದೇವಭಯವುಳ್ಳವರನ್ನು ಪ್ರೀತಿಸುತ್ತಾನೆ.
Âl-i İmran 3:77
ನಿಶ್ಚಯವಾಗಿಯೂ ಅಲ್ಲಾಹನ ಕರಾರನ್ನು ಮತ್ತು ತಮ್ಮ ಆಣೆಗಳನ್ನು ಕೀಳು ದರಕ್ಕೆ ಮಾರಾಟ ಮಾಡುವವರು ಯಾರೋ—ಅವರಿಗೆ ಪರಲೋಕದಲ್ಲಿ ಯಾವುದೇ ಪಾಲಿಲ್ಲ. ಪುನರುತ್ಥಾನ ದಿನದಂದು ಅಲ್ಲಾಹು ಅವರೊಡನೆ ಮಾತನಾಡುವುದಿಲ್ಲ, ಅವರ ಕಡೆಗೆ ದೃಷ್ಟಿ ಬೀರುವುದಿಲ್ಲ ಮತ್ತು ಅವರನ್ನು ಶುದ್ಧೀಕರಿಸುವುದಿಲ್ಲ. ಅವರಿಗೆ ಯಾತನಾಮಯ ಶಿಕ್ಷೆಯಿದೆ.
Âl-i İmran 3:78
ನಿಶ್ಚಯವಾಗಿಯೂ ಅವರಲ್ಲೊಂದು ಪಂಗಡವು ಗ್ರಂಥವನ್ನು ಪಠಿಸುವಾಗ ತಮ್ಮ ನಾಲಗೆಯನ್ನು ತಿರುಚುತ್ತಾರೆ. ಅದು ಗ್ರಂಥದ ಭಾಗವೆಂದು ನೀವು ಭಾವಿಸುವುದಕ್ಕಾಗಿ. ಆದರೆ ಅದು ಗ್ರಂಥದ ಭಾಗವಲ್ಲ. ಅವರು ಹೇಳುತ್ತಾರೆ: “ಅದು ಅಲ್ಲಾಹನ ಕಡೆಯಿಂದ ಬಂದಿದೆ.” ಆದರೆ ಅದು ಅಲ್ಲಾಹನ ಕಡೆಯಿಂದ ಬಂದಿಲ್ಲ. ಅವರು ತಿಳಿದೂ ಸಹ ಅಲ್ಲಾಹನ ಹೆಸರಲ್ಲಿ ಸುಳ್ಳು ಹೇಳುತ್ತಾರೆ.[1]
———
[1] ಯಹೂದಿಗಳು ಅವರ ಧರ್ಮಗ್ರಂಥವನ್ನು ತಿದ್ದುಪಡಿ ಮಾಡಿದ್ದು ಮಾತ್ರವಲ್ಲದೆ, ಜನಸಾಮಾನ್ಯರ ಮುಂದೆ ಅದನ್ನು ಪಠಿಸುವಾಗ ತಮ್ಮ ನಾಲಗೆಯನ್ನು ತಿರುಚಿ ಜನರು ಬೇರೆ ಅರ್ಥವನ್ನು ಭಾವಿಸುವಂತೆ ಮಾಡುತ್ತಿದ್ದರು. ಅದೇ ರೀತಿ ಅವರು ತಮ್ಮ ಕೆಲವು ಮಾತುಗಳನ್ನು ಅಲ್ಲಾಹನ ವಚನಗಳೆಂದು ಸುಳ್ಳು ಹೇಳುತ್ತಿದ್ದರು.
Âl-i İmran 3:79
ಅಲ್ಲಾಹು ಒಬ್ಬ ಮನುಷ್ಯನಿಗೆ (ಪ್ರವಾದಿಗೆ) ಗ್ರಂಥ, ವಿವೇಕ ಮತ್ತು ಪ್ರವಾದಿತ್ವವನ್ನು ನೀಡಿ, ನಂತರ ಅವರು ಜನರೊಡನೆ, “ನೀವು ಅಲ್ಲಾಹನನ್ನು ಬಿಟ್ಟು ನನ್ನ ದಾಸರಾಗಿರಿ” ಎಂದು ಹೇಳುವುದು ಉಂಟಾಗಲಾರದು. ಬದಲಿಗೆ, (ಅವರು ಹೇಳುವುದೇನೆಂದರೆ): “ನೀವು ಗ್ರಂಥವನ್ನು ಕಲಿಸುತ್ತಿರುವುದರಿಂದ ಮತ್ತು ನೀವು ಸ್ವತಃ ಅದನ್ನು ಕಲಿಯುತ್ತಿರುವುದರಿಂದ ನೀವು ಅಲ್ಲಾಹನ ದಾಸರಾಗಿರಿ.”
Âl-i İmran 3:80
ನೀವು ದೇವದೂತರುಗಳನ್ನು ಮತ್ತು ಪ್ರವಾದಿಗಳನ್ನು ದೇವರುಗಳನ್ನಾಗಿ ಮಾಡಿಕೊಳ್ಳಿರಿ ಎಂದು ಅವರು (ಪ್ರವಾದಿ) ನಿಮಗೆ ಆದೇಶಿಸುವುದಿಲ್ಲ. ನೀವು ಮುಸ್ಲಿಮರಾದ ಬಳಿಕ ಅವರು ನಿಮಗೆ ಸತ್ಯನಿಷೇಧಿಗಳಾಗಲು ಆದೇಶಿಸುವರೇ?
Âl-i İmran 3:81
ಅಲ್ಲಾಹು ಪ್ರವಾದಿಗಳಿಂದ ಕರಾರನ್ನು ಪಡೆದ ಸಂದರ್ಭ: “ನಾನು ನಿಮಗೆ ಗ್ರಂಥ ಮತ್ತು ವಿವೇಕವನ್ನು ನೀಡಿ, ನಂತರ ನಿಮ್ಮ ಬಳಿಯಿರುವುದನ್ನು ದೃಢೀಕರಿಸುವ ಒಬ್ಬ ಸಂದೇಶವಾಹಕರು ನಿಮ್ಮ ಬಳಿಗೆ ಬಂದರೆ, ನೀವು ಅವರಲ್ಲಿ ವಿಶ್ವಾಸವಿಡಲೇಬೇಕು ಮತ್ತು ಅವರಿಗೆ ಸಹಾಯ ಮಾಡಲೇಬೇಕು.” ಅಲ್ಲಾಹು ಕೇಳಿದನು: “ಇದನ್ನು ಒಪ್ಪಿಕೊಂಡು ಈ ವಿಷಯದಲ್ಲಿ ನನ್ನ ಹೊಣೆಗಾರಿಕೆಯನ್ನು ನಿಭಾಯಿಸುವಿರಾ?” ಅವರು ಉತ್ತರಿಸಿದರು: “ನಾವು ಒಪ್ಪಿಕೊಂಡಿದ್ದೇವೆ.” ಅಲ್ಲಾಹು ಹೇಳಿದನು: “ಹಾಗಾದರೆ ನೀವು ಅದಕ್ಕೆ ಸಾಕ್ಷಿಗಳಾಗಿರಿ. ನಾನೂ ನಿಮ್ಮೊಂದಿಗೆ ಸಾಕ್ಷಿಯಾಗಿರುವೆನು.”[1]
———
[1] ಅಲ್ಲಾಹು ಪ್ರತಿಯೊಬ್ಬ ಪ್ರವಾದಿಯಿಂದಲೂ ಈ ಕರಾರನ್ನು ಪಡೆದಿದ್ದನು. ಈ ಕರಾರಿನ ಪ್ರಕಾರ ಒಬ್ಬ ಪ್ರವಾದಿ ಅಸ್ತಿತ್ವದಲ್ಲಿರುವಾಗ, ಅಥವಾ ಅವರ ಬೋಧನೆಯು ಅಸ್ತಿತ್ವದಲ್ಲಿರುವಾಗ, ಹೊಸ ಪ್ರವಾದಿಯ ಆಗಮನವಾದರೆ ಆ ಪ್ರವಾದಿ ತನ್ನ ಬೋಧನೆಯನ್ನು ನಿಲ್ಲಿಸಿ ಆ ಹೊಸ ಪ್ರವಾದಿಯನ್ನು ಅನುಸರಿಸಬೇಕು. ಒಬ್ಬ ಪ್ರವಾದಿಗೆ ತನ್ನ ನಂತರ ಬರುವ ಹೊಸ ಪ್ರವಾದಿಯನ್ನು ಅನುಸರಿಸುವುದು ಕಡ್ಡಾಯವಾದರೆ ಅವರ ಅನುಯಾಯಿಗಳಿಗೂ ಅದು ಕಡ್ಡಾಯವಾಗಿದೆಯೆಂದು ಬೇರೆಯೇ ಹೇಳಬೇಕಾಗಿಲ್ಲ. ಆದ್ದರಿಂದ ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರ ಆಗಮನದ ನಂತರ ಹಿಂದಿನ ಪ್ರವಾದಿಗಳ ಬೋಧನೆಗಳೆಲ್ಲವೂ ಅನೂರ್ಜಿತವಾಗುತ್ತವೆ ಮತ್ತು ಆ ಎಲ್ಲಾ ಪ್ರವಾದಿಗಳು ಮತ್ತು ಅವರ ಅನುಯಾಯಿಗಳು ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರ ಬೋಧನೆಗಳನ್ನು ಅನುಸರಿಸಬೇಕಾಗುತ್ತದೆ.
Âl-i İmran 3:82
ಅದರ ನಂತರವೂ ಯಾರಾದರೂ ವಿಮುಖರಾದರೆ ಅವರೇ ದುಷ್ಕರ್ಮಿಗಳು.
Âl-i İmran 3:83
ಅವರು ಅಲ್ಲಾಹನದ್ದಲ್ಲದ ಬೇರೆ ಧರ್ಮವನ್ನು ಹುಡುಕುತ್ತಿದ್ದಾರೆಯೇ? (ವಾಸ್ತವವಾಗಿ) ಭೂಮ್ಯಾಕಾಶಗಳಲ್ಲಿರುವ ಎಲ್ಲರೂ ಸ್ವಯಂಪ್ರೇರಿತವಾಗಿ ಅಥವಾ ಬಲವಂತವಾಗಿ ಅವನಿಗೆ ಶರಣಾಗಿದ್ದಾರೆ. ಅವರೆಲ್ಲರೂ ಅವನ ಬಳಿಗೇ ಮರಳಿಹೋಗುವರು.
Âl-i İmran 3:84
ಹೇಳಿರಿ: “ನಾವು ಅಲ್ಲಾಹನಲ್ಲಿ, ನಮಗೆ ಅವತೀರ್ಣವಾಗಿರುವುದರಲ್ಲಿ, ಇಬ್ರಾಹೀಮರಿಗೆ, ಇಸ್ಮಾಈಲರಿಗೆ, ಇಸ್‍ಹಾಕರಿಗೆ, ಯಾಕೂಬರಿಗೆ ಮತ್ತು ಯಾಕೂಬರ ಸಂತಾನಕ್ಕೆ ಅವತೀರ್ಣವಾಗಿರುವುದರಲ್ಲಿ, ಮೂಸಾ ಮತ್ತು ಈಸಾರಿಗೆ ನೀಡಲಾಗಿರುವುದರಲ್ಲಿ, ಎಲ್ಲಾ ಪ್ರವಾದಿಗಳಿಗೂ ಅವರ ಪರಿಪಾಲಕನ ಕಡೆಯಿಂದ ನೀಡಲಾಗಿರುವುದರಲ್ಲಿ ವಿಶ್ವಾಸವಿಟ್ಟಿದ್ದೇವೆ. ಅವರಲ್ಲಿ ಯಾರ ನಡುವೆಯೂ ನಾವು ಬೇಧ ಮಾಡುವುದಿಲ್ಲ. ನಾವು ಅಲ್ಲಾಹನಿಗೆ ಸಂಪೂರ್ಣ ಶರಣಾಗಿದ್ದೇವೆ.”
Âl-i İmran 3:85
ಯಾರು ಇಸ್ಲಾಂ ಅಲ್ಲದ ಬೇರೊಂದು ಧರ್ಮವನ್ನು ಹುಡುಕುತ್ತಾನೋ—ಅವನಿಂದ ಅದನ್ನು ಎಂದಿಗೂ ಸ್ವೀಕರಿಸಲಾಗುವುದಿಲ್ಲ. ಪರಲೋಕದಲ್ಲಿ ಅವನು ನಷ್ಟ ಹೊಂದಿದವರಲ್ಲಿ ಸೇರುವನು.
Âl-i İmran 3:86
ಸತ್ಯವಿಶ್ವಾಸವನ್ನು ಸ್ವೀಕರಿಸಿ, ಸಂದೇಶವಾಹಕರನ್ನು ಸತ್ಯವೆಂದು ಸಾಕ್ಷ್ಯವಹಿಸಿ, ನಂತರ ತಮ್ಮ ಬಳಿಗೆ ಸ್ಪಷ್ಟ ಸಾಕ್ಷ್ಯಾಧಾರಗಳು ಬಂದ ಬಳಿಕವೂ ಸತ್ಯನಿಷೇಧಿಗಳಾದ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಾದರೂ ಹೇಗೆ? ಅಕ್ರಮವೆಸಗುವ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.
Âl-i İmran 3:87
ಅವರ ಮೇಲೆ ಅಲ್ಲಾಹನ, ದೇವದೂತರ ಮತ್ತು ಜನರೆಲ್ಲರ ಶಾಪವಿರುವುದೇ ಅವರಿಗಿರುವ ಪ್ರತಿಫಲವಾಗಿದೆ.
Âl-i İmran 3:88
ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅವರಿಗೆ ಶಿಕ್ಷೆಯಲ್ಲಿ ರಿಯಾಯಿತಿಯಿಲ್ಲ ಮತ್ತು ಅವರಿಗೆ ವಿರಾಮವನ್ನೂ ನೀಡಲಾಗುವುದಿಲ್ಲ.
Âl-i İmran 3:89
ಆದರೆ ಯಾರು ಅದರ ಬಳಿಕ ಪಶ್ಚಾತ್ತಾಪಪಟ್ಟು, ಸ್ವಯಂ ತಿದ್ದಿಕೊಳ್ಳುತ್ತಾರೋ—ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
Âl-i İmran 3:90
ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳಾದ ಬಳಿಕ ಸತ್ಯನಿಷೇಧಿಗಳಾದವರು ಮತ್ತು ತಮ್ಮ ಸತ್ಯನಿಷೇಧವನ್ನು ಹೆಚ್ಚಿಸುತ್ತಲೇ ಇರುವವರು ಯಾರೋ—ಅವರ ಪಶ್ಚಾತ್ತಾಪವು ಎಂದಿಗೂ ಸ್ವೀಕಾರವಾಗುವುದಿಲ್ಲ. ಅವರೇ ದಾರಿತಪ್ಪಿದವರು.
Âl-i İmran 3:91
ಸತ್ಯನಿಷೇಧಿಗಳು ಮತ್ತು ಸತ್ಯನಿಷೇಧಿಗಳಾಗಿಯೇ ಸಾಯುವವರು ಯಾರೋ—ಅವರಲ್ಲೊಬ್ಬನು ಭೂಮಿ ತುಂಬಾ ಬಂಗಾರವನ್ನು ಪರಿಹಾರವಾಗಿ ನೀಡಿದರೂ ಸಹ ಅವನಿಂದ ಅದನ್ನು ಎಂದಿಗೂ ಸ್ವೀಕರಿಸಲಾಗುವುದಿಲ್ಲ. ಅವರಿಗೆ ಯಾತನಾಮಯ ಶಿಕ್ಷೆಯಿದೆ. ಅವರಿಗೆ ಯಾವುದೇ ಸಹಾಯಕರಿಲ್ಲ.
