Kannada Meal — Hamza Butur — A'raf 7:1 – Yunus 10:109
Contents
- A'raf 7:1
- A'raf 7:2
- A'raf 7:3
- A'raf 7:4
- A'raf 7:5
- A'raf 7:6
- A'raf 7:7
- A'raf 7:8
- A'raf 7:9
- A'raf 7:10
- A'raf 7:11
- A'raf 7:12
- A'raf 7:13
- A'raf 7:14
- A'raf 7:15
- A'raf 7:16
- A'raf 7:17
- A'raf 7:18
- A'raf 7:19
- A'raf 7:20
- A'raf 7:21
- A'raf 7:22
- A'raf 7:23
- A'raf 7:24
- A'raf 7:25
- A'raf 7:26
- A'raf 7:27
- A'raf 7:28
- A'raf 7:29
- A'raf 7:30
- A'raf 7:31
- A'raf 7:32
- A'raf 7:33
- A'raf 7:34
- A'raf 7:35
- A'raf 7:36
- A'raf 7:37
- A'raf 7:38
- A'raf 7:39
- A'raf 7:40
- A'raf 7:41
- A'raf 7:42
- A'raf 7:43
- A'raf 7:44
- A'raf 7:45
- A'raf 7:46
- A'raf 7:47
- A'raf 7:48
- A'raf 7:49
- A'raf 7:50
- A'raf 7:51
- A'raf 7:52
- A'raf 7:53
- A'raf 7:54
- A'raf 7:55
- A'raf 7:56
- A'raf 7:57
- A'raf 7:58
- A'raf 7:59
- A'raf 7:60
- A'raf 7:61
- A'raf 7:62
- A'raf 7:63
- A'raf 7:64
- A'raf 7:65
- A'raf 7:66
- A'raf 7:67
- A'raf 7:68
- A'raf 7:69
- A'raf 7:70
- A'raf 7:71
- A'raf 7:72
- A'raf 7:73
- A'raf 7:74
- A'raf 7:75
- A'raf 7:76
- A'raf 7:77
- A'raf 7:78
- A'raf 7:79
- A'raf 7:80
- A'raf 7:81
- A'raf 7:82
- A'raf 7:83
- A'raf 7:84
- A'raf 7:85
- A'raf 7:86
- A'raf 7:87
- A'raf 7:88
- A'raf 7:89
- A'raf 7:90
- A'raf 7:91
- A'raf 7:92
- A'raf 7:93
- A'raf 7:94
- A'raf 7:95
- A'raf 7:96
- A'raf 7:97
- A'raf 7:98
- A'raf 7:99
- A'raf 7:100
- A'raf 7:101
- A'raf 7:102
- A'raf 7:103
- A'raf 7:104
- A'raf 7:105
- A'raf 7:106
- A'raf 7:107
- A'raf 7:108
- A'raf 7:109
- A'raf 7:110
- A'raf 7:111
- A'raf 7:112
- A'raf 7:113
- A'raf 7:114
- A'raf 7:115
- A'raf 7:116
- A'raf 7:117
- A'raf 7:118
- A'raf 7:119
- A'raf 7:120
- A'raf 7:121
- A'raf 7:122
- A'raf 7:123
- A'raf 7:124
- A'raf 7:125
- A'raf 7:126
- A'raf 7:127
- A'raf 7:128
- A'raf 7:129
- A'raf 7:130
- A'raf 7:131
- A'raf 7:132
- A'raf 7:133
- A'raf 7:134
- A'raf 7:135
- A'raf 7:136
- A'raf 7:137
- A'raf 7:138
- A'raf 7:139
- A'raf 7:140
- A'raf 7:141
- A'raf 7:142
- A'raf 7:143
- A'raf 7:144
- A'raf 7:145
- A'raf 7:146
- A'raf 7:147
- A'raf 7:148
- A'raf 7:149
- A'raf 7:150
- A'raf 7:151
- A'raf 7:152
- A'raf 7:153
- A'raf 7:154
- A'raf 7:155
- A'raf 7:156
- A'raf 7:157
- A'raf 7:158
- A'raf 7:159
- A'raf 7:160
- A'raf 7:161
- A'raf 7:162
- A'raf 7:163
- A'raf 7:164
- A'raf 7:165
- A'raf 7:166
- A'raf 7:167
- A'raf 7:168
- A'raf 7:169
- A'raf 7:170
- A'raf 7:171
- A'raf 7:172
- A'raf 7:173
- A'raf 7:174
- A'raf 7:175
- A'raf 7:176
- A'raf 7:177
- A'raf 7:178
- A'raf 7:179
- A'raf 7:180
- A'raf 7:181
- A'raf 7:182
- A'raf 7:183
- A'raf 7:184
- A'raf 7:185
- A'raf 7:186
- A'raf 7:187
- A'raf 7:188
- A'raf 7:189
- A'raf 7:190
- A'raf 7:191
- A'raf 7:192
- A'raf 7:193
- A'raf 7:194
- A'raf 7:195
- A'raf 7:196
- A'raf 7:197
- A'raf 7:198
- A'raf 7:199
- A'raf 7:200
- A'raf 7:201
- A'raf 7:202
- A'raf 7:203
- A'raf 7:204
- A'raf 7:205
- A'raf 7:206
- Enfal 8:1
- Enfal 8:2
- Enfal 8:3
- Enfal 8:4
- Enfal 8:5
- Enfal 8:6
- Enfal 8:7
- Enfal 8:8
- Enfal 8:9
- Enfal 8:10
- Enfal 8:11
- Enfal 8:12
- Enfal 8:13
- Enfal 8:14
- Enfal 8:15
- Enfal 8:16
- Enfal 8:17
- Enfal 8:18
- Enfal 8:19
- Enfal 8:20
- Enfal 8:21
- Enfal 8:22
- Enfal 8:23
- Enfal 8:24
- Enfal 8:25
- Enfal 8:26
- Enfal 8:27
- Enfal 8:28
- Enfal 8:29
- Enfal 8:30
- Enfal 8:31
- Enfal 8:32
- Enfal 8:33
- Enfal 8:34
- Enfal 8:35
- Enfal 8:36
- Enfal 8:37
- Enfal 8:38
- Enfal 8:39
- Enfal 8:40
- Enfal 8:41
- Enfal 8:42
- Enfal 8:43
- Enfal 8:44
- Enfal 8:45
- Enfal 8:46
- Enfal 8:47
- Enfal 8:48
- Enfal 8:49
- Enfal 8:50
- Enfal 8:51
- Enfal 8:52
- Enfal 8:53
- Enfal 8:54
- Enfal 8:55
- Enfal 8:56
- Enfal 8:57
- Enfal 8:58
- Enfal 8:59
- Enfal 8:60
- Enfal 8:61
- Enfal 8:62
- Enfal 8:63
- Enfal 8:64
- Enfal 8:65
- Enfal 8:66
- Enfal 8:67
- Enfal 8:68
- Enfal 8:69
- Enfal 8:70
- Enfal 8:71
- Enfal 8:72
- Enfal 8:73
- Enfal 8:74
- Enfal 8:75
- Tevbe 9:1
- Tevbe 9:2
- Tevbe 9:3
- Tevbe 9:4
- Tevbe 9:5
- Tevbe 9:6
- Tevbe 9:7
- Tevbe 9:8
- Tevbe 9:9
- Tevbe 9:10
- Tevbe 9:11
- Tevbe 9:12
- Tevbe 9:13
- Tevbe 9:14
- Tevbe 9:15
- Tevbe 9:16
- Tevbe 9:17
- Tevbe 9:18
- Tevbe 9:19
- Tevbe 9:20
- Tevbe 9:21
- Tevbe 9:22
- Tevbe 9:23
- Tevbe 9:24
- Tevbe 9:25
- Tevbe 9:26
- Tevbe 9:27
- Tevbe 9:28
- Tevbe 9:29
- Tevbe 9:30
- Tevbe 9:31
- Tevbe 9:32
- Tevbe 9:33
- Tevbe 9:34
- Tevbe 9:35
- Tevbe 9:36
- Tevbe 9:37
- Tevbe 9:38
- Tevbe 9:39
- Tevbe 9:40
- Tevbe 9:41
- Tevbe 9:42
- Tevbe 9:43
- Tevbe 9:44
- Tevbe 9:45
- Tevbe 9:46
- Tevbe 9:47
- Tevbe 9:48
- Tevbe 9:49
- Tevbe 9:50
- Tevbe 9:51
- Tevbe 9:52
- Tevbe 9:53
- Tevbe 9:54
- Tevbe 9:55
- Tevbe 9:56
- Tevbe 9:57
- Tevbe 9:58
- Tevbe 9:59
- Tevbe 9:60
- Tevbe 9:61
- Tevbe 9:62
- Tevbe 9:63
- Tevbe 9:64
- Tevbe 9:65
- Tevbe 9:66
- Tevbe 9:67
- Tevbe 9:68
- Tevbe 9:69
- Tevbe 9:70
- Tevbe 9:71
- Tevbe 9:72
- Tevbe 9:73
- Tevbe 9:74
- Tevbe 9:75
- Tevbe 9:76
- Tevbe 9:77
- Tevbe 9:78
- Tevbe 9:79
- Tevbe 9:80
- Tevbe 9:81
- Tevbe 9:82
- Tevbe 9:83
- Tevbe 9:84
- Tevbe 9:85
- Tevbe 9:86
- Tevbe 9:87
- Tevbe 9:88
- Tevbe 9:89
- Tevbe 9:90
- Tevbe 9:91
- Tevbe 9:92
- Tevbe 9:93
- Tevbe 9:94
- Tevbe 9:95
- Tevbe 9:96
- Tevbe 9:97
- Tevbe 9:98
- Tevbe 9:99
- Tevbe 9:100
- Tevbe 9:101
- Tevbe 9:102
- Tevbe 9:103
- Tevbe 9:104
- Tevbe 9:105
- Tevbe 9:106
- Tevbe 9:107
- Tevbe 9:108
- Tevbe 9:109
- Tevbe 9:110
- Tevbe 9:111
- Tevbe 9:112
- Tevbe 9:113
- Tevbe 9:114
- Tevbe 9:115
- Tevbe 9:116
- Tevbe 9:117
- Tevbe 9:118
- Tevbe 9:119
- Tevbe 9:120
- Tevbe 9:121
- Tevbe 9:122
- Tevbe 9:123
- Tevbe 9:124
- Tevbe 9:125
- Tevbe 9:126
- Tevbe 9:127
- Tevbe 9:128
- Tevbe 9:129
- Yunus 10:1
- Yunus 10:2
- Yunus 10:3
- Yunus 10:4
- Yunus 10:5
- Yunus 10:6
- Yunus 10:7
- Yunus 10:8
- Yunus 10:9
- Yunus 10:10
- Yunus 10:11
- Yunus 10:12
- Yunus 10:13
- Yunus 10:14
- Yunus 10:15
- Yunus 10:16
- Yunus 10:17
- Yunus 10:18
- Yunus 10:19
- Yunus 10:20
- Yunus 10:21
- Yunus 10:22
- Yunus 10:23
- Yunus 10:24
- Yunus 10:25
- Yunus 10:26
- Yunus 10:27
- Yunus 10:28
- Yunus 10:29
- Yunus 10:30
- Yunus 10:31
- Yunus 10:32
- Yunus 10:33
- Yunus 10:34
- Yunus 10:35
- Yunus 10:36
- Yunus 10:37
- Yunus 10:38
- Yunus 10:39
- Yunus 10:40
- Yunus 10:41
- Yunus 10:42
- Yunus 10:43
- Yunus 10:44
- Yunus 10:45
- Yunus 10:46
- Yunus 10:47
- Yunus 10:48
- Yunus 10:49
- Yunus 10:50
- Yunus 10:51
- Yunus 10:52
- Yunus 10:53
- Yunus 10:54
- Yunus 10:55
- Yunus 10:56
- Yunus 10:57
- Yunus 10:58
- Yunus 10:59
- Yunus 10:60
- Yunus 10:61
- Yunus 10:62
- Yunus 10:63
- Yunus 10:64
- Yunus 10:65
- Yunus 10:66
- Yunus 10:67
- Yunus 10:68
- Yunus 10:69
- Yunus 10:70
- Yunus 10:71
- Yunus 10:72
- Yunus 10:73
- Yunus 10:74
- Yunus 10:75
- Yunus 10:76
- Yunus 10:77
- Yunus 10:78
- Yunus 10:79
- Yunus 10:80
- Yunus 10:81
- Yunus 10:82
- Yunus 10:83
- Yunus 10:84
- Yunus 10:85
- Yunus 10:86
- Yunus 10:87
- Yunus 10:88
- Yunus 10:89
- Yunus 10:90
- Yunus 10:91
- Yunus 10:92
- Yunus 10:93
- Yunus 10:94
- Yunus 10:95
- Yunus 10:96
- Yunus 10:97
- Yunus 10:98
- Yunus 10:99
- Yunus 10:100
- Yunus 10:101
- Yunus 10:102
- Yunus 10:103
- Yunus 10:104
- Yunus 10:105
- Yunus 10:106
- Yunus 10:107
- Yunus 10:108
- Yunus 10:109
A'raf 7:1
ಅಲಿಫ್, ಲಾಮ್, ಮೀಮ್, ಸ್ವಾದ್
A'raf 7:2
ಇದು ನಿಮಗೆ ಅವತೀರ್ಣಗೊಳಿಸಲಾದ ಗ್ರಂಥವಾಗಿದೆ. ಇದರ ಬಗ್ಗೆ ನಿಮ್ಮ ಹೃದಯದಲ್ಲಿ ಯಾವುದೇ ಬೇಸರವುಂಟಾಗದಿರಲಿ. ಇದರ ಮೂಲಕ ನೀವು ಮುನ್ನೆಚ್ಚರಿಕೆ ನೀಡುವುದಕ್ಕಾಗಿ ಮತ್ತು ಸತ್ಯವಿಶ್ವಾಸಿಗಳಿಗೆ ಒಂದು ಉಪದೇಶವಾಗಿ (ಇದನ್ನು ಅವತೀರ್ಣಗೊಳಿಸಲಾಗಿದೆ).
A'raf 7:3
ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ನಿಮಗೆ ಅವತೀರ್ಣವಾದುದನ್ನು ಅನುಸರಿಸಿರಿ. ಅವನ ಹೊರತು ಬೇರೆ (ಸ್ವಘೋಷಿತ) ರಕ್ಷಕರನ್ನು ಅನುಸರಿಸಬೇಡಿ. ನೀವು ಸ್ವಲ್ಪವೇ ಉಪದೇಶ ಪಡೆಯುತ್ತೀರಿ.
A'raf 7:4
ನಾವು ಎಷ್ಟು ಊರುಗಳನ್ನು ನಾಶ ಮಾಡಿದ್ದೇವೆ! ಅವರು ರಾತ್ರಿ ಅಥವಾ ಮಧ್ಯಾಹ್ನದ ನಿದ್ದೆಯಲ್ಲಿರುವಾಗ ನಮ್ಮ ಶಿಕ್ಷೆಯು ಅವರ ಬಳಿಗೆ ಬಂದಿದೆ.
A'raf 7:5
ನಮ್ಮ ಶಿಕ್ಷೆಯು ಅವರ ಬಳಿಗೆ ಬಂದಾಗ ಅವರ ರೋದನವು, “ನಾವು ಅಕ್ರಮಿಗಳಾಗಿದ್ದೆವು” ಎಂದು ಹೇಳುವುದಲ್ಲದೆ ಬೇರೇನೂ ಆಗಿರಲಿಲ್ಲ.
A'raf 7:6
ಯಾರ ಬಳಿಗೆ ಸಂದೇಶವಾಹಕರನ್ನು ಕಳುಹಿಸಲಾಯಿತೋ ಅವರನ್ನು ನಾವು ಖಂಡಿತ ಪ್ರಶ್ನಿಸುವೆವು. ಅವರ ಬಳಿಗೆ ಕಳುಹಿಸಲಾದ ಸಂದೇಶವಾಹಕರೊಡನೆಯೂ ನಾವು ಪ್ರಶ್ನಿಸುವೆವು.
A'raf 7:7
ನಂತರ (ನಮ್ಮ ಬಳಿಯಿರುವ) ಜ್ಞಾನದ ಮೂಲಕ ನಾವು ಅವರಿಗೆ ವಿವರಿಸಿಕೊಡುವೆವು. ನಾವು ಯಾವುದೇ ಸ್ಥಿತಿಯಲ್ಲೂ ಅವರಿಂದ ದೂರವಾಗಿರಲಿಲ್ಲ.
A'raf 7:8
ಆ ದಿನದಂದು (ಕರ್ಮಗಳನ್ನು) ತೂಗುವುದು ಸತ್ಯವಾಗಿದೆ. ಆಗ ಯಾರ ತಕ್ಕಡಿ ಭಾರವಾಗುತ್ತದೋ ಅವರೇ ಯಶಸ್ವಿಯಾದವರು.
A'raf 7:9
ಯಾರ ತಕ್ಕಡಿ ಹಗುರವಾಗುತ್ತದೋ ಅವರೇ ಸ್ವಯಂ ನಷ್ಟಹೊಂದಿದವರು. ಏಕೆಂದರೆ ಅವರು ನಮ್ಮ ವಚನಗಳೊಂದಿಗೆ ಅಕ್ರಮವೆಸಗುತ್ತಿದ್ದರು.
A'raf 7:10
ನಿಶ್ಚಯವಾಗಿಯೂ ನಾವು ನಿಮಗೆ ಭೂಮಿಯಲ್ಲಿ ಅಧಿಕಾರವನ್ನು ನೀಡಿದೆವು. ಅಲ್ಲಿ ನಿಮಗೆ ಉಪಜೀವನ ಮಾರ್ಗಗಳನ್ನು ಮಾಡಿಕೊಟ್ಟೆವು. ನೀವು ಅಲ್ಪವೇ ಕೃತಜ್ಞರಾಗುತ್ತೀರಿ.
A'raf 7:11
ನಿಶ್ಚಯವಾಗಿಯೂ ನಾವು ನಿಮ್ಮನ್ನು ಸೃಷ್ಟಿಸಿದೆವು. ನಂತರ ನಿಮಗೆ ರೂಪವನ್ನು ನೀಡಿದೆವು. ನಂತರ ನಾವು ದೇವದೂತರುಗಳೊಡನೆ ಹೇಳಿದೆವು: “ನೀವು ಆದಮರಿಗೆ ಸಾಷ್ಟಾಂಗ ಮಾಡಿರಿ.” ಅವರು ಸಾಷ್ಟಾಂಗ ಮಾಡಿದರು—ಇಬ್ಲೀಸನ ಹೊರತು. ಅವನು ಸಾಷ್ಟಾಂಗ ಮಾಡುವವರಲ್ಲಿ ಸೇರಲಿಲ್ಲ.
A'raf 7:12
ಅಲ್ಲಾಹು ಕೇಳಿದನು: “ನಾನು ಸಾಷ್ಟಾಂಗ ಮಾಡಲು ಆಜ್ಞಾಪಿಸಿದಾಗ ನೀನು ಅದನ್ನು ನಿರಾಕರಿಸಲು ಕಾರಣವೇನು?” ಇಬ್ಲೀಸ್ ಹೇಳಿದನು: “ನಾನು ಆದಮರಿಗಿಂತಲೂ ಶ್ರೇಷ್ಠನು. ನೀನು ನನ್ನನ್ನು ಸೃಷ್ಟಿಸಿದ್ದು ಅಗ್ನಿಯಿಂದ ಮತ್ತು ಅವರನ್ನು ಸೃಷ್ಟಿಸಿದ್ದು ಜೇಡಿಮಣ್ಣಿನಿಂದ.”
A'raf 7:13
ಅಲ್ಲಾಹು ಹೇಳಿದನು: “ಇಲ್ಲಿಂದ ಇಳಿದುಹೋಗು. ಇಲ್ಲಿ ನಿನಗೆ ಅಹಂಕಾರದಿಂದ ವರ್ತಿಸಲು ಅಧಿಕಾರವಿಲ್ಲ. ಹೊರಡು! ನಿಶ್ಚಯವಾಗಿಯೂ ನೀನು ಅಪಮಾನಿತರಲ್ಲಿ ಸೇರಿದವನಾಗಿರುವೆ.”
A'raf 7:14
ಅವನು ಹೇಳಿದನು: “ಅವರನ್ನು (ಮನುಷ್ಯರನ್ನು) ಜೀವ ನೀಡಿ ಎಬ್ಬಿಸುವ ದಿನದವರೆಗೆ ನನಗೆ ಕಾಲಾವಕಾಶ (ಆಯುಷ್ಯ) ನೀಡು.”
A'raf 7:15
ಅಲ್ಲಾಹು ಹೇಳಿದನು: “ನಿಶ್ಚಯವಾಗಿಯೂ ನೀನು ಕಾಲಾವಕಾಶ ನೀಡಲಾದವರಲ್ಲಿ ಸೇರಿರುವೆ.”
A'raf 7:16
ಅವನು ಹೇಳಿದನು: “ನೀನು ನನ್ನನ್ನು ದಾರಿತಪ್ಪಿಸಿದ ಕಾರಣ ನಾನು ಖಂಡಿತ ನಿನ್ನ ನೇರಮಾರ್ಗದಲ್ಲಿ ಕುಳಿತು ಅವರಿಗಾಗಿ ಕಾಯುವೆನು.
A'raf 7:17
ನಂತರ ಅವರ ಮುಂಭಾಗದಿಂದ, ಅವರ ಹಿಂಭಾಗದಿಂದ, ಅವರ ಬಲಭಾಗದಿಂದ ಮತ್ತು ಅವರ ಎಡಭಾಗದಿಂದ ನಾನು ಖಂಡಿತ ಅವರ ಬಳಿಗೆ ಬರುವೆನು. ಅವರಲ್ಲಿ ಹೆಚ್ಚಿನವರನ್ನೂ ನೀನು ಕೃತಜ್ಞರಾಗಿ ಕಾಣಲಾರೆ.”
A'raf 7:18
ಅಲ್ಲಾಹು ಹೇಳಿದನು: “ಇಲ್ಲಿಂದ ಹೊರಡು! ನೀನು ಅಪಮಾನಿತನು ಮತ್ತು ತಿರಸ್ಕೃತನಾಗಿರುವೆ. ಅವರಲ್ಲಿ ಯಾರು ನಿನ್ನನ್ನು ಹಿಂಬಾಲಿಸುತ್ತಾರೋ, (ಅವರು ಸೇರಿದಂತೆ) ನಿಮ್ಮೆಲ್ಲರನ್ನೂ ನಾನು ನರಕದಲ್ಲಿ ತುಂಬಿಸುವೆನು.”
A'raf 7:19
“ಓ ಆದಮ್! ನೀವು ಮತ್ತು ನಿಮ್ಮ ಪತ್ನಿ ಸ್ವರ್ಗದಲ್ಲಿ ವಾಸಿಸಿರಿ. ಅಲ್ಲಿ ನೀವುಇಚ್ಛಿಸುವ ಎಲ್ಲಾ ಕಡೆಗಳಿಂದಲೂ ತಿನ್ನಿರಿ. ಆದರೆ ಈ ಮರದ ಸಮೀಪಕ್ಕೆ ಹೋಗಬೇಡಿ. ಹೋದರೆ ನೀವು ಅಕ್ರಮಿಗಳಾಗಿ ಬಿಡುವಿರಿ.”
A'raf 7:20
(ಆಗ ಆ ಹಣ್ಣನ್ನು ತಿನ್ನುವ ಮೂಲಕ) ಅವರಿಂದ ಮರೆಯಾಗಿದ್ದ ಅವರ ಗುಹ್ಯಭಾಗಗಳನ್ನು ಬಹಿರಂಗಪಡಿಸುವುದಕ್ಕಾಗಿ ಶೈತಾನನು ಅವರಿಬ್ಬರಿಗೂ (ಆ ಹಣ್ಣು ತಿನ್ನುವಂತೆ) ದುಷ್ಪ್ರೇರಣೆ ಮಾಡಿದನು. ಅವನು ಹೇಳಿದನು: “ನೀವಿಬ್ಬರು ದೇವದೂತರಾಗುವಿರಿ ಅಥವಾ ಇಲ್ಲಿ (ಸ್ವರ್ಗದಲ್ಲಿ) ಶಾಶ್ವತವಾಗಿ ವಾಸಿಸುವಿರಿ ಎಂಬ ಕಾರಣದಿಂದಲೇ ನಿಮ್ಮ ಪರಿಪಾಲಕನು ನಿಮ್ಮನ್ನು ಈ ಮರದಿಂದ ತಡೆದಿದ್ದಾನೆ.”
A'raf 7:21
“ನಿಶ್ಚಯವಾಗಿಯೂ ನಾನು ನಿಮ್ಮ ಹಿತೈಷಿಯಾಗಿದ್ದೇನೆ” ಎಂದು ಅವನು ಪ್ರತಿಜ್ಞೆ ಮಾಡಿ ಹೇಳಿದನು.
A'raf 7:22
ಹೀಗೆ ಅವನು ಮೋಸದಿಂದ ಅವರಿಬ್ಬರನ್ನು ಕೆಳಗಿಳಿಸಿದನು. ಅವರಿಬ್ಬರು ಆ ಮರದ ಹಣ್ಣಿನ ರುಚಿಯನ್ನು ಸವಿಯುತ್ತಿದ್ದಂತೆ ಅವರಿಗೆ ಅವರ ಗುಹ್ಯಭಾಗಗಳು ಬಹಿರಂಗವಾದವು. ಸ್ವರ್ಗದ ಎಲೆಗಳಿಂದ ಅವರಿಬ್ಬರೂ ತಮ್ಮ ದೇಹಗಳನ್ನು ಮುಚ್ಚತೊಡಗಿದರು. ಆಗ ಅವರನ್ನು ಕರೆದು ಅವರ ಪರಿಪಾಲಕ (ಅಲ್ಲಾಹು) ಹೇಳಿದನು: “ಆ ಮರದಿಂದ ನಾನು ನಿಮ್ಮನ್ನು ತಡೆಯಲಿಲ್ಲವೇ? ನಿಶ್ಚಯವಾಗಿಯೂ ಶೈತಾನನು ನಿಮ್ಮ ಪ್ರತ್ಯಕ್ಷ ಶತ್ರುವೆಂದು ನಾನು ನಿಮಗೆ ಹೇಳಲಿಲ್ಲವೇ?”
A'raf 7:23
ಅವರಿಬ್ಬರು ಹೇಳಿದರು: “ಓ ನಮ್ಮ ಪರಿಪಾಲಕನೇ! ನಾವು ಸ್ವಯಂ ಅಕ್ರಮವೆಸಗಿದ್ದೇವೆ. ನೀನು ನಮ್ಮನ್ನು ಕ್ಷಮಿಸದಿದ್ದರೆ ಮತ್ತು ದಯೆ ತೋರದಿದ್ದರೆ ನಾವು ನಷ್ಟಹೊಂದಿದವರಲ್ಲಿ ಸೇರುವುದು ನಿಶ್ಚಿತ.”
A'raf 7:24
ಅಲ್ಲಾಹು ಹೇಳಿದನು: “ಇಳಿಯಿರಿ! ನೀವು ಪರಸ್ಪರ ಶತ್ರುಗಳಾಗುವಿರಿ. ನಿಮಗೆ ಭೂಮಿಯಲ್ಲಿ ವಾಸ್ತವ್ಯವಿದೆ ಮತ್ತು ಒಂದು ನಿರ್ದಿಷ್ಟ ಕಾಲದ ತನಕ ಜೀವನ ಸವಲತ್ತುಗಳಿವೆ.”
A'raf 7:25
ಅಲ್ಲಾಹು ಹೇಳಿದನು: “ನೀವು ಅಲ್ಲಿಯೇ ಬದುಕುವಿರಿ ಮತ್ತು ಅಲ್ಲಿಯೇ ಸಾಯುವಿರಿ. ನಂತರ ನಿಮ್ಮನ್ನು ಅಲ್ಲಿಂದಲೇ ಹೊರತರಲಾಗುವುದು.”
A'raf 7:26
ಓ ಆದಮರ ಮಕ್ಕಳೇ! ನಿಮ್ಮ ಗುಹ್ಯಭಾಗಗಳನ್ನು ಮುಚ್ಚಲು ನಾವು ನಿಮಗೆ ಉಡುಪನ್ನು ಇಳಿಸಿಕೊಟ್ಟಿದ್ದೇವೆ. ಅದು ನಿಮಗೆ ಅಲಂಕಾರವೂ ಆಗಿದೆ. ಆದರೆ ದೇವಭಯದ ಉಡುಪು ಅತಿಶ್ರೇಷ್ಠವಾಗಿದೆ. ಅದು ಅಲ್ಲಾಹನ ದೃಷ್ಟಾಂತಗಳಲ್ಲಿ ಸೇರಿದ್ದಾಗಿದೆ. ಅವರು ನೆನಪಿಡುವುದಕ್ಕಾಗಿ.
A'raf 7:27
ಓ ಆದಮರ ಮಕ್ಕಳೇ! ನಿಮ್ಮ ತಂದೆ-ತಾಯಿಗಳನ್ನು—ಅವರ ಗುಹ್ಯಭಾಗಗಳನ್ನು ಅವರಿಗೆ ತೋರಿಸಲು ಅವರ ಬಟ್ಟೆಯನ್ನು ಕಳಚಿ ಹಾಕುತ್ತಾ—ಅವರನ್ನು ಸ್ವರ್ಗದಿಂದ ನಿರ್ಗಮಿಸುವಂತೆ ಮಾಡಿದ ಶೈತಾನನು ನಿಮ್ಮನ್ನು ಕೂಡ ಮರುಳುಗೊಳಿಸದಿರಲಿ. ನಿಶ್ಚಯವಾಗಿಯೂ ಅವನು ಮತ್ತು ಅವನ ವಂಶಸ್ಥರು ನಿಮ್ಮನ್ನು ನೋಡುತ್ತಿದ್ದಾರೆ. ಆದರೆ ನಿಮಗೆ ಅವರನ್ನು ನೋಡಲಾಗುವುದಿಲ್ಲ. ನಿಶ್ಚಯವಾಗಿಯೂ ವಿಶ್ವಾಸವಿಡದ ಜನರಿಗೆ ನಾವು ಶೈತಾನರನ್ನು ಮಿತ್ರರನ್ನಾಗಿ ಮಾಡಿದ್ದೇವೆ.
A'raf 7:28
ಅವರು ಏನಾದರೂ ಅಶ್ಲೀಲಕೃತ್ಯ ಮಾಡಿದರೆ, “ನಮ್ಮ ಪೂರ್ವಜರು ಹೀಗೆ ಮಾಡುವುದನ್ನು ನಾವು ನೋಡಿದ್ದೇವೆ; ಅಲ್ಲಾಹು ಇದನ್ನು ನಮಗೆ ಆದೇಶಿಸಿದ್ದಾನೆ” ಎಂದು ಹೇಳುತ್ತಾರೆ. ಹೇಳಿರಿ: “ಅಲ್ಲಾಹು ಅಶ್ಲೀಲಕೃತ್ಯ ಮಾಡಲು ಖಂಡಿತ ಆದೇಶಿಸುವುದಿಲ್ಲ. ನಿಮಗೆ ತಿಳಿದಿಲ್ಲದ ವಿಷಯವನ್ನು ನೀವು ಅಲ್ಲಾಹನ ಮೇಲೆ ಆರೋಪಿಸುತ್ತೀರಾ?”
A'raf 7:29
ಹೇಳಿರಿ: “ನನ್ನ ಪರಿಪಾಲಕ ನನಗೆ ನ್ಯಾಯದಿಂದ ವರ್ತಿಸಲು ಆದೇಶಿಸಿದ್ದಾನೆ. ಎಲ್ಲಾ ಆರಾಧನಾ ಸ್ಥಳಗಳಲ್ಲೂ (ವೇಳೆಗಳಲ್ಲೂ) ನಿಮ್ಮ ಮುಖಗಳನ್ನು (ಅವನ ಕಡೆಗೆ) ನೇರವಾಗಿ ನಿಲ್ಲಿಸಿರಿ ಮತ್ತು ಧರ್ಮವನ್ನು ಅವನಿಗೆ ನಿಷ್ಕಳಂಕಗೊಳಿಸಿ ಅವನಲ್ಲಿ ಪ್ರಾರ್ಥಿಸಿರಿ (ಎಂದು ಅವನು ಆದೇಶಿಸಿದ್ದಾನೆ).” ಅವನು ನಿಮ್ಮನ್ನು ಮೊದಲು ಸೃಷ್ಟಿಸಿದಂತೆಯೇ (ನಿಮ್ಮ ಮರಣದ ಬಳಿಕ) ಪುನಃ ಸೃಷ್ಟಿಸುವನು.
A'raf 7:30
ಒಂದು ಗುಂಪಿಗೆ ಅವನು ಸನ್ಮಾರ್ಗವನ್ನು ತೋರಿಸಿದ್ದಾನೆ ಮತ್ತು ಇನ್ನೊಂದು ಗುಂಪು ದುರ್ಮಾರ್ಗದಲ್ಲಿರಲು ಅರ್ಹರಾಗಿದ್ದಾರೆ. ನಿಶ್ಚಯವಾಗಿಯೂ ಅವರು ಅಲ್ಲಾಹನನ್ನು ಬಿಟ್ಟು ಶೈತಾನರನ್ನು ರಕ್ಷಕರನ್ನಾಗಿ ಸ್ವೀಕರಿಸಿದರು. ಅವರು ಸನ್ಮಾರ್ಗದಲ್ಲಿದ್ದಾರೆಂದೇ ಅವರು ಭಾವಿಸುತ್ತಿದ್ದಾರೆ.
A'raf 7:31
ಓ ಆದಮರ ಮಕ್ಕಳೇ! ಎಲ್ಲಾ ಆರಾಧನಾ ಸ್ಥಳಗಳಲ್ಲೂ (ವೇಳೆಗಳಲ್ಲೂ) ಉಡುಪುಗಳನ್ನು ಧರಿಸಿರಿ.[1] ನೀವು ತಿನ್ನಿರಿ ಮತ್ತು ಕುಡಿಯಿರಿ. ಆದರೆ ದುರ್ವ್ಯಯ ಮಾಡಬೇಡಿ. ದುರ್ವ್ಯಯ ಮಾಡುವವರನ್ನು ಅಲ್ಲಾಹು ಇಷ್ಟಪಡುವುದಿಲ್ಲ.
———
[1] ಮಕ್ಕಾದ ಬಹುದೇವಾರಾಧಕರು ನಗ್ನರಾಗಿ ಕಅಬಾಲಯಕ್ಕೆ ತವಾಫ್ (ಪ್ರದಕ್ಷಿಣೆ) ಮಾಡುತ್ತಿದ್ದರು. ನಾವು ಹುಟ್ಟಿದ ಸ್ಥಿತಿಯಲ್ಲೇ ತವಾಫ್ ಮಾಡುತ್ತೇವೆಂದು ಅವರು ಹೇಳುತ್ತಿದ್ದರು. ಅಲ್ಲಾಹನ ಆಜ್ಞೋಲ್ಲಂಘನೆ ಮಾಡಿದ ಬಟ್ಟೆಗಳನ್ನು ಧರಿಸಿ ಆರಾಧನೆ ಮಾಡಿದರೆ ಸಿಂಧುವಾಗುವುದಿಲ್ಲ ಎಂಬ ನಂಬಿಕೆ ಅವರಲ್ಲಿತ್ತು. ಆದರೆ ಇಸ್ಲಾಂ ಇವೆಲ್ಲವನ್ನೂ ವಿರೋಧಿಸುತ್ತದೆ.
A'raf 7:32
ಹೇಳಿರಿ: “ಅಲ್ಲಾಹು ತನ್ನ ದಾಸರಿಗೆ ಹೊರತಂದ ಅಲಂಕಾರದ ಉಡುಪುಗಳನ್ನು ಮತ್ತು ಉತ್ತಮ ಆಹಾರಗಳನ್ನು ನಿಷೇಧಿಸಿದ್ದು ಯಾರು?” ಹೇಳಿರಿ: “ಇಹಲೋಕದಲ್ಲಿ ಅವು ಸತ್ಯವಿಶ್ವಾಸಿಗಳಿಗೆ (ಮತ್ತು ಇತರರಿಗೆ) ಇರುವುದಾಗಿದೆ. ಪುನರುತ್ಥಾನ ದಿನದಲ್ಲಿ ವಿಶೇಷವಾಗಿ ಸತ್ಯವಿಶ್ವಾಸಿಗಳಿಗೆ ಮಾತ್ರ ಇರುವುದಾಗಿದೆ.” ಈ ರೀತಿಯಲ್ಲಿ ನಾವು ತಿಳಿದುಕೊಳ್ಳುವ ಜನರಿಗಾಗಿ ವಚನಗಳನ್ನು ವಿವರಿಸಿಕೊಡುತ್ತೇವೆ.
A'raf 7:33
ಹೇಳಿರಿ: “ನನ್ನ ಪರಿಪಾಲಕ (ಅಲ್ಲಾಹು) ನಿಷೇಧಿಸಿರುವುದು ಪ್ರತ್ಯಕ್ಷ ಮತ್ತು ಪರೋಕ್ಷವಾಗಿರುವ ಅಶ್ಲೀಲಕೃತ್ಯಗಳು, ಪಾಪಗಳು, ನ್ಯಾಯರಹಿತವಾದ ದಬ್ಬಾಳಿಕೆಗಳು, ಅಲ್ಲಾಹು ಯಾವುದೇ ಸಾಕ್ಷ್ಯಾಧಾರ ಇಳಿಸಿಕೊಡದ ವಸ್ತುಗಳನ್ನು ಅವನಿಗೆ ಸಹಭಾಗಿಯನ್ನಾಗಿ ಮಾಡುವುದು ಮತ್ತು ಅಲ್ಲಾಹನ ಬಗ್ಗೆ ನಿಮ್ಮ ತಿಳಿದಿಲ್ಲದ ವಿಷಯಗಳನ್ನು ಹೇಳುವುದು ಮಾತ್ರವಾಗಿವೆ.”
A'raf 7:34
ಎಲ್ಲಾ ಸಮುದಾಯಗಳಿಗೂ ಒಂದು ಅವಧಿಯಿದೆ. ಅವರ ಅವಧಿಯು ಬಂದರೆ, ಒಂದು ಕ್ಷಣ ಹಿಂದೂಡಲು ಅಥವಾ ಮುಂದೂಡಲು ಅವರಿಂದ ಸಾಧ್ಯವಿಲ್ಲ.
A'raf 7:35
ಓ ಆದಮರ ಮಕ್ಕಳೇ! ನನ್ನ ವಚನಗಳನ್ನು ವಿವರಿಸಿಕೊಡುವ ಸಂದೇಶವಾಹಕರುಗಳು ನಿಮ್ಮಿಂದಲೇ ನಿಮ್ಮ ಬಳಿಗೆ ಬಂದರೆ—ಆಗ ಯಾರು ದೇವಭಯದಿಂದ ಜೀವಿಸುತ್ತಾರೋ ಮತ್ತು ಸ್ವಯಂ ಸುಧಾರಿಸಿಕೊಳ್ಳುತ್ತಾರೋ ಅವರಿಗೆ ಯಾವುದೇ ಭಯವಿಲ್ಲ; ಅವರು ದುಃಖಿಸುವುದೂ ಇಲ್ಲ.
A'raf 7:36
ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವರು ಮತ್ತು ಅವುಗಳ ಬಗ್ಗೆ ಅಹಂಕಾರ ತೋರಿದವರು ಯಾರೋ—ಅವರೇ ನರಕವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
A'raf 7:37
ಅಲ್ಲಾಹನ ಮೇಲೆ ಸುಳ್ಳು ಆರೋಪಿಸುವವನಿಗಿಂತ ಅಥವಾ ಅವನ ವಚನಗಳನ್ನು ನಿಷೇಧಿಸುವವನಿಗಿಂತ ದೊಡ್ಡ ಅಕ್ರಮಿ ಯಾರು? ಅವರು (ಅಲ್ಲಾಹನ) ದಾಖಲೆಯಲ್ಲಿ ಅವರಿಗೆ ನಿಶ್ಚಯಿಸಲಾದ ಪಾಲನ್ನು ಪಡೆಯುವರು. ಎಲ್ಲಿಯವರೆಗೆಂದರೆ, ಅವರ ಪ್ರಾಣ ತೆಗೆಯಲು ನಮ್ಮ ದೂತರು (ದೇವದೂತರು) ಅವರ ಬಳಿಗೆ ಬರುವಾಗ, ಅವರು (ದೇವದೂತರು) ಕೇಳುವರು: “ನೀವು ಅಲ್ಲಾಹನನ್ನು ಬಿಟ್ಟು ಕರೆದು ಪ್ರಾರ್ಥಿಸುತ್ತಿದ್ದವರು ಎಲ್ಲಿದ್ದಾರೆ?” ಅವರು ಉತ್ತರಿಸುವರು: “ಅವರು ನಮ್ಮನ್ನು ಬಿಟ್ಟು ಹೋದರು.” ಅವರು ಸತ್ಯನಿಷೇಧಿಗಳಾಗಿದ್ದರೆಂದು ಅವರೇ ಅವರ ವಿರುದ್ಧ ಸಾಕ್ಷಿ ನುಡಿದಿದ್ದಾರೆ.
A'raf 7:38
ಅಲ್ಲಾಹು ಹೇಳುವನು: “ನಿಮಗಿಂತ ಮೊದಲು ತೀರಿಹೋದ ಜಿನ್ನ್ ಮತ್ತು ಮನುಷ್ಯರ ಸಮುದಾಯಗಳೊಂದಿಗೆ ನೀವು ಕೂಡ ನರಕವನ್ನು ಪ್ರವೇಶಿಸಿರಿ.” ಒಂದೊಂದು ಸಮುದಾಯದವರು ಅದನ್ನು ಪ್ರವೇಶಿಸುವಾಗಲೆಲ್ಲಾ ಅವರಿಗಿಂತ ಮೊದಲಿನ ಸಮುದಾಯವನ್ನು ಶಪಿಸುವರು. ಎಲ್ಲಿಯವರೆಗೆಂದರೆ, ಅವರೆಲ್ಲರೂ ಅಲ್ಲಿ ಒಟ್ಟು ಸೇರಿದಾಗ ನಂತರ ಬಂದವರು ಮೊದಲು ಬಂದವರ ಬಗ್ಗೆ ಹೇಳುವರು: “ಓ ನಮ್ಮ ಪರಿಪಾಲಕನೇ! ಇವರೇ ನಮ್ಮನ್ನು ದಾರಿ ತಪ್ಪಿಸಿದವರು. ಆದ್ದರಿಂದ ಇವರಿಗೆ ನರಕದ ಇಮ್ಮಡಿ ಶಿಕ್ಷೆಯನ್ನು ನೀಡು.” ಅಲ್ಲಾಹು ಹೇಳುವನು: “ಎಲ್ಲರಿಗೂ ಇಮ್ಮಡಿ ಶಿಕ್ಷೆಯಿದೆ. ಆದರೆ ನೀವು ತಿಳಿಯುವುದಿಲ್ಲ.”
A'raf 7:39
ಮೊದಲು ಬಂದವರು ನಂತರ ಬಂದವರೊಡನೆ ಹೇಳುವರು: “ನಿಮಗೆ ನಮಗಿಂತಲೂ ದೊಡ್ಡ ಶ್ರೇಷ್ಠತೆಯೇನಿಲ್ಲ (ನಾವೆಲ್ಲರೂ ಸಮಾನರು). ಆದ್ದರಿಂದ ನೀವು ಮಾಡುತ್ತಿದ್ದ ದುಷ್ಕರ್ಮಗಳ ಶಿಕ್ಷೆಯನ್ನು ನೀವೇ ಅನುಭವಿಸಿರಿ.”
A'raf 7:40
ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವರು ಮತ್ತು ಅವುಗಳ ಬಗ್ಗೆ ಅಹಂಕಾರ ತೋರಿದವರು ಯಾರೋ—ಅವರಿಗೆ ಆಕಾಶದ ಬಾಗಿಲುಗಳನ್ನು ತೆರೆದುಕೊಡಲಾಗುವುದಿಲ್ಲ.[1] ಸೂಜಿಯ ರಂಧ್ರದಲ್ಲಿ ಒಂಟೆ ಪ್ರವೇಶ ಮಾಡುವ ತನಕ ಅವರು ಸ್ವರ್ಗವನ್ನು ಪ್ರವೇಶಿಸುವುದಿಲ್ಲ. ಈ ರೀತಿ ನಾವು ಅಪರಾಧಿಗಳಿಗೆ ಪ್ರತಿಫಲ ನೀಡುವೆವು.
———
[1] ಅಂದರೆ ಅವರ ಆತ್ಮಗಳು, ಅಥವಾ ಅವರು ಮಾಡಿದ ಕರ್ಮಗಳು, ಅಥವಾ ಅವರ ಪ್ರಾರ್ಥನೆಗಳಿಗೆ ಆಕಾಶದ ಬಾಗಿಲುಗಳು ತೆರೆಯುವುದಿಲ್ಲ (ಸ್ವೀಕಾರವಾಗುವುದಿಲ್ಲ) ಎಂದರ್ಥ.
A'raf 7:41
ಅವರಿಗೆ ನರಕಾಗ್ನಿಯ ಹಾಸಿಗೆಯಿದೆ ಮತ್ತು ಅವರ ಮೇಲ್ಭಾಗದಲ್ಲಿ (ನರಕದ) ಹೊದಿಕೆಗಳೂ ಇವೆ. ಈ ರೀತಿ ನಾವು ಅಕ್ರಮಿಗಳಿಗೆ ಪ್ರತಿಫಲ ನೀಡುವೆವು.
A'raf 7:42
ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ—ಒಬ್ಬ ವ್ಯಕ್ತಿಯ ಮೇಲೆ ಅವನ ಸಾಮರ್ಥ್ಯಕ್ಕೆ ಮಿಗಿಲಾದುದನ್ನು ನಾವು ಹೊರಿಸುವುದಿಲ್ಲ. ಅವರೇ ಸ್ವರ್ಗವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
A'raf 7:43
ನಾವು ಅವರ ಹೃದಯಗಳಲ್ಲಿರುವ ದ್ವೇಷವನ್ನು ತೆಗೆದು ಬಿಡುವೆವು. ಅವರ ತಳಭಾಗದಿಂದ ನದಿಗಳು ಹರಿಯುವುವು. ಅವರು ಹೇಳುವರು: “ಇದರ ಕಡೆಗೆ ನಮಗೆ ದಾರಿ ತೋರಿಸಿದ ಅಲ್ಲಾಹನಿಗೆ ಸರ್ವಸ್ತುತಿ. ಅಲ್ಲಾಹು ನಮಗೆ ದಾರಿ ತೋರಿಸದಿದ್ದರೆ ನಾವು ಸನ್ಮಾರ್ಗದಲ್ಲಿರುತ್ತಿರಲಿಲ್ಲ. ನಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಸಂದೇಶವಾಹಕರು ಸತ್ಯದೊಂದಿಗೇ ಬಂದಿದ್ದರು.” ಆಗ ಅವರೊಡನೆ ಹೇಳಲಾಗುವುದು: “ನೀವು ಮಾಡಿದ ಕರ್ಮಗಳಿಗೆ ಪ್ರತಿಫಲವಾಗಿ ಈ ಸ್ವರ್ಗವನ್ನು ನೀವು ಉತ್ತರಾಧಿಕಾರವಾಗಿ ಪಡೆದಿರುವಿರಿ.”
A'raf 7:44
ಸ್ವರ್ಗವಾಸಿಗಳು ನರಕವಾಸಿಗಳನ್ನು ಕರೆದು ಹೇಳುವರು: “ನಮ್ಮ ಪರಿಪಾಲಕನು (ಅಲ್ಲಾಹು) ನಮಗೆ ವಾಗ್ದಾನ ಮಾಡಿದ್ದು ಸತ್ಯವಾಗಿ ನೆರವೇರಿದ್ದನ್ನು ನಾವು ಕಂಡಿದ್ದೇವೆ. ನಿಮ್ಮ ಪರಿಪಾಲಕನು (ಅಲ್ಲಾಹು) ನಿಮಗೆ ವಾಗ್ದಾನ ಮಾಡಿದ್ದು ಸತ್ಯವಾಗಿ ನೆರವೇರಿದ್ದನ್ನು ನೀವು ಕಂಡಿದ್ದೀರಾ?” ಅವರು ಉತ್ತರಿಸುವರು: “ಹೌದು.” ಆಗ ಅವರ ನಡುವಿನಿಂದ ಒಬ್ಬನು ಘೋಷಿಸುವನು: “ಅಕ್ರಮಿಗಳ ಮೇಲೆ ಅಲ್ಲಾಹನ ಶಾಪವಿರಲಿ.”
A'raf 7:45
ಅವರು (ಅಕ್ರಮಿಗಳು) ಯಾರೆಂದರೆ, ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಯುವವರು ಮತ್ತು ಅದರಲ್ಲಿ ವಕ್ರತೆಯನ್ನು ಹುಡುಕುವವರು. ಅವರು ಪರಲೋಕವನ್ನು ನಿಷೇಧಿಸುವವರಾಗಿದ್ದಾರೆ.
A'raf 7:46
ಅವರ ನಡುವೆ ಒಂದು ತಡೆಗೋಡೆಯಿದೆ[1] ಮತ್ತು ಅದರ ಎತ್ತರದ ಸ್ಥಳಗಳಲ್ಲಿ ಕೆಲವು ಜನರಿದ್ದಾರೆ.[2] ಅವರು ಎಲ್ಲರನ್ನೂ (ಸ್ವರ್ಗವಾಸಿ ಮತ್ತು ನರಕವಾಸಿಗಳೆಲ್ಲರನ್ನೂ) ಅವರ ಚಿಹ್ನೆಗಳಿಂದ ಗುರುತಿಸುವರು. ಅವರು ಸ್ವರ್ಗವಾಸಿಗಳನ್ನು ಕರೆದು ಹೇಳುವರು: “ನಿಮ್ಮ ಮೇಲೆ ಶಾಂತಿಯಿರಲಿ.” ಅವರಿಗೆ ಸ್ವರ್ಗ ಪ್ರವೇಶ ಮಾಡುವ ಆಸೆಯಿದ್ದರೂ ಸಹ ಅವರು ಇನ್ನೂ ಅದನ್ನು ಪ್ರವೇಶಿಸಿಲ್ಲ.
———
[1] ಸ್ವರ್ಗ ಮತ್ತು ನರಕಗಳ ನಡುವೆ ಅಥವಾ ಸತ್ಯವಿಶ್ವಾಸಿಗಳು ಮತ್ತು ಸತ್ಯನಿಷೇಧಿಗಳ ನಡುವೆ ಒಂದು ಅಡ್ಢಗೋಡೆಯನ್ನು ಸ್ಥಾಪಿಸಲಾಗುವುದು.
[2] ಹೆಚ್ಚಿನ ವ್ಯಾಖ್ಯಾನಕಾರರ ಪ್ರಕಾರ ಇವರು ಸ್ವರ್ಗ ಅಥವಾ ನರಕಕ್ಕೆ ಹೋಗದೆ ಅತಂತ್ರ ಸ್ಥಿತಿಯಲ್ಲಿರುವವರು. ಇವರ ದುಷ್ಕರ್ಮಗಳು ಇವರನ್ನು ಸ್ವರ್ಗ ಪ್ರವೇಶದಿಂದ ಮತ್ತು ಇವರ ಸತ್ಕರ್ಮಗಳು ಇವರನ್ನು ನರಕ ಪ್ರವೇಶದಿಂದ ತಡೆಯುತ್ತಿವೆ. ಇವರ ಬಗ್ಗೆ ಅಲ್ಲಾಹು ಅಂತಿಮ ತೀರ್ಪು ನೀಡುವ ತನಕ ಇವರು ಇವೆರಡರ ನಡುವಿನಲ್ಲಿರುವರು.
A'raf 7:47
ಅವರ ದೃಷ್ಟಿಗಳನ್ನು ನರಕವಾಸಿಗಳ ಕಡೆಗೆ ತಿರುಗಿಸಲಾದಾಗ ಅವರು ಹೇಳುವರು: “ಓ ನಮ್ಮ ಪರಿಪಾಲಕನೇ! ನಮ್ಮನ್ನು ಅಕ್ರಮಿಗಳೊಡನೆ ಸೇರಿಸಬೇಡ.”
A'raf 7:48
ಎತ್ತರದ ಸ್ಥಳಗಳಲ್ಲಿರುವವರು ಚಿಹ್ನೆಗಳ ಮೂಲಕ ಗುರುತಿಸಿದ ಆ ಜನರನ್ನು (ನರಕವಾಸಿಗಳನ್ನು) ಕರೆದು ಹೇಳುವರು: “ನೀವು ಒಟ್ಟುಗೂಡಿಸಿದ (ಜನ ಮತ್ತು ಧನ) ಮತ್ತು ನೀವು ತೋರುತ್ತಿದ್ದ ಅಹಂಕಾರ ನಿಮಗೇನಾದರೂ ಉಪಕಾರ ಮಾಡಿದೆಯೇ?
A'raf 7:49
ಅಲ್ಲಾಹು ದಯೆ ತೋರಲಾರ ಎಂದು ನೀವು ಆಣೆ ಮಾಡಿ ಹೇಳುತ್ತಿದ್ದದ್ದು ಈ ಜನರ ಬಗ್ಗೆಯಲ್ಲವೇ? ನೀವು ಸ್ವರ್ಗವನ್ನು ಪ್ರವೇಶಿಸಿರಿ. ನಿಮಗೆ ಯಾವುದೇ ಭಯವಿಲ್ಲ; ನೀವು ದುಃಖಿಸುವುದೂ ಇಲ್ಲ (ಎಂದು ಅವರೊಡನೆ ಈಗ ಹೇಳಲಾಗಿದೆ).”
A'raf 7:50
ನರಕವಾಸಿಗಳು ಸ್ವರ್ಗವಾಸಿಗಳನ್ನು ಕರೆದು ಹೇಳುವರು: “ನಮಗೆ ಸ್ವಲ್ಪ ನೀರು ಕೊಡಿ; ಅಥವಾ ಅಲ್ಲಾಹು ನಿಮಗೆ ನೀಡಿರುವ ಆಹಾರಗಳಲ್ಲಿ ಏನಾದರೂ ಕೊಡಿ.” ಅವರು (ಸ್ವರ್ಗವಾಸಿಗಳು) ಹೇಳುವರು: “ನಿಶ್ಚಯವಾಗಿಯೂ ಅಲ್ಲಾಹು ಅವೆರಡನ್ನೂ ಸತ್ಯನಿಷೇಧಿಗಳಿಗೆ ನಿಷೇಧಿಸಿದ್ದಾನೆ.
A'raf 7:51
ಅವರು (ಸತ್ಯನಿಷೇಧಿಗಳು) ಯಾರೆಂದರೆ, ತಮ್ಮ ಧರ್ಮವನ್ನು ಆಟ ಮತ್ತು ಮನೋರಂಜನೆಯಾಗಿ ಸ್ವೀಕರಿಸಿದವರು ಹಾಗೂ ಇಹಲೋಕ ಜೀವನಕ್ಕೆ ಮರುಳಾದವರು.” ಅವರ ಈ ದಿನದ ಭೇಟಿಯನ್ನು ಅವರು ಮರೆತುಬಿಟ್ಟಂತೆ, ಮತ್ತು ಅವರು ನಮ್ಮ ವಚನಗಳನ್ನು ನಿಷೇಧಿಸಿದಂತೆ, ಇಂದು ನಾವು ಕೂಡ ಅವರನ್ನು ಮರೆತುಬಿಡುವೆವು.
A'raf 7:52
ಜ್ಞಾನದ ಆಧಾರದಲ್ಲಿ ವಿವರಿಸಲಾದ ಒಂದು ಗ್ರಂಥವನ್ನು ನಾವು ಅವರಿಗೆ ನೀಡಿದ್ದೇವೆ. ಅದು ವಿಶ್ವಾಸವಿಡುವ ಜನರಿಗೆ ಮಾರ್ಗದರ್ಶಿ ಮತ್ತು ದಯೆಯಾಗಿದೆ.
A'raf 7:53
ಅವರು ಅದರ ಫಲಿತಾಂಶವನ್ನು ಕಾಯುತ್ತಿದ್ದಾರೆಯೇ?[1] ಅದರ ಫಲಿತಾಂಶವು ಬರುವ ದಿನದಂದು ಅದಕ್ಕೆ ಮುಂಚೆ ಅದನ್ನು ಮರೆತುಬಿಟ್ಟವರು ಹೇಳುವರು: “ನಿಶ್ಚಯವಾಗಿಯೂ ನಮ್ಮ ಪರಿಪಾಲಕನ (ಅಲ್ಲಾಹನ) ಸಂದೇಶವಾಹಕರುಗಳು ಸತ್ಯ ಸಹಿತ ಬಂದಿದ್ದರು. ನಮಗೆ ಶಿಫಾರಸು ಮಾಡುವ ಶಿಫಾರಸುಗಾರರು ಯಾರಾದರೂ ಇದ್ದಾರೆಯೇ? ಅಥವಾ ನಾವು ಈಗಾಗಲೇ ಮಾಡಿದ ಕರ್ಮಗಳಲ್ಲದ ಬೇರೆ ಕರ್ಮಗಳನ್ನು ಮಾಡಲು ನಮ್ಮನ್ನು ಪುನಃ ಇಹಲೋಕಕ್ಕೆ ಕಳುಹಿಸಲಾಗುವುದೇ?” ಅವರು ಸ್ವಯಂ ನಷ್ಟಹೊಂದಿದವರು. ಅವರು ಕಲ್ಪಿಸಿ ಹೇಳುತ್ತಿದ್ದ ವಿಷಯಗಳೆಲ್ಲವೂ ಅವರಿಂದ ಕಣ್ಮರೆಯಾಗಿ ಬಿಡುವುವು.
———
[1] ಅಂದರೆ ಪವಿತ್ರ ಕುರ್‌ಆನಿನಲ್ಲಿ ನೀಡಲಾದ ಎಚ್ಚರಿಕೆಗಳು ಸತ್ಯವಾಗಿ ಪರಿಣಮಿಸುವುದನ್ನು ಅವರು ಕಾಯುತ್ತಿದ್ದಾರೆಯೇ?
A'raf 7:54
ನಿಶ್ಚಯವಾಗಿಯೂ ಭೂಮ್ಯಾಕಾಶಗಳನ್ನು ಆರು ದಿನಗಳಲ್ಲಿ ಸೃಷ್ಟಿಸಿದ ಅಲ್ಲಾಹನೇ ನಿಮ್ಮ ಪರಿಪಾಲಕನು. ನಂತರ ಅವನು ಸಿಂಹಾಸನದಲ್ಲಿ ಆರೂಢನಾದನು. ಅವನು ಹಗಲನ್ನು ರಾತ್ರಿಯಿಂದ ಮುಚ್ಚುತ್ತಾನೆ. ಆಗ ಅದು ಕ್ಷಿಪ್ರಗತಿಯಲ್ಲಿ ಹಗಲನ್ನು ಹುಡುಕುತ್ತಾ ಸಾಗುತ್ತದೆ. ಸೂರ್ಯ, ಚಂದ್ರ ಮತ್ತು ನಕ್ಷತ್ರಗಳೆಲ್ಲವೂ ಅವನ ಆಜ್ಞೆಗೆ ವಿಧೇಯವಾಗಿವೆ. ತಿಳಿಯಿರಿ! ಸೃಷ್ಟಿ ಮತ್ತು ಆಜ್ಞೆಯು ಅವನದ್ದು. ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹು ಸಮೃದ್ಧಪೂರ್ಣನಾಗಿದ್ದಾನೆ.
A'raf 7:55
ವಿನಯದಿಂದ ಮತ್ತು ರಹಸ್ಯವಾಗಿ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿರಿ. ನಿಶ್ಚಯವಾಗಿಯೂ ಅವನು ಎಲ್ಲೆ ಮೀರುವವರನ್ನು ಇಷ್ಟಪಡುವುದಿಲ್ಲ.
