Kannada Meal — Hamza Butur — Nisa' 4:1 – Enam 6:165
Contents
- Nisa' 4:1
- Nisa' 4:2
- Nisa' 4:3
- Nisa' 4:4
- Nisa' 4:5
- Nisa' 4:6
- Nisa' 4:7
- Nisa' 4:8
- Nisa' 4:9
- Nisa' 4:10
- Nisa' 4:11
- Nisa' 4:12
- Nisa' 4:13
- Nisa' 4:14
- Nisa' 4:15
- Nisa' 4:16
- Nisa' 4:17
- Nisa' 4:18
- Nisa' 4:19
- Nisa' 4:20
- Nisa' 4:21
- Nisa' 4:22
- Nisa' 4:23
- Nisa' 4:24
- Nisa' 4:25
- Nisa' 4:26
- Nisa' 4:27
- Nisa' 4:28
- Nisa' 4:29
- Nisa' 4:30
- Nisa' 4:31
- Nisa' 4:32
- Nisa' 4:33
- Nisa' 4:34
- Nisa' 4:35
- Nisa' 4:36
- Nisa' 4:37
- Nisa' 4:38
- Nisa' 4:39
- Nisa' 4:40
- Nisa' 4:41
- Nisa' 4:42
- Nisa' 4:43
- Nisa' 4:44
- Nisa' 4:45
- Nisa' 4:46
- Nisa' 4:47
- Nisa' 4:48
- Nisa' 4:49
- Nisa' 4:50
- Nisa' 4:51
- Nisa' 4:52
- Nisa' 4:53
- Nisa' 4:54
- Nisa' 4:55
- Nisa' 4:56
- Nisa' 4:57
- Nisa' 4:58
- Nisa' 4:59
- Nisa' 4:60
- Nisa' 4:61
- Nisa' 4:62
- Nisa' 4:63
- Nisa' 4:64
- Nisa' 4:65
- Nisa' 4:66
- Nisa' 4:67
- Nisa' 4:68
- Nisa' 4:69
- Nisa' 4:70
- Nisa' 4:71
- Nisa' 4:72
- Nisa' 4:73
- Nisa' 4:74
- Nisa' 4:75
- Nisa' 4:76
- Nisa' 4:77
- Nisa' 4:78
- Nisa' 4:79
- Nisa' 4:80
- Nisa' 4:81
- Nisa' 4:82
- Nisa' 4:83
- Nisa' 4:84
- Nisa' 4:85
- Nisa' 4:86
- Nisa' 4:87
- Nisa' 4:88
- Nisa' 4:89
- Nisa' 4:90
- Nisa' 4:91
- Nisa' 4:92
- Nisa' 4:93
- Nisa' 4:94
- Nisa' 4:95
- Nisa' 4:96
- Nisa' 4:97
- Nisa' 4:98
- Nisa' 4:99
- Nisa' 4:100
- Nisa' 4:101
- Nisa' 4:102
- Nisa' 4:103
- Nisa' 4:104
- Nisa' 4:105
- Nisa' 4:106
- Nisa' 4:107
- Nisa' 4:108
- Nisa' 4:109
- Nisa' 4:110
- Nisa' 4:111
- Nisa' 4:112
- Nisa' 4:113
- Nisa' 4:114
- Nisa' 4:115
- Nisa' 4:116
- Nisa' 4:117
- Nisa' 4:118
- Nisa' 4:119
- Nisa' 4:120
- Nisa' 4:121
- Nisa' 4:122
- Nisa' 4:123
- Nisa' 4:124
- Nisa' 4:125
- Nisa' 4:126
- Nisa' 4:127
- Nisa' 4:128
- Nisa' 4:129
- Nisa' 4:130
- Nisa' 4:131
- Nisa' 4:132
- Nisa' 4:133
- Nisa' 4:134
- Nisa' 4:135
- Nisa' 4:136
- Nisa' 4:137
- Nisa' 4:138
- Nisa' 4:139
- Nisa' 4:140
- Nisa' 4:141
- Nisa' 4:142
- Nisa' 4:143
- Nisa' 4:144
- Nisa' 4:145
- Nisa' 4:146
- Nisa' 4:147
- Nisa' 4:148
- Nisa' 4:149
- Nisa' 4:150
- Nisa' 4:151
- Nisa' 4:152
- Nisa' 4:153
- Nisa' 4:154
- Nisa' 4:155
- Nisa' 4:156
- Nisa' 4:157
- Nisa' 4:158
- Nisa' 4:159
- Nisa' 4:160
- Nisa' 4:161
- Nisa' 4:162
- Nisa' 4:163
- Nisa' 4:164
- Nisa' 4:165
- Nisa' 4:166
- Nisa' 4:167
- Nisa' 4:168
- Nisa' 4:169
- Nisa' 4:170
- Nisa' 4:171
- Nisa' 4:172
- Nisa' 4:173
- Nisa' 4:174
- Nisa' 4:175
- Nisa' 4:176
- Maide 5:1
- Maide 5:2
- Maide 5:3
- Maide 5:4
- Maide 5:5
- Maide 5:6
- Maide 5:7
- Maide 5:8
- Maide 5:9
- Maide 5:10
- Maide 5:11
- Maide 5:12
- Maide 5:13
- Maide 5:14
- Maide 5:15
- Maide 5:16
- Maide 5:17
- Maide 5:18
- Maide 5:19
- Maide 5:20
- Maide 5:21
- Maide 5:22
- Maide 5:23
- Maide 5:24
- Maide 5:25
- Maide 5:26
- Maide 5:27
- Maide 5:28
- Maide 5:29
- Maide 5:30
- Maide 5:31
- Maide 5:32
- Maide 5:33
- Maide 5:34
- Maide 5:35
- Maide 5:36
- Maide 5:37
- Maide 5:38
- Maide 5:39
- Maide 5:40
- Maide 5:41
- Maide 5:42
- Maide 5:43
- Maide 5:44
- Maide 5:45
- Maide 5:46
- Maide 5:47
- Maide 5:48
- Maide 5:49
- Maide 5:50
- Maide 5:51
- Maide 5:52
- Maide 5:53
- Maide 5:54
- Maide 5:55
- Maide 5:56
- Maide 5:57
- Maide 5:58
- Maide 5:59
- Maide 5:60
- Maide 5:61
- Maide 5:62
- Maide 5:63
- Maide 5:64
- Maide 5:65
- Maide 5:66
- Maide 5:67
- Maide 5:68
- Maide 5:69
- Maide 5:70
- Maide 5:71
- Maide 5:72
- Maide 5:73
- Maide 5:74
- Maide 5:75
- Maide 5:76
- Maide 5:77
- Maide 5:78
- Maide 5:79
- Maide 5:80
- Maide 5:81
- Maide 5:82
- Maide 5:83
- Maide 5:84
- Maide 5:85
- Maide 5:86
- Maide 5:87
- Maide 5:88
- Maide 5:89
- Maide 5:90
- Maide 5:91
- Maide 5:92
- Maide 5:93
- Maide 5:94
- Maide 5:95
- Maide 5:96
- Maide 5:97
- Maide 5:98
- Maide 5:99
- Maide 5:100
- Maide 5:101
- Maide 5:102
- Maide 5:103
- Maide 5:104
- Maide 5:105
- Maide 5:106
- Maide 5:107
- Maide 5:108
- Maide 5:109
- Maide 5:110
- Maide 5:111
- Maide 5:112
- Maide 5:113
- Maide 5:114
- Maide 5:115
- Maide 5:116
- Maide 5:117
- Maide 5:118
- Maide 5:119
- Maide 5:120
- Enam 6:1
- Enam 6:2
- Enam 6:3
- Enam 6:4
- Enam 6:5
- Enam 6:6
- Enam 6:7
- Enam 6:8
- Enam 6:9
- Enam 6:10
- Enam 6:11
- Enam 6:12
- Enam 6:13
- Enam 6:14
- Enam 6:15
- Enam 6:16
- Enam 6:17
- Enam 6:18
- Enam 6:19
- Enam 6:20
- Enam 6:21
- Enam 6:22
- Enam 6:23
- Enam 6:24
- Enam 6:25
- Enam 6:26
- Enam 6:27
- Enam 6:28
- Enam 6:29
- Enam 6:30
- Enam 6:31
- Enam 6:32
- Enam 6:33
- Enam 6:34
- Enam 6:35
- Enam 6:36
- Enam 6:37
- Enam 6:38
- Enam 6:39
- Enam 6:40
- Enam 6:41
- Enam 6:42
- Enam 6:43
- Enam 6:44
- Enam 6:45
- Enam 6:46
- Enam 6:47
- Enam 6:48
- Enam 6:49
- Enam 6:50
- Enam 6:51
- Enam 6:52
- Enam 6:53
- Enam 6:54
- Enam 6:55
- Enam 6:56
- Enam 6:57
- Enam 6:58
- Enam 6:59
- Enam 6:60
- Enam 6:61
- Enam 6:62
- Enam 6:63
- Enam 6:64
- Enam 6:65
- Enam 6:66
- Enam 6:67
- Enam 6:68
- Enam 6:69
- Enam 6:70
- Enam 6:71
- Enam 6:72
- Enam 6:73
- Enam 6:74
- Enam 6:75
- Enam 6:76
- Enam 6:77
- Enam 6:78
- Enam 6:79
- Enam 6:80
- Enam 6:81
- Enam 6:82
- Enam 6:83
- Enam 6:84
- Enam 6:85
- Enam 6:86
- Enam 6:87
- Enam 6:88
- Enam 6:89
- Enam 6:90
- Enam 6:91
- Enam 6:92
- Enam 6:93
- Enam 6:94
- Enam 6:95
- Enam 6:96
- Enam 6:97
- Enam 6:98
- Enam 6:99
- Enam 6:100
- Enam 6:101
- Enam 6:102
- Enam 6:103
- Enam 6:104
- Enam 6:105
- Enam 6:106
- Enam 6:107
- Enam 6:108
- Enam 6:109
- Enam 6:110
- Enam 6:111
- Enam 6:112
- Enam 6:113
- Enam 6:114
- Enam 6:115
- Enam 6:116
- Enam 6:117
- Enam 6:118
- Enam 6:119
- Enam 6:120
- Enam 6:121
- Enam 6:122
- Enam 6:123
- Enam 6:124
- Enam 6:125
- Enam 6:126
- Enam 6:127
- Enam 6:128
- Enam 6:129
- Enam 6:130
- Enam 6:131
- Enam 6:132
- Enam 6:133
- Enam 6:134
- Enam 6:135
- Enam 6:136
- Enam 6:137
- Enam 6:138
- Enam 6:139
- Enam 6:140
- Enam 6:141
- Enam 6:142
- Enam 6:143
- Enam 6:144
- Enam 6:145
- Enam 6:146
- Enam 6:147
- Enam 6:148
- Enam 6:149
- Enam 6:150
- Enam 6:151
- Enam 6:152
- Enam 6:153
- Enam 6:154
- Enam 6:155
- Enam 6:156
- Enam 6:157
- Enam 6:158
- Enam 6:159
- Enam 6:160
- Enam 6:161
- Enam 6:162
- Enam 6:163
- Enam 6:164
- Enam 6:165
Nisa' 4:1
ಓ ಜನರೇ! ನಿಮ್ಮನ್ನು ಒಂದೇ ದೇಹದಿಂದ ಸೃಷ್ಟಿಸಿದ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಭಯಪಡಿರಿ. ಅವನು ಅದರಿಂದಲೇ ಅದರ ಸಂಗಾತಿಯನ್ನು ಸೃಷ್ಟಿಸಿದನು ಮತ್ತು ಅವರಿಬ್ಬರಿಂದ ಅಸಂಖ್ಯ ಪುರುಷರನ್ನು ಮತ್ತು ಸ್ತ್ರೀಯರನ್ನು ಹಬ್ಬಿಸಿದನು. ಯಾರ ಹೆಸರಿನಿಂದ ನೀವು ಪರಸ್ಪರ ಕೇಳುತ್ತೀರೋ ಆ ಅಲ್ಲಾಹನನ್ನು ಮತ್ತು ಕುಟುಂಬ ಸಂಬಂಧ ಕಡಿಯುವುದನ್ನು ಭಯಪಡಿರಿ. ಅಲ್ಲಾಹು ನಿಮ್ಮನ್ನು ಸದಾ ಗಮನಿಸುತ್ತಿದ್ದಾನೆ.
Nisa' 4:2
ಅನಾಥರಿಗೆ ಅವರ ಆಸ್ತಿಯನ್ನು ಕೊಟ್ಟುಬಿಡಿ. ಶುದ್ಧ (ಮತ್ತು ಧರ್ಮಸಮ್ಮತ) ವಸ್ತುಗಳ ಬದಲಿಗೆ ಹೊಲಸು (ಮತ್ತು ನಿಷಿದ್ಧ) ವಸ್ತುಗಳನ್ನು ಪಡೆಯಬೇಡಿ. ಅವರ ಆಸ್ತಿಯನ್ನು ನಿಮ್ಮ ಆಸ್ತಿಯೊಂದಿಗೆ ಸೇರಿಸಿ ತಿನ್ನಬೇಡಿ. ನಿಶ್ಚಯವಾಗಿಯೂ ಅದು ಗಂಭೀರ ಅಪರಾಧವಾಗಿದೆ.
Nisa' 4:3
ಅನಾಥ ಹೆಣ್ಣುಮಕ್ಕಳ ವಿಷಯದಲ್ಲಿ ನ್ಯಾಯದಿಂದ ವರ್ತಿಸಲು ನಿಮಗೆ ಸಾಧ್ಯವಾಗದೆಂದು ನೀವು ಭಯಪಡುವುದಾದರೆ, ಇತರ ಮಹಿಳೆಯರಲ್ಲಿ ನಿಮಗೆ ಇಷ್ಟವಾದ ಇಬ್ಬರು, ಮೂವರು ಅಥವಾ ನಾಲ್ವರನ್ನು ವಿವಾಹವಾಗಿರಿ.[1] ಆದರೆ (ಅವರ ನಡುವೆ) ನ್ಯಾಯದಿಂದ ವರ್ತಿಸಲು ನಿಮಗೆ ಸಾಧ್ಯವಾಗದೆಂಬ ಭಯವಿದ್ದರೆ, ಒಬ್ಬಳನ್ನೇ ವಿವಾಹವಾಗಿರಿ.[2] ಅಥವಾ ನಿಮ್ಮ ಅಧೀನದಲ್ಲಿರುವ ಗುಲಾಮಸ್ತ್ರೀಯನ್ನು ವಿವಾಹವಾಗಿರಿ. ನೀವು (ಅನ್ಯಾಯದ ಕಡೆಗೆ) ವಾಲದಿರಲು ಇದು ಅತ್ಯಂತ ಸೂಕ್ತವಾಗಿದೆ.
———
[1] ಇಸ್ಲಾಮೀ ಪೂರ್ವ ಕಾಲದಲ್ಲಿ ಅನಾಥ ಹೆಣ್ಣುಮಕ್ಕಳ ಪೋಷಣೆಯ ಹೊಣೆಯನ್ನು ವಹಿಸಿಕೊಂಡವರು ಅವರ ಆಸ್ತಿ ಮತ್ತು ಸೌಂದರ್ಯದ ಮೇಲೆ ಕಣ್ಣಿಟ್ಟು ಅವರನ್ನು ವಿವಾಹವಾಗುತ್ತಿದ್ದರು. ಆದರೆ ಅವರಿಗೆ ವಧುದಕ್ಷಿಣೆ ನೀಡುತ್ತಿರಲಿಲ್ಲ ಮತ್ತು ಅವರೊಡನೆ ನ್ಯಾಯದಿಂದ ವರ್ತಿಸುತ್ತಿರಲಿಲ್ಲ. ಹೀಗೆ ಅವರೊಡನೆ ನ್ಯಾಯದಿಂದ ವರ್ತಿಸಲು ಸಾಧ್ಯವಾಗದು ಎಂದು ಭಯಪಡುವವರು ಅವರನ್ನು ವಿವಾಹವಾಗಬಾರದು. [2] ಏಕಕಾಲದಲ್ಲಿ ನಾಲ್ಕು ಪತ್ನಿಯರನ್ನು ಹೊಂದುವ ಅನುಮತಿಯಿದೆ. ಆದರೆ ಅವರ ನಡುವೆ ನ್ಯಾಯಯುತವಾಗಿ ವರ್ತಿಸಬೇಕು. ಅದು ಸಾಧ್ಯವಾಗದೆಂಬ ಭಯವಿದ್ದರೆ ಒಬ್ಬಳನ್ನು ಮಾತ್ರ ವಿವಾಹವಾಗಬೇಕು.
Nisa' 4:4
ಮಹಿಳೆಯರಿಗೆ ಅವರ ವಧುದಕ್ಷಿಣೆಯನ್ನು (ಮಹರ್) ಆತ್ಮತೃಪ್ತಿಯಿಂದ ನೀಡಿರಿ. ಅವರು ಸ್ವಯಂಪ್ರೇರಿತವಾಗಿ ಅದರಲ್ಲಿ ಏನಾದರೂ ಬಿಟ್ಟುಬಿಟ್ಟರೆ ಅದನ್ನು ಸಂತೋಷದಿಂದ ಮತ್ತು ಸಂತೃಪ್ತಿಯಿಂದ ಸೇವಿಸಿರಿ.
Nisa' 4:5
ಅಲ್ಲಾಹು ನಿಮ್ಮ ಜೀವನೋಪಾಯದ ಮಾರ್ಗವಾಗಿ ಮಾಡಿರುವ ನಿಮ್ಮ ಧನವನ್ನು ವಿವೇಕವಿಲ್ಲದವರಿಗೆ ನೀಡಬೇಡಿ. ಆದರೆ, ಅದರಿಂದ ಅವರಿಗೆ ಆಹಾರ ಮತ್ತು ಬಟ್ಟೆ-ಬರೆಗಳನ್ನು ನೀಡಿರಿ; ಮತ್ತು ಅವರೊಂದಿಗೆ ಉತ್ತಮವಾದ ಮಾತುಗಳನ್ನಾಡಿರಿ.
Nisa' 4:6
ಅನಾಥರು ಪ್ರೌಢರಾಗುವ ತನಕ ಅವರನ್ನು ಪರೀಕ್ಷಿಸುತ್ತಿರಿ. ಅವರಲ್ಲಿ ವಿವೇಕ ಮತ್ತು ವ್ಯವಹಾರ ಪ್ರಜ್ಞೆಯನ್ನು ಕಂಡರೆ, ಅವರ ಆಸ್ತಿಯನ್ನು ಅವರಿಗೆ ಹಸ್ತಾಂತರಿಸಿ. ಅವರು ಪ್ರೌಢರಾಗುತ್ತಿದ್ದಾರೆಂಬ ಭಯದಿಂದ ಅವರ ಆಸ್ತಿಯನ್ನು ಅಗತ್ಯಕ್ಕಿಂತ ಹೆಚ್ಚಾಗಿ ತ್ವರೆಯಿಂದ ತಿನ್ನಬೇಡಿ. ಪೋಷಕನು ಶ್ರೀಮಂತನಾಗಿದ್ದರೆ ಆ ಆಸ್ತಿಯನ್ನು ಮುಟ್ಟದೆ ಸಂಯಮ ತೋರಲಿ. ಆದರೆ ಅವನು ಬಡವನಾಗಿದ್ದರೆ ಅಗತ್ಯಕ್ಕೆ ತಕ್ಕಷ್ಟು ಮಾತ್ರ ತೆಗೆದುಕೊಳ್ಳಲಿ. ಅವರ ಆಸ್ತಿಯನ್ನು ಅವರಿಗೆ ಹಸ್ತಾಂತರಿಸುವಾಗ ಸಾಕ್ಷಿಗಳನ್ನು ನಿಲ್ಲಿಸಿರಿ. ವಿಚಾರಣೆ ಮಾಡುವವನಾಗಿ ಅಲ್ಲಾಹು ಸಾಕು.
Nisa' 4:7
ಮಾತಾಪಿತರು ಮತ್ತು ನಿಕಟ ಸಂಬಂಧಿಕರು ಬಿಟ್ಟುಹೋದ ಆಸ್ತಿಯಲ್ಲಿ ಪುರುಷರಿಗೆ ಪಾಲಿದೆ. ಮಾತಾಪಿತರು ಮತ್ತು ನಿಕಟ ಸಂಬಂಧಿಕರು ಬಿಟ್ಟುಹೋದ ಆಸ್ತಿಯಲ್ಲಿ ಮಹಿಳೆಯರಿಗೂ ಪಾಲಿದೆ. ಆಸ್ತಿ ಕಡಿಮೆಯಿರಲಿ ಅಥವಾ ಹೆಚ್ಚಿರಲಿ. ಅದರ ಪಾಲನ್ನು ನಿಗದಿಪಡಿಸಲಾಗಿದೆ.
Nisa' 4:8
ಆಸ್ತಿ ಪಾಲು ಮಾಡುವಾಗ (ಬೇರೆ) ಸಂಬಂಧಿಕರು, ಅನಾಥರು ಮತ್ತು ಬಡವರು ಉಪಸ್ಥಿತರಿದ್ದರೆ, ಅವರಿಗೆ ಅದರಿಂದ ಸ್ವಲ್ಪ ಕೊಟ್ಟುಬಿಡಿ. ಅವರೊಂದಿಗೆ ಉತ್ತಮ ಮಾತುಗಳನ್ನಾಡಿರಿ.
Nisa' 4:9
ತಮ್ಮ ಅಮಾಯಕ ಮಕ್ಕಳನ್ನು ಬಿಟ್ಟು (ತಾವು ಸತ್ತರೆ ಅವರ ಸ್ಥಿತಿಯೇನಾಗಬಹುದೆಂದು) ಭಯಪಡುವವರು (ಪೋಷಕರು) ಇತರರ ಬಗ್ಗೆಯೂ ಹಾಗೆಯೇ ಭಯಪಡಲಿ. ಅವರು ಅಲ್ಲಾಹನನ್ನು ಭಯಪಡಲಿ ಮತ್ತು ಸರಿಯಾದ ಮಾತುಗಳನ್ನಾಡಲಿ.[1]
———
[1] ತಾನು ಸತ್ತರೆ ತನ್ನ ಪುಟ್ಟ ಮಕ್ಕಳು ಅನಾಥರಾಗುತ್ತಾರೆ. ಅವರು ಇತರರ ಪೋಷಣೆಯಲ್ಲಿ ಬೆಳೆಯಬೇಕಾಗುತ್ತದೆ. ಹೀಗೆ ತನ್ನ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡುವವರು, ಅನಾಥರಾಗಿ ತಮ್ಮ ಪೋಷಣೆಗೆ ಬರುವ ಇತರ ಮಕ್ಕಳ ಬಗ್ಗೆಯೂ ಇದೇ ರೀತಿ ಚಿಂತೆ ಮಾಡಬೇಕು. ಅವರ ವಿಷಯದಲ್ಲಿ ಅಲ್ಲಾಹನನ್ನು ಭಯಪಟ್ಟು ನ್ಯಾಯದಿಂದ ವರ್ತಿಸಬೇಕು.
Nisa' 4:10
ನಿಶ್ಚಯವಾಗಿಯೂ ಅನಾಥರ ಆಸ್ತಿಯನ್ನು ಅನ್ಯಾಯವಾಗಿ ತಿನ್ನುವವರು ಯಾರೋ—ಅವರು ತಮ್ಮ ಉದರಗಳಲ್ಲಿ ಅಗ್ನಿಯನ್ನೇ ತುಂಬಿಸುತ್ತಾರೆ. ಅವರು ಸದ್ಯವೇ ಧಗಧಗಿಸುವ ಅಗ್ನಿಯಲ್ಲಿ ಉರಿಯುವರು.
Nisa' 4:11
ನಿಮ್ಮ ಮಕ್ಕಳ (ಉತ್ತರಾಧಿಕಾರದ) ವಿಷಯದಲ್ಲಿ ಅಲ್ಲಾಹು ನಿಮಗೆ ಆದೇಶಿಸುತ್ತಾನೆ. ಒಬ್ಬ ಪುರುಷನ ಪಾಲು ಇಬ್ಬರು ಮಹಿಳೆಯರ ಪಾಲಿಗೆ ಸಮಾನವಾಗಿದೆ. ಮೃತನಿಗೆ ಹೆಣ್ಣು ಮಕ್ಕಳು ಮಾತ್ರವಿದ್ದು, ಅವರು ಇಬ್ಬರಿಗಿಂತ ಹೆಚ್ಚಿದ್ದರೆ,[1] ಅವನು ಬಿಟ್ಟು ಹೋದ ಆಸ್ತಿಯ ಮೂರನೇ ಎರಡು ಭಾಗವು ಅವರಿಗೆ ದೊರೆಯುತ್ತದೆ. ಒಬ್ಬ ಮಗಳು ಮಾತ್ರವಿದ್ದರೆ ಅವಳಿಗೆ ಅರ್ಧ ಭಾಗ ದೊರೆಯುತ್ತದೆ. ಮೃತನಿಗೆ ಮಕ್ಕಳಿದ್ದರೆ ಅವನ ಮಾತಾಪಿತರಲ್ಲಿ ಪ್ರತಿಯೊಬ್ಬರಿಗೂ ಅವನು ಬಿಟ್ಟುಹೋದ ಆಸ್ತಿಯ ಆರನೇ ಒಂದು ಭಾಗ ದೊರೆಯುತ್ತದೆ. ಅವನು ಸಂತಾನರಹಿತನಾಗಿದ್ದು ಮಾತಾಪಿತರು ಅವನ ವಾರಸುದಾರರಾಗಿದ್ದರೆ, ಅವನ ತಾಯಿಗೆ ಮೂರನೇ ಒಂದು ಭಾಗ ದೊರೆಯುತ್ತದೆ.[2] ಅವನಿಗೆ ಸಹೋದರರಿದ್ದರೆ (ಮತ್ತು / ಅಥವಾ ಸಹೋದರಿಯರಿದ್ದರೆ) ಅವನ ತಾಯಿಗೆ ಆರನೇ ಒಂದು ಭಾಗ ದೊರೆಯುತ್ತದೆ.[3] ಅವನು ಮಾಡಿರುವ ಉಯಿಲು ಮತ್ತು ಸಾಲವಿದ್ದರೆ ಅದನ್ನು ತೀರಿಸಿದ ನಂತರ. ನಿಮ್ಮ ತಂದೆ-ತಾಯಿ ಮತ್ತು ಮಕ್ಕಳಲ್ಲಿ ಯಾರು ನಿಮಗೆ ಹೆಚ್ಚು ಉಪಕಾರ ಮಾಡುವರೆಂದು ನಿಮಗೆ ತಿಳಿದಿಲ್ಲ. ಇವು ಅಲ್ಲಾಹು ನಿಗದಿಪಡಿಸಿದ ಪಾಲುಗಳು. ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನು ತಿಳಿದವನು ಮತ್ತು ವಿವೇಕಪೂರ್ಣನಾಗಿದ್ದಾನೆ.
———
[1] ಇಬ್ಬರೇ ಹೆಣ್ಣುಮಕ್ಕಳಿದ್ದರೂ ಅವರಿಗೆ ಮೂರನೇ ಎರಡು ಭಾಗವು ದೊರೆಯುತ್ತದೆ. [2] ಉಳಿದ ಮೂರನೇ ಎರಡು ಭಾಗ ತಂದೆಗೆ ದೊರೆಯುತ್ತದೆ. [3] ಮೃತನಿಗೆ ಗಂಡುಮಕ್ಕಳು ಅಥವಾ ತಂದೆ ಇಲ್ಲದಿದ್ದರೆ ಮಾತ್ರ ಸಹೋದರ (ಅಥವಾ ಸಹೋದರರು) ವಾರಸುದಾರರಾಗುತ್ತಾರೆ. ತಾಯಿ ಮತ್ತು ಸಹೋದರರು ಮಾತ್ರವಿದ್ದರೆ ಆರನೇ ಒಂದನ್ನು ಕಳೆದು ಉಳಿದ ಆಸ್ತಿಯನ್ನು ಸಹೋದರರು ಪಾಲು ಮಾಡಬೇಕು. ಒಬ್ಬ ಸಹೋದರ ಮತ್ತು ತಾಯಿ ಮಾತ್ರ ಇದ್ದರೆ ತಾಯಿಗೆ ಮೂರನೇ ಒಂದು ಭಾಗ ಮತ್ತು ಸಹೋದರನಿಗೆ ಮೂರನೇ ಎರಡು ಭಾಗವು ದೊರೆಯುತ್ತದೆ. ಸಹೋದರರು ಇಲ್ಲದೆ, ತಾಯಿ ಮತ್ತು ಸಹೋದರಿಯರು ಮಾತ್ರ ಇದ್ದರೆ ತಾಯಿಗೆ ಆರನೇ ಒಂದು ಭಾಗ ದೊರೆಯುತ್ತದೆ.
Nisa' 4:12
ನಿಮ್ಮ ಪತ್ನಿಯರಿಗೆ ಮಕ್ಕಳಿಲ್ಲದಿದ್ದರೆ, ಅವರು ಬಿಟ್ಟುಹೋದ ಆಸ್ತಿಯಲ್ಲಿ ಅರ್ಧ ಭಾಗವು ನಿಮಗೆ ದೊರೆಯುತ್ತದೆ. ಅವರಿಗೆ ಮಕ್ಕಳಿದ್ದರೆ ಅವರು ಬಿಟ್ಟು ಹೋದ ಆಸ್ತಿಯಲ್ಲಿ ನಾಲ್ಕನೇ ಒಂದು ಭಾಗವು ನಿಮಗೆ ದೊರೆಯುತ್ತದೆ. ಇದು ಅವರು ಮಾಡುವ ಉಯಿಲು ಮತ್ತು ಸಾಲವನ್ನು ತೀರಿಸಿದ ನಂತರ. ನಿಮಗೆ ಮಕ್ಕಳಿಲ್ಲದಿದ್ದರೆ, ನೀವು ಬಿಟ್ಟುಹೋದ ಆಸ್ತಿಯಲ್ಲಿ ನಾಲ್ಕನೇ ಒಂದು ಭಾಗವು ಅವರಿಗೆ (ಪತ್ನಿಯರಿಗೆ) ದೊರೆಯುತ್ತದೆ. ನಿಮಗೆ ಮಕ್ಕಳಿದ್ದರೆ, ನೀವು ಬಿಟ್ಟುಹೋದ ಆಸ್ತಿಯಲ್ಲಿ ಎಂಟನೇ ಒಂದು ಭಾಗವು ಅವರಿಗೆ ದೊರೆಯುತ್ತದೆ. ಇದು ನೀವು ಮಾಡುವ ಉಯಿಲು ಮತ್ತು ಸಾಲವನ್ನು ತೀರಿಸಿದ ನಂತರ. ವಾರಸು ಆಸ್ತಿಯನ್ನು ಬಿಟ್ಟು ಹೋಗುವ ಪುರುಷ ಅಥವಾ ಮಹಿಳೆಗೆ ತಂದೆ-ತಾಯಿ ಹಾಗೂ ಮಕ್ಕಳಿಲ್ಲದೆ, ಕೇವಲ ಸಹೋದರ ಅಥವಾ ಸಹೋದರಿಯಿದ್ದರೆ, ಆ ಇಬ್ಬರಲ್ಲಿ ಪ್ರತಿಯೊಬ್ಬರಿಗೂ ಆರನೇ ಒಂದು ಭಾಗವು ದೊರೆಯುತ್ತದೆ. ಅವರು ಇಬ್ಬರಿಗಿಂತ ಹೆಚ್ಚಿದ್ದರೆ, ಅವರು ಮೂರನೇ ಒಂದು ಭಾಗದಲ್ಲಿ ಸಮಾನ ಪಾಲುದಾರರಾಗುತ್ತಾರೆ. ಇದು ಹಾನಿಕರವಲ್ಲದ ಉಯಿಲು[1] ಮತ್ತು ಸಾಲವನ್ನು ತೀರಿಸಿದ ನಂತರ. ಅಲ್ಲಾಹು ಎಲ್ಲವನ್ನೂ ತಿಳಿದವನು ಮತ್ತು ಸಹಿಷ್ಣುತೆಯುಳ್ಳವನಾಗಿದ್ದಾನೆ.
———
[1] ಒಟ್ಟು ಆಸ್ತಿಯ ಮೂರನೇ ಒಂದು ಭಾಗವನ್ನು ಮಾತ್ರ ಉಯಿಲು ಮಾಡಬಹುದು. ಅದಕ್ಕಿಂತ ಹೆಚ್ಚು ಉಯಿಲು ಮಾಡುವುದು ವಾರಸುದಾರರಿಗೆ ಮಾಡುವ ಅನ್ಯಾಯವಾಗಿದೆ. ಹಾನಿಕರ ಉಯಿಲು ಎಂದರೆ ವಾರಸುದಾರರಲ್ಲಿರುವ ದ್ವೇಷದಿಂದ ತನ್ನ ಆಸ್ತಿಯಲ್ಲಿ ಅವರಿಗೆ ಹಕ್ಕು ಸಿಗಬಾರದೆಂದು ತನ್ನ ಆಸ್ತಿಯನ್ನು ತನಗೆ ಇಷ್ಟವಾದ ಬೇರೊಬ್ಬ ವ್ಯಕ್ತಿಗೆ ಉಯಿಲು ಮಾಡುವುದು.
Nisa' 4:13
ಇವು ಅಲ್ಲಾಹನ ಎಲ್ಲೆಗಳು. ಯಾರು ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ಅನುಸರಿಸುತ್ತಾನೋ—ಅವನನ್ನು ಅಲ್ಲಾಹು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿಗೆ ಪ್ರವೇಶ ಮಾಡಿಸುವನು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅದೇ ಮಹಾ ವಿಜಯ.
Nisa' 4:14
ಯಾರು ಅಲ್ಲಾಹನಿಗೆ ಮತ್ತು ಅವನ ಸಂದೇಶವಾಹಕರಿಗೆ ಅವಿಧೇಯತೆ ತೋರುತ್ತಾನೋ ಮತ್ತು ಅವನ ಎಲ್ಲೆಗಳನ್ನು ಮೀರುತ್ತಾನೋ—ಅವನನ್ನು ಅಲ್ಲಾಹು ನರಕಾಗ್ನಿಗೆ ಪ್ರವೇಶ ಮಾಡಿಸುವನು. ಅವನು ಅದರಲ್ಲಿ ಶಾಶ್ವತವಾಗಿ ವಾಸಿಸುವನು. ಅವನಿಗೆ ಅಪಮಾನಕರ ಶಿಕ್ಷೆಯಿದೆ.
Nisa' 4:15
ನಿಮ್ಮ ಮಹಿಳೆಯರಲ್ಲಿ ಯಾರು ಅಶ್ಲೀಲ ಕೃತ್ಯವನ್ನು ಮಾಡುತ್ತಾರೋ—ಅವರಿಗೆದುರಾಗಿ ನಿಮ್ಮಲ್ಲಿನ ನಾಲ್ಕು ಮಂದಿಯನ್ನು ಸಾಕ್ಷಿ ನಿಲ್ಲಿಸಿರಿ. ಅವರು ಸಾಕ್ಷಿ ನಿಂತರೆ ಅವರು (ಮಹಿಳೆಯರು) ಮರಣವನ್ನಪ್ಪುವ ತನಕ ಅಥವಾ ಅಲ್ಲಾಹು ಅವರಿಗೊಂದು ಮಾರ್ಗವನ್ನು ಮಾಡಿಕೊಡುವ ತನಕ ಅವರನ್ನು ನೀವು ಮನೆಗಳಲ್ಲಿ ತಡೆದಿರಿಸಿರಿ.[1]
———
[1] ಇದು ಇಸ್ಲಾಮಿನ ಆರಂಭಕಾಲದಲ್ಲಿ ವ್ಯಭಿಚಾರಕ್ಕೆ ನೀಡಲಾಗುತ್ತಿದ್ದ ತಾತ್ಕಾಲಿಕ ಶಿಕ್ಷೆಯಾಗಿದೆ. ನಂತರ ವಿವಾಹಿತ ಪುರುಷರು ಮತ್ತು ಮಹಿಳೆಯರು ವ್ಯಭಿಚಾರ ಮಾಡಿದರೆ, ಅವರಿಗೆ ಕಲ್ಲೆಸೆದು ಕೊಲ್ಲುವ ಶಿಕ್ಷೆ ಮತ್ತು ವಿವಾಹಿತರಲ್ಲದ ಪುರುಷರು ಮತ್ತು ಮಹಿಳೆಯರು ವ್ಯಭಿಚಾರ ಮಾಡಿದರೆ ಅವರಿಗೆ 100 ಛಡಿಯೇಟಿನ ಶಿಕ್ಷೆಯನ್ನು ಅಂತಿಮಗೊಳಿಸಲಾಯಿತು.
Nisa' 4:16
ನಿಮ್ಮಲ್ಲಿ ಯಾರು ಅಶ್ಲೀಲ ಕೃತ್ಯವನ್ನು ಮಾಡುತ್ತಾರೋ ಅವರಿಗೆ (ಇಬ್ಬರಿಗೂ) ತೊಂದರೆ ಕೊಡಿ. ಅವರಿಬ್ಬರೂ ಪಶ್ಚಾತ್ತಾಪಪಟ್ಟು ನಡತೆಯನ್ನು ಸರಿಪಡಿಸಿದರೆ ಅವರನ್ನು ಬಿಟ್ಟುಬಿಡಿ.[1] ನಿಶ್ಚಯವಾಗಿಯೂ ಅಲ್ಲಾಹು ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
———
[1] ಕೆಲವು ವ್ಯಾಖ್ಯಾನಕಾರರು ಇದು ಸಲಿಂಗಕಾಮ ಮಾಡುವವರ ಬಗ್ಗೆ ಎಂದಿದ್ದಾರೆ. ಕೆಲವರು ಇದು ಅವಿವಾಹಿತ ಪುರುಷರು ಮತ್ತು ಮಹಿಳೆಯರ ಬಗ್ಗೆ ಎಂದಿದ್ದಾರೆ. 15 ನೇ ವಚನವು ವಿವಾಹಿತ ಪುರುಷರು ಮತ್ತು ಮಹಿಳೆಯರ ಬಗ್ಗೆ ಎಂದು ಅವರು ಅಭಿಪ್ರಾಯಪಡುತ್ತಾರೆ. ಕೆಲವರು ಇದು ವಿವಾಹಿತ ಮತ್ತು ಅವಿವಾಹಿತ ಪುರುಷರು ಮತ್ತು ಮಹಿಳೆಯರ ಬಗ್ಗೆ ಎನ್ನುತ್ತಾರೆ. ಏನೇ ಆದರೂ ಇದು ಇಸ್ಲಾಮಿನ ಆರಂಭಕಾಲದಲ್ಲಿದ್ದ ತಾತ್ಕಾಲಿಕ ಶಿಕ್ಷೆಯಾಗಿದೆ. ಅಂತಿಮ ಶಿಕ್ಷೆ ಅವತೀರ್ಣವಾದ ಬಳಿಕ ಇದು ರದ್ದುಗೊಂಡಿದೆ.
Nisa' 4:17
ಅಲ್ಲಾಹು ಪಶ್ಚಾತ್ತಾಪವನ್ನು ಸ್ವೀಕರಿಸುವುದು ಅಜ್ಞಾನದಿಂದ ತಪ್ಪು ಮಾಡಿ (ಅದು ತಪ್ಪೆಂದು ತಿಳಿದಾಗ) ತಡಮಾಡದೆ ಪಶ್ಚಾತ್ತಾಪಪಡುವವರಿಂದ ಮಾತ್ರ. ಅವರ ಪಶ್ಚಾತ್ತಾಪವನ್ನು ಅಲ್ಲಾಹು ಸ್ವೀಕರಿಸುತ್ತಾನೆ. ಅಲ್ಲಾಹು ಎಲ್ಲವನ್ನು ತಿಳಿದವನು ಮತ್ತು ವಿವೇಕಪೂರ್ಣನಾಗಿದ್ದಾನೆ.
Nisa' 4:18
ತಪ್ಪು ಮಾಡುತ್ತಲೇ ಇದ್ದು, ಸಾವು ಸನ್ನಿಹಿತವಾದಾಗ, “ನಾನು ಪಶ್ಚಾತ್ತಾಪಪಟ್ಟಿದ್ದೇನೆ” ಎಂದು ಹೇಳುವವರ ಪಶ್ಚಾತ್ತಾಪವನ್ನು ಸ್ವೀಕರಿಸಲಾಗದು. ಸತ್ಯನಿಷೇಧಿಗಳಾಗಿ ಸಾಯುವವರ ಪಶ್ಚಾತ್ತಾಪವನ್ನೂ ಸ್ವೀಕರಿಸಲಾಗದು. ಅವರಿಗೆ ನಾವು ಯಾತನಾಮಯ ಶಿಕ್ಷೆಯನ್ನು ಸಿದ್ಧಗೊಳಿಸಿದ್ದೇವೆ.
Nisa' 4:19
ಓ ಸತ್ಯವಿಶ್ವಾಸಿಗಳೇ! ಮಹಿಳೆಯರನ್ನು ಬಲವಂತದಿಂದ ಉತ್ತರಾಧಿಕಾರವಾಗಿ ಪಡೆಯುವುದು ನಿಮಗೆ ಧರ್ಮಸಮ್ಮತವಲ್ಲ.[1] ನೀವು ಅವರಿಗೆ (ಪತ್ನಿಯರಿಗೆ) ನೀಡಿರುವುದರಲ್ಲಿ ಒಂದಂಶವನ್ನು ಹಿಂದಕ್ಕೆ ಪಡೆಯಲು ಅವರನ್ನು ತಡೆದಿರಿಸಬೇಡಿ— ಅವರು ಬಹಿರಂಗವಾಗಿ ಏನಾದರೂ ಅಶ್ಲೀಲ ಕೃತ್ಯವೆಸಗದಿದ್ದರೆ. ಅವರೊಂದಿಗೆ ಉತ್ತಮವಾಗಿ ವರ್ತಿಸಿರಿ. ನೀವು ಅವರನ್ನು ದ್ವೇಷಿಸುವುದಾದರೆ, ಬಹುಶಃ ನೀವು ದ್ವೇಷಿಸುವ ಒಂದು ವಸ್ತುವಿನಲ್ಲಿ ಅಲ್ಲಾಹು ಅತ್ಯಧಿಕ ಒಳಿತನ್ನಿಟ್ಟಿರಬಹುದು.
———
[1] ಇಸ್ಲಾಂ ಪೂರ್ವ ಕಾಲದಲ್ಲಿ ಮೃತನ ಆಸ್ತಿಯನ್ನು ಹಂಚಿಕೊಳ್ಳುವಾಗ ಅವನ ಪತ್ನಿಯರನ್ನೂ ಅವರ ಇಚ್ಛೆಗೆ ವಿರುದ್ಧವಾಗಿ ಹಂಚಿಕೊಳ್ಳುತ್ತಿದ್ದರು.
Nisa' 4:20
ನೀವು ಒಬ್ಬ ಪತ್ನಿಯ ಬದಲಿಗೆ ಇನ್ನೊಬ್ಬ ಪತ್ನಿಯನ್ನು ತರಲು ಉದ್ದೇಶಿಸಿದರೆ, ಮತ್ತು ಅವರಲ್ಲಿ ಒಬ್ಬಳಿಗೆ ನೀವು ದೊಡ್ಡ ಮೊತ್ತವನ್ನು ಕೊಟ್ಟಿದ್ದರೆ, ಅದರಿಂದ ಏನನ್ನೂ ಹಿಂದಕ್ಕೆ ಪಡೆಯಬೇಡಿ. ಸುಳ್ಳಾರೋಪದಿಂದ ಮತ್ತು ಸ್ಪಷ್ಟ ಪಾಪದಿಂದ ನೀವು ಅದನ್ನು ಹಿಂದಕ್ಕೆ ಪಡೆಯುವಿರಾ?
Nisa' 4:21
ನೀವು ಪರಸ್ಪರ ಒಂದಾಗಿದ್ದು, ಅವರು ನಿಮ್ಮಿಂದ ಬಲಿಷ್ಠ ಕರಾರನ್ನು ಪಡೆದಿರುವಾಗ ನೀವು ಹೇಗೆ ತಾನೇ ಅದನ್ನು ಹಿಂದಕ್ಕೆ ಪಡೆಯುವಿರಿ?
Nisa' 4:22
ನಿಮ್ಮ ತಂದೆಯರು ವಿವಾಹವಾದ ಮಹಿಳೆಯರನ್ನು ನೀವು ವಿವಾಹವಾಗಬಾರದು. ಈಗಾಗಲೇ ಸಂಭವಿಸಿದವುಗಳ ಹೊರತು. ನಿಶ್ಚಯವಾಗಿಯೂ ಅದು ಅಶ್ಲೀಲ, ಅಸಹ್ಯ ಮತ್ತು ಕೆಟ್ಟ ಮಾರ್ಗವಾಗಿದೆ.
Nisa' 4:23
ನಿಮಗೆ ವಿವಾಹವಾಗಲು ನಿಷಿದ್ಧವಾಗಿರುವವರು ಯಾರೆಂದರೆ—ನಿಮ್ಮ ತಾಯಂದಿರು, ಹೆಣ್ಣುಮಕ್ಕಳು, ಸಹೋದರಿಯರು, ತಂದೆಯ ಸಹೋದರಿಯರು, ತಾಯಿಯ ಸಹೋದರಿಯರು, ಸಹೋದರರ ಹೆಣ್ಣುಮಕ್ಕಳು, ಸಹೋದರಿಯರ ಹೆಣ್ಣುಮಕ್ಕಳು, ನಿಮಗೆ ಸ್ತನಪಾನ ಮಾಡಿದ ತಾಯಂದಿರು, ಸ್ತನಪಾನ ಸಂಬಂಧದಲ್ಲಿ ಸಹೋದರಿಗಳಾಗಿರುವವರು, ನಿಮ್ಮ ಪತ್ನಿಯರ ತಾಯಂದಿರು, ನಿಮ್ಮ ಪೋಷಣೆಯಲ್ಲಿ ಬೆಳೆಯುತ್ತಿರುವ ನಿಮ್ಮ ಪತ್ನಿಯರ ಹೆಣ್ಣುಮಕ್ಕಳು—ನೀವು ಆ ಪತ್ನಿಯರೊಡನೆ ಲೈಂಗಿಕ ಸಂಪರ್ಕ ಮಾಡಿದ್ದರೆ—ನೀವು ಅವರೊಡನೆ ಲೈಂಗಿಕ ಸಂಪರ್ಕ ಮಾಡಿರದಿದ್ದರೆ ಆ ಸಾಕುಪುತ್ರಿಯರನ್ನು ವಿವಾಹವಾಗುವುದರಲ್ಲಿ ದೋಷವಿಲ್ಲ; ನಿಮ್ಮ ಬೆನ್ನೆಲುಬಿನಿಂದ ಹುಟ್ಟಿದ ಗಂಡುಮಕ್ಕಳ ಪತ್ನಿಯರು ಮತ್ತು ಇಬ್ಬರು ಸಹೋದರಿಯರನ್ನು ಏಕಕಾಲದಲ್ಲಿ ವಿವಾಹವಾಗುವುದು—ಈಗಾಗಲೇ ಸಂಭವಿಸಿರುವುದರ ಹೊರತು. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
Nisa' 4:24
ವಿವಾಹಿತ ಮಹಿಳೆಯರು (ಕೂಡ ನಿಮಗೆ ನಿಷಿದ್ಧವಾಗಿದ್ದಾರೆ). ಆದರೆ ನಿಮ್ಮ ಅಧೀನದಲ್ಲಿರುವ ಗುಲಾಮಸ್ತ್ರೀಯರ ಹೊರತು. ಇವು ಅಲ್ಲಾಹು ಕಡ್ಡಾಯಗೊಳಿಸಿದ ನಿಯಮಗಳಾಗಿವೆ. ಇವರ ಹೊರತಾಗಿರುವ ಎಲ್ಲಾ ಮಹಿಳೆಯರು ನಿಮಗೆ ಧರ್ಮಸಮ್ಮತವಾಗಿದ್ದಾರೆ. ನೀವು ಪರಿಶುದ್ಧ ಜೀವನವನ್ನು ಬಯಸುವವರು ಮತ್ತು ಅನೈತಿಕತೆಯನ್ನು ಬಯಸದವರಾಗಿದ್ದರೆ, ನಿಮ್ಮ ಧನವನ್ನು ನೀಡಿ ಇವರನ್ನು ವಿವಾಹವಾಗಬಹುದು. ನೀವು ಯಾರಿಂದ ಸುಖವನ್ನು ಪಡೆಯಲು ಬಯಸುತ್ತೀರೋ ಅವರಿಗೆ ನಿಶ್ಚಯಿಸಲಾದ ವಧುದಕ್ಷಿಣೆಯನ್ನು (ಮಹರ್) ಕೊಟ್ಟುಬಿಡಿ. ವಧುದಕ್ಷಿಣೆಯನ್ನು ನಿಶ್ಚಯಿಸಲಾದ ಬಳಿಕ ನೀವು ಪರಸ್ಪರ ತೃಪ್ತಿಯಿಂದ ವಿನಾಯಿತಿ ತೋರಿದರೆ ಅದರಲ್ಲಿ ನಿಮಗೆ ದೋಷವಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನೂ ತಿಳಿದವನು ಮತ್ತು ವಿವೇಕಪೂರ್ಣನಾಗಿದ್ದಾನೆ.
Nisa' 4:25
ಸತ್ಯವಿಶ್ವಾಸಿಗಳಾದ ಸ್ವತಂತ್ರ ಮಹಿಳೆಯರನ್ನು ವಿವಾಹವಾಗಲು ನಿಮಗೆ ಆರ್ಥಿಕ ಸಾಮರ್ಥ್ಯವಿಲ್ಲದಿದ್ದರೆ, ನಿಮ್ಮ ಅಧೀನದಲ್ಲಿರುವ ಗುಲಾಮಸ್ತ್ರೀಯರಲ್ಲಿ ಒಬ್ಬಳನ್ನು (ಪತ್ನಿಯಾಗಿ ಸ್ವೀಕರಿಸಬಹುದು). ನಿಮ್ಮ ವಿಶ್ವಾಸದ ಬಗ್ಗೆ ಅಲ್ಲಾಹನಿಗೆ ಚೆನ್ನಾಗಿ ತಿಳಿದಿದೆ. ನೀವು ಒಬ್ಬರು ಇನ್ನೊಬ್ಬರಿಂದ ಉಂಟಾಗಿದ್ದೀರಿ. ಅವರ ಯಜಮಾನರ ಒಪ್ಪಿಗೆ ಪಡೆದು ಅವರನ್ನು ವಿವಾಹವಾಗಿರಿ. ಸ್ವೀಕಾರಾರ್ಹ ರೀತಿಯಲ್ಲಿ ಅವರ ವಧುದಕ್ಷಿಣೆಯನ್ನು ಅವರಿಗೆ ಕೊಟ್ಟುಬಿಡಿ. ಅವರು ಪರಿಶುದ್ಧೆಯರಾಗಿರಲಿ; ಅನೈತಿಕ ಸಂಬಂಧವಿರುವವರೋ ಅಥವಾ ರಹಸ್ಯ ಪ್ರೇಮಿಗಳನ್ನು ಹೊಂದಿದವರೋ ಆಗಿರಬಾರದು. ಅವರು ವಿವಾಹಿತೆಯರಾದ ಬಳಿಕ ವೇಶ್ಯಾವೃತ್ತಿ ಮಾಡಿದರೆ, ಸ್ವತಂತ್ರ ಮಹಿಳೆಯರಿಗೆ ನೀಡಲಾಗುವ ಶಿಕ್ಷೆಯ ಅರ್ಧ ಭಾಗವನ್ನು ಅವರಿಗೆ ನೀಡಲಾಗುವುದು. ಇದು (ಗುಲಾಮಸ್ತ್ರೀಯರ ವಿವಾಹ) ನಿಮ್ಮಲ್ಲಿ ಪಾಪವನ್ನು ಭಯಪಡುವವರಿಗೆ ನೀಡಲಾದ ಅನುಮತಿಯಾಗಿದೆ. ನೀವು ತಾಳ್ಮೆಯಿಂದಿದ್ದರೆ ಅದು ನಿಮಗೆ ಒಳಿತಾಗಿದೆ. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
Nisa' 4:26
ಅಲ್ಲಾಹು ನಿಮಗೆ (ವಿಷಯಗಳನ್ನು) ಸ್ಪಷ್ಟಗೊಳಿಸಲು, ನಿಮ್ಮ (ನೀತಿವಂತ) ಪೂರ್ವಜರ ಚರ್ಯೆಗಳನ್ನು ತೋರಿಸಿಕೊಡಲು ಮತ್ತು ನಿಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸಲು ಬಯಸುತ್ತಾನೆ. ಅಲ್ಲಾಹು ಎಲ್ಲವನ್ನೂ ತಿಳಿದವನು ಮತ್ತು ವಿವೇಕಪೂರ್ಣನಾಗಿದ್ದಾನೆ.
Nisa' 4:27
ಅಲ್ಲಾಹು ನಿಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸಲು ಬಯಸುತ್ತಾನೆ. ಆದರೆ ಸ್ವೇಚ್ಛೆಗಳನ್ನು ಹಿಂಬಾಲಿಸುವವರು ನೀವು ಅತಿದೊಡ್ಡ ದುರ್ಮಾರ್ಗದಲ್ಲಿ ತಪ್ಪಿಹೋಗಬೇಕೆಂದು ಬಯಸುತ್ತಾರೆ.
Nisa' 4:28
ಅಲ್ಲಾಹು ನಿಮಗೆ ರಿಯಾಯಿತಿ ನೀಡಲು ಬಯಸುತ್ತಾನೆ. (ಏಕೆಂದರೆ) ಮನುಷ್ಯನನ್ನು ದುರ್ಬಲನಾಗಿ ಸೃಷ್ಟಿಸಲಾಗಿದೆ.
Nisa' 4:29
ಓ ಸತ್ಯವಿಶ್ವಾಸಿಗಳೇ! ನೀವು ಒಬ್ಬರು ಇನ್ನೊಬ್ಬರ ಧನವನ್ನು ಅನ್ಯಾಯವಾಗಿ ತಿನ್ನಬೇಡಿ. ಪರಸ್ಪರ ಸಂತೃಪ್ತಿಯಿಂದ ನಡೆಸುವ ವ್ಯವಹಾರದ ಹೊರತು. ನೀವು ನಿಮ್ಮನ್ನೇ ಕೊಲ್ಲಬೇಡಿ.[1] ನಿಶ್ಚಯವಾಗಿಯೂ ಅಲ್ಲಾಹು ನಿಮ್ಮೊಡನೆ ಅತ್ಯಂತ ದಯೆಯುಳ್ಳವನಾಗಿದ್ದಾನೆ.
———
[1] ಮುಸ್ಲಿಂ ಸಮುದಾಯವು ಒಂದು ದೇಹದಂತೆ. ಅದರ ಒಬ್ಬ ಸದಸ್ಯನನ್ನು ಕೊಲ್ಲುವುದು ಸಮುದಾಯವನ್ನು ಕೊಲೆ ಮಾಡುವುದಕ್ಕೆ ಸಮಾನ. ನೀವೇ ನಿಮ್ಮನ್ನು ಕೊಲ್ಲಬೇಡಿ ಎಂದು ಹೇಳಿರುವುದು ಈ ಅರ್ಥದಲ್ಲಾಗಿರಬಹುದು. ಇಲ್ಲಿ ಹೇಳಿರುವುದು ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ ಎಂದು ಕೆಲವರು ಹೇಳಿದ್ದಾರೆ.
Nisa' 4:30
ಯಾರು ಅತಿರೇಕ ಮತ್ತು ಅನ್ಯಾಯದಿಂದ ಅದನ್ನು ಮಾಡುತ್ತಾನೋ—ಅವನನ್ನು ನಾವು ನರಕಾಗ್ನಿಯಲ್ಲಿ ಹಾಕಿ ಉರಿಸುವೆವು. ಅದು ಅಲ್ಲಾಹನಿಗೆ ಅತಿ ಸುಲಭವಾಗಿದೆ.
Nisa' 4:31
ನಿಮಗೆ ವಿರೋಧಿಸಲಾದ ಮಹಾಪಾಪಗಳಿಂದ ನೀವು ದೂರವಾದರೆ, ನಿಮ್ಮ ಸಣ್ಣ-ಪುಟ್ಟ ತಪ್ಪುಗಳನ್ನು ನಾವು ಅಳಿಸುತ್ತೇವೆ; ಮತ್ತು ಗೌರವಾನ್ವಿತ ಸ್ಥಾನಕ್ಕೆ ನಿಮ್ಮನ್ನು ಪ್ರವೇಶ ಮಾಡಿಸುತ್ತೇವೆ.
Nisa' 4:32
ಅಲ್ಲಾಹು ನಿಮ್ಮಲ್ಲಿ ಕೆಲವರಿಗೆ ಇತರರಿಗಿಂತ ಹೆಚ್ಚು ಔದಾರ್ಯ ತೋರಿದ್ದನ್ನು ನೀವು ಆಸೆಪಡಬೇಡಿ. ಪುರುಷರಿಗೆ ಅವರು ಸಂಪಾದಿಸಿದ ಪಾಲಿದೆ ಮತ್ತು ಮಹಿಳೆಯರಿಗೆ ಅವರು ಸಂಪಾದಿಸಿದ ಪಾಲಿದೆ. ಅಲ್ಲಾಹನ ಔದಾರ್ಯದಿಂದ ಅವನಲ್ಲಿ ಬೇಡಿಕೊಳ್ಳಿರಿ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳನ್ನು ತಿಳಿದವನಾಗಿದ್ದಾನೆ.
Nisa' 4:33
ಮಾತಾಪಿತರು ಮತ್ತು ನಿಕಟ ಸಂಬಂಧಿಕರು ಬಿಟ್ಟು ಹೋದ ಆಸ್ತಿಯಲ್ಲಿ ನಾವು ಪ್ರತಿಯೊಬ್ಬರನ್ನೂ ಹಕ್ಕುದಾರರನ್ನಾಗಿ ಮಾಡಿದ್ದೇವೆ. ನಿಮ್ಮ ಬಲಗೈಗಳ ಮೂಲಕ ಕರಾರು ಮಾಡಿದವರಿಗೆ ಅವರ ಪಾಲನ್ನು ಕೊಟ್ಟುಬಿಡಿ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳಿಗೂ ಸಾಕ್ಷಿಯಾಗಿದ್ದಾನೆ.
Nisa' 4:34
ಪುರುಷರಿಗೆ ಮಹಿಳೆಯರ ಮೇಲೆ ಅಧಿಕಾರವಿದೆ. ಅದೇಕೆಂದರೆ, ಅಲ್ಲಾಹು ನಿಮ್ಮಲ್ಲಿ ಕೆಲವರನ್ನು ಇತರ ಕೆಲವರಿಗಿಂತ ಶ್ರೇಷ್ಠಗೊಳಿಸಿದ್ದಾನೆ ಮತ್ತು ಅವರು (ಪುರುಷರು) ತಮ್ಮ ಧನದಿಂದ ಖರ್ಚು ಮಾಡುತ್ತಾರೆ. ವಿಧೇಯತೆ ತೋರುವವರು ಮತ್ತು ಗಂಡಂದಿರ ಅನುಪಸ್ಥಿತಿಯಲ್ಲಿ ಅಲ್ಲಾಹು ಕಾಪಾಡಬೇಕೆಂದು ಹೇಳಿದ್ದನ್ನು ಕಾಪಾಡುವವರು ಯಾರೋ ಅವರೇ ನೀತಿವಂತ ಮಹಿಳೆಯರು. ಅವರು ವಿಧೇಯತೆ ತೋರುವುದಿಲ್ಲವೆಂದು ನಿಮಗೆ ಭಯವಾದರೆ, ಅವರಿಗೆ ಹಿತೋಪದೇಶ ಮಾಡಿ, ಹಾಸಿಗೆಯಿಂದ ದೂರವಿಡಿ ಮತ್ತು ಥಳಿಸಿ. ಅವರು ನಿಮ್ಮ ಮಾತನ್ನು ಕೇಳಿದರೆ, ಅವರ ವಿರುದ್ಧ ಬೇರೆ ಮಾರ್ಗವನ್ನು ಹುಡುಕಬೇಡಿ. ನಿಶ್ಚಯವಾಗಿಯೂ ಅಲ್ಲಾಹು ಅತ್ಯುನ್ನತನು ಮತ್ತು ಸರ್ವಶ್ರೇಷ್ಠನಾಗಿದ್ದಾನೆ.
Nisa' 4:35
ಅವರಿಬ್ಬರ (ಗಂಡ-ಹೆಂಡತಿಯ) ನಡುವೆ ಒಡಕು ಮೂಡಬಹುದೆಂದು ನೀವು ಭಯಪಟ್ಟರೆ, ಅವನ ಕಡೆಯಿಂದ ಒಬ್ಬ ತೀರ್ಪುಗಾರನನ್ನು ಮತ್ತು ಅವಳ ಕಡೆಯಿಂದ ಒಬ್ಬ ತೀರ್ಪುಗಾರನನ್ನು ಕಳುಹಿಸಿರಿ. ಅವರಿಬ್ಬರು ರಾಜಿ ಮಾಡಿಕೊಳ್ಳಲು ಬಯಸುವುದಾದರೆ ಅಲ್ಲಾಹು ಅವರ ನಡುವೆ ಹೊಂದಾಣಿಕೆ ಮಾಡುವನು. ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನೂ ತಿಳಿದವನು ಮತ್ತು ಸೂಕ್ಷ್ಮಜ್ಞಾನವುಳ್ಳವನಾಗಿದ್ದಾನೆ.
Nisa' 4:36
ನೀವು ಅಲ್ಲಾಹನನ್ನು ಆರಾಧಿಸಿರಿ ಮತ್ತು ಅವನೊಂದಿಗೆ ಏನನ್ನೂ ಸಹಭಾಗಿಯನ್ನಾಗಿ ಮಾಡಬೇಡಿ. ಮಾತಾಪಿತರಿಗೆ ಒಳಿತು ಮಾಡಿರಿ. ಸಂಬಂಧಿಕರು, ಅನಾಥರು, ಬಡವರು, ಕುಟುಂಬ ಸಂಬಂಧವಿರುವ ನೆರೆಹೊರೆಯವರು, ಇತರ ನೆರೆಹೊರೆಯವರು, ಸಂಗಡಿಗರು, ಪ್ರಯಾಣಿಕರು ಮತ್ತು ನಿಮ್ಮ ಅಧೀನದಲ್ಲಿರುವ ಗುಲಾಮರು ಮುಂತಾದವರೊಡನೆ ಉತ್ತಮವಾಗಿ ವರ್ತಿಸಿರಿ. ಅಹಂಕಾರ ಮತ್ತು ದರ್ಪವಿರುವ ಯಾರನ್ನೂ ಅಲ್ಲಾಹು ಇಷ್ಟಪಡುವುದಿಲ್ಲ.