Âl-i İmran 3:92
ನೀವು ಇಷ್ಟಪಡುವ ವಸ್ತುಗಳಿಂದ ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವ ತನಕ ನೀವೆಂದೂ ಒಳಿತನ್ನು ಗಳಿಸುವುದಿಲ್ಲ. ನೀವು ಯಾವುದೇ ವಸ್ತುವನ್ನು ಖರ್ಚು (ದಾನ) ಮಾಡಿದರೂ ನಿಶ್ಚಯವಾಗಿಯೂ ಅಲ್ಲಾಹು ಅದನ್ನು ತಿಳಿಯುತ್ತಾನೆ.
Âl-i İmran 3:93
ಇಸ್ರಾಯೇಲ್ ಮಕ್ಕಳಿಗೆ ಎಲ್ಲಾ ಆಹಾರಗಳೂ ಧರ್ಮಸಮ್ಮತವಾಗಿದ್ದವು—ತೌರಾತ್ ಅವತೀರ್ಣವಾಗುವ ಮುನ್ನ ಇಸ್ರಾಈಲರು (ಯಾಕೂಬರು) ಸ್ವಯಂ ನಿಷೇಧಿಸಿದವುಗಳ ಹೊರತು. ಹೇಳಿರಿ: “ನೀವು ತೌರಾತನ್ನು ತಂದು ಅದನ್ನು ಪಠಿಸಿರಿ; ನೀವು ಸತ್ಯವಂತರಾಗಿದ್ದರೆ.”
Âl-i İmran 3:94
ಅದರ ಬಳಿಕವೂ ಯಾರು ಅಲ್ಲಾಹನ ಮೇಲೆ ಸುಳ್ಳು ಆರೋಪಿಸುತ್ತಾರೋ—ಅವರೇ ಅಕ್ರಮಿಗಳು.
Âl-i İmran 3:95
ಹೇಳಿರಿ: “ಅಲ್ಲಾಹು ಸತ್ಯವನ್ನೇ ಹೇಳಿದ್ದಾನೆ. ಆದ್ದರಿಂದ, ನೀವು ಏಕನಿಷ್ಠರಾದ ಇಬ್ರಾಹೀಮರ ಮಾರ್ಗವನ್ನು ಹಿಂಬಾಲಿಸಿರಿ. ಅವರು ಬಹುದೇವಾರಾಧಕರಲ್ಲಿ ಸೇರಿದವರಾಗಿರಲಿಲ್ಲ.”
Âl-i İmran 3:96
ನಿಶ್ಚಯವಾಗಿಯೂ ಮಕ್ಕಾದಲ್ಲಿರುವ ಭವನವು ಮನುಷ್ಯರಿಗಾಗಿ ಸ್ಥಾಪಿಸಲಾದ ಮೊಟ್ಟಮೊದಲ ಆರಾಧನಾಲಯವಾಗಿದೆ. ಅದು ಸಮೃದ್ಧವೂ ಸರ್ವಲೋಕದವರಿಗೆ ಮಾರ್ಗದರ್ಶಿಯೂ ಆಗಿದೆ.
Âl-i İmran 3:97
ಅದರಲ್ಲಿ ಸ್ಪಷ್ಟವಾದ ದೃಷ್ಟಾಂತಗಳಿವೆ. (ಅದರಲ್ಲಿ) ಇಬ್ರಾಹೀಮರು ನಿಂತ ಸ್ಥಳವಿದೆ. ಅದನ್ನು ಪ್ರವೇಶಿಸಿದವನು ನಿರ್ಭಯನಾಗುತ್ತಾನೆ. ಆ ಭವನಕ್ಕೆ ತಲುಪಲು ಸಾಧ್ಯವಿರುವ ಜನರು ಅಲ್ಲಿಗೆ ತೆರಳಿ ಹಜ್ಜ್ ನಿರ್ವಹಿಸುವುದನ್ನು ಅಲ್ಲಾಹು ಕಡ್ಡಾಯಗೊಳಿಸಿದ್ದಾನೆ. ಆದರೆ ಯಾರಾದರೂ ಅದನ್ನು ನಿಷೇಧಿಸಿದರೆ—ನಿಶ್ಚಯವಾಗಿಯೂ ಅಲ್ಲಾಹು ಸರ್ವಲೋಕದವರಿಂದ ಸಂಪೂರ್ಣ ನಿರಪೇಕ್ಷನಾಗಿದ್ದಾನೆ.
Âl-i İmran 3:98
ಹೇಳಿರಿ: “ಓ ಗ್ರಂಥದವರೇ! ನೀವು ಅಲ್ಲಾಹನ ವಚನಗಳನ್ನು ಏಕೆ ನಿಷೇಧಿಸುತ್ತೀರಿ? ನೀವು ಮಾಡುವ ಎಲ್ಲಾ ಕಾರ್ಯಗಳಿಗೂ ಅಲ್ಲಾಹು ಸಾಕ್ಷಿಯಲ್ಲವೇ?”
Âl-i İmran 3:99
ಹೇಳಿರಿ: “ಓ ಗ್ರಂಥದವರೇ! ಸತ್ಯವಿಶ್ವಾಸ ಸ್ವೀಕರಿಸಿದವರನ್ನು ನೀವು ಅಲ್ಲಾಹನ ಮಾರ್ಗದಿಂದ ಏಕೆ ತಡೆಯುತ್ತೀರಿ ಮತ್ತು ಅದರಲ್ಲಿ ವಕ್ರತೆಯನ್ನು ಏಕೆ ಹುಡುಕುತ್ತೀರಿ? (ಅದು ನೇರವಾಗಿದೆ ಎಂಬುದಕ್ಕೆ) ನೀವೇ ಸಾಕ್ಷಿಗಳಾಗಿದ್ದೀರಿ. ನೀವು ಮಾಡುತ್ತಿರುವುದರ ಕುರಿತು ಅಲ್ಲಾಹು ತಿಳಿಯದವನಲ್ಲ.”
Âl-i İmran 3:100
ಓ ಸತ್ಯವಿಶ್ವಾಸಿಗಳೇ! ನೀವು ಗ್ರಂಥ ನೀಡಲಾದವರಲ್ಲಿ ಸೇರಿದ ಪಂಗಡವನ್ನು ಅನುಸರಿಸಿದರೆ, ನೀವು ಸತ್ಯವಿಶ್ವಾಸಿಗಳಾದ ಬಳಿಕವೂ ಅವರು ನಿಮ್ಮನ್ನು ಸತ್ಯನಿಷೇಧಿಗಳನ್ನಾಗಿ ಮಾಡುವರು.
Âl-i İmran 3:101
ನೀವು ಹೇಗೆ ಸತ್ಯನಿಷೇಧಿಗಳಾಗುವಿರಿ? ನಿಮಗೆ ಅಲ್ಲಾಹನ ವಚನಗಳನ್ನು ಓದಿಕೊಡಲಾಗುತ್ತಿದೆ ಮತ್ತು ನಿಮ್ಮ ನಡುವೆ ಅವನ ಸಂದೇಶವಾಹಕರಿದ್ದಾರೆ. ಯಾರು ಅಲ್ಲಾಹನನ್ನು (ಇಸ್ಲಾಂ ಧರ್ಮವನ್ನು) ಬಿಗಿಯಾಗಿ ಹಿಡಿಯುತ್ತಾನೋ ಅವನನ್ನು ನೇರಮಾರ್ಗಕ್ಕೆ ಮುನ್ನಡೆಸಲಾಗಿದೆ.
Âl-i İmran 3:102
ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನನ್ನು ಭಯಪಡಬೇಕಾದಂತೆಯೇ ಭಯಪಡಿರಿ. ಮುಸ್ಲಿಮರಾಗಿಯೇ ಹೊರತು ನೀವು ಇಹಲೋಕ ತ್ಯಜಿಸಬೇಡಿ.
Âl-i İmran 3:103
ನೀವೆಲ್ಲರೂ ಒಟ್ಟಾಗಿ ಅಲ್ಲಾಹನ ಹಗ್ಗವನ್ನು ಬಿಗಿಯಾಗಿ ಹಿಡಿಯಿರಿ. ವಿಭಿನ್ನ ಪಂಗಡಗಳಾಗಿ ಬೇರ್ಪಡಬೇಡಿ. ನೀವು ವೈರಿಗಳಾಗಿದ್ದಾಗ ಅಲ್ಲಾಹು ನಿಮಗೆ ದಯಪಾಲಿಸಿದ ಅನುಗ್ರಹವನ್ನು ಸ್ಮರಿಸಿರಿ. ಅವನು ನಿಮ್ಮ ಹೃದಯಗಳನ್ನು ಬೆಸೆದು, ಅವನ ಅನುಗ್ರಹದ ನಿಮಿತ್ತ ನೀವು ಪರಸ್ಪರ ಸಹೋದರರಾದಿರಿ. ನೀವು ಅಗ್ನಿಕುಂಡದ ಅಂಚಿನಲ್ಲಿದ್ದಿರಿ. ಆಗ ಅವನು ನಿಮ್ಮನ್ನು ಅದರಿಂದ ರಕ್ಷಿಸಿದನು. ಈ ರೀತಿ ಅಲ್ಲಾಹು ಅವನ ದೃಷ್ಟಾಂತಗಳನ್ನು ನಿಮಗೆ ವಿವರಿಸಿಕೊಡುತ್ತಾನೆ. ನೀವು ಸನ್ಮಾರ್ಗ ಪಡೆಯುವುದಕ್ಕಾಗಿ.
Âl-i İmran 3:104
ನಿಮ್ಮಲ್ಲಿ ಒಳಿತಿಗೆ ಆಮಂತ್ರಿಸುವ, ಒಳಿತನ್ನು ಆದೇಶಿಸುವ ಮತ್ತು ಕೆಡುಕನ್ನು ವಿರೋಧಿಸುವ ಒಂದು ಸಮುದಾಯವು ಉಂಟಾಗಲಿ. ಅವರೇ ಯಶಸ್ವಿಯಾದವರು.
Âl-i İmran 3:105
ತಮ್ಮ ಬಳಿಗೆ ಸ್ಪಷ್ಟ ಸಾಕ್ಷ್ಯಾಧಾರಗಳು ಬಂದ ಬಳಿಕವೂ ಪಂಗಡಗಳಾಗಿ ಬೇರ್ಪಟ್ಟು ಭಿನ್ನಮತ ತಳೆದವರಂತೆ ನೀವಾಗಬೇಡಿ. ಅವರಿಗೆ ಭಯಾನಕ ಶಿಕ್ಷೆಯಿದೆ.
Âl-i İmran 3:106
ಕೆಲವು ಮುಖಗಳು ಬೆಳ್ಳಗಾಗುವ ಮತ್ತು ಕೆಲವು ಮುಖಗಳು ಕರ್‍ರಗಾಗುವ ದಿನ! ಮುಖಗಳು ಕರ್‍ರಗಾದವರೊಡನೆ ಕೇಳಲಾಗುವುದು: “ನೀವು ಸತ್ಯವಿಶ್ವಾಸಿಗಳಾದ ಬಳಿಕ ಸತ್ಯನಿಷೇಧಿಗಳಾಗಿ ಬಿಟ್ಟಿರಾ? ನೀವು ಸತ್ಯನಿಷೇಧಿಗಳಾದ ಕಾರಣ ಶಿಕ್ಷೆಯ ರುಚಿಯನ್ನು ಸವಿಯಿರಿ.”
Âl-i İmran 3:107
ಮುಖಗಳು ಬೆಳ್ಳಗಾದವರು ಯಾರೋ—ಅವರು ಅಲ್ಲಾಹನ ದಯೆಯಲ್ಲಿರುವರು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
Âl-i İmran 3:108
ಇವು ಅಲ್ಲಾಹನ ವಚನಗಳಾಗಿವೆ. ನಾವು ಇವುಗಳನ್ನು ನಿಮಗೆ ಸತ್ಯವಾಗಿ ಓದಿಕೊಡುತ್ತಿದ್ದೇವೆ. ಅಲ್ಲಾಹು ಸರ್ವಲೋಕದವರಿಗೆ ಅನ್ಯಾಯ ಮಾಡುವ ಇರಾದೆಯನ್ನು ಹೊಂದಿಲ್ಲ.
Âl-i İmran 3:109
ಭೂಮ್ಯಾಕಾಶಗಳಲ್ಲಿರುವ ವಸ್ತುಗಳೆಲ್ಲವೂ ಅಲ್ಲಾಹನಿಗೆ ಸೇರಿದ್ದು. ಎಲ್ಲಾ ವಿಷಯಗಳೂ ಅಲ್ಲಾಹನ ಬಳಿಗೇ ಮರಳುತ್ತವೆ.
Âl-i İmran 3:110
ನೀವು ಮನುಷ್ಯರಿಗಾಗಿ ಹೊರತರಲಾದ ಉತ್ತಮ ಸಮುದಾಯವಾಗಿದ್ದೀರಿ. ನೀವು ಒಳಿತನ್ನು ಆದೇಶಿಸುತ್ತೀರಿ, ಕೆಡುಕನ್ನು ವಿರೋಧಿಸುತ್ತೀರಿ ಮತ್ತು ಅಲ್ಲಾಹನಲ್ಲಿ ವಿಶ್ವಾಸವಿಡುತ್ತೀರಿ. ಗ್ರಂಥದವರು ಸತ್ಯವಿಶ್ವಾಸಿಗಳಾಗುತ್ತಿದ್ದರೆ ಅದು ಅವರಿಗೆ ಒಳಿತಾಗಿರುತ್ತಿತ್ತು. ಅವರಲ್ಲಿ ಸತ್ಯವಿಶ್ವಾಸಿಗಳಿದ್ದಾರೆ. ಆದರೆ ಅವರಲ್ಲಿ ಹೆಚ್ಚಿನವರು ದುಷ್ಕರ್ಮಿಗಳಾಗಿದ್ದಾರೆ.
Âl-i İmran 3:111
ಕೆಲವು ಕೀಟಲೆಗಳನ್ನು ಬಿಟ್ಟರೆ ಅವರು ನಿಮಗೆ ಯಾವುದೇ ತೊಂದರೆ ಮಾಡಲಾರರು. ಅವರು ನಿಮ್ಮೊಂದಿಗೆ ಯುದ್ಧ ಮಾಡಿದರೆ ಬೆನ್ನು ತಿರುಗಿಸಿ ಓಡುವರು. ನಂತರ ಅವರಿಗೆ ಯಾವುದೇ ಸಹಾಯವು ದೊರೆಯುವುದಿಲ್ಲ.
Âl-i İmran 3:112
ಅವರು ಎಲ್ಲೇ ಇದ್ದರೂ ಅವರ ಮೇಲೆ ಅವಮಾನವನ್ನು ಹೇರಲಾಗಿದೆ. ಅಲ್ಲಾಹನ ಹಗ್ಗದ (ಕರಾರಿನ) ಅಥವಾ ಜನರ ಹಗ್ಗದ (ಕರಾರಿನ) ಆಶ್ರಯದಲ್ಲಿರುವವರ ಹೊರತು. ಅವರು ಅಲ್ಲಾಹನ ಕೋಪಕ್ಕೆ ಪಾತ್ರರಾಗಿದ್ದಾರೆ. ಅವರ ಮೇಲೆ ದರಿದ್ರತೆಯನ್ನು ಹೇರಲಾಗಿದೆ. ಅದೇಕೆಂದರೆ ಅವರು ಅಲ್ಲಾಹನ ವಚನಗಳನ್ನು ನಿಷೇಧಿಸುತ್ತಿದ್ದರು ಮತ್ತು ಪ್ರವಾದಿಗಳನ್ನು ಅನ್ಯಾಯವಾಗಿ ಕೊಲ್ಲುತ್ತಿದ್ದರು. ಅದೇಕೆಂದರೆ ಅವರು ಅವಿಧೇಯತೆ ತೋರುತ್ತಿದ್ದರು ಮತ್ತು ಅತಿರೇಕವೆಸಗುತ್ತಿದ್ದರು.