A'raf 7:56
ಭೂಮಿಯಲ್ಲಿ ಸುಧಾರಣೆ ಮಾಡಿದ ಬಳಿಕ ಅಲ್ಲಿ ಕಿಡಿಗೇಡಿತನ ಮಾಡಬೇಡಿ. ಭಯ ಮತ್ತು ನಿರೀಕ್ಷೆಯಿಂದ ಅವನನ್ನು ಕರೆದು ಪ್ರಾರ್ಥಿಸಿರಿ. ನಿಶ್ಚಯವಾಗಿಯೂ ಅಲ್ಲಾಹನ ದಯೆ ಒಳಿತು ಮಾಡುವವರ ಸಮೀಪದಲ್ಲಿದೆ.
A'raf 7:57
ತನ್ನ ದಯೆಗೆ (ಮಳೆಗೆ) ಮೊದಲು ಸುವಾರ್ತೆಯಾಗಿ ಗಾಳಿಯನ್ನು ಕಳುಹಿಸುವವನು ಅವನೇ. ಎಲ್ಲಿಯವರೆಗೆಂದರೆ, ಅದು ಭಾರವಾದ ಮೋಡಗಳನ್ನು ಹೊತ್ತಾಗ ನಾವು ಅದನ್ನು ಬರಡು ಪ್ರದೇಶಕ್ಕೆ ಸಾಗಿಸುವೆವು. ನಂತರ ನಾವು ಅಲ್ಲಿ ಮಳೆ ಸುರಿಸುವೆವು ಮತ್ತು ಅದರಿಂದ ವಿಭಿನ್ನ ಹಣ್ಣುಗಳನ್ನು ಉತ್ಪಾದಿಸುವೆವು. ಇದೇ ರೀತಿ ನಾವು ಸತ್ತವರನ್ನು (ಸಮಾಧಿಯಿಂದ) ಹೊರತರುವೆವು. ನೀವು ಉಪದೇಶ ಪಡೆಯುವುದಕ್ಕಾಗಿ (ಇದನ್ನು ವಿವರಿಸುತ್ತಿದ್ದೇವೆ).
A'raf 7:58
ಉತ್ತಮ ಭೂಮಿಯಲ್ಲಿ ಅದರ ಪರಿಪಾಲಕನ (ಅಲ್ಲಾಹನ) ಅಪ್ಪಣೆಯಂತೆ ಉತ್ತಮ ಬೆಳೆಗಳು ಬೆಳೆಯುತ್ತವೆ. ಆದರೆ ಕೆಟ್ಟ ಭೂಮಿಯಲ್ಲಿ ಸಸ್ಯಗಳು ಶುಷ್ಕವಾಗಿಯಲ್ಲದೆ ಬೆಳೆಯುವುದಿಲ್ಲ. ಕೃತಜ್ಞರಾದ ಜನರಿಗೆ ಈ ರೀತಿ ನಾವು ದೃಷ್ಟಾಂತಗಳನ್ನು ವಿವರಿಸಿಕೊಡುತ್ತೇವೆ.
A'raf 7:59
ನಿಶ್ಚಯವಾಗಿಯೂ ನಾವು ನೂಹರನ್ನು ಅವರ ಜನರ ಬಳಿಗೆ ಕಳುಹಿಸಿದೆವು. ಅವರು ಹೇಳಿದರು: “ಓ ನನ್ನ ಜನರೇ! ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಬೇರೆ ದೇವರಿಲ್ಲ. ಭಯಾನಕ ದಿನದ ಶಿಕ್ಷೆಯು (ನಿಮ್ಮ ಮೇಲೆರಗಬಹುದೆಂದು) ನಿಶ್ಚಯವಾಗಿಯೂ ನಾನು ಭಯಪಡುತ್ತೇನೆ.”
A'raf 7:60
ಅವರ ಜನರ ಮುಖಂಡರು ಹೇಳಿದರು: “ನಿಶ್ಚಯವಾಗಿಯೂ ನೀನು ಸ್ಪಷ್ಟ ದುರ್ಮಾರ್ಗದಲ್ಲಿದ್ದೀ ಎಂದು ನಮಗೆ ತೋರುತ್ತಿದೆ.”
A'raf 7:61
ನೂಹ್ ಹೇಳಿದರು: “ಓ ನನ್ನ ಜನರೇ! ನಾನು ಯಾವುದೇ ದುರ್ಮಾರ್ಗದಲ್ಲಿಲ್ಲ. ಬದಲಿಗೆ, ನಾನು ಸರ್ವಲೋಕಗಳ ಪರಿಪಾಲಕನ (ಅಲ್ಲಾಹನ) ಸಂದೇಶವಾಹಕನಾಗಿದ್ದೇನೆ.
A'raf 7:62
ನನ್ನ ಪರಿಪಾಲಕನ (ಅಲ್ಲಾಹನ) ಸಂದೇಶಗಳನ್ನು ನಾನು ನಿಮಗೆ ತಲುಪಿಸುತ್ತೇನೆ ಮತ್ತು ನಿಮ್ಮ ಪ್ರಾಮಾಣಿಕ ಹಿತೈಷಿಯಾಗಿದ್ದೇನೆ. ನೀವು ತಿಳಿದಿರದ ವಿಷಯಗಳನ್ನು ನಾನು ಅಲ್ಲಾಹನಿಂದ ತಿಳಿಯುತ್ತೇನೆ.
A'raf 7:63
ನಿಮಗೆ ಎಚ್ಚರಿಕೆ ನೀಡಲು, ನೀವು ದೇವಭಯದಿಂದ ಜೀವಿಸುವಂತಾಗಲು ಮತ್ತು ನಿಮಗೆ ದಯೆ ತೋರುವಂತಾಗಲು ನಿಮ್ಮಲ್ಲೇ ಇರುವ ಒಬ್ಬ ವ್ಯಕ್ತಿಯ ಮೂಲಕ ನಿಮ್ಮ ಪರಿಪಾಲಕನ (ಅಲ್ಲಾಹನ) ಉಪದೇಶವು ನಿಮ್ಮ ಬಳಿಗೆ ಬಂದಿರುವುದನ್ನು ಕಂಡು ನೀವು ಆಶ್ಚರ್ಯಪಡುತ್ತಿದ್ದೀರಾ?”
A'raf 7:64
ಆದರೆ ಅವರು ನೂಹರನ್ನು ನಿಷೇಧಿಸಿದರು. ಆಗ ನಾವು ಅವರನ್ನು ಮತ್ತು ಅವನ ಅನುಯಾಯಿಗಳನ್ನು ನಾವೆಯಲ್ಲಿ ರಕ್ಷಿಸಿದೆವು. ನಮ್ಮ ವಚನಗಳನ್ನು ನಿಷೇಧಿಸಿದವರನ್ನು ಮುಳುಗಿಸಿದೆವು. ನಿಶ್ಚಯವಾಗಿಯೂ ಅವರು ಕಣ್ಣು ಕಾಣದ ಜನರಾಗಿದ್ದರು.[1]
———
[1] ಅಂದರೆ ಅವರು ಸತ್ಯದ ಬಗ್ಗೆ ಕುರುಡರಾಗಿದ್ದರು.
A'raf 7:65
ಆದ್ ಗೋತ್ರದವರ ಬಳಿಗೆ ನಾವು ಅವರ ಸಹೋದರ ಹೂದರನ್ನು ಕಳುಹಿಸಿದೆವು. ಅವರು ಹೇಳಿದರು: “ಓ ನನ್ನ ಜನರೇ! ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಬೇರೆ ದೇವರಿಲ್ಲ. ನೀವು ಅವನನ್ನು ಭಯಪಡುವುದಿಲ್ಲವೇ?”
A'raf 7:66
ಅವರ ಜನರಲ್ಲಿದ್ದ ಸತ್ಯನಿಷೇಧಿ ಮುಖಂಡರು ಹೇಳಿದರು: “ನಿಶ್ಚಯವಾಗಿಯೂ ನಿನ್ನಲ್ಲಿ ಅವಿವೇಕತನವಿದೆಯೆಂದು ನಮಗೆ ತೋರುತ್ತಿದೆ. ನಿಶ್ಚಯವಾಗಿಯೂ ನೀನು ಸುಳ್ಳು ಹೇಳುತ್ತಿದ್ದೀ ಎಂದು ನಾವು ಭಾವಿಸುತ್ತಿದ್ದೇವೆ.”
A'raf 7:67
ಹೂದ್ ಹೇಳಿದರು: “ಓ ನನ್ನ ಜನರೇ! ನನ್ನಲ್ಲಿ ಅವಿವೇಕತನವಿಲ್ಲ. ಬದಲಿಗೆ, ನಾನು ಸರ್ವಲೋಕಗಳ ಪರಿಪಾಲಕನ (ಅಲ್ಲಾಹನ) ಸಂದೇಶವಾಹಕನಾಗಿದ್ದೇನೆ.
A'raf 7:68
ನನ್ನ ಪರಿಪಾಲಕನ (ಅಲ್ಲಾಹನ) ಸಂದೇಶಗಳನ್ನು ನಾನು ನಿಮಗೆ ತಲುಪಿಸುತ್ತೇನೆ. ನಿಶ್ಚಯವಾಗಿಯೂ ನಾನು ನಿಮ್ಮ ಪ್ರಾಮಾಣಿಕ ಹಿತೈಷಿಯಾಗಿದ್ದೇನೆ.
A'raf 7:69
ನಿಮಗೆ ಎಚ್ಚರಿಕೆ ನೀಡಲು ನಿಮ್ಮಲ್ಲೇ ಇರುವ ಒಬ್ಬ ವ್ಯಕ್ತಿಯ ಮೂಲಕ ನಿಮ್ಮ ಪರಿಪಾಲಕನ (ಅಲ್ಲಾಹನ) ಉಪದೇಶವು ನಿಮ್ಮ ಬಳಿಗೆ ಬಂದಿರುವುದನ್ನು ಕಂಡು ನೀವು ಆಶ್ಚರ್ಯಪಡುತ್ತಿದ್ದೀರಾ? ನೂಹರ ಜನರ ಬಳಿಕ ಅಲ್ಲಾಹು ನಿಮ್ಮನ್ನು ಅವರ ಉತ್ತರಾಧಿಕಾರಿಗಳನ್ನಾಗಿ ಮಾಡಿದ್ದನ್ನು ಸ್ಮರಿಸಿರಿ. ಅವನು ನಿಮಗೆ ದೇಹದಾರ್ಢ್ಯತೆಯನ್ನು ಹೆಚ್ಚಿಸಿಕೊಟ್ಟನು. ಅಲ್ಲಾಹನ ಅನುಗ್ರಹಗಳನ್ನು ಸ್ಮರಿಸಿರಿ. ನೀವು ಯಶಸ್ವಿಯಾಗುವುದಕ್ಕಾಗಿ.”
A'raf 7:70
ಅವರು ಹೇಳಿದರು: “ನಾವು ಅಲ್ಲಾಹನನ್ನು ಮಾತ್ರ ಆರಾಧಿಸಬೇಕು ಮತ್ತು ನಮ್ಮ ಪೂರ್ವಜರು ಆರಾಧಿಸುತ್ತಿದ್ದ ದೇವರುಗಳನ್ನು ಬಿಟ್ಟುಬಿಡಬೇಕು ಎಂದು ಹೇಳಲು ನೀನು ನಮ್ಮ ಬಳಿಗೆ ಬಂದಿರುವೆಯಾ? ನೀನು ನಮಗೆ ಹೆದರಿಸುತ್ತಿರುವ ಆ ಶಿಕ್ಷೆಯನ್ನು ತಂದು ತೋರಿಸು. ನೀನು ಸತ್ಯವನ್ನೇ ಹೇಳುತ್ತಿದ್ದರೆ.”
A'raf 7:71
ಹೂದ್ ಹೇಳಿದರು: “ನಿಮ್ಮ ಪರಿಪಾಲಕನ (ಅಲ್ಲಾಹನ) ಶಿಕ್ಷೆ ಮತ್ತು ಕೋಪ ಈಗಾಗಲೇ ನಿಮ್ಮ ಮೇಲೆರಗಿದೆ. ನೀವು ಮತ್ತು ನಿಮ್ಮ ಪೂರ್ವಜರು ಹೆಸರಿಟ್ಟ ಕೆಲವು ದೇವರುಗಳ ಹೆಸರುಗಳನ್ನು ಹೇಳಿ ನೀವು ನನ್ನೊಂದಿಗೆ ತರ್ಕಿಸುತ್ತೀರಾ? ಅಲ್ಲಾಹು ಅದಕ್ಕೆ (ಅವರು ದೇವರುಗಳು ಎಂಬುದಕ್ಕೆ) ಯಾವುದೇ ಸಾಕ್ಷ್ಯಾಧಾರಗಳನ್ನು ಇಳಿಸಿಲ್ಲ. ನೀವು ಕಾಯಿರಿ. ನಿಶ್ಚಯವಾಗಿಯೂ ನಾನೂ ನಿಮ್ಮೊಂದಿಗೆ ಕಾಯುತ್ತೇನೆ.”
A'raf 7:72
ನಂತರ ನಾವು ಹೂದರನ್ನು ಮತ್ತು ಅವರ ಅನುಯಾಯಿಗಳನ್ನು ನಮ್ಮ ದಯೆಯಿಂದ ರಕ್ಷಿಸಿದೆವು. ನಮ್ಮ ವಚನಗಳನ್ನು ನಿಷೇಧಿಸಿದವರನ್ನು ಮತ್ತು ವಿಶ್ವಾಸವಿಡದವರನ್ನು ನಾವು ನಿರ್ನಾಮ ಮಾಡಿದೆವು.
A'raf 7:73
ಸಮೂದ್ ಗೋತ್ರದವರ ಬಳಿಗೆ ನಾವು ಅವರ ಸಹೋದರ ಸ್ವಾಲಿಹರನ್ನು ಕಳುಹಿಸಿದೆವು. ಅವರು ಹೇಳಿದರು: “ಓ ನನ್ನ ಜನರೇ! ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಬೇರೆ ದೇವರಿಲ್ಲ. ನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಸ್ಪಷ್ಟ ಸಾಕ್ಷ್ಯಾಧಾರಗಳು ಬಂದಿವೆ. ಇದು ಅಲ್ಲಾಹನ ಒಂಟೆ. ಇದು ನಿಮಗೆ ದೃಷ್ಟಾಂತವಾಗಿದೆ. ಅದನ್ನು ಅದರ ಪಾಡಿಗೆ ಬಿಟ್ಟುಬಿಡಿ. ಅದು ಅಲ್ಲಾಹನ ಭೂಮಿಯಲ್ಲಿ ಮೇಯುತ್ತಿರಲಿ. ಅದಕ್ಕೆ ಯಾವುದೇ ತೊಂದರೆ ಕೊಡಬೇಡಿ. ಹಾಗೇನಾದರೂ ಆದರೆ ಯಾತನಾಮಯ ಶಿಕ್ಷೆಯು ನಿಮ್ಮನ್ನು ಹಿಡಿಯುವುದು.
A'raf 7:74
ಆದ್ ಗೋತ್ರದವರ ಬಳಿಕ ಅವನು ನಿಮ್ಮನ್ನು ಉತ್ತರಾಧಿಕಾರಿಗಳನ್ನಾಗಿ ಮಾಡಿದ್ದನ್ನು ಸ್ಮರಿಸಿರಿ. ಅವನು ನಿಮಗೆ ಭೂಮಿಯಲ್ಲಿ ವಾಸ್ತವ್ಯವನ್ನು ಮಾಡಿಕೊಟ್ಟನು. ನೀವು ಭೂಮಿಯ ಸಮತಟ್ಟು ಪ್ರದೇಶಗಳಲ್ಲಿ ಸೌಧಗಳನ್ನು ನಿರ್ಮಿಸುತ್ತೀರಿ ಮತ್ತು ಬೆಟ್ಟಗಳಲ್ಲಿ ಮನೆಗಳನ್ನು ಕೊರೆಯುತ್ತೀರಿ. ಅಲ್ಲಾಹನ ಅನುಗ್ರಹಗಳನ್ನು ಸ್ಮರಿಸಿರಿ. ಭೂಮಿಯಲ್ಲಿ ಕಿಡಿಗೇಡಿತನ ಮಾಡುತ್ತಾ ಅಲ್ಲಾಹನ ಆಜ್ಞೋಲ್ಲಂಘನೆ ಮಾಡಬೇಡಿ.”
A'raf 7:75
ಅವರ ಜನರಲ್ಲಿದ್ದ ಅಹಂಕಾರಿಗಳಾದ ಮುಖಂಡರು ಸ್ವಾಲಿಹರಲ್ಲಿ ವಿಶ್ವಾಸವಿಟ್ಟ ಬಲಹೀನರೊಡನೆ ಹೇಳಿದರು: “ಸ್ವಾಲಿಹರನ್ನು ಅವರ ಪರಿಪಾಲಕನ (ಅಲ್ಲಾಹನ) ಬಳಿಯಿಂದ ಕಳುಹಿಸಲಾಗಿದೆಯೆಂದು ನೀವು ನಿಜವಾಗಿಯೂ ನಂಬುತ್ತೀರಾ?” ಅವರು ಉತ್ತರಿಸಿದರು: “ಅವರೊಡನೆ ಏನು ಕಳುಹಿಸಲಾಗಿದೆಯೋ ಅದರಲ್ಲಿ ನಿಶ್ಚಯವಾಗಿಯೂ ನಾವು ವಿಶ್ವಾಸವಿಟ್ಟಿದ್ದೇವೆ.”
A'raf 7:76
ಅಹಂಕಾರಿಗಳು ಹೇಳಿದರು: “ನೀವು ಯಾವುದರಲ್ಲಿ ವಿಶ್ವಾಸವಿಟ್ಟಿದ್ದೀರೋ ಅದನ್ನು ನಾವು ಸಂಪೂರ್ಣವಾಗಿ ನಿಷೇಧಿಸಿದ್ದೇವೆ.”
A'raf 7:77
ನಂತರ ಅವರು ಆ ಒಂಟೆಯನ್ನು ಕೊಂದು ಅವರ ಪರಿಪಾಲಕನ (ಅಲ್ಲಾಹನ) ಆಜ್ಞೆಯನ್ನು ಉಲ್ಲಂಘಿಸಿದರು. ಅವರು ಹೇಳಿದರು: “ಓ ಸ್ವಾಲಿಹ್! ನೀನು ನಮ್ಮನ್ನು ಹೆದರಿಸುತ್ತಿದ್ದ ಆ ಶಿಕ್ಷೆಯನ್ನು ತಂದು ತೋರಿಸು. ನೀನು (ನಿಜವಾಗಿಯೂ) ಸಂದೇಶವಾಹಕನಾಗಿದ್ದರೆ.”
A'raf 7:78
ಆಗ ಭೂಕಂಪವು ಅವರನ್ನು ಹಿಡಿದುಕೊಂಡಿತು. ಅವರು ಅವರ ಮನೆಗಳಲ್ಲಿಯೇ ಬೋರಲು ಬಿದ್ದು ಸತ್ತರು.
A'raf 7:79
ಅವರಿಂದ ತಿರುಗಿ ನಡೆಯುತ್ತಾ ಸ್ವಾಲಿಹ್ ಹೇಳಿದರು: “ಓ ನನ್ನ ಜನರೇ! ನಿಶ್ಚಯವಾಗಿಯೂ ನಾನು ನನ್ನ ಪರಿಪಾಲಕನ (ಅಲ್ಲಾಹನ) ಸಂದೇಶವನ್ನು ನಿಮಗೆ ತಲುಪಿಸಿದ್ದೇನೆ ಮತ್ತು ನಿಮಗೆ ಪ್ರಾಮಾಣಿಕವಾಗಿ ಉಪದೇಶ ಮಾಡಿದ್ದೇನೆ. ಆದರೆ ನೀವು ಉಪದೇಶ ಮಾಡುವವರನ್ನು ಇಷ್ಟಪಡುತ್ತಿರಲಿಲ್ಲ.”
A'raf 7:80
ಲೂತರನ್ನು ಕೂಡ (ನಾವು ಕಳುಹಿಸಿದೆವು). ಅವರು ತಮ್ಮ ಜನರೊಡನೆ ಹೇಳಿದ ಸಂದರ್ಭ: “ಸರ್ವಲೋಕಗಳ ಜನರಲ್ಲಿ ಈ ತನಕ ಯಾರೂ ಮಾಡದ ನೀಚಕೃತ್ಯವನ್ನು ನೀವು ಮಾಡುತ್ತಿದ್ದೀರಾ?
A'raf 7:81
ನೀವು ಲೈಂಗಿಕ ತೃಷೆಯನ್ನು ತೀರಿಸಲು ಮಹಿಳೆಯರ ಬದಲು ಪುರುಷರ ಬಳಿಗೆ ಹೋಗುತ್ತಿದ್ದೀರಿ. ನೀವು ಎಲ್ಲೆ ಮೀರಿದ ಜನರಾಗಿದ್ದೀರಿ.”
A'raf 7:82
ಆಗ ಅವರ ಜನರ ಉತ್ತರವು, “ಇವರನ್ನು ನಿಮ್ಮ ಊರಿನಿಂದ ಓಡಿಸಿರಿ; ಇವರು ಪರಿಶುದ್ಧ ಜನರಾಗಿದ್ದಾರೆ!” ಎಂದು ಹೇಳುವುದಲ್ಲದೆ ಬೇರೇನೂ ಆಗಿರಲಿಲ್ಲ.
A'raf 7:83
ನಂತರ ನಾವು ಅವರನ್ನು ಮತ್ತು ಅವರ ಕುಟುಂಬವನ್ನು ರಕ್ಷಿಸಿದೆವು. ಅವರ ಪತ್ನಿಯ ಹೊರತು. ಆಕೆ ಶಿಕ್ಷೆಗೆ ಗುರಿಯಾದವರಲ್ಲಿ ಸೇರಿದವಳಾದಳು.
A'raf 7:84
ನಾವು ಅವರ ಮೇಲೆ (ಕಲ್ಲಿನ) ಮಳೆಯನ್ನು ಸುರಿಸಿದೆವು. ಅಪರಾಧಿಗಳ ಅಂತ್ಯವು ಹೇಗಿತ್ತೆಂದು ನೋಡಿ.
A'raf 7:85
ಮದ್ಯನ್ ಗೋತ್ರದವರ ಬಳಿಗೆ ಅವರ ಸಹೋದರ ಶುಐಬರನ್ನು (ನಾವು ಕಳುಹಿಸಿದೆವು). ಅವರು ಹೇಳಿದರು: “ಓ ನನ್ನ ಜನರೇ! ಅಲ್ಲಾಹನನ್ನು ಆರಾಧಿಸಿರಿ. ನಿಮಗೆ ಅವನ ಹೊರತು ಬೇರೆ ದೇವರಿಲ್ಲ. ನಿಶ್ಚಯವಾಗಿಯೂ ನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಸ್ಪಷ್ಟ ಸಾಕ್ಷ್ಯಾಧಾರಗಳು ಬಂದಿವೆ. ನೀವು ಅಳತೆ ಮತ್ತು ತೂಕವನ್ನು ಪೂರ್ತಿಯಾಗಿ ನೀಡಿರಿ. ಜನರಿಗೆ ಅವರ ಸಾಮಗ್ರಿಗಳನ್ನು ಕಡಿಮೆಗೊಳಿಸಬೇಡಿ. ಭೂಮಿಯಲ್ಲಿ ಸುಧಾರಣೆ ಮಾಡಿದ ಬಳಿಕ ಅಲ್ಲಿ ಕಿಡಿಗೇಡಿತನ ಮಾಡಬೇಡಿ. ಇದು ನಿಮಗೆ ಉತ್ತಮವಾಗಿದೆ. ನೀವು ಸತ್ಯವಿಶ್ವಾಸಿಗಳಾಗಿದ್ದರೆ.
A'raf 7:86
ಅಲ್ಲಾಹನಲ್ಲಿ ವಿಶ್ವಾಸವಿಟ್ಟವರನ್ನು ಬೆದರಿಸಲು, ಜನರನ್ನು ಅಲ್ಲಾಹನ ಮಾರ್ಗದಿಂದ ತಡೆಯಲು ಮತ್ತು ಆ ಮಾರ್ಗದಲ್ಲಿ ವಕ್ರತೆಯನ್ನು ಹುಡುಕಲು ನೀವು ದಾರಿಗಳಲ್ಲಿ ಕುಳಿತುಕೊಳ್ಳಬೇಡಿ. ನೀವು ಕಡಿಮೆ ಸಂಖ್ಯೆಯಲ್ಲಿದ್ದಿರಿ. ನಂತರ ಅವನು ನಿಮ್ಮ ಸಂಖ್ಯೆಯನ್ನು ಹೆಚ್ಚಿಸಿದ್ದನ್ನು ಸ್ಮರಿಸಿರಿ. ಕಿಡಿಗೇಡಿಗಳ ಅಂತ್ಯವು ಹೇಗಿತ್ತೆಂದು ನೋಡಿ.
A'raf 7:87
ನಿಮ್ಮಲ್ಲಿ ಒಂದು ಗುಂಪು ನನ್ನೊಂದಿಗೆ ಕಳುಹಿಸಲಾದ ಸಂದೇಶದಲ್ಲಿ ವಿಶ್ವಾಸವಿಟ್ಟು ಇನ್ನೊಂದು ಗುಂಪು ಅದರಲ್ಲಿ ವಿಶ್ವಾಸವಿಡದಿದ್ದರೆ—ಅಲ್ಲಾಹು ನಮ್ಮ ಮಧ್ಯೆ ತೀರ್ಪು ನೀಡುವ ತನಕ ತಾಳ್ಮೆಯಿಂದ ಕಾಯಿರಿ. ಅವನು ತೀರ್ಪು ನೀಡುವವರಲ್ಲಿ ಅತ್ಯುತ್ತಮನಾಗಿದ್ದಾನೆ.”
A'raf 7:88
ಅವರ ಜನರಲ್ಲಿದ್ದ ಅಹಂಕಾರಿಗಳಾದ ಮುಖಂಡರು ಹೇಳಿದರು: “ಓ ಶುಐಬ್! ನಿಶ್ಚಯವಾಗಿಯೂ ನಿನ್ನನ್ನು ಮತ್ತು ನಿನ್ನ ಜೊತೆಗಿರುವ ಸತ್ಯವಿಶ್ವಾಸಿಗಳನ್ನು ನಾವು ನಮ್ಮ ಊರಿನಿಂದ ಓಡಿಸುವೆವು. ಅಥವಾ ನೀವು ನಮ್ಮ ಧರ್ಮಕ್ಕೆ ಮರಳಿ ಬರಬೇಕು.” ಶುಐಬ್ ಹೇಳಿದರು: “ನಾವು ಅದನ್ನು (ನಿಮ್ಮ ಧರ್ಮವನ್ನು) ದ್ವೇಷಿಸುವವರಾಗಿದ್ದರೂ ಸಹ (ಮರಳಿ ಬರಬೇಕೇ)?
A'raf 7:89
ಅಲ್ಲಾಹು ನಮ್ಮನ್ನು ನಿಮ್ಮ ಧರ್ಮದಿಂದ ರಕ್ಷಿಸಿದ ಬಳಿಕ ನಾವು ಪುನಃ ಅದಕ್ಕೆ ಮರಳಿದರೆ, ನಾವು ಅಲ್ಲಾಹನ ಮೇಲೆ ಸುಳ್ಳು ಸೃಷ್ಟಿಸಿದವರಾಗುವೆವು. ನಿಮ್ಮ ಧರ್ಮಕ್ಕೆ ಮರಳಲು ನಮ್ಮಿಂದ ಸುತರಾಂ ಸಾಧ್ಯವಿಲ್ಲ. ನಮ್ಮ ಪರಿಪಾಲಕನಾದ ಅಲ್ಲಾಹು ಇಚ್ಛಿಸಿದರೆ ಹೊರತು. ನಮ್ಮ ಪರಿಪಾಲಕನ (ಅಲ್ಲಾಹನ) ಜ್ಞಾನವು ಎಲ್ಲಾ ವಿಷಯಗಳನ್ನು ಒಳಗೊಳ್ಳುವಷ್ಟು ವಿಶಾಲವಾಗಿದೆ. ನಾವು ಅಲ್ಲಾಹನಲ್ಲಿ ಭರವಸೆಯಿಟ್ಟಿದ್ದೇವೆ. ಓ ನಮ್ಮ ಪರಿಪಾಲಕನೇ! ನಮ್ಮ ಮತ್ತು ನಮ್ಮ ಜನರ ನಡುವೆ ಸತ್ಯವಾದ ತೀರ್ಪನ್ನು ನೀಡು. ತೀರ್ಪು ನೀಡುವವರಲ್ಲಿ ನೀನು ಅತ್ಯುತ್ತಮನಾಗಿರುವೆ.”
A'raf 7:90
ಅವರ ಜನರಲ್ಲಿದ್ದ ಸತ್ಯನಿಷೇಧಿ ಮುಖಂಡರು ಹೇಳಿದರು: “ನೀವು ಶುಐಬರ ಹಿಂದೆ ಹೋದರೆ ನಿಶ್ಚಯವಾಗಿಯೂ ನೀವು ನಷ್ಟಹೊಂದುವಿರಿ.”
A'raf 7:91
ಆಗ ಭೂಕಂಪವು ಅವರನ್ನು ಹಿಡಿದುಕೊಂಡಿತು. ಅವರು ತಮ್ಮ ಮನೆಗಳಲ್ಲಿಯೇ ಬೋರಲು ಬಿದ್ದು ಸತ್ತರು.
A'raf 7:92
ಶುಐಬರನ್ನು ನಿಷೇಧಿಸಿದವರ ಸ್ಥಿತಿಯು ಅವರು ಅಲ್ಲಿ ವಾಸಿಸಲೇ ಇಲ್ಲ ಎಂಬಂತಾಯಿತು. ಶುಐಬರನ್ನು ನಿಷೇಧಿಸಿದವರೇ ನಷ್ಟಹೊಂದಿದರು.
A'raf 7:93
ಅವರಿಂದ ತಿರುಗಿ ನಡೆಯುತ್ತಾ ಶುಐಬ್ ಹೇಳಿದರು: “ಓ ನನ್ನ ಜನರೇ! ನಿಶ್ಚಯವಾಗಿಯೂ ನಾನು ನನ್ನ ಪರಿಪಾಲಕನ (ಅಲ್ಲಾಹನ) ಸಂದೇಶವನ್ನು ನಿಮಗೆ ತಲುಪಿಸಿದ್ದೇನೆ ಮತ್ತು ನಿಮಗೆ ಪ್ರಾಮಾಣಿಕವಾಗಿ ಉಪದೇಶ ಮಾಡಿದ್ದೇನೆ. ಹೀಗಿರುವಾಗ ಸತ್ಯವನ್ನು ನಿಷೇಧಿಸಿದ ಜನರಿಗಾಗಿ ನಾನೇಕೆ ಬೇಸರ ಮಾಡಿಕೊಳ್ಳಲಿ?”
A'raf 7:94
ನಾವು ಯಾವುದೇ ಊರಿಗೆ ಒಬ್ಬ ಪ್ರವಾದಿಯನ್ನು ಕಳುಹಿಸಿದಾಗ, (ಅವರು ಆ ಪ್ರವಾದಿಯನ್ನು ನಿಷೇಧಿಸಿದರೆ) ಅಲ್ಲಿನ ನಿವಾಸಿಗಳನ್ನು (ಬಡತನ ಮುಂತಾದ) ಕಷ್ಟಗಳಿಂದ ಮತ್ತು (ಅನಾರೋಗ್ಯ ಮುಂತಾದ) ತೊಂದರೆಗಳಿಂದ ಹಿಡಿಯುತ್ತಿದ್ದೆವು. ಅವರು ವಿನಯವಂತರಾಗುವುದಕ್ಕಾಗಿ.
A'raf 7:95
ನಂತರ ನಾವು ಕೆಡುಕಿನ ಸ್ಥಾನದಲ್ಲಿ (ಬಡತನ ಮತ್ತು ಅನಾರೋಗ್ಯದ ಸ್ಥಾನದಲ್ಲಿ) ಒಳಿತನ್ನು ನೀಡಿ ಬದಲಾಯಿಸುವೆವು. ಎಲ್ಲಿಯವರೆಗೆಂದರೆ, ಅವರು ಅಭಿವೃದ್ಧಿ ಪಡೆದು, “ನಮ್ಮ ಪೂರ್ವಜರಿಗೂ ಬಡತನ ಮತ್ತು ಅನಾರೋಗ್ಯ ಉಂಟಾಗಿತ್ತು” ಎಂದು ಹೇಳುವ ತನಕ. ಆಗ ನಾವು ಅವರಿಗೆ ತಿಳಿಯದ ರೀತಿಯಲ್ಲಿ ಹಠಾತ್ತನೆ ಅವರನ್ನು ಹಿಡಿದುಕೊಳ್ಳುವೆವು.
A'raf 7:96
ಊರುಗಳ ನಿವಾಸಿಗಳು ಸತ್ಯವಿಶ್ವಾಸಿಗಳು ಮತ್ತು ದೇವಭಯವುಳ್ಳವರಾಗಿದ್ದರೆ, ನಾವು ಅವರಿಗೆ ಆಕಾಶದಿಂದ ಮತ್ತು ಭೂಮಿಯಿಂದ ಸಮೃದ್ಧಿಗಳನ್ನು ತೆರೆದುಕೊಡುತ್ತಿದ್ದೆವು. ಆದರೆ ಅವರು ಸತ್ಯನಿಷೇಧಿಗಳಾದರು. ಆದ್ದರಿಂದ ಅವರು ಮಾಡಿದ ದುಷ್ಕರ್ಮಗಳಿಂದಾಗಿ ನಾವು ಅವರನ್ನು ಹಿಡಿದೆವು.
A'raf 7:97
ಆ ಊರುಗಳ ನಿವಾಸಿಗಳು—ಅವರು ರಾತ್ರಿ ಮಲಗಿರುವಾಗ ನಮ್ಮ ಶಿಕ್ಷೆಯು ಅವರ ಬಳಿಗೆ ಬರಲಾರದೆಂದು ನಿರ್ಭಯರಾಗಿದ್ದಾರೆಯೇ?
A'raf 7:98
ಅಥವಾ ಅವರು ಹಗಲಿನಲ್ಲಿ ಆಟವಾಡುತ್ತಿರುವಾಗ ನಮ್ಮ ಶಿಕ್ಷೆಯು ಅವರ ಬಳಿಗೆ ಬರಲಾರದೆಂದು ನಿರ್ಭಯರಾಗಿದ್ದಾರೆಯೇ?
A'raf 7:99
ಅವರು ಅಲ್ಲಾಹನ ತಂತ್ರಗಾರಿಕೆಯ ಬಗ್ಗೆ ನಿರ್ಭಯರಾಗಿದ್ದಾರೆಯೇ? ನಷ್ಟಹೊಂದಿದ ಜನರ ಹೊರತು ಇನ್ನಾರೂ ಅಲ್ಲಾಹನ ತಂತ್ರಗಾರಿಕೆಯ ಬಗ್ಗೆ ನಿರ್ಭಯರಾಗುವುದಿಲ್ಲ.
A'raf 7:100
ಭೂಮಿಯಲ್ಲಿ ವಾಸವಾಗಿದ್ದವರು (ನಾಶವಾದ) ಬಳಿಕ ಅದರ ಉತ್ತರಾಧಿಕಾರಿಗಳಾಗಿ ಬಂದವರಿಗೆ—ನಾವು ಇಚ್ಛಿಸಿದರೆ ಅವರ ಪಾಪಗಳ ನಿಮಿತ್ತ ಅವರನ್ನು ಶಿಕ್ಷಿಸುವೆವು ಎಂಬ ಪ್ರಜ್ಞೆಯು ಸರಿದಾರಿಯನ್ನೇಕೆ ತೋರಿಸಲಿಲ್ಲ? ನಾವು ಅವರ ಹೃದಯಗಳಿಗೆ ಮೊಹರು ಹಾಕುವೆವು. ಆದ್ದರಿಂದ ಯಾವುದಕ್ಕೂ ಕಿವಿಗೊಡಲು ಅವರಿಗೆ ಸಾಧ್ಯವಾಗುವುದಿಲ್ಲ.
A'raf 7:101
ಆ ಊರುಗಳ ಕೆಲವು ಸಮಾಚಾರಗಳನ್ನು ನಾವು ನಿಮಗೆ ವಿವರಿಸಿಕೊಡುವೆವು. ಅವರ ಸಂದೇಶವಾಹಕರುಗಳು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಅವರ ಬಳಿಗೆ ಬಂದಿದ್ದರು. ಆದರೂ ಅವರು ಮೊದಲು ಏನನ್ನು ನಿಷೇಧಿಸಿದ್ದರೋ ಅದರಲ್ಲಿ ಅವರು ವಿಶ್ವಾಸವಿಡಲಿಲ್ಲ. ಈ ರೀತಿ ಅಲ್ಲಾಹು ಸತ್ಯನಿಷೇಧಿಗಳ ಹೃದಯಗಳಿಗೆ ಮೊಹರು ಹಾಕುತ್ತಾನೆ.
A'raf 7:102
ಅವರಲ್ಲಿ ಹೆಚ್ಚಿನವರು ಕರಾರು ಪಾಲಿಸುವುದನ್ನು ನಾವು ಕಂಡಿಲ್ಲ. ಅವರಲ್ಲಿ ಹೆಚ್ಚಿನವರನ್ನೂ ನಾವು ಅವಿಧೇಯರಾಗಿಯೇ ಕಂಡಿದ್ದೇವೆ.
A'raf 7:103
ನಂತರ ಅವರ ಬಳಿಕ ನಾವು ಮೂಸಾರನ್ನು ಫರೋಹ ಮತ್ತು ಅವನ ಜನರ ಬಳಿಗೆ ನಮ್ಮ ದೃಷ್ಟಾಂತಗಳೊಂದಿಗೆ ಕಳುಹಿಸಿದೆವು. ಆದರೆ ಅವರು ಅನ್ಯಾಯವಾಗಿ ಆ ದೃಷ್ಟಾಂತಗಳನ್ನು ನಿಷೇಧಿಸಿದರು. ಆ ಕಿಡಿಗೇಡಿಗಳ ಅಂತ್ಯವು ಹೇಗಿತ್ತೆಂದು ನೋಡಿ.
A'raf 7:104
ಮೂಸಾ ಹೇಳಿದರು: “ಓ ಫರೋಹ! ನಿಶ್ಚಯವಾಗಿಯೂ ನಾನು ಸರ್ವಲೋಕಗಳ ಪರಿಪಾಲಕನ (ಅಲ್ಲಾಹನ) ಸಂದೇಶವಾಹಕನಾಗಿದ್ದೇನೆ.
A'raf 7:105
ಅಲ್ಲಾಹನ ಮೇಲೆ ಸತ್ಯವನ್ನೇ ಹೊರತು ಬೇರೇನನ್ನೂ ಹೇಳಬಾರದೆಂಬ ನಿಷ್ಠೆ ನನಗಿದೆ. ನಿಮ್ಮ ಪರಿಪಾಲಕನ (ಅಲ್ಲಾಹನ) ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ನಾನು ನಿಮ್ಮ ಬಳಿಗೆ ಬಂದಿದ್ದೇನೆ. ಆದ್ದರಿಂದ ಇಸ್ರಾಯೇಲ್ ಮಕ್ಕಳನ್ನು ನನ್ನ ಜೊತೆಗೆ ಕಳುಹಿಸಿಕೊಡಿ.”
A'raf 7:106
ಫರೋಹ ಹೇಳಿದನು: “ನೀನು ದೃಷ್ಟಾಂತವನ್ನು ತಂದಿದ್ದರೆ ಅದನ್ನು ತೋರಿಸು. ನೀನು ಸತ್ಯವಂತರಲ್ಲಿ ಸೇರಿದ್ದರೆ.”
A'raf 7:107
ಆಗ ಮೂಸಾ ತಮ್ಮ ಕೋಲನ್ನು ಕೆಳಗೆಸೆದರು. ತಕ್ಷಣ ಅದು ಸ್ಪಷ್ಟವಾಗಿ ಕಾಣುವ ಒಂದು ಸರ್ಪವಾಗಿ ಮಾರ್ಪಟ್ಟಿತು.
A'raf 7:108
ಅವರು ತಮ್ಮ ಕೈಯನ್ನು (ಪಾರ್ಶ್ವದಿಂದ) ಹೊರತೆಗೆದರು. ಆಗ ಅದು ನೋಡುವವರಿಗೆ ಬೆಳ್ಳಗೆ ಹೊಳೆಯುವಂತೆ ಕಂಡಿತು.
A'raf 7:109
ಫರೋಹನ ಜನರಲ್ಲಿದ್ದ ಮುಖಂಡರು ಹೇಳಿದರು: “ನಿಜಕ್ಕೂ ಇವನೊಬ್ಬ ಅಗಾಧ ಜ್ಞಾನವಿರುವ ಮಾಟಗಾರನಾಗಿದ್ದಾನೆ.
A'raf 7:110
ನಿಮ್ಮನ್ನು ನಿಮ್ಮ ಊರಿನಿಂದ ಓಡಿಸುವುದು ಇವನ ಉದ್ದೇಶವಾಗಿದೆ. ಆದ್ದರಿಂದ ನೀವೇನು ಆದೇಶ ನೀಡುವಿರಿ?”
A'raf 7:111
ಅವರು (ಮುಖಂಡರು ಪರಸ್ಪರ ಸಮಾಲೋಚನೆ ಮಾಡಿ) ಹೇಳಿದರು: “ಇವನ ಮತ್ತು ಇವನ ಸಹೋದರನ ವಿಷಯವನ್ನು (ಸ್ವಲ್ಪ ಕಾಲ) ಮುಂದೂಡಿರಿ ಮತ್ತು (ಮಾಟಗಾರರನ್ನು) ಒಟ್ಟು ಸೇರಿಸಲು ನಗರಗಳಿಗೆ ಆಳುಗಳನ್ನು ಕಳುಹಿಸಿರಿ.
A'raf 7:112
ಅಗಾಧ ಜ್ಞಾನವಿರುವ ಎಲ್ಲಾ ಮಾಟಗಾರರನ್ನು ಅವರು ಕರೆದುಕೊಂಡು ಬರಲಿ.”
A'raf 7:113
ಮಾಟಗಾರರು ಫರೋಹನ ಬಳಿಗೆ ಬಂದು ಕೇಳಿದರು: “ನಾವು ವಿಜೇತರಾದರೆ ನಿಶ್ಚಯವಾಗಿಯೂ ನಮಗೆ ಪ್ರತಿಫಲವಿದೆಯಲ್ಲವೇ?”
A'raf 7:114
ಫರೋಹ ಹೇಳಿದನು: “ಹೌದು, ನಿಶ್ಚಯವಾಗಿಯೂ ನೀವು ನನ್ನ ಆಪ್ತರಲ್ಲಿ ಸೇರುವಿರಿ.”
A'raf 7:115
ಮಾಟಗಾರರು ಹೇಳಿದರು: “ಓ ಮೂಸಾ! ಒಂದೋ ನೀವು (ಕೋಲನ್ನು) ಎಸೆಯಿರಿ. ಅಥವಾ ನಾವೇ (ಮೊದಲು) ಎಸೆಯುತ್ತೇವೆ.”
A'raf 7:116
ಮೂಸಾ ಹೇಳಿದರು: “ನೀವೇ ಎಸೆಯಿರಿ.” ಅವರು (ಕೋಲುಗಳನ್ನು) ಎಸೆದಾಗ ಅವರು ಜನರ ಕಣ್ಣುಗಳಿಗೆ ಮಾಟ ಮಾಡಿ ಅವರನ್ನು ಭಯಭೀತಗೊಳಿಸಿದರು. ಅವರು ಬಹುದೊಡ್ಡ ಮಾಟಗಾರಿಕೆಯನ್ನು ಪ್ರದರ್ಶಿಸಿದ್ದರು.
A'raf 7:117
“ತಮ್ಮ ಕೋಲನ್ನು ಎಸೆಯಿರಿ” ಎಂದು ನಾವು ಮೂಸಾರಿಗೆ ದೇವವಾಣಿ ನೀಡಿದೆವು. ಆಗ ಅಗೋ ಅವರು ಕೃತಕವಾಗಿ ನಿರ್ಮಿಸಿದ (ಸರ್ಪಗಳನ್ನು) ಅದು ನುಂಗತೊಡಗಿತು.
A'raf 7:118
ಸತ್ಯವು ಸಾಬೀತಾಯಿತು ಮತ್ತು ಅವರು ಮಾಡುತ್ತಿದ್ದ ಕೆಲಸಗಳೆಲ್ಲವೂ ನಿಷ್ಫಲವಾದವು.
A'raf 7:119
ಅವರು ಅಲ್ಲಿಯೇ ಸೋತು ದಯನೀಯ ಸ್ಥಿತಿಯಲ್ಲಿ ಮರಳಿದರು.
A'raf 7:120
ಮಾಟಗಾರರು (ಅಲ್ಲಾಹನಿಗೆ) ಸಾಷ್ಟಾಂಗ ಮಾಡಿದರು.
A'raf 7:121
ಅವರು ಹೇಳಿದರು: “ನಾವು ಸರ್ವಲೋಕಗಳ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ವಿಶ್ವಾಸವಿಟ್ಟಿದ್ದೇವೆ.
A'raf 7:122
ಮೂಸಾ ಮತ್ತು ಹಾರೂನರ ಪರಿಪಾಲಕನಲ್ಲಿ.”
A'raf 7:123
ಫರೋಹ ಹೇಳಿದನು: “ನಾನು ಅಪ್ಪಣೆ ಕೊಡುವ ಮೊದಲೇ ನೀವು ವಿಶ್ವಾಸವಿಟ್ಟಿರಾ? ನಿಶ್ಚಯವಾಗಿಯೂ ಇದು ನೀವು ನಗರದ ನಿವಾಸಿಗಳನ್ನು ಅಲ್ಲಿಂದ ಓಡಿಸಲು ಮಾಡಿದ ಪಿತೂರಿಯಾಗಿದೆ. ಸದ್ಯವೇ ನೀವು ತಿಳಿಯುವಿರಿ.
A'raf 7:124
ಖಂಡಿತವಾಗಿಯೂ ನಾನು ನಿಮ್ಮ ಕೈಗಳನ್ನು ಮತ್ತು ಕಾಲುಗಳನ್ನು ವಿರುದ್ಧ ದಿಕ್ಕಿನಿಂದ ಕತ್ತರಿಸಿ, ನಂತರ ನಿಮ್ಮೆಲ್ಲರನ್ನೂ ಶಿಲುಬೆಗೇರಿಸುವೆನು.”
A'raf 7:125
ಮಾಟಗಾರರು ಹೇಳಿದರು: “ನಿಶ್ಚಯವಾಗಿಯೂ ನಾವು ನಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳುವೆವು.
A'raf 7:126
ನಮ್ಮ ಪರಿಪಾಲಕನ (ಅಲ್ಲಾಹನ) ದೃಷ್ಟಾಂತಗಳು ನಮ್ಮ ಬಳಿಗೆ ಬಂದಾಗ ನಾವು ಅದರಲ್ಲಿ ವಿಶ್ವಾಸವಿಟ್ಟೆವು ಎಂಬುದರ ಹೊರತು ಬೇರೆ ಯಾವ ಅಪರಾಧಕ್ಕಾಗಿ ನೀವು ನಮ್ಮ ಮೇಲೆ ಸಿಟ್ಟಾಗಿದ್ದೀರಿ? ಓ ನಮ್ಮ ಪರಿಪಾಲಕನೇ! ನಮಗೆ ಸಹನಾಶಕ್ತಿಯನ್ನು ಸುರಿಸಿಕೊಡು ಮತ್ತು ಮುಸಲ್ಮಾನರಾಗಿರುವ ಸ್ಥಿತಿಯಲ್ಲಿ ನಮ್ಮನ್ನು ಮೃತಪಡಿಸು.”
A'raf 7:127
ಫರೋಹನ ಜನರಲ್ಲಿದ್ದ ಮುಖಂಡರು ಹೇಳಿದರು: “ಭೂಮಿಯಲ್ಲಿ ಕಿಡಿಗೇಡಿತನ ಮಾಡಲು ಮತ್ತು ನಿಮ್ಮನ್ನು ಹಾಗೂ ನಿಮ್ಮ ದೇವರುಗಳನ್ನು ಬಹಿಷ್ಕರಿಸಲು ನೀವು ಮೂಸಾ ಮತ್ತು ಅವನ ಜನರನ್ನು (ಸ್ವತಂತ್ರವಾಗಿ) ಬಿಟ್ಟುಬಿಡುತ್ತೀರಾ?” ಫರೋಹ ಹೇಳಿದನು: “ನಾವು ಅವರ (ಇಸ್ರಾಯೇಲರ) ಗಂಡುಮಕ್ಕಳ ಕತ್ತು ಕೊಯ್ಯುವೆವು ಮತ್ತು ಅವರ ಹೆಣ್ಣು ಮಕ್ಕಳನ್ನು ಜೀವಂತ ಬಿಡುವೆವು. ನಿಶ್ಚಯವಾಗಿಯೂ ನಮಗೆ ಅವರ ಮೇಲೆ ಸರ್ವಾಧಿಕಾರವಿದೆ.”
A'raf 7:128
ಮೂಸಾ ತಮ್ಮ ಜನರಿಗೆ ಹೇಳಿದರು: “ನೀವು ಅಲ್ಲಾಹನಲ್ಲಿ ಸಹಾಯ ಬೇಡಿರಿ ಮತ್ತು ತಾಳ್ಮೆಯಿಂದಿರಿ. ನಿಶ್ಚಯವಾಗಿಯೂ ಭೂಮಿ ಅಲ್ಲಾಹನಿಗೆ ಸೇರಿದ್ದು. ಅವನ ದಾಸರಲ್ಲಿ ಅವನು ಇಚ್ಛಿಸುವವರಿಗೆ ಅವನು ಅದನ್ನು ಉತ್ತರಾಧಿಕಾರವಾಗಿ ನೀಡುತ್ತಾನೆ. ಉತ್ತಮ ಅಂತ್ಯವಿರುವುದು ದೇವಭಯವುಳ್ಳವರಿಗೆ ಮಾತ್ರ.”
A'raf 7:129
ಅವರು ಹೇಳಿದರು: “ನೀವು ನಮ್ಮ ಬಳಿಗೆ (ಸಂದೇಶವಾಹಕರಾಗಿ) ಬರುವ ಮೊದಲು ಮತ್ತು ನೀವು ನಮ್ಮ ಬಳಿಗೆ (ಸಂದೇಶವಾಹಕರಾಗಿ) ಬಂದ ಬಳಿಕವೂ ನಾವು ಹಿಂಸೆಗೆ ಗುರಿಯಾಗಿದ್ದೇವೆ.” ಮೂಸಾ ಹೇಳಿದರು: “ನಿಮ್ಮ ಪರಿಪಾಲಕನು (ಅಲ್ಲಾಹು) ನಿಮ್ಮ ವೈರಿಯನ್ನು ನಾಶ ಮಾಡಿ, ನಿಮ್ಮನ್ನು ಭೂಮಿಯಲ್ಲಿ ಉತ್ತರಾಧಿಕಾರಿಗಳನ್ನಾಗಿ ಮಾಡಬಹುದು. ನಂತರ ನೀವು ಹೇಗೆ ಕಾರ್ಯವೆಸಗುತ್ತೀರಿ ಎಂದು ಅವನು ನೋಡುವನು.”
A'raf 7:130
ಫರೋಹನ ಜನರನ್ನು ನಾವು ಬರಗಾಲ ಮತ್ತು ಬೆಳೆಗಳ ಅಭಾವದಿಂದ ಹಿಡಿದೆವು. ಅವರು ಜಾಗೃತರಾಗುವುದಕ್ಕಾಗಿ.
A'raf 7:131
ಅವರಿಗೆ ಒಳಿತುಂಟಾದರೆ, “ಇದು ನಮ್ಮ ಸಿಗಬೇಕಾದ ಹಕ್ಕು” ಎಂದು ಅವರು ಹೇಳುತ್ತಾರೆ. ಅವರಿಗೆ ಕೆಡುಕು ಬಾಧಿಸಿದರೆ ಮೂಸಾ ಮತ್ತು ಅವರ ಅನುಯಾಯಿಗಳನ್ನು ಅಪಶಕುನವಾಗಿ ಕಾಣುತ್ತಾರೆ. ತಿಳಿಯಿರಿ! ಅವರ ಶಕುನವು ಅಲ್ಲಾಹನ ಬಳಿಯಲ್ಲಿದೆ. ಆದರೆ ಅವರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.
A'raf 7:132
ಅವರು ಹೇಳಿದರು: “ನೀನು ನಮ್ಮನ್ನು ಮೋಡಿ ಮಾಡಲು ಯಾವುದೇ ದೃಷ್ಟಾಂತವನ್ನು ತಂದರೂ ನಾವು ನಿನ್ನಲ್ಲಿ ವಿಶ್ವಾಸವಿಡುವುದಿಲ್ಲ.”
A'raf 7:133
ಆಗ ನಾವು ಅವರ ವಿರುದ್ಧ ಪ್ರವಾಹ, ಮಿಡತೆ, ಹೇನು, ಕಪ್ಪೆಗಳು ಮತ್ತು ರಕ್ತವನ್ನು ಸ್ಪಷ್ಟ ದೃಷ್ಟಾಂತಗಳಾಗಿ ಕಳುಹಿಸಿದೆವು. ಆದರೆ ಅವರು ಅಹಂಕಾರದಿಂದ ವರ್ತಿಸಿದರು. ಅವರು ಅಪರಾಧವೆಸಗಿದ ಜನರಾಗಿದ್ದರು.
A'raf 7:134
ಶಿಕ್ಷೆಯು ಅವರ ಮೇಲೆರಗಿದಾಗ ಅವರು ಹೇಳಿದರು: “ಓ ಮೂಸಾ! ನಿಮ್ಮ ಪರಿಪಾಲಕನು (ಅಲ್ಲಾಹು) ನಿಮಗೆ ನೀಡಿದ ಭರವಸೆಯಂತೆ ನೀವು ಅವನನ್ನು ಕರೆದು ಪ್ರಾರ್ಥಿಸಿರಿ. ನೀವು ಈ ಶಿಕ್ಷೆಯನ್ನು ನಮ್ಮಿಂದ ನಿವಾರಿಸಿದರೆ ನಾವು ಖಂಡಿತ ವಿಶ್ವಾಸವಿಡುವೆವು ಮತ್ತು ಇಸ್ರಾಯೇಲ್ ಮಕ್ಕಳನ್ನು ಖಂಡಿತ ನಿಮ್ಮ ಜೊತೆಗೆ ಕಳುಹಿಸಿಕೊಡುವೆವು.”
A'raf 7:135
ಆದರೆ ಅವರು ತಲುಪಬೇಕಾದ ಒಂದು ಅವಧಿಯ ತನಕ ನಾವು ಅವರಿಂದ ಶಿಕ್ಷೆಯನ್ನು ನಿವಾರಿಸಿದಾಗ, ಅಗೋ ಅವರು ಮಾತು ತಪ್ಪುತ್ತಿದ್ದಾರೆ.
A'raf 7:136
ಆದ್ದರಿಂದ ನಾವು ಅವರಿಂದ ಪ್ರತೀಕಾರ ಪಡೆದೆವು ಮತ್ತು ಅವರನ್ನು ಸಮುದ್ರದಲ್ಲಿ ಮುಳುಗಿಸಿ ಬಿಟ್ಟೆವು. ಏಕೆಂದರೆ, ಅವರು ನಮ್ಮ ವಚನಗಳನ್ನು ನಿಷೇಧಿಸಿದ್ದರು ಮತ್ತು ಅವುಗಳ ಬಗ್ಗೆ ನಿರ್ಲಕ್ಷ್ಯರಾಗಿದ್ದರು.
A'raf 7:137
ದಬ್ಬಾಳಿಕೆಗೆ ಗುರಿಯಾದ ಜನರನ್ನು (ಇಸ್ರಾಯೇಲ್ ಮಕ್ಕಳನ್ನು) ನಾವು ಸಮೃದ್ಧಗೊಳಿಸಿದ ಭೂಮಿಯ ಪೂರ್ವ ಮತ್ತು ಪಶ್ಚಿಮ ಭಾಗಗಳ ಉತ್ತರಾಧಿಕಾರಿಗಳಾಗಿ ಮಾಡಿದೆವು. ಇಸ್ರಾಯೇಲ್ ಮಕ್ಕಳು ತಾಳ್ಮೆ ತೋರಿದ ಕಾರಣ ಅವರಿಗೆ ಸಂಬಂಧಿಸಿದ ನಿಮ್ಮ ಪರಿಪಾಲಕನ (ಅಲ್ಲಾಹನ) ಉತ್ತಮ ವಚನವು ನೆರವೇರಿತು. ಫರೋಹ ಮತ್ತು ಅವನ ಜನರು ನಿರ್ಮಿಸಿದ್ದನ್ನು ಮತ್ತು ಅವರು ಎತ್ತರಿಸಿ ಕಟ್ಟಿದ್ದನ್ನು ನಾವು ನಾಶ ಮಾಡಿದೆವು.
A'raf 7:138
ನಾವು ಇಸ್ರಾಯೇಲ್ ಮಕ್ಕಳನ್ನು ಸಮುದ್ರ ದಾಟಿಸಿ ರಕ್ಷಿಸಿದೆವು. ಅಲ್ಲಿ ಅವರು ವಿಗ್ರಹಗಳ ಮುಂದೆ ಧ್ಯಾನಮಗ್ನರಾಗಿ ಕುಳಿತಿದ್ದ ಜನರನ್ನು ಕಂಡರು. ಅವರು ಹೇಳಿದರು: “ಓ ಮೂಸಾ! ಇವರಿಗೆ ದೇವರುಗಳು ಇರುವಂತೆ ನಮಗೂ ಒಬ್ಬ ದೇವನನ್ನು ಮಾಡಿಕೊಡಿ.” ಮೂಸಾ ಹೇಳಿದರು: “ನಿಶ್ಚಯವಾಗಿಯೂ ನೀವು ವಿವೇಕರಹಿತ ಜನರಾಗಿದ್ದೀರಿ.
A'raf 7:139
ನಿಶ್ಚಯವಾಗಿಯೂ ಇವರು ಮಾಡುತ್ತಿರುವ ಈ ಕಾರ್ಯವು (ವಿಗ್ರಹಾರಾಧನೆ) ನಾಶವಾಗಿ ಹೋಗುತ್ತದೆ ಮತ್ತು ಇವರು ಮಾಡುತ್ತಿರುವ ಈ ಕಾರ್ಯವು ಆಧಾರರಹಿತವಾಗಿದೆ.”
A'raf 7:140
ಮೂಸಾ ಕೇಳಿದರು: “ಅಲ್ಲಾಹು ನಿಮ್ಮನ್ನು ಸರ್ವಲೋಕಗಳ ಜನರಿಗಿಂತ ಶ್ರೇಷ್ಠಗೊಳಿಸಿರುವಾಗ, ನಾನು ಅವನಲ್ಲದ ಬೇರೆ ದೇವರನ್ನು ನಿಮಗಾಗಿ ಹುಡುಕಿ ತರಬೇಕೇ?”
A'raf 7:141
ನಿಮಗೆ ಕಠೋರ ಹಿಂಸೆ ನೀಡುತ್ತಿದ್ದ, ನಿಮ್ಮ ಗಂಡು ಮಕ್ಕಳ ಕತ್ತು ಕೊಯ್ಯುತ್ತಿದ್ದ ಮತ್ತು ನಿಮ್ಮ ಹೆಣ್ಣು ಮಕ್ಕಳನ್ನು ಜೀವಂತ ಬಿಡುತ್ತಿದ್ದ ಫರೋಹನ ಜನರಿಂದ ನಾವು ನಿಮ್ಮನ್ನು ರಕ್ಷಿಸಿದ ಸಂದರ್ಭ(ವನ್ನು ಸ್ಮರಿಸಿ). ನಿಶ್ಚಯವಾಗಿಯೂ ಅದರಲ್ಲಿ (ನಿಮ್ಮನ್ನು ರಕ್ಷಿಸಿದ್ದರಲ್ಲಿ) ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಮಹಾ ಪರೀಕ್ಷೆಯಿತ್ತು.