Nisa' 4:37
ಜಿಪುಣರು, ಜನರನ್ನು ಜಿಪುಣರಾಗಲು ಪ್ರೋತ್ಸಾಹಿಸುವವರು ಮತ್ತು ಅಲ್ಲಾಹು ಉದಾರವಾಗಿ ನೀಡಿದ ಧನವನ್ನು ಬಚ್ಚಿಡುವವರು ಯಾರೋ—ಆ ಸತ್ಯನಿಷೇಧಿಗಳಿಗೆ ನಾವು ಅಪಮಾನಕರ ಶಿಕ್ಷೆಯನ್ನು ಸಿದ್ಧಗೊಳಿಸಿದ್ದೇವೆ.
Nisa' 4:38
ತೋರಿಕೆಗಾಗಿ ತಮ್ಮ ಹಣವನ್ನು ಖರ್ಚು ಮಾಡುವವರು ಮತ್ತು ಅಲ್ಲಾಹನಲ್ಲಿ ಅಥವಾ ಅಂತ್ಯದಿನದಲ್ಲಿ ವಿಶ್ವಾಸವಿಡದವರು. ಯಾರು ಶೈತಾನನನ್ನು ಸಂಗಡಿಗನಾಗಿ ಸ್ವೀಕರಿಸುತ್ತಾನೋ, ಆ ಸಂಗಡಿಗನು ಎಷ್ಟು ಕೆಟ್ಟವನು!
Nisa' 4:39
ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಟ್ಟರೆ ಮತ್ತು ಅಲ್ಲಾಹು ನೀಡಿದ ಧನದಿಂದ ಖರ್ಚು ಮಾಡಿದರೆ ಅವರಿಗೇನು ತೊಂದರೆ? ಅಲ್ಲಾಹು ಅವರನ್ನು ಬಹಳ ಚೆನ್ನಾಗಿ ತಿಳಿದಿದ್ದಾನೆ.
Nisa' 4:40
ನಿಶ್ಚಯವಾಗಿಯೂ ಅಲ್ಲಾಹು ಒಂದು ಅಣುವಿನ ತೂಕದಷ್ಟು ಕೂಡ ಅನ್ಯಾಯ ಮಾಡುವುದಿಲ್ಲ. ಒಳಿತೇನಾದರೂ ಇದ್ದರೆ ಅವನು ಅದನ್ನು ದ್ವಿಗುಣಗೊಳಿಸಿ ತನ್ನ ಕಡೆಯ ಮಹಾ ಪ್ರತಿಫಲವನ್ನು ದಯಪಾಲಿಸುವನು.
Nisa' 4:41
ನಾವು ಪ್ರತಿಯೊಂದು ಸಮುದಾಯದಿಂದಲೂ ಒಬ್ಬ ಸಾಕ್ಷಿಯನ್ನು ತರುವಾಗ ಮತ್ತು ಇವರ ಮೇಲೆ ಸಾಕ್ಷಿಯಾಗಿ ನಿಮ್ಮನ್ನು ತರುವಾಗ ಪರಿಸ್ಥಿತಿ ಹೇಗಿರಬಹುದು!
Nisa' 4:42
ಅಂದು ಸತ್ಯನಿಷೇಧಿಗಳು ಮತ್ತು ಸಂದೇಶವಾಹಕರಿಗೆ ಅವಿಧೇಯತೆ ತೋರಿದವರು ಭೂಮಿಯನ್ನು ತಮ್ಮೊಂದಿಗೆ ಸಮತಟ್ಟು ಮಾಡಲಾದರೆ ಎಷ್ಟು ಚೆನ್ನಾಗಿತ್ತು ಎಂದು ಹಾರೈಸುವರು. ಅಲ್ಲಾಹನಿಂದ ಯಾವುದೇ ಸಂಗತಿಯನ್ನು ಮುಚ್ಚಿಡಲು ಅವರಿಗೆ ಸಾಧ್ಯವಿಲ್ಲ.
Nisa' 4:43
ಓ ಸತ್ಯವಿಶ್ವಾಸಿಗಳೇ! ಪಾನಮತ್ತರಾದ ಸ್ಥಿತಿಯಲ್ಲಿ ನೀವು ನಮಾಝ್ ಮಾಡಲು ಬರಬೇಡಿ—ನೀವೇನು ಹೇಳುತ್ತಿದ್ದೀರಿ ಎಂದು ನಿಮಗೆ ಅರ್ಥವಾಗುವ ತನಕ. ದೊಡ್ಡ ಅಶುದ್ಧಿಯಿರುವಾಗಲೂ[1] ಬರಬೇಡಿ—ಸ್ನಾನ ಮಾಡಿ ಶುದ್ಧರಾಗುವ ತನಕ. ಆದರೆ (ಮಸೀದಿಯ ಮೂಲಕ) ಹಾದು ಹೋಗುವುದರಲ್ಲಿ ತೊಂದರೆಯಿಲ್ಲ. ನೀವು ಅನಾರೋಗ್ಯದಲ್ಲಿದ್ದರೆ ಅಥವಾ ಪ್ರಯಾಣದಲ್ಲಿದ್ದರೆ; ಅಥವಾ ನಿಮ್ಮಲ್ಲೊಬ್ಬನು ಮಲಮೂತ್ರ ವಿಸರ್ಜನೆ ಮಾಡಿ ಬಂದಿದ್ದರೆ, ಅಥವಾ ಮಹಿಳೆಯರನ್ನು ಸ್ಪರ್ಶಿಸಿದ್ದರೆ (ಲೈಂಗಿಕ ಸಂಪರ್ಕ ಮಾಡಿದ್ದರೆ); ನಂತರ ನಿಮಗೆ ಶುದ್ಧಿಯಾಗಲು ನೀರು ದೊರೆಯದಿದ್ದರೆ, ಶುದ್ಧ ಮಣ್ಣಿನಿಂದ ತಯಮ್ಮುಮ್[2] ಮಾಡಿ ಮುಖ ಮತ್ತು ಕೈಗಳನ್ನು ಸವರಿರಿ. ನಿಶ್ಚಯವಾಗಿಯೂ ಅಲ್ಲಾಹು ಮನ್ನಿಸುವವನು ಮತ್ತು ಕ್ಷಮಿಸುವವನಾಗಿದ್ದಾನೆ.
———
[1] ದೊಡ್ಡ ಅಶುದ್ಧಿ (ಜನಾಬತ್) ಎಂದರೆ ಲೈಂಗಿಕ ಸಂಭೋಗ, ಸ್ವಪ್ನಸ್ಖಲನ ಅಥವಾ ವೀರ್ಯಸ್ಖಲನದ ಮೂಲಕ ಉಂಟಾಗುವ ಅಶುದ್ಧಿ. [2] ವುದೂ (ಅಂಗಸ್ನಾನ) ಅಥವಾ ಸ್ನಾನ ಮಾಡಲು ನೀರು ಸಿಗದಿದ್ದರೆ, ಅಥವಾ ಕಾಯಿಲೆ ಮುಂತಾದ ಕಾರಣದಿಂದ ನೀರು ಬಳಸಲು ಸಾಧ್ಯವಾಗದಿದ್ದರೆ ತಯಮ್ಮುಮ್ ಮಾಡಬಹುದು. ಇದು ವುದೂಗೆ ಪರ್ಯಾಯವಾಗಿದೆ. ತಯಮ್ಮುಮ್ ಎಂದರೆ ಎರಡು ಅಂಗೈಗಳನ್ನು ಶುದ್ಧ ಮಣ್ಣಿಗೆ ಬಡಿದು ಅದರಿಂದ ಅಂಗೈಗಳನ್ನು ಮತ್ತು ಮುಖವನ್ನು ಸವರುವುದು.
Nisa' 4:44
ಗ್ರಂಥದಿಂದ ಒಂದು ಪಾಲು ನೀಡಲಾದವರನ್ನು ನೀವು ನೋಡಿಲ್ಲವೇ? ಅವರು ದುರ್ಮಾರ್ಗವನ್ನು ಖರೀದಿಸುತ್ತಾರೆ ಮತ್ತು ನೀವು ನೇರಮಾರ್ಗದಿಂದ ತಪ್ಪಿಹೋಗಬೇಕೆಂದು ಬಯಸುತ್ತಾರೆ.
Nisa' 4:45
ನಿಮ್ಮ ಶತ್ರುಗಳನ್ನು ಅಲ್ಲಾಹು ಬಹಳ ಚೆನ್ನಾಗಿ ತಿಳಿದಿದ್ದಾನೆ. ನಿಮಗೆ ರಕ್ಷಕನಾಗಿ ಅಲ್ಲಾಹು ಸಾಕು. ಸಹಾಯ ಮಾಡುವವನಾಗಿಯೂ ಅಲ್ಲಾಹು ಸಾಕು.
Nisa' 4:46
ಯಹೂದಿಗಳಲ್ಲಿ ಕೆಲವರಿದ್ದಾರೆ. ಅವರು ವಚನಗಳನ್ನು ಅದರ ಸ್ಥಾನದಿಂದ ವಿರೂಪಗೊಳಿಸುತ್ತಾರೆ. ಅವರು ಹೇಳುತ್ತಾರೆ: “ನಾವು ಕಿವಿಗೊಡುತ್ತೇವೆ ಮತ್ತು ಅವಿಧೇಯತೆ ತೋರುತ್ತೇವೆ.” “ಕೇಳು, ಆದರೆ ನಿನ್ನ ಮಾತು ಕೇಳದಂತಾಗಲಿ.” “ನಮ್ಮ ಕಡೆಗೆ ಗಮನಕೊಡು.” (ಹೀಗೆ ಹೇಳುವಾಗ) ಅವರು ತಮ್ಮ ನಾಲಗೆಗಳನ್ನು ತಿರುಚುತ್ತಾರೆ ಮತ್ತು ಧರ್ಮಕ್ಕೆ ಕಳಂಕ ಹಚ್ಚುತ್ತಾರೆ.[1] ನಾವು ಕಿವಿಗೊಡುತ್ತೇವೆ ಮತ್ತು ವಿಧೇಯತೆ ತೋರುತ್ತೇವೆ; ಕೇಳಿರಿ; ಮತ್ತು ನಮ್ಮನ್ನು ನೋಡಿರಿ ಎಂದು ಅವರು ಹೇಳುತ್ತಿದ್ದರೆ ಅವರಿಗೆ ಅದು ಅತ್ಯುತ್ತಮ ಮತ್ತು ನೇರವಾಗಿರುತ್ತಿತ್ತು. ಆದರೆ ಅವರ ಸತ್ಯನಿಷೇಧದಿಂದಾಗಿ ಅಲ್ಲಾಹು ಅವರನ್ನು ಶಪಿಸಿದ್ದಾನೆ. ಆದ್ದರಿಂದ ಅವರು ಸ್ವಲ್ಪ ಮಾತ್ರ ವಿಶ್ವಾಸವಿಡುತ್ತಾರೆ.
———
[1] ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಏನಾದರೂ ಆದೇಶಿಸಿದರೆ ಸತ್ಯವಿಶ್ವಾಸಿಗಳು ನಾವು ಕಿವಿಗೊಡುತ್ತೇವೆ ಮತ್ತು ವಿಧೇಯತೆ ತೋರುತ್ತೇವೆ ಎನ್ನುತ್ತಿದ್ದರು. ಆದರೆ ಯಹೂದಿಗಳು ನಾವು ಕಿವಿಗೊಡುತ್ತೇವೆ ಮತ್ತು ಅವಿಧೇಯತೆ ತೋರುತ್ತೇವೆ ಎನ್ನುತ್ತಾ ಸತ್ಯವಿಶ್ವಾಸಿಗಳನ್ನು ಲೇವಡಿ ಮಾಡುತ್ತಿದ್ದರು. ಅದೇ ರೀತಿ ಅವರು ದ್ವಂದ್ವಾರ್ಥವಿರುವ ಕೇಳು, ಆದರೆ ನಿನ್ನ ಮಾತು ಕೇಳದಂತಾಗಲಿ ಎಂಬ ಮಾತನ್ನೂ ಹೇಳುತ್ತಿದ್ದರು. ಇದಕ್ಕೆ ಹೊರತಾಗಿ ಅವರು ನಮ್ಮ ಕಡೆಗೆ ಗಮನಕೊಡು (ರಾಇನಾ) ಎಂಬ ದ್ವಂದ್ವಾರ್ಥವಿರುವ ಇನ್ನೊಂದು ವಚನವನ್ನು ಬಳಸುತ್ತಿದ್ದರು. ಇವುಗಳನ್ನು ಹೇಳುವಾಗ ಅವರು ತಮ್ಮ ನಾಲಗೆಗಳನ್ನು ತಿರುಚಿ ಎರಡು ರೀತಿಯ ಅರ್ಥ ಬರುವಂತೆ ಮಾಡುತ್ತಿದ್ದರು.
Nisa' 4:47
ಓ ಗ್ರಂಥ ನೀಡಲಾದವರೇ! ನಾವು ಮುಖಗಳನ್ನು ಅಳಿಸಿ ಅವುಗಳನ್ನು ಹಿಂಭಾಗಕ್ಕೆ ತಿರುಗಿಸುವುದಕ್ಕೆ ಮೊದಲು; ಅಥವಾ ಸಬ್ಬತ್‍ನ ಜನರನ್ನು ಶಪಿಸಿದಂತೆ ನಿಮ್ಮನ್ನೂ ಶಪಿಸುವುದಕ್ಕೆ ಮೊದಲು, ನಿಮ್ಮ ಬಳಿಯಿರುವ ಗ್ರಂಥವನ್ನು ದೃಢೀಕರಿಸುತ್ತಾ ನಾವು ಅವತೀರ್ಣಗೊಳಿಸಿದ ಸಂದೇಶದಲ್ಲಿ ವಿಶ್ವಾಸವಿಡಿ. ಅಲ್ಲಾಹನ ಆಜ್ಞೆಯು ನೆರವೇರಿಯೇ ತೀರುತ್ತದೆ.
Nisa' 4:48
ತನ್ನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡಲಾಗುವುದನ್ನು ಅಲ್ಲಾಹು ಎಂದಿಗೂ ಕ್ಷಮಿಸುವುದಿಲ್ಲ. ಅದರ ಹೊರತಾದ ಪಾಪಗಳನ್ನು ಅವನು ಇಚ್ಛಿಸುವವರಿಗೆ ಅವನು ಕ್ಷಮಿಸುತ್ತಾನೆ. ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುವವನು ನಿಶ್ಚಯವಾಗಿಯೂ ಗಂಭೀರ ಪಾಪವನ್ನೆಸಗಿದನು.
Nisa' 4:49
ತಮ್ಮನ್ನು ತಾವೇ ಪರಿಶುದ್ಧರೆಂದು ಹೇಳುವವರನ್ನು ನೀವು ನೋಡಿಲ್ಲವೇ? ಅಲ್ಲ; ವಾಸ್ತವವಾಗಿ ಅಲ್ಲಾಹು ಅವನು ಇಚ್ಛಿಸುವವರನ್ನು ಪರಿಶುದ್ಧಗೊಳಿಸುತ್ತಾನೆ. (ಖರ್ಜೂರದ ಬೀಜದಲ್ಲಿರುವ) ನೂಲಿನಷ್ಟೂ ಕೂಡ ಯಾರಿಗೂ ಅನ್ಯಾಯವಾಗುವುದಿಲ್ಲ.
Nisa' 4:50
ಅವರು ಅಲ್ಲಾಹನ ಮೇಲೆ ಹೇಗೆ ಸುಳ್ಳು ಆರೋಪಿಸುತ್ತಾರೆಂದು ನೋಡಿರಿ. ಪ್ರತ್ಯಕ್ಷ ಪಾಪವಾಗಿ ಅವರಿಗೆ ಅದೇ ಸಾಕು.
Nisa' 4:51
ಗ್ರಂಥದಿಂದ ಒಂದು ಪಾಲು ನೀಡಲಾದವರನ್ನು ನೀವು ನೋಡಿಲ್ಲವೇ? ಅವರು ವಿಗ್ರಹಗಳು ಮತ್ತು ಮಿಥ್ಯ ದೇವರುಗಳಲ್ಲಿ ವಿಶ್ವಾಸವಿಡುತ್ತಾರೆ ಮತ್ತು ಸತ್ಯನಿಷೇಧಿಗಳೊಡನೆ, “ಸತ್ಯವಿಶ್ವಾಸಿಗಳಿಗಿಂತಲೂ ಇವರೇ ಹೆಚ್ಚು ಸನ್ಮಾರ್ಗದಲ್ಲಿದ್ದಾರೆ” ಎಂದು ಹೇಳುತ್ತಾರೆ.
Nisa' 4:52
ಅವರೇ ಅಲ್ಲಾಹನ ಶಾಪಕ್ಕೆ ಗುರಿಯಾದವರು. ಯಾರು ಅಲ್ಲಾಹನ ಶಾಪಕ್ಕೆ ಗುರಿಯಾಗುತ್ತಾರೋ ಅವರಿಗೆ ಯಾವುದೇ ಸಹಾಯಕನನ್ನು ನೀವು ಕಾಣಲಾರಿರಿ.
Nisa' 4:53
ಆಧಿಪತ್ಯದಲ್ಲಿ ಅವರಿಗೇನಾದರೂ ಪಾಲಿದೆಯೇ? ಇದ್ದರೆ ಅವರು ಜನರಿಗೆ ಖರ್ಜೂರ ಬೀಜದ ಪೊರೆಯನ್ನೂ ನೀಡುತ್ತಿರಲಿಲ್ಲ.
Nisa' 4:54
ಜನರಿಗೆ ಅಲ್ಲಾಹು ತನ್ನ ಔದಾರ್ಯದಿಂದ ನೀಡಿದ್ದನ್ನು ಕಂಡು ಅವರಿಗೆ ಹೊಟ್ಟೆ ಉರಿಯುತ್ತಿದೆಯೇ? ಹಾಗಾದರೆ, ನಾವು ಇಬ್ರಾಹೀಮರ ಕುಟುಂಬಕ್ಕೆ ಗ್ರಂಥ ಮತ್ತು ವಿವೇಕವನ್ನು ನೀಡಿದ್ದೇವೆ. ಅವರಿಗೆ ನಾವು ಮಹಾ ಸಾಮ್ರಾಜ್ಯವನ್ನು ಕೂಡ ನೀಡಿದ್ದೇವೆ.
Nisa' 4:55
ಅವರಲ್ಲಿ ಕೆಲವರು ಅದರಲ್ಲಿ (ಗ್ರಂಥದಲ್ಲಿ) ವಿಶ್ವಾಸವಿಡುತ್ತಾರೆ ಮತ್ತು ಅವರಲ್ಲಿ ಕೆಲವರು ಅದನ್ನು ದ್ವೇಷಿಸುತ್ತಾರೆ. ಅವರಿಗೆ ಧಗಧಗಿಸುವ ನರಕಾಗ್ನಿಯೇ ಸಾಕು.
Nisa' 4:56
ನಿಶ್ಚಯವಾಗಿಯೂ ನಮ್ಮ ವಚನಗಳನ್ನು ನಿಷೇಧಿಸಿದವರು ಯಾರೋ—ಅವರನ್ನು ನಾವು ನರಕಾಗ್ನಿಯಲ್ಲಿ ಹಾಕಿ ಉರಿಸುವೆವು. ಅವರ ಚರ್ಮಗಳು ಬೆಂದು ಕರಟುವಾಗಲೆಲ್ಲಾ, ಅವರು ಶಿಕ್ಷೆಯನ್ನು ಅನುಭವಿಸುತ್ತಲೇ ಇರಲು, ನಾವು ಅವರಿಗೆ ಬೇರೆ ಚರ್ಮಗಳನ್ನು ಬದಲಿಯಾಗಿ ನೀಡುವೆವು. ನಿಶ್ಚಯವಾಗಿಯೂ ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
Nisa' 4:57
ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ—ಅವರನ್ನು ನಾವು ಸದ್ಯವೇ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿಗೆ ಪ್ರವೇಶ ಮಾಡಿಸುವೆವು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅಲ್ಲಿ ಅವರಿಗೆ ಪರಿಶುದ್ಧ ಸಂಗಾತಿಗಳಿರುವರು. ನಾವು ಅವರನ್ನು ಶಾಶ್ವತ ನೆರಳಿಗೆ ಪ್ರವೇಶ ಮಾಡಿಸುವೆವು.
Nisa' 4:58
ನಂಬಿಕೆಯಿಂದ ನೀಡಲಾದ ವಸ್ತುಗಳನ್ನು ಅವುಗಳ ಹಕ್ಕುದಾರರಿಗೆ ಕೊಟ್ಟುಬಿಡಲು ಮತ್ತು ಜನರ ನಡುವೆ ತೀರ್ಪು ನೀಡುವಾಗ ನ್ಯಾಯವಾಗಿಯೇ ತೀರ್ಪು ನೀಡಲು ಅಲ್ಲಾಹು ನಿಮಗೆ ಆಜ್ಞಾಪಿಸುತ್ತಾನೆ. ನಿಶ್ಚಯವಾಗಿಯೂ ಅಲ್ಲಾಹು ನಿಮಗೆ ನೀಡುವ ಉಪದೇಶವು ಬಹಳ ಉತ್ತಮವಾಗಿದೆ! ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನೂ ಕೇಳುವವನು ಮತ್ತು ನೋಡುವವನಾಗಿದ್ದಾನೆ.
Nisa' 4:59
ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನನ್ನು ಅನುಸರಿಸಿರಿ ಮತ್ತು ಸಂದೇಶವಾಹಕರನ್ನು ಅನುಸರಿಸಿರಿ. ನಿಮ್ಮ ಮೇಲೆ ಅಧಿಕಾರವಿರುವವರನ್ನೂ ಅನುಸರಿಸಿರಿ. ನಿಮ್ಮ ಮಧ್ಯೆ ಯಾವುದೇ ವಿಷಯದಲ್ಲಿ ಭಿನ್ನಮತವುಂಟಾದರೆ ಅದನ್ನು ಅಲ್ಲಾಹನಿಗೆ ಮತ್ತು ಸಂದೇಶವಾಹಕರಿಗೆ ಮರಳಿಸಿರಿ—ನೀವು ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವರಾಗಿದ್ದರೆ. ಅದು ಅತ್ಯುತ್ತಮ ಮಾರ್ಗವಾಗಿದ್ದು ಅತ್ಯುತ್ತಮ ಪರಿಣಾಮವನ್ನು ಹೊಂದಿದೆ.
Nisa' 4:60
ನಿಮಗೆ ಅವತೀರ್ಣವಾದ ಗ್ರಂಥದಲ್ಲಿ ಮತ್ತು ನಿಮಗಿಂತ ಮುಂಚೆ ಅವತೀರ್ಣವಾದ ಗ್ರಂಥಗಳಲ್ಲಿ ನಾವು ವಿಶ್ವಾಸವಿಟ್ಟಿದ್ದೇವೆ ಎಂದು ವಾದಿಸುವವರನ್ನು ನೀವು ನೋಡಿಲ್ಲವೇ? ಅವರು ತೀರ್ಪಿಗಾಗಿ ಮಿಥ್ಯ ದೇವರುಗಳ ಬಳಿಗೆ ಹೋಗಲು ಬಯಸುತ್ತಾರೆ. ವಾಸ್ತವವಾಗಿ, ಮಿಥ್ಯ ದೇವರುಗಳನ್ನು ನಿಷೇಧಿಸಬೇಕೆಂದು ಅವರಿಗೆ ಆಜ್ಞಾಪಿಸಲಾಗಿತ್ತು. ಶೈತಾನನು ಅವರನ್ನು ವಿದೂರ ದುರ್ಮಾರ್ಗದಲ್ಲಿ ಬಿಟ್ಟುಬಿಡಲು ಬಯಸುತ್ತಾನೆ.
Nisa' 4:61
“ಅಲ್ಲಾಹು ಅವತೀರ್ಣಗೊಳಿಸಿದ ಗ್ರಂಥಕ್ಕೆ ಮತ್ತು ಅವನ ಸಂದೇಶವಾಹಕರ ಕಡೆಗೆ ಬನ್ನಿರಿ” ಎಂದು ಅವರೊಡನೆ ಹೇಳಲಾದರೆ, ಆ ಕಪಟವಿಶ್ವಾಸಿಗಳು ದ್ವೇಷದಿಂದ ನಿಮ್ಮನ್ನು ಅವಗಣಿಸಿ ನಡೆಯುವುದನ್ನು ನೀವು ಕಾಣುವಿರಿ.
Nisa' 4:62
ಅವರ ಕೈಗಳು ಈಗಾಗಲೇ ಮಾಡಿಟ್ಟ ದುಷ್ಕರ್ಮಗಳ ಕಾರಣದಿಂದ ಅವರಿಗೇನಾದರೂ ಅನಾಹುತ ಸಂಭವಿಸಿದರೆ, ನಂತರ ಅವರು ತಮ್ಮ ಬಳಿಗೆ ಬಂದು ಅಲ್ಲಾಹನ ಮೇಲೆ ಆಣೆ ಮಾಡುತ್ತಾ, “ನಾವು ಒಳಿತು ಮತ್ತು ಹೊಂದಾಣಿಕೆಯನ್ನು ಮಾತ್ರ ಬಯಸಿದ್ದೆವು” ಎಂದು ಹೇಳುವಾಗ ಅವರ ಸ್ಥಿತಿ ಹೇಗಿರಬಹುದು?
Nisa' 4:63
ಅವರ ಹೃದಯಗಳಲ್ಲಿ ಏನಿದೆಯೆಂದು ಅಲ್ಲಾಹು ತಿಳಿದಿದ್ದಾನೆ. ಆದ್ದರಿಂದ ಅವರನ್ನು ಬಿಟ್ಟು ದೂರ ಸರಿಯಿರಿ; ಅವರಿಗೆ ಉಪದೇಶ ಮಾಡಿರಿ ಮತ್ತು ಅವರಿಗೆ ಹೃದಯಸ್ಪರ್ಶಿ ಮಾತನ್ನು ಹೇಳಿರಿ.
Nisa' 4:64
ಅಲ್ಲಾಹನ ಅಪ್ಪಣೆಯಿಂದ ಅನುಸರಿಸುವುದಕ್ಕಾಗಿಯೇ ಹೊರತು ನಾವು ಯಾವುದೇ ಸಂದೇಶವಾಹಕರನ್ನು ಕಳುಹಿಸಿಲ್ಲ. ಅವರು ಸ್ವಯಂ ಅವರ ಮೇಲೆಯೇ ಅಕ್ರಮವೆಸಗಿ, ನಂತರ ನಿಮ್ಮ ಬಳಿಗೆ ಬಂದು ಅಲ್ಲಾಹನಲ್ಲಿ ಕ್ಷಮೆಯಾಚಿಸಿದರೆ, ಮತ್ತು ಅವರ ಪರವಾಗಿ ಸಂದೇಶವಾಹಕರು ಕೂಡ ಕ್ಷಮೆಯಾಚಿಸಿದರೆ, ಅವರು ಅಲ್ಲಾಹನನ್ನು ಪಶ್ಚಾತ್ತಾಪ ಸ್ವೀಕರಿಸುವವನಾಗಿ ಮತ್ತು ದಯೆ ತೋರುವವನಾಗಿ ಕಾಣುವರು.
Nisa' 4:65
ಇಲ್ಲ, ನಿಮ್ಮ ಪರಿಪಾಲಕನ (ಅಲ್ಲಾಹನ) ಮೇಲಾಣೆ! ಅವರು ತಮ್ಮ ನಡುವಿನ ಭಿನ್ನಮತಗಳಿಗೆ ನಿಮ್ಮನ್ನು ತೀರ್ಪುಗಾರನನ್ನಾಗಿ ಮಾಡಿ, ನಂತರ ನೀವು ನೀಡುವ ತೀರ್ಪನ್ನು ಯಾವುದೇ ಜಂಜಾಟವಿಲ್ಲದೆ ಸ್ವೀಕರಿಸಿ ಸಂಪೂರ್ಣ ವಿಧೇಯರಾಗುವ ತನಕ ಅವರು ಸತ್ಯವಿಶ್ವಾಸಿಗಳಾಗುವುದಿಲ್ಲ.
Nisa' 4:66
“ನೀವು ನಿಮ್ಮನ್ನೇ ಕೊಲ್ಲಿರಿ” ಅಥವಾ “ನೀವು ನಿಮ್ಮ ಮನೆಗಳನ್ನು ಬಿಟ್ಟು ಹೊರಡಿರಿ” ಎಂಬ ಆಜ್ಞೆಯನ್ನು ನಾವು ಅವರಿಗೆ ಕಡ್ಡಾಯಗೊಳಿಸುತ್ತಿದ್ದರೆ, ಅವರಲ್ಲಿ ಕೆಲವರ ಹೊರತು ಯಾರೂ ಅದನ್ನು ಮಾಡುತ್ತಿರಲಿಲ್ಲ. ಅವರಿಗೆ ನೀಡಲಾಗುವ ಉಪದೇಶದಂತೆ ಅವರು ನಡೆಯುತ್ತಿದ್ದರೆ, ಅದು ಅವರಿಗೆ ಶ್ರೇಷ್ಠವಾಗಿರುತ್ತಿತ್ತು ಮತ್ತು ಅವರಿಗೆ ಪ್ರಬಲ ದೃಢತೆಯಾಗಿ ಮಾರ್ಪಡುತ್ತಿತ್ತು.
Nisa' 4:67
ಹಾಗಿದ್ದರೆ ನಾವು ಅವರಿಗೆ ನಮ್ಮ ಕಡೆಯ ಮಹಾ ಪ್ರತಿಫಲವನ್ನು ದಯಪಾಲಿಸುತ್ತಿದ್ದೆವು.
Nisa' 4:68
ಅವರನ್ನು ನೇರ ಮಾರ್ಗಕ್ಕೆ ಮುನ್ನಡೆಸುತ್ತಿದ್ದೆವು.
Nisa' 4:69
ಯಾರು ಅಲ್ಲಾಹನನ್ನು ಮತ್ತು ಸಂದೇಶವಾಹಕರನ್ನು ಅನುಸರಿಸುತ್ತಾನೋ—ಅವರು ಅಲ್ಲಾಹು ಅನುಗ್ರಹಿಸಿದ ಪ್ರವಾದಿಗಳು, ಸತ್ಯವಂತರು, ಹುತಾತ್ಮರು ಮತ್ತು ನೀತಿವಂತರೊಡನೆ ಸೇರುವರು. ಅವರು ಬಹಳ ಉತ್ತಮ ಸಂಗಡಿಗರು!
Nisa' 4:70
ಅದು ಅಲ್ಲಾಹನ ಕಡೆಯ ಔದಾರ್ಯವಾಗಿದೆ. ಎಲ್ಲವನ್ನೂ ತಿಳಿದವನಾಗಿ ಅಲ್ಲಾಹು ಸಾಕು.
Nisa' 4:71
ಓ ಸತ್ಯವಿಶ್ವಾಸಿಗಳೇ! ನೀವು ಜಾಗರೂಕರಾಗಿರಿ ಮತ್ತು ಸಣ್ಣ ಗುಂಪುಗಳಾಗಿ ಅಥವಾ ಎಲ್ಲರೂ ಒಟ್ಟಾಗಿ ಯುದ್ಧಕ್ಕೆ ಹೊರಡಿರಿ.
Nisa' 4:72
ನಿಶ್ಚಯವಾಗಿಯೂ ನಿಮ್ಮಲ್ಲಿ ಹಿಂದೆ ಬೀಳುವ ಕೆಲವರಿದ್ದಾರೆ. ನಿಮಗೇನಾದರೂ ಅನಾಹುತ ಸಂಭವಿಸಿದರೆ, “ನಾನು ಅವರೊಂದಿಗೆ ಯುದ್ಧಕ್ಕೆ ಹೋಗದಂತೆ ಮಾಡುವ ಮೂಲಕ ಅಲ್ಲಾಹು ನನ್ನನ್ನು ಅನುಗ್ರಹಿಸಿದ್ದಾನೆ” ಎಂದು ಅವರು ಹೇಳುತ್ತಾರೆ.
Nisa' 4:73
ನಿಮಗೆ ಅಲ್ಲಾಹನ ಕಡೆಯಿಂದ ಏನಾದರೂ ಔದಾರ್ಯ ದೊರೆತರೆ, ನಿಮ್ಮ ಮತ್ತು ಅವರ ನಡುವೆ ಯಾವುದೇ ಅನ್ಯೋನ್ಯತೆಯಿಲ್ಲದ ಶೈಲಿಯಲ್ಲಿ, “ಅಯ್ಯೋ! ನಾನು ಅವರ ಜೊತೆಗೆ ತೆರಳುತ್ತಿದ್ದರೆ ಎಷ್ಟು ಚೆನ್ನಾಗಿತ್ತು! ನನಗೂ ಮಹಾ ಗೆಲುವನ್ನು ಸಂಪಾದಿಸಬಹುದಿತ್ತು” ಎನ್ನುತ್ತಾರೆ.
Nisa' 4:74
ಪರಲೋಕಕ್ಕಾಗಿ ಇಹಲೋಕವನ್ನು ತ್ಯಾಗ ಮಾಡಲು ಸಿದ್ಧರಾಗಿರುವವರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಲಿ. ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿ ಕೊಲೆಯಾಗುವವರು ಅಥವಾ ಜಯಶಾಲಿಯಾಗುವವರು ಯಾರೋ—ಅವರಿಗೆ ನಾವು ಮಹಾ ಪ್ರತಿಫಲವನ್ನು ನೀಡುತ್ತೇವೆ.
Nisa' 4:75
ನಿಮಗೇನಾಗಿದೆ? ದಬ್ಬಾಳಿಕೆಯಿಂದ ನರಳುತ್ತಿರುವ ಪುರುಷರು, ಮಹಿಳೆಯರು ಮತ್ತು ಮಕ್ಕಳಿಗಾಗಿ ನೀವೇಕೆ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುವುದಿಲ್ಲ? “ಓ ನಮ್ಮ ಪರಿಪಾಲಕನೇ! ದಬ್ಬಾಳಿಕೆ ನಡೆಸುವ ಜನರು ವಾಸಿಸುತ್ತಿರುವ ಈ ಊರಿನಿಂದ ನಮ್ಮನ್ನು ವಿಮೋಚನೆಗೊಳಿಸು; ನಮಗೆ ನಿನ್ನ ಕಡೆಯ ಒಬ್ಬ ರಕ್ಷಕನನ್ನು ಮತ್ತು ನಿನ್ನ ಕಡೆಯ ಒಬ್ಬ ಸಹಾಯಕನನ್ನು ನಿಯೋಗಿಸು” ಎಂದು ಅವರು ಪ್ರಾರ್ಥಿಸುತ್ತಿದ್ದಾರೆ.
Nisa' 4:76
ಸತ್ಯವಿಶ್ವಾಸಿಗಳು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುತ್ತಾರೆ. ಸತ್ಯನಿಷೇಧಿಗಳು ಮಿಥ್ಯ ದೇವರುಗಳ ಮಾರ್ಗದಲ್ಲಿ ಯುದ್ಧ ಮಾಡುತ್ತಾರೆ. ಆದ್ದರಿಂದ ಶೈತಾನನ ಮಿತ್ರರ ವಿರುದ್ಧ ಯುದ್ಧ ಮಾಡಿರಿ. ನಿಶ್ಚಯವಾಗಿಯೂ ಶೈತಾನನ ತಂತ್ರವು ಬಲಹೀನವಾಗಿದೆ.
Nisa' 4:77
“ನಿಮ್ಮ ಕೈಗಳನ್ನು ತಡೆಹಿಡಿಯಿರಿ, ನಮಾಝ್ ಸಂಸ್ಥಾಪಿಸಿರಿ ಮತ್ತು ಝಕಾತ್ ನೀಡಿರಿ” ಎಂದು ಆದೇಶಿಸಲಾದ ಜನರನ್ನು ನೀವು ನೋಡಿಲ್ಲವೇ? ಅವರಿಗೆ ಯುದ್ಧವನ್ನು ಕಡ್ಡಾಯಗೊಳಿಸಲಾದಾಗ ಅವರಲ್ಲೊಂದು ಗುಂಪು ಅಲ್ಲಾಹನನ್ನು ಭಯಪಡುವಂತೆ ಅಥವಾ ಅದಕ್ಕಿಂತಲೂ ತೀವ್ರವಾಗಿ ಜನರನ್ನು ಭಯಪಡುತ್ತಾರೆ! ಅವರು ಕೇಳುತ್ತಾರೆ: “ಓ ನಮ್ಮ ಪರಿಪಾಲಕನೇ! ನಮಗೆ ಯುದ್ಧವನ್ನು (ಈಗಲೇ) ಏಕೆ ಕಡ್ಡಾಯಗೊಳಿಸಿದೆ? ಹತ್ತಿರದ ಒಂದು ಅವಧಿಯ ತನಕ ನಮಗೆ ಕಾಲಾವಕಾಶ ನೀಡಬಹುದಿತ್ತಲ್ಲವೇ?” ಹೇಳಿರಿ: “ಇಹಲೋಕದ ಆನಂದವು ಅತ್ಯಲ್ಪವಾಗಿದೆ. ದೇವಭಯವುಳ್ಳವರಿಗೆ ಪರಲೋಕವು ಅತ್ಯುತ್ತಮವಾಗಿದೆ. ನಿಮಗೆ (ಖರ್ಜೂರದ ಬೀಜದಲ್ಲಿರುವ) ನೂಲಿನಷ್ಟೂ ಅನ್ಯಾಯವಾಗುವುದಿಲ್ಲ.”
Nisa' 4:78
ನೀವೆಲ್ಲೇ ಇದ್ದರೂ ಸಾವು ನಿಮ್ಮನ್ನು ಬೆನ್ನಟ್ಟುತ್ತದೆ. ನೀವು ಸುಭದ್ರ ಕೋಟೆಯೊಳಗಿದ್ದರೂ ಸಹ. ಅವರಿಗೆ ಒಳಿತುಂಟಾದರೆ, “ಇದು ಅಲ್ಲಾಹನಿಂದ” ಎಂದು ಅವರು ಹೇಳುತ್ತಾರೆ. ಆದರೆ ಅವರಿಗೆ ಕೆಡುಕುಂಟಾದರೆ, “ಇದು ನಿಮ್ಮಿಂದ” ಎನ್ನುತ್ತಾರೆ. ಹೇಳಿರಿ: “ಎಲ್ಲವೂ ಅಲ್ಲಾಹನಿಂದಲೇ ಆಗಿದೆ.” ಈ ಜನರಿಗೇನಾಗಿದೆ? ಇವರೇಕೆ ಮಾತನ್ನು ಅರ್ಥಮಾಡಿಕೊಳ್ಳುವುದಿಲ್ಲ?
Nisa' 4:79
ನಿಮಗೇನಾದರೂ ಒಳಿತುಂಟಾದರೆ ಅದು ಅಲ್ಲಾಹನಿಂದ. ನಿಮಗೆ ಕೆಡುಕು ಬಾಧಿಸಿದರೆ, ಅದು ನಿಮ್ಮಿಂದಲೇ ಆಗಿದೆ. ನಾವು ನಿಮ್ಮನ್ನು ಮನುಷ್ಯರಿಗೆ ಸಂದೇಶವಾಹಕನನ್ನಾಗಿ ಮಾಡಿ ಕಳುಹಿಸಿದ್ದೇವೆ. ಸಾಕ್ಷಿಯಾಗಿ ಅಲ್ಲಾಹು ಸಾಕು.
Nisa' 4:80
ಯಾರು ಸಂದೇಶವಾಹಕರನ್ನು ಅನುಸರಿಸುತ್ತಾನೋ ಅವನು ಅಲ್ಲಾಹನನ್ನು ಅನುಸರಿಸಿದನು. ಯಾರು ವಿಮುಖರಾಗುತ್ತಾರೋ ಅವರ ಮೇಲೆ ಕಾವಲುಗಾರನಾಗಿ ನಾವು ನಿಮ್ಮನ್ನು ಕಳುಹಿಸಿಲ್ಲ.
Nisa' 4:81
ಅವರು ಹೇಳುತ್ತಾರೆ: “ನಾವು ಅನುಸರಿಸಿದ್ದೇವೆ.” ನಂತರ ಅವರು ನಿಮ್ಮ ಬಳಿಯಿಂದ ಹೊರಟರೆ, ಅವರಲ್ಲೊಂದು ಗುಂಪು ನೀವು ಹೇಳಿದ್ದಕ್ಕೆ ವಿರುದ್ಧವಾಗಿ ರಾತ್ರಿಯಲ್ಲಿ ಗೂಢ ಮಾತುಕತೆ ನಡೆಸುತ್ತಾರೆ. ಅವರು ಮಾಡುವ ಗೂಢಾಲೋಚನೆಯನ್ನು ಅಲ್ಲಾಹು ದಾಖಲಿಸುತ್ತಿದ್ದಾನೆ. ಆದ್ದರಿಂದ ನೀವು ಅವರಿಂದ ವಿಮುಖರಾಗಿರಿ ಮತ್ತು ಅಲ್ಲಾಹನಲ್ಲಿ ಭರವಸೆಯಿಡಿರಿ. ಭರವಸೆಯಿಡಲು ನಿಮಗೆ ಅಲ್ಲಾಹು ಸಾಕು.
Nisa' 4:82
ಅವರು ಕುರ್‌ಆನನ್ನು ಮನನ ಮಾಡುವುದಿಲ್ಲವೇ? ಅದು ಅಲ್ಲಾಹು ಅಲ್ಲದವರ ಕಡೆಯಿಂದ (ಅವತೀರ್ಣವಾಗಿರುತ್ತಿದ್ದರೆ) ಅವರು ಅದರಲ್ಲಿ ಅನೇಕ ವಿರೋಧಾಭಾಸಗಳನ್ನು ಕಾಣುತ್ತಿದ್ದರು.
Nisa' 4:83
ಅವರಿಗೆ ಶಾಂತಿ ಅಥವಾ ಭೀತಿಯ ಸುದ್ದಿಗಳು ತಲುಪಿದೊಡನೆ ಅವರು ಅದನ್ನು ಪ್ರಚಾರ ಮಾಡುತ್ತಾರೆ. ಅವರು ಅದನ್ನು ಸಂದೇಶವಾಹಕರಿಗೆ ಮತ್ತು ಅವರಲ್ಲಿ ವಿಷಯಗಳನ್ನು ಆಳವಾಗಿ ವಿಶ್ಲೇಷಿಸುವ ವಿದ್ವಾಂಸರಿಗೆ ಬಿಟ್ಟು ಬಿಡುತ್ತಿದ್ದರೆ, ಅವರು ಅದರ ಸತ್ಯಾಸತ್ಯತೆಗಳನ್ನು ತಿಳಿಯುತ್ತಿದ್ದರು. ನಿಮ್ಮ ಮೇಲೆ ಅಲ್ಲಾಹನ ಔದಾರ್ಯ ಮತ್ತು ದಯೆಯಿಲ್ಲದಿರುತ್ತಿದ್ದರೆ ನಿಮ್ಮಲ್ಲಿ ಕೆಲವರ ಹೊರತು ಎಲ್ಲರೂ ಶೈತಾನನನ್ನು ಹಿಂಬಾಲಿಸುತ್ತಿದ್ದರು.
Nisa' 4:84
ಆದ್ದರಿಂದ ನೀವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ. ನಿಮಗೆ ನಿಮ್ಮ ವಿಷಯದ ಹೊಣೆಯನ್ನು ಮಾತ್ರ ಹೊರಿಸಲಾಗಿದೆ. ಸತ್ಯವಿಶ್ವಾಸಿಗಳನ್ನು ಹುರಿದುಂಬಿಸಿರಿ. ಅಲ್ಲಾಹು ಸತ್ಯನಿಷೇಧಿಗಳ ದಾಳಿಯನ್ನು ತಡೆಗಟ್ಟುವನು. ಅಲ್ಲಾಹು ಮಹಾ ಶಕ್ತಿಶಾಲಿ ಮತ್ತು ಅತಿಕಠಿಣವಾಗಿ ಶಿಕ್ಷಿಸುವವನಾಗಿದ್ದಾನೆ.
Nisa' 4:85
ಯಾರು ಒಳಿತಿನ ಕಾರ್ಯದಲ್ಲಿ ಶಿಫಾರಸು ಮಾಡುತ್ತಾನೋ, ಅದರ ಒಂದು ಪಾಲು ಅವನಿಗೂ ಇದೆ. ಯಾರು ಕೆಡುಕಿನ ಕಾರ್ಯದಲ್ಲಿ ಶಿಫಾರಸು ಮಾಡುತ್ತಾನೋ, ಅದರ ಒಂದು ಪಾಲು ಅವನಿಗೂ ಇದೆ. ಅಲ್ಲಾಹು ಎಲ್ಲ ವಿಷಯಗಳಲ್ಲೂ ಮೇಲ್ವಿಚಾರಕನಾಗಿದ್ದಾನೆ.
Nisa' 4:86
ನಿಮಗೆ ಅಭಿವಂದನೆ (ಸಲಾಂ) ಸಲ್ಲಿಸಲಾದರೆ ಅದಕ್ಕಿಂತಲೂ ಉತ್ತಮವಾಗಿ ಅಭಿವಂದನೆ ಸಲ್ಲಿಸಿರಿ. ಅಥವಾ ಕನಿಷ್ಠ ಅದನ್ನು ಮರಳಿಸಿರಿ.[1] ನಿಶ್ಚಯವಾಗಿಯೂ ಅಲ್ಲಾಹು ಪ್ರತಿಯೊಂದು ವಿಷಯವನ್ನೂ ವಿಚಾರಣೆ ಮಾಡುತ್ತಾನೆ.
———
[1] ಯಾರಾದರೂ “ಅಸ್ಸಲಾಂ ಅಲೈಕುಂ” ಎಂದು ಹೇಳಿದರೆ, “ವಅಲೈಕುಮುಸ್ಸಲಾಂ ವರಹ್ಮತುಲ್ಲಾಹಿ ವಬರಕಾತುಹು” ಎಂದು ಹೇಳಿ ಉತ್ತರಿಸಬೇಕು. ಇದು ಐಚ್ಛಿಕವಾಗಿದೆ. ಕನಿಷ್ಠ “ವಅಲೈಕುಮುಸ್ಸಲಾಂ” ಎಂದು ಹೇಳಿ ಉತ್ತರಿಸುವುದು ಕಡ್ಡಾಯವಾಗಿದೆ.
Nisa' 4:87
ಅಲ್ಲಾಹು! ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ನಿಶ್ಚಯವಾಗಿಯೂ ಅವನು ನಿಮ್ಮೆಲ್ಲರನ್ನೂ ಪುನರುತ್ಥಾನ ದಿನಕ್ಕೆ ಒಟ್ಟುಗೂಡಿಸುವನು. ಅದರಲ್ಲಿ ಸಂದೇಹವೇ ಇಲ್ಲ. ಮಾತಿನಲ್ಲಿ ಅಲ್ಲಾಹನಿಗಿಂತಲೂ ಹೆಚ್ಚು ಸತ್ಯವಂತನು ಯಾರು?
Nisa' 4:88
ನಿಮಗೇನಾಗಿದೆ? ಕಪಟವಿಶ್ವಾಸಿಗಳ ವಿಷಯದಲ್ಲಿ ನೀವೇಕೆ ಎರಡು ಗುಂಪುಗಳಾಗಿದ್ದೀರಿ? ಅವರು ಮಾಡಿದ (ದುಷ್ಕರ್ಮಗಳ) ಕಾರಣದಿಂದ ಅಲ್ಲಾಹು ಅವರನ್ನು ಹಿಂದಕ್ಕೆ ತಿರುಗಿಸಿದ್ದಾನೆ. ಅಲ್ಲಾಹು ದಾರಿತಪ್ಪಿಸಿದ ಜನರಿಗೆ ನೀವು ಸನ್ಮಾರ್ಗ ತೋರಿಸಲು ಬಯಸುತ್ತೀರಾ? ಅಲ್ಲಾಹು ಯಾರನ್ನು ದಾರಿತಪ್ಪಿಸುತ್ತಾನೋ ಅವನಿಗೆ ಯಾವುದೇ ದಾರಿಯನ್ನು ನೀವು ಕಾಣಲಾರಿರಿ.
Nisa' 4:89
ಅವರು ಸತ್ಯನಿಷೇಧಿಗಳಾದಂತೆ ನೀವೂ ಸತ್ಯನಿಷೇಧಿಗಳಾಗಬೇಕು ಮತ್ತು ನೀವೆಲ್ಲರೂ ಸಮಾನರಾಗಬೇಕು ಎಂದು ಅವರು ಬಯಸುತ್ತಾರೆ. ಆದ್ದರಿಂದ ಅವರು ಅಲ್ಲಾಹನ ಮಾರ್ಗದಲ್ಲಿ ವಲಸೆ (ಹಿಜ್ರ) ಮಾಡುವ ತನಕ ಅವರಲ್ಲಿ ಯಾರನ್ನೂ ನೀವು ಮಿತ್ರರನ್ನಾಗಿ ಸ್ವೀಕರಿಸಬೇಡಿ. ಅವರು ವಿಮುಖರಾದರೆ, ಅವರನ್ನು ಹಿಡಿಯಿರಿ ಮತ್ತು ಕಂಡಲ್ಲಿ ಕೊಲ್ಲಿರಿ. ಅವರಲ್ಲಿ ಯಾರನ್ನೂ ನೀವು ಮಿತ್ರರನ್ನಾಗಿ ಅಥವಾ ಸಹಾಯಕರನ್ನಾಗಿ ಸ್ವೀಕರಿಸಬೇಡಿ.
Nisa' 4:90
ಆದರೆ ನಿಮ್ಮೊಂದಿಗೆ ಒಪ್ಪಂದ ಮಾಡಿಕೊಂಡಿರುವ ಜನರ ಬಳಿಗೆ ಹೋಗಿ ಆಶ್ರಯ ಪಡೆದವರ ಹೊರತು; ಅಥವಾ, ನಿಮ್ಮ ವಿರುದ್ಧ ಯುದ್ಧ ಮಾಡಲು ಅಥವಾ ತಮ್ಮದೇ ಜನರ ವಿರುದ್ಧ ಯುದ್ಧ ಮಾಡಲು ಹೃದಯದಲ್ಲಿ ಇಕ್ಕಟ್ಟು ಅನುಭವಿಸುತ್ತಾ ನಿಮ್ಮ ಬಳಿಗೆ ಬಂದವರ ಹೊರತು. ಅಲ್ಲಾಹು ಇಚ್ಛಿಸುತ್ತಿದ್ದರೆ ಅವನು ಅವರಿಗೆ ನಿಮ್ಮ ಮೇಲೆ ಅಧಿಕಾರ ನೀಡುತ್ತಿದ್ದನು. ಆಗ ಅವರು ನಿಮ್ಮ ವಿರುದ್ಧ ಯುದ್ಧ ಮಾಡುತ್ತಿದ್ದರು. ಆದರೆ ಅವರು ಯುದ್ಧದಿಂದ ದೂರ ಸರಿದು, ನಿಮ್ಮ ವಿರುದ್ಧ ಯುದ್ಧ ಮಾಡದಿದ್ದರೆ ಮತ್ತು ಶಾಂತಿ ಪ್ರಸ್ತಾಪವನ್ನು ಮುಂದಿಟ್ಟರೆ, ಅವರಿಗೆ ವಿರುದ್ಧವಾಗಿ ಯಾವುದೇ ಮಾರ್ಗವನ್ನು ಸ್ವೀಕರಿಸಲು ಅಲ್ಲಾಹು ನಿಮಗೆ ಅನುಮತಿ ನೀಡಿಲ್ಲ.
Nisa' 4:91
ನೀವು ಇನ್ನೊಂದು ರೀತಿಯ ಜನರನ್ನು ಕಾಣುವಿರಿ. ಅವರು ನಿಮ್ಮಿಂದ ಮತ್ತು ತಮ್ಮದೇ ಜನರಿಂದ ಸುರಕ್ಷಿತರಾಗಿರಲು ಬಯಸುತ್ತಾರೆ. ಆದರೆ, ಅವರನ್ನು ಕ್ಷೋಭೆಗೆ (ಯುದ್ಧಕ್ಕೆ) ಮರಳಿಸಿದಾಗಲೆಲ್ಲಾ ಅವರು ಅದರಲ್ಲಿ ತಲೆಕೆಳಗಾಗಿ ಬೀಳುತ್ತಾರೆ.[1] ಅವರು ಯುದ್ಧದಿಂದ ದೂರ ಸರಿಯದಿದ್ದರೆ ಮತ್ತು ಶಾಂತಿ ಪ್ರಸ್ತಾಪವನ್ನು ಮುಂದಿಡದಿದ್ದರೆ, ಹಾಗೂ ತಮ್ಮ ಕೈಗಳನ್ನು ತಡೆಹಿಡಿಯದಿದ್ದರೆ, ಅವರನ್ನು ಹಿಡಿಯಿರಿ ಮತ್ತು ಕಂಡಲ್ಲಿ ಕೊಲ್ಲಿರಿ. ಅವರ ವಿರುದ್ಧ ನಾವು ನಿಮಗೆ ಸ್ಪಷ್ಟ ಅಧಿಕಾರವನ್ನು ನೀಡಿದ್ದೇವೆ.
———
[1] ಇವರು ಮುಸಲ್ಮಾನರೊಡನೆ ಶಾಂತಿ ಒಪ್ಪಂದ ಮಾಡಿಕೊಂಡವರಲ್ಲ; ಮುಸಲ್ಮಾನರೊಡನೆ ಸಹಾನುಭೂತಿಯುಳ್ಳವರೂ ಅಲ್ಲ. ಬದಲಾಗಿ, ಯುದ್ಧದ ಸಮಯದಲ್ಲಿ ತಟಸ್ಥರಾಗಿದ್ದು ಯುದ್ಧದ ಗತಿಯನ್ನು ವೀಕ್ಷಿಸುವವರು. ಇವರಿಗೆ ಮುಸಲ್ಮಾನರ ವಿರುದ್ಧ ಯುದ್ಧ ಮಾಡುವ ಉತ್ತಮ ಅವಕಾಶ ಸಿಕ್ಕಿದರೆ ಅವರು ಯುದ್ಧ ಮಾಡಲು ಹಿಂಜರಿಯುವುದಿಲ್ಲ. ಕೆಲವು ವ್ಯಾಖ್ಯಾನಕಾರರು ಕ್ಷೋಭೆ ಎಂದರೆ ದೇವಸಹಭಾಗಿತ್ವ (ಶಿರ್ಕ್) ಎಂದು ಅರ್ಥ ನೀಡಿದ್ದಾರೆ.
Nisa' 4:92
ಒಬ್ಬ ಸತ್ಯವಿಶ್ವಾಸಿ ಇನ್ನೊಬ್ಬ ಸತ್ಯವಿಶ್ವಾಸಿಯನ್ನು ಕೊಲ್ಲಬಾರದು. ಪ್ರಮಾದವಶಾತ್ ಸಂಭವಿಸುವುದರ ಹೊರತು. ಒಬ್ಬ ಸತ್ಯವಿಶ್ವಾಸಿಯನ್ನು ಯಾರಾದರೂ ಪ್ರಮಾದವಶಾತ್ ಕೊಂದುಬಿಟ್ಟರೆ, ಅದಕ್ಕೆ ಪರಿಹಾರವಾಗಿ ಒಬ್ಬ ಸತ್ಯವಿಶ್ವಾಸಿ ಗುಲಾಮನನ್ನು ಸ್ವತಂತ್ರಗೊಳಿಸಬೇಕು ಮತ್ತು ಕೊಲೆಯಾದವನ ಕುಟುಂಬಕ್ಕೆ ರಕ್ತ ಪರಿಹಾರ ಕೊಡಬೇಕು. ಅವರು (ಕೊಲೆಯಾದವನ ಕುಟುಂಬದವರು) ಅದನ್ನು ಉದಾರವಾಗಿ ಬಿಟ್ಟುಬಿಡುವ ಹೊರತು. ಕೊಲೆಯಾದವನು ಶತ್ರು ಪಕ್ಷಕ್ಕೆ ಸೇರಿದ ಸತ್ಯವಿಶ್ವಾಸಿಯಾಗಿದ್ದರೆ, ಒಬ್ಬ ಸತ್ಯವಿಶ್ವಾಸಿ ಗುಲಾಮನನ್ನು ಸ್ವತಂತ್ರಗೊಳಿಸಿದರೆ ಸಾಕು. ಅವನು ನಿಮ್ಮೊಂದಿಗೆ ಒಪ್ಪಂದದಲ್ಲಿರುವ ಪಕ್ಷಕ್ಕೆ ಸೇರಿದವನಾಗಿದ್ದರೆ ಅವನ ಕುಟುಂಬದವರಿಗೆ ರಕ್ತ ಪರಿಹಾರ ಕೊಡಬೇಕು ಮತ್ತು ಒಬ್ಬ ಸತ್ಯವಿಶ್ವಾಸಿ ಗುಲಾಮನನ್ನು ಸ್ವತಂತ್ರಗೊಳಿಸಬೇಕು. ಯಾರಿಗೆ ಇದು ಸಾಧ್ಯವಿಲ್ಲವೋ ಅವನು ಸತತ ಎರಡು ತಿಂಗಳು ಉಪವಾಸ ಆಚರಿಸಬೇಕು. ಇದು ಅಲ್ಲಾಹು ನಿಶ್ಚಯಿಸಿದ ಪಶ್ಚಾತ್ತಾಪವಾಗಿದೆ. ಅಲ್ಲಾಹು ಎಲ್ಲವನ್ನು ತಿಳಿದವನು ಮತ್ತು ವಿವೇಕಪೂರ್ಣನಾಗಿದ್ದಾನೆ.
Nisa' 4:93
ಯಾರು ಒಬ್ಬ ಸತ್ಯವಿಶ್ವಾಸಿಯನ್ನು ಉದ್ದೇಶಪೂರ್ವಕ ಕೊಲ್ಲುತ್ತಾನೋ, ಅವನಿಗೆ ನರಕಾಗ್ನಿಯೇ ಪ್ರತಿಫಲವಾಗಿದೆ. ಅವನು ಅದರಲ್ಲಿ ಶಾಶ್ವತವಾಗಿ ವಾಸಿಸುವನು. ಅವನು ಅಲ್ಲಾಹನ ಕೋಪ ಮತ್ತು ಶಾಪಕ್ಕೆ ಪಾತ್ರನಾಗುವನು. ಅಲ್ಲಾಹು ಅವನಿಗೆ ಅತಿಕಠೋರ ಶಿಕ್ಷೆಯನ್ನು ಸಿದ್ಧಗೊಳಿಸಿದ್ದಾನೆ.
Nisa' 4:94
ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುವಾಗ (ಶತ್ರು ಮತ್ತು ಮಿತ್ರ ಯಾರೆಂದು) ಸ್ಪಷ್ಟವಾಗಿ ಗುರುತಿಸಿರಿ. ನಿಮಗೆ ಸಲಾಮ್ ಹೇಳಿದವನೊಂದಿಗೆ ನೀನು ಸತ್ಯವಿಶ್ವಾಸಿಯಲ್ಲ ಎಂದು ಹೇಳಬೇಡಿ. ನೀವು ಭೌತಿಕ ಲಾಭದ ಹುಡುಕಾಟದಲ್ಲಿದ್ದರೆ, ಅಲ್ಲಾಹನ ಬಳಿ ಯಥೇಷ್ಟ ಐಶ್ವರ್ಯವಿದೆ. ಈ ಹಿಂದೆ ನೀವೂ ಹೀಗೆಯೇ (ಸತ್ಯನಿಷೇಧದಲ್ಲಿ) ಇದ್ದಿರಿ.[1] ನಂತರ ಅಲ್ಲಾಹು ನಿಮಗೆ (ಸನ್ಮಾರ್ಗ ತೋರಿಸಿ) ಉಪಕಾರ ಮಾಡಿದನು. ಆದ್ದರಿಂದ ನೀವು ಸ್ಪಷ್ಟವಾಗಿ ಗುರುತಿಸಿರಿ. ನಿಶ್ಚಯವಾಗಿಯೂ ನೀವು ಮಾಡುವುದನ್ನು ಅಲ್ಲಾಹು ಸೂಕ್ಷ್ಮವಾಗಿ ತಿಳಿಯುತ್ತಿದ್ದಾನೆ.
———
[1] ಯುದ್ಧದಲ್ಲಿ ಒಬ್ಬ ಶತ್ರು ಸೈನಿಕನನ್ನು ಕೊಂದರೆ, ಅವನ ಶಸ್ತ್ರ, ಯುದ್ಧಾಂಗಿ ಮುಂತಾದ ವಸ್ತುಗಳು ಕೊಂದವನಿಗೆ ಸಿಗುತ್ತದೆ. ಈ ಭೌತಿಕ ಲಾಭದ ಮೇಲೆ ಕಣ್ಣಿಟ್ಟು ಯಾರನ್ನೂ ಅನ್ಯಾಯವಾಗಿ ಕೊಲ್ಲಬೇಡಿ. ಹಿಂದಿನ ನಿಮಿಷದ ತನಕ ಶತ್ರುವಾಗಿದ್ದವನು, ನಿಮಗೆ ಸಲಾಂ ಹೇಳಿ ಮುಸಲ್ಮಾನನಾಗಲು ಮುಂದಾದರೆ, ಅವನು ತನ್ನ ಜೀವ ಉಳಿಸುವುದಕ್ಕಾಗಿ ಸಲಾಂ ಹೇಳುತ್ತಿದ್ದಾನೆಂದು ಭಾವಿಸಿ ಅವನನ್ನು ಕೊಲ್ಲಬೇಡಿ. ಹಿಂದೆ ನೀವು ಕೂಡ ಅವನಂತೆಯೇ ಸತ್ಯನಿಷೇಧಿಗಳಾಗಿದ್ದಿರಿ.
Nisa' 4:95
ಯಾವುದೇ ಕಾರಣವಿಲ್ಲದೆ ಕುಳಿತಿರುವ ಸತ್ಯವಿಶ್ವಾಸಿಗಳು ಮತ್ತು ಅಲ್ಲಾಹನ ಮಾರ್ಗದಲ್ಲಿ ತನು-ಧನಗಳಿಂದ ಯುದ್ಧ ಮಾಡುವ ಸತ್ಯವಿಶ್ವಾಸಿಗಳು ಸಮಾನರಲ್ಲ. ತನು-ಧನಗಳಿಂದ ಯುದ್ಧ ಮಾಡುವವರಿಗೆ ಅಲ್ಲಾಹು ಕುಳಿತವರಿಗಿಂತ ಹೆಚ್ಚು ಪದವಿಗಳನ್ನು ನೀಡಿ ಅನುಗ್ರಹಿಸುತ್ತಾನೆ. ಅಲ್ಲಾಹು (ಅವರಿಬ್ಬರಲ್ಲಿ) ಪ್ರತಿಯೊಬ್ಬರಿಗೂ ಉತ್ತಮ ಪ್ರತಿಫಲದ ವಾಗ್ದಾನ ಮಾಡಿದ್ದಾನೆ. ಆದರೆ ಯುದ್ಧ ಮಾಡುವವರಿಗೆ ಅಲ್ಲಾಹು ಕುಳಿತವರಿಗೆ ನೀಡುವುದಕ್ಕಿಂತಲೂ ದೊಡ್ಡ ಪ್ರತಿಫಲವನ್ನು ನೀಡಿ ಅನುಗ್ರಹಿಸುತ್ತಾನೆ.