Âl-i İmran 3:113
ಅವರೆಲ್ಲರೂ ಒಂದೇ ರೀತಿಯಲ್ಲ. ರಾತ್ರಿ ವೇಳೆಯಲ್ಲಿ ಅಲ್ಲಾಹನ ವಚನಗಳನ್ನು ಪಠಿಸುತ್ತಾ ಮತ್ತು ಸಾಷ್ಟಾಂಗ ಮಾಡುತ್ತಾ (ಸತ್ಯದಲ್ಲಿ) ದೃಢವಾಗಿ ನಿಂತ ಒಂದು ಗುಂಪು ಗ್ರಂಥದವರಲ್ಲಿದೆ.
Âl-i İmran 3:114
ಅವರು ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುತ್ತಾರೆ, ಒಳಿತನ್ನು ಆದೇಶಿಸುತ್ತಾರೆ ಮತ್ತು ಕೆಡುಕನ್ನು ವಿರೋಧಿಸುತ್ತಾರೆ ಹಾಗೂ ಸತ್ಕಾರ್ಯಗಳಲ್ಲಿ ತ್ವರೆ ಮಾಡುತ್ತಾ ಮುನ್ನುಗ್ಗುತ್ತಾರೆ. ಅವರೇ ನೀತಿವಂತರಲ್ಲಿ ಸೇರಿದವರು.
Âl-i İmran 3:115
ಅವರು ಯಾವುದೇ ಒಳಿತು ಮಾಡಿದರೂ ಅದು ತಿರಸ್ಕರಿಸಲ್ಪಡುವುದಿಲ್ಲ. ಅಲ್ಲಾಹು ದೇವಭಯವುಳ್ಳವರನ್ನು ಬಹಳ ಚೆನ್ನಾಗಿ ತಿಳಿದಿದ್ದಾನೆ.
Âl-i İmran 3:116
ನಿಶ್ಚಯವಾಗಿಯೂ ಸತ್ಯನಿಷೇಧಿಗಳು ಯಾರೋ—ಅವರಿಗೆ ಅವರ ಆಸ್ತಿಗಳು ಮತ್ತು ಮಕ್ಕಳು ಅಲ್ಲಾಹನ ಬಳಿ ಯಾವುದೇ ಉಪಕಾರ ಮಾಡುವುದಿಲ್ಲ. ಅವರೇ ನರಕವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
Âl-i İmran 3:117
ಈ ಇಹಲೋಕ ಜೀವನದಲ್ಲಿ ಅವರು ಖರ್ಚು ಮಾಡುವುದನ್ನು ಸ್ಯಯಂ ಅಕ್ರಮವೆಸಗಿದ ಜನರ ಹೊಲದಲ್ಲಿ ಬಲವಾಗಿ ಬೀಸಿ, ನಂತರ ಅದನ್ನು ಸರ್ವನಾಶ ಮಾಡಿದ ಒಂದು ಶೀತಲ ಮಾರುತಕ್ಕೆ ಹೋಲಿಸಬಹುದು. ಅಲ್ಲಾಹು ಅವರಿಗೆ ಅನ್ಯಾಯ ಮಾಡಿಲ್ಲ. ಆದರೆ ಅವರು ಸ್ವಯಂ ಅನ್ಯಾಯವೆಸಗುತ್ತಿದ್ದಾರೆ.
Âl-i İmran 3:118
ಓ ಸತ್ಯವಿಶ್ವಾಸಿಗಳೇ! ನೀವು ನಿಮ್ಮವರನ್ನೇ ಹೊರತು ಬೇರೆ ಯಾರನ್ನೂ ಆಪ್ತಮಿತ್ರರನ್ನಾಗಿ ಸ್ವೀಕರಿಸಬೇಡಿ. ನಿಮಗೆ ತೊಂದರೆ ಕೊಡಲು ಅವರು ಸ್ವಲ್ಪವೂ ಹಿಂಜರಿಯುವುದಿಲ್ಲ. ನೀವು ತೊಂದರೆಗೊಳಗಾಗಬೇಕೆಂದೇ ಅವರು ಆಶಿಸುತ್ತಾರೆ. ಅವರ ಬಾಯಿಯಿಂದ ದ್ವೇಷವು ಈಗಾಗಲೇ ಪ್ರಕಟವಾಗಿದೆ. ಅವರ ಹೃದಯಗಳಲ್ಲಿ ಅದಕ್ಕಿಂತಲೂ ದೊಡ್ಡ ದ್ವೇಷವು ಅಡಗಿಕೊಂಡಿದೆ. ನಾವು ನಿಮಗೆ ವಚನಗಳನ್ನು ಸ್ಪಷ್ಟವಾಗಿ ವಿವರಿಸಿಕೊಟ್ಟಿದ್ದೇವೆ. ನೀವು ಬುದ್ಧಿವಂತರಾಗಿದ್ದರೆ (ಇದರ ಬಗ್ಗೆ ಗಮನ ಹರಿಸಿ).
Âl-i İmran 3:119
ನೀವು ಅವರನ್ನು ಪ್ರೀತಿಸುತ್ತೀರಿ. ಆದರೆ ಅವರು ನಿಮ್ಮನ್ನು ಪ್ರೀತಿಸುವುದಿಲ್ಲ. ನೀವು ಎಲ್ಲಾ ಗ್ರಂಥಗಳಲ್ಲೂ ವಿಶ್ವಾಸವಿಡುತ್ತೀರಿ. ನಿಮ್ಮನ್ನು ಭೇಟಿಯಾಗುವಾಗ, “ನಾವು ವಿಶ್ವಾಸವಿಟ್ಟಿದ್ದೇವೆ” ಎಂದು ಅವರು ಹೇಳುತ್ತಾರೆ. ಆದರೆ ಅವರು ಏಕಾಂತದಲ್ಲಿರುವಾಗ ನಿಮ್ಮ ಮೇಲಿನ ಕೋಪದಿಂದ ಬೆರಳುಗಳನ್ನು ಕಚ್ಚುತ್ತಾರೆ. ಹೇಳಿರಿ: “ನಿಮ್ಮ ಕೋಪದೊಂದಿಗೇ ನೀವು ಪ್ರಾಣವನ್ನು ತ್ಯಜಿಸಿರಿ. ನಿಶ್ಚಯವಾಗಿಯೂ ಅಲ್ಲಾಹು ಹೃದಯಗಳಲ್ಲಿರುವುದನ್ನು ತಿಳಿಯುತ್ತಾನೆ.”
Âl-i İmran 3:120
ನಿಮಗೆ ಒಳಿತಾದರೆ ಅವರಿಗೆ ಸಂಕಟವಾಗುತ್ತದೆ. ನಿಮಗೆ ಕೆಡುಕುಂಟಾದರೆ ಅವರು ಸಂತೋಷಪಡುತ್ತಾರೆ. ನೀವು ತಾಳ್ಮೆ ವಹಿಸಿದರೆ ಮತ್ತು ಅಲ್ಲಾಹನನ್ನು ಭಯಪಟ್ಟು ಜೀವಿಸಿದರೆ, ಅವರ ಕುತಂತ್ರವು ನಿಮಗೆ ಯಾವುದೇ ರೀತಿಯಲ್ಲೂ ತೊಂದರೆ ಮಾಡುವುದಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಅವರು ಮಾಡುತ್ತಿರುವ ಕರ್ಮಗಳನ್ನು ಆವರಿಸಿಕೊಂಡಿದ್ದಾನೆ.
Âl-i İmran 3:121
(ಓ ಪ್ರವಾದಿಯವರೇ!) ಸತ್ಯವಿಶ್ವಾಸಿಗಳನ್ನು ಯುದ್ಧದ ಆಯಕಟ್ಟಿನ ಸ್ಥಳಗಳಲ್ಲಿ ನಿಲ್ಲಿಸಲು ನೀವು ನಸುಕಿನಲ್ಲೇ ಮನೆಯಿಂದ ಹೊರಟ ಸಂದರ್ಭ(ವನ್ನು ಸ್ಮರಿಸಿ). ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
Âl-i İmran 3:122
ನಿಮ್ಮಲ್ಲಿನ ಎರಡು ಗುಂಪುಗಳು ಹೇಡಿಗಳಾಗಲು ಮುಂದಾದ ಸಂದರ್ಭ.[1] ಅಲ್ಲಾಹು ಆ ಎರಡು ಪಂಗಡಗಳ ರಕ್ಷಕನಾಗಿದ್ದಾನೆ. ಸತ್ಯವಿಶ್ವಾಸಿಗಳು ಅಲ್ಲಾಹನಲ್ಲಿಯೇ ಭರವಸೆಯಿಡಲಿ.
———
[1] ಉಹುದ್ ಯುದ್ಧದ ಸಂದರ್ಭ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಾಲಾಳುಪಡೆ, ಅಶ್ವಸೇನೆ ಮತ್ತು ಬಿಲ್ಲುಗಾರರನ್ನು ಕೆಲವು ಆಯಕಟ್ಟಿನ ಸ್ಥಳಗಳಲ್ಲಿ ನಿಲ್ಲಿಸಿದ್ದರು. ಯುದ್ಧ ತಂತ್ರದ ಪ್ರಮುಖ ಭಾಗವಾಗಿ ಒಂದು ಗುಡ್ಡೆಯ ಮೇಲೆ ಕಾವಲು ನಿಲ್ಲಿಸಲಾಗಿದ್ದ ಬಿಲ್ಲುಗಾರರು ತಮ್ಮ ಕಾರ್ಯನಿರ್ವಹಣೆಯಲ್ಲಿ ತಪ್ಪೆಸಗಿದ ಕಾರಣ ಉಹುದ್ ಯುದ್ಧದಲ್ಲಿ ಮುಸ್ಲಿಮರಿಗೆ ಅನೇಕ ನಾಶ-ನಷ್ಟಗಳು ಸಂಭವಿಸಿದವು. ಯುದ್ಧದಲ್ಲಿ ಹೋರಾಡುತ್ತಿದ್ದ ಎರಡು ಗೋತ್ರದ ಜನರು ದಿಗಿಲುಗೊಂಡು ಯುದ್ಧದಿಂದ ಪಲಾಯನ ಮಾಡಬೇಕೆಂದು ಒಂದು ಕ್ಷಣ ಯೋಚಿಸಿದರು. ಆದರೆ ಅಲ್ಲಾಹು ಅವರ ಮನಸ್ಸಿಗೆ ದೃಢತೆಯನ್ನು ನೀಡಿ ಅವರನ್ನು ನಿಲ್ಲಿಸಿದನು.
Âl-i İmran 3:123
ಬದ್ರ್‌ನಲ್ಲಿ ನೀವು ಅತ್ಯಂತ ದುರ್ಬಲರಾಗಿದ್ದಾಗ, ಅಲ್ಲಾಹು ನಿಮಗೆ ಸಹಾಯ ಮಾಡಿದ್ದಾನೆ. ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ. ನೀವು ಕೃತಜ್ಞರಾಗುವುದಕ್ಕಾಗಿ.
Âl-i İmran 3:124
“ನಿಮ್ಮ ಪರಿಪಾಲಕನು (ಅಲ್ಲಾಹು) ಮೂರು ಸಾವಿರ ದೇವದೂತರುಗಳನ್ನು ಇಳಿಸಿ ನಿಮಗೆ ಸಹಾಯ ಮಾಡಿದರೆ ಸಾಕಾಗದೇ?” ಎಂದು ನೀವು ಸತ್ಯವಿಶ್ವಾಸಿಗಳೊಡನೆ ಕೇಳಿದ ಸಂದರ್ಭ(ವನ್ನು ಸ್ಮರಿಸಿ).
Âl-i İmran 3:125
ಹೌದು! ನೀವು ತಾಳ್ಮೆಯಿಂದಿದ್ದರೆ ಮತ್ತು ಅಲ್ಲಾಹನನ್ನು ಭಯಪಟ್ಟರೆ ನಿಮ್ಮ ಬಳಿಗೆ ಶತ್ರುಗಳು ಯಾವ ಕ್ಷಣದಲ್ಲಿ ಬಂದರೂ ನಿಮ್ಮ ಪರಿಪಾಲಕನು (ಅಲ್ಲಾಹು) ವಿಶೇಷ ಗುರುತುಗಳಿರುವ ಐದು ಸಾವಿರ ದೇವದೂತರುಗಳ ಮೂಲಕ ನಿಮಗೆ ಸಹಾಯ ಮಾಡುವನು.
Âl-i İmran 3:126
ಅಲ್ಲಾಹು ಇದನ್ನು (ಸಹಾಯವನ್ನು) ಮಾಡಿದ್ದು ನಿಮಗೊಂದು ಸುವಾರ್ತೆಯಾಗಿ ಮತ್ತು ನಿಮ್ಮ ಹೃದಯಗಳು ಶಾಂತವಾಗಲಿಕ್ಕಾಗಿ ಮಾತ್ರ. ಸಹಾಯವು ಪ್ರಬಲನು ಮತ್ತು ವಿವೇಕಪೂರ್ಣನಾದ ಅಲ್ಲಾಹನಿಂದಲೇ ಆಗಿದೆ.
Âl-i İmran 3:127
ಇದು (ಈ ಸಹಾಯವು ಬಂದಿರುವುದು) ಅಲ್ಲಾಹು ಸತ್ಯನಿಷೇಧಿಗಳ ಒಂದು ಭಾಗವನ್ನು ಕತ್ತರಿಸುವುದಕ್ಕಾಗಿ ಅಥವಾ ಅವರನ್ನು ಸಂಪೂರ್ಣ ದಮನ ಮಾಡುವುದಕ್ಕಾಗಿ. ಅವರೆಲ್ಲರೂ ಹತಾಶರಾಗಿ ಮರಳಿ ಹೋಗಲೆಂದು.
Âl-i İmran 3:128
(ಓ ಪ್ರವಾದಿಯವರೇ!) ತೀರ್ಮಾನದಲ್ಲಿ ನಿಮಗೆ ಯಾವುದೇ ಅಧಿಕಾರವಿಲ್ಲ. ಅಲ್ಲಾಹು ಅವರ ಪಶ್ಚಾತ್ತಾಪವನ್ನು ಸ್ವೀಕರಿಸಬಹುದು ಅಥವಾ ಅವರನ್ನು ಶಿಕ್ಷಿಸಬಹುದು. ಏಕೆಂದರೆ, ನಿಶ್ಚಯವಾಗಿಯೂ ಅವರು ಅಕ್ರಮಿಗಳಾಗಿದ್ದಾರೆ.[1]
———
[1] ಉಹುದ್ ಯುದ್ಧದಲ್ಲಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮುಂದಿನ ಹಲ್ಲು ತುಂಡಾಗಿ ಮುಖಕ್ಕೆ ಗಾಯವಾದಾಗ ಅವರು ಬೇಸರದಿಂದ ಹೇಳಿದರು: “ತಮ್ಮ ಪ್ರವಾದಿಯನ್ನು ಗಾಯಗೊಳಿಸಿದ ಜನರು ಯಶಸ್ವಿಯಾಗುವುದಾದರೂ ಹೇಗೆ?” ಆಗ ಅಲ್ಲಾಹು ಅವರ ಮಾತನ್ನು ತಿದ್ದುತ್ತಾ ಈ ವಚನವನ್ನು ಅವತೀರ್ಣಗೊಳಿಸಿದನು. ಅಂದರೆ ಯಾರಿಗೆ ಸನ್ಮಾರ್ಗ ತೋರಿಸಬೇಕು ಯಾರಿಗೆ ತೋರಿಸಬಾರದು? ಯಾರನ್ನು ಶಿಕ್ಷೆ ನೀಡಬೇಕು ಮತ್ತು ಯಾರಿಗೆ ಕ್ಷಮೆ ನೀಡಬೇಕು? ಎಂಬುದನ್ನು ಅಲ್ಲಾಹು ತೀರ್ಮಾನಿಸುತ್ತಾನೆ. ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದನ್ನು ತೀರ್ಮಾನಿಸುವ ಯಾವುದೇ ಹಕ್ಕಿಲ್ಲ.