A'raf 7:142
ನಾವು ಮೂಸಾರಿಗೆ ಮೂವತ್ತು ರಾತ್ರಿಗಳನ್ನು ವಾಗ್ದಾನ ಮಾಡಿದೆವು ಮತ್ತು ಅದಕ್ಕೆ ಹತ್ತು ಸೇರಿಸಿ ಪೂರ್ಣಗೊಳಿಸಿದೆವು. ಹೀಗೆ ಮೂಸಾರ ಪರಿಪಾಲಕನು (ಅಲ್ಲಾಹು) ನಿಶ್ಚಯಿಸಿದ ನಲ್ವತ್ತು ರಾತ್ರಿಗಳ ಅವಧಿಯು ಪೂರ್ಣವಾಯಿತು. ಮೂಸಾ ತಮ್ಮ ಸಹೋದರ ಹಾರೂನರಿಗೆ ಹೇಳಿದರು: “ನನ್ನ ಜನರಿಗೆ ನನ್ನ ಪ್ರತಿನಿಧಿಯಾಗಿರು. ಒಳಿತನ್ನು ಮಾಡು. ಕಿಡಿಗೇಡಿಗಳ ಮಾರ್ಗವನ್ನು ಹಿಂಬಾಲಿಸಬೇಡ.”
A'raf 7:143
ನಮ್ಮ ನಿಶ್ಚಿತ ಸಮಯಕ್ಕೆ ಮೂಸಾ ಬಂದಾಗ ಮತ್ತು ಅವರ ಪರಿಪಾಲಕನು (ಅಲ್ಲಾಹು) ಅವರೊಡನೆ ಮಾತನಾಡಿದಾಗ ಅವರು ಹೇಳಿದರು: “ಓ ನನ್ನ ಪರಿಪಾಲಕನೇ! ನಿನ್ನನ್ನು ನನಗೆ ತೋರಿಸಿಕೊಡು. ನಾನು ನಿನ್ನನ್ನು ನೋಡಬೇಕು.” ಅಲ್ಲಾಹು ಹೇಳಿದನು: “ನಿಮಗೆ ನನ್ನನ್ನು ನೋಡಲು ಸಾಧ್ಯವಿಲ್ಲ. ಬದಲಿಗೆ, ನೀವು ಆ ಬೆಟ್ಟವನ್ನು ನೋಡಿರಿ. ಅದು ಅದರ ಸ್ಥಳದಲ್ಲಿಯೇ ಕದಲದೆ ನಿಂತರೆ ನೀವು ನನ್ನನ್ನು ನೋಡುವಿರಿ.” ನಂತರ ಅವರ ಪರಿಪಾಲಕನು (ಅಲ್ಲಾಹು) ಆ ಬೆಟ್ಟಕ್ಕೆ ತನ್ನನ್ನು ಪ್ರಕಟಗೊಳಿಸಿದಾಗ, ಅವನ ತೇಜಸ್ಸು ಅದನ್ನು ನುಚ್ಚುನೂರು ಮಾಡಿತು. ಮೂಸಾ ಪ್ರಜ್ಞೆ ತಪ್ಪಿ ಬಿದ್ದರು. ನಂತರ ಪ್ರಜ್ಞೆ ಬಂದಾಗ ಅವರು ಹೇಳಿದರು: “ನೀನು ಪರಿಶುದ್ಧನು. ನಾನು ನಿನ್ನ ಬಳಿಗೆ ಪಶ್ಚಾತ್ತಾಪದಿಂದ ಮರಳಿದ್ದೇನೆ. ನಾನು ಸತ್ಯವಿಶ್ವಾಸಿಗಳಲ್ಲಿ ಮೊದಲಿಗನಾಗಿದ್ದೇನೆ.”
A'raf 7:144
ಅಲ್ಲಾಹು ಹೇಳಿದನು: “ಓ ಮೂಸಾ! ನಿಶ್ಚಯವಾಗಿಯೂ ಮನುಷ್ಯರ ಪೈಕಿ ನಾನು ನಿಮ್ಮನ್ನು ನನ್ನ ಸಂದೇಶಗಳಿಂದ ಮತ್ತು ನನ್ನ (ನೇರ) ಮಾತಿನಿಂದ ಆರಿಸಿದ್ದೇನೆ. ಆದ್ದರಿಂದ ನಾನು ನಿಮಗೆ ನೀಡಿದ್ದನ್ನು ಬಿಗಿಯಾಗಿ ಹಿಡಿದುಕೊಳ್ಳಿ ಮತ್ತು ಕೃತಜ್ಞರಾಗಿರುವ ಜನರಲ್ಲಿ ಸೇರಿಕೊಳ್ಳಿ.”
A'raf 7:145
ನಾವು ಅವರಿಗೆ (ಮೂಸಾರಿಗೆ) ಹಲಗೆಗಳಲ್ಲಿ ಎಲ್ಲವನ್ನೂ—ಹಿತೋಪದೇಶ ಮತ್ತು ಎಲ್ಲಾ ವಿಷಯಗಳ ವಿವರಣೆಯನ್ನು—ಬರೆದುಕೊಟ್ಟೆವು. (ನಾವು ಹೇಳಿದೆವು): “ಇದನ್ನು ಬಿಗಿಯಾಗಿ ಹಿಡಿದುಕೊಳ್ಳಿ ಮತ್ತು ಇದರಲ್ಲಿರುವ ಉತ್ತಮ ವಿಷಯಗಳನ್ನು ಸ್ವೀಕರಿಸಲು ನಿಮ್ಮ ಜನರಿಗೆ ಆದೇಶಿಸಿರಿ. ದುಷ್ಕರ್ಮಿಗಳ ವಾಸ್ತವ್ಯವನ್ನು ನಾನು ಸದ್ಯವೇ ನಿಮಗೆ ತೋರಿಸಿಕೊಡುವೆನು.”
A'raf 7:146
ಭೂಮಿಯಲ್ಲಿ ಅನ್ಯಾಯವಾಗಿ ಅಹಂಕಾರಪಡುವವರನ್ನು ನಾನು ನನ್ನ ವಚನಗಳಿಂದ ತಿರುಗಿಸಿಬಿಡುವೆನು. ಅವರು ದೃಷ್ಟಾಂತಗಳೆಲ್ಲವನ್ನು ನೋಡಿದರೂ ಸಹ ಅದರಲ್ಲಿ ವಿಶ್ವಾಸವಿಡುವುದಿಲ್ಲ. ಅವರು ಒಳಿತಿನ ಮಾರ್ಗವನ್ನು ಕಂಡರೆ ಅದನ್ನು ತಮ್ಮ ಮಾರ್ಗವಾಗಿ ಸ್ವೀಕರಿಸುವುದಿಲ್ಲ. ಅವರು ಕೆಟ್ಟ ಮಾರ್ಗವನ್ನು ಕಂಡರೆ ಅದನ್ನು ತಮ್ಮ ಮಾರ್ಗವಾಗಿ ಸ್ವೀಕರಿಸುತ್ತಾರೆ. ಅದೇಕೆಂದರೆ, ಅವರು ನಮ್ಮ ವಚನಗಳನ್ನು ನಿಷೇಧಿಸುತ್ತಿದ್ದರು ಮತ್ತು ಅವುಗಳ ಬಗ್ಗೆ ನಿರ್ಲಕ್ಷ್ಯರಾಗಿದ್ದರು.
A'raf 7:147
ನಮ್ಮ ವಚನಗಳನ್ನು ಮತ್ತು ಪರಲೋಕದ ಭೇಟಿಯನ್ನು ನಿಷೇಧಿಸಿದವರು ಯಾರೋ—ಅವರ ಕರ್ಮಗಳು ನಿಷ್ಫಲವಾಗಿವೆ. ಅವರಿಗೆ ಅವರು ಮಾಡಿದ ಕರ್ಮಗಳ ಪ್ರತಿಫಲವನ್ನಲ್ಲದೆ ಬೇರೇನಾದರೂ ನೀಡಲಾಗುವುದೇ?
A'raf 7:148
ಮೂಸಾರ ನಿರ್ಗಮನದ ಬಳಿಕ ಅವರ ಜನರು (ಇಸ್ರಾಯೇಲ್ ಮಕ್ಕಳು) ತಮ್ಮ ಆಭರಣಗಳಿಂದ ಧ್ವನಿ ಹೊರಡಿಸುವ ಒಂದು ಕರುವಿನ ರೂಪವನ್ನು (ದೇವರಾಗಿ) ಮಾಡಿಕೊಂಡರು. ಅದು ಅವರೊಡನೆ ಮಾತನಾಡುವುದಿಲ್ಲ ಮತ್ತು ಅವರಿಗೆ ಸನ್ಮಾರ್ಗ ತೋರಿಸುವುದಿಲ್ಲವೆಂದು ಅವರಿಗೆ ತಿಳಿದಿಲ್ಲವೇ? ಅವರು ಅದನ್ನು (ದೇವರಾಗಿ) ಮಾಡಿಕೊಂಡರು. ಅವರು ಅಕ್ರಮಿಗಳಾಗಿದ್ದರು.
A'raf 7:149
(ನಂತರ ತಮ್ಮ ತಪ್ಪನ್ನು ಅರಿತು) ಅವರು ಮರುಗಿದಾಗ, ಮತ್ತು ಅವರು ದಾರಿತಪ್ಪಿದ್ದಾರೆಂದು ಅವರಿಗೆ ಮನವರಿಕೆಯಾದಾಗ, ಅವರು ಹೇಳಿದರು: “ನಮ್ಮ ಪರಿಪಾಲಕನು (ಅಲ್ಲಾಹು) ನಮಗೆ ದಯೆ ತೋರದಿದ್ದರೆ ಮತ್ತು ನಮ್ಮನ್ನು ಕ್ಷಮಿಸದಿದ್ದರೆ, ನಿಶ್ಚಯವಾಗಿಯೂ ನಾವು ನಷ್ಟಹೊಂದಿದವರಲ್ಲಿ ಸೇರುವೆವು.”
A'raf 7:150
ಮೂಸಾ ತಮ್ಮ ಜನರ ಬಳಿಗೆ ಮರಳಿ ಬಂದಾಗ—ಅವರು ಕೋಪ ಮತ್ತು ಬೇಸರದಿಂದ ಹೇಳಿದರು: “ನನ್ನ ನಿರ್ಗಮನದ ಬಳಿಕ ನೀವು ಮಾಡಿದ ಕೃತ್ಯವು ಅತ್ಯಂತ ಹೇಯವಾಗಿದೆ. ನಿಮ್ಮ ಪರಿಪಾಲಕನ (ಅಲ್ಲಾಹನ) ಆಜ್ಞೆ ಬರುವುದಕ್ಕೆ ಮೊದಲೇ ನೀವು ಅವಸರಪಟ್ಟಿರಾ?” ಅವರು ಹಲಗೆಗಳನ್ನು ಎಸೆದು ಸಹೋದರನ ತಲೆಗೂದಲನ್ನು ಹಿಡಿದು ಎಳೆದರು. ಅವರು (ಸಹೋದರ) ಹೇಳಿದರು: “ನನ್ನ ತಾಯಿಯ ಮಗನೇ! ನಿಶ್ಚಯವಾಗಿಯೂ ಈ ಜನರು ನನ್ನನ್ನು ದುರ್ಬಲನೆಂದು ಪರಿಗಣಿಸಿದರು. ಅವರು ನನ್ನನ್ನು ಇನ್ನೇನು ಕೊಲ್ಲುವುದರಲ್ಲಿದ್ದರು. ನನ್ನ ಮೇಲೆ ಹಲ್ಲೆ ಮಾಡಿ ವೈರಿಗಳಿಗೆ ಸಂತಸವಾಗುವಂತೆ ಮಾಡಬೇಡ. ಅಕ್ರಮಿಗಳ ಸಾಲಿಗೆ ನನ್ನನ್ನು ಕೂಡ ಸೇರಿಸಿ ಬಿಡಬೇಡ.”
A'raf 7:151
ಮೂಸಾ ಹೇಳಿದರು: “ಓ ನನ್ನ ಪರಿಪಾಲಕನೇ, ನನ್ನನ್ನು ಮತ್ತು ನನ್ನ ಸಹೋದರನನ್ನು ಕ್ಷಮಿಸು. ನಮ್ಮನ್ನು ನಿನ್ನ ದಯೆಯಲ್ಲಿ ಸೇರಿಸು. ನೀನು ದಯಾಳುಗಳಲ್ಲೇ ಅತ್ಯಧಿಕ ದಯಾಳುವಾಗಿರುವೆ.”
A'raf 7:152
ಕರುವನ್ನು ದೇವರಾಗಿ ಸ್ವೀಕರಿಸಿದವರು ಯಾರೋ—ಅವರು ತಮ್ಮ ಪರಿಪಾಲಕನ (ಅಲ್ಲಾಹನ) ಕೋಪವನ್ನು ಮತ್ತು ಇಹಲೋಕ ಜೀವನದಲ್ಲಿ ನಿಂದ್ಯತೆಯನ್ನು (ಬಳುವಳಿಯಾಗಿ) ಪಡೆಯುವರು. ಸುಳ್ಳು ಆರೋಪಿಸುವವರಿಗೆ ನಾವು ಈ ರೀತಿ ಪ್ರತಿಫಲವನ್ನು ನೀಡುವೆವು.
A'raf 7:153
ಆದರೆ ಪಾಪ ಮಾಡಿದ ಬಳಿಕ ಪಶ್ಚಾತ್ತಾಪಪಡುವವರು ಮತ್ತು ವಿಶ್ವಾಸವಿಡುವವರು ಯಾರೋ—ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಅದರ ನಂತರವೂ ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
A'raf 7:154
ಮೂಸಾರ ಕೋಪ ತಣ್ಣಗಾದಾಗ ಅವರು ಹಲಗೆಗಳನ್ನು ಎತ್ತಿಕೊಂಡರು. ಅದರಲ್ಲಿರುವ ಉಲ್ಲೇಖಗಳಲ್ಲಿ ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಭಯಪಡುವ ಜನರಿಗೆ ಸನ್ಮಾರ್ಗ ಮತ್ತು ದಯೆಯಿತ್ತು.
A'raf 7:155
ಮೂಸಾ ತಮ್ಮ ಜನರಲ್ಲಿ ಸೇರಿದ ಎಪ್ಪತ್ತು ಪುರುಷರನ್ನು ನಮ್ಮ ನಿಶ್ಚಿತ ಸಮಯಕ್ಕಾಗಿ ಆರಿಸಿದರು. ಆದರೆ ಭೀಕರ ಕಂಪನವು ಅವರನ್ನು ಹಿಡಿದಾಗ ಮೂಸಾ ಹೇಳಿದರು: “ಓ ನನ್ನ ಪರಿಪಾಲಕನೇ! ನೀನು ಇಚ್ಛಿಸಿದರೆ ಇದಕ್ಕಿಂತ ಮೊದಲೇ ಅವರನ್ನು ಮತ್ತು ನನ್ನನ್ನು ನಾಶ ಮಾಡಬಹುದಿತ್ತು. ನಮ್ಮಲ್ಲಿನ ಅವಿವೇಕಿಗಳು ಮಾಡಿದ ಕೃತ್ಯಕ್ಕೆ ನೀನು ನಮ್ಮನ್ನು ನಾಶ ಮಾಡುವೆಯಾ? ಇದು ನಿನ್ನ ಪರೀಕ್ಷೆಯಾಗಿದೆ. ಇದರ ಮೂಲಕ ನೀನು ಇಚ್ಛಿಸುವವರನ್ನು ನೀನು ದಾರಿತಪ್ಪಿಸುತ್ತೀ ಮತ್ತು ನೀನು ಇಚ್ಛಿಸುವವರಿಗೆ ಸನ್ಮಾರ್ಗ ತೋರಿಸುತ್ತೀ. ನೀನೇ ನಮ್ಮ ರಕ್ಷಕ. ನಮ್ಮನ್ನು ಕ್ಷಮಿಸು ಮತ್ತು ನಮಗೆ ದಯೆ ತೋರು. ನೀನು ಕ್ಷಮಿಸುವವರಲ್ಲಿ ಅತ್ಯುತ್ತಮನಾಗಿರುವೆ.
A'raf 7:156
ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ನಮಗೆ ಒಳಿತನ್ನು ದಾಖಲಿಸು. ನಿಶ್ಚಯವಾಗಿಯೂ ನಾವು ನಿನ್ನ ಕಡೆಗೆ ಮರಳಿದ್ದೇವೆ.” ಅಲ್ಲಾಹು ಹೇಳಿದನು: “ನಾನು ಇಚ್ಛಿಸುವವರನ್ನು ನಾನು ಶಿಕ್ಷಿಸುವೆನು. ಆದರೆ ನನ್ನ ದಯೆ ಎಲ್ಲಾ ವಸ್ತುಗಳನ್ನು ಆವರಿಸಿಕೊಂಡಿದೆ. ದೇವಭಯದಿಂದ ಜೀವಿಸುವ, ಝಕಾತ್ ನೀಡುವ ಮತ್ತು ನಮ್ಮ ವಚನಗಳಲ್ಲಿ ವಿಶ್ವಾಸವಿಡುವ ಜನರಿಗೆ ನಾನು ಅದನ್ನು (ದಯೆಯನ್ನು) ದಾಖಲಿಸುವೆನು.
A'raf 7:157
ಅವರು ಯಾರೆಂದರೆ, ತಮ್ಮ ಬಳಿಯಿರುವ ತೌರಾತ್ ಮತ್ತು ಇಂಜೀಲ್‍ನಲ್ಲಿ ಉಲ್ಲೇಖವಿರುವುದಾಗಿ ಕಾಣುವ ಅನಕ್ಷರಸ್ಥ ಪ್ರವಾದಿಯಾದ ಸಂದೇಶವಾಹಕರನ್ನು (ಪ್ರವಾದಿ ಮುಹಮ್ಮದರನ್ನು) ಅನುಸರಿಸುವವರು. ಆ ಪ್ರವಾದಿ ಅವರಿಗೆ ಒಳಿತನ್ನು ಆದೇಶಿಸುತ್ತಾರೆ ಮತ್ತು ಕೆಡುಕನ್ನು ವಿರೋಧಿಸುತ್ತಾರೆ. ಅವರಿಗೆ ಉತ್ತಮ ವಸ್ತುಗಳನ್ನು ಅನುಮತಿಸುತ್ತಾರೆ ಮತ್ತು ಕೆಟ್ಟ ವಸ್ತುಗಳನ್ನು ನಿಷೇಧಿಸುತ್ತಾರೆ. ಅವರ ಭಾರವನ್ನು ಕೆಳಗಿಳಿಸಿ ಅವರ ಮೇಲೆ ಹೊರಿಸಲಾಗಿದ್ದ ಸಂಕೋಲೆಗಳನ್ನು ಕಳಚುತ್ತಾರೆ. ಆ ಪ್ರವಾದಿಯಲ್ಲಿ ವಿಶ್ವಾಸವಿಡುವವರು, ಅವರನ್ನು ಬೆಂಬಲಿಸುವವರು, ಸಹಾಯ ಮಾಡುವವರು ಮತ್ತು ಅವರೊಂದಿಗೆ ಅವತೀರ್ಣವಾದ ಬೆಳಕನ್ನು ಅನುಸರಿಸುವವರು ಯಾರೋ—ಅವರೇ ಯಶಸ್ವಿಯಾದವರು.
A'raf 7:158
ಹೇಳಿರಿ: “ಓ ಮನುಷ್ಯರೇ! ನಿಶ್ಚಯವಾಗಿಯೂ ನಾನು ನಿಮ್ಮೆಲ್ಲರ ಬಳಿಗೆ (ಕಳುಹಿಸಲಾದ) ಅಲ್ಲಾಹನ ಸಂದೇಶವಾಹಕನಾಗಿದ್ದೇನೆ. ಅಂದರೆ, ಭೂಮ್ಯಾಕಾಶಗಳ ಆಧಿಪತ್ಯವು ಯಾರಿಗೆ ಸೇರಿದ್ದೋ ಅವನ (ಸಂದೇಶವಾಹಕ). ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಅವನು ಜೀವ ಮತ್ತು ಮರಣವನ್ನು ನೀಡುತ್ತಾನೆ.” ಆದ್ದರಿಂದ ನೀವು ಅಲ್ಲಾಹನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ—ಅಂದರೆ ಅಲ್ಲಾಹನಲ್ಲಿ ಮತ್ತು ಅವನ ವಚನಗಳಲ್ಲಿ ವಿಶ್ವಾಸವಿಡುವ ಆ ಅನಕ್ಷರಸ್ಥ ಪ್ರವಾದಿಯಲ್ಲಿ ವಿಶ್ವಾಸವಿಟ್ಟು ಅವರನ್ನು ಅನುಸರಿಸಿರಿ. ನೀವು ಸನ್ಮಾರ್ಗ ಪಡೆಯುವುದಕ್ಕಾಗಿ.
A'raf 7:159
ಮೂಸಾರ ಜನರಲ್ಲಿ ಒಂದು ಪಂಗಡವಿದೆ. ಅವರು ಸತ್ಯದ ಆಧಾರದಲ್ಲಿ ಮಾರ್ಗದರ್ಶನ ಮಾಡುತ್ತಾರೆ ಮತ್ತು ಅದರ ಆಧಾರದಲ್ಲಿ ನ್ಯಾಯವನ್ನು ಸ್ಥಾಪಿಸುತ್ತಾರೆ.
A'raf 7:160
ನಾವು ಅವರನ್ನು ಹನ್ನೆರಡು ವಂಶಗಳ ಗೋತ್ರಗಳನ್ನಾಗಿ ವಿಂಗಡಿಸಿದೆವು. ಮೂಸಾರೊಡನೆ ಅವರ ಜನರು ನೀರಿಗಾಗಿ ಅಂಗಲಾಚಿದಾಗ, “ನಿಮ್ಮ ಕೋಲಿನಿಂದ ಆ ಬಂಡೆಗೆ ಬಡಿಯಿರಿ” ಎಂದು ನಾವು ಅವರಿಗೆ ದೇವವಾಣಿ ನೀಡಿದೆವು. ಆಗ ಅದರಿಂದ ಹನ್ನೆರಡು ಒರತೆಗಳು ಚಿಮ್ಮಿ ಹರಿದವು. ಜನರೆಲ್ಲರೂ ತಮ್ಮ ತಮ್ಮ ನೀರು ಕುಡಿಯುವ ಸ್ಥಳವನ್ನು ತಿಳಿದುಕೊಂಡರು. ನಾವು ಅವರಿಗೆ ಮೋಡದ ನೆರಳನ್ನು ನೀಡಿದೆವು. ಅವರಿಗೆ ಮನ್ನ ಹಾಗೂ ಸಲ್ವಾವನ್ನು ಇಳಿಸಿಕೊಟ್ಟೆವು. “ನಾವು ನಿಮಗೆ ಒದಗಿಸಿದ ಶುದ್ಧ ವಸ್ತುಗಳಿಂದ ತಿನ್ನಿರಿ” (ಎಂದು ನಾವು ಹೇಳಿದೆವು). ಅವರು ನಮ್ಮೊಂದಿಗೆ ಅನ್ಯಾಯ ಮಾಡಿಲ್ಲ; ಆದರೆ ಅವರು ಅವರೊಂದಿಗೇ ಅನ್ಯಾಯ ಮಾಡುತ್ತಿದ್ದರು.
A'raf 7:161
ಅವರೊಡನೆ ಹೇಳಲಾದ ಸಂದರ್ಭ: “ನೀವು ಈ ಊರಿನಲ್ಲಿ ವಾಸಿಸಿರಿ. ಇಲ್ಲಿ ನೀವು ಇಚ್ಛಿಸುವ ಎಲ್ಲಾ ಕಡೆಯಿಂದ ಯಥೇಷ್ಟವಾಗಿ ತಿನ್ನಿರಿ. ಸಾಷ್ಟಾಂಗ ಮಾಡುತ್ತಾ ದ್ವಾರವನ್ನು ಪ್ರವೇಶಿಸಿರಿ ಮತ್ತು 'ಹಿತ್ತ' ಎಂದು ಹೇಳಿರಿ. ನಾವು ನಿಮ್ಮ ಪಾಪಗಳನ್ನು ಕ್ಷಮಿಸುವೆವು ಮತ್ತು ಸತ್ಕರ್ಮವೆಸಗುವವರಿಗೆ (ಪ್ರತಿಫಲವನ್ನು) ಹೆಚ್ಚಿಸುವೆವು.”
A'raf 7:162
ಆದರೆ ಆ ಅಕ್ರಮಿಗಳು ಅವರಿಗೆ ಹೇಳಲಾದ ಮಾತಿಗೆ ಬದಲು ಬೇರೊಂದು ಮಾತನ್ನು ಹೇಳಿದರು. ಅವರು ಅಕ್ರಮವೆಸಗುತ್ತಿದ್ದ ಕಾರಣ ನಾವು ಅವರ ಮೇಲೆ ಆಕಾಶದಿಂದ ಶಿಕ್ಷೆಯನ್ನು ಇಳಿಸಿದೆವು.
A'raf 7:163
ಸಮುದ್ರ ತೀರದಲ್ಲಿದ್ದ ಆ ಊರಿನ ಬಗ್ಗೆ ಅವರೊಡನೆ ಕೇಳಿರಿ. ಅವರು ಸಬ್ಬತ್ ದಿನ (ಶನಿವಾರ) ಅತಿರೇಕವೆಸಗಿದ ಸಂದರ್ಭ. ಸಬ್ಬತ್‌ನ ದಿನ (ಶನಿವಾರ) ಮೀನುಗಳು ನೀರಿನ ಮೇಲೆ ತಲೆಯೆತ್ತುತ್ತಾ ಅವರ ಮುಂದೆ ಪ್ರತ್ಯಕ್ಷವಾಗುತ್ತಿದ್ದವು ಮತ್ತು ಸಬ್ಬತ್ ಅಲ್ಲದ ದಿನ ಅವರ ಮುಂದೆ ಪ್ರತ್ಯಕ್ಷವಾಗುತ್ತಿರಲಿಲ್ಲ. ಅವರು ಅವಿಧೇಯತೆ ತೋರುತ್ತಿದ್ದ ಕಾರಣ ನಾವು ಅವರನ್ನು ಈ ರೀತಿಯಲ್ಲಿ ಪರೀಕ್ಷಿಸಿದೆವು.[1]
———
[1] ಯಹೂದಿಗಳಿಗೆ ಸಬ್ಬತ್ ದಿನ (ಶನಿವಾರ) ಮೀನು ಹಿಡಿಯುವುದು ನಿಷೇಧಿಸಲಾಗಿತ್ತು. ಆದರೆ ಅಲ್ಲಾಹನ ಪರೀಕ್ಷೆಯಂತೆ ಶನಿವಾರವೇ ನೀರಿನಲ್ಲಿ ಹೆಚ್ಚು ಮೀನುಗಳು ಕಂಡುಬರುತ್ತಿದ್ದವು. ಆದ್ದರಿಂದ ಯಹೂದಿಗಳು ಒಂದು ಉಪಾಯ ಮಾಡಿದರು. ಅವರು ಶನಿವಾರ ಮೀನು ಹಿಡಿಯುವ ಬದಲು ಮೀನಿಗಾಗಿ ಬಲೆ ಹಾಕುತ್ತಿದ್ದರು. ನಂತರ ಅದರಲ್ಲಿ ಸಿಕ್ಕಿದ ಮೀನುಗಳನ್ನು ಭಾನುವಾರ ಹಿಡಿಯುತ್ತಿದ್ದರು. ಇದು ದೇವಾಜ್ಞೆಯ ಸ್ಪಷ್ಟ ಉಲ್ಲಂಘನೆಯಾಗಿತ್ತು.
A'raf 7:164
ಅವರಲ್ಲಿ ಒಂದು ಗುಂಪು ಜನರು ಹೇಳಿದರು: “ನೀವೇಕೆ ಈ ಜನರಿಗೆ ಉಪದೇಶ ಮಾಡುತ್ತೀರಿ. ಅಲ್ಲಾಹು ಅವರನ್ನು ನಾಶ ಮಾಡುವನು ಅಥವಾ ಕಠಿಣವಾಗಿ ಶಿಕ್ಷಿಸುವನು.” ಅವರು ಹೇಳಿದರು: “ನಿಮ್ಮ ಪರಿಪಾಲಕನ (ಅಲ್ಲಾಹನ) ಮುಂದೆ ನಮ್ಮನ್ನು ದೋಷಮುಕ್ತಗೊಳಿಸುವುದಕ್ಕಾಗಿ ಮತ್ತು ಅವರು ದೇವಭಯವುಳ್ಳವರಾಗುವುದಕ್ಕಾಗಿ (ನಾವು ಹೀಗೆ ಮಾಡುತ್ತಿದ್ದೇವೆ).”[1]
———
[1] ಯಹೂದಿಗಳಲ್ಲಿದ್ದ ನೀತಿವಂತರಲ್ಲಿ ಕೆಲವರು ದುಷ್ಟರಿಗೆ ಬುದ್ಧಿವಾದ ಹೇಳಿದಾಗ, ಇತರರು ಹೇಳಿದರು: “ಅವರಿಗೆ ಬುದ್ಧಿವಾದ ಹೇಳಲು ಹೋಗಬೇಡಿ. ಅವರು ಹೇಗೂ ಅಲ್ಲಾಹನ ಶಿಕ್ಷೆಗೆ ಪಾತ್ರರಾಗುವವರು. ಅವರಿಗೆ ಉಪದೇಶ ಮಾಡುವುದು ವ್ಯರ್ಥ.” ಆದರೆ ಇದು ಸರಿಯಾದ ನಿಲುವಲ್ಲ. ಒಳಿತನ್ನು ಆದೇಶಿಸುವುದು ಮತ್ತು ಕೆಡುಕನ್ನು ವಿರೋಧಿಸುವುದು ಸತ್ಯವಿಶ್ವಾಸಿಯ ಗುಣವಾಗಿದೆ.
A'raf 7:165
ಅವರಿಗೆ ನೆನಪಿಸಿಕೊಡಲಾದ ವಿಷಯಗಳನ್ನು ಅವರು ಮರೆತು ಬಿಟ್ಟಾಗ, ಕೆಡುಕುಗಳನ್ನು ವಿರೋಧಿಸುತ್ತಿದ್ದ ಜನರನ್ನು ನಾವು ರಕ್ಷಿಸಿದೆವು. ಅಕ್ರಮವೆಸಗಿದ ಜನರನ್ನು ಅವರು ಅವಿಧೇಯತೆ ತೋರುತ್ತಿದ್ದ ಕಾರಣ ನಾವು ಕಠಿಣ ಶಿಕ್ಷೆಯ ಮೂಲಕ ಹಿಡಿದೆವು.
A'raf 7:166
ಅವರಿಗೆ ವಿರೋಧಿಸಲಾದ ವಿಷಯಗಳಲ್ಲಿ ಅವರು ಉದ್ಧಟತನ ತೋರಿದಾಗ ನಾವು ಅವರೊಡನೆ ಹೇಳಿದೆವು: “ನೀವು ನೀಚ ಕಪಿಗಳಾಗಿ ಬಿಡಿ.”
A'raf 7:167
“ಪುನರುತ್ಥಾನ ದಿನದ ತನಕ ಅವರಿಗೆ (ಇಸ್ರಾಯೇಲ್ ಮಕ್ಕಳಿಗೆ) ಕಠೋರ ಹಿಂಸೆ ನೀಡುವ ಜನರನ್ನು ಅವರ ವಿರುದ್ಧ ಕಳುಹಿಸುವೆನು” ಎಂದು ನಿಮ್ಮ ಪರಿಪಾಲಕನು (ಅಲ್ಲಾಹು) ಘೋಷಿಸಿದ ಸಂದರ್ಭ. ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಅತಿವೇಗವಾಗಿ ಶಿಕ್ಷೆ ನೀಡುತ್ತಾನೆ. ನಿಶ್ಚಯವಾಗಿಯೂ ಅವನು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
A'raf 7:168
ನಾವು ಅವರನ್ನು ಭೂಮಿಯಲ್ಲಿ ಹಲವು ಗುಂಪುಗಳನ್ನಾಗಿ ವಿಂಗಡಿಸಿದೆವು. ಅವರಲ್ಲಿ ನೀತಿವಂತರಿದ್ದಾರೆ. ಅಲ್ಲದವರೂ ಇದ್ದಾರೆ. ನಾವು ಅವರನ್ನು ಒಳಿತು ಮತ್ತು ಕೆಡುಕುಗಳಿಂದ ಪರೀಕ್ಷಿಸಿದೆವು. ಅವರು (ವಿಧೇಯತೆಗೆ) ಮರಳುವುದಕ್ಕಾಗಿ.
A'raf 7:169
ನಂತರ ಅವರ ಹಿಂದೆಯೇ ಅವರ ನಂತರದವರು ಬಂದರು. ಅವರು ಗ್ರಂಥದ ಉತ್ತರಾಧಿಕಾರವನ್ನು ವಹಿಸಿಕೊಂಡರು. ಅವರು ಇಹಲೋಕ ಜೀವನದ ಕೀಳು ವಸ್ತುಗಳನ್ನು ಪಡೆಯುತ್ತಾರೆ. ಅವರು ಹೇಳುತ್ತಾರೆ: “ನಮ್ಮನ್ನು ಕ್ಷಮಿಸಲಾಗುತ್ತದೆ.”[1] ಅದರಂತಹ ಬೇರೆ ವಸ್ತುಗಳು ದೊರಕಿದರೂ ಅವರು ಅದನ್ನು ಪಡೆಯುತ್ತಾರೆ. ಅಲ್ಲಾಹನ ಮೇಲೆ ಸತ್ಯವಲ್ಲದೆ ಬೇರೇನೂ ಹೇಳುವುದಿಲ್ಲ ಮತ್ತು ಗ್ರಂಥವನ್ನು ಅಧ್ಯಯನ ಮಾಡಿ (ಅದರಂತೆ ನಡೆಯುತ್ತೇವೆ) ಎಂದು ಅವರಿಂದ ಗ್ರಂಥದ ಮೂಲಕ ಕರಾರು ಪಡೆಯಲಾಗಿಲ್ಲವೇ? ದೇವಭಯವುಳ್ಳವರಿಗೆ ಪರಲೋಕ ಜೀವನವೇ ಉತ್ತಮ. ನೀವು ಅರ್ಥಮಾಡಿಕೊಳ್ಳುವುದಿಲ್ಲವೇ?
———
[1] ಯಹೂದಿಗಳು ಸ್ವಯಂ ಅವರನ್ನು ದೇವರ ಮಕ್ಕಳು ಮತ್ತು ಶ್ರೇಷ್ಠ ಜನರೆಂದು ನಂಬುತ್ತಾರೆ. ಆದ್ದರಿಂದ ಅವರು ಏನೇ ತಪ್ಪು ಮಾಡಿದರೂ ಅಲ್ಲಾಹು ಅವರನ್ನು ಕ್ಷಮಿಸುತ್ತಾನೆಂಬ ಭಾವನೆ ಅವರಲ್ಲಿದೆ.
A'raf 7:170
ಗ್ರಂಥವನ್ನು ಬಿಗಿಯಾಗಿ ಹಿಡಿಯುವವರು ಮತ್ತು ನಮಾಝನ್ನು ಸಂಸ್ಥಾಪಿಸುವವರು ಯಾರೋ— ನಿಶ್ಚಯವಾಗಿಯೂ ಸುಧಾರಣೆ ಮಾಡುವವರ ಪ್ರತಿಫಲವನ್ನು ನಾವು ವ್ಯರ್ಥಗೊಳಿಸುವುದಿಲ್ಲ.
A'raf 7:171
ನಾವು ಪರ್ವತವನ್ನು ಅವರ ಮೇಲೆ ಕೊಡೆಯಂತೆ ಎತ್ತಿ ಹಿಡಿದ ಸಂದರ್ಭ. ಅದು ಅವರ ಮೇಲೆ ಬೀಳಬಹುದೆಂದು ಅವರಿಗೆ ಖಾತ್ರಿಯಾಯಿತು. (ನಾವು ಹೇಳಿದೆವು): “ನಾವು ನಿಮಗೆ ನೀಡಿದ್ದನ್ನು ಬಿಗಿಯಾಗಿ ಹಿಡಿಯಿರಿ ಮತ್ತು ಅದರಲ್ಲಿರುವುದನ್ನು ನೆನಪಿಟ್ಟುಕೊಳ್ಳಿ. ನೀವು ದೇವಭಯವುಳ್ಳವರಾಗುವುದಕ್ಕಾಗಿ.”
A'raf 7:172
ನಿಮ್ಮ ಪರಿಪಾಲಕನು (ಅಲ್ಲಾಹು) ಆದಮರ ಮಕ್ಕಳಿಂದ—ಅವರ ಬೆನ್ನುಗಳಿಂದ ಅವರ ಸಂತಾನವನ್ನು ಹೊರತೆಗೆದು, ಅವರ ವಿಷಯದಲ್ಲಿ ಅವರನ್ನೇ ಸಾಕ್ಷಿ ನಿಲ್ಲಿಸಿದ ಸಂದರ್ಭ. (ಅಲ್ಲಾಹು ಕೇಳಿದನು): “ನಾನು ನಿಮ್ಮ ಪರಿಪಾಲಕನಲ್ಲವೇ?” ಅವರು ಉತ್ತರಿಸಿದರು: “ಹೌದು, ನಾವು ಸಾಕ್ಷಿಗಳಾಗಿದ್ದೇವೆ.” ನಿಶ್ಚಯವಾಗಿಯೂ ನಮಗೆ ಇದರ ಬಗ್ಗೆ ಮಾಹಿತಿಯೇ ಇರಲಿಲ್ಲ ಎಂದು ಪುನರುತ್ಥಾನ ದಿನ ನೀವು ಹೇಳಬಾರದೆಂದು (ಹೀಗೆ ಮಾಡಲಾಗಿದೆ).
A'raf 7:173
ಅಥವಾ, “ಈ ಹಿಂದೆ ನಮ್ಮ ಪೂರ್ವಜರು ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡಿದ್ದರು. ನಾವು ಅವರ ನಂತರದ ಸಂತಾನವಾಗಿದ್ದೇವೆ. ಆ ಮಿಥ್ಯವಾದಿಗಳು ಮಾಡಿದ ತಪ್ಪಿಗಾಗಿ ನೀನು ನಮ್ಮನ್ನು ನಾಶ ಮಾಡುವೆಯಾ?” ಎಂದು ನೀವು ಹೇಳಬಾರದೆಂದು (ಹೀಗೆ ಮಾಡಲಾಗಿದೆ).
A'raf 7:174
ಈ ರೀತಿ ನಾವು ವಚನಗಳನ್ನು ವಿವರಿಸಿಕೊಡುತ್ತೇವೆ. ಅವರು (ಸತ್ಯಕ್ಕೆ) ಮರಳುವುದಕ್ಕಾಗಿ.
A'raf 7:175
ಅವರಿಗೆ ಒಬ್ಬ ವ್ಯಕ್ತಿಯ ಸಮಾಚಾರವನ್ನು ತಿಳಿಸಿಕೊಡಿ. ನಾವು ಅವನಿಗೆ ನಮ್ಮ ವಚನಗಳ ಜ್ಞಾನವನ್ನು ನೀಡಿದೆವು. ಆದರೆ ಅವನು ಅದರಿಂದ ನುಣುಚಿಕೊಂಡನು. ಆಗ ಶೈತಾನನು ಅವನನ್ನು ಹಿಂಬಾಲಿಸಿದನು ಮತ್ತು ಅವನು ದುರ್ಮಾರ್ಗಿಗಳಲ್ಲಿ ಸೇರಿಬಿಟ್ಟನು.
A'raf 7:176
ನಾವು ಇಚ್ಛಿಸುತ್ತಿದ್ದರೆ ಆ ಜ್ಞಾನದ ಮೂಲಕ ನಾವು ಅವನನ್ನು ಉನ್ನತಿಗೇರಿಸುತ್ತಿದ್ದೆವು. ಆದರೆ ಅವನು ಭೂಮಿಗೆ ಅಂಟಿಕೊಂಡು ಸ್ವೇಚ್ಛೆಗಳನ್ನು ಹಿಂಬಾಲಿಸಿದನು. ಅವನ ಉದಾಹರಣೆಯು ಒಂದು ನಾಯಿಯಂತೆ. ನೀವು ಅದನ್ನು ಓಡಿಸಿದರೂ ಅದು ನಾಲಗೆ ಹೊರಚಾಚುತ್ತದೆ. ನೀವು ಅದನ್ನು ಅದರ ಪಾಡಿಗೆ ಬಿಟ್ಟರೂ ಅದು ನಾಲಗೆ ಹೊರಚಾಚುತ್ತದೆ. ಇದು ನಮ್ಮ ವಚನಗಳನ್ನು ನಿಷೇಧಿಸಿದವರ ಉದಾಹರಣೆಯಾಗಿದೆ. ಅವರಿಗೆ ಈ ಕಥೆಗಳನ್ನು ಹೇಳಿಕೊಡಿ. ಅವರು ಆಲೋಚಿಸುವುದಕ್ಕಾಗಿ.
A'raf 7:177
ನಮ್ಮ ವಚನಗಳನ್ನು ನಿಷೇಧಿಸಿದ ಮತ್ತು ಸ್ವಯಂ ಅಕ್ರಮವೆಸಗಿದ ಜನರ ಉದಾಹರಣೆಯು ಬಹಳ ನಿಕೃಷ್ಟವಾಗಿದೆ.
A'raf 7:178
ಅಲ್ಲಾಹು ಯಾರಿಗೆ ಸನ್ಮಾರ್ಗ ತೋರಿಸುತ್ತಾನೋ ಅವನು ಸನ್ಮಾರ್ಗವನ್ನು ಪಡೆಯುತ್ತಾನೆ. ಅವನು ಯಾರನ್ನು ದಾರಿತಪ್ಪಿಸುತ್ತಾನೋ ಅವರೇ ನಷ್ಟಹೊಂದಿದವರು.
A'raf 7:179
ಜಿನ್ನ್ ಮತ್ತು ಮನುಷ್ಯರಲ್ಲಿ ಸೇರಿದ ಬಹುಪಾಲನ್ನು ನಾವು ನರಕಕ್ಕಾಗಿ ಸೃಷ್ಟಿಸಿದ್ದೇವೆ. ಅವರಿಗೆ ಹೃದಯಗಳಿವೆ; ಆದರೆ ಅವರು ಅವುಗಳ ಮೂಲಕ ಅರ್ಥಮಾಡಿಕೊಳ್ಳುವುದಿಲ್ಲ. ಅವರಿಗೆ ಕಣ್ಣುಗಳಿವೆ; ಆದರೆ ಅವರು ಅವುಗಳ ಮೂಲಕ ನೋಡುವುದಿಲ್ಲ. ಅವರಿಗೆ ಕಿವಿಗಳಿವೆ; ಆದರೆ ಅವರು ಅವುಗಳ ಮೂಲಕ ಕೇಳುವುದಿಲ್ಲ. ಅವರು ಜಾನುವಾರುಗಳಂತೆ. ಅಲ್ಲ, ಅವರು ಅತ್ಯಧಿಕ ದಾರಿತಪ್ಪಿದವರು. ಅವರೇ ನಿರ್ಲಕ್ಷ್ಯದಲ್ಲಿರುವವರು.
A'raf 7:180
ಅಲ್ಲಾಹನಿಗೆ ಅತಿಸುಂದರವಾದ ಹೆಸರುಗಳಿವೆ. ಆದ್ದರಿಂದ ಅವುಗಳ ಮೂಲಕ ಅವನನ್ನು ಕರೆದು ಪ್ರಾರ್ಥಿಸಿರಿ. ಅವನ ಹೆಸರುಗಳ ವಿಷಯದಲ್ಲಿ ವಾಮಮಾರ್ಗವನ್ನು ತುಳಿಯುವವರನ್ನು ಬಿಟ್ಟುಬಿಡಿ. ಅವರು ಮಾಡಿದ ಕೃತ್ಯಗಳ ಪ್ರತಿಫಲವನ್ನು ಅವರಿಗೆ ಸದ್ಯವೇ ನೀಡಲಾಗುವುದು.
A'raf 7:181
ನಾವು ಸೃಷ್ಟಿಸಿದ ಸೃಷ್ಟಿಗಳಲ್ಲಿ ಸತ್ಯದ ಆಧಾರದಲ್ಲಿ ಮಾರ್ಗದರ್ಶನ ಮಾಡುವ ಮತ್ತು ಅದರ ಆಧಾರದಲ್ಲಿ ನ್ಯಾಯ ಸ್ಥಾಪಿಸುವ ಒಂದು ಸಮುದಾಯವಿದೆ.
A'raf 7:182
ನಮ್ಮ ವಚನಗಳನ್ನು ನಿಷೇಧಿಸಿದವರು ಯಾರೋ—ಅವರು ತಿಳಿಯದ ರೀತಿಯಲ್ಲಿ ನಾವು ಅವರನ್ನು ಹಂತ ಹಂತವಾಗಿ ಆವರಿಸಿಕೊಳ್ಳುವೆವು.
A'raf 7:183
ನಾನು ಅವರಿಗೆ ಕಾಲಾವಕಾಶ ನೀಡುವೆನು. ನಿಶ್ಚಯವಾಗಿಯೂ ನನ್ನ ತಂತ್ರಗಾರಿಕೆಯು ಬಲಿಷ್ಠವಾಗಿದೆ.
A'raf 7:184
ಅವರು ಆಲೋಚಿಸುವುದಿಲ್ಲವೇ? ಅವರ ಸಂಗಡಿಗನಿಗೆ (ಮುಹಮ್ಮದರಿಗೆ) ಯಾವುದೇ ರೀತಿಯ ಬುದ್ಧಿಭ್ರಮಣೆಯಿಲ್ಲ. ಅವರೊಬ್ಬ ಸ್ಪಷ್ಟ ಮುನ್ನೆಚ್ಚರಿಕೆಗಾರ ಮಾತ್ರವಾಗಿದ್ದಾರೆ.
A'raf 7:185
ಭೂಮ್ಯಾಕಾಶಗಳ ಸಾಮ್ರಾಜ್ಯಗಳನ್ನು ಮತ್ತು ಅಲ್ಲಾಹು ಸೃಷ್ಟಿಸಿದ ಎಲ್ಲಾ ವಸ್ತುಗಳನ್ನು ಹಾಗೂ ಅವರ ಜೀವಿತಾವಧಿ ಸಮೀಪಿಸಿರಬಹುದೆಂದು ಅವರು ಆಲೋಚಿಸಿ ನೋಡುವುದಿಲ್ಲವೇ? ಇದರ (ಕುರ್‌ಆನಿನ) ಬಳಿಕ ಅವರು ಯಾವ ಸಮಾಚಾರದಲ್ಲಿ ವಿಶ್ವಾಸವಿಡುವರು?
A'raf 7:186
ಅಲ್ಲಾಹು ಯಾರನ್ನು ದಾರಿತಪ್ಪಿಸುತ್ತಾನೋ ಅವನಿಗೆ ಸನ್ಮಾರ್ಗ ತೋರಿಸಲು ಯಾರಿಗೂ ಸಾಧ್ಯವಿಲ್ಲ. ಅವರು ಅವರ ಅತಿರೇಕಗಳಲ್ಲಿ ಅಂಧವಾಗಿ ವಿಹರಿಸುವಂತೆ ಅವನು ಅವರನ್ನು ಬಿಟ್ಟುಬಿಡುವನು.
A'raf 7:187
ಅವರು ಅಂತಿಮದಿನದ ಬಗ್ಗೆ—“ಅದು ಯಾವಾಗ ಸಂಭವಿಸುತ್ತದೆ” ಎಂದು ಕೇಳುತ್ತಾರೆ. ಹೇಳಿರಿ: “ಅದರ ಜ್ಞಾನವಿರುವುದು ನನ್ನ ಪರಿಪಾಲಕನಿಗೆ (ಅಲ್ಲಾಹನಿಗೆ) ಮಾತ್ರ. ಅದರ ಸಮಯದಲ್ಲಿ ಅವನಲ್ಲದೆ ಯಾರೂ ಅದನ್ನು ಪ್ರಕಟಗೊಳಿಸುವುದಿಲ್ಲ. ಭೂಮ್ಯಾಕಾಶಗಳಲ್ಲಿ ಅದು ಅತ್ಯಂತ ಭಾರವಿರುವ (ಭಯಾನಕ) ಸಂಗತಿಯಾಗಿದೆ. ಅದು ಅನಿರೀಕ್ಷಿತವಾಗಿಯೇ ನಿಮ್ಮ ಬಳಿಗೆ ಬರುತ್ತದೆ.” ನಿಮಗೆ ಅದರ ಬಗ್ಗೆ ಜ್ಞಾನವಿದೆಯೆಂಬ ಭಾವನೆಯಿಂದ ಅವರು ನಿಮ್ಮಲ್ಲಿ ಕೇಳುತ್ತಾರೆ. ಹೇಳಿರಿ: “ಅದರ ಜ್ಞಾನವಿರುವುದು ಅಲ್ಲಾಹನಿಗೆ ಮಾತ್ರ.” ಆದರೆ ಜನರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.
A'raf 7:188
ಹೇಳಿರಿ: “ನಾನು ನನಗಾಗಿ ಯಾವುದೇ ಲಾಭ ಅಥವಾ ತೊಂದರೆ ಮಾಡುವ ಅಧಿಕಾರವನ್ನು ಹೊಂದಿಲ್ಲ—ಅಲ್ಲಾಹು ಏನು ಇಚ್ಛಿಸುತ್ತಾನೋ ಅದರ ಹೊರತು. ನನಗೆ ಅದೃಶ್ಯ ಜ್ಞಾನವಿರುತ್ತಿದ್ದರೆ, ನಾನು ಹೇರಳ ಒಳಿತುಗಳನ್ನು ಮಾಡುತ್ತಿದ್ದೆ. ಕೆಡುಕು ನನ್ನನ್ನು ಸ್ಪರ್ಶಿಸುತ್ತಲೇ ಇರಲಿಲ್ಲ. ವಿಶ್ವಾಸವಿಡುವ ಜನರಿಗೆ ನಾನೊಬ್ಬ ಮುನ್ನೆಚ್ಚರಿಕೆಗಾರ ಮತ್ತು ಸುವಾರ್ತೆ ನೀಡುವವ ಮಾತ್ರವಾಗಿದ್ದೇನೆ.”
A'raf 7:189
ನಿಮ್ಮನ್ನು ಒಂದೇ ದೇಹದಿಂದ ಸೃಷ್ಟಿಸಿದವನು ಅವನೇ. ನಂತರ ಅವನಿಂದ ಅವನ ಪತ್ನಿಯನ್ನು ಸೃಷ್ಟಿಸಿದನು—ಅವನು ಅವಳಿಂದ ನೆಮ್ಮದಿ ಪಡೆಯುವುದಕ್ಕಾಗಿ. ನಂತರ ಅವನು ಅವಳೊಡನೆ ಸೇರಿದಾಗ ಅವಳು ಹಗುರವಾದ ಗರ್ಭ ಧರಿಸಿ, ನಂತರ ಅದರೊಂದಿಗೆ ಮುಂದುವರಿದಳು. ಅವಳ ಭಾರವು ಹೆಚ್ಚಾದಾಗ (ಹೆರಿಗೆ ನೋವು ಗೋಚರಿಸಿದಾಗ) ಅವರಿಬ್ಬರೂ ಅವರ ಪರಿಪಾಲಕನಾದ ಅಲ್ಲಾಹನನ್ನು ಕರೆದು ಪ್ರಾರ್ಥಿಸಿದರು: “ನೀನು ನಮಗೆ ನೀತಿವಂತ ಮಗುವನ್ನು ನೀಡಿದರೆ ನಾವು ಖಂಡಿತ ನಿನಗೆ ಆಭಾರಿಯಾಗುವೆವು.”
A'raf 7:190
ಅವನು ಅವರಿಗೆ ನೀತಿವಂತ ಮಗುವನ್ನು ನೀಡಿದಾಗ, ಅವನು ಅವರಿಗೆ ನೀಡಿದ್ದರಲ್ಲಿಯೇ ಅವರು ಅವನಿಗೆ ಸಹಭಾಗಿಗಳನ್ನು ನಿಶ್ಚಯಿಸಿದರು. ಅವರು ಮಾಡುವ ಸಹಭಾಗಿತ್ವದಿಂದ ಅಲ್ಲಾಹು ಎಷ್ಟೋ ಉನ್ನತನಾಗಿದ್ದಾನೆ.
A'raf 7:191
ಯಾವುದೇ ವಸ್ತುವನ್ನು ಸೃಷ್ಟಿಸದವರನ್ನೋ ಅವರು ಅಲ್ಲಾಹನಿಗೆ ಸಹಭಾಗಿಯನ್ನಾಗಿ ಮಾಡುವುದು? (ವಾಸ್ತವವಾಗಿ) ಅವರೇ ಸೃಷ್ಟಿಗಳಾಗಿದ್ದಾರೆ.
A'raf 7:192
ಅವರಿಗೆ ಯಾವುದೇ ಸಹಾಯವನ್ನು ಮಾಡಲು ಆ ದೇವರುಗಳಿಗೆ ಸಾಧ್ಯವಿಲ್ಲ. ಸ್ವಯಂ ಅವರಿಗೂ ಅವರು ಸಹಾಯ ಮಾಡುವುದಿಲ್ಲ.
A'raf 7:193
ನೀವು ಅವರನ್ನು ಸನ್ಮಾರ್ಗಕ್ಕೆ ಕರೆದರೆ ಅವರು ನಿಮ್ಮನ್ನು ಅನುಸರಿಸುವುದಿಲ್ಲ. ನೀವು ಅವರನ್ನು ಕರೆದರೂ ಅಥವಾ ಕರೆಯದೆ ಮೌನವಾಗಿದ್ದರೂ ನಿಮಗೆ ಸಂಬಂಧಿಸಿದಂತೆ ಅವೆರಡೂ ಸಮಾನವಾಗಿವೆ.
A'raf 7:194
ನೀವು ಅಲ್ಲಾಹನನ್ನು ಬಿಟ್ಟು ಯಾರನ್ನು ಕರೆದು ಪ್ರಾರ್ಥಿಸುತ್ತೀರೋ ಅವರು (ಆ ದೇವರುಗಳು) ನಿಶ್ಚಯವಾಗಿಯೂ ನಿಮ್ಮಂತಹ ಸೃಷ್ಟಿಗಳಾಗಿದ್ದಾರೆ. ಅವರನ್ನು ಕರೆದು ಪ್ರಾರ್ಥಿಸಿರಿ; ಅವರು ನಿಮಗೆ ಉತ್ತರ ನೀಡುತ್ತಾರೋ ನೋಡೋಣ. ನೀವು ಸತ್ಯವಂತರಾಗಿದ್ದರೆ.
A'raf 7:195
ಅವರಿಗೆ ನಡೆಯಲು ಸಾಧ್ಯವಾಗುವ ಕಾಲುಗಳಿವೆಯೇ? ಅವರಿಗೆ ಹಿಡಿಯಲು ಸಾಧ್ಯವಾಗುವ ಕೈಗಳಿವೆಯೇ? ಅವರಿಗೆ ನೋಡಲು ಸಾಧ್ಯವಾಗುವ ಕಣ್ಣುಗಳಿವೆಯೇ? ಅವರಿಗೆ ಕೇಳಲು ಸಾಧ್ಯವಾಗುವ ಕಿವಿಗಳಿವೆಯೇ? ಹೇಳಿರಿ: “ನೀವು ನಿಮ್ಮ ಸಹಭಾಗಿಗಳನ್ನು (ದೇವರುಗಳನ್ನು) ಕರೆಯಿರಿ. ನಂತರ ನನ್ನ ಮೇಲೆ ನಿಮ್ಮ ತಂತ್ರವನ್ನು ಪ್ರಯೋಗಿಸಿರಿ. ನನಗೆ ಕಾಲಾವಕಾಶ ನೀಡಬೇಡಿ.”
A'raf 7:196
ನಿಶ್ಚಯವಾಗಿಯೂ ಈ ಗ್ರಂಥವನ್ನು ಅವತೀರ್ಣಗೊಳಿಸಿದ ಅಲ್ಲಾಹನೇ ನನ್ನ ರಕ್ಷಕ. ಅವನು ನೀತಿವಂತರನ್ನು ಸಂರಕ್ಷಿಸುವ ಹೊಣೆಯನ್ನು ವಹಿಸಿಕೊಂಡಿದ್ದಾನೆ.
A'raf 7:197
ನೀವು ಅವನನ್ನು (ಅಲ್ಲಾಹನನ್ನು) ಬಿಟ್ಟು ಯಾರನ್ನು ಕರೆದು ಪ್ರಾರ್ಥಿಸುತ್ತೀರೋ—ನಿಮಗೆ ಸಹಾಯ ಮಾಡಲು ಅವರಿಗೆ ಸಾಧ್ಯವಿಲ್ಲ. ಸ್ವಯಂ ಅವರಿಗೂ ಅವರು ಸಹಾಯ ಮಾಡುವುದಿಲ್ಲ.
A'raf 7:198
ನೀವು ಅವರನ್ನು ಸನ್ಮಾರ್ಗಕ್ಕೆ ಕರೆದರೆ ಅವರು ಅದನ್ನು ಕೇಳುವುದಿಲ್ಲ. ಅವರು ನಿಮ್ಮನ್ನು ನೋಡುತ್ತಿರುವಂತೆ ನಿಮಗೆ ಕಾಣಬಹುದು. ಆದರೆ ಅವರು ನೋಡುವುದಿಲ್ಲ.
A'raf 7:199
(ಜನರೊಡನೆ) ಸೌಮ್ಯವಾಗಿ ವರ್ತಿಸಿರಿ, ಒಳಿತನ್ನು ಆದೇಶಿಸಿರಿ ಮತ್ತು ಅವಿವೇಕಿಗಳಿಂದ ದೂರವಿರಿ.
A'raf 7:200
ನಿಮಗೆ ಶೈತಾನನಿಂದ ಏನಾದರೂ ದುಷ್ಪ್ರೇರಣೆ ಅನುಭವವಾದರೆ ಅಲ್ಲಾಹನಲ್ಲಿ ಅಭಯ ಯಾಚಿಸಿರಿ. ನಿಶ್ಚಯವಾಗಿಯೂ ಅವನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
A'raf 7:201
ನಿಶ್ಚಯವಾಗಿಯೂ ದೇವಭಯವುಳ್ಳವರಿಗೆ ಶೈತಾನನಿಂದ ಏನಾದರೂ ದುಷ್ಪ್ರೇರಣೆ ಅನುಭವವಾದರೆ, ಅವರು ಅಲ್ಲಾಹನನ್ನು ಸ್ಮರಿಸುತ್ತಾರೆ. ಆಗ ಅವರು ಒಳದೃಷ್ಟಿಯುಳ್ಳವರಾಗುತ್ತಾರೆ.
A'raf 7:202
ಅವರು (ಶೈತಾನರು) ಅವರ ಸಹೋದರರನ್ನು ದುರ್ಮಾರ್ಗದಲ್ಲಿ ಬಿಟ್ಟುಬಿಡುತ್ತಾರೆ. ಅವರು ಅದರಲ್ಲಿ ಯಾವುದೇ ಅಭಾವ ಮಾಡುವುದಿಲ್ಲ.
A'raf 7:203
ನೀವು ಅವರಿಗೆ ಒಂದು ದೃಷ್ಟಾಂತವನ್ನು ತಂದು ತೋರಿಸದಿದ್ದರೆ, ಅವರು ಹೇಳುತ್ತಾರೆ: “ನೀವೇ ಅದನ್ನು ರಚಿಸಿ ತರಬಾರದೇ?” ಹೇಳಿರಿ: “ನನ್ನ ಪರಿಪಾಲಕನಿಂದ (ಅಲ್ಲಾಹನಿಂದ) ಬರುವ ದೇವವಾಣಿಗಳನ್ನು ಮಾತ್ರ ನಾನು ಅನುಸರಿಸುತ್ತೇನೆ. ಇದು (ಕುರ್‌ಆನ್) ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಕಣ್ತೆರೆಸುವ ಸಾಕ್ಷ್ಯಾಧಾರವಾಗಿದೆ ಮತ್ತು ವಿಶ್ವಾಸವಿಡುವ ಜನರಿಗೆ ಸನ್ಮಾರ್ಗ ಮತ್ತು ದಯೆಯಾಗಿದೆ.”