Nisa' 4:96
ಅವನ ಕಡೆಯ ಪದವಿಗಳು, ಕ್ಷಮೆ ಮತ್ತು ದಯೆ. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
Nisa' 4:97
ಸ್ವಯಂ ಅಕ್ರಮವೆಸಗಿದವರ ಆತ್ಮಗಳನ್ನು ವಶಪಡಿಸುವಾಗ ದೇವದೂತರುಗಳು ಕೇಳುವರು: “ನೀವು ಯಾವ ಸ್ಥಿತಿಯಲ್ಲಿದ್ದಿರಿ?” ಅವರು ಹೇಳುವರು: “ನಾವು ಊರಿನಲ್ಲಿ ದಬ್ಬಾಳಿಕೆಗೆ ಗುರಿಯಾಗಿ ಬದುಕುತ್ತಿದ್ದೆವು.” ದೇವದೂತರುಗಳು ಕೇಳುವರು: “ಅಲ್ಲಾಹನ ಭೂಮಿ ವಿಶಾಲವಾಗಿತ್ತಲ್ಲವೇ? ನಿಮಗೆ ನಿಮ್ಮ ಊರನ್ನು ತ್ಯಜಿಸಿ ವಲಸೆ ಹೋಗಬಹುದಿತ್ತಲ್ಲವೇ?” ಅಂತಹವರಿಗೆ ನರಕಾಗ್ನಿಯೇ ವಾಸಸ್ಥಳವಾಗಿದೆ. ಅದು ಬಹಳ ಕೆಟ್ಟ ಗಮ್ಯಸ್ಥಾನ!
Nisa' 4:98
ಬೇರೆ ಯಾವ ಉಪಾಯವೂ ಇಲ್ಲದೆ (ದಬ್ಬಾಳಿಕೆಯಿಂದ) ಪಾರಾಗುವ ಮಾರ್ಗವನ್ನೂ ತಿಳಿಯದೆ, ದಬ್ಬಾಳಿಕೆಗೆ ಗುರಿಯಾಗಿ ಬದುಕುತ್ತಿರುವ ಪುರುಷರು, ಮಹಿಳೆಯರು ಮತ್ತು ಮಕ್ಕಳು ಇದರಿಂದ ಹೊರತಾಗಿದ್ದಾರೆ.
Nisa' 4:99
ಅವರನ್ನು ಅಲ್ಲಾಹು ಮನ್ನಿಸಲೂ ಬಹುದು. ಅಲ್ಲಾಹು ಮನ್ನಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
Nisa' 4:100
ಅಲ್ಲಾಹನ ಮಾರ್ಗದಲ್ಲಿ ವಲಸೆ (ಹಿಜ್ರ) ಮಾಡುವವನು ಭೂಮಿಯಲ್ಲಿ ಅನೇಕ ಆಶ್ರಯಗಳನ್ನು ಮತ್ತು ಜೀವನ ವೈಶಾಲ್ಯತೆಗಳನ್ನು ಕಾಣುವನು. ಯಾರು ಅಲ್ಲಾಹು ಮತ್ತು ಅವನ ಸಂದೇಶವಾಹಕರ ಬಳಿಗೆ ವಲಸೆ (ಹಿಜ್ರ) ಮಾಡಲು ಮನೆಯಿಂದ ಹೊರಡುತ್ತಾನೋ—ನಂತರ (ದಾರಿ ಮಧ್ಯೆ) ಸಾವು ಅವನನ್ನು ಅಪ್ಪಿಕೊಂಡರೂ ಸಹ—ಅವನ ಪ್ರತಿಫಲವು ಅಲ್ಲಾಹನ ಬಳಿ ಖಾತ್ರಿಯಾಗಿ ಬಿಟ್ಟಿತು. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
Nisa' 4:101
ನೀವು ಭೂಮಿಯಲ್ಲಿ ಪ್ರಯಾಣ ಮಾಡುವಾಗ ಸತ್ಯನಿಷೇಧಿಗಳು ನಿಮಗೆ ತೊಂದರೆ ಕೊಡುವರೆಂಬ ಭಯವಿದ್ದರೆ, ನಮಾಝನ್ನು ಕುಗ್ಗಿಸಿ (ಎರಡು ರಕಅತ್‌ಗಳಾಗಿ) ನಿರ್ವಹಿಸುವುದರಲ್ಲಿ ನಿಮಗೆ ದೋಷವಿಲ್ಲ.[1] ನಿಶ್ಚಯವಾಗಿಯೂ ಸತ್ಯನಿಷೇಧಿಗಳು ನಿಮ್ಮ ಪ್ರತ್ಯಕ್ಷ ಶತ್ರುಗಳಾಗಿದ್ದಾರೆ.
———
[1] ಪ್ರಯಾಣದ ಸಂದರ್ಭದಲ್ಲಿ ನಮಾಝನ್ನು ಕುಗ್ಗಿಸಿ ನಿರ್ವಹಿಸಲು ಅನುಮತಿಯಿದೆ. ಕುಗ್ಗಿಸುವುದು ಎಂದರೆ ಝುಹರ್, ಅಸರ್ ಮತ್ತು ಇಶಾ ನಮಾಝ್‌ಗಳನ್ನು ಎರಡು ರಕಅತ್‌ಗಳಾಗಿ ನಿರ್ವಹಿಸುವುದು. ಮಗ್ರಿಬ್ ನಮಾಝನ್ನು ಕುಗ್ಗಿಸಬಾರದು.
Nisa' 4:102
(ಓ ಪ್ರವಾದಿಯವರೇ!) ನೀವು ಅವರ ಜೊತೆಯಲ್ಲಿರುವಾಗ ಮತ್ತು ಅವರಿಗೆ ಇಮಾಂ ನಿಂತು ನಮಾಝ್ ನಿರ್ವಹಿಸುತ್ತಿರುವಾಗ, ಅವರಲ್ಲೊಂದು ಗುಂಪು ತಮ್ಮ ಜೊತೆಗೆ ನಮಾಝ್ ಮಾಡಲಿ. ಅವರು ತಮ್ಮ ಶಸ್ತ್ರಗಳನ್ನು ಹಿಡಿದುಕೊಂಡಿರಲಿ. ಅವರು ಸುಜೂದ್ ಮಾಡಿದ ನಂತರ ತಮ್ಮ ಹಿಂಭಾಗಕ್ಕೆ ಸರಿದು, ನಮಾಝ್ ನಿರ್ವಹಿಸದ ಇನ್ನೊಂದು ಗುಂಪು ಬಂದು ನಿಮ್ಮೊಂದಿಗೆ ನಮಾಝ್ ನಿರ್ವಹಿಸಲಿ. ಅವರು ಎಚ್ಚರವಾಗಿರಲಿ ಮತ್ತು ತಮ್ಮ ಶಸ್ತ್ರಗಳನ್ನು ಹಿಡಿದುಕೊಂಡಿರಲಿ. ನೀವು ನಿಮ್ಮ ಶಸ್ತ್ರಗಳನ್ನು ಮತ್ತು ನಿಮ್ಮ ಸಾಮಗ್ರಿಗಳನ್ನು ನಿರ್ಲಕ್ಷಿಸಿದರೆ, ನಿಮ್ಮ ಮೇಲೆ ಒಮ್ಮೆಲೇ ದಾಳಿ ಮಾಡಬಹುದೆಂದು ಸತ್ಯನಿಷೇಧಿಗಳು ಬಯಸುತ್ತಾರೆ. ಆದರೆ ನೀವು ಮಳೆಯಿಂದ ತೊಂದರೆ ಅನುಭವಿಸುತ್ತಿದ್ದರೆ, ಅಥವಾ ನೀವು ಅನಾರೋಗ್ಯದಲ್ಲಿದ್ದರೆ, ನಿಮ್ಮ ಶಸ್ತ್ರಗಳನ್ನು ಕೆಳಗಿಡುವುದರಲ್ಲಿ ದೋಷವಿಲ್ಲ. ಆದರೆ ಪೂರ್ಣ ಎಚ್ಚರಿಕೆಯಿಂದಿರಿ. ನಿಶ್ಚಯವಾಗಿಯೂ ಅಲ್ಲಾಹು ಸತ್ಯನಿಷೇಧಿಗಳಿಗೆ ಅವಮಾನಕರ ಶಿಕ್ಷೆಯನ್ನು ಸಿದ್ಧಗೊಳಿಸಿದ್ದಾನೆ.[1]
———
[1] ಇದು ಯುದ್ಧ ಮಾಡುವ ಸಂದರ್ಭದಲ್ಲಿ ನಮಾಝ್ ಹೇಗೆ ನಿರ್ವಹಿಸಬೇಕು ಎಂಬುದರ ವಿವರಣೆಯಾಗಿದೆ. ಇದನ್ನು ಸಲಾತುಲ್ ಖೌಫ್ (ಭಯದ ನಮಾಝ್) ಎಂದು ಕರೆಯಲಾಗುತ್ತದೆ.
Nisa' 4:103
ನೀವು ನಮಾಝ್ ನಿರ್ವಹಿಸಿದ ಬಳಿಕ ನಿಂತು, ಕುಳಿತು ಮತ್ತು ಪಾರ್ಶ್ವಕ್ಕೆ ಸರಿದು (ಮಲಗಿ) ಅಲ್ಲಾಹನನ್ನು ಸ್ಮರಿಸಿರಿ. ನೀವು ನಿರ್ಭಯರಾಗಿರುವಾಗ, ನಮಾಝನ್ನು ಯಥಾಪ್ರಕಾರ ಸಂಸ್ಥಾಪಿಸಿರಿ. ನಿಶ್ಚಯವಾಗಿಯೂ ನಮಾಝ್ ಸತ್ಯವಿಶ್ವಾಸಿಗಳ ಮೇಲೆ ಸಮಯ ನಿರ್ಣಿತ ಕಡ್ಡಾಯ ಕರ್ಮವಾಗಿದೆ.
Nisa' 4:104
ಶತ್ರುಗಳನ್ನು ಬೆನ್ನಟ್ಟುವುದರಲ್ಲಿ ಬಲಹೀನರಾಗಬೇಡಿ. ನೀವು ನೋವು ಅನುಭವಿಸುತ್ತಿದ್ದರೆ, ಅವರು ಕೂಡ ನಿಮ್ಮಂತೆಯೇ ನೋವು ಅನುಭವಿಸುತ್ತಿದ್ದಾರೆ. ಆದರೆ ನೀವು ಅಲ್ಲಾಹನಿಂದ ಅವರು ನಿರೀಕ್ಷಿಸದೇ ಇರುವುದನ್ನು ನಿರೀಕ್ಷಿಸುತ್ತೀರಿ. ಅಲ್ಲಾಹು ಎಲ್ಲವನ್ನು ತಿಳಿದವನು ಮತ್ತು ವಿವೇಕಪೂರ್ಣನಾಗಿದ್ದಾನೆ.
Nisa' 4:105
ಅಲ್ಲಾಹು ನಿಮಗೆ ತೋರಿಸಿಕೊಟ್ಟಂತೆ ನೀವು ಜನರ ನಡುವೆ ತೀರ್ಪು ನೀಡಲು ನಾವು ನಿಮಗೆ ಈ ಗ್ರಂಥವನ್ನು ಸತ್ಯಸಹಿತ ಅವತೀರ್ಣಗೊಳಿಸಿದ್ದೇವೆ. ನೀವು ವಂಚಕರಿಗಾಗಿ ತರ್ಕಿಸುವವರಾಗಬೇಡಿ.
Nisa' 4:106
ಅಲ್ಲಾಹನಲ್ಲಿ ಕ್ಷಮೆಯಾಚಿಸಿರಿ. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
Nisa' 4:107
ಆತ್ಮವಂಚನೆ ಮಾಡುವವರಿಗಾಗಿ ತರ್ಕಿಸಬೇಡಿ. ನಿಶ್ಚಯವಾಗಿಯೂ ಪಾಪಿಯಾದ ನಯವಂಚಕನನ್ನು ಅಲ್ಲಾಹು ಇಷ್ಟಪಡುವುದಿಲ್ಲ.
Nisa' 4:108
ಅವರು ಜನರಿಂದ (ತಮ್ಮ ನಿಜಬಣ್ಣವನ್ನು) ಅಡಗಿಸುತ್ತಾರೆ. ಆದರೆ ಅಲ್ಲಾಹನಿಂದ ಅಡಗಿಸಲು ಅವರಿಗೆ ಸಾಧ್ಯವಿಲ್ಲ. ಅಲ್ಲಾಹು ಇಷ್ಟಪಡದ ಮಾತುಗಳನ್ನು ಹೇಳುತ್ತಾ, ಅವರು ರಾತ್ರಿಯಲ್ಲಿ ಗೂಢ ಮಾತುಕತೆ ನಡೆಸುವಾಗ ಅವನು ಅವರ ಜೊತೆಯಲ್ಲೇ ಇದ್ದಾನೆ. ಅಲ್ಲಾಹು (ತನ್ನ ಜ್ಞಾನದಿಂದ) ಅವರು ಮಾಡುವುದನ್ನು ಪೂರ್ಣವಾಗಿ ಆವರಿಸಿಕೊಂಡಿದ್ದಾನೆ.
Nisa' 4:109
ಹೌದು, ನೀವು ಇಹಲೋಕ ಜೀವನದಲ್ಲಿ ಅವರಿಗಾಗಿ ತರ್ಕಿಸಿದ್ದೀರಿ. ಆದರೆ ಪುನರುತ್ಥಾನ ದಿನದಂದು ಅವರ ವಿಷಯದಲ್ಲಿ ಅಲ್ಲಾಹನೊಂದಿಗೆ ತರ್ಕಿಸಲು ಯಾರು ಮುಂದೆ ಬರುತ್ತೀರಿ? ಅಥವಾ ಅವರ ವಿಷಯವನ್ನು ಯಾರು ವಹಿಸಿಕೊಳ್ಳುತ್ತೀರಿ?
Nisa' 4:110
ಪಾಪವನ್ನು ಮಾಡಿದ ನಂತರ, ಅಥವಾ ಸ್ವಯಂ ಅನ್ಯಾಯವೆಸಗಿದ ನಂತರ ಅಲ್ಲಾಹನಲ್ಲಿ ಕ್ಷಮೆಯಾಚಿಸುವವನು ಯಾರೋ—ಅವನು ಅಲ್ಲಾಹನನ್ನು ಕ್ಷಮಿಸುವವನಾಗಿ ಮತ್ತು ದಯೆ ತೋರುವವನಾಗಿ ಕಾಣುವನು.
Nisa' 4:111
ಪಾಪ ಮಾಡುವವನು ಸ್ವಯಂ ತನಗೆ ವಿರುದ್ಧವಾಗಿಯೇ ಅದನ್ನು ಮಾಡುತ್ತಾನೆ. ಅಲ್ಲಾಹು ಎಲ್ಲವನ್ನು ತಿಳಿದವನು ಮತ್ತು ವಿವೇಕಪೂರ್ಣನಾಗಿದ್ದಾನೆ.
Nisa' 4:112
ಯಾರು ಒಂದು ತಪ್ಪು ಅಥವಾ ಪಾಪವನ್ನು ಮಾಡಿ, ನಂತರ ಅದನ್ನು ಒಬ್ಬ ಅಮಾಯಕನ ಮೇಲೆ ಹೊರಿಸುತ್ತಾನೋ, ನಿಶ್ಚಯವಾಗಿಯೂ ಅವನು ಸುಳ್ಳಾರೋಪವನ್ನು ಮತ್ತು ಪ್ರತ್ಯಕ್ಷ ಪಾಪವನ್ನು ವಹಿಸಿಕೊಂಡನು.
Nisa' 4:113
(ಪ್ರವಾದಿಯವರೇ) ನಿಮ್ಮ ಮೇಲೆ ಅಲ್ಲಾಹನ ಔದಾರ್ಯ ಮತ್ತು ದಯೆಯಿಲ್ಲದಿರುತ್ತಿದ್ದರೆ ಅವರಲ್ಲೊಂದು ಗುಂಪು ನಿಮ್ಮನ್ನು ದಾರಿತಪ್ಪಿಸಲು ಮುಂದಾಗುತ್ತಿದ್ದರು. ಆದರೆ ಅವರು ಸ್ವಯಂ ಅವರನ್ನೇ ದಾರಿತಪ್ಪಿಸುತ್ತಿದ್ದಾರೆ. ಅವರು ನಿಮಗೆ ಯಾವುದೇ ತೊಂದರೆ ಮಾಡಲಾರರು. ಅಲ್ಲಾಹು ನಿಮಗೆ ಗ್ರಂಥವನ್ನು ಮತ್ತು ವಿವೇಕವನ್ನು ಅವತೀರ್ಣಗೊಳಿಸಿದ್ದಾನೆ ಮತ್ತು ನೀವು ತಿಳಿಯದ ವಿಷಯಗಳನ್ನು ನಿಮಗೆ ಕಲಿಸಿದ್ದಾನೆ. ಅಲ್ಲಾಹು ನಿಮ್ಮ ಮೇಲೆ ತೋರಿದ ಔದಾರ್ಯವು ಬಹಳ ದೊಡ್ಡದಾಗಿದೆ.
Nisa' 4:114
ಅವರು ಮಾಡುವ ಗೂಢ ಮಾತುಕತೆಗಳಲ್ಲಿ ಯಾವುದೇ ಒಳಿತಿಲ್ಲ. ದಾನ-ಧರ್ಮ ಮಾಡಲು, ಒಳಿತು ಮಾಡಲು ಮತ್ತು ಜನರ ನಡುವೆ ಸಾಮರಸ್ಯ ಮೂಡಿಸಲು ಆದೇಶಿಸುವವರ ಹೊರತು. ಯಾರು ಅಲ್ಲಾಹನ ಸಂಪ್ರೀತಿಯನ್ನು ಬಯಸಿ ಅದನ್ನು ಮಾಡುತ್ತಾನೋ ಅವನಿಗೆ ನಾವು ಸದ್ಯವೇ ಮಹಾ ಪ್ರತಿಫಲವನ್ನು ದಯಪಾಲಿಸುವೆವು.
Nisa' 4:115
ಸನ್ಮಾರ್ಗವು ಸ್ಪಷ್ಟವಾದ ಬಳಿಕ ಯಾರು ಸಂದೇಶವಾಹಕರಿಗೆ ವಿರುದ್ಧವಾಗಿ ಚಲಿಸುತ್ತಾನೋ ಮತ್ತು ಸತ್ಯವಿಶ್ವಾಸಿಗಳದ್ದಲ್ಲದ[1] ಮಾರ್ಗವನ್ನು ಅನುಸರಿಸುತ್ತಾನೋ ಅವನು ತಿರುಗಿದ ಮಾರ್ಗಕ್ಕೆ ನಾವು ಅವನನ್ನು ತಿರುಗಿಸುವೆವು ಮತ್ತು ನರಕಾಗ್ನಿಗೆ ಹಾಕಿ ಉರಿಸುವೆವು. ಆ ಗಮ್ಯಸ್ಥಾನವು ಬಹಳ ನಿಕೃಷ್ಟವಾಗಿದೆ!
———
[1] ಇಲ್ಲಿ ಸತ್ಯವಿಶ್ವಾಸಿಗಳು ಎಂದರೆ ಸಹಾಬಿಗಳು [ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂಗಡಿಗರು].
Nisa' 4:116
ತನ್ನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡಲಾಗುವುದನ್ನು ಅಲ್ಲಾಹು ಎಂದಿಗೂ ಕ್ಷಮಿಸುವುದಿಲ್ಲ. ಅದರ ಹೊರತಾದ ಪಾಪಗಳನ್ನು ಅವನು ಇಚ್ಛಿಸುವವರಿಗೆ ಅವನು ಕ್ಷಮಿಸುತ್ತಾನೆ. ಯಾರು ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುತ್ತಾನೋ ಅವನು ವಿದೂರ ದುರ್ಮಾರ್ಗದಲ್ಲಿ ಬಿದ್ದಿದ್ದಾನೆ.
Nisa' 4:117
ಅವರು ಅಲ್ಲಾಹನನ್ನು ಬಿಟ್ಟು ಕೆಲವು ದೇವತೆಗಳನ್ನು ಮಾತ್ರ ಕರೆದು ಪ್ರಾರ್ಥಿಸುತ್ತಾರೆ. (ವಾಸ್ತವದಲ್ಲಿ) ಅವರು ಕಡು ಧಿಕ್ಕಾರಿಯಾದ ಶೈತಾನನನ್ನೇ ಕರೆದು ಪ್ರಾರ್ಥಿಸುತ್ತಾರೆ.
Nisa' 4:118
ಅಲ್ಲಾಹು ಅವನನ್ನು (ಶೈತಾನನನ್ನು) ಶಪಿಸಿದ್ದಾನೆ. ಅವನು ಹೇಳಿದನು: “ನಿನ್ನ ದಾಸರಲ್ಲಿ ಒಂದು ನಿಶ್ಚಿತ ಪಾಲನ್ನು ನಾನು ವಶಪಡಿಸಿಯೇ ತೀರುವೆನು.
Nisa' 4:119
ನಾನು ಅವರನ್ನು ಖಂಡಿತ ದಾರಿತಪ್ಪಿಸುವೆನು ಮತ್ತು ಅವರಲ್ಲಿ ಆಸೆಗಳನ್ನು ಹುಟ್ಟಿಸುವೆನು. ನಾನು ಅವರಿಗೆ ಆದೇಶಿಸಿದಾಗ, ಅವರು ಜಾನುವಾರುಗಳ ಕಿವಿಗಳನ್ನು ಹರಿಯುವರು. ನಾನು ಅವರಿಗೆ ಆದೇಶಿಸಿದಾಗ, ಅವರು ಅಲ್ಲಾಹನ ಸಹಜ ಪ್ರಕೃತಿಯನ್ನು ಬದಲಾಯಿಸುವರು.” ಯಾರು ಅಲ್ಲಾಹನನ್ನು ಬಿಟ್ಟು ಶೈತಾನನನ್ನು ರಕ್ಷಕನನ್ನಾಗಿ ಸ್ವೀಕರಿಸುತ್ತಾನೋ—ಅವನು ಅತ್ಯಂತ ಸ್ಪಷ್ಟವಾದ ನಷ್ಟಕ್ಕೊಳಗಾದನು.
Nisa' 4:120
ಅವನು (ಶೈತಾನನು) ಅವರಿಗೆ ಆಶ್ವಾಸನೆಗಳನ್ನು ನೀಡುತ್ತಾನೆ ಮತ್ತು ಅವರಲ್ಲಿ ಆಸೆಗಳನ್ನು ಹುಟ್ಟಿಸುತ್ತಾನೆ. ಆದರೆ ಶೈತಾನನು ಅವರಿಗೆ ನೀಡುವ ಆಶ್ವಾಸನೆಗಳು ವಂಚನೆಯಲ್ಲದೆ ಇನ್ನೇನಲ್ಲ.
Nisa' 4:121
ಅವರ ವಾಸಸ್ಥಳವು ನರಕಾಗ್ನಿಯಾಗಿದೆ. ಅದರಿಂದ ತಪ್ಪಿಸಿಕೊಳ್ಳಲು ಅವರು ಯಾವುದೇ ದಾರಿಯನ್ನೂ ಕಾಣಲಾರರು.
Nisa' 4:122
ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ—ಅವರನ್ನು ನಾವು ಸದ್ಯವೇ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿಗೆ ಪ್ರವೇಶ ಮಾಡಿಸುವೆವು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅಲ್ಲಾಹನ ಆಶ್ವಾಸನೆಯು ಸತ್ಯವಾಗಿದೆ. ಮಾತಿನಲ್ಲಿ ಅಲ್ಲಾಹನಿಗಿಂತಲೂ ಹೆಚ್ಚು ಸತ್ಯವಂತನು ಯಾರು?
Nisa' 4:123
ವಸ್ತುಸ್ಥಿತಿ ನಿಮ್ಮ ಇಷ್ಟದಂತಿಲ್ಲ. ಗ್ರಂಥದವರ ಇಷ್ಟದಂತೆಯೂ ಇಲ್ಲ. ಪಾಪ ಮಾಡಿದವನಿಗೆ ಅದರ ಪ್ರತಿಫಲವನ್ನು ನೀಡಲಾಗುತ್ತದೆ. ಅಲ್ಲಾಹನ ಹೊರತು ಬೇರೆ ಯಾವುದೇ ರಕ್ಷಕನನ್ನು ಅಥವಾ ಸಹಾಯಕನನ್ನು ಅವನು ಕಾಣಲಾರ.
Nisa' 4:124
ಸತ್ಯವಿಶ್ವಾಸಿಯಾಗಿದ್ದು ಸತ್ಕರ್ಮವೆಸಗುವವರು ಯಾರೋ—ಅವರು ಗಂಡಾಗಿರಲಿ ಅಥವಾ ಹೆಣ್ಣಾಗಿರಲಿ—ಅವರು ಸ್ವರ್ಗವನ್ನು ಪ್ರವೇಶಿಸುವರು. ಅವರಿಗೆ ಖರ್ಜೂರ ಬೀಜದ ಪೊರೆಯ ಗಾತ್ರದಷ್ಟು ಸಹ ಅನ್ಯಾಯವಾಗುವುದಿಲ್ಲ.
Nisa' 4:125
ಒಳಿತು ಮಾಡುತ್ತಾ ತನ್ನ ಮುಖವನ್ನು ಅಲ್ಲಾಹನಿಗೆ ಶರಣಾಗಿಸುವವನು ಮತ್ತು ಏಕನಿಷ್ಠರಾದ ಇಬ್ರಾಹೀಮರ ಮಾರ್ಗವನ್ನು ಹಿಂಬಾಲಿಸುವವನಿಗಿಂತ ಧರ್ಮದ ವಿಷಯದಲ್ಲಿ ಉತ್ತಮನಾಗಿರುವವನು ಯಾರು? ಅಲ್ಲಾಹು ಇಬ್ರಾಹೀಮರನ್ನು ಆಪ್ತಮಿತ್ರನಾಗಿ ಸ್ವೀಕರಿಸಿದ್ದಾನೆ.[1]
———
[1] ಇಸ್ಲಾಂ ಎಂದರೆ ಒಬ್ಬ ವ್ಯಕ್ತಿ ತನ್ನನ್ನು ತಾನೇ ಅಲ್ಲಾಹನ ಇಚ್ಛೆಗೆ ಶರಣಾಗಿಸುವುದು. ಅಂದರೆ ಅಲ್ಲಾಹನ ಆಜ್ಞೆಗಳನ್ನು ಅನುಸರಿಸುತ್ತಾ ಅವನು ವಿರೋಧಿಸಿದ ವಿಷಯಗಳಿಂದ ದೂರವಿದ್ದು ಅವನನ್ನು ಭಯಪಡುತ್ತಾ ಜೀವಿಸುವುದು. ಅಲ್ಲಾಹನ ಆಜ್ಞೆಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಅಕ್ಷರಶಃ ಪಾಲಿಸಿದ್ದರಿಂದ ಅಲ್ಲಾಹು ಇಬ್ರಾಹೀಮರನ್ನು (ಅವರ ಮೇಲೆ ಶಾಂತಿಯಿರಲಿ) ಆಪ್ತಮಿತ್ರನಾಗಿ ಸ್ವೀಕರಿಸಿದನು. ಅಲ್ಲಾಹು ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರನ್ನು ಕೂಡ ಆಪ್ತಮಿತ್ರನಾಗಿ ಸ್ವೀಕರಿಸಿದ್ದಾನೆಂದು ಹದೀಸ್‌ಗಳಲ್ಲಿ ಉಲ್ಲೇಖವಿದೆ.
Nisa' 4:126
ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನಿಗೆ ಸೇರಿದ್ದು. ಅಲ್ಲಾಹು ಎಲ್ಲಾ ವಿಷಯಗಳನ್ನೂ ಆವರಿಸಿಕೊಂಡಿದ್ದಾನೆ.
Nisa' 4:127
ಅವರು ತಮ್ಮೊಡನೆ ಮಹಿಳೆಯರ ವಿಷಯದಲ್ಲಿ ಧರ್ಮವಿಧಿಯನ್ನು ಕೇಳುತ್ತಾರೆ. ಹೇಳಿರಿ: “ಅಲ್ಲಾಹು ನಿಮಗೆ ಅವರ (ಮಹಿಳೆಯರ) ವಿಷಯದಲ್ಲಿ—ಅವರಿಗೆ ನಿಶ್ಚಯಿಸಲಾದ ಹಕ್ಕನ್ನು ನೀಡದೆ ನೀವು ವಿವಾಹವಾಗಲು ಬಯಸುವ ಅನಾಥ ಹೆಣ್ಣುಮಕ್ಕಳ ವಿಷಯದಲ್ಲಿ, ದುರ್ಬಲ ಮಕ್ಕಳ ವಿಷಯದಲ್ಲಿ ಮತ್ತು ಅನಾಥರೊಡನೆ ನ್ಯಾಯನಿಷ್ಠೆಯಿಂದ ವರ್ತಿಸಬೇಕೆಂಬ ವಿಷಯದಲ್ಲಿ ಧರ್ಮವಿಧಿ ನೀಡುತ್ತಾನೆ.” ನೀವು ಏನೇ ಒಳಿತು ಮಾಡಿದರೂ ನಿಶ್ಚಯವಾಗಿಯೂ ಅಲ್ಲಾಹು ಅದನ್ನು ತಿಳಿಯುತ್ತಾನೆ.
Nisa' 4:128
ಒಬ್ಬ ಮಹಿಳೆ ತನ್ನ ಗಂಡನಿಂದ ಕೆಟ್ಟ ವರ್ತನೆ ಅಥವಾ ಅವಗಣನೆಯನ್ನು ಭಯಪಟ್ಟರೆ, ಅವರಿಬ್ಬರು ಸೇರಿ ಅದನ್ನು ಇತ್ಯರ್ಥ ಮಾಡಿಕೊಳ್ಳುವುದರಲ್ಲಿ ಅವರಿಬ್ಬರಿಗೂ ದೋಷವಿಲ್ಲ. ಇತ್ಯರ್ಥ ಮಾಡುವುದು ಉತ್ತಮವಾಗಿದೆ. ಮನಸ್ಸುಗಳಲ್ಲಿ ಜಿಪುಣತನವು ಇದ್ದೇ ಇದೆ. ನೀವು ಒಳಿತು ಮಾಡುವವರು ಮತ್ತು ದೇವಭಯವುಳ್ಳವರಾಗಿದ್ದರೆ, ನಿಶ್ಚಯವಾಗಿಯೂ ನೀವು ಮಾಡುವುದನ್ನು ಅಲ್ಲಾಹು ಸೂಕ್ಷ್ಮವಾಗಿ ತಿಳಿಯುತ್ತಿದ್ದಾನೆ.
Nisa' 4:129
ನೀವು ಎಷ್ಟೇ ಆಸಕ್ತಿ ವಹಿಸಿದರೂ ಪತ್ನಿಯರ ನಡುವೆ ನ್ಯಾಯನಿಷ್ಠೆಯಿಂದ ವರ್ತಿಸಲು ನಿಮಗೆ ಖಂಡಿತ ಸಾಧ್ಯವಿಲ್ಲ. ಆದ್ದರಿಂದ ನೀವು ಒಬ್ಬಳ ಕಡೆಗೆ ಸಂಪೂರ್ಣ ಆಕರ್ಷಿತರಾಗಿ ಇನ್ನೊಬ್ಬಳನ್ನು ತೂಗು ಹಾಕಲಾದವಳಂತೆ ಬಿಟ್ಟುಬಿಡಬೇಡಿ. ನೀವು (ನಿಮ್ಮ ವರ್ತನೆಯನ್ನು) ಸುಧಾರಿಸಿದರೆ ಮತ್ತು ಅಲ್ಲಾಹನನ್ನು ಭಯಪಟ್ಟರೆ, ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
Nisa' 4:130
ಆದರೆ ಅವರಿಬ್ಬರು ಬೇರ್ಪಡುವುದಾದರೆ, ಅಲ್ಲಾಹು ತನ್ನ ವಿಶಾಲ ಸಾಮರ್ಥ್ಯದಿಂದ ಅವರಿಬ್ಬರಲ್ಲಿ ಪ್ರತಿಯೊಬ್ಬರಿಗೂ ಸ್ವಾವಲಂಬನೆಯನ್ನು ನೀಡುವನು. ಅಲ್ಲಾಹು ವಿಶಾಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
Nisa' 4:131
ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನಿಗೆ ಸೇರಿದ್ದು. “ಅಲ್ಲಾಹನನ್ನು ಭಯಪಡಿರಿ” ಎಂದು ನಾವು ನಿಮಗೂ ನಿಮಗಿಂತ ಮೊದಲು ಗ್ರಂಥ ನೀಡಲಾದವರಿಗೂ ಆದೇಶಿಸಿದ್ದೇವೆ. ನೀವು ನಿಷೇಧಿಸಿದರೆ (ಅದರಿಂದ ಅಲ್ಲಾಹನಿಗೇನೂ ನಷ್ಟವಿಲ್ಲ). ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನಿಗೆ ಸೇರಿದ್ದು. ಅಲ್ಲಾಹು ನಿರಪೇಕ್ಷನು ಮತ್ತು ಸ್ತುತ್ಯರ್ಹನಾಗಿದ್ದಾನೆ.
Nisa' 4:132
ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನಿಗೆ ಸೇರಿದ್ದು. ಕಾರ್ಯನಿರ್ವಾಹಕನಾಗಿ ಅಲ್ಲಾಹು ಸಾಕು.
Nisa' 4:133
ಓ ಜನರೇ! ಅಲ್ಲಾಹು ಇಚ್ಛಿಸಿದರೆ ಅವನು ನಿಮ್ಮನ್ನು ತೊಲಗಿಸಿ ಬೇರೆ ಜನರನ್ನು ತರುವನು. ಅಲ್ಲಾಹನಿಗೆ ಅದರಲ್ಲಿ ಸಂಪೂರ್ಣ ಸಾಮರ್ಥ್ಯವಿದೆ.
Nisa' 4:134
ಯಾರು ಇಹಲೋಕದ ಪ್ರತಿಫಲವನ್ನು ಬಯಸುತ್ತಾನೋ—ಅಲ್ಲಾಹನ ಬಳಿ ಇಹಲೋಕ ಮತ್ತು ಪರಲೋಕಗಳ ಪ್ರತಿಫಲವಿದೆ (ಎಂದು ಅವನಿಗೆ ತಿಳಿದಿರಲಿ). ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ನೋಡುವವನಾಗಿದ್ದಾನೆ.
Nisa' 4:135
ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನಿಗೆ ಸಾಕ್ಷಿಯಾಗಿದ್ದು, ನ್ಯಾಯ ನಿಷ್ಠೆಯಲ್ಲಿ ಸದಾ ದೃಢವಾಗಿ ನಿಲ್ಲಿರಿ. ಅದು ನಿಮಗೆ, ನಿಮ್ಮ ತಂದೆ-ತಾಯಿಗಳಿಗೆ, ಅಥವಾ ಹತ್ತಿರದ ಸಂಬಂಧಿಕರಿಗೆ ವಿರುದ್ಧವಾಗಿದ್ದರೂ ಸಹ. ಶ್ರೀಮಂತನಾಗಿರಲಿ ಅಥವಾ ಬಡವನಾಗಿರಲಿ—ಇಬ್ಬರಿಗೂ ಅಲ್ಲಾಹು ಬಹಳ ಹತ್ತಿರದಲ್ಲಿದ್ದಾನೆ. ಆದ್ದರಿಂದ ನೀವು ಸ್ವೇಚ್ಛೆಗಳನ್ನು ಹಿಂಬಾಲಿಸಿ ನ್ಯಾಯ ತಪ್ಪಿ ನಡೆಯಬೇಡಿ. ನೀವು (ಸಾಕ್ಷ್ಯವನ್ನು) ತಿರುಚಿದರೆ, ಅಥವಾ (ಸಾಕ್ಷಿ ನುಡಿಯದೆ) ಹಿಂದೆ ಸರಿದರೆ, ನಿಶ್ಚಯವಾಗಿಯೂ ನೀವು ಮಾಡುವುದನ್ನು ಅಲ್ಲಾಹು ಸೂಕ್ಷ್ಮವಾಗಿ ತಿಳಿಯುತ್ತಾನೆ.
Nisa' 4:136
ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನಲ್ಲಿ, ಅವನ ಸಂದೇಶವಾಹಕರಲ್ಲಿ, ಅವನ ಸಂದೇಶವಾಹಕರಿಗೆ ಅವತೀರ್ಣವಾದ ಗ್ರಂಥದಲ್ಲಿ ಮತ್ತು ಅವರಿಗಿಂತ ಮೊದಲು ಅವತೀರ್ಣವಾದ ಗ್ರಂಥಗಳಲ್ಲಿ ವಿಶ್ವಾಸವಿಡಿ. ಯಾರು ಅಲ್ಲಾಹನನ್ನು, ಅವನ ದೇವದೂತರುಗಳನ್ನು, ಅವನ ಗ್ರಂಥಗಳನ್ನು, ಅವನ ಸಂದೇಶವಾಹಕರುಗಳನ್ನು ಮತ್ತು ಅಂತ್ಯದಿನವನ್ನು ನಿಷೇಧಿಸುತ್ತಾನೋ—ಅವನು ವಿದೂರ ದುರ್ಮಾರ್ಗದಲ್ಲಿ ದಾರಿತಪ್ಪಿದ್ದಾನೆ.
Nisa' 4:137
ನಿಶ್ಚಯವಾಗಿಯೂ, ಸತ್ಯವಿಶ್ವಾಸ ಸ್ವೀಕರಿಸಿದ ನಂತರ ಸತ್ಯನಿಷೇಧಿಗಳಾದವರು, ನಂತರ ಪುನಃ ಸತ್ಯವಿಶ್ವಾಸಿಗಳಾಗಿ ಪುನಃ ಸತ್ಯನಿಷೇಧಿಗಳಾದವರು, ನಂತರ ಸತ್ಯನಿಷೇಧವನ್ನು ಹೆಚ್ಚಿಸುತ್ತಲೇ ಹೋದವರು ಯಾರೋ—ಅವರಿಗೆ ಅಲ್ಲಾಹು ಕ್ಷಮಿಸುವುದಿಲ್ಲ. ಅವರಿಗೆ ಸರಿದಾರಿಯನ್ನು ತೋರಿಸುವುದೂ ಇಲ್ಲ.
Nisa' 4:138
ಕಪಟವಿಶ್ವಾಸಿಗಳಿಗೆ ಯಾತನಾಮಯ ಶಿಕ್ಷೆಯಿದೆಯೆಂಬ ಸುವಾರ್ತೆಯನ್ನು ತಿಳಿಸಿರಿ.
Nisa' 4:139
ಸತ್ಯವಿಶ್ವಾಸಿಗಳನ್ನು ಬಿಟ್ಟು ಸತ್ಯನಿಷೇಧಿಗಳನ್ನು ಆಪ್ತಮಿತ್ರರನ್ನಾಗಿ ಸ್ವೀಕರಿಸಿದವರು ಯಾರೋ—ಅವರು ಸತ್ಯನಿಷೇಧಿಗಳ ಬಳಿ ಪ್ರತಿಷ್ಠೆಯನ್ನು ಹುಡುಕುತ್ತಿದ್ದಾರೆಯೇ? ನಿಶ್ಚಯವಾಗಿಯೂ ಪ್ರತಿಷ್ಠೆಯು ಸಂಪೂರ್ಣವಾಗಿ ಅಲ್ಲಾಹನ ವಶದಲ್ಲಿದೆ (ಎಂದು ಅವರು ತಿಳಿದಿರಲಿ).
Nisa' 4:140
ಜನರು ಅಲ್ಲಾಹನ ವಚನಗಳನ್ನು ನಿಷೇಧಿಸುವುದನ್ನು ಮತ್ತು ತಮಾಷೆ ಮಾಡುವುದನ್ನು ಕೇಳಿದರೆ, ಅವರು ಬೇರೆ ವಿಷಯದಲ್ಲಿ ಪ್ರವೇಶಿಸುವ ತನಕ ಅವರೊಡನೆ ಕುಳಿತುಕೊಳ್ಳಬೇಡಿ ಎಂಬ ಆದೇಶವನ್ನು ಗ್ರಂಥದಲ್ಲಿ ಈಗಾಗಲೇ ನಿಮಗೆ ಅವತೀರ್ಣಗೊಳಿಸಲಾಗಿದೆ.[1] ಅವರೊಡನೆ ಕುಳಿತುಕೊಂಡರೆ ನೀವು ಕೂಡ ಅವರಂತೆಯೇ ಆಗುವಿರಿ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ಕಪಟವಿಶ್ವಾಸಿಗಳನ್ನು ಮತ್ತು ಸತ್ಯನಿಷೇಧಿಗಳನ್ನು ನರಕಾಗ್ನಿಯಲ್ಲಿ ಒಟ್ಟುಗೂಡಿಸುವನು.
———
[1] ಈ ವಚನವು ಅವತೀರ್ಣವಾದದ್ದು ಮದೀನದಲ್ಲಿ. ಇದಕ್ಕೆ ಮೊದಲು ಮಕ್ಕಾದಲ್ಲಿ ಇದೇ ವಿಷಯದ ಕುರಿತು ವಚನವು ಅವತೀರ್ಣವಾಗಿತ್ತು. (ನೋಡಿ 6:68)
Nisa' 4:141
ಅವರು ನಿಮ್ಮನ್ನು ಕಾದು ನೋಡುತ್ತಾರೆ. ನಿಮಗೆ ಅಲ್ಲಾಹನಿಂದ ಗೆಲುವು ಪ್ರಾಪ್ತವಾದರೆ, “ನಾವು ನಿಮ್ಮೊಂದಿಗೆ ಇರಲಿಲ್ಲವೇ?” ಎಂದು ಅವರು (ನಿಮ್ಮೊಂದಿಗೆ) ಕೇಳುತ್ತಾರೆ. ಗೆಲುವು ಸತ್ಯನಿಷೇಧಿಗಳ ಪಾಲಾದರೆ (ಅವರ ಬಳಿಗೆ ಹೋಗಿ), “ನಿಮ್ಮ ಮೇಲೆ ಗೆಲುವು ಪಡೆಯುವ ಸಾಧ್ಯತೆಯಿದ್ದೂ ಸಹ ನಾವು ನಿಮ್ಮನ್ನು ಸತ್ಯವಿಶ್ವಾಸಿಗಳಿಂದ ರಕ್ಷಿಸಲಿಲ್ಲವೇ?” ಎಂದು ಕೇಳುತ್ತಾರೆ. ಪುನರುತ್ಥಾನ ದಿನದಂದು ಅಲ್ಲಾಹು ನಿಮ್ಮ ನಡುವೆ ತೀರ್ಪು ನೀಡುವನು. ಅಲ್ಲಾಹು ಸತ್ಯವಿಶ್ವಾಸಿಗಳ ಮೇಲೆ ಸತ್ಯನಿಷೇಧಿಗಳಿಗೆ ಯಾವುದೇ ಮಾರ್ಗವನ್ನು ಮಾಡಿಕೊಡುವುದಿಲ್ಲ.
Nisa' 4:142
ನಿಶ್ಚಯವಾಗಿಯೂ ಕಪಟವಿಶ್ವಾಸಿಗಳು ಅಲ್ಲಾಹನನ್ನು ವಂಚಿಸಬಹುದೆಂದು (ಭಾವಿಸುತ್ತಾರೆ). ಆದರೆ, (ವಾಸ್ತವವಾಗಿ) ಅಲ್ಲಾಹನೇ ಅವರನ್ನು ವಂಚಿಸುತ್ತಿದ್ದಾನೆ.[1] ಅವರು ನಮಾಝ್ ಮಾಡಲು ನಿಲ್ಲುವಾಗ ಉದಾಸೀನರಾಗಿ ಮತ್ತು ಜನರಿಗೆ ತೋರಿಸುವುದಕ್ಕಾಗಿ ನಿಲ್ಲುತ್ತಾರೆ. ಅವರು ಅಲ್ಲಾಹನನ್ನು ಸ್ವಲ್ಪ ಮಾತ್ರ ಸ್ಮರಿಸುತ್ತಾರೆ.
———
[1] ಅಲ್ಲಾಹು ಅವರನ್ನು ವಂಚಿಸುತ್ತಿದ್ದಾನೆ ಎಂದರೆ ಅವರು ಮಾಡಿದ ವಂಚನೆಯ ಫಲವನ್ನು ಅವರೇ ಉಣ್ಣುವಂತೆ ಮಾಡುತ್ತಿದ್ದಾನೆ ಎಂದರ್ಥ.
Nisa' 4:143
ಅವರು ಎರಡು ಗುಂಪುಗಳ ಮಧ್ಯೆ ತೊಳಲಾಡುತ್ತಾರೆ. ಆ ಗುಂಪಿಗೂ ಸೇರುವುದಿಲ್ಲ; ಈ ಗುಂಪಿಗೂ ಸೇರುವುದಿಲ್ಲ. ಅಲ್ಲಾಹು ಯಾರನ್ನು ದಾರಿತಪ್ಪಿಸುತ್ತಾನೋ ಅವನಿಗೆ ಯಾವುದೇ ದಾರಿಯನ್ನು ನೀವು ಕಾಣಲಾರಿರಿ.
Nisa' 4:144
ಓ ಸತ್ಯವಿಶ್ವಾಸಿಗಳೇ! ನೀವು ಸತ್ಯವಿಶ್ವಾಸಿಗಳನ್ನು ಬಿಟ್ಟು ಸತ್ಯನಿಷೇಧಿಗಳನ್ನು ಆಪ್ತಮಿತ್ರರನ್ನಾಗಿ ಸ್ವೀಕರಿಸಬೇಡಿ. ನಿಮ್ಮ ವಿರುದ್ಧ ಅಲ್ಲಾಹನಿಗೆ ಸ್ಪಷ್ಟ ಸಾಕ್ಷ್ಯಾಧಾರವನ್ನು ಮಾಡಿಕೊಡಲು ನೀವು ಬಯಸುತ್ತೀರಾ?
Nisa' 4:145
ನಿಶ್ಚಯವಾಗಿಯೂ ಕಪಟ ವಿಶ್ವಾಸಿಗಳು ನರಕದ ಅತ್ಯಂತ ತಳಮಟ್ಟದಲ್ಲಿರುತ್ತಾರೆ. ನೀವು ಅವರಿಗೆ ಯಾವುದೇ ಸಹಾಯಕನನ್ನು ಕಾಣಲಾರಿರಿ.
Nisa' 4:146
ಆದರೆ ಪಶ್ಚಾತ್ತಾಪಪಡುವವರು, ಸುಧಾರಿಸಿಕೊಳ್ಳುವವರು, ಅಲ್ಲಾಹನನ್ನು ಬಿಗಿಯಾಗಿ ಹಿಡಿದುಕೊಳ್ಳುವವರು ಮತ್ತು ತಮ್ಮ ಧರ್ಮವನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸುವವರು ಇದರಿಂದ ಹೊರತಾಗಿದ್ದಾರೆ. ಅವರು ಸತ್ಯವಿಶ್ವಾಸಿಗಳಲ್ಲಿ ಸೇರಿದವರು. ಅಲ್ಲಾಹು ಸತ್ಯವಿಶ್ವಾಸಿಗಳಿಗೆ ಮಹಾ ಪ್ರತಿಫಲವನ್ನು ನೀಡುವನು.
Nisa' 4:147
ನೀವು ಕೃತಜ್ಞರಾಗಿ ಜೀವಿಸಿದರೆ ಮತ್ತು ಸತ್ಯವಿಶ್ವಾಸಿಗಳಾದರೆ, ನಿಮ್ಮನ್ನು ಶಿಕ್ಷಿಸಿ ಅಲ್ಲಾಹು ಮಾಡುವುದೇನು? ಅಲ್ಲಾಹು ಶ್ಲಾಘನಾರ್ಹನು ಮತ್ತು ಸರ್ವಜ್ಞನಾಗಿದ್ದಾನೆ.
Nisa' 4:148
ಕೆಟ್ಟ ಪದಗಳನ್ನು ಜೋರಾಗಿ ಹೇಳುವುದನ್ನು ಅಲ್ಲಾಹು ಇಷ್ಟಪಡುವುದಿಲ್ಲ. ಆದರೆ ಅನ್ಯಾಯಕ್ಕೆ ಗುರಿಯಾದವನು ಇದರಿಂದ ಹೊರತಾಗಿದ್ದಾನೆ. ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
Nisa' 4:149
ನೀವು ಬಹಿರಂಗವಾಗಿ ಅಥವಾ ರಹಸ್ಯವಾಗಿ ಒಳಿತು ಮಾಡಿದರೂ, ಅಥವಾ ಒಂದು ದುಷ್ಕರ್ಮವನ್ನು ಕ್ಷಮಿಸಿದರೂ—ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ಸರ್ವಶಕ್ತನಾಗಿದ್ದಾನೆ.
Nisa' 4:150
ನಿಶ್ಚಯವಾಗಿಯೂ ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ನಿಷೇಧಿಸುವವರು, ಅಲ್ಲಾಹು ಮತ್ತು ಅವನ ಸಂದೇಶವಾಹಕರ ನಡುವೆ ಬೇಧ ಮಾಡಲು ಬಯಸುವವರು, ನಾವು ಕೆಲವರನ್ನು ನಂಬುತ್ತೇವೆ ಮತ್ತು ಕೆಲವರನ್ನು ನಿಷೇಧಿಸುತ್ತೇವೆ ಎಂದು ಹೇಳುವವರು ಹಾಗೂ ಅದರ ಮಧ್ಯೆ ಒಂದು ಮಾರ್ಗವನ್ನು ಸ್ವೀಕರಿಸಲು ಬಯಸುವವರು ಯಾರೋ,
Nisa' 4:151
ಅವರೇ ನಿಜವಾದ ಸತ್ಯನಿಷೇಧಿಗಳು. ಆ ಸತ್ಯನಿಷೇಧಿಗಳಿಗೆ ನಾವು ಅವಮಾನಕರ ಶಿಕ್ಷೆಯನ್ನು ಸಿದ್ಧಗೊಳಿಸಿದ್ದೇವೆ.
Nisa' 4:152
ಅಲ್ಲಾಹನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಡುವವರು, ಮತ್ತು ಅವರಲ್ಲಿ ಯಾರ ನಡುವೆಯೂ ಬೇಧ ಮಾಡದವರು ಯಾರೋ—ಅವರಿಗೆ ಅಲ್ಲಾಹು ಅರ್ಹ ಪ್ರತಿಫಲವನ್ನು ನೀಡುವನು. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
Nisa' 4:153
ಗ್ರಂಥದವರು ನಿಮ್ಮೊಂದಿಗೆ—ಅವರಿಗೆ ಆಕಾಶದಿಂದ ಒಂದು ಗ್ರಂಥವನ್ನು ಇಳಿಸಿಕೊಡಬೇಕೆಂದು ಕೇಳುತ್ತಾರೆ. ಅವರು ಮೂಸಾರೊಡನೆ ಇದಕ್ಕಿಂತಲೂ ದೊಡ್ಡ ಸಂಗತಿಯನ್ನು ಕೇಳಿದ್ದರು. ಅವರು ಹೇಳಿದರು: “ನಮಗೆ ಅಲ್ಲಾಹನನ್ನು ಪ್ರತ್ಯಕ್ಷವಾಗಿ ತೋರಿಸಿಕೊಡಿ.” ಆಗ ಅವರು ಮಾಡಿದ ಅನ್ಯಾಯದಿಂದಾಗಿ ಮಿಂಚು ಅವರ ಮೇಲೆರಗಿತು. ನಂತರ ಅವರಿಗೆ ಸ್ಪಷ್ಟ ಸಾಕ್ಷ್ಯಾಧಾರಗಳು ತಲುಪಿದ ಬಳಿಕವೂ ಅವರು ಕರುವನ್ನು (ದೇವರನ್ನಾಗಿ) ಸ್ವೀಕರಿಸಿದರು. ಆದರೂ ನಾವು ಅದನ್ನು ಕ್ಷಮಿಸಿದೆವು. ಮೂಸಾರಿಗೆ ನಾವು ಸ್ಪಷ್ಟ ಸಾಕ್ಷ್ಯಾಧಾರಗಳನ್ನು ನೀಡಿದ್ದೆವು.
Nisa' 4:154
ಅವರಿಂದ ಕರಾರು ಪಡೆಯಲು ನಾವು ಅವರ ಮೇಲೆ ತೂರ್ ಪರ್ವತವನ್ನು ಎತ್ತಿಹಿಡಿದೆವು. ತಲೆಬಾಗುತ್ತಾ ದ್ವಾರವನ್ನು ಪ್ರವೇಶಿಸಿರಿ ಎಂದು ನಾವು ಅವರಿಗೆ ಆದೇಶಿಸಿದೆವು. ಸಬ್ಬತ್ ದಿನದಲ್ಲಿ ಅತಿರೇಕವೆಸಗಬೇಡಿ ಎಂದು ಅವರೊಡನೆ ಹೇಳಿದೆವು. ನಾವು ಅವರಿಂದ ಪ್ರಬಲ ಕರಾರನ್ನು ಪಡೆದೆವು.
Nisa' 4:155
ಅವರು ಕರಾರನ್ನು ಉಲ್ಲಂಘಿಸಿದ, ಅಲ್ಲಾಹನ ವಚನಗಳನ್ನು ನಿಷೇಧಿಸಿದ, ಅನ್ಯಾಯವಾಗಿ ಪ್ರವಾದಿಗಳನ್ನು ಕೊಲೆ ಮಾಡಿದ ಮತ್ತು ತಮ್ಮ ಹೃದಯಗಳು ಮುಚ್ಚಿವೆಯೆಂದು ಹೇಳಿದ ಕಾರಣದಿಂದ (ಶಾಪಕ್ಕೆ ಗುರಿಯಾದರು). ಅಲ್ಲ, ವಾಸ್ತವವಾಗಿ ಅವರ ಸತ್ಯನಿಷೇಧದಿಂದಾಗಿ ಅಲ್ಲಾಹು ಅವರ ಹೃದಯಗಳಿಗೆ ಮೊಹರು ಹಾಕಿದ್ದಾನೆ. ಆದ್ದರಿಂದ ಅವರು ಸ್ವಲ್ಪ ಮಾತ್ರ ವಿಶ್ವಾಸವಿಡುತ್ತಾರೆ.
Nisa' 4:156
ಅವರ ಸತ್ಯನಿಷೇಧದ ನಿಮಿತ್ತ ಮತ್ತು ಮರ್ಯಮರ ಮೇಲೆ ಗುರುತರ ಆರೋಪವನ್ನು ಹೊರಿಸಿದ ನಿಮಿತ್ತ (ಅವರು ಶಾಪಕ್ಕೆ ಗುರಿಯಾದರು).
Nisa' 4:157
“ಅಲ್ಲಾಹನ ಸಂದೇಶವಾಹಕರಾದ ಮರ್ಯಮರ ಪುತ್ರ ಮಸೀಹ ಈಸಾರನ್ನು ನಾವು ಕೊಂದಿದ್ದೇವೆ” ಎಂದು ಹೇಳಿದ ನಿಮಿತ್ತ (ಅವರು ಶಾಪಕ್ಕೆ ಗುರಿಯಾದರು). ಅವರು ಅವರನ್ನು ಕೊಲ್ಲಲಿಲ್ಲ ಮತ್ತು ಶಿಲುಬೆಗೇರಿಸಲೂ ಇಲ್ಲ. ವಾಸ್ತವವಾಗಿ, ಅವರಿಗೆ ಅದನ್ನು ಸಾದೃಶ್ಯಗೊಳಿಸಲಾಯಿತು. ನಿಶ್ಚಯವಾಗಿಯೂ ಅವರ (ಈಸಾರ) ವಿಷಯದಲ್ಲಿ ಭಿನ್ನಮತ ತಳೆದವರು ಅದರ ಬಗ್ಗೆ ಸಂಶಯದಲ್ಲಿದ್ದಾರೆ. ವದಂತಿಗಳನ್ನು ಹಿಂಬಾಲಿಸುವುದನ್ನು ಬಿಟ್ಟರೆ ಅವರಿಗೆ ಅದರ ಬಗ್ಗೆ ಸರಿಯಾದ ಜ್ಞಾನವೇ ಇಲ್ಲ. ನಿಶ್ಚಯವಾಗಿಯೂ ಅವರು ಈಸಾರನ್ನು ಕೊಲ್ಲಲಿಲ್ಲ.[1]
———
[1] ಯಹೂದಿಗಳು ಈಸಾ (ಯೇಸು) (ಅವರ ಮೇಲೆ ಶಾಂತಿಯಿರಲಿ) ರನ್ನು ಕೊಂದಿಲ್ಲ. ಶಿಲುಬೆಗೇರಿಸಿಯೂ ಇಲ್ಲ. ಬದಲಿಗೆ ಈಸಾ (ಅವರ ಮೇಲೆ ಶಾಂತಿಯಿರಲಿ) ರಂತೆಯೇ ಇದ್ದ ಒಬ್ಬ ವ್ಯಕ್ತಿಯನ್ನು ಅವರು ಈಸಾ ಎಂದು ಭಾವಿಸಿ ಶಿಲುಬೆಗೇರಿಸಿದರು.
Nisa' 4:158
ಬದಲಿಗೆ, ಅಲ್ಲಾಹು ಅವರನ್ನು ತನ್ನ ಬಳಿಗೆ ಎತ್ತಿಕೊಂಡನು. ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
Nisa' 4:159
ಅವರ (ಈಸಾರ) ಮರಣಕ್ಕೆ ಮೊದಲು ಅವರಲ್ಲಿ ವಿಶ್ವಾಸವಿಡದವರು ಯಾರೂ ಗ್ರಂಥದವರಲ್ಲಿ ಇರಲಾರರು. ಪುನರುತ್ಥಾನ ದಿನದಂದು ಅವರು ಇವರಿಗೆ ವಿರುದ್ಧವಾಗಿ ಸಾಕ್ಷಿ ನುಡಿಯುವರು.
Nisa' 4:160
ಯಹೂದಿಗಳು ಮಾಡಿದ ಅನ್ಯಾಯದ ನಿಮಿತ್ತ ಮತ್ತು ಅಲ್ಲಾಹನ ಮಾರ್ಗದಿಂದ ಅವರು ಹೇರಳವಾಗಿ ಜನರನ್ನು ತಡೆಗಟ್ಟಿದ ನಿಮಿತ್ತ ಅವರಿಗೆ ಅನುಮತಿಸಲಾಗಿದ್ದ ಹಲವಾರು ಉತ್ತಮ ವಸ್ತುಗಳನ್ನು ನಾವು ಅವರಿಗೆ ನಿಷೇಧಿಸಿದೆವು.
Nisa' 4:161
ಅವರಿಗೆ ಬಡ್ಡಿಯನ್ನು ವಿರೋಧಿಸಲಾಗಿದ್ದೂ ಸಹ ಅವರು ಅದನ್ನು ಪಡೆದ ನಿಮಿತ್ತ ಮತ್ತು ಜನರ ಧನವನ್ನು ಅನ್ಯಾಯವಾಗಿ ತಿಂದ ನಿಮಿತ್ತ. ಅವರಲ್ಲಿರುವ ಸತ್ಯನಿಷೇಧಿಗಳಿಗೆ ನಾವು ಯಾತನಾಮಯ ಶಿಕ್ಷೆಯನ್ನು ಸಿದ್ಧಗೊಳಿಸಿದ್ದೇವೆ.
Nisa' 4:162
ಆದರೆ ಅವರಲ್ಲಿರುವ ಮಹಾಜ್ಞಾನಿಗಳು ಮತ್ತು ಸತ್ಯವಿಶ್ವಾಸಿಗಳು ನಿಮಗೆ ಅವತೀರ್ಣವಾದ ಗ್ರಂಥದಲ್ಲಿ ಮತ್ತು ನಿಮಗಿಂತ ಮೊದಲು ಅವತೀರ್ಣವಾದ ಗ್ರಂಥಗಳಲ್ಲಿ ವಿಶ್ವಾಸವಿಡುತ್ತಾರೆ. ಅವರು ನಮಾಝ್ ಸಂಸ್ಥಾಪಿಸುತ್ತಾರೆ, ಝಕಾತ್ ನೀಡುತ್ತಾರೆ ಮತ್ತು ಅಲ್ಲಾಹನಲ್ಲಿ ಹಾಗೂ ಅಂತ್ಯದಿನದಲ್ಲಿ ವಿಶ್ವಾಸವಿಡುತ್ತಾರೆ. ನಾವು ಅವರಿಗೆ ಮಹಾ ಪ್ರತಿಫಲವನ್ನು ದಯಪಾಲಿಸುವೆವು.
Nisa' 4:163
ನೂಹ್ ಮತ್ತು ಅವರ ನಂತರದ ಪ್ರವಾದಿಗಳಿಗೆ ದೇವವಾಣಿ ನೀಡಿದಂತೆಯೇ ನಾವು ನಿಮಗೂ ದೇವವಾಣಿ ನೀಡಿದ್ದೇವೆ. ಇಬ್ರಾಹೀಮ್, ಇಸ್ಮಾಈಲ್, ಇಸ್‍ಹಾಕ್, ಯಾಕೂಬ್, ಯಾಕೂಬ್ ಸಂತತಿಗಳು, ಈಸಾ, ಅಯ್ಯೂಬ್, ಯೂನುಸ್, ಹಾರೂನ್, ಸುಲೈಮಾನ್ ಮುಂತಾದವರಿಗೂ ನಾವು ದೇವವಾಣಿಯನ್ನು ನೀಡಿದ್ದೇವೆ. ನಾವು ದಾವೂದರಿಗೆ ಝಬೂರನ್ನು ನೀಡಿದ್ದೇವೆ.
Nisa' 4:164
ನಾವು ಈಗಾಗಲೇ ನಿಮಗೆ ತಿಳಿಸಿಕೊಟ್ಟ ಸಂದೇಶವಾಹಕರನ್ನು ಮತ್ತು ನಾವು ನಿಮಗೆ ತಿಳಿಸಿಕೊಡದ ಸಂದೇಶವಾಹಕರನ್ನು (ನಾವು ಕಳುಹಿಸಿದ್ದೇವೆ). ಅಲ್ಲಾಹು ಮೂಸಾರೊಡನೆ ನೇರವಾಗಿ ಮಾತನಾಡಿದ್ದಾನೆ.