Âl-i İmran 3:129
ಭೂಮ್ಯಾಕಾಶಗಳಲ್ಲಿರುವ ಎಲ್ಲಾ ವಸ್ತುಗಳೂ ಅಲ್ಲಾಹನಿಗೆ ಸೇರಿದ್ದು. ಅವನು ಇಚ್ಛಿಸುವವರಿಗೆ ಅವನು ಕ್ಷಮಿಸುತ್ತಾನೆ ಮತ್ತು ಅವನು ಇಚ್ಛಿಸುವವರನ್ನು ಶಿಕ್ಷಿಸುತ್ತಾನೆ. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
Âl-i İmran 3:130
ಓ ಸತ್ಯವಿಶ್ವಾಸಿಗಳೇ! ನೀವು ಇಮ್ಮಡಿ ಮುಮ್ಮಡಿಯಾಗಿ ಬಡ್ಡಿಯನ್ನು ತಿನ್ನಬೇಡಿ. ಅಲ್ಲಾಹನನ್ನು ಭಯಪಡಿರಿ. ನೀವು ಯಶಸ್ವಿಯಾಗುವುದಕ್ಕಾಗಿ.
Âl-i İmran 3:131
ಸತ್ಯನಿಷೇಧಿಗಳಿಗಾಗಿ ಸಿದ್ಧಗೊಳಿಸಲಾದ ನರಕಾಗ್ನಿಯನ್ನು ಭಯಪಡಿರಿ.
Âl-i İmran 3:132
ಅಲ್ಲಾಹನ ಮತ್ತು ಸಂದೇಶವಾಹಕರ ಆಜ್ಞಾಪಾಲನೆ ಮಾಡಿರಿ. ನಿಮಗೆ ದಯೆ ತೋರಲಾಗುವುದಕ್ಕಾಗಿ.
Âl-i İmran 3:133
ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಕ್ಷಮೆಗಾಗಿ ಮತ್ತು ಭೂಮ್ಯಾಕಾಶಗಳಷ್ಟು ವಿಶಾಲವಾದ ಸ್ವರ್ಗಕ್ಕಾಗಿ ತ್ವರೆಯಿಂದ ಮುನ್ನುಗ್ಗಿರಿ. ಅದನ್ನು ದೇವಭಯವುಳ್ಳವರಿಗಾಗಿ ಸಿದ್ಧಗೊಳಿಸಲಾಗಿದೆ.
Âl-i İmran 3:134
ಅವರು (ದೇವಭಯವುಳ್ಳವರು) ಯಾರೆಂದರೆ, ಸುಖದಲ್ಲೂ ಕಷ್ಟದಲ್ಲೂ ದಾನ ಮಾಡುವವರು, ಕೋಪವನ್ನು ನಿಗ್ರಹಿಸುವವರು ಮತ್ತು ಜನರಿಗೆ ಮನ್ನಿಸುವವರು. ಅಲ್ಲಾಹು ಒಳಿತು ಮಾಡುವವರನ್ನು ಪ್ರೀತಿಸುತ್ತಾನೆ.
Âl-i İmran 3:135
ಅವರು ಏನಾದರೂ ನೀಚಕಾರ್ಯ ಮಾಡಿದರೆ ಅಥವಾ ಸ್ವಯಂ ಅಕ್ರಮವೆಸಗಿದರೆ ಅಲ್ಲಾಹನನ್ನು ಸ್ಮರಿಸಿ ತಮ್ಮ ಪಾಪಗಳಿಗೆ ಕ್ಷಮೆಯಾಚಿಸುತ್ತಾರೆ. ಅಲ್ಲಾಹನ ಹೊರತು ಪಾಪಗಳನ್ನು ಕ್ಷಮಿಸುವವರು ಯಾರು? ಅವರು ತಿಳಿದೂ ಸಹ (ಕೆಟ್ಟ) ಕಾರ್ಯಗಳಲ್ಲಿ ಹಟ ಹಿಡಿದು ಮುಂದುವರಿಯುವುದಿಲ್ಲ.
Âl-i İmran 3:136
ಅವರಿಗಿರುವ ಪ್ರತಿಫಲವು ಅವರ ಪರಿಪಾಲಕನ ಕಡೆಯ ಕ್ಷಮೆ ಮತ್ತು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಾಗಿವೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಸತ್ಕರ್ಮವೆಸಗುವವರಿಗೆ ದೊರೆಯುವ ಪ್ರತಿಫಲವು ಬಹಳ ಉತ್ತಮವಾಗಿದೆ!
Âl-i İmran 3:137
ನಿಮಗಿಂತ ಮುಂಚೆಯೂ ಇಂತಹ ಘಟನೆಗಳು ಗತಿಸಿ ಹೋಗಿವೆ. ಆದ್ದರಿಂದ ನೀವು ಭೂಮಿಯಲ್ಲಿ ಸಂಚರಿಸಿ ಸತ್ಯನಿಷೇಧಿಗಳ ಅಂತ್ಯವು ಹೇಗಿತ್ತೆಂದು ನೋಡಿರಿ.[1]
———
[1] ಉಹುದ್ ಯುದ್ಧದ ಸಂದರ್ಭ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಬ್ದುಲ್ಲಾ ಬಿನ್ ಜುಬೈರ್ ರವರ ನಾಯಕತ್ವದಲ್ಲಿ ಬಿಲ್ಲುಗಾರರ ಸೇನೆಯನ್ನು ಒಂದು ಗುಡ್ಡದ ಮೇಲೆ ನಿಲ್ಲಿಸಿದ್ದರು. ಯುದ್ಧದಲ್ಲಿ ಗೆದ್ದರೂ ಸೋತರೂ ನೀವು ಗುಡ್ಡದಿಂದ ಇಳಿದು ಬರಬಾರದೆಂದು ಅವರಿಗೆ ಕಟ್ಟಾಜ್ಞೆ ನೀಡಿದ್ದರು. ಆದರೆ ಯುದ್ಧದ ಆರಂಭದಲ್ಲಿ ಮುಸಲ್ಮಾನರು ವೈರಿಗಳನ್ನು ಹಿಮ್ಮೆಟ್ಟಿಸುವದರಲ್ಲಿ ಯಶಸ್ವಿಯಾಗಿ ಅವರು ಬಿಟ್ಟು ಹೋದ ಯುದ್ಧ ಸಾಮಗ್ರಿಗಳನ್ನು ಸಂಗ್ರಹಿಸಲು ತೊಡಗಿದಾಗ ಗುಡ್ಡ ಮೇಲಿದ್ದ ಬಿಲ್ಲುಗಾರರಲ್ಲಿ ಭಿನ್ನಮತ ಉಂಟಾಯಿತು. ಕೆಲವರು ಹೇಳಿದರು: ಯುದ್ಧದಲ್ಲಿ ಗೆಲ್ಲುವವರೆಗೆ ಮಾತ್ರ ಇಲ್ಲಿ ನಿಲ್ಲಲು ನಮಗೆ ಆಜ್ಞಾಪಿಸಲಾಗಿದೆ. ನಾವು ಈಗ ಗೆದ್ದಿದ್ದೇವೆ ಮತ್ತು ವೈರಿಗಳು ದಿಕ್ಕಾಪಾಲಾಗಿ ಓಡಿದ್ದಾರೆ. ಆದ್ದರಿಂದ ನಾವು ಇನ್ನು ಇಲ್ಲಿ ನಿಲ್ಲಬೇಕಾಗಿಲ್ಲ. ಕೇವಲ ಹತ್ತು ಜನರ ಹೊರತು ಉಳಿದವರೆಲ್ಲರೂ ಗುಡ್ಡದಿಂದ ಇಳಿದು ಹೋದರು. ಗುಡ್ಡದಲ್ಲಿ ಬಿಲ್ಲುಗಾರರು ಇಲ್ಲದಿರುವುದನ್ನು ನೋಡಿದ ವೈರಿಗಳನ್ನು ಆ ಅವಕಾಶವನ್ನು ಚೆನ್ನಾಗಿ ಬಳಸಿ ಅಶ್ವಸೇನೆಯ ಮೂಲಕ ಹಿಂಬದಿಯಿಂದ ಆಕ್ರಮಣ ಮಾಡಿದರು. ಈ ಅನಿರೀಕ್ಷಿತ ಆಕ್ರಮಣದಿಂದ ಮುಸ್ಲಿಮರಿಗೆ ಅನೇಕ ನಾಶ-ನಷ್ಟಗಳು ಸಂಭವಿಸಿದವು. ಈ ವಚನದಲ್ಲಿ ಹೇಳುವುದೇನೆಂದರೆ, ಸತ್ಯನಿಷೇಧಿಗಳಿಗೆ ಕೆಲವೊಮ್ಮೆ ಗೆಲುವು ಸಿಗಬಹುದು. ಆದರೆ ಅದರಿಂದ ನೀವು ಧೃತಿಗೆಡಬಾರದು. ಏಕೆಂದರೆ ಅಂತಿಮ ವಿಜಯವು ಸತ್ಯವಿಶ್ವಾಸಿಗಳಿಗೇ ಆಗಿದೆ.
Âl-i İmran 3:138
ಇದು (ಕುರ್‌ಆನ್) ಮನುಷ್ಯರಿಗೆ ಒಂದು ಸ್ಪಷ್ಟ ವಿವರಣೆಯಾಗಿದೆ. ದೇವಭಯವುಳ್ಳವರಿಗೆ ಸನ್ಮಾರ್ಗ ಮತ್ತು ಹಿತೋಪದೇಶವಾಗಿದೆ.
Âl-i İmran 3:139
ನೀವು ದುರ್ಬಲರಾಗಬೇಡಿ ಮತ್ತು ದುಃಖಿಸಬೇಡಿ. ನೀವು ಸತ್ಯವಿಶ್ವಾಸಿಗಳಾಗಿದ್ದರೆ ನೀವೇ ಅತಿಶ್ರೇಷ್ಠರು.
Âl-i İmran 3:140
ನಿಮಗೆ ಗಾಯಗಳಾಗಿದ್ದರೆ, ಆ ಜನರಿಗೂ (ಎದುರಾಳಿಗಳಿಗೂ) ಗಾಯಗಳಾಗಿದ್ದವು. ಸತ್ಯವಿಶ್ವಾಸಿಗಳು ಯಾರೆಂದು ಅಲ್ಲಾಹು ತಿಳಿಯುವುದಕ್ಕಾಗಿ ಮತ್ತು ನಿಮ್ಮಲ್ಲಿ ಕೆಲವರನ್ನು ಅವನು ಹುತಾತ್ಮರಾಗಿ ಸ್ವೀಕರಿಸುವುದಕ್ಕಾಗಿ, ನಾವು ಆ ದಿನಗಳನ್ನು (ಸೋಲು-ಗೆಲುವುಗಳನ್ನು) ಜನರ ನಡುವೆ ಬದಲಾಯಿಸುತ್ತೇವೆ. ಅಲ್ಲಾಹು ಅಕ್ರಮಿಗಳನ್ನು ಇಷ್ಟಪಡುವುದಿಲ್ಲ.
Âl-i İmran 3:141
ಅಲ್ಲಾಹು ಸತ್ಯವಿಶ್ವಾಸಿಗಳನ್ನು ಶುದ್ಧೀಕರಿಸುವುದಕ್ಕಾಗಿ ಮತ್ತು ಸತ್ಯನಿಷೇಧಿಗಳನ್ನು ನಾಶ ಮಾಡುವುದಕ್ಕಾಗಿ.
Âl-i İmran 3:142
ನಿಮ್ಮಲ್ಲಿ ಯುದ್ಧ ಮಾಡಿದವರು ಯಾರು ಮತ್ತು ಸ್ಥೈರ್ಯವಂತರು ಯಾರೆಂದು ಅಲ್ಲಾಹು ತಿಳಿಯದೆ (ನಿರಾಯಾಸವಾಗಿ) ಸ್ವರ್ಗಕ್ಕೆ ಹೋಗಬಹುದೆಂದು ನೀವು ಭಾವಿಸಿದ್ದೀರಾ?
Âl-i İmran 3:143
ನೀವು ಸಾವನ್ನು ನೇರವಾಗಿ ನೋಡುವುದಕ್ಕೆ ಮೊದಲು ಅದನ್ನು (ಹುತಾತ್ಮತೆಯನ್ನು) ಬಯಸುತ್ತಿದ್ದಿರಿ. ಈಗ ನೀವು ಅದನ್ನು ನಿಮ್ಮ ಕಣ್ಣುಗಳ ಮುಂದೆ ಕಣ್ಣಾರೆ ನೋಡಿದ್ದೀರಿ.
Âl-i İmran 3:144
ಮುಹಮ್ಮದ್ ಒಬ್ಬ ಸಂದೇಶವಾಹಕರು ಮಾತ್ರ. ಅವರಿಗಿಂತ ಮೊದಲು ಅನೇಕ ಸಂದೇಶವಾಹಕರುಗಳು ಬಂದು ಹೋಗಿದ್ದಾರೆ. ಅವರೇನಾದರೂ ಅಸುನೀಗಿದರೆ ಅಥವಾ ಕೊಲೆಯಾದರೆ, ನೀವು ಹಿಂದಕ್ಕೆ (ಸತ್ಯನಿಷೇಧಕ್ಕೆ) ಮರಳುವಿರಾ? ಯಾರು ಹಿಂದಕ್ಕೆ ಮರಳುತ್ತಾನೋ ಅವನು ಅಲ್ಲಾಹನಿಗೆ ಯಾವುದೇ ತೊಂದರೆ ಮಾಡುವುದಿಲ್ಲ. ಕೃತಜ್ಞರಾಗಿರುವವರಿಗೆ ಅಲ್ಲಾಹು ಸದ್ಯವೇ ಸೂಕ್ತ ಪ್ರತಿಫಲವನ್ನು ನೀಡುವನು.[1]
———
[1] ಉಹುದ್ ಯುದ್ಧದಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೊಲೆಯಾದರೆಂದು ವೈರಿಗಳನ್ನು ವದಂತಿ ಹಬ್ಬಿಸಿದರು. ಮುಸ್ಲಿಮರಲ್ಲಿ ಕೆಲವರು ಈ ವದಂತಿಯನ್ನು ನಂಬಿ ಸಂಪೂರ್ಣ ನಿರಾಶರಾಗಿ ಯುದ್ಧದಿಂದ ಹಿಂದೆ ಸರಿದರು. ಇವರ ಬಗ್ಗೆ ಈ ವಚನವು ಅವತೀರ್ಣವಾಯಿತು. ಪ್ರವಾದಿಗಳು ಮರಣಹೊಂದುವುದು ಅಥವಾ ವೈರಿಗಳು ಪ್ರವಾದಿಗಳನ್ನು ಕೊಲೆ ಮಾಡುವುದು ಹೊಸದೇನಲ್ಲ. ಹಿಂದೆಯೂ ಅನೇಕ ಪ್ರವಾದಿಗಳು ವೈರಿಗಳ ಕೈಯಿಂದ ಕೊಲೆಯಾಗಿದ್ದಾರೆ. ಅದೇ ರೀತಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಸುನೀಗಿದರೆ ಅಥವಾ ಕೊಲೆಯಾದರೆ ನೀವು ನಿಮ್ಮ ಧರ್ಮದಿಂದ ಹಿಂದೆ ಸರಿಯುತ್ತೀರಾ? ಯಾರಾದರೂ ಹಿಂದೆ ಸರಿದರೆ ಅದರಿಂದ ಅಲ್ಲಾಹನಿಗೇನೂ ನಷ್ಟವಿಲ್ಲ.