A'raf 7:204
ಕುರ್‌ಆನ್ ಪಠಿಸಲಾಗುವಾಗ ಅದನ್ನು ಕಿವಿಗೊಟ್ಟು ಕೇಳಿರಿ ಮತ್ತು ಮೌನವಾಗಿರಿ. ನಿಮಗೆ ದಯೆ ತೋರಲಾಗುವುದಕ್ಕಾಗಿ.
A'raf 7:205
ವಿನಯ ಮತ್ತು ಭಯದಿಂದ ಧ್ವನಿಯನ್ನು ತಗ್ಗಿಸಿ ಮುಂಜಾನೆ ಮತ್ತು ಸಂಜೆ ನೀವು ನಿಮ್ಮ ಮನಸ್ಸಿನಲ್ಲೇ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಸ್ಮರಿಸಿರಿ. ನೀವು ನಿರ್ಲಕ್ಷ್ಯರಾಗಿರುವವರಲ್ಲಿ ಸೇರಬೇಡಿ.
A'raf 7:206
ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿಯಿರುವವರು (ದೇವದೂತರು) ಅವನನ್ನು ಆರಾಧಿಸುವ ವಿಷಯದಲ್ಲಿ ಅಹಂಕಾರ ತೋರುವುದಿಲ್ಲ. ಅವರು ಅವನ ಪರಿಶುದ್ಧಿಯನ್ನು ಕೊಂಡಾಡುತ್ತಾರೆ ಮತ್ತು ಅವನಿಗೆ ಸಾಷ್ಟಾಂಗ ಮಾಡುತ್ತಾರೆ.
Enfal 8:1
ಅವರು ನಿಮ್ಮಲ್ಲಿ ಯುದ್ಧಾರ್ಜಿತ ಸೊತ್ತುಗಳ ಬಗ್ಗೆ ಕೇಳುತ್ತಾರೆ.[1] ಹೇಳಿರಿ: “ಯುದ್ಧಾರ್ಜಿತ ಸೊತ್ತು ಅಲ್ಲಾಹನಿಗೆ ಮತ್ತು ಸಂದೇಶವಾಹಕರಿಗೆ ಸೇರಿದ್ದು.”[2] ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ಪರಸ್ಪರ ನಿಮ್ಮ ಸಂಬಂಧಗಳನ್ನು ಸುಧಾರಿಸಿರಿ. ಅಲ್ಲಾಹನನ್ನು ಮತ್ತು ಸಂದೇಶವಾಹಕರ ಆಜ್ಞಾಪಾಲನೆ ಮಾಡಿರಿ. ನೀವು ಸತ್ಯವಿಶ್ವಾಸಿಗಳಾಗಿದ್ದರೆ.
———
[1] ಯುದ್ಧಾರ್ಜಿತ ಸೊತ್ತುಗಳು ಎಂದರೆ ಸತ್ಯನಿಷೇಧಿಗಳೊಡನೆ ಯುದ್ಧ ಮಾಡಿ ಗೆದ್ದಾಗ ಸಿಗುವ ಸೊತ್ತುಗಳು.
[2] ಯುದ್ಧಾರ್ಜಿತ ಸೊತ್ತುಗಳು ಅಲ್ಲಾಹನಿಗೆ ಮತ್ತು ಸಂದೇಶವಾಹಕರಿಗೆ ಸೇರಿದ್ದು. ಅವುಗಳನ್ನು ಯೋಧರು ಮನಬಂದಂತೆ ಹಂಚಿಕೊಳ್ಳುವಂತಿಲ್ಲ. ಬದಲಿಗೆ, ಅಲ್ಲಾಹು ಮತ್ತು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಜ್ಞಾಪಿಸಿದಂತೆ ಹಂಚಿಕೊಳ್ಳಬೇಕಾಗಿದೆ.
Enfal 8:2
ಅಲ್ಲಾಹನ ಹೆಸರು ಹೇಳಿದಾಗ ಯಾರ ಹೃದಯಗಳು ಭಯದಿಂದ ನಡುಗುತ್ತದೋ, ಅವನ ವಚನಗಳನ್ನು ಪಠಿಸಲಾದರೆ ಯಾರ ವಿಶ್ವಾಸವು ಅಧಿಕವಾಗುತ್ತದೋ ಮತ್ತು ಯಾರು ತಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಭರವಸೆಯಿಡುತ್ತಾರೋ ಅವರೇ ಸತ್ಯವಿಶ್ವಾಸಿಗಳು.
Enfal 8:3
ಅವರು ನಮಾಝನ್ನು ಸಂಸ್ಥಾಪಿಸುವವರು ಮತ್ತು ನಾವು ಒದಗಿಸಿದ ಧನದಿಂದ ಖರ್ಚು ಮಾಡುವವರು.
Enfal 8:4
ಅವರೇ ನಿಜವಾದ ಸತ್ಯವಿಶ್ವಾಸಿಗಳು. ಅವರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ಉನ್ನತ ಸ್ಥಾನಮಾನಗಳು, ಕ್ಷಮೆ ಮತ್ತು ಗೌರವಾರ್ಹ ಉಪಜೀವನವಿದೆ.
Enfal 8:5
ಅದು ಹೇಗೆಂದರೆ, ನಿಮ್ಮ ಪರಿಪಾಲಕ (ಅಲ್ಲಾಹು) ನಿಮ್ಮನ್ನು ನಿಮ್ಮ ಮನೆಯಿಂದ ಸತ್ಯದೊಂದಿಗೆ ಹೊರಡಿಸಿದಂತೆ. ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳಲ್ಲಿ ಒಂದು ಗುಂಪಿಗೆ ಅದು ಇಷ್ಟವಿರಲಿಲ್ಲ.
Enfal 8:6
ಯುದ್ಧವು ಸಂಭವಿಸುತ್ತದೆಯೆಂದು ಸ್ಪಷ್ಟವಾದ ಬಳಿಕವೂ ಅವರು ನಿಮ್ಮೊಡನೆ ಅದರ ಬಗ್ಗೆ ತರ್ಕಿಸುತ್ತಾರೆ. ಸಾವನ್ನು ನೋಡುತ್ತಿರುವಂತೆಯೇ ಅವರನ್ನು ಅದಕ್ಕೆ ಸಾಗಿಸಲಾಗುತ್ತಿದೆಯೋ ಎಂಬಂತೆ.
Enfal 8:7
ಎರಡು ಗುಂಪುಗಳಲ್ಲಿ ಒಂದನ್ನು ನಿಮ್ಮ ವಶಕ್ಕೆ ನೀಡುತ್ತೇನೆಂದು ಅಲ್ಲಾಹು ನಿಮಗೆ ಆಶ್ವಾಸನೆ ನೀಡಿದ ಸಂದರ್ಭ(ವನ್ನು ಸ್ಮರಿಸಿ). ನಿಶ್ಶಸ್ತ್ರ ಗುಂಪು ನಿಮ್ಮ ವಶಕ್ಕೆ ಬರಬೇಕೆಂದು ನೀವು ಬಯಸುತ್ತೀರಿ. ಆದರೆ ಅಲ್ಲಾಹು ತನ್ನ ವಚನಗಳ ಮೂಲಕ ಸತ್ಯವನ್ನು ಸ್ಥಾಪಿಸಲು ಮತ್ತು ಸತ್ಯನಿಷೇಧಿಗಳನ್ನು ಬೇರು ಸಹಿತ ನಿರ್ನಾಮ ಮಾಡಲು ಬಯಸುತ್ತಿದ್ದನು.[1]
———
[1] ಕುರೈಷರ ವ್ಯಾಪಾರ ತಂಡವನ್ನು (ನಿಶ್ಶಸ್ತ್ರ ಗುಂಪನ್ನು) ಅಥವಾ ಕುರೈಷ್ ಸೈನ್ಯವನ್ನು ನಿಮ್ಮ ವಶಕ್ಕೆ ನೀಡುತ್ತೇನೆಂದು ಅಲ್ಲಾಹು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಾತು ಕೊಟ್ಟಿದ್ದನು. ಕುರೈಷರ ವ್ಯಾಪಾರ ತಂಡದ ಮೇಲೆ ದಾಳಿ ಮಾಡಿ ವಶಪಡಿಸುವುದಕ್ಕೆ ಯುದ್ಧದ ಅಗತ್ಯವಿಲ್ಲದ್ದರಿಂದ ಮುಸಲ್ಮಾನರು ಅದನ್ನೇ ಬಯಸಿದ್ದರು. ಆದರೆ ಅಲ್ಲಾಹನ ಉದ್ದೇಶವು ಸತ್ಯ ಮತ್ತು ಅಸತ್ಯವನ್ನು ನಿರ್ಣಾಯಕವಾಗಿ ಬೇರ್ಪಡಿಸಿ ತೋರಿಸುವ ಬದ್ರ್ ಯುದ್ಧ ನಡೆಯಬೇಕು ಎಂಬುದಾಗಿತ್ತು.
Enfal 8:8
ಅವನು ಸತ್ಯವನ್ನು ಸ್ಥಾಪಿಸಲು ಮತ್ತು ಅಸತ್ಯವನ್ನು ನಿರ್ಮೂಲನ ಮಾಡಲು (ಬಯಸಿದ್ದನು). ಅಪರಾಧಿಗಳು ಎಷ್ಟು ದ್ವೇಷಿಸಿದರೂ ಸಹ.
Enfal 8:9
ನೀವು ನಿಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಸಹಾಯ ಯಾಚಿಸುತ್ತಿದ್ದ ಸಂದರ್ಭ(ವನ್ನು ಸ್ಮರಿಸಿ). ಆಗ, “ನಾನು ಒಂದು ಸಾವಿರ ದೇವದೂತರುಗಳನ್ನು ನಿರಂತರವಾಗಿ ಕಳುಹಿಸುವ ಮೂಲಕ ನಿಮಗೆ ಸಹಾಯ ಮಾಡುವೆನು” ಎಂದು ಅವನು ನಿಮಗೆ ಉತ್ತರವಿತ್ತನು.
Enfal 8:10
ಅಲ್ಲಾಹು ಅದನ್ನೊಂದು ಶುಭ ಸುದ್ದಿಯಾಗಿ ಮಾಡಿದನು. ಅದರಿಂದ ನಿಮ್ಮ ಹೃದಯಗಳು ಶಾಂತವಾಗುವುದಕ್ಕಾಗಿ. ಸಹಾಯವು ಅಲ್ಲಾಹನಿಂದಲ್ಲದೆ ಬೇರೆ ಯಾರಿಂದಲೂ ದೊರೆಯುವುದಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
Enfal 8:11
(ನೀವು ಶತ್ರುಗಳ ಬಗ್ಗೆ ಭಯಪಡದಿರಲು) ಅವನು ತನ್ನ ಕಡೆಯ ಸುರಕ್ಷೆಯಾಗಿ ನಿಮ್ಮನ್ನು ಮಂಪರಿನಿಂದ ಆವರಿಸಿಕೊಂಡ ಸಂದರ್ಭ(ವನ್ನು ಸ್ಮರಿಸಿ). ನಿಮ್ಮನ್ನು ಶುದ್ಧೀಕರಿಸಲು, ನಿಮ್ಮಿಂದ ಶೈತಾನನ ಕೊಳೆಯನ್ನು (ದುಷ್ಪ್ರೇರಣೆಗಳನ್ನು) ನಿವಾರಿಸಲು, ನಿಮ್ಮ ಹೃದಯಗಳನ್ನು ಸ್ಥೈರ್ಯದಿಂದ ಹಿಡಿದಿಡಲು ಮತ್ತು ನಿಮ್ಮ ಪಾದಗಳನ್ನು ದೃಢವಾಗಿ ನಿಲ್ಲಿಸಲು ಅವನು ಆಕಾಶದಿಂದ ಮಳೆಯನ್ನು ಸುರಿಸಿದನು.
Enfal 8:12
“ನಿಶ್ಚಯವಾಗಿಯೂ ನಾನು ನಿಮ್ಮ ಜೊತೆಗಿದ್ದೇನೆ. ನೀವು ಸತ್ಯವಿಶ್ವಾಸಿಗಳಿಗೆ ಶಕ್ತಿಯನ್ನು ನೀಡಿರಿ. ಸತ್ಯನಿಷೇಧಿಗಳ ಹೃದಯಗಳಲ್ಲಿ ನಾನು ಭೀತಿಯನ್ನು ಹಾಕುತ್ತೇನೆ. ನೀವು ಅವರ ಕೊರಳುಗಳ ಮೇಲೆ ಹೊಡೆಯಿರಿ ಮತ್ತು ಅವರ ಎಲ್ಲಾ ಬೆರಳುಗಳ ತುದಿಗಳಿಗೂ ಹೊಡೆಯಿರಿ” ಎಂದು ನಿಮ್ಮ ಪರಿಪಾಲಕನು (ಅಲ್ಲಾಹು) ದೇವದೂತರುಗಳಿಗೆ ದಿವ್ಯಪ್ರೇರಣೆ ನೀಡಿದ ಸಂದರ್ಭ.
Enfal 8:13
ಅದೇಕೆಂದರೆ ಅವರು (ಸತ್ಯನಿಷೇಧಿಗಳು) ಅಲ್ಲಾಹು ಮತ್ತು ಅವನ ಸಂದೇಶವಾಹಕರಿಗೆ ವಿರುದ್ಧವಾಗಿ ಸಾಗಿದರು. ಯಾರು ಅಲ್ಲಾಹನಿಗೆ ಮತ್ತು ಅವನ ಸಂದೇಶವಾಹಕರಿಗೆ ವಿರುದ್ಧವಾಗಿ ಸಾಗುತ್ತಾರೋ—ನಿಶ್ಚಯವಾಗಿಯೂ ಅಲ್ಲಾಹು ಅವರನ್ನು ಅತಿಕಠೋರವಾಗಿ ಶಿಕ್ಷಿಸುತ್ತಾನೆ.
Enfal 8:14
ಅದೇ ನಿಮಗಿರುವ ಶಿಕ್ಷೆ. ಅದರ ರುಚಿಯನ್ನು ನೋಡಿರಿ. ನಿಶ್ಚಯವಾಗಿಯೂ ಸತ್ಯನಿಷೇಧಿಗಳಿಗೆ ನರಕ ಶಿಕ್ಷೆಯಿದೆ.
Enfal 8:15
ಓ ಸತ್ಯವಿಶ್ವಾಸಿಗಳೇ! ನೀವು ಯುದ್ಧದಲ್ಲಿ ಸತ್ಯನಿಷೇಧಿಗಳನ್ನು ಮುಖಾಮುಖಿಯಾದರೆ ಬೆನ್ನು ತೋರಿಸಿ ಓಡಬೇಡಿ.
Enfal 8:16
ಯುದ್ಧತಂತ್ರದ ಭಾಗವಾಗಿ ತಟ್ಟನೆ ಬದಿಗೆ ಸರಿಯುವುದು, ಅಥವಾ ಇನ್ನೊಂದು ತುಕಡಿಯನ್ನು ಸೇರುವುದು ಮುಂತಾದ ಕಾರಣಗಳಿಂದಲ್ಲದೆ ಯಾರು ಆ ದಿನ (ಯುದ್ಧದ ದಿನ) ಬೆನ್ನು ತೋರಿಸಿ ಓಡುತ್ತಾರೋ ಅವರು ಅಲ್ಲಾಹನ ಕೋಪಕ್ಕೆ ಪಾತ್ರರಾಗಿಯೇ ಮರಳುತ್ತಾರೆ. ಅವರ ವಾಸಸ್ಥಳ ನರಕವಾಗಿದೆ. ಅದು ಬಹಳ ಕೆಟ್ಟ ಗಮ್ಯಸ್ಥಾನವಾಗಿದೆ.
Enfal 8:17
ನೀವು ಅವರನ್ನು ಕೊಲ್ಲಲಿಲ್ಲ. ಆದರೆ ಅಲ್ಲಾಹು ಅವರನ್ನು ಕೊಂದನು.[1] ನೀವು ಎಸೆದಾಗ (ವಾಸ್ತವದಲ್ಲಿ) ನೀವು ಎಸೆದಿರಲಿಲ್ಲ, ಬದಲಿಗೆ, ಅಲ್ಲಾಹು ಎಸೆದಿದ್ದನು.[2] ಅಲ್ಲಾಹು ತನ್ನ ವತಿಯ ಒಂದು ಸುಂದರ ಪರೀಕ್ಷೆಯ ಮೂಲಕ ಸತ್ಯವಿಶ್ವಾಸಿಗಳನ್ನು ಪರೀಕ್ಷಿಸುವುದಕ್ಕಾಗಿ ಹೀಗೆ ಮಾಡಿದ್ದನು. ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
———
[1] ಬದ್ರ್ ಯುದ್ಧದಲ್ಲಿ ನೀವು ಸತ್ಯನಿಷೇಧಿಗಳನ್ನು ಕೊಂದದ್ದು ನಿಮ್ಮ ಸಾಧನೆ ಎಂದು ಭಾವಿಸಬೇಡಿ. ಅಲ್ಲ, ಬದಲಿಗೆ ಅಲ್ಲಾಹು ನಿಮಗೆ ಸಹಾಯ ಮಾಡಿದ್ದರಿಂದಲೇ ನಿಮಗೆ ಈ ಶಕ್ತಿಯು ದೊರೆತಿದೆ. ಆದ್ದರಿಂದ, ವಾಸ್ತವವಾಗಿ ಅವರನ್ನು ಕೊಂದದ್ದು ಅಲ್ಲಾಹನಾಗಿದ್ದನು.
[2] ಬದ್ರ್ ಯುದ್ಧದಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವೈರಿಗಳ ಮೇಲೆ ಒಂದು ಹಿಡಿ ಮರಳನ್ನು ಎಸೆದರು. ಅವರು ಎಸೆದ ಈ ಮರಳನ್ನು ಅಲ್ಲಾಹು ವೈರಿಗಳ ಮುಖ ಮತ್ತು ಕಣ್ಣುಗಳನ್ನು ತಲುಪುವಂತೆ ಮಾಡಿ ಅವರನ್ನು ಘಾಸಿಗೊಳಿಸಿದ್ದನು. ಇದರಿಂದ ಅವರಿಗೆ ಏನೂ ಕಾಣದಂತಾಯಿತು.
Enfal 8:18
ಅವೆಲ್ಲವೂ ಅಲ್ಲಾಹನೇ ಮಾಡಿದ್ದು. ನಿಶ್ಚಯವಾಗಿಯೂ ಅಲ್ಲಾಹು ಸತ್ಯನಿಷೇಧಿಗಳ ತಂತ್ರವನ್ನು ದುರ್ಬಲಗೊಳಿಸುತ್ತಾನೆ.
Enfal 8:19
ನೀವು (ಸತ್ಯನಿಷೇಧಿಗಳು) ತೀರ್ಪನ್ನು ಬಯಸಿದ್ದೇ ಆದರೆ ಇಗೋ ಆ ತೀರ್ಪು (ಸೋಲು) ಬಂದುಬಿಟ್ಟಿದೆ.[1] ನೀವು (ಯುದ್ಧವನ್ನು) ನಿಲ್ಲಿಸುವುದಾದರೆ ಅದು ನಿಮಗೇ ಒಳ್ಳೆಯದು. ನೀವು ಪುನಃ (ಯುದ್ಧಕ್ಕೆ) ಮರಳುವುದಾದರೆ ನಾವು ಕೂಡ ಮರಳುವೆವು. ನಿಮ್ಮ ಸೈನ್ಯ ಎಷ್ಟು ದೊಡ್ಡದಿದ್ದರೂ ಅದರಿಂದ ನಿಮಗೇನೂ ಪ್ರಯೋಜನವಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಸತ್ಯವಿಶ್ವಾಸಿಗಳ ಜೊತೆಗಿದ್ದಾನೆ.
———
[1] ಅಬೂಜಹಲ್ ಸೇರಿದಂತೆ ಸತ್ಯನಿಷೇಧಿಗಳು ಮಕ್ಕಾದಿಂದ ಯುದ್ಧಕ್ಕೆ ಹೊರಡುವಾಗ ಕಅಬಾಲಯದ ಚಿಲಕವನ್ನು ಹಿಡಿದು ಪ್ರಾರ್ಥಿಸಿದರು: “ಓ ಅಲ್ಲಾಹ್! ನಮ್ಮಿಬ್ಬರ ಪೈಕಿ ನಿನಗೆ ಅವಿಧೇಯರಾಗಿರುವವರು ಮತ್ತು ಕುಟುಂಬ ಸಂಬಂಧಗಳನ್ನು ಕಡಿಯುವವರು ಯಾರೋ ಅವರನ್ನು ನೀನು ಈ ಯುದ್ಧದಲ್ಲಿ ಸೋಲಿಸು.” ಅವರ ದೃಷ್ಟಿಯಲ್ಲಿ ಮುಸಲ್ಮಾನರು ಅವಿಧೇಯರು ಮತ್ತು ಕುಟುಂಬ ಸಂಬಂಧ ಕಡಿಯುವವರಾಗಿದ್ದರು. ಆದರೆ ಯುದ್ಧದಲ್ಲಿ ಅಲ್ಲಾಹು ಮುಸಲ್ಮಾನರಿಗೆ ಜಯವನ್ನು ನೀಡಿ ಸತ್ಯನಿಷೇಧಿಗಳು ಏನು ಬೇಡಿದ್ದರೋ ಅದನ್ನೇ ದಯಪಾಲಿಸಿದ್ದನು.
Enfal 8:20
ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹು ಮತ್ತು ಅವನ ಸಂದೇಶವಾಹಕರ ಆಜ್ಞಾಪಾಲನೆ ಮಾಡಿರಿ. (ಅವರ ಆಜ್ಞೆಗಳನ್ನು) ಕೇಳುತ್ತಾ ಅವರಿಂದ ಹಿಂದೆ ಸರಿಯಬೇಡಿ.
Enfal 8:21
ನಾವು ಕೇಳಿದೆವು ಎಂದು ಹೇಳಿ ಏನೂ ಕೇಳದ ಜನರಂತೆ ನೀವಾಗಬೇಡಿ.
Enfal 8:22
ನಿಶ್ಚಯವಾಗಿಯೂ ಅಲ್ಲಾಹನ ದೃಷ್ಟಿಯಲ್ಲಿ ಜೀವಿಗಳಲ್ಲೇ ಅತ್ಯಂತ ಕೀಳಾಗಿರುವವರು (ಸತ್ಯವನ್ನು) ಅರ್ಥಮಾಡಿಕೊಳ್ಳದ ಕಿವುಡರು ಮತ್ತು ಮೂಕರಾಗಿದ್ದಾರೆ.
Enfal 8:23
ಅವರು (ಸತ್ಯವನ್ನು) ಕೇಳುವುದರಲ್ಲಿ ಒಳಿತಿದೆಯೆಂದು ಅಲ್ಲಾಹು ತಿಳಿದಿದ್ದರೆ ಅವರು ಅದನ್ನು ಕೇಳುವಂತೆ ಅವನು ಮಾಡುತ್ತಿದ್ದನು. ಇನ್ನು (ಅವರ ಇಚ್ಛೆಗೆ ವಿರುದ್ಧವಾಗಿ) ಅವರು ಅದನ್ನು ಕೇಳುವಂತೆ ಮಾಡಿದರೂ ಸಹ ಅವರು ಅದನ್ನು ಲೆಕ್ಕಿಸದೆ ವಿಮುಖರಾಗುತ್ತಿದ್ದರು.
Enfal 8:24
ಓ ಸತ್ಯವಿಶ್ವಾಸಿಗಳೇ! ನಿಮಗೆ ಜೀವ ತುಂಬುವ ವಿಷಯಕ್ಕೆ ಅಲ್ಲಾಹು ಮತ್ತು ಅವನ ಸಂದೇಶವಾಹಕರು ನಿಮ್ಮನ್ನು ಕರೆದರೆ ಅವರಿಗೆ ಉತ್ತರ ನೀಡಿರಿ. ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹು ಮನುಷ್ಯನ ಮತ್ತು ಅವನ ಹೃದಯದ ನಡುವೆ ಪರದೆಯಾಗಿ ಬರುತ್ತಾನೆ. ನಿಮ್ಮನ್ನು ಅವನ ಬಳಿಗೇ ಒಟ್ಟುಗೂಡಿಸಲಾಗುತ್ತದೆ.
Enfal 8:25
ಒಂದು ಪರೀಕ್ಷೆಯ (ಶಿಕ್ಷೆಯ) ಬಗ್ಗೆ ಜಾಗೃತರಾಗಿರಿ. (ಅದು ಎಂತಹ ಪರೀಕ್ಷೆಯೆಂದರೆ) ನಿಮ್ಮಲ್ಲಿ ಅಕ್ರಮವೆಸಗಿದವರಿಗೆ ಮಾತ್ರ ಅದು ಬಾಧಿಸುವುದಿಲ್ಲ. ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹು ಅತಿಕಠೋರವಾಗಿ ಶಿಕ್ಷಿಸುತ್ತಾನೆ.
Enfal 8:26
ನೀವು ಭೂಮಿಯಲ್ಲಿ ದುರ್ಬಲರು ಮತ್ತು ಅಲ್ಪಸಂಖ್ಯಾತರಾಗಿದ್ದ ಸಂದರ್ಭವನ್ನು ಸ್ಮರಿಸಿ. ಜನರು (ಶತ್ರುಗಳು) ನಿಮ್ಮನ್ನು ಅಪಹರಿಸುವರೋ ಎಂಬ ಭಯ ನಿಮ್ಮನ್ನು ಕಾಡುತ್ತಿತ್ತು. ನಂತರ ಅವನು ನಿಮಗೆ ಆಶ್ರಯವನ್ನು ಒದಗಿಸಿದನು, ತನ್ನ ಸಹಾಯದಿಂದ ನಿಮಗೆ ಶಕ್ತಿ ನೀಡಿದನು ಮತ್ತು ಶುದ್ಧ ವಸ್ತುಗಳನ್ನು ನಿಮಗೆ ಆಹಾರವಾಗಿ ನೀಡಿದನು. ನೀವು ಕೃತಜ್ಞರಾಗುವುದಕ್ಕಾಗಿ.
Enfal 8:27
ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನಿಗೆ ಮತ್ತು ಸಂದೇಶವಾಹಕರಿಗೆ ವಿಶ್ವಾಸದ್ರೋಹ ಮಾಡಬೇಡಿ.[1] ನಿಮ್ಮ ಮೇಲೆ ವಿಶ್ವಾಸವಿಡಲಾದ ವಿಷಯಗಳಲ್ಲೂ ವಿಶ್ವಾಸದ್ರೋಹ ಮಾಡಬೇಡಿ. (ಅದರ ಫಲಿತಾಂಶವೇನೆಂದು) ನೀವು ತಿಳಿದಿದ್ದೂ ಸಹ.
———
[1] ಅಲ್ಲಾಹನಿಗೆ ಮತ್ತು ಸಂದೇಶವಾಹಕರಿಗೆ ವಿಶ್ವಾಸದ್ರೋಹ ಮಾಡುವುದು ಎಂದರೆ ಜನರ ಮುಂಭಾಗದಲ್ಲಿ ಅವರ ಆಜ್ಞೆಗಳನ್ನು ಅನುಸರಿಸುವುದು ಮತ್ತು ಏಕಾಂಗಿಯಾಗಿರುವಾಗ ಅಥವಾ ಖಾಸಗಿ ಜೀವನದಲ್ಲಿ ಅವರ ಆಜ್ಞೆಗಳನ್ನು ಧಿಕ್ಕರಿಸುವುದು. ಅದೇ ರೀತಿ ಅಲ್ಲಾಹು ಮತ್ತು ಅವನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಡ್ಡಾಯಗೊಳಿಸಿದ ಕಾರ್ಯವನ್ನು ಬಿಟ್ಟುಬಿಡುವುದು ಮತ್ತು ಅವರು ವಿರೋಧಿಸಿದ ಕಾರ್ಯವನ್ನು ಮಾಡುವುದು.
Enfal 8:28
ತಿಳಿಯಿರಿ! ನಿಶ್ಚಯವಾಗಿಯೂ ನಿಮ್ಮ ಸಂಪತ್ತು ಮತ್ತು ನಿಮ್ಮ ಮಕ್ಕಳು ನಿಮಗೊಂದು ಪರೀಕ್ಷೆಯಾಗಿದ್ದಾರೆ. ಮಹಾ ಪ್ರತಿಫಲವಿರುವುದು ಅಲ್ಲಾಹನ ಬಳಿಯಲ್ಲಿ ಮಾತ್ರ.
Enfal 8:29
ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನನ್ನು ಭಯಪಡುವುದಾದರೆ ಅವನು ನಿಮಗೆ ಸತ್ಯಾಸತ್ಯವನ್ನು ವಿವೇಚಿಸಿ ತಿಳಿಯುವ ಶಕ್ತಿಯನ್ನು ನೀಡುವನು. ಅವನು ನಿಮ್ಮ ಪಾಪಗಳನ್ನು ಅಳಿಸುವನು ಮತ್ತು ನಿಮ್ಮನ್ನು ಕ್ಷಮಿಸುವನು. ಅಲ್ಲಾಹು ಮಹಾ ಔದಾರ್ಯದ ಒಡೆಯನಾಗಿದ್ದಾನೆ.
Enfal 8:30
ಸತ್ಯನಿಷೇಧಿಗಳು ನಿಮ್ಮನ್ನು ಸೆರೆ ಹಿಡಿಯಲು ಅಥವಾ ಕೊಲ್ಲಲು ಅಥವಾ ಊರಿನಿಂದ ಓಡಿಸಲು ಸಂಚು ರೂಪಿಸುತ್ತಿದ್ದ ಸಂದರ್ಭ. ಅವರು ಸಂಚು ರೂಪಿಸುತ್ತಾರೆ. ಅಲ್ಲಾಹು ಕೂಡ ಸಂಚು ರೂಪಿಸುತ್ತಾನೆ. ಸಂಚು ರೂಪಿಸುವುದರಲ್ಲಿ ಅಲ್ಲಾಹು ಅತಿಶ್ರೇಷ್ಠನಾಗಿದ್ದಾನೆ.
Enfal 8:31
ಅವರಿಗೆ ನಮ್ಮ ವಚನಗಳನ್ನು ಪಠಿಸಲಾದಾಗ, ಅವರು ಹೇಳುತ್ತಾರೆ: “ನಾವು ಕೇಳಿದೆವು. ನಾವು ಇಚ್ಛಿಸಿದರೆ ಇದರಂತೆಯೇ ಹೇಳುವೆವು. ಇದು ಪ್ರಾಚೀನ ಜನರ ಕಟ್ಟುಕಥೆಗಳಲ್ಲದೆ ಇನ್ನೇನೂ ಅಲ್ಲ.”
Enfal 8:32
ಅವರು (ಸತ್ಯನಿಷೇಧಿಗಳು) ಹೇಳಿದ ಸಂದರ್ಭ(ವನ್ನು ಸ್ಮರಿಸಿ): “ಓ ಅಲ್ಲಾಹ್! ಇದು ನಿನ್ನ ಕಡೆಯ ಸತ್ಯವಾಗಿದ್ದರೆ ನಮ್ಮ ಮೇಲೆ ಆಕಾಶದಿಂದ ಕಲ್ಲಿನ ಮಳೆಯನ್ನು ಸುರಿಸು ಅಥವಾ ನಮಗೆ ಯಾತನಾಮಯ ಶಿಕ್ಷೆಯನ್ನು ನೀಡು.”
Enfal 8:33
ನೀವು ಅವರ ನಡುವೆಯಿರುವಾಗ ಅಲ್ಲಾಹು ಅವರನ್ನು ಶಿಕ್ಷಿಸುವುದಿಲ್ಲ. ಅವರು ಕ್ಷಮೆಯಾಚಿಸುತ್ತಿರುವ ತನಕ ಅಲ್ಲಾಹು ಅವರನ್ನು ಶಿಕ್ಷಿಸುವುದಿಲ್ಲ.
Enfal 8:34
ಅಲ್ಲಾಹು ಅವರನ್ನೇಕೆ ಶಿಕ್ಷಿಸಬಾರದು? ಅವರು ಪವಿತ್ರ ಮಸೀದಿಯಿಂದ ಜನರನ್ನು ತಡೆಯುತ್ತಿದ್ದಾರೆ. ಅವರಂತೂ ಅದರ ಪರಿಪಾಲಕರಲ್ಲ. ದೇವಭಯವುಳ್ಳವರೇ ಅದರ ಪರಿಪಾಲಕರು. ಆದರೆ ಅವರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.
Enfal 8:35
ಭವನದಲ್ಲಿ (ಕಅಬಾಲಯದಲ್ಲಿ) ಅವರು ಮಾಡುವ ನಮಾಝ್ ಶಿಳ್ಳೆ ಹಾಕುವುದು ಮತ್ತು ಚಪ್ಪಾಳೆ ತಟ್ಟುವುದಕ್ಕೆ ಮಾತ್ರ ಸೀಮಿತವಾಗಿದೆ. ನೀವು ಸತ್ಯವನ್ನು ನಿಷೇಧಿಸಿದ ಕಾರಣ ಶಿಕ್ಷೆಯ ರುಚಿಯನ್ನು ನೋಡಿರಿ.
Enfal 8:36
ನಿಶ್ಚಯವಾಗಿಯೂ ಸತ್ಯನಿಷೇಧಿಗಳು ಅಲ್ಲಾಹನ ಮಾರ್ಗದಿಂದ (ಜನರನ್ನು) ತಡೆಯಲು ತಮ್ಮ ಧನವನ್ನು ಖರ್ಚು ಮಾಡುತ್ತಾರೆ. ಅವರು ಮುಂದೆಯೂ ಅದನ್ನು ಖರ್ಚು ಮಾಡುವರು. ನಂತರ ಅದು ಅವರಿಗೆ ವ್ಯಥೆಯಾಗಿ ಪರಿಣಮಿಸುವುದು. ನಂತರ ಅವರನ್ನು ಸದೆಬಡಿಯಲಾಗುವುದು. ಸತ್ಯನಿಷೇಧಿಗಳನ್ನು ನರಕಾಗ್ನಿಗೆ ಒಟ್ಟುಗೂಡಿಸಲಾಗುವುದು.
Enfal 8:37
ಅದು ಅಲ್ಲಾಹು ಶುದ್ಧದಿಂದ ಹೊಲಸನ್ನು ಪ್ರತೇಕಿಸುವುದಕ್ಕಾಗಿ ಮತ್ತು ಹೊಲಸನ್ನು ಪರಸ್ಪರ ಒಟ್ಟುಗೂಡಿಸಿ, ನಂತರ ಅವೆಲ್ಲವನ್ನೂ ನರಕದಲ್ಲಿ ಹಾಕುವುದಕ್ಕಾಗಿದೆ. ಅವರೇ ನಷ್ಟಹೊಂದಿದವರು.
Enfal 8:38
ಸತ್ಯನಿಷೇಧಿಗಳೊಡನೆ, ಅವರು (ಸತ್ಯನಿಷೇಧದಿಂದ) ಹಿಂದೆ ಸರಿದರೆ, ಅವರು ಹಿಂದೆ ಮಾಡಿದ ದುಷ್ಕರ್ಮಗಳನ್ನು ಅವರಿಗೆ ಕ್ಷಮಿಸಲಾಗುವುದು ಎಂದು ಹೇಳಿರಿ. ಆದರೆ ಅವರು (ತಮ್ಮ ಹಿಂದಿನ ಸ್ಥಿತಿಗೇ) ಮರಳುವುದಾದರೆ, ಪೂರ್ವಜರ ವಿಷಯದಲ್ಲಿ (ಅಲ್ಲಾಹನ) ದಂಡನಾಕ್ರಮವು ಈಗಾಗಲೇ ಸಂಭವಿಸಿ ಬಿಟ್ಟಿದೆ.
Enfal 8:39
ಕ್ಷೋಭೆ ನಿವಾರಣೆಯಾಗುವ ತನಕ ಮತ್ತು ಧರ್ಮವು ಸಂಪೂರ್ಣವಾಗಿ ಅಲ್ಲಾಹನಿಗಾಗುವ ತನಕ ಅವರೊಡನೆ ಯುದ್ಧ ಮಾಡಿರಿ. ಅವರು ಹಿಂದೆ ಸರಿದರೆ, ನಿಶ್ಚಯವಾಗಿಯೂ ಅಲ್ಲಾಹು ಅವರು ಮಾಡುವ ಕರ್ಮಗಳನ್ನು ನೋಡುತ್ತಿದ್ದಾನೆ.
Enfal 8:40
ಅವರೇನಾದರೂ ಕಡೆಗಣಿಸಿದರೆ, ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹು ನಿಮ್ಮ ರಕ್ಷಕನು. ಅವನು ಎಷ್ಟು ಉತ್ತಮ ರಕ್ಷಕ! ಎಷ್ಟು ಉತ್ತಮ ಸಹಾಯಕ!
Enfal 8:41
ತಿಳಿಯಿರಿ! ನೀವು (ಯುದ್ಧದಲ್ಲಿ) ಗಳಿಸಿದ ಯಾವುದೇ ವಸ್ತುವಿದ್ದರೂ, ಅದರ ಐದನೇ ಒಂದು ಭಾಗವು ಅಲ್ಲಾಹನಿಗೆ, ಸಂದೇಶವಾಹಕರಿಗೆ, ಅವರ ನಿಕಟ ಸಂಬಂಧಿಕರಿಗೆ, ಅನಾಥರಿಗೆ, ಬಡವರಿಗೆ ಮತ್ತು ಪ್ರಯಾಣಿಕರಿಗೆ ನೀಡತಕ್ಕದ್ದು.[1] ನೀವು ಅಲ್ಲಾಹನಲ್ಲಿ ಮತ್ತು ಸತ್ಯಾಸತ್ಯ ವಿವೇಚನೆಯ ದಿನದಂದು—ಎರಡು ಬಣಗಳು ಮುಖಾಮುಖಿಯಾದ ದಿನದಂದು—ನಮ್ಮ ದಾಸನಿಗೆ ನಾವು ಅವತೀರ್ಣಗೊಳಿಸಿದ ಸಂದೇಶದಲ್ಲಿ ವಿಶ್ವಾಸವಿಟ್ಟಿದ್ದರೆ. ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
———
[1] ಯುದ್ಧಾರ್ಜಿತ ಸೊತ್ತನ್ನು ಐದು ಭಾಗಗಳಾಗಿ ವಿಂಗಡಿಸಬೇಕು. ನಾಲ್ಕು ಭಾಗಗಳನ್ನು ಯೋಧರಿಗೆ ವಿತರಿಸಬೇಕು. ಉಳಿದ ಒಂದು ಭಾಗವನ್ನು ಪುನಃ ಐದು ಭಾಗಗಳಾಗಿ ವಿಂಗಡಿಸಿ, ಒಂದು ಭಾಗವನ್ನು ಸಂದೇಶವಾಹಕರಿಗೆ (ಅಂದರೆ ಧಾರ್ಮಿಕ ಕಾರ್ಯಗಳಿಗೆ), ಇನ್ನೊಂದನ್ನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕುಟುಂಬಕ್ಕೆ (ಬನೂ ಹಾಶಿಮ್ ಮತ್ತು ಬನೂ ಮುತ್ತಲಿಬ್ ಕುಟುಂಬಗಳಿಗೆ), ಮೂರನೇ ಭಾಗವನ್ನು ಅನಾಥರಿಗೆ, ನಾಲ್ಕನೇ ಭಾಗವನ್ನು ಬಡವರಿಗೆ ಮತ್ತು ಕೊನೆಯ ಭಾಗವನ್ನು ಪ್ರಯಾಣಿಕರಿಗೆ ವಿತರಿಸಬೇಕು.
Enfal 8:42
ನೀವು ಕಣಿವೆಯಲ್ಲಿ (ಮದೀನಕ್ಕೆ) ಸಮೀಪವಿರುವ ತೀರದಲ್ಲಿ, ಅವರು (ಶತ್ರುಗಳು) ದೂರದ ತೀರದಲ್ಲಿ ಮತ್ತು ವ್ಯಾಪಾರ ತಂಡವು ನಿಮ್ಮ ಕೆಳಭಾಗದಲ್ಲಿದ್ದ ಸಂದರ್ಭ. ನೀವು ಯುದ್ಧಕ್ಕೆ ಸಮಯ ನಿಶ್ಚಯಿಸಿದ್ದರೆ, ಆ ನಿಶ್ಚಿತ ಸಮಯದ ಬಗ್ಗೆ ನಿಮ್ಮಲ್ಲಿ ಭಿನ್ನಮತ ತಲೆದೋರುತ್ತಿತ್ತು. ನಾಶವಾಗುವವನು ಸ್ಪಷ್ಟ ಸಾಕ್ಷ್ಯವನ್ನು ನೋಡಿಯೇ ನಾಶವಾಗಬೇಕು ಮತ್ತು ಬದುಕುಳಿಯುವವನು ಸ್ಪಷ್ಟ ಸಾಕ್ಷ್ಯವನ್ನು ನೋಡಿಯೇ ಬದುಕುಳಿಯಬೇಕು ಎಂಬ ಈಗಾಗಲೇ ಮಾಡಿದ ತೀರ್ಮಾನವನ್ನು ಕಾರ್ಯರೂಪಕ್ಕೆ ತರಲು ಅಲ್ಲಾಹು ಹೀಗೆ ಮಾಡಿದನು. ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
Enfal 8:43
ಅಲ್ಲಾಹು ನಿಮ್ಮ ಕನಸಿನಲ್ಲಿ ಅವರನ್ನು ಕಡಿಮೆ ಸಂಖ್ಯೆಯಲ್ಲಿ ತೋರಿಸಿದ ಸಂದರ್ಭ(ವನ್ನು ಸ್ಮರಿಸಿ). ಅವನು ಅವರನ್ನು ದೊಡ್ಡ ಸಂಖ್ಯೆಯಲ್ಲಿ ತೋರಿಸಿದ್ದರೆ, ನೀವು ಎದೆಗುಂದುತ್ತಿದ್ದಿರಿ ಮತ್ತು (ಯುದ್ಧ ಮಾಡಬೇಕೋ ಎಂಬ) ವಿಷಯದಲ್ಲಿ ಭಿನ್ನಮತ ತಳೆಯುತ್ತಿದ್ದಿರಿ. ಆದರೆ ಅಲ್ಲಾಹು ನಿಮ್ಮನ್ನು ಕಾಪಾಡಿದನು. ನಿಶ್ಚಯವಾಗಿಯೂ ಅವನು ಹೃದಯಗಳಲ್ಲಿರುವುದನ್ನು ತಿಳಿಯುತ್ತಾನೆ.
Enfal 8:44
ನೀವು ಅವರನ್ನು ಮುಖಾಮುಖಿಯಾದ ಸಂದರ್ಭದಲ್ಲಿ ಅವನು ನಿಮಗೆ ಅವರನ್ನು ಕಡಿಮೆ ಸಂಖ್ಯೆಯಲ್ಲಿ ಮತ್ತು ಅವರಿಗೆ ನಿಮ್ಮನ್ನು ಕಡಿಮೆ ಸಂಖ್ಯೆಯಲ್ಲಿ ತೋರಿಸಿಕೊಟ್ಟ ಸಂದರ್ಭ. ಇದೇಕೆಂದರೆ, ಅಲ್ಲಾಹು ಈಗಾಗಲೇ ಮಾಡಿದ ತೀರ್ಮಾನವನ್ನು ಕಾರ್ಯರೂಪಕ್ಕೆ ತರುವುದಕ್ಕಾಗಿ. ವಿಷಯಗಳೆಲ್ಲವೂ ಅಲ್ಲಾಹನ ಬಳಿಗೇ ಮರಳುತ್ತವೆ.
Enfal 8:45
ಓ ಸತ್ಯವಿಶ್ವಾಸಿಗಳೇ! ನೀವು ವೈರಿಗಳಿಗೆ ಮುಖಾಮುಖಿಯಾದರೆ ದೃಢವಾಗಿ ನಿಲ್ಲಿರಿ ಮತ್ತು ಅಲ್ಲಾಹನನ್ನು ಅತ್ಯಧಿಕವಾಗಿ ಸ್ಮರಿಸಿರಿ. ನೀವು ಯಶಸ್ವಿಯಾಗುವುದಕ್ಕಾಗಿ.
Enfal 8:46
ನೀವು ಅಲ್ಲಾಹು ಮತ್ತು ಅವನ ಸಂದೇಶವಾಹಕರ ಆಜ್ಞಾಪಾಲನೆ ಮಾಡಿರಿ. ಭಿನ್ನರಾಗಬೇಡಿ. ಹಾಗೇನಾದರೂ ಆದರೆ ನೀವು ಧೈರ್ಯಗೆಡುವಿರಿ ಮತ್ತು ನಿಮ್ಮ ಶಕ್ತಿ ಕುಸಿಯಬಹುದು. ಸ್ಥೈರ್ಯದಿಂದಿರಿ. ನಿಶ್ಚಯವಾಗಿಯೂ ಅಲ್ಲಾಹು ಸ್ಥೈರ್ಯವಂತರನ್ನು ಪ್ರೀತಿಸುತ್ತಾನೆ.
Enfal 8:47
ದರ್ಪದಿಂದ ಜನರ ಮುಂದೆ ಪ್ರದರ್ಶನ ಮಾಡುತ್ತಾ ಮತ್ತು ಅಲ್ಲಾಹನ ಮಾರ್ಗದಿಂದ (ಜನರನ್ನು) ತಡೆಯುವುದಕ್ಕಾಗಿ ತಮ್ಮ ಮನೆಗಳಿಂದ ಹೊರಟವರಂತೆ ನೀವಾಗಬೇಡಿ.[1] ಅವರು ಮಾಡುವುದನ್ನು ಅಲ್ಲಾಹು ಸೂಕ್ಷ್ಮವಾಗಿ ತಿಳಿಯುತ್ತಾನೆ.
———
[1] ಮಕ್ಕಾದ ಸತ್ಯನಿಷೇಧಿಗಳು ತಮ್ಮ ವ್ಯಾಪಾರ ತಂಡವನ್ನು ಕಾಪಾಡುವುದಕ್ಕಾಗಿ ಮತ್ತು ಮುಸಲ್ಮಾನರನ್ನು ನಿರ್ನಾಮ ಮಾಡುವುದಕ್ಕಾಗಿ ಮಕ್ಕಾದಿಂದ ಹೊರಟ ಸ್ಥಿತಿಯನ್ನು ಇಲ್ಲಿ ವಿವರಿಸಲಾಗಿದೆ.
Enfal 8:48
ಶೈತಾನನು ಅವರಿಗೆ ಅವರ ಕರ್ಮಗಳನ್ನು ಅಲಂಕರಿಸಿ ತೋರಿಸಿದ ಸಂದರ್ಭ. ಅವನು (ಶೈತಾನನು) ಹೇಳಿದನು: “ಇಂದು ಜನರಲ್ಲಿ ಯಾರಿಗೂ ನಿಮ್ಮನ್ನು ಸದೆಬಡಿಯಲು ಸಾಧ್ಯವಿಲ್ಲ. ನಿಶ್ಚಯವಾಗಿಯೂ ನಾನು ನಿಮ್ಮ ರಕ್ಷಣೆಗಿದ್ದೇನೆ.” ಆದರೆ ಎರಡು ಬಣಗಳು ಪರಸ್ಪರ ಮುಖಾಮುಖಿಯಾದಾಗ ಅವನು ಬೆನ್ನು ತಿರುಗಿಸಿ ಓಡುತ್ತಾ ಹೇಳಿದನು: “ನಾನು ನಿಮ್ಮಿಂದ ಸಂಪೂರ್ಣ ಮುಕ್ತನಾಗಿದ್ದೇನೆ. ನಿಮಗೆ ನೋಡಲು ಸಾಧ್ಯವಾಗದ ದೃಶ್ಯಗಳು ನನಗೆ ಕಾಣುತ್ತಿವೆ. ನಿಶ್ಚಯವಾಗಿಯೂ ನಾನು ಅಲ್ಲಾಹನನ್ನು ಭಯಪಡುತ್ತೇನೆ. ಅಲ್ಲಾಹು ಅತಿಕಠಿಣವಾಗಿ ಶಿಕ್ಷಿಸುವವನಾಗಿದ್ದಾನೆ.”
Enfal 8:49
“ಇವರನ್ನು ಇವರ ಧರ್ಮವು ಮೋಸಗೊಳಿಸಿದೆ” ಎಂದು ಕಪಟವಿಶ್ವಾಸಿಗಳು ಮತ್ತು ಹೃದಯದಲ್ಲಿ ರೋಗವಿರುವವರು ಹೇಳುತ್ತಿದ್ದ ಸಂದರ್ಭ. ಯಾರು ಅಲ್ಲಾಹನಲ್ಲಿ ಭರವಸೆಯಿಡುತ್ತಾರೋ (ಅವರಿಗೆ ಅಲ್ಲಾಹು ಸಾಕು). ನಿಶ್ಚಯವಾಗಿಯೂ ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
Enfal 8:50
ದೇವದೂತರುಗಳು ಸತ್ಯನಿಷೇಧಿಗಳ ಆತ್ಮಗಳನ್ನು ವಶಪಡಿಸುವ ಸಂದರ್ಭವನ್ನು ನೀವು ನೋಡಿರುತ್ತಿದ್ದರೆ! ಅವರು ಅವರ ಮುಖಗಳಿಗೆ ಮತ್ತು ಬೆನ್ನುಗಳಿಗೆ ಥಳಿಸುತ್ತಾ (ಹೇಳುತ್ತಾರೆ): “ಜ್ವಲಿಸುವ ಅಗ್ನಿಯ ಶಿಕ್ಷೆಯ ರುಚಿಯನ್ನು ನೋಡಿ.
Enfal 8:51
ನಿಮ್ಮ ಕೈಗಳು ಮುಂದಕ್ಕೆ ಕಳುಹಿಸಿದ (ದುಷ್ಕರ್ಮಗಳೇ) ಇದಕ್ಕೆ ಕಾರಣ. ನಿಶ್ಚಯವಾಗಿಯೂ ಅಲ್ಲಾಹು ದಾಸರೊಡನೆ ಸ್ವಲ್ಪವೂ ಅನ್ಯಾಯ ಮಾಡುವುದಿಲ್ಲ.”
Enfal 8:52
ಫರೋಹನ ಜನರು ಮತ್ತು ಅವರಿಗಿಂತ ಮೊದಲಿನವರ ಸ್ಥಿತಿಯಂತೆ. ಅವರು ಅಲ್ಲಾಹನ ವಚನಗಳನ್ನು ನಿಷೇಧಿಸಿದರು. ಆಗ ಅಲ್ಲಾಹು ಅವರನ್ನು ಅವರ ಪಾಪಗಳಿಗಾಗಿ ಹಿಡಿದನು. ನಿಶ್ಚಯವಾಗಿಯೂ ಅಲ್ಲಾಹು ಮಹಾ ಶಕ್ತಿಶಾಲಿ ಮತ್ತು ಕಠಿಣವಾಗಿ ಶಿಕ್ಷಿಸುವವನಾಗಿದ್ದಾನೆ.
Enfal 8:53
ಅದೇಕೆಂದರೆ, ಅಲ್ಲಾಹು ಯಾವುದೇ ಒಂದು ಜನತೆಗೆ ನೀಡಿದ ಅನುಗ್ರಹವನ್ನು, ಅವರು ಸ್ವಯಂ ಅವರಲ್ಲಿ ಬದಲಾವಣೆ ತರುವವರೆಗೆ ಬದಲಾಯಿಸುವುದಿಲ್ಲ ಎಂಬುದರಿಂದಾಗಿದೆ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
Enfal 8:54
ಫರೋಹನ ಜನರು ಮತ್ತು ಅವರಿಗಿಂತ ಮೊದಲಿನವರ ಸ್ಥಿತಿಯಂತೆ. ಅವರು ಅವರ ಪರಿಪಾಲಕನ (ಅಲ್ಲಾಹನ) ವಚನಗಳನ್ನು ನಿಷೇಧಿಸಿದರು. ಆಗ ಅವರ ಪಾಪಗಳಿಗಾಗಿ ನಾವು ಅವರನ್ನು ನಾಶ ಮಾಡಿದೆವು. ಫರೋಹನ ಜನರನ್ನು ನಾವು ಮುಳುಗಿಸಿ ಕೊಂದೆವು. ಅವರೆಲ್ಲರೂ ಅಕ್ರಮಿಗಳಾಗಿದ್ದರು.
Enfal 8:55
ನಿಶ್ಚಯವಾಗಿಯೂ ಅಲ್ಲಾಹನ ದೃಷ್ಟಿಯಲ್ಲಿ ಸತ್ಯನಿಷೇಧಿಗಳು ಜೀವಿಗಳಲ್ಲೇ ಅತ್ಯಂತ ಕೀಳಾಗಿದ್ದಾರೆ. ಅವರು ವಿಶ್ವಾಸವಿಡುವುದಿಲ್ಲ.
Enfal 8:56
ನಿಮ್ಮೊಡನೆ ಕರಾರು ಮಾಡಿಕೊಂಡವರು ಅವರಲ್ಲಿದ್ದಾರೆ. ಆದರೆ ಪ್ರತಿ ಬಾರಿಯೂ ಅವರು ತಮ್ಮ ಕರಾರನ್ನು ಉಲ್ಲಂಘಿಸುತ್ತಾರೆ. ಅವರು ಅಲ್ಲಾಹನನ್ನು ಭಯಪಡುವುದೇ ಇಲ್ಲ.
Enfal 8:57
ನೀವು ಯುದ್ಧದಲ್ಲಿ ಅವರಿಗೆ ಮುಖಾಮುಖಿಯಾದರೆ, ಅವರ ಹಿಂದೆ ಇರುವವರೂ ಭಯದಿಂದ ನಡುಗುವಂತೆ ಅವರನ್ನು ಸದೆಬಡಿಯಿರಿ. ಅವರು ಅದನ್ನು ನೆನಪಿಡುವುದಕ್ಕಾಗಿ.
Enfal 8:58
ನೀವು ಯಾವುದೇ ಜನತೆಯಿಂದ ವಿಶ್ವಾಸದ್ರೋಹವನ್ನು ಭಯಪಡುವುದಾದರೆ, (ಎರಡು ಪಕ್ಷಗಳೂ ಕರಾರಿಲ್ಲದೆ) ಸಮಾನರಾಗಲು ಅವರ ಕರಾರನ್ನು ಅವರಿಗೆ ಎಸೆದು ಬಿಡಿ.[1] ನಿಶ್ಚಯವಾಗಿಯೂ ಅಲ್ಲಾಹು ವಿಶ್ವಾಸದ್ರೋಹ ಮಾಡುವವರನ್ನು ಇಷ್ಟಪಡುವುದಿಲ್ಲ.
———
[1] ಕರಾರಿನಲ್ಲಿರುವ ಶತ್ರು ಪಕ್ಷದವರು ರಹಸ್ಯವಾಗಿ ಮುಸಲ್ಮಾನರ ಮೇಲೆ ದಾಳಿ ಮಾಡುವ ಸೂಚನೆಯೇನಾದರೂ ಸಿಕ್ಕಿದರೆ ಮುಸಲ್ಮಾನರು, “ನೀವು ಕರಾರನ್ನು ಪಾಲಿಸುವುದಿಲ್ಲವಾದರೆ ನಾವು ಕೂಡ ಪಾಲಿಸುವುದಿಲ್ಲ. ಇನ್ನು ಮುಂದೆ ನಮ್ಮ ಮತ್ತು ನಿಮ್ಮ ನಡುವೆ ಯಾವುದೇ ಕರಾರಿಲ್ಲ” ಎಂದು ಅವರಿಗೆ ಸ್ಪಷ್ಟವಾಗಿ ತಿಳಿಸಬೇಕು.
Enfal 8:59
ನಾವು ತಪ್ಪಿಸಿಕೊಂಡಿದ್ದೇವೆಂದು ಸತ್ಯನಿಷೇಧಿಗಳು ಭಾವಿಸದಿರಲಿ. ನಿಶ್ಚಯವಾಗಿಯೂ ಅವರು ಸೋಲಿಸಲಾರರು.
Enfal 8:60
ಅವರನ್ನು ಎದುರಿಸಲು ನಿಮಗೆ ಸಾಧ್ಯವಾಗುವ ಎಲ್ಲ ಶಕ್ತಿಯನ್ನು ಮತ್ತು ಅಶ್ವಸೇನೆಯನ್ನು ಸಿದ್ಧಗೊಳಿಸಿ. ಅದರಿಂದ ನೀವು ಅಲ್ಲಾಹನ ಶತ್ರುವನ್ನು ಮತ್ತು ನಿಮ್ಮ ಶತ್ರುವನ್ನು ಹಾಗೂ ಅವರ ಹೊರತಾದ—ನೀವು ತಿಳಿದಿರದ, ಆದರೆ ಅಲ್ಲಾಹು ತಿಳಿದಿರುವ—ಇತರರನ್ನು ಭಯಪಡಿಸಬಹುದು. ನೀವು ಅಲ್ಲಾಹನ ಮಾರ್ಗದಲ್ಲಿ ಏನು ಖರ್ಚು ಮಾಡಿದರೂ ಅದರ ಪೂರ್ಣ ಪ್ರತಿಫಲವನ್ನು ನಿಮಗೆ ನೀಡಲಾಗುವುದು. ನಿಮಗೆ ಯಾವುದೇ ಅನ್ಯಾಯವಾಗುವುದಿಲ್ಲ.
Enfal 8:61
ಆದರೆ ಅವರು (ಯುದ್ಧವನ್ನು ತೊರೆದು) ಶಾಂತಿಯ ಕಡೆಗೆ ಒಲವು ತೋರಿದರೆ ನೀವು ಕೂಡ ಅದರ ಕಡೆಗೆ ಒಲವು ತೋರಿರಿ ಮತ್ತು ಅಲ್ಲಾಹನಲ್ಲಿ ಭರವಸೆಯಿಡಿ. ನಿಶ್ಚಯವಾಗಿಯೂ ಅವನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
Enfal 8:62
ಅವರು ನಿಮಗೆ ದ್ರೋಹ ಬಗೆಯಲು ಬಯಸಿದರೆ, ನಿಶ್ಚಯವಾಗಿಯೂ ನಿಮಗೆ ಅಲ್ಲಾಹು ಸಾಕು. ತನ್ನ ಸಹಾಯದಿಂದ ಮತ್ತು ಸತ್ಯವಿಶ್ವಾಸಿಗಳ ಮೂಲಕ ನಿಮಗೆ ಶಕ್ತಿ ನೀಡಿದ್ದು ಅವನೇ.
Enfal 8:63
ಅವನು ಅವರ (ಸತ್ಯವಿಶ್ವಾಸಿಗಳ) ಹೃದಯಗಳನ್ನು ಬೆಸೆದನು. ಭೂಮಿಯಲ್ಲಿರುವ ಎಲ್ಲಾ ವಸ್ತುಗಳನ್ನು ಖರ್ಚು ಮಾಡಿದರೂ ಸಹ ನಿಮಗೆ ಅವರ ಹೃದಯಗಳನ್ನು ಬೆಸೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಅಲ್ಲಾಹು ಅವರನ್ನು ಒಂದುಗೂಡಿಸಿದನು. ನಿಶ್ಚಯವಾಗಿಯೂ ಅವನು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
Enfal 8:64
ಓ ಪ್ರವಾದಿಯವರೇ! ನಿಮಗೆ ಮತ್ತು ನಿಮ್ಮನ್ನು ಹಿಂಬಾಲಿಸಿದ ಸತ್ಯವಿಶ್ವಾಸಿಗಳಿಗೆ ಅಲ್ಲಾಹು ಸಾಕು.
Enfal 8:65
ಓ ಪ್ರವಾದಿಯವರೇ! ಸತ್ಯವಿಶ್ವಾಸಿಗಳನ್ನು ಯುದ್ಧ ಮಾಡಲು ಉತ್ತೇಜಿಸಿರಿ. ನಿಮ್ಮಲ್ಲಿ ಇಪ್ಪತ್ತು ಸ್ಥೈರ್ಯವಂತರಿದ್ದರೆ ಅವರು ಇನ್ನೂರು ವೈರಿಗಳನ್ನು ಸದೆಬಡಿಯುವರು. ನಿಮ್ಮಲ್ಲಿ ನೂರು ಮಂದಿಯಿದ್ದರೆ ಅವರು ಸಾವಿರ ಸತ್ಯನಿಷೇಧಿಗಳನ್ನು ಸದೆಬಡಿಯುವರು. ಅದೇಕೆಂದರೆ ಅವರು (ಸತ್ಯನಿಷೇಧಿಗಳು) ಅರ್ಥಮಾಡಿಕೊಳ್ಳದ ಜನರಾಗಿದ್ದಾರೆ.