Nisa' 4:165
ಸುವಾರ್ತೆ ತಿಳಿಸುವ ಮತ್ತು ಮುನ್ನೆಚ್ಚರಿಕೆ ನೀಡುವ ಸಂದೇಶವಾಹಕರನ್ನು (ನಾವು ಕಳುಹಿಸಿದ್ದೇವೆ). ಸಂದೇಶವಾಹಕರನ್ನು ಕಳುಹಿಸಿದ ನಂತರ ಅಲ್ಲಾಹನಿಗೆದುರಾಗಿ ಜನರಿಗೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದಿರುವುದಕ್ಕಾಗಿ. ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
Nisa' 4:166
ಆದರೆ ನಿಮಗೆ ಅವತೀರ್ಣಗೊಳಿಸಿದ ಸಂದೇಶಕ್ಕೆ ಅಲ್ಲಾಹು ಸಾಕ್ಷಿಯಾಗಿದ್ದಾನೆ. ಅವನು ಅದನ್ನು ಪೂರ್ಣ ತಿಳುವಳಿಕೆಯೊಂದಿಗೆ ಅವತೀರ್ಣಗೊಳಿಸಿದ್ದಾನೆ. ದೇವದೂತರುಗಳು ಕೂಡ ಅದಕ್ಕೆ ಸಾಕ್ಷಿಯಾಗಿದ್ದಾರೆ. ಸಾಕ್ಷಿಯಾಗಿ ಅಲ್ಲಾಹು ಸಾಕು.
Nisa' 4:167
ಸತ್ಯನಿಷೇಧಿಗಳು ಮತ್ತು ಅಲ್ಲಾಹನ ಮಾರ್ಗದಿಂದ ಜನರನ್ನು ತಡೆದವರು ಯಾರೋ—ನಿಶ್ಚಯವಾಗಿಯೂ ಅವರು ವಿದೂರ ದುರ್ಮಾರ್ಗದಲ್ಲಿ ದಾರಿತಪ್ಪಿದ್ದಾರೆ.
Nisa' 4:168
ಸತ್ಯನಿಷೇಧಿಗಳು ಮತ್ತು ಅಕ್ರಮವೆಸಗಿದವರು ಯಾರೋ—ಅವರನ್ನು ಅಲ್ಲಾಹು ಎಂದಿಗೂ ಕ್ಷಮಿಸುವುದಿಲ್ಲ ಮತ್ತು ಅವರಿಗೆ ಯಾವುದೇ ಮಾರ್ಗವನ್ನು ತೋರಿಸುವುದಿಲ್ಲ.
Nisa' 4:169
ನರಕದ ಮಾರ್ಗವನ್ನು ಬಿಟ್ಟು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅದು ಅಲ್ಲಾಹನಿಗೆ ಬಹಳ ಸುಲಭವಾಗಿದೆ.
Nisa' 4:170
ಓ ಜನರೇ! ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯಿಂದ ನಿಮ್ಮ ಬಳಿಗೆ ಸಂದೇಶವಾಹಕರು ಸತ್ಯಸಹಿತ ಬಂದಿದ್ದಾರೆ. ಆದ್ದರಿಂದ ಅವರಲ್ಲಿ ವಿಶ್ವಾಸವಿಡಿ. ಅದು ನಿಮಗೆ ಒಳಿತಾಗಿದೆ. ನೀವು ನಿಷೇಧಿಸಿದರೆ (ಅದರಿಂದ ಅಲ್ಲಾಹನಿಗೇನೂ ನಷ್ಟವಿಲ್ಲ). ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನಿಗೆ ಸೇರಿದ್ದು. ಅಲ್ಲಾಹು ಎಲ್ಲವನ್ನು ತಿಳಿದವನು ಮತ್ತು ವಿವೇಕಪೂರ್ಣನಾಗಿದ್ದಾನೆ.
Nisa' 4:171
ಓ ಗ್ರಂಥದವರೇ! ನೀವು ನಿಮ್ಮ ಧರ್ಮದಲ್ಲಿ ಹದ್ದುಮೀರಿ ವರ್ತಿಸಬೇಡಿ. ಅಲ್ಲಾಹನ ಬಗ್ಗೆ ಸತ್ಯವನ್ನಲ್ಲದೆ ಬೇರೇನನ್ನೂ ಹೇಳಬೇಡಿ. ಮರ್ಯಮರ ಮಗ ಮಸೀಹ ಈಸಾ ಅಲ್ಲಾಹನ ಸಂದೇಶವಾಹಕರು, ಮರ್ಯಮರಿಗೆ ಅವನು ಹಾಕಿಕೊಟ್ಟ ಅವನ ವಚನ ಮತ್ತು ಅವನ ಕಡೆಯ ಒಂದು ಆತ್ಮವಾಗಿದ್ದಾರೆ. ಆದ್ದರಿಂದ ಅಲ್ಲಾಹನಲ್ಲಿ ಮತ್ತು ಅವನ ಸಂದೇಶವಾಹಕರುಗಳಲ್ಲಿ ವಿಶ್ವಾಸವಿಡಿರಿ. ಮೂರು ಎಂದು ಹೇಳಬೇಡಿ.[1] ಹಾಗೆ ಹೇಳುವುದನ್ನು ನಿಲ್ಲಿಸಿದರೆ ನಿಮಗೇ ಒಳ್ಳೆಯದು. ಅಲ್ಲಾಹು ಏಕೈಕ ದೇವನಾಗಿದ್ದಾನೆ. ಮಕ್ಕಳು ಉಂಟಾಗುತ್ತಾರೆ ಎಂಬುದರಿಂದ ಅವನು ಎಷ್ಟೋ ಪರಿಶುದ್ಧನಾಗಿದ್ದಾನೆ. ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಅವನಿಗೆ ಸೇರಿದ್ದು. ಕಾರ್ಯನಿರ್ವಾಹಕನಾಗಿ ಅಲ್ಲಾಹು ಸಾಕು.
———
[1] ಕ್ರೈಸ್ತರು ತಿಯೇಕತ್ವದಲ್ಲಿ ನಂಬಿಕೆಯಿಡುತ್ತಾರೆ. ತ್ರಿಯೇಕತ್ವ ಎಂದರೆ ತಂದೆ, ಮಗ ಮತ್ತು ಪವಿತ್ರಾತ್ಮ—ಇವರು ಮೂವರೂ ಒಂದೇ ಮತ್ತು ಇವರು ಮೂವರೂ ದೇವರುಗಳು ಎಂಬ ನಂಬಿಕೆ.
Nisa' 4:172
ಅಲ್ಲಾಹನ ದಾಸನಾಗಿರಲು ಮಸೀಹರಿಗೆ ಯಾವುದೇ ತಿರಸ್ಕಾರವಿಲ್ಲ. (ಅಲ್ಲಾಹನ) ಸಾಮೀಪ್ಯವನ್ನು ಗಳಿಸಿದ ದೇವದೂತರುಗಳಿಗೂ ತಿರಸ್ಕಾರವಿಲ್ಲ.ಅಲ್ಲಾಹನನ್ನು ಆರಾಧಿಸಲು ತಿರಸ್ಕಾರ ಮಾಡುವವರು ಮತ್ತು ಅಹಂಕಾರಪಡುವವರು ಯಾರೋ—ಅವರೆಲ್ಲರನ್ನೂ ಅವನು ತನ್ನ ಬಳಿಗೆ ಒಟ್ಟುಗೂಡಿಸುವನು.
Nisa' 4:173
ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ—ಅವರ ಪ್ರತಿಫಲವನ್ನು ಅವನು ಅವರಿಗೆ ಪೂರ್ಣವಾಗಿ ನೀಡುವನು ಮತ್ತು ತನ್ನ ಅನುಗ್ರಹದಿಂದ ಅವರಿಗೆ ಹೆಚ್ಚುವರಿಯನ್ನು ದಯಪಾಲಿಸುವನು. ಆದರೆ ತಿರಸ್ಕಾರ ಮಾಡುವವರು ಮತ್ತು ಅಹಂಕಾರಪಡುವವರು ಯಾರೋ—ಅವರಿಗೆ ಅವನು ಯಾತನಾಮಯ ಶಿಕ್ಷೆಯನ್ನು ನೀಡುವನು. ಅವರು ಅಲ್ಲಾಹನ ಹೊರತು ಯಾವುದೇ ರಕ್ಷಕನನ್ನು ಅಥವಾ ಸಹಾಯಕನನ್ನು ಕಾಣಲಾರರು.
Nisa' 4:174
ಓ ಮನುಷ್ಯರೇ! ನಿಶ್ಚಯವಾಗಿಯೂ ನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಸ್ಪಷ್ಟವಾದ ಸಾಕ್ಷ್ಯವು ಬಂದಿದೆ. ನಾವು ನಿಮಗೆ ಸ್ಪಷ್ಟ ಬೆಳಕನ್ನು ಇಳಿಸಿಕೊಟ್ಟಿದ್ದೇವೆ.
Nisa' 4:175
ಅಲ್ಲಾಹನಲ್ಲಿ ವಿಶ್ವಾಸವಿಟ್ಟು ಅವನನ್ನು ಬಿಗಿಯಾಗಿ ಹಿಡಿದುಕೊಳ್ಳುವವರು ಯಾರೋ—ಅವರನ್ನು ಅವನು ತನ್ನ ದಯೆ ಮತ್ತು ಅನುಗ್ರಹದಲ್ಲಿ ಸೇರಿಸುವನು. ಅವರನ್ನು ತನ್ನ ಬಳಿಗೆ ನೇರಮಾರ್ಗದಲ್ಲಿ ಮುನ್ನಡೆಸುವನು.
Nisa' 4:176
ಅವರು ತಮ್ಮೊಂದಿಗೆ ಧರ್ಮವಿಧಿಯನ್ನು ಕೇಳುತ್ತಾರೆ. ಹೇಳಿರಿ: “ತಂದೆ-ತಾಯಿ ಮತ್ತು ಮಕ್ಕಳಿಲ್ಲದವರ ಬಗ್ಗೆ ಅಲ್ಲಾಹು ನಿಮಗೆ ಧರ್ಮವಿಧಿಯನ್ನು ನೀಡುತ್ತಾನೆ.”[1] ಒಬ್ಬ ವ್ಯಕ್ತಿ ಸಾಯುವಾಗ ಸಂತಾನರಹಿತನಾಗಿದ್ದು ಅವನಿಗೆ ಒಬ್ಬ ಸಹೋದರಿ ಮಾತ್ರವಿದ್ದರೆ ಅವನು ಬಿಟ್ಟು ಹೋದ ಆಸ್ತಿಯಲ್ಲಿ ಅರ್ಧ ಭಾಗ ಅವಳಿಗೆ ದೊರೆಯುತ್ತದೆ. ಅವಳು ಸಂತಾನರಹಿತೆಯಾಗಿದ್ದು ಮರಣಹೊಂದಿದರೆ, ಅವಳ ಪೂರ್ಣ ಆಸ್ತಿಗೆ ಇವನು ವಾರಸುದಾರನಾಗುತ್ತಾನೆ. ಅವನಿಗೆ ಇಬ್ಬರು ಸಹೋದರಿಯರಿದ್ದರೆ ಅವನು ಬಿಟ್ಟು ಹೋದ ಆಸ್ತಿಯ ಮೂರನೇ ಎರಡು ಭಾಗವು ಅವರಿಗೆ ದೊರೆಯುತ್ತದೆ. ಅವನಿಗೆ ಅನೇಕ ಸಹೋದರ-ಸಹೋದರಿಯರಿದ್ದರೆ ಒಬ್ಬ ಪುರುಷನ ಪಾಲು ಇಬ್ಬರು ಮಹಿಳೆಯರ ಪಾಲಿಗೆ ಸಮಾನವಾಗಿದೆ. ನೀವು ದಾರಿತಪ್ಪದಿರಲು ಅಲ್ಲಾಹು ನಿಮಗೆ ವಿಷಯಗಳನ್ನು ಸ್ಪಷ್ಟಗೊಳಿಸುತ್ತಿದ್ದಾನೆ. ಅಲ್ಲಾಹು ಎಲ್ಲಾ ವಿಷಯಗಳನ್ನೂ ತಿಳಿದವನಾಗಿದ್ದಾನೆ.
———
[1] ಮೃತ ವ್ಯಕ್ತಿಗೆ ತಂದೆ-ತಾಯಿ ಮತ್ತು ಮಕ್ಕಳಿಲ್ಲದಿದ್ದರೆ ಅವನ ಆಸ್ತಿಯನ್ನು ಹೇಗೆ ಪಾಲು ಮಾಡಬೇಕೆಂದು ಈ ವಚನವು ವಿವರಿಸುತ್ತದೆ.
Maide 5:1
ಓ ಸತ್ಯವಿಶ್ವಾಸಿಗಳೇ! ಕರಾರುಗಳನ್ನು ನೆರವೇರಿಸಿರಿ. ನಿಮಗೆ ಓದಿಕೊಡಲಾಗುವ ಪ್ರಾಣಿಗಳ ಹೊರತಾದ ಮೇಯುವ ಜಾನುವಾರುಗಳನ್ನು ನಿಮಗೆ ಅನುಮತಿಸಲಾಗಿದೆ. ಆದರೆ ನೀವು ಇಹ್ರಾಮ್‍ನಲ್ಲಿರುವಾಗ[1] ಬೇಟೆಯಾಡುವುದಕ್ಕೆ ಅನುಮತಿಯಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಅವನು ಬಯಸುವುದನ್ನು ಆದೇಶಿಸುತ್ತಾನೆ.
———
[1] ಹಜ್ಜ್ ಅಥವಾ ಉಮ್ರ ನಿರ್ವಹಿಸುತ್ತೇನೆ ಎಂಬ ಉದ್ದೇಶದಿಂದ (ನಿಯ್ಯತ್‌ನಿಂದ) ಸಾಂಕೇತಿಕವಾಗಿ ಹಜ್ ಅಥವಾ ಉಮ್ರ ಕರ್ಮದಲ್ಲಿ ಪ್ರವೇಶಿಸುವುದಕ್ಕೆ ‘ಇಹ್ರಾಮ್’ ಎಂದು ಹೇಳಲಾಗುತ್ತದೆ.
Maide 5:2
ಓ ಸತ್ಯವಿಶ್ವಾಸಿಗಳೇ! ಅಲ್ಲಾಹನ ಲಾಂಛನಗಳಿಗೆ ಅಗೌರವ ತೋರಬೇಡಿ. ಪವಿತ್ರ ತಿಂಗಳಿಗೆ, ಬಲಿಮೃಗಗಳಿಗೆ, (ಅವುಗಳ ಕೊರಳಲ್ಲಿರುವ) ಪದಕಗಳಿಗೆ, ಮತ್ತು ತಮ್ಮ ಪರಿಪಾಲಕನ (ಅಲ್ಲಾಹನ) ಔದಾರ್ಯ ಹಾಗೂ ಸಂಪ್ರೀತಿಯನ್ನು ಹುಡುಕುತ್ತಾ ಪವಿತ್ರ ಭವನಕ್ಕೆ ತೀರ್ಥಯಾತ್ರೆ ಮಾಡುವವರಿಗೆ (ಅಗೌರವ ತೋರಬೇಡಿ). ನೀವು ಇಹ್ರಾಮ್‍ನಿಂದ ಮುಕ್ತರಾದರೆ ಬೇಟೆಯಾಡಿರಿ. ಮಸ್ಜಿದುಲ್ ಹರಾಮ್‍ನಿಂದ ನಿಮ್ಮನ್ನು ತಡೆದರು ಎಂಬ ಕಾರಣದಿಂದ ಕೆಲವು ಜನರೊಡನೆ ನಿಮಗಿರುವ ದ್ವೇಷವು ಅತಿರೇಕವೆಸಗುವಂತೆ ನಿಮ್ಮನ್ನು ಪ್ರೇರೇಪಿಸದಿರಲಿ. ಒಳಿತು ಮತ್ತು ದೇವಭಯದಲ್ಲಿ ಪರಸ್ಪರ ಸಹಕರಿಸಿರಿ. ಪಾಪ ಮತ್ತು ಅತಿರೇಕದಲ್ಲಿ ಪರಸ್ಪರ ಸಹಕರಿಸಬೇಡಿ. ಅಲ್ಲಾಹನನ್ನು ಭಯಪಡಿರಿ. ನಿಶ್ಚಯವಾಗಿಯೂ ಅಲ್ಲಾಹು ಕಠೋರವಾಗಿ ಶಿಕ್ಷಿಸುವವನಾಗಿದ್ದಾನೆ.
Maide 5:3
ಶವ, ರಕ್ತ, ಹಂದಿ ಮಾಂಸ ಮತ್ತು ಅಲ್ಲಾಹೇತರರಿಗೆ ಕೊಯ್ಯಲಾದವುಗಳನ್ನು ನಿಮಗೆ ನಿಷೇಧಿಸಲಾಗಿದೆ. ಹಾಗೆಯೇ, ಕತ್ತು ಹಿಸುಕಿ ಸಾಯಿಸಲಾದ, ಬಲವಾದ ಪ್ರಹಾರದಿಂದ ಸತ್ತ, ಎತ್ತರದಿಂದ ಬಿದ್ದು ಸತ್ತ, ಕೊಂಬಿನಿಂದ ತಿವಿತಕ್ಕೊಳಗಾಗಿ ಸತ್ತ, ಕಾಡುಪ್ರಾಣಿಗಳು ಹರಿದು ತಿಂದ ಪ್ರಾಣಿಗಳನ್ನು ನಿಮಗೆ ನಿಷೇಧಿಸಲಾಗಿದೆ. ಆದರೆ (ಸಾಯುವ ಮೊದಲೇ) ನೀವು ಕತ್ತು ಕೊಯ್ದ (ದಿಬ್ಹ ಮಾಡಿದ) ಪ್ರಾಣಿಗಳನ್ನು ಇದರಿಂದ ಹೊರತುಪಡಿಸಲಾಗಿದೆ. ಅದೇ ರೀತಿ, ವಿಗ್ರಹಗಳ ಮುಂದೆ ಬಲಿ ನೀಡಲಾದ ಪ್ರಾಣಿಗಳನ್ನು ಮತ್ತು ಬಾಣಗಳನ್ನು ಬಳಸಿ ಅದೃಷ್ಟ ಪರೀಕ್ಷಿಸುವುದನ್ನು (ನಿಮಗೆ ನಿಷೇಧಿಸಲಾಗಿದೆ). ಇವೆಲ್ಲವೂ ಕೆಟ್ಟ ಪಾಪಗಳಾಗಿವೆ. ಇಂದು ಸತ್ಯನಿಷೇಧಿಗಳು ನಿಮ್ಮ ಧರ್ಮದ ಬಗ್ಗೆ ಹತಾಶರಾಗಿದ್ದಾರೆ. ಆದ್ದರಿಂದ ನೀವು ಅವರನ್ನು ಭಯಪಡಬೇಡಿ. ನನ್ನನ್ನು ಭಯಪಡಿರಿ. ಇಂದು ನಾನು ನಿಮಗೆ ನಿಮ್ಮ ಧರ್ಮವನ್ನು ಪೂರ್ತೀಕರಿಸಿದ್ದೇನೆ. ನನ್ನ ಅನುಗ್ರಹವನ್ನು ನಿಮಗೆ ಸಂಪೂರ್ಣಗೊಳಿಸಿದ್ದೇನೆ. ಇಸ್ಲಾಮನ್ನು ನಿಮಗೆ ಧರ್ಮವಾಗಿ ನಾನು ಅಂಗೀಕರಿಸಿದ್ದೇನೆ. ಹಸಿವು ತಡೆಯಲಾಗದೆ, ನಿಷೇಧಿತ ವಸ್ತುಗಳನ್ನು ತಿನ್ನಲು ನಿರ್ಬಂಧಿತನಾದವನು ಯಾರೋ—ಅವನು ಪಾಪಕ್ಕೆ ವಾಲುವವನಲ್ಲದಿದ್ದರೆ (ಪಾಪ ಮಾಡುವ ಉದ್ದೇಶವನ್ನು ಹೊಂದಿಲ್ಲದಿದ್ದರೆ) ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
Maide 5:4
ಅವರಿಗೆ ಏನೆಲ್ಲಾ ಅನುಮತಿಸಲಾಗಿವೆಯೆಂದು ಅವರು ನಿಮ್ಮೊಡನೆ ಕೇಳುತ್ತಾರೆ. ಹೇಳಿರಿ: “ಎಲ್ಲಾ ಉತ್ತಮ ವಸ್ತುಗಳನ್ನು ನಿಮಗೆ ಅನುಮತಿಸಲಾಗಿದೆ. ಅಲ್ಲಾಹು ನಿಮಗೆ ಕಲಿಸಿಕೊಟ್ಟ ರೀತಿಯಲ್ಲಿ ನೀವು ತರಬೇತಿ ನೀಡಿದ ಬೇಟೆ ಪ್ರಾಣಿಗಳು, ನೀವು ತರಬೇತಿ ನೀಡಿದಂತೆ ಬೇಟೆಯನ್ನು ಹಿಡಿದು ತಂದರೆ ಅವುಗಳನ್ನು ತಿನ್ನಿರಿ. (ಅವುಗಳನ್ನು ಬೇಟೆಗೆ ಕಳುಹಿಸುವಾಗ) ಅಲ್ಲಾಹನ ಹೆಸರನ್ನು ಉಚ್ಛರಿಸಿರಿ. ಅಲ್ಲಾಹನನ್ನು ಭಯಪಡಿರಿ. ನಿಶ್ಚಯವಾಗಿಯೂ ಅಲ್ಲಾಹು ಅತಿವೇಗವಾಗಿ ವಿಚಾರಣೆ ಮಾಡುತ್ತಾನೆ.
Maide 5:5
ಇಂದು ನಿಮಗೆ ಎಲ್ಲಾ ಉತ್ತಮ ವಸ್ತುಗಳನ್ನು ಅನುಮತಿಸಲಾಗಿದೆ. ಗ್ರಂಥದವರು ತಯಾರಿಸಿದ ಆಹಾರವು ನಿಮಗೆ ಧರ್ಮಸಮ್ಮತವಾಗಿದೆ ಮತ್ತು ನೀವು ತಯಾರಿಸಿದ ಆಹಾರವು ಅವರಿಗೆ ಧರ್ಮಸಮ್ಮತವಾಗಿದೆ. ಸತ್ಯವಿಶ್ವಾಸಿಗಳಲ್ಲಿ ಸೇರಿದ ಪರಿಶುದ್ಧ ಮಹಿಳೆಯರು ನಿಮಗೆ ಧರ್ಮಸಮ್ಮತವಾಗಿದ್ದಾರೆ. ಅದೇ ರೀತಿ ನಿಮಗಿಂತ ಮೊದಲು ಗ್ರಂಥ ನೀಡಲಾದವರಲ್ಲಿ ಸೇರಿದ ಪರಿಶುದ್ಧ ಮಹಿಳೆಯರು—ನೀವು ಅವರಿಗೆ ಅವರ ವಧುದಕ್ಷಿಣೆಯನ್ನು (ಮಹರ್) ನೀಡಿದರೆ—ನಿಮಗೆ ಧರ್ಮಸಮ್ಮತವಾಗಿದ್ದಾರೆ. ಆದರೆ ನೀವು ಅವರನ್ನು ವಿವಾಹವಾಗಲು ಬಯಸುವವರಾಗಿರಬೇಕು. ಅವರೊಡನೆ ವ್ಯಭಿಚಾರ ಮಾಡಲು ಅಥವಾ ರಹಸ್ಯವಾಗಿ ಪ್ರೇಮಿಸಲು ಬಯಸುವವರಾಗಿರಬಾರದು. ಯಾರು ಸತ್ಯವಿಶ್ವಾಸವನ್ನು ತಿರಸ್ಕರಿಸುತ್ತಾನೋ ಅವನ ಕರ್ಮವು ನಿಷ್ಫಲವಾಗುವುದು. ಪರಲೋಕದಲ್ಲಿ ಅವನು ನಷ್ಟಹೊಂದಿದವರಲ್ಲಿ ಸೇರಿಕೊಳ್ಳುವನು.
Maide 5:6
ಓ ಸತ್ಯವಿಶ್ವಾಸಿಗಳೇ! ನೀವು ನಮಾಝ್‍ಗಾಗಿ ಸಿದ್ಧರಾದರೆ ನಿಮ್ಮ ಮುಖಗಳನ್ನು ಮತ್ತು ಮೊಣಕೈಗಳವರೆಗೆ ಎರಡು ಕೈಗಳನ್ನು ತೊಳೆಯಿರಿ, ತಲೆಗಳನ್ನು ಸವರಿರಿ ಮತ್ತು ಎರಡು ಕಾಲುಗಳನ್ನು ಹರಡುಗಂಟಿನ ತನಕ ತೊಳೆಯಿರಿ. ನೀವು ದೊಡ್ಡ ಅಶುದ್ಧಿಯಲ್ಲಿದ್ದರೆ (ಸ್ನಾನ ಮಾಡಿ) ಶುದ್ಧರಾಗಿರಿ. ನೀವು ಅನಾರೋಗ್ಯದಲ್ಲಿದ್ದರೆ ಅಥವಾ ಪ್ರಯಾಣದಲ್ಲಿದ್ದರೆ; ಅಥವಾ ನಿಮ್ಮಲ್ಲೊಬ್ಬನು ಮಲಮೂತ್ರ ವಿಸರ್ಜನೆ ಮಾಡಿ ಬಂದಿದ್ದರೆ, ಅಥವಾ ಮಹಿಳೆಯರನ್ನು ಸ್ಪರ್ಶಿಸಿದ್ದರೆ (ಲೈಂಗಿಕ ಸಂಪರ್ಕ ಮಾಡಿದ್ದರೆ); ನಂತರ ನಿಮಗೆ ಶುದ್ಧಿಯಾಗಲು ನೀರು ದೊರೆಯದಿದ್ದರೆ, ಶುದ್ಧ ಮಣ್ಣಿನಿಂದ ತಯಮ್ಮುಮ್ ಮಾಡಿ, ಮುಖ ಮತ್ತು ಕೈಗಳನ್ನು ಸವರಿರಿ. ಅಲ್ಲಾಹು ನಿಮಗೆ ತೊಂದರೆ ಮಾಡಲು ಬಯಸುವುದಿಲ್ಲ. ಆದರೆ ಅವನು ನಿಮ್ಮನ್ನು ಶುದ್ಧೀಕರಿಸಲು ಮತ್ತು ತನ್ನ ಅನುಗ್ರಹವನ್ನು ನಿಮಗೆ ಪೂರ್ತಿ ಮಾಡಿಕೊಡಲು ಬಯಸುತ್ತಾನೆ. ನೀವು ಕೃತಜ್ಞರಾಗುವುದಕ್ಕಾಗಿ.
Maide 5:7
“ನಾವು ಕೇಳಿದ್ದೇವೆ ಮತ್ತು ಅನುಸರಿಸಿದ್ದೇವೆ” ಎಂದು ನೀವು ಹೇಳಿದ ಸಂದರ್ಭ ಅಲ್ಲಾಹು ನಿಮಗೆ ನೀಡಿರುವ ಅನುಗ್ರಹವನ್ನು ಮತ್ತು ಅವನು ನಿಮ್ಮಿಂದ ಬಲಿಷ್ಠ ಕರಾರು ಪಡೆದಿರುವುದನ್ನು ಸ್ಮರಿಸಿರಿ. ಅಲ್ಲಾಹನನ್ನು ಭಯಪಡಿರಿ. ನಿಶ್ಚಯವಾಗಿಯೂ ಅಲ್ಲಾಹು ಹೃದಯಗಳಲ್ಲಿರುವುದನ್ನು ತಿಳಿಯುತ್ತಾನೆ.
Maide 5:8
ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನಿಗಾಗಿ ಸದಾ ದೃಢವಾಗಿ ನಿಂತು ನ್ಯಾಯ-ನಿಷ್ಠೆಗೆ ಸಾಕ್ಷಿಯಾಗಿರಿ. ಕೆಲವು ಜನರೊಡನೆ ನಿಮಗಿರುವ ದ್ವೇಷವು ನ್ಯಾಯಯುತವಾಗಿ ವರ್ತಿಸದಂತೆ ನಿಮ್ಮನ್ನು ಪ್ರೇರೇಪಿಸದಿರಲಿ. ನ್ಯಾಯಯುತವಾಗಿ ನಡೆದುಕೊಳ್ಳಿ. ಅದು ದೇವಭಯಕ್ಕೆ ಅತ್ಯಂತ ಹತ್ತಿರದಲ್ಲಿದೆ. ಅಲ್ಲಾಹನನ್ನು ಭಯಪಡಿರಿ. ನಿಶ್ಚಯವಾಗಿಯೂ ನೀವು ಮಾಡುವುದನ್ನು ಅಲ್ಲಾಹು ಸೂಕ್ಷ್ಮವಾಗಿ ತಿಳಿಯುತ್ತಾನೆ.
Maide 5:9
ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ—ಅವರಿಗೆ ಅಲ್ಲಾಹು ಕ್ಷಮೆ ಮತ್ತು ಮಹಾ ಪ್ರತಿಫಲದ ವಾಗ್ದಾನ ಮಾಡಿದ್ದಾನೆ.
Maide 5:10
ಸತ್ಯನಿಷೇಧಿಗಳು ಮತ್ತು ನಮ್ಮ ವಚನಗಳನ್ನು ನಿಷೇಧಿಸಿದವರು ಯಾರೋ—ಅವರೇ ನರಕವಾಸಿಗಳು.
Maide 5:11
ಓ ಸತ್ಯವಿಶ್ವಾಸಿಗಳೇ! ಜನರು ನಿಮ್ಮ ವಿರುದ್ಧ ತಮ್ಮ ಕೈಗಳನ್ನು ಚಾಚಲು ಮುಂದಾದ ಸಂದರ್ಭ, ಅವರ ಕೈಗಳನ್ನು ನಿಮ್ಮಿಂದ ತಡೆಯುವ ಮೂಲಕ ಅಲ್ಲಾಹು ನಿಮಗೆ ನೀಡಿದ ಅನುಗ್ರಹವನ್ನು ಸ್ಮರಿಸಿರಿ. ಅಲ್ಲಾಹನನ್ನು ಭಯಪಡಿರಿ. ಸತ್ಯವಿಶ್ವಾಸಿಗಳು ಅಲ್ಲಾಹನಲ್ಲಿಯೇ ಭರವಸೆಯಿಡಲಿ.
Maide 5:12
ಅಲ್ಲಾಹು ಇಸ್ರಾಯೇಲ್ ಮಕ್ಕಳಿಂದ ಈಗಾಗಲೇ ಕರಾರನ್ನು ಪಡೆದಿದ್ದಾನೆ. ನಾವು ಅವರಲ್ಲಿ ಹನ್ನೆರಡು ಜನರನ್ನು ಮುಖಂಡರನ್ನಾಗಿ ಮಾಡಿ ಕಳುಹಿಸಿದೆವು. ಅಲ್ಲಾಹು ಹೇಳಿದನು: “ನಿಶ್ಚಯವಾಗಿಯೂ ನಾನು ನಿಮ್ಮ ಜೊತೆಯಲ್ಲಿದ್ದೇನೆ. ನೀವು ನಮಾಝ್ ಸಂಸ್ಥಾಪಿಸಿದರೆ, ಝಕಾತ್ ನೀಡಿದರೆ, ನನ್ನ ಸಂದೇಶವಾಹಕರುಗಳಲ್ಲಿ ವಿಶ್ವಾಸವಿಟ್ಟರೆ, ಅವರಿಗೆ ಬೆಂಬಲ ನೀಡಿದರೆ ಮತ್ತು ಅಲ್ಲಾಹನಿಗೆ ಉತ್ತಮ ಸಾಲವನ್ನು ನೀಡಿದರೆ, ನಿಶ್ಚಯವಾಗಿಯೂ ನಾನು ನಿಮ್ಮ ಪಾಪಗಳನ್ನು ಅಳಿಸುವೆನು ಮತ್ತು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿಗೆ ನಿಮ್ಮನ್ನು ಪ್ರವೇಶ ಮಾಡಿಸುವೆನು. ಆದರೆ ಅದರ ಬಳಿಕವೂ ನಿಮ್ಮಲ್ಲಿ ಸತ್ಯವನ್ನು ನಿಷೇಧಿಸುವವನು ನೇರ ಮಾರ್ಗದಿಂದ ತಪ್ಪಿ ಹೋಗಿದ್ದಾನೆ.”
Maide 5:13
ಅವರು ಕರಾರು ಉಲ್ಲಂಘಿಸಿದ ಕಾರಣ ನಾವು ಅವರನ್ನು ಶಪಿಸಿದೆವು ಮತ್ತು ಅವರ ಹೃದಯಗಳನ್ನು ಕಠೋರಗೊಳಿಸಿದೆವು. ಅವರು ವಚನಗಳನ್ನು ಅದರ ಸ್ಥಾನದಿಂದ ವಿರೂಪಗೊಳಿಸುತ್ತಾರೆ.[1] ಅವರಿಗೆ ಉಪದೇಶ ಮಾಡಲಾದ ಒಂದಂಶವನ್ನು ಅವರು ಮರೆತೇ ಬಿಟ್ಟರು. ಅವರು ಮಾಡುವ ವಂಚನೆಯನ್ನು ನೀವು ಗಮನಿಸುತ್ತಲೇ ಇರುವಿರಿ—ಅವರಲ್ಲಿ ಕೆಲವರ ಹೊರತು. ಆದ್ದರಿಂದ ಅವರನ್ನು ಕ್ಷಮಿಸಿರಿ ಮತ್ತು (ಅವರ ತಪ್ಪನ್ನು) ಕಡೆಗಣಿಸಿರಿ. ನಿಶ್ಚಯವಾಗಿಯೂ ಒಳಿತು ಮಾಡುವವರನ್ನು ಅಲ್ಲಾಹು ಇಷ್ಟಪಡುತ್ತಾನೆ.
———
[1] ಅಂದರೆ ಅವರು ಗ್ರಂಥದ ವಚನಗಳನ್ನು ಅಸಾಂದರ್ಭಿಕವಾಗಿ ಉಲ್ಲೇಖಿಸುತ್ತಾರೆ ಮತ್ತು ತಪ್ಪು ಅರ್ಥಗಳನ್ನು ನೀಡುತ್ತಾರೆ; ಅಥವಾ ವಚನಗಳನ್ನೇ ತಿದ್ದಿ ಬದಲಾಯಿಸುತ್ತಾರೆ.
Maide 5:14
“ನಾವು ಕ್ರೈಸ್ತರು” ಎಂದು ಹೇಳಿದವರಿಂದಲೂ ನಾವು ಕರಾರನ್ನು ಪಡೆದಿದ್ದೇವೆ. ಅವರಿಗೆ ಉಪದೇಶ ಮಾಡಲಾದ ಒಂದಂಶವನ್ನು ಅವರು ಮರೆತುಬಿಟ್ಟರು. ಆದ್ದರಿಂದ ಪುನರುತ್ಥಾನದ ದಿನದ ತನಕ ನಾವು ಅವರ ನಡುವೆ ವೈರ ಮತ್ತು ದ್ವೇಷವನ್ನು ಉಂಟುಮಾಡಿದೆವು. ಅವರು ಮಾಡಿದ ದುಷ್ಕರ್ಮಗಳ ಬಗ್ಗೆ ಅಲ್ಲಾಹು ಸದ್ಯವೇ ಅವರಿಗೆ ತಿಳಿಸಿಕೊಡುವನು.
Maide 5:15
ಓ ಗ್ರಂಥದವರೇ! ನೀವು ಗ್ರಂಥದಿಂದ ಮುಚ್ಚಿಡುವ ಅನೇಕ ವಿಷಯಗಳನ್ನು ಬಹಿರಂಗಪಡಿಸುತ್ತಾ ಮತ್ತು ಹೆಚ್ಚಿನದ್ದನ್ನೂ ಕ್ಷಮಿಸುತ್ತಾ ನಮ್ಮ ಸಂದೇಶವಾಹಕರು ನಿಮ್ಮ ಬಳಿಗೆ ಬಂದಿದ್ದಾರೆ. ನಿಮಗೆ ಅಲ್ಲಾಹನಿಂದ ಒಂದು ಬೆಳಕು ಮತ್ತು ಸ್ಪಷ್ಟ ಗ್ರಂಥವು ಬಂದಿದೆ.
Maide 5:16
ತನ್ನ ಸಂಪ್ರೀತಿಯನ್ನು ಹಿಂಬಾಲಿಸುವವರಿಗೆ ಅಲ್ಲಾಹು ಅದರ ಮೂಲಕ ಶಾಂತಿಯ ಮಾರ್ಗಗಳನ್ನು ತೋರಿಸಿಕೊಡುವನು. ಅವನು ತನ್ನ ಅಪ್ಪಣೆಯಿಂದ ಅವರನ್ನು ಅಂಧಕಾರಗಳಿಂದ ಬೆಳಕಿಗೆ ಹೊರತರುವನು ಮತ್ತು ಅವರನ್ನು ನೇರಮಾರ್ಗಕ್ಕೆ ಮುನ್ನಡೆಸುವನು.
Maide 5:17
“ಮರ್ಯಮರ ಮಗ ಮಸೀಹನೇ ಅಲ್ಲಾಹು” ಎಂದು ಹೇಳಿದವರು ಖಂಡಿತವಾಗಿಯೂ ಸತ್ಯವನ್ನು ನಿಷೇಧಿಸಿದ್ದಾರೆ. ಹೇಳಿರಿ: “ಅಲ್ಲಾಹು ಮರ್ಯಮರ ಮಗ ಮಸೀಹರನ್ನು, ಅವರ ತಾಯಿಯನ್ನು ಮತ್ತು ಭೂಮಿಯಲ್ಲಿರುವ ಸರ್ವ ಮಾನವರನ್ನು ನಾಶ ಮಾಡಲು ಬಯಸಿದರೆ ಅವನನ್ನು ತಡೆಯಲು ಯಾರಿಗೆ ಸಾಧ್ಯವಿದೆ?” ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಆಧಿಪತ್ಯವು ಅಲ್ಲಾಹನಿಗೆ ಸೇರಿದ್ದು. ಅವನು ಇಚ್ಛಿಸುವುದನ್ನು ಅವನು ಸೃಷ್ಟಿಸುತ್ತಾನೆ. ಅಲ್ಲಾಹು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
Maide 5:18
ಯಹೂದಿಗಳು ಮತ್ತು ಕ್ರೈಸ್ತರು ಹೇಳುತ್ತಾರೆ: “ನಾವು ಅಲ್ಲಾಹನ ಮಕ್ಕಳು ಮತ್ತು ಅವನ ಪ್ರೀತಿಪಾತ್ರರು.”[1] ಹೇಳಿರಿ: “ಹಾಗಾದರೆ, ನೀವು ತಪ್ಪು ಮಾಡಿದರೆ ಅವನು ನಿಮ್ಮನ್ನು ಶಿಕ್ಷಿಸುವುದೇಕೆ?” ಅಲ್ಲ, ವಾಸ್ತವವಾಗಿ ನೀವೆಲ್ಲರೂ ಅವನ ಸೃಷ್ಟಿಗಳಲ್ಲಿ ಸೇರಿದ ಮನುಷ್ಯರು. ಅವನು ಇಚ್ಛಿಸುವವರಿಗೆ ಅವನು ಕ್ಷಮಿಸುತ್ತಾನೆ ಮತ್ತು ಅವನು ಇಚ್ಛಿಸುವವರನ್ನು ಶಿಕ್ಷಿಸುತ್ತಾನೆ. ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಆಧಿಪತ್ಯವು ಅಲ್ಲಾಹನಿಗೆ ಸೇರಿದ್ದು. ನೀವೆಲ್ಲರೂ ಅವನ ಬಳಿಗೇ ಮರಳಿ ಹೋಗಬೇಕಾಗಿದೆ.
———
[1] ಯಹೂದಿಗಳು ಉಝೈರ್‌ರನ್ನು ಮತ್ತು ಕ್ರೈಸ್ತರು ಈಸಾರನ್ನು ಅಲ್ಲಾಹನ ಮಗನೆಂದು ಕರೆಯುತ್ತಿದ್ದರು. ಅಷ್ಟೇ ಅಲ್ಲದೆ, ಸ್ವತಃ ತಮ್ಮನ್ನು ದೇವರ ಮಕ್ಕಳು ಮತ್ತು ದೇವರ ಪ್ರೀತಿಪಾತ್ರರೆಂದು ಅಹಂಭಾವದಿಂದ ಹೇಳುತ್ತಿದ್ದರು.
Maide 5:19
ಓ ಗ್ರಂಥದವರೇ! ಸಂದೇಶವಾಹಕರ ಆಗಮನವು ನಿಂತುಹೋದ ಬಳಿಕ ಇಗೋ ಸತ್ಯವನ್ನು ವಿವರಿಸಿಕೊಡುತ್ತಾ ನಮ್ಮ ಸಂದೇಶವಾಹಕರು ನಿಮ್ಮ ಬಳಿಗೆ ಬಂದಿದ್ದಾರೆ. “ಒಬ್ಬ ಸುವಾರ್ತೆ ನೀಡುವವನು ಮತ್ತು ಮುನ್ನೆಚ್ಚರಿಕೆ ನೀಡುವವನು ನಮ್ಮ ಬಳಿಗೆ ಬರಲಿಲ್ಲ” ಎಂದು ನೀವು ಹೇಳದಿರುವುದಕ್ಕಾಗಿ. ಇಗೋ ನಿಮ್ಮ ಬಳಿಗೆ ಸುವಾರ್ತೆ ತಿಳಿಸುವ ಮತ್ತು ಮುನ್ನೆಚ್ಚರಿಕೆ ನೀಡುವ ಪ್ರವಾದಿಯು ಬಂದಿದ್ದಾರೆ. ಅಲ್ಲಾಹು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
Maide 5:20
ಮೂಸಾ ತಮ್ಮ ಜನರೊಡನೆ ಹೇಳಿದ ಸಂದರ್ಭ: “ಓ ನನ್ನ ಜನರೇ! ಅಲ್ಲಾಹು ನಿಮ್ಮ ಬಳಿಗೆ ಪ್ರವಾದಿಗಳನ್ನು ಕಳುಹಿಸಿದಾಗ, ನಿಮ್ಮನ್ನು ಅರಸರನ್ನಾಗಿ ಮಾಡಿದಾಗ ಮತ್ತು ಸರ್ವಲೋಕದವರಲ್ಲಿ ಯಾರಿಗೂ ನೀಡದ ಅನೇಕ ಸವಲತ್ತುಗಳನ್ನು ನೀಡಿ ನಿಮ್ಮನ್ನು ಹರಸಿದಾಗ ಅಲ್ಲಾಹು ನಿಮಗೆ ಮಾಡಿದ ಉಪಕಾರವನ್ನು ಸ್ಮರಿಸಿರಿ.
Maide 5:21
ಓ ನನ್ನ ಜನರೇ! ಅಲ್ಲಾಹು ನಿಮಗೆ ಲಿಖಿತಗೊಳಿಸಿದ ಪವಿತ್ರ ಭೂಮಿಯನ್ನು ಪ್ರವೇಶಿಸಿರಿ. ನೀವು ಬೆನ್ನು ತಿರುಗಿಸಿ ಹಿಂದಿರುಗಬೇಡಿ. ಹಾಗೆ ಮಾಡಿದರೆ ನೀವು ನಷ್ಟಹೊಂದಿದವರಾಗಿ ಬಿಡುವಿರಿ.”[1]
———
[1] ಯೂಸುಫರು (ಅವರ ಮೇಲೆ ಶಾಂತಿಯಿರಲಿ) ಈಜಿಪ್ಟಿನಲ್ಲಿ ರಾಜನಾದಾಗ ಇಸ್ರಾಯೇಲ್ ಮಕ್ಕಳು ಅಲ್ಲಿಗೆ ತೆರಳಿ ಅಲ್ಲಿ ವಾಸಿಸತೊಡಗಿದರು. ನಂತರ ಈಜಿಪ್ಟನ್ನು ಆಳಿದ ಫರೋಹಗಳ ಕೈಯಲ್ಲಿ ಅವರು ಕ್ರೂರ ಹಿಂಸೆಯನ್ನು ಮತ್ತು ಗುಲಾಮಗಿರಿಯನ್ನು ಅನುಭವಿಸಬೇಕಾಗಿ ಬಂತು. ಪವಿತ್ರ ಭೂಮಿಯಲ್ಲಿ (ಪ್ಯಾಲಸ್ತೀನ್‍ನಲ್ಲಿ) ಅವರನ್ನು ವಾಸ ಮಾಡಿಸುವೆನೆಂದು ಅಲ್ಲಾಹು ಅವರಿಗೆ ಪ್ರವಾದಿಗಳ ಮೂಲಕ ವಾಗ್ದಾನ ಮಾಡಿದ್ದನು. ಆದರೆ ಅವರು ವೀರಾವೇಶದಿಂದ ಯುದ್ಧ ಮಾಡಿ ಆ ಭೂಮಿಯನ್ನು ಗೆಲ್ಲಬೇಕಾಗಿತ್ತು. ಆದರೆ ಇಸ್ರಾಯೇಲರು ಯುದ್ಧ ಮಾಡಲು ಹಿಂಜರಿದರು. ಅವರ ಅವಿಧೇಯತೆಯಿಂದಾಗಿ ಅಲ್ಲಾಹು ಅವರಿಗೆ ನಲ್ವತ್ತು ವರ್ಷಗಳ ಕಾಲ ಸೀನಾ ಮರುಭೂಮಿಯಲ್ಲಿ ಅಲೆಯುವ ಶಿಕ್ಷೆಯನ್ನು ನೀಡಿದನು. ಈ ಮಧ್ಯೆ ಮೂಸಾ ಮತ್ತು ಹಾರೂನ್ (ಅವರ ಮೇಲೆ ಶಾಂತಿಯಿರಲಿ) ನಿಧನರಾದರು. ನಂತರ ಯೂಶಅ್ ರ (ಅವರ ಮೇಲೆ ಶಾಂತಿಯಿರಲಿ) ಕಾಲದಲ್ಲಿ ಅವರಿಗೆ ಪವಿತ್ರ ಭೂಮಿಯಲ್ಲಿ ವಾಸ ಮಾಡಲು ಸಾಧ್ಯವಾಯಿತು.
Maide 5:22
ಅವರು ಹೇಳಿದರು: “ಓ ಮೂಸಾ! ಅಲ್ಲಿ ಮಹಾ ಪರಾಕ್ರಮಿಗಳಾದ ಜನರಿದ್ದಾರೆ. ಅವರು ಅಲ್ಲಿಂದ ಹೊರಟುಹೋಗುವ ತನಕ ನಾವು ಅದನ್ನು ಪ್ರವೇಶಿಸುವುದಿಲ್ಲ. ಅವರೇನಾದರೂ ಹೊರಟುಬಿಟ್ಟರೆ ನಾವು ಖಂಡಿತ ಅದನ್ನು ಪ್ರವೇಶಿಸುವೆವು.”
Maide 5:23
ದೇವಭಯವುಳ್ಳ ಜನರಲ್ಲಿ ಅಲ್ಲಾಹನ ಅನುಗ್ರಹಕ್ಕೆ ಪಾತ್ರರಾದ ಇಬ್ಬರು ಹೇಳಿದರು: “ನೀವು ಹೆಬ್ಬಾಗಿಲ ಮೂಲಕ ಅದರೊಳಗೆ ಪ್ರವೇಶಿಸಿರಿ. ನೀವು ಪ್ರವೇಶಿಸಿದರೆ, ನಿಶ್ಚಯವಾಗಿಯೂ ನೀವು ಜಯಶಾಲಿಗಳಾಗುವಿರಿ. ನೀವು ಸತ್ಯವಿಶ್ವಾಸಿಗಳಾಗಿದ್ದರೆ ಅಲ್ಲಾಹನಲ್ಲಿ ಭರವಸೆಯಿಡಿರಿ.”
Maide 5:24
ಅವರು ಹೇಳಿದರು: “ಓ ಮೂಸಾ! ಅವರು ಅಲ್ಲಿರುವ ತನಕ ನಾವು ಅದನ್ನು ಪ್ರವೇಶಿಸುವುದೇ ಇಲ್ಲ. ಆದ್ದರಿಂದ ನೀವು ಮತ್ತು ನಿಮ್ಮ ಪರಿಪಾಲಕ (ಅಲ್ಲಾಹು) ಹೋಗಿ ಯುದ್ಧ ಮಾಡಿರಿ. ನಾವು ಇಲ್ಲೇ ಕುಳಿತುಕೊಳ್ಳುತ್ತೇವೆ.”
Maide 5:25
ಮೂಸಾ ಹೇಳಿದರು: “ಓ ನನ್ನ ಪರಿಪಾಲಕನೇ! ನಾನು ಮತ್ತು ನನ್ನ ಸಹೋದರ ಮಾತ್ರ ನನ್ನ ನಿಯಂತ್ರಣದಲ್ಲಿದ್ದಾರೆ. ಆದ್ದರಿಂದ ನಮ್ಮನ್ನು ಮತ್ತು ವಿಧೇಯತೆಯಿಲ್ಲದ ಈ ಜನರನ್ನು ಪರಸ್ಪರ ಬೇರ್ಪಡಿಸು.”
Maide 5:26
ಅಲ್ಲಾಹು ಹೇಳಿದನು: “ನಿಶ್ಚಯವಾಗಿಯೂ ನಲ್ವತ್ತು ವರ್ಷಗಳ ಕಾಲ ಆ ಭೂಮಿಯನ್ನು ಅವರಿಗೆ ನಿಷೇಧಿಸಲಾಗಿದೆ. (ಅಲ್ಲಿಯ ತನಕ) ಅವರು ಭೂಮಿಯಲ್ಲಿ ಗೊತ್ತುಗುರಿಯಿಲ್ಲದೆ ಅಲೆದಾಡುವರು. ವಿಧೇಯತೆಯಿಲ್ಲದ ಆ ಜನರ ಬಗ್ಗೆ ನೀವು ವ್ಯಥೆಪಡಬೇಡಿ.”
Maide 5:27
ಅವರಿಗೆ ಆದಮರ ಇಬ್ಬರು ಮಕ್ಕಳ ಸಮಾಚಾರವನ್ನು ಸತ್ಯಸಹಿತ ಓದಿ ಕೊಡಿ. ಅವರಿಬ್ಬರು ಬಲಿ ಅರ್ಪಿಸಿದ ಸಂದರ್ಭ. ಆಗ ಅವರಲ್ಲಿ ಒಬ್ಬನ ಬಲಿ ಸ್ವೀಕಾರವಾದರೆ ಇನ್ನೊಬ್ಬನದ್ದು ಸ್ವೀಕಾರವಾಗಲಿಲ್ಲ. ಅವನು (ಬಲಿ ಸ್ವೀಕಾರವಾಗದವನು) ಹೇಳಿದನು: “ನಾನು ನಿನ್ನನ್ನು ಖಂಡಿತ ಕೊಲ್ಲುತ್ತೇನೆ.” ಇನ್ನೊಬ್ಬನು ಹೇಳಿದನು: “ಅಲ್ಲಾಹು ದೇವಭಯವುಳ್ಳವರಿಂದ ಮಾತ್ರ ಸ್ವೀಕರಿಸುತ್ತಾನೆ.
Maide 5:28
ನನ್ನನ್ನು ಕೊಲ್ಲಲು ನೀನು ನಿನ್ನ ಕೈಯನ್ನು ನನ್ನ ಕಡೆಗೆ ಚಾಚಿದರೂ ನಾನು ನಿನ್ನನ್ನು ಕೊಲ್ಲಲು ನನ್ನ ಕೈಯನ್ನು ನಿನ್ನ ಕಡೆಗೆ ಚಾಚುವುದಿಲ್ಲ. ನಿಶ್ಚಯವಾಗಿಯೂ ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನನ್ನು ನಾನು ಭಯಪಡುತ್ತೇನೆ.
Maide 5:29
ನೀನು ನನ್ನ ಪಾಪ ಮತ್ತು ನಿನ್ನ ಪಾಪದೊಂದಿಗೆ ಹಿಂದಿರುಗಿ ನರಕವಾಸಿಗಳಲ್ಲಿ ಸೇರಬೇಕೆಂದು ನಾನು ಬಯಸುತ್ತೇನೆ. ಅದು ಅಕ್ರಮಿಗಳಿಗೆ ದೊರೆಯುವ ಪ್ರತಿಫಲವಾಗಿದೆ.”
Maide 5:30
ಆಗ ಅವನ ಸಹೋದರನನ್ನು ಕೊಲ್ಲುವಂತೆ ಅವನ ಮನಸ್ಸು ಅವನನ್ನು ಪ್ರೇರೇಪಿಸಿತು. ಅವನು ಅವನನ್ನು ಕೊಂದನು ಮತ್ತು ನಷ್ಟಹೊಂದಿದವರಲ್ಲಿ ಸೇರಿದವನಾದನು.
Maide 5:31
ಆಗ ಅವನ ಸಹೋದರನ ಕಳೇಬರವನ್ನು ದಫನ ಮಾಡುವುದು ಹೇಗೆಂದು ಅವನಿಗೆ ತೋರಿಸಿಕೊಡಲು ಅಲ್ಲಾಹು ಭೂಮಿಯನ್ನು ಅಗೆಯುವ ಒಂದು ಕಾಗೆಯನ್ನು ಕಳುಹಿಸಿದನು. ಅವನು ಹೇಳಿದನು: “ಅಯ್ಯೋ ನನ್ನ ದುರ್ಗತಿಯೇ! ಈ ಕಾಗೆಯಂತೆ ನನ್ನ ಸಹೋದರನ ಕಳೇಬರವನ್ನು ದಫನ ಮಾಡಲು ಕೂಡ ನನಗೆ ಸಾಧ್ಯವಾಗಲಿಲ್ಲವೇ?” ಹೀಗೆ ಅವನು ವಿಷಾದಪಡುವವರಲ್ಲಿ ಸೇರಿದವನಾದನು.
Maide 5:32
ಇದೇ ಕಾರಣದಿಂದ, ನಾವು ಇಸ್ರಾಯೇಲ್ ಮಕ್ಕಳಿಗೆ ಹೀಗೆ ವಿಧಿಸಿದೆವು: ಕೊಲೆಗೆ ಪ್ರತೀಕಾರವಾಗಿ ಅಥವಾ ಭೂಮಿಯಲ್ಲಿ ಕಿಡಿಗೇಡಿತನ ಮಾಡಿದ್ದಕ್ಕಾಗಿ ಹೊರತು ಒಬ್ಬ ವ್ಯಕ್ತಿಯನ್ನು ಯಾರಾದರೂ ಕೊಂದರೆ ಅದು ಸಂಪೂರ್ಣ ಮನುಕುಲವನ್ನು ಕೊಲ್ಲುವುದಕ್ಕೆ ಸಮಾನವಾಗಿದೆ ಮತ್ತು ಒಬ್ಬ ವ್ಯಕ್ತಿಯ ಜೀವವನ್ನು ಯಾರಾದರೂ ಉಳಿಸಿದರೆ ಅದು ಸಂಪೂರ್ಣ ಮನುಕುಲದ ಜೀವವನ್ನು ಉಳಿಸಿದ್ದಕ್ಕೆ ಸಮಾನವಾಗಿದೆ. ನಮ್ಮ ಸಂದೇಶವಾಹಕರು ಈಗಾಗಲೇ ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಅವರ ಬಳಿಗೆ ಬಂದಿದ್ದಾರೆ. ನಂತರ ಆ ಬಳಿಕವೂ ಅವರಲ್ಲಿ ಅನೇಕ ಮಂದಿ ಭೂಮಿಯಲ್ಲಿ ಅತಿರೇಕವೆಸಗುತ್ತಲೇ ಇದ್ದಾರೆ.
Maide 5:33
ಅಲ್ಲಾಹು ಮತ್ತು ಅವನ ಸಂದೇಶವಾಹಕರ ವಿರುದ್ಧ ಹೋರಾಡುವವರು ಮತ್ತು ಭೂಮಿಯಲ್ಲಿ ಕಿಡಿಗೇಡಿತನ ಮಾಡಲು ಯತ್ನಿಸುವವರು ಯಾರೋ—ಅವರಿಗೆ ನೀಡಲಾಗುವ ಪ್ರತಿಫಲವು ಅವರನ್ನು ಸಾಯಿಸುವುದು, ಅಥವಾ ಶಿಲುಬೆಗೇರಿಸುವುದು, ಅಥವಾ ಅವರ ಕೈಕಾಲುಗಳನ್ನು ವಿರುದ್ಧ ದಿಕ್ಕಿನಿಂದ ಕತ್ತರಿಸುವುದು ಅಥವಾ ಅವರನ್ನು ಗಡಿಪಾರು ಮಾಡುವುದು ಮಾತ್ರವಾಗಿದೆ. ಅದು ಅವರಿಗೆ ಇಹಲೋಕದಲ್ಲಿರುವ ಅಪಮಾನವಾಗಿದೆ. ಪರಲೋಕದಲ್ಲಿ ಅವರಿಗೆ ಕಠೋರ ಶಿಕ್ಷೆಯಿದೆ.
Maide 5:34
ಆದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲು ನಿಮಗೆ ಸಾಧ್ಯವಾಗುವುದಕ್ಕೆ ಮೊದಲು ಪಶ್ಚಾತ್ತಾಪಪಟ್ಟು ಮರಳಿದವರು ಇದರಿಂದ ಹೊರತಾಗಿದ್ದಾರೆ. ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
Maide 5:35
ಓ ಸತ್ಯವಿಶ್ವಾಸಿಗಳೇ! ಅಲ್ಲಾಹನನ್ನು ಭಯಪಡಿರಿ ಮತ್ತು ಅವನಿಗೆ ಸಮೀಪಗೊಳಿಸುವ ವಸೀಲ (ಮಾಧ್ಯಮ)ವನ್ನು ಹುಡುಕಿರಿ;[1] ಮತ್ತು ಅವನ ಮಾರ್ಗದಲ್ಲಿ ಹೋರಾಡಿರಿ. ನೀವು ಯಶಸ್ವಿಯಾಗುವುದಕ್ಕಾಗಿ.
———
[1] ವಸೀಲ ಎಂದರೆ ಗುರಿ ಸಾಧನೆಗಿರುವ ಮಾಧ್ಯಮ; ಅಥವಾ ಗುರಿಯ ಕಡೆಗೆ ಹತ್ತಿರಗೊಳಿಸುವ ಮಾಧ್ಯಮ. ಅಲ್ಲಾಹನಿಗೆ ಹತ್ತಿರಗೊಳಿಸುವ ಮಾಧ್ಯಮ ಎಂದರೆ ಅಲ್ಲಾಹು ಆದೇಶಿಸಿದ ಕಾರ್ಯಗಳನ್ನು ಮಾಡುವುದು ಮತ್ತು ಅವನು ವಿರೋಧಿಸಿದ ಕಾರ್ಯಗಳಿಂದ ದೂರವಿರುವುದು.
Maide 5:36
ನಿಶ್ಚಯವಾಗಿಯೂ ಸತ್ಯನಿಷೇಧಿಗಳ ಬಳಿ ಭೂಮಿಯಲ್ಲಿರುವ ಎಲ್ಲಾ ವಸ್ತುಗಳೂ ಮತ್ತು ಅದರಷ್ಟೇ ಬೇರೆಯೂ ಇದ್ದು, ಪುನರುತ್ಥಾನ ದಿನದ ಶಿಕ್ಷೆಯಿಂದ ಪಾರಾಗಲು ಅವರು ಅದನ್ನು ಪರಿಹಾರವಾಗಿ ನೀಡಿದರೆ, ಅವರಿಂದ ಅದನ್ನು ಸ್ವೀಕರಿಸಲಾಗುವುದಿಲ್ಲ. ಅವರಿಗೆ ಯಾತನಾಮಯ ಶಿಕ್ಷೆಯಿದೆ.
Maide 5:37
ಅವರು ನರಕದಿಂದ ಹೊರಬರಲು ಬಯಸುವರು. ಆದರೆ ಅದರಿಂದ ಹೊರಬರಲು ಅವರಿಗೆ ಸಾಧ್ಯವಿಲ್ಲ. ಅವರಿಗೆ ಶಾಶ್ವತ ಶಿಕ್ಷೆಯಿದೆ.
Maide 5:38
ಕಳ್ಳತನ ಮಾಡುವವನ ಮತ್ತು ಕಳ್ಳತನ ಮಾಡುವವಳ ಕೈಗಳನ್ನು ಕತ್ತರಿಸಿರಿ. ಅದು ಅವರು ಮಾಡಿದ ದುಷ್ಕರ್ಮಕ್ಕೆ ಪ್ರತಿಫಲವಾಗಿದೆ ಮತ್ತು ಅಲ್ಲಾಹನ ಕಡೆಯ ಶಿಕ್ಷೆಯಾಗಿದೆ. ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
Maide 5:39
ಆದರೆ ಅಕ್ರಮವೆಸಗಿದ ನಂತರ ಪಶ್ಚಾತ್ತಾಪಪಟ್ಟು ಸುಧಾರಿಸಿಕೊಳ್ಳುವವರು ಯಾರೋ—ನಿಶ್ಚಯವಾಗಿಯೂ ಅಲ್ಲಾಹು ಅವರ ಪಶ್ಚಾತ್ತಾಪವನ್ನು ಸ್ವೀಕರಿಸುವನು. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
Maide 5:40
ಭೂಮ್ಯಾಕಾಶಗಳ ಆಧಿಪತ್ಯವು ಅಲ್ಲಾಹನಿಗೆ ಸೇರಿದ್ದೆಂದು ನಿಮಗೆ ತಿಳಿದಿಲ್ಲವೇ? ಅವನು ಇಚ್ಛಿಸುವವರಿಗೆ ಅವನು ಕ್ಷಮಿಸುತ್ತಾನೆ ಮತ್ತು ಅವನು ಇಚ್ಛಿಸುವವರನ್ನು ಶಿಕ್ಷಿಸುತ್ತಾನೆ. ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
Maide 5:41
ಓ ಸಂದೇಶವಾಹಕರೇ! ನಾವು ಸತ್ಯವಿಶ್ವಾಸಿಗಳೆಂದು ಬಾಯಿಂದ ಹೇಳುವವರು—ಆದರೆ ಹೃದಯಗಳಲ್ಲಿ ವಿಶ್ವಾಸವಿಲ್ಲದವರು (ಕಪಟವಿಶ್ವಾಸಿಗಳು) ಮತ್ತು ಸುಳ್ಳನ್ನು ಕಿವಿಗೊಟ್ಟು ಕೇಳುವ, ನಿಮ್ಮ ಬಳಿಗೆ ಬರದ ಜನರ ಮಾತುಗಳನ್ನು ಕಿವಿಗೊಟ್ಟು ಕೇಳುವ, ವಚನಗಳನ್ನು ಅದರ ಸ್ಥಾನದಿಂದ ವಿರೂಪಗೊಳಿಸುವ ಮತ್ತು ನಿಮಗೆ ಪ್ರವಾದಿಯ ಬಳಿ ಇದೇ ತೀರ್ಪು ಸಿಕ್ಕಿದರೆ ಸ್ವೀಕರಿಸಿರಿ, ಇಲ್ಲದಿದ್ದರೆ ಜಾಗರೂಕರಾಗಿರಿ ಎಂದು ಹೇಳುವ ಯಹೂದಿಗಳು ಸತ್ಯನಿಷೇಧದಲ್ಲಿ ತ್ವರೆ ಮಾಡುವುದನ್ನು ಕಂಡು ನೀವು ಬೇಸರಪಡಬೇಡಿ. ಅಲ್ಲಾಹು ಯಾರನ್ನು ನಾಶ ಮಾಡಲು ಬಯಸುತ್ತಾನೋ—ಅವನನ್ನು ಅಲ್ಲಾಹನಿಂದ ರಕ್ಷಿಸಲು ನಿಮಗೆ ಸಾಧ್ಯವಿಲ್ಲ. ಅಲ್ಲಾಹು ಅವರ ಹೃದಯಗಳನ್ನು ಶುದ್ಧೀಕರಿಸಲು ಬಯಸುವುದಿಲ್ಲ. ಅವರಿಗೆ ಇಹಲೋಕದಲ್ಲಿ ಅವಮಾನವಿದೆ ಮತ್ತು ಪರಲೋಕದಲ್ಲಿ ಕಠೋರ ಶಿಕ್ಷೆಯಿದೆ.