Âl-i İmran 3:145
ಅಲ್ಲಾಹನ ಅಪ್ಪಣೆಯಿಲ್ಲದೆ ಯಾವುದೇ ವ್ಯಕ್ತಿಗೂ ಸಾಯಲು ಸಾಧ್ಯವಿಲ್ಲ. ಅದು ನಿಶ್ಚಯಿಸಲಾದ ಒಂದು ಅವಧಿಯಾಗಿದೆ. ಯಾರು ಇಹಲೋಕದ ಪ್ರತಿಫಲವನ್ನು ಬಯಸುತ್ತಾನೋ ಅವನಿಗೆ ನಾವು ಅದನ್ನು ನೀಡುತ್ತೇವೆ. ಯಾರು ಪರಲೋಕದ ಪ್ರತಿಫಲವನ್ನು ಬಯಸುತ್ತಾನೋ ಅವನಿಗೆ ನಾವು ಅದನ್ನು ನೀಡುತ್ತೇವೆ. ಕೃತಜ್ಞರಾಗಿರುವವರಿಗೆ ಅಲ್ಲಾಹು ಸದ್ಯವೇ ಸೂಕ್ತ ಪ್ರತಿಫಲವನ್ನು ನೀಡುತ್ತಾನೆ.
Âl-i İmran 3:146
ಎಷ್ಟೋ ಪ್ರವಾದಿಗಳಿಗೆ ಜೊತೆಯಾಗಿ ನಿಂತು ಅಲ್ಲಾಹನ ಎಷ್ಟೋ ದಾಸರು ಯುದ್ಧ ಮಾಡಿದ್ದಾರೆ. ಅಲ್ಲಾಹನ ಮಾರ್ಗದಲ್ಲಿ ಎದುರಿಸಬೇಕಾಗಿ ಬಂದ ತೊಂದರೆಗಳಿಂದ ಅವರು ಧೃತಿಗೆಡಲಿಲ್ಲ, ದುರ್ಬಲರಾಗಲಿಲ್ಲ ಮತ್ತು ಮಣಿಯಲಿಲ್ಲ. ಅಲ್ಲಾಹು ಸ್ಥೈರ್ಯವಂತರನ್ನು ಪ್ರೀತಿಸುತ್ತಾನೆ.
Âl-i İmran 3:147
ಅವರ ಮಾತುಗಳು ಇದಲ್ಲದೆ ಬೇರೇನೂ ಆಗಿರಲಿಲ್ಲ: “ಓ ನಮ್ಮ ಪರಿಪಾಲಕನೇ! ನಮ್ಮ ಪಾಪಗಳನ್ನು ಮತ್ತು ನಮ್ಮ ಕಾರ್ಯಗಳಲ್ಲಿ ಸಂಭವಿಸಿದ ಅತಿರೇಕಗಳನ್ನು ಕ್ಷಮಿಸು, ನಮ್ಮ ಪಾದಗಳನ್ನು ದೃಢವಾಗಿ ನಿಲ್ಲಿಸು ಮತ್ತು ಸತ್ಯನಿಷೇಧಿಗಳಾದ ಜನರ ವಿರುದ್ಧ ನಮಗೆ ಸಹಾಯ ಮಾಡು.”
Âl-i İmran 3:148
ಆದ್ದರಿಂದ ಅಲ್ಲಾಹು ಅವರಿಗೆ ಇಹಲೋಕದ ಪ್ರತಿಫಲವನ್ನು ಮತ್ತು ಪರಲೋಕದ ಅತ್ಯುತ್ತಮ ಪ್ರತಿಫಲವನ್ನು ನೀಡಿದನು. ಅಲ್ಲಾಹು ಒಳಿತು ಮಾಡುವವರನ್ನು ಪ್ರೀತಿಸುತ್ತಾನೆ.
Âl-i İmran 3:149
ಓ ಸತ್ಯವಿಶ್ವಾಸಿಗಳೇ! ನೀವು ಸತ್ಯನಿಷೇಧಿಗಳನ್ನು ಅನುಸರಿಸಿದರೆ, ಅವರು ನಿಮ್ಮನ್ನು ಹಿಂದಕ್ಕೆ (ಸತ್ಯನಿಷೇಧಕ್ಕೆ) ಮರಳಿಸುತ್ತಾರೆ. ನಂತರ ನೀವು ನಷ್ಟಹೊಂದಿದವರಾಗಿ ಬಿಡುವಿರಿ.
Âl-i İmran 3:150
ಅಲ್ಲ, ವಾಸ್ತವವಾಗಿ ಅಲ್ಲಾಹನೇ ನಿಮ್ಮ ರಕ್ಷಕನು. ಅವನು ಸಹಾಯ ಮಾಡುವವರಲ್ಲಿ ಅತ್ಯುತ್ತಮನು.
Âl-i İmran 3:151
ಅಲ್ಲಾಹು ಯಾವುದೇ ಸಾಕ್ಷ್ಯಾಧಾರಗಳನ್ನು ಅವತೀರ್ಣಗೊಳಿಸದ ವಸ್ತುಗಳನ್ನು ಅವನಿಗೆ ಸಹಭಾಗಿಗಳನ್ನಾಗಿ ಮಾಡಿದ ಕಾರಣ ನಾವು ಸತ್ಯನಿಷೇಧಿಗಳ ಹೃದಯಗಳಲ್ಲಿ ಭೀತಿಯನ್ನು ಹುಟ್ಟಿಸುವೆವು. ಅವರ ವಾಸಸ್ಥಳವು ನರಕವಾಗಿದೆ. ಅಕ್ರಮಿಗಳ ವಾಸಸ್ಥಳವು ಬಹಳ ನಿಕೃಷ್ಟವಾಗಿದೆ!
Âl-i İmran 3:152
ಅಲ್ಲಾಹನ ಅಪ್ಪಣೆಯಿಂದ ನೀವು ಅವರನ್ನು ಕೊಲ್ಲುತ್ತಿರುವಾಗ ಅಲ್ಲಾಹು ನಿಮಗೆ ನೀಡಿದ ವಾಗ್ದಾನವನ್ನು ಖಂಡಿತ ನೆರವೇರಿಸಿದ್ದನು. ಎಲ್ಲಿಯವರೆಗೆಂದರೆ, ನೀವು ನಿಮ್ಮ ಕೆಲಸದಲ್ಲಿ ವಿಫಲರಾಗಿ ಪರಸ್ಪರ ತರ್ಕಿಸುವ ಮತ್ತು ನೀವು ಇಷ್ಟಪಡುವುದನ್ನು ಅಲ್ಲಾಹು ನಿಮಗೆ ತೋರಿಸಿದ ಬಳಿಕವೂ ನೀವು ಆಜ್ಞೋಲ್ಲಂಘನೆ ಮಾಡುವ ತನಕ. ನಿಮ್ಮಲ್ಲಿ ಕೆಲವರು ಇಹಲೋಕವನ್ನು ಬಯಸುತ್ತಿದ್ದರು ಮತ್ತು ಇತರ ಕೆಲವರು ಪರಲೋಕವನ್ನು ಬಯಸುತ್ತಿದ್ದರು. ನಂತರ ನಿಮ್ಮನ್ನು ಪರೀಕ್ಷಿಸುವುದಕ್ಕಾಗಿ ಅಲ್ಲಾಹು ನಿಮ್ಮನ್ನು ಅವರಿಂದ (ವೈರಿಗಳಿಂದ) ತಿರುಗಿಸಿದನು. ಅಲ್ಲಾಹು ನಿಮ್ಮನ್ನು ಕ್ಷಮಿಸಿದ್ದಾನೆ. ಅಲ್ಲಾಹು ಸತ್ಯವಿಶ್ವಾಸಿಗಳ ಮೇಲೆ ಮಹಾ ಔದಾರ್ಯವುಳ್ಳವನಾಗಿದ್ದಾನೆ.
Âl-i İmran 3:153
ನೀವು (ಪರ್ವತವನ್ನು) ಏರುತ್ತಾ ಯಾರನ್ನೂ ತಿರುಗಿ ನೋಡದೆ (ಪಲಾಯನ ಮಾಡುತ್ತಿದ್ದ) ಸಂದರ್ಭ. ಸಂದೇಶವಾಹಕರು ಹಿಂದಿನಿಂದ ನಿಮ್ಮನ್ನು ಕೂಗಿ ಕರೆಯುತ್ತಿದ್ದರು. ಆಗ ಅಲ್ಲಾಹು ನಿಮಗೆ ಬಳಲಿಕೆಯ ಮೇಲೆ ಬಳಲಿಕೆಯನ್ನು ಬಳುವಳಿಯಾಗಿ ನೀಡಿದನು. ನಿಮಗೆ ಕೈತಪ್ಪಿ ಹೋದ ವಿಜಯದ ಬಗ್ಗೆ ಮತ್ತು ನಿಮಗೆ ಸಂಭವಿಸಿದ ಅನಾಹುತದ ಬಗ್ಗೆ ನೀವು ಸಂಕಟಪಡದಿರುವುದಕ್ಕಾಗಿ. ಅಲ್ಲಾಹು ನೀವು ಮಾಡುತ್ತಿರುವ ಕರ್ಮಗಳನ್ನು ಸೂಕ್ಷ್ಮವಾಗಿ ತಿಳಿಯುತ್ತಾನೆ.
Âl-i İmran 3:154
ಅನಂತರ, ಆ ಬಳಲಿಕೆಯ ನಂತರ ಅಲ್ಲಾಹು ನಿಮಗೆ ನಿರ್ಭಯತೆಯ ತೂಕಡಿಕೆಯನ್ನು ನೀಡಿದನು. ಅದು ನಿಮ್ಮಲ್ಲಿ ಒಂದು ಗುಂಪನ್ನು ಆವರಿಸುತ್ತಿತ್ತು. ಇನ್ನೊಂದು ಗುಂಪು ಸ್ವಯಂ ಅವರ ಬಗ್ಗೆಯೇ ಚಿಂತಿತರಾಗಿದ್ದರು. ಅವರು ಅಲ್ಲಾಹನ ಬಗ್ಗೆ ಸತ್ಯಕ್ಕೆ ದೂರವಾದ ಅಜ್ಞಾನಕಾಲದ ಭಾವನೆಗಳನ್ನು ಇಟ್ಟುಕೊಂಡಿದ್ದರು.[1] ಅವರು ಕೇಳುತ್ತಿದ್ದರು: “ಆಜ್ಞೆಯಲ್ಲಿ ನಮಗೆ ಯಾವುದೇ ಪಾಲಿಲ್ಲವೇ?” ಹೇಳಿರಿ: “ನಿಶ್ಚಯವಾಗಿಯೂ ಆಜ್ಞೆಯು ಸಂಪೂರ್ಣವಾಗಿ ಅಲ್ಲಾಹನಿಗೆ ಸೇರಿದೆ.” ನಿಮ್ಮ ಮುಂದೆ ಬಹಿರಂಗಪಡಿಸದ ಬೇರೇನೋ ವಿಚಾರಗಳನ್ನು ಅವರು ತಮ್ಮ ಮನದಲ್ಲಿ ಬಚ್ಚಿಡುತ್ತಿದ್ದರು. ಅವರು ಹೇಳುತ್ತಿದ್ದರು: “ಆಜ್ಞೆಯಲ್ಲಿ ನಮಗೇನಾದರೂ ಪಾಲಿರುತ್ತಿದ್ದರೆ ನಾವಿಲ್ಲಿ ಹತ್ಯೆಯಾಗಿ ಬೀಳುತ್ತಿರಲಿಲ್ಲ.” ಹೇಳಿರಿ: “ನೀವು ನಿಮ್ಮ ಮನೆಗಳಲ್ಲಿದ್ದರೂ ಸಹ ಕೊಲೆಯಾಗಬೇಕೆಂಬ ವಿಧಿಯಿರುವವರು ಅವರು ಕೊಲೆಯಾಗಿ ಬೀಳುವ ಸ್ಥಳಗಳಿಗೆ ಸ್ವಯಂ ಹೊರಟು ಬರುತ್ತಿದ್ದರು.” ಇದು ನಿಮ್ಮ ಎದೆಗಳಲ್ಲಿರುವುದನ್ನು ಅಲ್ಲಾಹು ಪರೀಕ್ಷಿಸುವುದಕ್ಕಾಗಿದೆ ಮತ್ತು ನಿಮ್ಮ ಹೃದಯಗಳಲ್ಲಿರುವುದನ್ನು ಶುದ್ಧೀಕರಿಸುವುದಕ್ಕಾಗಿದೆ. ಅಲ್ಲಾಹು ಎದೆಗಳೊಳಗಿರುವುದನ್ನು ತಿಳಿಯುತ್ತಾನೆ.
———
[1] ಉಹುದ್ ಯುದ್ಧದ ನಂತರ ಅಲ್ಲಾಹು ಮುಸಲ್ಮಾನರ ಮೇಲೆ ದಯೆ ತೋರಿ ಅವರಿಗೆ ಸುಖವಾದ ನಿದ್ದೆಯನ್ನು ಕರುಣಿಸಿದನು. ಇನ್ನೊಂದು ಕಡೆ ಕಪಟವಿಶ್ವಾಸಿಗಳು ಅವರ ಬಗ್ಗೆಯೇ ಚಿಂತಿತರಾಗಿದ್ದರು. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೆಲವು ನಿರ್ಣಯಗಳು ಸರಿಯಿಲ್ಲ; ಅವರು ಯಾವ ಧರ್ಮದ ಕಡೆಗೆ ಜನರನ್ನು ಕರೆಯುತ್ತಿದ್ದಾರೋ ಆ ಧರ್ಮಕ್ಕೆ ಭವಿಷ್ಯವಿಲ್ಲ. ಅವರಿಗೆ ಅಲ್ಲಾಹನ ಕಡೆಯ ಸಹಾಯವಿಲ್ಲ ಎಂದು ಅವರು ಹೇಳುತ್ತಿದ್ದರು.
Âl-i İmran 3:155
(ಉಹುದ್ ಯುದ್ಧದಲ್ಲಿ) ಎರಡು ಬಣಗಳು ಮುಖಾಮುಖಿಯಾದ ದಿನದಂದು ನಿಮ್ಮ ಪೈಕಿ ಬೆನ್ನು ತೋರಿಸಿ ಓಡಿದವರು ಯಾರೋ—ಅವರು ಮಾಡಿದ ಕೆಲವು ದುಷ್ಕೃತ್ಯಗಳ ಕಾರಣದಿಂದ ಶೈತಾನನು ಅವರನ್ನು ಜಾರಿಕೊಳ್ಳುವಂತೆ ಮಾಡಿದ್ದನು. ಅಲ್ಲಾಹು ಅವರನ್ನು ಕ್ಷಮಿಸಿದ್ದಾನೆ. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ಸಹಿಷ್ಣುತೆಯುಳ್ಳವನಾಗಿದ್ದಾನೆ.