Enfal 8:66
ಈಗ ಅಲ್ಲಾಹು ನಿಮಗೆ ರಿಯಾಯಿತಿ ನೀಡಿದ್ದಾನೆ ಮತ್ತು ನಿಮ್ಮಲ್ಲಿ ಬಲಹೀನತೆಯಿದೆಯೆಂದು ತಿಳಿದಿದ್ದಾನೆ. ಆದ್ದರಿಂದ, ನಿಮ್ಮಲ್ಲಿ ನೂರು ಸ್ಥೈರ್ಯವಂತರಿದ್ದರೆ ಅವರು ಇನ್ನೂರು ಮಂದಿಯನ್ನು ಸದೆಬಡಿಯುವರು ಮತ್ತು ನಿಮ್ಮಲ್ಲಿ ಸಾವಿರ ಮಂದಿಯಿದ್ದರೆ ಅವರು ಅಲ್ಲಾಹನ ಅಪ್ಪಣೆಯಿಂದ ಎರಡು ಸಾವಿರ ವೈರಿಗಳನ್ನು ಸದೆಬಡಿಯುವರು. ಅಲ್ಲಾಹು ಸ್ಥೈರ್ಯವಂತರ ಜೊತೆಗಿದ್ದಾನೆ.
Enfal 8:67
(ಶತ್ರುಗಳನ್ನು ಸದೆಬಡಿದು) ನಾಡಿನಲ್ಲಿ ಪ್ರಾಬಲ್ಯ ಪಡೆಯುವ ತನಕ ಪ್ರವಾದಿಯ ಕೈಯಲ್ಲಿ ಯುದ್ಧ ಖೈದಿಗಳಿರುವುದು ಸರಿಯಲ್ಲ.[1] ನೀವು ಇಹಲೋಕದ ಐಶ್ವರ್ಯವನ್ನು ಬಯಸುತ್ತೀರಿ. ಆದರೆ ಅಲ್ಲಾಹು ಪರಲೋಕವನ್ನು ಬಯಸುತ್ತಾನೆ. ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
———
[1] ಬದ್ರ್ ಯುದ್ಧದಲ್ಲಿ 70 ಶತ್ರುಗಳು ಹತರಾಗಿದ್ದರು ಮತ್ತು 70 ಶತ್ರುಗಳನ್ನು ಸೆರೆಹಿಡಿಯಲಾಗಿತ್ತು. ಇದು ಇಸ್ಲಾಂನಲ್ಲಿ ನಡೆದ ಮೊದಲ ಯುದ್ಧವಾಗಿದ್ದರಿಂದ ಈ ಖೈದಿಗಳನ್ನು ಏನು ಮಾಡಬೇಕೆಂಬ ಬಗ್ಗೆ ಯಾವುದೇ ನಿರ್ಧಾರವಿರಲಿಲ್ಲ. ಆದ್ದರಿಂದ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮುಸಲ್ಮಾನರ ಸಭೆ ಕರೆದು ಸಮಾಲೋಚನೆ ಮಾಡಿದರು. ಕೆಲವರು ಖೈದಿಗಳನ್ನು ಕೊಲ್ಲಬೇಕೆಂದು ಅಭಿಪ್ರಾಯ ಹೇಳಿದರೆ ಕೆಲವರು ಪರಿಹಾರವನ್ನು ಪಡೆದು ಖೈದಿಗಳನ್ನು ಬಿಟ್ಟು ಬಿಡೋಣ ಎಂದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡನೇ ಅಭಿಪ್ರಾಯವನ್ನು ಆರಿಸಿದರು. ಆಗ ಅಲ್ಲಾಹು ಈ ವಚನವನ್ನು ಅವತೀರ್ಣಗೊಳಿಸಿದನು. ಅಂದರೆ, ಮುಸಲ್ಮಾನರಿಗೆ ನಾಡಿನಲ್ಲಿ ಪ್ರಾಬಲ್ಯ ಸಿಗುವ ತನಕ ಪರಿಹಾರ ಪಡೆದು ಯುದ್ಧ ಖೈದಿಗಳನ್ನು ಬಿಟ್ಟುಬಿಡಬಾರದು. ಏಕೆಂದರೆ ಅದರಿಂದ ಅವರು ತಂತ್ರಗಳನ್ನು ರೂಪಿಸಿ ಇನ್ನೊಂದು ಯುದ್ಧಕ್ಕೆ ತಯಾರಿ ನಡೆಸುವ ಸಾಧ್ಯತೆಯಿರುತ್ತದೆ. ಆದರೆ ಮುಸಲ್ಮಾನರಿಗೆ ನಾಡಿನಲ್ಲಿ ಪ್ರಾಬಲ್ಯವುಂಟಾಗಿ ಅವರನ್ನು ಸೋಲಿಸುವುದು ಅಷ್ಟು ಸುಲಭವಲ್ಲ ಎಂಬ ಸ್ಥಿತಿಯು ಉಂಟಾದರೆ ಯುದ್ಧ ಖೈದಿಗಳ ವಿಷಯದಲ್ಲಿ ಈ ಕೆಳಗಿನ ನಾಲ್ಕು ಆಯ್ಕೆಗಳಲ್ಲಿ ಒಂದನ್ನು ಆರಿಸಬಹುದು: 1. ಅವರನ್ನು ಕೊಲ್ಲುವುದು. 2. ಪರಿಹಾರ ಪಡೆದು ಅವರನ್ನು ಬಿಟ್ಟುಬಿಡುವುದು. 3. ಅವರನ್ನು ಮುಸಲ್ಮಾನ ಖೈದಿಗಳೊಡನೆ ವಿನಿಮಯ ಮಾಡಿಕೊಳ್ಳುವುದು. 4. ಅವರನ್ನು ಗುಲಾಮರನ್ನಾಗಿ ಮಾಡುವುದು.
Enfal 8:68
ಅಲ್ಲಾಹನ ಕಡೆಯ ಒಂದು ಪೂರ್ವ ಲಿಖಿತ ನಿರ್ಧಾರವಿಲ್ಲದಿರುತ್ತಿದ್ದರೆ, ನೀವೇನು ಪಡೆದಿರೋ ಅದಕ್ಕಾಗಿ ನಿಮಗೆ ಘೋರ ಶಿಕ್ಷೆ ನೀಡಲಾಗುತ್ತಿತ್ತು.
Enfal 8:69
ಆದ್ದರಿಂದ (ಯುದ್ಧದಲ್ಲಿ) ನೀವು ಗಳಿಸಿದ ಧರ್ಮಸಮ್ಮತ ಮತ್ತು ಶುದ್ಧ ಸಂಪತ್ತನ್ನು ತಿನ್ನಿರಿ. ಅಲ್ಲಾಹನನ್ನು ಭಯಪಡಿರಿ. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.
Enfal 8:70
ಓ ಪ್ರವಾದಿಯವರೇ! ನಿಮ್ಮ ವಶದಲ್ಲಿರುವ ಯುದ್ಧ ಖೈದಿಗಳೊಡನೆ ಹೇಳಿರಿ: “ನಿಮ್ಮ ಹೃದಯಗಳಲ್ಲಿ ಒಳಿತಿದೆಯೆಂದು ಅಲ್ಲಾಹನಿಗೆ ತಿಳಿದರೆ ನಿಮ್ಮಿಂದ ಪಡೆಯಲಾದ (ಪರಿಹಾರಕ್ಕೆ ಬದಲಿಯಾಗಿ) ಅವನು ನಿಮಗೆ ಅತ್ಯುತ್ತಮವಾದುದನ್ನು ನೀಡುವನು[1] ಮತ್ತು ನಿಮ್ಮನ್ನು ಕ್ಷಮಿಸುವನು. ಅಲ್ಲಾಹು ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.”
———
[1] ಅಂದರೆ ನಿಮ್ಮ ಹೃದಯದಲ್ಲಿ ಇಸ್ಲಾಂ ಧರ್ಮದ ಬಗ್ಗೆ ಒಲವು ಇದ್ದರೆ, ಅಥವಾ ಇಸ್ಲಾಂ ಸ್ವೀಕರಿಸುವ ಇರಾದೆಯಿದ್ದರೆ, ಅಲ್ಲಾಹು ನೀವು ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ಮಾಡುವನು. ನಂತರ ನಿಮ್ಮಿಂದ ಪಡೆದ ಪರಿಹಾರ ಧನಕ್ಕೆ ಬದಲಿಯಾಗಿ ನಿಮಗೆ ಐಶ್ವರ್ಯವನ್ನು ನೀಡುವನು.
Enfal 8:71
ಆದರೆ ಅವರು ನಿಮಗೆ ವಿಶ್ವಾಸದ್ರೋಹ ಮಾಡಲು ಬಯಸಿದರೆ—ಇದಕ್ಕಿಂತ ಮೊದಲೂ ಅವರು ಅಲ್ಲಾಹನಿಗೆ ವಿಶ್ವಾಸದ್ರೋಹ ಮಾಡಿದ್ದಾರೆ. ಆದ್ದರಿಂದ ಅವನು ಅವರನ್ನು ನಿಮ್ಮ ವಶಕ್ಕೆ ಒಪ್ಪಿಸಿದನು. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.
Enfal 8:72
ನಿಶ್ಚಯವಾಗಿಯೂ ಸತ್ಯವಿಶ್ವಾಸವಿಟ್ಟವರು, ವಲಸೆ (ಹಿಜ್ರ) ಮಾಡಿದವರು, ತಮ್ಮ ತನು-ಧನಗಳಿಂದ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿದವರು ಮತ್ತು ಆಶ್ರಯ ನೀಡಿ ಸಹಾಯ ಮಾಡಿದವರು[1] ಯಾರೋ—ನಿಶ್ಚಯವಾಗಿಯೂ ಅವರು ಪರಸ್ಪರ ಆಪ್ತಮಿತ್ರರಾಗಿದ್ದಾರೆ. ಆದರೆ ಸತ್ಯವಿಶ್ವಾಸಿಗಳಾಗಿದ್ದೂ ಸಹ ವಲಸೆ (ಹಿಜ್ರ) ಮಾಡದವರು ಯಾರೋ—ಅವರು ವಲಸೆ (ಹಿಜ್ರ) ಮಾಡುವ ತನಕ—ಅವರೊಡನೆ ನಿಮಗೆ ಯಾವುದೇ ಮೈತ್ರಿಯಿಲ್ಲ.[2] ಆದರೆ ಅವರು ಧರ್ಮದ ವಿಷಯದಲ್ಲಿ ನಿಮ್ಮೊಡನೆ ಸಹಾಯ ಕೇಳಿದರೆ ಅವರಿಗೆ ಸಹಾಯ ಮಾಡುವುದು ನಿಮ್ಮ ಕರ್ತವ್ಯವಾಗಿದೆ. ಆದರೆ ಯಾರೊಡನೆ ನೀವು ಕರಾರಿನಲ್ಲಿದ್ದೀರೋ ಅವರಿಗೆ ವಿರುದ್ಧವಾಗಿ ನೀವು ಅವರಿಗೆ ಸಹಾಯ ಮಾಡಬಾರದು. ಅಲ್ಲಾಹು ನೀವು ಮಾಡುವುದನ್ನು ನೋಡುತ್ತಿದ್ದಾನೆ.
———
[1] ತನು-ಧನಗಳಿಂದ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿದವರು ಎಂದರೆ ಮುಹಾಜಿರ್‌ಗಳು. ಇವರು ಶ್ರೇಷ್ಠತೆಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಆಶ್ರಯ ನೀಡಿ ಸಹಾಯ ಮಾಡಿದವರು ಎಂದರೆ ಅನ್ಸಾರ್‌ಗಳು. ಇವರು ಶ್ರೇಷ್ಠತೆಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
[2] ಇವರು ಇಸ್ಲಾಂ ಧರ್ಮ ಸ್ವೀಕರಿಸಿದ ನಂತರ ಮದೀನಕ್ಕೆ ವಲಸೆ (ಹಿಜ್ರ) ಮಾಡದೆ ತಮ್ಮದೇ ಊರಲ್ಲಿ ವಾಸವಾಗಿದ್ದ ಮುಸಲ್ಮಾನರು. ಇವರ ರಕ್ಷಣೆ ಮಾಡುವ ಯಾವುದೇ ಹೊಣೆಗಾರಿಕೆ ಮದೀನದ ಮುಸಲ್ಮಾನರಿಗಿಲ್ಲ. ಆದರೆ ಅವರು ಸತ್ಯನಿಷೇಧಿಗಳ ವಿರುದ್ಧ ಸಹಾಯ ಕೇಳಿದರೆ ಸಹಾಯ ಮಾಡಬೇಕು. ಆದರೆ ಆ ಸತ್ಯನಿಷೇಧಿಗಳು ಮುಸಲ್ಮಾನರೊಡನೆ ಕರಾರಿನಲ್ಲಿರುವವರಾಗಿದ್ದರೆ ಅವರ ವಿರುದ್ಧ ಅವರಿಗೆ ಸಹಾಯ ಮಾಡಬಾರದು.
Enfal 8:73
ಸತ್ಯನಿಷೇಧಿಗಳು ಪರಸ್ಪರ ಆಪ್ತಮಿತ್ರರು. ನೀವು ಹೀಗೆ (ಪರಸ್ಪರ ಸಹಾಯ) ಮಾಡದಿದ್ದರೆ ಭೂಮಿಯಲ್ಲಿ ಕ್ಷೋಭೆ ಮತ್ತು ಮಹಾ ಅರಾಜಕತೆ ಉದ್ಭವವಾಗಬಹುದು.
Enfal 8:74
ಸತ್ಯವಿಶ್ವಾಸವಿಟ್ಟವರು, ವಲಸೆ (ಹಿಜ್ರ) ಮಾಡಿದವರು, ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿದವರು ಮತ್ತು ಆಶ್ರಯ ನೀಡಿ ಸಹಾಯ ಮಾಡಿದವರು ಯಾರೋ ಅವರೇ ನಿಜವಾದ ಸತ್ಯವಿಶ್ವಾಸಿಗಳು. ಅವರಿಗೆ ಕ್ಷಮೆ ಮತ್ತು ಗೌರವಾನ್ವಿತ ಉಪಜೀವನವಿದೆ.
———
291. ಮದೀನಕ್ಕೆ ಬಂದ ಮುಹಾಜಿರ್‍ಗಳಾದ ಮುಸ್ಲಿಮರು.292. ಮದೀನಾ ನಿವಾಸಿಗಳಾದ ಮುಸ್ಲಿಮರು. ಅನ್ಸಾರ್ (ಸಹಾಯಕರು) ಎಂದು ಇವರನ್ನು ಕರೆಯಲಾಗುತ್ತದೆ.
Enfal 8:75
ಅದರ ನಂತರ ಸತ್ಯವಿಶ್ವಾಸಿಗಳಾದವರು, ವಲಸೆ (ಹಿಜ್ರ) ಮಾಡಿದವರು ಮತ್ತು ನಿಮ್ಮ ಜೊತೆಗೂಡಿ ಯುದ್ಧ ಮಾಡಿದವರು ಯಾರೋ ಅವರು ಕೂಡ ನಿಮ್ಮವರೇ. ಆದರೆ ಅಲ್ಲಾಹನ ನಿಯಮದ ಪ್ರಕಾರ ರಕ್ತಸಂಬಂಧಿಗಳು ಪರಸ್ಪರ ಹೆಚ್ಚು ಹಕ್ಕುಳ್ಳವರು. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳನ್ನು ತಿಳಿದವನಾಗಿದ್ದಾನೆ.
Tevbe 9:1
ಇದು ಬಹುದೇವವಿಶ್ವಾಸಿಗಳಲ್ಲಿ ನೀವು ಯಾರೊಡನೆ ಕರಾರು ಮಾಡಿಕೊಂಡಿದ್ದೀರೋ ಅವರಿಗೆ ಅಲ್ಲಾಹು ಮತ್ತು ಅವನ ಸಂದೇಶವಾಹಕರ ಕಡೆಯ ಹೊಣೆಮುಕ್ತಿಯ ಘೋಷಣೆಯಾಗಿದೆ.[1]
———
[1] ಮುಸಲ್ಮಾನರೊಡನೆ ತಾತ್ಕಾಲಿಕವಾಗಿ, ಅಥವಾ 4 ತಿಂಗಳಿಗಿಂತ ಕಡಿಮೆ, ಅಥವಾ 4 ತಿಂಗಳಿಗಿಂತ ಹೆಚ್ಚು ಅವಧಿಯ ತನಕ ಕರಾರು ಮಾಡಿಕೊಂಡಿದ್ದು ತಮ್ಮ ಕರಾರನ್ನು ಪಾಲಿಸದೆ ವಿಶ್ವಾಸದ್ರೋಹವೆಸಗಿದ ಬಹುದೇವವಿಶ್ವಾಸಿಗಳೊಡನೆ ಈ ಹೊಣೆಮುಕ್ತಿಯ ಘೋಷಣೆಯನ್ನು ಮಾಡಲಾಗಿದೆ.
Tevbe 9:2
ಆದ್ದರಿಂದ ನೀವು (ಬಹುದೇವವಿಶ್ವಾಸಿಗಳು) ನಾಲ್ಕು ತಿಂಗಳವರೆಗೆ ಭೂಮಿಯಲ್ಲಿ ಸ್ವಚ್ಛಂದವಾಗಿ ಸಂಚರಿಸಿರಿ.[1] ತಿಳಿಯಿರಿ! ಅಲ್ಲಾಹನನ್ನು ಸೋಲಿಸಲು ನಿಮಗೆ ಸಾಧ್ಯವಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಸತ್ಯನಿಷೇಧಿಗಳನ್ನು ಅಪಮಾನಿತರನ್ನಾಗಿ ಮಾಡುವನು.
———
[1] ಅವರಿಗೆ ನಾಲ್ಕು ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ ಅವರ ಮೇಲೆ ಯಾವುದೇ ದಾಳಿ ಮಾಡಲಾಗುವುದಿಲ್ಲ.
Tevbe 9:3
ಇದು ಜನರಿಗೆ ಮಹಾ ಹಜ್ಜ್‌ನ ದಿನದಂದು ಅಲ್ಲಾಹು ಮತ್ತು ಅವನ ಸಂದೇಶವಾಹಕರ ಕಡೆಯ ಘೋಷಣೆಯಾಗಿದೆ—ಏನೆಂದರೆ ಅಲ್ಲಾಹು ಮತ್ತು ಅವರ ಸಂದೇಶವಾಹಕರು ಬಹುದೇವವಿಶ್ವಾಸಿಗಳಿಂದ ಸಂಪೂರ್ಣ ಮುಕ್ತರಾಗಿದ್ದಾರೆ. ನೀವು (ಬಹುದೇವವಿಶ್ವಾಸಿಗಳು) ಪಶ್ಚಾತ್ತಾಪಪಟ್ಟರೆ ಅದು ನಿಮಗೆ ಒಳಿತಾಗಿದೆ. ನೀವು ಲೆಕ್ಕಿಸದೆ ತಿರುಗಿ ನಡೆದರೆ ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹನನ್ನು ಸೋಲಿಸಲು ನಿಮ್ಮಿಂದ ಸಾಧ್ಯವಿಲ್ಲ. ಸತ್ಯನಿಷೇಧಿಗಳಿಗೆ ಯಾತನಾಮಯ ಶಿಕ್ಷೆಯ ಬಗ್ಗೆ ಸುವಾರ್ತೆ ನೀಡಿರಿ.
Tevbe 9:4
ಆದರೆ ಬಹುದೇವವಿಶ್ವಾಸಿಗಳಲ್ಲಿ ನೀವು ಯಾರೊಡನೆ ಕರಾರು ಮಾಡಿಕೊಂಡಿದ್ದೀರೋ ಅವರು ಕರಾರು ಉಲ್ಲಂಘಿಸದಿದ್ದರೆ ಮತ್ತು ನಿಮಗೆ ವಿರುದ್ಧವಾಗಿ ನಿಮ್ಮ ಶತ್ರುಗಳಿಗೆ ಸಹಾಯ ಮಾಡದಿದ್ದರೆ ಅವರು ಇದರಿಂದ ಹೊರತಾಗಿದ್ದಾರೆ. ನೀವು ಅವರೊಡನೆ ಮಾಡಿದ ಕರಾರನ್ನು ಅವರ ಅವಧಿ ಮುಗಿಯುವವರೆಗೆ ಮುಂದುವರಿಸಿರಿ. ನಿಶ್ಚಯವಾಗಿಯೂ ಅಲ್ಲಾಹು ದೇವಭಯವುಳ್ಳವರನ್ನು ಪ್ರೀತಿಸುತ್ತಾನೆ.
Tevbe 9:5
ಪವಿತ್ರ ತಿಂಗಳುಗಳು ಕಳೆದರೆ,[1] ಆ ಬಹುದೇವವಿಶ್ವಾಸಿಗಳನ್ನು ಕಂಡಲ್ಲಿ ಕೊಲ್ಲಿರಿ. ಅವರನ್ನು ಹಿಡಿಯಿರಿ, ಸುತ್ತುವರಿಯಿರಿ ಮತ್ತು ಎಲ್ಲಾ ಆಯಕಟ್ಟಿನ ಸ್ಥಳಗಳಲ್ಲಿ ಅವರಿಗಾಗಿ ಹೊಂಚುಹಾಕಿರಿ. ಅವರು ಪಶ್ಚಾತ್ತಾಪಪಟ್ಟು ನಮಾಝ್ ಸಂಸ್ಥಾಪಿಸಿದರೆ ಮತ್ತು ಝಕಾತ್ ನೀಡಿದರೆ ಅವರನ್ನು ಅವರ ದಾರಿಯಲ್ಲಿ ಬಿಟ್ಟುಬಿಡಿ. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
———
[1] ಅಂದರೆ ಮೇಲೆ ಸೂಚಿಸಲಾದ ನಾಲ್ಕು ತಿಂಗಳುಗಳು.
Tevbe 9:6
ಬಹುದೇವವಿಶ್ವಾಸಿಗಳಲ್ಲಿ ಯಾರಾದರೂ ನಿಮ್ಮೊಡನೆ ಆಶ್ರಯ ಬೇಡಿದರೆ, ಅವನಿಗೆ ಆಶ್ರಯ ನೀಡಿರಿ—ಅವನು ಅಲ್ಲಾಹನ ವಚನಗಳನ್ನು ಕೇಳುವ ತನಕ. ನಂತರ ಅವನನ್ನು ಅವನ ಸುರಕ್ಷಿತ ಸ್ಥಳಕ್ಕೆ ತಲುಪಿಸಿರಿ. ಅದೇಕೆಂದರೆ ಅವರು ತಿಳುವಳಿಕೆಯಿಲ್ಲದ ಜನರಾಗಿದ್ದಾರೆ.
Tevbe 9:7
ಬಹುದೇವವಿಶ್ವಾಸಿಗಳಿಗೆ ಅಲ್ಲಾಹು ಮತ್ತು ಅವನ ಸಂದೇಶವಾಹಕರೊಡನೆ ಕರಾರು ಇರುವುದು ಹೇಗೆ? ಪವಿತ್ರ ಮಸೀದಿಯ ಬಳಿ ನೀವು ಕರಾರು ಮಾಡಿಕೊಂಡವರ ಹೊರತು. ಅವರು ತಮ್ಮ ಕರಾರಿನಲ್ಲಿ ನೇರವಾಗಿ ನಿಲ್ಲುವ ತನಕ ನೀವು ನಿಮ್ಮ ಕರಾರಿನಲ್ಲಿ ನೇರವಾಗಿ ನಿಲ್ಲಿರಿ. ನಿಶ್ಚಯವಾಗಿಯೂ ಅಲ್ಲಾಹು ದೇವಭಯವುಳ್ಳವರನ್ನು ಪ್ರೀತಿಸುತ್ತಾನೆ.
Tevbe 9:8
ಅವರಿಗೆ ಕರಾರು ಇರುವುದು ಹೇಗೆ? ಅವರಿಗೆ ನಿಮ್ಮ ಮೇಲೆ ಪ್ರಾಬಲ್ಯ ದೊರೆತರೆ, ನಿಮ್ಮ ವಿಷಯದಲ್ಲಿ ಅವರು ಕುಟುಂಬ ಸಂಬಂಧವನ್ನು ಅಥವಾ ಕರಾರನ್ನು ಪರಿಗಣಿಸುವುದಿಲ್ಲ. ಅವರು ಮಾತಿನ ಮೂಲಕ ನಿಮ್ಮ ಬಗ್ಗೆ ಸಂತೃಪ್ತಿ ಸೂಚಿಸುತ್ತಾರೆ. ಆದರೆ ಅವರ ಹೃದಯಗಳು ಅದನ್ನು ಒಪ್ಪಿಕೊಳ್ಳುವುದಿಲ್ಲ. ಅವರಲ್ಲಿ ಹೆಚ್ಚಿನವರೂ ದುಷ್ಕರ್ಮಿಗಳಾಗಿದ್ದಾರೆ.
Tevbe 9:9
ಅವರು ಅಲ್ಲಾಹನ ವಚನಗಳನ್ನು ಅಲ್ಪ ಬೆಲೆಗೆ ಮಾರಿದರು ಮತ್ತು ಅವನ ಮಾರ್ಗದಿಂದ ಜನರನ್ನು ತಡೆದರು. ನಿಶ್ಚಯವಾಗಿಯೂ ಅವರು ಮಾಡುವ ಕರ್ಮಗಳು ಬಹಳ ನೀಚವಾಗಿವೆ.
Tevbe 9:10
ಅವರು ಸತ್ಯವಿಶ್ವಾಸಿಯ ವಿಷಯದಲ್ಲಿ ಕುಟುಂಬ ಸಂಬಂಧವನ್ನು ಅಥವಾ ಕರಾರನ್ನು ಪರಿಗಣಿಸುವುದಿಲ್ಲ. ಅವರೇ ಅತಿರೇಕಿಗಳು.
Tevbe 9:11
ಆದರೆ ಅವರು ಪಶ್ಚಾತ್ತಾಪಪಟ್ಟು, ನಮಾಝನ್ನು ಸಂಸ್ಥಾಪಿಸಿದರೆ ಮತ್ತು ಝಕಾತ್ ನೀಡಿದರೆ, ಅವರು ನಿಮ್ಮ ಧಾರ್ಮಿಕ ಸಹೋದರರಾಗಿದ್ದಾರೆ. ತಿಳುವಳಿಕೆಯಿರುವ ಜನರಿಗಾಗಿ ನಾವು ವಚನಗಳನ್ನು ವಿವರಿಸಿಕೊಡುತ್ತೇವೆ.
Tevbe 9:12
ಅವರು ಕರಾರು ಮಾಡಿದ ನಂತರ ತಮ್ಮ ಪ್ರತಿಜ್ಞೆಗಳನ್ನು ಉಲ್ಲಂಘಿಸಿದರೆ ಮತ್ತು ನಿಮ್ಮ ಧರ್ಮವನ್ನು ಅವಹೇಳನ ಮಾಡಿದರೆ, ಆ ಸತ್ಯನಿಷೇಧದ ಮುಖಂಡರ ವಿರುದ್ಧ ಯುದ್ಧ ಮಾಡಿರಿ. ನಿಶ್ಚಯವಾಗಿಯೂ ಅವರ ಪ್ರತಿಜ್ಞೆಗಳಿಗೆ ಯಾವುದೇ ಬೆಲೆಯಿಲ್ಲ. ಅವರು (ವೈರವನ್ನು) ಮುಕ್ತಾಯಗೊಳಿಸಲೂಬಹುದು.
Tevbe 9:13
ತಮ್ಮ ಪ್ರತಿಜ್ಞೆಗಳನ್ನು ಉಲ್ಲಂಘಿಸಿದ ಮತ್ತು ಸಂದೇಶವಾಹಕರನ್ನು ಹೊರದಬ್ಬಲು ಯತ್ನಿಸಿದ ಜನರ ವಿರುದ್ಧ ನೀವೇಕೆ ಯುದ್ಧ ಮಾಡುವುದಿಲ್ಲ? ಮೊದಲು ಯುದ್ಧ ಆರಂಭಿಸಿದವರು ಅವರೇ. ನೀವು ಅವರಿಗೆ ಹೆದರುತ್ತೀರಾ? ನೀವು ಹೆದರಲು ಹೆಚ್ಚು ಅರ್ಹನಾಗಿರುವುದು ಅಲ್ಲಾಹನಾಗಿದ್ದಾನೆ. ನೀವು ಸತ್ಯವಿಶ್ವಾಸಿಗಳಾಗಿದ್ದರೆ.
Tevbe 9:14
ಅವರ ವಿರುದ್ಧ ಯುದ್ಧ ಮಾಡಿರಿ. ನಿಮ್ಮ ಕೈಗಳ ಮೂಲಕ ಅಲ್ಲಾಹು ಅವರನ್ನು ಶಿಕ್ಷಿಸುವನು, ಅವರನ್ನು ಅಪಮಾನಿತರನ್ನಾಗಿ ಮಾಡುವನು, ಅವರಿಗೆ ವಿರುದ್ಧವಾಗಿ ನಿಮಗೆ ಸಹಾಯ ಮಾಡುವನು ಮತ್ತು ಸತ್ಯವಿಶ್ವಾಸಿಗಳ ಹೃದಯಗಳಿಗೆ ಸಂತೃಪ್ತಿಯನ್ನು ನೀಡುವನು.
Tevbe 9:15
ಅವರ ಹೃದಯಗಳಿಂದ ಆಕ್ರೋಶವನ್ನು ನಿವಾರಿಸುವನು. ಅಲ್ಲಾಹು ಅವನು ಇಚ್ಛಿಸುವವರ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.
Tevbe 9:16
ನಿಮ್ಮಲ್ಲಿ (ನಿಷ್ಠೆಯಿಂದ) ಯುದ್ಧ ಮಾಡಿದವರು ಯಾರು ಮತ್ತು ಅಲ್ಲಾಹು, ಅವನ ಸಂದೇಶವಾಹಕರು ಹಾಗೂ ಸತ್ಯವಿಶ್ವಾಸಿಗಳನ್ನು ಬಿಟ್ಟು ಇತತರೊಂದಿಗೆ ರಹಸ್ಯವಾಗಿ ಗೆಳೆತನ ಮಾಡಿಕೊಂಡವರು ಯಾರು ಎಂದು ಸ್ಪಷ್ಟವಾಗಿ ತಿಳಿಯದೆ ಅಲ್ಲಾಹು ನಿಮ್ಮನ್ನು ಈ ಸ್ಥಿತಿಯಲ್ಲಿ ಬಿಟ್ಟುಬಿಡುವನೆಂದು ನೀವು ಭಾವಿಸಿದ್ದೀರಾ? ನೀವು ಮಾಡುವ ಕೆಲಸಗಳನ್ನು ಅವನು ಸೂಕ್ಷ್ಮವಾಗಿ ತಿಳಿಯುತ್ತಿದ್ದಾನೆ.
Tevbe 9:17
ಸತ್ಯನಿಷೇಧಕ್ಕೆ ಸ್ವಯಂ ಸಾಕ್ಷಿಗಳಾಗಿರುತ್ತಾ ಅಲ್ಲಾಹನ ಮಸೀದಿಗಳ ನಿರ್ವಹಣೆ ಮಾಡುವುದು ಬಹುದೇವಾರಾಧಕರಿಗೆ ಸರಿಹೊಂದುವುದಿಲ್ಲ. ಅವರ ಕರ್ಮಗಳು ನಿಷ್ಫಲವಾಗಿವೆ. ಅವರು ನರಕದಲ್ಲಿ ಶಾಶ್ವತವಾಗಿ ವಾಸಿಸುತ್ತಾರೆ.
Tevbe 9:18
ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿರುವವರು, ನಮಾಝ್ ಸಂಸ್ಥಾಪಿಸುವವರು, ಝಕಾತ್ ನೀಡುವವರು ಮತ್ತು ಅಲ್ಲಾಹನನ್ನು ಬಿಟ್ಟು ಬೇರೆ ಯಾರನ್ನೂ ಭಯಪಡದವರು—ಇವರೇ ಅಲ್ಲಾಹನ ಮಸೀದಿಗಳ ನಿರ್ವಹಣೆ ಮಾಡಬೇಕಾದವರು. ಇವರು ಸನ್ಮಾರ್ಗಿಗಳಲ್ಲಿ ಸೇರುವ ನಿರೀಕ್ಷೆಯಿದೆ.
Tevbe 9:19
ಹಜ್ಜ್ ಯಾತ್ರಿಗಳಿಗೆ ಪಾನೀಯ ಸರಬರಾಜು ಮಾಡುವುದನ್ನು ಮತ್ತು ಪವಿತ್ರ ಮಸೀದಿಯ ನಿರ್ವಹಣೆ ಮಾಡುವುದನ್ನು ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವುದಕ್ಕೆ ಹಾಗೂ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುವುದಕ್ಕೆ ಸಮಾನವೆಂದು ಪರಿಗಣಿಸುತ್ತೀರಾ? ಅಲ್ಲಾಹನ ದೃಷ್ಟಿಯಲ್ಲಿ ಅವು ಸಮಾನವಲ್ಲ. ಅಕ್ರಮವೆಸಗುವ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.
Tevbe 9:20
ಸತ್ಯವಿಶ್ವಾಸ ಸ್ವೀಕರಿಸಿದವರು, ವಲಸೆ (ಹಿಜ್ರ) ಮಾಡಿದವರು ಮತ್ತು ತಮ್ಮ ಧನ-ತನುಗಳಿಂದ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿದವರು ಯಾರೋ—ಅವರಿಗೆ ಅಲ್ಲಾಹನ ಬಳಿ ಉನ್ನತ ಸ್ಥಾನಮಾನಗಳಿವೆ. ಅವರೇ ಯಶಸ್ವಿಯಾದವರು.
Tevbe 9:21
ಅವರ ಪರಿಪಾಲಕನು (ಅಲ್ಲಾಹು) ಅವರಿಗೆ ತನ್ನ ದಯೆ, ಸಂಪ್ರೀತಿ ಮತ್ತು ಸ್ವರ್ಗೋದ್ಯಾನಗಳ ಸುವಾರ್ತೆಯನ್ನು ನೀಡುತ್ತಾನೆ. ಅಲ್ಲಿ ಅವರಿಗೆ ಶಾಶ್ವತ ಸಂತೋಷಗಳಿವೆ.
Tevbe 9:22
ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ನಿಶ್ಚಯವಾಗಿಯೂ ಅಲ್ಲಾಹನ ಬಳಿ ಅತಿದೊಡ್ಡ ಪ್ರತಿಫಲವಿದೆ.
Tevbe 9:23
ಓ ಸತ್ಯವಿಶ್ವಾಸಿಗಳೇ! ನಿಮ್ಮ ತಂದೆಯರನ್ನು ಮತ್ತು ನಿಮ್ಮ ಸಹೋದರರನ್ನು ನಿಮ್ಮ ಮಿತ್ರರನ್ನಾಗಿ ಸ್ವೀಕರಿಸಬೇಡಿ—ಅವರು ಸತ್ಯವಿಶ್ವಾಸಕ್ಕಿಂತ ಹೆಚ್ಚು ಸತ್ಯನಿಷೇಧವನ್ನು ಪ್ರೀತಿಸುವುದಾದರೆ. ನಿಮ್ಮಲ್ಲಿ ಯಾರು ಅವರನ್ನು ಮಿತ್ರರನ್ನಾಗಿ ಸ್ವೀಕರಿಸುತ್ತಾರೋ ಅವರೇ ಅಕ್ರಮಿಗಳು.
Tevbe 9:24
ಹೇಳಿರಿ: “ನಿಮ್ಮ ತಂದೆಯರು, ನಿಮ್ಮ ಮಕ್ಕಳು, ನಿಮ್ಮ ಸಹೋದರರು, ನಿಮ್ಮ ಪತ್ನಿಯರು, ನಿಮ್ಮ ಸಂಬಂಧಿಕರು, ನೀವು ಸಂಪಾದಿಸಿದ ಆಸ್ತಿಗಳು, ನಷ್ಟವಾಗಬಹುದೆಂದು ನೀವು ಹೆದರುವ ವ್ಯಾಪಾರಗಳು, ನೀವು ಪ್ರೀತಿಸುವ ನಿಮ್ಮ ಮನೆಗಳು—ಇವೆಲ್ಲವೂ ನಿಮಗೆ ಅಲ್ಲಾಹನಿಗಿಂತ, ಅವನ ಸಂದೇಶವಾಹಕರಿಗಿಂತ ಮತ್ತು ಅವನ ಮಾರ್ಗದಲ್ಲಿ ಮಾಡುವ ಹೋರಾಟಕ್ಕಿಂತ ಹೆಚ್ಚು ಪ್ರೀತಿಯುಳ್ಳದ್ದಾಗಿದ್ದರೆ, ಅಲ್ಲಾಹು ಅವನ ಆಜ್ಞೆಯನ್ನು ತರುವ ತನಕ ಕಾಯಿರಿ. ಅವಿಧೇಯತೆ ತೋರುವ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.”
Tevbe 9:25
ನಿಶ್ಚಯವಾಗಿಯೂ ಅನೇಕ ಸ್ಥಳಗಳಲ್ಲಿ ಅಲ್ಲಾಹು ನಿಮಗೆ ಸಹಾಯ ಮಾಡಿದ್ದಾನೆ. ಹುನೈನ್ ಯುದ್ಧ ನಡೆದ ದಿನದಲ್ಲಿ ಕೂಡ (ಅವನು ನಿಮಗೆ ಸಹಾಯ ಮಾಡಿದ್ದಾನೆ). ಅಂದು ನಿಮ್ಮ ಸಂಖ್ಯಾಬಲವನ್ನು ನೋಡಿ ನೀವು ಪುಳಕಿತರಾದ ಸಂದರ್ಭ. ಆದರೆ ಅದು ನಿಮಗೆ ಯಾವುದೇ ಉಪಕಾರ ಮಾಡಲಿಲ್ಲ. ಭೂಮಿಯು ವಿಶಾಲವಾಗಿದ್ದೂ ಸಹ ನಿಮಗೆ ಸಂಕುಚಿತವಾದಂತೆ ತೋರಿತು. ನಂತರ ನೀವು ದಿಕ್ಕೆಟ್ಟು ಪಲಾಯನ ಮಾಡಿದಿರಿ.[1]
———
[1] ಹಿಜ್ರ 8ನೇ ವರ್ಷದಲ್ಲಿ ಹುನೈನ್ ಯುದ್ಧ ನಡೆಯಿತು. ಮುಸ್ಲಿಮರು ಮಕ್ಕಾ ವಶಪಡಿಸಿದ್ದನ್ನು ಕಂಡು ರೋಷದಿಂದ ಕೆಲವು ಸತ್ಯನಿಷೇಧಿ ಗೋತ್ರಗಳು ಮುಸ್ಲಿಮರ ವಿರುದ್ಧ ಯುದ್ಧ ಸಾರಿದರು. ಈ ಯುದ್ಧದಲ್ಲಿ ಮುಸ್ಲಿಮರು ಗಣನೀಯ ಸಂಖ್ಯೆಯಲ್ಲಿದ್ದೂ ಸಹ ಆರಂಭದಲ್ಲಿ ಸೋಲನ್ನು ಕಂಡರು. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೆಲವು ಆಪ್ತ ಸಂಗಡಿಗರ ಹೊರತು ಉಳಿದವರು ಯುದ್ಧರಂಗದಿಂದ ಪಲಾಯನ ಮಾಡಿದರು. ಆದರೆ ಕೆಲವೇ ಕ್ಷಣಗಳಲ್ಲಿ ಅವರು ಮರಳಿ ಬಂದು ವೀರಾವೇಶದಿಂದ ಹೋರಾಡಿ ಯುದ್ಧವನ್ನು ಗೆದ್ದರು.
Tevbe 9:26
ನಂತರ ಅಲ್ಲಾಹು ಅವನ ಸಂದೇಶವಾಹಕರ ಮೇಲೆ ಮತ್ತು ಸತ್ಯವಿಶ್ವಾಸಿಗಳ ಮೇಲೆ ಅವನ ಕಡೆಯ ಶಾಂತಿಯನ್ನು ಇಳಿಸಿಕೊಟ್ಟನು. ನಿಮಗೆ ಕಾಣದಂತಹ ಸೈನ್ಯಗಳನ್ನು ಕಳುಹಿಸಿ ಸತ್ಯನಿಷೇಧಿಗಳನ್ನು ಶಿಕ್ಷಿಸಿದನು. ಅದು ಸತ್ಯನಿಷೇಧಿಗಳಿಗೆ ಪ್ರತಿಫಲವಾಗಿದೆ.
Tevbe 9:27
ನಂತರ ಅದರ ಬಳಿಕವೂ ಅಲ್ಲಾಹು ಅವನು ಇಚ್ಛಿಸಿದವರ ಪಶ್ಚಾತ್ತಾಪವನ್ನು ಸ್ವೀಕರಿಸುವನು. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
Tevbe 9:28
ಓ ಸತ್ಯವಿಶ್ವಾಸಿಗಳೇ! ನಿಶ್ಚಯವಾಗಿಯೂ ಬಹುದೇವವಿಶ್ವಾಸಿಗಳು ಅಶುದ್ಧರಾಗಿದ್ದಾರೆ.[1] ಆದ್ದರಿಂದ ಈ ವರ್ಷದ ಬಳಿಕ ಅವರು ಪವಿತ್ರ ಮಸೀದಿಯ ಸಮೀಪಕ್ಕೂ ಬರದಿರಲಿ. ನಿಮಗೆ ಬಡತನದ ಬಗ್ಗೆ ಆತಂಕವಿದ್ದರೆ, ಅಲ್ಲಾಹು ಇಚ್ಛಿಸಿದರೆ ಸದ್ಯವೇ ಅವನು ತನ್ನ ಔದಾರ್ಯದಿಂದ ನಿಮ್ಮನ್ನು ಧನಿಕರನ್ನಾಗಿ ಮಾಡುವನು.[2] ನಿಶ್ಚಯವಾಗಿಯೂ ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.
———
[1] ಅಶುದ್ಧರು ಎಂದರೆ ದೈಹಿಕವಾಗಿ ಅಶುದ್ಧರು ಎಂದಲ್ಲ. ಬದಲಿಗೆ, ಅವರ ನಂಬಿಕೆಗಳು ಮತ್ತು ಕರ್ಮಗಳು ಅಶುದ್ಧವಾಗಿವೆ ಎಂದರ್ಥ.
[2] ಬಹುದೇವವಿಶ್ವಾಸಿಗಳು ಹಜ್ಜ್ ನಿರ್ವಹಿಸಲು ಮಕ್ಕಾಗೆ ಬರದಿದ್ದರೆ ತಮ್ಮ ವ್ಯಾಪಾರಕ್ಕೆ ಕುಂದುಂಟಾಗಬಹುದೆಂದು ಕೆಲವು ಮುಸ್ಲಿಮರು ಆತಂಕಗೊಂಡಿದ್ದರು.
Tevbe 9:29
ಗ್ರಂಥ ನೀಡಲಾದವರಲ್ಲಿ ಯಾರು ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವುದಿಲ್ಲವೋ, ಅಲ್ಲಾಹು ಮತ್ತು ಅವನ ಸಂದೇಶವಾಹಕರು ನಿಷೇಧಿಸಿದ್ದನ್ನು ನಿಷಿದ್ಧವೆಂದು ಪರಿಗಣಿಸುವುದಿಲ್ಲವೋ ಮತ್ತು ಸತ್ಯಧರ್ಮವನ್ನು ತಮ್ಮ ಧರ್ಮವಾಗಿ ಸ್ವೀಕರಿಸುವುದಿಲ್ಲವೋ ಅವರ ವಿರುದ್ಧ ಯುದ್ಧ ಮಾಡಿರಿ—ಅವರು ದೈನ್ಯತೆಯಿಂದ ಜಿಝ್ಯ ನೀಡುವ ತನಕ.
Tevbe 9:30
ಉಝೈರ್ (ಎಜ್ರಾ) ಅಲ್ಲಾಹನ ಮಗನೆಂದು ಯಹೂದಿಗಳು ಹೇಳಿದರು. ಮಸೀಹ್ (ಯೇಸು) ಅಲ್ಲಾಹನ ಮಗನೆಂದು ಕ್ರೈಸ್ತರು ಹೇಳಿದರು. ಇವು ಅವರು ಅವರ ಬಾಯಿಂದ ಹೇಳುವ ಮಾತುಗಳಾಗಿವೆ. ಅವರಿಗಿಂತ ಮೊದಲು ಸತ್ಯವನ್ನು ನಿಷೇಧಿಸಿದವರ ಮಾತುಗಳನ್ನು ಅವರು ಅನುಕರಿಸುತ್ತಿದ್ದಾರೆ. ಅಲ್ಲಾಹು ಅವರನ್ನು ನಾಶ ಮಾಡಲಿ. ಅವರನ್ನು ಹೇಗೆ ದಾರಿತಪ್ಪಿಸಲಾಗುತ್ತಿದೆಯೆಂದು ನೋಡಿ.
Tevbe 9:31
ಅವರು ಅಲ್ಲಾಹನನ್ನು ಬಿಟ್ಟು ತಮ್ಮ ವಿದ್ವಾಂಸರನ್ನೂ ಮತ್ತು ಸಂತರನ್ನು, ಹಾಗೂ ಮರ್ಯಮರ ಮಗ ಮಸೀಹ ಈಸಾರನ್ನು ಪರಿಪಾಲಕರನ್ನಾಗಿ (ದೇವರುಗಳನ್ನಾಗಿ) ಸ್ವೀಕರಿಸಿದರು. ಏಕೈಕ ದೇವನನ್ನು ಮಾತ್ರ ಆರಾಧಿಸಬೇಕೆಂದು ಅವರಿಗೆ ಆದೇಶಿಸಲಾಗಿತ್ತು. ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಅವರು ಮಾಡುವ ಸಹಭಾಗಿತ್ವ (ಶಿರ್ಕ್) ದಿಂದ ಅವನು ಎಷ್ಟೋ ಪರಿಶುದ್ಧನಾಗಿದ್ದಾನೆ.
Tevbe 9:32
ಅವರು ತಮ್ಮ ಬಾಯಿಗಳಿಂದ ಅಲ್ಲಾಹನ ಬೆಳಕನ್ನು ನಂದಿಸಲು ಬಯಸುತ್ತಾರೆ. ಆದರೆ ಅಲ್ಲಾಹು ತನ್ನ ಬೆಳಕನ್ನು ಪೂರ್ಣಗೊಳಿಸದೆ ಬಿಡಲು ಅಸಮ್ಮತಿ ಸೂಚಿಸಿದ್ದಾನೆ. ಸತ್ಯನಿಷೇಧಿಗಳು ಎಷ್ಟು ದ್ವೇಷಿಸಿದರೂ ಸಹ.
Tevbe 9:33
ಸನ್ಮಾರ್ಗ ಮತ್ತು ಸತ್ಯಧರ್ಮದೊಂದಿಗೆ ತನ್ನ ಸಂದೇಶವಾಹಕರನ್ನು ಕಳುಹಿಸಿದ್ದು ಅವನೇ. ಎಲ್ಲಾ ಧರ್ಮಗಳ ಮೇಲೆ ಅದು ಜಯಗಳಿಸುವಂತೆ ಮಾಡುವುದಕ್ಕಾಗಿ. ಬಹುದೇವವಿಶ್ವಾಸಿಗಳು ಎಷ್ಟು ದ್ವೇಷಿಸಿದರೂ ಸಹ.
Tevbe 9:34
ಓ ಸತ್ಯವಿಶ್ವಾಸಿಗಳೇ! ನಿಶ್ಚಯವಾಗಿಯೂ ವಿದ್ವಾಂಸರು ಮತ್ತು ಸಂತರಲ್ಲಿ ಹೆಚ್ಚಿನವರು ಅನ್ಯಾಯವಾಗಿ ಜನರ ಧನವನ್ನು ತಿನ್ನುತ್ತಾರೆ ಮತ್ತು ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಯುತ್ತಾರೆ. ಯಾರು ಚಿನ್ನ ಮತ್ತು ಬೆಳ್ಳಿಯನ್ನು ದಾಸ್ತಾನು ಮಾಡುತ್ತಾರೋ ಮತ್ತು ಅದನ್ನು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವುದಿಲ್ಲವೋ ಅವರಿಗೆ ಯಾತನಾಮಯ ಶಿಕ್ಷೆಯ ಬಗ್ಗೆ ಸುವಾರ್ತೆಯನ್ನು ನೀಡಿರಿ.
Tevbe 9:35
ನರಕಾಗ್ನಿಯಲ್ಲಿ ಅವುಗಳನ್ನು ಕಾಯಿಸಿ, ನಂತರ ಅದರಿಂದ ಅವರ ಹಣೆ, ಪಾರ್ಶ್ವ ಮತ್ತು ಬೆನ್ನುಗಳಿಗೆ ಬರೆ ಹಾಕುವ ದಿನ. (ಅವರೊಡನೆ ಹೇಳಲಾಗುವುದು): “ಇದು ನೀವು ನಿಮಗಾಗಿ ದಾಸ್ತಾನು ಮಾಡಿಟ್ಟ ಆಸ್ತಿಯಾಗಿದೆ. ನೀವು ದಾಸ್ತಾನು ಮಾಡಿದ ಆಸ್ತಿಯ ರುಚಿಯನ್ನು ನೋಡಿರಿ.”
Tevbe 9:36
ನಿಶ್ಚಯವಾಗಿಯೂ ಅಲ್ಲಾಹನ ಬಳಿ ತಿಂಗಳುಗಳ ಸಂಖ್ಯೆ ಹನ್ನೆರಡು. ಭೂಮ್ಯಾಕಾಶಗಳನ್ನು ಸೃಷ್ಟಿಸಿದ ದಿನದಂದಲೇ ಇದು ಅಲ್ಲಾಹನ ಗ್ರಂಥದಲ್ಲಿದೆ. ಅವುಗಳಲ್ಲಿ ನಾಲ್ಕು ಪವಿತ್ರ ತಿಂಗಳುಗಳು.[1] ಅದೇ ನೇರವಾದ ಧರ್ಮ. ಆದ್ದರಿಂದ ಆ ತಿಂಗಳುಗಳಲ್ಲಿ ನೀವು ನಿಮ್ಮ ಮೇಲೆಯೇ ಅಕ್ರಮವೆಸಗಬೇಡಿ. ಬಹುದೇವವಿಶ್ವಾಸಿಗಳು ಒಟ್ಟಾಗಿ ನಿಮ್ಮ ವಿರುದ್ಧ ಯುದ್ಧ ಮಾಡುವಂತೆ ನೀವೂ ಕೂಡ ಒಟ್ಟಾಗಿ ಅವರ ವಿರುದ್ಧ ಯುದ್ಧ ಮಾಡಿರಿ. ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹು ದೇವಭಯವುಳ್ಳವರೊಡನೆ ಇದ್ದಾನೆ.
———
[1] ಅಂದರೆ ಮುಹರ್‍ರಂ, ರಜಬ್, ದುಲ್‌ಕಅದ ಮತ್ತು ದುಲ್‌ಹಿಜ್ಜ ತಿಂಗಳುಗಳು.
Tevbe 9:37
ನಿಶ್ಚಯವಾಗಿಯೂ ನಸೀ (ಪವಿತ್ರ ತಿಂಗಳುಗಳನ್ನು ಹಿಂದೆ-ಮುಂದೆ ಮಾಡುವುದು) ಸತ್ಯನಿಷೇಧದಲ್ಲಿರುವ ಹೆಚ್ಚಳವಾಗಿದೆ. ಇದರಿಂದ ಸತ್ಯನಿಷೇಧಿಗಳನ್ನು ಇನ್ನೂ ಹೆಚ್ಚು ದಾರಿತಪ್ಪಿಸಲಾಗುತ್ತಿದೆ. ಒಂದು ವರ್ಷ ಅವರು ಅದನ್ನು (ಪವಿತ್ರ ತಿಂಗಳನ್ನು) ಪವಿತ್ರವಲ್ಲ ಎನ್ನುತ್ತಾರೆ ಮತ್ತು ಇನ್ನೊಂದು ವರ್ಷ ಪವಿತ್ರ ಎನ್ನುತ್ತಾರೆ. ಹೀಗೆ ಅವರು ಅಲ್ಲಾಹು ಪವಿತ್ರಗೊಳಿಸಿದ ತಿಂಗಳುಗಳ ಸಂಖ್ಯೆಯನ್ನು ಸರಿಹೊಂದಿಸಿ ಅಲ್ಲಾಹು ನಿಷೇಧಿಸಿದ್ದನ್ನು ಅನುಮತಿಸುತ್ತಾರೆ.[1] ಅವರ ದುಷ್ಕರ್ಮಗಳನ್ನು ಅವರಿಗೆ ಅಲಂಕರಿಸಿಕೊಡಲಾಗಿದೆ. ಸತ್ಯನಿಷೇಧಿಗಳಾದ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.
———
[1] ಇಸ್ಲಾಮೀ ಪೂರ್ವಕಾಲದಲ್ಲಿ ಅರಬ್ಬರು ವರ್ಷದಲ್ಲಿ ನಾಲ್ಕು ತಿಂಗಳುಗಳನ್ನು ಪವಿತ್ರವೆಂದು ಪರಿಗಣಿಸುತ್ತಿದ್ದರು. ಆ ತಿಂಗಳುಗಳಲ್ಲಿ ಅವರು ಯುದ್ಧ ಮಾಡುತ್ತಿರಲಿಲ್ಲ. ಆದರೆ ಪ್ರತಿ ವರ್ಷವೂ ಅವರು ಅದೇ ತಿಂಗಳುಗಳನ್ನು ಪವಿತ್ರವೆಂದು ಪರಿಗಣಿಸುತ್ತಿರಲಿಲ್ಲ. ಬದಲಿಗೆ, ತಮಗೆ ಹೊಂದಿಕೆಯಾಗುವಂತೆ ಅವುಗಳನ್ನು ಹಿಂದೆ ಮುಂದೆ ಮಾಡುತ್ತಿದ್ದರು. ಒಂದು ವರ್ಷ ಅವರು ಮುಹರ್‍ರಂ ತಿಂಗಳನ್ನು ಪವಿತ್ರವೆಂದು ಪರಿಗಣಿಸಿದರೆ ಇನ್ನೊಂದು ವರ್ಷ ಅದು ಅವರಿಗೆ ಹೊಂದಿಕೆಯಾಗದಿದ್ದರೆ ಅದನ್ನು ಪವಿತ್ರವೆಂದು ಪರಿಗಣಿಸುತ್ತಿರಲಿಲ್ಲ.
Tevbe 9:38
ಓ ಸತ್ಯವಿಶ್ವಾಸಿಗಳೇ! ನಿಮಗೇನಾಗಿದೆ? ಅಲ್ಲಾಹನ ಮಾರ್ಗದಲ್ಲಿ ಯುದ್ಧಕ್ಕೆ ಹೊರಡಿ ಎಂದು ನಿಮ್ಮೊಡನೆ ಹೇಳಲಾದಾಗ ನೀವು ಭೂಮಿಗೆ ಅಂಟಿಕೊಳ್ಳುತ್ತೀರಿ! ನೀವು ಪರಲೋಕದ ಬದಲು ಇಹಲೋಕವನ್ನೇ ನೆಚ್ಚಿಕೊಂಡಿದ್ದೀರಾ? ಆದರೆ ಪರಲೋಕಕ್ಕೆ ಹೋಲಿಸಿದರೆ ಇಹಲೋಕದ ಆನಂದಗಳು ಕ್ಷಣಿಕವಾಗಿವೆ.
Tevbe 9:39
ನೀವು ಯುದ್ಧಕ್ಕೆ ಹೊರಡದಿದ್ದರೆ ಅಲ್ಲಾಹು ನಿಮಗೆ ಯಾತನಾಮಯ ಶಿಕ್ಷೆಯನ್ನು ನೀಡುವನು ಮತ್ತು ನಿಮ್ಮ ಬದಲಿಗೆ ನೀವಲ್ಲದ ಬೇರೆ ಜನತೆಯನ್ನು ತರುವನು. ಅಲ್ಲಾಹನಿಗೆ ಯಾವುದೇ ತೊಂದರೆ ಮಾಡಲು ನಿಮ್ಮಿಂದ ಸಾಧ್ಯವಿಲ್ಲ. ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
Tevbe 9:40
ನೀವು ಅವರಿಗೆ (ಪ್ರವಾದಿಗೆ) ಸಹಾಯ ಮಾಡುವುದಿಲ್ಲವೆಂದಾದರೆ, ಅಲ್ಲಾಹು ಅವರಿಗೆ ಖಂಡಿತ ಸಹಾಯ ಮಾಡಿದ್ದಾನೆ. ಅವರು ಇಬ್ಬರಲ್ಲಿ ಒಬ್ಬರಾಗಿದ್ದು, ಸತ್ಯನಿಷೇಧಿಗಳು ಅವರನ್ನು (ಮಕ್ಕಾದಿಂದ) ಹೊರದಬ್ಬಿ, ಅವರಿಬ್ಬರು[1] ಗುಹೆಯಲ್ಲಿ ಆಶ್ರಯ ಪಡೆದಾಗ ಮತ್ತು ಅವರು ತಮ್ಮ ಸಹಚರನೊಡನೆ, “ಸಂಕಟಪಡಬೇಡ, ನಿಶ್ಚಯವಾಗಿಯೂ ಅಲ್ಲಾಹು ನಮ್ಮ ಜೊತೆಗಿದ್ದಾನೆ” ಎಂದು ಹೇಳಿದ ಸಂದರ್ಭ. ಆಗ ಅಲ್ಲಾಹು ಅವರ ಮೇಲೆ ತನ್ನ ಕಡೆಯ ಶಾಂತಿಯನ್ನು ಇಳಿಸಿದನು, ನೀವು ನೋಡದೇ ಇರುವಂತಹ ಸೈನ್ಯಗಳ ಮೂಲಕ ಅವರಿಗೆ ಶಕ್ತಿಯನ್ನು ನೀಡಿದನು ಮತ್ತು ಸತ್ಯನಿಷೇಧಿಗಳ ವಚನವನ್ನು ಕೆಳಮಟ್ಟಕ್ಕಿಳಿಸಿದನು. ಅಲ್ಲಾಹನ ವಚನವು ಅತ್ಯುನ್ನತವಾಗಿದೆ. ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
———
[1] ಅಂದರೆ ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮತ್ತು ಅವರ ಆಪ್ತ ಸಂಗಡಿಗರಾದ ಅಬೂಬಕರ್ (ಅವರ ಮೇಲೆ ಅಲ್ಲಾಹನ ಸಂತೃಪ್ತಿಯಿರಲಿ). ಈ ಘಟನೆ ನಡೆದದ್ದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮತ್ತು ಅಬೂಬಕರ್ (ಅವರ ಮೇಲೆ ಅಲ್ಲಾಹನ ಸಂತೃಪ್ತಿಯಿರಲಿ) ಮಕ್ಕಾದಿಂದ ಪಲಾಯನ ಮಾಡಿ ಹತ್ತಿರದ ಸೌರ್ ಗುಹೆಯಲ್ಲಿ ಆಶ್ರಯಪಡೆದಾಗ.
Tevbe 9:41
ನೀವು ಹಗುರವಾಗಿರುವಾಗಲೂ ಭಾರವಾಗಿರುವಾಗಲೂ ಯುದ್ಧಕ್ಕೆ ಹೊರಡಿರಿ.[1] ಅಲ್ಲಾಹನ ಮಾರ್ಗದಲ್ಲಿ ನಿಮ್ಮ ತನು-ಧನಗಳಿಂದ ಯುದ್ಧ ಮಾಡಿರಿ. ನೀವು ತಿಳಿದವರಾಗಿದ್ದರೆ ಅದೇ ನಿಮಗೆ ಶ್ರೇಷ್ಠವಾಗಿದೆ.