Maide 5:42
ಅವರು ಸುಳ್ಳನ್ನು ಕಿವಿಗೊಟ್ಟು ಕೇಳುವವರು ಮತ್ತು ನಿಷಿದ್ಧ ಧನವನ್ನು ತಿನ್ನುವವರಾಗಿದ್ದಾರೆ. ಅವರು ನಿಮ್ಮ ಬಳಿಗೆ (ತೀರ್ಪಿಗಾಗಿ) ಬಂದರೆ ನೀವು ಅವರ ನಡುವೆ ತೀರ್ಪು ನೀಡಿರಿ ಅಥವಾ ಅವರನ್ನು ನಿರ್ಲಕ್ಷಿಸಿರಿ. ನೀವು ಅವರನ್ನು ನಿರ್ಲಕ್ಷಿಸಿದರೆ ಅವರು ನಿಮಗೆ ಯಾವುದೇ ತೊಂದರೆ ಮಾಡಲಾರರು. ಇನ್ನು ನೀವು ತೀರ್ಪು ನೀಡುವುದಾದರೆ ಅವರ ನಡುವೆ ನ್ಯಾಯಯುತವಾಗಿ ತೀರ್ಪು ನೀಡಿರಿ. ನಿಶ್ಚಯವಾಗಿಯೂ ನ್ಯಾಯಯುತವಾಗಿ ವರ್ತಿಸುವವರನ್ನು ಅಲ್ಲಾಹು ಇಷ್ಟಪಡುತ್ತಾನೆ.
Maide 5:43
ಆದರೆ ಅವರ ಬಳಿ ತೌರಾತ್ ಇದ್ದು ಅದರಲ್ಲಿ ಅಲ್ಲಾಹನ ತೀರ್ಪು ಇರುವಾಗ ಅವರು (ಅದನ್ನು ಬಿಟ್ಟು) ತೀರ್ಪಿಗಾಗಿ ನಿಮ್ಮ ಬಳಿಗೆ ಬರುವುದು ಹೇಗೆ? ನಂತರ ಅದರ ಬಳಿಕವೂ ಅವರು ವಿಮುಖರಾಗುತ್ತಾರೆ. ಅವರು ಸತ್ಯವಿಶ್ವಾಸಿಗಳೇ ಅಲ್ಲ.
Maide 5:44
ನಿಶ್ಚಯವಾಗಿಯೂ ನಾವು ತೌರಾತನ್ನು ಅವತೀರ್ಣಗೊಳಿಸಿದ್ದೇವೆ. ಅದರಲ್ಲಿ ಸನ್ಮಾರ್ಗ ಮತ್ತು ಬೆಳಕಿದೆ. (ಅಲ್ಲಾಹನಿಗೆ) ಶರಣಾದ ಪ್ರವಾದಿಗಳು, ದೇವನಿಷ್ಠರು ಮತ್ತು ವಿದ್ವಾಂಸರು ಅದರಲ್ಲಿರುವಂತೆ ಯಹೂದಿಗಳ ನಡುವೆ ತೀರ್ಪು ನೀಡುತ್ತಿದ್ದರು. ಏಕೆಂದರೆ ಅಲ್ಲಾಹನ ಗ್ರಂಥದ ಸಂರಕ್ಷಣೆಯನ್ನು ಅವರಿಗೆ ವಹಿಸಿಕೊಡಲಾಗಿತ್ತು. ಅವರು ಅದಕ್ಕೆ ಸಾಕ್ಷಿಗಳಾಗಿದ್ದರು. ಆದ್ದರಿಂದ ನೀವು ಜನರನ್ನು ಭಯಪಡಬೇಡಿ. ನನ್ನನ್ನು ಭಯಪಡಿರಿ. ನನ್ನ ವಚನಗಳನ್ನು ಕೀಳು ದರಕ್ಕೆ ಮಾರಾಟ ಮಾಡಬೇಡಿ. ಅಲ್ಲಾಹು ಅವತೀರ್ಣಗೊಳಿಸಿದ್ದಕ್ಕೆ ಅನುಗುಣವಾಗಿ ಯಾರು ತೀರ್ಪು ನೀಡುವುದಿಲ್ಲವೋ ಅವರೇ ಸತ್ಯನಿಷೇಧಿಗಳು.
Maide 5:45
ನಾವು ಅವರಿಗೆ ಅದರಲ್ಲಿ (ತೌರಾತ್‍ನಲ್ಲಿ) ಜೀವಕ್ಕೆ ಜೀವ, ಕಣ್ಣಿಗೆ ಕಣ್ಣು, ಮೂಗಿಗೆ ಮೂಗು, ಕಿವಿಗೆ ಕಿವಿ, ಹಲ್ಲಿಗೆ ಹಲ್ಲು ಮತ್ತು ಗಾಯಗಳಿಗೆ ಪ್ರತೀಕಾರ ಪಡೆಯಬೇಕೆಂದು ಆದೇಶಿಸಿದ್ದೇವೆ. ಯಾರಾದರೂ (ಪ್ರತೀಕಾರ ಪಡೆಯದೆ) ಕ್ಷಮಿಸಿದರೆ, ಅದು ಅವನಿಗೆ ಪರಿಹಾರವಾಗಿದೆ. ಅಲ್ಲಾಹು ಅವತೀರ್ಣಗೊಳಿಸಿದ್ದಕ್ಕೆ ಅನುಗುಣವಾಗಿ ಯಾರು ತೀರ್ಪು ನೀಡುವುದಿಲ್ಲವೋ ಅವರೇ ಅಕ್ರಮಿಗಳು.
Maide 5:46
ನಂತರ ಅವರ ಹಿಂದೆಯೇ ನಾವು ಮರ್ಯಮರ ಮಗ ಈಸಾರನ್ನು—ತನ್ನ ಮುಂದಿರುವ ತೌರಾತನ್ನು ದೃಢೀಕರಿಸುವುದಕ್ಕಾಗಿ ಕಳುಹಿಸಿದೆವು. ನಾವು ಅವರಿಗೆ ಇಂಜೀಲನ್ನು ನೀಡಿದೆವು. ಅದರಲ್ಲಿ ಸನ್ಮಾರ್ಗ ಮತ್ತು ಬೆಳಕಿತ್ತು. ಅದು ತನ್ನ ಮುಂದಿರುವ ತೌರಾತನ್ನು ದೃಢೀಕರಿಸುವ ಗ್ರಂಥವಾಗಿದೆ ಮತ್ತು ದೇವಭಯವುಳ್ಳವರಿಗೆ ಮಾರ್ಗದರ್ಶನ ಮತ್ತು ಹಿತೋಪದೇಶವಾಗಿದೆ.
Maide 5:47
ಇಂಜೀಲ್‍ನ ಅನುಯಾಯಿಗಳು ಅಲ್ಲಾಹು ಅದರಲ್ಲಿ ಅವತೀರ್ಣಗೊಳಿಸಿದ್ದಕ್ಕೆ ಅನುಗುಣವಾಗಿ ತೀರ್ಪು ನೀಡಲಿ.[1] ಅಲ್ಲಾಹು ಅವತೀರ್ಣಗೊಳಿಸಿದ್ದಕ್ಕೆ ಅನುಗುಣವಾಗಿ ಯಾರು ತೀರ್ಪು ನೀಡುವುದಿಲ್ಲವೋ ಅವರೇ ದುಷ್ಕರ್ಮಿಗಳು.
———
[1] ಈಸಾರ (ಅವರ ಮೇಲೆ ಶಾಂತಿಯಿರಲಿ) ಪ್ರವಾದಿತ್ವದ ಅವಧಿಯು ಊರ್ಜಿತದಲ್ಲಿದ್ದ ಕಾಲದಲ್ಲಿ ಅವರ ಅನುಯಾಯಿಗಳು ಇಂಜೀಲ್‌ನಲ್ಲಿರುವ ನಿಯಮಗಳ ಪ್ರಕಾರ ತೀರ್ಪು ನೀಡಬೇಕಾಗಿತ್ತು. ಆದರೆ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರು ಪ್ರವಾದಿಯಾದಾಗ ಈಸಾರ (ಅವರ ಮೇಲೆ ಶಾಂತಿಯಿರಲಿ) ಪ್ರವಾದಿತ್ವ ಮುಗಿಯುತ್ತದೆ ಮತ್ತು ಇಂಜೀಲ್‌ನ ನಿಯಮಗಳು ರದ್ದಾಗುತ್ತವೆ. ನಂತರ ಅವರ ಅನುಯಾಯಿಗಳು ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಿಗೆ ಅವತೀರ್ಣವಾದ ಕುರ್‌ಆನ್ ಪ್ರಕಾರ ತೀರ್ಪು ನೀಡಬೇಕಾಗಿದೆ.
Maide 5:48
(ಪ್ರವಾದಿಯವರೇ) ನಿಮಗೂ ನಾವು ಗ್ರಂಥವನ್ನು ಸತ್ಯಸಹಿತ ಅವತೀರ್ಣಗೊಳಿಸಿದ್ದೇವೆ. ಅದು ತನ್ನ ಮುಂದಿರುವ ಗ್ರಂಥಗಳನ್ನು ದೃಢೀಕರಿಸುತ್ತದೆ ಮತ್ತು ಅವುಗಳನ್ನು ಸಂರಕ್ಷಿಸುತ್ತದೆ. ಆದ್ದರಿಂದ ಅಲ್ಲಾಹು ಅವತೀರ್ಣಗೊಳಿಸಿದ್ದಕ್ಕೆ ಅನುಗುಣವಾಗಿ ನೀವು ಅವರ ನಡುವೆ ತೀರ್ಪು ನೀಡಿರಿ. ನಿಮಗೆ ಅವತೀರ್ಣವಾದ ಸತ್ಯವನ್ನು ತೊರೆದು ಅವರ ಸ್ವೇಚ್ಛೆಗಳನ್ನು ಹಿಂಬಾಲಿಸಬೇಡಿ. ನಿಮ್ಮಲ್ಲಿ ಪ್ರತಿಯೊಂದು ಸಮುದಾಯಕ್ಕೂ ನಾವು ಒಂದು ಧರ್ಮಶಾಸ್ತ್ರ ಮತ್ತು ಕರ್ಮಮಾರ್ಗವನ್ನು ನಿಶ್ಚಯಿಸಿದ್ದೇವೆ. ಅಲ್ಲಾಹು ಇಚ್ಛಿಸಿದ್ದರೆ ನಿಮ್ಮೆಲ್ಲರನ್ನೂ ಒಂದೇ ಸಮುದಾಯವಾಗಿ ಮಾಡುತ್ತಿದ್ದನು. ಆದರೆ ಅವನು ನಿಮಗೆ ಏನು ನೀಡಿದ್ದಾನೋ ಅದರಲ್ಲಿ ನಿಮ್ಮನ್ನು ಪರೀಕ್ಷಿಸಲು (ಇಚ್ಛಿಸುತ್ತಾನೆ). ಆದ್ದರಿಂದ ನೀವು ಸತ್ಕರ್ಮಗಳಲ್ಲಿ ತ್ವರೆಯಿಂದ ಮುನ್ನುಗ್ಗಿರಿ. ನೀವೆಲ್ಲರೂ ಅಲ್ಲಾಹನ ಬಳಿಗೇ ಮರಳಬೇಕಾಗಿದೆ. ಆಗ ನೀವು ಭಿನ್ನಮತ ತಳೆದ ವಿಷಯಗಳ ಬಗ್ಗೆ ಅವನು ನಿಮಗೆ ತಿಳಿಸಿಕೊಡುವನು.
Maide 5:49
ಅಲ್ಲಾಹು ಅವತೀರ್ಣಗೊಳಿಸಿದ್ದಕ್ಕೆ ಅನುಗುಣವಾಗಿ ಅವರ ನಡುವೆ ತೀರ್ಪು ನೀಡಿರಿ. ಅವರ ಸ್ವೇಚ್ಛೆಗಳನ್ನು ಹಿಂಬಾಲಿಸಬೇಡಿ. ಅಲ್ಲಾಹು ನಿಮಗೆ ಅವತೀರ್ಣಗೊಳಿಸಿದ ಯಾವುದಾದರೂ ಆದೇಶದಿಂದ ಅವರು ನಿಮ್ಮನ್ನು ತಪ್ಪಿಸಿಬಿಡುವ ಬಗ್ಗೆ ಜಾಗರೂಕರಾಗಿರಿ. ಅವರೇನಾದರೂ ವಿಮುಖರಾದರೆ, ತಿಳಿಯಿರಿ! ಅವರ ಕೆಲವು ಪಾಪಗಳ ಕಾರಣದಿಂದ ಅಲ್ಲಾಹು ಅವರನ್ನು ಶಿಕ್ಷಿಸಲು ಬಯಸುತ್ತಿದ್ದಾನೆ. ನಿಶ್ಚಯವಾಗಿಯೂ ಮನುಷ್ಯರಲ್ಲಿ ಹೆಚ್ಚಿನವರೂ ದುಷ್ಕರ್ಮಿಗಳಾಗಿದ್ದಾರೆ.
Maide 5:50
ಅವರು ಅಜ್ಞಾನಕಾಲದ ತೀರ್ಪನ್ನು ಬಯಸುತ್ತಿದ್ದಾರೆಯೇ? ದೃಢವಿಶ್ವಾಸವಿಡುವ ಜನರಿಗೆ ಅಲ್ಲಾಹನಿಗಿಂತಲೂ ಉತ್ತಮವಾಗಿ ತೀರ್ಪು ನೀಡುವವನು ಯಾರು?
Maide 5:51
ಓ ಸತ್ಯವಿಶ್ವಾಸಿಗಳೇ! ಯಹೂದಿಗಳನ್ನು ಮತ್ತು ಕ್ರೈಸ್ತರನ್ನು ಆಪ್ತಮಿತ್ರರಾಗಿ ಸ್ವೀಕರಿಸಬೇಡಿ. ಅವರು ಪರಸ್ಪರ ಆಪ್ತಮಿತ್ರರಾಗಿದ್ದಾರೆ. ನಿಮ್ಮಲ್ಲಿ ಯಾರು ಅವರನ್ನು ಆಪ್ತಮಿತ್ರರಾಗಿ ಸ್ವೀಕರಿಸುತ್ತಾನೋ ಅವನು ಅವರಲ್ಲಿ ಸೇರುತ್ತಾನೆ. ನಿಶ್ಚಯವಾಗಿಯೂ ಅಕ್ರಮಿಗಳಾದ ಜನರಿಗೆ ಅಲ್ಲಾಹು ಸನ್ಮಾರ್ಗ ತೋರಿಸುವುದಿಲ್ಲ.
Maide 5:52
ಹೃದಯಗಳಲ್ಲಿ ರೋಗವಿರುವವರು (ಕಪಟವಿಶ್ವಾಸಿಗಳು) ಅವರೊಡನೆ ಸೇರಲು ತ್ವರೆ ಮಾಡುವುದನ್ನು ನೀವು ಕಾಣುವಿರಿ. ಅವರು ಹೇಳುತ್ತಾರೆ: “ನಮಗೇನಾದರೂ ಆಪತ್ತು ಸಂಭವಿಸಬಹುದೆಂದು ನಮಗೆ ಭಯವಾಗುತ್ತಿದೆ.” ಆದರೆ ಅಲ್ಲಾಹು ನಿಮಗೆ ಗೆಲುವನ್ನು ಅಥವಾ ತನ್ನ ಕಡೆಯ ಏನಾದರೂ ಆದೇಶವನ್ನು ನೀಡಬಹುದು. ಆಗ ಅವರು ತಮ್ಮ ಮನಸ್ಸಿನಲ್ಲಿ ರಹಸ್ಯವಾಗಿಟ್ಟ ವಿಚಾರಗಳನ್ನು ನೆನೆದು ವಿಷಾದಪಡುವರು.
Maide 5:53
ಸತ್ಯವಿಶ್ವಾಸಿಗಳು ಹೇಳುವರು: “ನಾವು ನಿಮ್ಮ ಜೊತೆಯಲ್ಲೇ ಇದ್ದೇವೆ ಎಂದು ಅಲ್ಲಾಹನ ಮೇಲೆ ಬಲವಾಗಿ ಆಣೆ ಮಾಡಿದವರು ಇವರೇ ಏನು?” ಅವರ ಕರ್ಮಗಳು ನಿಷ್ಫಲವಾದವು ಮತ್ತು ಅವರು ನಷ್ಟಹೊಂದಿದವರಾಗಿ ಬಿಟ್ಟರು.
Maide 5:54
ಓ ಸತ್ಯವಿಶ್ವಾಸಿಗಳೇ! ನಿಮ್ಮಲ್ಲಿ ಯಾರಾದರೂ ಧರ್ಮಪರಿತ್ಯಾಗ ಮಾಡಿದರೆ, ಸದ್ಯವೇ ಅಲ್ಲಾಹು (ನಿಮ್ಮ ಬದಲಿಗೆ) ಬೇರೆ ಜನರನ್ನು ತರುವನು. ಅವನು ಅವರನ್ನು ಪ್ರೀತಿಸುವನು ಮತ್ತು ಅವರು ಅವನನ್ನು ಪ್ರೀತಿಸುವರು. ಅವರು ಸತ್ಯವಿಶ್ವಾಸಿಗಳ ಮುಂದೆ ದೈನ್ಯತೆ ಮತ್ತು ಸತ್ಯನಿಷೇಧಿಗಳ ಮುಂದೆ ಪೌರುಷವನ್ನು ಪ್ರಕಟಿಸುವರು. ಅವರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುವರು ಮತ್ತು ಆಕ್ಷೇಪಿಸುವವನ ಯಾವುದೇ ಆಕ್ಷೇಪಕ್ಕೂ ಭಯಪಡಲಾರರು. ಅದು ಅಲ್ಲಾಹನ ಔದಾರ್ಯವಾಗಿದೆ. ಅವನು ಇಚ್ಛಿಸುವವರಿಗೆ ಅದನ್ನು ನೀಡುತ್ತಾನೆ. ಅಲ್ಲಾಹು ವಿಶಾಲನು ಮತ್ತು ಸರ್ವಜ್ಞನಾಗಿದ್ದಾನೆ.[1]
———
[1] ಇಸ್ಲಾಂ ಧರ್ಮದ ಅಸ್ತಿತ್ವವು ನಿಮ್ಮನ್ನು ಅವಲಂಬಿಸಿಲ್ಲ. ನೀವು ಧರ್ಮಪರಿತ್ಯಾಗ ಮಾಡಿದರೆ ಅಲ್ಲಾಹು ನಿಮ್ಮ ಸ್ಥಾನದಲ್ಲಿ ಬೇರೆ ಜನರನ್ನು ತರುವನು. ಅವರಿಗೆ ನಾಲ್ಕು ವಿಶೇಷತೆಗಳಿರುವುದು. 1. ಅವರನ್ನು ಅಲ್ಲಾಹು ಪ್ರೀತಿಸುತ್ತಾನೆ ಮತ್ತು ಅವರು ಅಲ್ಲಾಹನನ್ನು ಪ್ರೀತಿಸುತ್ತಾರೆ. 2. ಅವರು ಸತ್ಯವಿಶ್ವಾಸಿಗಳೊಂದಿಗೆ ಮೃದುವಾಗಿ ವರ್ತಿಸುತ್ತಾರೆ ಮತ್ತು ಸತ್ಯನಿಷೇಧಿಗಳೊಂದಿಗೆ ಕಠೋರವಾಗಿ ವರ್ತಿಸುತ್ತಾರೆ. 3. ಅವರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುತ್ತಾರೆ. 4. ಅವರು ಅಲ್ಲಾಹನ ವಿಷಯದಲ್ಲಿ ಯಾರನ್ನೂ ಭಯಪಡುವುದಿಲ್ಲ.
Maide 5:55
ಅಲ್ಲಾಹು, ಅವನ ಸಂದೇಶವಾಹಕರು ಮತ್ತು ನಮಾಝ್ ಸಂಸ್ಥಾಪಿಸುವ, ಝಕಾತ್ ನೀಡುವ ಹಾಗೂ ಭಯಭಕ್ತಿಯಿಂದ ತಲೆಬಾಗುವ ಸತ್ಯವಿಶ್ವಾಸಿಗಳೇ ನಿಮ್ಮ ಆಪ್ತಮಿತ್ರರು.
Maide 5:56
ಅಲ್ಲಾಹನನ್ನು, ಅವನ ಸಂದೇಶವಾಹಕರನ್ನು ಮತ್ತು ಸತ್ಯವಿಶ್ವಾಸಿಗಳನ್ನು ಯಾರು ಆಪ್ತಮಿತ್ರರಾಗಿ ಸ್ವೀಕರಿಸುತ್ತಾರೋ—ನಿಶ್ಚಯವಾಗಿಯೂ ಅಲ್ಲಾಹನ ಪಕ್ಷದವರೇ ವಿಜಯಿಗಳು.
Maide 5:57
ಓ ಸತ್ಯವಿಶ್ವಾಸಿಗಳೇ! ನಿಮಗಿಂತ ಮೊದಲು ಗ್ರಂಥ ನೀಡಲಾದವರಲ್ಲಿ (ಯಹೂದಿಗಳು ಮತ್ತು ಕ್ರೈಸ್ತರಲ್ಲಿ) ನಿಮ್ಮ ಧರ್ಮವನ್ನು ತಮಾಷೆ ಮತ್ತು ಆಟದ ವಸ್ತುವಾಗಿ ಸ್ವೀಕರಿಸಿದವರನ್ನು ಮತ್ತು ಸತ್ಯನಿಷೇಧಿಗಳನ್ನು ನೀವು ಆಪ್ತಮಿತ್ರರಾಗಿ ಸ್ವೀಕರಿಸಬೇಡಿ. ನೀವು ಸತ್ಯವಿಶ್ವಾಸಿಗಳಾಗಿದ್ದರೆ ಅಲ್ಲಾಹನನ್ನು ಭಯಪಡಿರಿ.
Maide 5:58
ನೀವು ನಮಾಝ್‍ಗಾಗಿ ಕರೆ ನೀಡಿದರೆ, ಅವರು ಅದನ್ನು ತಮಾಷೆ ಮತ್ತು ಆಟದ ವಸ್ತುವಾಗಿ ಸ್ವೀಕರಿಸುತ್ತಾರೆ. ಅದೇಕೆಂದರೆ ಅವರು ಬುದ್ಧಿಯಿಲ್ಲದ ಜನರಾಗಿದ್ದಾರೆ.
Maide 5:59
ಹೇಳಿರಿ: “ಓ ಗ್ರಂಥದವರೇ! ನಾವು ಅಲ್ಲಾಹನಲ್ಲಿ, ನಮಗೆ ಅವತೀರ್ಣವಾದ ಗ್ರಂಥದಲ್ಲಿ ಮತ್ತು ನಮಗಿಂತ ಮೊದಲು ಅವತೀರ್ಣವಾದ ಗ್ರಂಥದಲ್ಲಿ ವಿಶ್ವಾಸವಿಟ್ಟಿದ್ದೇವೆಂಬ ಕಾರಣದಿಂದ ಮತ್ತು ನಿಮ್ಮಲ್ಲಿ ಹೆಚ್ಚಿನವರೂ ದುಷ್ಕರ್ಮಿಗಳಾಗಿರುವ ಕಾರಣದಿಂದ ನೀವು ನಮ್ಮನ್ನು ದ್ವೇಷಿಸುತ್ತೀರಾ?”
Maide 5:60
ಹೇಳಿರಿ: “ಅಲ್ಲಾಹನ ಬಳಿ ಅದಕ್ಕಿಂತಲೂ ಕೆಟ್ಟ ಪ್ರತಿಫಲವನ್ನು ಹೊಂದಿರುವವರ ಬಗ್ಗೆ ನಾನು ನಿಮಗೆ ತಿಳಿಸಿಕೊಡಲೇ? ಯಾರನ್ನು ಅಲ್ಲಾಹು ಶಪಿಸಿದನೋ, ಯಾರ ಮೇಲೆ ಅವನು ಸಿಟ್ಟಾದನೋ, ಯಾವ ಗುಂಪಿಗೆ ಸೇರಿದವರನ್ನು ಅವನು ಕಪಿಗಳನ್ನಾಗಿ ಮತ್ತು ಹಂದಿಗಳನ್ನಾಗಿ ಮಾಡಿದನೋ, ಯಾರು ಮಿಥ್ಯ ದೇವರುಗಳನ್ನು ಆರಾಧಿಸಿದರೋ, ಅವರೇ ಅತ್ಯಂತ ತುಚ್ಛ ಸ್ಥಾನದಲ್ಲಿರುವವರು ಮತ್ತು ನೇರಮಾರ್ಗದಿಂದ ಅತಿಯಾಗಿ ತಪ್ಪಿಹೋದವರು.”
Maide 5:61
ನಿಮ್ಮ ಬಳಿ ಬಂದಾಗ, ಅವರು ಹೇಳುತ್ತಾರೆ: “ನಾವು ವಿಶ್ವಾಸವಿಟ್ಟಿದ್ದೇವೆ.” ವಾಸ್ತವವಾಗಿ ಅವರು ಸತ್ಯನಿಷೇಧದೊಂದಿಗೇ ಬಂದಿದ್ದರು ಮತ್ತು ಅವರು ಸತ್ಯನಿಷೇಧದೊಂದಿಗೇ ಹೊರಟುಹೋದರು. ಅವರು ಅಡಗಿಸಿಡುವ ವಿಷಯಗಳನ್ನು ಅಲ್ಲಾಹು ಬಹಳ ಚೆನ್ನಾಗಿ ತಿಳಿದಿದ್ದಾನೆ.
Maide 5:62
ಅವರಲ್ಲಿ ಹೆಚ್ಚಿನವರೂ ಪಾಪಗಳಲ್ಲಿ, ಅತಿಕ್ರಮಗಳಲ್ಲಿ ಮತ್ತು ನಿಷಿದ್ಧ ಧನವನ್ನು ತಿನ್ನುವುದರಲ್ಲಿ ತ್ವರೆ ಮಾಡುವುದನ್ನು ನೀವು ಕಾಣುವಿರಿ. ಅವರು ಮಾಡುವ ಕರ್ಮಗಳು ಬಹಳ ನಿಕೃಷ್ಟವಾಗಿವೆ!
Maide 5:63
ಅವರು ಕೆಟ್ಟ ಮಾತುಗಳನ್ನು ಹೇಳುವುದನ್ನು ಮತ್ತು ನಿಷಿದ್ಧ ಧನ ತಿನ್ನುವುದನ್ನು ಅವರಲ್ಲಿರುವ ದೇವನಿಷ್ಠರು ಮತ್ತು ವಿದ್ವಾಂಸರು ಏಕೆ ವಿರೋಧಿಸುವುದಿಲ್ಲ? ಅವರು ಮಾಡುವ ಕೆಲಸಗಳು ಬಹಳ ನಿಕೃಷ್ಟವಾಗಿವೆ.
Maide 5:64
“ಅಲ್ಲಾಹನ ಕೈಗಳನ್ನು ಸಂಕೋಲೆಯಿಂದ ಬಂಧಿಸಲಾಗಿದೆ” ಎಂದು ಯಹೂದಿಗಳು ಹೇಳಿದರು.[1] ಅವರ ಕೈಗಳನ್ನೇ ಸಂಕೋಲೆಯಿಂದ ಬಂಧಿಸಲಾಗಿದೆ ಮತ್ತು ಅವರ ಈ ಮಾತಿನಿಂದಾಗಿ ಅವರು ಅಲ್ಲಾಹನ ಶಾಪಕ್ಕೆ ಗುರಿಯಾಗಿದ್ದಾರೆ. ಅಲ್ಲ, ವಾಸ್ತವವಾಗಿ ಅಲ್ಲಾಹನ ಎರಡು ಕೈಗಳೂ ಚಾಚಿಕೊಂಡಿವೆ. ಅವನು ಇಚ್ಛಿಸುವಂತೆ ಅವನು ಖರ್ಚು ಮಾಡುತ್ತಾನೆ. ನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾದ ಸಂದೇಶವು ಅವರಲ್ಲಿ ಹೆಚ್ಚಿನವರಿಗೆ ಅತಿರೇಕ ಮತ್ತು ಸತ್ಯನಿಷೇಧವನ್ನು ಹೆಚ್ಚಿಸುತ್ತಿದೆ. ಪುನರುತ್ಥಾನದ ದಿನದ ತನಕ ನಾವು ಅವರ ನಡುವೆ ವೈರ ಮತ್ತು ದ್ವೇಷವನ್ನು ಉಂಟು ಮಾಡಿದ್ದೇವೆ. ಅವರು ಯುದ್ಧಕ್ಕೆ ಬೆಂಕಿ ಉರಿಸಿದಾಗಲೆಲ್ಲಾ ಅಲ್ಲಾಹು ಅದನ್ನು ನಂದಿಸುತ್ತಾನೆ. ಅವರು ಭೂಮಿಯಲ್ಲಿ ಕಿಡಿಗೇಡಿತನ ಮಾಡಲು ಪರಿಶ್ರಮಿಸುತ್ತಾರೆ. ಆದರೆ ಅಲ್ಲಾಹು ಕಿಡಿಗೇಡಿಗಳನ್ನು ಇಷ್ಟಪಡುವುದಿಲ್ಲ.
———
[1] ಬರಗಾಲ ಮತ್ತು ಸಂಕಷ್ಟಗಳು ಸಂಭವಿಸಿದಾಗ, ಅಲ್ಲಾಹನ ಕೈಗಳನ್ನು ಸಂಕೋಲೆಯಿಂದ ಬಂಧಿಸಲಾಗಿದೆಯೆಂದು ಯಹೂದಿಗಳು ಹೇಳುತ್ತಿದ್ದರು.
Maide 5:65
ಗ್ರಂಥದವರು ವಿಶ್ವಾಸವಿಟ್ಟಿದ್ದರೆ ಮತ್ತು ದೇವಭಯದಿಂದ ಜೀವಿಸಿದ್ದರೆ ನಾವು ಅವರ ಪಾಪಗಳನ್ನು ಅಳಿಸುತ್ತಿದ್ದೆವು ಮತ್ತು ಅನುಗ್ರಹಪೂರ್ಣ ಸ್ವರ್ಗೋದ್ಯಾನಗಳಿಗೆ ಅವರನ್ನು ಪ್ರವೇಶ ಮಾಡಿಸುತ್ತಿದ್ದೆವು.
Maide 5:66
ಅವರು ತೌರಾತ್, ಇಂಜೀಲ್ ಮತ್ತು ಅವರಿಗೆ ಅವರ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾದ ಸಂದೇಶಗಳನ್ನು ಸರಿಯಾಗಿ ಸಂಸ್ಥಾಪಿಸುತ್ತಿದ್ದರೆ ಅವರ ಮೇಲ್ಭಾಗದಿಂದ ಮತ್ತು ಕಾಲುಗಳ ಅಡಿಭಾಗದಿಂದ ಅವರಿಗೆ ತಿನ್ನಲು ಆಹಾರವು ದೊರೆಯುತ್ತಿತ್ತು. ಅವರಲ್ಲಿ ಮಿತವಾದಿಗಳಾದ ಜನರಿದ್ದಾರೆ. ಆದರೆ ಅವರಲ್ಲಿ ಹೆಚ್ಚಿನವರ ಕರ್ಮಗಳೂ ಅತ್ಯಂತ ನಿಕೃಷ್ಟವಾಗಿವೆ.
Maide 5:67
ಓ ಸಂದೇಶವಾಹಕರೇ! ನಿಮಗೆ ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯಿಂದ ಅವತೀರ್ಣವಾದುದನ್ನು (ಜನರಿಗೆ) ತಲುಪಿಸಿರಿ. ನೀವು ಹಾಗೆ ಮಾಡದಿದ್ದರೆ ನೀವು ಅವನ ಸಂದೇಶವನ್ನು ತಲುಪಿಸಿಲ್ಲ. ಅಲ್ಲಾಹು ನಿಮ್ಮನ್ನು ಜನರಿಂದ ರಕ್ಷಿಸುವನು. ನಿಶ್ಚಯವಾಗಿಯೂ ಅಲ್ಲಾಹು ಸತ್ಯನಿಷೇಧಿಗಳಾದ ಜನರಿಗೆ ಸನ್ಮಾರ್ಗ ತೋರಿಸುವುದಿಲ್ಲ.
Maide 5:68
ಹೇಳಿರಿ: “ಓ ಗ್ರಂಥದವರೇ! ನೀವು ತೌರಾತ್, ಇಂಜೀಲ್ ಮತ್ತು ನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾದ ಸಂದೇಶಗಳನ್ನು ಸರಿಯಾಗಿ ಸಂಸ್ಥಾಪಿಸುವ ತನಕ ನಿಮಗೆ ಯಾವುದೇ ಅಸ್ತಿತ್ವವಿಲ್ಲ.” (ಪ್ರವಾದಿಯವರೇ) ನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾದ ಸಂದೇಶವು ಅವರಲ್ಲಿ ಹೆಚ್ಚಿನವರಿಗೆ ಅತಿರೇಕ ಮತ್ತು ಸತ್ಯನಿಷೇಧವನ್ನು ಹೆಚ್ಚಿಸುತ್ತಿದೆ. ಆದ್ದರಿಂದ ಆ ಸತ್ಯನಿಷೇಧಿಗಳ ಬಗ್ಗೆ ನೀವು ದುಃಖಿಸಬೇಡಿ.
Maide 5:69
ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು, ಯಹೂದಿಗಳು, ಸಾಬಿಗಳು, ಕ್ರೈಸ್ತರು—ಇವರಲ್ಲಿ ಯಾರು ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುತ್ತಾರೋ ಮತ್ತು ಸತ್ಕರ್ಮವೆಸಗುತ್ತಾರೋ ಅವರಿಗೆ ಯಾವುದೇ ಭಯವಿಲ್ಲ; ಅವರು ದುಃಖಿಸುವುದೂ ಇಲ್ಲ.[1]
———
[1] 2:62 ವಚನದ ಟಿಪ್ಪಣಿ ನೋಡಿ.
Maide 5:70
ನಾವು ಇಸ್ರಾಯೇಲ್ ಮಕ್ಕಳಿಂದ ಕರಾರನ್ನು ಪಡೆದೆವು ಮತ್ತು ಅವರ ಬಳಿಗೆ ಸಂದೇಶವಾಹಕರನ್ನು ಕಳುಹಿಸಿದೆವು. ಅವರಿಗೆ ಇಷ್ಟವಿಲ್ಲದ ವಿಷಯಗಳೊಂದಿಗೆ ಸಂದೇಶವಾಹಕರು ಅವರ ಬಳಿಗೆ ಬಂದಾಗಲೆಲ್ಲಾ, ಅವರಲ್ಲಿ ಕೆಲವರನ್ನು ಅವರು ನಿಷೇಧಿಸಿದರು ಮತ್ತು ಕೆಲವರನ್ನು ಕೊಲೆ ಮಾಡಿದರು.
Maide 5:71
ಯಾವುದೇ ಶಿಕ್ಷೆ ಎರಗುವುದಿಲ್ಲವೆಂದು ಅವರು ಭಾವಿಸಿದರು. ಆದ್ದರಿಂದ ಅವರು ಕುರುಡರು ಮತ್ತು ಕಿವುಡರಾದರು. ನಂತರ ಅಲ್ಲಾಹು ಅವರ ಪಶ್ಚಾತ್ತಾಪವನ್ನು ಸ್ವೀಕರಿಸಿದನು. ಅನಂತರ ಪುನಃ ಅವರಲ್ಲಿ ಹೆಚ್ಚಿನವರು ಕುರುಡರು ಮತ್ತು ಕಿವುಡರಾದರು. ಅಲ್ಲಾಹು ಅವರು ಮಾಡುತ್ತಿರುವುದನ್ನು ನೋಡುತ್ತಿದ್ದಾನೆ.
Maide 5:72
“ಮರ್ಯಮರ ಮಗ ಮಸೀಹನೇ ಅಲ್ಲಾಹು” ಎಂದು ಹೇಳಿದವರು ಖಂಡಿತವಾಗಿಯೂ ಸತ್ಯವನ್ನು ನಿಷೇಧಿಸಿದ್ದಾರೆ. ಆದರೆ ಮಸೀಹರು ಹೇಳಿದ್ದೇನೆಂದರೆ: “ಓ ಇಸ್ರಾಯೇಲ್ ಮಕ್ಕಳೇ! ನೀವು ನನ್ನ ಮತ್ತು ನಿಮ್ಮ ಪರಿಪಾಲಕನಾದ ಅಲ್ಲಾಹನನ್ನು ಆರಾಧಿಸಿರಿ.” ಯಾರು ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುತ್ತಾನೋ, ಅವನಿಗೆ ಅಲ್ಲಾಹು ಸ್ವರ್ಗವನ್ನು ಖಂಡಿತ ನಿಷೇಧಿಸಿದ್ದಾನೆ. ಅವನ ವಾಸಸ್ಥಳ ನರಕಾಗ್ನಿಯಾಗಿದೆ.[1] ಅಕ್ರಮಿಗಳಿಗೆ ಯಾವುದೇ ಸಹಾಯಕರಿಲ್ಲ.
———
[1] ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುವುದು ಎಂದರೆ ಅಲ್ಲಾಹನ ಪ್ರಭುತ್ವ, ದೈವತ್ವ ಮತ್ತು ಹೆಸರು ಹಾಗೂ ಗುಣಲಕ್ಷಣಗಳಲ್ಲಿ ಇತರರನ್ನು ಸಹಭಾಗಿಯಾಗಿ ಮಾಡುವುದು. ಈಸಾರನ್ನು ಅಲ್ಲಾಹನ ಮಗ ಅಥವಾ ಅಲ್ಲಾಹು ಎಂದು ಕಲ್ಪಿಸುವುದು ಅಲ್ಲಾಹನೊಂದಿಗೆ ಮಾಡುವ ಸಹಭಾಗಿತ್ವವಾಗಿದೆ. ಅಲ್ಲಾಹನೊಂದಿಗೆ ಸಹಭಾಗಿತ್ವ ಮಾಡುವವರಿಗೆ ಸ್ವರ್ಗವನ್ನು ನಿಷೇಧಿಸಲಾಗಿದೆ. ಅವರು ಶಾಶ್ವತ ನರಕಶಿಕ್ಷೆಗೆ ಗುರಿಯಾಗುತ್ತಾರೆ.
Maide 5:73
“ಅಲ್ಲಾಹು ಮೂವರಲ್ಲಿ ಒಬ್ಬನು” ಎಂದು ಹೇಳಿದವರು ಖಂಡಿತವಾಗಿಯೂ ಸತ್ಯನಿಷೇಧಿಗಳಾಗಿದ್ದಾರೆ.[1] ಆದರೆ ಏಕೈಕ ಆರಾಧ್ಯನಾದ ಅಲ್ಲಾಹನ ಹೊರತು ಅನ್ಯ ದೇವರಿಲ್ಲ. ಅವರು ಹಾಗೆ ಹೇಳುವುದನ್ನು ನಿಲ್ಲಿಸದಿದ್ದರೆ, ಅವರಲ್ಲಿರುವ ಸತ್ಯನಿಷೇಧಿಗಳನ್ನು ಯಾತನಾಮಯ ಶಿಕ್ಷೆಯು ಸ್ಪರ್ಶಿಸುವುದು ನಿಶ್ಚಿತ.
———
[1] ಕ್ರೈಸ್ತರಲ್ಲಿ ಕೆಲವರು ತ್ರಿಯೇಕತ್ವದ ಪರಿಕಲ್ಪನೆಯನ್ನು ಹೊಂದಿದ್ದಾರೆ. ಅಂದರೆ ತಂದೆ (ಅಲ್ಲಾಹು), ಮಗ (ಈಸಾ) ಮತ್ತು ಪವಿತ್ರಾತ್ಮ (ಜಿಬ್ರೀಲ್) ಎಲ್ಲರೂ ದೇವರು ಎಂಬ ಪರಿಕಲ್ಪನೆ.
Maide 5:74
ಅವರಿಗೆ ಅಲ್ಲಾಹನ ಕಡೆಗೆ ಪಶ್ಚಾತ್ತಾಪದಿಂದ ಮರಳಿ ಅವನಲ್ಲಿ ಕ್ಷಮೆಯಾಚಿಸಬಾರದೇ? ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
Maide 5:75
ಮರ್ಯಮರ ಮಗ ಮಸೀಹರು ಒಬ್ಬ ಸಂದೇಶವಾಹಕರು ಮಾತ್ರ. ಅವರಿಗಿಂತ ಮೊದಲು ಅನೇಕ ಸಂದೇಶವಾಹಕರು ಬಂದು ಹೋಗಿದ್ದಾರೆ. ಅವರ ತಾಯಿ ಸತ್ಯವಂತೆ. ಅವರಿಬ್ಬರೂ ಆಹಾರ ಸೇವಿಸುತ್ತಿದ್ದರು. ನಾವು ಅವರಿಗೆ ಹೇಗೆ ದೃಷ್ಟಾಂತಗಳನ್ನು ವಿವರಿಸಿಕೊಡುತ್ತೇವೆಂದು ನೋಡಿ. ನಂತರ ಅವರು ಹೇಗೆ (ಸತ್ಯದಿಂದ) ತಪ್ಪಿಹೋಗುತ್ತಿದ್ದಾರೆಂದು ನೋಡಿ.[1]
———
[1] ಈಸಾ (ಯೇಸು) ದೇವರಲ್ಲ ಎನ್ನುವುದಕ್ಕೆ ಇದು ಸ್ಪಷ್ಟ ಸಾಕ್ಷ್ಯವಾಗಿದೆ. ದೇವನು ನಿರಪೇಕ್ಷ. ಅವನು ಹಸಿವೆ, ನಿದ್ದೆ ಮುಂತಾದ ಮನುಷ್ಯ ಗುಣಗಳಿಂದ ಮುಕ್ತನಾಗಿದ್ದಾನೆ. ಹಸಿವೆಯಿರುವವನು, ಆಹಾರ ಸೇವಿಸುವವನು ದೇವನಾಗಲು ಸಾಧ್ಯವಿಲ್ಲ. ಏಕೆಂದರೆ ಅದು ದೈವಿಕ ಗುಣಕ್ಕೆ ವಿರುದ್ಧವಾಗಿದೆ.
Maide 5:76
ಹೇಳಿರಿ: “ನೀವು ಅಲ್ಲಾಹನನ್ನು ಬಿಟ್ಟು, ನಿಮಗೆ ಉಪಕಾರ ಅಥವಾ ತೊಂದರೆ ಮಾಡದವುಗಳನ್ನು ಆರಾಧಿಸುತ್ತಿದ್ದೀರಾ? ಅಲ್ಲಾಹನಾದರೋ ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.”
Maide 5:77
ಹೇಳಿರಿ: “ಓ ಗ್ರಂಥದವರೇ! ನೀವು ನಿಮ್ಮ ಧರ್ಮದಲ್ಲಿ ಸತ್ಯಕ್ಕೆ ವಿರುದ್ಧವಾಗಿ ಹದ್ದುಮೀರಬೇಡಿ. ಈಗಾಗಲೇ ದಾರಿತಪ್ಪಿರುವ, ಅನೇಕ ಜನರನ್ನು ದಾರಿತಪ್ಪಿಸುತ್ತಿರುವ ಮತ್ತು ನೇರಮಾರ್ಗದಿಂದ ತಪ್ಪಿಹೋಗಿರುವ ಜನರ ಸ್ವೇಚ್ಛಾಚಾರಗಳನ್ನು ಹಿಂಬಾಲಿಸಬೇಡಿ.
Maide 5:78
ಇಸ್ರಾಯೇಲ್ ಮಕ್ಕಳಲ್ಲಿರುವ ಸತ್ಯನಿಷೇಧಿಗಳು ದಾವೂದರ ಮತ್ತು ಮರ್ಯಮರ ಮಗ ಈಸಾರ ನಾಲಗೆಯಿಂದ ಶಾಪಕ್ಕೆ ಗುರಿಯಾಗಿದ್ದಾರೆ. ಅದು ಅವರು ಅವಿಧೇಯತೆ ತೋರಿದ ಮತ್ತು ಅತಿರೇಕವೆಸಗಿದ ಕಾರಣದಿಂದಾಗಿದೆ.
Maide 5:79
ಅವರು ಮಾಡುತ್ತಿದ್ದ ದುಷ್ಕರ್ಮಗಳನ್ನು ಅವರು ಪರಸ್ಪರ ವಿರೋಧಿಸುತ್ತಿರಲಿಲ್ಲ. ಅವರು ಮಾಡುವ ಕರ್ಮಗಳು ಬಹಳ ನಿಕೃಷ್ಟವಾಗಿವೆ.
Maide 5:80
ಅವರಲ್ಲಿ ಹೆಚ್ಚಿನವರು ಸತ್ಯನಿಷೇಧಿಗಳನ್ನು ಆಪ್ತಮಿತ್ರರಾಗಿ ಸ್ವೀಕರಿಸುವುದನ್ನು ನೀವು ಕಾಣುವಿರಿ. ಅವರು ಸ್ವತಃ ಅವರಿಗಾಗಿ ಮುಂದಕ್ಕೆ ಕಳುಹಿಸಿರುವ ಕರ್ಮಗಳು ಬಹಳ ನಿಕೃಷ್ಟವಾಗಿವೆ. (ಇದರಿಂದಾಗಿ) ಅವರು ಅಲ್ಲಾಹನ ಕೋಪಕ್ಕೆ ಪಾತ್ರರಾದರು ಮತ್ತು ಅವರು ಶಾಶ್ವತ ಶಿಕ್ಷೆಯನ್ನು ಅನುಭವಿಸುವರು.
Maide 5:81
ಅವರು ಅಲ್ಲಾಹನಲ್ಲಿ, ಪ್ರವಾದಿಯಲ್ಲಿ ಮತ್ತು ಅವರಿಗೆ (ಪ್ರವಾದಿಗೆ) ಅವತೀರ್ಣವಾಗಿರುವುದರಲ್ಲಿ ವಿಶ್ವಾಸವಿಡುತ್ತಿದ್ದರೆ ಅವರನ್ನು (ಸತ್ಯನಿಷೇಧಿಗಳನ್ನು) ಆಪ್ತಮಿತ್ರರಾಗಿ ಸ್ವೀಕರಿಸುತ್ತಿರಲಿಲ್ಲ. ಆದರೆ ಅವರಲ್ಲಿ ಹೆಚ್ಚಿನವರು ದುಷ್ಕರ್ಮಿಗಳಾಗಿದ್ದಾರೆ.
Maide 5:82
ಯಹೂದಿಗಳು ಮತ್ತು ಬಹುದೇವಾರಾಧಕರು ಸತ್ಯವಿಶ್ವಾಸಿಗಳ ಕಡುವೈರಿಗಳಾಗಿರುವುದನ್ನು ನೀವು ಕಾಣುವಿರಿ. “ನಾವು ಕ್ರೈಸ್ತರು” ಎಂದು ಹೇಳುವವರು ಸತ್ಯವಿಶ್ವಾಸಿಗಳೊಂದಿಗೆ ಅತಿಹತ್ತಿರದ ಮಮತೆಯುಳ್ಳವರಾಗಿ ಕಾಣುವಿರಿ. ಅವರಲ್ಲಿ ವಿದ್ವಾಂಸರು ಮತ್ತು ಸನ್ಯಾಸಿಗಳಿದ್ದಾರೆ ಮತ್ತು ಅವರು ಅಹಂಕಾರಿಗಳಲ್ಲ ಎಂಬುದೇ ಇದಕ್ಕೆ ಕಾರಣವಾಗಿದೆ.
Maide 5:83
ಸಂದೇಶವಾಹಕರಿಗೆ ಅವತೀರ್ಣವಾದ ಸಂದೇಶಕ್ಕೆ ಕಿವಿಗೊಟ್ಟಾಗ, ಸತ್ಯವನ್ನು ತಿಳಿದು ಅವರ ಕಣ್ಣುಗಳಿಂದ ಕಣ್ಣೀರು ಹರಿಯುವುದನ್ನು ನೀವು ಕಾಣುವಿರಿ. ಅವರು ಹೇಳುವರು: “ಓ ನಮ್ಮ ಪರಿಪಾಲಕನೇ! ನಾವು ವಿಶ್ವಾಸವಿಟ್ಟಿದ್ದೇವೆ. ಆದ್ದರಿಂದ ಸತ್ಯಕ್ಕೆ ಸಾಕ್ಷಿಯಾದವರಲ್ಲಿ ನಮ್ಮನ್ನೂ ಸೇರಿಸು.
Maide 5:84
ಅಲ್ಲಾಹನಲ್ಲಿ ಮತ್ತು ನಮಗೆ ಬಂದ ಸಂದೇಶದಲ್ಲಿ ವಿಶ್ವಾಸವಿಡದಿರಲು ನಮಗೇನಾಗಿದೆ? ನಮ್ಮ ಪರಿಪಾಲಕನು (ಅಲ್ಲಾಹು) ನಮ್ಮನ್ನು ನೀತಿವಂತರೊಂದಿಗೆ ಸ್ವರ್ಗ ಪ್ರವೇಶ ಮಾಡಿಸಬೇಕೆಂದು ನಾವು ಆಸೆಪಡುತ್ತೇವೆ.”
Maide 5:85
ಅವರು ಹೇಳಿದ ಮಾತಿನಿಂದಾಗಿ ಅಲ್ಲಾಹು ಅವರಿಗೆ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳನ್ನು ಪ್ರತಿಫಲವಾಗಿ ನೀಡಿದನು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅದು ಒಳಿತು ಮಾಡುವವರಿಗಿರುವ ಪ್ರತಿಫಲವಾಗಿದೆ.
Maide 5:86
ಸತ್ಯನಿಷೇಧಿಗಳು ಮತ್ತು ನಮ್ಮ ವಚನಗಳನ್ನು ನಿಷೇಧಿಸಿದವರು ಯಾರೋ ಅವರೇ ನರಕವಾಸಿಗಳು.
Maide 5:87
ಓ ಸತ್ಯವಿಶ್ವಾಸಿಗಳೇ! ಅಲ್ಲಾಹು ನಿಮಗೆ ಅನುಮತಿಸಿದ ಉತ್ತಮ ವಸ್ತುಗಳನ್ನು ನಿಷೇಧಿಸಬೇಡಿ ಮತ್ತು ಎಲ್ಲೆ ಮೀರಬೇಡಿ. ನಿಶ್ಚಯವಾಗಿಯೂ ಎಲ್ಲೆ ಮೀರುವವರನ್ನು ಅಲ್ಲಾಹು ಇಷ್ಟಪಡುವುದಿಲ್ಲ.
Maide 5:88
ಅಲ್ಲಾಹು ನಿಮಗೆ ಒದಗಿಸಿದ ಧರ್ಮಸಮ್ಮತ ಮತ್ತು ಶುದ್ಧ ವಸ್ತುಗಳನ್ನು ತಿನ್ನಿರಿ. ಯಾರ ಮೇಲೆ ನೀವು ವಿಶ್ವಾಸವಿಡುತ್ತೀರೋ ಆ ಅಲ್ಲಾಹನನ್ನು ಭಯಪಡಿರಿ.
Maide 5:89
ನೀವು ಅರ್ಥವಿಲ್ಲದೆ[1] ಮಾಡುವ ಪ್ರತಿಜ್ಞೆಗಳಿಗಾಗಿ ಅಲ್ಲಾಹು ನಿಮ್ಮನ್ನು ಹಿಡಿಯುವುದಿಲ್ಲ. ಆದರೆ ನೀವು ದೃಢನಿರ್ಧಾರದಿಂದ ಮಾಡಿದ ಪ್ರತಿಜ್ಞೆಗಳಿಗಾಗಿ ಅವನು ನಿಮ್ಮನ್ನು ಹಿಡಿಯುತ್ತಾನೆ. ಅದಕ್ಕೆ ಪರಿಹಾರವೇನೆಂದರೆ, ಹತ್ತು ಮಂದಿ ಬಡವರಿಗೆ ನೀವು ನಿಮ್ಮ ಮನೆಯವರಿಗೆ ಉಣಿಸುವ ಮಧ್ಯಮ ರೀತಿಯ ಆಹಾರವನ್ನು ಉಣಿಸುವುದು, ಅಥವಾ ಅವರಿಗೆ ಬಟ್ಟೆ-ಬರೆ ನೀಡುವುದು, ಅಥವಾ ಒಬ್ಬ ಗುಲಾಮನನ್ನು ಸ್ವತಂತ್ರಗೊಳಿಸುವುದು. ಯಾರಿಗೆ ಇದು ಸಾಧ್ಯವಿಲ್ಲವೋ ಅವನು ಮೂರು ದಿನ ಉಪವಾಸ ಆಚರಿಸಬೇಕು. ಇದು ನೀವು ನಿಮ್ಮ ಪ್ರತಿಜ್ಞೆಗಳನ್ನು ಉಲ್ಲಂಘಿಸಿದರೆ ನೀಡಬೇಕಾದ ಪರಿಹಾರವಾಗಿದೆ. ನಿಮ್ಮ ಪ್ರತಿಜ್ಞೆಗಳನ್ನು ಕಾಯ್ದುಕೊಳ್ಳಿರಿ. ಹೀಗೆ ಅಲ್ಲಾಹು ನಿಮಗೆ ಅವನ ವಚನಗಳನ್ನು ವಿವರಿಸಿಕೊಡುತ್ತಾನೆ. ನೀವು ಕೃತಜ್ಞರಾಗುವುದಕ್ಕಾಗಿ.
———
[1] ಅಂದರೆ ದೃಢನಿರ್ಧಾರವಿಲ್ಲದೆ ಅಭ್ಯಾಸಬಲದಿಂದ ಮಾಡುವ ಪ್ರತಿಜ್ಞೆಗಳು.
Maide 5:90
ಓ ಸತ್ಯವಿಶ್ವಾಸಿಗಳೇ! ನಿಶ್ಚಯವಾಗಿಯೂ ಮದ್ಯ, ಜೂಜು, ಬಲಿಪೀಠಗಳು ಮತ್ತು ಅದೃಷ್ಟ ಪರೀಕ್ಷಿಸುವ ಬಾಣಗಳು ಪೈಶಾಚಿಕವಾದ ಹೊಲಸು ಕೃತ್ಯಗಳಾಗಿವೆ. ಆದ್ದರಿಂದ ನೀವು ಅವುಗಳಿಂದ ದೂರವಿರಿ. ನೀವು ಯಶಸ್ವಿಯಾಗುವುದಕ್ಕಾಗಿ.[1]
———
[1] ಅಮಲು ಪದಾರ್ಥಗಳೆಲ್ಲವೂ ಮದ್ಯದ ವ್ಯಾಪ್ತಿಯಲ್ಲಿ ಬರುತ್ತವೆ. ಲಾಟರಿ, ಮಟ್ಕಾ ಮುಂತಾದ ಹಣವಿಟ್ಟು ಆಡುವ ಆಟಗಳೆಲ್ಲವೂ ಜೂಜಿನ ವ್ಯಾಪ್ತಿಯಲ್ಲಿ ಬರುತ್ತವೆ. ಬಲಿಪೀಠಗಳು ಎಂದರೆ ಬಹುದೇವಾರಾಧಕರು ತಮ್ಮ ವಿಗ್ರಹಗಳಿಗೆ ಬಲಿ ನೀಡುವ ಪೀಠಗಳು. ಅದೃಷ್ಟ ಪರೀಕ್ಷಿಸುವ ಬಾಣಗಳು ಎಂದರೆ ಶುಭ ಮತ್ತು ಅಶುಭವನ್ನು ಪರೀಕ್ಷಿಸುವುದಕ್ಕಾಗಿ ಚೀಟಿಯೆತ್ತುವುದು. ಶುಭ ಎಂದು ಬಂದರೆ ಕೆಲಸದಲ್ಲಿ ಮುಂದುವರಿಯುವುದು ಮತ್ತು ಅಶುಭ ಎಂದು ಬಂದರೆ ಕೆಲಸವನ್ನು ಮೊಟಕುಗೊಳಿಸುವುದು.
Maide 5:91
ಮದ್ಯ ಮತ್ತು ಜೂಜಿನ ಮೂಲಕ ನಿಮ್ಮ ನಡುವೆ ವೈರ ಹಾಗೂ ದ್ವೇಷವನ್ನು ಬಿತ್ತಲು ಮತ್ತು ನಿಮ್ಮನ್ನು ಅಲ್ಲಾಹನ ಸ್ಮರಣೆ ಹಾಗೂ ನಮಾಝ್‍ನಿಂದ ತಡೆಯಲು ಶೈತಾನನು ಬಯಸುತ್ತಾನೆ. ಆದ್ದರಿಂದ (ಇನ್ನಾದರೂ) ನೀವು ಅದನ್ನು ನಿಲ್ಲಿಸುವಿರಾ?
Maide 5:92
ನೀವು ಅಲ್ಲಾಹನ ಆಜ್ಞೆಗಳನ್ನು ಮತ್ತು ಸಂದೇಶವಾಹಕರ ಆಜ್ಞೆಗಳನ್ನು ಪಾಲಿಸಿರಿ ಮತ್ತು ಜಾಗರೂಕರಾಗಿರಿ. ನೀವು ವಿಮುಖರಾದರೆ ತಿಳಿಯಿರಿ! ನಮ್ಮ ಸಂದೇಶವಾಹಕರ ಕರ್ತವ್ಯವು ಸಂದೇಶವನ್ನು ಸ್ಪಷ್ಟವಾಗಿ ತಲುಪಿಸಿಕೊಡುವುದು ಮಾತ್ರವಾಗಿದೆ.
Maide 5:93
ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಈ ಹಿಂದೆ ಏನು ಸೇವಿಸಿದ್ದಾರೋ ಅದರಲ್ಲಿ ಅವರಿಗೆ ದೋಷವಿಲ್ಲ—ಅವರು ಅಲ್ಲಾಹನನ್ನು ಭಯಪಟ್ಟು, ವಿಶ್ವಾಸವಿಟ್ಟು, ಸತ್ಕರ್ಮವೆಸಗಿದರೆ, ನಂತರ ಪುನಃ ಅಲ್ಲಾಹನನ್ನು ಭಯಪಟ್ಟು ವಿಶ್ವಾಸವಿಟ್ಟರೆ ಮತ್ತು ನಂತರ ಪುನಃ ಅಲ್ಲಾಹನನ್ನು ಭಯಪಟ್ಟು ಒಳಿತು ಮಾಡಿದರೆ. ಒಳಿತು ಮಾಡುವವರನ್ನು ಅಲ್ಲಾಹು ಇಷ್ಟಪಡುತ್ತಾನೆ.[1]
———
[1] ಇಸ್ಲಾಮ್ ಮದ್ಯಪಾನವನ್ನು ಹಂತ ಹಂತವಾಗಿ ನಿಷೇಧಿಸಿತು. ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸುವುದಕ್ಕೆ ಮೊದಲು ಅದರ ಹಾನಿಗಳ ಬಗ್ಗೆ ಎಚ್ಚರಿಸಲಾಯಿತು. ಪಾನಮತ್ತರಾದ ಸ್ಥಿತಿಯಲ್ಲಿ ನಮಾಝ್ ಮಾಡುವುದನ್ನು ವಿರೋಧಿಸಲಾಯಿತು. ಇನ್ನಾದರೂ ನೀವು ಅದನ್ನು ನಿಲ್ಲಿಸುವಿರಾ ಎಂಬ ವಚನದ (91) ಮೂಲಕ ಸಂಪೂರ್ಣ ಪಾನನಿಷೇಧ ಜಾರಿಗೆ ಬಂತು. ಪಾನನಿಷೇಧ ಸಂಪೂರ್ಣ ಜಾರಿಯಾಗುವ ಮೊದಲು ಮದ್ಯಪಾನ ಮಾಡಿದವರಿಗೆ ಶಿಕ್ಷೆಯಿಲ್ಲ ಎಂದು ಈ ವಚನವು ಸ್ಪಷ್ಟಪಡಿಸುತ್ತದೆ.
Maide 5:94
ಓ ಸತ್ಯವಿಶ್ವಾಸಿಗಳೇ! ಅದೃಶ್ಯ ಸ್ಥಿತಿಯಲ್ಲಿ ಅಲ್ಲಾಹನನ್ನು ಭಯಪಡುವವರು ಯಾರೆಂದು ತಿಳಿಯಲು, ನಿಮ್ಮ ಕೈಗಳು ಮತ್ತು ಈಟಿಗಳು ತಲುಪುವ ರೀತಿಯಲ್ಲಿರುವ ಬೇಟೆ ಪ್ರಾಣಿಯ ಮೂಲಕ ಅಲ್ಲಾಹು ನಿಮ್ಮನ್ನು ಖಂಡಿತ ಪರೀಕ್ಷಿಸುವನು. ಅದರ ಬಳಿಕವೂ ಯಾರಾದರೂ ಅತಿರೇಕವೆಸಗಿದರೆ ಅವನಿಗೆ ಯಾತನಾಮಯ ಶಿಕ್ಷೆಯಿದೆ.