Âl-i İmran 3:156
ಓ ಸತ್ಯವಿಶ್ವಾಸಿಗಳೇ! ಸತ್ಯವನ್ನು ನಿಷೇಧಿಸಿದವರು ಮತ್ತು ತಮ್ಮ ಸಹೋದರರು ಪ್ರಯಾಣ ಹೊರಟಾಗ ಅಥವಾ ಯುದ್ಧಕ್ಕೆ ಹೊರಟಾಗ, “ಇವರು ನಮ್ಮ ಬಳಿಯಿರುತ್ತಿದ್ದರೆ ಸಾಯುತ್ತಿರಲಿಲ್ಲ ಮತ್ತು ಕೊಲೆಯಾಗುತ್ತಿರಲಿಲ್ಲ” ಎಂದು ಹೇಳುವವರಂತೆ ನೀವಾಗಬೇಡಿ. ಈ ಕಲ್ಪನೆಯನ್ನು ಅಲ್ಲಾಹು ಅವರ ಹೃದಯಗಳಲ್ಲಿನ ವ್ಯಥೆಗೆ ಕಾರಣವಾಗಿ ಮಾಡುತ್ತಾನೆ. ಅಲ್ಲಾಹನೇ ಜೀವ ಮತ್ತು ಮರಣವನ್ನು ನೀಡುವವನು. ಅಲ್ಲಾಹು ನೀವು ಮಾಡುತ್ತಿರುವ ಕರ್ಮಗಳನ್ನು ನೋಡುತ್ತಿದ್ದಾನೆ.
Âl-i İmran 3:157
ನೀವು ಅಲ್ಲಾಹನ ಮಾರ್ಗದಲ್ಲಿ ಕೊಲೆಯಾದರೆ ಅಥವಾ ಸಾವನ್ನಪ್ಪಿದರೆ ಅಲ್ಲಾಹನ ಕಡೆಯ ಕ್ಷಮೆ ಮತ್ತು ದಯೆಯು ಅವರು ಸಂಗ್ರಹಿಸಿಡುವ ಎಲ್ಲಾ ವಸ್ತುಗಳಿಗಿಂತಲೂ ಶ್ರೇಷ್ಠವಾಗಿದೆ.
Âl-i İmran 3:158
ನೀವು ಕೊಲೆಯಾದರೂ ಅಥವಾ ಸಾವನ್ನಪ್ಪಿದರೂ ನಿಶ್ಚಯವಾಗಿಯೂ ನಿಮ್ಮನ್ನು ಅಲ್ಲಾಹನ ಬಳಿಗೇ ಒಟ್ಟುಗೂಡಿಸಲಾಗುವುದು.
Âl-i İmran 3:159
(ಓ ಪ್ರವಾದಿಯವರೇ!) ಅಲ್ಲಾಹನ ಕಡೆಯ ದಯೆಯಿಂದಲೇ ನೀವು ಅವರೊಡನೆ ನಯವಾಗಿ ವರ್ತಿಸುತ್ತಿದ್ದೀರಿ. ನೀವು ಒರಟನೋ ಕಠೋರ ಹೃದಯಿಯೋ ಆಗಿದ್ದರೆ ಅವರು ನಿಮ್ಮ ಬಳಿಯಿಂದ ಚದುರಿಬಿಡುತ್ತಿದ್ದರು. ಆದ್ದರಿಂದ ಅವರನ್ನು ಕ್ಷಮಿಸಿರಿ ಮತ್ತು ಅವರಿಗಾಗಿ (ಅಲ್ಲಾಹನಲ್ಲಿ) ಕ್ಷಮೆಯಾಚಿಸಿರಿ. ಕಾರ್ಯನಿರ್ವಹಣೆಯ ಬಗ್ಗೆ ಅವರೊಡನೆ ಸಮಾಲೋಚನೆ ಮಾಡಿರಿ. ನಂತರ ನೀವು ದೃಢ ನಿರ್ಧಾರ ಕೈಗೊಂಡರೆ ಅಲ್ಲಾಹನಲ್ಲಿ ಭರವಸೆಯಿಡಿರಿ. ನಿಶ್ಚಯವಾಗಿಯೂ ಅಲ್ಲಾಹನ ಮೇಲೆ ಭರವಸೆಯಿಡುವವರನ್ನು ಅಲ್ಲಾಹು ಇಷ್ಟಪಡುತ್ತಾನೆ.
Âl-i İmran 3:160
ಅಲ್ಲಾಹು ನಿಮಗೆ ಸಹಾಯ ಮಾಡಿದರೆ ನಿಮ್ಮನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ. ಆದರೆ ಅವನೇನಾದರೂ ನಿಮ್ಮನ್ನು ಕೈಬಿಟ್ಟರೆ, ಅವನ ನಂತರ ನಿಮಗೆ ಸಹಾಯ ಮಾಡುವವರು ಯಾರು? ಸತ್ಯವಿಶ್ವಾಸಿಗಳು ಅಲ್ಲಾಹನಲ್ಲಿಯೇ ಭರವಸೆಯಿಡಲಿ.
Âl-i İmran 3:161
ಪ್ರವಾದಿಯು ಮೋಸ ಮಾಡುವುದು ಅಸಂಭವ.[1] ಯಾರು ಮೋಸ ಮಾಡುತ್ತಾನೋ ಅವನು ಪುನರುತ್ಥಾನ ದಿನದಂದು ತಾನು ಮಾಡಿದ ಮೋಸದೊಂದಿಗೆ ಬರುತ್ತಾನೆ. ನಂತರ ಪ್ರತಿಯೊಬ್ಬನಿಗೂ ಅವನು ಮಾಡಿದ ಕರ್ಮದ ಫಲವನ್ನು ಪೂರ್ಣವಾಗಿ ನೀಡಲಾಗುವುದು. ಅವರಿಗೆ ಯಾವುದೇ ಅನ್ಯಾಯವಾಗುವುದಿಲ್ಲ.
———
[1] ಉಹುದ್ ಯುದ್ಧದ ಆರಂಭದಲ್ಲಿ ವೈರಿಗಳು ದಿಕ್ಕಾಪಾಲಾಗಿ ಓಡಿ ಮುಸಲ್ಮಾನರಿಗೆ ಗೆಲುವು ಸಿಕ್ಕಿದಾಗ ಅವರು ವೈರಿಗಳು ಬಿಟ್ಟುಹೋದ ಯುದ್ಧ ಸಾಮಗ್ರಿಗಳನ್ನು ಸಂಗ್ರಹಿಸತೊಡಗಿದರು. ಆಗ ಗುಡ್ಡ ಮೇಲಿದ್ದ ಮುಸ್ಲಿಮರಿಗೆ ನಾವು ಹೋಗಿ ಯುದ್ಧ ಸಾಮಗ್ರಿಗಳನ್ನು ಸಂಗ್ರಹಿಸದಿದ್ದರೆ ಅವೆಲ್ಲವೂ ಅವರ ಪಾಲಾಗಿ ನಮಗೆ ಏನೂ ದೊರೆಯುವುದಿಲ್ಲ ಎಂದು ಭಾವಿಸಿ ಗುಡ್ಡದ ಮೇಲಿಂದ ಇಳಿದು ಬಂದು ಯುದ್ಧ ಸಾಮಗ್ರಿಗಳನ್ನು ಸಂಗ್ರಹಿಸತೊಡಗಿದರು. ಇವರ ಈ ಭಾವನೆಯನ್ನು ಈ ವಚನದಲ್ಲಿ ತಿದ್ದಲಾಗಿದೆ. ಅಂದರೆ ಈ ಯುದ್ಧವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಾಯಕತ್ವದಲ್ಲಿ ನಡೆಯುತ್ತಿದೆ. ಯುದ್ಧದಲ್ಲಿ ದೊರೆತ ಸಾಮಗ್ರಿಗಳನ್ನು ಅವರು ಯೋಧರ ನಡುವೆ ನ್ಯಾಯಯುತವಾಗಿ ಪಾಲು ಮಾಡುವುದಿಲ್ಲ ಎಂದು ನೀವು ಭಾವಿಸುತ್ತೀರಾ? ನಿಮ್ಮ ಭಾವನೆ ತಪ್ಪು. ಒಬ್ಬ ಪ್ರವಾದಿ ಯಾವತ್ತೂ ಮೋಸ ಮಾಡುವುದು ಸಾಧ್ಯವಿಲ್ಲ.
Âl-i İmran 3:162
ಅಲ್ಲಾಹನ ಸಂಪ್ರೀತಿಯನ್ನು ಅನುಸರಿಸುವವನು ಅಲ್ಲಾಹನ ಕೋಪಕ್ಕೆ ಪಾತ್ರನಾಗಿ ನರಕವನ್ನು ವಾಸಸ್ಥಳವಾಗಿ ಮಾಡಿಕೊಂಡವನಂತೆ ಆಗುವನೇ? ಆ ಗಮ್ಯಸ್ಥಾನವು ಬಹಳ ನಿಕೃಷ್ಟವಾಗಿದೆ.
Âl-i İmran 3:163
ಅವರಿಗೆ ಅಲ್ಲಾಹನ ಬಳಿ ವಿವಿಧ ಪದವಿಗಳಿವೆ. ಅಲ್ಲಾಹು ಅವರು ಮಾಡುತ್ತಿರುವ ಕರ್ಮಗಳನ್ನು ನೋಡುತ್ತಿದ್ದಾನೆ.
Âl-i İmran 3:164
ಅಲ್ಲಾಹನ ವಚನಗಳನ್ನು ಓದಿಕೊಡುವ, ಅವರನ್ನು ಶುದ್ದೀಕರಿಸುವ, ಅವರಿಗೆ ಗ್ರಂಥ ಮತ್ತು ವಿವೇಕವನ್ನು ಕಲಿಸಿಕೊಡುವ ಒಬ್ಬ ಸಂದೇಶವಾಹಕರನ್ನು ಅವರಿಂದಲೇ ಅವರಿಗೆ ಕಳುಹಿಸುವ ಮೂಲಕ ನಿಶ್ಚಯವಾಗಿಯೂ ಅಲ್ಲಾಹು ಸತ್ಯವಿಶ್ವಾಸಿಗಳಗೆ ಮಹಾ ಉಪಕಾರವನ್ನು ಮಾಡಿದ್ದಾನೆ. ಇದಕ್ಕೆ ಮೊದಲು ಅವರು ಸ್ಪಷ್ಟ ದುರ್ಮಾರ್ಗದಲ್ಲಿದ್ದರು.
Âl-i İmran 3:165
(ಉಹುದ್ ಯುದ್ಧದ ಸಂದರ್ಭ) ನಿಮಗೊಂದು ಅನಾಹುತ ಸಂಭವಿಸಿತು. ಆದರೆ ನೀವು ಶತ್ರುಗಳಿಗೆ (ಬದ್ರ್ ಯುುದ್ಧದ ಸಂದರ್ಭ) ಅದರ ಇಮ್ಮಡಿ ಅನಾಹುತವನ್ನು ಮಾಡಿದ್ದೀರಿ. ಹಾಗಿದ್ದೂ ಸಹ ನೀವು “ಇದು ಎಲ್ಲಿಂದ ಸಂಭವಿಸಿತು?” ಎಂದು ಕೇಳುತ್ತಿದ್ದೀರಿ! ಹೇಳಿರಿ: “ಅದು ನಿಮ್ಮ ತಪ್ಪಿನಿಂದಲೇ ಸಂಭವಿಸಿದೆ.” ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
Âl-i İmran 3:166
(ಉಹುದ್ ಯುದ್ಧದಲ್ಲಿ) ಎರಡು ಬಣಗಳು ಮುಖಾಮುಖಿಯಾದ ದಿನದಂದು ನಿಮಗೆ ಸಂಭವಿಸಿದ ಅನಾಹುತವು ಅಲ್ಲಾಹನ ಅಪ್ಪಣೆಯಿಂದಲೇ ಆಗಿದೆ. ಅದು ಸತ್ಯವಿಶ್ವಾಸಿಗಳು ಯಾರೆಂದು ತಿಳಿಯುವುದಕ್ಕಾಗಿದೆ.
Âl-i İmran 3:167
ಮತ್ತು ಕಪಟವಿಶ್ವಾಸಿಗಳು ಯಾರೆಂದು ತಿಳಿಯುವುದಕ್ಕಾಗಿ. ಆ ಕಪಟವಿಶ್ವಾಸಿಗಳೊಡನೆ “ಬನ್ನಿ! ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿ ಅಥವಾ (ಕನಿಷ್ಠ) ರಕ್ಷಣೆಯನ್ನಾದರೂ ಮಾಡಿ” ಎಂದು ಹೇಳಲಾದಾಗ, ಅವರು ಹೇಳಿದರು: “ಯುದ್ಧ ಸಂಭವಿಸುತ್ತದೆಯೆಂದು ತಿಳಿದಿದ್ದರೆ ನಾವು ನಿಮ್ಮ ಹಿಂದೆ ಬರುತ್ತಿದ್ದೆವು.” ಅಂದು ಅವರು ಸತ್ಯವಿಶ್ವಾಸಕ್ಕಿಂತಲೂ ಸತ್ಯನಿಷೇಧಕ್ಕೆ ಹೆಚ್ಚು ಹತ್ತಿರವಾಗಿದ್ದರು. ಅವರ ಹೃದಯಗಳಲ್ಲಿಲ್ಲದ ವಿಷಯವನ್ನು ಅವರು ಬಾಯಿ ಮೂಲಕ ಹೇಳುತ್ತಾರೆ. ಅವರು ಮುಚ್ಚಿಡುವ ಸಂಗತಿಗಳು ಏನೆಂದು ಅಲ್ಲಾಹನಿಗೆ ಬಹಳ ಚೆನ್ನಾಗಿ ತಿಳಿದಿದೆ.
Âl-i İmran 3:168
ಅವರು ಯಾರೆಂದರೆ, (ಯುದ್ಧಕ್ಕೆ ತೆರಳದೆ) ಮನೆಯಲ್ಲೇ ಕುಳಿತು (ಯುದ್ಧಕ್ಕೆ ಹೊರಟ) ತಮ್ಮ ಸಹೋದರರ ಬಗ್ಗೆ, “ಅವರು ನಮ್ಮ ಮಾತನ್ನು ಕೇಳುತ್ತಿದ್ದರೆ ಖಂಡಿತ ಕೊಲೆಯಾಗುತ್ತಿರಲಿಲ್ಲ” ಎಂದು ಹೇಳಿದವರಾಗಿದ್ದಾರೆ. ಹೇಳಿರಿ: “ನೀವು ಸತ್ಯವನ್ನೇ ಹೇಳುತ್ತಿದ್ದರೆ ನಿಮಗೆ ಸಾವು ಬರುವುದನ್ನು ತಡೆಗಟ್ಟಿರಿ.”
Âl-i İmran 3:169
ಅಲ್ಲಾಹನ ಮಾರ್ಗದಲ್ಲಿ ಹುತಾತ್ಮರಾದವರನ್ನು 'ಸತ್ತವರು' ಎಂದು ಭಾವಿಸಬೇಡಿ. ಅವರು ಜೀವಂತವಾಗಿದ್ದಾರೆ. ಅವರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ಆಹಾರವನ್ನು ನೀಡಲಾಗುತ್ತಿದೆ.
Âl-i İmran 3:170
ಅಲ್ಲಾಹು ಅವನ ಔದಾರ್ಯದಿಂದ ಅವರಿಗೆ ದಯಪಾಲಿಸಿರುವುದರಲ್ಲಿ ಅವರು ಸಂತೋಷವಾಗಿದ್ದಾರೆ. ತಮ್ಮೊಂದಿಗೆ ಇನ್ನೂ ಸೇರದ, ತಮ್ಮ ಹಿಂದೆ (ಇಹಲೋಕದಲ್ಲಿ) ಜೀವಿಸುತ್ತಿರುವ ಸತ್ಯವಿಶ್ವಾಸಿಗಳ ಬಗ್ಗೆ, ಅವರಿಗೆ ಯಾವುದೇ ಭಯವಿಲ್ಲ ಮತ್ತು ಅವರು ದುಃಖಿಸುವುದೂ ಇಲ್ಲವೆಂದು ತಿಳಿದು ಅವರು ಸಂತೋಷಪಡುತ್ತಿದ್ದಾರೆ.