———
[1] ಅಂದರೆ ನೀವು ಯುವಕರಾಗಿದ್ದರೂ, ವೃದ್ಧರಾಗಿದ್ದರೂ, ಸಂತೋಷದಲ್ಲಿದ್ದರೂ, ಕಷ್ಟದಲ್ಲಿದ್ದರೂ, ವಾಹನವಿದ್ದರೂ, ಇಲ್ಲದಿದ್ದರೂ ಎಲ್ಲಾ ಸಂದರ್ಭಗಳಲ್ಲೂ ಯುದ್ಧಕ್ಕೆ ಹೊರಡಿರಿ.
Tevbe 9:42
ಅದು ಸಮೀಪದ (ಸುಲಭದ) ಲಾಭವಾಗಿದ್ದರೆ ಮತ್ತು ನಿರಾಯಾಸ ಪ್ರಯಾಣವಾಗಿದ್ದರೆ ಅವರು (ಕಪಟವಿಶ್ವಾಸಿಗಳು) ನಿಮ್ಮನ್ನು ಹಿಂಬಾಲಿಸುತ್ತಿದ್ದರು. ಆದರೆ ಅವರಿಗೆ ಅದು ವಿದೂರ ಮತ್ತು ಆಯಾಸಕರವಾಗಿದೆ. “ನಮಗೆ ಸಾಮರ್ಥ್ಯವಿರುತ್ತಿದ್ದರೆ ನಾವು ನಿಮ್ಮೊಂದಿಗೆ ಹೊರಡುತ್ತಿದ್ದೆವು” ಎಂದು ಅವರು ಅಲ್ಲಾಹನ ಮೇಲೆ ಆಣೆ ಮಾಡಿ ಹೇಳುತ್ತಾರೆ. ಅವರು ಅವರನ್ನೇ ನಾಶ ಮಾಡುತ್ತಿದ್ದಾರೆ. ನಿಶ್ಚಯವಾಗಿಯೂ ಅವರು ಸುಳ್ಳು ಹೇಳುತ್ತಿದ್ದಾರೆಂದು ಅಲ್ಲಾಹನಿಗೆ ತಿಳಿದಿದೆ.[1]
———
[1] ಯುದ್ಧಕ್ಕೆ ಹೋಗದಿರಲು ವಿನಾಯಿತಿಯಿರುವವರ ಹೊರತು ಉಳಿದವರೆಲ್ಲರೂ ತಬೂಕ್ ಯುದ್ಧಕ್ಕೆ ಹೊರಡಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆದೇಶ ಹೊರಡಿಸಿದಾಗ, ಕಪಟವಿಶ್ವಾಸಿಗಳು ಸುಳ್ಳು ನೆಪಗಳನ್ನು ಹೇಳಿ ಯುದ್ಧದಿಂದ ತಪ್ಪಿಸಿಕೊಂಡರು. ಇಲ್ಲಿಂದ ಮುಂದಕ್ಕೆ ಆ ಕಪಟವಿಶ್ವಾಸಿಗಳ ಬಗ್ಗೆ ವಿವರಿಸಲಾಗಿದೆ.
Tevbe 9:43
(ಪ್ರವಾದಿಯವರೇ) ಅಲ್ಲಾಹು ನಿಮ್ಮನ್ನು ಕ್ಷಮಿಸಲಿ. ನೀವೇಕೆ ಅವರಿಗೆ ಅನುಮತಿ ನೀಡಿದಿರಿ? ಸತ್ಯ ಹೇಳುವವರು ಯಾರು ಮತ್ತು ಸುಳ್ಳು ಹೇಳುವವರು ಯಾರೆಂದು ಸ್ಪಷ್ಟವಾಗಿ ತಿಳಿಯುವವರೆಗೆ (ನೀವು ಅನುಮತಿ ನೀಡಬಾರದಿತ್ತು).
Tevbe 9:44
ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವರು ತಮ್ಮ ತನು-ಧನಗಳಿಂದ (ಅಲ್ಲಾಹನ ಮಾರ್ಗದಲ್ಲಿ) ಯುದ್ಧ ಮಾಡದಿರಲು ನಿಮ್ಮೊಡನೆ ಅನುಮತಿ ಕೇಳುವುದಿಲ್ಲ. ದೇವಭಯವುಳ್ಳವರ ಬಗ್ಗೆ ಅಲ್ಲಾಹನಿಗೆ ಬಹಳ ಚೆನ್ನಾಗಿ ತಿಳಿದಿದೆ.
Tevbe 9:45
ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡದವರು ಹಾಗೂ ಹೃದಯದಲ್ಲಿ ಸಂಶಯವಿರುವವರು ಮಾತ್ರ ನಿಮ್ಮೊಡನೆ ಅನುಮತಿ ಕೇಳುತ್ತಾರೆ. ಅವರು ಅವರ ಸಂಶಯದಲ್ಲಿಯೇ ಅಲೆದಾಡುತ್ತಿದ್ದಾರೆ.
Tevbe 9:46
ಅವರಿಗೆ (ಯುದ್ಧಕ್ಕೆ) ಹೊರಡುವ ಇಚ್ಛೆಯಿದ್ದರೆ ಅವರು ಅದಕ್ಕೆ ಬೇಕಾದ ತಯಾರಿಯನ್ನು ಮಾಡುತ್ತಿದ್ದರು. ಆದರೆ ಅವರು ಅದಕ್ಕಾಗಿ ಎದ್ದೇಳುವುದನ್ನು ಅಲ್ಲಾಹು ಇಷ್ಟಪಡಲಿಲ್ಲ. ಆದ್ದರಿಂದ ಅವನು ಅವರನ್ನು ತಡೆದನು. ಕುಳಿತುಕೊಳ್ಳುವವರೊಡನೆ ನೀವೂ ಕುಳಿತುಕೊಳ್ಳಿರಿ ಎಂದು ಅವರೊಡನೆ ಹೇಳಲಾಯಿತು.
Tevbe 9:47
ಅವರು ನಿಮ್ಮ ಜೊತೆಗೆ ಹೊರಡುತ್ತಿದ್ದರೆ ನಿಮಗೆ ಗೊಂದಲವಲ್ಲದೆ ಇನ್ನೇನೂ ಹೆಚ್ಚುವಂತೆ ಮಾಡುತ್ತಿರಲಿಲ್ಲ. ಅವರು ನಿಮ್ಮ ನಡುವೆ ಒಡಕು ಮೂಡಿಸಲು ಸಕ್ರಿಯವಾಗಿ ಓಡಾಡುತ್ತಿದ್ದರು. ಅವರ ಮಾತುಗಳನ್ನು ಕಿವಿಗೊಟ್ಟು ಕೇಳುವವರೂ ನಿಮ್ಮಲ್ಲಿದ್ದಾರೆ. ಅಕ್ರಮಿಗಳ ಬಗ್ಗೆ ಅಲ್ಲಾಹು ಬಹಳ ಚೆನ್ನಾಗಿ ತಿಳಿದಿದ್ದಾನೆ.
Tevbe 9:48
ಅವರು ಇದಕ್ಕೆ ಮೊದಲು ಕೂಡ ಒಡಕು ಮೂಡಿಸಲು ಹವಣಿಸಿದ್ದರು ಮತ್ತು ನಿಮ್ಮ ಮುಂದೆ ಕಾರ್ಯಗಳನ್ನು ತಲೆಕೆಳಗೆ ಮಾಡಿದ್ದರು. ಎಲ್ಲಿಯವರೆಗೆಂದರೆ, ಸತ್ಯವು ಬಂದು ಅಲ್ಲಾಹನ ಆಜ್ಞೆಯು ಪ್ರಕಟವಾಗುವ ತನಕ. ಅದು ಅವರಿಗೆ ಎಷ್ಟು ಅಪ್ರಿಯವಾಗಿದ್ದರೂ ಸಹ.
Tevbe 9:49
ಅವರಲ್ಲಿ, “ನನಗೆ (ಮನೆಯಲ್ಲಿರಲು) ಅನುಮತಿ ನೀಡಿರಿ. ನನ್ನನ್ನು ಪರೀಕ್ಷೆಗೆ ಸಿಲುಕಿಸಬೇಡಿ” ಎಂದು ಹೇಳುವವರಿದ್ದಾರೆ. ತಿಳಿಯಿರಿ! ಅವರು ಪರೀಕ್ಷೆಯಲ್ಲೇ ಬಿದ್ದಿದ್ದಾರೆ. ನಿಶ್ಚಯವಾಗಿಯೂ ನರಕಾಗ್ನಿಯು ಸತ್ಯನಿಷೇಧಿಗಳನ್ನು ಆವರಿಸಿಕೊಂಡಿದೆ.
Tevbe 9:50
ನಿಮಗೆ ಒಳಿತಾದರೆ ಅವರಿಗೆ ಸಂಕಟವಾಗುತ್ತದೆ. ನಿಮಗೆ ಕೆಡುಕು ಸಂಭವಿಸಿದರೆ ಅವರು ಹೇಳುತ್ತಾರೆ: “ನಾವು ಮೊದಲೇ ನಮ್ಮ ವಿಷಯದಲ್ಲಿ ಜಾಗರೂಕರಾಗಿದ್ದೆವು.” ನಂತರ ಅವರು ಸಂತೋಷಪಡುತ್ತಾ ಮರಳಿ ಹೋಗುತ್ತಾರೆ.
Tevbe 9:51
ಹೇಳಿರಿ: “ಅಲ್ಲಾಹು ನಮಗೆ ವಿಧಿಸಿದ್ದಲ್ಲದೆ ಬೇರೇನೂ ನಮಗೆ ಸಂಭವಿಸುವುದಿಲ್ಲ. ಅವನೇ ನಮ್ಮ ರಕ್ಷಕ.” ಸತ್ಯವಿಶ್ವಾಸಿಗಳು ಅಲ್ಲಾಹನಲ್ಲಿಯೇ ಭರವಸೆಯಿಡಲಿ.
Tevbe 9:52
ಹೇಳಿರಿ: “ನೀವು ನಮ್ಮ ವಿಷಯದಲ್ಲಿ ಇವೆರಡರಲ್ಲಿ (ಹುತಾತ್ಮರಾಗುವುದು ಅಥವಾ ವಿಜಯ ಪತಾಕೆಯೊಂದಿಗೆ ಮರಳುವುದು) ಒಂದರ ಹೊರತು ಬೇರೇನು ಕಾಯುತ್ತೀರಿ? ಆದರೆ ಅಲ್ಲಾಹು ನಿಮಗೆ ಅವನ ಕಡೆಯಿಂದ ಅಥವಾ ನಮ್ಮ ಕೈಗಳಿಂದ ಶಿಕ್ಷೆ ನೀಡಬೇಕೆಂದು ನಾವು ಕಾಯುತ್ತೇವೆ. ಆದ್ದರಿಂದ ನೀವು ಕಾಯಿರಿ. ನಿಶ್ಚಯವಾಗಿಯೂ ನಾವೂ ನಿಮ್ಮೊಂದಿಗೆ ಕಾಯುತ್ತೇವೆ.”
Tevbe 9:53
ಹೇಳಿರಿ: “ನೀವು (ಅಲ್ಲಾಹನ ಮಾರ್ಗದಲ್ಲಿ) ನಿಮ್ಮ ಇಚ್ಛೆಯಿಂದ ಅಥವಾ ನಿಮ್ಮ ಇಚ್ಛೆಗೆ ವಿರುದ್ಧವಾಗಿ ಖರ್ಚು ಮಾಡಿರಿ. (ನೀವು ಯಾವ ರೀತಿಯಲ್ಲಿ ಖರ್ಚು ಮಾಡಿದರೂ) ಅದು ನಿಮ್ಮಿಂದ ಸ್ವೀಕಾರವಾಗುವುದಿಲ್ಲ. ನಿಶ್ಚಯವಾಗಿಯೂ ನೀವು ದುಷ್ಕರ್ಮಿಗಳಾದ ಜನರಾಗಿದ್ದಿರಿ.”
Tevbe 9:54
(ಅಲ್ಲಾಹನ ಮಾರ್ಗದಲ್ಲಿ) ಅವರು ಮಾಡುವ ಖರ್ಚುಗಳು ಅವರಿಂದ ಸ್ವೀಕಾರವಾಗದಂತೆ ತಡೆಯಾಗಿರುವುದು ಅವರು ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು ನಿಷೇಧಿಸಿರುವುದು, ಉದಾಸೀನವಾಗಿಯೇ ನಮಾಝ್ ಮಾಡಲು ಬರುವುದು ಮತ್ತು ಒಲ್ಲದ ಮನಸ್ಸಿನಿಂದ ಖರ್ಚು ಮಾಡುವುದು ಮುಂತಾದವುಗಳಲ್ಲದೆ ಇನ್ನೇನೂ ಅಲ್ಲ.
Tevbe 9:55
ಅವರ ಆಸ್ತಿ ಮತ್ತು ಮಕ್ಕಳನ್ನು ನೋಡಿ ಬೆರಗಾಗಬೇಡಿ. ಅಲ್ಲಾಹು ಅವುಗಳ ಮೂಲಕ ಅವರನ್ನು ಇಹಲೋಕದಲ್ಲೇ ಶಿಕ್ಷಿಸಲು ಮತ್ತು ಸತ್ಯನಿಷೇಧಿಗಳಾಗಿಯೇ ಅವರು ಪ್ರಾಣ ಬಿಡುವಂತಾಗಲು ಬಯಸುತ್ತಾನೆ.
Tevbe 9:56
ಅವರು ನಿಮ್ಮಲ್ಲಿ ಸೇರಿದವರು ಎಂದು (ಸಾಬೀತುಪಡಿಸಲು) ಅವರು ಅಲ್ಲಾಹನ ಹೆಸರಲ್ಲಿ ಆಣೆ ಮಾಡುತ್ತಾರೆ. ಆದರೆ ಅವರು ನಿಮ್ಮಲ್ಲಿ ಸೇರಿದವರಲ್ಲ. ಬದಲಿಗೆ ಅವರು ಅಂಜುಬುರುಕ ಜನರಾಗಿದ್ದಾರೆ.
Tevbe 9:57
ಅವರು (ಅಡಗಿಕೊಳ್ಳಲು) ಒಂದು ರಕ್ಷಣಾತಾಣವನ್ನು, ಗುಹೆಯನ್ನು ಅಥವಾ ನುಸುಳಿಕೊಳ್ಳಲು ಯಾವುದಾದರೂ ದ್ವಾರವನ್ನು ಕಂಡರೆ ಅದರ ಕಡೆಗೆ ದೌಡಾಯಿಸುತ್ತಾ ಓಡುತ್ತಾರೆ.
Tevbe 9:58
ದಾನಧರ್ಮಗಳನ್ನು ಹಂಚುವ ವಿಷಯದಲ್ಲಿ ನಿಮ್ಮನ್ನು ಟೀಕಿಸುವವರೂ ಅವರಲ್ಲಿದ್ದಾರೆ. ಅವರಿಗೆ ಅದರಿಂದ ಏನಾದರೂ ಕೊಟ್ಟುಬಿಟ್ಟರೆ ಸಂತೋಷವಾಗುತ್ತದೆ. ಅವರಿಗೆ ಏನೂ ಕೊಡದಿದ್ದರೆ ಅವರು ಸಿಟ್ಟಾಗುತ್ತಾರೆ.
Tevbe 9:59
ಅಲ್ಲಾಹು ಮತ್ತು ಅವನ ಸಂದೇಶವಾಹಕರು ಏನು ಕೊಟ್ಟರೋ ಅದರಲ್ಲಿ ಸಂತೃಪ್ತರಾಗಿ, “ನಮಗೆ ಅಲ್ಲಾಹು ಸಾಕು; ಅಲ್ಲಾಹು ಅವನ ಔದಾರ್ಯದಿಂದ ನಮಗೆ ಕೊಡುವನು ಮತ್ತು ಅವನ ಸಂದೇಶವಾಹಕರು ಕೂಡ ಕೊಡುವರು; ನಿಶ್ಚಯವಾಗಿಯೂ ನಾವು ಅಲ್ಲಾಹನಲ್ಲಿ ಮಾತ್ರ ನಿರೀಕ್ಷೆಯಿಡುತ್ತೇವೆ” ಎಂದು ಅವರು ಹೇಳುತ್ತಿದ್ದರೆ (ಎಷ್ಟು ಚೆನ್ನಾಗಿತ್ತು)!
Tevbe 9:60
ದಾನಧರ್ಮವನ್ನು (ಝಕಾತ್) ಬಡವರಿಗೆ, ನಿರ್ಗತಿಕರಿಗೆ, ಅದರ ಸಂಗ್ರಹಕರಿಗೆ, ಹೃದಯದಲ್ಲಿ (ಇಸ್ಲಾಮ್ ಧರ್ಮದ ಬಗ್ಗೆ) ಒಲವುಳ್ಳವರಿಗೆ, ಗುಲಾಮ ವಿಮೋಚನೆಗೆ, ಸಾಲದಲ್ಲಿರುವವರಿಗೆ, ಅಲ್ಲಾಹನ ಮಾರ್ಗದಲ್ಲಿ ಹೋರಾಡುವುದಕ್ಕೆ ಮತ್ತು ಪ್ರಯಾಣಿಕರಿಗೆ ಮಾತ್ರ ನೀಡಬೇಕಾಗಿದೆ. ಇದು ಅಲ್ಲಾಹು ವಿಧಿಸಿದ ಕಡ್ಡಾಯ ಬಾಧ್ಯತೆಯಾಗಿದೆ. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.
Tevbe 9:61
ಪ್ರವಾದಿಗೆ ತೊಂದರೆ ಕೊಡುವವರು ಮತ್ತು ಅವರು (ಎಲ್ಲರ ಮಾತುಗಳನ್ನೂ ಕೇಳುವ) ಕಿವಿಯಾಗಿದ್ದಾರೆ ಎಂದು ಹೇಳುವವರು ಅವರಲ್ಲಿದ್ದಾರೆ. ಹೇಳಿರಿ: “ಅವರು ನಿಮಗೆ ಒಳಿತನ್ನೇ ಬಯಸುವ ಕಿವಿಯಾಗಿದ್ದಾರೆ. ಅವರು ಅಲ್ಲಾಹನಲ್ಲಿ ವಿಶ್ವಾಸವಿಡುತ್ತಾರೆ ಮತ್ತು ಸತ್ಯವಿಶ್ವಾಸಿಗಳ ಮಾತನ್ನು ನಂಬುತ್ತಾರೆ. ಅವರು ನಿಮ್ಮಲ್ಲಿರುವ ಸತ್ಯವಿಶ್ವಾಸಿಗಳಿಗೆ ದಯೆಯಾಗಿದ್ದಾರೆ.” ಅಲ್ಲಾಹನ ಸಂದೇಶವಾಹಕರಿಗೆ ತೊಂದರೆ ಕೊಡುವವರು ಯಾರೋ ಅವರಿಗೆ ಯಾತನಾಮಯ ಶಿಕ್ಷೆಯಿದೆ.
Tevbe 9:62
ನಿಮ್ಮ ಸಂಪ್ರೀತಿಯನ್ನು ಪಡೆಯಲು ಅವರು ಅಲ್ಲಾಹನ ಮೇಲೆ ಆಣೆ ಮಾಡುತ್ತಾರೆ. ಆದರೆ ಅವರು ಸತ್ಯವಿಶ್ವಾಸಿಗಳಾಗಿದ್ದರೆ ಅಲ್ಲಾಹು ಮತ್ತು ಅವನ ಸಂದೇಶವಾಹಕರ ಸಂಪ್ರೀತಿಯನ್ನು ಪಡೆಯುವುದೇ ಅವರಿಗೆ ಹೆಚ್ಚು ಅರ್ಹವಾಗಿದೆ.
Tevbe 9:63
ಯಾರು ಅಲ್ಲಾಹನಿಗೆ ಮತ್ತು ಅವನ ಸಂದೇಶವಾಹಕರಿಗೆ ವಿರುದ್ಧವಾಗಿ ಸಾಗುತ್ತಾನೋ ಅವನಿಗೆ ನರಕವೇ ಗತಿ ಮತ್ತು ಅವನು ಅದರಲ್ಲಿ ಶಾಶ್ವತವಾಗಿ ವಾಸಿಸುತ್ತಾನೆಂದು ಅವರಿಗೆ ತಿಳಿದಿಲ್ಲವೇ? ಅದೇ ಅತಿದೊಡ್ಡ ಅಪಮಾನ.
Tevbe 9:64
ಅವರ ಹೃದಯದಲ್ಲಿರುವ ದುರ್ವಿಚಾರಗಳನ್ನು ಬಹಿರಂಗಪಡಿಸುವ ಅಧ್ಯಾಯವು ಅವತೀರ್ಣವಾಗಬಹುದೋ ಎಂದು ಕಪಟವಿಶ್ವಾಸಿಗಳು ಹೆದರುತ್ತಾರೆ. ಹೇಳಿರಿ: “ನೀವು ತಮಾಷೆ ಮಾಡುತ್ತಿರಿ. ನಿಶ್ಚಯವಾಗಿಯೂ ನೀವು ಹೆದರುವುದನ್ನು ಅಲ್ಲಾಹು ಬಹಿರಂಗಪಡಿಸುವನು.”
Tevbe 9:65
ನೀವು ಅವರೊಂದಿಗೆ ಕೇಳಿದರೆ ಅವರು ಹೇಳುತ್ತಾರೆ: “ನಾವು ಕೇವಲ ಹರಟೆ ಹೊಡೆಯುತ್ತಾ ಆಟವಾಡುತ್ತಿದ್ದೆವು.” ಕೇಳಿರಿ: “ಅಲ್ಲಾಹು, ಅವನ ವಚನಗಳು ಮತ್ತು ಅವನ ಸಂದೇಶವಾಹಕರನ್ನು ನೀವು ತಮಾಷೆ ಮಾಡುತ್ತಿದ್ದಿರಾ?
Tevbe 9:66
ನೆಪಗಳನ್ನು ಹೇಳಬೇಡಿ. ಸತ್ಯವಿಶ್ವಾಸಿಗಳಾದ ಬಳಿಕ ನೀವು ಸತ್ಯನಿಷೇಧಿಗಳಾಗಿದ್ದೀರಿ. ನಿಮ್ಮಲ್ಲಿ ಒಂದು ಗುಂಪನ್ನು ನಾವು ಕ್ಷಮಿಸಿದರೆ ಇನ್ನೊಂದು ಗುಂಪನ್ನು ಖಂಡಿತ ಶಿಕ್ಷಿಸುವೆವು. ಅದೇಕೆಂದರೆ ಅವರು ಅಪರಾಧಿಗಳಾಗಿದ್ದಾರೆ.”[1]
———
[1] ಕಪಟವಿಶ್ವಾಸಿಗಳು ಅಲ್ಲಾಹನನ್ನು, ಅವನ ವಚನಗಳನ್ನು ಮತ್ತು ಸಂದೇಶವಾಹಕರನ್ನು ತಮಾಷೆ ಮಾಡುತ್ತಿದ್ದರು. ಇದು ಸತ್ಯವಿಶ್ವಾಸಿಗಳ ಕಿವಿಗೆ ಬಿದ್ದು ನಂತರ ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿದಾಗ ಅವರು ಕಪಟವಿಶ್ವಾಸಿಗಳನ್ನು ಕರೆದು ವಿಚಾರಿಸುತ್ತಿದ್ದರು. ಆಗ ಅವರು ಮೊದಮೊದಲು ನಿರಾಕರಿಸಿದರೂ, ಸಾಕ್ಷ್ಯವನ್ನು ತೋರಿಸಿದಾಗ ಅದನ್ನು ಒಪ್ಪಿಕೊಂಡು, “ನಾವು ಕೇವಲ ಕಾಲಹರಣ ಮಾಡಲು ತಮಾಷೆ ಹೇಳುತ್ತಿದ್ದೆವು” ಎಂದು ನೆಪ ಹೇಳಿ ನುಣುಚಿಕೊಳ್ಳುತ್ತಿದ್ದರು. ಅಲ್ಲಾಹು, ಕುರ್‌ಆನ್ ಮತ್ತು ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವಹೇಳನ ಮಾಡುವುದು, ಅವರ ಬಗ್ಗೆ ತಿರಸ್ಕಾರದಿಂದ ಮಾತನಾಡುವುದು ಸತ್ಯನಿಷೇಧವೆಂದು ಈ ವಚನದಲ್ಲಿ ತಿಳಿಸಲಾಗಿದೆ.
Tevbe 9:67
ಕಪಟವಿಶ್ವಾಸಿ ಪುರುಷರು ಮತ್ತು ಕಪಟವಿಶ್ವಾಸಿ ಮಹಿಳೆಯರು ಒಂದೇ ವರ್ಗಕ್ಕೆ ಸೇರಿದವರು. ಅವರು ಕೆಡುಕನ್ನು ಆದೇಶಿಸುತ್ತಾರೆ ಮತ್ತು ಒಳಿತನ್ನು ವಿರೋಧಿಸುತ್ತಾರೆ, ಹಾಗೂ ತಮ್ಮ ಕೈಗಳನ್ನು ಮಡಚಿಕೊಳ್ಳುತ್ತಾರೆ.[1] ಅವರು ಅಲ್ಲಾಹನನ್ನು ಮರೆತಿದ್ದಾರೆ. ಆದ್ದರಿಂದ ಅಲ್ಲಾಹು ಕೂಡ ಅವರನ್ನು ಮರೆತಿದ್ದಾನೆ. ನಿಶ್ಚಯವಾಗಿಯೂ ಕಪಟವಿಶ್ವಾಸಿಗಳೇ ದುಷ್ಕರ್ಮಿಗಳು.
———
[1] ಅಂದರೆ ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಲು ಹಿಂಜರಿಯುತ್ತಾರೆ.
Tevbe 9:68
ಕಪಟವಿಶ್ವಾಸಿ ಪುರುಷರು ಮತ್ತು ಕಪಟವಿಶ್ವಾಸಿ ಮಹಿಳೆಯರಿಗೆ ಹಾಗೂ ಸತ್ಯನಿಷೇಧಿಗಳಿಗೆ ಅಲ್ಲಾಹು ನರಕಾಗ್ನಿಯ ಭರವಸೆ ನೀಡಿದ್ದಾನೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುತ್ತಾರೆ. ಅವರಿಗೆ ಅದೇ ಸಾಕು. ಅವರು ಅಲ್ಲಾಹನ ಶಾಪಕ್ಕೆ ಗುರಿಯಾಗಿದ್ದಾರೆ. ಅವರಿಗೆ ಶಾಶ್ವತ ಶಿಕ್ಷೆಯಿದೆ.
Tevbe 9:69
(ನಿಮ್ಮ ಸ್ಥಿತಿಯು) ನಿಮಗಿಂತ ಮೊದಲಿನ ಸತ್ಯನಿಷೇಧಿಗಳಂತೆ. ಅವರು ನಿಮಗಿಂತಲೂ ಹೆಚ್ಚು ಬಲಿಷ್ಠರಾಗಿದ್ದರು ಮತ್ತು ನಿಮಗಿಂತಲೂ ಹೆಚ್ಚು ಆಸ್ತಿ ಹಾಗೂ ಮಕ್ಕಳನ್ನು ಹೊಂದಿದ್ದರು. ಅವರು ಅವರ ಪಾಲನ್ನು ಪಡೆದು ಆನಂದಿಸಿದರು. ನಿಮಗಿಂತ ಮೊದಲಿನವರು ಅವರ ಪಾಲನ್ನು ಪಡೆದು ಆನಂದಿಸಿದಂತೆ ನೀವೂ ಸಹ ನಿಮ್ಮ ಪಾಲನ್ನು ಪಡೆದು ಆನಂದಿಸುತ್ತೀರಿ. ಅವರು ತಮಾಷೆಗಳಲ್ಲಿ ಕಾಲಹರಣ ಮಾಡಿದಂತೆ ನೀವು ಕೂಡ ತಮಾಷೆಗಳಲ್ಲಿ ಕಾಲಹರಣ ಮಾಡಿದ್ದೀರಿ. ಅಂತಹವರ ಕರ್ಮಗಳು ಇಹಲೋಕದಲ್ಲೂ, ಪರಲೋಕದಲ್ಲೂ ವ್ಯರ್ಥವಾಗಿವೆ. ಅವರೇ ನಷ್ಟಹೊಂದಿದವರು.
Tevbe 9:70
ಅವರಿಗಿಂತ ಮೊದಲಿನವರ—ನೂಹರ ಜನರು, ಆದ್ ಗೋತ್ರ, ಸಮೂದ್ ಗೋತ್ರ, ಇಬ್ರಾಹೀಮರ ಜನರು, ಮದ್ಯನ್ ದೇಶದ ಜನರು, ಬುಡಮೇಲಾದ ದೇಶದ ಜನರು—ಮುಂತಾದವರ ಸಮಾಚಾರಗಳು ಇವರಿಗೆ ತಲುಪಿಲ್ಲವೇ? ಅವರೆಲ್ಲರ ಬಳಿಗೆ ಅವರ ಪ್ರವಾದಿಗಳು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಬಂದಿದ್ದರು. ಅಲ್ಲಾಹು ಅವರಿಗೆ ಯಾವುದೇ ಅನ್ಯಾಯ ಮಾಡಿಲ್ಲ. ಆದರೆ ಅವರೇ ಅವರಿಗೆ ಅನ್ಯಾಯ ಮಾಡಿದರು.
Tevbe 9:71
ಸತ್ಯವಿಶ್ವಾಸಿ ಪುರುಷರು ಮತ್ತು ಸತ್ಯವಿಶ್ವಾಸಿ ಮಹಿಳೆಯರು ಪರಸ್ಪರ ಆಪ್ತಮಿತ್ರರು. ಅವರು ಒಳಿತನ್ನು ಆದೇಶಿಸುತ್ತಾರೆ ಮತ್ತು ಕೆಡುಕನ್ನು ವಿರೋಧಿಸುತ್ತಾರೆ, ನಮಾಝ್ ಸಂಸ್ಥಾಪಿಸುತ್ತಾರೆ, ಝಕಾತ್ ನೀಡುತ್ತಾರೆ ಮತ್ತು ಅಲ್ಲಾಹು ಹಾಗೂ ಅವನ ಸಂದೇಶವಾಹಕರ ಆಜ್ಞಾಪಾಲನೆ ಮಾಡುತ್ತಾರೆ. ಅಲ್ಲಾಹು ಅವರಿಗೆ ಖಂಡಿತ ದಯೆ ತೋರುವನು. ನಿಶ್ಚಯವಾಗಿಯೂ ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
Tevbe 9:72
ಅಲ್ಲಾಹು ಸತ್ಯವಿಶ್ವಾಸಿ ಪುರುಷರು ಮತ್ತು ಸತ್ಯವಿಶ್ವಾಸಿ ಮಹಿಳೆಯರಿಗೆ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳ ಭರವಸೆ ನೀಡಿದ್ದಾನೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುತ್ತಾರೆ. ಚಿರಸ್ಥಾಯಿಯಾದ ಉದ್ಯಾನಗಳಲ್ಲಿರುವ ಮನಮೋಹಕ ವಸತಿಗಳ ಭರವಸೆಯನ್ನೂ ನೀಡಿದ್ದಾನೆ. ಆದರೆ ಅಲ್ಲಾಹನ ಸಂಪ್ರೀತಿಯೇ ಎಲ್ಲಕ್ಕಿಂತಲೂ ದೊಡ್ಡದು. ಅದೇ ಅತಿದೊಡ್ಡ ಯಶಸ್ಸು.
Tevbe 9:73
ಓ ಪ್ರವಾದಿಯವರೇ! ಸತ್ಯನಿಷೇಧಿಗಳ ಮತ್ತು ಕಪಟವಿಶ್ವಾಸಿಗಳ ವಿರುದ್ಧ ಹೋರಾಡಿರಿ. ಅವರ ವಿಷಯದಲ್ಲಿ ಕಟುವಾಗಿ ವರ್ತಿಸಿರಿ. ಅವರ ವಾಸಸ್ಥಳವು ನರಕವಾಗಿದೆ. ಆ ಗಮ್ಯಸ್ಥಾನವು ಬಹಳ ನಿಕೃಷ್ಟವಾಗಿದೆ.
Tevbe 9:74
ನಾವು (ಪ್ರವಾದಿಯ ವಿರುದ್ಧ ಏನೂ) ಹೇಳಿಲ್ಲವೆಂದು ಅವರು (ಕಪಟವಿಶ್ವಾಸಿಗಳು) ಅಲ್ಲಾಹನ ಮೇಲೆ ಆಣೆ ಮಾಡಿ ಹೇಳುತ್ತಾರೆ. ಆದರೆ (ವಾಸ್ತವದಲ್ಲಿ) ಅವರು ಸತ್ಯನಿಷೇಧದ ಮಾತನ್ನೇ ಹೇಳಿದ್ದಾರೆ. ಇಸ್ಲಾಮ್ ಸ್ವೀಕರಿಸಿದ ಬಳಿಕ ಅವರು ಸತ್ಯನಿಷೇಧಿಗಳಾಗಿ ಮಾರ್ಪಟ್ಟಿದ್ದಾರೆ. ಅವರಿಗೆ ಮಾಡಲು ಸಾಧ್ಯವಾಗದ ಸಂಗತಿಗಾಗಿ (ಪ್ರವಾದಿಯ ಹತ್ಯೆಗಾಗಿ) ಅವರು ಹವಣಿಸಿದ್ದರು. ಅಲ್ಲಾಹು ಅವನ ಔದಾರ್ಯದಿಂದ ಅವರನ್ನು ಶ್ರೀಮಂತಗೊಳಿಸಿದನು ಮತ್ತು ಅವನ ಸಂದೇಶವಾಹಕರು ಕೂಡ (ಅವರನ್ನು ಶ್ರೀಮಂತಗೊಳಿಸಿದರು) ಎಂಬುದಲ್ಲದೆ ಅವರ ಪ್ರತೀಕಾರಕ್ಕೆ ಬೇರೇನು ಕಾರಣವಿದೆ? ಅವರು ಪಶ್ಚಾತ್ತಾಪಪಟ್ಟು ಮರಳಿದರೆ ಅದು ಅವರಿಗೇ ಒಳ್ಳೆಯದು. ಅವರು ಬೆನ್ನು ತೋರಿಸಿ ನಡೆದರೆ, ಅಲ್ಲಾಹು ಅವರಿಗೆ ಇಹಲೋಕದಲ್ಲೂ, ಪರಲೋಕದಲ್ಲೂ ಯಾತನಾಮಯ ಶಿಕ್ಷೆಯನ್ನು ನೀಡುವನು. ಭೂಮಿಯಲ್ಲಿ ಅವರಿಗೆ ಯಾವುದೇ ರಕ್ಷಕರು ಅಥವಾ ಸಹಾಯಕರು ಇರಲಾರರು.
Tevbe 9:75
“ಅಲ್ಲಾಹು ಅವನ ಔದಾರ್ಯದಿಂದ ನಮಗೆ ದೌಲತ್ತು ನೀಡಿದರೆ ನಿಶ್ಚಯವಾಗಿಯೂ ನಾವು ದಾನಧರ್ಮ ಮಾಡುತ್ತೇವೆ ಮತ್ತು ನೀತಿವಂತರಲ್ಲಿ ಸೇರಿಕೊಳ್ಳುತ್ತೇವೆ” ಎಂದು ಅಲ್ಲಾಹನೊಡನೆ ಕರಾರು ಮಾಡಿದವರು ಅವರಲ್ಲಿದ್ದಾರೆ.
Tevbe 9:76
ಆದರೆ ಅವನು ಅವರಿಗೆ ಅವನ ಔದಾರ್ಯದಿಂದ ದೌಲತ್ತು ನೀಡಿದಾಗ ಅವರು ಜಿಪುಣತನ ತೋರಿದರು ಮತ್ತು ಕಡೆಗಣಿಸುತ್ತಾ ತಿರುಗಿ ನಡೆದರು.
Tevbe 9:77
ಆದ್ದರಿಂದ ಅವರಿಗೆ ಶಿಕ್ಷೆಯಾಗಿ ಅಲ್ಲಾಹು ಅವರ ಹೃದಯಗಳಲ್ಲಿ ಕಪಟತೆಯನ್ನು ಹಾಕಿದನು. ಅವರು ಅವನನ್ನು ಭೇಟಿಯಾಗುವ ದಿನದ ತನಕ (ಅದು ಅವರ ಹೃದಯಗಳಲ್ಲಿರುವುದು). ಅದೇಕೆಂದರೆ, ಅವರು ಅಲ್ಲಾಹನಿಗೆ ನೀಡಿದ ಭರವಸೆಯನ್ನು ಮುರಿದರು. ಅದೇಕೆಂದರೆ, ಅವರು ಸುಳ್ಳು ಹೇಳುವವರಾಗಿದ್ದರು.
Tevbe 9:78
ಅವರ ರಹಸ್ಯಗಳನ್ನು ಮತ್ತು ಅವರ ಗೂಢ ಸಂಭಾಷಣೆಗಳನ್ನು ಅಲ್ಲಾಹು ತಿಳಿಯುತ್ತಾನೆಂದು, ಮತ್ತು ಅಲ್ಲಾಹು ಅಗೋಚರ ಸಂಗತಿಗಳನ್ನು ಬಹಳ ಚೆನ್ನಾಗಿ ತಿಳಿಯುತ್ತಾನೆಂದು ಅವರಿಗೆ ಗೊತ್ತಿಲ್ಲವೇ?
Tevbe 9:79
ಸ್ವಯಂಪ್ರೇರಣೆಯಿಂದ ದಾನ ಮಾಡುವ ಸತ್ಯವಿಶ್ವಾಸಿಗಳನ್ನು ಮತ್ತು ದಾನ ಮಾಡಲು ತಮ್ಮ ದಿನಗೂಲಿಯ ಹೊರತು ಬೇರೇನೂ ಇಲ್ಲದವರನ್ನು ಅವರು ಟೀಕಿಸುತ್ತಾರೆ. ಅವರು ಅವರನ್ನು ತಮಾಷೆ ಮಾಡುತ್ತಾರೆ. ಅಲ್ಲಾಹು ಕೂಡ ಅವರನ್ನು (ಕಪಟವಿಶ್ವಾಸಿಗಳನ್ನು) ತಮಾಷೆ ಮಾಡುವನು. ಅವರಿಗೆ ಯಾತನಾಮಯ ಶಿಕ್ಷೆಯಿದೆ.
Tevbe 9:80
ನೀವು ಅವರಿಗೋಸ್ಕರ (ಅಲ್ಲಾಹನಲ್ಲಿ) ಕ್ಷಮೆಯಾಚನೆ ಮಾಡಿದರೂ ಅಥವಾ ಕ್ಷಮೆಯಾಚನೆ ಮಾಡದಿದ್ದರೂ, ನೀವು ಅವರಿಗೋಸ್ಕರ ಎಪ್ಪತ್ತು ಸಲ ಕ್ಷಮೆಯಾಚನೆ ಮಾಡಿದರೂ ಅಲ್ಲಾಹು ಅವರನ್ನು ಕ್ಷಮಿಸುವುದಿಲ್ಲ. ಅದೇಕೆಂದರೆ ಅವರು ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ನಿಷೇಧಿಸಿದ್ದಾರೆ. ವಿಧೇಯತೆಯಿಲ್ಲದ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.
Tevbe 9:81
(ಯುದ್ಧದಿಂದ ತಪ್ಪಿಸಿ) ಹಿಂದೆ ಉಳಿದವರು ಅಲ್ಲಾಹನ ಸಂದೇಶವಾಹಕರು ಯುದ್ಧಕ್ಕೆ ಹೊರಟ ನಂತರ ತಾವು ಹಿಂದೆ ಉಳಿದುದರ ಬಗ್ಗೆ ಸಂತೃಪ್ತರಾಗಿದ್ದಾರೆ. ಅವರು ತಮ್ಮ ತನು-ಧನಗಳಿಂದ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಲು ಇಷ್ಟಪಡಲಿಲ್ಲ. ಅವರು ಹೇಳಿದರು: “ಈ ಉರಿಬಿಸಿಲಿನಲ್ಲಿ ಯುದ್ಧಕ್ಕೆ ಹೋಗಬೇಡಿ.” ಹೇಳಿರಿ: “ನರಕದ ಬೆಂಕಿ ಅದಕ್ಕಿಂತಲೂ ತೀಕ್ಷ್ಣ ಉರಿಯನ್ನು ಹೊಂದಿದೆ.” ಅವರು ಅದನ್ನು ಅರ್ಥಮಾಡಿಕೊಳ್ಳುತ್ತಿದ್ದರೆ!
Tevbe 9:82
ಆದ್ದರಿಂದ ಅವರು ಮಾಡಿಟ್ಟ ದುಷ್ಕರ್ಮಗಳ ಫಲವಾಗಿ ಅವರು ಕನಿಷ್ಠ ನಗುತ್ತಿರಲಿ ಮತ್ತು ಗರಿಷ್ಠ ಅಳುತ್ತಿರಲಿ.
Tevbe 9:83
(ಯುದ್ಧಾನಂತರ) ಅಲ್ಲಾಹು ನಿಮ್ಮನ್ನು (ಸುರಕ್ಷಿತವಾಗಿ) ಅವರಲ್ಲಿನ ಒಂದು ಗುಂಪಿನ ಬಳಿಗೆ ಹಿಂದಿರುಗಿಸಿದರೆ, ಇನ್ನೊಂದು ಯುದ್ಧಕ್ಕೆ ಬರುತ್ತೇವೆಂದು ಅವರು ನಿಮ್ಮಲ್ಲಿ ಅನುಮತಿ ಕೇಳುತ್ತಾರೆ. ಹೇಳಿರಿ: “ನೀವು ಯಾವತ್ತೂ ನನ್ನ ಜೊತೆಗೆ ಬರುವಂತಿಲ್ಲ. ನೀವು ಯಾವತ್ತೂ ನನ್ನ ಜೊತೆಗೂಡಿ ವೈರಿಗಳೊಡನೆ ಯುದ್ಧ ಮಾಡುವಂತಿಲ್ಲ. ನಿಶ್ಚಯವಾಗಿಯೂ ಮೊದಲ ಸಂದರ್ಭದಲ್ಲಿ ನೀವು (ಯುದ್ಧಕ್ಕೆ ಹೋಗದೆ) ಹಿಂದೆ ಉಳಿಯಲು ಇಷ್ಟಪಟ್ಟಿರಿ. ಆದ್ದರಿಂದ ನೀವು ಹಿಂದೆ ಉಳಿದವರೊಂದಿಗೇ ಇದ್ದುಕೊಳ್ಳಿ.”
Tevbe 9:84
ಅವರಲ್ಲಿ ಯಾರಾದರೂ ಇಹಲೋಕ ತ್ಯಜಿಸಿದರೆ ಅವನಿಗೆ ಅಂತ್ಯಕ್ರಿಯೆಯ ನಮಾಝ್ ಮಾಡಬೇಡಿ. ಅವನ ಸಮಾಧಿಯ ಬಳಿ ನಿಲ್ಲಬೇಡಿ. ನಿಶ್ಚಯವಾಗಿಯೂ ಅವರು ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ನಿಷೇಧಿಸಿದ್ದಾರೆ ಮತ್ತು ಅವಿಧೇಯರಾಗಿಯೇ ಪ್ರಾಣಬಿಟ್ಟಿದ್ದಾರೆ.
Tevbe 9:85
ಅವರ ಆಸ್ತಿ ಮತ್ತು ಮಕ್ಕಳನ್ನು ನೋಡಿ ಬೆರಗಾಗಬೇಡಿ. ಅಲ್ಲಾಹು ಅವುಗಳ ಮೂಲಕ ಅವರನ್ನು ಇಹಲೋಕದಲ್ಲೇ ಶಿಕ್ಷಿಸಲು ಮತ್ತು ಸತ್ಯನಿಷೇಧಿಗಳಾಗಿಯೇ ಅವರು ಪ್ರಾಣಬಿಡುವಂತಾಗಲು ಬಯಸುತ್ತಾನೆ.
Tevbe 9:86
“ಅಲ್ಲಾಹನಲ್ಲಿ ವಿಶ್ವಾಸವಿಡಿ ಮತ್ತು ಅವನ ಸಂದೇಶವಾಹಕರ ಜೊತೆಗೂಡಿ ಯುದ್ಧ ಮಾಡಿ” ಎಂಬ ಆಜ್ಞೆಯಿರುವ ಒಂದು ಅಧ್ಯಾಯವು ಅವತೀರ್ಣವಾದರೆ, ಅವರಲ್ಲಿನ ಧನಿಕರ ಒಂದು ಗುಂಪು ನಿಮ್ಮ ಬಳಿಗೆ ಬಂದು, “ದಯವಿಟ್ಟು ನಮ್ಮನ್ನು ಬಿಟ್ಟುಬಿಡಿ; ನಾವು (ನಮ್ಮ ಮನೆಯಲ್ಲೇ) ಉಳಿಯುತ್ತೇವೆ” ಎಂದು ಹೇಳುತ್ತಾ ನಿಮ್ಮಲ್ಲಿ (ಯುದ್ಧದಿಂದ ತಪ್ಪಿಸಿಕೊಳ್ಳಲು) ಅನುಮತಿ ಕೇಳಿದರು.
Tevbe 9:87
(ಯುದ್ಧದಿಂದ ವಿನಾಯಿತಿ ನೀಡಲಾದ) ಮಹಿಳೆಯರೊಡನೆ ಉಳಿದುಕೊಳ್ಳಲು ಅವರು ಇಷ್ಟಪಟ್ಟರು. ಅವರ ಹೃದಯಗಳಿಗೆ ಮೊಹರು ಹಾಕಲಾಗಿದೆ. ಆದ್ದರಿಂದ ಅವರು ಅರ್ಥಮಾಡಿಕೊಳ್ಳುವುದಿಲ್ಲ.
Tevbe 9:88
ಆದರೆ ಸಂದೇಶವಾಹಕರು ಮತ್ತು ಅವರ ಜೊತೆಯಲ್ಲಿದ್ದ ಸತ್ಯವಿಶ್ವಾಸಿಗಳು ತಮ್ಮ ತನು-ಧನಗಳಿಂದ ಯುದ್ಧ ಮಾಡಿದರು. ಅವರೇ ಒಳಿತನ್ನು ಹೊಂದಿರುವವರು. ಅವರೇ ಯಶಸ್ವಿಯಾದವರು.
Tevbe 9:89
ಅಲ್ಲಾಹು ಅವರಿಗೆ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳನ್ನು ಸಿದ್ಧಗೊಳಿಸಿದ್ದಾನೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುತ್ತಾರೆ. ಅದೇ ಅತಿದೊಡ್ಡ ವಿಜಯ.
Tevbe 9:90
ಮರುಭೂಮಿ ನಿವಾಸಿಗಳಾದ ಅರಬ್ಬಿಗಳಲ್ಲಿ (ಯುದ್ಧಕ್ಕೆ ತೆರಳದಿರಲು) ವಿನಾಯಿತಿ ಹೊಂದಿರುವವರು ಅವರಿಗೆ ಅನುಮತಿ ಸಿಗುವುದಕ್ಕಾಗಿ ನಿಮ್ಮ ಬಳಿಗೆ ಬಂದರು. ಆದರೆ ಅಲ್ಲಾಹು ಮತ್ತು ಅವನ ಸಂದೇಶವಾಹಕರೊಡನೆ ಸುಳ್ಳು ಹೇಳಿದವರು (ಮನೆಯಲ್ಲೇ) ಕುಳಿತರು. ಅವರಲ್ಲಿರುವ ಸತ್ಯನಿಷೇಧಿಗಳಿಗೆ ಯಾತನಾಮಯ ಶಿಕ್ಷೆಯು ಕಾದಿದೆ.
Tevbe 9:91
(ಯುದ್ಧದಲ್ಲಿ ಪಾಲ್ಗೊಳ್ಳದ) ದುರ್ಬಲರ ಮೇಲೆ, ರೋಗಿಗಳ ಮೇಲೆ ಮತ್ತು ಖರ್ಚು ಮಾಡಲು ಏನೂ ಇಲ್ಲದವರ ಮೇಲೆ ದೋಷವಿಲ್ಲ—ಅವರು ಅಲ್ಲಾಹು ಮತ್ತು ಅವನ ಸಂದೇಶವಾಹಕರ ಹಿತಚಿಂತಕರಾಗಿದ್ದರೆ. ಇಂತಹ ಸಜ್ಜನರ ಮೇಲೆ ಆರೋಪ ಹೊರಿಸಲು ಯಾವುದೇ ಅವಕಾಶವಿಲ್ಲ. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
Tevbe 9:92
ಅವರು ನಿಮ್ಮ ಬಳಿಗೆ ಬಂದು, ಅವರನ್ನು ಕೂಡ ಯುದ್ಧಕ್ಕೆ ಒಯ್ಯಬೇಕೆಂದು ವಿನಂತಿಸಿದಾಗ, “ನಿಮ್ಮನ್ನು ಒಯ್ಯುವಂತಹ ಯಾವುದೇ ಸವಾರಿ ನನ್ನ ಬಳಿಯಿಲ್ಲ” ಎಂದು ನೀವು ಉತ್ತರಿಸಿದಿರಿ; ಆಗ (ಅಲ್ಲಾಹನ ಮಾರ್ಗದಲ್ಲಿ) ಖರ್ಚು ಮಾಡಲು ಚಿಕ್ಕಾಸು ಕೂಡ ಇಲ್ಲದೆ ಬೇಸರದಿಂದ ಕಣ್ಣೀರು ಸುರಿಸುತ್ತಾ ಹಿಂದಿರುಗಿ ಹೋದವರ ಮೇಲೂ ದೋಷವಿಲ್ಲ.
Tevbe 9:93
ಆರೋಪ ಹೊರಿಸಲು ಅವಕಾಶವಿರುವುದು ಧನಿಕರಾಗಿದ್ದೂ ಸಹ (ಯುದ್ಧದಿಂದ ವಿನಾಯಿತಿ ಪಡೆಯಲು) ನಿಮ್ಮಲ್ಲಿ ಅನುಮತಿ ಕೇಳುವವರ ಮೇಲೆ ಮಾತ್ರ. ಅವರು (ಯುದ್ಧದಿಂದ ವಿನಾಯಿತಿ ನೀಡಲಾದ) ಮಹಿಳೆಯರೊಡನೆ ಕುಳಿತುಕೊಳ್ಳಲು ಇಷ್ಟಪಟ್ಟರು. ಅಲ್ಲಾಹು ಅವರ ಹೃದಯಗಳಿಗೆ ಮೊಹರು ಹಾಕಿದ್ದಾನೆ. ಆದ್ದರಿಂದ ಅವರು ತಿಳಿಯುವುದಿಲ್ಲ.
Tevbe 9:94
ನೀವು (ಯುದ್ಧದಿಂದ) ಮರಳಿ ಅವರ ಬಳಿಗೆ ಹೋದಾಗ, ಅವರು ನಿಮ್ಮ ಮುಂದೆ ನೆಪಗಳನ್ನು ಹೇಳುತ್ತಾರೆ. ಹೇಳಿರಿ: “ನೀವು ನೆಪಗಳನ್ನು ಹೇಳಬೇಡಿ. ನಾವು ನಿಮ್ಮನ್ನು ಎಂದಿಗೂ ನಂಬುವುದಿಲ್ಲ. ನಿಮ್ಮ ಕೆಲವು ಸಮಾಚಾರಗಳನ್ನು ಅಲ್ಲಾಹು ನಮಗೆ ತಿಳಿಸಿದ್ದಾನೆ. ಅಲ್ಲಾಹು ಮತ್ತು ಅವನ ಸಂದೇಶವಾಹಕರು ನೀವು ಮಾಡುವ ಕೆಲಸವನ್ನು ನೋಡುತ್ತಾರೆ. ನಂತರ ನಿಮ್ಮನ್ನು ದೃಶ್ಯ-ಅದೃಶ್ಯಗಳನ್ನು ತಿಳಿದವನ (ಅಲ್ಲಾಹನ) ಬಳಿಗೆ ಮರಳಿಸಲಾಗುವುದು. ಆಗ ನೀವು ಮಾಡುತ್ತಿದ್ದ ಕರ್ಮಗಳ ಬಗ್ಗೆ ಅವನು ನಿಮಗೆ ವಿವರಿಸಿಕೊಡುವನು.”
Tevbe 9:95
ನೀವು ಅವರ ಬಳಿಗೆ ಮರಳಿದಾಗ, ಅವರನ್ನು ಅವರ ಪಾಡಿಗೆ ಬಿಟ್ಟುಬಿಡುವುದಕ್ಕಾಗಿ ಅವರು ನಿಮ್ಮ ಮುಂದೆ ಅಲ್ಲಾಹನ ಹೆಸರಲ್ಲಿ ಆಣೆ ಮಾಡುತ್ತಾರೆ. ನೀವು ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ. ನಿಜವಾಗಿಯೂ ಅವರು ಹೊಲಸು ಜನರು. ಅವರ ವಾಸಸ್ಥಳ ನರಕವಾಗಿದೆ. ಅದು ಅವರು ಮಾಡಿದ ದುಷ್ಕರ್ಮಗಳ ಫಲವಾಗಿದೆ.
Tevbe 9:96
ನಿಮ್ಮ ಸಂಪ್ರೀತಿಯನ್ನು ಪಡೆಯಲು ಅವರು ಅಲ್ಲಾಹನ ಮೇಲೆ ಆಣೆ ಮಾಡುತ್ತಾರೆ. ನೀವು ಅವರ ಬಗ್ಗೆ ಸಂಪ್ರೀತರಾದರೂ, ಅಲ್ಲಾಹು ಆ ದುಷ್ಕರ್ಮಿಗಳ ಬಗ್ಗೆ ಖಂಡಿತ ಸಂಪ್ರೀತನಾಗುವುದಿಲ್ಲ.
Tevbe 9:97
ಮರುಭೂಮಿ ನಿವಾಸಿಗಳಾದ ಅರಬ್ಬಿಗಳು ಕಡು ನಿಷೇಧ ಮತ್ತು ಕಪಟತೆಯಿರುವ ಜನರಾಗಿದ್ದಾರೆ. ಅಲ್ಲಾಹು ಅವನ ಸಂದೇಶವಾಹಕರಿಗೆ ಅವತೀರ್ಣಗೊಳಿಸಿದ ನಿಯಮಗಳ ಬಗ್ಗೆ ಅಜ್ಞರಾಗಿರಲು ಅವರು ಹೆಚ್ಚು ಅರ್ಹರಾಗಿದ್ದಾರೆ. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.
Tevbe 9:98
(ಅಲ್ಲಾಹನ ಮಾರ್ಗದಲ್ಲಿ) ಖರ್ಚು ಮಾಡಿದ್ದನ್ನು ದಂಡವೆಂದು ಪರಿಗಣಿಸುವವರು ಮತ್ತು ನಿಮಗೆ ಕೆಟ್ಟ ಕಾಲಚಕ್ರಗಳು ಬರುವುದನ್ನು ಕಾಯುವವರು ಮರುಭೂಮಿ ನಿವಾಸಿಗಳಾದ ಅರಬ್ಬಿಗಳಲ್ಲಿದ್ದಾರೆ. ಕೆಟ್ಟ ಕಾಲಚಕ್ರಗಳು ಅವರಿಗೇ ಬರಲಿ! ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
Tevbe 9:99
ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವರು ಮತ್ತು (ಅಲ್ಲಾಹನ ಮಾರ್ಗದಲ್ಲಿ) ಖರ್ಚು ಮಾಡಿದ್ದನ್ನು ಅಲ್ಲಾಹನ ಸಾಮೀಪ್ಯ ಪಡೆಯುವ ಮತ್ತು ಸಂದೇಶವಾಹಕರ ಪ್ರಾರ್ಥನೆಗಳಲ್ಲಿ ಒಳಪಡುವ ಮಾರ್ಗವೆಂದು ಪರಿಗಣಿಸುವವರೂ ಕೂಡ ಆ ಮರುಭೂಮಿ ನಿವಾಸಿಗಳಾದ ಅರಬ್ಬಿಗಳಲ್ಲಿದ್ದಾರೆ. ತಿಳಿಯಿರಿ! ನಿಶ್ಚಯವಾಗಿಯೂ ಅದು ಅವರಿಗೆ ಸಾಮೀಪ್ಯ ಪಡೆಯುವ ಮಾರ್ಗವಾಗಿದೆ. ಅಲ್ಲಾಹು ಅವರನ್ನು ತನ್ನ ಕರುಣೆಯಲ್ಲಿ ಸೇರಿಸುವನು. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
Tevbe 9:100
ಮುಹಾಜಿರ್ ಮತ್ತು ಅನ್ಸಾರ್‌ಗಳಲ್ಲಿ ಮೊತ್ತಮೊದಲು ಸತ್ಯವಿಶ್ವಾಸ ಸ್ವೀಕರಿಸಿ ಮುಂಚೂಣಿಯಲ್ಲಿರುವವರ ಬಗ್ಗೆ ಮತ್ತು ಒಳಿತಿನ ಮೂಲಕ ಅವರನ್ನು ಹಿಂಬಾಲಿಸಿದವರ ಬಗ್ಗೆ ಅಲ್ಲಾಹು ಸಂಪ್ರೀತನಾಗಿದ್ದಾನೆ. ಅವನ ಬಗ್ಗೆ ಅವರೂ ಸಂಪ್ರೀತರಾಗಿದ್ದಾರೆ. ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳನ್ನು ಅವನು ಅವರಿಗಾಗಿ ಸಿದ್ಧಗೊಳಿಸಿದ್ದಾನೆ. ಅವರು ಅದರಲ್ಲಿ ಸದಾಕಾಲ ಶಾಶ್ವತವಾಗಿ ವಾಸಿಸುವರು. ಅದೇ ಅತಿದೊಡ್ಡ ವಿಜಯ.
Tevbe 9:101
ನಿಮ್ಮ ಸುತ್ತಮುತ್ತಲಲ್ಲಿರುವ ಅಲೆಮಾರಿ ಅರಬ್ಬಿಗಳಲ್ಲಿ ಕಪಟವಿಶ್ವಾಸಿಗಳಿದ್ದಾರೆ. ಮದೀನಾ ನಿವಾಸಿಗಳಲ್ಲೂ ಇದ್ದಾರೆ. ಅವರು ಕಪಟತೆಯಲ್ಲಿ ಮಿತಿಮೀರಿದ್ದಾರೆ. ನಿಮಗೆ ಅವರ ಬಗ್ಗೆ ತಿಳಿದಿಲ್ಲ. ಆದರೆ ನಮಗೆ ಅವರ ಬಗ್ಗೆ ತಿಳಿದಿದೆ. ನಾವು ಸದ್ಯವೇ ಅವರನ್ನು ಎರಡು ಬಾರಿ ಶಿಕ್ಷಿಸುವೆವು. ನಂತರ ಅವರನ್ನು ಘೋರ ಶಿಕ್ಷೆಗೆ ತಳ್ಳಲಾಗುವುದು.
Tevbe 9:102
ತಮ್ಮ ತಪ್ಪುಗಳನ್ನು ಒಪ್ಪಿಕೊಂಡ ಬೇರೆ ಕೆಲವರಿದ್ದಾರೆ.[1] ಅವರು ಒಳ್ಳೆಯ ಮತ್ತು ಕೆಟ್ಟ ಕರ್ಮಗಳನ್ನು ಮಿಶ್ರಗೊಳಿಸಿದ್ದಾರೆ. ಅಲ್ಲಾಹು ಅವರ ಪಶ್ಚಾತ್ತಾಪವನ್ನು ಸ್ವೀಕರಿಸಲೂಬಹುದು. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
———
[1] ಇವರು ಸತ್ಯವಿಶ್ವಾಸಿಗಳು. ಆದರೆ ಇವರು ತಬೂಕ್ ಯುದ್ಧಕ್ಕೆ ಹೋಗಿರಲಿಲ್ಲ. ಆದರೆ ನಂತರ ಇವರಿಗೆ ತಮ್ಮ ತಪ್ಪಿನ ಅರಿವಾಗಿ ಪಶ್ಚಾತ್ತಾಪಪಟ್ಟರು.