Maide 5:95
ಓ ಸತ್ಯವಿಶ್ವಾಸಿಗಳೇ! ನೀವು ಇಹ್ರಾಮ್‍ನಲ್ಲಿರುವಾಗ ಬೇಟೆಯಾಡಿ ಪ್ರಾಣಿಯನ್ನು ಕೊಲ್ಲಬೇಡಿ. ನಿಮ್ಮಲ್ಲಿ ಯಾರಾದರೂ ಉದ್ದೇಶಪೂರ್ವಕ ಬೇಟೆಯಾಡಿ ಪ್ರಾಣಿಯನ್ನು ಕೊಂದರೆ, ಅದಕ್ಕಿರುವ ಪರಿಹಾರವು ಅವನು ಕೊಂದ ಮೃಗವನ್ನು ಹೋಲುತ್ತದೆಯೆಂದು ಇಬ್ಬರು ನ್ಯಾಯಸಮ್ಮತ ಜನರು ತೀರ್ಪು ನೀಡುವ ಪ್ರಾಣಿಯನ್ನು ಕಅಬಾಲಯಕ್ಕೆ ಹರಕೆಯ ರೂಪದಲ್ಲಿ ತಲುಪುವ ಬಲಿಮೃಗವಾಗಿ ನೀಡುವುದು; ಅಥವಾ ಅದಕ್ಕೆ ಪರಿಹಾರವಾಗಿ ಬಡವರಿಗೆ ಅನ್ನದಾನ ಮಾಡುವುದು; ಅಥವಾ ಅದಕ್ಕೆ ಸಮಾನವಾಗುವಷ್ಟು ಸಂಖ್ಯೆಯ ಉಪವಾಸ ಆಚರಿಸುವುದು.[1] ಅದು ಅವನು ಮಾಡಿದ ಕರ್ಮದ ಫಲವನ್ನು ಅವನು ಅನುಭವಿಸಲಿಕ್ಕಾಗಿ. ಈ ಹಿಂದೆ ಸಂಭವಿಸಿದ ತಪ್ಪುಗಳನ್ನು ಅಲ್ಲಾಹು ಕ್ಷಮಿಸಿದ್ದಾನೆ. ಆದರೆ ಯಾರಾದರೂ ಅದನ್ನು ಪುನರಾವರ್ತಿಸಿದರೆ, ಅಲ್ಲಾಹು ಅವನಿಂದ ಪ್ರತೀಕಾರವನ್ನು ಪಡೆಯುವನು. ಅಲ್ಲಾಹು ಪ್ರಬಲನು ಮತ್ತು ಪ್ರತೀಕಾರ ಪಡೆಯುವವನಾಗಿದ್ದಾನೆ.
———
[1] ಇಹ್ರಾಮ್‌ನಲ್ಲಿರುವಾಗ ಉದ್ದೇಶಪೂರ್ವಕ ಬೇಟೆಯಾಡಿದರೆ, ಅದಕ್ಕೆ ನೀಡಬೇಕಾದ ಪರಿಹಾರವೇನೆಂದರೆ, ಕೊಂದ ಪ್ರಾಣಿಗೆ ಸಮಾನವೆಂದು ಇಬ್ಬರು ನ್ಯಾಯಸಮ್ಮತ ವ್ಯಕ್ತಿಗಳು ತೀರ್ಪು ನೀಡುವ ಜಾನುವಾರನ್ನು (ಕುರಿ, ಹಸು, ಒಂಟೆ) ಬಲಿ ನೀಡಿ ಹರಮ್‌ನಲ್ಲಿರುವ ಬಡವರಿಗೆ ಹಂಚುವುದು. ಸಮಾನವಾದ ಜಾನುವಾರು ಸಿಗದಿದ್ದರೆ, ಆ ಜಾನುವಾರಿನ ಮೌಲ್ಯದ ಆಹಾರವನ್ನು ಒಬ್ಬ ಬಡವನಿಗೆ ಅರ್ಧ ಸಾಅ್ ಎಂಬಂತೆ ದಾನ ಮಾಡುವುದು. ಅಥವಾ ಪ್ರತಿ ಅರ್ಧ ಸಾಅ್‌ಗೆ ಒಂದು ಉಪವಾಸ ಎಂಬಂತೆ ಉಪವಾಸ ಆಚರಿಸುವುದು.
Maide 5:96
ನಿಮಗೆ ಸಮುದ್ರ ಬೇಟೆ ಮತ್ತು ಅದರ ಆಹಾರವು ಧರ್ಮಸಮ್ಮತವಾಗಿದೆ. ಇದು ನಿಮಗೆ ಮತ್ತು ಪ್ರಯಾಣಿಕರಿಗೆ ಒಂದು ಅನುಕೂಲವಾಗಿರುವುದಕ್ಕಾಗಿ. ನೀವು ಇಹ್ರಾಮ್‍ನಲ್ಲಿರುವ ತನಕ ನಿಮಗೆ ನೆಲದಲ್ಲಿ ಬೇಟೆಯಾಡುವುದನ್ನು ನಿಷೇಧಿಸಲಾಗಿದೆ. ಯಾರ ಬಳಿಗೆ ನಿಮ್ಮನ್ನು ಒಟ್ಟುಗೂಡಿಸಲಾಗುತ್ತದೋ ಆ ಅಲ್ಲಾಹನನ್ನು ಭಯಪಡಿರಿ.
Maide 5:97
ಪವಿತ್ರ ಭವನವಾದ ಕಅಬಾಲಯವನ್ನು ಮತ್ತು ಯುದ್ಧ ನಿಷೇಧಿತ ತಿಂಗಳನ್ನು ಅಲ್ಲಾಹು ಜನರ ಅಸ್ತಿತ್ವಕ್ಕೆ ಆಧಾರವಾಗಿ ಮಾಡಿದ್ದಾನೆ. (ಅದೇ ರೀತಿ) ಬಲಿಮೃಗವನ್ನು ಮತ್ತು (ಅವುಗಳ) ಕೊರಳಪಟ್ಟಿಗಳನ್ನು ಸಹ. ಇದೇಕೆಂದರೆ, ನಿಶ್ಚಯವಾಗಿಯೂ ಭೂಮ್ಯಾಕಾಶಗಳಲ್ಲಿರುವುದೆಲ್ಲವನ್ನೂ ಅಲ್ಲಾಹು ತಿಳಿದಿದ್ದಾನೆ ಮತ್ತು ನಿಶ್ಚಯವಾಗಿಯೂ ಅಲ್ಲಾಹನಿಗೆ ಎಲ್ಲಾ ವಿಷಯಗಳ ಬಗ್ಗೆ ಸಂಪೂರ್ಣ ಜ್ಞಾನವಿದೆಯೆಂದು ನೀವು ತಿಳಿಯುವುದಕ್ಕಾಗಿದೆ.
Maide 5:98
ತಿಳಿಯಿರಿ! ಅಲ್ಲಾಹು ಕಠೋರವಾಗಿ ಶಿಕ್ಷಿಸುವವನಾಗಿದ್ದಾನೆ ಮತ್ತು ಅಲ್ಲಾಹು ಕ್ಷಮಿಸುವವನು ಹಾಗೂ ದಯೆ ತೋರುವವನಾಗಿದ್ದಾನೆ.
Maide 5:99
ಸಂದೇಶವಾಹಕರ ಕರ್ತವ್ಯವು ಸಂದೇಶವನ್ನು ತಲುಪಿಸಿಕೊಡುವುದು ಮಾತ್ರ. ನೀವು ಬಹಿರಂಗಪಡಿಸುವುದನ್ನು ಹಾಗೂ ರಹಸ್ಯವಾಗಿಡುವುದನ್ನು ಅಲ್ಲಾಹು ತಿಳಿಯುತ್ತಾನೆ.
Maide 5:100
ಹೇಳಿರಿ: “ಹೊಲಸು ಮತ್ತು ಶುದ್ಧ ವಸ್ತುಗಳು ಸಮಾನವಲ್ಲ. ಹೊಲಸುಗಳ ಹೆಚ್ಚಳವು ನಿಮ್ಮನ್ನು ಅಚ್ಚರಿಗೊಳಿಸಿದರೂ ಸಹ!” ಆದ್ದರಿಂದ ಓ ಬುದ್ಧಿವಂತರೇ! ಅಲ್ಲಾಹನನ್ನು ಭಯಪಡಿರಿ. ನೀವು ಯಶಸ್ವಿಯಾಗುವುದಕ್ಕಾಗಿ.
Maide 5:101
ಓ ಸತ್ಯವಿಶ್ವಾಸಿಗಳೇ! ಕೆಲವು ವಿಷಯಗಳ ಬಗ್ಗೆ ನೀವು ಪ್ರಶ್ನಿಸಬೇಡಿ. ಅವುಗಳನ್ನು ನಿಮಗೆ ವಿವರಿಸಲಾದರೆ ನಿಮಗೆ ಸಂಕಷ್ಟವಾಗಬಹುದು. ಕುರ್‌ಆನ್ ಅವತೀರ್ಣವಾಗುವಾಗ ನೀವು ಅವುಗಳ ಬಗ್ಗೆ ಪ್ರಶ್ನಿಸಿದರೆ, ಅವುಗಳನ್ನು ನಿಮಗೆ ವಿವರಿಸಿಕೊಡಲಾಗುವುದು. (ಹಿಂದೆ ಸಂಭವಿಸಿದ್ದಕ್ಕೆ) ಅಲ್ಲಾಹು ನಿಮ್ಮನ್ನು ಕ್ಷಮಿಸಿದ್ದಾನೆ. ಅಲ್ಲಾಹು ಕ್ಷಮಿಸುವವನು ಮತ್ತು ಸಹಿಷ್ಣುತೆಯುಳ್ಳನಾಗಿದ್ದಾನೆ.
Maide 5:102
ನಿಮಗಿಂತ ಮೊದಲಿನ ಜನರು ಅವುಗಳ ಬಗ್ಗೆ ಪ್ರಶ್ನಿಸಿದ್ದರು. ನಂತರ ಅವುಗಳ ಕಾರಣದಿಂದ ಅವರು ಸತ್ಯನಿಷೇಧಿಗಳಾದರು.
Maide 5:103
ಬಹೀರ, ಸಾಇಬ, ವಸೀಲ, ಹಾಮ್ ಮುಂತಾದ ಹರಕೆ ಮೃಗಗಳನ್ನು ಅಲ್ಲಾಹು ನೇಮಿಸಿಲ್ಲ.[1] ಆದರೆ ಸತ್ಯನಿಷೇಧಿಗಳು ಅಲ್ಲಾಹನ ಮೇಲೆ ಸುಳ್ಳು ಆರೋಪಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರೂ ಅರ್ಥಮಾಡಿಕೊಳ್ಳದವರಾಗಿದ್ದಾರೆ.
———
[1] ಅನೇಕ ಮರಿಗಳಿಗೆ ಜನ್ಮ ನೀಡಿದ ಜಾನುವಾರಿನ ಕಿವಿಯನ್ನು ಹರಿದು ಮಕ್ಕಾದ ಬಹುದೇವಾರಾಧಕರು ಅದನ್ನು ವಿಗ್ರಹಗಳಿಗೆ ಹರಕೆ ಮಾಡುತ್ತಿದ್ದರು. ಅವರು ಅದನ್ನು ಬಹೀರ ಎಂದು ಕರೆಯುತ್ತಿದ್ದರು. ಕೆಲವು ಜಾನುವಾರುಗಳನ್ನು ಅವರು ವಿಗ್ರಹಗಳಿಗೆ ಹರಕೆ ಮಾಡಿ ಬಿಟ್ಟು ಬಿಡುತ್ತಿದ್ದರು. ಯಾರೂ ಅದನ್ನು ಮುಟ್ಟುತ್ತಿರಲಿಲ್ಲ ಮತ್ತು ತೊಂದರೆ ಕೊಡುತ್ತಿರಲಿಲ್ಲ. ಅವರು ಅದನ್ನು ಸಾಇಬ ಎಂದು ಕರೆಯುತ್ತಿದ್ದರು. ಒಂದು ಪ್ರಾಣಿ ನಿರಂತರ ಹೆಣ್ಣು ಮರಿಗಳಿಗೆ ಜನ್ಮ ನೀಡಿದರೆ ಅವರು ಅದನ್ನು ವಸೀಲ ಎಂದು ಕರೆದು ವಿಗ್ರಹಗಳಿಗೆ ಹರಕೆ ಮಾಡುತ್ತಿದ್ದರು. ಒಂದು ಗಂಡು ಒಂಟೆಯಿಂದ ಅನೇಕ ಮರಿಗಳುಂಟಾದರೆ ಅವರು ಅದನ್ನು ಹಾಮ್ ಎಂದು ಕರೆದು ಹರಕೆ ಮಾಡುತ್ತಿದ್ದರು.
Maide 5:104
“ಅಲ್ಲಾಹು ಅವತೀರ್ಣಗೊಳಿಸಿದ ಸಂದೇಶಕ್ಕೆ ಮತ್ತು ಸಂದೇಶವಾಹಕರ ಬಳಿಗೆ ಬನ್ನಿರಿ” ಎಂದು ಅವರೊಡನೆ ಹೇಳಲಾದರೆ, ಅವರು ಹೇಳುತ್ತಾರೆ: “ನಮ್ಮ ಪೂರ್ವಜರು ಏನು ಮಾಡುವುದಾಗಿ ನಾವು ಕಂಡೆವೋ ಅದು ನಮಗೆ ಸಾಕು.” ಆದರೆ ಅವರ ಪೂರ್ವಜರು ಏನೂ ತಿಳಿಯದವರು ಮತ್ತು ಸನ್ಮಾರ್ಗ ಪಡೆಯದವರಾಗಿದ್ದರೂ ಸಹ (ಅವರಿಗೆ ಅದು ಸಾಕೇ?)
Maide 5:105
ಓ ಸತ್ಯವಿಶ್ವಾಸಿಗಳೇ! ನೀವು ನಿಮ್ಮ ಬಗ್ಗೆ ಜಾಗರೂಕರಾಗಿರಿ. ನೀವು ಸನ್ಮಾರ್ಗಿಗಳಾದರೆ, ದುರ್ಮಾರ್ಗದಲ್ಲಿರುವವರು ನಿಮಗೆ ಯಾವುದೇ ತೊಂದರೆ ಮಾಡಲಾರರು. ನೀವೆಲ್ಲರೂ ಅಲ್ಲಾಹನ ಬಳಿಗೆ ಮರಳಿಹೋಗುವಿರಿ. ಆಗ ಅವನು ನೀವು ಮಾಡಿದ ಕರ್ಮಗಳನ್ನು ನಿಮಗೆ ತಿಳಿಸಿಕೊಡುವನು.
Maide 5:106
ಓ ಸತ್ಯವಿಶ್ವಾಸಿಗಳೇ! ನಿಮ್ಮಲ್ಲೊಬ್ಬನು ಮರಣಶಯ್ಯೆಯಲ್ಲಿದ್ದು ಉಯಿಲು ಮಾಡುವಾಗ, ನಿಮ್ಮಲ್ಲಿನ ಇಬ್ಬರು ನ್ಯಾಯವಂತರು ಅಥವಾ ನಿಮ್ಮವರಲ್ಲದ ಇಬ್ಬರು ಸಾಕ್ಷಿ ನಿಲ್ಲಲಿ—ನೀವು ಭೂಮಿಯಲ್ಲಿ ಪ್ರಯಾಣ ಮಾಡುತ್ತಿರುವಾಗ ನಿಮಗೆ ಮರಣವು ಸನ್ನಿಹಿತವಾದರೆ. ಇನ್ನು ನಿಮಗೆ (ಅವರ ಸಾಕ್ಷಿಯಲ್ಲಿ) ಸಂಶಯವಾದರೆ ನಮಾಝ್ ನಿರ್ವಹಿಸಿದ ನಂತರ ಅವರಿಬ್ಬರನ್ನು ತಡೆದು ನಿಲ್ಲಿಸಿರಿ; ಆಗ ಅವರು ಅಲ್ಲಾಹನ ಮೇಲೆ ಆಣೆ ಮಾಡಿ ಹೀಗೆ ಹೇಳಲಿ: “ನಾವು ಈ ಸಾಕ್ಷಿಗೆ ಬದಲಿಯಾಗಿ ಯಾವುದೇ ಬೆಲೆಯನ್ನು ಪಡೆಯುವುದಿಲ್ಲ, ಅವನು ಹತ್ತಿರದ ಸಂಬಂಧಿಕನಾದರೂ ಸಹ. ಅಲ್ಲಾಹನಿಗಾಗಿರುವ ಸಾಕ್ಷ್ಯವನ್ನು ನಾವು ಅಡಗಿಸುವುದಿಲ್ಲ. ನಾವೇನಾದರೂ ಹಾಗೆ ಮಾಡಿದರೆ ನಿಶ್ಚಯವಾಗಿಯೂ ನಾವು ಪಾಪಿಗಳಲ್ಲಿ ಸೇರುವೆವು.”
Maide 5:107
ಅವರಿಬ್ಬರು ದೋಷಿಗಳೆಂದು ಸಾಬೀತಾದರೆ, ಅವರು ಯಾರಿಗೆ ಅನ್ಯಾಯ ಮಾಡಿದರೋ ಅವರ ಪೈಕಿ ಮೃತ ವ್ಯಕ್ತಿಗೆ ಹೆಚ್ಚು ಆಪ್ತರಾಗಿರುವ ಇಬ್ಬರು ಅವರ ಸ್ಥಾನದಲ್ಲಿ ನಿಂತು, ಅಲ್ಲಾಹನ ಮೇಲೆ ಆಣೆ ಮಾಡಿ, “ಅವರ ಸಾಕ್ಷಿಗಿಂತ ನಮ್ಮ ಸಾಕ್ಷಿಯೇ ಹೆಚ್ಚು ಸತ್ಯವಾಗಿದೆ, ನಾವು ಯಾವುದೇ ಅತಿರೇಕವನ್ನೆಸಗಿಲ್ಲ; ನಾವೇನಾದರೂ ಹಾಗೆ ಮಾಡಿದರೆ ನಾವು ಅಕ್ರಮವೆಸಗಿದವರಲ್ಲಿ ಸೇರುವೆವು” ಎಂದು ಸಾಕ್ಷಿ ಹೇಳಲಿ.
Maide 5:108
ಅವರು ಸರಿಯಾದ ವಿಧದಲ್ಲಿ ಸಾಕ್ಷಿ ನುಡಿಯಲು, ಅಥವಾ ಅವರು ಆಣೆ ಮಾಡಿದ ಬಳಿಕ (ವಾರಸುದಾರರಿಗೆ) ಆಣೆ ಮಾಡಲು ಅವಕಾಶ ನೀಡಲಾಗುವುದೆಂಬ ಭಯವು ಅವರಲ್ಲುಂಟಾಗಲು ಇದು ಹೆಚ್ಚು ಸೂಕ್ತವಾಗಿದೆ. ನೀವು ಅಲ್ಲಾಹನನ್ನು ಭಯಪಡಿರಿ ಮತ್ತು (ಅವನ ಆದೇಶಗಳಿಗೆ) ಕಿವಿಗೊಡಿರಿ. ವಿಧೇಯತೆಯಿಲ್ಲದ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.
Maide 5:109
ಅಲ್ಲಾಹು ಸಂದೇಶವಾಹಕರನ್ನು ಒಟ್ಟುಗೂಡಿಸಿ, “ನಿಮಗೇನು ಉತ್ತರ ಸಿಕ್ಕಿತು?” ಎಂದು ಕೇಳುವ ದಿನ. ಅವರು ಹೇಳುವರು: “ನಮಗೇನೂ ತಿಳಿದಿಲ್ಲ. ನೀನೇ ಅದೃಶ್ಯ ವಿಷಯಗಳನ್ನು ಚೆನ್ನಾಗಿ ತಿಳಿದವನು.”
Maide 5:110
ಅಲ್ಲಾಹು (ಈಸಾರೊಂದಿಗೆ) ಹೇಳುವ ಸಂದರ್ಭ: “ಓ ಮರ್ಯಮರ ಮಗ ಈಸಾ! ನಾನು ಪವಿತ್ರಾತ್ಮನ ಮೂಲಕ ನಿಮಗೆ ಬೆಂಬಲ ನೀಡಿ ನೀವು ತೊಟ್ಟಿಲಲ್ಲಿಯೂ ಮಧ್ಯವಯಸ್ಸಿನಲ್ಲಿಯೂ ಜನರೊಂದಿಗೆ ಮಾತನಾಡುತ್ತಿದ್ದ ಸಂದರ್ಭ; ನಾನು ನಿಮಗೆ ಗ್ರಂಥವನ್ನು, ವಿವೇಕವನ್ನು, ತೌರಾತ್ ಮತ್ತು ಇಂಜೀಲನ್ನು ಕಲಿಸಿಕೊಟ್ಟ ಸಂದರ್ಭ; ನನ್ನ ಅಪ್ಪಣೆಯಂತೆ ನೀವು ಜೇಡಿಮಣ್ಣಿನಿಂದ ಹಕ್ಕಿಯ ರೂಪವನ್ನು ತಯಾರಿಸಿ ಅದರಲ್ಲಿ ಊದಿದಾಗ ನನ್ನ ಅಪ್ಪಣೆಯಿಂದ ಅದು ಹಕ್ಕಿಯಾಗಿ ಮಾರ್ಪಡುತ್ತಿದ್ದ ಸಂದರ್ಭ; ನನ್ನ ಅಪ್ಪಣೆಯಂತೆ ನೀವು ಹುಟ್ಟು ಕುರುಡನನ್ನು ಮತ್ತು ಕುಷ್ಠರೋಗಿಯನ್ನು ಗುಣಪಡಿಸುತ್ತಿದ್ದ ಸಂದರ್ಭ; ನನ್ನ ಅಪ್ಪಣೆಯಂತೆ ನೀವು ಸತ್ತವರನ್ನು (ಸಮಾಧಿಯಿಂದ) ಹೊರತರುತ್ತಿದ್ದ ಸಂದರ್ಭ ಮತ್ತು ನೀವು ಇಸ್ರಾಯೇಲ್ ಮಕ್ಕಳ ಬಳಿಗೆ ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಹೋದಾಗ ಅವರಲ್ಲಿರುವ ಸತ್ಯನಿಷೇಧಿಗಳು, ಇದು ಸ್ಪಷ್ಟ ವಾಮಾಚಾರವಾಗಿದೆಯೆಂದು ಹೇಳಿದಾಗ ನಿಮ್ಮನ್ನು ಅವರಿಂದ ಪಾರು ಮಾಡಿದ ಸಂದರ್ಭ ನಾನು ನಿಮಗೆ ಮತ್ತು ನಿಮ್ಮ ತಾಯಿಗೆ ಅನುಗ್ರಹಿಸಿದ ಅನುಗ್ರಹಗಳನ್ನು ಸ್ಮರಿಸಿರಿ.”
Maide 5:111
“ನನ್ನಲ್ಲಿ ಮತ್ತು ನನ್ನ ಸಂದೇಶವಾಹಕರಲ್ಲಿ ವಿಶ್ವಾಸವಿಡಿ” ಎಂದು ನಾನು ಹವಾರಿಗಳಿಗೆ ದಿವ್ಯಪ್ರೇರಣೆ ನೀಡಿದ ಸಂದರ್ಭ. ಅವರು ಹೇಳಿದರು: “ನಾವು ವಿಶ್ವಾಸವಿಟ್ಟಿದ್ದೇವೆ. ನಾವು ಮುಸ್ಲಿಮರು ಎಂಬುದಕ್ಕೆ ನೀವು ಸಾಕ್ಷಿಯಾಗಿರಿ.”
Maide 5:112
ಹವಾರಿಗಳು ಹೇಳಿದ ಸಂದರ್ಭ(ವನ್ನು ಸ್ಮರಿಸಿ): “ಓ ಮರ್ಯಮರ ಮಗ ಈಸಾ! ನಮಗೆ ಆಕಾಶದಿಂದ ಒಂದು ಆಹಾರದ ತಟ್ಟೆಯನ್ನು ಇಳಿಸಿಕೊಡಲು ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಸಾಧ್ಯವೇ?” ಈಸಾ ಹೇಳಿದರು: “ನೀವು ಸತ್ಯವಿಶ್ವಾಸಿಗಳಾಗಿದ್ದರೆ ಅಲ್ಲಾಹನನ್ನು ಭಯಪಡಿರಿ.”
Maide 5:113
ಅವರು ಹೇಳಿದರು: “ಅದರಿಂದ ಆಹಾರ ಸೇವಿಸಿ ನಮ್ಮ ಮನಸ್ಸನ್ನು ಸಮಾಧಾನಪಡಿಸಲು, ನೀವು ನಮಗೆ ತಿಳಿಸಿದ್ದೆಲ್ಲವೂ ಸತ್ಯವೆಂದು ಮನದಟ್ಟು ಮಾಡಿಕೊಳ್ಳಲು ಮತ್ತು ನಾವು ಅದಕ್ಕೆ ಸಾಕ್ಷಿಗಳಾಗಲು ಬಯಸುತ್ತೇವೆ.”
Maide 5:114
ಮರ್ಯಮರ ಮಗ ಈಸಾ ಹೇಳಿದರು: “ಓ ನಮ್ಮ ಪರಿಪಾಲಕನಾದ ಅಲ್ಲಾಹನೇ! ನಮಗೆ ಆಕಾಶದಿಂದ ಒಂದು ಆಹಾರದ ತಟ್ಟೆಯನ್ನು ಇಳಿಸಿಕೊಡು. ಅದು ನಮ್ಮಲ್ಲಿ ಮೊದಲಿನವರಿಗೆ ಮತ್ತು ಕೊನೆಯವರಿಗೆ ಒಂದು ಹಬ್ಬವಾಗಲಿ ಮತ್ತು ನಿನ್ನ ಕಡೆಯ ಒಂದು ದೃಷ್ಟಾಂತವಾಗಲಿ. ನಮಗೆ ಆಹಾರವನ್ನು ನೀಡು. ಆಹಾರ ನೀಡುವವರಲ್ಲಿ ನೀನು ಅತ್ಯುತ್ತಮನಾಗಿರುವೆ.”
Maide 5:115
ಅಲ್ಲಾಹು ಹೇಳಿದನು: “ನಿಶ್ಚಯವಾಗಿಯೂ ನಾನು ನಿಮಗೆ ಅದನ್ನು ಇಳಿಸಿಕೊಡುವೆನು. ಆದರೆ, ಅದರ ನಂತರವೂ ನಿಮ್ಮಲ್ಲಿ ಯಾರಾದರೂ ಸತ್ಯನಿಷೇಧಿಯಾದರೆ, ಸರ್ವಲೋಕದವರಲ್ಲಿ ಯಾರಿಗೂ ನೀಡದ ಕಠೋರ ಶಿಕ್ಷೆಯನ್ನು ನಾನು ಅವನಿಗೆ ನೀಡುವೆನು.”
Maide 5:116
ಅಲ್ಲಾಹು ಹೇಳುವ ಸಂದರ್ಭ: “ಓ ಮರ್ಯಮರ ಮಗ ಈಸಾ! ಅಲ್ಲಾಹನನ್ನು ಬಿಟ್ಟು ನನ್ನನ್ನು ಮತ್ತು ನನ್ನ ತಾಯಿಯನ್ನು ದೇವರಾಗಿ ಸ್ವೀಕರಿಸಿರಿ ಎಂದು ನೀವು ಜನರಿಗೆ ಹೇಳಿದ್ದೀರಾ?” ಈಸಾ ಹೇಳುವರು: “ನೀನು ಮಹಾ ಪರಿಶುದ್ಧನು. ನನಗೆ ಹೇಳಲು ಹಕ್ಕಿಲ್ಲದ ಒಂದು ಮಾತನ್ನು ನಾನು ಹೇಗೆ ಹೇಳುವೆನು? ನಾನು ಹಾಗೆ ಹೇಳಿದ್ದರೆ ನಿಶ್ಚಯವಾಗಿಯೂ ನಿನಗೆ ಅದು ತಿಳಿದಿರುತ್ತಿತ್ತು. ನನ್ನ ಮನಸ್ಸಿನಲ್ಲಿರುವುದು ನಿನಗೆ ತಿಳಿಯುತ್ತದೆ. ಆದರೆ ನಿನ್ನ ಮನಸ್ಸಿನಲ್ಲಿರುವುದು ನನಗೆ ತಿಳಿಯುವುದಿಲ್ಲ. ನಿಶ್ಚಯವಾಗಿಯೂ ನೀನು ಅದೃಶ್ಯ ವಿಷಯಗಳನ್ನು ತಿಳಿದವನಾಗಿರುವೆ.
Maide 5:117
ನೀನು ನನಗೆ ಆದೇಶಿಸಿದ್ದನ್ನು—ಅಂದರೆ ನನ್ನ ಮತ್ತು ನಿಮ್ಮ ಪರಿಪಾಲಕನಾದ ಅಲ್ಲಾಹನನ್ನು ಮಾತ್ರ ಆರಾಧಿಸಿರಿ ಎಂಬುದನ್ನು ಬಿಟ್ಟು ಬೇರೇನನ್ನೂ ನಾನು ಅವರಿಗೆ ಹೇಳಿಲ್ಲ. ನಾನು ಎಲ್ಲಿಯ ತನಕ ಅವರೊಂದಿಗೆ ಇದ್ದೆನೋ ಅಲ್ಲಿಯ ತನಕ ನಾನು ಅವರ ಮೇಲೆ ಸಾಕ್ಷಿಯಾಗಿದ್ದೆ. ನಂತರ ನೀನು ನನ್ನನ್ನು ಎತ್ತಿಕೊಂಡ ಬಳಿಕ ನೀನೇ ಅವರ ವೀಕ್ಷಕನಾಗಿದ್ದೆ. ನೀನು ಎಲ್ಲಾ ವಿಷಯಗಳಿಗೂ ಸಾಕ್ಷಿಯಾಗಿರುವೆ.
Maide 5:118
ನೀನು ಅವರನ್ನು ಶಿಕ್ಷಿಸುವುದಾದರೆ ನಿಶ್ಚಯವಾಗಿಯೂ ಅವರು ನಿನ್ನ ದಾಸರಾಗಿದ್ದಾರೆ. ಆದರೆ ನೀನು ಅವರನ್ನು ಕ್ಷಮಿಸುವುದಾದರೆ, ನಿಶ್ಚಯವಾಗಿಯೂ ನೀನು ಪ್ರಬಲನು ಮತ್ತು ವಿವೇಕಪೂರ್ಣನಾಗಿರುವೆ.”
Maide 5:119
ಅಲ್ಲಾಹು ಹೇಳುವನು: “ಇದು ಸತ್ಯವಂತರಿಗೆ ಅವರ ಸತ್ಯವು ಪ್ರಯೋಜನ ನೀಡುವ ದಿನವಾಗಿದೆ. ಅವರಿಗೆ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿವೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಿದ್ದಾನೆ ಮತ್ತು ಅವರು ಅಲ್ಲಾಹನ ಬಗ್ಗೆ ಸಂಪ್ರೀತರಾಗಿದ್ದಾರೆ. ಅದೇ ಮಹಾ ವಿಜಯ.”
Maide 5:120
ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಆಧಿಪತ್ಯವು ಅಲ್ಲಾಹನಿಗೆ ಸೇರಿದ್ದು. ಅಲ್ಲಾಹು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
Enam 6:1
ಭೂಮ್ಯಾಕಾಶಗಳನ್ನು ಸೃಷ್ಟಿಸಿದ ಮತ್ತು ಅಂಧಕಾರಗಳನ್ನು ಹಾಗೂ ಬೆಳಕನ್ನು ಉಂಟುಮಾಡಿದ ಅಲ್ಲಾಹನಿಗೆ ಸರ್ವಸ್ತುತಿ. ಆದರೂ ಸತ್ಯನಿಷೇಧಿಗಳು ತಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಸರಿಸಮಾನರನ್ನು ಕಲ್ಪಿಸುತ್ತಿದ್ದಾರೆ.
Enam 6:2
ನಿಮ್ಮನ್ನು ಜೇಡಿಮಣ್ಣಿನಿಂದ ಸೃಷ್ಟಿಸಿದವನು ಅವನೇ. ನಂತರ ಅವನು ಒಂದು ಅವಧಿಯನ್ನು ನಿಶ್ಚಯಿಸಿದನು. ಅವನ ಬಳಿ ಇನ್ನೊಂದು ನಿಶ್ಚಿತ ಅವಧಿಯಿದೆ. ಹೀಗಿದ್ದೂ ನೀವು ಸಂಶಯಪಡುತ್ತೀರಿ.
Enam 6:3
ಅವನೇ ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಏಕೈಕ ದೇವನಾದ ಅಲ್ಲಾಹು. ನೀವು ಮುಚ್ಚಿಡುವುದನ್ನು ಮತ್ತು ಬಹಿರಂಗಪಡಿಸುವುದನ್ನು ಅವನು ತಿಳಿಯುತ್ತಾನೆ. ನೀವು ಮಾಡುವ ಕರ್ಮಗಳನ್ನೂ ಅವನು ತಿಳಿಯುತ್ತಾನೆ.
Enam 6:4
ಅವರ ಪರಿಪಾಲಕನ (ಅಲ್ಲಾಹನ) ದೃಷ್ಟಾಂತಗಳಲ್ಲಿ ಯಾವುದೇ ಒಂದು ದೃಷ್ಟಾಂತವು ಅವರ ಬಳಿಗೆ ಬಂದರೂ, ಅವರು ಅದರಿಂದ ವಿಮುಖರಾಗುತ್ತಿದ್ದರು.
Enam 6:5
ಸತ್ಯವು ಅವರ ಬಳಿಗೆ ಬಂದಾಗ ಅವರು ಅದನ್ನು ನಿಷೇಧಿಸಿದರು. ಆದ್ದರಿಂದ ಅವರು ಯಾವುದನ್ನು ತಮಾಷೆ ಮಾಡುತ್ತಿದ್ದರೋ ಅದರ ನಿಜಾಂಶಗಳು ನಂತರ ಅವರ ಬಳಿಗೆ ಬರಲಿವೆ.
Enam 6:6
ಅವರಿಗಿಂತ ಮೊದಲು ನಾವು ಎಷ್ಟು ತಲೆಮಾರುಗಳನ್ನು ನಾಶ ಮಾಡಿದ್ದೇವೆಂದು ಅವರು ನೋಡಿಲ್ಲವೇ? ನಿಮಗೆ ನೀಡದಂತಹ ಶಕ್ತಿ-ಸಾಮರ್ಥ್ಯಗಳನ್ನು ನಾವು ಅವರಿಗೆ ನೀಡಿದ್ದೆವು. ಅವರಿಗೆ ಆಕಾಶದಿಂದ ಧಾರಾಕಾರ ಮಳೆಯನ್ನು ಸುರಿಸಿಕೊಟ್ಟೆವು. ಅವರ ತಳಭಾಗದಿಂದ ನದಿಗಳು ಹರಿಯುವಂತೆ ಮಾಡಿದೆವು. ನಂತರ ಅವರು ಮಾಡಿದ ಪಾಪಗಳ ಕಾರಣದಿಂದ ನಾವು ಅವರನ್ನು ನಾಶ ಮಾಡಿದೆವು. ಅವರ ನಂತರ ನಾವು ಬೇರೊಂದು ತಲೆಮಾರನ್ನು ಸೃಷ್ಟಿಸಿದೆವು.
Enam 6:7
ನಾವು ನಿಮಗೆ ಕಾಗದದಲ್ಲಿ ಬರೆದಿರುವ ಒಂದು ಗ್ರಂಥವನ್ನು ಅವತೀರ್ಣಗೊಳಿಸಿ, ನಂತರ ಅವರು ಅದನ್ನು ತಮ್ಮ ಕೈಗಳಿಂದ ಸ್ಪರ್ಶಿಸಿ ನೋಡಿದರೂ, “ಇದು ಸ್ಪಷ್ಟ ಮಾಟಗಾರಿಕೆಯಲ್ಲದೆ ಇನ್ನೇನೂ ಅಲ್ಲ” ಎಂದು ಆ ಸತ್ಯನಿಷೇಧಿಗಳು ಹೇಳುತ್ತಿದ್ದರು.
Enam 6:8
ಅವರು ಹೇಳಿದರು: “ಅವರ (ಪ್ರವಾದಿಯ) ಜೊತೆಯಲ್ಲಿ ಒಬ್ಬ ದೇವದೂತರನ್ನು ಏಕೆ ಇಳಿಸಲಾಗಿಲ್ಲ?” ಆದರೆ ನಾವು ದೇವದೂತರನ್ನು ಇಳಿಸುತ್ತಿದ್ದರೆ ವಿಷಯವು (ಅಂತಿಮವಾಗಿ) ತೀರ್ಮಾನವಾಗುತ್ತಿತ್ತು. ನಂತರ ಅವರಿಗೆ ಕಾಲಾವಕಾಶ ನೀಡಲಾಗುತ್ತಿರಲಿಲ್ಲ.
Enam 6:9
ನಾವು ದೇವದೂತರನ್ನು ಪ್ರವಾದಿಯಾಗಿ ಕಳುಹಿಸುತ್ತಿದ್ದರೂ ಸಹ ಅವರನ್ನು ಮನುಷ್ಯನಾಗಿ ಮಾಡಿಯೇ ಕಳುಹಿಸುತ್ತಿದ್ದೆವು. ಅವರು ಈಗ ಏನು ಗೊಂದಲ ಮಾಡುತ್ತಿದ್ದಾರೋ ಅದೇ ಗೊಂದಲವನ್ನು ಅವರು ಆಗಲೂ ಮಾಡುತ್ತಿದ್ದರು.[1]
———
[1] ಅಲ್ಲಾಹು ದೇವದೂತರನ್ನು ಪ್ರವಾದಿಯಾಗಿ ಕಳುಹಿಸುವುದು ಸಾಧ್ಯವಿಲ್ಲ. ಏಕೆಂದರೆ ದೇವದೂತರನ್ನು ಕಳುಹಿಸಿದರೆ ಜನರು ಹೇಳುತ್ತಿದ್ದರು: “ನೀನೇಕೆ ದೇವದೂತರನ್ನು ಪ್ರವಾದಿಯಾಗಿ ಕಳುಹಿಸಿದೆ? ನೀನು ಮನುಷ್ಯನನ್ನು ಪ್ರವಾದಿಯಾಗಿ ಕಳುಹಿಸುತ್ತಿದ್ದರೆ ನಾವು ಆ ಪ್ರವಾದಿಯನ್ನು ಅನುಸರಿಸುತ್ತಿದ್ದೆವು. ನಾವು ದೇವದೂತರನ್ನು ಅನುಸರಿಸುವುದು ಹೇಗೆ ಸಾಧ್ಯ? ಅವರಿಗೂ ನಮಗೂ ಅಗಾಧ ವ್ಯತ್ಯಾಸವಿದೆ.” ಇನ್ನು ದೇವದೂತರನ್ನು ಪ್ರವಾದಿಯಾಗಿ ಕಳುಹಿಸುವುದಾದರೂ ಅವರನ್ನು ಮನುಷ್ಯ ರೂಪದಲ್ಲೇ ಕಳುಹಿಸಬೇಕಾಗುತ್ತದೆ. ಆದರೆ ಆಗಲೂ ಅವರು ಈಗ ಹೇಳುತ್ತಿರುವ ಅದೇ ಕಾರಣವನ್ನು ಹೇಳಿ ಅನುಸರಿಸಲು ನಿರಾಕರಿಸುತ್ತಿದ್ದರು.
Enam 6:10
ನಿಮಗಿಂತ ಮೊದಲು ಅನೇಕ ಸಂದೇಶವಾಹಕರು ಜನರಿಂದ ತಮಾಷೆಗೆ ಗುರಿಯಾಗಿದ್ದಾರೆ. ನಂತರ, ಅವರು ಏನು ತಮಾಷೆ ಮಾಡುತ್ತಿದ್ದರೋ ಅದೇ ಅವರನ್ನು ಆವರಿಸಿಕೊಂಡಿತು.
Enam 6:11
ಹೇಳಿರಿ: “ನೀವು ಭೂಮಿಯಲ್ಲಿ ಸಂಚರಿಸಿರಿ. ನಂತರ ಸತ್ಯನಿಷೇಧಿಗಳ ಅಂತ್ಯವು ಹೇಗಿತ್ತೆಂದು ನೋಡಿ.”
Enam 6:12
ಕೇಳಿರಿ: “ಭೂಮ್ಯಾಕಾಶಗಳಲ್ಲಿರುವುದು ಯಾರಿಗೆ ಸೇರಿದ್ದು?” ಹೇಳಿರಿ: “ಅಲ್ಲಾಹನಿಗೆ ಸೇರಿದ್ದು.” ಅವನು ದಯೆ ತೋರುವುದನ್ನು ಸ್ವಯಂ ಕಡ್ಡಾಯಗೊಳಿಸಿದ್ದಾನೆ. ಪುನರುತ್ಥಾನದ ದಿನದಂದು ಅವನು ನಿಮ್ಮನ್ನು ಖಂಡಿತ ಒಟ್ಟುಗೂಡಿಸುವನು. ಅದರಲ್ಲಿ ಸಂಶಯವೇ ಇಲ್ಲ. ಸ್ವಯಂ ನಷ್ಟಹೊಂದಿದವರು ಯಾರೋ ಅವರು ವಿಶ್ವಾಸವಿಡುವುದಿಲ್ಲ.
Enam 6:13
ರಾತ್ರಿ ಮತ್ತು ಹಗಲಿನಲ್ಲಿರುವುದೆಲ್ಲವೂ ಅವನಿಗೆ ಸೇರಿದ್ದು. ಅವನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
Enam 6:14
ಹೇಳಿರಿ: “ಭೂಮ್ಯಾಕಾಶಗಳ ಸೃಷ್ಟಿಕರ್ತನಾದ ಅಲ್ಲಾಹನನ್ನು ಬಿಟ್ಟು ಬೇರೆಯವರನ್ನು ನಾನು ರಕ್ಷಕನಾಗಿ ಸ್ವೀಕರಿಸಬೇಕೇ? ಅವನು ಆಹಾರ ನೀಡುತ್ತಾನೆ. ಅವನಿಗೆ ಯಾರೂ ಆಹಾರವನ್ನು ನೀಡುವುದಿಲ್ಲ.” ಹೇಳಿರಿ: “ನಿಶ್ಚಯವಾಗಿಯೂ ಅಲ್ಲಾಹನಿಗೆ ಶರಣಾದವರಲ್ಲಿ ಮೊದಲಿಗನಾಗಬೇಕೆಂದು ನನಗೆ ಆಜ್ಞಾಪಿಸಲಾಗಿದೆ. ನೀವು ಎಂದಿಗೂ ಬಹುದೇವಾರಾಧಕರಲ್ಲಿ ಸೇರಬಾರದು (ಎಂದು ಕೂಡ ನನಗೆ ಆಜ್ಞಾಪಿಸಲಾಗಿದೆ).”
Enam 6:15
ಹೇಳಿರಿ: “ನಾನು ನನ್ನ ಪರಿಪಾಲಕನಿಗೆ (ಅಲ್ಲಾಹನಿಗೆ) ಅವಿಧೇಯತೆ ತೋರಿದರೆ, ಒಂದು ಭಯಾನಕ ದಿನದ (ಪುನರುತ್ಥಾನ ದಿನದ) ಶಿಕ್ಷೆ (ನನ್ನ ಮೇಲೆರಗಬಹುದೆಂದು) ನಾನು ಭಯಪಡುತ್ತೇನೆ.”
Enam 6:16
ಆ ದಿನ ಯಾರು ಶಿಕ್ಷೆಯಿಂದ ಪಾರಾಗುತ್ತಾನೋ ಅವನಿಗೆ ಅಲ್ಲಾಹು ಖಂಡಿತ ದಯೆ ತೋರಿದ್ದಾನೆ. ಅದು ಸ್ಪಷ್ಟ ವಿಜಯವಾಗಿದೆ.
Enam 6:17
ಅಲ್ಲಾಹು ನಿಮಗೇನಾದರೂ ತೊಂದರೆ ಕೊಟ್ಟರೆ, ಅದನ್ನು ನಿವಾರಿಸಲು ಅವನ ಹೊರತು ಯಾರಿಗೂ ಸಾಧ್ಯವಿಲ್ಲ. ಅವನು ನಿಮಗೇನಾದರೂ ಒಳಿತು ಮಾಡಿದರೆ, ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
Enam 6:18
ಅವನಿಗೆ ಅವರ ದಾಸರ ಮೇಲೆ ಪರಮಾಧಿಕಾರವಿದೆ. ಅವನು ವಿವೇಕಪೂರ್ಣನು ಮತ್ತು ಸೂಕ್ಷ್ಮಜ್ಞಾನಿಯಾಗಿದ್ದಾನೆ.
Enam 6:19
ಕೇಳಿರಿ: “ಅತಿದೊಡ್ಡ ಸಾಕ್ಷ್ಯ ಯಾವುದು?” ಹೇಳಿರಿ: “ಅಲ್ಲಾಹು ನನ್ನ ಮತ್ತು ನಿಮ್ಮ ನಡುವೆ ಸಾಕ್ಷಿಯಾಗಿದ್ದಾನೆ. ಈ ಕುರ್‌ಆನಿನ ಮೂಲಕ ನಿಮಗೆ ಮತ್ತು ಇದು ತಲುಪುವ ಎಲ್ಲರಿಗೂ ಮುನ್ನೆಚ್ಚರಿಕೆ ನೀಡಲು ನನಗೆ ಈ ಕುರ್‌ಆನನ್ನು ದೇವವಾಣಿಯಾಗಿ ನೀಡಲಾಗಿದೆ. ಅಲ್ಲಾಹನೊಂದಿಗೆ ಬೇರೆ ದೇವರಿದ್ದಾರೆಂದು ನೀವು ನಿಜವಾಗಿಯೂ ಸಾಕ್ಷಿವಹಿಸುತ್ತೀರಾ?” ಹೇಳಿರಿ: “ನಾನು ಸಾಕ್ಷಿವಹಿಸುವುದಿಲ್ಲ.” ಹೇಳಿರಿ: “ಅವನು ಏಕೈಕ ದೇವನು. ನೀವು ಮಾಡುವ ಸಹಭಾಗಿತ್ವದಿಂದ (ಶಿರ್ಕ್‌ನಿಂದ) ನಾನು ಸಂಪೂರ್ಣ ಮುಕ್ತನಾಗಿದ್ದೇನೆ.”
Enam 6:20
ನಾವು ಯಾರಿಗೆ ಗ್ರಂಥವನ್ನು ನೀಡಿದ್ದೇವೋ ಅವರು (ಯಹೂದಿಗಳು ಮತ್ತು ಕ್ರೈಸ್ತರು) ತಮ್ಮ ಮಕ್ಕಳನ್ನು ಗುರುತಿಸುವಂತೆಯೇ ಅದನ್ನು (ಕುರ್‌ಆನನ್ನು) ಗುರುತಿಸುತ್ತಾರೆ. ಸ್ವಯಂ ನಷ್ಟಹೊಂದಿದವರು ಯಾರೋ ಅವರು ವಿಶ್ವಾಸವಿಡುವುದಿಲ್ಲ.
Enam 6:21
ಅಲ್ಲಾಹನ ಮೇಲೆ ಸುಳ್ಳು ಆರೋಪಿಸುವವನಿಗಿಂತ ಅಥವಾ ಅಲ್ಲಾಹನ ವಚನಗಳನ್ನು ನಿಷೇಧಿಸುವವನಿಗಿಂತ ದೊಡ್ಡ ಅಕ್ರಮಿ ಯಾರು? ನಿಶ್ಚಯವಾಗಿಯೂ ಅಕ್ರಮಿಗಳು ಯಶಸ್ವಿಯಾಗುವುದಿಲ್ಲ.
Enam 6:22
ನಾವು ಅವರೆಲ್ಲರನ್ನೂ ಒಟ್ಟುಗೂಡಿಸುವ ದಿನ. ನಂತರ ನಾವು ಸಹಭಾಗಿತ್ವ (ಶಿರ್ಕ್) ಮಾಡಿದವರೊಡನೆ ಕೇಳುವೆವು: “ನೀವು (ನಿಮ್ಮ ದೇವರುಗಳೆಂದು) ವಾದಿಸುತ್ತಿದ್ದ ಆ ಸಹಭಾಗಿಗಳು ಎಲ್ಲಿದ್ದಾರೆ?”
Enam 6:23
ನಂತರ ಅವರ ಸಹಭಾಗಿತ್ವದ (ಶಿರ್ಕ್‌ನ) ಪರಿಣಾಮವು, “ನಮ್ಮ ಪರಿಪಾಲಕನಾದ ಅಲ್ಲಾಹನ ಮೇಲಾಣೆ! ನಿಶ್ಚಯವಾಗಿಯೂ ನಾವು ಸಹಭಾಗಿತ್ವ (ಶಿರ್ಕ್) ಮಾಡಿಲ್ಲ” ಎಂದು ಹೇಳುವುದರ ಹೊರತು ಇನ್ನೇನೂ ಆಗಿರುವುದಿಲ್ಲ.
Enam 6:24
ಅವರು ಅವರ ಬಗ್ಗೆಯೇ ಹೇಗೆ ಸುಳ್ಳು ಹೇಳುತ್ತಿದ್ದಾರೆಂದು ನೋಡಿ. ಅವರು (ಅಲ್ಲಾಹನ ಸಹಭಾಗಿಗಳೆಂದು) ಆರೋಪಿಸುತ್ತಿದ್ದ ದೇವರುಗಳೆಲ್ಲವೂ ಅವರನ್ನು ಬಿಟ್ಟು ಮರೆಯಾಗಿ ಹೋದವು.
Enam 6:25
ಅವರಲ್ಲಿ ಕೆಲವರು ನೀವು (ಕುರ್‌ಆನ್ ಪಠಿಸುವುದನ್ನು) ಕಿವಿಗೊಟ್ಟು ಕೇಳುತ್ತಾರೆ. ಆದರೆ ಅವರು ಅದನ್ನು ಅರ್ಥಮಾಡಿಕೊಳ್ಳದಂತೆ ನಾವು ಅವರ ಹೃದಯಗಳ ಮೇಲೆ ಪರದೆಗಳನ್ನು ಮತ್ತು ಅವರ ಕಿವಿಗಳಿಗೆ ಕಿವುಡುತನವನ್ನು ಹಾಕಿದ್ದೇವೆ. ಅವರು ಎಲ್ಲಾ ರೀತಿಯ ದೃಷ್ಟಾಂತಗಳನ್ನು ನೋಡಿದರೂ ವಿಶ್ವಾಸವಿಡುವುದಿಲ್ಲ. ಎಲ್ಲಿಯವರೆಗೆಂದರೆ ಅವರು ತಮ್ಮ ಬಳಿಗೆ ತರ್ಕಿಸುವುದಕ್ಕಾಗಿ ಬಂದರೆ, ಆ ಸತ್ಯನಿಷೇಧಿಗಳು ಹೇಳುತ್ತಾರೆ: “ಇದು ಪುರಾತನ ಕಾಲದ ಕಟ್ಟುಕಥೆಗಳಲ್ಲದೆ ಇನ್ನೇನೂ ಅಲ್ಲ.”
Enam 6:26
ಅವರು ಆ ಸತ್ಯದಿಂದ ಜನರನ್ನು ತಡೆಯುವುದಲ್ಲದೆ, ಸ್ವಯಂ ಅದರಿಂದ ದೂರವಾಗುತ್ತಿದ್ದಾರೆ. ಅವರು ಸ್ವಯಂ ಅವರನ್ನೇ ನಾಶ ಮಾಡುತ್ತಿದ್ದಾರೆ. ಆದರೆ, ಅವರು ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ.
Enam 6:27
ಅವರನ್ನು ನರಕದ ಮುಂದೆ ನಿಲ್ಲಿಸಲಾಗುವ ದೃಶ್ಯವನ್ನು ನೀವು ನೋಡಿದ್ದರೆ! ಅವರು ಹೇಳುವರು: “ನಮ್ಮನ್ನು ಪುನಃ ಭೂಲೋಕಕ್ಕೆ ಕಳುಹಿಸುತ್ತಿದ್ದರೆ ಎಷ್ಟು ಚೆನ್ನಾಗಿತ್ತು! ಹಾಗೇನಾದರೂ ಕಳುಹಿಸಿದರೆ, ನಾವು ನಮ್ಮ ಪರಿಪಾಲಕನ (ಅಲ್ಲಾಹನ) ವಚನಗಳನ್ನು ಖಂಡಿತ ನಿಷೇಧಿಸುವುದಿಲ್ಲ; ಮತ್ತು ನಾವು ಖಂಡಿತ ಸತ್ಯವಿಶ್ವಾಸಿಗಳೊಡನೆ ಸೇರುವೆವು.”
Enam 6:28
ಅಲ್ಲ, ವಾಸ್ತವವಾಗಿ ಅವರು ಇದಕ್ಕೆ ಮೊದಲು ಏನನ್ನು ಮುಚ್ಚಿಟ್ಟಿದ್ದರೋ ಅದು ಈಗ ಅವರಿಗೆ ಬಹಿರಂಗವಾಗಿದೆ. ಅವರನ್ನು ಪುನಃ ಭೂಲೋಕಕ್ಕೆ ಕಳುಹಿಸಲಾದರೂ, ಅವರಿಗೆ ವಿರೋಧಿಸಲಾದ ವಿಷಯಗಳನ್ನೇ ಅವರು ಪುನರಾವರ್ತಿಸುವರು. ನಿಶ್ಚಯವಾಗಿಯೂ ಅವರು ಸುಳ್ಳು ಹೇಳುವವರಾಗಿದ್ದಾರೆ.
Enam 6:29
ಅವರು ಹೇಳಿದರು: “ನಮ್ಮ ಈ ಭೂಲೋಕ ಜೀವನದ ಹೊರತು ಬೇರೇನೂ ಇಲ್ಲ. ನಮಗೆ ಪುನಃ ಜೀವ ನೀಡಿ ಎಬ್ಬಿಸಲಾಗುವುದೂ ಇಲ್ಲ.”
Enam 6:30
ಅವರನ್ನು ಅವರ ಪರಿಪಾಲಕನ (ಅಲ್ಲಾಹನ) ಮುಂದೆ ನಿಲ್ಲಿಸಲಾದ ದೃಶ್ಯವನ್ನು ನೀವು ನೋಡಿದ್ದರೆ! ಅವನು ಕೇಳುವನು: “ಇದು ಸತ್ಯವಲ್ಲವೇ?” ಅವರು ಉತ್ತರಿಸುವರು: “ಹೌದು! ನಮ್ಮ ಪರಿಪಾಲಕನ (ಅಲ್ಲಾಹನ) ಮೇಲಾಣೆ.” ಅವನು ಹೇಳುವನು: “ಹಾಗಾದರೆ ನೀವು ಏನನ್ನು ನಿಷೇಧಿಸಿದಿರೋ ಅದರ ಶಿಕ್ಷೆಯನ್ನು ಅನುಭವಿಸಿರಿ.”
Enam 6:31
ಅಲ್ಲಾಹನ ಭೇಟಿಯನ್ನು ನಿಷೇಧಿಸಿದವರು ನಿಶ್ಚಯವಾಗಿಯೂ ನಷ್ಟ ಹೊಂದಿದರು. ಎಲ್ಲಿಯವರೆಗೆಂದರೆ, ಹಠಾತ್ತನೆ ಅಂತಿಮದಿನವು ಬರುವಾಗ, ಅವರು ಹೇಳುವರು: “ನಾವು ಇದರ (ಅಂತಿಮದಿನ) ಬಗ್ಗೆ ನಿರ್ಲಕ್ಷ್ಯ ಮಾಡಿದ ಕಾರಣ ಅಯ್ಯೋ! ನಮ್ಮ ದುರ್ಗತಿಯೇ!” ಅವರು ಅವರ ಬೆನ್ನುಗಳ ಮೇಲೆ ಪಾಪಗಳ ಭಾರವನ್ನು ಹೊರುತ್ತಿರುವರು. ಅವರು ಹೊರುವ ಭಾರವು ಬಹಳ ನಿಕೃಷ್ಟವಾಗಿದೆ.
Enam 6:32
ಇಹಲೋಕ ಜೀವನವು ಆಟ ಮತ್ತು ಮನೋರಂಜನೆಯಲ್ಲದೆ ಇನ್ನೇನೂ ಅಲ್ಲ. ದೇವಭಯವುಳ್ಳವರಿಗೆ ಪರಲೋಕ ಜೀವನವೇ ಉತ್ತಮವಾಗಿದೆ. ನೀವು ಆಲೋಚಿಸುವುದಿಲ್ಲವೇ?
Enam 6:33
ಅವರು ಹೇಳುವ ಮಾತುಗಳಿಂದ ನಿಮಗೆ ಬೇಸರವಾಗುತ್ತಿದೆಯೆಂದು ನಮಗೆ ಖಂಡಿತ ತಿಳಿದಿದೆ. ಆದರೆ ಅವರು ನಿಮ್ಮನ್ನು ನಿಷೇಧಿಸುವುದಿಲ್ಲ. ಆದರೆ ಆ ಅತಿರೇಕಿಗಳು ಅಲ್ಲಾಹನ ವಚನಗಳನ್ನು ನಿಷೇಧಿಸುತ್ತಾರೆ.
Enam 6:34
ನಿಮಗಿಂತ ಮೊದಲೂ ಸಂದೇಶವಾಹಕರು ನಿಷೇಧಿಸಲ್ಪಟ್ಟಿದ್ದಾರೆ. ಜನರು ತಮ್ಮನ್ನು ನಿಷೇಧಿಸುವುದನ್ನು ಮತ್ತು ತಮಗೆ ತೊಂದರೆ ನೀಡುವುದನ್ನು ಅವರು ತಾಳಿಕೊಳ್ಳುತ್ತಿದ್ದರು—ನಮ್ಮ ಸಹಾಯವು ಬರುವವರೆಗೆ. ಅಲ್ಲಾಹನ ವಚನಗಳನ್ನು ಬದಲಾಯಿಸಲು ಯಾರಿಗೂ ಸಾಧ್ಯವಿಲ್ಲ. ಸಂದೇಶವಾಹಕರುಗಳ ಕೆಲವು ಸಮಾಚಾರಗಳು ನಿಮಗೆ ಈಗಾಗಲೇ ತಲುಪಿವೆ.
Enam 6:35
ಅವರು ನಿಮ್ಮನ್ನು ತಿರಸ್ಕರಿಸಿ ವಿಮುಖರಾಗುವುದನ್ನು ಸಹಿಸಿಕೊಳ್ಳಲು ನಿಮಗೆ ಕಷ್ಟವಾಗುವುದಾದರೆ, ಭೂಮಿಯೊಳಗಿಳಿಯಲು ಒಂದು ಸುರಂಗವನ್ನು, ಅಥವಾ ಆಕಾಶಕ್ಕೇರಲು ಒಂದು ಏಣಿಯನ್ನು ಹುಡುಕಿ, ನಂತರ ಅವರಿಗೊಂದು ದೃಷ್ಟಾಂತವನ್ನು ತಂದುಕೊಡಲು ಸಾಧ್ಯವಾಗುವುದಾದರೆ ತಂದು ಕೊಡಿ. ಅಲ್ಲಾಹು ಇಚ್ಛಿಸಿದರೆ ಅವರೆಲ್ಲರನ್ನೂ ಸನ್ಮಾರ್ಗದಲ್ಲಿ ಒಟ್ಟುಗೂಡಿಸುತ್ತಿದ್ದನು. ಆದ್ದರಿಂದ ನೀವು ಅವಿವೇಕಿಗಳಲ್ಲಿ ಸೇರಬೇಡಿ.
Enam 6:36
ಕೇಳುವವರು ಮಾತ್ರ ಉತ್ತರಿಸುತ್ತಾರೆ. ಸತ್ತವರನ್ನು ಅಲ್ಲಾಹು ಜೀವ ನೀಡಿ ಎಬ್ಬಿಸುತ್ತಾನೆ. ನಂತರ ಅವರನ್ನು ಅವನ ಬಳಿಗೆ ಮರಳಿಸಲಾಗುತ್ತದೆ.
Enam 6:37
ಅವರು ಕೇಳುತ್ತಾರೆ: “ಅವರಿಗೆ (ಪ್ರವಾದಿಗೆ) ಅವರ ಪರಿಪಾಲಕನಿಂದ (ಅಲ್ಲಾಹನಿಂದ) ಒಂದು ದೃಷ್ಟಾಂತವೇಕೆ ಅವತೀರ್ಣವಾಗಿಲ್ಲ?” ಹೇಳಿರಿ: “ನಿಶ್ಚಯವಾಗಿಯೂ ದೃಷ್ಟಾಂತವನ್ನು ಅವತೀರ್ಣಗೊಳಿಸುವ ಸಾಮರ್ಥ್ಯ ಅಲ್ಲಾಹನಿಗಿದೆ.” ಆದರೆ ಅವರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.
Enam 6:38
ಭೂಮಿಯಲ್ಲಿರುವ ಯಾವುದೇ ಜೀವಿಯಾಗಲಿ ಅಥವಾ (ಆಕಾಶದಲ್ಲಿ) ಎರಡು ರೆಕ್ಕೆಗಳಿಂದ ಹಾರಾಡುವ ಹಕ್ಕಿಗಳಾಗಲಿ, ಅವೆಲ್ಲವೂ ನಿಮ್ಮಂತಿರುವ ಸಮುದಾಯಗಳಾಗಿವೆ. ನಾವು ಗ್ರಂಥದಲ್ಲಿ[1] ಏನನ್ನೂ ದಾಖಲಿಸದೆ ಬಿಟ್ಟಿಲ್ಲ. ನಂತರ ಅವರನ್ನು ಅವರ ಪರಿಪಾಲಕನ (ಅಲ್ಲಾಹನ) ಬಳಿಗೆ ಒಟ್ಟುಗೂಡಿಸಲಾಗುತ್ತದೆ.
———
[1] ಗ್ರಂಥದಲ್ಲಿ ಎಂದರೆ ಅಲ್ಲಾಹನ ಬಳಿಯಿರುವ ಲೌಹುಲ್ ಮಹ್ಫೂಝ್ (ಸುರಕ್ಷಿತ ಫಲಕ) ನಲ್ಲಿ. ಅದರಲ್ಲಿ ಎಲ್ಲಾ ಜೀವಿಗಳ ಸಂಪೂರ್ಣ ಮಾಹಿತಿಗಳನ್ನು ದಾಖಲಿಸಲಾಗಿದೆ.
Enam 6:39
ನಮ್ಮ ವಚನಗಳನ್ನು ನಿಷೇಧಿಸಿದವರು ಯಾರೋ—ಅವರು ಕಿವುಡರು, ಮೂಕರು ಮತ್ತು ಕತ್ತಲೆಗಳಲ್ಲಿರುವವರಾಗಿದ್ದಾರೆ. ಅಲ್ಲಾಹು ಅವನು ಇಚ್ಛಿಸುವವರನ್ನು ದುರ್ಮಾರ್ಗದಲ್ಲಿ ಮಾಡುತ್ತಾನೆ ಮತ್ತು ಅವನು ಇಚ್ಛಿಸುವವರನ್ನು ನೇರಮಾರ್ಗದಲ್ಲಿ ಮಾಡುತ್ತಾನೆ.