Âl-i İmran 3:171
ಅಲ್ಲಾಹನ ಅನುಗ್ರಹ ಮತ್ತು ಔದಾರ್ಯದಿಂದ; ಮತ್ತು ಅಲ್ಲಾಹು ಸತ್ಯವಿಶ್ವಾಸಿಗಳ ಪ್ರತಿಫಲವನ್ನು ವ್ಯರ್ಥಗೊಳಿಸುವುದಿಲ್ಲ ಎಂಬುದರಿಂದ ಅವರು ಸಂತೋಷಪಡುತ್ತಿದ್ದಾರೆ.
Âl-i İmran 3:172
ಅವರು ಯಾರೆಂದರೆ ಗಾಯಾಳುಗಳಾದ ಬಳಿಕವೂ ಅಲ್ಲಾಹು ಮತ್ತು ಸಂದೇಶವಾಹಕರ ಕರೆಗೆ ಉತ್ತರಿಸಿದವರು. ಅವರಲ್ಲಿ ಒಳಿತು ಮಾಡಿದವರಿಗೆ ಮತ್ತು ದೇವಭಯವುಳ್ಳವರಿಗೆ ಮಹಾ ಪ್ರತಿಫಲವಿದೆ.
Âl-i İmran 3:173
“ನಿಶ್ಚಯವಾಗಿಯೂ ಆ ಜನರು (ಶತ್ರುಗಳು) ನಿಮ್ಮ ವಿರುದ್ಧ ಸೈನ್ಯವನ್ನು ಜಮಾವಣೆಗೊಳಿಸಿದ್ದಾರೆ; ಆದ್ದರಿಂದ ಅವರನ್ನು ಭಯಪಡಿರಿ” ಎಂದು ಜನರು ಅವರೊಡನೆ ಹೇಳಿದಾಗ ಅದು ಅವರ ವಿಶ್ವಾಸವನ್ನು ಹೆಚ್ಚಿಸಿತು. ಅವರು ಹೇಳಿದರು: “ನಮಗೆ ಅಲ್ಲಾಹು ಸಾಕು. ಭರವಸೆಯಿಡಲು ಅವನು ಅತ್ಯುತ್ತಮನಾಗಿದ್ದಾನೆ.”[1]
———
[1] ಉಹುದ್ ಯುದ್ಧದಿಂದ ಮರಳಿದ ಸತ್ಯನಿಷೇಧಿಗಳ ಮುಖಂಡ ಅಬೂಸುಫ್ಯಾನ್ ಕೆಲವು ಗೋತ್ರದವರಿಗೆ ಆಮಿಷ ನೀಡಿ ಕುರೈಷರು ದೊಡ್ಡ ಸೇನೆಯನ್ನು ಜಮಾವಣೆಗೊಳಿಸಿ ಮದೀನದ ಮೇಲೆ ದಂಡೆತ್ತಿ ಬರಲು ತಯಾರಿ ನಡೆಸುತ್ತಿದ್ದಾರೆ ಎಂಬ ವದಂತಿಯನ್ನು ಹಬ್ಬಿಸಿದರು. ಉಹುದ್ ಯುದ್ಧದ ಆಘಾತದಿಂದ ಹೊರಬರದ ಮುಸಲ್ಮಾನರು ಈ ಸುದ್ದಿಯನ್ನು ಕೇಳಿ ಎದೆಗುಂದುತ್ತಾರೆಂದು ಅವರು ಭಾವಿಸಿದ್ದರು. ಹಮ್ರಾವುಲ್ ಅಸದ್ ಎಂಬ ಸ್ಥಳದಲ್ಲಿದ್ದ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮತ್ತು ಮುಸಲ್ಮಾನರು ಈ ಸುದ್ದಿಯನ್ನು ಕೇಳಿದಾಗ ಅವರ ವಿಶ್ವಾಸವು ಇಮ್ಮಡಿಯಾಯಿತೇ ವಿನಾ ಅವರು ಎದೆಗುಂದಲಿಲ್ಲ.
Âl-i İmran 3:174
ಆದ್ದರಿಂದ ಅವರು ಅಲ್ಲಾಹನ ಕಡೆಯ ಅನುಗ್ರಹ ಮತ್ತು ಔದಾರ್ಯದೊಂದಿಗೆ ಮರಳಿದರು. ಅವರಿಗೆ ಯಾವುದೇ ತೊಂದರೆಯಾಗಲಿಲ್ಲ. ಅವರು ಅಲ್ಲಾಹನ ಸಂಪ್ರೀತಿಯನ್ನು ಹಿಂಬಾಲಿಸಿದರು. ಅಲ್ಲಾಹು ಮಹಾ ಔದಾರ್ಯವುಳ್ಳವನಾಗಿದ್ದಾನೆ.
Âl-i İmran 3:175
ಅದು (ನಿಮ್ಮನ್ನು ಹೆದರಿಸಿದ್ದು) ಶೈತಾನನಾಗಿದ್ದನು. ಅವನು ಅವನ ಮಿತ್ರರ ಬಗ್ಗೆ ಹೆದರಿಸುತ್ತಾನೆ. ಆದ್ದರಿಂದ ನೀವು ಅವರನ್ನು ಭಯಪಡಬೇಡಿ; ನನ್ನನ್ನು ಭಯಪಡಿರಿ. ನೀವು ಸತ್ಯವಿಶ್ವಾಸಿಗಳಾಗಿದ್ದರೆ.
Âl-i İmran 3:176
ಸತ್ಯನಿಷೇಧದಲ್ಲಿ ತ್ವರೆ ಮಾಡುತ್ತಾ ಮುನ್ನುಗ್ಗುವವರನ್ನು ಕಂಡು ನೀವು ಬೇಸರಿಸಬೇಡಿ. ನಿಶ್ಚಯವಾಗಿಯೂ ಅವರು ಅಲ್ಲಾಹನಿಗೆ ಯಾವುದೇ ತೊಂದರೆ ಮಾಡುವುದಿಲ್ಲ. ಅಲ್ಲಾಹು ಅವರಿಗೆ ಪರಲೋಕದಲ್ಲಿ ಯಾವುದೇ ಪಾಲು ನೀಡದಿರಲು ಉದ್ದೇಶಿಸಿದ್ದಾನೆ. ಅವರಿಗೆ ಕಠಿಣವಾದ ಶಿಕ್ಷೆಯಿದೆ.
Âl-i İmran 3:177
ನಿಶ್ಚಯವಾಗಿಯೂ ಸತ್ಯವಿಶ್ವಾಸದ ಬದಲಿಗೆ ಸತ್ಯನಿಷೇಧವನ್ನು ಖರೀದಿಸಿದವರು ಯಾರೋ—ಅವರು ಅಲ್ಲಾಹನಿಗೆ ಯಾವುದೇ ತೊಂದರೆ ಮಾಡುವುದಿಲ್ಲ. ಅವರಿಗೆ ಯಾತನಾಮಯ ಶಿಕ್ಷೆಯಿದೆ.
Âl-i İmran 3:178
ಸತ್ಯನಿಷೇಧಿಗಳಿಗೆ ನಾವು ಕಾಲಾವಕಾಶ ನೀಡುವುದು ಅವರ ಪಾಲಿಗೆ ಒಳಿತೆಂದು ಅವರೆಂದೂ ಭಾವಿಸದಿರಲಿ. ನಾವು ಅವರಿಗೆ ಕಾಲಾವಕಾಶ ನೀಡುವುದು ಅವರು ಪಾಪಗಳನ್ನು ಹೆಚ್ಚಿಸಲಿಕ್ಕಾಗಿದೆ. ಅವರಿಗೆ ಅವಮಾನಕರ ಶಿಕ್ಷೆಯಿದೆ.
Âl-i İmran 3:179
ಶುದ್ಧ ಮತ್ತು ಅಶುದ್ಧವನ್ನು ಬೇರ್ಪಡಿಸಿ ತೋರಿಸುವ ತನಕ ನೀವು ಯಾವ ಸ್ಥಿತಿಯಲ್ಲಿದ್ದೀರೋ ಅದೇ ಸ್ಥಿತಿಯಲ್ಲಿ ಅಲ್ಲಾಹು ಸತ್ಯವಿಶ್ವಾಸಿಗಳನ್ನು ಬಿಟ್ಟುಬಿಡುವುದಿಲ್ಲ. ಅಲ್ಲಾಹು ನಿಮಗೆ ಅದೃಶ್ಯ ಜ್ಞಾನವನ್ನು ತಿಳಿಸಿಕೊಡುವುದೂ ಇಲ್ಲ. ಆದರೆ ಅಲ್ಲಾಹು ಅವನ ಸಂದೇಶವಾಹಕರುಗಳಲ್ಲಿ ಅವನು ಇಚ್ಛಿಸುವವರನ್ನು ಆರಿಸುತ್ತಾನೆ. ಆದ್ದರಿಂದ ನೀವು ಅಲ್ಲಾಹನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಡಿರಿ. ನೀವು ವಿಶ್ವಾಸವಿಟ್ಟರೆ ಮತ್ತು ದೇವಭಯದಿಂದ ಜೀವಿಸಿದರೆ ನಿಮಗೆ ಮಹಾ ಪ್ರತಿಫಲವಿದೆ.
Âl-i İmran 3:180
ಅಲ್ಲಾಹು ತನ್ನ ಔದಾರ್ಯದಿಂದ ದಯಪಾಲಿಸಿದ ಧನದಲ್ಲಿ ಜಿಪುಣತೆ ತೋರುವವರು ಯಾರೋ—ಅದು ಅವರಿಗೆ ಒಳಿತೆಂದು ಅವರು ಭಾವಿಸದಿರಲಿ. ಅಲ್ಲ, ವಾಸ್ತವವಾಗಿ ಅದು ಅವರಿಗೆ ಕೆಡುಕಾಗಿದೆ. ಪುನರುತ್ಥಾನ ದಿನದಂದು ಅವರು ಜಿಪುಣತೆ ತೋರಿದ ವಸ್ತುವನ್ನು ಅವರ ಕೊರಳಿಗೆ ಹಾರವಾಗಿ ತೊಡಿಸಲಾಗುವುದು. ಭೂಮ್ಯಾಕಾಶಗಳ ವಾರಸುಹಕ್ಕು ಅಲ್ಲಾಹನಿಗೆ ಸೇರಿದ್ದು. ನೀವು ಮಾಡುವ ಕರ್ಮಗಳ ಬಗ್ಗೆ ಅಲ್ಲಾಹು ಸೂಕ್ಷ್ಮವಾಗಿ ತಿಳಿಯುವವನಾಗಿದ್ದಾನೆ.
Âl-i İmran 3:181
ಅಲ್ಲಾಹು ಬಡವನು ಮತ್ತು ನಾವು ಶ್ರೀಮಂತರು ಎಂದು ಹೇಳಿದವರ (ಯಹೂದಿಗಳ) ಮಾತನ್ನು ಅಲ್ಲಾಹು ಖಂಡಿತ ಕೇಳಿದ್ದಾನೆ.[1] ಅವರು ಹೇಳಿದ ಮಾತನ್ನು ಮತ್ತು ಅವರು ಪ್ರವಾದಿಗಳನ್ನು ಅನ್ಯಾಯವಾಗಿ ಕೊಲೆ ಮಾಡಿದ್ದನ್ನು ನಾವು ದಾಖಲಿಸಿಡುತ್ತೇವೆ. ಉರಿಯುವ ನರಕ ಶಿಕ್ಷೆಯ ರುಚಿಯನ್ನು ನೋಡಿರಿ ಎಂದು ನಾವು ಅವರೊಡನೆ ಹೇಳುವೆವು.
———
[1] ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವುದನ್ನು ಪ್ರೋತ್ಸಾಹಿಸುತ್ತಾ, “ಅಲ್ಲಾಹನಿಗೆ ಉತ್ತಮ ಸಾಲವನ್ನು ನೀಡುವವರು ಯಾರು?” ಎಂಬ ವಚನವು ಅವತೀರ್ಣವಾದಾಗ ಯಹೂದಿಗಳು “ಓ ಮುಹಮ್ಮದ್! ನಿಮ್ಮ ದೇವರು ಬಡವನಾಗಿ ಬಿಟ್ಟಿದ್ದಾನೆ. ಅವನು ಅವನ ಸೃಷ್ಟಿಗಳಿಂದ ಹಣ ಕೇಳುತ್ತಿದ್ದಾನೆ.” ಎಂದು ತಮಾಷೆ ಮಾಡತೊಡಗಿದರು. ಆಗ ಈ ವಚನವು ಅವತೀರ್ಣವಾಯಿತು.
Âl-i İmran 3:182
ಅದು ನಿಮ್ಮ ಕೈಗಳು ಮಾಡಿದ ದುಷ್ಕರ್ಮಗಳ ಫಲವಾಗಿದೆ. ಅಲ್ಲಾಹು ತನ್ನ ದಾಸರಿಗೆ ಅನ್ಯಾಯ ಮಾಡುವವನಲ್ಲ.
Âl-i İmran 3:183
ಅವರು ಯಾರೆಂದರೆ, “ನಮ್ಮ ಮುಂದೆ ಒಂದು ಬಲಿ ನೀಡಿ ಅದನ್ನು ಅಗ್ನಿಯು ಭಕ್ಷಿಸುವುದನ್ನು (ಕಣ್ಣಾರೆ ನೋಡುವ) ತನಕ ನಾವು ಯಾವುದೇ ಸಂದೇಶವಾಹಕನಲ್ಲಿ ವಿಶ್ವಾಸವಿಡಬಾರದು ಎಂದು ಅಲ್ಲಾಹು ನಮ್ಮಿಂದ ಕರಾರು ಪಡೆದಿದ್ದಾನೆ” ಎಂದು ಹೇಳಿದವರು.[1] ಹೇಳಿರಿ: “ನನಗಿಂತ ಮೊದಲು ಹಲವಾರು ಸಂದೇಶವಾಹಕರುಗಳು ಸ್ಪಷ್ಟ ಪುರಾವೆಗಳೊಂದಿಗೆ ಮತ್ತು ನೀವು ಹೇಳುತ್ತಿರುವ ಪವಾಡಗಳೊಂದಿಗೆ ನಿಮ್ಮ ಬಳಿಗೆ ಬಂದಿದ್ದರು. ಹಾಗಿದ್ದೂ ನೀವು ಸತ್ಯವಂತರಾಗಿದ್ದರೆ ನೀವೇಕೆ ಅವರನ್ನು ಕೊಲೆ ಮಾಡಿದಿರಿ?”