Tevbe 9:103
ನೀವು ಅವರ ಸಂಪತ್ತುಗಳಿಂದ ದಾನವನ್ನು ಪಡೆಯಿರಿ. ಅದರ ಮೂಲಕ ನೀವು ಅವರನ್ನು ಶುದ್ಧೀಕರಿಸುತ್ತೀರಿ. ಅವರಿಗೋಸ್ಕರ ಪ್ರಾರ್ಥಿಸಿರಿ. ನಿಶ್ಚಯವಾಗಿಯೂ ನಿಮ್ಮ ಪ್ರಾರ್ಥನೆಯು ಅವರ ಪಾಲಿಗೆ ಸಮಾಧಾನವಾಗಿದೆ. ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
Tevbe 9:104
ನಿಶ್ಚಯವಾಗಿಯೂ ಅಲ್ಲಾಹನೇ ತನ್ನ ದಾಸರ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ ಮತ್ತು ಅವರಿಂದ ದಾನಧರ್ಮಗಳನ್ನು ತೆಗೆದುಕೊಳ್ಳುತ್ತಾನೆ; ಅವನು ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆೆಂದು ಅವರಿಗೆ ತಿಳಿದಿಲ್ಲವೇ?
Tevbe 9:105
ಹೇಳಿರಿ: “ನೀವು ಕರ್ಮವೆಸಗಿರಿ. ಅಲ್ಲಾಹು, ಅವನ ಸಂದೇಶವಾಹಕರು ಮತ್ತು ಸತ್ಯವಿಶ್ವಾಸಿಗಳು ನಿಮ್ಮ ಕರ್ಮಗಳನ್ನು ನೋಡುವರು. ನಂತರ ನಿಮ್ಮನ್ನು ದೃಶ್ಯ-ಅದೃಶ್ಯಗಳನ್ನು ತಿಳಿದವನ (ಅಲ್ಲಾಹನ) ಬಳಿಗೆ ಮರಳಿಸಲಾಗುವುದು. ಆಗ ನೀವೇನು ಮಾಡುತ್ತಿದ್ದಿರಿ ಎಂದು ಅವನು ನಿಮಗೆ ತಿಳಿಸಿಕೊಡುವನು.”
Tevbe 9:106
ಅಲ್ಲಾಹನ ಆಜ್ಞೆ ಬರುವ ತನಕ ತೀರ್ಪನ್ನು ಕಾದಿರಿಸಲಾದ ಕೆಲವರಿದ್ದಾರೆ. ಅಲ್ಲಾಹು ಅವರನ್ನು ಶಿಕ್ಷಿಸಬಹುದು ಅಥವಾ ಅವರ ಪಶ್ಚಾತ್ತಾಪವನ್ನು ಸ್ವೀಕರಿಸಬಹುದು. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.[1]
———
[1] ತಬೂಕ್ ಯುದ್ಧಕ್ಕೆ ಹೋಗದೆ ಹಿಂದೆ ಉಳಿದವರಲ್ಲಿ ಒಂದು ಗುಂಪು ಕಪಟವಿಶ್ವಾಸಿಗಳದ್ದು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮತ್ತು ಸತ್ಯವಿಶ್ವಾಸಿಗಳು ಯುದ್ಧದಿಂದ ಹಿಂದಿರುಗಿ ಬಂದಾಗ ಇವರು ಸುಳ್ಳು ನೆಪಗಳನ್ನು ಹೇಳಿ ತಪ್ಪಿಸಿಕೊಂಡರು. ಆದರೆ ಯುದ್ಧಕ್ಕೆ ಹೋಗದ ಸತ್ಯವಿಶ್ವಾಸಿಗಳು ಸುಳ್ಳು ನೆಪಗಳನ್ನು ಹೇಳಲಿಲ್ಲ. ಬದಲಿಗೆ, ನಿಜವನ್ನೇ ಹೇಳಿದರು. ಆದ್ದರಿಂದ ಅವರ ತೀರ್ಪನ್ನು ಅಲ್ಲಾಹನ ಆಜ್ಞೆ ಬರುವ ತನಕ ಕಾದಿರಿಸಲಾಯಿತು.
Tevbe 9:107
ಹಾನಿ ಮಾಡಲು, ಅಲ್ಲಾಹನನ್ನು ನಿಷೇಧಿಸಲು, ಸತ್ಯವಿಶ್ವಾಸಿಗಳ ನಡುವೆ ಒಡಕು ಮೂಡಿಸಲು ಮತ್ತು ಈಗಾಗಲೇ ಅಲ್ಲಾಹು ಮತ್ತು ಅವನ ಸಂದೇಶವಾಹಕರ ವಿರುದ್ಧ ಯುದ್ಧ ಮಾಡಿದವರಿಗೆ ಹೊಂಚುದಾಣವನ್ನು ನಿರ್ಮಿಸಿಕೊಡಲು ಒಂದು ಮಸೀದಿಯನ್ನು[1] ನಿರ್ಮಿಸಿದವರು ಯಾರೋ—ಅವರು, “ನಾವು ಒಳಿತನ್ನು ಮಾತ್ರ ಉದ್ದೇಶಿಸುತ್ತೇವೆ” ಎಂದು ಆಣೆ ಮಾಡಿ ಹೇಳುತ್ತಾರೆ. ಆದರೆ ಅವರು ಸುಳ್ಳು ಹೇಳುತ್ತಿದ್ದಾರೆ ಎಂಬುದಕ್ಕೆ ಅಲ್ಲಾಹು ಸಾಕ್ಷಿಯಾಗಿದ್ದಾನೆ.
———
[1] ಇಲ್ಲಿ ಸೂಚಿಸಿರುವುದು ಕಪಟವಿಶ್ವಾಸಿಗಳು ಮದೀನದ ಕುಬಾ ಮಸೀದಿಯ ಸಮೀಪ ನಿರ್ಮಿಸಿದ ಇನ್ನೊಂದು ಮಸೀದಿ. ಇದನ್ನು ಮಸ್ಜಿದ್ ದಿರಾರ್ (ಹಾನಿಕರ ಮಸೀದಿ) ಎಂದು ಕುರ್‌ಆನ್ ಕರೆದಿದೆ.
Tevbe 9:108
ನೀವು ಯಾವತ್ತೂ ಅಲ್ಲಿ (ನಮಾಝ್ ಮಾಡಲು) ನಿಲ್ಲಬೇಡಿ. ನಿಮಗೆ ನಿಲ್ಲಲು (ನಮಾಝ್ ಮಾಡಲು) ಹೆಚ್ಚು ಅರ್ಹವಾಗಿರುವುದು ಮೊದಲ ದಿನದಿಂದಲೇ ದೇವಭಯದ ಆಧಾರದಲ್ಲಿ ನಿರ್ಮಿಸಲಾದ ಮಸೀದಿಯಾಗಿದೆ. ಅಲ್ಲಿ (ಆ ಮಸೀದಿಯಲ್ಲಿ) ಶುದ್ಧಿಯಾಗಲು ಇಷ್ಟಪಡುವ ಜನರಿದ್ದಾರೆ. ಅಲ್ಲಾಹು ಶುದ್ಧಿಯಾಗಿರುವವರನ್ನು ಇಷ್ಟಪಡುತ್ತಾನೆ.
Tevbe 9:109
ಅಲ್ಲಾಹನ ಭಯ ಮತ್ತು ಸಂಪ್ರೀತಿಯ ತಳಹದಿಯ ಮೇಲೆ ತನ್ನ ಕಟ್ಟಡವನ್ನು ನಿರ್ಮಿಸಿದವನು ಉತ್ತಮನೋ ಅಥವಾ ಕುಸಿಯುವ ಹಂತದಲ್ಲಿರುವ ಪ್ರಪಾತದ ಅಂಚಿನಲ್ಲಿ ತನ್ನ ಕಟ್ಟಡವನ್ನು ನಿರ್ಮಿಸಿ ಅದರೊಂದಿಗೆ ನರಕಾಗ್ನಿಗೆ ಕುಸಿದು ಬಿದ್ದವನೋ? ಅಕ್ರಮಿಗಳಾದ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.
Tevbe 9:110
ಅವರು ನಿರ್ಮಿಸಿದ ಅವರ ಕಟ್ಟಡವು ಅವರ ಹೃದಯಗಳಲ್ಲಿ ಸಂಶಯ ಪಿಶಾಚಿಯಂತೆ ಅವರನ್ನು ಸತತವಾಗಿ ಚುಚ್ಚುತ್ತಲೇ ಇರುವುದು. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.
Tevbe 9:111
ನಿಶ್ಚಯವಾಗಿಯೂ ಅಲ್ಲಾಹು ಸತ್ಯವಿಶ್ವಾಸಿಗಳಿಂದ, ಅವರಿಗೆ ಸ್ವರ್ಗವನ್ನು ನೀಡುವೆನು ಎಂಬುದಕ್ಕೆ ಬದಲಿಯಾಗಿ, ಅವರ ತನು-ಧನಗಳನ್ನು ಖರೀದಿಸಿದ್ದಾನೆ. ಅವರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುತ್ತಾ (ವೈರಿಗಳನ್ನು) ಕೊಲ್ಲುತ್ತಾರೆ ಮತ್ತು (ವೈರಿಗಳಿಂದ) ಕೊಲೆಗೀಡಾಗುತ್ತಾರೆ. ಇದು ತೌರಾತ್‍ನಲ್ಲಿ, ಇಂಜೀಲ್‍ನಲ್ಲಿ ಮತ್ತು ಕುರ್‌ಆನ್‍ನಲ್ಲಿ ಅಲ್ಲಾಹು ನೀಡಿದ ಸತ್ಯ ವಾಗ್ದಾನವಾಗಿದೆ. ಅಲ್ಲಾಹನಿಗಿಂತಲೂ ಹೆಚ್ಚು ತನ್ನ ಕರಾರನ್ನು ಪೂರ್ತಿ ಮಾಡುವವನು ಯಾರು? ಆದ್ದರಿಂದ ನೀವು ಮಾಡಿರುವ ಈ ವ್ಯವಹಾರದಲ್ಲಿ ಸಂತೋಷಪಡಿರಿ. ಅದೇ ಅತಿದೊಡ್ಡ ಯಶಸ್ಸು.
Tevbe 9:112
ಪಶ್ಚಾತ್ತಾಪಪಡುವವರು, ಆರಾಧನೆ ಮಾಡುವವರು, ಸ್ತುತಿಕೀರ್ತನೆ ಮಾಡುವವರು, ಉಪವಾಸ ಆಚರಿಸುವವರು, ತಲೆಬಾಗುವವರು, ಸಾಷ್ಟಾಂಗ ಮಾಡುವವರು, ಒಳಿತನ್ನು ಆದೇಶಿಸುವವರು, ಕೆಡುಕನ್ನು ವಿರೋಧಿಸುವವರು ಮತ್ತು ಅಲ್ಲಾಹನ ಎಲ್ಲೆಗಳನ್ನು ಸಂರಕ್ಷಿಸುವವರು (ಇವರೇ ಸತ್ಯವಿಶ್ವಾಸಿಗಳು). ಆ ಸತ್ಯವಿಶ್ವಾಸಿಗಳಿಗೆ ಶುಭವಾರ್ತೆಯನ್ನು ತಿಳಿಸಿರಿ.
Tevbe 9:113
ಬಹುದೇವವಿಶ್ವಾಸಿಗಳು ನರಕವಾಸಿಗಳೆಂದು ಸ್ಪಷ್ಟವಾದ ಬಳಿಕ ಅವರಿಗೋಸ್ಕರ (ಅಲ್ಲಾಹನಲ್ಲಿ) ಕ್ಷಮೆಯಾಚನೆ ಮಾಡಲು ಪ್ರವಾದಿಗೆ ಮತ್ತು ಸತ್ಯವಿಶ್ವಾಸಿಗಳಿಗೆ ಅನುಮತಿಯಿಲ್ಲ. ಅವರು ಆಪ್ತ ಸಂಬಂಧಿಕರಾಗಿದ್ದರೂ ಸಹ.
Tevbe 9:114
ಇಬ್ರಾಹೀಮರು ತಮ್ಮ ತಂದೆಗೋಸ್ಕರ (ಅಲ್ಲಾಹನಲ್ಲಿ) ಕ್ಷಮೆಯಾಚನೆ ಮಾಡಿರುವುದು ಅವರು ತಂದೆಗೆ ಕೊಟ್ಟ ಮಾತನ್ನು ಪಾಲಿಸುವುದಕ್ಕಾಗಿತ್ತು. ಆದರೆ ತಂದೆ ಅಲ್ಲಾಹನ ವೈರಿಯೆಂದು ಸ್ಪಷ್ಟವಾದಾಗ ಅವರು ತಂದೆಯಿಂದ ದೂರವಾದರು. ನಿಶ್ಚಯವಾಗಿಯೂ ಇಬ್ರಾಹೀಮರು ಅತ್ಯಂತ ಮೃದು ಹೃದಯದವರು ಮತ್ತು ಸಹಿಷ್ಣುವಾಗಿದ್ದರು.
Tevbe 9:115
ಅಲ್ಲಾಹು ಜನರಿಗೆ ಸನ್ಮಾರ್ಗವನ್ನು ತೋರಿಸಿದ ಬಳಿಕ ಅವರನ್ನು ದಾರಿತಪ್ಪಿಸುವುದಿಲ್ಲ—ಅವರು ಯಾವುದರಿಂದ ತಮ್ಮನ್ನು ರಕ್ಷಿಸಿಕೊಳ್ಳಬೇಕೆಂದು ಅವರಿಗೆ ಸ್ಪಷ್ಟವಾಗಿ ವಿವರಿಸಿಕೊಡುವ ತನಕ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳನ್ನು ತಿಳಿದವನಾಗಿದ್ದಾನೆ.
Tevbe 9:116
ನಿಶ್ಚಯವಾಗಿಯೂ ಭೂಮ್ಯಾಕಾಶಗಳ ಸಾರ್ವಭೌಮತ್ವವು ಅಲ್ಲಾಹನಿಗೆ ಸೇರಿದ್ದು. ಅವನು ಜೀವ ಮತ್ತು ಮರಣವನ್ನು ನೀಡುತ್ತಾನೆ. ಅಲ್ಲಾಹನ ಹೊರತು ನಿಮಗೆ ಬೇರೆ ರಕ್ಷಕರು ಅಥವಾ ಸಹಾಯಕರಿಲ್ಲ.
Tevbe 9:117
ನಿಶ್ಚಯವಾಗಿಯೂ ಅಲ್ಲಾಹು ಪ್ರವಾದಿಯನ್ನು ಮತ್ತು ಸಂದಿಗ್ಧ ಸ್ಥಿತಿಯಲ್ಲಿ ಅವರನ್ನು ಹಿಂಬಾಲಿಸಿದ ಮುಹಾಜಿರ್ ಮತ್ತು ಅನ್ಸಾರರನ್ನು ಕ್ಷಮಿಸಿದ್ದಾನೆ. ನಂತರ ಅಲ್ಲಾಹು ಅವರ ಪಶ್ಚಾತ್ತಾಪವನ್ನು ಸ್ವೀಕರಿಸಿದನು. ನಿಶ್ಚಯವಾಗಿಯೂ ಅವನು ಅವರೊಡನೆ ಕೃಪೆ ಮತ್ತು ದಯೆಯುಳ್ಳವನಾಗಿದ್ದಾನೆ.
Tevbe 9:118
ತೀರ್ಪು ಕಾದಿರಿಸಲಾದ ಆ ಮೂವರನ್ನೂ (ಅಲ್ಲಾಹು ಕ್ಷಮಿಸಿದ್ದಾನೆ).[1] ಎಲ್ಲಿಯವರೆಗೆಂದರೆ, ಭೂಮಿಯು ವಿಶಾಲವಾಗಿದ್ದೂ ಸಹ ಅವರಿಗೆ ಅದು ಇಕ್ಕಟ್ಟಾದಂತೆ ತೋರಿತು, ಅವರ ಹೃದಯಗಳು ಅವರಿಗೆ ಇಕ್ಕಟ್ಟಾಗಿ ಪರಿಣಮಿಸಿತು ಮತ್ತು ಅಲ್ಲಾಹನಿಗೆ ವಿರುದ್ಧವಾಗಿ ಅವನ ಬಳಿಯೇ ಹೊರತು ಬೇರೆ ಆಶ್ರಯವಿಲ್ಲವೆಂದು ಅವರಿಗೆ ಖಾತ್ರಿಯಾಯಿತು. ಆದ್ದರಿಂದ ಅವರು ಪಶ್ಚಾತ್ತಾಪಪಟ್ಟು ಮರಳುವುದಕ್ಕಾಗಿ ಅಲ್ಲಾಹು ಅವರನ್ನು ಕ್ಷಮಿಸಿದನು. ನಿಶ್ಚಯವಾಗಿಯೂ ಅಲ್ಲಾಹು ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
———
[1] ತೀರ್ಪು ಕಾದಿರಿಸಲಾದವರು ಎಂದು 106ನೇ ವಚನದಲ್ಲಿ ಹೇಳಿದ್ದು ಈ ಮೂವರ ಬಗ್ಗೆ. ಅವರು ಕಅಬ್ ಬಿನ್ ಮಾಲಿಕ್, ಹಿಲಾಲ್ ಬಿನ್ ಉಮಯ್ಯಃ ಮತ್ತು ಮುರಾರ ಬಿನ್ ರಬೀಅ್. ಇವರು ತಬೂಕ್ ಯುದ್ಧಕ್ಕೆ ಹೋಗದಿರಲು ಸೂಕ್ತ ಕಾರಣಗಳೇನೂ ಇಲ್ಲದಿದ್ದರೂ ಸಹ ಹೋಗಿರಲಿಲ್ಲ.
Tevbe 9:119
ಓ ಸತ್ಯವಿಶ್ವಾಸಿಗಳೇ! ಅಲ್ಲಾಹನನ್ನು ಭಯಪಡಿರಿ ಮತ್ತು ಸತ್ಯವಂತರಲ್ಲಿ ಸೇರಿಕೊಳ್ಳಿ.
Tevbe 9:120
ಪ್ರವಾದಿಯವರನ್ನು ಬಿಟ್ಟು ಹಿಂದೆ ಉಳಿಯುವುದು (ಯುದ್ಧಕ್ಕೆ ಹೋಗದೆ ಮನೆಯಲ್ಲೇ ಕುಳಿತುಕೊಳ್ಳುವುದು) ಮತ್ತು ಅವರಿಗಿಂತಲೂ ಹೆಚ್ಚು ತಮ್ಮ ಕೆಲಸ-ಕಾರ್ಯಗಳಿಗೆ ಪ್ರಾಶಸ್ತ್ಯ ನೀಡುವುದು ಮದೀನಾ ನಿವಾಸಿಗಳಿಗೆ ಮತ್ತು ಅದರ ಸುತ್ತಲಿರುವ ಮರುಭೂಮಿ ನಿವಾಸಿಗಳಾದ ಅರಬ್ಬಿಗಳಿಗೆ ಭೂಷಣವಲ್ಲ. ಅದೇಕೆಂದರೆ, ಅಲ್ಲಾಹನ ಮಾರ್ಗದಲ್ಲಿ ಅವರಿಗೆ ಯಾವುದೇ ದಾಹ, ಆಯಾಸ ಅಥವಾ ಹಸಿವು ಸಂಭವಿಸಿದರೂ, ಸತ್ಯನಿಷೇಧಿಗಳನ್ನು ಕೆರಳಿಸುವ ಯಾವುದೇ ಪ್ರದೇಶದಲ್ಲಿ ಅವರು ಕಾಲೂರಿದರೂ, ಅಥವಾ ವೈರಿಗಳಿಗೆ ಅವರು ಯಾವುದೇ ನಾಶ-ನಷ್ಟ ತಂದಿಟ್ಟರೂ, ಅವುಗಳಿಗೆ ಬದಲಿಯಾಗಿ ಅವರಿಗೆ ಒಂದು ಸತ್ಕರ್ಮವನ್ನು ದಾಖಲಿಸಲಾಗುವುದು. ಒಳಿತು ಮಾಡುವವರ ಕರ್ಮಗಳನ್ನು ಅಲ್ಲಾಹು ವ್ಯರ್ಥಗೊಳಿಸುವುದಿಲ್ಲ.
Tevbe 9:121
ಅವರು ಸಣ್ಣ ಮೊತ್ತದಲ್ಲಿ ಅಥವಾ ದೊಡ್ಡ ಮೊತ್ತದಲ್ಲಿ ಖರ್ಚು ಮಾಡಿದರೂ, ಅಥವಾ ಯಾವುದೇ ಕಣಿವೆಯನ್ನು ದಾಟಿದರೂ—ಅವರು ಮಾಡಿದ ಕರ್ಮಗಳಿಗೆ ಅತ್ಯುತ್ತಮ ಪ್ರತಿಫಲ ನೀಡುವುದಕ್ಕಾಗಿ ಇವೆಲ್ಲವನ್ನೂ ದಾಖಲಿಸಿಡಲಾಗುವುದು.
Tevbe 9:122
ಸತ್ಯವಿಶ್ವಾಸಿಗಳೆಲ್ಲರೂ ಒಟ್ಟಿಗೆ ಯುದ್ಧಕ್ಕೆ ಹೊರಡುವುದು ಸರಿಯಲ್ಲ. ಬದಲಿಗೆ, ಅವರಲ್ಲಿರುವ ಒಂದೊಂದು ವಿಭಾಗದಿಂದ ಒಂದೊಂದು ಗುಂಪು ಜನರು ಯುದ್ಧಕ್ಕೆ ಹೊರಟು, ಉಳಿದವರು ಧರ್ಮದ ಬಗ್ಗೆ ತಿಳುವಳಿಕೆಯನ್ನು ಪಡೆದು, ನಂತರ ಆ ಜನರು ತಮ್ಮ ಬಳಿಗೆ ಮರಳಿ ಬಂದಾಗ, ಅವರು (ಅಲ್ಲಾಹನನ್ನು) ಭಯಪಟ್ಟು ಜೀವಿಸುವುದಕ್ಕಾಗಿ ಅವರಿಗೆ (ಧಾರ್ಮಿಕ ನಿಯಮಗಳ ಬಗ್ಗೆ) ತಿಳುವಳಿಕೆ ನೀಡಬಾರದೇಕೆ?
Tevbe 9:123
ಓ ಸತ್ಯವಿಶ್ವಾಸಿಗಳೇ! ನಿಮ್ಮ ಆಸುಪಾಸಿನಲ್ಲಿರುವ ಸತ್ಯನಿಷೇಧಿಗಳ ವಿರುದ್ಧ ಯುದ್ಧ ಮಾಡಿರಿ. ಅವರು ನಿಮ್ಮಲ್ಲಿ ಕಠೋರತೆಯನ್ನು ಕಾಣಲಿ. ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹು ದೇವಭಯವುಳ್ಳವರೊಡನೆ ಇದ್ದಾನೆ.
Tevbe 9:124
ಒಂದು ಅಧ್ಯಾಯವು ಅವತೀರ್ಣವಾದಾಗ ಅವರಲ್ಲಿ ಕೆಲವರು ಕೇಳುತ್ತಾರೆ: “ಇದು ನಿಮ್ಮಲ್ಲಿ ಯಾರಿಗೆ ವಿಶ್ವಾಸವನ್ನು ಹೆಚ್ಚಿಸಿದೆ?” ಸತ್ಯವಿಶ್ವಾಸಿಗಳು ಯಾರೋ—ಅವರಿಗೆ ಅದು ವಿಶ್ವಾಸವನ್ನು ಹೆಚ್ಚಿಸಿದೆ. ಅವರು ಅದರಲ್ಲಿ ಸಂತೋಷಪಡುತ್ತಾರೆ.
Tevbe 9:125
ಆದರೆ ಯಾರ ಹೃದಯಗಳಲ್ಲಿ ರೋಗವಿದೆಯೋ, ಅವರಿಗೆ ಅದು ಹೊಲಸಿನ ಮೇಲೆ ಹೊಲಸನ್ನು ಹೆಚ್ಚಿಸಿದೆ. ಅವರು ಸತ್ಯನಿಷೇಧಿಗಳಾಗಿಯೇ ಸಾಯುತ್ತಾರೆ.
Tevbe 9:126
ಪ್ರತಿವರ್ಷವೂ ಅವರು ಒಂದು ಅಥವಾ ಎರಡು ಬಾರಿ ಪರೀಕ್ಷೆಗೆ ಗುರಿಯಾಗುವುದನ್ನು ಅವರು ನೋಡುವುದಿಲ್ಲವೇ? ಆದರೂ ಅವರು ಪಶ್ಚಾತ್ತಾಪಪಡುವುದಿಲ್ಲ. ಅವರು ಉಪದೇಶ ಸ್ವೀಕರಿಸುವುದೂ ಇಲ್ಲ.
Tevbe 9:127
ಯಾವುದೇ ಒಂದು ಅಧ್ಯಾಯವು ಅವತೀರ್ಣವಾದಾಗ ಅವರಲ್ಲಿ ಕೆಲವರು “ನಿಮ್ಮನ್ನು ಯಾರೂ ಗಮನಿಸುತ್ತಿಲ್ಲ ತಾನೇ?” ಎಂಬರ್ಥದಲ್ಲಿ ಇತರರನ್ನು ನೋಡುತ್ತಾರೆ. ನಂತರ ಅವರು ಅಲ್ಲಿಂದ ತೆರಳುತ್ತಾರೆ. ಅಲ್ಲಾಹು ಅವರ ಹೃದಯಗಳನ್ನು ತಿರುಗಿಸಿದ್ದಾನೆ. ಅವರು ಅರ್ಥಮಾಡಿಕೊಳ್ಳದ ಜನರಾಗಿರುವುದೇ ಅದಕ್ಕೆ ಕಾರಣ.
Tevbe 9:128
ನಿಮ್ಮ ಬಳಿಗೆ ನಿಮ್ಮಿಂದಲೇ ಇರುವ ಒಬ್ಬ ಸಂದೇಶವಾಹಕರು ಬಂದಿದ್ದಾರೆ. ನೀವು ಕಷ್ಟ ಅನುಭವಿಸುವುದು ಅವರಿಗೆ ಸಂಕಟದಾಯಕವಾಗಿದೆ. ಅವರಿಗೆ ನಿಮ್ಮ ಬಗ್ಗೆ ಕಳಕಳಿಯಿದೆ. ಅವರು ಸತ್ಯವಿಶ್ವಾಸಿಗಳೊಡನೆ ಕೃಪೆ ಮತ್ತು ದಯೆಯುಳ್ಳವರಾಗಿದ್ದಾರೆ.
Tevbe 9:129
ಅವರೇನಾದರೂ ತಿರುಗಿ ನಡೆದರೆ, ಹೇಳಿರಿ: “ನನಗೆ ಅಲ್ಲಾಹು ಸಾಕು. ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ನಾನು ಅವನಲ್ಲಿ ಭರವಸೆಯಿಟ್ಟಿದ್ದೇನೆ. ಅವನು ಮಹಾ ಸಿಂಹಾಸನದ ಒಡೆಯನಾಗಿದ್ದಾನೆ.”
Yunus 10:1
ಅಲಿಫ್ ಲಾಮ್ ರಾ. ಇವು ವಿವೇಕಪೂರ್ಣ ಗ್ರಂಥದ ವಚನಗಳಾಗಿವೆ.
Yunus 10:2
ಜನರಿಗೆ ಮುನ್ನೆಚ್ಚರಿಕೆಯನ್ನು ನೀಡಿರಿ ಮತ್ತು ಸತ್ಯವಿಶ್ವಾಸಿಗಳಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ಅವರ ಸತ್ಕರ್ಮಗಳ ಪೂರ್ಣ ಪ್ರತಿಫಲ ದೊರೆಯುವುದೆಯೆಂಬ ಶುಭವಾರ್ತೆಯನ್ನು ನೀಡಿರಿ ಎಂದು ನಾವು ಅವರಿಂದಲೇ ಇರುವ ಒಬ್ಬ ವ್ಯಕ್ತಿಗೆ ದಿವ್ಯವಾಣಿ ನೀಡಿರುವುದು ಜನರಿಗೆ ಅಚ್ಚರಿಯಾಗಿ ಕಾಣುತ್ತಿದೆಯೇ? ಸತ್ಯನಿಷೇಧಿಗಳು ಹೇಳಿದರು: “ನಿಶ್ಚಯವಾಗಿಯೂ ಇವನೊಬ್ಬ ಸ್ವತಃಸಿದ್ಧ ಮಾಟಗಾರನೇ ಸರಿ.”
Yunus 10:3
ನಿಶ್ಚಯವಾಗಿಯೂ ಭೂಮ್ಯಾಕಾಶಗಳನ್ನು ಆರು ದಿನಗಳಲ್ಲಿ ಸೃಷ್ಟಿಸಿದ ಅಲ್ಲಾಹನೇ ನಿಮ್ಮ ಪರಿಪಾಲಕ. ನಂತರ (ಅವನ ಮಹಾತ್ಮೆಗೆ ಹೊಂದಿಕೆಯಾಗುವ ರೀತಿಯಲ್ಲಿ) ಅವನು ಸಿಂಹಾಸನದಲ್ಲಿ ಆರೂಢನಾದನು. ಅವನು ಎಲ್ಲಾ ವಿಷಯಗಳನ್ನೂ ನಿಯಂತ್ರಿಸುತ್ತಾನೆ. ಅವನ ಅಪ್ಪಣೆಯ ನಂತರವೇ ಹೊರತು ಯಾರಿಗೂ ಶಿಫಾರಸು ಮಾಡಲು ಸಾಧ್ಯವಿಲ್ಲ. ಅವನೇ ನಿಮ್ಮ ಪರಿಪಾಲಕನಾದ ಅಲ್ಲಾಹು. ಆದ್ದರಿಂದ ಅವನನ್ನು ಮಾತ್ರ ಆರಾಧಿಸಿರಿ. ನೀವು ಉಪದೇಶ ಸ್ವೀಕರಿಸುವುದಿಲ್ಲವೇ?
Yunus 10:4
ನಿಮ್ಮೆಲ್ಲರನ್ನು ಅವನ ಬಳಿಗೇ ಮರಳಿಸಲಾಗುವುದು. ಇದು ಅಲ್ಲಾಹನ ಸತ್ಯ ವಾಗ್ದಾನವಾಗಿದೆ. ನಿಶ್ಚಯವಾಗಿಯೂ ಅವನು ಪ್ರಥಮ ಬಾರಿ ಸೃಷ್ಟಿಸುತ್ತಾನೆ. ನಂತರ ಸತ್ಯವಿಶ್ವಾಸಿಗಳಿಗೆ ಮತ್ತು ಸತ್ಕರ್ಮವೆಸಗಿದವರಿಗೆ ನ್ಯಾಯಯುತವಾದ ಪ್ರತಿಫಲವನ್ನು ನೀಡಲು ಆ ಸೃಷ್ಟಿಯನ್ನು ಪುನರಾವರ್ತಿಸುತ್ತಾನೆ. ಸತ್ಯವನ್ನು ನಿಷೇಧಿಸಿದವರು ಯಾರೋ—ಅವರು ಸತ್ಯವನ್ನು ನಿಷೇಧಿಸಿದ್ದಕ್ಕಾಗಿ ಅವರಿಗೆ ಕುದಿಯುವ ಪಾನೀಯ ಮತ್ತು ಯಾತನಾಮಯ ಶಿಕ್ಷೆಯಿದೆ.
Yunus 10:5
ಸೂರ್ಯನನ್ನು ಹೊಳೆಯುವ ಪ್ರಕಾಶ ಮತ್ತು ಚಂದ್ರನನ್ನು ಬೆಳಕನ್ನಾಗಿ ಮಾಡಿದವನು ಅವನೇ. ನೀವು ವರ್ಷಗಳ ಸಂಖ್ಯೆ ಮತ್ತು ಲೆಕ್ಕವನ್ನು ತಿಳಿಯಲು ಅವನು ಅದಕ್ಕೆ (ಚಂದ್ರನಿಗೆ) ಕೆಲವು ಹಂತಗಳನ್ನು ನಿರ್ಣಯಿಸಿದನು. ಅಲ್ಲಾಹು ಅವುಗಳನ್ನು ಉದ್ದೇಶರಹಿತವಾಗಿ ಸೃಷ್ಟಿಸಿಲ್ಲ. ತಿಳುವಳಿಕೆಯಿರುವ ಜನರಿಗಾಗಿ ಅವನು ದೃಷ್ಟಾಂತಗಳನ್ನು ವಿವರಿಸಿಕೊಡುತ್ತಾನೆ.
Yunus 10:6
ನಿಶ್ಚಯವಾಗಿಯೂ ರಾತ್ರಿ-ಹಗಲುಗಳ ಬದಲಾವಣೆಯಲ್ಲಿ ಮತ್ತು ಭೂಮ್ಯಾಕಾಶಗಳಲ್ಲಿ ಅಲ್ಲಾಹು ಸೃಷ್ಟಿಸಿದ ವಸ್ತುಗಳಲ್ಲಿ ದೇವಭಯವುಳ್ಳ ಜನರಿಗೆ ಅನೇಕ ದೃಷ್ಟಾಂತಗಳಿವೆ.
Yunus 10:7
ನಿಶ್ಚಯವಾಗಿಯೂ ನಮ್ಮನ್ನು ಭೇಟಿಯಾಗುವ ವಿಷಯದಲ್ಲಿ ನಂಬಿಕೆಯಿಲ್ಲದವರು, ಇಹಲೋಕ ಜೀವನವನ್ನೇ ನೆಚ್ಚಿ, ಅದರಲ್ಲೇ ನೆಮ್ಮದಿಯನ್ನು ಬಯಸುವವರು ಮತ್ತು ನಮ್ಮ ದೃಷ್ಟಾಂತಗಳ ಬಗ್ಗೆ ಅಜ್ಞರಾಗಿರುವವರು.
Yunus 10:8
ಅವರು ಮಾಡಿದ ದುಷ್ಕರ್ಮಗಳ ಫಲವಾಗಿ ಅವರ ವಾಸಸ್ಥಳವು ನರಕವಾಗಿದೆ.
Yunus 10:9
ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ—ಅವರ ವಿಶ್ವಾಸದ ಕಾರಣದಿಂದಾಗಿ ಅವರ ಪರಿಪಾಲಕನು (ಅಲ್ಲಾಹು) ಅವರಿಗೆ ಸನ್ಮಾರ್ಗವನ್ನು ತೋರಿಸುವನು. ಅವರು ತಮ್ಮ ತಳಭಾಗದಿಂದ ನದಿಗಳು ಹರಿಯುವ ಸುಖ-ಸಮೃದ್ಧವಾದ ಸ್ವರ್ಗೋದ್ಯಾನಗಳಲ್ಲಿ ವಾಸಿಸುವರು.
Yunus 10:10
ಅಲ್ಲಿ ಅವರ ಪ್ರಾರ್ಥನೆಯು, “ಓ ಅಲ್ಲಾಹ್! ನಿನ್ನ ಪರಿಶುದ್ಧತೆಯನ್ನು ನಾವು ಕೊಂಡಾಡುತ್ತೇವೆ” ಎಂದಾಗಿರುವುದು; ಅಲ್ಲಿ ಅವರ ಅಭಿವಂದನೆಯು, “ಅಸ್ಸಲಾಂ ಅಲೈಕುಂ” (ನಿಮ್ಮ ಮೇಲೆ ಶಾಂತಿಯಿರಲಿ) ಎಂದಾಗಿರುವುದು ಮತ್ತು ಅವರ ಕೊನೆಯ ಪ್ರಾರ್ಥನೆಯು, “ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಸರ್ವಸ್ತುತಿ” ಎಂದಾಗಿರುವುದು.
Yunus 10:11
ಜನರು ಬೇಡುವ ಪ್ರಯೋಜನಗಳನ್ನು ನೀಡಲು ಅಲ್ಲಾಹು ತ್ವರೆ ಮಾಡುವಂತೆ, ಅವರು ಬೇಡುವ ಶಿಕ್ಷೆಗಳನ್ನು ನೀಡಲು ಕೂಡ ತ್ವರೆ ಮಾಡುತ್ತಿದ್ದರೆ ಅವರ ಜೀವಿತಾವಧಿಯು ಎಂದೋ ಮುಗಿದುಹೋಗುತ್ತಿತ್ತು. ನಮ್ಮನ್ನು ಭೇಟಿಯಾಗುವ ವಿಷಯದಲ್ಲಿ ನಂಬಿಕೆಯಿಲ್ಲದವರನ್ನು ನಾವು ಅವರ ಅತಿರೇಕಗಳೊಂದಿಗೆ ಅಂಧವಾಗಿ ವಿಹರಿಸಲು ಬಿಟ್ಟುಬಿಡುವೆವು.
Yunus 10:12
ಮನುಷ್ಯನಿಗೆ ಕಷ್ಟ ಬಂದಾಗ ಅವನು ಪಾರ್ಶ್ವಕ್ಕೆ ಸರಿದು ಮಲಗಿಕೊಂಡು, ಕುಳಿತುಕೊಂಡು ಅಥವಾ ನಿಂತುಕೊಂಡು ನಮ್ಮನ್ನು (ಪದೇ ಪದೇ) ಕರೆದು ಪ್ರಾರ್ಥಿಸುತ್ತಾನೆ. ಆದರೆ ನಾವು ಅವನ ಕಷ್ಟವನ್ನು ನಿವಾರಿಸಿದಾಗ, ತನಗೆ ಬಂದ ಕಷ್ಟವನ್ನು ನಿವಾರಿಸಲು ಅವನು ನಮ್ಮನ್ನು ಕರೆಯಲೇ ಇಲ್ಲ ಎಂಬಂತೆ ಸಾಗಿಬಿಡುತ್ತಾನೆ. ಈ ರೀತಿ ಅತಿರೇಕಿಗಳಿಗೆ ಅವರು ಮಾಡುವ ಕರ್ಮಗಳನ್ನು ಅಲಂಕರಿಸಿಕೊಡಲಾಗಿದೆ.
Yunus 10:13
ನಿಶ್ಚಯವಾಗಿಯೂ ನಿಮಗಿಂತ ಮೊದಲಿನ ಅನೇಕ ತಲೆಮಾರುಗಳು ಅಕ್ರಮವೆಸಗಿದಾಗ ನಾವು ಅವರನ್ನು ನಾಶ ಮಾಡಿದೆವು. ನಮ್ಮ ಸಂದೇಶವಾಹಕರು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಅವರ ಬಳಿಗೆ ಬಂದಿದ್ದರು. ಆದರೂ ಅವರು ವಿಶ್ವಾಸವಿಡಲಿಲ್ಲ. ಅಪರಾಧಿಗಳಾದ ಜನರಿಗೆ ಈ ರೀತಿ ನಾವು ಪ್ರತಿಫಲವನ್ನು ನೀಡುವೆವು.
Yunus 10:14
ನಂತರ ಅವರ ಬಳಿಕ ನಾವು ನಿಮ್ಮನ್ನು ಭೂಮಿಯಲ್ಲಿ ಉತ್ತರಾಧಿಕಾರಿಗಳನ್ನಾಗಿ ಮಾಡಿದೆವು. ನೀವು ಹೇಗೆ ಕರ್ಮವೆಸಗುತ್ತೀರಿ ಎಂದು ನೋಡಲು.
Yunus 10:15
ಅವರಿಗೆ ನಮ್ಮ ಸ್ಪಷ್ಟ ವಚನಗಳನ್ನು ಓದಿಕೊಡಲಾದರೆ, ನಮ್ಮನ್ನು ಭೇಟಿಯಾಗುವ ವಿಷಯದಲ್ಲಿ ನಂಬಿಕೆಯಿಲ್ಲದವರು ಹೇಳುತ್ತಾರೆ: “ಇದು ಬೇಡ, ನಮಗೆ ಇದಲ್ಲದ ಬೇರೊಂದು ಕುರ್‌ಆನನ್ನು ತಂದು ಕೊಡಿ, ಅಥವಾ ಇದರಲ್ಲಿ ಕೆಲವು ಬದಲಾವಣೆಗಳನ್ನು ಮಾಡಿರಿ.” ಹೇಳಿರಿ: “ಇದರಲ್ಲಿ ನನ್ನ ಕಡೆಯಿಂದ ಯಾವುದೇ ಬದಲಾವಣೆ ಮಾಡುವ ಹಕ್ಕು ನನಗಿಲ್ಲ. ನನಗೆ ನೀಡಲಾಗುವ ದೇವವಾಣಿಗಳನ್ನು ಮಾತ್ರ ನಾನು ಅನುಸರಿಸುತ್ತೇನೆ. ನಾನೇನಾದರೂ ನನ್ನ ಪರಿಪಾಲಕನ (ಅಲ್ಲಾಹನ) ಆಜ್ಞೆಗಳನ್ನು ಉಲ್ಲಂಘಿಸಿದರೆ, ನಿಶ್ಚಯವಾಗಿಯೂ ಒಂದು ಭಯಾನಕ ದಿನದ ಶಿಕ್ಷೆಯನ್ನು ನಾನು ಭಯಪಡುತ್ತೇನೆ.”
Yunus 10:16
ಹೇಳಿರಿ: “ಅಲ್ಲಾಹು ಇಚ್ಛಿಸಿದ್ದರೆ ನಾನು ಇದನ್ನು ನಿಮಗೆ ಓದಿಕೊಡುತ್ತಿರಲಿಲ್ಲ ಮತ್ತು ಇದು ನಿಮಗೆ ತಿಳಿಯುವಂತೆ ಅವನು ಮಾಡುತ್ತಲೂ ಇರಲಿಲ್ಲ. ನಾನು ಇದಕ್ಕೆ ಮೊದಲು ಅನೇಕ ವರ್ಷಗಳ ಕಾಲ ನಿಮ್ಮೊಂದಿಗೆ ಬದುಕಿದ್ದೆ. ನೀವು ಅರ್ಥಮಾಡಿಕೊಳ್ಳುವುದಿಲ್ಲವೇ?”
Yunus 10:17
ಅಲ್ಲಾಹನ ಮೇಲೆ ಸುಳ್ಳು ಆರೋಪಿಸುವವನಿಗಿಂತ ಅಥವಾ ಅವನ ವಚನಗಳನ್ನು ನಿಷೇಧಿಸುವವನಿಗಿಂತ ದೊಡ್ಡ ಅಕ್ರಮಿ ಯಾರು? ನಿಶ್ಚಯವಾಗಿಯೂ ಅಪರಾಧಿಗಳು ಯಶಸ್ವಿಯಾಗುವುದಿಲ್ಲ.
Yunus 10:18
ಅವರು ಅಲ್ಲಾಹನನ್ನು ಬಿಟ್ಟು ಅವರಿಗೆ ಯಾವುದೇ ಉಪಕಾರ ಅಥವಾ ತೊಂದರೆ ಮಾಡದವರನ್ನು ಆರಾಧಿಸುತ್ತಾರೆ. ಅವರು ಹೇಳುತ್ತಾರೆ: “ಇವರು ಅಲ್ಲಾಹನ ಬಳಿ ನಮಗೆ ಶಿಫಾರಸು ಮಾಡುತ್ತಾರೆ.” ಕೇಳಿರಿ: “ಭೂಮ್ಯಾಕಾಶಗಳಲ್ಲಿ ಅಲ್ಲಾಹನಿಗೆ ತಿಳಿಯದೇ ಇರುವ ಒಂದು ವಿಷಯವನ್ನು ನೀವು ಅವನಿಗೆ ತಿಳಿಸುತ್ತಿದ್ದೀರಾ?”[1] ಅವರು ಮಾಡುವ ಸಹಭಾಗಿತ್ವ (ಶಿರ್ಕ್) ದಿಂದ ಅವನು ಎಷ್ಟೋ ಪರಿಶುದ್ಧನು ಮತ್ತು ಉನ್ನತನಾಗಿದ್ದಾನೆ.
———
[1] ಅಲ್ಲಾಹನ ಬಳಿ ಶಿಫಾರಸು ಮಾಡಿ ನಿಮ್ಮನ್ನು ಅವನ ಶಿಕ್ಷೆಯಿಂದ ಪಾರು ಮಾಡುವವರು ಯಾರಾದರೂ ಇದ್ದರೆ ಅವನು ಯಾರೆಂದು ಅಲ್ಲಾಹನಿಗೆ ತಿಳಿದಿರಲೇಬೇಕು. ಏಕೆಂದರೆ ಭೂಮ್ಯಾಕಾಶಗಳಲ್ಲಿರುವ ಎಲ್ಲವೂ ಅಲ್ಲಾಹನಿಗೆ ತಿಳಿದಿದೆ.
Yunus 10:19
ಮನುಷ್ಯರೆಲ್ಲರೂ ಒಂದೇ ಸಮುದಾಯವಾಗಿದ್ದರು. ನಂತರ ಅವರಲ್ಲಿ ಭಿನ್ನಮತ ಉಂಟಾಯಿತು. ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಮೊದಲೇ ನಿಶ್ಚಯಿಸಲಾದ ಒಂದು ಮಾತು ಇಲ್ಲದಿರುತ್ತಿದ್ದರೆ, ಯಾವ ವಿಷಯದಲ್ಲಿ ಅವರು ಭಿನ್ನರಾದರೋ ಅದರ ಬಗ್ಗೆ ಈಗಾಗಲೇ ತೀರ್ಪು ನೀಡಲಾಗುತ್ತಿತ್ತು.
Yunus 10:20
ಅವರು ಕೇಳುತ್ತಾರೆ: “ಅವರಿಗೆ (ಪ್ರವಾದಿಗೆ) ಅವರ ಪರಿಪಾಲಕನಿಂದ (ಅಲ್ಲಾಹನಿಂದ) ಒಂದು ದೃಷ್ಟಾಂತವೇಕೆ ಇಳಿಸಿಕೊಡಲಾಗಿಲ್ಲ?” ಹೇಳಿರಿ: “ಅದೃಶ್ಯಗಳ ಬಗ್ಗೆ ತಿಳಿದವನು ಅಲ್ಲಾಹು ಮಾತ್ರ. ನೀವು ಕಾಯಿರಿ. ನಿಶ್ಚಯವಾಗಿಯೂ ನಾನು ಕೂಡ ನಿಮ್ಮೊಂದಿಗೆ ಕಾಯುವೆನು.”
Yunus 10:21
ಜನರಿಗೆ ಕಷ್ಟ ಬಂದ ಬಳಿಕ ನಾವು ಅವರಿಗೆ ನಮ್ಮ ದಯೆಯ ರುಚಿಯನ್ನು ತೋರಿಸಿದರೆ, ಅಗೋ ಅವರು ನಮ್ಮ ವಚನಗಳ ವಿರುದ್ಧ ಪಿತೂರಿ ಮಾಡುತ್ತಾರೆ. ಹೇಳಿರಿ: “ಅಲ್ಲಾಹು ನಿಮಗಿಂತಲೂ ವೇಗವಾಗಿ ತಂತ್ರಗಾರಿಕೆ ಮಾಡುತ್ತಾನೆ. ನಿಶ್ಚಯವಾಗಿಯೂ ನೀವು ಮಾಡುವ ಪಿತೂರಿಗಳನ್ನು ನಮ್ಮ ದೇವದೂತರು ದಾಖಲಿಸುತ್ತಿದ್ದಾರೆ.”
Yunus 10:22
ನಿಮ್ಮನ್ನು ನೆಲದಲ್ಲಿ ಮತ್ತು ಕಡಲಲ್ಲಿ ಸಂಚರಿಸುವಂತೆ ಮಾಡುವವನು ಅವನೇ. ಎಲ್ಲಿಯವರೆಗೆಂದರೆ, ನೀವೊಂದು ನಾವೆಯಲ್ಲಿದ್ದು, ಉತ್ತಮ ಹವೆಯಿಂದಾಗಿ ಅವು ಯಾತ್ರಿಕರನ್ನು ಹೊತ್ತು ಚಲಿಸುತ್ತಿರುವಾಗ ಮತ್ತು ನೀವು ತುಂಬಾ ಸಂಭ್ರಮದಲ್ಲಿರುವಾಗ, ಇದ್ದಕ್ಕಿದ್ದಂತೆ ಒಂದು ಭೀಕರ ಬಿರುಗಾಳಿಯು ಬೀಸಿ, ಎಲ್ಲಾ ದಿಕ್ಕುಗಳಿಂದಲೂ ಹೆದ್ದೆರೆಗಳು ಎದ್ದು, ಸಾವು ತಮ್ಮನ್ನು ಆವರಿಸಿಕೊಂಡಿದೆಯೆಂದು ಅವರಿಗೆ ಖಾತ್ರಿಯಾದಾಗ, ಅವರು ಸಂಪೂರ್ಣ ನಿಷ್ಕಳಂಕತೆಯಿಂದ ಅಲ್ಲಾಹನನ್ನು ಕರೆದು ಪ್ರಾರ್ಥಿಸುತ್ತಾರೆ: “ನೀನು ನಮ್ಮನ್ನು ಇದರಿಂದ ಪಾರು ಮಾಡಿದರೆ ನಿಶ್ಚಯವಾಗಿಯೂ ನಾವು ನಿನಗೆ ಆಭಾರಿಯಾಗಿರುತ್ತೇವೆ.”
Yunus 10:23
ಆದರೆ ಅವನು ಅವರನ್ನು ಪಾರು ಮಾಡಿದಾಗ, ಅಗೋ ಅವರು ಅನ್ಯಾಯವಾಗಿ ಭೂಮಿಯಲ್ಲಿ ಅತಿರೇಕವೆಸಗುತ್ತಾರೆ. ಓ ಮನುಷ್ಯರೇ! ನೀವು ಮಾಡುವ ಅತಿರೇಕಗಳ ದುಷ್ಫಲವನ್ನು ನೀವೇ ಉಣ್ಣುತ್ತೀರಿ. ಅವು ಇಹಲೋಕದ ಕೆಲವು ಆನಂದಗಳು ಮಾತ್ರ. ನಂತರ ನಿಮ್ಮನ್ನು ನಮ್ಮ ಬಳಿಗೆ ಮರಳಿಸಲಾಗುವುದು. ಆಗ ನೀವು ಮಾಡಿದ ಕರ್ಮಗಳನ್ನು ನಾವು ನಿಮಗೆ ತಿಳಿಸಿಕೊಡುವೆವು.
Yunus 10:24
ಇಹಲೋಕದ ಉದಾಹರಣೆಯು ಒಂದು ಮಳೆಯಂತೆ. ನಾವು ಅದನ್ನು ಆಕಾಶದಿಂದ ಇಳಿಸಿದೆವು. ಆಗ ಅದರೊಂದಿಗೆ ಭೂಮಿಯಲ್ಲಿ ಮನುಷ್ಯರು ಮತ್ತು ಜಾನುವಾರುಗಳು ತಿನ್ನುವ ಸಸ್ಯಲತಾದಿಗಳು ಬೆರೆತು ಬೆಳೆದವು. ಎಲ್ಲಿಯವರೆಗೆಂದರೆ, ಭೂಮಿ ತನ್ನ ಶೃಂಗಾರವನ್ನು ಧರಿಸಿ ಅಲಂಕಾರದಿಂದ ಕಂಗೊಳಿಸಿದಾಗ ಮತ್ತು ಭೂಮಿಯನ್ನು ನಿಯಂತ್ರಿಸುವ ಸಾಮರ್ಥ್ಯ ನಮಗಿದೆಯೆಂದು ಭೂನಿವಾಸಿಗಳು ಭಾವಿಸಿದಾಗ, ಒಂದು ರಾತ್ರಿಯಲ್ಲಿ ಅಥವಾ ಹಗಲಲ್ಲಿ ನಮ್ಮ ಆಜ್ಞೆಯು ಅದಕ್ಕೆ ಬಂದುಬಿಟ್ಟಿತು. ಆಗ ನಿನ್ನೆ ಅಲ್ಲಿ ಏನೂ ಇರಲಿಲ್ಲವೋ ಎಂಬಂತೆ ನಾವು ಅವುಗಳನ್ನು ಸಂಪೂರ್ಣ ನಾಶ ಮಾಡಿದೆವು. ಆಲೋಚಿಸುವ ಜನರಿಗೆ ನಾವು ಈ ರೀತಿಯಲ್ಲಿ ದೃಷ್ಟಾಂತಗಳನ್ನು ವಿವರಿಸಿಕೊಡುವೆವು.
Yunus 10:25
ಅಲ್ಲಾಹು ಶಾಂತಿಯ ಭವನಕ್ಕೆ ಕರೆಯುತ್ತಿದ್ದಾನೆ. ಅವನು ಇಚ್ಛಿಸುವವರಿಗೆ ಅವನು ನೇರ ಮಾರ್ಗವನ್ನು ತೋರಿಸುತ್ತಾನೆ.
Yunus 10:26
ಒಳಿತು ಮಾಡಿದವರಿಗೆ ಅತ್ಯುತ್ತಮ ಪ್ರತಿಫಲವಿದೆ ಮತ್ತು ಹೆಚ್ಚಳವೂ[1] ಇದೆ. ಅವರ ಮುಖಗಳನ್ನು ಅಂಧಕಾರ ಮತ್ತು ಅಪಮಾನವು ಆವರಿಸುವುದಿಲ್ಲ. ಅವರೇ ಸ್ವರ್ಗವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
———
[1] ಇಲ್ಲಿ ಹೆಚ್ಚಳವೆಂದು ಹೇಳಿರುವುದು ಅಲ್ಲಾಹನ ಆದರಣೀಯ ಮುಖದರ್ಶನವಾಗಿದೆ. ಸ್ವರ್ಗದಲ್ಲಿ ಸತ್ಯವಿಶ್ವಾಸಿಗಳು ಅಲ್ಲಾಹನನ್ನು ನೇರವಾಗಿ ನೋಡುವರು.
Yunus 10:27
ಕೆಡುಕುಗಳನ್ನು ಮಾಡಿದವರು ಯಾರೋ—ಅವರ ಕೆಡುಕಿಗೆ ಸಮಾನವಾದ ಶಿಕ್ಷೆಯು ಅವರಿಗೆ ದೊರೆಯಲಿದೆ ಮತ್ತು ಅಪಮಾನವು ಅವರನ್ನು ಆವರಿಸಲಿದೆ. ಅಲ್ಲಾಹನ ಶಿಕ್ಷೆಯಿಂದ ಅವರನ್ನು ರಕ್ಷಿಸುವವರು ಯಾರೂ ಇಲ್ಲ. ಕಾರ್ಗತ್ತಲ ರಾತ್ರಿಯ ತುಣುಕುಗಳು ಅವರ ಮುಖಗಳನ್ನು ಆವರಿಸಿಕೊಂಡಿದೆಯೋ ಎಂಬಂತೆ (ಅವರು ಕಪ್ಪಾಗಿರುವರು). ಅವರೇ ನರಕವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
Yunus 10:28
ನಾವು ಅವರೆಲ್ಲರನ್ನೂ ಒಟ್ಟುಗೂಡಿಸುವ ದಿನ. ನಂತರ ನಾವು ಬಹುದೇವಾರಾಧಕರೊಡನೆ ಹೇಳುವೆವು: “ನೀವು ಮತ್ತು ನಿಮ್ಮ ಸಹಭಾಗಿಗಳು (ದೇವರುಗಳು) ಅಲ್ಲೇ ನಿಲ್ಲಿರಿ.” ನಂತರ ನಾವು ಅವರನ್ನು ಬೇರ್ಪಡಿಸುವೆವು. ಆಗ ಅವರ ಸಹಭಾಗಿಗಳು (ದೇವರುಗಳು) ಅವರೊಡನೆ ಹೇಳುವರು: “ನೀವು ನಮ್ಮನ್ನು ಆರಾಧಿಸುತ್ತಿರಲಿಲ್ಲ.
Yunus 10:29
ನಮ್ಮ ಮತ್ತು ನಿಮ್ಮ ನಡುವೆ ಸಾಕ್ಷಿಯಾಗಿ ಅಲ್ಲಾಹು ಸಾಕು. ನೀವು ಮಾಡುತ್ತಿದ್ದ ಆರಾಧನೆಯ ಬಗ್ಗೆ ನಮಗೆ ಗೊತ್ತೇ ಇರಲಿಲ್ಲ.”
Yunus 10:30
ಅಲ್ಲಿ ಪ್ರತಿಯೊಬ್ಬನೂ ತಾನು ಈಗಾಗಲೇ ಮಾಡಿಟ್ಟ ಕರ್ಮಗಳನ್ನು ತನಿಖೆ ಮಾಡುವನು. ಅವರನ್ನು ಅವರ ನೈಜ ರಕ್ಷಕನಾದ ಅಲ್ಲಾಹನ ಬಳಿಗೆ ಮರಳಿಸಲಾಗುವುದು. ಅವರು ಆರೋಪಿಸುತ್ತಿದ್ದ ಸುಳ್ಳುಗಳೆಲ್ಲವೂ ಅವರಿಂದ ಮಾಯವಾಗಿ ಬಿಡುವುವು.
Yunus 10:31
ಕೇಳಿರಿ: “ಆಕಾಶದಿಂದ ಮತ್ತು ಭೂಮಿಯಿಂದ ನಿಮಗೆ ಆಹಾರವನ್ನು ಒದಗಿಸುವುದು ಯಾರು? ನಿಮ್ಮ ಶ್ರವಣ ಮತ್ತು ದೃಷ್ಟಿ ಯಾರ ನಿಯಂತ್ರಣದಲ್ಲಿದೆ? ನಿರ್ಜೀವಿಯಿಂದ ಜೀವಿಯನ್ನು ಮತ್ತು ಜೀವಿಯಿಂದ ನಿರ್ಜೀವಿಯನ್ನು ಹೊರತರುವುದು ಯಾರು? ಜಗತ್ತಿನ ಎಲ್ಲಾ ವಿಷಯಗಳನ್ನು ನಿಯಂತ್ರಿಸುವುದು ಯಾರು?” ಆಗ ಅವರು ಹೇಳುವರು: “ಅಲ್ಲಾಹು.” ಕೇಳಿರಿ: “ಆದರೂ ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?”
Yunus 10:32
ಅವನೇ ನಿಮ್ಮ ನೈಜ ಪರಿಪಾಲಕನಾದ ಅಲ್ಲಾಹು. ಸತ್ಯದ ನಂತರ ದುರ್ಮಾರ್ಗವಲ್ಲದೆ ಇನ್ನೇನಿದೆ? ಹಾಗಿದ್ದೂ ನೀವು (ಸತ್ಯದಿಂದ) ತಿರುಗಿಸಲ್ಪಡುತ್ತಿರುವುದು ಹೇಗೆ?
Yunus 10:33
ಈ ರೀತಿ ಆ ದುಷ್ಕರ್ಮಿಗಳಿಗೆ ಸಂಬಂಧಿಸಿದಂತೆ “ಅವರು ವಿಶ್ವಾಸವಿಡುವುದಿಲ್ಲ” ಎಂಬ ನಿಮ್ಮ ಪರಿಪಾಲಕನ (ಅಲ್ಲಾಹನ) ವಚನವು ಸತ್ಯವಾಗಿ ಪರಿಣಮಿಸಿದೆ.
Yunus 10:34
ಕೇಳಿರಿ: “ನೀವು (ಅಲ್ಲಾಹನೊಂದಿಗೆ) ಸಹಭಾಗಿಗಳನ್ನಾಗಿ ಮಾಡಿದವರಲ್ಲಿ (ನಿಮ್ಮ ದೇವರುಗಳಲ್ಲಿ) ಸೃಷ್ಟಿಯನ್ನು ಆರಂಭಿಸುವವರು ಮತ್ತು ನಂತರ ಅದನ್ನು ಪುನರಾವರ್ತಿಸುವವರು ಯಾರಾದರೂ ಇದ್ದಾರೆಯೇ?” ಹೇಳಿರಿ: “ಅಲ್ಲಾಹು ಸೃಷ್ಟಿಯನ್ನು ಆರಂಭಿಸುತ್ತಾನೆ ಮತ್ತು ನಂತರ ಅದನ್ನು ಪುನರಾವರ್ತಿಸುತ್ತಾನೆ. ಹಾಗಿದ್ದೂ ನೀವು (ಸತ್ಯದಿಂದ) ತಪ್ಪಿಸಲ್ಪಡುತ್ತಿರುವುದು ಹೇಗೆ?”