Enam 6:40
ಹೇಳಿರಿ: “ನೀವು ಆಲೋಚಿಸಿ ನೋಡಿದ್ದೀರಾ! ಅಲ್ಲಾಹನ ಶಿಕ್ಷೆಯು ನಿಮ್ಮ ಮೇಲೆರಗಿದರೆ ಅಥವಾ ಅಂತಿಮದಿನವು ಸಂಭವಿಸಿದರೆ, ನೀವು ಅಲ್ಲಾಹನನ್ನು ಬಿಟ್ಟು ಬೇರೆ ದೇವರುಗಳನ್ನು ಕರೆದು ಪ್ರಾರ್ಥಿಸುತ್ತೀರಾ? ನೀವು ಸತ್ಯವಂತರಾಗಿದ್ದರೆ ಹೇಳಿರಿ.”
Enam 6:41
ಇಲ್ಲ, ವಾಸ್ತವವಾಗಿ ನೀವು ಅಲ್ಲಾಹನನ್ನೇ ಕರೆದು ಪ್ರಾರ್ಥಿಸುತ್ತೀರಿ. ಆಗ ಅವನು ಇಚ್ಛಿಸಿದರೆ, ಯಾವುದಕ್ಕಾಗಿ ನೀವು ಅವನನ್ನು ಕರೆದು ಪ್ರಾರ್ಥಿಸಿದಿರೋ ಅದನ್ನು ಅವನು ನಿವಾರಿಸುವನು. (ಆ ಸಂದರ್ಭದಲ್ಲಿ) ನೀವು ಮಾಡುತ್ತಿದ್ದ ಸಹಭಾಗಿತ್ವವನ್ನು (ಶಿರ್ಕ್) ನೀವು ಮರೆತುಬಿಡುತ್ತೀರಿ.
Enam 6:42
ನಿಮಗಿಂತ ಮೊದಲು ಅನೇಕ ಸಮುದಾಯಗಳಿಗೆ ನಾವು ಸಂದೇಶವಾಹಕರನ್ನು ಕಳುಹಿಸಿದ್ದೇವೆ. ನಂತರ ಅವರು ವಿನಮ್ರರಾಗುವುದಕ್ಕಾಗಿ ನಾವು ಅವರನ್ನು (ಬಡತನ ಮುಂತಾದ) ಕಷ್ಟಗಳಿಂದ ಮತ್ತು (ಅನಾರೋಗ್ಯ ಮುಂತಾದ) ತೊಂದರೆಗಳಿಂದ ಹಿಡಿದೆವು.
Enam 6:43
ನಮ್ಮ ಶಿಕ್ಷೆಯು ಬಂದಾಗ ಅವರೇಕೆ ವಿನಮ್ರರಾಗಲಿಲ್ಲ? ಆದರೆ ಅವರ ಹೃದಯಗಳು ಕಠೋರವಾದವು. ಅವರು ಮಾಡುತ್ತಿದ್ದ ದುಷ್ಕರ್ಮಗಳನ್ನು ಶೈತಾನನು ಅವರಿಗೆ ಅಲಂಕರಿಸಿ ತೋರಿಸಿದನು.
Enam 6:44
ಅವರಿಗೆ ನೀಡಲಾದ ಹಿತೋಪದೇಶಗಳನ್ನು ಅವರು ಮರೆತಾಗ, ಎಲ್ಲಾ ವಸ್ತುಗಳ ದ್ವಾರಗಳನ್ನು ನಾವು ಅವರಿಗೆ ತೆರೆದುಕೊಟ್ಟೆವು.[1] ಎಲ್ಲಿಯವರೆಗೆಂದರೆ, ಅವರಿಗೆ ನೀಡಲಾದ ಸವಲತ್ತುಗಳನ್ನು ಕಂಡು ಅವರು ಆನಂದಿಸುತ್ತಿದ್ದಾಗ ಹಠಾತ್ತನೆ ನಾವು ಅವರನ್ನು ಹಿಡಿದೆವು. ಆಗ ಅವರು ಸಂಪೂರ್ಣ ಹತಾಶರಾದರು.
———
[1] ಅಂದರೆ ಅವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಮತ್ತು ಸವಲತ್ತುಗಳನ್ನು ಯಥೇಷ್ಟವಾಗಿ ನೀಡಿದೆವು.
Enam 6:45
ಅಕ್ರಮವೆಸಗಿದ ಜನರನ್ನು ಬೇರು ಸಹಿತ ನಿರ್ಮೂಲನ ಮಾಡಲಾಯಿತು. ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಸರ್ವಸ್ತುತಿ.
Enam 6:46
ಹೇಳಿರಿ: “ನೀವು ಆಲೋಚಿಸಿ ನೋಡಿದ್ದೀರಾ! ಅಲ್ಲಾಹು ನಿಮ್ಮ ಶ್ರವಣಶಕ್ತಿ ಮತ್ತು ದೃಷ್ಟಿಯನ್ನು ತೆಗೆದು, ನಿಮ್ಮ ಹೃದಯಗಳಿಗೆ ಮೊಹರು ಹಾಕಿದರೆ, ಅಲ್ಲಾಹನ ಹೊರತು ಅದನ್ನು ತಂದುಕೊಡುವ ದೇವರು ಯಾರು?” ನಾವು ಅವರಿಗೆ ನಮ್ಮ ವಚನಗಳನ್ನು ಹೇಗೆ ವಿವರಿಸಿಕೊಡುತ್ತಿದ್ದೇವೆಂದು ನೋಡಿರಿ. ಅದರ ನಂತರವೂ ಅವರು ವಿಮುಖರಾಗುತ್ತಿದ್ದಾರೆ.
Enam 6:47
ಹೇಳಿರಿ: “ನೀವು ಆಲೋಚಿಸಿ ನೋಡಿದ್ದೀರಾ! ಅಲ್ಲಾಹನ ಶಿಕ್ಷೆಯು ಹಠಾತ್ತನೆ ಬಂದರೆ, ಅಥವಾ ಬಹಿರಂಗವಾಗಿ ಬಂದರೆ, ಅಕ್ರಮವೆಸಗಿದ ಜನರ ಹೊರತು ಬೇರೆ ಯಾರಾದರೂ ನಾಶವಾಗುವರೇ?”
Enam 6:48
ಶುಭವಾರ್ತೆ ತಿಳಿಸಲು ಮತ್ತು ಮುನ್ನೆಚ್ಚರಿಕೆ ನೀಡಲು ಮಾತ್ರ ನಾವು ಸಂದೇಶವಾಹಕರನ್ನು ಕಳುಹಿಸುತ್ತೇವೆ. ಆದ್ದರಿಂದ ಯಾರು ಸತ್ಯವಿಶ್ವಾಸವನ್ನು ಸ್ವೀಕರಿಸಿ ಸ್ವಯಂ ಸುಧಾರಿಸಿಕೊಳ್ಳುತ್ತಾನೋ—ಅವರಿಗೆ ಯಾವುದೇ ಭಯವಿಲ್ಲ; ಅವರು ದುಃಖಿಸುವುದೂ ಇಲ್ಲ.
Enam 6:49
ಆದರೆ ನಮ್ಮ ವಚನಗಳನ್ನು ನಿಷೇಧಿಸಿದವರು ಯಾರೋ—ಅವರು ಅವಿಧೇಯತೆ ತೋರಿದ ಕಾರಣ ಶಿಕ್ಷೆಯು ಅವರನ್ನು ಸ್ಪರ್ಶಿಸಲಿದೆ.
Enam 6:50
ಹೇಳಿರಿ: “ಅಲ್ಲಾಹನ ಖಜಾನೆಗಳು ನನ್ನ ವಶದಲ್ಲಿವೆಯೆಂದು ನಾನು ಹೇಳುವುದಿಲ್ಲ. ನನಗೆ ಅದೃಶ್ಯ ವಿಷಯಗಳು ತಿಳಿದಿಲ್ಲ. ನಾನೊಬ್ಬ ದೇವದೂತನೆಂದು ನಾನು ನಿಮಗೆ ಹೇಳುವುದಿಲ್ಲ. ನನಗೆ ದೇವವಾಣಿಯಾಗಿ ನೀಡಲಾದುದನ್ನು ಮಾತ್ರ ನಾನು ಅನುಸರಿಸುತ್ತೇನೆ.” ಕೇಳಿರಿ: “ಕಣ್ಣು ಕಾಣದವನು ಮತ್ತು ಕಣ್ಣು ಕಾಣುವವನು ಸಮಾನರೇ? ನೀವೇಕೆ ಆಲೋಚಿಸುವುದಿಲ್ಲ?”
Enam 6:51
ತಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ತಮ್ಮನ್ನು ಒಟ್ಟುಗೂಡಿಸಲಾಗುವುದು ಎಂದು ಭಯಪಡುವವರಿಗೆ ಇದರ (ಕುರ್‌ಆನಿನ) ಮೂಲಕ ಎಚ್ಚರಿಕೆ ನೀಡಿರಿ. ಅವರಿಗೆ ಅಲ್ಲಾಹನ ಹೊರತು ಬೇರೆ ರಕ್ಷಕರು ಅಥವಾ ಶಿಫಾರಸುಗಾರರಿಲ್ಲ. ಅವರು ದೇವಭಯವುಳ್ಳವರಾಗುವುದಕ್ಕಾಗಿ.
Enam 6:52
ತಮ್ಮ ಪರಿಪಾಲಕನ (ಅಲ್ಲಾಹನ) ಸಂಪ್ರೀತಿಯನ್ನು ಬಯಸುತ್ತಾ ಮುಂಜಾನೆ ಮತ್ತು ಸಂಜೆ ಅವನನ್ನು ಕರೆದು ಪ್ರಾರ್ಥಿಸುವವರನ್ನು ದೂರ ಮಾಡಬೇಡಿ.[1] ಅವರನ್ನು ವಿಚಾರಣೆ ಮಾಡುವ ಹೊಣೆ ನಿಮಗಿಲ್ಲ. ನಿಮ್ಮನ್ನು ವಿಚಾರಣೆ ಮಾಡುವ ಹೊಣೆ ಅವರಿಗಿಲ್ಲ. ನೀವು ಅವರನ್ನು ದೂರ ಮಾಡಿದರೆ, ನೀವು ಅಕ್ರಮಿಗಳಲ್ಲಿ ಸೇರಿ ಬಿಡುವಿರಿ.
———
[1] ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನುಯಾಯಿಗಳಲ್ಲಿ ಗುಲಾಮರು, ಬಡವರು ಮತ್ತು ದಬ್ಬಾಳಿಕೆಗೆ ಒಳಗಾದವರು ಇದ್ದರು. ಇವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಯಲ್ಲಿದ್ದುದರಿಂದ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬರಲು ಕುರೈಷ್ ಮುಖಂಡರಿಗೆ ಅಸಹ್ಯವಾಗುತ್ತಿತ್ತು. ಅವರನ್ನು ದೂರ ಮಾಡಿದರೆ ನಾವು ನಿಮ್ಮ ಬಳಿಗೆ ಬರುತ್ತೇವೆಂದು ಅವರು ಹೇಳುತ್ತಿದ್ದರು.
Enam 6:53
ಹೀಗೆ ನಾವು ಅವರಲ್ಲಿ ಕೆಲವರನ್ನು ಇತರ ಕೆಲವರ ಮೂಲಕ ಪರೀಕ್ಷಿಸಿದೆವು. “ಅಲ್ಲಾಹು ನಮ್ಮ ನಡುವೆ ಅನುಗ್ರಹ ನೀಡಿ ಆಶೀರ್ವದಿಸಿದ್ದು ಇವರನ್ನೇ ಏನು?” ಎಂದು ಅವರು (ಸತ್ಯನಿಷೇಧಿಗಳು) ಹೇಳುವುದಕ್ಕಾಗಿ. ಕೃತಜ್ಞರಾಗಿರುವವರ ಬಗ್ಗೆ ಅಲ್ಲಾಹು ಅತಿಹೆಚ್ಚು ತಿಳಿದವನಲ್ಲವೇ?
Enam 6:54
ನಮ್ಮ ವಚನಗಳಲ್ಲಿ ವಿಶ್ವಾಸವಿಡುವವರು ನಿಮ್ಮ ಬಳಿಗೆ ಬಂದರೆ ಹೇಳಿರಿ: “ನಿಮ್ಮ ಮೇಲೆ ಶಾಂತಿಯಿರಲಿ; ನಿಮ್ಮ ಪರಿಪಾಲಕನು ದಯೆ ತೋರುವುದನ್ನು ಸ್ವಯಂ ತನ್ನ ಮೇಲೆ ಕಡ್ಡಾಯಗೊಳಿಸಿದ್ದಾನೆ. ನಿಮ್ಮಲ್ಲಿ ಒಬ್ಬರು ಅರಿವಿಲ್ಲದೆ ಒಂದು ತಪ್ಪು ಮಾಡಿ, ನಂತರ ಪಶ್ಚಾತ್ತಾಪಪಟ್ಟು ಸುಧಾರಿಸಿಕೊಂಡರೆ, ನಿಶ್ಚಯವಾಗಿಯೂ ಅವನು (ಅಲ್ಲಾಹು) ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.”
Enam 6:55
ಈ ರೀತಿ ನಾವು ವಚನಗಳನ್ನು ವಿವರಿಸಿಕೊಡುತ್ತೇವೆ. ಅಪರಾಧಿಗಳ ಮಾರ್ಗವು ನಿಚ್ಚಳವಾಗುವುದಕ್ಕಾಗಿ.
Enam 6:56
ಹೇಳಿರಿ: “ನಿಶ್ಚಯವಾಗಿಯೂ, ನೀವು ಅಲ್ಲಾಹನನ್ನು ಬಿಟ್ಟು ಯಾರನ್ನು ಕರೆದು ಪ್ರಾರ್ಥಿಸುತ್ತೀರೋ ಅವರನ್ನು ಆರಾಧಿಸುವುದನ್ನು ನನಗೆ ವಿರೋಧಿಸಲಾಗಿದೆ.” ಹೇಳಿರಿ: “ನಾನು ನಿಮ್ಮ ಸ್ವೇಚ್ಛೆಗಳನ್ನು ಹಿಂಬಾಲಿಸುವುದಿಲ್ಲ. ಹಿಂಬಾಲಿಸಿದರೆ ನಾನು ಖಂಡಿತ ದಾರಿತಪ್ಪುವೆನು ಮತ್ತು ಸನ್ಮಾರ್ಗಿಗಳಲ್ಲಿ ಸೇರದವನಾಗುವೆನು.”
Enam 6:57
ಹೇಳಿರಿ: “ನಿಶ್ಚಯವಾಗಿಯೂ ನಾನು ನನ್ನ ಪರಿಪಾಲಕನ (ಅಲ್ಲಾಹನ) ಸ್ಪಷ್ಟ ಸಾಕ್ಷ್ಯಾಧಾರಗಳಲ್ಲಿದ್ದೇನೆ. ಆದರೆ ನೀವು ಅದನ್ನು ನಿಷೇಧಿಸಿದ್ದೀರಿ. ನೀವು ತ್ವರೆ ಮಾಡುತ್ತಿರುವ ಶಿಕ್ಷೆ ನನ್ನ ವಶದಲ್ಲಿಲ್ಲ. ಆಜ್ಞಾಧಿಕಾರವಿರುವುದು ಅಲ್ಲಾಹನಿಗೆ ಮಾತ್ರ. ಅವನು ಸತ್ಯವನ್ನು ತಿಳಿಸುತ್ತಾನೆ. ಅವನು ತೀರ್ಪು ನೀಡುವವರಲ್ಲಿ ಅತ್ಯುತ್ತಮನಾಗಿದ್ದಾನೆ.”
Enam 6:58
ಹೇಳಿರಿ: “ನೀವು ತ್ವರೆ ಮಾಡುವ ಶಿಕ್ಷೆ ನನ್ನ ವಶದಲ್ಲಿರುತ್ತಿದ್ದರೆ ನನ್ನ ಮತ್ತು ನಿಮ್ಮ ಮಧ್ಯೆ ವಿಷಯವು ತೀರ್ಮಾನವಾಗಿ ಬಿಡುತ್ತಿತ್ತು. ಅಲ್ಲಾಹು ಅಕ್ರಮಿಗಳ ಬಗ್ಗೆ ಬಹಳ ಚೆನ್ನಾಗಿ ತಿಳಿದಿದ್ದಾನೆ.”
Enam 6:59
ಅಗೋಚರ ವಿಷಯಗಳ ಖಜಾನೆಗಳಿರುವುದು[1] ಅಲ್ಲಾಹನ ಬಳಿ ಮಾತ್ರ. ಅವನಲ್ಲದೆ ಯಾರಿಗೂ ಅದು ತಿಳಿದಿಲ್ಲ. ನೆಲದಲ್ಲಿ ಮತ್ತು ಕಡಲಲ್ಲಿರುವುದನ್ನು ಅವನು ತಿಳಿಯುತ್ತಾನೆ. ಅವನು ತಿಳಿಯದೆ ಒಂದೇ ಒಂದು ಎಲೆಯೂ ಉದುರುವುದಿಲ್ಲ. ಭೂಮಿಯ ಗಾಢಾಂಧಕಾರಗಳಲ್ಲಿರುವ ಒಂದು ಧಾನ್ಯವಾಗಲಿ, ಹಸಿ ಅಥವಾ ಒಣಗಿದ ಯಾವುದೇ ವಸ್ತುವಾಗಲಿ ಒಂದು ಸ್ಪಷ್ಟ ಗ್ರಂಥದಲ್ಲಿ ದಾಖಲಾಗದೆ ಉಳಿದಿಲ್ಲ.”
———
[1] ಮಫಾತಿಹ್ ಎಂದರೆ ಖಜಾನೆಗಳು, ಕೀಲಿಕೈಗಳು ಎಂಬ ಅರ್ಥಗಳಿವೆ. ಅದೃಶ್ಯ ವಿಷಯಗಳನ್ನು ತಿಳಿದಿರುವವನು ಅಲ್ಲಾಹು ಮಾತ್ರ. ಸೃಷ್ಟಿಗಳಲ್ಲಿ ಯಾರಿಗೂ ಅದೃಶ್ಯ ಜ್ಞಾನವಿಲ್ಲ.
Enam 6:60
ರಾತ್ರಿಯಲ್ಲಿ (ನಿದ್ರಿಸುವಾಗ) ಅವನು ನಿಮ್ಮ ಆತ್ಮಗಳನ್ನು ವಶಪಡಿಸುತ್ತಾನೆ ಮತ್ತು ನೀವು ಹಗಲಿನಲ್ಲಿ ಮಾಡಿದ ಕರ್ಮಗಳನ್ನು ತಿಳಿಯುತ್ತಾನೆ. ನಂತರ ನಿಶ್ಚಿತ ಜೀವಿತಾವಧಿಯನ್ನು ಪೂರ್ಣಗೊಳಿಸಲು ಅವನು ನಿಮ್ಮನ್ನು ಹಗಲಿನಲ್ಲಿ (ನಿದ್ದೆಯಿಂದ) ಎಬ್ಬಿಸುತ್ತಾನೆ. ನಂತರ ನಿಮ್ಮನ್ನು ಅವನ ಬಳಿಗೆ ಮರಳಿಸಲಾಗುತ್ತದೆ. ನಂತರ ನೀವು ಮಾಡಿದ ಕರ್ಮಗಳನ್ನು ಅವನು ನಿಮಗೆ ತಿಳಿಸುತ್ತಾನೆ.
Enam 6:61
ಅವನಿಗೆ ಅವನ ದಾಸರ ಮೇಲೆ ಪರಮಾಧಿಕಾರವಿದೆ. ನಿಮ್ಮ ಮೇಲ್ನೋಟಕ್ಕೆ ಅವನು ಕಾವಲುಗಾರರನ್ನು (ದೇವದೂತರನ್ನು) ಕಳುಹಿಸುತ್ತಾನೆ. ಎಲ್ಲಿಯವರೆಗೆಂದರೆ, ನಿಮ್ಮಲ್ಲಿ ಒಬ್ಬನಿಗೆ ಮರಣವು ಸನ್ನಿಹಿತವಾದಾಗ, ನಮ್ಮ ದೂತರು ಅವನ ಆತ್ಮವನ್ನು ವಶಪಡಿಸುತ್ತಾರೆ. ಅವರು (ಕರ್ತವ್ಯ ನಿರ್ವಹಣೆಯಲ್ಲಿ) ಲೋಪವೆಸಗುವುದಿಲ್ಲ.
Enam 6:62
ನಂತರ ಅವರನ್ನು ಅವರ ನೈಜ ರಕ್ಷಕನಾದ ಅಲ್ಲಾಹನ ಬಳಿಗೆ ಮರಳಿಸಲಾಗುತ್ತದೆ. ತಿಳಿಯಿರಿ! ಆಜ್ಞಾಧಿಕಾರವಿರುವುದು ಅವನಿಗೆ ಮಾತ್ರ. ಅವನು ಅತಿವೇಗವಾಗಿ ವಿಚಾರಣೆ ಮಾಡುತ್ತಾನೆ.
Enam 6:63
ಹೇಳಿರಿ: “ಅಲ್ಲಾಹು ನಮ್ಮನ್ನು ಈ ಸಂಕಷ್ಟದಿಂದ ಪಾರು ಮಾಡಿದರೆ ಖಂಡಿತವಾಗಿಯೂ ನಾವು ಕೃತಜ್ಞರಾಗಿರುತ್ತೇವೆ” ಎಂದು ಹೇಳುತ್ತಾ ನೀವು ವಿನಮ್ರತೆಯಿಂದ ಮತ್ತು ರಹಸ್ಯವಾಗಿ ಅವನನ್ನು ಕರೆದು ಪ್ರಾರ್ಥಿಸುವಾಗ, ನೆಲ ಮತ್ತು ಕಡಲಿನ ಗಾಢಾಂಧಕಾರಗಳಿಂದ ನಿಮ್ಮನ್ನು ಕಾಪಾಡುವುದು ಯಾರು?
Enam 6:64
ಹೇಳಿರಿ: “ಅದರಿಂದ ಮತ್ತು ಇತರೆಲ್ಲಾ ಅನಾಹುತಗಳಿಂದ ಅಲ್ಲಾಹನೇ ನಿಮ್ಮನ್ನು ಪಾರು ಮಾಡುತ್ತಾನೆ. ಅದರ ಬಳಿಕವೂ ನೀವು ಅವನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುತ್ತೀರಿ.”
Enam 6:65
ಹೇಳಿರಿ: “ನಿಮ್ಮ ಮೇಲ್ಭಾಗದಿಂದ ಅಥವಾ ನಿಮ್ಮ ಕಾಲುಗಳ ಅಡಿಭಾಗದಿಂದ ನಿಮಗೆ ಶಿಕ್ಷೆಯನ್ನು ಕಳುಹಿಸಲು, ಅಥವಾ ನಿಮ್ಮನ್ನು ವಿಭಿನ್ನ ಪಂಗಡಗಳನ್ನಾಗಿ ಮಾಡಿ ಗೊಂದಲಗೊಳಿಸಿ, ನೀವು ಪರಸ್ಪರ ಹಿಂಸೆ ಅನುಭವಿಸುವಂತೆ ಮಾಡಲು ಅವನಿಗೆ ಸಾಮರ್ಥ್ಯವಿದೆ.” ನಾವು ಹೇಗೆ ವಚನಗಳನ್ನು ವಿವರಿಸಿಕೊಡುತ್ತೇವೆಂದು ನೋಡಿ. ಅವರು ಅರ್ಥಮಾಡಿಕೊಳ್ಳುವುದಕ್ಕಾಗಿ.
Enam 6:66
ಇದು ಸತ್ಯವಾಗಿದ್ದೂ ಸಹ ನಿಮ್ಮ ಜನರು ಇದನ್ನು ನಿಷೇಧಿಸಿದ್ದಾರೆ. ಹೇಳಿರಿ: “ನಾನು ನಿಮ್ಮ ಮೇಲ್ನೋಟ ವಹಿಸುವವನಲ್ಲ.”
Enam 6:67
ಪ್ರತಿಯೊಂದು ಘಟನೆಗೂ ಒಂದು ನಿಶ್ಚಿತ ಸಮಯವಿದೆ. ನೀವು ಸದ್ಯವೇ ತಿಳಿಯುವಿರಿ.
Enam 6:68
ಜನರು ಅಲ್ಲಾಹನ ವಚನಗಳ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡುವುದನ್ನು ಕಂಡರೆ, ಅವರು ಬೇರೆ ವಿಷಯಕ್ಕೆ ಪ್ರವೇಶಿಸುವ ತನಕ ಅವರೊಡನೆ ಕುಳಿತುಕೊಳ್ಳಬೇಡಿ. ಶೈತಾನನು ನಿಮಗೆ ಮರೆಯುವಂತೆ ಮಾಡಿದರೆ ನೆನಪಾದ ನಂತರ ಅಕ್ರಮವೆಸಗುವ ಆ ಜನರೊಡನೆ ಕುಳಿತುಕೊಳ್ಳಬೇಡಿ.
Enam 6:69
ಅವರ ವಿಚಾರಣೆ ಮಾಡುವ ಯಾವುದೇ ಹೊಣೆ ದೇವಭಯವುಳ್ಳವರಿಗಿಲ್ಲ. ಆದರೆ ಅವರಿಗೆ ನೆನಪಿಸಿಕೊಡಬೇಕು. ಅವರು ದೇವಭಯದಿಂದ ಜೀವಿಸುವುದಕ್ಕಾಗಿ.
Enam 6:70
ತಮ್ಮ ಧರ್ಮವನ್ನು ಆಟ ಮತ್ತು ಮನೋರಂಜನೆಯಾಗಿ ಸ್ವೀಕರಿಸಿದವರನ್ನು ಹಾಗೂ ಇಹಲೋಕದ ಜೀವನಕ್ಕೆ ಮರುಳಾದವರನ್ನು ಅವರ ಪಾಡಿಗೆ ಬಿಟ್ಟುಬಿಡಿ. ಜನರು ತಮ್ಮ ಕರ್ಮಗಳ ಕಾರಣದಿಂದ ನಾಶವಾಗದಿರುವುದಕ್ಕಾಗಿ ಇದರ (ಕುರ್‌ಆನಿನ) ಮೂಲಕ ಅವರಿಗೆ ಉಪದೇಶ ನೀಡಿ. ಅವರಿಗೆ ಅಲ್ಲಾಹನ ಹೊರತು ಯಾವುದೇ ರಕ್ಷಕ ಅಥವಾ ಶಿಫಾರಸುಗಾರನಿಲ್ಲ. ಅವರು ಎಲ್ಲಾ ರೀತಿಯ ಪರಿಹಾರಗಳನ್ನು ನೀಡಿದರೂ ಅದನ್ನು ಅವರಿಂದ ಸ್ವೀಕರಿಸಲಾಗುವುದಿಲ್ಲ. ಅವರೇ ತಮ್ಮ ಕರ್ಮಗಳ ಕಾರಣದಿಂದ ನಾಶವಾದವರು. ಅವರು ಸತ್ಯವನ್ನು ನಿಷೇಧಿಸುವ ಕಾರಣ ಅವರಿಗೆ ಕುದಿಯುವ ನೀರು ಮತ್ತು ಯಾತನಾಮಯ ಶಿಕ್ಷೆಯಿದೆ.
Enam 6:71
ಹೇಳಿರಿ: “ಅಲ್ಲಾಹನನ್ನು ಬಿಟ್ಟು ನಮಗೆ ಉಪಕಾರ ಅಥವಾ ತೊಂದರೆ ಮಾಡಲು ಸಾಧ್ಯವಿಲ್ಲದವರನ್ನು ನಾವು ಕರೆದು ಪ್ರಾರ್ಥಿಸಬೇಕೇ? ಅಲ್ಲಾಹು ನಮಗೆ ಸನ್ಮಾರ್ಗವನ್ನು ತೋರಿಸಿದ ಬಳಿಕ ನಾವು ಹಿಂದಕ್ಕೆ (ಸತ್ಯನಿಷೇಧಕ್ಕೆ) ಮರಳಿ ಹೋಗುವಂತಾಗಬೇಕೇ? “ನಮ್ಮ ಬಳಿ ಬಾ” ಎಂದು ಸನ್ಮಾರ್ಗಕ್ಕೆ ಕರೆಯುವ ಗೆಳೆಯರಿದ್ದೂ ಸಹ, ಶೈತಾನರ ಆಮಿಷಕ್ಕೆ ಬಲಿಯಾಗಿ ಭೂಮಿಯಲ್ಲಿ ದಿಗ್ಭ್ರಾಂತನಾಗಿ ಅಲೆದಾಡುವ ವ್ಯಕ್ತಿಯಂತೆ ನಾವಾಗಬೇಕೇ?” ಹೇಳಿರಿ: “ನಿಶ್ಚಯವಾಗಿಯೂ ಅಲ್ಲಾಹನ ಮಾರ್ಗದರ್ಶನವೇ ನಿಜವಾದ ಮಾರ್ಗದರ್ಶನ. ಸರ್ವಲೋಕಗಳ ಪರಿಪಾಲಕನಿಗೆ (ಅಲ್ಲಾಹನಿಗೆ) ಶರಣಾಗಬೇಕೆಂದು ನಮಗೆ ಆಜ್ಞಾಪಿಸಲಾಗಿದೆ.”
Enam 6:72
“ನಮಾಝ್ ಸಂಸ್ಥಾಪಿಸಿರಿ ಮತ್ತು ಅಲ್ಲಾಹನನ್ನು ಭಯಪಡಿರಿ” ಎಂದು ಕೂಡ (ನಮಗೆ ಆಜ್ಞಾಪಿಸಲಾಗಿದೆ). ನಿಮ್ಮೆಲ್ಲರನ್ನೂ ಅವನ ಬಳಿಗೇ ಒಟ್ಟುಗೂಡಿಸಲಾಗುವುದು.
Enam 6:73
ಭೂಮ್ಯಾಕಾಶಗಳನ್ನು ಸತ್ಯ ಸಹಿತ ಸೃಷ್ಟಿಸಿದವನು ಅವನೇ. ಅವನು “ಉಂಟಾಗು” ಎಂದು ಹೇಳುವ ದಿನ ಅದು ಉಂಟಾಗುತ್ತದೆ. ಅವನ ಮಾತು ಸತ್ಯವಾಗಿದೆ. ಕಹಳೆಯಲ್ಲಿ ಊದಲಾಗುವ ದಿನ ಆಧಿಪತ್ಯವು ಅವನದ್ದಾಗಿದೆ. ಅವನು ದೃಶ್ಯ-ಅದೃಶ್ಯಗಳನ್ನು ತಿಳಿದವನು. ಅವನು ವಿವೇಕಪೂರ್ಣನು ಮತ್ತು ಸೂಕ್ಷ್ಮಜ್ಞಾನಿಯಾಗಿದ್ದಾನೆ.
Enam 6:74
ಇಬ್ರಾಹೀಮರು ತಮ್ಮ ತಂದೆ ಆಝರನೊಡನೆ ಹೇಳಿದ ಸಂದರ್ಭ: “ನೀವು ವಿಗ್ರಹಗಳನ್ನು ದೇವರಾಗಿ ಸ್ವೀಕರಿಸಿದ್ದೀರಾ? ನಿಶ್ಚಯವಾಗಿಯೂ ನೀವು ಮತ್ತು ನಿಮ್ಮ ಜನರು ಸ್ಪಷ್ಟ ದುರ್ಮಾರ್ಗದಲ್ಲಿರುವುದನ್ನು ನಾನು ಕಾಣುತ್ತಿದ್ದೇನೆ.”
Enam 6:75
ಈ ರೀತಿ ನಾವು ಇಬ್ರಾಹೀಮರಿಗೆ ಭೂಮ್ಯಾಕಾಶಗಳ ಆಧಿಪತ್ಯಗಳನ್ನು ತೋರಿಸಿಕೊಟ್ಟೆವು; ಅವರು ದೃಢವಿಶ್ವಾಸಿಗಳಲ್ಲಿ ಒಳಪಡುವುದಕ್ಕಾಗಿ.
Enam 6:76
ರಾತ್ರಿಯು ಅವರನ್ನು ಆವರಿಸಿದಾಗ ಅವರು ನಕ್ಷತ್ರವನ್ನು ಕಂಡರು. ಅವರು ಹೇಳಿದರು: “ಇವನೇ ನನ್ನ ಪರಿಪಾಲಕ!” ಆದರೆ ಅದು ಕಣ್ಮರೆಯಾದಾಗ ಅವರು ಹೇಳಿದರು: “ಕಣ್ಮರೆಯಾಗುವವರನ್ನು ನಾನು ಇಷ್ಟಪಡುವುದಿಲ್ಲ.”
Enam 6:77
ನಂತರ ಚಂದ್ರ ಉದಯಿಸುವುದನ್ನು ಕಂಡಾಗ ಅವರು ಹೇಳಿದರು: “ಇವನೇ ನನ್ನ ಪರಿಪಾಲಕ!” ಅದು ಕೂಡ ಕಣ್ಮರೆಯಾದಾಗ ಅವರು ಹೇಳಿದರು: “ನನ್ನ ಪರಿಪಾಲಕ ನನಗೆ ಸನ್ಮಾರ್ಗ ತೋರಿಸದಿದ್ದರೆ ನಾನು ದಾರಿತಪ್ಪಿದವರಲ್ಲಿ ಸೇರುವುದು ನಿಶ್ಚಿತ.”
Enam 6:78
ನಂತರ ಸೂರ್ಯ ಉದಯಿಸುವುದನ್ನು ಕಂಡಾಗ ಅವರು ಹೇಳಿದರು: “ಇವನೇ ನನ್ನ ಪರಿಪಾಲಕ! ಇವನು ಬಹಳ ದೊಡ್ಡವನು!” ನಂತರ ಅದು ಕೂಡ ಕಣ್ಮರೆಯಾದಾಗ ಅವರು ಹೇಳಿದರು: “ಓ ನನ್ನ ಜನರೇ! ನಿಶ್ಚಯವಾಗಿಯೂ ನೀವು ಮಾಡುವ ಸಹಭಾಗಿತ್ವದಿಂದ (ಶಿರ್ಕ್‌ನಿಂದ) ನಾನು ಸಂಪೂರ್ಣ ಮುಕ್ತನಾಗಿದ್ದೇನೆ.[1]
———
[1] ಇಬ್ರಾಹೀಮರ (ಅವರ ಮೇಲೆ ಶಾಂತಿಯಿರಲಿ) ಕಾಲದ ಜನರು ವಿಗ್ರಹಗಳನ್ನು ಮಾತ್ರವಲ್ಲದೆ ಆಕಾಶಕಾಯಗಳನ್ನು ಕೂಡ ಪೂಜಿಸುತ್ತಿದ್ದರು. ಸೂರ್ಯ, ಚಂದ್ರ, ನಕ್ಷತ್ರಗಳು ದೇವರುಗಳೆಂದು ಅವರು ನಂಬುತ್ತಿದ್ದರು. ಇಬ್ರಾಹೀಮರು (ಅವರ ಮೇಲೆ ಶಾಂತಿಯಿರಲಿ) ಇಲ್ಲಿ ಅವರ ಈ ನಂಬಿಕೆಯು ಎಷ್ಟು ಬಾಲಿಶವೆಂದು ಅವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಿದ್ದಾರೆ.
Enam 6:79
ಭೂಮ್ಯಾಕಾಶಗಳನ್ನು ಸೃಷ್ಟಿಸಿದವನಿಗೆ (ಅಲ್ಲಾಹನಿಗೆ) ನಾನು ನನ್ನ ಮುಖವನ್ನು ಏಕನಿಷ್ಠೆಯಿಂದ ತಿರುಗಿಸಿದ್ದೇನೆ. ನಾನು ಸಹಭಾಗಿತ್ವ (ಶಿರ್ಕ್) ಮಾಡುವವರಲ್ಲಿ ಸೇರಿದವನಲ್ಲ.”
Enam 6:80
ಅವರ ಜನರು ಅವರೊಂದಿಗೆ ತರ್ಕಿಸಿದರು. ಅವರು ಹೇಳಿದರು: “ನೀವು ಅಲ್ಲಾಹನ ವಿಷಯದಲ್ಲಿ ನನ್ನೊಂದಿಗೆ ತರ್ಕಿಸುತ್ತೀರಾ? ಅವನು ನನಗೆ ಸನ್ಮಾರ್ಗವನ್ನು ತೋರಿಸಿದ್ದಾನೆ. ನೀವು ಅವನೊಡನೆ ಸಹಭಾಗಿಯಾಗಿ ಮಾಡುವ ಯಾರನ್ನೂ (ಯಾವುದೇ ದೇವರನ್ನೂ) ನಾನು ಭಯಪಡುವುದಿಲ್ಲ. ನನ್ನ ಪರಿಪಾಲಕನು (ಅಲ್ಲಾಹು) ಇಚ್ಛಿಸುವುದು ಮಾತ್ರ ಸಂಭವಿಸುತ್ತದೆ. ನನ್ನ ಪರಿಪಾಲಕನ (ಅಲ್ಲಾಹನ) ಜ್ಞಾನವು ಎಲ್ಲಾ ವಿಷಯಗಳನ್ನೂ ಒಳಗೊಂಡಿದೆ. ನೀವು ಉಪದೇಶ ಪಡೆಯುವುದಿಲ್ಲವೇ?
Enam 6:81
ನೀವು (ಅಲ್ಲಾಹನೊಡನೆ) ಸಹಭಾಗಿಯಾಗಿ ಮಾಡಿದವರನ್ನು ನಾನು ಹೇಗೆ ಭಯಪಡಲಿ? ಅಲ್ಲಾಹು ಯಾವುದೇ ಸಾಕ್ಷ್ಯಾಧಾರ ಅವತೀರ್ಣಗೊಳಿಸದ ವಸ್ತುಗಳನ್ನು ಅವನೊಡನೆ ಸಹಭಾಗಿಯಾಗಿ ಮಾಡಲು ನೀವು (ಸ್ವಲ್ಪವೂ) ಭಯಪಡುವುದಿಲ್ಲ. ಹೀಗಿರುವಾಗ ಈ ಎರಡು ಪಕ್ಷಗಳಲ್ಲಿ ನಿರ್ಭಯಕ್ಕೆ ಹೆಚ್ಚು ಅರ್ಹರು ಯಾರು? ನಿಮಗೆ ತಿಳಿದಿದ್ದರೆ ಹೇಳಿರಿ.”[1]
———
[1] ಅಲ್ಲಾಹನ ಸೃಷ್ಟಿಗಳನ್ನು ಅವನೊಡನೆ ಸಹಭಾಗಿಯಾಗಿ ಮಾಡಿ ನೀವು ಅವರನ್ನು ದೇವರೆಂದು ಕರೆದು ಆರಾಧಿಸುತ್ತೀರಿ. ಅವರು ದೇವರು ಎನ್ನುವುದಕ್ಕೆ ಅಲ್ಲಾಹು ಯಾವುದೇ ಪುರಾವೆಯನ್ನೂ ಇಳಿಸಿಲ್ಲ. ಅಲ್ಲಾಹನ ಆಜ್ಞೆಗೆ ವಿರುದ್ಧವಾಗಿ ಅವರನ್ನು ದೇವರನ್ನಾಗಿ ಮಾಡಿ ಪ್ರಾರ್ಥಿಸಲು ನೀವು ಸ್ವಲ್ಪವೂ ಭಯಪಡುವುದಿಲ್ಲ. ನಾನು ಅಲ್ಲಾಹನನ್ನು ಮಾತ್ರ ಆರಾಧಿಸುತ್ತೇನೆ ಮತ್ತು ಅವನನ್ನು ಮಾತ್ರ ಭಯಪಡುತ್ತೇನೆ. ಹೀಗಿರುವಾಗ, ಹೆಚ್ಚು ನಿರ್ಭಯರಾಗಿರುವವರು ಯಾರು? ನಾನೋ ಅಥವಾ ನೀವೋ? ಸರಿಯಾಗಿ ಆಲೋಚನೆ ಮಾಡಿ ಹೇಳಿ.
Enam 6:82
ಸತ್ಯವಿಶ್ವಾಸಿಗಳು ಮತ್ತು ತಮ್ಮ ವಿಶ್ವಾಸದಲ್ಲಿ ಸಹಭಾಗಿತ್ವವನ್ನು (ಶಿರ್ಕ್) ಬೆರೆಸದವರು ಯಾರೋ—ಅವರಿಗೆ ನಿರ್ಭಯವಿದೆ. ಅವರೇ ಸನ್ಮಾರ್ಗ ಪಡೆದವರು.
Enam 6:83
ಇದು ನಾವು ಇಬ್ರಾಹೀಮರಿಗೆ ಅವರ ಜನರ ವಿರುದ್ಧ ತರ್ಕಿಸಲು ನೀಡಿದ ಪುರಾವೆಯಾಗಿದೆ. ನಾವು ಇಚ್ಛಿಸುವವರ ಸ್ಥಾನಮಾನಗಳನ್ನು ನಾವು ಏರಿಸುತ್ತೇವೆ. ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು ವಿವೇಕಪೂರ್ಣನು ಮತ್ತು ಸರ್ವಜ್ಞನಾಗಿದ್ದಾನೆ.
Enam 6:84
ನಾವು ಅವರಿಗೆ ಇಸ್‍ಹಾಕ್ ಮತ್ತು ಯಾಕೂಬರನ್ನು ದಯಪಾಲಿಸಿದೆವು. ಅವರೆಲ್ಲರಿಗೂ ನಾವು ಸನ್ಮಾರ್ಗವನ್ನು ತೋರಿಸಿದೆವು. ಅವರಿಗಿಂತ ಮೊದಲು ನಾವು ನೂಹರಿಗೆ ಸನ್ಮಾರ್ಗವನ್ನು ತೋರಿಸಿದೆವು. ಅವರ ಸಂತಾನದಲ್ಲಿ ಸೇರಿದ ದಾವೂದ್, ಸುಲೈಮಾನ್, ಅಯ್ಯೂಬ್, ಯೂಸುಫ್, ಮೂಸಾ ಮತ್ತು ಹಾರೂನರಿಗೂ ಕೂಡ. ಒಳಿತು ಮಾಡುವವರಿಗೆ ನಾವು ಈ ರೀತಿ ಪ್ರತಿಫಲವನ್ನು ನೀಡುವೆವು.
Enam 6:85
ಝಕರಿಯ್ಯಾ, ಯಹ್ಯಾ, ಈಸಾ ಮತ್ತು ಇಲ್ಯಾಸರಿಗೂ ಕೂಡ. ಅವರೆಲ್ಲರೂ ನೀತಿವಂತರಲ್ಲಿ ಸೇರಿದವರು.
Enam 6:86
ಇಸ್ಮಾಈಲ್, ಅಲ್‍ಯಸಅ್, ಯೂನುಸ್ ಮತ್ತು ಲೂತರಿಗೂ ಕೂಡ. ಅವರೆಲ್ಲರನ್ನೂ ನಾವು ಸರ್ವಲೋಕದವರಲ್ಲಿ ಶ್ರೇಷ್ಠಗೊಳಿಸಿದೆವು.
Enam 6:87
ಅವರ ಪೂರ್ವಜರು, ಅವರ ಮಕ್ಕಳು ಮತ್ತು ಸಹೋದರರಿಗೂ ಕೂಡ. ಅವರನ್ನು ನಾವು ವಿಶೇಷವಾಗಿ ಆರಿಸಿದೆವು ಮತ್ತು ನೇರಮಾರ್ಗಕ್ಕೆ ಮುನ್ನಡೆಸಿದೆವು.
Enam 6:88
ಇದು ಅಲ್ಲಾಹನ ಸನ್ಮಾರ್ಗವಾಗಿದೆ. ಅವನು ತನ್ನ ದಾಸರಲ್ಲಿ ಅವನು ಇಚ್ಛಿಸುವವರಿಗೆ ಅದನ್ನು ತೋರಿಸುತ್ತಾನೆ. ಅವರು (ಅಲ್ಲಾಹನೊಡನೆ) ಸಹಭಾಗಿತ್ವ (ಶಿರ್ಕ್) ಮಾಡುತ್ತಿದ್ದರೆ ಅವರು ಮಾಡಿದ ಕರ್ಮಗಳೆಲ್ಲವೂ ನಿಷ್ಫಲವಾಗಿ ಬಿಡುತ್ತಿದ್ದವು.
Enam 6:89
ಇವರಿಗೇ ನಾವು ಗ್ರಂಥ, ವಿವೇಕ ಮತ್ತು ಪ್ರವಾದಿತ್ವಗಳನ್ನು ನೀಡಿದ್ದು. ಇವರು (ಸತ್ಯನಿಷೇಧಿಗಳು) ಅವುಗಳನ್ನು ನಿಷೇಧಿಸಿದರೆ, ಅವುಗಳನ್ನು ನಿಷೇಧಿಸದ ಜನರಿಗೆ ನಾವು ಅದನ್ನು ವಹಿಸಿಕೊಟ್ಟಿದ್ದೇವೆ.
Enam 6:90
ಇವರಿಗೇ ಅಲ್ಲಾಹು ಸನ್ಮಾರ್ಗವನ್ನು ತೋರಿಸಿದ್ದು. ಆದ್ದರಿಂದ ಅವರ ಸನ್ಮಾರ್ಗವನ್ನು ಅನುಸರಿಸಿರಿ. ಹೇಳಿರಿ: “ಇದಕ್ಕಾಗಿ ನಾನು ನಿಮ್ಮಿಂದ ಪ್ರತಿಫಲ ಕೇಳುವುದಿಲ್ಲ. ಇದು ಸರ್ವಲೋಕದವರಿಗೆ ಒಂದು ಉಪದೇಶ ಮಾತ್ರವಾಗಿದೆ.”
Enam 6:91
“ಅಲ್ಲಾಹು ಮನುಷ್ಯನಿಗೆ (ಪ್ರವಾದಿಗೆ) ಏನೂ ಅವತೀರ್ಣಗೊಳಿಸಿಲ್ಲ” ಎಂದು ಅವರು ಹೇಳಿದಾಗ, ಅವರು ಅಲ್ಲಾಹನಿಗೆ ಮಹತ್ವ ನೀಡಬೇಕಾದ ರೀತಿಯಲ್ಲಿ ಮಹತ್ವ ನೀಡಲಿಲ್ಲ. ಕೇಳಿರಿ: “ಜನರಿಗೆ ಬೆಳಕು ಮತ್ತು ಸನ್ಮಾರ್ಗವಾಗಿ ಮೂಸಾ ತಂದ ಗ್ರಂಥವನ್ನು ಅವತೀರ್ಣಗೊಳಿಸಿದ್ದು ಯಾರು? ನೀವು ಅದನ್ನು ಕಾಗದದ ತುಂಡುಗಳಾಗಿ ಮಾಡಿ, ಅದರ ಕೆಲವು ಭಾಗವನ್ನು ಬಹಿರಂಗಪಡಿಸುತ್ತೀರಿ ಮತ್ತು ಹೆಚ್ಚಿನದ್ದನ್ನು ಮುಚ್ಚಿಡುತ್ತೀರಿ. ನಿಮಗೆ ಮತ್ತು ನಿಮ್ಮ ಪೂರ್ವಜರಿಗೆ ಗೊತ್ತಿಲ್ಲದ ಅನೇಕ ಸಂಗತಿಗಳನ್ನು (ಆ ಗ್ರಂಥದ ಮೂಲಕ) ಕಲಿಸಿಕೊಡಲಾಗಿತ್ತು.” ಹೇಳಿರಿ: “(ಅದನ್ನು ಅವತೀರ್ಣಗೊಳಿಸಿದ್ದು) ಅಲ್ಲಾಹು.” ನಂತರ ಅವರನ್ನು ಅವರ ವ್ಯರ್ಥ ಮಾತುಗಳಲ್ಲಿ ಆಟವಾಡಲು ಬಿಟ್ಟುಬಿಡಿ.
Enam 6:92
ಇದು ನಾವು ಅವತೀರ್ಣಗೊಳಿಸಿದ ಸಮೃದ್ಧಪೂರ್ಣ ಗ್ರಂಥವಾಗಿದೆ. ಇದು ಇದಕ್ಕಿಂತ ಮೊದಲಿನ ಗ್ರಂಥಗಳನ್ನು ದೃಢೀಕರಿಸುತ್ತದೆ. ಉಮ್ಮುಲ್ ಕುರಾ (ಮಕ್ಕಾ) ಮತ್ತು ಅದರ ಆಸುಪಾಸಿನ ಜನರಿಗೆ ನೀವು ಮುನ್ನೆಚ್ಚರಿಕೆ ನೀಡುವುದಕ್ಕಾಗಿ (ಇದನ್ನು ಅವತೀರ್ಣಗೊಳಿಸಲಾಗಿದೆ). ಪರಲೋಕದಲ್ಲಿ ವಿಶ್ವಾಸವಿಡುವವರು ಈ ಗ್ರಂಥದಲ್ಲಿ ವಿಶ್ವಾಸವಿಡುತ್ತಾರೆ. ಅವರು ತಮ್ಮ ನಮಾಝ್‍ಗಳನ್ನು ಸಂರಕ್ಷಿಸುತ್ತಾರೆ.
Enam 6:93
ಅಲ್ಲಾಹನ ಮೇಲೆ ಸುಳ್ಳು ಆರೋಪಿಸುವವನಿಗಿಂತ ಅಥವಾ ತನಗೆ ದೇವವಾಣಿ ಅವತೀರ್ಣವಾಗದಿದ್ದರೂ ಅವತೀರ್ಣವಾಗಿದೆಯೆಂದು ಹೇಳುವವನಿಗಿಂತ, ಮತ್ತು ಅಲ್ಲಾಹು ಅವತೀರ್ಣಗೊಳಿಸಿದ್ದನ್ನು ನಾನು ಕೂಡ ಅವತೀರ್ಣಗೊಳಿಸುತ್ತೇನೆ ಎಂದು ಹೇಳುವವನಿಗಿಂತ ದೊಡ್ಡ ಅಕ್ರಮಿ ಯಾರು? ಅಕ್ರಮಿಗಳು ಮರಣ ಯಾತನೆ ಅನುಭವಿಸುವ ಭಯಾನಕ ದೃಶ್ಯವನ್ನು ನೀವೇನಾದರೂ ನೋಡಿರುತ್ತಿದ್ದರೆ! ದೇವದೂತರುಗಳು ಅವರ ಬಳಿಗೆ ತಮ್ಮ ಕೈಗಳನ್ನು ಚಾಚುತ್ತಾ ಹೇಳುತ್ತಾರೆ: “ನಿಮ್ಮ ಆತ್ಮಗಳನ್ನು ಹೊರಹಾಕಿರಿ; ನೀವು ಅಲ್ಲಾಹನ ಮೇಲೆ ಸತ್ಯಕ್ಕೆ ದೂರವಾದುದನ್ನು ಹೇಳಿದ ಕಾರಣ ಮತ್ತು ಅಹಂಕಾರದಿಂದ ಅವನ ವಚನಗಳನ್ನು ನಿಷೇಧಿಸಿದ ಕಾರಣ ಇಂದು ನಿಮಗೆ ಹೀನಾಯ ಶಿಕ್ಷೆ ನೀಡಲಾಗುವುದು.”
Enam 6:94
(ಅವರೊಡನೆ ಹೇಳಲಾಗುವುದು): “ನಾವು ನಿಮ್ಮನ್ನು ಪ್ರಥಮ ಬಾರಿ ಸೃಷ್ಟಿಸಿದಂತೆ, ನೀವು ಒಬ್ಬೊಬ್ಬರಾಗಿ ನಮ್ಮ ಬಳಿಗೆ ಬಂದಿದ್ದೀರಿ. ನಾವು ನಿಮಗೆ ನೀಡಿದ ಸವಲತ್ತುಗಳನ್ನು ನಿಮ್ಮ ಬೆನ್ನ ಹಿಂದೆ ಬಿಟ್ಟು ಬಂದಿದ್ದೀರಿ. ನೀವು (ಅಲ್ಲಾಹನ) ಸಹಭಾಗಿಗಳೆಂದು ವಾದಿಸುತ್ತಿದ್ದ ನಿಮ್ಮ ಶಿಫಾರಸುಗಾರರನ್ನು ನಾವು ನಿಮ್ಮ ಜೊತೆಗೆ ಕಾಣುತ್ತಿಲ್ಲ. ನಿಮ್ಮ ಆ ಸಂಬಂಧಗಳು ಮುರಿದು ಬಿದ್ದಿವೆ. ನೀವು (ದೇವರುಗಳೆಂದು) ವಾದಿಸುತ್ತಿದ್ದವರೆಲ್ಲರೂ ನಿಮ್ಮನ್ನು ಬಿಟ್ಟು ಕಣ್ಮರೆಯಾಗಿದ್ದಾರೆ.”[1]
———
[1] ಅಲ್ಲಾಹನ ಬಳಿ ಶಿಫಾರಸು ಮಾಡುತ್ತಾರೆ ಮತ್ತು ಅಲ್ಲಾಹನಿಗೆ ಸಮೀಪಗೊಳಿಸುತ್ತಾರೆಂಬ ನಂಬಿಕೆಯಿಂದ ಸತ್ಯನಿಷೇಧಿಗಳು ಅನೇಕ ದೇವರುಗಳನ್ನು ಆರಾಧಿಸುತ್ತಿದ್ದರು. ಆದರೆ ಅವರು ಪರಲೋಕಕ್ಕೆ ಬರುವಾಗ ಈ ದೇವರುಗಳೆಲ್ಲರೂ ಕಣ್ಮರೆಯಾಗಿರುತ್ತಾರೆ.
Enam 6:95
ನಿಶ್ಚಯವಾಗಿಯೂ ಅಲ್ಲಾಹು ಧಾನ್ಯವನ್ನು ಮತ್ತು ಖರ್ಜೂರದ ಬೀಜವನ್ನು ಸೀಳುತ್ತಾನೆ. ಅವನು ನಿರ್ಜೀವಿಯಿಂದ ಜೀವಿಯನ್ನು ಹೊರತರುತ್ತಾನೆ ಮತ್ತು ಜೀವಿಯಿಂದ ನಿರ್ಜೀವಿಯನ್ನು ಹೊರತರುತ್ತಾನೆ. ಅವನೇ ಅಲ್ಲಾಹು. ಹೀಗಿದ್ದೂ ನೀವು ದಾರಿತಪ್ಪುತ್ತಿರುವುದು ಹೇಗೆ?
Enam 6:96
ಅವನು ಪ್ರಭಾತವನ್ನು ಸೀಳುತ್ತಾನೆ. ಅವನು ರಾತ್ರಿಯನ್ನು ವಿಶ್ರಾಂತಿಯನ್ನಾಗಿ ಮಾಡಿದ್ದಾನೆ ಮತ್ತು ಸೂರ್ಯ-ಚಂದ್ರರನ್ನು ಕಾಲಗಣನೆಗೆ ಆಧಾರವಾಗಿ ಮಾಡಿದ್ದಾನೆ ಇದು ಪ್ರಬಲನು ಮತ್ತು ಸರ್ವಜ್ಞನಾದ ಅಲ್ಲಾಹನ ನಿರ್ಣಯವಾಗಿದೆ.
Enam 6:97
ನೆಲ ಮತ್ತು ಕಡಲಿನ ಗಾಢಾಂಧಕಾರದಲ್ಲಿ ನೀವು ದಾರಿಯನ್ನು ಕಾಣಲು ಅವನು ನಕ್ಷತ್ರಗಳನ್ನು ಉಂಟು ಮಾಡಿದನು. ತಿಳಿಯುವ ಜನರಿಗಾಗಿ ನಾವು ನಮ್ಮ ದೃಷ್ಟಾಂತಗಳನ್ನು ವಿವರಿಸಿಕೊಟ್ಟಿದ್ದೇವೆ.
Enam 6:98
ನಿಮ್ಮನ್ನು ಒಂದೇ ಆತ್ಮದಿಂದ ಸೃಷ್ಟಿಸಿದವನು ಅವನೇ. ನಂತರ ಅವನು ಒಂದು ವಾಸ್ತವ್ಯ ಮತ್ತು ಸಂಗ್ರಹ ಸ್ಥಳವನ್ನು[1] ಮಾಡಿದನು ಅರ್ಥಮಾಡಿಕೊಳ್ಳುವ ಜನರಿಗಾಗಿ ನಾವು ದೃಷ್ಟಾಂತಗಳನ್ನು ವಿವರಿಸಿಕೊಟ್ಟಿದ್ದೇವೆ.
———
[1] ವಾಸ್ತವ್ಯ ಎಂದರೆ ಗರ್ಭಾಶಯ ಮತ್ತು ಸಂಗ್ರಹ ಸ್ಥಳವೆಂದರೆ ಪುರುಷರ ಬೆನ್ನೆಲುಬು.
Enam 6:99
ಆಕಾಶದಿಂದ ಮಳೆ ಸುರಿಸುವವನು ಅವನೇ. ನಂತರ ನಾವು ಅದರಿಂದ ಎಲ್ಲಾ ರೀತಿಯ ಬೆಳೆಗಳನ್ನು ಉತ್ಪಾದಿಸಿದೆವು. ನಾವು ಅದರಿಂದ ಹಸಿರು ಸಸ್ಯಗಳನ್ನು ಉತ್ಪಾದಿಸಿದೆವು. ಆ ಸಸ್ಯಗಳಿಂದ ನಾವು ತುಂಬಿ ತುಳುಕುವ ಧಾನ್ಯಗಳನ್ನು ಉತ್ಪಾದಿಸುತ್ತೇವೆ. ಖರ್ಜೂರದ ಮರದಿಂದ ಅಥವಾ ಅದರ ಮೊಗ್ಗುಗಳಿಂದ ತೂಗು ಹಾಕಲಾದ ಗೊಂಚಲುಗಳು ಹೊರಹೊಮ್ಮುತ್ತವೆ. ನಾವು ದ್ರಾಕ್ಷಿ ತೋಟಗಳನ್ನು ಮತ್ತು ಪರಸ್ಪರ ಹೋಲಿಕೆಯಿದ್ದರೂ ವಿಭಿನ್ನವಾಗಿರುವ ಆಲಿವ್ ಮತ್ತು ದಾಳಿಂಬೆಯನ್ನು ಉತ್ಪಾದಿಸಿದೆವು. ಅವು ಕಾಯಿಬಿಡುವಾಗ ಮತ್ತು ಹಣ್ಣಾಗುವಾಗ ಅವುಗಳನ್ನು ನೋಡಿರಿ. ವಿಶ್ವಾಸವಿಡುವ ಜನರಿಗೆ ನಿಶ್ಚಯವಾಗಿಯೂ ಇದರಲ್ಲಿ ದೃಷ್ಟಾಂತಗಳಿವೆ.
Enam 6:100
ಅವರು ಜಿನ್ನ್‌ಗಳನ್ನು ಅಲ್ಲಾಹನಿಗೆ ಸಹಭಾಗಿಗಳಾಗಿ ಮಾಡಿದರು. ಆದರೆ ವಾಸ್ತವವಾಗಿ ಅವರನ್ನು ಸೃಷ್ಟಿಸಿದ್ದು ಅವನೇ. ಅವರು ಯಾವುದೇ ಜ್ಞಾನವಿಲ್ಲದೆ ಅಲ್ಲಾಹನಿಗೆ ಗಂಡು ಮತ್ತು ಹೆಣ್ಣುಮಕ್ಕಳಿದ್ದಾರೆಂದು ಆರೋಪಿಸಿದರು. ಅವರ ಈ ವರ್ಣನೆಗಳಿಗಿಂತ ಅಲ್ಲಾಹು ಎಷ್ಟೋ ಪರಿಶುದ್ಧನು ಮತ್ತು ಉನ್ನತನಾಗಿದ್ದಾನೆ.
Enam 6:101
ಅವನು ಪೂರ್ವ ಮಾದರಿಯಿಲ್ಲದೆ ಭೂಮ್ಯಾಕಾಶಗಳನ್ನು ಸೃಷ್ಟಿಸಿದವನು. ಅವನಿಗೆ ಹೆಂಡತಿಯೇ ಇಲ್ಲದಿರುವಾಗ ಮಕ್ಕಳಿರುವುದು ಹೇಗೆ? ಅವನು ಎಲ್ಲಾ ವಸ್ತುಗಳನ್ನು ಸೃಷ್ಟಿಸಿದನು. ಅವನು ಎಲ್ಲಾ ವಿಷಯಗಳನ್ನು ತಿಳಿದವನಾಗಿದ್ದಾನೆ.
Enam 6:102
ಅವನೇ ನಿಮ್ಮ ಪರಿಪಾಲಕನಾದ ಅಲ್ಲಾಹು. ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಅವನು ಎಲ್ಲಾ ವಸ್ತುಗಳ ಸೃಷ್ಟಿಕರ್ತನಾಗಿದ್ದಾನೆ. ಆದ್ದರಿಂದ ಅವನನ್ನು ಮಾತ್ರ ಆರಾಧಿಸಿರಿ. ಅವನು ಎಲ್ಲಾ ವಸ್ತುಗಳ ಮೇಲ್ವಿಚಾರಕನಾಗಿದ್ದಾನೆ.
Enam 6:103
ದೃಷ್ಟಿಗಳು ಅವನನ್ನು ತಲುಪುವುದಿಲ್ಲ. ಆದರೆ ಅವನು ದೃಷ್ಟಿಗಳನ್ನು ತಲುಪುತ್ತಾನೆ.[1] ಅವನು ಸೂಕ್ಷ್ಮಗ್ರಾಹಿ ಮತ್ತು ಸೂಕ್ಷ್ಮಜ್ಞಾನಿಯಾಗಿದ್ದಾನೆ.
———
[1] ಭೂಲೋಕದಲ್ಲಿ ಯಾರಿಗೂ ಅಲ್ಲಾಹನನ್ನು ನೋಡಲು ಸಾಧ್ಯವಿಲ್ಲ. ಆದರೆ ಪರಲೋಕದಲ್ಲಿ ಸತ್ಯವಿಶ್ವಾಸಿಗಳು ಅಲ್ಲಾಹನನ್ನು ನೋಡುತ್ತಾರೆ.
Enam 6:104
ನಿಮಗೆ ನಿಮ್ಮ ಪರಿಪಾಲಕನಿಂದ ಕಣ್ತೆರೆಸುವಂತಹ ಪುರಾವೆಗಳು ಬಂದಿವೆ. ಆದ್ದರಿಂದ ಯಾರು ಅದನ್ನು ನೋಡುತ್ತಾನೋ ಅದರ ಒಳಿತು ಅವನಿಗೇ ಆಗಿದೆ. ಯಾರು ಕುರುಡನಾಗುತ್ತಾನೋ ಅದರ ದೋಷವು ಅವನಿಗೇ ಆಗಿದೆ. (ಹೇಳಿರಿ): “ನಾನು ನಿಮ್ಮ ಕಾವಲುಗಾರನಲ್ಲ.”