———
[1] ಇಲ್ಲಿ ಯಹೂದಿಗಳು ಹೇಳಿದ ಇನ್ನೊಂದು ಸುಳ್ಳನ್ನು ಕೂಡ ಅನಾವರಣಗೊಳಿಸಲಾಗಿದೆ. ಅದೇನೆಂದರೆ ಅವರು ಹೇಳುತ್ತಿದ್ದರು: “ಒಬ್ಬ ವ್ಯಕ್ತಿ ನಿಮ್ಮ ಬಳಿಗೆ ಬಂದು ಅಲ್ಲಾಹನಲ್ಲಿ ಪ್ರಾರ್ಥಿಸಿದಾಗ ಆಕಾಶದಿಂದ ಬೆಂಕಿ ಸುರಿದು ನೀವು ಅಲ್ಲಾಹನಿಗೆ ಕುರ್ಬಾನಿ ಮಾಡಿದ ಪ್ರಾಣಿಯನ್ನು ಅದು ಭಕ್ಷಿಸಿದರೆ ಮಾತ್ರ ಆ ವ್ಯಕ್ತಿಯನ್ನು ಪ್ರವಾದಿಯೆಂದು ನಂಬಿರಿ. ಇಲ್ಲದಿದ್ದರೆ ನಂಬಬೇಡಿ ಎಂದು ಅಲ್ಲಾಹು ನಮ್ಮೊಡನೆ ಕರಾರು ಪಡೆದಿದ್ದಾನೆ. ನೀವು ಆ ಪವಾಡವನ್ನು ತೋರಿಸಿಲ್ಲ. ಆದ್ದರಿಂದ ನಾವು ನಿಮ್ಮಲ್ಲಿ ವಿಶ್ವಾಸವಿಡುವುದಿಲ್ಲ.” ಆದರೆ ಇದು ಅವರು ಹೇಳುವ ಒಂದು ನೆಪ ಮಾತ್ರ. ಏಕೆಂದರೆ ಇದಕ್ಕಿಂತ ಮೊದಲು ಇಂತಹ ಅನೇಕ ಪವಾಡಗಳನ್ನು ತೋರಿಸಿದ ಪ್ರವಾದಿಗಳನ್ನು ಇವರ ಪೂರ್ವಜರು ತಿರಸ್ಕರಿಸಿದ್ದರು ಮತ್ತು ನಿರ್ದಯವಾಗಿ ಕೊಂದು ಹಾಕಿದ್ದರು.
Âl-i İmran 3:184
ಅವರು ನಿಮ್ಮನ್ನು ನಿಷೇಧಿಸುವುದಾದರೆ ನಿಮಗಿಂತ ಮೊದಲು ಸ್ಪಷ್ಟ ಪುರಾವೆಗಳೊಂದಿಗೆ, ಹೊತ್ತಗೆಗಳೊಂದಿಗೆ ಮತ್ತು ಪ್ರಕಾಶ ಬೀರುವ ಗ್ರಂಥದೊಂದಿಗೆ ಬಂದ ಸಂದೇಶವಾಹಕರು ಕೂಡ ನಿಷೇಧಿಸಲ್ಪಟ್ಟಿದ್ದರು.
Âl-i İmran 3:185
ಎಲ್ಲಾ ಆತ್ಮಗಳೂ ಸಾವಿನ ರುಚಿಯನ್ನು ನೋಡಲಿವೆ. ನಿಮ್ಮ ಪ್ರತಿಫಲಗಳನ್ನು ಪುನರುತ್ಥಾನ ದಿನದಂದು ನಿಮಗೆ ಪೂರ್ಣವಾಗಿ ನೀಡಲಾಗುವುದು. ಆಗ ಯಾರು ನರಕದಿಂದ ದೂರವಾಗಿ, ಸ್ವರ್ಗಕ್ಕೆ ಪ್ರವೇಶ ಪಡೆಯುತ್ತಾನೋ ಅವನು ಜಯಶಾಲಿಯಾದನು. ಇಹಲೋಕ ಜೀವನವು ಮರುಳುಗೊಳಿಸುವ ಆನಂದ ಮಾತ್ರವಾಗಿದೆ.
Âl-i İmran 3:186
ನಿಶ್ಚಯವಾಗಿಯೂ ನಿಮ್ಮ ತನು-ಧನಗಳಲ್ಲಿ ನಿಮ್ಮನ್ನು ಪರೀಕ್ಷಿಸಲಾಗುವುದು. ನಿಮಗಿಂತ ಮೊದಲು ಗ್ರಂಥ ನೀಡಲಾದವರಿಂದ ಮತ್ತು ಬಹುದೇವಾರಾಧಕರಿಂದ ನೀವು ಅನೇಕ ಚುಚ್ಚು ಮಾತುಗಳನ್ನು ಕೇಳುವಿರಿ. ನೀವು ತಾಳ್ಮೆ ವಹಿಸಿದರೆ ಮತ್ತು ಅಲ್ಲಾಹನನ್ನು ಭಯಪಟ್ಟು ಜೀವಿಸಿದರೆ ನಿಶ್ಚಯವಾಗಿಯೂ ಅದು ದೃಢಸಂಕಲ್ಪದಲ್ಲಿ ಸೇರಿದ ವಿಷಯವಾಗಿದೆ.
Âl-i İmran 3:187
“ನಿಶ್ಚಯವಾಗಿಯೂ ನೀವು ಅದನ್ನು (ಗ್ರಂಥವನ್ನು) ಜನರಿಗೆ ವಿವರಿಸಿಕೊಡಬೇಕು ಮತ್ತು ಅದನ್ನು ಬಚ್ಚಿಡಬಾರದು” ಎಂದು ಅಲ್ಲಾಹು ಗ್ರಂಥ ನೀಡಲಾದವರಿಂದ ಕರಾರು ಪಡೆದ ಸಂದರ್ಭ. ಆದರೆ ಅವರು ಅದನ್ನು (ಗ್ರಂಥವನ್ನು) ತಮ್ಮ ಬೆನ್ನ ಹಿಂದಕ್ಕೆ ಎಸೆದರು ಮತ್ತು ಅದನ್ನು ಅಲ್ಪ ಬೆಲೆಗೆ ಮಾರಾಟ ಮಾಡಿದರು. ಅವರು ಮಾಡಿದ ಮಾರಾಟವು ಬಹಳ ನಿಕೃಷ್ಟವಾಗಿದೆ!
Âl-i İmran 3:188
ತಾವು ಮಾಡಿದ ಕರ್ಮಗಳ ಬಗ್ಗೆ ಸಂತೋಷಪಡುವವರು ಮತ್ತು ತಾವು ಮಾಡದ ಕರ್ಮಗಳ ಹೆಸರಿನಲ್ಲಿ ಪ್ರಶಂಸೆ ಪಡೆಯಲು ಇಷ್ಟಪಡುವವರು ಯಾರೋ—ಅವರು ಶಿಕ್ಷೆಯಿಂದ ಮುಕ್ತರೆಂದು ನೀವೆಂದೂ ಭಾವಿಸಬೇಡಿ. ಅವರಿಗೆ ಯಾತನಾಮಯ ಶಿಕ್ಷೆಯಿದೆ.
Âl-i İmran 3:189
ಭೂಮ್ಯಾಕಾಶಗಳ ಸಾರ್ವಭೌಮತ್ವವು ಅಲ್ಲಾಹನಿಗೆ ಸೇರಿದ್ದು. ಅಲ್ಲಾಹು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
Âl-i İmran 3:190
ನಿಶ್ಚಯವಾಗಿಯೂ ಭೂಮ್ಯಾಕಾಶಗಳ ಸೃಷ್ಟಿಯಲ್ಲಿ ಮತ್ತು ರಾತ್ರಿ ಹಗಲುಗಳ ಬದಲಾವಣೆಯಲ್ಲಿ ಬುದ್ಧಿವಂತರಿಗೆ ಅನೇಕ ದೃಷ್ಟಾಂತಗಳಿವೆ.
Âl-i İmran 3:191
ಅವರು ಯಾರೆಂದರೆ, ನಿಂತುಕೊಂಡು, ಕುಳಿತುಕೊಂಡು ಮತ್ತು ಪಾರ್ಶ್ವಕ್ಕೆ ಸರಿದು (ಮಲಗಿಕೊಂಡು) ಅಲ್ಲಾಹನನ್ನು ಸ್ಮರಿಸುವವರು ಮತ್ತು ಭೂಮ್ಯಾಕಾಶಗಳ ಸೃಷ್ಟಿಯ ಬಗ್ಗೆ ಆಲೋಚಿಸುವವರು. (ಅವರು ಹೇಳುತ್ತಾರೆ): “ಓ ನಮ್ಮ ಪರಿಪಾಲಕನೇ! ನೀನು ಇದನ್ನು ವ್ಯರ್ಥವಾಗಿ ಸೃಷ್ಟಿಸಿಲ್ಲ. ನೀನು ಪರಿಶುದ್ಧನು. ಆದ್ದರಿಂದ ನಮ್ಮನ್ನು ನರಕ ಶಿಕ್ಷೆಯಿಂದ ರಕ್ಷಿಸು.
Âl-i İmran 3:192
ಓ ನಮ್ಮ ಪರಿಪಾಲಕನೇ! ನೀನು ಯಾರನ್ನು ನರಕಕ್ಕೆ ತಳ್ಳುತ್ತೀಯೋ ಅವನನ್ನು ನೀನು ಅವಮಾನಿಸಿರುವೆ. ಅಕ್ರಮಿಗಳಿಗೆ ಯಾವುದೇ ಸಹಾಯಕರಿಲ್ಲ.
Âl-i İmran 3:193
ಓ ನಮ್ಮ ಪರಿಪಾಲಕನೇ! ನಿಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ವಿಶ್ವಾಸವಿಡಿ ಎಂದು ಹೇಳುತ್ತಾ ಸತ್ಯವಿಶ್ವಾಸಕ್ಕೆ ಕರೆ ನೀಡುವವನ ಕರೆಯನ್ನು ಕೇಳಿ ನಾವು ವಿಶ್ವಾಸವಿಟ್ಟಿದ್ದೇವೆ. ಆದ್ದರಿಂದ ಓ ನಮ್ಮ ಪರಿಪಾಲಕನೇ! ನಮ್ಮ ಪಾಪಗಳನ್ನು ಕ್ಷಮಿಸು ಮತ್ತು ನಮ್ಮ ದೋಷಗಳನ್ನು ನಮ್ಮಿಂದ ಅಳಿಸು; ನಮ್ಮನ್ನು ನೀತಿವಂತರೊಂದಿಗೆ ಮರಣಹೊಂದುವಂತೆ ಮಾಡು.
Âl-i İmran 3:194
ಓ ನಮ್ಮ ಪರಿಪಾಲಕನೇ! ನಿನ್ನ ಸಂದೇಶವಾಹಕರ ಮೂಲಕ ನೀನು ವಾಗ್ದಾನ ಮಾಡಿದ್ದನ್ನು ನಮಗೆ ದಯಪಾಲಿಸು ಮತ್ತು ಪುನರುತ್ಥಾನ ದಿನದಂದು ನಮ್ಮನ್ನು ಅವಮಾನಿಸದಿರು. ನಿಶ್ಚಯವಾಗಿಯೂ ನೀನು ವಾಗ್ದಾನವನ್ನು ಉಲ್ಲಂಘಿಸುವುದಿಲ್ಲ.”
Âl-i İmran 3:195
ಆಗ ಅವರ ಪರಿಪಾಲಕನು (ಅಲ್ಲಾಹು) ಅವರಿಗೆ ಉತ್ತರಿಸಿದನು: “ಪುರುಷನಾಗಲಿ ಸ್ತ್ರೀಯಾಗಲಿ ನಿಮ್ಮಲ್ಲಿ ಕರ್ಮವೆಸಗಿದ ಯಾರ ಕರ್ಮವನ್ನೂ ನಾನು ನಿಷ್ಫಲಗೊಳಿಸುವುದಿಲ್ಲ. ನೀವು ಒಬ್ಬರು ಇನ್ನೊಬ್ಬರಿಂದ ಉಂಟಾದವರು. ಆದ್ದರಿಂದ ವಲಸೆ (ಹಿಜ್ರ) ಮಾಡಿದವರು, ತಮ್ಮ ಮನೆಗಳಿಂದ ಹೊರಹಾಕಲಾದವರು, ನನ್ನ ಮಾರ್ಗದಲ್ಲಿ ತೊಂದರೆಯನ್ನು ಅನುಭವಿಸಿದವರು, (ನನ್ನ ಮಾರ್ಗದಲ್ಲಿ) ಯುದ್ಧ ಮಾಡಿದವರು ಮತ್ತು ಕೊಲೆಯಾದವರು (ಹುತಾತ್ಮರು) ಯಾರೋ—ಅವರ ಪಾಪಗಳನ್ನು ನಾನು ಅಳಿಸುವೆನು ಮತ್ತು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿಗೆ ಅವರನ್ನು ಪ್ರವೇಶ ಮಾಡಿಸುವೆನು. ಇದು ಅಲ್ಲಾಹನ ಕಡೆಯ ಪ್ರತಿಫಲವಾಗಿದೆ. ಅಲ್ಲಾಹನ ಬಳಿ ಅತ್ಯುತ್ತಮವಾದ ಪ್ರತಿಫಲವಿದೆ.
Âl-i İmran 3:196
ಊರುಗಳಲ್ಲಿ ಸತ್ಯನಿಷೇಧಿಗಳ ಮೆರೆದಾಟವು ನಿಮ್ಮನ್ನು ಮರುಳುಗೊಳಿಸದಿರಲಿ.
Âl-i İmran 3:197
ಅದು ತಾತ್ಕಾಲಿಕ ಆನಂದವಾಗಿದೆ. ನಂತರ ಅವರ ವಾಸಸ್ಥಳವು ನರಕಾಗ್ನಿಯಾಗಿದೆ. ಆ ವಾಸಸ್ಥಳ ಬಹಳ ನಿಕೃಷ್ಟವಾಗಿದೆ!
Âl-i İmran 3:198
ಆದರೆ ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಭಯಪಡುವವರು ಯಾರೋ—ಅವರಿಗೆ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿವೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅದು ಅಲ್ಲಾಹನ ಕಡೆಯ ಔತಣವಾಗಿದೆ. ನೀತಿವಂತರಿಗೆ ಅಲ್ಲಾಹನ ಬಳಿಯಿರುವುದೇ ಅತ್ಯುತ್ತಮವಾಗಿದೆ.
Âl-i İmran 3:199
ನಿಶ್ಚಯವಾಗಿಯೂ ಗ್ರಂಥದವರಲ್ಲಿ ಕೆಲವರಿದ್ದಾರೆ. ಅವರು ಅಲ್ಲಾಹನಲ್ಲಿ, ನಿಮಗೆ ಅವತೀರ್ಣವಾಗಿರುವುದರಲ್ಲಿ ಮತ್ತು ಅವರಿಗೆ ಅವತೀರ್ಣವಾಗಿರುವುದರಲ್ಲಿ ವಿಶ್ವಾಸವಿಡುತ್ತಾರೆ. ಅವರು ಅಲ್ಲಾಹನಿಗೆ ವಿಧೇಯತೆಯಿಂದ ಶರಣಾಗಿದ್ದಾರೆ. ಅವರು ಅಲ್ಲಾಹನ ವಚನಗಳನ್ನು ಅಲ್ಪ ಬೆಲೆಗೆ ಮಾರುವುದಿಲ್ಲ. ಅವರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ಅವರ ಪ್ರತಿಫಲವಿದೆ. ನಿಶ್ಚಯವಾಗಿಯೂ ಅಲ್ಲಾಹು ಅತಿವೇಗವಾಗಿ ವಿಚಾರಣೆ ಮಾಡುತ್ತಾನೆ.
Âl-i İmran 3:200
ಓ ಸತ್ಯವಿಶ್ವಾಸಿಗಳೇ! ತಾಳ್ಮೆಯಿಂದಿರಿ, ಪರಸ್ಪರ ಸ್ಥೈರ್ಯವನ್ನು ತೋರಿರಿ ಮತ್ತು ಪ್ರತಿರೋಧ ಸನ್ನದ್ಧರಾಗಿರಿ. ಅಲ್ಲಾಹನನ್ನು ಭಯಪಡಿರಿ. ನೀವು ಯಶಸ್ವಿಯಾಗುವುದಕ್ಕಾಗಿ.