Yunus 10:35
ಕೇಳಿರಿ: “ನೀವು (ಅಲ್ಲಾಹನೊಂದಿಗೆ) ಸಹಭಾಗಿಗಳನ್ನಾಗಿ ಮಾಡಿದವರಲ್ಲಿ (ನಿಮ್ಮ ದೇವರುಗಳಲ್ಲಿ) ಸತ್ಯಮಾರ್ಗವನ್ನು ತೋರಿಸುವವರು ಯಾರಾದರೂ ಇದ್ದಾರೆಯೇ?” ಹೇಳಿರಿ: “ಅಲ್ಲಾಹು ಸತ್ಯಮಾರ್ಗವನ್ನು ತೋರಿಸುತ್ತಾನೆ. ಹಾಗಾದರೆ, ಅನುಸರಿಸಲು ಹೆಚ್ಚು ಹಕ್ಕಿರುವವನು ಸತ್ಯಮಾರ್ಗವನ್ನು ತೋರಿಸುವವನೋ ಅಥವಾ ಬೇರೆ ಯಾರಾದರೂ ಸತ್ಯಮಾರ್ಗವನ್ನು ತೋರಿಸಿದ ವಿನಾ ಸ್ವಯಂ ಸತ್ಯಮಾರ್ಗವನ್ನು ಕಾಣಲು ಸಾಧ್ಯವಾಗದವನೋ? ನಿಮಗೇನಾಗಿದೆ? ನೀವು ಹೇಗೆ ತೀರ್ಪು ನೀಡುತ್ತೀರಿ?”
Yunus 10:36
ಅವರಲ್ಲಿ ಹೆಚ್ಚಿನವರು ಊಹಾಪೋಹಗಳನ್ನು ಮಾತ್ರ ಹಿಂಬಾಲಿಸುತ್ತಾರೆ. ಸತ್ಯವನ್ನು ತಿಳಿಯುವ ವಿಷಯದಲ್ಲಿ ಊಹಾಪೋಹಗಳು ಖಂಡಿತ ಉಪಕಾರ ಮಾಡುವುದಿಲ್ಲ. ನಿಶ್ಚಯವಾಗಿಯೂ ಅವರು ಮಾಡುತ್ತಿರುವ ಕರ್ಮಗಳ ಬಗ್ಗೆ ಅಲ್ಲಾಹು ಬಹಳ ಚೆನ್ನಾಗಿ ತಿಳಿದಿದ್ದಾನೆ.
Yunus 10:37
ಈ ಕುರ್‌ಆನ್ ಅಲ್ಲಾಹನಿಂದಲ್ಲದೆ ಇನ್ನಾರಿಂದಲೂ ರಚಿಸಲು ಸಾಧ್ಯವಿಲ್ಲ. ವಾಸ್ತವವಾಗಿ, ಇದು ಇದಕ್ಕಿಂತ ಮೊದಲು ಅವತೀರ್ಣವಾದ ಗ್ರಂಥಗಳ ದೃಢೀಕರಣ ಮತ್ತು ಗ್ರಂಥದ (ನಿಯಮಗಳ) ವಿವರಣೆಯಾಗಿದೆ. ಇದು ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಂದ ಅವತೀರ್ಣವಾಗಿದೆ ಎಂಬ ವಿಷಯದಲ್ಲಿ ಸಂದೇಹವೇ ಇಲ್ಲ.
Yunus 10:38
ಇದನ್ನು ಪ್ರವಾದಿಯವರು ಸ್ವಯಂ ರಚಿಸಿದರೆಂದು ಅವರು ಹೇಳುತ್ತಿದ್ದಾರೆಯೇ? ಹೇಳಿರಿ: “ಸರಿ, ಹಾಗಾದರೆ ನೀವು ಕೂಡ ಇದರಂತಿರುವ ಒಂದು ಅಧ್ಯಾಯವನ್ನು ರಚಿಸಿ ತನ್ನಿ. ಅಲ್ಲಾಹನ ಹೊರತು ನಿಮಗೆ ಸಾಧ್ಯವಿರುವ ಎಲ್ಲರನ್ನೂ ಕರೆಯಿರಿ. ನೀವು ಸತ್ಯವನ್ನೇ ಹೇಳುತ್ತಿದ್ದರೆ.”
Yunus 10:39
ಬದಲಿಗೆ, ಯಾವುದನ್ನು ಅವರು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಲಿಲ್ಲವೋ ಮತ್ತು ಯಾವುದರ ಫಲಿತಾಂಶವು ಅವರನ್ನು ತಲುಪಲಿಲ್ಲವೋ ಅದನ್ನು ಅವರು ನಿಷೇಧಿಸಿದರು. ಅವರಿಗಿಂತ ಮೊದಲಿನವರೂ ಹೀಗೆಯೇ ನಿಷೇಧಿಸಿದ್ದರು. ಆದ್ದರಿಂದ, ಅಕ್ರಮಿಗಳ ಅಂತ್ಯವು ಹೇಗಿತ್ತೆಂದು ನೋಡಿರಿ.
Yunus 10:40
ಅವರಲ್ಲಿ ಕೆಲವರು ಅದರಲ್ಲಿ (ಕುರ್‌ಆನಿನಲ್ಲಿ) ವಿಶ್ವಾಸವಿಡುತ್ತಾರೆ ಮತ್ತು ಕೆಲವರು ವಿಶ್ವಾಸವಿಡುವುದಿಲ್ಲ. ಅಲ್ಲಾಹು ಕಿಡಿಗೇಡಿಗಳ ಬಗ್ಗೆ ಬಹಳ ಚೆನ್ನಾಗಿ ತಿಳಿದಿದ್ದಾನೆ.
Yunus 10:41
ಅವರು ನಿಮ್ಮನ್ನು ನಿಷೇಧಿಸಿದರೆ ಹೇಳಿರಿ: “ನನಗೆ ನನ್ನ ಕರ್ಮ ಮತ್ತು ನಿಮಗೆ ನಿಮ್ಮ ಕರ್ಮ. ನಾನು ಮಾಡುವ ಕರ್ಮಗಳಿಂದ ನೀವು ಹೊಣೆಮುಕ್ತರಾಗಿದ್ದೀರಿ ಮತ್ತು ನೀವು ಮಾಡುವ ಕರ್ಮಗಳಿಂದ ನಾನು ಹೊಣೆಮುಕ್ತನಾಗಿದ್ದೇನೆ.”
Yunus 10:42
ಅವರಲ್ಲಿ ಕೆಲವರು ನೀವು ಹೇಳುವುದನ್ನು ಕಿವಿಗೊಟ್ಟು ಕೇಳುತ್ತಾರೆ. ಆದರೆ ಆ ಕಿವುಡರಿಗೆ (ನಿಮ್ಮ ಸಂದೇಶವು) ಕೇಳುವಂತೆ ಮಾಡಲು ನಿಮಗೆ ಸಾಧ್ಯವೇ? ಅವರು ಅದನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡದಿದ್ದರೂ ಸಹ?
Yunus 10:43
ಅವರಲ್ಲಿ ಕೆಲವರು ನಿಮ್ಮನ್ನು ನೋಡುತ್ತಾರೆ. ಆದರೆ ಆ ಕುರುಡರಿಗೆ ದಾರಿ ತೋರಿಸಲು ನಿಮಗೆ ಸಾಧ್ಯವೇ? ಅವರು ನೋಡುವ ಪ್ರಯತ್ನ ಮಾಡದಿದ್ದರೂ ಸಹ?[1]
———
[1] ಅವರು ಕುರ್‌ಆನ್ ಪಠಣಕ್ಕೆ ಕಿವಿಗೊಡುತ್ತಾರೆ. ಅದೇ ರೀತಿ ನೀವು ಪಠಿಸುವಾಗ ಅವರು ನಿಮ್ಮನ್ನು ಗಮನದಿಂದ ನೋಡುತ್ತಾರೆ. ಆದರೆ ಅವರ ಉದ್ದೇಶವು ಬೇರೆಯೇ ಆಗಿರುತ್ತದೆ. ಕುರ್‌ಆನ್ ಕಲಿಯುವುದು ಅಥವಾ ಅರ್ಥಮಾಡಿಕೊಳ್ಳುವುದು ಅವರ ಉದ್ದೇಶವಲ್ಲ. ಇಂತಹ ಜನರು ಕಿವುಡರು ಮತ್ತು ಕುರುಡರಂತೆ.
Yunus 10:44
ನಿಶ್ಚಯವಾಗಿಯೂ ಅಲ್ಲಾಹು ಮನುಷ್ಯರಿಗೆ ಸ್ವಲ್ಪವೂ ಅನ್ಯಾಯ ಮಾಡುವುದಿಲ್ಲ. ಆದರೆ ಮನುಷ್ಯರು ಸ್ವಯಂ ಅವರಿಗೇ ಅನ್ಯಾಯ ಮಾಡುತ್ತಿದ್ದಾರೆ.
Yunus 10:45
ಅವನು ಅವರನ್ನು ಒಟ್ಟುಗೂಡಿಸುವ ದಿನ ಹಗಲಿನ ಕೆಲವು ತಾಸುಗಳು ಮಾತ್ರ (ಭೂಲೋಕದಲ್ಲಿ) ವಾಸವಾಗಿದ್ದೆವೋ ಎಂಬಂತೆ ಅವರಿಗೆ ಭಾಸವಾಗುವುದು. ಅವರು ಪರಸ್ಪರ ಗುರುತಿಸುವರು. ಅಲ್ಲಾಹನ ಭೇಟಿಯನ್ನು ನಿಷೇಧಿಸಿದವರು ನಷ್ಟಹೊಂದಿದರು. ಅವರು ಸನ್ಮಾರ್ಗ ಪಡೆದವರಾಗಲಿಲ್ಲ.
Yunus 10:46
ನಾವು ಅವರಿಗೆ ವಾಗ್ದಾನ ಮಾಡುವ ಶಿಕ್ಷೆಗಳಲ್ಲಿ ಕೆಲವನ್ನು ನಾವು ನಿಮಗೆ ತೋರಿಸಿಕೊಟ್ಟರೂ ಅಥವಾ (ಅದಕ್ಕಿಂತ ಮೊದಲೇ) ನಾವು ನಿಮ್ಮನ್ನು ಮೃತಪಡಿಸಿದರೂ ಅವರು ಮರಳುವುದು ನಮ್ಮ ಬಳಿಗೇ ಆಗಿದೆ. ನಂತರ, ಅವರು ಮಾಡುವ ಎಲ್ಲಾ ಕರ್ಮಗಳಿಗೂ ಅಲ್ಲಾಹು ಸಾಕ್ಷಿಯಾಗಿದ್ದಾನೆ.
Yunus 10:47
ಎಲ್ಲಾ ಸಮುದಾಯಗಳಿಗೂ ಒಬ್ಬ ಸಂದೇಶವಾಹಕರಿದ್ದಾರೆ. ಅವರ ಸಂದೇಶವಾಹಕರ ಆಗಮನವಾದರೆ, ಅವರ ಮಧ್ಯೆ ನ್ಯಾಯಯುತವಾಗಿ ತೀರ್ಪು ನೀಡಲಾಗುವುದು. ಅವರಿಗೆ ಸ್ವಲ್ಪವೂ ಅನ್ಯಾಯವಾಗುವುದಿಲ್ಲ.[1]
———
[1] ಇದಕ್ಕೆ ಎರಡು ರೀತಿಯ ವ್ಯಾಖ್ಯಾನಗಳಿವೆ. 1. ಅಲ್ಲಾಹು ಎಲ್ಲಾ ಸಮುದಾಯಗಳಿಗೆ ಪ್ರವಾದಿಗಳನ್ನು ಕಳುಹಿಸುತ್ತಾನೆ. ಒಂದು ಸಮುದಾಯಕ್ಕೆ ಪ್ರವಾದಿಯ ಆಗಮನವಾಗಿ ಅವರು ತಮ್ಮ ಕರ್ತವ್ಯವನ್ನು ಪೂರೈಸಿದ ನಂತರ ಅಲ್ಲಾಹು ಆ ಸಮುದಾಯದ ವಿಷಯದಲ್ಲಿ ನ್ಯಾಯಯುತವಾಗಿ ತೀರ್ಮಾನ ಕೈಗೊಳ್ಳುತ್ತಾನೆ. ಅಂದರೆ ಪ್ರವಾದಿಯನ್ನು ಮತ್ತು ಸತ್ಯವಿಶ್ವಾಸಿಗಳನ್ನು ರಕ್ಷಿಸುತ್ತಾನೆ ಹಾಗೂ ಸತ್ಯನಿಷೇಧಿಗಳನ್ನು ಶಿಕ್ಷಿಸುತ್ತಾನೆ. ಅವರಿಗೆ ಯಾವುದೇ ಅನ್ಯಾಯವಾಗುವುದಿಲ್ಲ. 2. ಪುನರುತ್ಥಾನ ದಿನದಂದು ಎಲ್ಲಾ ಸಮುದಾಯಗಳು ತಮ್ಮ ತಮ್ಮ ಪ್ರವಾದಿಗಳೊಡನೆ ಬರುತ್ತಾರೆ. ಅಲ್ಲಿ ಕರ್ಮಪುಸ್ತಕಗಳನ್ನು ಇಡಲಾಗುತ್ತದೆ ಮತ್ತು ಸಾಕ್ಷಿ ಹೇಳಲು ದೇವದೂತರುಗಳು ಬರುತ್ತಾರೆ. ಅಲ್ಲಾಹು ಆ ಸಮುದಾಯದ ವಿಷಯದಲ್ಲಿ ನ್ಯಾಯಯುತವಾಗಿ ತೀರ್ಪು ನೀಡುತ್ತಾನೆ. ಅವರಿಗೆ ಯಾವುದೇ ಅನ್ಯಾಯವಾಗುವುದಿಲ್ಲ.
Yunus 10:48
ಅವರು ಕೇಳುತ್ತಾರೆ: “ಈ ವಾಗ್ದಾನವು ಸತ್ಯವಾಗುವುದು ಯಾವಾಗ? ನೀವು ಸತ್ಯವಂತರಾಗಿದ್ದರೆ ಹೇಳಿರಿ.”
Yunus 10:49
ಹೇಳಿರಿ: “ನಾನು ಸ್ವಯಂ ನನಗೆ ಯಾವುದೇ ಪ್ರಯೋಜನ ಅಥವಾ ತೊಂದರೆ ಮಾಡುವ ಸಾಮರ್ಥ್ಯವನ್ನು ಹೊಂದಿಲ್ಲ. ಅಲ್ಲಾಹು ಏನು ಇಚ್ಛಿಸುತ್ತಾನೋ ಅದರ ಹೊರತು. ಎಲ್ಲಾ ಸಮುದಾಯಗಳಿಗೂ ಒಂದು ಅವಧಿಯಿದೆ. ಅವರ ಅವಧಿಯು ಬಂದರೆ, ಒಂದು ಕ್ಷಣ ಹಿಂದೂಡಲು ಅಥವಾ ಮುಂದೂಡಲು ಅವರಿಂದ ಸಾಧ್ಯವಿಲ್ಲ.”
Yunus 10:50
ಹೇಳಿರಿ: “ನೀವು ಆಲೋಚಿಸಿ ನೋಡಿದ್ದೀರಾ! ಅಲ್ಲಾಹನ ಶಿಕ್ಷೆಯು ನಿಮ್ಮ ಬಳಿಗೆ ರಾತ್ರಿಯಲ್ಲಿ ಅಥವಾ ಹಗಲಿನಲ್ಲಿ ಬಂದರೆ, ಅದರಲ್ಲಿ ಯಾವುದಕ್ಕಾಗಿ ಅಪರಾಧಿಗಳು ತ್ವರೆ ಮಾಡುತ್ತಿದ್ದಾರೆ?”
Yunus 10:51
ನಂತರ ಅದು ಬಂದ ಬಳಿಕ ನೀವು ಅದನ್ನು ನಂಬುವಿರಾ? (ಆಗ ನಿಮ್ಮೊಡನೆ ಹೇಳಲಾಗುವುದು): “ಈಗ ನೀವು ನಂಬುತ್ತೀರಾ? ನೀವು ಇದಕ್ಕಾಗಿ ತ್ವರೆ ಮಾಡುತ್ತಿದ್ದಿರಲ್ಲವೇ?”
Yunus 10:52
ನಂತರ ಅಕ್ರಮಿಗಳೊಡನೆ ಹೇಳಲಾಗುವುದು: “ಶಾಶ್ವತ ಶಿಕ್ಷೆಯ ರುಚಿಯನ್ನು ನೋಡಿರಿ. ನೀವು ಮಾಡಿದ ಕರ್ಮಗಳಿಗಲ್ಲದೆ ಬೇರೇನಾದರೂ ನಿಮಗೆ ಪ್ರತಿಫಲ ನೀಡಲಾಗುವುದೇ?”
Yunus 10:53
“ಅದು ನಿಜವೇ?” ಎಂದು ಅವರು ನಿಮ್ಮೊಡನೆ ವಿಚಾರಿಸುತ್ತಾರೆ. ಹೇಳಿರಿ: “ಹೌದು! ನನ್ನ ಪರಿಪಾಲಕನ (ಅಲ್ಲಾಹನ) ಆಣೆ! ನಿಶ್ಚಯವಾಗಿಯೂ ಅದು ಸತ್ಯವಾಗಿದೆ. ನಿಮಗೆ ಅಲ್ಲಾಹನನ್ನು ಸೋಲಿಸಲು ಸಾಧ್ಯವಿಲ್ಲ.”
Yunus 10:54
ಅಕ್ರಮವೆಸಗಿದ ಪ್ರತಿಯೊಬ್ಬ ವ್ಯಕ್ತಿಯ ಬಳಿ ಭೂಮಿಯಲ್ಲಿರುವುದೆಲ್ಲವೂ ಇದ್ದರೂ ಅವನು ಅವೆಲ್ಲವನ್ನೂ ಪರಿಹಾರವಾಗಿ ನೀಡಿಯಾದರೂ ಶಿಕ್ಷೆಯಿಂದ ಪಾರಾಗಲು ಬಯಸುತ್ತಿದ್ದನು. ಶಿಕ್ಷೆಯನ್ನು ಕಾಣುವಾಗ ಅವರು ತಮ್ಮ ವಿಷಾದವನ್ನು ಅಡಗಿಸುವರು. ಅವರ ನಡುವೆ ನ್ಯಾಯಯುತವಾಗಿ ತೀರ್ಪು ನೀಡಲಾಗುವುದು. ಅವರಿಗೆ ಸ್ವಲ್ಪವೂ ಅನ್ಯಾಯವಾಗುವುದಿಲ್ಲ.
Yunus 10:55
ತಿಳಿಯಿರಿ! ನಿಶ್ಚಯವಾಗಿಯೂ ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನಿಗೆ ಸೇರಿದ್ದು. ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹನ ವಾಗ್ದಾನವು ಸತ್ಯವಾಗಿದೆ. ಆದರೆ ಅವರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.
Yunus 10:56
ಅವನು ಜೀವ ಮತ್ತು ಮರಣವನ್ನು ನೀಡುತ್ತಾನೆ. ನಿಮ್ಮನ್ನು ಅವನ ಬಳಿಗೇ ಮರಳಿಸಲಾಗುವುದು.
Yunus 10:57
ಓ ಮನುಷ್ಯರೇ! ನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಒಂದು ಉಪದೇಶವು ಬಂದಿದೆ. ಅದು ಹೃದಯಗಳಲ್ಲಿರುವ ರೋಗಕ್ಕೆ ಉಪಶಮನವಾಗಿದೆ ಮತ್ತು ಸತ್ಯವಿಶ್ವಾಸಿಗಳಿಗೆ ಸನ್ಮಾರ್ಗ ಹಾಗೂ ದಯೆಯಾಗಿದೆ.
Yunus 10:58
ಹೇಳಿರಿ: “ಅಲ್ಲಾಹನ ಈ ಔದಾರ್ಯ ಮತ್ತು ದಯೆಯಿಂದ ಅವರು (ಸತ್ಯವಿಶ್ವಾಸಿಗಳು) ಸಂತೋಷಪಡಲಿ. ಅವರು ಶೇಖರಿಸುವ ಎಲ್ಲಾ ವಸ್ತುಗಳಿಗಿಂತಲೂ ಇದು ಶ್ರೇಷ್ಠವಾಗಿದೆ.”
Yunus 10:59
ಹೇಳಿರಿ: “ನೀವು ಆಲೋಚಿಸಿ ನೋಡಿದ್ದೀರಾ! ಅಲ್ಲಾಹು ನಿಮಗೆ ಏನೆಲ್ಲಾ ಆಹಾರಗಳನ್ನು ಒದಗಿಸಿದ್ದಾನೋ ಅವುಗಳಲ್ಲಿ ಕೆಲವನ್ನು ನೀವು ನಿಷೇಧಿಸಿದ್ದೀರಿ ಮತ್ತು ಕೆಲವನ್ನು ಅನುಮತಿಸಿದ್ದೀರಿ.” ಕೇಳಿರಿ: “ಹೀಗೆ ಮಾಡಲು ಅಲ್ಲಾಹು ನಿಮಗೆ ಆಜ್ಞಾಪಿಸಿದನೇ? ಅಥವಾ ನೀವು ಅಲ್ಲಾಹನ ಮೇಲೆ ಸುಳ್ಳು ಆರೋಪಿಸುತ್ತಿದ್ದೀರಾ?”
Yunus 10:60
ಪುನರುತ್ಥಾನದ ದಿನದಂದು ಅಲ್ಲಾಹನ ಮೇಲೆ ಸುಳ್ಳು ಆರೋಪಿಸುವವರ ಭಾವನೆ ಏನಿರಬಹುದು? ನಿಶ್ಚಯವಾಗಿಯೂ ಅಲ್ಲಾಹನಿಗೆ ಜನರ ಮೇಲೆ ಮಹಾ ಔದಾರ್ಯವಿದೆ. ಆದರೆ ಅವರಲ್ಲಿ ಹೆಚ್ಚಿನವರೂ ಕೃತಜ್ಞರಾಗುವುದಿಲ್ಲ.
Yunus 10:61
ನೀವು ಯಾವುದೇ ಕೆಲಸದಲ್ಲಿ ನಿರತರಾಗಿದ್ದರೂ, ನೀವು ಕುರ್‌ಆನಿನ ಯಾವುದೇ ಭಾಗವನ್ನು ಪಠಿಸುತ್ತಿದ್ದರೂ, ಮತ್ತು ನೀವು (ಜನರು) ಯಾವುದೇ ಕೆಲಸವನ್ನು ಮಾಡುತ್ತಿದ್ದರೂ, ನೀವು ಅದರಲ್ಲಿ ಮುಳುಗಿರುವಾಗ ನಾವು ನಿಮ್ಮ ಮೇಲೆ ಸಂಪೂರ್ಣ ಸಾಕ್ಷಿಯಾಗಿರುತ್ತೇವೆ. ಭೂಮಿಯಲ್ಲಿ ಅಥವಾ ಆಕಾಶದಲ್ಲಿರುವ ಒಂದು ಅಣುವಿನ ತೂಕದಷ್ಟಿರುವ—ಅಥವಾ ಅದಕ್ಕಿಂತ ಚಿಕ್ಕ ಅಥವಾ ಅದಕ್ಕಿಂತ ದೊಡ್ಡ—ಯಾವುದೇ ಒಂದು ವಸ್ತುವೂ ನಿಮ್ಮ ಪರಿಪಾಲಕನ (ಅಲ್ಲಾಹನ) ದೃಷ್ಟಿಯಿಂದ ಮರೆಯಾಗಿಲ್ಲ. ಎಲ್ಲವನ್ನೂ ಒಂದು ಸ್ಪಷ್ಟ ದಾಖಲೆಯಲ್ಲಿ ನಮೂದಿಸಿಡಲಾಗಿದೆ.
Yunus 10:62
ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹನ ಇಷ್ಟದಾಸರಿಗೆ ಯಾವುದೇ ಭಯವಿಲ್ಲ. ಅವರು ದುಃಖಿಸುವುದೂ ಇಲ್ಲ.
Yunus 10:63
ಅವರು ವಿಶ್ವಾಸವಿಟ್ಟವರು ಮತ್ತು ದೇವಭಯವುಳ್ಳವರಾಗಿದ್ದಾರೆ.
Yunus 10:64
ಅವರಿಗೆ ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಸುವಾರ್ತೆಗಳಿವೆ. ಅಲ್ಲಾಹನ ವಚನಗಳಿಗೆ ಯಾವುದೇ ಬದಲಾವಣೆಯಿಲ್ಲ. ಅದೇ ಅತಿದೊಡ್ಡ ಯಶಸ್ಸು.
Yunus 10:65
ಅವರ ಮಾತುಗಳು ನಿಮ್ಮನ್ನು ಬೇಸರಗೊಳಿಸದಿರಲಿ. ನಿಶ್ಚಯವಾಗಿಯೂ ಪ್ರಾಬಲ್ಯವು ಸಂಪೂರ್ಣವಾಗಿ ಅಲ್ಲಾಹನಿಗೆ ಮಾತ್ರವಿದೆ. ಅವನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
Yunus 10:66
ತಿಳಿಯಿರಿ! ನಿಶ್ಚಯವಾಗಿಯೂ ಭೂಮ್ಯಾಕಾಶಗಳಲ್ಲಿರುವ ಎಲ್ಲರೂ ಅಲ್ಲಾಹನಿಗೆ ಸೇರಿದವರು. ಅಲ್ಲಾಹನ ಬಿಟ್ಟು ಅವನೊಂದಿಗೆ ಸಹಭಾಗಿಗಳನ್ನಾಗಿ ಮಾಡಿದ ದೇವರುಗಳನ್ನು ಕರೆದು ಪ್ರಾರ್ಥಿಸುವವರು ಏನನ್ನು ಹಿಂಬಾಲಿಸುತ್ತಾರೆ? ಅವರು ಕೇವಲ ಊಹಾ-ಪೋಹಗಳನ್ನು ಮಾತ್ರ ಹಿಂಬಾಲಿಸುತ್ತಾರೆ. ಅವರು ಸುಳ್ಳನ್ನು ಮಾತ್ರ ಆರೋಪಿಸುತ್ತಾರೆ.
Yunus 10:67
ನಿಮಗೆ ವಿಶ್ರಾಂತಿ ಪಡೆಯಲು ರಾತ್ರಿಯನ್ನು ಮಾಡಿದವನು ಮತ್ತು (ನಿಮ್ಮ ಉಪಜೀವನಕ್ಕಾಗಿ) ಹಗಲನ್ನು ಪ್ರಕಾಶಮಯವಾಗಿ ಮಾಡಿದವನು ಅವನೇ. ನಿಶ್ಚಯವಾಗಿಯೂ ಕಿವಿಗೊಡುವ ಜನರಿಗೆ ಅದರಲ್ಲಿ ಅನೇಕ ದೃಷ್ಟಾಂತಗಳಿವೆ.
Yunus 10:68
ಅವರು ಹೇಳಿದರು: “ಅಲ್ಲಾಹನಿಗೆ ಮಕ್ಕಳಿದ್ದಾರೆ.” ಅವನು ಪರಮ ಪರಿಶುದ್ಧನು. ಅವನಿಗೆ ಯಾರ ಅಗತ್ಯವೂ ಇಲ್ಲ. ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಅವನಿಗೆ ಸೇರಿದ್ದು. ಹೀಗೆ ಹೇಳಲು ನಿಮ್ಮ ಬಳಿ ಏನಾದರೂ ಸಾಕ್ಷ್ಯಾಧಾರವಿದೆಯೇ? ನಿಮಗೆ ಗೊತ್ತಿಲ್ಲದ ವಿಷಯಗಳನ್ನು ನೀವು ಅಲ್ಲಾಹನ ಮೇಲೆ ಆರೋಪಿಸುತ್ತೀರಾ?
Yunus 10:69
ಹೇಳಿರಿ: “ನಿಶ್ಚಯವಾಗಿಯೂ ಅಲ್ಲಾಹನ ಮೇಲೆ ಸುಳ್ಳು ಆರೋಪಿಸುವವರು ಯಶಸ್ವಿಯಾಗುವುದಿಲ್ಲ.”
Yunus 10:70
ಅವರಿಗಿರುವುದು ಇಹಲೋಕದ ಆನಂದ ಮಾತ್ರ. ನಂತರ ಅವರನ್ನು ನಮ್ಮ ಬಳಿಗೆ ಮರಳಿಸಲಾಗುತ್ತದೆ. ನಂತರ, ಅವರು ಸತ್ಯವನ್ನು ನಿಷೇಧಿಸಿದ್ದಕ್ಕಾಗಿ ನಾವು ಅವರಿಗೆ ಕಠೋರ ಶಿಕ್ಷೆಯ ರುಚಿಯನ್ನು ತೋರಿಸುವೆವು.
Yunus 10:71
ಅವರಿಗೆ ನೂಹರ ಸಮಾಚಾರವನ್ನು ಓದಿಕೊಡಿ. ಅವರು ತಮ್ಮ ಜನರೊಡನೆ ಹೇಳಿದ ಸಂದರ್ಭ: “ಓ ನನ್ನ ಜನರೇ! ನಾನು ನಿಮ್ಮ ನಡುವೆಯಿರುವುದು ಮತ್ತು ನಾನು ಅಲ್ಲಾಹನ ವಚನಗಳನ್ನು ಪಠಿಸಿ ಉಪದೇಶ ನೀಡುವುದು ನಿಮಗೆ ದೊಡ್ಡ ಹೊರೆಯಂತೆ ಕಾಣುತ್ತಿದ್ದರೆ, ನಾನಂತೂ ಅಲ್ಲಾಹನಲ್ಲಿ ಭರವಸೆಯಿದ್ದೇನೆ; ನೀವು ನಿಮ್ಮೆಲ್ಲಾ ಷಡ್ಯಂತ್ರಗಳನ್ನು ಒಟ್ಟುಗೂಡಿಸಿ ನಿಮ್ಮ ಸಹಭಾಗಿಗಳನ್ನು (ದೇವರುಗಳನ್ನು) ಕರೆಯಿರಿ. ನಂತರ ನಿಮ್ಮ ಷಡ್ಯಂತ್ರವು (ಫಲಿಸುತ್ತದೋ ಇಲ್ಲವೋ ಎಂಬ) ವಿಷಯದಲ್ಲಿ ನಿಮಗೆ ಯಾವುದೇ ಅಸ್ಪಷ್ಟತೆ ಇರದಂತೆ ನೋಡಿಕೊಳ್ಳಿ. ನಂತರ ನೀವು ಅದನ್ನು ನನ್ನ ಮೇಲೆ ಪ್ರಯೋಗಿಸಿರಿ. ನನಗೆ ಸ್ವಲ್ಪವೂ ಕಾಲಾವಕಾಶ ನೀಡಬೇಡಿ.
Yunus 10:72
ಇದರ ನಂತರವೂ ನೀವು (ನನ್ನ ಸಂದೇಶಕ್ಕೆ ಕಿವಿಗೊಡದೆ) ವಿಮುಖರಾಗಿ ಹೋಗುವುದಾದರೆ, ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಬೇಡಿಲ್ಲ. ನನಗೆ ಪ್ರತಿಫಲ ನೀಡಬೇಕಾದವನು ಅಲ್ಲಾಹು ಮಾತ್ರ. ನಾನು ಮುಸಲ್ಮಾನರಲ್ಲಿ (ಅಲ್ಲಾಹನಿಗೆ ಶರಣಾದವರಲ್ಲಿ) ಸೇರಬೇಕೆಂದು ನನಗೆ ಆಜ್ಞಾಪಿಸಲಾಗಿದೆ.”
Yunus 10:73
ಆದರೆ ಅವರು ನೂಹರನ್ನು ನಿಷೇಧಿಸಿದರು. ಆಗ ನಾವು ನೂಹರನ್ನು ಮತ್ತು ನಾವೆಯಲ್ಲಿ ಅವರ ಜೊತೆಗಿದ್ದವರನ್ನು ರಕ್ಷಿಸಿ, ಅವರನ್ನು (ಭೂಮಿಯಲ್ಲಿ) ಉತ್ತರಾಧಿಕಾರಿಗಳನ್ನಾಗಿ ಮಾಡಿದೆವು. ನಮ್ಮ ವಚನಗಳನ್ನು ನಿಷೇಧಿಸಿದ ಜನರನ್ನು ನಾವು ಮುಳುಗಿಸಿ ಕೊಂದೆವು. ಎಚ್ಚರಿಕೆ ನೀಡಲಾದ ಆ ಜನರ ಅಂತ್ಯವು ಹೇಗಿತ್ತು ಎಂದು ನೋಡಿ.
Yunus 10:74
ನಂತರ, ಅವರ ಬಳಿಕ ನಾವು ಆಯಾ ಸಮುದಾಯಗಳಿಗೆ ಅನೇಕ ಸಂದೇಶವಾಹಕರುಗಳನ್ನು ಕಳುಹಿಸಿದೆವು. ಆ ಸಂದೇಶವಾಹಕರುಗಳು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಅವರ ಬಳಿಗೆ ಬಂದರು. ಆದರೂ, ಇದಕ್ಕೆ ಮೊದಲು ಅವರು ನಿಷೇಧಿಸಿದ ಆ ಸಂಗತಿಯಲ್ಲಿ ವಿಶ್ವಾಸವಿಡಲು ಅವರು ಸಿದ್ಧರಾಗಲಿಲ್ಲ. ಈ ರೀತಿ ನಾವು ಅತಿರೇಕಿಗಳ ಹೃದಯಗಳಿಗೆ ಮೊಹರು ಹಾಕುತ್ತೇವೆ.
Yunus 10:75
ನಂತರ, ಅವರ ಬಳಿಕ ನಾವು ಮೂಸಾ ಮತ್ತು ಹಾರೂನರನ್ನು ನಮ್ಮ ದೃಷ್ಟಾಂತಗಳೊಂದಿಗೆ ಫರೋಹ ಹಾಗೂ ಅವನ ಜನರ ಮುಖಂಡರ ಬಳಿಗೆ ಕಳುಹಿಸಿದೆವು. ಆದರೆ ಅವರು ಅಹಂಕಾರದಿಂದ ವರ್ತಿಸಿದರು. ಅವರು ಅಪರಾಧಿಗಳಾದ ಜನರಾಗಿದ್ದರು.
Yunus 10:76
ನಮ್ಮ ಕಡೆಯ ಸತ್ಯವು ಅವರ ಬಳಿಗೆ ಬಂದಾಗ ಅವರು ಹೇಳಿದರು: “ನಿಶ್ಚಯವಾಗಿಯೂ ಇದು ಸ್ಪಷ್ಟ ಮಾಟಗಾರಿಕೆಯಾಗಿದೆ.”
Yunus 10:77
ಮೂಸಾ ಹೇಳಿದರು: “ನೀವು ಈ ಸತ್ಯದ ಬಗ್ಗೆ ಅದು ನಿಮ್ಮ ಬಳಿಗೆ ಬಂದಾಗ ಹೀಗೆ ಹೇಳುವುದೇ? ಇದು ಮಾಟಗಾರಿಕೆಯೇ? ವಾಸ್ತವವಾಗಿ ಮಾಟಗಾರರು ಯಶಸ್ವಿಯಾಗುವುದಿಲ್ಲ.”
Yunus 10:78
ಅವರು ಹೇಳಿದರು: “ನಮ್ಮ ಪೂರ್ವಜರು ಯಾವ ಮಾರ್ಗದಲ್ಲಿರುವುದನ್ನು ನಾವು ಕಂಡಿದ್ದೇವೆಯೋ ಆ ಮಾರ್ಗದಿಂದ ನಮ್ಮನ್ನು ತಿರುಗಿಸಲು ಮತ್ತು ಭೂಮಿಯಲ್ಲಿ ನಿಮಗಿಬ್ಬರಿಗೆ ಶ್ರೇಷ್ಠತೆ ದೊರೆಯುವಂತಾಗಲು ನೀವು ನಮ್ಮ ಬಳಿಗೆ ಬಂದಿದ್ದೀರಾ? ನಾವು ನಿಮ್ಮಿಬ್ಬರಲ್ಲಿ ಎಂದಿಗೂ ವಿಶ್ವಾಸವಿಡುವುದಿಲ್ಲ.”
Yunus 10:79
ಫರೋಹ ಹೇಳಿದನು: “ಅಗಾಧ ಜ್ಞಾನವಿರುವ ಎಲ್ಲಾ ಮಾಟಗಾರರನ್ನು ನನ್ನ ಬಳಿಗೆ ಕರೆತನ್ನಿ.”
Yunus 10:80
ಮಾಟಗಾರರು ಬಂದಾಗ ಮೂಸಾ ಅವರೊಡನೆ ಹೇಳಿದರು: “ನೀವು ಎಸೆಯುವುದನ್ನೆಲ್ಲಾ ಎಸೆಯಿರಿ.”
Yunus 10:81
ಅವರು ಎಸೆದಾಗ ಮೂಸಾ ಹೇಳಿದರು: “ನೀವು ತಂದಿರುವುದೆಲ್ಲವೂ ಮಾಟಗಳಾಗಿವೆ. ನಿಶ್ಚಯವಾಗಿಯೂ ಅಲ್ಲಾಹು ಅವೆಲ್ಲವನ್ನೂ ವಿಫಲಗೊಳಿಸುವನು. ನಿಶ್ಚಯವಾಗಿಯೂ ಕಿಡಿಗೇಡಿಗಳ ಕೃತ್ಯವನ್ನು ಅಲ್ಲಾಹು ಯಶಸ್ವಿಗೊಳಿಸುವುದಿಲ್ಲ.
Yunus 10:82
ಅಲ್ಲಾಹು ತನ್ನ ವಚನಗಳ ಮೂಲಕ ಸತ್ಯವನ್ನು ಸಾಬೀತುಪಡಿಸುವನು. ಅಪರಾಧಿಗಳು ಎಷ್ಟು ಅಸಹ್ಯಪಟ್ಟರೂ ಸಹ.”
Yunus 10:83
ಮೂಸಾರ ಜನರಲ್ಲಿ ಸೇರಿದ ಕೆಲವು ಯುವಕರ ಹೊರತು ಬೇರೆ ಯಾರೂ ಅವರಲ್ಲಿ ವಿಶ್ವಾಸವಿಡಲಿಲ್ಲ. ಅದೂ ಸಹ ಫರೋಹ ಮತ್ತು ಅವರ ಮುಖಂಡರು ಅವರನ್ನು ಹಿಂಸೆಗೆ ಗುರಿಯಾಗಿಸುವರೋ ಎಂಬ ಭಯದಿಂದ. ನಿಶ್ಚಯವಾಗಿಯೂ ಫರೋಹ ಭೂಮಿಯಲ್ಲಿ ದರ್ಪ ತೋರುತ್ತಿದ್ದನು. ನಿಶ್ಚಯವಾಗಿಯೂ ಅವನು ಹದ್ದು ಮೀರಿದವನಾಗಿದ್ದನು.
Yunus 10:84
ಮೂಸಾ ಹೇಳಿದರು: “ಓ ನನ್ನ ಜನರೇ! ನೀವು ಅಲ್ಲಾಹನಲ್ಲಿ ವಿಶ್ವಾಸವಿಟ್ಟಿದ್ದರೆ ಅವನಲ್ಲಿ ಭರವಸೆಯಿಡಿ. ನೀವು ಮುಸಲ್ಮಾನರಾಗಿದ್ದರೆ.”
Yunus 10:85
ಆಗ ಅವರು ಹೇಳಿದರು: “ನಾವು ಅಲ್ಲಾಹನಲ್ಲಿ ಭರವಸೆಯಿಟ್ಟಿದ್ದೇವೆ. ಓ ನಮ್ಮ ಪರಿಪಾಲಕನೇ! ಈ ಅಕ್ರಮಿಗಳಾದ ಜನರಿಗೆ ನಮ್ಮನ್ನು ಪರೀಕ್ಷೆಯ ವಸ್ತುವಾಗಿ ಮಾಡಬೇಡ.
Yunus 10:86
ನಿನ್ನ ದಯೆಯಿಂದ ನಮ್ಮನ್ನು ಸತ್ಯನಿಷೇಧಿಗಳಾದ ಜನರಿಂದ ರಕ್ಷಿಸು.”
Yunus 10:87
ಮೂಸಾ ಮತ್ತು ಅವರ ಸಹೋದರನಿಗೆ ನಾವು ದೇವವಾಣಿಯನ್ನು ನೀಡಿದೆವು: “ನೀವು ನಿಮ್ಮ ಜನರಿಗೆ ಈಜಿಪ್ಟಿನಲ್ಲಿ ವಾಸ್ತವ್ಯಗಳನ್ನು ಮಾಡಿಕೊಡಿ, ಮತ್ತು ನಿಮ್ಮ ಮನೆಗಳನ್ನು ಆರಾಧನಾಲಯಗಳಾಗಿ ಮಾಡಿ ನಮಾಝನ್ನು ಸಂಸ್ಥಾಪಿಸಿರಿ. ಸತ್ಯವಿಶ್ವಾಸಿಗಳಿಗೆ ಶುಭವಾರ್ತೆಯನ್ನು ತಿಳಿಸಿ.”[1]
———
[1] ನಿಮ್ಮ ಮನೆಗಳನ್ನು ನಮಾಝ್ ಮಾಡುವ ಸ್ಥಳಗಳನ್ನಾಗಿ ಮಾಡಿ ಮತ್ತು ಅವುಗಳನ್ನು ಬೈತುಲ್ ಮುಕದ್ದಸ್‌ನ ದಿಕ್ಕಿಗೆ ತಿರುಗಿಸಿ. ಹೀಗೆ ಮಾಡುವುದರಿಂದ ನಿಮಗೆ ಹೊರಗಿನ ಆರಾಧನಾಲಯಗಳಿಗೆ ಹೋಗಿ ನಮಾಝ್ ಮಾಡಬೇಕಾದ ಅಗತ್ಯ ಬರುವುದಿಲ್ಲ. ಹೊರಗೆ ಹೋದರೆ ಅಲ್ಲಿ ಫರೋಹನ ಜನರು ನಿಮ್ಮನ್ನು ಹಿಂಸಿಸುವ ಸಾಧ್ಯತೆಯಿದೆ.
Yunus 10:88
ಮೂಸಾ ಹೇಳಿದರು: “ಓ ನಮ್ಮ ಪರಿಪಾಲಕನೇ! ನಿಶ್ಚಯವಾಗಿಯೂ ನೀನು ಫರೋಹ ಮತ್ತು ಅವನ ಜನರ ಮುಖಂಡರಿಗೆ ಇಹಲೋಕದಲ್ಲಿ ವೈಭವ ಮತ್ತು ಐಶ್ವರ್ಯವನ್ನು ನೀಡಿರುವೆ. ಓ ನಮ್ಮ ಪರಿಪಾಲಕನೇ! ಜನರನ್ನು ನಿನ್ನ ಮಾರ್ಗದಿಂದ ತಪ್ಪಿಸುವುದಕ್ಕಾಗಿ (ಅವರು ಅದನ್ನು ಬಳಸುತ್ತಾರೆ). ಓ ನಮ್ಮ ಪರಿಪಾಲಕನೇ! ಅವರ ಐಶ್ವರ್ಯವನ್ನು ನಾಶ ಮಾಡು ಮತ್ತು ಅವರ ಹೃದಯಗಳನ್ನು ಕಠೋರಗೊಳಿಸು. ಯಾತನಾಮಯ ಶಿಕ್ಷೆಯನ್ನು ನೋಡುವ ತನಕ ಅವರು ವಿಶ್ವಾಸವಿಡದಿರಲಿ.”
Yunus 10:89
ಅಲ್ಲಾಹು ಹೇಳಿದನು: “ನಿಮ್ಮಿಬ್ಬರ ಪ್ರಾರ್ಥನೆಗೆ ಉತ್ತರ ನೀಡಲಾಗಿದೆ. ಆದ್ದರಿಂದ ನೀವಿಬ್ಬರೂ ದೃಢವಾಗಿ ನಿಲ್ಲಿರಿ ಮತ್ತು ತಿಳುವಳಿಕೆಯಿಲ್ಲದ ಜನರ ಮಾರ್ಗವನ್ನು ಹಿಂಬಾಲಿಸಬೇಡಿ.”
Yunus 10:90
ನಾವು ಇಸ್ರಾಯೇಲ್ ಮಕ್ಕಳನ್ನು ಸಮುದ್ರ ದಾಟಿಸಿದೆವು. ಆಗ ಫರೋಹ ಮತ್ತು ಅವನ ಸೈನ್ಯವು ದಬ್ಬಾಳಿಕೆ ಮತ್ತು ದ್ವೇಷದೊಂದಿಗೆ ಅವರನ್ನು ಹಿಂಬಾಲಿಸಿದರು. ಎಲ್ಲಿಯವರೆಗೆಂದರೆ, ಅವನು ಮುಳುಗಿ ಸಾಯುವಂತಾದಾಗ ಹೇಳಿದನು: “ಇಸ್ರಾಯೇಲ್ ಮಕ್ಕಳು ನಂಬಿದ ದೇವನ (ಅಲ್ಲಾಹನ) ಹೊರತು ಆರಾಧಿಸಲು ಅರ್ಹರಾದ ಬೇರೆ ದೇವರಿಲ್ಲ ಎಂದು ನಾನು ವಿಶ್ವಾಸವಿಟ್ಟಿದ್ದೇನೆ. ನಾನು ಮುಸಲ್ಮಾನರಲ್ಲಿ ಸೇರಿದ್ದೇನೆ.”
Yunus 10:91
(ಅವನೊಡನೆ ಹೇಳಲಾಯಿತು): “ಈಗ ನೀನು ವಿಶ್ವಾಸವಿಡುವುದೇ? ಇದಕ್ಕೆ ಮೊದಲು ನೀನು ಆಜ್ಞೋಲ್ಲಂಘನೆ ಮಾಡಿದ್ದೆ ಮತ್ತು ಕಿಡಿಗೇಡಿಗಳಲ್ಲಿ ಸೇರಿದ್ದೆ.[1]
———
[1] ಈಗ ವಿಶ್ವಾಸವಿಟ್ಟು ಯಾವುದೇ ಪ್ರಯೋಜನವಿಲ್ಲ. ವಿಶ್ವಾಸವಿಡಬೇಕಾಗಿದ್ದ ಸಮಯದಲ್ಲಿ ನೀನು ಅಹಂಕಾರ ತೋರಿದ್ದೆ ಮತ್ತು ಅತಿರೇಕವೆಸಗಿದ್ದೆ.
Yunus 10:92
ಇಂದು ನಾವು ನಿನ್ನ ದೇಹವನ್ನು ಉಳಿಸುವೆವು.[1] ನಿನ್ನ ನಂತರ ಬರುವವರಿಗೆ ನೀನೊಂದು ನಿದರ್ಶನವಾಗುವುದಕ್ಕಾಗಿ. ನಿಶ್ಚಯವಾಗಿಯೂ ಜನರಲ್ಲಿ ಹೆಚ್ಚಿನವರು ನಮ್ಮ ನಿದರ್ಶನಗಳ ಬಗ್ಗೆ ನಿರ್ಲಕ್ಷ್ಯರಾಗಿದ್ದಾರೆ.”
———
[1] ಫರೋಹ ಸತ್ತನೆಂದು ಯಾರಿಗೂ ನಂಬಿಕೆ ಬರಲಿಲ್ಲ. ಆದ್ದರಿಂದ ಅಲ್ಲಾಹು ಸಮುದ್ರದೊಡನೆ ಅವನ ಶವವನ್ನು ದಡಕ್ಕೆ ಎಸೆಯಬೇಕೆಂದು ಆಜ್ಞಾಪಿಸಿದನು. ಆಗ ಎಲ್ಲರೂ ಅವನ ಶವವನ್ನು ನೋಡಿ ಖಾತ್ರಿಪಡಿಸಿಕೊಂಡರು. ಫರೋಹನ ಶವ ಈಗಲೂ ಈಜಿಪ್ಟಿನ ಮ್ಯೂಸಿಯಂನಲ್ಲಿದೆಯೆಂದು ಹೇಳಲಾಗುತ್ತದೆ. ಸತ್ಯವೇನೆಂದು ಅಲ್ಲಾಹನೇ ಬಲ್ಲ.
Yunus 10:93
ನಿಶ್ಚಯವಾಗಿಯೂ ನಾವು ಇಸ್ರಾಯೇಲ್ ಮಕ್ಕಳಿಗೆ ಅತ್ಯುತ್ತಮವಾದ ವಾಸ್ತವ್ಯವನ್ನು ಮಾಡಿಕೊಟ್ಟೆವು ಮತ್ತು ಅವರಿಗೆ ಶುದ್ಧ ವಸ್ತುಗಳನ್ನು ಆಹಾರವಾಗಿ ನೀಡಿದೆವು. ಜ್ಞಾನವು ಅವರ ಬಳಿಗೆ ಬರುವ ತನಕ ಅವರು ಭಿನ್ನರಾಗಲಿಲ್ಲ. ನಿಶ್ಚಯವಾಗಿಯೂ ತಮ್ಮ ಪರಿಪಾಲಕನು (ಅಲ್ಲಾಹು) ಅವರು ಭಿನ್ನರಾದ ವಿಷಯದ ಬಗ್ಗೆ ಪುನರುತ್ಥಾನ ದಿನದಂದು ತೀರ್ಪು ನೀಡುವನು.
Yunus 10:94
ನಾವು ನಿಮಗೆ ಅವತೀರ್ಣಗೊಳಿಸಿದ ಸಂದೇಶದಲ್ಲಿ ನಿಮಗೇನಾದರೂ ಸಂಶಯವಿದ್ದರೆ, ನಿಮಗಿಂತ ಮೊದಲು ಗ್ರಂಥವನ್ನು ಪಠಿಸುತ್ತಿದ್ದವರೊಡನೆ ಕೇಳಿ ನೋಡಿ. ನಿಮ್ಮ ಬಳಿಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಸತ್ಯವು ಬಂದಿದೆ. ಆದ್ದರಿಂದ ನೀವೆಂದೂ ಸಂಶಯಗ್ರಸ್ತರಲ್ಲಿ ಸೇರಬೇಡಿ.
Yunus 10:95
ಅಲ್ಲಾಹನ ವಚನಗಳನ್ನು ನಿಷೇಧಿಸಿದವರಲ್ಲೂ ಸೇರಬೇಡಿ. ಹಾಗೇನಾದರೂ ಆದರೆ ನೀವು ನಷ್ಟ ಹೊಂದಿದವರಾಗುವಿರಿ.
Yunus 10:96
ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನ (ಅಲ್ಲಾಹನ) ಮಾತು ಯಾರ ವಿಷಯದಲ್ಲಿ ಖಾತ್ರಿಯಾಗಿದೆಯೋ ಅವರು ವಿಶ್ವಾಸವಿಡುವುದಿಲ್ಲ.
Yunus 10:97
ಎಲ್ಲಾ ರೀತಿಯ ದೃಷ್ಟಾಂತಗಳು ಅವರ ಬಳಿಗೆ ಬಂದರೂ ಸಹ (ಅವರು ವಿಶ್ವಾಸವಿಡುವುದಿಲ್ಲ). ಎಲ್ಲಿಯವರೆಗೆಂದರೆ, ಯಾತನಾಮಯ ಶಿಕ್ಷೆಯನ್ನು ಅವರು ನೇರವಾಗಿ ನೋಡುವ ತನಕ.
Yunus 10:98
ಯಾವುದೇ ಒಂದು ಊರು ಕೂಡ—ಅದರ ಜನರು ವಿಶ್ವಾಸವಿಟ್ಟು ಆ ವಿಶ್ವಾಸವು ಅವರಿಗೆ ಪ್ರಯೋಜನ ನೀಡಿದ ಇತಿಹಾಸವಿಲ್ಲ; ಯೂನುಸರ ಊರಿನ ಜನರ ಹೊರತು. ಅವರು ವಿಶ್ವಾಸವಿಟ್ಟಾಗ, ಇಹಲೋಕದ ನಾವು ಅವರಿಂದ ಅಪಮಾನಕರ ಶಿಕ್ಷೆಯನ್ನು ನಿವಾರಿಸಿದೆವು ಮತ್ತು ಒಂದು ಅವಧಿಯ ತನಕ ಅವರಿಗೆ (ಇಹಲೋಕದಲ್ಲಿ) ಸವಲತ್ತುಗಳನ್ನು ನೀಡಿದೆವು.[1]
———
[1] ಯೂನುಸ್ (ಅವರ ಮೇಲೆ ಶಾಂತಿಯಿರಲಿ) ಇರಾಕಿನ ನೀನೆವಾ ಎಂಬ ಊರಿಗೆ ಪ್ರವಾದಿಯಾಗಿ ಕಳುಹಿಸಲಾಗಿತ್ತು. ಆ ಊರಿನ ಜನರು ಮೊದಲು ಅವರ ಮಾತಿನಲ್ಲಿ ವಿಶ್ವಾಸವಿಡದಿದ್ದರೂ ನಂತರ ಆ ಊರಿನವರೆಲ್ಲರೂ ಅವರಲ್ಲಿ ವಿಶ್ವಾಸವಿಟ್ಟರು.
Yunus 10:99
ನಿಮ್ಮ ಪರಿಪಾಲಕನು (ಅಲ್ಲಾಹು) ಇಚ್ಛಿಸಿದ್ದರೆ ಭೂಮಿಯಲ್ಲಿರುವವರೆಲ್ಲರೂ ಸಂಪೂರ್ಣವಾಗಿ ವಿಶ್ವಾಸವಿಡುತ್ತಿದ್ದರು. ಹಾಗಿರುವಾಗ, ಜನರು ಸತ್ಯವಿಶ್ವಾಸಿಗಳಾಗಲು ನೀವು ಅವರನ್ನು ಬಲವಂತಪಡಿಸುವಿರಾ?
Yunus 10:100
ಅಲ್ಲಾಹನ ಅಪ್ಪಣೆಯಿಲ್ಲದೆ ಯಾರಿಗೂ ಸತ್ಯವಿಶ್ವಾಸಿಯಾಗಲು ಸಾಧ್ಯವಿಲ್ಲ. ಅರ್ಥಮಾಡಿಕೊಳ್ಳದ ಜನರ ಮೇಲೆ ಅವನು ನಿಕೃಷ್ಟತೆಯನ್ನು ಹೇರಿ ಬಿಡುವನು.
Yunus 10:101
ಹೇಳಿರಿ: “ಭೂಮ್ಯಾಕಾಶಗಳಲ್ಲಿ ಏನೆಲ್ಲಾ ಇವೆಯೆಂದು ನೋಡಿರಿ.” ವಿಶ್ವಾಸವಿಡದ ಜನರಿಗೆ ದೃಷ್ಟಾಂತಗಳು ಮತ್ತು ಎಚ್ಚರಿಕೆಗಳು ಯಾವುದೇ ಪ್ರಯೋಜನ ನೀಡುವುದಿಲ್ಲ.
Yunus 10:102
ಅವರಿಗಿಂತ ಮೊದಲು ಜೀವಿಸಿದ್ದ ಜನರಿಗೆ ಎದುರಾದಂತಹ ದಿನಗಳನ್ನೇ ಹೊರತು ಬೇರೇನಾದರೂ ಇವರು ಕಾಯುತ್ತಿದ್ದಾರೆಯೇ? ಹೇಳಿರಿ: “ನೀವು ಕಾಯಿರಿ. ನಿಶ್ಚಯವಾಗಿಯೂ ನಿಮ್ಮ ಜೊತೆಗೆ ಕಾಯುವವರಲ್ಲಿ ನಾನು ಕೂಡ ಇದ್ದೇನೆ.”
Yunus 10:103
ನಂತರ ನಾವು ನಮ್ಮ ಸಂದೇಶವಾಹಕರುಗಳನ್ನು ಮತ್ತು ಸತ್ಯವಿಶ್ವಾಸಿಗಳನ್ನು ರಕ್ಷಿಸುವೆವು. ಈ ರೀತಿ ಸತ್ಯವಿಶ್ವಾಸಿಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ.
Yunus 10:104
ಹೇಳಿರಿ: “ಓ ಜನರೇ! ನನ್ನ ಧರ್ಮದ ಬಗ್ಗೆ ನೀವೇನಾದರೂ ಸಂಶಯದಲ್ಲಿದ್ದರೆ, ನೀವು ಅಲ್ಲಾಹನನ್ನು ಬಿಟ್ಟು ಆರಾಧಿಸುವ ನಿಮ್ಮ ದೇವರುಗಳನ್ನು ನಾನಂತೂ ಆರಾಧಿಸುವುದಿಲ್ಲ. ಆದರೆ ನಿಮ್ಮ ಆತ್ಮವನ್ನು ವಶಪಡಿಸುವ ಅಲ್ಲಾಹನನ್ನು ಮಾತ್ರ ನಾನು ಆರಾಧಿಸುತ್ತೇನೆ. ಸತ್ಯವಿಶ್ವಾಸಿಗಳೊಡನೆ ಸೇರಲು ನನಗೆ ಆಜ್ಞಾಪಿಸಲಾಗಿದೆ.
Yunus 10:105
ಏಕನಿಷ್ಠನಾಗಿ ನಿನ್ನ ಮುಖವನ್ನು ಧರ್ಮದ ಕಡೆಗೆ ತಿರುಗಿಸು ಮತ್ತು ಎಂದಿಗೂ ಬಹುದೇವಾರಾಧಕರಲ್ಲಿ ಸೇರಬೇಡ ಎಂದು (ನನಗೆ ಆಜ್ಞಾಪಿಸಲಾಗಿದೆ).”
Yunus 10:106
ನೀವು ಅಲ್ಲಾಹನನ್ನು ಬಿಟ್ಟು ನಿಮಗೆ ಉಪಕಾರ ಅಥವಾ ತೊಂದರೆ ಮಾಡದ ಯಾರನ್ನೂ ಕರೆದು ಪ್ರಾರ್ಥಿಸಬೇಡಿ. ನೀವೇನಾದರೂ ಹಾಗೆ ಮಾಡಿದರೆ ನಿಶ್ಚಯವಾಗಿಯೂ ನೀವು ಅಕ್ರಮಿಗಳಲ್ಲಿ ಸೇರುವಿರಿ.
Yunus 10:107
ಅಲ್ಲಾಹು ನಿಮಗೇನಾದರೂ ತೊಂದರೆ ನೀಡಿದರೆ, ಅದನ್ನು ಅವನ ಹೊರತು ನಿವಾರಿಸಲು ಯಾರಿಗೂ ಸಾಧ್ಯವಿಲ್ಲ. ಅವನು ನಿಮಗೇನಾದರೂ ಒಳಿತನ್ನು ಉದ್ದೇಶಿಸಿದರೆ, ಅವನ ಔದಾರ್ಯವನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ತನ್ನ ದಾಸರಲ್ಲಿ ಅವನು ಇಚ್ಛಿಸಿದವರಿಗೆ ಅದನ್ನು (ಔದಾರ್ಯವನ್ನು) ತಲುಪಿಸುತ್ತಾನೆ. ಅವನು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
Yunus 10:108
ಹೇಳಿರಿ: “ಓ ಜನರೇ! ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯಿಂದ ನಿಮ್ಮ ಬಳಿಗೆ ಸತ್ಯವು ಬಂದಿದೆ. ಆದ್ದರಿಂದ ಯಾರಾದರೂ ಸನ್ಮಾರ್ಗವನ್ನು ಸ್ವೀಕರಿಸಿದರೆ ಅವನು ಅವನ ಒಳಿತಿಗಾಗಿಯೇ ಅದನ್ನು ಸ್ವೀಕರಿಸುತ್ತಾನೆ. ಯಾರಾದರೂ ದುರ್ಮಾರ್ಗವನ್ನು ಆರಿಸಿದರೆ ಅವನು ಅವನ ಕೆಡುಕಿಗಾಗಿಯೇ ಅದನ್ನು ಆರಿಸುತ್ತಾನೆ. ನನಗೆ ನಿಮ್ಮ ಮೇಲೆ ಯಾವುದೇ ಅಧಿಕಾರವಿಲ್ಲ.”
Yunus 10:109
ನಿಮಗೆ ದೇವವಾಣಿಯಾಗಿ ನೀಡಲಾಗುವುದನ್ನು ಅನುಸರಿಸಿರಿ ಮತ್ತು ಅಲ್ಲಾಹು ತೀರ್ಪು ನೀಡುವ ತನಕ ತಾಳ್ಮೆಯಿಂದಿರಿ. ತೀರ್ಪು ನೀಡುವವರಲ್ಲಿ ಅವನು ಅತಿಶ್ರೇಷ್ಠನಾಗಿದ್ದಾನೆ.