Enam 6:105
ಈ ರೀತಿ ನಾವು ನಾನಾ ವಿಧಗಳಲ್ಲಿ ವಚನಗಳನ್ನು ವಿವರಿಸಿಕೊಡುತ್ತೇವೆ. “ನೀವು (ಯಹೂದಿ-ಕ್ರೈಸ್ತರಿಂದ) ಕಲಿತು ಬಂದಿದ್ದೀರಿ” ಎಂದು ಸತ್ಯನಿಷೇಧಿಗಳು ಹೇಳುವುದಕ್ಕಾಗಿ ಮತ್ತು ತಿಳುವಳಿಕೆಯಿರುವ ಜನರಿಗೆ ಇದನ್ನು ವಿವರಿಸಿಕೊಡುವುದಕ್ಕಾಗಿ.[1]
———
[1] ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಯಹೂದಿ-ಕ್ರೈಸ್ತರಿಂದ ಕಲಿತು ಬಂದು ಪ್ರವಚನ ಮಾಡುತ್ತಾರೆಂದು ಸತ್ಯನಿಷೇಧಿಗಳು ಆರೋಪಿಸುತ್ತಿದ್ದರು.
Enam 6:106
ನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾದ ಸಂದೇಶವನ್ನು ಹಿಂಬಾಲಿಸಿರಿ. ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಬಹುದೇವಾರಾಧಕರಿಂದ ವಿಮುಖರಾಗಿರಿ.
Enam 6:107
ಅಲ್ಲಾಹು ಇಚ್ಛಿಸುತ್ತಿದ್ದರೆ ಅವರು ಸಹಭಾಗಿತ್ವ (ಶಿರ್ಕ್) ಮಾಡುತ್ತಿರಲಿಲ್ಲ. ನಾವು ನಿಮ್ಮನ್ನು ಅವರಿಗೆ ಕಾವಲುಗಾರನಾಗಿ ಮಾಡಿಲ್ಲ. ನೀವು ಅವರ ಮೇಲ್ನೋಟ ವಹಿಸಬೇಕಾದವರೂ ಅಲ್ಲ.
Enam 6:108
ಅವರು ಅಲ್ಲಾಹನನ್ನು ಬಿಟ್ಟು ಕರೆದು ಪ್ರಾರ್ಥಿಸುವ ಆ ದೇವರುಗಳನ್ನು ದೂಷಿಸಬೇಡಿ. ಇದರಿಂದ ಅವರು ತಿಳುವಳಿಕೆಯಿಲ್ಲದೆ ದ್ವೇಷದಿಂದ ಅಲ್ಲಾಹನನ್ನು ದೂಷಿಸಬಹುದು. ಈ ರೀತಿ ನಾವು ಪ್ರತಿಯೊಂದು ಸಮುದಾಯದವರಿಗೂ ಅವರ ಕರ್ಮಗಳನ್ನು ಅಲಂಕರಿಸಿ ತೋರಿಸಿದ್ದೇವೆ. ನಂತರ ಅವರನ್ನು ಅವರ ಪರಿಪಾಲಕನ ಬಳಿಗೆ ಮರಳಿಸಲಾಗುವುದು. ಆಗ ಅವರು ಮಾಡುತ್ತಿದ್ದ ಕರ್ಮಗಳ ಬಗ್ಗೆ ಅವನು ಅವರಿಗೆ ತಿಳಿಸಿಕೊಡುವನು.
Enam 6:109
ಅವರಿಗೆ ಒಂದು ದೃಷ್ಟಾಂತವು ಬಂದರೆ ಅವರು ಅದರಲ್ಲಿ ಖಂಡಿತ ವಿಶ್ವಾಸವಿಡುತ್ತಾರೆಂದು ಅವರು ಅಲ್ಲಾಹನ ಮೇಲೆ ಪ್ರಬಲವಾಗಿ ಆಣೆ ಮಾಡುತ್ತಾ ಹೇಳಿದರು. ಹೇಳಿರಿ: “ದೃಷ್ಟಾಂತಗಳು ಅಲ್ಲಾಹನ ಬಳಿ ಮಾತ್ರವಿದೆ.” ನಿಮಗೇನು ಗೊತ್ತು? ಅದು ಬಂದರೂ ಕೂಡ ಅವರು ವಿಶ್ವಾಸವಿಡಲಾರರು.
Enam 6:110
ಅವರು ಇದರಲ್ಲಿ (ಈ ಕುರ್‌ಆನ್‍ನಲ್ಲಿ) ಪ್ರಥಮ ಬಾರಿ ವಿಶ್ವಾಸವಿಡದಂತೆಯೇ (ಈಗಲೂ) ನಾವು ಅವರ ಹೃದಯಗಳನ್ನು ಮತ್ತು ಕಣ್ಣುಗಳನ್ನು ತಿರುಗಿಸಿಬಿಡುವೆವು. ಅವರು ಅವರ ಅತಿರೇಕಗಳಲ್ಲಿ ಅಂಧವಾಗಿ ವಿಹರಿಸುವಂತೆ ನಾವು ಅವರನ್ನು ಬಿಟ್ಟುಬಿಡುವೆವು.
Enam 6:111
ನಾವು ಅವರ ಬಳಿಗೆ ದೇವದೂತರುಗಳನ್ನು ಇಳಿಸಿದರೂ, ಸತ್ತವರು (ಎದ್ದು ಬಂದು) ಅವರೊಡನೆ ಮಾತನಾಡಿದರೂ, ನಾವು ಎಲ್ಲಾ ವಸ್ತುಗಳನ್ನು ಅವರ ಮುಂದೆ ಒಟ್ಟುಗೂಡಿಸಿದರೂ ಅವರು ವಿಶ್ವಾಸವಿಡುವುದಿಲ್ಲ. ಅಲ್ಲಾಹು ಇಚ್ಛಿಸಿದರೆ ಹೊರತು. ಆದರೆ ಅವರಲ್ಲಿ ಹೆಚ್ಚಿನವರು ಅವಿವೇಕಿಗಳಾಗಿದ್ದಾರೆ.
Enam 6:112
ಈ ರೀತಿ ನಾವು ಪ್ರತಿಯೊಬ್ಬ ಸಂದೇಶವಾಹಕರಿಗೂ ಮನುಷ್ಯರಲ್ಲಿ ಮತ್ತು ಜಿನ್ನ್‌ಗಳಲ್ಲಿ ಸೇರಿದ ಶೈತಾನರನ್ನು ಶತ್ರುಗಳನ್ನಾಗಿ ಮಾಡಿದ್ದೇವೆ. ಅವರು ವಂಚನಾತ್ಮಕವಾದ ಆಕರ್ಷಕ ಮಾತುಗಳನ್ನು ಪರಸ್ಪರ ದುರ್ಬೋಧನೆ ಮಾಡುತ್ತಾರೆ. ನಿಮ್ಮ ಪರಿಪಾಲಕನು (ಅಲ್ಲಾಹು) ಇಚ್ಛಿಸಿದ್ದರೆ ಅವರು ಹಾಗೆ ಮಾಡುತ್ತಿರಲಿಲ್ಲ. ಆದ್ದರಿಂದ ಅವರನ್ನು ಅವರು ಆರೋಪಿಸುತ್ತಿರುವ ವಿಷಯಗಳೊಂದಿಗೆ ಬಿಟ್ಟುಬಿಡಿ.
Enam 6:113
ಪರಲೋಕದಲ್ಲಿ ವಿಶ್ವಾಸವಿಡದವರ ಹೃದಯಗಳು ಅದರ (ಅವರ ಮಾತುಗಳ) ಕಡೆಗೆ ಆಕರ್ಷಿತವಾಗುವುದಕ್ಕಾಗಿ, ಅವರು ಅದರಲ್ಲಿ ಸಂತೃಪ್ತರಾಗುವುದಕ್ಕಾಗಿ ಮತ್ತು ಅವರು ಮಾಡುವ ಪಾಪಗಳೆಲ್ಲವನ್ನೂ ಮಾಡುವುದಕ್ಕಾಗಿ (ಅವರು ಹಾಗೆ ಮಾಡುತ್ತಿದ್ದಾರೆ).
Enam 6:114
ಈ ವಿವರಣಾತ್ಮಕ ಗ್ರಂಥವನ್ನು ನಿಮಗೆ ಅವತೀರ್ಣಗೊಳಿಸಿದ್ದು ಅಲ್ಲಾಹನಾಗಿರುವಾಗ ನಾನು ಅವನ ಹೊರತಾದವರನ್ನು ತೀರ್ಪುಗಾರರನ್ನಾಗಿ ಹುಡುಕಬೇಕೇ? ನಾವು ಯಾರಿಗೆ ಗ್ರಂಥ ನೀಡಿದ್ದೇವೆಯೋ ಅವರೆಲ್ಲರೂ ಇದು ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಸತ್ಯ ಸಹಿತ ಅವತೀರ್ಣವಾದ ಗ್ರಂಥವೆಂದು ತಿಳಿದಿದ್ದಾರೆ. ಆದ್ದರಿಂದ ನೀವು ಸಂಶಯಪಡುವವರಲ್ಲಿ ಸೇರಬೇಡಿ.
Enam 6:115
ನಿಮ್ಮ ಪರಿಪಾಲಕನ (ಅಲ್ಲಾಹನ) ವಚನವು ಸತ್ಯದಲ್ಲಿ ಮತ್ತು ನ್ಯಾಯದಲ್ಲಿ ಪರಿಪೂರ್ಣವಾಗಿದೆ. ಅವನ ವಚನಗಳನ್ನು ಬದಲಾಯಿಸುವವರು ಯಾರೂ ಇಲ್ಲ. ಅವನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
Enam 6:116
ನೀವು ಭೂಮಿಯಲ್ಲಿರುವ ಬಹುಸಂಖ್ಯಾತರನ್ನು ಅನುಸರಿಸಿದರೆ ಅವರು ನಿಮ್ಮನ್ನು ಅಲ್ಲಾಹನ ಮಾರ್ಗದಿಂದ ತಪ್ಪಿಸುತ್ತಾರೆ. ಅವರು ಕೇವಲ ಊಹಾ-ಪೋಹಗಳನ್ನು ಮಾತ್ರ ಅನುಸರಿಸುತ್ತಾರೆ. ಅವರು ಕೇವಲ ಸುಳ್ಳನ್ನು ಮಾತ್ರ ಹೇಳುತ್ತಾರೆ.
Enam 6:117
ತನ್ನ ಮಾರ್ಗದಿಂದ ತಪ್ಪಿಹೋದವನು ಯಾರೆಂದು ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ತಿಳಿದಿದೆ. ಸನ್ಮಾರ್ಗದಲ್ಲಿರುವವರು ಯಾರೆಂಬ ಬಗ್ಗೆಯೂ ಅವನಿಗೆ ತಿಳಿದಿದೆ.
Enam 6:118
ಆದ್ದರಿಂದ ಅಲ್ಲಾಹನ ಹೆಸರನ್ನು ಉಚ್ಛರಿಸಿ (ಕೊಯ್ಯ)ಲಾದ ಪ್ರಾಣಿಗಳನ್ನು ತಿನ್ನಿರಿ. ನೀವು ಅವನ ವಚನಗಳಲ್ಲಿ ವಿಶ್ವಾಸವಿಡುವವರಾಗಿದ್ದರೆ!
Enam 6:119
ಅಲ್ಲಾಹನ ಹೆಸರನ್ನು ಉಚ್ಛರಿಸಿ (ಕೊಯ್ಯ) ಲಾದ ಪ್ರಾಣಿಯನ್ನು ತಿನ್ನದಿರಲು ನಿಮಗೇನಾಗಿದೆ? ನಿಮಗೆ ನಿಷೇಧಿಸಲಾದ ವಸ್ತುಗಳನ್ನು ಅವನು ಈಗಾಗಲೇ ನಿಮಗೆ ವಿವರಿಸಿಕೊಟ್ಟಿದ್ದಾನೆ. ಆದರೆ ಅನಿವಾರ್ಯ ಸಂದರ್ಭಗಳಲ್ಲಿ ಅದು ಕೂಡ ನಿಮಗೆ ಅನುಮತಿಸಲಾಗಿದೆ. ಹೆಚ್ಚಿನ ಜನರು ಯಾವುದೇ ಜ್ಞಾನವಿಲ್ಲದೆ ತಮ್ಮ ಸ್ವೇಚ್ಛೆಗಳನ್ನು ಹಿಂಬಾಲಿಸುತ್ತಾ ಜನರನ್ನು ದಾರಿತಪ್ಪಿಸುತ್ತಿದ್ದಾರೆ. ನಿಶ್ಚಯವಾಗಿಯೂ ಅತಿರೇಕಿಗಳ ಬಗ್ಗೆ ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಬಹಳ ಚೆನ್ನಾಗಿ ತಿಳಿದಿದೆ.
Enam 6:120
ಬಹಿರಂಗವಾಗಿ ಮಾಡುವ ಪಾಪಗಳನ್ನು ಮತ್ತು ರಹಸ್ಯವಾಗಿ ಮಾಡುವ ಪಾಪಗಳನ್ನು ಬಿಟ್ಟುಬಿಡಿ. ನಿಶ್ಚಯವಾಗಿಯೂ ಪಾಪ ಮಾಡುವವರು ಯಾರೋ—ಅವರು ಮಾಡಿದ ಪಾಪಕ್ಕೆ ತಕ್ಕ ಪ್ರತಿಫಲವನ್ನು ನೀಡಲಾಗುವುದು.
Enam 6:121
ಅಲ್ಲಾಹನ ಹೆಸರನ್ನು ಉಚ್ಛರಿಸದಿರುವ ಪ್ರಾಣಿಗಳನ್ನು ತಿನ್ನಬೇಡಿ. ನಿಶ್ಚಯವಾಗಿಯೂ ಅದು ಅವಿಧೇಯತೆಯಾಗಿದೆ. ನಿಮ್ಮೊಂದಿಗೆ ತರ್ಕಿಸಲು ನಿಶ್ಚಯವಾಗಿಯೂ ಶೈತಾನರು ತಮ್ಮ ಮಿತ್ರರಿಗೆ ದುರ್ಬೋಧನೆ ಮಾಡುತ್ತಾರೆ. ನೀವೇನಾದರೂ ಅವರನ್ನು ಅನುಸರಿಸಿದರೆ ನಿಶ್ಚಯವಾಗಿಯೂ ನೀವು ಸಹಭಾಗಿತ್ವ (ಶಿರ್ಕ್) ಮಾಡಿದವರಾಗುವಿರಿ.
Enam 6:122
ನಿರ್ಜೀವ ಸ್ಥಿತಿಯಲ್ಲಿದ್ದ ಒಬ್ಬ ವ್ಯಕ್ತಿಗೆ ನಾವು ಜೀವವನ್ನು ನೀಡಿ, ಅವನಿಗೆ ಒಂದು ಬೆಳಕನ್ನು ಸಹ ದಯಪಾಲಿಸಿದೆವು. ಅವನು ಆ ಬೆಳಕಿನೊಂದಿಗೆ ಜನರ ಮಧ್ಯೆ ಓಡಾಡುತ್ತಾನೆ. ಇಂತಹವನು ಹೊರಬರಲಾಗದ ಸ್ಥಿತಿಯಲ್ಲಿ ಗಾಢಾಂಧಕಾರಗಳಲ್ಲಿ ಬಿದ್ದಿರುವ ವ್ಯಕ್ತಿಯಂತಾಗುವನೇ? ಈ ರೀತಿ ಸತ್ಯನಿಷೇಧಿಗಳಿಗೆ ಅವರು ಮಾಡುತ್ತಿರುವ ದುಷ್ಕರ್ಮಗಳನ್ನು ಅಲಂಕರಿಸಿಕೊಡಲಾಗಿದೆ.
Enam 6:123
ಇದೇ ರೀತಿ ನಾವು ಪ್ರತಿಯೊಂದು ಊರಿನಲ್ಲೂ ಅಲ್ಲಿನ ಅಪರಾಧಿಗಳ ಮುಖಂಡರನ್ನು ಪಿತೂರಿಗಳಲ್ಲಿ ಮಗ್ನರಾಗುವಂತೆ ಮಾಡಿದ್ದೇವೆ. ವಾಸ್ತವದಲ್ಲಿ, ಅವರು ಅವರ ವಿರುದ್ಧವೇ ಪಿತೂರಿ ಮಾಡುತ್ತಿದ್ದಾರೆ. ಆದರೆ, ಅವರು ಅದನ್ನು ಅರಿಯುವುದಿಲ್ಲ.[1]
———
[1] ಅಂದರೆ ಅವರು ಮಾಡುವ ಎಲ್ಲಾ ಪಿತೂರಿಗಳ ದುಷ್ಪರಿಣಾಮಗಳನ್ನು ಸ್ವತಃ ಅವರೇ ಅನುಭವಿಸುವರು.
Enam 6:124
ಯಾವುದೇ ದೃಷ್ಟಾಂತವು ಅವರ ಬಳಿಗೆ ಬಂದಾಗ, “ಅಲ್ಲಾಹನ ಸಂದೇಶವಾಹಕರುಗಳಿಗೆ ನೀಡಲಾದ ವಸ್ತುವನ್ನು ನಮಗೂ ನೀಡಲಾಗುವ ತನಕ ನಾವು ಖಂಡಿತ ವಿಶ್ವಾಸವಿಡುವುದಿಲ್ಲ” ಎಂದು ಅವರು ಹೇಳುತ್ತಾರೆ. ಆದರೆ ತನ್ನ ಸಂದೇಶವಾಹಕತ್ವವನ್ನು ಎಲ್ಲಿ ಸ್ಥಾಪಿಸಬೇಕೆಂದು ಅಲ್ಲಾಹನಿಗೆ ಬಹಳ ಚೆನ್ನಾಗಿ ತಿಳಿದಿದೆ. ಅಪರಾಧಿಗಳಿಗೆ, ಅವರ ಮಾಡುವ ಪಿತೂರಿಗಳಿಂದಾಗಿ ಅಲ್ಲಾಹನ ಬಳಿ ಅಪಮಾನ ಮತ್ತು ಕಠಿಣವಾದ ಶಿಕ್ಷೆಯನ್ನು ಸದ್ಯವೇ ಅನುಭವಿಸಬೇಕಾಗಿ ಬರುವುದು.
Enam 6:125
ಯಾರಿಗೆ ಸನ್ಮಾರ್ಗ ತೋರಿಸಬೇಕೆಂದು ಅಲ್ಲಾಹು ಬಯಸುತ್ತಾನೋ ಅವನ ಹೃದಯವನ್ನು ಇಸ್ಲಾಮಿಗಾಗಿ ತೆರೆದುಕೊಡುತ್ತಾನೆ. ಯಾರನ್ನು ದಾರಿತಪ್ಪಿಸಬೇಕೆಂದು ಅಲ್ಲಾಹು ಬಯಸುತ್ತಾನೋ ಅವನ ಹೃದಯವನ್ನು ಬಿಗಿಯಾಗಿ ಮತ್ತು ಇಕ್ಕಟ್ಟಾಗಿ ಮಾಡುತ್ತಾನೆ. ಅವನು ಆಕಾಶಕ್ಕೆ ಏರಿ ಹೋಗುತ್ತಿದ್ದಾನೋ ಎಂಬಂತೆ! ಈ ರೀತಿ ಅಲ್ಲಾಹು ವಿಶ್ವಾಸವಿಡದವರ ಮೇಲೆ ಶಿಕ್ಷೆಯನ್ನು ಹಾಕುತ್ತಾನೆ.
Enam 6:126
ಇದು ನಿಮ್ಮ ಪರಿಪಾಲಕನ (ಅಲ್ಲಾಹನ) ನೇರಮಾರ್ಗವಾಗಿದೆ. ಉಪದೇಶ ಸ್ವೀಕರಿಸುವ ಜನರಿಗೆ ನಾವು ಈಗಾಗಲೇ ದೃಷ್ಟಾಂತಗಳನ್ನು ವಿವರಿಸಿಕೊಟ್ಟಿದ್ದೇವೆ.
Enam 6:127
ಅವರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ಶಾಂತಿಯ ಭವನವಿದೆ (ಸ್ವರ್ಗವಿದೆ). ಅವರು ಮಾಡುತ್ತಿರುವ ಕರ್ಮಗಳ ಕಾರಣದಿಂದ ಅವನು ಅವರ ಮಿತ್ರನಾಗಿದ್ದಾನೆ.
Enam 6:128
ಅವನು ಅವರೆಲ್ಲರನ್ನೂ ಒಟ್ಟುಗೂಡಿಸುವ ದಿನ. (ಅವನು ಹೇಳುವನು): “ಓ ಜಿನ್ನ್‌ಗಳೇ! ನೀವು ಮನುಷ್ಯರಲ್ಲಿ ಬಹುಸಂಖ್ಯಾತರನ್ನು ದಾರಿ ತಪ್ಪಿಸಿದ್ದೀರಿ.” ಮನುಷ್ಯರಲ್ಲಿ ಸೇರಿದ ಅವರ ಆಪ್ತಮಿತ್ರರು ಹೇಳುವರು: “ಓ ನಮ್ಮ ಪರಿಪಾಲಕನೇ! ನಮ್ಮಲ್ಲಿ ಕೆಲವರು ಇತರ ಕೆಲವರಿಂದ ಪ್ರಯೋಜನ ಪಡೆದರು. ಹೀಗೆ ನೀನು ನಮಗೆ ನಿಶ್ಚಯಿಸಿದ ಜೀವಿತಾವಧಿಯನ್ನು ನಾವು ತಲುಪಿದೆವು.” ಅಲ್ಲಾಹು ಹೇಳುವನು: “ನರಕಾಗ್ನಿಯೇ ನಿಮ್ಮ ವಾಸಸ್ಥಳ! ನೀವು ಅದರಲ್ಲಿ ಶಾಶ್ವತವಾಗಿ ವಾಸಿಸುವಿರಿ. ಅಲ್ಲಾಹು ಏನು ಇಚ್ಛಿಸುತ್ತಾನೋ ಅದರ ಹೊರತು. ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ವಿವೇಕಪೂರ್ಣನು ಮತ್ತು ಸರ್ವಜ್ಞನಾಗಿದ್ದಾನೆ.”
Enam 6:129
ಈ ರೀತಿ ನಾವು ಅಕ್ರಮಿಗಳನ್ನು ಪರಸ್ಪರ ಆಪ್ತರನ್ನಾಗಿ ಮಾಡುವೆವು. ಅವರು ಮಾಡುತ್ತಿರುವ ದುಷ್ಕರ್ಮಗಳ ಕಾರಣದಿಂದ.
Enam 6:130
“ಓ ಜಿನ್ನ್ ಮತ್ತು ಮನುಷ್ಯರೇ! ನಿಮಗೆ ನನ್ನ ವಚನಗಳನ್ನು ವಿವರಿಸಿಕೊಡುವ ಮತ್ತು ನಿಮ್ಮ ಈ ದಿನದ ಭೇಟಿಯ ಬಗ್ಗೆ ನಿಮಗೆ ಎಚ್ಚರಿಕೆ ನೀಡುವ ಸಂದೇಶವಾಹಕರು ನಿಮ್ಮಿಂದಲೇ ನಿಮ್ಮ ಬಳಿಗೆ ಬಂದಿಲ್ಲವೇ?” ಅವರು ಉತ್ತರಿಸುವರು: “ನಾವು ನಮ್ಮ ವಿರುದ್ಧವೇ ಸಾಕ್ಷಿಗಳಾಗಿದ್ದೇವೆ.” ಇಹಲೋಕ ಜೀವನವು ಅವರನ್ನು ಮರುಳುಗೊಳಿಸಿದೆ. ಅವರು ಸತ್ಯನಿಷೇಧಿಗಳಾಗಿದ್ದರು ಎಂದು ಅವರೇ ಅವರ ವಿರುದ್ಧ ಸಾಕ್ಷಿ ಹೇಳಿದ್ದಾರೆ.
Enam 6:131
ಅದು (ಸಂದೇಶವಾಹಕರನ್ನು ಕಳುಹಿಸಿರುವುದು) ನಿಮ್ಮ ಪರಿಪಾಲಕನು (ಅಲ್ಲಾಹು) ಊರುಗಳನ್ನು—ಅವುಗಳ ನಿವಾಸಿಗಳು (ಸತ್ಯದ ಬಗ್ಗೆ) ಅಜ್ಞರಾಗಿರುವಾಗ ಮಾಡಿದ ಅಕ್ರಮದ ನಿಮಿತ್ತ ನಾಶ ಮಾಡುವುದಿಲ್ಲ ಎಂಬ ಕಾರಣದಿಂದಾಗಿದೆ.[1]
———
[1] ಜೀವನದಲ್ಲಿ ಒಮ್ಮೆಯೂ ಸತ್ಯವನ್ನು ತಿಳಿಯುವ ಅವಕಾಶ ಸಿಗದವರನ್ನು ಅಲ್ಲಾಹು ಶಿಕ್ಷಿಸುವುದಿಲ್ಲವೆಂದು ಇದರಿಂದ ಅರ್ಥಮಾಡಿಕೊಳ್ಳಬಹುದು.
Enam 6:132
ಪ್ರತಿಯೊಬ್ಬರಿಗೂ ಅವರು ಮಾಡಿದ ಕರ್ಮಗಳಿಗೆ ಅನುಗುಣವಾಗಿ ಅನೇಕ ಪದವಿಗಳಿವೆ. ಅವರು ಮಾಡುತ್ತಿರುವ ಕರ್ಮಗಳ ಕುರಿತು ಅಲ್ಲಾಹು ತಿಳಿಯದವನೇನಲ್ಲ.
Enam 6:133
ನಿಮ್ಮ ಪರಿಪಾಲಕನು (ಅಲ್ಲಾಹು) ನಿರಪೇಕ್ಷನು ಮತ್ತು ದಯಾಳುವಾಗಿದ್ದಾನೆ. ಅವನು ಇಚ್ಛಿಸಿದರೆ ನಿಮ್ಮನ್ನು ನಿವಾರಿಸಿ, ನಿಮ್ಮ ಸ್ಥಾನದಲ್ಲಿ ಅವನು ಇಚ್ಛಿಸುವ ಬೇರೆ ಜನರನ್ನು ಉತ್ತರಾಧಿಕಾರಿಗಳಾಗಿ ಮಾಡುವನು. ನಿಮ್ಮನ್ನು ಬೇರೆ ಜನರ ವಂಶಸ್ಥರನ್ನಾಗಿ ಮಾಡಿದಂತೆ.
Enam 6:134
ನಿಶ್ಚಯವಾಗಿಯೂ ನಿಮಗೆ ಎಚ್ಚರಿಕೆ ನೀಡಲಾಗುವ ಸಂಗತಿಯು ಬಂದೇ ಬರುತ್ತದೆ. ನಿಮಗೆ (ಅಲ್ಲಾಹನನ್ನು) ಸೋಲಿಸಲು ಸಾಧ್ಯವಿಲ್ಲ.
Enam 6:135
ಹೇಳಿರಿ: “ಓ ನನ್ನ ಜನರೇ! ನೀವು ನಿಮ್ಮ ಸ್ಥಾನದಲ್ಲಿ ಕಾರ್ಯ ನಿರ್ವಹಿಸಿರಿ. ನಾನೂ ಕಾರ್ಯ ನಿರ್ವಹಿಸುತ್ತೇನೆ. ಇಹಲೋಕದ ಅಂತಿಮ ವಿಜಯವು ಯಾರಿಗೆ ಎಂದು ನೀವು ಸದ್ಯವೇ ತಿಳಿಯುವಿರಿ. ನಿಶ್ಚಯವಾಗಿಯೂ ಅಕ್ರಮಿಗಳು ಯಶಸ್ವಿಯಾಗುವುದಿಲ್ಲ.”
Enam 6:136
ಅಲ್ಲಾಹು ಸೃಷ್ಟಿಸಿದ ಕೃಷಿ ಮತ್ತು ಜಾನುವಾರುಗಳಿಂದ ಅವರು ಅವನಿಗೆ ಒಂದು ಪಾಲನ್ನು ನಿಶ್ಚಯಿಸಿದರು. ನಂತರ ತಮ್ಮ ದಾವೆಗೆ ಅನುಗುಣವಾಗಿ, “ಇದು ಅಲ್ಲಾಹನಿಗೆ ಮತ್ತು ಇದು ನಮ್ಮ ದೇವರುಗಳಿಗೆ” ಎಂದು ಅವರು ಹೇಳಿದರು. ಅವರ ದೇವರುಗಳಿಗೆ ಮೀಸಲಿಟ್ಟಿರುವುದು ಅಲ್ಲಾಹನಿಗೆ ತಲುಪುವುದಿಲ್ಲ. ಆದರೆ ಅಲ್ಲಾಹನಿಗೆ ಮೀಸಲಿಟ್ಟಿರುವುದು ಅವರ ದೇವರುಗಳಿಗೆ ತಲುಪುತ್ತದೆ. ಅವರು ನೀಡುವ ತೀರ್ಪು ಬಹಳ ನಿಕೃಷ್ಟವಾಗಿದೆ.[1]
———
[1] ಅವರು ತಮ್ಮ ಕೃಷಿ ಮತ್ತು ಜಾನುವಾರುಗಳಲ್ಲಿ ಒಂದಂಶವನ್ನು ಅಲ್ಲಾಹನಿಗೆ ಮೀಸಲಿಡುತ್ತಿದ್ದರು. ಅಂದರೆ ಅದನ್ನು ಅತಿಥಿಗಳಿಗೆ, ಬಡವರಿಗೆ, ಪ್ರಯಾಣಿಕರಿಗೆ ಖರ್ಚು ಮಾಡುತ್ತಿದ್ದರು. ಇನ್ನೊಂದು ಅಂಶವನ್ನು ಅವರು ತಮ್ಮ ವಿಗ್ರಹಗಳಿಗೆ ಮೀಸಲಿಡುತ್ತಿದ್ದರು. ಇದನ್ನು ಅವರು ವಿಗ್ರಹಗಳಿಗೆ ಅರ್ಪಿಸುತ್ತಿದ್ದರು. ಕೆಲವೊಮ್ಮೆ ಅವರು ಅಲ್ಲಾಹನಿಗೆ ಮೀಸಲಿಟ್ಟದ್ದನ್ನು ವಿಗ್ರಹಗಳಿಗೆ ಅರ್ಪಿಸುತ್ತಿದ್ದರು. ಆದರೆ ವಿಗ್ರಹಗಳಿಗೆ ಮೀಸಲಿಟ್ಟದ್ದನ್ನು ಅಲ್ಲಾಹನಿಗೆ, ಅಂದರೆ ಅತಿಥಿಗಳಿಗೆ, ಬಡವರಿಗೆ ನೀಡುತ್ತಿರಲಿಲ್ಲ.
Enam 6:137
ಹೀಗೆ ಬಹುದೇವಾರಾಧಕರಲ್ಲಿ ಹೆಚ್ಚಿನವರಿಗೂ ಅವರ ಮಕ್ಕಳನ್ನು ಕೊಲ್ಲುವುದನ್ನು ಅವರ ದೇವರುಗಳು ಅಲಂಕರಿಸಿಕೊಟ್ಟಿದ್ದಾರೆ.[1] ಅವರನ್ನು ನಾಶ ಮಾಡುವುದಕ್ಕಾಗಿ ಮತ್ತು ಅವರ ಧರ್ಮವನ್ನು ಅವರಿಗೆ ಗೊಂದಲಗೊಳಿಸುವುದಕ್ಕಾಗಿ. ಅಲ್ಲಾಹು ಇಚ್ಛಿಸುತ್ತಿದ್ದರೆ ಅವರು ಅದನ್ನು ಮಾಡುತ್ತಿರಲಿಲ್ಲ. ಆದ್ದರಿಂದ ಅವರು ಆರೋಪಿಸುವ ವಿಷಯಗಳೊಂದಿಗೆ ಅವರನ್ನು ಬಿಟ್ಟುಬಿಡಿ.
———
[1] ಅರೇಬಿಯಾದಲ್ಲಿ ಶಿಶುಹತ್ಯೆ ಸಾಮಾನ್ಯವಾಗಿತ್ತು. ಅವರು ಮಕ್ಕಳನ್ನು ವಿಗ್ರಹಗಳಿಗೆ ಬಲಿ ನೀಡುತ್ತಿದ್ದರು. ಬಡತನದ ಭಯದಿಂದ ಮಕ್ಕಳನ್ನು ಕೊಲ್ಲುತ್ತಿದ್ದರು. ಹೆಣ್ಣು ಮಗು ಹುಟ್ಟಿದರೆ ಅಪಮಾನದಿಂದ ಅದನ್ನು ಜೀವಂತ ದಫನ ಮಾಡುತ್ತಿದ್ದರು. ಇವುಗಳನ್ನು ಅವರು ತಪ್ಪೆಂದು ಭಾವಿಸುತ್ತಿರಲಿಲ್ಲ.
Enam 6:138
ಅವರು ಹೇಳುತ್ತಾರೆ: “ಈ ಜಾನುವಾರುಗಳು ಮತ್ತು ಕೃಷಿಗಳನ್ನು ನಿಷೇಧಿಸಲಾಗಿದೆ. ನಾವು ಇಚ್ಛಿಸುವವರ ಹೊರತು ಯಾರೂ ಇವುಗಳನ್ನು ತಿನ್ನಬಾರದು.” ಇದು ಅವರ ದಾವೆಯಾಗಿದೆ. “ಕೆಲವು ಜಾನುವಾರುಗಳ ಬೆನ್ನ ಮೇಲೆ ಸವಾರಿ ಮಾಡುವುದನ್ನು ನಿಷೇಧಿಸಲಾಗಿದೆ ಮತ್ತು ಕೆಲವು ಜಾನುವಾರುಗಳನ್ನು ಕೊಯ್ಯುವಾಗ ಅಲ್ಲಾಹನ ಹೆಸರನ್ನು ಉಚ್ಛರಿಸಬೇಕಾಗಿಲ್ಲ” (ಎಂದು ಅವರು ಹೇಳುತ್ತಾರೆ) ಇವೆಲ್ಲವೂ ಅವರು ಅಲ್ಲಾಹನ ಬಗ್ಗೆ ಆರೋಪಿಸುವ ಸುಳ್ಳುಗಳಾಗಿವೆ. ಅವನು ಅವರ ಆರೋಪಗಳಿಗೆ ತಕ್ಕ ಪ್ರತಿಫಲವನ್ನು ನೀಡುವನು.
Enam 6:139
ಅವರು ಹೇಳುತ್ತಾರೆ: “ಈ ಜಾನುವಾರುಗಳ ಹೊಟ್ಟೆಯಲ್ಲಿರುವುದು ನಮ್ಮ ಪುರುಷರಿಗೆ ಮಾತ್ರ ಇರುವಂತದ್ದು. ಅದು ನಮ್ಮ ಪತ್ನಿಯರಿಗೆ ನಿಷಿದ್ಧವಾಗಿವೆ.” ಆದರೆ ಅದು ಸತ್ತ ಪ್ರಾಣಿಯಾದರೆ ಅವರು ಅದನ್ನು ಸಮಾನವಾಗಿ ಪಾಲು ಮಾಡುತ್ತಾರೆ. ಅವನು ಅವರ ಆರೋಪಗಳಿಗೆ ತಕ್ಕ ಪ್ರತಿಫಲವನ್ನು ನೀಡುವನು. ನಿಶ್ಚಯವಾಗಿಯೂ ಅವನು ವಿವೇಕಪೂರ್ಣನು ಮತ್ತು ಸರ್ವಜ್ಞನಾಗಿದ್ದಾನೆ.
Enam 6:140
ಅಜ್ಞಾನದಿಂದ ಅವಿವೇಕಿಗಳಾಗಿ ತಮ್ಮ ಮಕ್ಕಳನ್ನು ಕೊಂದವರು ಮತ್ತು ಅಲ್ಲಾಹನ ಬಗ್ಗೆ ಸುಳ್ಳು ಆರೋಪಿಸುತ್ತಾ ಅಲ್ಲಾಹು ದಯಪಾಲಿಸಿದ ವಸ್ತುಗಳನ್ನು ನಿಷೇಧಿಸಿದವರು ನಷ್ಟಹೊಂದಿದರು. ಅವರು ದಾರಿತಪ್ಪಿ ಹೋದರು. ಅವರು ಸನ್ಮಾರ್ಗದಲ್ಲಿ ಸೇರಲಿಲ್ಲ.
Enam 6:141
ಚಪ್ಪರಗಳಿರುವ ಮತ್ತು ಚಪ್ಪರಗಳಿಲ್ಲದ ತೋಟಗಳನ್ನು, ಖರ್ಜೂರದ ಮರಗಳನ್ನು, ವೈವಿಧ್ಯಮಯ ಫಲಗಳಿರುವ ಕೃಷಿಗಳನ್ನು, ಹೋಲಿಕೆಯಿರುವ ಮತ್ತು ಹೋಲಿಕೆಯಿಲ್ಲದ ಆಲಿವ್ ಮತ್ತು ದಾಳಿಂಬೆಗಳನ್ನು ಸೃಷ್ಟಿಸಿದ್ದು ಅವನೇ. ಅವು ಹಣ್ಣು ಬಿಟ್ಟರೆ ಅವುಗಳ ಹಣ್ಣುಗಳನ್ನು ತಿನ್ನಿರಿ ಮತ್ತು ಅವುಗಳನ್ನು ಕೊಯ್ಯುವ ದಿನದಂದು ಅವುಗಳ ಹಕ್ಕನ್ನು (ಝಕಾತನ್ನು) ನೀಡಿರಿ. ದುರ್ವ್ಯಯ ಮಾಡಬೇಡಿ. ನಿಶ್ಚಯವಾಗಿಯೂ ದುರ್ವ್ಯಯ ಮಾಡುವವರನ್ನು ಅಲ್ಲಾಹು ಇಷ್ಟಪಡುವುದಿಲ್ಲ.
Enam 6:142
ಭಾರ ಹೊರುವ ಜಾನುವಾರುಗಳನ್ನು ಮತ್ತು (ಆಹಾರಕ್ಕಾಗಿ) ಕೊಯ್ಯುವ ಜಾನುವಾರುಗಳನ್ನು (ಅವನು ಸೃಷ್ಟಿಸಿದ್ದಾನೆ). ಅಲ್ಲಾಹು ನಿಮಗೆ ಆಹಾರವಾಗಿ ನೀಡಿದ ವಸ್ತುಗಳಿಂದ ತಿನ್ನಿರಿ. ಶೈತಾನನ ಹೆಜ್ಜೆಗಳನ್ನು ಹಿಂಬಾಲಿಸಬೇಡಿ. ನಿಶ್ಚಯವಾಗಿಯೂ ಅವನು ನಿಮಗೆ ಪ್ರತ್ಯಕ್ಷ ಶತ್ರುವಾಗಿದ್ದಾನೆ.
Enam 6:143
ಎಂಟು ಜೋಡಿಗಳನ್ನು (ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣುಗಳನ್ನು ಅವನು ಸೃಷ್ಟಿಸಿದ್ದಾನೆ). ಕುರಿಗಳಲ್ಲಿ ಎರಡು (ಗಂಡು ಮತ್ತು ಹೆಣ್ಣು) ಹಾಗೂ ಮೇಕೆಗಳಲ್ಲಿ ಎರಡು (ಗಂಡು ಮತ್ತು ಹೆಣ್ಣು). ಕೇಳಿರಿ: “(ಅವುಗಳಲ್ಲಿ) ಅಲ್ಲಾಹು ನಿಷೇಧಿಸಿದ್ದು ಎರಡು ಗಂಡುಗಳನ್ನೋ ಅಥವಾ ಎರಡು ಹೆಣ್ಣುಗಳನ್ನೋ? ಅಥವಾ ಎರಡು ಹೆಣ್ಣುಗಳ ಗರ್ಭಗಳಲ್ಲಿರುವುದನ್ನೋ? ನೀವು ಸತ್ಯವಂತರಾಗಿದ್ದರೆ ಸಾಕ್ಷ್ಯಾಧಾರಗಳೊಂದಿಗೆ ತಿಳಿಸಿಕೊಡಿ.”
Enam 6:144
ಒಂಟೆಯಿಂದ ಎರಡು (ಗಂಡು ಮತ್ತು ಹೆಣ್ಣು) ಮತ್ತು ಹಸುವಿನಿಂದ ಎರಡು (ಗಂಡು ಮತ್ತು ಹೆಣ್ಣು). ಕೇಳಿರಿ: “(ಅವುಗಳಲ್ಲಿ) ಅಲ್ಲಾಹು ನಿಷೇಧಿಸಿದ್ದು ಎರಡು ಗಂಡುಗಳನ್ನೋ ಅಥವಾ ಎರಡು ಹೆಣ್ಣುಗಳನ್ನೋ? ಅಥವಾ ಎರಡು ಹೆಣ್ಣುಗಳ ಗರ್ಭಗಳಲ್ಲಿರುವುದನ್ನೋ? ಅಲ್ಲಾಹು ಇದನ್ನು ಆದೇಶಿಸುವಾಗ ನೀವು ಉಪಸ್ಥಿತರಿದ್ದಿರಾ? ಯಾವುದೇ ಜ್ಞಾನವಿಲ್ಲದೆ, ಜನರನ್ನು ದಾರಿ ತಪ್ಪಿಸುವುದಕ್ಕಾಗಿ ಅಲ್ಲಾಹನ ಬಗ್ಗೆ ಸುಳ್ಳು ಆರೋಪಿಸುವವನಿಗಿಂತ ದೊಡ್ಡ ಅಕ್ರಮಿ ಯಾರು? ನಿಶ್ಚಯವಾಗಿಯೂ ಅಕ್ರಮವೆಸಗುವ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.”
Enam 6:145
ಹೇಳಿರಿ: “ಆಹಾರ ಸೇವಿಸುವವನಿಗೆ ನಿಷೇಧಿಸಲಾದ ಏನನ್ನೂ ನನಗೆ ನೀಡಲಾದ ದೇವವಾಣಿಯಲ್ಲಿ ನಾನು ಕಾಣುವುದಿಲ್ಲ. ಅದು ಶವ, ಅಥವಾ ಹರಿಯುವ ರಕ್ತ, ಅಥವಾ ಹಂದಿ ಮಾಂಸವಾಗಿದ್ದರೆ ಹೊರತು. ಏಕೆಂದರೆ ಅದು ಹೊಲಸಾಗಿದೆ. ಅಥವಾ ಅಲ್ಲಾಹೇತರರ ಹೆಸರಲ್ಲಿ (ಹರಕೆಯಾಗಿ) ಘೋಷಿಸಲಾದ ಕಾರಣ ನಿಷಿದ್ಧವಾದ ವಸ್ತುಗಳ ಹೊರತು. ಆದರೆ ಯಾರಾದರೂ (ಇವುಗಳನ್ನು ಸೇವಿಸಲು) ನಿರ್ಬಂಧಿತನಾದರೆ ಅವನ ಮೇಲೆ ದೋಷವಿಲ್ಲ. ಆದರೆ ಅವನು ಅಗತ್ಯಕ್ಕಿಂತ ಹೆಚ್ಚು ಸೇವಿಸಬಾರದು ಮತ್ತು (ಅಲ್ಲಾಹು ಅನುಮತಿಸಿದ) ಎಲ್ಲೆಯನ್ನು ಮೀರಬಾರದು. ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.”
Enam 6:146
ನಾವು ಯಹೂದಿಗಳಿಗೆ ಉಗುರುಗಳಿರುವ ಎಲ್ಲಾ ಪ್ರಾಣಿಗಳನ್ನು ನಿಷೇಧಿಸಿದ್ದೆವು. ಹಸು, ಮೇಕೆ ಮುಂತಾದ ಪ್ರಾಣಿಗಳ ಕೊಬ್ಬುಗಳನ್ನು ನಾವು ಅವರಿಗೆ ನಿಷೇಧಿಸಿದ್ದೆವು. ಆದರೆ ಅವುಗಳ ಬೆನ್ನಲ್ಲಿರುವ ಅಥವಾ ಕರುಳುಗಳಲ್ಲಿರುವ ಅಥವಾ ಮೂಳೆಗಳಿಗೆ ಅಂಟಿಕೊಂಡಿರುವ ಕೊಬ್ಬುಗಳ ಹೊರತು. ಇದು ಅವರ ಅತಿರೇಕಕ್ಕೆ ನಾವು ನೀಡಿದ ಶಿಕ್ಷೆಯಾಗಿದೆ. ನಿಶ್ಚಯವಾಗಿಯೂ ನಾವು ಸತ್ಯವಂತರಾಗಿದ್ದೇವೆ.
Enam 6:147
ಅವರು ನಿಮ್ಮನ್ನು ನಿಷೇಧಿಸಿದರೆ, ಹೇಳಿರಿ: “ನಿಮ್ಮ ಪರಿಪಾಲಕನು (ಅಲ್ಲಾಹು) ವಿಶಾಲ ದಯೆಯುಳ್ಳವನು. ಆದರೆ ಅಕ್ರಮವೆಸಗಿದ ಜನರಿಂದ ಅವನ ಶಿಕ್ಷೆಯು ನಿವಾರಣೆಯಾಗುವುದಿಲ್ಲ.”
Enam 6:148
ಬಹುದೇವಾರಾಧಕರು ಹೇಳುವರು: “ಅಲ್ಲಾಹು ಇಚ್ಛಿಸುತ್ತಿದ್ದರೆ ನಾವು ಅಥವಾ ನಮ್ಮ ಪೂರ್ವಜರು ಸಹಭಾಗಿತ್ವ (ಶಿರ್ಕ್) ಮಾಡುತ್ತಿರಲಿಲ್ಲ ಮತ್ತು ಯಾವುದೇ ವಸ್ತುವನ್ನು ನಿಷೇಧಿಸುತ್ತಿರಲಿಲ್ಲ.” ಅವರಿಗಿಂತ ಮೊದಲಿನವರೂ ಹೀಗೆಯೇ ನಿಷೇಧಿಸಿದ್ದರು—ನಮ್ಮ ಶಿಕ್ಷೆಯ ರುಚಿಯನ್ನು ನೋಡುವವರೆಗೆ. ಹೇಳಿರಿ: “ನಿಮ್ಮ ಬಳಿ ಏನಾದರೂ ಸಾಕ್ಷ್ಯಾಧಾರವಿದೆಯೇ? ಇದ್ದರೆ ಅದನ್ನು ತೋರಿಸಿ. ನೀವು ಊಹಾ-ಪೋಹಗಳನ್ನು ಹಿಂಬಾಲಿಸುತ್ತಿದ್ದೀರಿ. ನೀವು ಕೇವಲ ಸುಳ್ಳನ್ನು ಹೇಳುತ್ತಿದ್ದೀರಿ.”
Enam 6:149
ಹೇಳಿರಿ: “ನಿರ್ಣಾಯಕ ಪುರಾವೆಯಿರುವುದು ಅಲ್ಲಾಹನಲ್ಲಿ. ಅವನು ಇಚ್ಛಿಸುತ್ತಿದ್ದರೆ ನಿಮ್ಮೆಲ್ಲರನ್ನೂ ಸನ್ಮಾರ್ಗದಲ್ಲಿ ಸೇರಿಸುತ್ತಿದ್ದನು.”
Enam 6:150
ಹೇಳಿರಿ: “ಅಲ್ಲಾಹು ಇವುಗಳನ್ನು ನಿಷೇಧಿಸಿದ್ದಾನೆಂದು ಸಾಕ್ಷಿ ನುಡಿಯುವ ನಿಮ್ಮ ಸಾಕ್ಷಿಗಳನ್ನು ಕರೆತನ್ನಿರಿ.” ಅವರೇನಾದರೂ ಸಾಕ್ಷಿ ನುಡಿದರೆ ನೀವು ಅವರೊಂದಿಗೆ ಸಾಕ್ಷಿ ನುಡಿಯಬೇಡಿ. ನಮ್ಮ ವಚನಗಳನ್ನು ನಿಷೇಧಿಸಿದ ಮತ್ತು ಪರಲೋಕದಲ್ಲಿ ವಿಶ್ವಾಸವಿಡದ ಜನರ ಸ್ವೇಚ್ಛೆಗಳನ್ನು ಹಿಂಬಾಲಿಸಬೇಡಿ. ಅವರು ತಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಸರಿಸಾಟಿಗಳನ್ನು ಕಲ್ಪಿಸುವವರಾಗಿದ್ದಾರೆ.
Enam 6:151
ಹೇಳಿರಿ: “ಬನ್ನಿ! ನಿಮ್ಮ ಪರಿಪಾಲಕನು (ಅಲ್ಲಾಹು) ನಿಮಗೆ ಏನು ನಿಷೇಧಿಸಿದ್ದಾನೆಂದು ನಾನು ನಿಮಗೆ ಓದಿಕೊಡುವೆನು. (ಅವು ಏನೆಂದರೆ) ನೀವು ಅವನೊಂದಿಗೆ ಏನನ್ನೂ ಸಹಭಾಗಿತ್ವ (ಶಿರ್ಕ್) ಮಾಡಬೇಡಿ, ಮಾತಾಪಿತರಿಗೆ ಒಳಿತು ಮಾಡಿರಿ, ಬಡತನದ ಭಯದಿಂದ ನಿಮ್ಮ ಮಕ್ಕಳನ್ನು ಕೊಲ್ಲಬೇಡಿ—ನಿಮಗೂ, ಅವರಿಗೂ ನಾವು ಆಹಾರ ನೀಡುತ್ತೇವೆ—ಬಹಿರಂಗವಾಗಿರುವ ಮತ್ತು ರಹಸ್ಯವಾಗಿರುವ ಯಾವುದೇ ಅಶ್ಲೀಲತೆಗಳ ಬಳಿಗೆ ಹೋಗಬೇಡಿ ಮತ್ತು ಕಾನೂನುಬದ್ಧ ರೀತಿಯಲ್ಲೇ ಹೊರತು ಅಲ್ಲಾಹು (ಕೊಲ್ಲುವುದನ್ನು) ನಿಷೇಧಿಸಿದ ಜೀವವನ್ನು ಕೊಲ್ಲಬೇಡಿ. ಇವು ಅವನು ನಿಮಗೆ ನೀಡುವ ಆದೇಶಗಳಾಗಿವೆ. ನೀವು ಅರ್ಥಮಾಡಿಕೊಳ್ಳುವುದಕ್ಕಾಗಿ.”
Enam 6:152
ಒಳಿತು ಮಾಡುವ ಉದ್ದೇಶದಿಂದಲೇ ಹೊರತು ನೀವು ಅನಾಥರ ಆಸ್ತಿಯನ್ನು ಮುಟ್ಟಬೇಡಿ. ಅವರು ಪ್ರೌಢರಾಗುವ ತನಕ (ಅವರ ಸಂರಕ್ಷಣೆಯನ್ನು ವಹಿಸಿಕೊಳ್ಳಿ). ಅಳತೆ ಮತ್ತು ತೂಕ ಮಾಡುವಾಗ ಪೂರ್ಣವಾಗಿ ಮತ್ತು ನ್ಯಾಯಬದ್ಧವಾಗಿ ಮಾಡಿರಿ. ಒಬ್ಬ ವ್ಯಕ್ತಿಯ ಮೇಲೆ ಅವನ ಸಾಮರ್ಥ್ಯಕ್ಕಿಂತ ಮಿಗಿಲಾಗಿರುವುದನ್ನು ನಾವು ಹೊರಿಸುವುದಿಲ್ಲ. ಮಾತನಾಡುವಾಗ (ಸಾಕ್ಷಿ ನುಡಿಯುವಾಗ) ನ್ಯಾಯದಿಂದ ಮಾತನಾಡಿರಿ. ಅದು ನಿಕಟ ಸಂಬಂಧಿಕನಿಗೆ ಸಂಬಂಧಿಸಿದ ವಿಷಯವಾದರೂ ಸಹ. ಅಲ್ಲಾಹನ ಕರಾರನ್ನು ನೆರವೇರಿಸಿ. ಇವು ಅವನು ನಿಮಗೆ ನೀಡುವ ಆದೇಶಗಳಾಗಿವೆ. ನೀವು ನೆನಪಿಟ್ಟುಕೊಳ್ಳುವುದಕ್ಕಾಗಿ.
Enam 6:153
ನಿಶ್ಚಯವಾಗಿಯೂ ಇದು ನನ್ನ ನೇರ ಮಾರ್ಗವಾಗಿದೆ. ಆದ್ದರಿಂದ ಈ ಮಾರ್ಗದಲ್ಲಿ ನಡೆಯಿರಿ. ಇತರ ಮಾರ್ಗಗಳಲ್ಲಿ ನಡೆಯಬೇಡಿ. ಅವು ನಿಮ್ಮನ್ನು ಅವನ ಮಾರ್ಗದಿಂದ ಬೇರ್ಪಡಿಸುತ್ತವೆ. ಇವು ಅವನು ನಿಮಗೆ ನೀಡುವ ಆದೇಶಗಳಾಗಿವೆ. ನೀವು ದೇವಭಯವುಳ್ಳವರಾಗುವುದಕ್ಕಾಗಿ.
Enam 6:154
ಒಳಿತು ಮಾಡುವವರಿಗೆ ಅನುಗ್ರಹದ ಪೂರ್ತೀಕರಣವಾಗಿ, ಮತ್ತು ಎಲ್ಲಾ ವಿಷಯಗಳ ವಿವರಣೆಯಾಗಿ ನಾವು ಮೂಸಾರಿಗೆ ಗ್ರಂಥವನ್ನು ದಯಪಾಲಿಸಿದೆವು. ಅವರು ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಭೇಟಿಯಾಗುವುದರಲ್ಲಿ ವಿಶ್ವಾಸವಿಡುವುದಕ್ಕಾಗಿ.
Enam 6:155
ಇದು ನಾವು ಅವತೀರ್ಣಗೊಳಿಸಿದ ಸಮೃದ್ಧಪೂರ್ಣ ಗ್ರಂಥವಾಗಿದೆ. ಆದ್ದರಿಂದ ಇದನ್ನು ಅನುಸರಿಸಿರಿ. ಅಲ್ಲಾಹನನ್ನು ಭಯಪಡಿರಿ. ನಿಮಗೆ ದಯೆ ತೋರಲಾಗುವುದಕ್ಕಾಗಿ.
Enam 6:156
"ನಮಗಿಂತ ಮೊದಲಿನ ಎರಡು ಸಮುದಾಯಗಳಿಗೆ ಮಾತ್ರ ಗ್ರಂಥವು ಅವತೀರ್ಣವಾಗಿದೆ; ಅವರು ಮಾಡುತ್ತಿದ್ದ ಅಧ್ಯಯನದ ಬಗ್ಗೆ ನಮಗೇನೂ ತಿಳಿದಿರಲಿಲ್ಲ” ಎಂದು ನೀವು ಹೇಳಬಾರದೆಂದು (ಈ ಗ್ರಂಥವನ್ನು ಅವತೀರ್ಣಗೊಳಿಸಲಾಗಿದೆ).
Enam 6:157
ಅಥವಾ, “ನಮಗೊಂದು ಗ್ರಂಥವು ಅವತೀರ್ಣವಾಗುತ್ತಿದ್ದರೆ ನಾವು ಅವರಿಗಿಂತಲೂ ಹೆಚ್ಚು ಸನ್ಮಾರ್ಗ ಪಡೆಯುತ್ತಿದ್ದೆವು” ಎಂದು ನೀವು ಹೇಳಬಾರದೆಂದು (ಈ ಗ್ರಂಥವನ್ನು ಅವತೀರ್ಣಗೊಳಿಸಲಾಗಿದೆ). ಈಗ ನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಸ್ಪಷ್ಟ ಸಾಕ್ಷ್ಯಾಧಾರ, ಮಾರ್ಗದರ್ಶನ ಮತ್ತು ದಯೆಯು ಬಂದಿದೆ. ಇದರ ಬಳಿಕವೂ ಅಲ್ಲಾಹನ ವಚನಗಳನ್ನು ನಿಷೇಧಿಸುವವನಿಗಿಂತ ಮತ್ತು ಅದರಿಂದ ವಿಮುಖನಾಗುವವನಿಗಿಂತ ದೊಡ್ಡ ಅಕ್ರಮಿ ಯಾರು? ನಮ್ಮ ವಚನಗಳಿಂದ ವಿಮುಖರಾಗುವವರು ಯಾರೋ—ಅವರು ವಿಮುಖರಾದ ಕಾರಣ ನಾವು ಅವರಿಗೆ ಅತಿ ಹೀನ ಶಿಕ್ಷೆಯನ್ನು ನೀಡುವೆವು.
Enam 6:158
ಅವರ ಬಳಿಗೆ ದೇವದೂತರುಗಳು ಬರುವುದನ್ನು ಅಥವಾ ಅವರ ಪರಿಪಾಲಕನು (ಅಲ್ಲಾಹು) ಬರುವುದನ್ನು ಅಥವಾ ಅವರ ಪರಿಪಾಲಕನ (ಅಲ್ಲಾಹನ) ಕೆಲವು ದೃಷ್ಟಾಂತಗಳು ಬರುವುದನ್ನಲ್ಲದೆ ಅವರು ಬೇರೆ ಏನನ್ನು ಕಾಯುತ್ತಿದ್ದಾರೆ? ನಿಮ್ಮ ಪರಿಪಾಲಕನ (ಅಲ್ಲಾಹನ) ಕೆಲವು ದೃಷ್ಟಾಂತಗಳು ಬರುವ ದಿನದಂದು, ಅದಕ್ಕಿಂತ ಮೊದಲು ಸತ್ಯವಿಶ್ವಾಸಿಯಾದವನು ಅಥವಾ ಸತ್ಯವಿಶ್ವಾಸದಿಂದ ಏನಾದರೂ ಒಳಿತು ಮಾಡಿದವನ ಹೊರತು ಬೇರೆ ಯಾರಿಗೂ ಅವನ ವಿಶ್ವಾಸವು ಉಪಕಾರ ಮಾಡುವುದಿಲ್ಲ. ಹೇಳಿರಿ: “ನೀವು ಕಾಯಿರಿ, ನಿಶ್ಚಯವಾಗಿಯೂ ನಾವು ಕೂಡ ಕಾಯುತ್ತೇವೆ.”
Enam 6:159
ತಮ್ಮ ಧರ್ಮವನ್ನು ಒಡೆದು ವಿವಿಧ ಪಂಗಡಗಳಾಗಿ ಬೇರ್ಪಟ್ಟವರು ಯಾರೋ—ಅವರೊಂದಿಗೆ ನಿಮಗೆ ಯಾವುದೇ ಸಂಬಂಧವಿಲ್ಲ. ಅವರ ವಿಚಾರಣೆ ಮಾಡುವ ಹೊಣೆ ಅಲ್ಲಾಹನದ್ದು. ಅವರು ಮಾಡುತ್ತಿದ್ದ ಕರ್ಮಗಳನ್ನು ನಂತರ ಅವನು ಅವರಿಗೆ ತಿಳಿಸಿಕೊಡುವನು.
Enam 6:160
ಯಾರು ಒಂದು ಒಳಿತನ್ನು ತರುತ್ತಾನೋ ಅವನಿಗೆ ಅದರ ಹತ್ತು ಪಟ್ಟು ಪ್ರತಿಫಲವಿದೆ. ಯಾರು ಒಂದು ಕೆಡುಕನ್ನು ತರುತ್ತಾನೋ ಅವನಿಗೆ ಅದಕ್ಕೆ ಸಮಾನವಾದ ಶಿಕ್ಷೆಯನ್ನು ಮಾತ್ರ ನೀಡಲಾಗುವುದು. ಅವರಿಗೆ ಸ್ವಲ್ಪವೂ ಅನ್ಯಾಯವಾಗುವುದಿಲ್ಲ.
Enam 6:161
ಹೇಳಿರಿ: “ನಿಶ್ಚಯವಾಗಿಯೂ ನನ್ನ ಪರಿಪಾಲಕನು (ಅಲ್ಲಾಹು) ನನಗೆ ನೇರಮಾರ್ಗವನ್ನು—ಏಕನಿಷ್ಠರಾದ ಇಬ್ರಾಹೀಮರ ನೇರ ಧರ್ಮವನ್ನು ತೋರಿಸಿದ್ದಾನೆ. ಅವರು ಬಹುದೇವಾರಾಧಕರಲ್ಲಿ ಸೇರಿದವರಾಗಿರಲಿಲ್ಲ.”
Enam 6:162
ಹೇಳಿರಿ: “ನಿಶ್ಚಯವಾಗಿಯೂ ನನ್ನ ನಮಾಝ್, ನನ್ನ ಬಲಿದಾನ, ನನ್ನ ಜೀವನ ಮತ್ತು ನನ್ನ ಮರಣ ಎಲ್ಲವೂ ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಮೀಸಲು.
Enam 6:163
ಅವನಿಗೆ ಯಾವುದೇ ಸಹಭಾಗಿಗಳಿಲ್ಲ. ಇದನ್ನೇ ನನಗೆ ಆಜ್ಞಾಪಿಸಲಾಗಿದೆ. ನಾನು ಮುಸಲ್ಮಾನರಲ್ಲಿ (ಶರಣಾದವರಲ್ಲಿ) ಮೊದಲಿಗನಾಗಿದ್ದೇನೆ.”
Enam 6:164
ಹೇಳಿರಿ: “ಅಲ್ಲಾಹು ಸರ್ವ ವಸ್ತುಗಳ ಪರಿಪಾಲಕನಾಗಿರುವಾಗ, ನಾನು ಅವನ ಹೊರತು ಬೇರೆ ಪರಿಪಾಲಕರನ್ನು ಹುಡುಕಬೇಕೇ? ಪ್ರತಿಯೊಬ್ಬನೂ ತಾನು ಮಾಡಿದ ಕರ್ಮಕ್ಕೆ ಉತ್ತರದಾಯಿಯಾಗಿದ್ದಾನೆ. ಪಾಪಗಳ ಭಾರವನ್ನು ಹೊರುವ ಯಾರೂ ಇತರರು ಮಾಡಿದ ಪಾಪಗಳ ಭಾರವನ್ನು ಹೊರುವುದಿಲ್ಲ. ನಂತರ ನೀವು ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳುವಿರಿ. ಆಗ ನೀವು ಯಾವ ವಿಷಯದಲ್ಲಿ ಭಿನ್ನಮತ ತಳೆದಿರೋ ಅದನ್ನು ಅವನು ನಿಮಗೆ ತಿಳಿಸಿಕೊಡುವನು.”
Enam 6:165
ನಿಮ್ಮನ್ನು ಭೂಮಿಯಲ್ಲಿ ಉತ್ತರಾಧಿಕಾರಿಗಳನ್ನಾಗಿ ಮಾಡಿದ್ದು ಅವನೇ. ಅವನು ನಿಮಗೆ ನೀಡಿದ ಅನುಗ್ರಹಗಳಲ್ಲಿ ನಿಮ್ಮನ್ನು ಪರೀಕ್ಷಿಸುವುದಕ್ಕಾಗಿ ನಿಮ್ಮಲ್ಲಿ ಕೆಲವರಿಗೆ ಇತರ ಕೆಲವರಿಗಿಂತ ಶ್ರೇಷ್ಠ ಸ್ಥಾನಮಾನಗಳನ್ನು ನೀಡಿದನು. ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಅತಿವೇಗವಾಗಿ ಶಿಕ್ಷೆ ನೀಡುತ್ತಾನೆ ಮತ್ತು ನಿಶ್ಚಯವಾಗಿಯೂ ಅವನು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.